*/
Date : 30-10-2011, Sunday | 35 Comments
ಅವರನ್ನು Maverick ಎನ್ನಿ, Eccentric ಅಂತ ಕರೆಯಿರಿ, ವಿವಾದಪ್ರಿಯ ಎಂದರೂ ತಪ್ಪಿಲ್ಲ, ಕೆಲವೊಮ್ಮೆ ವಿಘ್ನಸಂತೋಷಿ ಎಂಬ ಭಾವನೆ ಮೂಡಿದರೂ ಆಶ್ಚರ್ಯವಾಗದು. ಅವರು ಈ ಎಲ್ಲವೂ ಹೌದು. ಅಟಲ್ ಬಿಹಾರಿ ವಾಜಪೇಯಿ, ಜಯಲಲಿತಾ, ರಾಮಕೃಷ್ಣ ಹೆಗಡೆ, ವಿಪಿ ಸಿಂಗ್, ಚಂದ್ರಶೇಖರ್್ರಿಂದ ಎ. ರಾಜಾ, ಟಿ.ಅರ್. ಬಾಲು, ಕರುಣಾನಿಧಿ, ಚಿದಂಬರಂ ಹಾಗೂ ಸೋನಿಯಾ ಗಾಂಧಿವರೆಗೆ ಯಾರನ್ನೂ ಕಾಡದೆ ಬಿಟ್ಟಿಲ್ಲ, ಬಿಡುವ ಜಾಯಮಾನವೂ ಅವರದ್ದಲ್ಲ. ಈ ಸುಬ್ರಹ್ಮಣ್ಯನ್ ಸ್ವಾಮಿಯವರು “How to Make Enemies and Antagonise People?’ ಎಂಬ ಪುಸ್ತಕವನ್ನೇ ಬರೆಯಬಹುದು ಎಂದು ಪತ್ರಕರ್ತ ಪ್ರೇಮ್ ಪಣಿಕ್ಕರ್ ಒಮ್ಮೆ ಕಿಚಾಯಿಸಿದ್ದರು. ಈ ವ್ಯಕ್ತಿ ಯಾವಾಗ ನಿಮ್ಮ ಸ್ನೇಹಿತರಾಗಿರುತ್ತಾರೆ, ಯಾವಾಗ ನಿಮ್ಮ ವಿರುದ್ಧವೇ ತಿರುಗಿ ಬೀಳುತ್ತಾರೆ ಎಂದು ಯಾರಿಗೂ ಗೊತ್ತಾಗುವುದಿಲ್ಲ, ಸ್ವತಃ ಅವರೂ ಸೇರಿದಂತೆ! ಒಮ್ಮೆ, ಎಲ್್ಟಿಟಿಇ ಬಗ್ಗೆ ಮೃದುಧೋರಣೆ ತೋರುತ್ತಿರುವ ಮುಖ್ಯಮಂತ್ರಿ ಜಯಲಲಿತಾ ನನ್ನ ಕೊಲೆಗೈಯ್ಯಲು ಒಂದು ಡಜನ್್ಗೂ ಹೆಚ್ಚು ಭಾರಿ ಪ್ರಯತ್ನಿಸಿದ್ದಾರೆ, ಪಿತೂರಿ ನಡೆಸಿದ್ದಾರೆ ಎಂದು ಗುರುತರ ಆರೋಪ ಮಾಡಿದ್ದ ಅವರು, 1998ರ ವೇಳೆಗೆ ಜಯಲಲಿತಾ ಅವರ ಪರಮಾಪ್ತರಾಗಿ ಬಿಟ್ಟಿದ್ದರು! ಅಷ್ಟೇಕೆ, 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಮೊಟ್ಟಮೊದಲ ಭಾರಿಗೆ ಸ್ಥಿರ ಸರ್ಕಾರ ರಚಿಸಲು ಮುಂದಾದಾಗ ಎನ್್ಡಿಎ ಮೈತ್ರಿಕೂಟ ಸೇರಿದ ಎಐಎಡಿಎಂಕೆ ಧುರೀಣೆ ಜಯಲಲಿತಾ ಅವರು ಸುಬ್ರಹ್ಮಣ್ಯನ್ ಸ್ವಾಮಿಯವರನ್ನು ಕ್ಯಾಬಿನೆಟ್್ಗೆ ತೆಗೆದುಕೊಳ್ಳಬೇಕೆಂಬ ಬೇಡಿಕೆ ಇಟ್ಟು ಬಿಟ್ಟರು!! ಬಿಜೆಪಿಗೆ ಒಂಥರಾ ಬಿಸಿ ತುಪ್ಪವಾಗಿ ಬಿಟ್ಟಿತು. ಆದರೆ ಸುಬ್ರಹ್ಮಣ್ಯನ್ ಸ್ವಾಮಿಯಂಥವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದೆಂದರೆ ಬಗಲಿಗೆ ಕೆಂಡ ಕಟ್ಟಿಕೊಂಡಂತೆ ಎಂಬುದು ಅದಕ್ಕೆ ಚೆನ್ನಾಗಿ ಗೊತ್ತಿತ್ತು. ಈ ಮನುಷ್ಯ ಸುಮ್ಮನೆ ಇರುವವನಲ್ಲ, ಸ್ನೇಹಿತನಾಗಿದ್ದಾಗ ಸಾಕ್ಷ್ಯ ಕಲೆಹಾಕಿ ಸ್ನೇಹ ಕಡಿದುಹೋದ ಮೇಲೆ ಮೈಮೇಲೆ ಎಗರಿ ಬರುತ್ತಾನೆ ಎಂಬುದನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡ ವಾಜಪೇಯಿ, ಸರ್ಕಾರ ರಚಿಸಲು ಸಾಧ್ಯವಾಗದಿದ್ದರೂ ಪರವಾಗಿಲ್ಲ, ಸುಬ್ರಹ್ಮಣ್ಯನ್ ಸ್ವಾಮಿ ಮಾತ್ರ ಬಿಲ್್ಕುಲ್ ಬೇಡವೆಂದರು. ಅಂತಿಮವಾಗಿ ಸರ್ಕಾರವೇನೋ ರಚನೆಯಾಯಿತು, ಅದರ ಬೆನ್ನಲ್ಲೇ ಸುಬ್ರಹ್ಮಣ್ಯನ್ ಸ್ವಾಮಿ ಅವರ ಟೀಕಾ ಪ್ರಹಾರವೂ ಆರಂಭವಾಯಿತು.
‘ಬಿಜೆಪಿ ಸರ್ಕಾರ ಅಮೆರಿಕದ ಎನ್ರಾನ್್ಗೆ ಅನುಮತಿ ಕೊಟ್ಟಿದ್ದೇಕೆ? ಹದಿಮೂರು ದಿನಗಳ ಕಾಲ ಪ್ರಧಾನಿಯಾಗಿದ್ದ ಅವಧಿಯಲ್ಲಿ ವಾಜಪೇಯಿಯವರೇ ಎನ್ರಾನ್ ಯೋಜನೆಗೆ ಯೆಸ್ ಎಂದರು, ಏಕೆ? ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಿಜೆಪಿಗರು ಕೋಕಾ ಕೋಲಾ ಕುಡಿಯುವುದೇಕೆ? ಕೋಲಾ ಬದಲು ನಿಂಬೆ ರಸ ಹೀರಬಹುದಿತ್ತಲ್ಲವೆ?’
ಇಂತಹ ಹತ್ತಾರು ಪ್ರಶ್ನೆಗಳನ್ನು ಹಾಕಿ ಬಿಜೆಪಿಯನ್ನು ಸಾರ್ವಜನಿಕವಾಗಿ ಮುಜುಗರಕ್ಕೀಡುಮಾಡಲು ಪ್ರಯತ್ನಿಸಿದರು. ಅದಕ್ಕೂ ಮೊದಲು ವಿ.ಪಿ. ಸಿಂಗ್ ಅವರನ್ನು ಹಣಿಯುವುದಕ್ಕಾಗಿ ಯಾವ ವ್ಯಕ್ತಿಯ ವಿರುದ್ಧ ಆ ಹಿಂದೆ ತೀವ್ರ ಹೋರಾಟ ನಡೆಸಿದ್ದರೋ ಅದೇ ಚಂದ್ರಶೇಖರ್ ಅವರ ಪಕ್ಷ ವಹಿಸಿದ್ದರು. ಸುಬ್ರಹ್ಮಣ್ಯನ್ ಸ್ವಾಮಿಯವರ ನಿಘಂಟಿನಲ್ಲಿ ನಿಷ್ಠೆ, ಬದ್ಧತೆಗಳಿಗೆ ಸ್ಥಾನವೇ ಇರಲಿಲ್ಲ. ಇಂತಹ ವಿಚಿತ್ರ, ಕೆಲವೊಮ್ಮೆ ವಿಕ್ಷಿಪ್ತ ಮನಃಸ್ಥಿತಿಗಳ ನಡುವೆಯೂ ಅವರು ಸರ್ಕಾರಗಳನ್ನು ಮುಜುಗರಕ್ಕೀಡುಮಾಡಿದ್ದು, ಪತನಕ್ಕೆ ಕಾರಣವಾಗಿದ್ದು ಇದೆ. ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನು ಬೆಳಕಿಗೆ ತಂದು ರಾಮಕೃಷ್ಣ ಹೆಗಡೆಯವರ ಸರ್ಕಾರ ಬೀಳುವುದಕ್ಕೆ ಕಾರಣರಾಗಿದ್ದೇ ಸುಬ್ರಹ್ಮಣ್ಯನ್ ಸ್ವಾಮಿ. ಅವರು ಹೊಸ ಹೊಸ ಪದಗುಚ್ಚಗಳನ್ನು ಹುಟ್ಟುಹಾಕಿದ್ದೂ ಇದೆ. ರಾಮಕೃಷ್ಣ ಹೆಗಡೆಯವರ ಮನಃಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಅವರು ‘Intellectual Constipation’ನಿಂದ ನರಳುತ್ತಿದ್ದಾರೆ ಎಂದಿದ್ದರು. ಅವರನ್ನು ಯಾರೂ ತನ್ನ ಸ್ನೇಹಿತನೆಂದು ಭಾವಿಸುವುದಕ್ಕಾಗಲಿ, ನಂಬುವುದಕ್ಕಾಗಲಿ, ವಿಶ್ವಾಸವಿಡುವುದಕ್ಕಾಗಲಿ ಸಾಧ್ಯವಿಲ್ಲ ಎಂಬಂಥ ಪರಿಸ್ಥಿತಿಯನ್ನು ತಾವೇ ಸೃಷ್ಟಿಸಿಕೊಂಡಿದ್ದರು. ಒಂದು ಹಂತದಲ್ಲಂತೂ ಅವರೊಬ್ಬ ಸಿನಿಕ ಎಂದೇ ದೇಶವಾಸಿಗಳು ಭಾವಿಸುವಂತಾಗಿತ್ತು.
ಇಂತಹ ಸುಬ್ರಹ್ಮಣ್ಯನ್ ಸ್ವಾಮಿ ಒಮ್ಮೆಲೆ ಬದಲಾಗಿಬಿಟ್ಟರೆ?!
ಅಂಥದ್ದೊಂದು ಅನುಮಾನ ಈಗೀಗ ಕಾಡಲಾ ರಂಭಿಸಿದೆ. ಅವರ ಹಳೆಯ ತಿಕ್ಕಲುತನಗಳ ನಡುವೆಯೂ ಅವರನ್ನು ನಾವು ಇಷ್ಟಪಡಲು ಸಾಕಷ್ಟು ಕಾರಣಗಳು ಸೃಷ್ಟಿಯಾಗುತ್ತಿವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಹೊಸದೊಂದು ಸೂಚನೆಯೇ ನಮಗೆ ಸಿಗುತ್ತಿದೆ. ಎಪ್ಪತ್ತೆರಡು ವರ್ಷದ ಅವರ ನಡತೆಯಲ್ಲಿ ಆಹ್ಲಾದಕರ, ಆಪ್ಯಾಯಮಾನವಾದ ಬದಲಾವಣೆಗಳು, ಅದರಿಂದ ಸಮಾಜ ಮತ್ತು ದೇಶಕ್ಕೆ ಒಳಿತಾಗುವ ಲಕ್ಷಣಗಳು ಕಾಣುತ್ತಿವೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ, ಪಿಎಚ್್ಡಿಯನ್ನೂ ಮಾಡಿರುವ, ಇಬ್ಬರು ನೊಬೆಲ್ ಪುರಸ್ಕೃತರ ಜತೆ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಸುಬ್ರಹ್ಮಣ್ಯನ್ ಸ್ವಾಮಿ ಅವರ ಜ್ಞಾನ, ತಿಳಿವಳಿಕೆಯ ಲಾಭ ದೇಶ ಮತ್ತು ಸಮಾಜಕ್ಕೆ ಲಭ್ಯವಾಗುವ ಎಲ್ಲ ಸಂಕೇತಗಳೂ ಗೋಚರಿಸುತ್ತಿವೆ. ಅವರು ರಾಜಕೀಯದೊಳಗಿದ್ದುಕೊಂಡು ಭ್ರಷ್ಟಾಚಾರದ ವಿರುದ್ಧ ‘ಕ್ರುಸೇಡರ್್’ ಆಗಿ ಹೊರಹೊಮ್ಮಿದ್ದಾರೆ, ಪ್ರತಿಪಕ್ಷ ಬಿಜೆಪಿಗಿಂತ ಒಬ್ಬ ಸುಬ್ರಹ್ಮಣ್ಯನ್ ಸ್ವಾಮಿ ಇವತ್ತು ಕೇಂದ್ರ ಸರ್ಕಾರಕ್ಕೆ ಅತಿದೊಡ್ಡ ಕಂಟಕವಾಗಿ ಪರಿಣಮಿಸಿದ್ದಾರೆ. ಇಷ್ಟಕ್ಕೂ ಅವರು ಕೇಂದ್ರ ಸರ್ಕಾರವನ್ನು ಮಟ್ಟಹಾಕಿದ, ಸೊಕ್ಕಡಗಿಸಿದ, ನಿದ್ದೆಗೆಡಿಸಿದ ಘಟನೆಗಳಾವುವು ಅಂದುಕೊಂಡಿರಿ?
1. ರಾಮನ ಹೆಸರಿನಲ್ಲಿ ರಾಜಕೀಯ ಮಾಡಿದ್ದು, ವೋಟು ಬೇಡಿದ್ದು, ಕೊನೆಗೆ ಅಧಿಕಾರದ ಗದ್ದುಗೆ ಏರಿದ್ದು ಬಿಜೆಪಿ. ಆದರೆ ಅದೇ ರಾಮನ ಸೇತುವೆಯನ್ನು ಯುಪಿಎ ಸರ್ಕಾರ ಹಾಗೂ ಕರುಣಾನಿಧಿಯವರ ತಮಿಳುನಾಡು ಸರ್ಕಾರ 2007ರಲ್ಲಿ ನಾಶಪಡಿಸಲು ಹೊರಟಾಗ ಬಿಜೆಪಿ ಬೊಬ್ಬೆ ಹಾಕಿತೇ ಹೊರತು, ಬೇರೇನನ್ನೂ ಮಾಡಲಿಲ್ಲ. ಅಂದು ರಾಮಸೇತುವಿನ ರಕ್ಷಣೆಗೆ ಮುಂದಾಗಿದ್ದು ಇದೇ ಸ್ವಾಮಿ. ಸೇತು ಸಮುದ್ರ ಹಡಗು ಕಾಲುವೆ ಯೋಜನೆಯನ್ನು ಕೈಬಿಡುವಂತೆ ಸುಬ್ರಹ್ಮಣ್ಯನ್ ಸ್ವಾಮಿಯವರು 2009ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದರು. ಆದರೆ ಅವರ ಪತ್ರವನ್ನು ಪ್ರಧಾನಿ ನಿರ್ಲಕ್ಷಿಸಿದಾಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸ್ವಾಮಿ, ಯೋಜನೆಗೆ ತಡೆಯಾಜ್ಞೆ ತಂದರು!
2. 1962ರ ಯುದ್ಧದ ನಂತರ ಭಾರತ-ಚೀನಾ ನಡುವಿನ ಸಂಬಂಧ ಸಂಪೂರ್ಣವಾಗಿ ಹಳಸಿ ಹೋಗಿತ್ತು. ಚೀನಾದ ಜತೆ ಮತ್ತೆ ರಾಜತಾಂತ್ರಿಕ ಸಂಬಂಧಕ್ಕೆ ಚಾಲನೆ ನೀಡಿದ್ದು ಮೊರಾರ್ಜಿ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಅಟಲ್ ಬಿಹಾರಿ ವಾಜಪೇಯಿ. ಆದರೆ ಟಿಬೆಟ್್ನಲ್ಲಿರುವ ಹಿಂದು ಧರ್ಮದ ಪವಿತ್ರ ಸ್ಥಳಗಳಾದ ಕೈಲಾಸ ಪರ್ವತ ಮತ್ತು ಮಾನಸ ಸರೋವರ ಯಾತ್ರೆಗೆ 1981ರಲ್ಲಿ ಚೀನಾ ಅವಕಾಶ ನೀಡುವಂತೆ ಮಾಡಿದ್ದು ಸುಬ್ರಹ್ಮಣ್ಯನ್ ಸ್ವಾಮಿಯವರ ಮನವೊಲಿಕೆ ಪ್ರಯತ್ನ.
3. ಇಸ್ರೇಲ್ ಜತೆ ರಾಜತಾಂತ್ರಿಕ ಸಂಬಂಧ ಆರಂಭಿಸಿದ್ದು ಮಾಜಿ ಪ್ರಧಾನಿ ನರಸಿಂಹ ರಾವ್, ಅದನ್ನು ಗಟ್ಟಿಗೊಳಿಸಿದ್ದು, ರಕ್ಷಣಾ ಒಪ್ಪಂದಗಳವರೆಗೂ ಕೊಂಡೊಯ್ದಿದ್ದು ಅಟಲ್ ಬಿಹಾರಿ ವಾಜಪೇಯಿ. ಆದರೆ 1982ರಲ್ಲಿ ಇಸ್ರೇಲ್್ಗೆ ಮೊಟ್ಟಮೊದಲ ಭಾರಿಗೆ ಭೇಟಿ ನೀಡಿದ ಭಾರತೀಯ ರಾಜಕಾರಣಿ ಸುಬ್ರಹ್ಮಣ್ಯನ್ ಸ್ವಾಮಿ. ಆಗಿನ ಖ್ಯಾತ ಇಸ್ರೇಲಿ ನಾಯಕ ಇಝೆಲ್ ರಬಿನ್, ಪ್ರಧಾನಿ ಮೆನಕಿಮ್ ಬೆಗಿನ್ ಅವರನ್ನು ಭೇಟಿಯಾಗುವ ಮೂಲಕ ಉಭಯ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧ ಸ್ಥಾಪನೆಗೆ ಪೂರಕ ಪ್ರಯತ್ನ ಮಾಡಿದರು.
4. ಇವೆಲ್ಲಕ್ಕಿಂತ ಮುಖ್ಯವಾಗುವುದು 2ಜಿ ಹಗರಣದ ಆಳ ಮತ್ತು ಹರವನ್ನು ತೆರೆದಿಡುವಲ್ಲಿ ಸ್ವಾಮಿ ವಹಿಸಿದ ಪಾತ್ರ. ಮಾಜಿ ಟೆಲಿಕಾಂ ಸಚಿವ ಎ. ರಾಜ ರಾಜಿನಾಮೆ ನೀಡಿದ್ದು 2011ರಲ್ಲಾಗಿದ್ದರೂ ಸುಬ್ರಹ್ಮಣ್ಯನ್ ಸ್ವಾಮಿ 2008ರಿಂದಲೇ ಆತನ ಹಿಂದೆ ಬಿದ್ದಿದ್ದರು, ಹಗರಣವನ್ನು ಬಯಲಿಗೆಳೆಯಲು ಪ್ರಯತ್ನಿಸಿದ್ದರು. ರಾಜ ಅವರನ್ನು ವಿಚಾರಣೆಗೆ ಗುರಿಪಡಿಸಬೇಕೆಂದು 2008ರಲ್ಲಿ ಬರೆದ 5 ಪತ್ರಗಳನ್ನು ಪ್ರಧಾನಿ ಕಸದ ಬುಟ್ಟಿಗೆ ಎಸೆದಾಗ, ನೇರವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸುಪ್ರೀಂಕೋರ್ಟ್ ರಾಜಾ ಸೇರಿದಂತೆ ಉದ್ಯಮ ಸಂಸ್ಥೆಗಳ ದೊಡ್ಡ ದೊಡ್ಡ ತಲೆಗಳ ಪಾತ್ರವನ್ನೂ ತಲಾಷ್ ಮಾಡಬೇಕೆಂದು ಸಿಬಿಐಗೆ ನಿರ್ದೇಶನ ನೀಡಿತು. ಅಲ್ಲದೆ ಸಿಬಿಐ ತನಿಖೆ ಮೇಲೆ ತಾನೇ ನಿಗಾ ಇಟ್ಟಿತು. ಅದರ ಪರಿಣಾಮವೇ ಇಂದು ಎಲ್ಲರೂ ತಿಹಾರ್ ಜೈಲು ಸೇರಿರುವುದು. ಹಾಗಂತ ಸ್ವಾಮಿ ಸುಮ್ಮನಾಗಲಿಲ್ಲ. ಹಾಲಿ ಗೃಹ ಸಚಿವ ಹಾಗೂ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಕೂಡ ರಾಜಾ ಜತೆ ಸಮಾನ ಪಾಲುದಾರ ಎಂದು ಚಿದಂಬರಂ ಅವರನ್ನೂ ಕಟಕಟೆಗೆ ಎಳೆದು ತರಲು ಸ್ವಾಮಿ ಮುಂದಾಗಿದ್ದಾರೆ. ಶಿವಗಂಗಾದಿಂದ ಅಕ್ರಮವಾಗಿ ಚುನಾಯಿತರಾಗಿದ್ದಾರೆಂದು ಚಿದಂಬರಂ ಆಯ್ಕೆಯನ್ನು ಪ್ರಶ್ನಿಸಿ ಕೋರ್ಟ್್ಗೂ ಹೋಗಿದ್ದಾರೆ. ಸೋನಿಯಾ ಗಾಂಧಿಯವರನ್ನೂ ಬಿಟ್ಟಿಲ್ಲ. ಸೋನಿಯಾ ಗಾಂಧಿಯವರನ್ನು ಒಬ್ಬ ಭ್ರಷ್ಟ ಮಹಿಳೆ ಎಂದು ಕರೆಯುವ, ಹಾಗೆ ಕರೆದೂ ಜಯಿಸುವ ತಾಕತ್ತು ಈ ದೇಶದಲ್ಲಿ ಯಾರಿಗಾದರೂ ಇದ್ದರೆ ಅದು ಸುಬ್ರಹ್ಮಣ್ಯನ್ ಸ್ವಾಮಿಯವರಿಗೆ ಮಾತ್ರ! ಸಾವಿರಾರು ಕೋಟಿ ರು.ಗಳನ್ನು ಆಕೆ ನುಂಗಿದ್ದಾರೆ ಎಂದು ಸ್ವಾಮಿ ಬಹಿರಂಗ ಆಪಾದನೆ ಮಾಡಿದ್ದಾರೆ. ಹೊಸ ದೆಹಲಿಯಲ್ಲಿರುವ ಅವರ ನಿವಾಸದ ಮೇಲೆ ಕಾಂಗ್ರೆಸ್ಸಿಗರು ದಾಳಿ ಮಾಡಿದ್ದರೂ ಸ್ವಾಮಿ ಸುಮ್ಮನಾಗಿಲ್ಲ.
ಈ ಮಧ್ಯೆ ಮುಂಬೈ ಭಯೋತ್ಪಾದಕ ದಾಳಿಯ ನಂತರ ಡಿಎನ್್ಎ ಪತ್ರಿಕೆಗೆ ಬರೆದ ‘ಹೌ ಟು ವೈಪ್್ಔಟ್ ಇಸ್ಲಾಮಿಕ್ ಟೆರರ್ರಿಸಂ’ ಎಂಬ ಅವರ ಲೇಖನ ‘ಸಿಕ್್’ಯುಲರ್್ವಾದಿಗಳಿಂದ ತೀವ್ರ ಟೀಕೆಗೆ ಒಳಗಾದರೂ ಸ್ವಾಮಿ ಸತ್ಯವಾದ ಮಾತುಗಳನ್ನಾಡಿದ್ದಾರೆ. ಕೇರಳದಲ್ಲಿ ತಲೆಯೆತ್ತುತ್ತಿರುವ ಇಸ್ಲಾಮಿಕ್ ಬ್ಯಾಂಕಿಂಗ್ ವಿರುದ್ಧ ಹೋರಾಡಿದ್ದೂ ಸ್ವಾಮಿಯವರೇ ಹೊರತು ಬಿಜೆಪಿಯಲ್ಲ. ಈ ಮಧ್ಯೆ, ಕಳೆದ ಮಂಗಳವಾರ ಯುಪಿಎ ಅಧ್ಯಕ್ಷೆ ಹಾಗೂ ರಾಷ್ಟ್ರೀಯ ಸಲಹಾ ಮಂಡಳಿಯ(ಎನ್್ಎಸಿ) ಮುಖ್ಯಸ್ಥೆ ಸೋನಿಯಾ ಗಾಂಧಿಯವರ ವಿರುದ್ಧ ದೆಹಲಿಯಲ್ಲಿ ಎಫ್್ಐಆರ್ ದಾಖಲಿಸಿದ್ದಾರೆ. ಆಕೆಯ ನೇತೃತ್ವದ ಎನ್್ಎಸಿ ತರಲು ಹೊರಟಿರುವ ಕೋಮುಹಿಂಸಾಚಾರ ತಡೆ ಕಾಯಿದೆ ಹಿಂದುಗಳಿಗೆ ಹೇಗೆ ಮಾರಕವಾಗಲಿದೆ ಮತ್ತು ಹಿಂದುಗಳನ್ನು ಹಣಿಯುವ ಉದ್ದೇಶ ಹೊಂದಿದೆ ಎಂಬುದನ್ನು ತಮ್ಮ ದೂರಿನಲ್ಲಿ ಪರಿ ಪರಿಯಾಗಿ ವಿವರಿಸಿದ್ದಾರೆ. ಹೀಗೆ ಅವರೊಬ್ಬ ಹಿಂದುಪರ ‘ಕ್ರೆಡಿಬಲ್ ವಾಯ್ಸ್್’ಆಗಿ ಹೊರಹೊಮ್ಮಿದ್ದಾರೆ. ಹಾಗಾಗಿ ರಾಷ್ಟ್ರವಾದಿಗಳ ಮನಸು ಮತ್ತು ಹೃದಯಕ್ಕೆ ಹತ್ತಿರವಾಗುತ್ತಿದ್ದಾರೆ. ಪ್ರಜಾತಾಂತ್ರಿಕ ಮಾರ್ಗದ ಮೂಲಕ, ಕೋರ್ಟ್್ಗೆಳೆಯುವ ಮೂಲಕ ಭ್ರಷ್ಟರನ್ನು ಮಟ್ಟಹಾಕುತ್ತಿದ್ದಾರೆ, ನಡುಕ ಹುಟ್ಟಿಸುತ್ತಿದ್ದಾರೆ. ಅವರ ಪಾಲಿಗೆ ‘ಸ್ವಾಹಾ’ ಕಾರ್ಯವನ್ನು ಬಯಲಿಗೆಳೆಯು ವುದೇ ‘ಸ್ವಾಮಿ’ಕಾರ್ಯ! ಅದು ಜಾರಿಯಲ್ಲಿರಲಿ.
Absurd Article.
Ella sari sonia mele fir haakirod yaava channel prachaara atava prasaara maadle illa!
Hi Pratap,
couldn’t able to download bettale jagattu 1,3,4 and 7.. pls fix the prob..
and i am keeping track of ur articles rt from VK and now changed our newspaper to KP.. some of ur articles gives immense energy, some boil our blood(like terrorism, politicians articles) and some are such soothing (ಕೃಪಾ ಅಗಲಿದಾಗ ಅಪà³à²ª ಮತà³à²¤à³† ಸತà³à²¤à²‚ತಾಯಿತà³!) articles tat we end up with emotions and some inspirational.. keep up the good work.
I have witnessed the proverb “pen is mightier than the sword” go true with ur articles..
Thank you,
Santhosh
Ha. . Subramanya swamyji is great person. . .
Thank u pratapji for giving great information…
Good one pratap ! congrates for kannada rajyostava award !!
Hi Pratap,
Congratulations for Rajyotsava award…
Superb artical
Congrats sir.
For being awarded kannada rajyotsava prize
Good Article …..
Hi Pratap…
Nice article…
ಈ ಬಾರಿಯ ಕನà³à²¨à²¡ ರಾಜà³à²¯à³Šà²¤à³à²¸à²µ ಪà³à²°à²¸à³à²•ಾರಕà³à²•ೆ ನೀವೠà²à²¾à²œà²¨à²°à²¾à²¦à²¦à³à²¦à³ ಬಹಳ ಸಂತೋಷದ ವಿಚಾರ. Keep writing all the very best…
Hi Pratap…
Nice article…
ಈ ಬಾರಿಯ ಕನà³à²¨à²¡ ರಾಜà³à²¯à³Šà²¤à³à²¸à²µ ಪà³à²°à²¸à³à²•ಾರಕà³à²•ೆ ನೀವೠà²à²¾à²œà²¨à²°à²¾à²¦à²¦à³à²¦à³ ಬಹಳ ಸಂತೋಷದ ವಿಚಾರ. Keep writing all the very best…
Good story, but we want more details about him….. y0our article says,, Mr Swamy is a not a frnd neither a enemy!!! its a confuse after reading this…
Nice Article.He is doing great things.
Congrats to you for winning Rajyotsava award at a very young age.
congratulation
Its Very nice article Sir
Good article pratap sir. Subhramanya swami worked better than oposition party.NDA waste time by speak about scams but subhramanya swami did the job what the people of India need. NDA fails againist subhramanya swami’s one man army. Shame on the part of NDA& other political party.
Thank you for the article on S.Swamy.
Editors like you can also be doing the research and bring protection to people.
Going beyond just publishing.
Your exposing BJPs impotence is noteworthy.
I have watched his programme with Rajiv Malhotra. Rajiv is the author of two recently published Books.
1. Breaking India
2. Being Different.
Both deserve your editorial attention Sir.
nice article…… but iam confused that, actually who brought 2G scam to world swamy or vinod roy?
A good introduction of a very dynamic, proactive and a patriotic person, who is one man army / opposition carrying out the whole job of a true opposition party.
many thanks pratap for this artical 🙂
congrats sir for getting such a prestigious award…..
great article sir
athmiy prathp nimma entha samakalin baravanigegalu nan antha saviraru yuvakarige dari deepvagali niminda ennstu ankangalu namma kannad prabha dlli barali . enti nimma abhimani . rajeevraddi
good one., expected long ago
Work of Mr. swamy is excellent. One thing I can’t understand even he is doing such a good work, why the people like Ramdev, Annaji, Ravishankar Guruji, RSS and BJP is not supporting him and not even appreciating him. It is shame on the part of people who speaks against corruption.
Subramanian swamy is one brave guy who campaigned against corrupt DMK and its ministers when Karuna was in power. Because of him, people of TN came to know the depth and width of 2G scam and subsequently which led the DMK to lose by a large margin in the state elections. Hope he continues his campaign against corrupt politicians who are looting our nation.
Thanks for an article on Subramanian Swamy.
Hats off to Mr. ‘SWAHA’ Swamy.
Excellent information. We need courageous people like swamy though he is eccentric.
Ab Hindhustan ko subramanya swamy jesa aadmi chayiye. Also pls let me know y these pepole are exposed in media. y the medias r hiding these issues from the Indians.
Thats y Anna Hazare say we need ” RIGHT TO INFROMATION”.
tnk u vry vry much for this article
Dear Pratap,
Congratulations to you for winning Rajyotsava award.
Please start writing something other than this politics and corruption. It has become too much in all the media.
Please write something adventurous.
very nice article. Congratulations to you for winning Rajyotsava award.
Good one sir…
FIR Registered against Sonia Gandhi….. Y these things are not published in media or in any news paper as they did when Aishwarya Rai conceived/Ready to deliver or any such an stupid news.
Once again, Thank You Very much for your Updates SIR….
super man
SIR,
Y CAN’T U WRITE A BOOK ON ‘NECESSITY OF YOUTH IN POLITICS’.
PLEASE TRY TO ENCOURAGE THE YOUTH. WE FELL VERY DIRT TO TALK ABOUT PRESENT POLITICS.
WE WANT CHANGE. THAT IS POSSIBLE ONLY BY MEDIA.
BYE
always we think the evelutionary on common people let them do it (corruption)and about corruption through politicians it is too much………………………………………………………………………….