Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಧರ್ಮವೇ ಸಕಲ ಸಮಸ್ಯೆಗೂ ಪರಿಹಾರ ಎಂದು ಬದಲಾವಣೆಗೆ ಹೊರಟವರು ತಾವೇ ಬಡಿದಾಡಿಕೊಳ್ಳುತ್ತಿರುವುದೇಕೆ?

ಧರ್ಮವೇ ಸಕಲ ಸಮಸ್ಯೆಗೂ ಪರಿಹಾರ ಎಂದು ಬದಲಾವಣೆಗೆ ಹೊರಟವರು ತಾವೇ ಬಡಿದಾಡಿಕೊಳ್ಳುತ್ತಿರುವುದೇಕೆ?

2013, ಜುಲೈ 3ರಂದು ಈಜಿಪ್ಟ್ ಅಧ್ಯಕ್ಷ ಮೊಹಮದ್ ಮೋರ್ಸಿಯವರನ್ನು ಕಿತ್ತೊಗೆದ ನಂತರ ಮೋರ್ಸಿಯವರ ಬೆಂಬಲಕ್ಕೆ ನಿಂತಿರುವ ‘ಮುಸ್ಲಿಂ ಬ್ರದರ್‌ಹುಡ್‌’ ಹಾಗೂ ಪ್ರತಿಪಕ್ಷಗಳು-ಉದಾರವಾದಿಗಳ ನಡುವೆ   ಆರಂಭವಾದ ಸಂಘರ್ಷಕ್ಕೆ ಇದುವರೆಗೂ 850ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ! ಮತ್ತೊಂದು ಅರಬ್ ರಾಷ್ಟ್ರವಾದ ಸಿರಿಯಾದಲ್ಲಿ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಸೇನೆ ಮುಸ್ಲಿಂ ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶಗಳ ಮೇಲೆ ಮೊನ್ನೆ ಬುಧವಾರ ನಡೆಸಿದ ವಿಷಾನಿಲ ದಾಳಿಯಲ್ಲಿ ಮಹಿಳೆಯರು, ಮಕ್ಕಳೆನ್ನದೇ 1300 ಸ್ವಧರ್ಮೀಯರು ಇದ್ದಲ್ಲೇ ಹೆಣವಾಗಿದ್ದಾರೆ!!

ಹಾಗಾದರೆ ಅರಬ್ ರಾಷ್ಟ್ರಗಳಲ್ಲಿ ನಡೆಯುತ್ತಿರುವುದಾದರೂ ಏನು?

ಏಕಿಂಥ ಉದ್ವಿಗ್ನ ವಾತಾವರಣ ಸೃಷ್ಟಿಯಾಗುತ್ತಿದೆ? Islamisation ಅಥವಾ Political Islam ಎಂದು ಮುಬಾರಕ್ ಸರ್ಕಾರವನ್ನು ಕಿತ್ತೊಗೆದ ಈಜಿಪ್ಟಿನ ಮುಸಲ್ಮಾನರು ಈಗೇಕೆ ಪರಸ್ಪರರ ವಿರುದ್ಧವೇ ಕತ್ತಿ ಹಿಡಿದು ನಿಂತಿದ್ದಾರೆ? 2010, ಡಿಸೆಂಬರ್ 18ರಂದು ಆರಂಭವಾದ “ಅರಬ್ ಸ್ಪ್ರಿಂಗ್‌” ಹಾಗೂ ಲಕ್ಷಾಂತರ ಜನ ನೆರೆದ ಕಾರಣ ವಿಶ್ವದ ಸುದ್ದಿಯ ಕೇಂದ್ರವಾದ ಈಜಿಪ್ಟ್‌ನ “ತಾಹ್ರೀರ್ ವೃತ್ತ”ದಲ್ಲಿ ಕಂಡುಬಂದ ಕ್ರಾಂತಿಯ ಜ್ವಾಲೆ, ಬದಲಾವಣೆಯ ಗಾಳಿ ಈಗ ಎಲ್ಲಿ ಹೋಯಿತು?

ಸಾಮಾನ್ಯವಾಗಿ  ಚಳಿಗಾಲ ಮುಗಿದ ನಂತರ ಬರುವ ಕಾಲವೇ ಈ “Spring’ (ವಸಂತ ಕಾಲ). ಆಗ Rejuvenation ಅನ್ನು ಕಾಣುತ್ತೇವೆ. ಅರಬ್‌ನಲ್ಲಿ ನಡೆದ ಘಟನೆಗಳ ಹಿನ್ನೆಲೆಯಲ್ಲಿ ಹೇಳುವುದಾದರೆ ಒಂದು ಕೆಟ್ಟ ಕಾಲದಿಂದ ಒಳ್ಳೆಯ ಕಾಲದತ್ತ ಸಾಗುವುದು ಎನ್ನಬಹುದು. “Prague Spring’ ಎಂಬ ಪದಪುಂಜ 1968ರಲ್ಲೇ ಕೇಳಿಬಂದಿತ್ತು. ಅಲೆಗ್ಸಾಂಡರ್ ಡುಸೆಕ್ ಅವರು ಸೋವಿಯತ್ ಒಕ್ಕೂಟದ ಕರಿನೆರಳು ಹಾಗೂ ಕಮ್ಯುನಿಸ್ಟರ ಕಪಿಮುಷ್ಠಿಯಲ್ಲಿದ್ದ ಝೆಕಸ್ಲೊವಾಕಿಯಾವನ್ನು ಅದರಿಂದ ಹೊರಗೆಳೆದು ಸುಧಾರಣೆಗಳನ್ನು ತಂದು ಜನರಿಗೆ ಹಕ್ಕುಗಳನ್ನು ನೀಡಲು ಪ್ರಯತ್ನಿಸಿದ ಪರ್ವವನ್ನು ‘ಪ್ರೇಗ್ ಸ್ಪ್ರಿಂಗ್‌’ ಎಂದು ಕರೆದರೆ, ನಿರಂಕುಶಪ್ರಭುಗಳು, ಸರ್ವಾಧಿಕಾರಿಗಳು, ರಾಜಾಡಳಿತಗಳ ದಬ್ಬಾಳಿಕೆಯ ವಿರುದ್ಧ 2010, ಡಿಸೆಂಬರ್ 18ರಂದು ಮುಸ್ಲಿಂ ರಾಷ್ಟ್ರಗಳಲ್ಲಿ ಆರಂಭವಾದ ಪ್ರದರ್ಶನ, ಪ್ರತಿಭಟನೆ, ಮುಷ್ಕರ, ಮುತ್ತಿಗೆಗಳು “Arab Spring’ ಎಂಬ ಹೆಸರು ಪಡೆದವು. ಇಂಥದ್ದೊಂದು ಪ್ರತಿಭಟನೆ, ಕ್ರಾಂತಿಯ ಮೊದಲ ಜ್ವಾಲೆ ಕಂಡುಬಂದಿದ್ದು ಟುನೀಷಿಯಾದಲ್ಲಿ. ಅಲ್ಲಿನ ಅಧ್ಯಕ್ಷ ಝಿನ್-ಎಲ್-ಅಬಿದಿನ್ ಬಿನ್ ಅಲಿಯನ್ನು ಕಿತ್ತೊಗೆದು ನೈಜ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಜನ ಮುಂದಾದರು, ಅದರಲ್ಲಿ ಯಶಸ್ವಿಯೂ ಆದರು. ಅದನ್ನು “Jasmine Revolution’ ಎಂದು ಕರೆಯಲಾಯಿತು. ಅದಕ್ಕೆ ಸಮಾನಾಂತರವಾಗಿ ಈಜಿಪ್ಟ್, ಲಿಬಿಯಾ, ಯೆಮನ್‌ನಲ್ಲಿ ಎದ್ದ ಕ್ರಾಂತಿ ಅಲ್ಲಿನ ಆಡಳಿತಗಾರರನ್ನು ಗದ್ದುಗೆಯಿಂದ ಹೊರದಬ್ಬಿದರೆ, ಒಮಾನ್, ಬಹ್ರೇನ್, ಸಿರಿಯಾ, ಅಲ್ಜೀರಿಯಾ, ಇರಾಕ್, ಜೋರ್ಡಾನ್, ಕುವೈತ್, ಮೊರಾಕ್ಕೊ, ಸುಡಾನ್, ಲೆಬನಾನ್‌ಗಳಲ್ಲಿ ಸರ್ಕಾರ ವಿರೋಧಿ ಧ್ವನಿ, ಪ್ರತಿಭಟನೆಗಳು ಕಂಡುಬಂದವು. ಇವೆಲ್ಲ ಒಟ್ಟಾರೆಯಾಗಿ ‘ಅರಬ್ ಸ್ಪ್ರಿಂಗ್‌’ ಎನಿಸಿದವು. ಈಜಿಪ್ಟ್ ರಾಜಧಾನಿ ಕೈರೋದ ತಾಹ್ರೀರ್ ವೃತ್ತದಲ್ಲಿ ನೆರೆದ ಲಕ್ಷಾಂತರ ಜನರು ಮೂವತ್ತು ವರ್ಷಗಳಿಂದ ಈಜಿಪ್ಟ್ ಅನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಹೋಸ್ನಿ ಮುಬಾರಕ್ ಎಂಬ ಬಲಿಷ್ಠ ಸರ್ವಾಧಿಕಾರಿಯನ್ನೇ ಕಿತ್ತೊಗೆದು ಬಿಟ್ಟರು! 42 ವರ್ಷಗಳಿಂದ ಲಿಬಿಯಾವನ್ನಾಳುತ್ತಿದ್ದ ಮುಅಮ್ಮರ್ ಗಡಾಫಿಯನ್ನು ಅಮೆರಿಕ-ಬ್ರಿಟನ್-ಫ್ರಾನ್ಸ್ ಸಹಾಯದಿಂದ ಕೊಂದೇ ಹಾಕಿದರು!!

ಆದರೆ….

ಅಬಿದಿನ್ ಬಿನ್ ಅಲಿಯನ್ನು ಕಿತ್ತೊಗೆದ ಮಾತ್ರಕ್ಕೆ ಟುನೀಷಿಯಾ ನೆಮ್ಮದಿಯಾಯಿತೆ? ಗಡಾಫಿಯನ್ನು ಕೊಂದ ನಂತರ ಲಿಬಿಯಾದಲ್ಲಿ ಜನತಂತ್ರ ನೆಲಸಿತೆ? ಹೋಸ್ನಿ ಮುಬಾರಕ್‌ರನ್ನು ಜೈಲಿಗಟ್ಟಿದ ನಂತರ ಈಜಿಪ್ಟ್ ಶಾಂತವಾಯಿತೆ?

ಇಲ್ಲ!!

ಇಂದು ಈಜಿಪ್ಟ್, ಸಿರಿಯಾಗಳಲ್ಲಿ ಏಕೆ ಮುಸಲ್ಮಾನರೇ ಬಡಿದಾಡಿಕೊಳ್ಳುತ್ತಿದ್ದಾರೆ? ಏಕಾಗಿ ಈಜಿಪ್ಟ್ ಮತ್ತೆ ಕವಲು ದಾರಿಗೆ ಬಂದು ನಿಂತಿದೆ? ಈಜಿಪ್ಟ್‌ನ ಖ್ಯಾತ ಅಧ್ಯಕ್ಷ ಅನ್ವರ್ ಸದತ್ ಅವರ ಕಗ್ಗೊಲೆಯ ನಂತರ 30 ವರ್ಷ ದೇಶವನ್ನು ಕಪಿಮುಷ್ಠಿಯಲ್ಲಿಟ್ಟುಕೊಂಡಿದ್ದ ಹೋಸ್ನಿ ಮುಬಾರಕ್‌ರನ್ನು ಕಿತ್ತೊಗೆದ ನಂತರ ನಡೆದ ಚುನಾವಣೆಯಲ್ಲಿ ಜನಾದೇಶ ಪಡೆದು 2012, ಜೂನ್ 30ರಂದು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊಹಮದ್ ಮೋರ್ಸಿ ಮಾಡಿದ್ದೇನು? ಅವರನ್ನು ದೇಶದ ಸೇನೆಯೇ ಅಧಿಕಾರದಿಂದ ಕಿತ್ತೊಗೆಯಲು ಕಾರಣವೇನು? ಬಹುದೊಡ್ಡ ಜನಾದೇಶದೊಂದಿಗೆ ಅಧ್ಯಕ್ಷರಾಗಿದ್ದ ಮೋರ್ಸಿ, ವರ್ಷ ಕಳೆಯುವಷ್ಟರಲ್ಲಿ ಆಯ್ಕೆ ಮಾಡಿದ ಜನರಿಗೇ ಬೇಡವಾಗಿದ್ದೇಕೆ? ಮೋರ್ಸಿ ಮಾಡಿದ ತಪ್ಪಾದರೂ ಏನು?

ಅರಬ್ ಸ್ಪ್ರಿಂಗ್ ಆರಂಭವಾದಾಗ, ಹೋಸ್ನಿ ಮುಬಾರಕರನ್ನು ಪದಚ್ಯುತಿಗೊಳಿಸಲು ಮುಂದಾದಾಗ, ‘ಬಹುಸಂಖ್ಯಾತ ಮುಸ್ಲಿಮರು, ಅಲ್ಪಸಂಖ್ಯಾತ ಕ್ರೈಸ್ತರು ಹೀಗೆ ಎಲ್ಲ ಧರ್ಮ, ವರ್ಗದವರನ್ನೂ ಪ್ರತಿನಿಧಿಸುವ ಒಂದು ನೈಜ ಈಜಿಪ್ಟ್ ಸರ್ಕಾರವನ್ನು ಸ್ಥಾಪಿಸುವುದಾಗಿ’ ಮೊಹಮದ್ ಮೋರ್ಸಿ ವಾಗ್ದಾನ ಮಾಡಿದ್ದರು. ಮುಬಾರಕ್ ವಿರೋಧಿ ಪ್ರಚಾರಾಂದೋಲನದ ಮುಖ್ಯ ವಿಷಯವೂ ಅದೇ ಆಗಿತ್ತು. ಆದರೆ ಮೋರ್ಸಿಯವರ ಪಕ್ಷದ ಹೆಸರು ಫ್ರೀಡಂ ಮತ್ತು ಜಸ್ಟೀಸ್ ಪಾರ್ಟಿಯೇ ಆಗಿದ್ದರೂ ಮುಬಾರಕ್ ವಿರುದ್ಧದ ಹೋರಾಟದಲ್ಲಿ ಅವರ ಜತೆ ಬಹುವಾಗಿ ಕೈ ಜೋಡಿಸಿದ್ದು 1928ರಲ್ಲೇ ಸ್ಥಾಪನೆಯಾಗಿದ್ದ ‘ಮುಸ್ಲಿಂ ಬ್ರದರ್‌ಹುಡ್‌’ ಎಂಬ ಮೂಲಭೂತವಾದಿ ಸಂಘಟನೆ. ಜಿಹಾದೇ ನಮ್ಮ ಮಾರ್ಗ, ಧರ್ಮವೇ ಎಲ್ಲದಕ್ಕೂ ಪರಿಹಾರ ಎನ್ನುವ ಈ ಸಂಘಟನೆಯ ತಾಳಕ್ಕೆ ಮೋರ್ಸಿ ಕೂಡ ಕುಣಿಯಬೇಕಾಯಿತು ಹಾಗೂ ಕುಣಿಯಲಾರಂಭಿಸಿದರು. ಅಂದು ಜನ ಬೀದಿಗಿಳಿದಿದ್ದು ಸ್ವಾಭಿಮಾನ, ಆತ್ಮಗೌರವ, ಸ್ವ-ಆಡಳಿತ ಹಾಗೂ ಸ್ವಾತಂತ್ರ್ಯಕ್ಕಾಗಿ. ಕೊನೆಗೆ ದೊರೆತಿದ್ದು ಮಗದೊಂದು ರೀತಿಯ ದಬ್ಬಾಳಿಕೆ, ಹತ್ತಿಕ್ಕುವಿಕೆ. ಹಾಗಾಗಿ ಈಜಿಪ್ಟ್‌ನ ಒಟ್ಟು 9 ಕೋಟಿ ಜನಸಂಖ್ಯೆಯಲ್ಲಿ ಶೇ.10ರಷ್ಟಿರುವ ಕ್ರೈಸ್ತರ ಹತ್ತಾರು ಚರ್ಚ್‌ಗಳು ಕಟ್ಟರ್‌ಪಂಥೀಯರ ದಾಳಿಗೆ ಗುರಿಯಾಗಿವೆ. ಮೂವರು ಕ್ರೈಸ್ತ ಸನ್ಯಾನಿಸಿಯರನ್ನು ರಾಜಧಾನಿ ಕೈರೋದ ಬೀದಿ ಬೀದಿಗಳಲ್ಲಿ ಯುದ್ಧಾಪರಾಧಿಗಳಂತೆ ಮೆರವಣಿಗೆ ಮಾಡಿದ್ದಾರೆ.

ಸಮಸ್ಯೆ ಇರುವುದೇ ಇಲ್ಲಿ.

ಜನ ಮುಕ್ತ, ನ್ಯಾಯಸಮ್ಮತ, ಭಯ-ಭೀತಿ ಇಲ್ಲದ ವಾತಾವರಣಕ್ಕಾಗಿ ಅಂದು ಬೀದಿಗಿಳಿದಿದ್ದರೇ ಹೊರತು ‘ಧರ್ಮ ರಾಜಕಾರಣ’ವನ್ನು ಪ್ರತಿಷ್ಠಾಪಿಸಿ, ಹೋಸ್ನಿ ಮುಬಾರಕ್ ಆಡಳಿತವನ್ನೇ ಹೊಸ ರೀತಿಯಲ್ಲಿ ಆಹ್ವಾನಿಸುವುದಕ್ಕಲ್ಲ. ಇದನ್ನು ಮೋರ್ಸಿಯವರಾಗಲಿ, ಮುಸ್ಲಿಂ ಬ್ರದರ್‌ಹುಡ್ ಆಗಲಿ ಅರ್ಥ ಮಾಡಿಕೊಳ್ಳಲಿಲ್ಲ. 19, 20ನೇ ಶತಮಾನದಲ್ಲಿ ಸಾಮ್ರಾಜ್ಯಶಾಹಿಗಳ ಹಿಡಿತದಲ್ಲಿದ್ದ ಮುಸ್ಲಿಂ ಜಗತ್ತು ಅಥವಾ ಅರಬ್ ರಾಷ್ಟ್ರಗಳು ದಾಸ್ಯದಿಂದ ಹೊರಬಂದ ಮೇಲೆ ಕೆಲವು ರಾಷ್ಟ್ರಗಳು ಸರ್ವಾಧಿಕಾರಿಗಳ ಕೈಗೆ ಸಿಲುಕಿದರೆ ಇನ್ನು ಕೆಲವು ರಾಜಾಡಳಿತಕ್ಕೆ ಒಳಪಟ್ಟವು. ಹೀಗೆ ಸಾಮ್ರಾಜ್ಯಶಾಹಿತ್ಯದಿಂದ ಮುಕ್ತಿ ಪಡೆದರೂ ಜನರಿಗೆ ನೈಜ ಸ್ವಾತಂತ್ರ್ಯ ದಕ್ಕಲಿಲ್ಲ. ಪ್ರಜಾಪ್ರಭುತ್ವವೂ ಕೂಡ ಸರಿಯಾಗಿ ಎಲ್ಲೂ ನೆಲೆಗೊಳ್ಳಲಿಲ್ಲ. ಒಂದೆಡೆ ನಿರಕುಂಶಾಧಿಕಾರಿಗಳು, ಸರ್ವಾಧಿಕಾರಿಗಳು, ರಾಜಮನೆತನಗಳು ಧರ್ಮವನ್ನು ಅಸ್ತ್ರವನ್ನಾಗಿಸಿಕೊಂಡು ಜನರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಾ ಬಂದರೆ, ಇನ್ನೊಂದೆಡೆ ಇಂಥ ದಬ್ಬಾಳಿಕೆ ವಿರುದ್ಧ ಸಿಡಿದೇಳಲು ಹೊರಟವರೂ ಸರ್ವಾಧಿಕಾರಿಗಳನ್ನು ಕಿತ್ತೊಗೆಯಲು ಧರ್ಮ ಪ್ರಜ್ಞೆಯನ್ನು ಜಾಗೃತಗೊಳಿಸುವುದೇ ಒಳ್ಳೆಯ ಉಪಾಯ ಎಂದು ಭಾವಿಸಿದರು. ಅದರ ಜತೆ ಜತೆಗೇ ಮುಸ್ಲಿಂ ಜಗತ್ತಿನ ಮುಖ್ಯ ಸಮಸ್ಯೆ ಯಾವುದೆಂದರೆ ಸಾಮ್ರಾಜ್ಯಶಾಹಿತ್ವದಿಂದ ಬಳುವಳಿಯಾಗಿ ಬಂದಿರುವ ಹಾಗೂ ತಮ್ಮ ಜನರನ್ನು ಹಾಳುಗೆಡವುತ್ತಿರುವ ಪಾಶ್ಚಿಮಾತ್ಯೀಕರಣ ಹಾಗೂ ಅದನ್ನು ಹೋಗಲಾಡಿಸಬೇಕಾದರೆ ಆಡಳಿತವನ್ನು ಇಸ್ಲಾಮೀಕರಣಗೊಳಿಸಬೇಕು ಅಥವಾ ರಾಜಕೀಯಕ್ಕೆ ಇಸ್ಲಾಮೇ ಮುಖ್ಯ ತಳಹದಿಯಾಗಬೇಕು ಎಂದು ಭಾವಿಸತೊಡಗಿದರು.

ಅವರ ಎಣಿಕೆ ತಪ್ಪಾಗಿದ್ದೇ ಇಲ್ಲಿ!

ಅಬಿದಿನ್ ಬಿನ್ ಅಲಿಯನ್ನು ಕಿತ್ತೊಗೆದ ನಂತರ ಟುನಿಷಿಯಾ ಶಾಂತವಾಗಲಿಲ್ಲ, ಗಡಾಫಿ ಹೋದ ನಂತರ ಲಿಬಿಯಾ ತಣ್ಣಗಾಗಲಿಲ್ಲ. ಮುಬಾರಕ್ ಪತನದ ನಂತರ ಈಜಿಪ್ಟ್ ಕೂಡ ನೆಮ್ಮದಿ ಕಾಣಲಿಲ್ಲ. ಹೋಸ್ನಿ ಮುಬಾರಕ್ಕರದ್ದು ಒಂಥರಾ ದಬ್ಬಾಳಿಕೆಯಾದರೆ ಮೊಹಮದ್ ಮೋರ್ಸಿ ಇಸ್ಲಾಮಿಕ್ ಆಡಳಿತ ತರುವ ನೆಪದಲ್ಲಿ ಅದೇ ಕೆಲಸಕ್ಕೆ ಮುಂದಾದರು. ಪ್ಯಾಲೆಸ್ತೀನ್‌ನ ಭಯೋತ್ಪಾದಕ ಸಂಘಟನೆ ಹಮಾಸ್ ಜತೆ ಸಂಪರ್ಕ ಸಾಧಿಸಿದರು. ಹೀಗಾಗಿ ‘ಅರಬ್ ಸ್ಪ್ರಿಂಗ್ ಎಂಬುದು ಕೆಟ್ಟಿದ್ದರಿಂದ ಒಳಿತಿನೆಡೆಗೆ ಸಾಗುವ ಕ್ರಾಂತಿಯಾಗಲಿಲ್ಲ. ಬದಲಿಗೆ ಮೂಲಭೂತವಾದಿಗಳು ಗದ್ದುಗೆ ಹಿಡಿಯುವ ಮಾರ್ಗವಾಗಿ ಬಿಟ್ಟಿತು. ಧರ್ಮದ ಹೆಸರಿನಲ್ಲಿ ಉಸಿರು ಕಟ್ಟಿಸುವಂಥ ವಾತಾವರಣವನ್ನು ಸೃಷ್ಟಿಸಲು ಮುಂದಾದರು. ಹಾಗಾಗಿ ನೈಜ ಸ್ವಾತಂತ್ರ್ಯಕ್ಕಾಗಿ ಹಾತೊರೆಯುತ್ತಿದ್ದ ಈಜಿಪ್ಟ್ ಜನ ಹತಾಶರಾದರು. ಮತ್ತೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ತಾಹ್ರೀರ್ ಸ್ಕ್ವೇರ್‌ನಲ್ಲಿ ನೆರೆದರು. ಮೋರ್ಸಿ ಕೆಳಗಿಳಿಯಬೇಕೆಂದರು. ಆದರೆ ಯಾವಾಗ ಮೋರ್ಸಿ ಒಪ್ಪಲಿಲ್ಲವೋ, ಮುಸ್ಲಿಂ ಬ್ರದರ್‌ಹುಡ್ ಅವರ ಬೆಂಬಲಕ್ಕೆ ನಿಂತಿತೋ ಆಗ ದೇಶದ ಸೇನೆಯೇ ಮುಂದೆ ನಿಂತು ಮೋರ್ಸಿ ಸರ್ಕಾರವನ್ನು ಕಳೆದ ಜುಲೈ 3 ರಂದು ಕಿತ್ತೊಗೆಯಬೇಕಾಗಿ ಬಂತು. ದುರದೃಷ್ಟವಶಾತ್ ರೊಚ್ಚಿಗೆದ್ದ ಮೋರ್ಸಿ ಬೆಂಬಲಿಗರು ಹಾಗೂ ಮುಸ್ಲಿಂ ಬ್ರದರ್‌ಹುಡ್ ಈಜಿಪ್ಟ್‌ಜನರನ್ನೇ ಕೊಲ್ಲಲು ಮುಂದಾಯಿತು. ಅದರ ಪರಿಣಾಮವೇ 850 ಜನರ ಹತ್ಯೆ.

ಇದೆಂಥ ಮನಸ್ಥಿತಿಯನ್ನು ತೋರುತ್ತದೆ?

ಜನರಿಗೆ ಬೇಕಾಗಿರುವುದೇನು, ಇವರು ಹೇರಲು ಹೊರಟಿರುವುದೇನು? ಧರ್ಮವನ್ನು ಮುಂದಿಟ್ಟುಕೊಂಡು ಹೊರಟಿರುವ ಇವರ ಒಳ ಉದ್ದೇಶವಾದರೂ ಯಾವುದು? ರಾಜಕಾರಣದಿಂದ ಧರ್ಮವನ್ನು, ಚರ್ಚನ್ನು ದೂರವಿಟ್ಟ ಮೇಲೆಯೇ ಅಮೆರಿಕ ಹಾಗೂ ಇನ್ನಿತರ ಪಾಶ್ಚಿಮಾತ್ಯ ರಾಷ್ಟ್ರಗಳು ಪ್ರಗತಿಯಾಗಿದ್ದು ಎಂಬುದು ಇವರಿಗೆ ತಿಳಿದಿಲ್ಲವೇ? ಇಷ್ಟಾಗಿಯೂ ಅರಬ್ಬನ್ನು ಇವರು ಎತ್ತ ಕೊಂಡೊಯ್ಯಲು ಮುಂದಾಗಿದ್ದಾರೆ? ಅಣಕವೆಂದರೆ ಗಡಾಫಿ, ಮುಬಾರಕ್, ಬೆನ್ ಅಲಿಗಳು ನಿರಂಕುಶಾಧಿಕಾರಿಗಳು, ಸರ್ವಾಧಿಕಾರಿಗಳು ಆಗಿದ್ದಿರಬಹುದು. ಆದರೆ ಧಾರ್ಮಿಕ ಮೂಲಭೂತವಾದ ತಲೆಯೆತ್ತಲು ಎಂದೂ ಬಿಟ್ಟಿರಲಿಲ್ಲ. ಸದ್ದಾಂ ಹುಸೇನ್ ಕೂಡ ಸರ್ವಾಧಿಕಾರಿಯೇ ಆಗಿದ್ದರು. ಆದರೆ ಮತಾಂಧನಾಗಿರಲಿಲ್ಲ. ಇವರಿರುವವರೆಗೂ ಅಲ್ ಖೈದಾ ಅಥವಾ ಅಂಥ ಸಂಘಟನೆಗಳು ಈ ಯಾವ ದೇಶಗಳಲ್ಲೂ ತಲೆಯೆತ್ತಿರಲಿಲ್ಲ. ಈಗ ಆಗಿರುವುದೇನು? ಅಲ್ ಖೈದಾ ಇಸ್ಲಾಮಿಕ್ ಮಗ್ರೇಬ್ (ಆ್ಕಐಂ) ಎಂಬ ಜಿಹಾದಿ ಸಂಘಟನೆ ಮಾಲಿ ರಾಷ್ಟ್ರದಲ್ಲಿ ಬೇರು ಬಿಟ್ಟಿದ್ದರೆ, ಜಭತ್ ಅಲ್ ನುಸ್ರಾ ಎಂಬ ಅಲ್‌ಖೈದಾಗೆ ಸೇರಿದ ಭಯೋತ್ಪಾದಕ ಸಂಘಟನೆ ಕ್ರಾಂತಿಯ ಹೆಸರಿನಲ್ಲಿ ಸಿರಿಯಾವನ್ನು ಹತೋಟಿಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಅದನ್ನು ಹತ್ತಿಕ್ಕಲು ಮುಂದಾದ ಅಧ್ಯಕ್ಷ ಅಲ್ ಅಸ್ಸಾದ್ ವಿಷಾನಿಲ ಪ್ರಯೋಗಿಸಿ 1300 ಅಮಾಯಕರನ್ನು ಪೈಶಾಚಿಕವಾಗಿ ಕೊಂದಿದ್ದಾರೆ. ಇನ್ನೊಂದೆಡೆ ಅಲ್‌ಖೈದಾವಂತೂ ಈಜಿಪ್ಟ್, ಟುನೀಷಿಯಾ, ಲಿಬಿಯಾಗಳಿಗೆ ವ್ಯಾಪಿಸಿಬಿಟ್ಟಿದೆ. ಈಜಿಪ್ಟ್, ಸಿರಿಯಾಗಳಂಥ ಮುಸ್ಲಿಂ ರಾಷ್ಟ್ರಗಳಲ್ಲಿ ಮುಸಲ್ಮಾನರೇ ಏಕೆ ಪರಸ್ಪರ ಬಡಿದಾಡಿಕೊಳ್ಳುತ್ತಿದ್ದಾರೆ, ಕೊಂದುಕೊಳ್ಳುತ್ತಿದ್ದಾರೆ ಎಂದರೆ ಇದೇ ಕಾರಣಕ್ಕೆ!

ಧರ್ಮದ ಹೆಸರಿನಲ್ಲಿ ಪ್ರತ್ಯೇಕ ರಾಷ್ಟ್ರ ಪಡೆದುಕೊಂಡ ನಂತರವೂ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳ ಕತೆ, ಸ್ಥಿತಿ ಏನಾಗಿದೆ ಎಂಬುದು ನಮಗಂತೂ ಗೊತ್ತೇ ಇದೆ. ಪ್ರತ್ಯೇಕತೆ ಧ್ವನಿ ಎತ್ತಿರುವ ಬಲೂಚಿಸ್ತಾನದಲ್ಲಿ ಮುಸಲ್ಮಾನರನ್ನು ಪಾಕ್ ಸರ್ಕಾರವೇ ಹತ್ಯೆಗೈಯುತ್ತಿದ್ದರೆ, ಬಾಂಗ್ಲಾದಲ್ಲಿ 1971ರ ಯುದ್ಧದ ವೇಳೆ ದೇಶವಾಸಿಗಳನ್ನೇ ಮಾನಭಂಗ ಮಾಡಿದವರಿಗೆ ಶಿಕ್ಷೆ ನೀಡಲು ಮುಂದಾದರೆ ಮೂಲಭೂತವಾದಿ ಜಮಾತೆ ಇಸ್ಲಾಮಿ ಸ್ವಧರ್ಮಿಯರನ್ನೇ ಹತ್ಯೆಗೈಯಲು ಇಳಿದಿದೆ. ಇನ್ನೊಂದೆಡೆ ಅರಬ್ ಮುಸ್ಲಿಂ ಜಗತ್ತೂ ಕೂಡ ಕದಡಿದೆ. ಈ ಹಿನ್ನೆಲೆಯಲ್ಲಿ  ಒಟ್ಟಾರೆ ಘಟನೆಗಳನ್ನು ನೋಡಿದಾಗ ಪ್ರೇರಣೆಗಾಗಿ, ನಿಷ್ಠೆಗಾಗಿ ಗಡಿಯಾಚೆಗೆ ಮುಖ ಮಾಡುವ ಭಾರತದ ಕೆಲವು ಮತಾಂಧರಿಗೂ ಒಂದು ಸಂದೇಶವಿದೆ ಎಂದನಿಸುವುದಿಲ್ಲವೆ?!

2013, ಜುಲೈ 3ರಂದು ಈಜಿಪ್ಟ್ ಅಧ್ಯಕ್ಷ ಮೊಹಮದ್ ಮೋರ್ಸಿಯವರನ್ನು ಕಿತ್ತೊಗೆದ ನಂತರ ಮೋರ್ಸಿಯವರ ಬೆಂಬಲಕ್ಕೆ ನಿಂತಿರುವ ‘ಮುಸ್ಲಿಂ ಬ್ರದರ್‌ಹುಡ್‌’ ಹಾಗೂ ಪ್ರತಿಪಕ್ಷಗಳು-ಉದಾರವಾದಿಗಳ ನಡುವೆ   ಆರಂಭವಾದ ಸಂಘರ್ಷಕ್ಕೆ ಇದುವರೆಗೂ 850ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ! ಮತ್ತೊಂದು ಅರಬ್ ರಾಷ್ಟ್ರವಾದ ಸಿರಿಯಾದಲ್ಲಿ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಸೇನೆ ಮುಸ್ಲಿಂ ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶಗಳ ಮೇಲೆ ಮೊನ್ನೆ ಬುಧವಾರ ನಡೆಸಿದ ವಿಷಾನಿಲ ದಾಳಿಯಲ್ಲಿ ಮಹಿಳೆಯರು, ಮಕ್ಕಳೆನ್ನದೇ 1300 ಸ್ವಧರ್ಮೀಯರು ಇದ್ದಲ್ಲೇ ಹೆಣವಾಗಿದ್ದಾರೆ!! ಹಾಗಾದರೆ ಅರಬ್ ರಾಷ್ಟ್ರಗಳಲ್ಲಿ ನಡೆಯುತ್ತಿರುವುದಾದರೂ ಏನು?ಏಕಿಂಥ ಉದ್ವಿಗ್ನ ವಾತಾವರಣ ಸೃಷ್ಟಿಯಾಗುತ್ತಿದೆ? Islamisation ಅಥವಾ Political Islam ಎಂದು ಮುಬಾರಕ್ ಸರ್ಕಾರವನ್ನು ಕಿತ್ತೊಗೆದ ಈಜಿಪ್ಟಿನ ಮುಸಲ್ಮಾನರು ಈಗೇಕೆ ಪರಸ್ಪರರ ವಿರುದ್ಧವೇ ಕತ್ತಿ ಹಿಡಿದು ನಿಂತಿದ್ದಾರೆ? 2010, ಡಿಸೆಂಬರ್ 18ರಂದು ಆರಂಭವಾದ “ಅರಬ್ ಸ್ಪ್ರಿಂಗ್‌” ಹಾಗೂ ಲಕ್ಷಾಂತರ ಜನ ನೆರೆದ ಕಾರಣ ವಿಶ್ವದ ಸುದ್ದಿಯ ಕೇಂದ್ರವಾದ ಈಜಿಪ್ಟ್‌ನ “ತಾಹ್ರೀರ್ ವೃತ್ತ”ದಲ್ಲಿ ಕಂಡುಬಂದ ಕ್ರಾಂತಿಯ ಜ್ವಾಲೆ, ಬದಲಾವಣೆಯ ಗಾಳಿ ಈಗ ಎಲ್ಲಿ ಹೋಯಿತು? ಸಾಮಾನ್ಯವಾಗಿ  ಚಳಿಗಾಲ ಮುಗಿದ ನಂತರ ಬರುವ ಕಾಲವೇ ಈ “Spring’ (ವಸಂತ ಕಾಲ). ಆಗ Rejuvenation ಅನ್ನು ಕಾಣುತ್ತೇವೆ. ಅರಬ್‌ನಲ್ಲಿ ನಡೆದ ಘಟನೆಗಳ ಹಿನ್ನೆಲೆಯಲ್ಲಿ ಹೇಳುವುದಾದರೆ ಒಂದು ಕೆಟ್ಟ ಕಾಲದಿಂದ ಒಳ್ಳೆಯ ಕಾಲದತ್ತ ಸಾಗುವುದು ಎನ್ನಬಹುದು. “Prague Spring’ ಎಂಬ ಪದಪುಂಜ 1968ರಲ್ಲೇ ಕೇಳಿಬಂದಿತ್ತು. ಅಲೆಗ್ಸಾಂಡರ್ ಡುಸೆಕ್ ಅವರು ಸೋವಿಯತ್ ಒಕ್ಕೂಟದ ಕರಿನೆರಳು ಹಾಗೂ ಕಮ್ಯುನಿಸ್ಟರ ಕಪಿಮುಷ್ಠಿಯಲ್ಲಿದ್ದ ಝೆಕಸ್ಲೊವಾಕಿಯಾವನ್ನು ಅದರಿಂದ ಹೊರಗೆಳೆದು ಸುಧಾರಣೆಗಳನ್ನು ತಂದು ಜನರಿಗೆ ಹಕ್ಕುಗಳನ್ನು ನೀಡಲು ಪ್ರಯತ್ನಿಸಿದ ಪರ್ವವನ್ನು ‘ಪ್ರೇಗ್ ಸ್ಪ್ರಿಂಗ್‌’ ಎಂದು ಕರೆದರೆ, ನಿರಂಕುಶಪ್ರಭುಗಳು, ಸರ್ವಾಧಿಕಾರಿಗಳು, ರಾಜಾಡಳಿತಗಳ ದಬ್ಬಾಳಿಕೆಯ ವಿರುದ್ಧ 2010, ಡಿಸೆಂಬರ್ 18ರಂದು ಮುಸ್ಲಿಂ ರಾಷ್ಟ್ರಗಳಲ್ಲಿ ಆರಂಭವಾದ ಪ್ರದರ್ಶನ, ಪ್ರತಿಭಟನೆ, ಮುಷ್ಕರ, ಮುತ್ತಿಗೆಗಳು “Arab Spring’ ಎಂಬ ಹೆಸರು ಪಡೆದವು. ಇಂಥದ್ದೊಂದು ಪ್ರತಿಭಟನೆ, ಕ್ರಾಂತಿಯ ಮೊದಲ ಜ್ವಾಲೆ ಕಂಡುಬಂದಿದ್ದು ಟುನೀಷಿಯಾದಲ್ಲಿ. ಅಲ್ಲಿನ ಅಧ್ಯಕ್ಷ ಝಿನ್-ಎಲ್-ಅಬಿದಿನ್ ಬಿನ್ ಅಲಿಯನ್ನು ಕಿತ್ತೊಗೆದು ನೈಜ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಜನ ಮುಂದಾದರು, ಅದರಲ್ಲಿ ಯಶಸ್ವಿಯೂ ಆದರು. ಅದನ್ನು “Jasmine Revolution’ ಎಂದು ಕರೆಯಲಾಯಿತು. ಅದಕ್ಕೆ ಸಮಾನಾಂತರವಾಗಿ ಈಜಿಪ್ಟ್, ಲಿಬಿಯಾ, ಯೆಮನ್‌ನಲ್ಲಿ ಎದ್ದ ಕ್ರಾಂತಿ ಅಲ್ಲಿನ ಆಡಳಿತಗಾರರನ್ನು ಗದ್ದುಗೆಯಿಂದ ಹೊರದಬ್ಬಿದರೆ, ಒಮಾನ್, ಬಹ್ರೇನ್, ಸಿರಿಯಾ, ಅಲ್ಜೀರಿಯಾ, ಇರಾಕ್, ಜೋರ್ಡಾನ್, ಕುವೈತ್, ಮೊರಾಕ್ಕೊ, ಸುಡಾನ್, ಲೆಬನಾನ್‌ಗಳಲ್ಲಿ ಸರ್ಕಾರ ವಿರೋಧಿ ಧ್ವನಿ, ಪ್ರತಿಭಟನೆಗಳು ಕಂಡುಬಂದವು. ಇವೆಲ್ಲ ಒಟ್ಟಾರೆಯಾಗಿ ‘ಅರಬ್ ಸ್ಪ್ರಿಂಗ್‌’ ಎನಿಸಿದವು. ಈಜಿಪ್ಟ್ ರಾಜಧಾನಿ ಕೈರೋದ ತಾಹ್ರೀರ್ ವೃತ್ತದಲ್ಲಿ ನೆರೆದ ಲಕ್ಷಾಂತರ ಜನರು ಮೂವತ್ತು ವರ್ಷಗಳಿಂದ ಈಜಿಪ್ಟ್ ಅನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಹೋಸ್ನಿ ಮುಬಾರಕ್ ಎಂಬ ಬಲಿಷ್ಠ ಸರ್ವಾಧಿಕಾರಿಯನ್ನೇ ಕಿತ್ತೊಗೆದು ಬಿಟ್ಟರು! 42 ವರ್ಷಗಳಿಂದ ಲಿಬಿಯಾವನ್ನಾಳುತ್ತಿದ್ದ ಮುಅಮ್ಮರ್ ಗಡಾಫಿಯನ್ನು ಅಮೆರಿಕ-ಬ್ರಿಟನ್-ಫ್ರಾನ್ಸ್ ಸಹಾಯದಿಂದ ಕೊಂದೇ ಹಾಕಿದರು!!ಆದರೆ….ಅಬಿದಿನ್ ಬಿನ್ ಅಲಿಯನ್ನು ಕಿತ್ತೊಗೆದ ಮಾತ್ರಕ್ಕೆ ಟುನೀಷಿಯಾ ನೆಮ್ಮದಿಯಾಯಿತೆ? ಗಡಾಫಿಯನ್ನು ಕೊಂದ ನಂತರ ಲಿಬಿಯಾದಲ್ಲಿ ಜನತಂತ್ರ ನೆಲಸಿತೆ? ಹೋಸ್ನಿ ಮುಬಾರಕ್‌ರನ್ನು ಜೈಲಿಗಟ್ಟಿದ ನಂತರ ಈಜಿಪ್ಟ್ ಶಾಂತವಾಯಿತೆ? ಇಲ್ಲ!!ಇಂದು ಈಜಿಪ್ಟ್, ಸಿರಿಯಾಗಳಲ್ಲಿ ಏಕೆ ಮುಸಲ್ಮಾನರೇ ಬಡಿದಾಡಿಕೊಳ್ಳುತ್ತಿದ್ದಾರೆ? ಏಕಾಗಿ ಈಜಿಪ್ಟ್ ಮತ್ತೆ ಕವಲು ದಾರಿಗೆ ಬಂದು ನಿಂತಿದೆ? ಈಜಿಪ್ಟ್‌ನ ಖ್ಯಾತ ಅಧ್ಯಕ್ಷ ಅನ್ವರ್ ಸದತ್ ಅವರ ಕಗ್ಗೊಲೆಯ ನಂತರ 30 ವರ್ಷ ದೇಶವನ್ನು ಕಪಿಮುಷ್ಠಿಯಲ್ಲಿಟ್ಟುಕೊಂಡಿದ್ದ ಹೋಸ್ನಿ ಮುಬಾರಕ್‌ರನ್ನು ಕಿತ್ತೊಗೆದ ನಂತರ ನಡೆದ ಚುನಾವಣೆಯಲ್ಲಿ ಜನಾದೇಶ ಪಡೆದು 2012, ಜೂನ್ 30ರಂದು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊಹಮದ್ ಮೋರ್ಸಿ ಮಾಡಿದ್ದೇನು? ಅವರನ್ನು ದೇಶದ ಸೇನೆಯೇ ಅಧಿಕಾರದಿಂದ ಕಿತ್ತೊಗೆಯಲು ಕಾರಣವೇನು? ಬಹುದೊಡ್ಡ ಜನಾದೇಶದೊಂದಿಗೆ ಅಧ್ಯಕ್ಷರಾಗಿದ್ದ ಮೋರ್ಸಿ, ವರ್ಷ ಕಳೆಯುವಷ್ಟರಲ್ಲಿ ಆಯ್ಕೆ ಮಾಡಿದ ಜನರಿಗೇ ಬೇಡವಾಗಿದ್ದೇಕೆ? ಮೋರ್ಸಿ ಮಾಡಿದ ತಪ್ಪಾದರೂ ಏನು? ಅರಬ್ ಸ್ಪ್ರಿಂಗ್ ಆರಂಭವಾದಾಗ, ಹೋಸ್ನಿ ಮುಬಾರಕರನ್ನು ಪದಚ್ಯುತಿಗೊಳಿಸಲು ಮುಂದಾದಾಗ, ‘ಬಹುಸಂಖ್ಯಾತ ಮುಸ್ಲಿಮರು, ಅಲ್ಪಸಂಖ್ಯಾತ ಕ್ರೈಸ್ತರು ಹೀಗೆ ಎಲ್ಲ ಧರ್ಮ, ವರ್ಗದವರನ್ನೂ ಪ್ರತಿನಿಧಿಸುವ ಒಂದು ನೈಜ ಈಜಿಪ್ಟ್ ಸರ್ಕಾರವನ್ನು ಸ್ಥಾಪಿಸುವುದಾಗಿ’ ಮೊಹಮದ್ ಮೋರ್ಸಿ ವಾಗ್ದಾನ ಮಾಡಿದ್ದರು. ಮುಬಾರಕ್ ವಿರೋಧಿ ಪ್ರಚಾರಾಂದೋಲನದ ಮುಖ್ಯ ವಿಷಯವೂ ಅದೇ ಆಗಿತ್ತು. ಆದರೆ ಮೋರ್ಸಿಯವರ ಪಕ್ಷದ ಹೆಸರು ಫ್ರೀಡಂ ಮತ್ತು ಜಸ್ಟೀಸ್ ಪಾರ್ಟಿಯೇ ಆಗಿದ್ದರೂ ಮುಬಾರಕ್ ವಿರುದ್ಧದ ಹೋರಾಟದಲ್ಲಿ ಅವರ ಜತೆ ಬಹುವಾಗಿ ಕೈ ಜೋಡಿಸಿದ್ದು 1928ರಲ್ಲೇ ಸ್ಥಾಪನೆಯಾಗಿದ್ದ ‘ಮುಸ್ಲಿಂ ಬ್ರದರ್‌ಹುಡ್‌’ ಎಂಬ ಮೂಲಭೂತವಾದಿ ಸಂಘಟನೆ. ಜಿಹಾದೇ ನಮ್ಮ ಮಾರ್ಗ, ಧರ್ಮವೇ ಎಲ್ಲದಕ್ಕೂ ಪರಿಹಾರ ಎನ್ನುವ ಈ ಸಂಘಟನೆಯ ತಾಳಕ್ಕೆ ಮೋರ್ಸಿ ಕೂಡ ಕುಣಿಯಬೇಕಾಯಿತು ಹಾಗೂ ಕುಣಿಯಲಾರಂಭಿಸಿದರು. ಅಂದು ಜನ ಬೀದಿಗಿಳಿದಿದ್ದು ಸ್ವಾಭಿಮಾನ, ಆತ್ಮಗೌರವ, ಸ್ವ-ಆಡಳಿತ ಹಾಗೂ ಸ್ವಾತಂತ್ರ್ಯಕ್ಕಾಗಿ. ಕೊನೆಗೆ ದೊರೆತಿದ್ದು ಮಗದೊಂದು ರೀತಿಯ ದಬ್ಬಾಳಿಕೆ, ಹತ್ತಿಕ್ಕುವಿಕೆ. ಹಾಗಾಗಿ ಈಜಿಪ್ಟ್‌ನ ಒಟ್ಟು 9 ಕೋಟಿ ಜನಸಂಖ್ಯೆಯಲ್ಲಿ ಶೇ.10ರಷ್ಟಿರುವ ಕ್ರೈಸ್ತರ ಹತ್ತಾರು ಚರ್ಚ್‌ಗಳು ಕಟ್ಟರ್‌ಪಂಥೀಯರ ದಾಳಿಗೆ ಗುರಿಯಾಗಿವೆ. ಮೂವರು ಕ್ರೈಸ್ತ ಸನ್ಯಾನಿಸಿಯರನ್ನು ರಾಜಧಾನಿ ಕೈರೋದ ಬೀದಿ ಬೀದಿಗಳಲ್ಲಿ ಯುದ್ಧಾಪರಾಧಿಗಳಂತೆ ಮೆರವಣಿಗೆ ಮಾಡಿದ್ದಾರೆ.ಸಮಸ್ಯೆ ಇರುವುದೇ ಇಲ್ಲಿ. ಜನ ಮುಕ್ತ, ನ್ಯಾಯಸಮ್ಮತ, ಭಯ-ಭೀತಿ ಇಲ್ಲದ ವಾತಾವರಣಕ್ಕಾಗಿ ಅಂದು ಬೀದಿಗಿಳಿದಿದ್ದರೇ ಹೊರತು ‘ಧರ್ಮ ರಾಜಕಾರಣ’ವನ್ನು ಪ್ರತಿಷ್ಠಾಪಿಸಿ, ಹೋಸ್ನಿ ಮುಬಾರಕ್ ಆಡಳಿತವನ್ನೇ ಹೊಸ ರೀತಿಯಲ್ಲಿ ಆಹ್ವಾನಿಸುವುದಕ್ಕಲ್ಲ. ಇದನ್ನು ಮೋರ್ಸಿಯವರಾಗಲಿ, ಮುಸ್ಲಿಂ ಬ್ರದರ್‌ಹುಡ್ ಆಗಲಿ ಅರ್ಥ ಮಾಡಿಕೊಳ್ಳಲಿಲ್ಲ. 19, 20ನೇ ಶತಮಾನದಲ್ಲಿ ಸಾಮ್ರಾಜ್ಯಶಾಹಿಗಳ ಹಿಡಿತದಲ್ಲಿದ್ದ ಮುಸ್ಲಿಂ ಜಗತ್ತು ಅಥವಾ ಅರಬ್ ರಾಷ್ಟ್ರಗಳು ದಾಸ್ಯದಿಂದ ಹೊರಬಂದ ಮೇಲೆ ಕೆಲವು ರಾಷ್ಟ್ರಗಳು ಸರ್ವಾಧಿಕಾರಿಗಳ ಕೈಗೆ ಸಿಲುಕಿದರೆ ಇನ್ನು ಕೆಲವು ರಾಜಾಡಳಿತಕ್ಕೆ ಒಳಪಟ್ಟವು. ಹೀಗೆ ಸಾಮ್ರಾಜ್ಯಶಾಹಿತ್ಯದಿಂದ ಮುಕ್ತಿ ಪಡೆದರೂ ಜನರಿಗೆ ನೈಜ ಸ್ವಾತಂತ್ರ್ಯ ದಕ್ಕಲಿಲ್ಲ. ಪ್ರಜಾಪ್ರಭುತ್ವವೂ ಕೂಡ ಸರಿಯಾಗಿ ಎಲ್ಲೂ ನೆಲೆಗೊಳ್ಳಲಿಲ್ಲ. ಒಂದೆಡೆ ನಿರಕುಂಶಾಧಿಕಾರಿಗಳು, ಸರ್ವಾಧಿಕಾರಿಗಳು, ರಾಜಮನೆತನಗಳು ಧರ್ಮವನ್ನು ಅಸ್ತ್ರವನ್ನಾಗಿಸಿಕೊಂಡು ಜನರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಾ ಬಂದರೆ, ಇನ್ನೊಂದೆಡೆ ಇಂಥ ದಬ್ಬಾಳಿಕೆ ವಿರುದ್ಧ ಸಿಡಿದೇಳಲು ಹೊರಟವರೂ ಸರ್ವಾಧಿಕಾರಿಗಳನ್ನು ಕಿತ್ತೊಗೆಯಲು ಧರ್ಮ ಪ್ರಜ್ಞೆಯನ್ನು ಜಾಗೃತಗೊಳಿಸುವುದೇ ಒಳ್ಳೆಯ ಉಪಾಯ ಎಂದು ಭಾವಿಸಿದರು. ಅದರ ಜತೆ ಜತೆಗೇ ಮುಸ್ಲಿಂ ಜಗತ್ತಿನ ಮುಖ್ಯ ಸಮಸ್ಯೆ ಯಾವುದೆಂದರೆ ಸಾಮ್ರಾಜ್ಯಶಾಹಿತ್ವದಿಂದ ಬಳುವಳಿಯಾಗಿ ಬಂದಿರುವ ಹಾಗೂ ತಮ್ಮ ಜನರನ್ನು ಹಾಳುಗೆಡವುತ್ತಿರುವ ಪಾಶ್ಚಿಮಾತ್ಯೀಕರಣ ಹಾಗೂ ಅದನ್ನು ಹೋಗಲಾಡಿಸಬೇಕಾದರೆ ಆಡಳಿತವನ್ನು ಇಸ್ಲಾಮೀಕರಣಗೊಳಿಸಬೇಕು ಅಥವಾ ರಾಜಕೀಯಕ್ಕೆ ಇಸ್ಲಾಮೇ ಮುಖ್ಯ ತಳಹದಿಯಾಗಬೇಕು ಎಂದು ಭಾವಿಸತೊಡಗಿದರು. ಅವರ ಎಣಿಕೆ ತಪ್ಪಾಗಿದ್ದೇ ಇಲ್ಲಿ!ಅಬಿದಿನ್ ಬಿನ್ ಅಲಿಯನ್ನು ಕಿತ್ತೊಗೆದ ನಂತರ ಟುನಿಷಿಯಾ ಶಾಂತವಾಗಲಿಲ್ಲ, ಗಡಾಫಿ ಹೋದ ನಂತರ ಲಿಬಿಯಾ ತಣ್ಣಗಾಗಲಿಲ್ಲ. ಮುಬಾರಕ್ ಪತನದ ನಂತರ ಈಜಿಪ್ಟ್ ಕೂಡ ನೆಮ್ಮದಿ ಕಾಣಲಿಲ್ಲ. ಹೋಸ್ನಿ ಮುಬಾರಕ್ಕರದ್ದು ಒಂಥರಾ ದಬ್ಬಾಳಿಕೆಯಾದರೆ ಮೊಹಮದ್ ಮೋರ್ಸಿ ಇಸ್ಲಾಮಿಕ್ ಆಡಳಿತ ತರುವ ನೆಪದಲ್ಲಿ ಅದೇ ಕೆಲಸಕ್ಕೆ ಮುಂದಾದರು. ಪ್ಯಾಲೆಸ್ತೀನ್‌ನ ಭಯೋತ್ಪಾದಕ ಸಂಘಟನೆ ಹಮಾಸ್ ಜತೆ ಸಂಪರ್ಕ ಸಾಧಿಸಿದರು. ಹೀಗಾಗಿ ‘ಅರಬ್ ಸ್ಪ್ರಿಂಗ್ ಎಂಬುದು ಕೆಟ್ಟಿದ್ದರಿಂದ ಒಳಿತಿನೆಡೆಗೆ ಸಾಗುವ ಕ್ರಾಂತಿಯಾಗಲಿಲ್ಲ. ಬದಲಿಗೆ ಮೂಲಭೂತವಾದಿಗಳು ಗದ್ದುಗೆ ಹಿಡಿಯುವ ಮಾರ್ಗವಾಗಿ ಬಿಟ್ಟಿತು. ಧರ್ಮದ ಹೆಸರಿನಲ್ಲಿ ಉಸಿರು ಕಟ್ಟಿಸುವಂಥ ವಾತಾವರಣವನ್ನು ಸೃಷ್ಟಿಸಲು ಮುಂದಾದರು. ಹಾಗಾಗಿ ನೈಜ ಸ್ವಾತಂತ್ರ್ಯಕ್ಕಾಗಿ ಹಾತೊರೆಯುತ್ತಿದ್ದ ಈಜಿಪ್ಟ್ ಜನ ಹತಾಶರಾದರು. ಮತ್ತೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ತಾಹ್ರೀರ್ ಸ್ಕ್ವೇರ್‌ನಲ್ಲಿ ನೆರೆದರು. ಮೋರ್ಸಿ ಕೆಳಗಿಳಿಯಬೇಕೆಂದರು. ಆದರೆ ಯಾವಾಗ ಮೋರ್ಸಿ ಒಪ್ಪಲಿಲ್ಲವೋ, ಮುಸ್ಲಿಂ ಬ್ರದರ್‌ಹುಡ್ ಅವರ ಬೆಂಬಲಕ್ಕೆ ನಿಂತಿತೋ ಆಗ ದೇಶದ ಸೇನೆಯೇ ಮುಂದೆ ನಿಂತು ಮೋರ್ಸಿ ಸರ್ಕಾರವನ್ನು ಕಳೆದ ಜುಲೈ 3 ರಂದು ಕಿತ್ತೊಗೆಯಬೇಕಾಗಿ ಬಂತು. ದುರದೃಷ್ಟವಶಾತ್ ರೊಚ್ಚಿಗೆದ್ದ ಮೋರ್ಸಿ ಬೆಂಬಲಿಗರು ಹಾಗೂ ಮುಸ್ಲಿಂ ಬ್ರದರ್‌ಹುಡ್ ಈಜಿಪ್ಟ್‌ಜನರನ್ನೇ ಕೊಲ್ಲಲು ಮುಂದಾಯಿತು. ಅದರ ಪರಿಣಾಮವೇ 850 ಜನರ ಹತ್ಯೆ. ಇದೆಂಥ ಮನಸ್ಥಿತಿಯನ್ನು ತೋರುತ್ತದೆ? ಜನರಿಗೆ ಬೇಕಾಗಿರುವುದೇನು, ಇವರು ಹೇರಲು ಹೊರಟಿರುವುದೇನು? ಧರ್ಮವನ್ನು ಮುಂದಿಟ್ಟುಕೊಂಡು ಹೊರಟಿರುವ ಇವರ ಒಳ ಉದ್ದೇಶವಾದರೂ ಯಾವುದು? ರಾಜಕಾರಣದಿಂದ ಧರ್ಮವನ್ನು, ಚರ್ಚನ್ನು ದೂರವಿಟ್ಟ ಮೇಲೆಯೇ ಅಮೆರಿಕ ಹಾಗೂ ಇನ್ನಿತರ ಪಾಶ್ಚಿಮಾತ್ಯ ರಾಷ್ಟ್ರಗಳು ಪ್ರಗತಿಯಾಗಿದ್ದು ಎಂಬುದು ಇವರಿಗೆ ತಿಳಿದಿಲ್ಲವೇ? ಇಷ್ಟಾಗಿಯೂ ಅರಬ್ಬನ್ನು ಇವರು ಎತ್ತ ಕೊಂಡೊಯ್ಯಲು ಮುಂದಾಗಿದ್ದಾರೆ? ಅಣಕವೆಂದರೆ ಗಡಾಫಿ, ಮುಬಾರಕ್, ಬೆನ್ ಅಲಿಗಳು ನಿರಂಕುಶಾಧಿಕಾರಿಗಳು, ಸರ್ವಾಧಿಕಾರಿಗಳು ಆಗಿದ್ದಿರಬಹುದು. ಆದರೆ ಧಾರ್ಮಿಕ ಮೂಲಭೂತವಾದ ತಲೆಯೆತ್ತಲು ಎಂದೂ ಬಿಟ್ಟಿರಲಿಲ್ಲ. ಸದ್ದಾಂ ಹುಸೇನ್ ಕೂಡ ಸರ್ವಾಧಿಕಾರಿಯೇ ಆಗಿದ್ದರು. ಆದರೆ ಮತಾಂಧನಾಗಿರಲಿಲ್ಲ. ಇವರಿರುವವರೆಗೂ ಅಲ್ ಖೈದಾ ಅಥವಾ ಅಂಥ ಸಂಘಟನೆಗಳು ಈ ಯಾವ ದೇಶಗಳಲ್ಲೂ ತಲೆಯೆತ್ತಿರಲಿಲ್ಲ. ಈಗ ಆಗಿರುವುದೇನು? ಅಲ್ ಖೈದಾ ಇಸ್ಲಾಮಿಕ್ ಮಗ್ರೇಬ್ (ಆ್ಕಐಂ) ಎಂಬ ಜಿಹಾದಿ ಸಂಘಟನೆ ಮಾಲಿ ರಾಷ್ಟ್ರದಲ್ಲಿ ಬೇರು ಬಿಟ್ಟಿದ್ದರೆ, ಜಭತ್ ಅಲ್ ನುಸ್ರಾ ಎಂಬ ಅಲ್‌ಖೈದಾಗೆ ಸೇರಿದ ಭಯೋತ್ಪಾದಕ ಸಂಘಟನೆ ಕ್ರಾಂತಿಯ ಹೆಸರಿನಲ್ಲಿ ಸಿರಿಯಾವನ್ನು ಹತೋಟಿಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಅದನ್ನು ಹತ್ತಿಕ್ಕಲು ಮುಂದಾದ ಅಧ್ಯಕ್ಷ ಅಲ್ ಅಸ್ಸಾದ್ ವಿಷಾನಿಲ ಪ್ರಯೋಗಿಸಿ 1300 ಅಮಾಯಕರನ್ನು ಪೈಶಾಚಿಕವಾಗಿ ಕೊಂದಿದ್ದಾರೆ. ಇನ್ನೊಂದೆಡೆ ಅಲ್‌ಖೈದಾವಂತೂ ಈಜಿಪ್ಟ್, ಟುನೀಷಿಯಾ, ಲಿಬಿಯಾಗಳಿಗೆ ವ್ಯಾಪಿಸಿಬಿಟ್ಟಿದೆ. ಈಜಿಪ್ಟ್, ಸಿರಿಯಾಗಳಂಥ ಮುಸ್ಲಿಂ ರಾಷ್ಟ್ರಗಳಲ್ಲಿ ಮುಸಲ್ಮಾನರೇ ಏಕೆ ಪರಸ್ಪರ ಬಡಿದಾಡಿಕೊಳ್ಳುತ್ತಿದ್ದಾರೆ, ಕೊಂದುಕೊಳ್ಳುತ್ತಿದ್ದಾರೆ ಎಂದರೆ ಇದೇ ಕಾರಣಕ್ಕೆ! ಧರ್ಮದ ಹೆಸರಿನಲ್ಲಿ ಪ್ರತ್ಯೇಕ ರಾಷ್ಟ್ರ ಪಡೆದುಕೊಂಡ ನಂತರವೂ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳ ಕತೆ, ಸ್ಥಿತಿ ಏನಾಗಿದೆ ಎಂಬುದು ನಮಗಂತೂ ಗೊತ್ತೇ ಇದೆ. ಪ್ರತ್ಯೇಕತೆ ಧ್ವನಿ ಎತ್ತಿರುವ ಬಲೂಚಿಸ್ತಾನದಲ್ಲಿ ಮುಸಲ್ಮಾನರನ್ನು ಪಾಕ್ ಸರ್ಕಾರವೇ ಹತ್ಯೆಗೈಯುತ್ತಿದ್ದರೆ, ಬಾಂಗ್ಲಾದಲ್ಲಿ 1971ರ ಯುದ್ಧದ ವೇಳೆ ದೇಶವಾಸಿಗಳನ್ನೇ ಮಾನಭಂಗ ಮಾಡಿದವರಿಗೆ ಶಿಕ್ಷೆ ನೀಡಲು ಮುಂದಾದರೆ ಮೂಲಭೂತವಾದಿ ಜಮಾತೆ ಇಸ್ಲಾಮಿ ಸ್ವಧರ್ಮಿಯರನ್ನೇ ಹತ್ಯೆಗೈಯಲು ಇಳಿದಿದೆ. ಇನ್ನೊಂದೆಡೆ ಅರಬ್ ಮುಸ್ಲಿಂ ಜಗತ್ತೂ ಕೂಡ ಕದಡಿದೆ. ಈ ಹಿನ್ನೆಲೆಯಲ್ಲಿ  ಒಟ್ಟಾರೆ ಘಟನೆಗಳನ್ನು ನೋಡಿದಾಗ ಪ್ರೇರಣೆಗಾಗಿ, ನಿಷ್ಠೆಗಾಗಿ ಗಡಿಯಾಚೆಗೆ ಮುಖ ಮಾಡುವ ಭಾರತದ ಕೆಲವು ಮತಾಂಧರಿಗೂ ಒಂದು ಸಂದೇಶವಿದೆ ಎಂದನಿಸುವುದಿಲ್ಲವೆ?!

18 Responses to “ಧರ್ಮವೇ ಸಕಲ ಸಮಸ್ಯೆಗೂ ಪರಿಹಾರ ಎಂದು ಬದಲಾವಣೆಗೆ ಹೊರಟವರು ತಾವೇ ಬಡಿದಾಡಿಕೊಳ್ಳುತ್ತಿರುವುದೇಕೆ?”

  1. Shrikanth says:

    Very true Pratap, Religion is to live, not to kill nor to impose. when people understand this they will live happily this is what Hinduism says.

  2. anil says:

    I found nothing new in the article. You have reiterated the same things which most of them have talked and written. And i also found it to be too narrow religion centric article, where as the present crisis in Arab is much more complex and broad based. It looks your assumption (on muslim world) to be that Islam and democracy doesn’t fit together is too generalised one. Islam and democracy can flourish together, the good example can be given of Turkey, Iran(though theocratic state yet adopts democratic way of working systems), Indonesia, etc.

  3. sridhar raj says:

    Im proud because Im INDIAN
    IM HINDU…

  4. marulu Siddesha says:

    This should be a very good message for indians who are fighting for religious setiments.

  5. Srinivas says:

    True. As man-made as these religions are, they reflect the mindset of their creator(s).

  6. harish says:

    our Indian muslims also of same kind. we are having tension that if we kept quite definitely untolurable deaths will occur here .ur article gives nice idea how islam.

  7. Somanath says:

    Good One

  8. Harish kumar says:

    Religion is responsible for all the problems of the world !!! No country should take religion as the way of life!!!

  9. ನನ್ನ ಮೆಚ್ಚಿನ ಲೇಖಕರಾದ ಎಸ್ .ಎಲ್ . ಬ್ಯೆರಪ್ಪ ರವರು ಒಂದು ಕಡೆ ಈ ರೀತಿ ” ದ್ವೇಷ ಎಂದಿಗೂ ಬೆಂಕಿ ಇದ್ದ ಹಾಗೆ ಅದು ಸುಡುವುದಕ್ಕೆ ಏನು ಸಿಗಲ್ಲಿಲ್ಲಾ ಅಂದ್ರೆ ಅದು ತನ್ನನ್ನೇ ಸುಟ್ಟು ಕೊಳ್ಳುವುದಕ್ಕೆ ಆರಂಭಿಸುತ್ತದೆ “ಎಂದು ಬರೆಯುತ್ತಾರೆ. ಈಗ ನೆಡುಯುತ್ತಿರುವುದು ಇದೆ ಏನು……….. !!!!!!!!!!!!!!????????????

  10. Kannadiga says:

    Its astonishing that you are also toeing the line of Al-Qaeda and their supporters against Assad, that he has used chemical weapons. The govt has strongly denied and there is no independent corroboration that this crime was perpetrated by Assad regime. If you care to look up, a large cache of chemical weapons was recovered about a month ago from the ‘rebels’. It is very likely that they have used it and are then blaming Assad- true to Taqqia principle. We have seen such duplicity enough with the Pakis. Assad is a secular man and most of the people of syria are with him as they know they dont want their freedom to be taken away in the name of religion by cruel people who gouge out and eat organs from Cadavers. Its quite unfortunate that Obama/ Cameroon are supporting the very forces they claim to be fighting in Afghanisthan. Please see link below http://www.wnd.com/2013/08/video-shows-rebels-launching-gas-attack-in-syria

  11. Mugali Bhimappa says:

    ಧರ್ಮ ಹುಟ್ಟಿದ್ದು ನಾಕಜನರಿಂದ ಕೊನೆಗೆ ಅದು ಸಾಯುವದು ಅವರಿಂದಲೇ.ಧರ್ಮ ಹುಟ್ಟಿದ್ದು ನೆಮ್ಮದಿ ತರಾಕ ಆದರೆ ಆಧುನಿಕ ಅಂದರಲ್ಲಿ ಸಿಲುಕಿ ಸಾಯ್ತಾಯಿದೆ.ಇದು ಧರ್ಮದ ದುರುಂತ ಕಥೆ.

    ಧರ್ಮದ ಮುಖವಾಡ ಹಾಕಿ ಹೆಸರಿಟ್ಟು ಸುಟ್ಟು ಹೋಗ್ತಿದೆ ಸಮಾಜ, ಸತ್ತ ನಾಯಿತರಹ ಹುಗದರೇನ್ ಬಿಟ್ಟರೇನ್ ನಾರ್ತಾಯಿದೆ ಆಧುನಿಕ ಧರ್ಮ.ಇದರ ಅಂತ್ಯ ಅಂದರ ಕೈಯಲ್ಲಿ ಸಿಕ್ಕಿದೆ ಅದು ಅದರ ಮರ್ಮ.

    ದೇಶ-ಧರ್ಮ ಹುಟ್ಟಿಸಿದ ಮಾನವ ಏಕೆ ಅದರ ಹೆಸರಿನ ಕೆಸರಲ್ಲಿ ಬಿದ್ದು ಸಾಯ್ತಾಯಿದ್ದೀ. ಎಲ್ಲಾ ಬಿಟ್ಟು ದೇವನಾಗುವ ಬದಲು ಕೇವಲ ದೇವಮಾನವನಾದರೂ ಆಗು ಆಗ ನಿನ್ನ ಹುಟ್ಟಿಸಿದ ದೇವರಿಗೆ ಸ್ವಲ್ಪ ಕಿಮ್ಮತ್ ಸಿಗುತ್ತ್ ಇಲ್ಲದಿದದ್ರ ಸುಟ್ಟುಬೂದಿಯಾಗ್ತಿ. ಅಷ್ಟೆ ನಿನ್ನ ಕರ್ಮ ಅಲ್ಲವಾ.

    ಬುದ್ದು.

  12. Prakash says:

    Tumba chennagi helidira pratap avre, ee janagalige manaviyathene ilde heegelalla madidaralla !! nachike hagbeku avarige,
    illi ondhu vishya helle beku namma bharata deshada bagge…
    yella desha drohigale nimma kantri nayi buddhina bittu deshabimanan beliskolli mathu Deshakke kruthagnaragi iri.

  13. Mohan Hegde says:

    Please share your views on The Book Dhundhi of Yogesh Master.. Just now i was watching a idiotic discussion on the same issue in a news channel with 3 Idiots.. It was a worst conversation ever i can ever see.. And that Channel was also so irresponsible to accumulate such a mads for this.. To support his arrest only one person that too first time he is in front of camera and against 3, the great 3 idiots!!!??? In that one was so extreme that he started telling insulting him is insulting his community.. as if he is a god.. So i request you as i believe your words than others..

  14. HesareBeda says:

    ಖಂಡಿತ ವಾಗಿಯೂ ಇದು ಖೇದಕರ ವಿಷಯ. ನನ್ನ ಪ್ರಕಾರ ಇಸ್ಲಾಮ್ ಒಂದು ಪುರಾತನ ಧರ್ಮ. ಅದರಲ್ಲಿ ಎಲ್ಲರಿಗು ಶಾಂತಿ ಮತ್ತು ಸಹಬಾಳ್ವೆ ಇಂದ ಜೀವನ ನಡೆಸಬೇಕೆಂದು ಇದೆ. ಆದರೆ, ಇಂಥ ದುಷ್ಟ ಜನರಿಂದ ಧರ್ಮದ ಹೆಸರಿನಲ್ಲಿ ಶೋಷಣೆ ಮಾಡುತ್ತಿರುವುದನ್ನು ನೋಡುತ್ತಿದ್ದರೆ ನಿಜವಾಗಲೂ ಭಯವಾಗುತ್ತಿದೆ.

  15. Manjunatha says:

    ಎಂದಿನಂತೆ ತಮ್ಮ ಮೊನಚಾದ ಲೇಖನವಿದು.

    ಸಿರಿಯಾದಲ್ಲಿ ಆ ಘಟನೆ ನಡೆದಾಗ ನನಗೆ ಮೊದಲು ಅನಿಸಿದ್ದು, ಈ ಬಗ್ಗೆ ಪ್ರತಾಪಸಿಂಹರು ಏನು ಬರೆಯಬಹುದೆಂದು ?. ಕೆಲಸ ುತ್ತಡದಲ್ಲಿ ಲೇಖನ ಓದಿದ್ದು ತಡವಾಯ್ತು.

    ಈ ಲೇಖನ ಮತಾಂಧರ ಕಣ್ಣು ತೆರೆಸಲಿ.

    ಸದಾ ನಿಮ್ಮ ಲೇಖನಗಳಿಗೆ ಪರಿತಪಿಸುವ,

    ಮಂಜುನಾಥ ಆರ್.ಬೆಳವಾಡಿ

  16. balaraj says:

    hellow brother, you just read the REVELATION , LOST CHAPTERS OF BIBLE, Then only one way to get answers for all what happening all these things, and why happening NOW A DAYS IN THE WORLD, who is behind these things. all prophecy allready is mensioned before two thousand years.
    this is my first time looked in your blog, your all writtings is very IMPRESSIVEL THANKS VERY MUCH. JAI KARNATAKA

  17. Naveen says:

    Very good article pratap sir