Date : 01-10-2011, Saturday | 41 Comments
ನಾಳೆ ಗಾಂಧಿ ಜಯಂತಿ. ಕಳೆದ ಏಪ್ರಿಲ್್ನಲ್ಲಿ ಗಾಂಧಿವಾದಿ ಅಣ್ಣಾ ಹಜಾರೆಯವರು ಮೊದಲ ಬಾರಿಗೆ ಉಪವಾಸ ಕುಳಿತಂದಿನಿಂದ ಗಾಂಧೀಜಿ ಬಹುಚರ್ಚಿತ ವಿಷಯವಾಗಿಬಿಟ್ಟಿದ್ದಾರೆ. ಉಪವಾಸದಂತಹ ಗಾಂಧಿ ಮಾರ್ಗದ ಬಗ್ಗೆ ಕಾಂಗ್ರೆಸ್ಸೇ ಸಣ್ಣದಾಗಿ ಅಪಸ್ವರವೆತ್ತಿದ್ದನ್ನೂ ನಾವು ನೋಡಿದ್ದಾಯಿತು. ಇನ್ನು ಗಾಂಧೀಜಿಯವರನ್ನು ಮೆಚ್ಚುವವರ ಬಗಲಲ್ಲೇ ಟೀಕಿಸುತ್ತಾ ಬಂದವರೂ ಸಾಕಷ್ಟಿದ್ದಾರೆ. ಹಾಗೆ ಟೀಕಿಸಿದವರನ್ನು”ಗೋಡ್ಸೆ ಸಂಸ್ಕೃತಿ’ಯವರು ಎಂದು ಬಹಳ ಆಕ್ರಮಣಕಾರಿಯಾಗಿ ಹರಿಹಾಯುವವರೂ ನಮ್ಮ ನಡುವೆ ಇದ್ದಾರೆ. ಇಂಥದ್ದೊಂದು ಆಕ್ರೋಶ, ಕೋಪತಾಪ ಪ್ರದರ್ಶಿಸುವ ಗಾಂಧಿವಾದಿಗಳು, ಗಾಂಧಿ ಟೋಪಿಧಾರಿಗಳು ಗಾಂಧೀಜಿ ಪ್ರತಿಪಾದಿಸಿದ ಮೌಲ್ಯಗಳಿಗೆ ಎಷ್ಟರಮಟ್ಟಿಗೆ ಬದ್ಧರಾಗಿದ್ದಾರೆ? ತಮ್ಮ ಮಾತು-ನಡತೆಯಲ್ಲಿ ಗಾಂಧೀಜಿಯವರನ್ನು ಎಷ್ಟರ ಮಟ್ಟಿಗೆ ಅನುಸರಿಸುತ್ತಿದ್ದಾರೆ? ಇಷ್ಟಕ್ಕೂ ಮಹಾತ್ಮ ಗಾಂಧೀಜಿಯವರು ಯಾವ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದರು? ಯಾವ ವಿಚಾರಗಳಲ್ಲಿ ನಂಬಿಕೆ ಇಟ್ಟಿದ್ದರು? ಯಾವ ವಿಷಯಗಳನ್ನು, ಧೋರಣೆಗಳನ್ನು, ಮನಃಸ್ಥಿತಿಗಳನ್ನು ಗಾಂಧೀಜಿ ಕಟುವಾಗಿ ಟೀಕಿಸುತ್ತಿದ್ದರು?
ವಿಷಯ-1
‘Gandhiji was not awarded the Nobel peace prize because he refused to be converted’! ಹಾಗೆಂದು ಹೇಳಿದವರು ಯಾವ ಹಿಂದುತ್ವವಾದಿಯೂ ಅಲ್ಲ, ವಿಶ್ವವಿಖ್ಯಾತ ಲೇಖಕ, ಬರಹಗಾರ, ದಾರ್ಶನಿಕ ಸ್ಟೀಫನ್ ನ್ಯಾಪ್. ಅವರು ಹೇಳಿದಂತೆ ಕ್ರೈಸ್ತರಾಗಿ ಮತಾಂತರಗೊಳ್ಳಲು ನಿರಾಕರಿಸಿದ ಕಾರಣಕ್ಕೇ ಗಾಂಧೀಜಿಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರೆಯಲಿಲ್ಲವೆ? ಅದು ನಿಜವೆಂದಾದರೆ ಗಾಂಧೀಜಿಗೂ ಕ್ರೈಸ್ತ ಮತಿಯರಿಗೂ ಯಾವುದಾದರೂ ವೈಷಮ್ಯ ಅಥವಾ ಅಭಿಪ್ರಾಯಭೇದಗಳಿದ್ದವೆ? ನ್ಯಾಪ್ ಮುಂದುವರಿದು ಎಚ್ಚರಿಸುತ್ತಾರೆ-‘ಇಂದು ಕ್ರೈಸ್ತ ಮಿಷನರಿಗಳು ಭಾರತದಾದ್ಯಂತ ತಮ್ಮ ಕಬಂಧಬಾಹುಗಳನ್ನು ಚಾಚಿದ್ದು ಆಮಿಷ, ಪ್ರಚೋದನೆ, ಮೋಸ, ಬೆದರಿಕೆಗಳ ಮೂಲಕ ಜನರನ್ನು ಮತಾಂತರ ಮಾಡುತ್ತಿದ್ದಾರೆ. ಈಶಾನ್ಯ ಭಾರತದಲ್ಲಿ ಈ ರೀತಿಯ ಬೆದರಿಕೆ, ಕೊಲೆಗಳು ಸರ್ವೇಸಾಮಾನ್ಯವಾಗಿ ಬಿಟ್ಟಿವೆ. ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಹಾಗೂ ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗಾಂಧೀಜಿಯವರ ಸಂದೇಶ ಬಹಳ ಮುಖ್ಯವಾಗುತ್ತದೆ. ನಿರ್ಲಕ್ಷ್ಯ ತಳೆದರೆ ಈ”ಮಿಷನರಿ ಟೆರರಿಸಂ’ ಇಸ್ಲಾಮಿಕ್ ಭಯೋತ್ಪಾದನೆಯಷ್ಟೇ ಅಪಾಯಕಾರಿಯಾಗಿ ಪರಿಣಮಿಸುತ್ತದೆ’. ಹಾಗಾದರೆ ಗಾಂಧೀಜಿಯವರು ಕ್ರೈಸ್ತ ಮಿಷನರಿಗಳ ಬಗ್ಗೆ, ಮತಾಂತರದ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದರು?
ಮೊದಲಿಗೆ ಇಸ್ಲಾಂ, ತದನಂತರ ಕ್ರಿಶ್ಚಿಯಾನಿಟಿ. ಭಾರತ ಹಲವು ಶತಮಾನಗಳಿಂದಲೂ ಈ ಎರಡು ಮತಗಳ ಆಕ್ರಮಣವನ್ನು ಎದುರಿಸುತ್ತಾ ಬಂದಿದೆ. ಇಂಥದ್ದೊಂದು ಅಪಾಯದ ಬಗ್ಗೆ ಜಾಗತಿಕ ಮಟ್ಟದಲ್ಲಿ ಧ್ವನಿಯೆತ್ತಿದವರಲ್ಲಿ ಇಬ್ಬರು ಪ್ರಮುಖರು. ಮೊದಲನೆಯವರು ಸ್ವಾಮಿ ವಿವೇಕಾನಂದ, ಎರಡನೆಯವರು ಮಹಾತ್ಮ ಗಾಂಧೀಜಿ! ‘Hindus need to be saved from spiritual darkness’ ಇದು ಕ್ರೈಸ್ತ ಮಿಷನರಿಗಳ ಘೋಷವಾಕ್ಯವಾಗಿದ್ದ ಕಾಲದಲ್ಲಿ ಹಿಂದುಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರುವ, ಎತ್ತಿ ಹಿಡಿಯುವ ಕೆಲಸಕ್ಕೆ ಕೈಹಾಕಿದ ಸ್ವಾಮಿ ವಿವೇಕಾನಂದರು ಅಕಾಲಿಕ ಮರಣವನ್ನಪ್ಪಿದ ನಂತರ ನಮ್ಮ ಧರ್ಮದ ಮೇಲಾಗುತ್ತಿದ್ದ ದೌರ್ಜನ್ಯದ ವಿರುದ್ಧ”ಗ್ಲೋಬಲ್ ವಾಯ್ಸ್್’ ಆಗಿ ಹೊರಹೊಮ್ಮಿದವರು ಗಾಂಧೀಜಿ. ಕ್ರೈಸ್ತ ಮಿಷನರಿಗಳನ್ನು’Vendors of goods’ ಎಂದು ಟೀಕಿಸಿದರು.”ಈ ಮಿಷನರಿಗಳನ್ನು ಮನೆಯೊಳಗೆ ಬಿಟ್ಟುಕೊಳ್ಳುವುದೆಂದರೆ ನಮ್ಮ ಕುಟುಂಬದ ಅವನತಿಯಾದಂತೆ. ನಮ್ಮ ಆಚಾರ, ವಿಚಾರ, ಊಟ, ಉಡುಪು, ನಡತೆ ಎಲ್ಲವನ್ನೂ ಹಾಳುಗೆಡವುತ್ತಾರೆ’ ಎಂದು ಗಾಂಧೀಜಿ ಎಚ್ಚರಿಸುತ್ತಾರೆ.
1. ನಾನೊಬ್ಬ ಸನಾತನಿ ಹಿಂದು ಎಂದೇಕೆ ಕರೆದುಕೊಳ್ಳುತ್ತೇನೆ?
2. ನಾನೇಕೆ ಮತಾಂತರಗೊಳ್ಳಲಿಲ್ಲ?
3. ಮತಾಂತರದಲ್ಲಿ ನನಗೇಕೆ ನಂಬಿಕೆಯಿಲ್ಲ?
4. ಮತಾಂತರವೆಂಬುದು ಶಾಂತಿಗೆ ಒಂದು ತೊಡಕು ಹೇಗೆ?
5. ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಹಾರುವ ಕ್ರಮವೇಕೆ ಸರಿಯಲ್ಲ?
6. ಅನ್ಯಧರ್ಮೀಯನೊಬ್ಬನನ್ನು ಹಿಂದುವಾಗಿ ಮತಾಂತರ ಮಾಡುವುದನ್ನೂ ನಾನೇಕೆ ಒಪ್ಪುವುದಿಲ್ಲ?
7. ಬಹುತೇಕ ಭಾರತೀಯ ಕ್ರೈಸ್ತರೇಕೆ ತಮ್ಮ ಮೂಲದ ಬಗ್ಗೆ ಅಸಹ್ಯಪಟ್ಟುಕೊಳ್ಳುತ್ತ ಅಮೆರಿಕನ್ನರು ಮತ್ತು ಯುರೋಪಿಯನ್ನರ ಅಂಧಾನುಕರಣೆಗೆ ಮುಂದಾಗಿದ್ದಾರೆ?
8. ಹಿಂದು ಧರ್ಮವನ್ನು ಬುಡಮೇಲು ಮಾಡುವ ಮಿಷನರಿಗಳ ಹುನ್ನಾರ, ಉದ್ದೇಶವೆಂಥದ್ದು?
9. ಒಬ್ಬ ಹಿಂದು ಹಿಂದುವಾಗಿ ಉಳಿದರೆ ಇವರಿಗೇನು ನೋವು?
10. ಈ ಮಿಷನರಿಗಳು ಧರ್ಮದ ವ್ಯಾಪಾರಿಗಳು ಹೇಗಾಗುತ್ತಾರೆ?
11. ನಮ್ಮ ಹರಿಜನರನ್ನು ಮತಾಂತರ ಮಾಡುವುದನ್ನು ಏಕೆ ನಾನು ವಿರೋಧಿಸುತ್ತೇನೆ?
12. ಮತಾಂತರವೆಂದರೆ ಅತ್ಮ ಶುದ್ಧೀಕರಣವೇ ಹೊರತು ಮತ ಬದಲಾವಣೆಯಲ್ಲ!
13. ಕ್ರಿಶ್ಚಿಯಾನಿಟಿ ಮತ್ತು ಅದರ ಸಾಮ್ರಾಜ್ಯಶಾಹಿ ಮನಸ್ಥಿತಿ
14. ಈ ಮಿಷನರಿಗಳು ಬಡವರನ್ನು, ಬಡತನವನ್ನೇ ಏಕೆ ಗುರಿಯಾಗಿಸಿಕೊಳ್ಳುತ್ತಾರೆ?
15. ಇಷ್ಟಕ್ಕೂ ನಾನೇಕೆ ನನ್ನ ಧರ್ಮವನ್ನು ಬದಲಾಯಿಸಲಿ?
1921ರಿಂದ 1937ರವರೆಗೂ ಇಂತಹ ಒಂದೊಂದು ಪ್ರಶ್ನೆಗಳನ್ನೆತ್ತಿಕೊಂಡು ತಮ್ಮ”ಯಂಗ್ ಇಂಡಿಯಾ’ ಮತ್ತು”ಹರಿಜನ’ ಪತ್ರಿಕೆಗಳಲ್ಲಿ ಮಹಾತ್ಮ ಗಾಂಧೀಜಿಯವರು ಮತಾಂತರವನ್ನು ಖಂಡಿಸಿ, ಮಿಷನರಿಗಳ ನೈಜ ಉದ್ದೇಶದ ಮೇಲೆ ಬೆಳಕು ಚೆಲ್ಲಿ ಸತತವಾಗಿ ಬರೆಯುತ್ತಾರೆ. ಇವತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಜೀಸಸ್್ನ ಯಾವ ತತ್ವವನ್ನು ಪಾಲಿಸುತ್ತಿವೆ ಎಂದು ಪ್ರಶ್ನಿಸುತ್ತಾರೆ, ಉದಾಹರಣೆ ಸಮೇತ ಅವುಗಳ ಇಬ್ಬಂದಿ ನಿಲುವನ್ನು ಖಂಡಿಸುತ್ತಾರೆ. 1937, ಜೂನ್ 3ರ”ಹರಿಜನ’ದಲ್ಲಿ,”ಜೀಸಸ್್ನೊಬ್ಬ ಮಾನವೀಯತೆಯ ಮಹಾನ್ ಭೋದಕ. ಆದರೆ ಅವನೊಬ್ಬನೇ ದೈವೀ ಪುತ್ರನೆಂಬುದನ್ನು ನಾನು ಒಪ್ಪುವುದಿಲ್ಲ. ನಾವೆಲ್ಲರೂ ದೇವರ ಮಕ್ಕಳೇ. ದೇವರು ಯಾರೋ ಒಬ್ಬನಿಗೆ ಮಾತ್ರ ಪಿತೃವಾಗಲು ಸಾಧ್ಯವಿಲ್ಲ’ ಎಂದು ಬರೆಯುತ್ತಾರೆ. ಬೈಬಲ್ಲನ್ನು ಚೆನ್ನಾಗಿ ಓದಿಕೊಂಡಿದ್ದ, ಅದರಲ್ಲಿನ ಮಾನವೀಯ ಮೌಲ್ಯಗಳನ್ನು ಮೆಚ್ಚಿಕೊಂಡಿದ್ದ, ಜೀಸಸ್್ನಿಂದ ಪ್ರೇರಿತರಾಗಿಯೇ ಯಾರಾದರೂ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದನ್ನು ತೋರಿ ಎನ್ನುತ್ತಿದ್ದ ಗಾಂಧೀಜಿ, ಮತಾಂತರವನ್ನು ಮಾತ್ರ ಸುತರಾಂ ಒಪ್ಪುತ್ತಿರಲಿಲ್ಲ. ಅದರ ಬಗ್ಗೆ ಎಷ್ಟು ಕುಪಿತರಾಗಿದ್ದರೆಂದರೆ”ಒಂದು ವೇಳೆ ನನ್ನ ಬಳಿ ಅಧಿಕಾರವಿದ್ದರೆ, ಕಾನೂನು ತರುವ ಸಾಮರ್ಥ್ಯ ನನಗಿದ್ದಿದ್ದರೆ ನಾನು ಮಾಡುತ್ತಿದ್ದ ಮೊದಲ ಕೆಲಸ ಮತಾಂತರದ ನಿಷೇಧ’ ಎಂದಿದ್ದರು ಬಾಪೂಜಿ.
ವಿಷಯ-2
‘ನನ್ನೊಬ್ಬ ಮುಸಲ್ಮಾನ ಸ್ನೇಹಿತ ಕೆಲ ಸಮಯದ ಹಿಂದೆ ಪುಸ್ತಕವೊಂದನ್ನು ಕಳುಹಿಸಿದ್ದ. ಒಂದು ತೊಟ್ಟು ಹಾಲನ್ನೂ ಬಿಡಲೊಪ್ಪದೆ ಹಸುವನ್ನು ಹೇಗೆ ಹಿಂಡುತ್ತೇವೆ, ಅವುಗಳನ್ನು ಹೇಗೆ ಹಸಿವಿನಿಂದ ನರಳಿಸುತ್ತೇವೆ, ಎತ್ತುಗಳನ್ನು ಹೇಗೆ ದುಡಿಸಿಕೊಳ್ಳುತ್ತೇವೆ, ಅತಿಭಾರ ಹಾಕಿ ಹೇಗೆ ದೌರ್ಜನ್ಯಕ್ಕೆ ಈಡುಮಾಡುತ್ತೇವೆ. ಒಂದು ವೇಳೆ ಅವುಗಳಿಗೆ ಮಾತು ಬಂದಿದ್ದರೆ ನಮ್ಮ ದೌರ್ಜನ್ಯಕ್ಕೆ ಸಾಕ್ಷಿಯಾಗುತ್ತಿದ್ದವು, ಜಗತ್ತು ದಿಗ್ಭ್ರಮೆಗೊಳ್ಳುತ್ತಿತ್ತು ಎಂಬುದನ್ನು ಅದರಲ್ಲಿ ವಿವರಿಸಲಾಗಿತ್ತು’.
ಅದನ್ನು 1921, ಅಕ್ಟೋಬರ್ 6ರ”ಯಂಗ್ ಇಂಡಿಯಾ’ದಲ್ಲಿ ಗಾಂಧೀಜಿ ಬರೆಯುತ್ತಾರೆ.”ನಾನು ಗೋವನ್ನು ಗೌರವಿಸುತ್ತೇನೆ, ಪ್ರೀತಿಯಿಂದ ಕಾಣುತ್ತೇನೆ. ಗೋವು ಕೃಷಿ ಆಧಾರಿತ ಈ ದೇಶದ ರಕ್ಷಕಿ. ನಮ್ಮ ಮುಸಲ್ಮಾನ ಸಹೋದರರೂ ಇದನ್ನು ಒಪ್ಪುತ್ತಾರೆ. ನಾನು ಗೋವನ್ನು ಗೌರವಿಸಿದಂತೆ ನನ್ನ ದೇಶವಾಸಿಗಳನ್ನೂ ಗೌರವಿಸುತ್ತೇನೆ. ಆತ ಹಿಂದು ಇರಬಹುದು, ಮುಸಲ್ಮಾನನಾಗಿರಬಹುದು. ಹಸುವಿನಷ್ಟೇ ಮನುಷ್ಯನೂ ಉಪಯೋಗಕಾರಿ. ಅಂದಮಾತ್ರಕ್ಕೆ ಹಸುವನ್ನು ರಕ್ಷಿಸುವುದಕ್ಕೋಸ್ಕರ ಮುಸಲ್ಮಾನನ ವಿರುದ್ಧ ನಾನು ಹೊರಡಬೇಕಾ, ಕೊಲ್ಲಬೇಕಾ? ಹಾಗೆ ಮಾಡಿದರೆ ನಾನು ಮುಸಲ್ಮಾನ ಹಾಗೂ ಗೋವು ಇಬ್ಬರ ಶತ್ರುತ್ವವನ್ನೂ ಕಟ್ಟಿಕೊಳ್ಳಬೇಕಾಗುತ್ತದೆ. ಆದ್ದರಿಂದ ಗೋವನ್ನು ಸಂರಕ್ಷಿಸಲು ನನಗೆ ಕಾಣುವ ಏಕೈಕ ಮಾರ್ಗವೆಂದರೆ ನನ್ನ ಮುಸಲ್ಮಾನ ಸಹೋದರರಿಗೆ ಮನವರಿಕೆ ಮಾಡಿಕೊಡುವುದು’. ಹೀಗೆ ಗೋಸಂರಕ್ಷಣೆಯ ಬಗ್ಗೆ ಗಾಂಧೀಜಿ ಬಹುವಾಗಿ ವಿವರಿಸುತ್ತಾರೆ. ಗೋವು ಪೂಜನೀಯ ಎಂಬುದನ್ನು ಅವರ ಬರವಣಿಗೆಗಳಲ್ಲೆಲ್ಲ ಪ್ರತಿಪಾದಿಸುತ್ತಾರೆ.
ವಿಷಯ-3
ರಾಮರಾಜ್ಯ! ಭಾರತ ಸ್ವತಂತ್ರಗೊಂಡ ಕೂಡಲೇ ಅದನ್ನು ರಾಮರಾಜ್ಯವನ್ನಾಗಿ ಮಾಡುವುದಾಗಿ ಮೊದಲು ಹೇಳಿದವರೇ ಮಹಾತ್ಮ ಗಾಂಧೀಜಿ. ಅಂದರೆ ಸ್ವಾತಂತ್ರ್ಯ ನೀಡಿದ ನಂತರ ಯಾವ ರೀತಿಯ ವ್ಯವಸ್ಥೆ ರೂಪಿಸುತ್ತೀರಿ ಎಂಬ ಪ್ರಶ್ನೆಗೆ”ರಾಮನಂಥ ಅದರ್ಶ ರಾಜ್ಯ’ ಎಂದಿದ್ದರು ಮಹಾತ್ಮ. ಇನ್ನೂ ಬಿಡಿಸಿ ಹೇಳುವುದಾದರೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ನಡೆಸಿದ ಆದರ್ಶ, ನ್ಯಾಯ, ತ್ಯಾಗ ಮುಂತಾದ ಮೌಲ್ಯಗಳನ್ನು ಹೊಂದಿರುವ ರಾಜ್ಯ ನಿರ್ಮಾಣ. ಆ ಬಗ್ಗೆ 1947, ಫೆಬ್ರವರಿ 27ರಂದು ಬರೆಯುತ್ತಾ,”ಯಾರೂ ತಪ್ಪಾಗಿ ಭಾವಿಸಬಾರದು, ರಾಮರಾಜ್ಯವೆಂದರೆ ಹಿಂದುಗಳ ಆಡಳಿತವಲ್ಲ. ದೇವರ ಸಾಮ್ರಾಜ್ಯ. ರಾಮನೆಂಬುದು ಖುದಾ ಅಥವಾ ದೇವರ ಇನ್ನೊಂದು ಹೆಸರಷ್ಟೇ. ದೇವರ ಸಾಮ್ರಾಜ್ಯವೆಂದರೆ ದಗಾ, ವಂಚನೆ, ಅನ್ಯಾಯಗಳಿಲ್ಲದ, ಎಲ್ಲರನ್ನೂ ಸಮನಾಗಿ ಕಾಣುವ ಆಡಳಿತ’ ಎನ್ನುತ್ತಾರೆ.
ಈ ಮೇಲಿನ ಮೂರು ಅಂಶಗಳು ಏನನ್ನು ಸೂಚಿಸುತ್ತವೆ? ಹಾಗೂ ಈ ವಿಚಾರಗಳ ಬಗ್ಗೆ ಗಾಂಧಿವಾದಿಗಳು ಎಂದಾದರೂ ಮಾತನಾಡಿದ್ದನ್ನು ಕೇಳಿದ್ದೀರಾ? ಗಾಂಧೀಜಿ ಎಂದರೆ ಬರೀ ಒಬ್ಬ ಸ್ವಾತಂತ್ರ್ಯ ಹೋರಾಟಗಾರ, ಸತ್ಯಾಗ್ರಹಿ, ಬ್ರಿಟಿಷರನ್ನು ದೇಶ ಬಿಡಿಸಿ ಓಡಿಸಿದ ನೇತಾರ ಮಾತ್ರವಾ? ಅಥವಾ ಸ್ವಸ್ಥ ಸಮಾನ ಸಮಾಜ ನಿರ್ಮಾಣದ ಕನಸು ಕಂಡ, ಈ ದೇಶದ ನೆಲ, ಜಲ, ಜೀವಸಂಕುಲಗಳನ್ನು ಪ್ರೀತಿಸಿದ, ಸಂಸ್ಕೃತಿಯನ್ನು ಗೌರವಿಸಿದ, ಅದರ ಸಂರಕ್ಷಣೆ ಮಾಡಬೇಕೆಂದು ಪ್ರತಿಪಾದಿಸಿದ ವ್ಯಕ್ತಿಯೂ ಹೌದಲ್ಲವೆ? ಹಾಗಾದರೆ ಗಾಂಧೀಜಿ ಪ್ರತಿಪಾದಿಸಿದ ಗೋಸಂರಕ್ಷಣೆ, ಮತಾಂತರ ನಿಷೇಧ, ರಾಮರಾಜ್ಯ ನಿರ್ಮಾಣಗಳ ಬಗ್ಗೆ ಮಾತನಾಡಿದರೆ ಇವತ್ತು ಯಾವ ಪಟ್ಟ ಸಿಗುತ್ತದೆ? ಅವರು ಬಲವಾಗಿ ಪ್ರತಿಪಾದಿಸಿದ ವಿಚಾರಗಳ ಬಗ್ಗೆ ಈಗ ಧ್ವನಿಯೆತ್ತಿದರೆ ಯಾವ ಹಣೆಪಟ್ಟಿಯನ್ನು ಅಂಟಿಸುತ್ತಾರೆ? ಒಂದು ಹಂತದಲ್ಲಂತೂ ಗಾಂಧೀಜಿಯವರು ‘Muslims are bullies and Hindus cowards’ ಎಂದು ತಮ್ಮ ಹತಾಶೆಯನ್ನು ಹೊರಹಾಕುತ್ತಾರೆ. ನಾನೊಬ್ಬ ಗಾಂಧಿವಾದಿ ಎಂದು ಕರೆದುಕೊಳ್ಳುವ ಯಾವ ವ್ಯಕ್ತಿಯ ಬಾಯಲ್ಲಿ ಮತಾಂತರದ ಬಗ್ಗೆ ಗಾಂಧೀಜಿ ಯಾವ ಅಭಿಪ್ರಾಯ, ನಿಲುವು ಹೊಂದಿದ್ದರು ಎಂಬ ವಿಚಾರ ಹೊರಬರುತ್ತಿದೆ? ಈ ದೇಶದ ನೆಲ, ಜಲದ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕೆಂದು ಪ್ರತಿಪಾದಿಸಿ, ಮತಾಂತರವನ್ನು ಕಟುವಾಗಿ ಖಂಡಿಸಿದ ಗಾಂಧೀಜಿಯವರ ಮಾತುಗಳನ್ನು ಯಾವ ಗಾಂಧಿ ಟೋಪಿವಾಲಾ ಇಂದು ಉದಾಹರಿಸುತ್ತಾನೆ ಹೇಳಿ?
ಗಾಂಧೀಜಿರವರ ಆದಶ೵ಗಳನà³à²¨à³ ಇಂದೠಎಲà³à²²à²°à³‚ ಆಡಬಹà³à²¦à³‡ ವಿನಃ ಆಚರಿಸಲೠಸಾಧà³à²¯à²µà²¿à²²à³à²². à²à²•ೆಂದರೆ ಅದೠಸà³à²µà²¾à²¤à²‚ತà³à²°à³à²¯ ಪೂವ೵ದ ಚಿಂತನೆಗಳà³. ಇಂದಿನದೆಲà³à²² ಸà³à²µà²¾à²¥à³µà²ªà³‚ರಿತ ಚಿಂತನೆಗಳà³. ಇಂದಿನ ನಾಗರಿಕರೠಸೇವಾ ಮನೋà²à²¾à²µà²¦à²¿à²‚ದ ಸà³à²µà²¾à²¹à²¾ ಮನೋà²à²¾à²µà²¦à³†à²¡à³†à²—ೆ ಧಾವಿಸà³à²¤à³à²¤à²¿à²¦à³à²¦à²¾à²°à³†.
ಈಗ ಗಾ೦ಧೀಜಿ ಇದà³à²¦à²¿à²¦à³à²¦à²°à³†……….ಹೊಗà³à²²à²¿ ಬಿಡಿ ಸಾರೠಸತà³à²¤à³ ಸà³à²µà²°à³à²—ದಲà³à²²à²¿à²°à³Š ಮಹಾತà³à²®à²¾ ಗಾ೦ಧಿ ಇ೦ಥದà³à²¦à²¨à³à²¨à³†à²²à³à²²à²¾ ನೊದಿ ಆತà³à²®à²¹à²¤à³à²¯à³† ಮಾಡಿಕೊಳà³à²³à³Šà²°à³…..
ಈ ಸಮಾಜಾ ಬದಲಯಿಸೊಕೆ ಆಗಲà³à²²à²¾ ಹಾಗೆ ಬದಲಾಗಲೠಬಿಡೊದà³à²¨à³Š ಇಲà³à²²à²¾
A super article for so called gandhians!!!!!
Awesome one…
Post this copy to Sonia Gandhi….
Awesome one….
Post this copy to Sonia Gandhi…..
kahiyda satya…….. super topic..
Enlightening but I think people are confused with Ideals.
Youth are in need of clear thinking 😛
Anyways ur best in representing as b4, heads off 🙂
nice questions asked to”TOPIVALAS”….specially to Di*******y singh
I belive in this article.
nice article
ಎಷà³à²Ÿà³‹ ಜನರ ದೃಷà³à²Ÿà²¿à²¯à²²à³à²²à²¿ ಮಹಾತà³à²®à²¾ ಗಾಂಧಿಜೀ ಕೇವಲ ಅಹಿಂಸಾವಾದದ ಹರಿಕಾರರಷà³à²Ÿà³‡… ಆವರ ಬಹà³à²®à³à²– ವà³à²¯à²•à³à²¤à²¿à²¤à³à²µà²¦ ಅನಾವರಣ ಮಾಡà³à²µà²‚ತಹ, ಇಂದಿನ ಹಲವೠಜಾಗತಿಕ ಸಮಸà³à²¯à³†à²—ಳ ಬಗà³à²—ೆ ಗಾಂಧಿಜೀ ಯವರ ನಿಲà³à²µà³ à²à²¨à²¾à²—ಿರà³à²¤à³à²¤à²¿à²¤à³à²¤à³ ಎಂದೠನಮà³à²®à²‚ತಹ ಯà³à²µ ಪೀಳಿಗೆಯ ಜನಕà³à²•ೆ ತಿಳಿಸà³à²µà²‚ತಹ ಇಂತಹ ಲೇಖನವೠಸಕಾಲಿಕ ಮತà³à²¤à³ ಅರà³à²¥à²ªà³‚ರà³à²£.. ಥಾಂಕà³à²¯à³‚ ಪà³à²°à²¤à²¾à²ªà³ ಜೀ…
Hi Pratap,
Once again, superb article.I was waiting for some special article and you have given it. Some interesting video links for you. you can watch them when you are free.
please visit the links
http://www.youtube.com/watch?v=cCEO4Rw9Zd8&feature=recentf
http://www.youtube.com/watch?v=E15_bWdoFtM
http://www.youtube.com/watch?v=B_6hEgJlYYk
http://www.youtube.com/watch?v=C9L1NsFKYXk
http://www.youtube.com/watch?v=UD4BCfUNcOU
http://www.youtube.com/watch?v=5FHOkuIs24k&feature=related
http://www.youtube.com/watch?v=34jfaefFYnM
you should also write about the statue of unity and kalpasar dam which are the dream project of Narendra Modi.
Dear Pratap, I am thankful to you for providing so many information about Gandhiji. Till date I was under the impression that , Gandhji was played diplomatic roll between Hindu & Muslims. Know I understand that, what a great thinking level he was having about Hinduism. How much he loved Hinduism , How much he protested conversion activity & killing of cow. Really he was great & He is Mahatma.
nice article
Dear Pratap, Ee lekhanadalli Swami Vivekanandaru akalika marana vappidaru anta barediddira. Nanna Prakara akalika marana endare yahudadaru accident , Roga , aatmahatye hinda sattare adannu akalika marana annabahudu. But Pujya Swamiji yavaru tamma 37 ne vayassinalle nanu 40 varsha datuvadilla anta heliddaru. Allade avaru tamma deha biduva munna Dyanakke kulitu tamma pranavannu Brahma randrada mulaka maha samadhi aagiye tamma deha tyaga madiddare. Andare idu akalika marana hege aguttade sahebre? Mahasamdige hagu Akalika maranakke vyatyasa villave? Please Pratap, Swami Vivekanandara mahasamadhiya bagge dayavagi barehiri adondu tumba manamidiyuva kshana.
very very nice
really good information
these so called Gandhian people, they just use Gandhi’s name only o enhance their political career. how can we expect them to point out these points? though sometimes i hate some of his principles, i agree hat he used the correct way sometimes.
Well said Pratap. But as I have repeatedly written to you earlier, these thoughts should be published in National news papers so that everyone should know & understand these absolute thoughts, this is possible only when you come in national media.
Thank you.
U show real face of Gaandhiji…
Thanx,,,
well said pratap u have told the true story of christain missonaries, every where they talk abt peace and harmony, but have never oppsed or critisised the the death of innocent civilians in afgan pak iraq by the westernpowers. for them its an opportunity to convert the people when they r in misery
I am proud to Gandhi after i read this.
I belive in this articl
Good …………………
Hi.
I belive in this article.
Good ………………….
Every one telling gandhi thatva no one go in that way………….time to come for all…..
As usaul, very well written article. As some one suggested, send it to Veerappa Moily,Kharge, Krishna and Muniappa. They can translate this article to Sonia, A.K. Antony and Ahmad Patel and all the secular brigade.
nice article
ಜà³à²žà²¾à²¨à²®à³à²–ಿ
http://www.jnanamukhi.blogspot.com
ಇಂದಿನ ಗಾಂಧಿವಾದಿ(?)ಗಳಿಗೆ ತಮà³à²® ಬೇಳೆ ಬೇಯಿಸಿಕೊಳà³à²³à²²à³ ಗಾಂಧಿ ಎಂಬà³à²¦à³ ಒಂದೠಕà³à²•à³à²•ರೠಪಾತà³à²°à³† ಆಗಿದೆ.
ಜà³à²žà²¾à²¨à²®à³à²–ಿ
http://www.jnanamukhi.blogspot.com
hello, why you use gandhi? say sumthing wat yo think according to the present status . histroy is just bucket full of ashes. past is just a past. try to live in present. write what you think. being such a great personality in karnataka, write for the sake of society with out having a greed of social business. journalists are just lacking their social responsibilities. try to match up human instinct with social instincts ….please sir
Mahaatma Gandhiji sirname has been being used for publicity since many years n mainly Gandhi political family. In the tenure of Mr.Rajshekar Reddy as CM of Andrapradesh, cast conversion work was been created around the famous Tirupati Temple villages n final result given to the public ie what happened every one knows it very well? Why cast conversion required in this world? Is it symbol of dignity or perverted mind madness of religious people? All human beings r same then y this name plate required for us in the name of religion? Hindu, Muslim, Cristh etc r just nameplates for those who deliver their dreams to hell ie unhappiness in human beings n being misused for selfcentered aims. Proper education required for us that to know who am I, n what purpose we r born n y we r creating unhappiness in environment n what really required to respect all human beings irrespective of cast nameplate.Indian Govt is very week in this world n it never show its power to world. To show what India in this world, we need again Mahaatma Gandhi, Swami Vivekanand n Shubhasha Chandra Bosh etc. Why India needs permission to enter NATO group? I think it is not required but India like few Asian countries must open equvivalent world power against NATO then only world will feel its computaion of real beats. Being more people in one religion is not its wealth but it must be filled with happy environment then only it is called as wealthy religion in this world. In this world we must not follow any religion nameplate, we must not follow any party name plate but we must follow our internal soul religion ie universal accepted name plate of all living organisms whether it is talking or not talking but its existance will never been deleted. The weight of souls is equall to an Ion ie our real weight n shape n evry one must feel his existance on this earth then only possible to have peace in this world otherwise this world will be converted itself to its determined era soon. Very tough article to understand this theme of Mahaatma Gandhiji words. Buddu.
Good Article Pratap Sir….. Gandhi is truly Mahatma… Avarobba mahan manavathavadiyagiddaru… Avaru thorisida tatva, adarshagalannu navu palisidare namma desha ramarajya vaguvudaralli sandehavilla……
ಗಾಂಧಿ ಎಚà³à²šà²°à²¿à²¸à²¿à²°à³à²µ ೧೫ ರಲà³à²²à²¿ ಈಗಿನ ರಾಜಕಾರಣಿಗಳೠಒಂದನà³à²¨à³ ಹಿಂಬಾಲಿಸà³à²¤à³à²¤à²¿à²²à³à²².
ಹಂಸ ಕà³à²·à³€à²° ನà³à²¯à²¾à²¯à²¦à²‚ತೆ ” ಹಾಲನà³à²¨à³ ಮರೆ ಮಾಚಿ………..ನೀರನà³à²¨à³ ನಮಗೆ ಉಣಿಸà³à²¤à³à²¤à²¿à²¦à³à²¦à²°à³†”.
Awesome airticle prathap..Thanks
ಗಾಂಧಿ ಹೀಗೆ ಹೇಳಿದà³à²¦à³ ನನಗೆ ತಿಳಿದಿರಲಿಲà³à²². ಈ ಗಾಂಧೀ ಮಾತà³à²—ಳೠಎಲà³à²²à²¿ ಉಧೃತವಾಗಿವೆ ಎಂದೠತಿಳಿಸಿದರೆ ಉತà³à²¤à²®.
In today’s situation if we want to have/see some changes then we have to root out these pseudo-secularists, pseudo-socialists. These guys are the real threat to us.
If I call myself a proud Hindu I will be called as pro-RSS or communal…why ?
dont I have right to follow and talk about my religion like the minorities have?…I dont feel any bad calling myself communal rather that being called as pseudo-secular.
Superb article
ದೇಶದಲà³à²²à²¿ ಇ೦ದೠಮತಾ೦ತರ ನೀಷೇದ, ಗೋವೠಹತà³à²¯à³† ನಿಷೇದ, ಮತà³à²¤à³† ಬà³à²°à²·à³à²Ÿà²šà²¾à²°à²¦à³¦à²¤à²¹ ಕೆಲವೆ ಕೆಲವೠಸà³à²¦à²¾à²°à²£à³† ಅದರೆ ದೇಶ ಸà³à²à²¿à²•à³à²¶à³†à²¯à²¿à³¦à²¦ ಇರಬಹà³à²¦à³ ಅನà³à²¸à³à²¤à³à²¤à³†.ಗಾ೦ದಿಜೀ ಬಗà³à²—ೆ ತಿಳಿಸಿದಕà³à²•ೆ ಹಾಗೂ ನಿಮà³à²® ಲೇಖನಕà³à²•ೆ ದನà³à²¯à²µà²¾à²¦à²—ಳà³.
good article dear pratap simha.. but u have also done the same mistake as those pseudogandhians are doing till now.. i have read some of ur previous articles n uderstood that u don admire much of the things told by gandhi.. now u r using his thoughts only for the sake of proving ur prohindu thoughts.. i don see any respect for gandhi in ur words.. ur not better than those pseudogandhians.. i m sorry to say this.. but pl reevaluate ur thoughts.. pl pen n spread true gandhian thoughts if u really admire that great soul rather than using him for debate.. thanks in advance..:)
all those who take gandhi s name are gandhians.. n don evaluate gandhi based on these pseudogandhians.. pl don get confused.. thank u
ಗಾಂಧಿಜೀ ಅಂದರೆನೆ ಒಂಥರ ದà³à²µà²‚ದà³à²µ ಇದà³à²¦à²¹à²¾à²—ೆ ಸರಿಯಾಗಿ ಅವರನà³à²¨ ಅರà³à²¥à²®à²¾à²¡à²¿ ಕೋಳà³à²³à³Šà²•à³à²•ೆ ಆಗೂಲà³à²²à²¾ ಒಂದೠಕಡೆ ಒಳà³à²³à³† ಮನà³à²·à³à²¯à²¨ ಥರ ಕಂಡರೆ ಇನà³à²¨à³Šà²‚ದೠಕಡೆ ಕೆಟà³à²Ÿ ಆಸಾಮೀ ಅನà³à²¨à²¿à²¸à³à²¤à³à²¤à²¾à²°à³†. à²à²¨à³‡ ಆಗಲೀ à²à²—ತೠಸಿಂಗೠಇಷà³à²Ÿ ಆಗà³à²µà²·à³à²Ÿà³ ಗಾಂಧಿ ಇಷà³à²Ÿ ವಾಗೊಲà³à²²à²¾. à²à²—ತೠಸಿಂಗೠಪಾಪ ಅವರಿಗೆ ಯಾವà³à²¦à²°à²²à³à²²à³‚ à²à²¨à³ ಕಡಿಮೆ ಇರಲಿಲà³à²²à²¾ ಬೇಕಾದಷà³à²Ÿà³ ಆಸà³à²¤à²¿ ಇತà³à²¤à³ . ಆದರೆ ನನà³à²¨ ದೇಶದ ಸà³à²µà²¾à²¤à²‚ತà³à²°à³à²¯à²¨à³‡ ನನà³à²¨ ನೀಜವಾದ ಕರà³à²® ಅಂಥ ಹೇಳಿ ಸಂಸಾರ, ಮಧà³à²µà³†, ಎಲà³à²²à²µà²¨à³à²¨à³ ಬಿಟà³à²Ÿà³ ಮà³à²‚ದೆ ಬಂದರà³. ಗಾಂಧಿ ಮಃನಸà³à²¸à³ ಮಾಡಿದà³à²¦à²°à³† ಆ ಸಮಯದಲà³à²²à²¿ à²à²—ತೠಸಿಂಗೠರನà³à²¨à³ ಕಾಪಡಬಹà³à²¦à²¿à²¤à³à²¤à³. ಅದೇನೠಸà³à²µà²¾à²°à³à²¥à²¨à³‹ ಥೊ ಕಾಪಡಲಿಲà³à²²à²¾. à²à²—ತೠಸಿಂಗೠರನà³à²¨à³ ನೆನಪಿಸಿಕೊಂಡರೆ ಧೈರà³à²¯ ಹೆಚà³à²šà²¾à²—à³à²¤à³à²¤à³† ಆದರೆ ಗಾಂಧಿನ ನೆನಸಿಕೊಂಡರೆ à²à²¨à³ ಅನà³à²¨à²¿à²¸à³Šà²²à³à²²à²¾ . ಇವರೠಮಧà³à²µà³† ಮಾಡಿಕೋಂಡೠಸಂಸಾರದಲà³à²²à²¿ ಇದà³à²¦à²°à³ ಆದà³à²°à³† ಅಂದೠಯà³à²µà²•ರಾಗಿದà³à²¦ à²à²—ತೠಸಿಂಗೠರನà³à²¨ ನೇಣà³à²—ಂà²à²•à³à²•ೆ à²à²°à²¿à²¸à²¿à²¬à²¿à²Ÿà³à²Ÿà²°à³ ಗಾಂಧಿ ಯವರ ಆತà³à²®à²šà²°à²¿à²¤à³à²°à³†à²¯à²²à³à²²à²¿ ಅವರೆ ಬರೆದà³à²¦à²¿à²¦à³à²¦à²°à³ ಅವರ ಅಪà³à²ª ಸತà³à²¤à³ ಹೋದ ಸಮಯದಲà³à²²à²¿ ಅವರೠಮಾಡೀರೊ ಗನಾಂದಾರಿ ಕೆಲà³à²¸à²¾à²¨à²¾ ಆದà³à²°à³‡ ಸತà³à²¯à²¨à²¾ ಹೇಳà³à²¤à³à²¤à²¾à²°à³† ಅಲà³à²µà²¾ ಅದನà³à²¨ ಮೆಚà³à²šà²¬à³‡à²•ೠಗಾಂಧಿನಾ. ಅಹಿಂಸೆ ಅಹಿಂಸೆ ಅಂದೠಪಾಪ ಹಿಂಸೆಗೆ ಗà³à²°à²¿à²¯à²¾à²—ಿ ಬಿಟà³à²Ÿ ಮನà³à²·à³à²¯ . ಗಾಂಧಿಯಿಂದನೇ ಇವತà³à²¤à³ à²à²¾à²°à²¤à²¦à²²à³à²²à²¿ ಮà³à²¸à³à²²à²¿à²‚ಗಳೠಇರೊದೠಇಲà³à²²à²¾ ಅಂದà³à²°à³† ನಮà³à²® ದೇಶ ಚಾನà³à²¨à²—ೆ ಇರೊದೠà²à²—ತೠಸಿಂಗೠಇರಬೇಕಾಗಿತà³à²¤à³ ಪರಿಸà³à²¥à²¿à²¤à²¿ ಬೇರೆ ಥರಹ ಇರೊದೠ.. uppavasa madodharalli great gandhi …jaya sigovargu hindhe bartha erlilla but ee thara protest naa yavaa Ramadeve kuda madokke agolla becoz curroption ge again agee horrata madthine antha bogale bettu ardhakke bettu bandha ramdeve dhodda kaliyugadha utharaakumarra.