Date : 29-08-2011, Monday | 17 Comments
ಆ ಕುರುಚಲು ಗಡ್ಡ, ಹೆಗಲ ಮೇಲೊಂದು ಶಾಲು. ಅವರನ್ನು ನೋಡುವುದಕ್ಕೇ ಒಂಥರಾ ಖುಷಿ. ಮಾತು ನಿಧಾನ, ಆದರೆ ಬಲು ತೂಕ. ಕನ್ನಡವೂ ಸ್ಫುಟ, ಇಂಗ್ಲಿಷ್ ಮೇಲೂ ಪ್ರಭುತ್ವ. ಒಂದು ಸಣ್ಣ ಟೀಕೆಗೂ ಸ್ಪಂದಿಸುವ ಸಂವೇದನೆ. ಆರೋಪ ಎದುರಾದಾಗ ಎರಡು ಬಾರಿ ರಾಜೀನಾಮೆ ನೀಡಿದ ಅವರ ಸನ್ನಡತೆ. ಸಾಕಷ್ಟು ಗ್ಝ್ಛಜಡ ಇದ್ದರೂ ಗ್ಝ್ಠಡ್ಡಿಜಡ ಎದ್ದು ಕಾಣುವ ವ್ಯಕ್ತಿತ್ವ. ನಾವು ಶಾಲೆಗೆ ಹೋಗುವಾಗ ತೊಟ್ಟಿದ್ದು ಅವರು ಕೊಟ್ಟ ಉಚಿತ ಸಮವಸ್ತ್ರಗಳನ್ನೇ. ನಾವು ಓದಿದ್ದೂ ಅವರು ನೀಡಿದ ಪುಕ್ಕಟೆ ಪಠ್ಯಪುಸ್ತಕಗಳನ್ನೇ.
ಅವರ ಹೆಸರು ರಾಮಕೃಷ್ಣ ಹೆಗಡೆ!
ಅವರನ್ನು ಒಬ್ಬ ಮುಖ್ಯಮಂತ್ರಿ ಎನ್ನಬೇಕೋ, ಜನನಾಯಕ ಎನ್ನಬೇಕೋ ಎಂಬ ಗೊಂದಲವುಂಟಾಗುತ್ತದೆ. ಸಂಸದೀಯ ಪ್ರಜಾತಂತ್ರದಲ್ಲಿ ಯಾರು ಬೇಕಾದರೂ ಪ್ರಧಾನಿ, ಮುಖ್ಯಮಂತ್ರಿಯಾಗಬಹುದು, ಸಂಖ್ಯಾಬಲದ ಮೇಲೆ ನಡೆಯುವ, ನಿಂತಿರುವ ಈ ಪ್ರಕ್ರಿಯೆಯಲ್ಲಿ ಜಯಿಸಿ ಯಾರೂ ಅಧಿಕಾರ ಚಲಾಯಿಸಬಹುದು, ಎಂಥೆಂಥವರೂ ಗದ್ದುಗೆ ಏರಬಹುದು ಎಂಬುದನ್ನು ನಾವು ಕಾಣುತ್ತಿದ್ದೇವೆ. ಈ ರಾಜ್ಯ 20 ಮುಖ್ಯಮಂತ್ರಿಗಳನ್ನು ಕಂಡಿದ್ದರೂ ಗದ್ದುಗೆ ಏರಿದ ಮೇಲೂ ಜನನಾಯಕರೆಂಬಂತೆ ಕಂಡವರು, ಜನರ ಭಾವನೆಗಳಿಗೆ ಬಹುವಾಗಿ ಸ್ಪಂದಿಸಿದವರು, ಜನರ ಅಭ್ಯುದಯಕ್ಕೆ ಬಹುವಾದ ಆದ್ಯತೆ ಕೊಟ್ಟವರು ಇಬ್ಬರು ಮಾತ್ರ-ಡಿ. ದೇವರಾಜ್ ಅರಸು ಹಾಗೂ ರಾಮಕೃಷ್ಣ ಹೆಗಡೆ.
ನಿಮಗೆ ಬೆಂಡಿಗೆರಿ ಪ್ರಕರಣ ನೆನಪಿರಬಹುದು. ದಲಿತನೊಬ್ಬನಿಗೆ ಮಲ ತಿನ್ನಿಸಿದ ಘಟನೆ ನಡೆದಾಗ ಮುಖ್ಯಮಂತ್ರಿಗಾದಿಯಲ್ಲಿ ಕುಳಿತಿದ್ದ ಹೆಗಡೆಯವರು ಎಷ್ಟು ಕುಪಿತರಾದರೆಂದರೆ ಇನ್ನು ಮುಂದೆ ಇಂತಹ ಪ್ರಕರಣ ನಡೆದರೆ ತಪ್ಪಿತಸ್ಥನಿಗೆ ದೌರ್ಜನ್ಯಕ್ಕೊಳಗಾದ ದಲಿತನಿಂದಲೇ ಮಲ ತಿನ್ನಿಸುತ್ತೇನೆ ಎಂದು ಗುಡುಗಿದರು. ಆಯಾ ಜಿಲ್ಲೆಗಳ ಎಸ್ಪಿಗಳನ್ನೇ ಹೊಣೆಗಾರರನ್ನಾಗಿ ಮಾಡುತ್ತೇನೆ ಎಂದರು. ಅದರಿಂದ ದಲಿತರ ಆತ್ಮಸ್ಥೈರ್ಯ ಹೆಚ್ಚಾಯಿತು. ಅಷ್ಟೇ ಅಲ್ಲ, ದಲಿತರಲ್ಲಿನ ಪ್ರತಿಭೆಗೆ ಮಣೆಹಾಕಲು, ಅರ್ಹತೆಯನ್ನು ಗುರುತಿಸಲು ಹಿಂದೆಂದೂ ಕಂಡುಕೇಳರಿಯದ ಕ್ರಮವೊಂದನ್ನು ಕೈಗೊಂಡರು. ದಲಿತ ವಿದ್ಯಾರ್ಥಿಯೊಬ್ಬ ಪದವಿ ಅಥವಾ ಎಂಎ, ಎಂಎಸ್ಸಿ, ಎಂಕಾಂ ಮುಂತಾದ ಸ್ನಾತಕೋತ್ತರ ಪದವಿಗಳಲ್ಲಿ ರ್ಯಾಂಕ್ ಪಡೆದರೆ ಆತನನ್ನು ಪ್ರೊಬೇಷನರಿ ಅವಧಿಗೆ ವಿವಿಧ ಇಲಾಖೆಗಳಿಗೆ ನೇರವಾಗಿ ನೇಮಕ ಮಾಡಿಕೊಳ್ಳುವ ಪದ್ಧತಿ ಜಾರಿಗೆ ತಂದರು. ಮತ್ತೆ ಆತ ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನ ಎದುರಿಸುವ ಪ್ರಮೇಯವೇ ಇಲ್ಲದಂತೆ ಮಾಡಿದರು. ಇವು ದಲಿತರ ಮಾನಸಿಕ ಸ್ಥೈರ್ಯವನ್ನು ವೃದ್ಧಿಸುವ ತೀರ್ಮಾನಗಳಾಗಿದ್ದವು. ಅವರು ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತವಾಗಿ ಯೂನಿಫಾರ್ಮ್ ಕೊಡಮಾಡಿದ ಹಿಂದೆಯೂ ತಾರತಮ್ಯ ಭಾವನೆಯನ್ನು ತೊಡೆದುಹಾಕುವ, ಎಲ್ಲರೂ ಸಮಾನ ಎಂಬ ಭಾವನೆಯನ್ನು ಮೂಡಿಸುವ ಯೋಚನೆಯಿತ್ತು. ಈ ರೀತಿ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳೆರಡನ್ನೂ ಉಚಿತವಾಗಿ ನೀಡುವ ಯೋಜನೆ ದೇಶದಲ್ಲಿಯೇ ಮೊದಲ ಪ್ರಯೋಗವಾಗಿತ್ತು.
1983ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ರಾಮಕೃಷ್ಣ ಹೆಗಡೆಯವರು ತೆಗೆದುಕೊಂಡ ಕೆಲ ನಿರ್ಧಾರಗಳು ಹೇಗೆ ಮಾದರಿಯಾಗಿದ್ದವೆಂದರೆ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರೇ ಅನುಕರಣೆಗೆ ಹೊರಟರು. ಪಂಚಾಯತ್ ರಾಜ್ ಕಾಯಿದೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ರಾಜೀವ್ ಗಾಂಧಿಯವರು ಸಂವಿಧಾನಕ್ಕೆ 73ನೇ ತಿದ್ದುಪಡಿ ತಂದು ಜಾರಿ ಮಾಡಲು ಹೊರಟ ಪಂಚಾಯತ್ ರಾಜ್ ವ್ಯವಸ್ಥೆಗೆ ಹೆಗಡೆಯವರ ಮಾದರಿಯೇ ಪ್ರೇರಣೆಯಾಗಿತ್ತು. ಇನ್ನು ಬಂಜರು, ಒಣಭೂಮಿ ಅಭಿವೃದ್ಧಿ ವಿಚಾರಕ್ಕೆ ಬರೋಣ. ರಾಜ್ಯದ ಒಟ್ಟಾರೆ ಪರಿಸ್ಥಿತಿಯನ್ನು ಗಮನಿಸಿದರೆ ಶೇ.20ರಷ್ಟು ಭೂಮಿಗೆ ಮಾತ್ರ ನೀರಾವರಿ ಅನುಕೂಲವಿತ್ತು. ಉಳಿದ 80 ಪರ್ಸೆಂಟ್ ಜಾಗವನ್ನೂ ಸದುಪಯೋಗಪಡಿಸಿಕೊಳ್ಳುವ ಸಲುವಾಗಿ ವೇಸ್ಟ್ ಲ್ಯಾಂಡ್ ಡೆವೆಲಪ್್ಮೆಂಟ್ ಆ್ಯಕ್ಟಿವಿಟಿಗೆ ಚಾಲನೆ ನೀಡಿದರು. ಅಂದರೆ ತೋಟಗಾರಿಕೆ ಬೆಳೆ, ಫಾರೆಸ್ಟ್, ಡ್ರೈಕ್ರಾಪ್್ಗಳಿಗೆ ಉತ್ತೇಜನ ಕೊಟ್ಟರು. ಪ್ರತಿ ಜಿಲ್ಲೆಗೊಂದರಂತೆ ತೋಟಗಾರಿಕಾ ನಿಗಮ ಸ್ಥಾಪನೆ ಮಾಡಿದರು. ಇದರಿಂದ ಪ್ರೇರಿತರಾದ ರಾಜೀವ್ ಗಾಂಧಿಯವರು ನ್ಯಾಷನಲ್ ಹಾರ್ಟಿಕಲ್ಚರ್ ಬೋರ್ಡ್ ಸ್ಥಾಪನೆ ಮಾಡಿದರು.
ನಿಜಕ್ಕೂ ಅವರೊಬ್ಬ ಪ್ರೇರಣಾದಾಯಿಕ ನಾಯಕ!
ಉತ್ತರ ಕರ್ನಾಟಕದಲ್ಲಿ ಲಿಂಗಾಯತರದ್ದೇ ಪ್ರಾಬಲ್ಯವಿದ್ದರೂ ಅವರು ತಮ್ಮ ಜಾತಿ ನಾಯಕರಿಗಿಂತ ಹೆಗಡೆಯವರ ಮೇಲೆ ಹೆಚ್ಚು ವಿಶ್ವಾಸವಿಟ್ಟಿದ್ದರು, ಗೌರವ ಹೊಂದಿದ್ದರು. ಅವರಲ್ಲಿದ್ದ ಮೇನೇಜಿರಿಯಲ್ ಸ್ಕಿಲ್ ಅನ್ನು ಈಗಿನವರು ಕಲಿಯಬೇಕು. ಲಿಂಗಾಯತರು, ಒಕ್ಕಲಿಗರನ್ನು ಸಂಭಾಳಿಸುವ ಜತೆಗೆ ಬಿ. ಸೋಮಶೇಖರ್, ರಾಚಯ್ಯ, ನಜೀರ್ ಸಾಬ್, ಪಿಜಿಆರ್ ಸಿಂಧ್ಯಾ, ಸಿದ್ಧರಾಮಯ್ಯ, ಬಿ.ರಘುಪತಿ, ಜೀವರಾಜ್ ಆಳ್ವ ಅವರಂಥ ಅನ್ಯ ಜಾತಿ, ಧರ್ಮೀಯರನ್ನೂ ಪ್ರೋತ್ಸಾಹಿಸಿದರು. ಬಹುಶಃ ಕ್ಯಾಬಿನೆಟ್ ಮೇಲೆ ಅವರಿಗಿದ್ದ ಹಿಡಿತ ಮುಂದೆ ಯಾರಲ್ಲೂ ಕಾಣಲಿಲ್ಲ ಎನ್ನಬಹುದು. ಆರೋಪ ಎದುರಾದಾಗ ದೇವೇಗೌಡ, ಜೀವಿಜಯ, ಬಿ. ಸೋಮಶೇಖರ್್ರಿಂದ ರಾಜೀನಾಮೆ ಪಡೆದು ವಿಚಾರಣೆ ಎದುರಿಸುವಂತೆ ಸೂಚಿಸಿದ ಅವರ ಎದೆಗಾರಿಕೆಯನ್ನು ಈಗಿನವರಲ್ಲಿ ಕಾಣುವುದಕ್ಕಾದರೂ ಸಾಧ್ಯವಿದೆಯೇ? ಇವತ್ತು ಎಲ್ಲರೂ ಜನಲೋಕಪಾಲ, ಲೋಕಾಯುಕ್ತದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಲೋಕಾಯುಕ್ತ ಕಾಯಿದೆಯನ್ನು ಮೊಟ್ಟಮೊದಲಿಗೆ ಜಾರಿಗೆ ತಂದವರೇ ರಾಮಕೃಷ್ಣ ಹೆಗಡೆ ಎಂದರೆ ನಂಬುತ್ತೀರಾ?
ಆಡಳಿತದಲ್ಲಿ ಭ್ರಷ್ಟಾಚಾರವನ್ನು ಹತ್ತಿಕ್ಕುವ ಸಲುವಾಗಿ ಲೋಕಾಯುಕ್ತವನ್ನು ಜಾರಿಗೆ ತಂದಿದ್ದು ಮಾತ್ರವಲ್ಲ, ‘ಖ್ಡ್ಟ ಟ್ಟಡ್ಟಿ’ (ಸ್ವ ಇಚ್ಛೆಯಿಂದ ಪ್ರಕರಣ ದಾಖಲಿಸಿಕೊಳ್ಳುವ ಅಧಿಕಾರ) ಪವರ್ ಕೊಟ್ಟರು! ಕೊನೆಗೆ ಪಕ್ಷದೊಳಗೆ ಎದುರಾದ ಭಾರೀ ಒತ್ತಡಕ್ಕೆ ಮಣಿದು ಅದನ್ನು ಹಿಂತೆಗೆದುಕೊಂಡಿದ್ದು ಬೇರೆ ಮಾತು. ಆದರೆ ಹೆಗಡೆಯವರಲ್ಲಿದ್ದ ಪ್ರಾಮಾಣಿಕ ಕಾಳಜಿಯನ್ನು ಮರೆಯಲು ಸಾಧ್ಯವಿಲ್ಲ. ಎ.ಡಿ. ಕೌಶಲ್ ಮೊದಲ ಲೋಕಾಯುಕ್ತರಾಗಿ ನೇಮಕಗೊಂಡರು. ಮಂತ್ರಿಗಳನ್ನು ವಿಚಾರಣೆ ನಡೆಸುವ ಅಧಿಕಾರವನ್ನು ಲೋಕಾಯುಕ್ತಕ್ಕೆ ಕೊಡಲಾಯಿತು. ಇಲ್ಲಿ ಗಮನಿಸಬೇಕಾದ ಮತ್ತೊಂದು ಗಮನಾರ್ಹ ಅಂಶವೆಂದರೆ ಸ್ವಜನಪಕ್ಷಪಾತ, ಪ್ರಭಾವಗಳಿಂದ ಲೋಕಾಯುಕ್ತವನ್ನು ದೂರವಿಡುವ ಸಲುವಾಗಿ ಲೋಕಾಯುಕ್ತರಾಗಿ ಅನ್ಯರಾಜ್ಯದ ನ್ಯಾಯಾಧೀಶರನ್ನು ನೇಮಕ ಮಾಡುವ ಸಂಪ್ರದಾಯ ಆರಂಭಿಸಿದರು ಹೆಗಡೆ. ಇದನ್ನು ಮುರಿದಿದ್ದು ಎಚ್.ಡಿ. ದೇವೇಗೌಡ. ಕೇವಲ ಒಂದು ದಿನದ ಮಟ್ಟಿಗೆ ನಮ್ಮ ರಾಜ್ಯ ಹೈಕೋರ್ಟ್್ನ ಮುಖ್ಯ ನ್ಯಾಯಾಧೀಶರಾಗಿದ್ದ ಹಕೀಂ ಅವರನ್ನು ಲೋಕಾಯುಕ್ತರನ್ನಾಗಿ ಮಾಡಿದ ದೇವೇಗೌಡರು, ಒಂದು ರೀತಿಯಲ್ಲಿ ಲೋಕಾಯುಕ್ತ ಸಂಸ್ಥೆಯನ್ನೂ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗೆ ದಾರಿ ಮಾಡಿಕೊಟ್ಟರು. ರಾಮಕೃಷ್ಣ ಹೆಗಡೆಯವರು ಎಂತಹ ವ್ಯಕ್ತಿಯೆಂದರೆ ಮೆಡಿಕಲ್ ಸೀಟು(ಎಂಡಿ) ಕೊಡಿಸಿದ್ದಕ್ಕೆ ಪ್ರತಿಯಾಗಿ ಲಂಚಪಡೆದುಕೊಳ್ಳಲಾಗಿದೆ ಎಂದು ಎ.ಕೆ. ಸುಬ್ಬಯ್ಯನವರು ಆರೋಪ ಮಾಡಿದಾಗ ಸ್ವಂತ ಮಗನ ವಿರುದ್ಧವೇ ನ್ಯಾಯಾಂಗ ತನಿಖೆಗೆ ಆದೇಶ ಮಾಡಿದರು. ಹಾಗೆ ಮಾಡಿದ ದೇಶದ ಮೊದಲ ಹಾಗೂ ಏಕೈಕ ಮುಖ್ಯಮಂತ್ರಿ ಅವರು! ಅವರ ಸಹೋದರ ಗಣೇಶ್ ಹೆಗಡೆ ಅಂತರ್್ರಾಜ್ಯ ಅಕ್ಕಿ ಸಾಗಾಣೆ, ದಾಸ್ತಾನಿನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದಾಗ ಒಡಹುಟ್ಟಿದವನ ವಿರುದ್ಧವೂ ತನಿಖೆ ಮಾಡಿಸಿದರು.
ಹೀಗೆ ಆಡಳಿತದಲ್ಲಿ ಮೌಲ್ಯಾಧಾರಿತ ನಿಲುವು, ನಿರ್ಧಾರಗಳನ್ನು ತೆಗೆದುಕೊಂಡರು!
ಇದು ಆಡಳಿತ ಹಾಗೂ ಜನಮಾನಸದಲ್ಲಿ ಒಳ್ಳೆಯ ಪರಿಣಾಮ ಬೀರಿತು. ಹಾಗಾಗಿ ಹೆಗಡೆ ಆಡಳಿತದ ಬಗ್ಗೆ ಜನರಲ್ಲಿ ಒಳ್ಳೆಯ ಇಂಪ್ರೆಷನ್ ಬಂತು. ಅವರ ಆಡಳಿತದಲ್ಲಿ ಜಾರಿಗೆ ಬಂದ ಸಮಗ್ರ ಶಿಕ್ಷಣ ಕಾಯಿದೆಯನ್ನು ಮರೆಯಲು ಸಾಧ್ಯವೆ? ಇವತ್ತು ನಾವು ಕಾಣುವ ಸಿಇಟಿ ಮತ್ತು ಅದರ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಉಚಿತ ಸೀಟು ಸೌಲಭ್ಯಕ್ಕೆ ಹೆಗಡೆಯವರ ಜನತಾ ಸರ್ಕಾರ ಜಾರಿಗೆ ತಂದ ಈ ಕಾಯಿದೆಯೇ ಕಾರಣ. ರಾಷ್ಟ್ರದಲ್ಲೇ ಮೊದಲ ಬಾರಿಗೆ ರ್ಯಾಗಿಂಗ್ ನಿಷೇಧ ಮಾಡಲಾಯಿತು. ಅದನ್ನು ಕ್ರಿಮಿನಲ್ ಅಪರಾಧ ಎಂದು ಘೋಷಿಸಲಾಯಿತು. 1985ರಲ್ಲಿ ಕ್ಯಾಪಿಟೇಷನ್ ಫೀ ಅನ್ನು ನಿಷೇಧ ಮಾಡಿದ್ದು ದೇಶದಲ್ಲೇ ಪ್ರಥಮ. ಗುಂಡೂರಾವ್ ಕಾಲದಲ್ಲಿ ಆರಂಭವಾಗಿದ್ದ ಗೂಂಡಾಗಿರಿಯನ್ನು ಮಟ್ಟಹಾಕಿದ್ದು, ಆಲ್ಟರ್ನೇಟಿವ್ ವಾಟರ್ ಸೋರ್ಸಸ್ ಅಂದರೆ ಬಾವಿ ಬದಲು ವ್ಯಾಪಕವಾಗಿ ಬೋರ್ ನಿರ್ಮಾಣ ಕಾರ್ಯ ಆರಂಭಿಸಿದ್ದೂ ಹೆಗಡೆಯವರ ಆಡಳಿತದಲ್ಲೇ. ಜತೆಗೆ ಐಎಎಸ್ ಅಧಿಕಾರಿಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ಮೂಲಕ ಒಳ್ಳೆಯ ಆಡಳಿತ ಕೊಡುವುದಕ್ಕೂ ಪ್ರಯತ್ನಿಸಿದರು, ಪಂಚಾಯತ್ ರಾಜ್ ಮೂಲಕ ಅಧಿಕಾರ ವಿಕೇಂದ್ರೀಕರಣಕ್ಕೂ ದಾರಿ ಮಾಡಿಕೊಟ್ಟರು. ಆಗಿನ ಕಾಲದಲ್ಲಿ ಈಗಿನಂತೆ ಹಣಬಲ, ತೋಳ್ಬಲದ ಪ್ರಭಾವ ಇರಲಿಲ್ಲ ಅಂದುಕೊಳ್ಳಬೇಡಿ. ಈಗಿನ ಗಣಿಧಣಿಗಳಂತೆ ಆಗ ಖೋಡೆ, ಕೇಶವಲು ರೂಪದಲ್ಲಿ ಹೆಂಡದ ದೊರೆಗಳಿದ್ದರು. ಆದರೆ ಹೆಗಡೆಯವರು ಅವರನ್ನೆಂದೂ ತೊಡೆಮೇಲೆ ಕೂರಿಸಿಕೊಳ್ಳಲಿಲ್ಲ.
ಹಾಗಂತ ಹೆಗಡೆಯವರಲ್ಲಿ ದೌರ್ಬಲ್ಯಗಳೇ ಇರಲಿಲ್ಲವೆಂದಲ್ಲ. ಸದ್ಗುಣಗಳ ಜತೆ ಕೆಲ ದೌರ್ಬಲ್ಯ, ಚಾಲಾಕಿತನಗಳು ಸೇರಿಕೊಂಡಿದ್ದವು. ಒಬ್ಬ ಚತುರ ರಾಜಕಾರಣಿಯಂತೆಯೇ ರೈತ ಹಾಗೂ ದಲಿತ ಸಂಘಟನೆಗಳ ಸದ್ದಡಗಿಸಿದರು. ಸಿದ್ದಲಿಂಗಯ್ಯನವರನ್ನು ಎಂಎಲ್್ಸಿ ಮಾಡಿದರೆ, ದೇವನೂರು ಮಹಾದೇವ ಅವರ ಸಹೋದರ ದೇವನೂರ ಶಿವಮಲ್ಲರನ್ನು ರಾಜಕಾರಣಕ್ಕೆ ತಂದು ವಯಸ್ಕ ಶಿಕ್ಷಣ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಿ ದಲಿತರನ್ನು ಒಡೆದರು. ಒಬ್ಬ ರಾಜನಂತೆಯೇ ಹೆಣ್ಣು-ಹೊನ್ನು-ಮಣ್ಣು ಇವುಗಳಲ್ಲಿ ಕೆಲವನ್ನು ಬಹುವಾಗಿ ಆಳಿದರು!
ಆದರೂ ಒಬ್ಬ ಮುಖ್ಯಮಂತ್ರಿಯಾಗಿ ಅವರು ಮಾಡಿದ ಕಾರ್ಯಗಳು ಮುಂದಿನ ಹಲವು ತಲೆಮಾರು ನೆನಪಿನಲ್ಲಿಟ್ಟುಕೊಳ್ಳುವಂಥವಾಗಿದ್ದವು. ಅವರಂಥ ಸೂಕ್ಷ್ಮಜೀವಿ, ಸಂವೇದನಾಶೀಲ ವ್ಯಕ್ತಿ ಮತ್ತೆ ಕರ್ನಾಟಕದ ಮುಖ್ಯಮಂತ್ರಿಯಾಗಲಿಲ್ಲ ಎಂದರೂ ತಪ್ಪಾಗುವುದಿಲ್ಲ. ಇಂತಹ ರಾಮಕೃಷ್ಣ ಹೆಗಡೆಯವರು ಜನಿಸಿದ್ದು 1926, ಆಗಸ್ಟ್ 29ರಂದು. ಅವರಿದ್ದಿದ್ದರೆ 85 ತುಂಬುತ್ತಿತ್ತು. ಪ್ರಸ್ತುತ ಹೊಲಸೆದ್ದಿರುವ ರಾಜಕಾರಣವನ್ನು ಕಂಡಾಗ ಹೆಗಡೆ ನೆನಪಾದರು.
Thank you sir,for writting such a great leaders info,we people not lived in that time but you info us to back.helps us to know our old CM.
Wow Never knew so much about him, i should say i dint know him at all other than his name and party
Thanks for the valid information about Hegde.
Regards
when i was in primary ,i had attented one his function in bidar.suppose he could have became P.M. of india ,some what changes in development in administration ,janalokpal bill could have implemented earlier .
ಮà³à²‚ದೆ ನಮà³à²® ರಾಜà³à²¯à²µà²¨à³à²¨à³ ಆಳà³à²µ ಮà³à²–à³à²¯à²®à²‚ತà³à²°à²¿à²—ಳಿಗೆ ಮà³à²–à³à²¯à²®à²‚ತà³à²°à²¿ ಗಾದಿ ದೊರಕಿದೊಡನೆ ಸಿಕà³à²•ಹಣವನೆಲà³à²²à²¾ ಸೂರೆ ಮಾಡಲೠಹೊರಟೠಸಿಕà³à²•ಿ ಬಿದà³à²¦à³ ನà³à²¯à²¾à²¯à²¾à²‚ಗದ ಮೆಟà³à²Ÿà²²à³‡à²°à²¿à²°à³à²µ ಯಡà³à²¡à²¿ , ಎಚà³.ಡಿ.ಕೆ ಯಂತವರೠಎಚà³à²šà²°à²¿à²•ೆಯಾಗಲಿ, ಹೆಗಡೆ ಯಂತವರ ದೂರ ದೃಷà³à²Ÿà²¿ ಆದರà³à²¶à²µà²¾à²—ಲಿ ಸೂಕà³à²¤ ಸಮಯದಲà³à²²à²¿ ಒಳà³à²³à³†à²¯ ಲೇಖನ ಬರೆದಿದà³à²¦à³€à²°à²¿ ತಮಗೆ ಧನà³à²¯à²µà²¾à²¦à²—ಳà³.ನವೀನೠಕà³à²®à²¾à²°à³ ಪಿರಿಯಾಪಟà³à²Ÿà²£
Pratap ji, Thanks for such a great article with so many hidden truths about our beloved Ramakrshina Hegde. Definitely he was a wonderful leader and model for all present leaders. Really this article makes real sense in this time point when politics is nothing like a garbage bin.
its a really good article……..
How can we forget ramkrishna hegde ?
Bus pass, CET, Lokayukta etc all are his projects in karnataka which we are using even today effectively,,,,,,,,
THANKS PRATAP……….
Thanks for this article.
I am in a hope that our new CM will lead the way of Mr.Hegade. I wish him all the best for his next 20 month tenure.
Very informative!
Well, Mr. Hegde too had feet of clay.
thank u so much………..for introducing this wonderful persnality…
I want all the present politicians to know about such personalities. i do believe that there are good even now, but the fact is the so called leaders of present day which are illiterate, immature, etc. worst charactered are not allowing the good people to come forth.
In my perspective, the present is the ” LAXMI YUGA OR ERA OF MONEY ”, good politicians like RAMAKRISHNA HEGDE who i admire to, won’t come to lime light till it reaches its peak. And i am sure that we will find another RAMAKRISHNA HEGDE at right time.
Please write a biography of RAMAKRISHNA HEGDE
And i thank Mr. Pratap Simha worthy column………..
.
I apritiate if you can write more about Ramakrishna Hegde.. he was a very good leader..!!
thanks for the good article..
VeRy VeRy MoRe iNfOrMaTiVe. . .
ivathina nimma ankana super tabloy patrikeya pathrakarthana hesaru neravaagi heladhe sariyagi athana mukakke punch kotidhira. mechha beku nimma dhyrayakke. ondu pramuka dinapatrikeyalli sariyagi athanige mangalarathi madidhira.
ನಿಮಗೆ ರಾಜà³à²¯à³‹à²¤à³à²¸à²µ ಪà³à²°à²¶à²¸à³à²¤à²¿ ಸಿಕà³à²•ಿದೆ ಅಂತ ತಿಳಿಯಿತà³. ಅà²à²¿à²¨à²‚ದನೆಗಳà³!
ನಿಮà³à²® ಬಗà³à²—ೆ ಹೆಚà³à²šà³ ತಿಳಿದà³à²•ೊಳà³à²³à³à²µ ಸಲà³à²µà²¾à²—ಿ ನಿಮà³à²® ವೆಬà³à²¸à³ˆà²Ÿà³ ನೋಡಿದೆ ಹಾಗೠಈ ಲೇಖವನವನà³à²¨à³ ಓದಿದೆ. ಒಂದೠಒಳà³à²³à³†à²¯ ಲೇಖವನವನà³à²¨à³ ಬರೆದಿದà³à²¦à³€à²°, ನಿಮಗೆ ಧನà³à²¯à²µà²¾à²¦à²—ಳà³!
Hello Sir,
Thanks for remanding a wonderful leader. One thing I felt after reading this article is, even though past politicians were corrupt , they have the fire within them to do something for their state and country. They never did 3rd class politics. They have some set of standards.