ಹನ್ನೊಂದು ತುಂಬುತ್ತಿರುವ ಹೊತ್ತಿನಲಿ ಒತ್ತರಿಸಿ ಬರುತ್ತಿವೆ ನೆನಪುಗಳು!

Sunday, July 25th, 2010
ಹನ್ನೊಂದು ತುಂಬುತ್ತಿರುವ ಹೊತ್ತಿನಲಿ ಒತ್ತರಿಸಿ ಬರುತ್ತಿವೆ ನೆನಪುಗಳು!

Death… ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಪಲ್ ಕಂಪನಿಯ ಸ್ಥಾಪಕ, ಮಾಲೀಕ ಸ್ಟೀವ್ ಜಾಬ್ಸ್ ಅವರು ಯಮನ ಮನೆಯ ಕದತಟ್ಟಿ ವಾಪಸ್ ಬಂದ ಮೇಲೆ ಸಾವನ್ನು “Life’s change agent” ಎಂದು ವರ್ಣಿಸಿದ್ದರು. ಒಬ್ಬ ಸೈನಿಕನ ಪಾಲಿಗೆ ಸಾವೇ ಪ್ರಾರಬ್ಧ-Death is destiny.
ಎಷ್ಟು ನಿಜ ಅಲ್ವಾ?
ಹಾಗಂತ ಸಾವು ಇಂಥದ್ದೇ ದಿನ, ಕ್ಷಣ, ಸಂದರ್ಭದಲ್ಲಿ ಬರುತ್ತದೆ ಎಂದು ಊಹಿಸುವುದಕ್ಕಾಗುತ್ತಾ? ಬರುವ ಮುನ್ನ ಅದೇನಾದರೂ ಮುನ್ಸೂಚನೆ ಕೊಡುತ್ತದಾ? ಈ ಕೆಳಗಿನ ಪತ್ರವನ್ನೊಮ್ಮೆ ಓದಿ…

ಹಿಂದೂ ಭಯೋತ್ಪಾದನೆ, ಯಾರಿಂದಾಯಿತು ಅದರ ಉತ್ಪಾದನೆ?

Sunday, July 18th, 2010
ಹಿಂದೂ ಭಯೋತ್ಪಾದನೆ, ಯಾರಿಂದಾಯಿತು ಅದರ ಉತ್ಪಾದನೆ?

Hindus never act, they only react. ಈ ಮಾತು ಸುಳ್ಳು ಎನ್ನುವುದಾದರೆ ಹಿಂದೂಗಳು ತಾವಾಗಿಯೇ ಯಾರ ಮೇಲಾದರೂ ಎರಗಿದ, ಮೂಲತಃ ಹಿಂದೂಗಳು ಆರಂಭಿಸಿದ ಕೋಮು ಹಿಂಸಾಚಾರ, ಅನ್ಯಧರ್ಮೀಯರ ಮೇಲೆ ಮಾಡಿದ ಆಕ್ರಮಣದ ಒಂದೇ ಒಂದು ಉದಾಹರಣೆ ಕೊಡಿ ನೋಡೋಣ? ಸ್ವಾತಂತ್ರ್ಯಾನಂತರದ 63 ವರ್ಷಗಳನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಈ ಮಾತು ಹೇಳುತ್ತಿಲ್ಲ, ಕಳೆದ 5 ಸಾವಿರ ವರ್ಷಗಳ ಇತಿಹಾಸದಲ್ಲಿ ಹಿಂದೂಗಳು ಅನ್ಯಧರ್ಮೀಯರ ಮೇಲೆ ದಾಳಿ ಮಾಡಿದ, ಅವರ ಪ್ರಾರ್ಥನಾ ಸ್ಥಳಗಳನ್ನು ಧ್ವಂಸ ಮಾಡಿದ, ಮತಾಂತರ ಮಾಡಲು ಯತ್ನಿಸಿದ [...]

ಮೋದಿ ‘ಎನ್‌ಕೌಂಟರ್’ಗೆ ಹೊರಟವರು ಈಗೇನು ಹೇಳುತ್ತಾರೆ?

Monday, July 12th, 2010
ಮೋದಿ ‘ಎನ್‌ಕೌಂಟರ್’ಗೆ ಹೊರಟವರು ಈಗೇನು ಹೇಳುತ್ತಾರೆ?

ಗುಜರಾತ್ ಪೊಲೀಸರು ನಡೆಸಿದ ಮತ್ತೊಂದು ಎನ್‌ಕೌಂಟರ್ ಕೂಡ “ನಕಲಿ” ಎಂದು ಮಹಾನಗರ ಮ್ಯಾಜಿಸ್ಟ್ರೇಟ್ ವರದಿ ಸಾಬೀತು ಮಾಡಿದೆ. ಇನ್ನೂ ಎಷ್ಟು ಅಮಾನವೀಯರಾದಾರು ಇವರು?
No limits…
ಇಶ್ರತ್ ಜಹಾನ್ ಶಮೀಮ್ ರಾಝಾಳ ಹತ್ಯೆ ಒಂದು ನಕಲಿ ಎನ್‌ಕೌಂಟರ್ ಎಂದು ಮಹಾನಗರ ನ್ಯಾಯಾಧೀಶ ಎಸ್ಪಿ ತಮಾಂಗ್ ಅವರು 2009, ಸೆಪ್ಟೆಂಬರ್ 7ರಂದು 240 ಪುಟಗಳ ವರದಿಯನ್ನು ನೀಡಿದಾಗ ಇಂಗ್ಲಿಷ್ ಮಾಧ್ಯಮಗಳು ಈ ಮೇಲಿನಂತೆ ವರ್ಣಿಸಿದ್ದವು. ಕುಖ್ಯಾತ ಕ್ರಿಮಿನಲ್ ಸೊಹ್ರಾಬುದ್ದೀನ್ ಶೇಖ್‌ನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ ಆರೋಪದ ಮೇಲೆ ಪ್ರಸ್ತುತ ಜೈಲಿನಲ್ಲಿರುವ [...]

ಆಹಾ… ಎಂಥಾ ಅಮ್ಮಾ, ಎಂಥಾ ಮಕ್ಕಳು?!

Sunday, July 4th, 2010
ಆಹಾ… ಎಂಥಾ ಅಮ್ಮಾ, ಎಂಥಾ ಮಕ್ಕಳು?!

Reddys remain Sushma’s blue-eyed boys!
ಅದು ಬಿಜೆಪಿಯ ಅತ್ಯುನ್ನತ ನಾಯಕಿ ಸುಷ್ಮಾ ಸ್ವರಾಜ್ ಅವರಿಂದ ಹೊರಬಿದ್ದ ಸ್ಪಷ್ಟ ಸಂದೇಶ-ಬಳ್ಳಾರಿ ರೆಡ್ಡಿ ಸಹೋದರರಷ್ಟೇ ಆಕೆಗೆ ಪ್ರೀತಿಪಾತ್ರರು! ಬಿಜೆಪಿಯ ಎರಡು ವರ್ಷಗಳ ಸಾಧನಾ ಸಮಾವೇಶದ ವೇದಿಕೆಯನ್ನು ಚೆನ್ನಾಗಿ ಬಳಸಿಕೊಂಡ ಆಕೆ, ಗಾಲಿ ಕರುಣಾಕರ ರೆಡ್ಡಿ, ಗಾಲಿ ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು ಹಾಗೂ ಗಾಲಿ ಸೋಮಶೇಖರ ರೆಡ್ಡಿಯೇ ತಮ್ಮ ನಂಬಿಕಸ್ತ ಬಂಟರು ಎಂಬುದನ್ನು ಪುನರುಚ್ಚರಿಸಿದರು. ಇವರೆಲ್ಲ ಸಚಿವರಾಗಿರುವ ಆರೋಗ್ಯ, ಕಂದಾಯ, ಮೂಲಭೂತ ಸೌಕರ್ಯ ಇಲಾಖೆ ಹಾಗೂ ಕೆಎಂಎಫ್ ಅನ್ನು ಮಾತ್ರ [...]

ಶ್ರದ್ಧೆಯ ತಾಯಂದಿರೇ, ತತ್ತ್ವಾದರ್ಶದ ‘ಶ್ರಾದ್ಧ’ ನೋಡಿ ಸುಮ್ಮನಿರೋದಾ?

Monday, June 28th, 2010
ಶ್ರದ್ಧೆಯ ತಾಯಂದಿರೇ, ತತ್ತ್ವಾದರ್ಶದ ‘ಶ್ರಾದ್ಧ’ ನೋಡಿ ಸುಮ್ಮನಿರೋದಾ?

ಅಂದು ನಡುರಾತ್ರಿ ಕಳೆದು 2 ಗಂಟೆಯಾಗಿದೆ. ಆ ಹೊತ್ತಿ ನಲ್ಲಿ ಮೊಬೈಲ್ ರಿಂಗ್ ಆಗುತ್ತಿದೆ. ಅತ್ತ ಕಡೆ ಹೆಣ್ಣು ಧ್ವನಿಯೊಂದು ಗದ್ಗದಿತವಾಗಿ ಕೇಳುತ್ತಿದೆ. ತನ್ನ 8 ತಿಂಗಳ ಕಂದಮ್ಮನ ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದ ಅಮ್ಮನ ಧ್ವನಿ ಯದು. “ನೀವು ಹೇಳಿ ಸಾರ್, ಅವರು ನಿಮ್ಮ ಮಾತನ್ನು ಕೇಳುತ್ತಾರೆ” ಎಂದು ಅಂಗಲಾಚುತ್ತಿದ್ದಾಳೆ. ಅನಾರೋಗ್ಯದಿಂದ ಮಗು ನರಳುತ್ತಿ ದ್ದರೂ ಬಳ್ಳಾರಿ ಸರಕಾರಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಕೊಡಲು ಮುಂದಾಗುತ್ತಿಲ್ಲ.
ಆಗ ಆಕೆಗೆ ಕಂಡ ಕಡೆಯ ಆಶಾಕಿರಣ ಯಾವುದೆಂದು ತಿಳಿದಿದ್ದೀರಿ? ಆ ಹೊತ್ತಿನಲ್ಲಿ [...]

ಹದಿನಾರು ಪರ್ಸೆಂಟ್‌ಗೇ ಇಷ್ಟು ಹೆದರುವುದಾದರೆ…?

Friday, June 25th, 2010
ಹದಿನಾರು ಪರ್ಸೆಂಟ್‌ಗೇ ಇಷ್ಟು ಹೆದರುವುದಾದರೆ…?

ಬಿಹಾರ ವಿಧಾನಸಭೆಯ ಒಟ್ಟು ಸದಸ್ಯ ಬಲ 243. ಅದರಲ್ಲಿ ಎನ್‌ಡಿಎ ಬಲಾಬಲ 143. ಎನ್‌ಡಿಎ ಅನ್ನು ಒಡೆದು ನೋಡಿದರೆ ಜೆಡಿಯು ಪಾಲು 88 ಹಾಗೂ ಬಿಜೆಪಿ ಸಂಖ್ಯೆ 55. 2005ರ ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಬಳಿ 54 ಶಾಸಕರಿದ್ದರೆ, ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕತಾಂತ್ರಿಕ ಜನತಾ ಪಾರ್ಟಿಗೆ ಸಿಕ್ಕಿದ್ದು ಕೇವಲ 10 ಸೀಟುಗಳು!  ಲಾಲು ಹಾಗೂ ಪಾಸ್ವಾನ್ ಅವರಂತೂ ನಿತೀಶ್ ಕುಮಾರ್ ಅವರ ಬದ್ಧವೈರಿಗಳು. [...]

ಅನಂತಮೂರ್ತಿಯವರೇ, ಮಾವೋ ಏನು ಮಹಾತ್ಮ ಗಾಂಧಿಯೇ?

Sunday, June 13th, 2010
ಅನಂತಮೂರ್ತಿಯವರೇ, ಮಾವೋ ಏನು ಮಹಾತ್ಮ ಗಾಂಧಿಯೇ?

ಮಾವೋಯಿಸಂ ಅಂದರೆ ಏನು?
ಇಂಥದ್ದೊಂದು ‘ಇಸಂ’ ಹುಟ್ಟಿಕೊಂಡಿದ್ದಾದರೂ ಹೇಗೆ? ಹಾಗೂ ಏಕೆ? ಅದು ಜನ್ಮತಳೆಯುವುದಕ್ಕೂ ಮುನ್ನ ಜರುಗಿದ ಘಟನೆಗಳಾದರೂ ಯಾವುವು? ಅದು ಬೆಳೆದು ಬಂದ ರೀತಿಯನ್ನು ನೋಡಿದರೆ, ಅದರ ಪರಂಪರೆಯನ್ನು ಗಮನಿಸಿ ದರೆ ಮುಂದೆ ಎಂತಹ ಪರಿಸ್ಥಿತಿ ಸೃಷ್ಟಿಯಾಗಬಹುದು? ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ನಕ್ಸಲಿಸಂನ(ಹಿಂಸೆ) ಇನ್ನೊಂದು ಹೆಸರಾಗಿರುವ ಮಾವೋಯಿಸಂನ ಅಗತ್ಯ ನಿಜಕ್ಕೂ ನಮ್ಮ ದೇಶಕ್ಕಿದೆಯೇ? ಮಾವೋಯಿಸಂ ಎಂಬುದು ಯಾವ ವ್ಯಕ್ತಿಯ ಹೆಸರನ್ನು ಹೊಂದಿದೆ? ಅದು ಯಾವ ವ್ಯಕ್ತಿಯಿಂದ ಪ್ರೇರಣೆ ಪಡೆಯುತ್ತಿದೆ? ಮಾವೋ ಝೆಡಾಂಗ್ ಯಾರು? [...]

ಎಲ್ಲಿಯ ಅರಸು, ಎಲ್ಲಿಯ ಯಡಿಯೂರಪ್ಪ, ಹೇಳಿ ಈಶ್ವರಪ್ಪ?

Sunday, June 6th, 2010
ಎಲ್ಲಿಯ ಅರಸು, ಎಲ್ಲಿಯ ಯಡಿಯೂರಪ್ಪ, ಹೇಳಿ ಈಶ್ವರಪ್ಪ?

ಕಳೆದ ವರ್ಷ ಇದೇ ಜೂನ್ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆಗಿನ ಇಂಧನ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ಯಾವ ರೀತಿ ಬೀದಿಯಲ್ಲಿ ನಿಂತು ಜಗಳವಾಡಿಕೊಳ್ಳುತ್ತಿದ್ದರು ಎಂಬುದನ್ನು ನೆನಪಿಸಿಕೊಳ್ಳಿ. 2009, ಏಪ್ರಿಲ್‌ನಲ್ಲಿ ಲೋಕಸಭೆ ಚುನಾವಣೆ ಮುಗಿದು ಮೇನಲ್ಲಿ ಫಲಿತಾಂಶ ಹೊರಬಿದ್ದಿತ್ತು. ಯಡಿಯೂರಪ್ಪನವರ ಪುತ್ರ ರಾಘವೇಂದ್ರ ಶಿವಮೊಗ್ಗ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅಲ್ಲಿಗೆ ಇಡೀ ಜಿಲ್ಲೆ ಅಪ್ಪ-ಮಗನ ನಿಯಂತ್ರಣಕ್ಕೆ ಒಳಪಟ್ಟಂತಾಯಿತು. ಇತ್ತ ಇಂಧನ ಖಾತೆ ಕೊಟ್ಟಿದ್ದರೂ ಅದನ್ನು ಸ್ವತಂತ್ರವಾಗಿ ‘ಡೀಲ್’ ಮಾಡಲು ಯಡಿಯೂರಪ್ಪನವರು ಅವಕಾಶ ಕೊಡುತ್ತಿಲ್ಲ ಎಂದು ಈಶ್ವರಪ್ಪನವರಿಗೆ [...]

ಈ ಸ್ವಾಮಿ, ಸಿದ್ದುಗಳಿಗೆ ಕನಿಷ್ಠ ಸಭ್ಯತೆಯೂ ಇಲ್ವೇ?

Sunday, May 30th, 2010
ಈ ಸ್ವಾಮಿ, ಸಿದ್ದುಗಳಿಗೆ ಕನಿಷ್ಠ ಸಭ್ಯತೆಯೂ ಇಲ್ವೇ?

Unparliamentary.
ನಮ್ಮ ಮಾಜಿ ಪ್ರಧಾನಿ ದೇವೇಗೌಡರಂತೆ ‘ಬ್ಲಡಿ ಬ್ಯಾಸ್ಟರ್ಡ್’ ಎಂದು ಒಂದು ರಾಜ್ಯದ ಚುನಾಯಿತ ಮುಖ್ಯಮಂತ್ರಿಯನ್ನೇ ಅಸಭ್ಯ ಹಾಗೂ ಅನೈತಿಕವಾಗಿ ನಿಂದಿಸುವುದು ಬಿಡಿ, ಆಸ್ಟ್ರೇಲಿಯಾ ಸಂಸತ್ತಿನಲ್ಲಿ “ಸುಳ್ಳುಗಾರ” ಎಂದು ಜರಿದರೂ ‘ಅಸಂಸದೀಯ’ (ಅನ್‌ಪಾರ್ಲಿಯಾಮೆಂಟರಿ) ಪದವಾಗುತ್ತದೆ, ಸಭಾಧ್ಯಕ್ಷರಿಂದ ವಾಗ್ದಂಡನೆಗೆ ಗುರಿಯಾಗಬೇಕಾಗುತ್ತದೆ, ಸಂಸತ್ತಿನ ಕಲಾಪಗಳ ದಾಖಲೆಗೆ ಆ ಪದವನ್ನು ಸೇರಿಸುವುದಿಲ್ಲ. ಕೆನಡಾ ಸಂಸತ್ತಿನಲ್ಲಿ “Evil genius’, “Weathervane’ (ಗಾಳಿ ಬಂದ ಕಡೆ ವಾಲುವವನು) ಎಂದೂ ಕುಟುಕುವಂತಿಲ್ಲ. ಹಾಂಕಾಂಗ್‌ನಲ್ಲಿ, “ಕೊಳಚೆ ಕಾಲುವೆಯಲ್ಲಿ ಬೆಳೆಯುವುದು ಕೊಳಕು ಹುಲ್ಲೇ…” ಎಂಬ ಗಾದೆ ಮಾತನ್ನೂ ಹೇಳುವಂತಿಲ್ಲ. ಐರ್ಲೆಂಡ್‌ನಲ್ಲಿ [...]

ಆರು ವರ್ಷಗಳಲ್ಲಿ ಆಕೆ ನಮಗೆ ಆಪ್ತರಾದರೆ?!

Sunday, May 23rd, 2010
ಆರು ವರ್ಷಗಳಲ್ಲಿ ಆಕೆ ನಮಗೆ ಆಪ್ತರಾದರೆ?!

ಅವರು ಭಾರತದ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಪುತ್ರ ರಾಜೀವ್ ಗಾಂಧಿಯವರನ್ನು ವಿವಾಹವಾಗಿದ್ದು 1968ರಲ್ಲಿ. ರಾಹುಲ್ ಗಾಂಧಿ 1970ರಲ್ಲಿ ಹುಟ್ಟಿದರು. 1972ರಲ್ಲಿ ಪ್ರಿಯಾಂಕಾ ಜನನವಾಯಿತು. 1980ರಲ್ಲಿ ಸಂಭವಿಸಿದ ವಿಮಾನ ದುರ್ಘಟನೆಯಲ್ಲಿ ಸಂಜಯ್ ಗಾಂಧಿ ಅಗಲಿದ ಕಾರಣ 1982ರಲ್ಲಿ ರಾಜೀವ್ ಗಾಂಧಿ ಅಧಿಕೃತವಾಗಿ ರಾಜಕಾರಣಕ್ಕಿಳಿದರು. 1968ರಿಂದ 1982ರವರೆಗೆ ಅಂದರೆ ಸುಮಾರು 14 ವರ್ಷ ಕಳೆದರೂ ಸೋನಿಯಾ ಗಾಂಧಿಯವರು ಮಾತ್ರ ಇಟಲಿಯ ನಾಗರಿಕಳೇ ಆಗಿದ್ದರು. ಒಬ್ಬ ಪ್ರಧಾನಿಯೆಂದರೆ ದೇಶದ ಚುಕ್ಕಾಣಿಯಂಥ ಗುರುತರ ಜವಾಬ್ದಾರಿಯನ್ನು ಹೊತ್ತ ವ್ಯಕ್ತಿ ಮಾತ್ರವಲ್ಲ, ನಮ್ಮ [...]