*/
Date : 07-11-2011 | 46 Comments. | Read More
1. ಜನಸೇವಾ ವಿದ್ಯಾಕೇಂದ್ರ 10 ಎಕರೆ 2. ರಾಷ್ಟ್ರೋತ್ಥಾನ ಪರಿಷತ್ 906 ಚದುರ ಮೀಟರ್ 3. ಸಂಸ್ಕಾರ ಭಾರತಿ 2000 ಚದರಡಿ 4. ಹಿಂದು ಜಾಗರಣ ವೇದಿಕೆ 2000 ಚದರಡಿ 5. ಮಹಿಳಾ ದಕ್ಷತಾ ಸಮಿತಿ 396 ಚದರ ಮೀಟರ್ 6. ಅನಂತ ಶಿಶು ನಿವಾಸ 3585 ಚದರ ಮೀಟರ್ ಇಂಡಿಯಾ ಟುಡೆ ಸಮೂಹಕ್ಕೆ ಸೇರಿದ ‘ಮೇಯ್ಲ್ ಟುಡೆ’ ಎಂಬ ದೈನಿಕ ನವೆಂಬರ್ 1ರಂದು “How Sangh Parivar benefitted from Yeddyurappa’s land largesse’ ಎಂಬ […]
Date : 30-10-2011 | 35 Comments. | Read More
ಅವರನ್ನು Maverick ಎನ್ನಿ, Eccentric ಅಂತ ಕರೆಯಿರಿ, ವಿವಾದಪ್ರಿಯ ಎಂದರೂ ತಪ್ಪಿಲ್ಲ, ಕೆಲವೊಮ್ಮೆ ವಿಘ್ನಸಂತೋಷಿ ಎಂಬ ಭಾವನೆ ಮೂಡಿದರೂ ಆಶ್ಚರ್ಯವಾಗದು. ಅವರು ಈ ಎಲ್ಲವೂ ಹೌದು. ಅಟಲ್ ಬಿಹಾರಿ ವಾಜಪೇಯಿ, ಜಯಲಲಿತಾ, ರಾಮಕೃಷ್ಣ ಹೆಗಡೆ, ವಿಪಿ ಸಿಂಗ್, ಚಂದ್ರಶೇಖರ್್ರಿಂದ ಎ. ರಾಜಾ, ಟಿ.ಅರ್. ಬಾಲು, ಕರುಣಾನಿಧಿ, ಚಿದಂಬರಂ ಹಾಗೂ ಸೋನಿಯಾ ಗಾಂಧಿವರೆಗೆ ಯಾರನ್ನೂ ಕಾಡದೆ ಬಿಟ್ಟಿಲ್ಲ, ಬಿಡುವ ಜಾಯಮಾನವೂ ಅವರದ್ದಲ್ಲ. ಈ ಸುಬ್ರಹ್ಮಣ್ಯನ್ ಸ್ವಾಮಿಯವರು “How to Make Enemies and Antagonise People?’ ಎಂಬ ಪುಸ್ತಕವನ್ನೇ […]
Date : 18-10-2011 | 22 Comments. | Read More
ನಮ್ಮ ಕೇಂದ್ರ ಸರ್ಕಾರದ ಮಂತ್ರಿಗಳು ಒಬ್ಬರ ಹಿಂದೆ ಒಬ್ಬರಂತೆ ರಾಜಿನಾಮೆ ಇತ್ತು ಕೆಳಗಿಳಿಯುತ್ತಿದ್ದಾರೆ, ಇನ್ನು ಕೆಲವರು ತಮ್ಮ ಬುಡಕ್ಕೆ ಯಾವಾಗ ಕುತ್ತು ಬರುತ್ತದೋ ಎಂದು ಆತಂಕದಿಂದ ಕುಳಿತಿದ್ದಾರೆ, ಹಾಲಿ ಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್ ತಮ್ಮ ಲಾಯರ್ ಬುದ್ಧಿ ಪ್ರಯೋಗಿಸಿ ‘ಝೀರೋ ಲಾಸ್ ಥಿಯರಿ’ ಮಂಡಿಸಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿದ್ದಾರೆ, ಹಾಲಿ ಗೃಹ ಸಚಿವ ಪಿ. ಚಿದಂಬರಂ ಹಣಕಾಸು ಸಚಿವರಾಗಿದ್ದಾಗ ಮಾಡಿದ ಪಾಪ ಈಗ ಕಾಡಲು ಆರಂಭಿಸಿದೆ, ಒಂದು ವೇಳೆ ಚಿದಂಬರಂ ಅವರು ರಾಜಿನಾಮೆ ನೀಡಬೇಕಾಗಿ […]
Date : 11-10-2011 | 39 Comments. | Read More
Who matter? ಇಂಥದ್ದೊಂದು ಪ್ರಶ್ನೆಯನ್ನಿಟ್ಟುಕೊಂಡು ವಿಶ್ವವಿಖ್ಯಾತ”ಫೋರ್ಬ್ಸ್್’ ಮ್ಯಾಗಝಿನ್ ಪ್ರತಿವರ್ಷ ಜಗತ್ತಿನ ಎಲ್ಲ ರಾಷ್ಟ್ರಗಳ ಪ್ರಮುಖ ವ್ಯಕ್ತಿಗಳ ಶಕ್ತಿ, ಸಾಮರ್ಥ್ಯ, ಪ್ರಭಾವಗಳನ್ನು ಅಳೆದು ತೂಗುತ್ತದೆ. ಕೊನೆಗೆ ಪ್ರಭಾವಿ ವ್ಯಕ್ತಿಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡುತ್ತದೆ. ಈ ಪಟ್ಟಿಯಲ್ಲಿ ಒಂದರಿಂದ 10 ಸ್ಥಾನಗಳನ್ನು ಸಾಮಾನ್ಯವಾಗಿ ರಾಜಕಾರಣಿಗಳೇ ಅಂದರೆ ಪ್ರಧಾನಿ, ರಾಷ್ಟ್ರಾಧ್ಯಕ್ಷ ಇಂತಹ ಸ್ಥಾನಗಳಲ್ಲಿರುವವರು ಆಕ್ರಮಿಸಿರುತ್ತಾರೆ. ಇಷ್ಟಕ್ಕೂ ಪ್ರಭಾವಿ, ಬಲಶಾಲಿ ಎನಿಸಿಕೊಳ್ಳಲು ಹಣವೊಂದೇ ಇದ್ದರೆ ಸಾಲದು. ಹಾಗಾಗಿ ಒಂದು ದೇಶದ ರಾಜಕೀಯ ಅಧಿಕಾರ, ಅರ್ಥವ್ಯವಸ್ಥೆ, ಸೇನೆ, ಅಧಿಕಾರಶಾಹಿ ವರ್ಗ ಮುಂತಾದುವುಗಳ ಮೇಲೆ ಹೊಂದಿರುವ […]
Date : 02-10-2011 | 8 Comments. | Read More
ಪ್ರಸ್ತುತ ನನೆಗುದಿಗೆ ಬಿದ್ದಿರುವ ಜನ ಲೋಕಪಾಲ್ ಮಸೂದೆಯ ಹಿನ್ನೆಲೆಯಲ್ಲಿ ಅಣ್ಣಾ ಹಜಾರೆ ಜತೆ ಅರುಣಾ ರಾಯ್ ಹಾಗೂ ಡಾ. ಜಯಪ್ರಕಾಶ್ ನಾರಾಯಣ್ ಹೆಸರುಗಳೂ ಚಾಲ್ತಿಯಲ್ಲಿವೆ. ಇಂದಿರಾ ಗಾಂಧಿಯವರ ವಿರುದ್ಧ ರಾಷ್ಟ್ರವ್ಯಾಪಿ ಜನಾಂದೋಲನ ರೂಪಿಸಿದ ಮಹಾನ್ ನೇತಾರ ಜೆಪಿಯವರ ಹೆಸರನ್ನೇ ಹೊಂದಿರುವ ಈ ಜಯಪ್ರಕಾಶ್ ನಾರಾಯಣ್ ಕೂಡ ಅದೇ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಆಂಧ್ರದ ಗುಂಟೂರು ಮೆಡಿಕಲ್ ಕಾಲೇಜಿನಿಂದ ವೈದ್ಯ ಪದವಿ ಪಡೆದ ಡಾ. ಜಯಪ್ರಕಾಶ್ ನಾರಾಯಣ್ ಲೋಕಸೇವಾ ಆಯೋಗದತ್ತ ಆಕರ್ಷಿತರಾದರು. 1980ರ ಐಎಎಸ್ ಪರೀಕ್ಷೆಯಲ್ಲಿ ರಾಷ್ಟ್ರದಲ್ಲಿಯೇ ಮೊದಲಿಗರಾಗಿ ಪಾಸಾಗಿ […]
Date : 01-10-2011 | 41 Comments. | Read More
ನಾಳೆ ಗಾಂಧಿ ಜಯಂತಿ. ಕಳೆದ ಏಪ್ರಿಲ್್ನಲ್ಲಿ ಗಾಂಧಿವಾದಿ ಅಣ್ಣಾ ಹಜಾರೆಯವರು ಮೊದಲ ಬಾರಿಗೆ ಉಪವಾಸ ಕುಳಿತಂದಿನಿಂದ ಗಾಂಧೀಜಿ ಬಹುಚರ್ಚಿತ ವಿಷಯವಾಗಿಬಿಟ್ಟಿದ್ದಾರೆ. ಉಪವಾಸದಂತಹ ಗಾಂಧಿ ಮಾರ್ಗದ ಬಗ್ಗೆ ಕಾಂಗ್ರೆಸ್ಸೇ ಸಣ್ಣದಾಗಿ ಅಪಸ್ವರವೆತ್ತಿದ್ದನ್ನೂ ನಾವು ನೋಡಿದ್ದಾಯಿತು. ಇನ್ನು ಗಾಂಧೀಜಿಯವರನ್ನು ಮೆಚ್ಚುವವರ ಬಗಲಲ್ಲೇ ಟೀಕಿಸುತ್ತಾ ಬಂದವರೂ ಸಾಕಷ್ಟಿದ್ದಾರೆ. ಹಾಗೆ ಟೀಕಿಸಿದವರನ್ನು”ಗೋಡ್ಸೆ ಸಂಸ್ಕೃತಿ’ಯವರು ಎಂದು ಬಹಳ ಆಕ್ರಮಣಕಾರಿಯಾಗಿ ಹರಿಹಾಯುವವರೂ ನಮ್ಮ ನಡುವೆ ಇದ್ದಾರೆ. ಇಂಥದ್ದೊಂದು ಆಕ್ರೋಶ, ಕೋಪತಾಪ ಪ್ರದರ್ಶಿಸುವ ಗಾಂಧಿವಾದಿಗಳು, ಗಾಂಧಿ ಟೋಪಿಧಾರಿಗಳು ಗಾಂಧೀಜಿ ಪ್ರತಿಪಾದಿಸಿದ ಮೌಲ್ಯಗಳಿಗೆ ಎಷ್ಟರಮಟ್ಟಿಗೆ ಬದ್ಧರಾಗಿದ್ದಾರೆ? ತಮ್ಮ ಮಾತು-ನಡತೆಯಲ್ಲಿ […]
Date : 24-09-2011 | 23 Comments. | Read More
26-09-2010 ಸವಾಯಿ ಗಂಧರ್ವ ಸಭಾಗೃಹ ದೇಶಪಾಂಡೆ ನಗರ, ಹುಬ್ಬಳ್ಳಿ ‘ಇಷ್ಟು ತಡವಾಗಿಯಾದರೂ ನೀವು ಶ್ರೀನಿವಾಸ ತೋಫಖಾನೆಯವರನ್ನು ಅಭಿನಂದಿಸಿ ಶಾಪಮುಕ್ತರಾದಿರಿ. ಇವರನ್ನು ಅಭಿನಂದಿಸುವುದನ್ನೇನಾದರೂ ಮರೆತಿದ್ದರೆ ಮುಂದಿನ ತಲೆಮಾರು ನಿಮಗೆ ಶಾಪಹಾಕುತಿತ್ತು. ಒಂದು ಊರು ಬೆಳೆಯುವುದು ಅಗಲವಾದ ರಸ್ತೆಗಳಿಂದಲ್ಲ, ದೊಡ್ಡ ದೊಡ್ಡ ಕಟ್ಟಡಗಳಿಂದಲೂ ಅಲ್ಲ. ತೋಫಖಾನೆಯಂಥವರಿದ್ದರೆ ಊರು ಬೆಳೆಯುತ್ತದೆ, ಪ್ರಸಿದ್ಧವಾಗುತ್ತದೆ. ಗದಗಕ್ಕೆ ಹೆಸರು ಬಂದಿದ್ದು ಕುಮಾರವ್ಯಾಸನ ನಾಡೆಂಬ ಕಾರಣಕ್ಕೆ, ಷರೀಫರಿಂದಾಗಿ ಹಾವೇರಿಯ ಶಿಶುವಿನಹಾಳ ಪ್ರಸಿದ್ಧವಾಯಿತು, ಹಾಗೆ ತೋಫಖಾನೆಯವರಂಥವರು ಜನ್ಮತಳೆದ ಕಾರಣ ನಮ್ಮ ನಾಡಿಗೆ ಹೆಸರು ಬಂದಿದೆ.’ ಅಂದು ಗದುಗಿನ ತೋಂಟದಾರ್ಯ […]
Date : 17-09-2011 | 59 Comments. | Read More
ನಮ್ ಅಪ್ಪ ಯಾವ ಗಳಿಗೆಯಲ್ಲಿ”ಗೋಪಾಲ’ ಅಂತ ಹೆಸರಿಟ್ಟರೋ ದನಗಳನ್ನು ನೋಡಿಕೊಳ್ಳುವುದೇ ನನ್ನ ಜೀವನವಾಯಿತು ಎಂದು ಅವರಿವರ ಬಳಿ ತನ್ನನ್ನು ತಾನೇ ತಮಾಷೆ ಮಾಡಿಕೊಳ್ಳುತ್ತಿದ್ದರು ನನ್ನ ಅಪ್ಪಯ್ಯ. ಒಮ್ಮೊಮ್ಮೆ ಹಳೆಯದ್ದನ್ನೆಲ್ಲ ನೆನಪಿಸಿಕೊಂಡಾಗ ಅವರು ಹೆಂಡತಿ-ಮಕ್ಕಳಿಗಿಂತ ತಮ್ಮ ಪುಸ್ತಕಗಳು ಮತ್ತು ನಮ್ಮ ದನಕರುಗಳನ್ನೇ ಹೆಚ್ಚು ಪ್ರೀತಿಸುತ್ತಿದ್ದರೇನೋ ಎಂದನಿಸುತ್ತದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕರು ಹುಟ್ಟಿದಾಗ ಮೈಬಣ್ಣ ಕಪ್ಪಾಗಿದ್ದರೆ ಕರಿಯಾ, ಬಿಳಿಯಾಗಿದ್ದರೆ ಬಿಳಿಯ, ಕೆಂಪಿದ್ದರೆ ಕೆಂದಾ, ಮೈತುಂಬಾ ಬಿಳಿ ಮಚ್ಚೆಗಳಿದ್ದರೆ ಚುಕ್ಕಿ, ಹಣೆಯಲ್ಲಿ ಬೊಟ್ಟು ಇದ್ದರೆ ಚಂದ್ರ ಎಂದು ಕರೆಯುವುದು ಒಂಥರಾ ವಾಡಿಕೆ. […]
Date : 04-09-2011 | 52 Comments. | Read More
ಐ ಮ್ಯಾಕ್, ಐ ಪಾಡ್, ಐ ಟ್ಯೂನ್ಸ್, ಐ ವರ್ಕ್, ಐ ಲೈಫ್, ಐ ಫೋನ್, ಈಗ ಐ ಪ್ಯಾಡ್. ಇವುಗಳಲ್ಲಷ್ಟೇ ಅಲ್ಲ, ಆತನ ಬಗ್ಗೆ ಬರೆಯಲಾಗಿರುವ ಅನಧಿಕೃತ ಆತ್ಮಚರಿತ್ರೆಯಾದ “ಐಕಾನ್್”ನಲ್ಲೂ “ಐ” ಇದೆ! ಅವನನ್ನು ಟೀಕಾಕಾರರು “Ego Maniac” ಎಂದು ಜರಿದರೂ ಆತನಲ್ಲಿರುವುದು “ನಾನು” ಎಂಬ “ಅಹಂ” ಅಲ್ಲ, ನಾನೇನಾದರೂ ವಿಭಿನ್ನವಾದುದನ್ನು ಮಾಡಬೇಕೆಂಬ ಹಂಬಲ. ಇಂತಹ ಹಂಬಲವನ್ನು ಕೆಲವರು ಆಡಿಕೊಂಡಿದ್ದೂ ಇದೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ವ್ಯಕ್ತಿಯಲ್ಲ ಸ್ಟೀವ್ ಜಾಬ್ಸ್. ಆದರೆ ಬೇರೆಯವರ ತಲೆಕೆಡಿಸಿ ಬಿಡುತ್ತಾನೆ. […]
Date : 29-08-2011 | 17 Comments. | Read More
ಆ ಕುರುಚಲು ಗಡ್ಡ, ಹೆಗಲ ಮೇಲೊಂದು ಶಾಲು. ಅವರನ್ನು ನೋಡುವುದಕ್ಕೇ ಒಂಥರಾ ಖುಷಿ. ಮಾತು ನಿಧಾನ, ಆದರೆ ಬಲು ತೂಕ. ಕನ್ನಡವೂ ಸ್ಫುಟ, ಇಂಗ್ಲಿಷ್ ಮೇಲೂ ಪ್ರಭುತ್ವ. ಒಂದು ಸಣ್ಣ ಟೀಕೆಗೂ ಸ್ಪಂದಿಸುವ ಸಂವೇದನೆ. ಆರೋಪ ಎದುರಾದಾಗ ಎರಡು ಬಾರಿ ರಾಜೀನಾಮೆ ನೀಡಿದ ಅವರ ಸನ್ನಡತೆ. ಸಾಕಷ್ಟು ಗ್ಝ್ಛಜಡ ಇದ್ದರೂ ಗ್ಝ್ಠಡ್ಡಿಜಡ ಎದ್ದು ಕಾಣುವ ವ್ಯಕ್ತಿತ್ವ. ನಾವು ಶಾಲೆಗೆ ಹೋಗುವಾಗ ತೊಟ್ಟಿದ್ದು ಅವರು ಕೊಟ್ಟ ಉಚಿತ ಸಮವಸ್ತ್ರಗಳನ್ನೇ. ನಾವು ಓದಿದ್ದೂ ಅವರು ನೀಡಿದ ಪುಕ್ಕಟೆ ಪಠ್ಯಪುಸ್ತಕಗಳನ್ನೇ. ಅವರ […]