Date : 11-10-2011, Tuesday | 39 Comments
ಇಂಥದ್ದೊಂದು ಪ್ರಶ್ನೆಯನ್ನಿಟ್ಟುಕೊಂಡು ವಿಶ್ವವಿಖ್ಯಾತ”ಫೋರ್ಬ್ಸ್್’ ಮ್ಯಾಗಝಿನ್ ಪ್ರತಿವರ್ಷ ಜಗತ್ತಿನ ಎಲ್ಲ ರಾಷ್ಟ್ರಗಳ ಪ್ರಮುಖ ವ್ಯಕ್ತಿಗಳ ಶಕ್ತಿ, ಸಾಮರ್ಥ್ಯ, ಪ್ರಭಾವಗಳನ್ನು ಅಳೆದು ತೂಗುತ್ತದೆ. ಕೊನೆಗೆ ಪ್ರಭಾವಿ ವ್ಯಕ್ತಿಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡುತ್ತದೆ. ಈ ಪಟ್ಟಿಯಲ್ಲಿ ಒಂದರಿಂದ 10 ಸ್ಥಾನಗಳನ್ನು ಸಾಮಾನ್ಯವಾಗಿ ರಾಜಕಾರಣಿಗಳೇ ಅಂದರೆ ಪ್ರಧಾನಿ, ರಾಷ್ಟ್ರಾಧ್ಯಕ್ಷ ಇಂತಹ ಸ್ಥಾನಗಳಲ್ಲಿರುವವರು ಆಕ್ರಮಿಸಿರುತ್ತಾರೆ. ಇಷ್ಟಕ್ಕೂ ಪ್ರಭಾವಿ, ಬಲಶಾಲಿ ಎನಿಸಿಕೊಳ್ಳಲು ಹಣವೊಂದೇ ಇದ್ದರೆ ಸಾಲದು. ಹಾಗಾಗಿ ಒಂದು ದೇಶದ ರಾಜಕೀಯ ಅಧಿಕಾರ, ಅರ್ಥವ್ಯವಸ್ಥೆ, ಸೇನೆ, ಅಧಿಕಾರಶಾಹಿ ವರ್ಗ ಮುಂತಾದುವುಗಳ ಮೇಲೆ ಹೊಂದಿರುವ ಹಿಡಿತ, ನಿಯಂತ್ರಣ ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಪ್ರಮುಖ ಅಂಶಗಳಾಗುತ್ತವೆ. ಜಗತ್ತಿನ ಪ್ರಮುಖ ಆರ್ಥಿಕಶಕ್ತಿಗಳಲ್ಲಿ ಒಂದಾಗಿರುವ ಭಾರತದ ಪ್ರಭಾವಿ ವ್ಯಕ್ತಿಗಳಿಗೂ ಸಹಜವಾಗಿಯೇ ಇದರಲ್ಲಿ ಸ್ಥಾನ ದಕ್ಕಬೇಕು ಹಾಗೂ ದಕ್ಕುತ್ತಲೂ ಇದೆ. ಹಾಗಾದರೆ ಭಾರತದಲ್ಲಿಯೇ ಅತ್ಯಂತ ಪ್ರಭಾವಿ ವ್ಯಕ್ತಿ ಯಾರು? ಯಾರಾಗಬೇಕಿತ್ತು? ಪ್ರಧಾನಿಯಲ್ಲವೆ? ಆದರೆ ಪ್ರಧಾನಿ ಬದಲು ಸೋನಿಯಾ ಗಾಂಧಿಯವರು ಏಕೆ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದಾರೆ?
2011ರ ಸಾಲಿನ ಪಟ್ಟಿಯಲ್ಲಿ ಆಕೆ ವಿಶ್ವದ 9ನೇ ಅತ್ಯಂತ ಬಲಿಷ್ಠ ವ್ಯಕ್ತಿ ಎಂದು ಫೋರ್ಬ್ಸ್ ಹೇಳಿದೆ!
ಚೀನಾ ಅಧ್ಯಕ್ಷ ಹು ಜಿಂಟಾವೋ ಮೊದಲ, ಅಮೆರಿಕ ಅಧ್ಯಕ್ಷ ಒಬಾಮ ಎರಡನೇ, ಸೌದಿ ಅರೇಬಿಯಾದ ರಾಜ ಅಲ್ ಸೌದ್ 3ನೇ, ಮುಂದುವರಿದ ರಷ್ಯಾ ಪ್ರಧಾನಿ ವ್ಲಾದಿಮಿರ್ ಪುಟಿನ್, ಜರ್ಮನ್ ಚಾನ್ಸೆಲರ್ ಏಂಜೆಲಾ ಮಾರ್ಕೆಲ್, ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್್ಗಳ ಸಾಲಿನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಬದಲು ಸೋನಿಯಾ ಗಾಂಧಿಯವರು ಕಾಣಿಸಿಕೊಳ್ಳುತ್ತಿರುವುದಾದರೂ ಏಕೆ ಹಾಗೂ ಹೇಗೆ? ಇಷ್ಟಕ್ಕೂ ಭಾರತವನ್ನು ಆಳುತ್ತಿರುವವರು ಯಾರು? ಮನಮೋಹನ್ ಸಿಂಗ್ ಅವರೋ, ಸೋನಿಯಾ ಗಾಂಧಿಯವರೋ? ಮನಮೋಹನ್ ಸಿಂಗ್ ಅವರಾಗಿದ್ದರೆ, ಅವರ ಮಾತೇ ಅಂತಿಮವಾಗಿದ್ದರೆ, ಸಂಪುಟ ಹಾಗೂ ಸರ್ಕಾರ ಅವರ ನಿಯಂತ್ರಣದಲ್ಲಿದ್ದರೆ ಸೋನಿಯಾ ಗಾಂಧಿಯವರು ಹೇಗೆ ಅತ್ಯಂತ ಪ್ರಭಾವಿ ವ್ಯಕ್ತಿ ಎನಿಸಿಕೊಳ್ಳುತ್ತಿದ್ದರು? 1999ರಲ್ಲಿ ವಿಜಯ್ ಕುಮಾರ್ ಮಲ್ಹೋತ್ರಾ ಎದುರು ದೇಶದಲ್ಲಿಯೇ ಅತ್ಯಂತ ಸುಶಿಕ್ಷಿತ ಲೋಕಸಭಾ ಕ್ಷೇತ್ರವಾದ ದಕ್ಷಿಣ ದೆಹಲಿಯಲ್ಲಿ ಸೋತಿದ್ದ ವ್ಯಕ್ತಿ ಡಾ. ಮನಮೋಹನ್ ಸಿಂಗ್. ಅವರೆಂದೂ ನೇರ ಚುನಾವಣೆಯಲ್ಲಿ ಗೆದ್ದವರಲ್ಲ, ಗೆಲ್ಲುವ ಸಾಮರ್ಥ್ಯವೂ ಅವರಿಗಿಲ್ಲ. ಹಾಗಿರುವಾಗ ಪ್ರಧಾನಿಗೆ ಸಂಪುಟದ ಮೇಲೆ ಯಾವ ನಿಯಂತ್ರಣವಿರಲು ಸಾಧ್ಯ? ಇವುಗಳಿಂದ ಸ್ಪಷ್ಟವಾಗುವುದೇನೆಂದರೆ ಸೋನಿಯಾ ಗಾಂಧಿಯವರ ಕೈಯಲ್ಲಿ ಈ ದೇಶದ ಜುಟ್ಟು, ಚುಕ್ಕಾಣಿ ಇದೆ. ಅದರ ಬಗ್ಗೆ ಯಾರ ತಕರಾರೂ ಇಲ್ಲ ಬಿಡಿ.
ಆದರೆ ಒಂದು ಸರ್ಕಾರದ ಮೇಲೆ ನಿಯಂತ್ರಣ ಹೊಂದಿದವರಿಗೆ ಜವಾಬ್ದಾರಿಗಳೂ ಇರುವುದಿಲ್ಲವೆ?
2004ರಲ್ಲಿ ಪ್ರಧಾನಿ ಸ್ಥಾನವನ್ನು ನಿರಾಕರಿಸುವ ನಾಟಕವಾಡಿದ ಸೋನಿಯಾ ಗಾಂಧಿಯವರು”ರಾಷ್ಟ್ರೀಯ ಸಲಹಾ ಮಂಡಳಿ'(ಎನ್್ಎಸಿ) ರಚನೆ ಮಾಡಿಕೊಂಡು ಅದರ ಅಧ್ಯಕ್ಷೆಯಾದಾಗಲೇ ಜವಾಬ್ದಾರಿಯಿಲ್ಲದ ಅಧಿಕಾರ ಚಲಾಯಿಸುವ ಅವರ ಉದ್ದೇಶ ಜನರಿಗೆ ಮನವರಿಕೆಯಾಗಿತ್ತು. ಅಂದಮಾತ್ರಕ್ಕೆ ಅವರ ಬೇಜವಾಬ್ದಾರಿಯನ್ನು ದೇಶವಾಸಿಗಳು ಸಹಿಸಿಕೊಳ್ಳಬೇಕಾದ ಅಗತ್ಯವೇನಿದೆ? 2004ರಿಂದ 2011ರವರೆಗೂ ಅದೆಷ್ಟು ಹಗರಣಗಳು ಸಂಭವಿಸಿದವು? ಯಾವ ಹಗರಣದ ವಿಷಯವಾಗಿ ಸೋನಿಯಾ ಗಾಂಧಿಯವರು ಬಾಯ್ತೆರೆದಿದ್ದಾರೆ? ಯಾವ ಹಗರಣದ ಸಲುವಾಗಿ ವೈಯಕ್ತಿಕ ಜವಾಬ್ದಾರಿ ಹೊತ್ತಿದ್ದಾರೆ ಹೇಳಿ? 2004ರಲ್ಲಿ ಯುಪಿಎ ಅಧಿಕಾರಕ್ಕೆ ಬಂದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆತಗ್ಗಿಸುವಂತೆ ಮಾಡಿದ ಇರಾಕ್್ಗೆ ಸಂಬಂಧಿಸಿದ “Oil-for-food” ಹಗರಣ ಸಂಭವಿಸಿತು. ಆಗಿನ ವಿದೇಶಾಂಗ ಸಚಿವ ನಟವರ್ ಸಿಂಗ್ ಅವರನ್ನು ಮನೆಗೆ ಕಳುಹಿಸಿ ತಿಪ್ಪೆ ಸಾರಿಸಿದರು. 2009ರಲ್ಲಿ ಮರು ಆಯ್ಕೆಯಾದ ನಂತರವಂತೂ ಹಗರಣಗಳ ಸಾಲೇ ಸೃಷ್ಟಿಯಾಗಿದೆ. 2ಜಿ ಲೂಟಿ, ಕಾಮನ್ವೆಲ್ತ್ ಹಗರಣ, ಆದರ್ಶ ಹೌಸಿಂಗ್ ಸೊಸೈಟಿ ಹಗರಣ, ಲಾವಾಸಾ ಹಗರಣ, ಕ್ಯಾಶ್ ಫಾರ್ ಓಟ್ ಇವುಗಳಿಗೆಲ್ಲ ಯಾರು ಹೊಣೆ? ಈ ಪ್ರಧಾನಿಗಂತೂ ಪತ್ರಿಕಾ ಸಂಪಾದಕರು, ಸುದ್ದಿ ಚಾನೆಲ್್ಗಳ ಮುಖ್ಯಸ್ಥರ ಪತ್ರಿಕಾಗೋಷ್ಠಿ ನಡೆಸಿ ಮೊಸಳೆ ಕಣ್ಣೀರು ಸುರಿಸುವುದಷ್ಟೇ ಗೊತ್ತು. ಅದಿರಲಿ, ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷೆಯ ಅನುಮೋದನೆ ಇಲ್ಲದೆ ಯಾವುದಾದರೂ ಪಾಲಿಸಿ ಡಿಸಿಷನ್್ಗಳನ್ನು ತೆಗೆದುಕೊಳ್ಳಲು, ಅನ್ಯ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಾಧ್ಯವೆ?
ಅಮೆರಿಕದ ಜತೆಗಿನ ನಾಗರಿಕ ಅಣು ಸಹಕಾರ ಒಪ್ಪಂದವನ್ನು ತೆಗೆದುಕೊಳ್ಳಿ. ಅದಕ್ಕಾಗಿ ಸರ್ಕಾರವನ್ನೇ ಅಪಾಯಕ್ಕೆ ದೂಡಿಕೊಳ್ಳುವಂತಹ ಜರೂರತ್ತು ಏನಿತ್ತು? ಇಂತಹ ಅಪಾಯವನ್ನು ಮೈಗೆಳೆದುಕೊಳ್ಳುವ ಹಿಂದೆ ಲಾಭದ ಲೆಕ್ಕಾಚಾರವಿರಲಿಲ್ಲ ಎಂದು ಹೇಗೆತಾನೇ ನಂಬುವುದು? 1.76 ಸಾವಿರ ಕೋಟಿ ರೂ.ಗಳ 2ಜಿ ಹಗರಣವನ್ನೇ ಮುಚ್ಚಿಹಾಕಲು, ಕಪಿಲ್ ಸಿಬಲ್ ಅವರನ್ನು ಮುಂದೆ “Zero Loss” ಎಂದು ಲಜ್ಜೆ ಬಿಟ್ಟು ಪ್ರತಿಪಾದಿಸಲು ಮುಂದಾದ ಉದಾಹರಣೆ ಇರುವಾಗ ನಾಗರಿಕ ಅಣುಸಹಕಾರ ಒಪ್ಪಂದದಿಂದಲೂ ಭಾರೀ ಲಾಭವಾಗುವ ಕಾರಣವಿತ್ತು ಎಂಬ ಅನುಮಾನ ಮೂಡುವುದಿಲ್ಲವೆ? ಇಷ್ಟಕ್ಕೂ ಈ ಒಪ್ಪಂದಲ್ಲಿ ತೊಡಗಿರುವ ಹಣದ ಪ್ರಮಾಣವೆಷ್ಟು? ಭಾರತ ಒಟ್ಟು 10 ಹೊಸ ಅಣುಸ್ಥಾವರಗಳನ್ನು ನಿರ್ಮಾಣ ಮಾಡಬೇಕು. ಒಂದೊಂದರ ನಿರ್ಮಾಣಕ್ಕೂ 4 ಶತಕೋಟಿ ಡಾಲರ್ ವೆಚ್ಚವಾಗುತ್ತದೆ. ಇವುಗಳಲ್ಲಿ ಸಿಂಹಪಾಲು ಅಮೆರಿಕದ ಕಂಪನಿಗಳ ಪಾಲಾಗಲಿದ್ದು ಕನಿಷ್ಠ 20 ಶತಕೋಟಿ ಡಾಲರ್ ಮೌಲ್ಯದ ವ್ಯಾಪಾರ ಅಲ್ಲಿನ ಕಂಪನಿಗಳಿಗೆ ದೊರೆಯುತ್ತದೆ. ಇಷ್ಟೆಲ್ಲಾ ಖರ್ಚು ಮಾಡಿದರೂ ಭಾರತದ ಒಟ್ಟಾರೆ ಅಗತ್ಯದ ಶೇ. 4ರಷ್ಟು ವಿದ್ಯುತ್ ಮಾತ್ರ ಅಣುಶಕ್ತಿಯಿಂದ ದೊರೆಯುತ್ತದೆ. ಹಾಗಿರುವಾಗ ಇಂತಹ ಒಪ್ಪಂದಕ್ಕಾಗಿ ಸರ್ಕಾರವನ್ನೇ ಒತ್ತೆಯಾಗಿಡಲು ಹೊರಟಿದ್ದೇಕೆ? ಅದರ ಬೆನ್ನಲ್ಲೇ ಸಂಸತ್ತಿನಲ್ಲಿ ನಡೆದಿದ್ದೇನು? ಓಟಿಗಾಗಿ ನೋಟು (ಕ್ಯಾಶ್ ಫಾರ್ ಓಟ್) ಹಗರಣ ಯಾರ ಸರ್ಕಾರ ಉಳಿಸಿಕೊಳ್ಳುವುದಕ್ಕೆ ನಡೆಯಿತು? ಹಣ ಕೊಟ್ಟ ದಲ್ಲಾಳಿ ಅಮರ್ ಸಿಂಗ್ ಇರಬಹುದು, ಹಣವನ್ನು ಪೂರೈಸಿದವರು ಯಾರು? ಹಾಗೆ ಅನೈತಿಕ ಮಾರ್ಗದಿಂದ ಸರ್ಕಾರ ಉಳಿಸಿಕೊಳ್ಳುವುದರ ಹಿಂದೆ ಇದ್ದ ಅಂತಿಮ ಫಲಾನುಭವಿಗಳು ಯಾರು? ಒಂದು ವೇಳೆ ಸೋನಿಯಾ ಗಾಂಧಿಯವರು ಬೇಡ ಎಂದಿದ್ದರೆ ಆ ಒಪ್ಪಂದ ಮಾಡಿಕೊಳ್ಳಲು ಮನಮೋಹನ್ ಸಿಂಗ್ ಮುಂದಾಗುತ್ತಿದ್ದರೆ? ಇನ್ನು ಕಳೆದ ಚಳಿಗಾಲದ ಅಧಿವೇಶನದ ವೇಳೆ 2ಜಿ ಲೂಟಿಗೆ ಸಂಬಂಧಿಸಿದರೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆಗೆ ಪ್ರತಿಪಕ್ಷಗಳು ಒತ್ತಾಯ ಮಾಡಿದಾಗ ಸಂಸತ್ತಿನ ಕಲಾಪವನ್ನೇ ಬಲಿಕೊಟ್ಟು ಬೇಡಿಕೆಯನ್ನು ತಿರಸ್ಕರಿಸಲು ಕಾರಣವೇನಿತ್ತು?
ಇಲ್ಲಿ ಇನ್ನೊಂದು ವಿಚಾರವನ್ನು ಹೇಳಬೇಕು. ಅನುಮಾನಗಳಿಗೆ ಪುಷ್ಠಿಕೊಡುವಂತೆ ಅಮೆರಿಕದಲ್ಲಿರುವ ಎನ್್ಆರ್್ಐ ನಾರಾಯಣ್ ಕಟಾರಿಯಾ ಎಂಬವರು”ದಿ ನ್ಯೂಯಾರ್ಕ್ ಟೈಮ್ಸ್್’ ಪತ್ರಿಕೆಗೆ ಸೋನಿಯಾ ಅವರ ವಿರುದ್ಧ ಆರೋಪಗಳ ಸರಮಾಲೆ ಹೊತ್ತ ಜಾಹೀರಾತು ನೀಡಿದರು. ಅವರ ವಿರುದ್ಧ ಕಾಂಗ್ರೆಸ್ ಪಕ್ಷ 200 ದಶಲಕ್ಷ ಡಾಲರ್ ಮಾನನಷ್ಟ ಮೊಕದ್ದಮೆ ಹೂಡಿತು. ಆದಾಗ್ಯೂ ಸೋನಿಯಾ ಗಾಂಧಿಯವರು ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ. ನ್ಯೂಯಾರ್ಕ್ ಸುಪ್ರೀಂ ಕೋರ್ಟ್್ನ ನ್ಯಾಯಾಧೀಶರಾದ ಎಮಿಲಿ ಗುಡ್್ಮ್ಯಾನ್ ಮೊಕದ್ದಮೆಯನ್ನು ವಜಾ ಮಾಡಿದರು. ಏಕೆಂದರೆ ತನ್ನ ಮಾನನಷ್ಟವಾಗಿದೆ ಎಂದು ಪ್ರತಿಪಾದಿಸಿದ ವ್ಯಕ್ತಿಯೇ ನ್ಯಾಯಾಲಯದ ಮುಂದೆ ಹಾಜರಾಗುವುದಕ್ಕಾಗಲಿ, ಪಾಟಿ ಸವಾಲು ಎದುರಿಸುವುದಕ್ಕಾಗಲಿ ಮುಂದೆ ಬರಲಿಲ್ಲ! ಏಕಾಗಿ? ಒಂದು ವೇಳೆ, ಆಕೆ ನ್ಯಾಯಾಲಯದ ಮುಂದೆ ಹಾಜರಾಗಿದ್ದರೆ ಯಾವ ರೀತಿ ತನ್ನ ಮಾನನಷ್ಟವಾಗಿದೆ ಎಂಬುದನ್ನು ವಿವರಿಸಬೇಕಾಗುತ್ತಿತ್ತು. ಆರೋಪಗಳು ನಿರಾಧಾರ ಎಂದು ಸಾಬೀತು ಮಾಡಬೇಕಾದ ಜವಾಬ್ದಾರಿ ಆಕೆಯದ್ದಾಗುತ್ತಿತ್ತು. ಈ ಘಟನೆ ಎಲ್ಲ ಅನುಮಾನಗಳಿಗೂ ಉತ್ತರ ರೂಪದಂತಿದೆ.
ಇಷ್ಟಾಗಿಯೂ ಎಲ್ಲರನ್ನೂ ಪ್ರಶ್ನಿಸುವ ಮಾಧ್ಯಮಗಳೂ ಇಂದು ಸೋನಿಯಾ ಗಾಂಧಿಯವರನ್ನಾಗಲಿ, ಅವರ ಪುತ್ರ ರಾಹುಲ್ ಗಾಂಧಿಯವರನ್ನಾಗಲಿ ಒಂದು ಕ್ಷಣಕ್ಕೂ ಪ್ರಶ್ನಿಸುವುದಿಲ್ಲ. ಅವರಿಂದ ಹೊಣೆಗಾರಿಕೆ ಕೇಳುವುದಿಲ್ಲ. ಇದು ನಿಜಕ್ಕೂ ಅಶ್ಚರ್ಯ ಹುಟ್ಟಿಸುತ್ತದೆ. ವಿಶ್ವದ ಅತ್ಯಂತ ಬಲಿಷ್ಠ ವ್ಯಕ್ತಿಗಳ ಪಟ್ಟಿಯಲ್ಲಿ ಸೇರಿಸುವಾಗ”ಫೋರ್ಬ್ಸ್್’ ಪತ್ರಿಕೆ ಸೋನಿಯಾ ಗಾಂಧಿಯವರು ರಾಜಕೀಯ, ಅರ್ಥವ್ಯವಸ್ಥೆ ಜತೆಗೆ ಮಾಧ್ಯಮಗಳ ಮೇಲೆ ಹೊಂದಿರುವ ಹಿಡಿತವನ್ನೂ ಗಣನೆಗೆ ತೆಗೆದುಕೊಳ್ಳುವುದೊಳಿತು!! ಇವತ್ತೇನಾದರೂ ಯಾರಾದರೂ ಸೋನಿಯಾ ಗಾಂಧಿಯವರನ್ನು, ಐದಾರು ವರ್ಷಗಳಲ್ಲಿ ಬಹುಕೋಟಿ ಒಡೆಯನಾಗಿರುವ ಅವರ ಅಳಿಯ ರಾಬರ್ಟ್ ವಾದ್ರಾ ಅವರನ್ನು ಪ್ರಶ್ನಿಸುತ್ತಿದ್ದರೆ, ಮೈಚಳಿ ಹುಟ್ಟಿಸುತ್ತಿದ್ದರೆ ಅದು ಡಾ. ಸುಬ್ರಹ್ಮಣ್ಯಂ ಸ್ವಾಮಿ ಮಾತ್ರ.
ಇದೇನೇ ಇರಲಿ, ಏಕೆ ಇವತ್ತು ಸೋನಿಯಾ ಗಾಂಧಿಯವರನ್ನು ನೇರವಾಗಿ ಪ್ರಶ್ನಿಸಬೇಕಾಗಿದೆಯೆಂದರೆ ಅವರ ಒಂದೊಂದು ನಡೆಗಳೂ ಅನುಮಾನಾಸ್ಪದವಾಗಿ ಪರಿಣಮಿಸುತ್ತಿವೆ, ಒಂದೊಂದು ಹಗರಣಗಳು ಸಂಭವಿಸಿದಾಗಲೂ ಸಂಶಯಾಸ್ಪದ ಮೌನಕ್ಕೆ ಶರಣಾಗುತ್ತಾರೆ. ಹೀಗೇಕೆ? ಇದರಿಂದ, ಬಹಳ ಐಶಾರಾಮಿ ಜೀವನ ನಡೆಸುವ ಸೋನಿಯಾ ಗಾಂಧಿಯವರೂ ಹಗರಣಗಳ ಫಲಾನುಭವಿಯಾಗಿರಬಹುದೆಂಬ ಶಂಕೆ ಮೂಡುವುದಿಲ್ಲವೆ?
ಅವರ ನಿಜವಾದ ಹೆಸರೠ‘ಎದà³à²µà²¿à²—ೆ ಅನà³à²¤à³Šà²¨à²¿à²¯ ಅಲà³à²¬à²¿à²¨ ಮೈನೋ’. ಅವರಿಗಿರà³à²µà³à²¦à³ ಇಟಲಿ ಪೌರತà³à²µ ಮತà³à²¤à³ ಅವರ ಪಾಸà³à²ªà³‹à²°à³à²Ÿà³ ನಲà³à²²à²¿ ಇರà³à²µ ಹೆಸರೠಕೂಡ ‘ಎದà³à²µà²¿à²—ೆ ಅನà³à²¤à³Šà²¨à²¿à²¯ ಅಲà³à²¬à²¿à²¨ ಮೈನೋ’, ಅವರೠà²à²¾à²°à²¤à³€à²¯ ಪೌರತà³à²µà²µà²¨à³à²¨à³ ಸà³à²µà³€à²•ರಿಸಿಯೇ ಇಲà³à²². ಅವರೠವಿಧà³à²¯à²¾à²à³à²¯à²¾à²¸ à²à²¦à²¨à³‡ ಕà³à²²à²¾à²¸à³ ಪಾಸà³.
ನೋಡಿ ನಮà³à²® ದೇಶದ ದೌರà³à²à²¾à²—à³à²¯…..
Why the hell peoples voting for congress?
Awessom boos…….there is end for all.
Pratap,
This artical is a fact.. nobody denies.
Please correct one thing, 1.76 ಸಾವಿರ ಕೋಟಿ ರೂ.ಗಳ alla.. adu 1.76 Laksha koti alawe?
nice article sir
Pratap sir,
well written article.. I have no doubt that this time congress will be defeated comprehensively!!.
God Bless India.
Bharat mata ki Jai!
She only responsible for all..
India nt needs itaki ka beti. .
U go sonia go. .
Hi Sir, this is very cool n slow poisoning article to dig burried subject for questioning suspected so called 9th super woman in the world. Every politician is not so cruel at inside heart corner but lust for silly aims for loved one’s dreams will turn into crocodile game for misusing situations to win for temperarly happiness.Ms.Soniyaji is so brilliant n most ambitious woman in the world therfore she is playing main role in the film of Indian political power n she knows with perfect directions to tackle uneducated people in our nation n with opponent party which has not yet grown on worth principles to prove her party defects to public with sharp edges to get tough result for forthcoming election.No one other powerfull woman not yet grown strongly to cross Soniyaji tactics n the Congress has many best politicians in such a place like co-singers hence credit goes to main singer only. BJP also not in best position to show its growth to the nation as it proved in the tenure of great Politician Mr.Atalji.Govt makes rules in golden words for paper subject only n they never come out from paper into one best action for national growth. If same political era runs further, sure India will see its worst history once again recalling famous Mr.Mohammmed Gajani tenure. Each nation growth is defined in terms of its annual growth of electricity in this world but our village lights will glow for only 6 hours per day n main cities also facing powercut in this year that too from October then what would be in the March n April month of peak summer. I feel my country is occupied as one of the forthcoming powerfull nation in its dream only but to prove it as it is right the India must provide 24 hours /365 days continous power with 1%inturruption, above better level health conditions for all, education for all n poverty must be within 3%. Political dias must dance accordingly to people wishes but our bad time is we will be danced accordingly political dance. We must be very alert while voting for right candidate then only possible to errase major errors of such powerfull dramas. so cool article to judge our future. Buddu.
It is clear that we Indians don’t know how to rule? We require some foreigner to rule us & that’s exactly what we are doing now. It is not the mistake of Sonia but is our mistake to entertain such a corrupt, mafia queen, shameless, irresponsible female as our super PM. Her contribution to our nation building is not only zero but it is -ve. remember! it is not that the majority Indiains have elected her party but due to the so called coalition politics she is enjoying the benefits. Our good old congress party politicians are fit to eat her shit & that is the only thing they are capable of! It is high time that people like Subramaniam Swamy should drag them to the courts & make ther cough up their ill gotten wealth. Otherwise our country is going to Dogs instead of prosperity.
Superb article………… In India no one has the guts to question d so called influenced personalities….. really shame on us.
nice one article
Very true pratapji…. Good article…
duddigaagi taayiyannu ada idoke hesalla ee congress mattu media davaru…
namma desha na naaveega kaapaada bekide
Please read this article
http://www.jaia-bharati.org/nicole-elfi/ni-godhra-ang.htm
ಪà³à²°à²¤à²¾à²ª ಸಿಂಹ ರವರ ಲೇಖನಿಗಳೠತà³à²‚ಬಾ ಅದà³à²¬à³à²¤. ಹೇಳà³à²µà³à²¦à²¨à³à²¨à³ ಅವರೠಯಾರ ಮà³à²²à²¾à²œà²¿à²—ೂ ಬೀಳದೇ ಹೇಳಿಯೇ ತೀರà³à²¤à³à²¤à²¾à²°à³†. ಕನà³à²¨à²¡ ಪà³à²°à² ದಲà³à²²à²¿ ಬರà³à²µ ಅವರ ಲೇಖನ ತಪà³à²ªà²¦à³‡ ಓದà³à²¤à³à²¤à³‡à²¨à³†. ಅವರ ತೀಕà³à²·à³à²£ ವಾದ ಬರವಣಿಗೆ ತà³à²‚ಬಾ ಇಷà³à²Ÿà²µà²¾à²—à³à²¤à³à²¤à²¦à³†. ಹೀಗೆ ನಿಮà³à²® ಬರವಣಿಗೆ ಮà³à²‚ದà³à²µà²°à³†à²¯à²²à²¿ ಮತà³à²¤à³ ಮà³à²–à³à²¯à²µà²¾à²—ಿ ರಾಜಕಾರಣಿಗಳ ಬಗà³à²—ೆ ಬರೆಯà³à²µà²¾à²— ನಿಮà³à²® ಲೇಖನ ಇನà³à²¨à³‚ ಹರಿತವಾದ ಶಬà³à²¦à²—ಳಿಂದ ಕೂಡಿರಲಿ ಎಂದೠಕೋರಿಕೆ. à²à²•ಂದರೆ ಲೇಖನಿ ಖಡà³à²—ಕà³à²•ಿಂತಲೂ ಹರಿತವಾದದà³à²¦à³ ಅಲà³à²²à²µà³‡. à²à²¨à²‚ತೀರ?…
Very nice article… The people are very irresponsible in selecting Congress… Sonia is direct responsible for all these.. and to cover up that she is using such a bad bad politician Digvijay Singh…. Its a big shame for India where PM not in the list and his hykamand is in the Forbes list…
Dear Pratap,
Very nice article well written. Actually entire India (educated people who reads news paper daily) knows about this very well But nobody speaks out and our media forget about it.
I feel this generation is atleast aware of whats happeneing around. I feel one day these thugs will be kicked out of India
~Srinath
nothing better can happen unless otherwise people act correctly
Yes u r true…….. pratap
But what we can do for another 2 yrs. we have to wait thats it.
At any condition in nxt election congress should not win.
Do something for that…… Please Please Please Please Please Please Please Please Please Please Please Please Please Please Please Please Please Please Please Please Please Please Please Please Please Please Please Please Please Please
Really sir very nice article……….
Dear pratap sir…
Really Super article…
Sir, i m not able to download yours Bettale Jagattu Book 1,2,3 & 4 ,
what to do Sir , please sir , Reply me
i want to Read those books also……!
Nice article Prathap…. its our fault that v selected that congress govt…who didnt do anything for us… only busy in making “HAGARANAS”&”MONEY”… i think this is right time to wake up all indians… support good govt..either in feature its very difficult to servive… “JAGO JANATHA JAGO”
Once again we are loosing the indipendence
did really sonia gandhi go for treatment to America? After return, how she suddenly started to speak about swizz bank black money so boldly? I doubt about this.
NICE ARTICLE PRATAP
NICE ARTICLE
bekkina koralige Ghante kattoru yaru ??? 🙂
TRUTHS BEHIND THE CURTAINS ARE BITTER. THESE THIRD NATIONAL MEDIAS SHOW TOO MUCH INTEREST IN SPOILING INDIAN YOUTH, INDIAN CULTURE. BUT COULD NOT DARE TO BROADCAST THE CORRUPTION OF THE SO CALLED GANDHI FAMILY………………………SHAME ON MEDIAS
As you told why nobody criticise Sonia and Rahul?Most of the people admire and boost up their charishma.Why we people are weak and think and treat this people as a super human beings?
nice one….. all indian’s want to know thissss
nice one…….
lion always lion wherever and whenever (vijay karnataka or kannada prabha)
m waiting for bettale jagattu 11 please release soon sir
NO dictator will survive…… the end of the dictators would be cruel. Eg: Hitler, Sadam, Gadafi. Do not forget the case of Mrs. Indira Gandhi, begining always has got end. Sonia, Rahul all will get what they deserve someday
Superb……! Prathap Awesom article, keep the spirit forever!
ELla dudigagi, SG is not an Indian, she is just looting everything 4m here aste, and our people are just dump and supporting. this country is in need of real patriots.
Prathap sir ,excellent article . Really a painful thing about our country india is this,on those days Britishers told that “Indians are fit to be ruled not to rule”,but we still not come out from this.The only solution for this is in the hands of people of India,that to youths.The future of India is in the hands of youths.we must change our country.
And please provide downloading links to download these articles please this is a humble request from a honest Indian to you sir.
finally hats off to you sir………………….
Hai prathap sir
Nice article…….
Hats off you sir…
soniya gandhi and rahul gandhi sayovaregu namma desha uddaraagalla
Dear Mr Simha,
Your name contains PRATAP and Simha both synonymous for courage, and you are so. However, i strongly feel that u need protection, if u antogonise powerful people. Dont announce your movements and change your plans very fast and dont discuss your plans on phone… We need you to be hale and healthy to serve our country.
May god bless you and India
Best regards
Really very nice and effect full article.
Thanks Prathp.