Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಒಂದು ನಿಮಿಷದಲ್ಲಿ ನಿನ್ನ ಸರ್ಕಾರ ಕಿತ್ತೆಸೆಯುತ್ತೇನೆ ಎಂದ ಕಾಂಗ್ರೆಸ್ಸಿಗರ ತಾಕತ್ತು ಈಗ ಎಲ್ಲಿ ಅಡಗಿ ಕುಳಿತಿದೆ?

ಒಂದು ನಿಮಿಷದಲ್ಲಿ ನಿನ್ನ ಸರ್ಕಾರ ಕಿತ್ತೆಸೆಯುತ್ತೇನೆ ಎಂದ ಕಾಂಗ್ರೆಸ್ಸಿಗರ ತಾಕತ್ತು ಈಗ ಎಲ್ಲಿ ಅಡಗಿ ಕುಳಿತಿದೆ?

ಈ ದೇಶಕ್ಕೆ ಪ್ರಧಾನಿ ಅನ್ನೋ ಒಬ್ಬ ವ್ಯಕ್ತಿ ನಿಜಕ್ಕೂ ಇದ್ದಾರಾ?

ಅಂಥದ್ದೊಂದು ಅನುಮಾನ ನಿಮ್ಮನ್ನು ಕಾಡುತ್ತಿಲ್ಲವೆ? ಒಂದು ವೇಳೆ, ಪ್ರಧಾನಿ ಅನ್ನೋ ವ್ಯಕ್ತಿ ಇದ್ದಿದ್ದರೆ ನಮ್ಮ ಐವರು ಸೈನಿಕರನ್ನು ಪಾಕಿಸ್ತಾನ ಬರ್ಬರವಾಗಿ ಕೊಂದಿದ್ದರೂ ಮಾತನಾಡದೇ ಇರುತ್ತಿದ್ದರೇ? ಪಾಕಿಸ್ತಾನದ ಮುಖಕ್ಕೆ ಹೊಡೆದಂತೆ ಹೇಳದೆ, ಎಚ್ಚರಿಕೆ ಕೊಡದೆ, ಧಮಕಿ ಹಾಕದೆ ಸುಖಾಸುಮ್ಮನೆ ಕುಳಿತುಕೊಳ್ಳುತ್ತಿದ್ದರೇ? ಇಷ್ಟಕ್ಕೂ, ಘಟನೆ ನಡೆದು ನಾಲ್ಕು ದಿನ ಕಳೆದರೂ ಪ್ರಧಾನಿಯೇಕೆ ಬಾಯ್ಬಿಡುತ್ತಿಲ್ಲ? 2013 ಜನವರಿ 8ರಂದು ಜಮ್ಮು-ಕಾಶ್ಮೀರದ ಗಡಿಯಲ್ಲಿ ನಮ್ಮ ಒಬ್ಬ ಸೈನಿಕನ ಕುತ್ತಿಗೆ ಕಡಿದು ಬರೀ ದೇಹ ಕಳುಹಿಸಿದಾಗಲೂ, ಇನ್ನೊಬ್ಬ ಸೈನಿಕನನ್ನು ಮಾಂಸದ ಮುದ್ದೆಯಾಗಿಸಿ ರವಾನೆ ಮಾಡಿದಾಗಲೂ ಮಾತನಾಡದ ವ್ಯಕ್ತಿ ಹೇಗೆ ದೇಶದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಎನಿಸಿಕೊಳ್ಳಲು ಸಾಧ್ಯ? ನೀವೇ ಹೇಳಿ, ಮನಮೋಹನ್‌ಸಿಂಗ್ ಅವರು ನಿಜಕ್ಕೂ ಪ್ರಧಾನಿಯಂತೆ ವರ್ತಿಸುತ್ತಿದ್ದಾರಾ? ನಮ್ಮ ಸೈನಿಕರ ಹತ್ಯೆ ಅವರ ಅಂತಃಕರಣವನ್ನು ಕಲಕಲೇ ಇಲ್ಲವೆ? ಕ್ಷಾತ್ರ ಗುಣವನ್ನು ಬಡಿದೆಬ್ಬಿಸಲೇ ಇಲ್ಲವಾ? ಇಂತಹ ಮನಃಸ್ಥಿತಿಯ ವ್ಯಕ್ತಿಗೆ ಇತಿಹಾಸದಲ್ಲಿ ಯಾವ ಸ್ಥಾನ ತಾನೇ ದೊರೆತೀತು?

ಒಬ್ಬ ಶ್ರೀಮಂತ ಪ್ರಧಾನಿಯಾಗಬಹುದೆಂದು ಜವಾಹರಲಾಲ್ ನೆಹರು ಸಾಬೀತು ಮಾಡಿದರು
ಒಬ್ಬ ಬಡವ ಕೂಡ ಪ್ರಧಾನಿಯಾಗಬಹುದೆಂದು ಲಾಲ್‌ಬಹುದ್ದೂರ್ ಶಾಸ್ತ್ರಿ ಸಾಬೀತುಪಡಿಸಿದರು
ಮಹಿಳೆ ಪ್ರಧಾನಿಯಾಗಬಹುದೆಂಬುದನ್ನು ಇಂದಿರಾ ಗಾಂಧಿ ತೋರಿಸಿದರು
ಹಿರಿಯಜ್ಜನೂ ಪ್ರಧಾನಿಯಾಗಬಹುದೆಂಬುದು ಮೊರಾರ್ಜಿ ದೇಸಾಯಿಯವರಿಂದ ತಿಳಿಯಿತು
ಯುವಕ ಪ್ರಧಾನಿಯಾಗಬಹುದೆಂಬುದು ರಾಜೀವ್ ಗಾಂಧಿಯವರಿಂದ ಸಾಬೀತಾಯಿತು
ದಕ್ಷಿಣ ಭಾರತದವರೂ ಪ್ರಧಾನಿಯಾಗಬಹುದು ಎಂಬುದನ್ನು ಪಿ.ವಿ. ನರಸಿಂಹರಾವ್ ತೋರಿಸಿದರು
ಯಾರು ಬೇಕಾದರೂ ಪ್ರಧಾನಿಯಾಗಬಹುದೆಂಬುದನ್ನು ದೇವೇಗೌಡರು ಸಾಬೀತು ಮಾಡಿದರು

ಆದರೆ…

ಈ ದೇಶಕ್ಕೆ ಪ್ರಧಾನಿಯೇ ಇಲ್ಲದಿದ್ದರೂ ಪರವಾಗಿಲ್ಲ ಎಂಬುದನ್ನು ಸಾಬೀತು ಮಾಡಿದವರು ಮಾತ್ರ ಆಕ್ಸ್‌ಫರ್ಡ್ ಪಂಡಿತ ಡಾ. ಮನಮೋಹನ್ ಸಿಂಗ್! ಇದು ಬರೀ ಜೋಕು ಎಂದು ಭಾವಿಸಬೇಡಿ. ಈ ದೇಶಕ್ಕೆ ಒಬ್ಬ ಪ್ರಧಾನಿ ಇದ್ದಾರೆ ಎಂದು ಕಳೆದ 10 ವರ್ಷಗಳಲ್ಲಿ, ಅದರಲ್ಲೂ 2008ರ ಮುಂಬೈ ದಾಳಿಯ ನಂತರ ಯಾವತ್ತಾದರೂ ನಿಮಗೆ ಅನ್ನಿಸಿತಾ ಹೇಳಿ? ಇವತ್ತು ನಮ್ಮ ದೇಶವನ್ನು ಆಳುತ್ತಿರುವವರಾದರೂ ಯಾರು ಹಾಗೂ ಎಂಥವರು? ಇಡೀ ವಿರೋಧ ಪಕ್ಷಗಳೆಲ್ಲ ಒಕ್ಕೊರಲಿನಿಂದ ಪಾಕಿಸ್ತಾನದ ವಿರುದ್ಧ ಕ್ರಮ ತೆಗೆದುಕೊಳ್ಳಿ, ನಾವಿದ್ದೇವೆ ಎಂದರೂ ಪ್ರತಿಕ್ರಿಯಿಸುತ್ತಿಲ್ಲವಲ್ಲಾ ಈ ಪ್ರಧಾನಿ ಹಾಗೂ ಅವರ ಸರ್ಕಾರಕ್ಕೇನಾಗಿದೆ ಧಾಡಿ? ನಮ್ಮ ಸೈನಿಕನ ಶಿರಚ್ಛೇದ  ಮಾಡಿದ್ದು ಕಳೆದ ಜನವರಿಯಲ್ಲಿ. ಅದಾಗಿ 8 ತಿಂಗಳುಗಳೇ ಕಳೆದವು. ಇದುವರೆಗೂ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುವ ಒಂದು ಕೆಲಸವನ್ನೂ ಭಾರತ ಮಾಡಿಲ್ಲ. ಬದಲಿಗೆ ಆ ಘಟನೆಯ ಬೆನ್ನಲ್ಲೇ ಪಾಕಿಸ್ತಾನದ ಆಗಿನ ಆಂತರಿಕ ಭದ್ರತಾ ಸಚಿವ ರೆಹಮಾನ್ ಮಲ್ಲಿಕ್ ಅವರನ್ನು ಭಾರತಕ್ಕೆ ಬರಮಾಡಿಕೊಂಡು ಹೈದ್ರಾಬಾದಿ ಬಿರ್ಯಾನಿ ತಿನ್ನಿಸಿ ವಾಪಸ್ ಮುಖಕ್ಕೆ ಉಗಿಸಿಕೊಂಡಿದ್ದರು. ಇಂಥವರು ಐವರು ಸೈನಿಕರ ಹತ್ಯೆಗೆ ಪ್ರತೀಕಾರ ತೆಗೆದುಕೊಳ್ಳುತ್ತಾರೆ ಎಂದು ಹೇಗೆತಾನೇ ನಂಬುವುದು?

ಈ ಕಾಂಗ್ರೆಸ್ಸಿಗರು ಮಾಡಬಾರದ್ದೆಲ್ಲ ಮಾಡಿ ಕೊನೆಗೆ ಮನಮೋಹನ್ ಸಿಂಗ್ ಎಂಬ ಪ್ರಾಮಾಣಿಕತೆಯ ಮುಖವಾಡ ಮುಂದಿಟ್ಟು ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಾ ಬಂದಿರುವ ಕಾಂಗ್ರೆಸ್, ಪ್ರಸ್ತುತ ಪಾಕಿಸ್ತಾನದ ವಿಷಯದಲ್ಲಿ ಆಗಿರುವ ಲೋಪವನ್ನು ಮುಚ್ಚಿಕೊಳ್ಳಲು ಆ್ಯಂಟನಿ ಎಂಬ ಪ್ರಾಮಾಣಿಕ ಗುರಾಣಿಯನ್ನು ತೋರಿಸುತ್ತಿದೆ. ಖಂಡಿತ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಬಹಳ ಪ್ರಮಾಣಿಕ ಹಾಗೂ ಶುದ್ಧಹಸ್ತರು ಎಂಬುದರ ಬಗ್ಗೆ ತಕರಾರಿಲ್ಲ. ಆದರೆ ಅವರ ಪ್ರಾಮಾಣಿಕತೆಯಿಂದ ದೇಶಕ್ಕೇನು ಲಾಭವಾಯಿತು? ಐವರು ಸೈನಿಕರ ಹತ್ಯೆ ಬಗ್ಗೆ ಪ್ರತಿಕ್ರಿಯಿಸುತ್ತಾ “ಅದರಲ್ಲಿ ಪಾಕಿಸ್ತಾನಿ ಸೇನೆಯ ಪಾತ್ರವೇನೂ ಇಲ್ಲ” ಎಂದು ಸರ್ಟಿಫಿಕೇಟ್ ಕೊಡುತ್ತಾರಲ್ಲ ಈ ಆ್ಯಂಟನಿಗೇನಾಗಿದೆ? ಅವರ ಮಾತನ್ನು ಭಾರತೀಯರು ಬಿಡಿ, ಪಾಕಿಸ್ತಾನಿಯರೇ ನಂಬುವುದಿಲ್ಲ! ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರು ಪಾಕಿಸ್ತಾನಿ ಸೇನೆಯ ಸಮವಸ್ತ್ರ ಧರಿಸಿ ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ್ದಾರೆ ಎಂಬುದು ಅಕಸ್ಮಾತ್ ನಿಜವೇ ಆಗಿದ್ದರೂ ಪಾಕಿಸ್ತಾನಿ ಸೇನೆಯ ಸಹಾಯ ಹಾಗೂ ಪ್ರೋತ್ಸಾಹವಿಲ್ಲದೆ ಅವರು ಗಡಿಯ ಬಳಿ ಬರಲು ಸಾಧ್ಯವೆ? ರೋಗಿಷ್ಠ ಮನಸ್ಥಿತಿಯ ಪಾಕಿಸ್ತಾನಿ ಸೇನೆ ಅಲ್ಲಿನ ಪ್ರಜಾತಂತ್ರವನ್ನೇ ಬಲಿತೆಗೆದುಕೊಳ್ಳದೆ ಬಿಟ್ಟಿಲ್ಲ. ಅಂಥ ಸೇನೆಗೂ ಸರ್ಟಿಫಿಕೇಟ್ ನೀಡುವಂಥ ಬೌದ್ಧಿಕ ದಾರಿದ್ರ್ಯ ನಮ್ಮ ನಾಯಕರಿಗೇಕೆ ಬಂತು? ಪಾಕಿಸ್ತಾನಿ ಸೇನೆಯ ಪಾತ್ರವಿಲ್ಲ ಎಂಬುದು ನಂಬುವಂಥ ಮಾತೇ? ಇಂಥ ತಿಳಿಗೇಡಿ ಹೇಳಿಕೆ ನೀಡುವ ಆ್ಯಂಟನಿಯವರ ಕಿವಿ ಹಿಂಡಲು ಅಥವಾ ಕಿತ್ತು ಒಗಾಯಿಸಲು ಆಗದ ವ್ಯಕ್ತಿ ಹೇಗೆ ತಾನೇ ಪ್ರಧಾನಿ ಎನಿಸಿಕೊಳ್ಳಲು ಸಾಧ್ಯ?

ಇವತ್ತು ಹಳ್ಳಿ ಹಳ್ಳಿಗಳಲ್ಲೂ ಮನಮೋಹನ್ ಸಿಂಗ್ ಜೋಕುಗಳು ಹರಿದಾಡುತ್ತಿವೆ. ಮೊಬೈಲನ್ನು ಸೈಲೆಂಟ್ ಮೋಡ್‌ನಲ್ಲಿ ಇಡಬೇಕೆಂದರೆ ‘ಮನಮೋಹನ್ ಸಿಂಗ್ ಮೋಡ್‌ಗೆ ಹಾಕು’ ಎನ್ನುವಂತಾಗಿದೆ. ಜನರಲ್ಲಿ ಆ ಮಟ್ಟದ ಸಿನಿಕತೆ ಬೆಳೆದು ಬಿಟ್ಟಿದೆ. ಇದಕ್ಕೆ ಹೊಣೆ ಯಾರು? ಯಾರನ್ನು ಇಲ್ಲಿ ದೂರಬೇಕು? 1.86 ಲಕ್ಷ ಕೋಟಿಯಷ್ಟು ಇತಿಹಾಸವೇ ಕಂಡು ಕೇಳರಿಯದಷ್ಟು ಬೃಹತ್ ಮೊತ್ತದ ಕಲ್ಲಿದ್ದಲು ಹಗರಣ ಸಂಭವಿಸಿದಾಗಲೂ ಈ ಪ್ರಧಾನಿ ಬಾಯ್ಬಿಡಲಿಲ್ಲ. ತೀವ್ರ ಟೀಕಾ ಪ್ರಹಾರ ನಡೆದ ನಂತರ ಕೊನೆಗೂ ಬಾಯ್ಬಿಟ್ಟ ಪ್ರಧಾನಿ ಹೇಳಿದ್ದೇನು ಗೊತ್ತೆ-‘ಹಝಾರೋ ಜವಾಬೋನ್ ಸೆ ಅಚ್ಛಿ ಹೈ ಖಾಮೋಶಿ ಮೇರಿ, ನ ಜಾನೆ ನ ಜಾನೆ ಕಿತ್ನೆ ಸವಾಲೋ ಕೀ ಆಬ್ರೂ ರಖೇ?’ ಸಾವಿರ ಉತ್ತರಗಳಿಗಿಂತ ನನ್ನ ಮೌನವೇ ಮೇಲು ಎಂದರು!! ಅದೇ ಸೋನಿಯಾ ಗಾಂಧಿಯವರ ಮೇಲೆ ಟೀಕೆ ಮಾಡಿನೋಡಿ… ಕ್ಷಣ ಮಾತ್ರದಲ್ಲಿ ಮೌನಿ ಪ್ರಧಾನಿ ಸಿಡಿದೆದ್ದು ಬಿಡುತ್ತಾರೆ. ಇವರು ದೇಶದ ಪ್ರಧಾನಿಯೋ ಅಥವಾ ಸೋನಿಯಾ ಗಾಂಧಿಯವರ ಮುಖವಾಡವೋ? ಜೈಲಿಗೆ ಹೋಗುವಾಗ ಜಯಲಲಿತಾ ಪನ್ನೀರ ಸೆಲ್ವಂರನ್ನು ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಿದಂತೆ, ಸೋನಿಯಾ ಗಾಂಧಿಯವರು ಮನಮೋಹನರನ್ನು ಕುಳ್ಳಿರಿಸಿದ್ದಾರೆ ಅಷ್ಟೇ. ಈ ಪ್ರಧಾನಿ ಯಾವ ಯಾವ ಹಗರಣ, ಘಟನೆಗಳಿಗೆ ಎಷ್ಟೆಷ್ಟು ಸಮಯದ ನಂತರ ಪ್ರತಿಕ್ರಿಯಿಸಿದ್ದಾರೆ ಗೊತ್ತಾ?

2ಜಿ ಹಗರಣ: 16 ತಿಂಗಳ ನಂತರ
ಕಾಮನ್ವೆಲ್ತ್ ಹಗರಣ: 1 ವರ್ಷ
ಲೋಕಪಾಲ್ ಮಸೂದೆ: 6 ತಿಂಗಳು
ಚಿಲ್ಲರೆ ಮಾರಾಟ ಕ್ಷೇತ್ರಕ್ಕೆ ಎಫ್‌ಡಿಐ: 82 ದಿನ
ದಿಲ್ಲಿ ಗ್ಯಾಂಗ್‌ರೇಪ್: 8 ದಿನ

ಒಂದು ವೇಳೆ ಮನಮೋಹನ್ ಸಿಂಗ್ ಹೇಳುವಂತೆ ಮೌನವೇ ಎಲ್ಲದಕ್ಕೂ ಉತ್ತರ ಎನ್ನುವುದಾದರೆ, ಕೃತಿಯಲ್ಲಾದರೂ ಉತ್ತರಿಸಬಹುದಿತ್ತಲ್ಲ? ಕಳೆದ ಜನವರಿಯಲ್ಲಿ ನಡೆದ ನಮ್ಮ ಸೈನಿಕರ ಶಿರಚ್ಛೇದಕ್ಕೆ ಪ್ರತೀಕಾರವಾಗಿ ಭಾರತ ಇದುವರೆಗೂ ಮಾಡಿದ್ದೇನು? 2008, ನವೆಂಬರ್ 26ರಂದು ನಡೆದ ಮುಂಬೈ ದಾಳಿಗೆ ಮನಮೋಹನ್ ಸಿಂಗ್ ತೆಗೆದುಕೊಂಡ ಪ್ರತೀಕಾರ ಯಾವುದು ಹೇಳಿ ಸ್ವಾಮಿ? ಈ ದೇಶ ಎಂಥ ಹೀನಾಯ ಸ್ಥಿತಿಗೆ ತಲುಪಿತು? ಚೀನಾದವರು ನಮ್ಮ ಗಡಿಯೊಳಕ್ಕೆ 19 ಕಿ.ಮೀ. ನುಸುಳಿದರೂ ಕುಕ್ಕಿ ಕೊಲ್ಲುವ ಬದಲು ವಾಪಸ್ ಹೋಗಿ ಎಂದು ಅಂಗಲಾಚುತ್ತಾರಲ್ಲಾ ಇವರು ನಾಯಕರಾ? ‘ಫಕೀರ್‌’ಸ್ತಾನ್ (ಭಿಕ್ಷುಕ) ಆಗಿರುವ ಪಾಕಿಸ್ತಾನಕ್ಕೂ ಚಾಟಿಯೇಟು ಕೊಡದಷ್ಟು ಅಧೀರವಾಯಿತೇ ನಮ್ಮ ದೇಶ?

ಅದಿರಲಿ, ಪಾಕಿಸ್ತಾನದ ಜತೆ ನಮಗೆ ಸ್ನೇಹ ಸಂಬಂಧವಾದರೂ ಏಕೆ ಬೇಕು ಹೇಳಿ? ಯಾರನ್ನು ಸಂತುಷ್ಟಿಗೊಳಿಸಲು, ಓಲೈಸಲು ಪ್ರತಿಸಾರಿ ಮಾತುಕತೆಗೆ, ಸ್ನೇಹಸೇತು ನಿರ್ಮಾಣಕ್ಕೆ ಮುಂದಾಗುತ್ತಾರೆ? ಅಮೆರಿಕದಂಥ ಪ್ರಬಲ ವೈರಿ ಬಗಲಲ್ಲೇ ಇದ್ದರೂ ಕ್ಯಾರೇ ಎನ್ನದೆ, ರಾಜತಾಂತ್ರಿಕ ಸಂಬಂಧವೂ ಬೇಡ ಎಂದ ಕ್ಯೂಬಾ ಇಲ್ಲವಾ? ಚೀನಾದಂಥ ಸೂಪರ್ ಪವರ್ ರಾಷ್ಟ್ರ ಧಮಕಿ ಹಾಕಿದರೂ ಸಡ್ಡು ಹೊಡೆದುಕೊಂಡು ತೈವಾನ್ ಇಲ್ಲವೆ? ಅವಳಿಯಂತಿದ್ದರೂ ಬದ್ಧ ವೈರಿಯಂತೆ ವರ್ತಿಸುವ ಉತ್ತರ ಕೊರಿಯಾವನ್ನು ಮೈಗಂಟಿಸಿಕೊಂಡಿದ್ದರೂ ಯಾವುದೇ ರಾಜತಾಂತ್ರಿಕ ಸಂಬಂಧಗಳನ್ನೇ ಇಟ್ಟುಕೊಳ್ಳದೆ ದಕ್ಷಿಣ ಕೊರಿಯಾ ಪ್ರಗತಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಿಲ್ಲವೆ? ನಮ್ಮ ದರಿದ್ರ ನಾಯಕರಿಗೇಕೆ ಈ ಪಾಕಿಸ್ತಾನದ ಮೋಹ? ಪಾಕಿಸ್ತಾನದ ಜತೆ ಎಲ್ಲ ಸಂಬಂಧಗಳನ್ನೂ ಕಡಿದುಕೊಂಡು, ಗಡಿಯನ್ನು ಮುಚ್ಚಿ, ದೇಶದೊಳಗಿರುವ ದ್ರೋಹಿಗಳನ್ನು ಮಟ್ಟಹಾಕಿ ನಮ್ಮಷ್ಟಕ್ಕೆ ನಾವಿರುವುದಕ್ಕಾಗುವುದಿಲ್ಲವೆ? ಅದು ಅಟಲ್ ಬಿಹಾರಿ ವಾಜಪೇಯಿ ಇರಬಹುದು, ಮನಮೋಹನ್ ಸಿಂಗ್ ಆಗಿರಬಹುದು. ಇವರೆಲ್ಲ ಪಾಕಿಸ್ತಾನವೆಂದ ಕೂಡಲೇ ಒಂಥರಾ ಕ್ಠ್ಜಛಡಟ ಆದಂತೆ ವರ್ತಿಸುತ್ತಾರೆ. ಲಾಹೋರ್ ಬಸ್ ಯಾತ್ರೆಯ ಬೆನ್ನಲ್ಲೇ 1999ರಲ್ಲಿ ಕಾರ್ಗಿಲ್‌ನಲ್ಲಿ ಚೂರಿ ಹಾಕಿದ ಮುಷರ್ರಫ್‌ನನ್ನು 2001, ಜುಲೈನಲ್ಲಿ ಆಗ್ರಾಕ್ಕೆ ಕರೆಯಿಸಿ ಅಟಲ್ ಔತಣ ಕೊಟ್ಟರು. ಆಗಲೂ ಪ್ರತಿಯಾಗಿ ದೊರೆತಿದ್ದು 2001, ಡಿಸೆಂಬರ್ 13ರ ಸಂಸತ್ ದಾಳಿ. ಅಲ್ಲಿವರೆಗೂ ವಾಜಪೇಯಿಯವರಿಗೆ ಭ್ರಮೆ ಕಳಚಿರಲಿಲ್ಲ. ಕನಿಷ್ಠ ಪಾರ್ಲಿಮೆಂಟ್ ದಾಳಿಯ ನಂತರವಾದರೂ ವಾಜಪೇಯಿಯವರು ‘ಆರ್ ಯಾ ಪಾರ್ ಕಿ ಲಡಾಯಿ’ ಎನ್ನುತ್ತಾ ಗಡಿಯಲ್ಲಿ ಸೇನೆಯನ್ನು ಜಮಾವಣೆ ಮಾಡಿ ಯುದ್ಧಕ್ಕೆ ಸಿದ್ಧರಾಗಿದ್ದರು. ಆದರೆ ಈ ಮನಮೋಹನ್‌ಸಿಂಗರಂತೂ 180 ಜನರನ್ನು ಬಲಿತೆಗೆದುಕೊಂಡ 2008ರ ಮುಂಬೈ ದಾಳಿಯ ನಂತರವೂ ಪಾಕಿಸ್ತಾನಕ್ಕೆ ತಿವಿಯುವುದಕ್ಕೂ ಮುಂದಾಗಲಿಲ್ಲ. ಪಾಕಿಸ್ತಾನಕ್ಕೆ ಭಯೋತ್ಪಾದಕರ ಪಟ್ಟಿ ಕಳುಹಿಸಿಕೊಟ್ಟಿದ್ದಷ್ಟೇ ಇವರ ಬಹಾದ್ದೂರಿಕೆ. ಇಂಥವರೆಲ್ಲ ನಮ್ಮನ್ನಾಳುತ್ತಿದ್ದಾರೆ ಎಂದು ಹೇಳಿಕೊಳ್ಳುವುದಕ್ಕೂ ನಾಚಿಕೆಯಾಗುವುದಿಲ್ಲವೇ? ಅಮೆರಿಕದ ಜಾರ್ಜ್ ಬುಷ್‌ರನ್ನು ಯಾರೇನೇ ತೆಗಳಬಹುದು, 2001ರಲ್ಲಿ ಭಯೋತ್ಪಾದಕ ದಾಳಿಯಾದಾಗ ಕೇವಲ ಒಂದೇ ತಿಂಗಳಲ್ಲಿ ಸಾವಿರಾರು ಕಿ.ಮೀ. ದೂರದಲ್ಲಿರುವ ಅಫ್ಘಾನಿಸ್ತಾನದ ಮೇಲೆ ಯುದ್ಧ ಸಾರಿದರು, ತಾಲಿಬಾನನ್ನು ಕಿತ್ತೊಗೆದರು. ನಮ್ಮ ಷಂಡ ನಾಯಕರಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ತರಬೇತಿ ಶಿಬಿರಗಳ ಮೇಲೆ ಒಂದು ಸಣ್ಣ ಕ್ಷಿಪಣಿ ಹಾರಿಸುವುದಕ್ಕೂ ಧೈರ್ಯವಿಲ್ಲ. ಬರೀ ಪಾಕಿಸ್ತಾನಕ್ಕೆ ಮನವಿ ಮಾಡಿಕೊಳ್ಳುವುದೇ ಆಯಿತು. ನಮ್ಮ ದೇಶದ ಬೇಲಿಯನ್ನು ಗಟ್ಟಿಗೊಳಿಸಿಕೊಳ್ಳದೇ ಪಾಕಿಸ್ತಾನಕ್ಕೆ ಬಿಡಾಡಿ ದನಗಳನ್ನು ನಿಯಂತ್ರಿಸಿ ಎಂದು ಹೇಳುವುದರಲ್ಲಿ ಯಾವ ಅರ್ಥವಿದೆ ಹೇಳಿ? ಗ್ವದಾರ್ ಬಂದರು ನವೀಕರಣ, ಆಕ್ರಮಿತ ಕಾಶ್ಮೀರದಲ್ಲೂ ರಸ್ತೆ ಹಾಗೂ ಇತರ ಯೋಜನೆಗಳ ಅಭಿವೃದ್ಧಿ ಕಾರ್ಯವನ್ನು ಭಾರತದ ಬದ್ಧ ವೈರಿ ಚೀನಾಕ್ಕೆ ನೀಡಿರುವ ಪಾಕಿಸ್ತಾನದಂಥ ಧೂರ್ತ ರಾಷ್ಟ್ರದ ಜತೆ ಯಾವ ಸಂಬಂಧವೂ ನಮಗೆ ಬೇಕಾಗಿಲ್ಲ, ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಬೇಕು ಎಂದು ಈ ಮೌನಿ ಬಾಬಾಗೆ ಅರ್ಥವಾಗುವುದಾದರೂ ಯಾವಾಗ? ಮುಂಬೈ ದಾಳಿ ನಡೆದಿದ್ದು 2008ರಲ್ಲಿ. ಮರುವರ್ಷವೇ ಅಂದರೆ, 2009 ಜುಲೈನಲ್ಲಿ ಶರಮ್-ಎ-ಶೇಖ್‌ನಲ್ಲಿ ನಡೆದ ಶೃಂಗ ಸಭೆ ವೇಳೆ ಮುಂಬೈ ದಾಳಿಗೆ ಕಾರಣಕರ್ತರಾಗಿರುವವರ ಪಟ್ಟಿಯನ್ನು ಭಾರತ ನೀಡಿತ್ತಲ್ಲಾ ಅದರ ಬಗ್ಗೆ ಕ್ರಮ ತೆಗೆದುಕೊಳ್ಳುವ ವಿಚಾರ ಬದಿಗಿರಲಿ, ಶಾಂತಿ ಪ್ರಕ್ರಿಯೆ ಆರಂಭವಾಗಲಿ ಎಂದ ಮನಮೋಹನ್ ಸಿಂಗ್‌ರಂಥ ಪ್ರಧಾನಿಯಿಂದ ಏನನ್ನು ತಾನೆ ನಿರೀಕ್ಷಿಸಲು ಸಾಧ್ಯ? ನೀವೇ ಯೋಚಿಸಿ, ನಮ್ಮ ದೇಶಕ್ಕೆ ಸರಿಯಾದ ಪ್ರಧಾನಿ ಇದ್ದಿದ್ದರೆ ಐವರು ಸೈನಿಕರ ಹತ್ಯೆಗೆ ತಕ್ಕ ಪ್ರತ್ಯುತ್ತರ ನೀಡದೇ ಇರುತ್ತಿದ್ದರೇ?

ಪ್ರಧಾನಿ ಮಾತ್ರವಲ್ಲ, ನಮ್ಮ ಉಳಿದ ನಾಯಕರ  ಮನಸ್ಥಿತಿಯಾದರೂ ಎಂಥದ್ದು ಅಂದುಕೊಂಡಿರಿ?

ಕಳೆದ ಜೂನ್‌ನಲ್ಲಿ ಛತ್ತೀಸ್‌ಗಢದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ 22 ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಮಡಿದಾಗ ಮರುಕ್ಷಣವೇ ಸ್ಥಳಕ್ಕೆ ಧಾವಿಸಿ “ನಾನು ಮನಸ್ಸು ಮಾಡಿದರೆ ಒಂದು ನಿಮಿಷದಲ್ಲಿ ನಿನ್ನ ಸರ್ಕಾರವನ್ನು ಕಿತ್ತೊಗೆಯುತ್ತೇನೆ” ಎಂದು ಛತ್ತೀಸ್‌ಗಢದ ಮುಖ್ಯಮಂತ್ರಿ ರಮಣ್ ಸಿಂಗ್‌ಗೆ ಧಮಕಿ ಹಾಕಿದ್ದ ಸೋನಿಯಾ ಗಾಂಧಿ ಈಗ ಎಲ್ಲಿ ಅಡಗಿ ಕುಳಿತಿದ್ದಾರೆ? ಪಾಕಿಸ್ತಾನದ ಪ್ರಧಾನಿಗೆ ಧಮಕಿ ಹಾಕಲು ತಾಕತ್ತಿಲ್ಲವೆ ಸೋನಿಯಾ? ಇನ್ನು ಭಯೋತ್ಪಾದಕರ ಜತೆ ನಂಟು ಹೊಂದಿದ್ದ ಇಶ್ರತ್ ಜಹಾನಳನ್ನು, ಆಕೆಯ ಅಜ್ಜ ಬಿಹಾರದವರು ಎಂಬ ಕಾರಣಕ್ಕೆ “ಇಶ್ರತ್ ಬಿಹಾರ್‌ಕಿ ಬೇಟಿ” ಎಂದಿದ್ದ ಲಜ್ಜೆಗೇಡಿ ನಿತೀಶ್ ಕುಮಾರ್‌ಗೆ ಪೂಂಛ್‌ನಲ್ಲಿ ಮಡಿದ ಐವರು ಸೈನಿಕರಲ್ಲಿ ನಾಲ್ವರು ಬಿಹಾರಿಗಳು ಎಂಬುದು ಇನ್ನೂ ಅರಿವಾಗಿಲ್ಲವೇ? ಶ್ರೀಲಂಕಾದ ಅಧ್ಯಕ್ಷ ಬಿಹಾರಕ್ಕೆ ಬಂದಾಗ, ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಆಗಮಿಸಿದಾಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಖುದ್ದಾಗಿ ವಿಮಾನ ನಿಲ್ದಾಣಕ್ಕೆ ತೆರಳಿ ಬರಮಾಡಿಕೊಂಡಿದ್ದರು. ಆದರೆ, ಮನೆಯಿಂದ 15 ನಿಮಿಷ ದೂರದಲ್ಲಿರುವ ಏರ್‌ಪೋರ್ಟ್‌ಗೆ ಹುತಾತ್ಮ ಸೈನಿಕರ ಪಾರ್ಥಿವ ಶರೀರ ಬಂದಾಗ ಹೋಗಿ ಸ್ವೀಕರಿಸುವ ಸೌಜನ್ಯವೂ ಇರಲಿಲ್ಲವಾಯಿತೇಕೆ? ಹುತಾತ್ಮರಾದ ನಾಲ್ವರು ಬಿಹಾರದ ಮಕ್ಕಳಲ್ಲವೇ? ಇವರಿಗೆ ಮುಂಬೈನಲ್ಲಿ ಹುಟ್ಟಿ ಬೆಳೆದ ಇಶ್ರತ್ ಮಾತ್ರ ಬಿಹಾರದ ಮಗಳೆನಿಸುತ್ತಾಳೆಯೇ? ಈ ಮಧ್ಯೆ ನಿತೀಶ್ ಕುಮಾರ್ ಅವರ ಆಪ್ತ ಹಾಗೂ ಕ್ಯಾಬಿನೆಟ್ ಸಚಿವ ಭೀಮ್‌ಸಿಂಗ್ “ಸೇನೆ ಹಾಗೂ ಪೊಲೀಸ್ ಇಲಾಖೆ ಸೇರುವುದೇ ಸಾಯುವುದಕ್ಕೆ” ಎಂದಿದ್ದಾನಲ್ಲ ಅವನನ್ನು ಇನ್ನೂ ಕಿತ್ತೊಗೆಯದೆ ಇಟ್ಟುಕೊಂಡಿರುವ ನಿತೀಶ್ ಕುಮಾರ್ ಹೊಟ್ಟೆಗೆ ಏನು ತಿನ್ನುತ್ತಾರೆ? ನಿತೀಶ್ ಕುಮಾರ್ ಮಾತ್ರವಲ್ಲ, ತನ್ನ ರಾಜ್ಯದ ಪೂಂಛ್‌ನಲ್ಲೇ ಮಡಿದಿದ್ದರೂ ಐವರು ಸೈನಿಕರ ಪಾರ್ಥಿವ ಶರೀರವನ್ನು ಸ್ವೀಕರಿಸಲು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಕೂಡ ಬರಲಿಲ್ಲ. ತನ್ನ ಸೈನಿಕರಿಗೆ ಹಾಗೂ ಹುತಾತ್ಮರಿಗೆ ಗೌರವ ಕೊಡದ ದೇಶ ಉದ್ಧಾರವಾಗಲು ಸಾಧ್ಯವೇ? ಉತ್ತರಾಖಂಡ ಪ್ರವಾಹದ ಸುಳಿಗೆ ಸಿಲುಕಿ ಸಾವಿರಾರು ಜನ ಸತ್ತಾಗ ಸ್ಪೇನ್‌ನಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದ ರಾಹುಲ್ ಗಾಂಧಿ ಈಗ ಎಲ್ಲಿದ್ದಾರೆ? ಬಾಟ್ಲಾ ಹೌಸ್ ಎನ್ಕೌಂಟರ್‌ನಲ್ಲಿ ಸತ್ತ ಭಯೋತ್ಪಾದಕರ ಕುಟುಂಬ ವರ್ಗವನ್ನು ಭೇಟಿ ಮಾಡಲು ಅಝಂಗಡ್‌ಗೆ ಹೋಗಿದ್ದ ಮತ್ತೊಬ್ಬ ಲಜ್ಜೆಗೇಡಿ ನಾಯಕ ದಿಗ್ವಿಜಯ್ ಸಿಂಗ್ ಬಾಯಿಂದ ಈಗೇಕೆ ಮಾತುಗಳೇ ಹೊರಡುತ್ತಿಲ್ಲ?

ಎಡ್ವರ್ಡ್ ಸ್ನೋಡೆನ್‌ಗೆ ತಾತ್ಕಾಲಿಕ ಆಶ್ರಯ ನೀಡಿದ್ದಾರೆ ಎಂಬ ಕಾರಣಕ್ಕೆ ರಶ್ಯಾ ಪ್ರಧಾನಿ ವ್ಲಾದಿಮಿರ್ ಪುಟಿನ್ ಜೊತೆಗಿನ ಮಾತುಕತೆಯನ್ನೇ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ರದ್ದು ಮಾಡಿದ್ದಾರೆ. ಆದರೆ ನಮ್ಮ ಪ್ರಧಾನಿ ಮುಂದಿನ ತಿಂಗಳು ನಡೆಯಲಿರುವ ವಿಶ್ವಸಂಸ್ಥೆ ಮಹಾ ಅಧಿವೇಶನದ ಸಂದರ್ಭದಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫರನ್ನು ಭೇಟಿಯಾಗುವುದಿಲ್ಲ ಎಂದು ಹೇಳುವುದಕ್ಕೂ ಸಿದ್ಧರಿಲ್ಲ!

ಎಂಥ ವ್ಯಕ್ತಿಗಳು ನಮ್ಮನ್ನಾಳುತ್ತಿದ್ದಾರೆ ನೋಡಿ?

2007ರಲ್ಲಿ ಭಯೋತ್ಪಾದನೆ ಆರೋಪದ ಮೇಲೆ ತಪ್ಪಾಗಿ ಡಾಕ್ಟರ್ ಮೊಹಮ್ಮದ್ ಹನೀಫ್ ಆಸ್ಟ್ರೇಲಿಯಾದಲ್ಲಿ ಬಂಧಿತರಾದಾಗ ಗೋಳಿಡುತ್ತಿರುವ ಅವರ ಹೆಂಡತಿಯ ಮುಖ ನೋಡಿ ನನಗೆ ರಾತ್ರಿಯೆಲ್ಲ ನಿದ್ರೆ ಬರಲಿಲ್ಲ ಎಂದಿದ್ದ ಪ್ರಧಾನಿ ಮನಮೋಹನ್ ಸಿಂಗ್‌ಗೆ ಜಮ್ಮು ಕಾಶ್ಮೀರದ ಪೂಂಛ್ ಗಡಿಯಲ್ಲಿ ಹತರಾದ ಐವರು ಸೈನಿಕರ ಅಪ್ಪ, ಅಮ್ಮ, ಪತ್ನಿ, ಮಕ್ಕಳು ಹಾಗೂ ಕುಟುಂಬ ವರ್ಗದವರು ಗೋಳಾಡುತ್ತಿರುವುದು ಕಾಣುತ್ತಿಲ್ಲವೇ? ಅವರು ಹುತಾತ್ಮರಾಗಿ ಐದು ದಿನಗಳಾದರೂ ಬಾಯ್ಬಿಡದೇ ಕುಳಿತಿರುವ ಮನಮೋಹನ್ ಸಿಂಗ್‌ಗೆ ಈಗ ಗಾಢ ನಿದ್ರೆ ಬರುತ್ತಿದೆಯೇನು?

Shame!

62 Responses to “ಒಂದು ನಿಮಿಷದಲ್ಲಿ ನಿನ್ನ ಸರ್ಕಾರ ಕಿತ್ತೆಸೆಯುತ್ತೇನೆ ಎಂದ ಕಾಂಗ್ರೆಸ್ಸಿಗರ ತಾಕತ್ತು ಈಗ ಎಲ್ಲಿ ಅಡಗಿ ಕುಳಿತಿದೆ?”

 1. Nagaraj M says:

  Evrige yesta ugalidru aste. Jothege namma janakku buddi ella, pade pade avaranne arisi tharthare.
  Avrige thavu ena madthidivi antha thilithilvo athva thilidunu hege varthisiddivo gotthagathilla. Economical condition yava level ge elidu hogide andra evatthina dina dollor 63 Rs agide. Ennu swalp dinadalli PM avar age ne reach madthado yenu.
  E vrige heluvavaru keluvavaru yaru elladanga agide. Onde mathalli helabeku andare, hinthavaranna nimmanthavare vicharisi kollabeku.

 2. Vinutha says:

  Damn truth!! Our politicians wil wake up only during elections ..not during loc cease fire violation ..not during uttarkhand flood..not even during funeral of countries brave soldiers

 3. Sag says:

  Che!!!!!!! yentaha pradhani namma deshada itihaasada putagalalli serikonda!!???

 4. ashwath s says:

  this is on of the best artical …..
  eadhu namma dheshadha janagalige arthavagth ealla ……ea shanda ssarkarkke yavthu adalitha vannu kodabaradhu……………………….

  namma barathadh jana ugulidhare pakistana muligi hoguthe aa dheshakke shanda sarkara ( congress) baya paduthalla………………………….

  particularly some people supporting to pakistan……………….

  sir my request this kind of artical u have to publish all over india…….it would be effect for shanda government ( congress)

 5. Akshat says:

  Ee deshad kathe iste kananno,
  nee chinte madi labha illanno

 6. Vishu Kumar U says:

  Suprer::: fantastic article

 7. Sunil says:

  Awsome article..
  For all these problems there is only one solution that is only NAMO

 8. Rajendra says:

  Nice article,
  for all the above problem,only one solution is NAMO has to become next PM of india

 9. Vignesh says:

  Shame on us that we are having such a USELESS PM.
  I respect and admire you Pratap for the guts you have shown for writing such daring articles. I admire persons like you just because you give unbiased facts unlike the paid mainstream media.
  All I can say about this article is SIMPLY SUPERB, AWESOME..!

 10. Shrihari Sanjeev says:

  Dear Prataap anna,

  By reading ur article, congress leaders should feel shame to address the people.
  People should question them..that “WHAT IS THE CONTRIBUTION OF THE CONGRESS GOVERNMENT TOWARDS NATION DEVELOPMENT?????? DO THEY REALLY HAVE GUTS TO ANSWER THIS QUESTION.
  MURDERERS, WOMENISEWRS,RAPISTISTS,RASCALS,LOOTERS ARE THESE CONGRESS LEADERS.

  Regards
  Shrihari

 11. Chethan says:

  Really superb …..

 12. sachin says:

  the wrong is in us.but we r the powers..we can do the best for us..it is democracy..