Date : 04-09-2013, Wednesday | 17 Comments
ಯಾಸಿನ್ ಭಟ್ಕಳ್
ರಿಯಾಝ್ ಭಟ್ಕಳ್
ಇಕ್ಬಾಲ್ ಭಟ್ಕಳ್
ಬಿಹಾರದ ಬಳಿಯ ನೇಪಾಳದ ಗಡಿಯಲ್ಲಿ ‘ಇಂಡಿಯನ್ ಮುಜಾಹಿದ್ದೀನ್’ ಎಂಬ ಭಯೋತ್ಪಾದಕ ಸಂಘಟನೆಯ ಸಹಸಂಸ್ಥಾಪಕ ಯಾಸಿನ್ ಭಟ್ಕಳನನ್ನು ಬಂಧಿಸಿರುವ ವಿಷಯ ಗುರುವಾರ ಬೆಳಗ್ಗೆ ಹೊರಬಿದ್ದ ನಂತರ ಸತತವಾಗಿ ಈ ಹೆಸರುಗಳು ನಮ್ಮ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪದೇ ಪದೆ ಪ್ರಸ್ತಾಪವಾಗುತ್ತಿವೆ. ಯಾಸಿನ್ ಭಟ್ಕಳ್ ಎಂತಹ ಖತರ್‌ನಾಕ್ ಮನುಷ್ಯ ಎಂಬುದನ್ನು ವಿವರಿಸಲಾಗುತ್ತಿದೆ. ಆತನ ಬಂಧನ ದೇಶದ ಆಂತರಿಕ ಭದ್ರತೆ ವಿಷಯದಲ್ಲಿ ಎಷ್ಟು ದೊಡ್ಡ ಯಶಸ್ಸು ಎಂಬುದನ್ನು ಬಿಡಿಸಿ ಹೇಳಲಾಗುತ್ತಿದೆ. ‘ರಾ’, ‘ಐಬಿ’, ‘ಸಿಬಿಐ’ನ ಮುಖ್ಯಸ್ಥರಾಗಿದ್ದವರು, ಅವುಗಳಲ್ಲಿ ಸೇವೆ ಸಲ್ಲಿಸಿದವರೂ ಯಾಸಿನ್ ಬಂಧನ ಬಹುದೊಡ್ಡ ಯಶಸ್ಸು ಎಂದು ಬಣ್ಣಿಸುತ್ತಿದ್ದಾರೆ. ದುರದೃಷ್ಟವಶಾತ್ ಆತನ ಮೂಲ, ಹಿನ್ನೆಲೆಯನ್ನು ಕೆದಕುವಾಗ ಕರ್ನಾಟಕದ ಹೆಸರು ಪದೇಪದೆ ಪ್ರಸ್ತಾಪವಾಗುತ್ತಿದೆ!
ಏಕಾಗಿ ಭಯೋತ್ಪಾದನೆಯಂಥ ದೇಶದ್ರೋಹದ ವಿಷಯ ಬಂದಾಗ ಕರ್ನಾಟಕದ ಹೆಸರು ಇತ್ತೀಚೆಗೆ ಮತ್ತೆ ಮತ್ತೆ ಕೇಳಿ ಬರುತ್ತಿದೆ?!
ಕರ್ನಾಟಕದಂಥ ಶಾಂತಿಪ್ರಿಯ ರಾಜ್ಯದಲ್ಲಿ ಇಂಥ ದೇಶದ್ರೋಹಿಗಳು ಜನಿಸಿದ್ದಾದರೂ ಹೇಗೆ ಹಾಗೂ ಯಾವಾಗಿನಿಂದ? 1990ರ ದಶಕದ ಕೊನೆಯ ಭಾಗದಲ್ಲಿ ಬೆಂಗಳೂರಿನ ಬಳಿಯ ಕಾಲೇಜೊಂದರ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಎಚ್‌ಎಎಲ್‌ನಲ್ಲಿ ಇಂಟರ್ನಿಯಾಗಿದ್ದಾಗ ಸೂಕ್ಷ್ಮ ಮಾಹಿತಿ ಕದ್ದು ಪಾಕಿಸ್ತಾನಕ್ಕೆ ರವಾನಿಸುವಾಗ ಸಿಕ್ಕಿಬಿದ್ದಿದ್ದ. ನಂತರ ಮತ್ತೆ ಕರ್ನಾಟಕ ಕೆಟ್ಟ ಕಾರಣಕ್ಕಾಗಿ ಸುದ್ದಿಯಾಗಿದ್ದು 2007ರಲ್ಲಿ, ಅದೂ ಅಂತಾರಾಷ್ಟ್ರೀಯ ಮಟ್ಟದಲ್ಲಿ. ಆಗ ಪ್ರಸ್ತಾಪಗೊಂಡ ಹೆಸರುಗಳು ಕಫೀಲ್, ಸಬೀಲ್ ಹಾಗೂ ಬಿಲಾಲ್. ಈ ಕಫೀಲ್ ಹಾಗೂ ಸಬೀಲ್ ಅಹ್ಮದ್ ನಮ್ಮ ಐತಿಹಾಸಿಕ ಬೇಲೂರು ಬಳಿಯ ನಾಗೇನಹಳ್ಳಿಗೆ ಸೇರಿದ ಡಾ. ಮಕ್ಬೂಲ್ ಅಹ್ಮದ್ ಮಕ್ಕಳು. ಬಿಲಾಲ್ ಇರಾಕಿ. ಉದ್ಯೋಗ ಅರಸಿ ಇಂಗ್ಲೆಂಡ್ ಸೇರಿದ್ದರೂ ತಲೆಯೊಳಗೆ ತುಂಬಿಕೊಂಡಿದ್ದ ಧರ್ಮಾಂಧತೆಯನ್ನು ಕಫೀಲ್ ಹಾಗೂ ಬಿಲಾಲ್ ಬಿಟ್ಟಿರಲಿಲ್ಲ. ವೃತ್ತಿಯಿಂದ ಏರೋನಾಟಿಕಲ್ ಎಂಜಿನಿಯರ್ ಆಗಿದ್ದ ಕಫೀಲ್ ತುಂಬಾ ಬುದ್ಧಿವಂತ. ಬಿಲಾಲ್ ವೈದ್ಯ. ಆದರೆ ಆ ಬುದ್ಧಿಯನ್ನು ಅನ್ಯಧರ್ಮೀಯರ ವಿನಾಶಕ್ಕೆ ಬಳಸಲು ಮುಂದಾದರು. ಅದೇ ವೇಳೆ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಅಫ್ಘಾನಿಸ್ತಾನ ಹಾಗೂ ಇರಾಕ್ ಮೇಲೆ ದಾಳಿ ಮಾಡುವುದಕ್ಕೆ ಸಾಥ್ ಕೊಟ್ಟಿದ್ದ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಕೂಡ ಭಯೋತ್ಪಾದಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ ಖೈದಾಕ್ಕೆ ಸೇರಿದ ಅಥವಾ ಅದರ ಜತೆ ಸಂಪರ್ಕ ಹೊಂದಿರುವ ಸಂಘಟನೆಗಳು ಬ್ರಿಟನ್‌ನಲ್ಲಿಯೂ ಸಕ್ರಿಯವಾಗಿವೆ ಎಂಬ ಗುಪ್ತಚರ ಮಾಹಿತಿಯೂ ಬಂದಿತ್ತು. ಇತ್ತ ಬ್ರಿಟನ್‌ನ ಅಮಾಯಕರನ್ನು ಕೊಲ್ಲಲು ಮುಂದಾಗುವಂಥ ಯಾವ ಕಾರಣ ಈ ಕಫೀಲ್ ಹಾಗೂ ಬಿಲಾಲ್‌ಗಿತ್ತು ಎಂಬುದನ್ನು ಆ ಭಗವಂತನೇ ಬಲ್ಲ. ಆದರೆ ಬಾಂಬ್ ತಯಾರಿಕೆಯಲ್ಲಿ ಪರಿಣತಿ ಸಾಧಿಸಿದ್ದ ಕಫೀಲ್ ಒಂದು ಹಳೇ ವಾಹನವನ್ನು ಖರೀದಿ ಮಾಡಿ ವಿಧ್ವಂಸಕ ಕೃತ್ಯಕ್ಕೆ ಮುಂದಾದ
2007, ಜೂನ್ 28.
ಅಂದು ತಾವಿದ್ದ ಗ್ಲಾಸ್‌ಗೋನಿಂದ ಲಂಡನ್‌ಗೆ ಕಫೀಲ್ ಹಾಗೂ ಬಿಲಾಲ್ ಎರಡು ವಾಹನಗಳಲ್ಲಿ ತೆರಳಿದರು. ಒಂದು ಕಾರನ್ನು ಕಾಕ್ಸ್‌ಪರ್ ರಸ್ತೆಯಲ್ಲಿ, ಮತ್ತೊಂದನ್ನು ಟೈಗರ್ ಟೈಗರ್ ಎಂಬ ನೈಟ್ ಕ್ಲಬ್ ಬಳಿ ನಿಲ್ಲಿಸಿ ಕೂಡಲೇ ಗ್ಲಾಸ್‌ಗೋಗೆ ವಾಪಸಾದರು. ಇತ್ತ ನೈಟ್‌ಕ್ಲಬ್‌ನಲ್ಲಿ ರಾತ್ರಿಯೆಲ್ಲಾ ಹೊಟ್ಟೆಗೆ ಹುಯ್ದುಕೊಂಡು ಪಕ್ಕದಲ್ಲೇ ಇದ್ದ ಚರಂಡಿಯ ಪಾಲಾಗಿದ್ದ ಕುಡುಕನೊಬ್ಬ. ಆತನಿಗೆ ಚಿಕಿತ್ಸೆ ನೀಡಲು ಮರುದಿನ ತುರ್ತುಸೇವಾ ಕರ್ಮಿಗಳು ಬಂದರು. ಅವರಿಗೆ ಬಳಿಯಲ್ಲೇ ನಿಂತಿದ್ದ ಕಾರಿನಿಂದ ಹೊಗೆ ಬರುತ್ತಿರುವುದು ಕಂಡಿತು. ಅವರು ಮಾಹಿತಿ ನೀಡಿದ ನಂತರ ಆಗಮಿಸಿದ ಟ್ರಾಫಿಕ್ ಪೊಲೀಸರು ವಾಹನವನ್ನು ದೂರ ಒಯ್ದರು. ಇತ್ತ ಕಾಕ್ಸ್‌ಪರ್ ರಸ್ತೆಯಲ್ಲಿದ್ದ ಕಾರೂ ಹಾಗೇ ನಿಂತಿತ್ತು. ಆ ಕಾರುಗಳಲ್ಲಿ ಕಫೀಲ್, ಬಿಲಾಲ್ ಬಾಂಬುಗಳನ್ನು ಇಟ್ಟಿದ್ದರು! ಅವುಗಳಿಗೆ ಮೊಬೈಲ್ ಫೋನ್‌ಗಳನ್ನು ಅಳವಡಿಸಿದ್ದರು!! ಕರೆ ಮಾಡಿದ ಕೂಡಲೇ ಸ್ಫೋಟಗೊಳ್ಳುವಂತೆ ಅವುಗಳನ್ನು ರೂಪಿಸಲಾಗಿತ್ತು. ಆ ಕಾರಣಕ್ಕಾಗಿಯೇ ಗ್ಲಾಸ್‌ಗೋಗೆ ತೆರಳಿದ ಕೂಡಲೇ ಕಫೀಲ್, ಬಿಲಾಲ್ ಎರಡೂ ಕಾರುಗಳಲ್ಲಿದ್ದ ಮೊಬೈಲ್‌ಗಳಿಗೆ ಪದೇ ಪದೆ ಕರೆ ಮಾಡಿದ್ದಾರೆ. ಅದೃಷ್ಟವಶಾತ್, ತಾಂತ್ರಿಕ ಕಾರಣಗಳಿಂದಾಗಿ ಅವೆರಡೂ ಬಾಂಬ್‌ಗಳು ಅಂದು ಸ್ಫೋಟಗೊಂಡಿರಲಿಲ್ಲ.
ಹೀಗಾಗಿ, ಕದ್ದುಮುಚ್ಚಿ ಮಾಡುವ ಕೆಲಸ ಬೇಡ ಎಂಬ ನಿರ್ಧಾರಕ್ಕೆ ಬಂದ ಕಫೀಲ್, ಬಿಲಾಲ್ ಆತ್ಮಹತ್ಯಾ ದಾಳಿಗೇ ಮುಂದಾದರು!
ಗ್ಯಾಸ್ ತುಂಬಿದ ಕ್ಯಾನ್‌ಗಳನ್ನು ಜೀಪಿನಲ್ಲಿಟ್ಟುಕೊಂಡು ಹೊರಟ ಕಫೀಲ್ ವಿಮಾನ ನಿಲ್ದಾಣಕ್ಕೆ ಡಿಕ್ಕಿ ಹೊಡೆಸಲು ಮುಂದಾದ. ಆಗಲೂ ಯೋಜನೆ ಕೈಕೊಟ್ಟಿತು. ಉರಿಯುವ ಜ್ವಾಲೆ ಕಫೀಲ್‌ನನ್ನೇ ಸುಟ್ಟಿತು. ಮೂರು ತಿಂಗಳು ಆಸ್ಪತ್ರೆಯಲ್ಲಿದ್ದು ಕೊನೆಗೂ ಮೃತ್ಯುವಿನ ಪಾಲಾಗಬೇಕಾಯಿತು. ಆ ಪ್ರಕರಣದಲ್ಲಿ ಭಾಗಿಯಾಗಿದ್ದ ಬಿಲಾಲ್‌ನನ್ನು ಬಂಧಿಸಿ ಜೀವಾವಧಿ ಶಿಕ್ಷೆ ನೀಡಿದರೆ, ಕಫೀಲ್‌ನ ಕಿರಿಯ ಸಹೋದರ ಸಬೀಲ್‌ನನ್ನೂ ವೃಥಾ ಬಂಧಿಸಿದ ಪೊಲೀಸರು ಕೊನೆಗೆ ಬಿಡುಗಡೆ ಮಾಡಿದರು. ಆಸ್ಟ್ರೇಲಿಯಾಕ್ಕೆ ತೆರಳುವ ಮೊದಲು ಇಂಗ್ಲೆಂಡ್‌ನ ಸಿಮ್ ಅನ್ನು ಕಫೀಲ್‌ಗೆ ನೀಡಿದ್ದ ಮತ್ತೊಬ್ಬ ಸಂಬಂಧಿ ಹಾಗೂ ಕರ್ನಾಟಕದವರೇ ಆದ ಡಾ. ಮೊಹಮದ್ ಹನೀಫ್‌ರನ್ನೂ ತಪ್ಪಾಗಿ ಆಸ್ಟ್ರೇಲಿಯಾ ಬಂಧಿಸಿ ಮುಖಭಂಗಕ್ಕೊಳಗಾಯಿತು. ಇದೇನೇ ಇರಲಿ, ದುರದೃಷ್ಟವಶಾತ್, ಒಬ್ಬ ಪ್ರತಿಭಾನ್ವಿತ ಎಂಜಿನಿಯರ್ ಆಗಿದ್ದ ಕಫೀಲ್ ಅಹ್ಮದ್ ಭಾರತದ ಮೊದಲ ಜಾಗತಿಕ ಜಿಹಾದಿ ಎನಿಸಿಬಿಟ್ಟ! ಅಲ್ಲಿಂದ ಆರಂಭವಾಯಿತು ನೋಡಿ ಕರ್ನಾಟಕ ಕೆಟ್ಟ ವಿಚಾರಕ್ಕಾಗಿ ಸುದ್ದಿಯಾಗುವುದು.
1. 2008, ಜುಲೈ 25ರಂದು ಬೆಂಗಳೂರು ಸರಣಿ ಸ್ಫೋಟ
2. 2010, ಏಪ್ರಿಲ್ 17ರಂದು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸ್ಫೋಟ
3. 2011 ಜೂನ್ 13ರಂದು ಕೆಎಫ್‌ಡಿಗೆ ಸೇರಿದ ಕಿರಾತಕರು ತಮ್ಮ ಭಯೋತ್ಪಾದಕರ ಚಟುವಟಿಕೆಗೆ ಹಣ ಸಂಗ್ರಹಿಸಲು ಮೈಸೂರು ಬಳಿಯ ಹುಣಸೂರಿನ ಸುಧೀಂದ್ರ ಹಾಗೂ ವಿಘ್ನೇಶ್ ಎಂಬ ವಿದ್ಯಾರ್ಥಿಗಳನ್ನು ಅಪಹರಿಸಿ, ಸುಲಿಗೆಗೆ ಯತ್ನಿಸಿ ವಿಫಲಗೊಂಡಾಗ ಇಬ್ಬರನ್ನೂ ಅಮಾನುಷವಾಗಿ ‘ಕಲಾಲ್’ ಮೂಲಕ ಕೊಂದು ಚಿಕ್ಕಬಳ್ಳಾಪುರ ಬೈಪಾಸ್ ಬಳಿ ಬಿಸಾಡಿ ಹೋದರು.
4. 2012, ಅಗಸ್ಟ್ 27ರಂದು ಗಣ್ಯರು, ಪತ್ರಕರ್ತರ ಮೇಲಿನ ಭಯೋತ್ಪಾದಕ ದಾಳಿ ಪಿತೂರಿ ಬಯಲು
5. 2013, ಏಪ್ರಿಲ್ 17ರಂದು ಮಲ್ಲೇಶ್ವರಂನಲ್ಲಿ ಸ್ಫೋಟ
ಈ ಎಲ್ಲ ಘಟನೆಗಳಿಗೂ ಮೊದಲೇ, ಅಂದರೆ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ 2000ದಲ್ಲಿ ದಕ್ಷಿಣ ಭಾರತ ಚರ್ಚ್‌ಗಳ ಮೇಲೆ ದಾಳಿ ನಡೆಸಿ ಹಿಂದುಗಳ ಮೇಲೆ ಗೂಬೆ ಕೂರಿಸಲು ಅಂಜುಮಾನ್ ದೀನ್‌ದಾರ್ ಎಂಬ ಮುಸ್ಲಿಂ ಸಂಘಟನೆ ಪ್ರಯತ್ನಿಸಿತ್ತು. ಆನಂತರ ಹಂಪಿಯಲ್ಲಿ ಭಯೋತ್ಪಾದಕನೊಬ್ಬ ಸಿಕ್ಕಿ ಬಿದ್ದಿದ್ದ. 2005, ಡಿಸೆಂಬರ್ 28ರಂದು ಭಾರತೀಯ ವಿಜ್ಞಾನ ಮಂದಿರದ ಮೇಲೆ ಭಯೋತ್ಪಾದಕ ದಾಳಿಯೂ ನಡೆದಿತ್ತು.
ಹಾಗಾದರೆ ನಮ್ಮ ರಾಜ್ಯ ಸಾಗುತ್ತಿರುವುದಾದರೂ ಎತ್ತ?
ಇದೆಲ್ಲ ಏನನ್ನು ಸೂಚಿಸುತ್ತದೆ? ಪುಣೆಯ ಜರ್ಮನ್ ಬೇಕರಿ ಸ್ಫೋಟ, ಹೈದರಾಬಾದ್‌ನ ದಿಲ್‌ಸುಕ್ ನಗರದಲ್ಲಿ ನಡೆದ ಸ್ಫೋಟ, ಅಹ್ಮದಾಬಾದ್, ಸೂರತ್, ವಾರಾಣಸಿ, ಮುಂಬೈ, ಚಿನ್ನಸ್ವಾಮಿ ಹಾಗೂ ಮಲ್ಲೇಶ್ವರಂ, ಭೋದ್‌ಗಯಾ ಸ್ಫೋಟಗಳು ಪ್ರಸ್ತಾಪವಾದಾಗಲೆಲ್ಲ ಭಟ್ಕಳದ ಯಾಸಿನ್, ರಿಯಾಝ್, ಇಕ್ಬಾಲ್ ಹೆಸರು ಕೇಳಿಬರುತ್ತಿವೆ. ಇಂಥ ವ್ಯಕ್ತಿಗಳು ಏಕಾಗಿ ನಮ್ಮ ರಾಜ್ಯದಲ್ಲಿ ಸೃಷ್ಟಿಯಾಗುತ್ತಿದ್ದಾರೆ? ಹಿಂದುಗಳ ತಾರತಮ್ಯದ ವಿರುದ್ಧ ಸಿಡಿದೆದ್ದಿದ್ದಾರೆ ಎನ್ನುವುದಕ್ಕೆ ಭಟ್ಕಳದಲ್ಲಿ ಮುಸ್ಲಿಮರೇ ಬಹುಸಂಖ್ಯಾತರು ಹಾಗೂ ಅಲ್ಲಿ ನಡೆಯುವುದು ಅವರದ್ದೇ ದರ್ಬಾರು. ಹಾಗಿದ್ದರೂ ಯಾಸಿನ್, ರಿಯಾಝ್, ಇಕ್ಬಾಲ್‌ನಂಥವರು ಏಕೆ ಭಟ್ಕಳ ಹಾಗೂ ಕರ್ನಾಟಕದಲ್ಲಿ ತಲೆ ಎತ್ತುತ್ತಿದ್ದಾರೆ?
ಇಲ್ಲಿರುವುದು ಮನಸ್ಥಿತಿಯೊಳಗಿನ ದೋಷ ಹಾಗೂ ಗಡಿಯಾಚೆಗಿರುವ ನಿಷ್ಠೆ, ಪ್ರೇರಣೆ!
ಇಂತಹ ಬೆಳವಣಿಗೆಗಳ ನಡುವೆ ನಮ್ಮ ರೆಹಮಾನ್ ಖಾನ್ ಮಹಾಶಯರು ಪ್ರತ್ಯೇಕ ಮುಸ್ಲಿಂ ವಿವಿ ತೆರೆಯಲು ಹೊರಟಿದ್ದಾರಲ್ಲಾ ಇದು ನಮ್ಮ ರಾಜ್ಯವನ್ನು ಎತ್ತ ಕೊಂಡೊಯ್ದೀತು? ಒಂದು ಅಲಿಗಢ ವಿಶ್ವವಿದ್ಯಾಲಯ ಅಖಂಡ ಭಾರತವನ್ನು ಮೂರು ಹೋಳಾಗಿಸಿತು. ಜಾಮಿಯಾ, ಉಸ್ಮಾನಿಯಾದಲ್ಲಿ ಏನಾಗುತ್ತಿದೆ ಎಂಬುದನ್ನು ದೇಶ ಆತಂಕದಿಂದ ನೋಡುವಂತಾಗಿದೆ. ಇನ್ನು ಜಾಮಿಯಾದಲ್ಲಂತೂ ಜಾಮಿಯಾ ಮಿಲಿಯಾ ಟೀಚರ್ಸ್ ಸಾಲಿಡಾರಿಟಿ ಅಸೋಸಿಯೇಷನ್ ಎಂಬ ಸಂಘಟನೆ ಕಟ್ಟಿಕೊಂಡು ನಮ್ಮ ಪೊಲೀಸರನ್ನೇ ಅಪರಾಧಿಗಳನ್ನಾಗಿ ಮಾಡಲು ಹೊರಟಿದ್ದರು. ಇಂಥವರಿಂದ ಪಾಠ ಕಲಿತವರು ಭಯೋತ್ಪಾದಕರಾಗಿ ಬಾಟ್ಲಾಹೌಸ್‌ನಲ್ಲಿ ಅಡಗಿ ಕುಳಿತುಕೊಳ್ಳದೆ ಅಬ್ದುಲ್ ಕಲಾಂರಾಗುತ್ತಾರೇನು? ಇಂಥ ಯೂನಿವರ್ಸಿಟಿಯನ್ನು ಶ್ರೀರಂಗನ ಪಾದತಲದಲ್ಲಿ ಸ್ಥಾಪಿಸಿ ಯಾಸಿನ್, ರಿಯಾಝ್, ಇಕ್ಬಾಲರನ್ನು ಸೃಷ್ಟಿಸುವ ಉದ್ದೇಶ ಹೊಂದಿದ್ದಾರೇನು? ಇಂಥವರನ್ನು ಸಮರ್ಥಿಸಲು ಪ್ರಗತಿಪರರು, ಕೋಮುಸೌಹಾರ್ದಿಗಳು ಎಂಬ ಒಂದಷ್ಟು ಸೋಗಲಾಡಿಗಳೂ ಇದ್ದಾರೆ. ನೋಡ್ತಾ ಇರಿ… ಇನ್ನು ಒಂದೆರಡು ದಿನಗಳಲ್ಲಿ ಇವರು ಯಾಸಿನ್ ಅಮಾಯಕ ಎಂದು ಪತ್ರಿಕಾಗೋಷ್ಠಿ ಕರೆದರೂ ಆಶ್ಚರ್ಯವಿಲ್ಲ!
ಎಂತಹ ವಿಪರ್ಯಾಸ ನೋಡಿ… ಒಂದು ಕಾಲದಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಎಂಬ ಜಗದ್ವಿಖ್ಯಾತ ಎಂಜಿನಿಯರ್‌ಗೆ ಜನ್ಮ ನೀಡಿದ್ದ ಕರ್ನಾಟಕದಲ್ಲಿ ಕಫೀಲ್ ಅಹ್ಮದ್‌ನಂಥ ಎಂಜಿನಿಯರ್‌ಗಳೂ, ಯಾಸಿನ್ ಭಟ್ಕಳ್‌ನಂಥ ದೇಶದ್ರೋಹಿಗಳೂ ಜನಿಸುತ್ತಿದ್ದಾರೆ!
Sir , nice article…. these things are happening because of the constant support from congress and now a days parties like SP in the name of secularism to this antisocial outfits, they have just turned a blind eye to these kind of matters. If this continues for another 10-20 years, I feel India will be divided again.And its a matter of shame for me as a NRI when people from other states ask me about Karnataka for these kind of news.
karnatakadalli janisiddu avara thappalla sir… avru beleda vaathavarana avranna haage maadide alwa..
Sir, neevu heliddella satya. Aadre enu madodu, Suvarna News nalli Ajith interview madovaga, Bhatkalada obba doctor kelidru, Court idannella prove madidya hagene Yasin elli Ugragami anta prove agide tilisi anta..
Kahi satya adu. Enu madokagalla..
Even our CM Siddaramaiah when yasin bhatkal was arrested he told to press that “yasi bhatkal avaru arrest aagiddaranthe” by using plural words, if Hindu is arrested he could have use the same words.
howdu…sir…idu 200% nija… idu egina karnataka da sochaneeya sthiti…andaru tappagalaradu…..nice article…..sir… hat’s off u…sir
guru gale iddu rajakarani gala vypalya . havrige vote beku aste adikara iddieyallu … desha yenadre yennu avarige .. one solution for dis is modiji
MR PRATAP,
EVARANNU DUSHISUVUDAKKU MANCHE VOTIGAGI BARI MUSLIMARANNE OLISUVUDU ESTU SARI……….HAGADARE HINDUGALIGE SWABHIMANA ELLAVE HINDU RAJAKARANIGALIGE HINDUGALA VOTE BEKILLAVE……………JANASANKEYA BAGGE YAVA RAJAKARANI HAGU E DESHADA BUIDDIVATARU MATANADUVUDE ELLA YAKE ADU E DESHADA BAHU DODDA SAMASYE ALLAVE ??? ATAVA MUSLIM JANARA BHAYAVE ???
yes sir u r right
desha aluvavrige tilitaela sir
what abt ajmeer, malengauv, blasts… who is terrorist there…? why u r not writing abt suffrom terrorists…? prajna singh sadhvi…??? Ur way of writing looks like all muslims r terrorists.. but its not so.. terrorists doesnt have religion. ok mind it….
?!!!!!!!!!!!!!!!!!!!!!!!!!!!
Let the court pronounce the judgement, then vl write abt them
NAM KALAA BUDADALLIRO PRAGATHIPARARIGE NANTHARA BHAYOTHPADAKARA PRODUCTION MADALU HORATIRO AAAAA KHANGOOOOO DIKKARA
They should be trialed in a fast track court, subjected to narco analysis, brain mapping and polygraph test. If found guilty then should be hanged publicly or shoot publicly. Then this will send a strong message who are supporting it.
e deshad katte este kannamo, ele chinte made laaba ilamo.politicians are more cruel n dangerous than terrorists sir.
politicians are more dangerous dan terrorist .politicians are legal terrorists of dis country.
ಕದà³à²¦à³ ಜೈಲಿಗೆ ಹೊಗಿಬಂದವರನà³à²¨à³† ಕೊಂಡಾಡà³à²µ ನಾವà³, ಇಂತವà³à²¦à²•à³à²•ೆಲà³à²²à²¾ ತಲೆಕೆಡಿಸಿಕೊಳà³à²³à³à²µà³à²¦à²•à³à²•ೆ ಸಮಯವೆಲà³à²²à²¿à²¦à³† ? ಇನà³à²¨à³ ಕರà³à²¨à²¾à²Ÿà²•ದಲà³à²²à²¿ à²à²¨à³‡à²¨à³ ನಡೆಯಲಿದೆಯೋ ?
sir… nice article