*/
Date : 01-04-2013 | 15 Comments. | Read More
ಅದು 1928, ಅಕ್ಟೋಬರ್ 30. ಸೈಮನ್ ಆಯೋಗ ಇಂಗ್ಲೆಂಡ್ನಿಂದ ಆಗಮಿಸಿತ್ತು, ಭಾರತೀಯರಿಗೆ ಎಷ್ಟು ಸ್ವಾತಂತ್ರ್ಯ ಕೊಡಬೇಕೆಂಬುದನ್ನು ನಿರ್ಧರಿಸಲು. ಅದು ಲಾಹೋರ್ ರೈಲು ನಿಲ್ದಾಣಕ್ಕೆ ಬಂದಿಳಿಯುವ ವೇಳೆಗೆ ಲಾಲಾ ಲಜಪತ್ರಾಯ್ ಹಾಗೂ ಪಂಡಿತ್ ಮದನ್ ಮೋಹನ್ ಮಾಳವೀಯ ನೇತೃತ್ವದಲ್ಲಿ ‘ನೌಜವಾನ್ ಭಾರತ್ ಸಭಾ’ ಭಾರಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಸ್ಟೇಷನ್ನಿನಲ್ಲಿ ಇಳಿದ ಕೂಡಲೇ ಸೈಮನ್ ಕಮಿಷನ್ನಿಗೆ ಕಪ್ಪು ಬಾವುಟ ತೋರಿಸುವ ಮತ್ತು ‘ವಾಪಸ್ಸು ಹೋಗಿ’ ಎಂದು ಘೋಷಣೆ ಹಾಕುವ ಯೋಜನೆ ಅದಾಗಿತ್ತು. ಸೈಮನ್ ವಿರೋಧಿ ಪ್ರದರ್ಶನದ ನಿರ್ಧಾರ ಆಗುತ್ತಿದ್ದಂತೆಯೇ ಲಾಲಾ […]
Date : 17-03-2013 | 31 Comments. | Read More
ಈ ಹಿಂದೆ 2007ರಲ್ಲಿ ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ 1606, ಜೆಡಿಎಸ್ 1502 ಸೀಟುಗಳೊಂದಿಗೆ ಮೊದಲ ಹಾಗೂ ಎರಡನೇ ಸ್ಥಾನ ಗಳಿಸಿದರೆ 1180 ಸ್ಥಾನಗಳೊಂದಿಗೆ ಉಳಿದೊಂದೇ ಕೊನೆಯ ಸ್ಥಾನವನ್ನು ಬಿಜೆಪಿ ಪಡೆದುಕೊಂಡಿತ್ತು. ಆದರೇನಂತೆ 2008ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 80, ಜೆಡಿಎಸ್ 28 ಸ್ಥಾನ ಪಡೆದುಕೊಂಡರೆ, ಬಿಜೆಪಿ 110 ಸ್ಥಾನ ಗಳಿಸಿ ಅಧಿಕಾರ ಹಿಡಿಯಿತು.
Date : 15-03-2013 | 24 Comments. | Read More
‘ಒಬ್ಬ ಸಾಹಿತಿ ಆಡಿದ ಅಪ್ಪಟ ತಾಜಾ ಸುಳ್ಳಿನ ಸ್ಯಾಂಪಲ್ ಕೊಡುತ್ತೇನೆ. ಶ್ರೀರಂಗಪಟ್ಟಣದಲ್ಲಿ ಸ್ಥಾಪನೆಯಾಗಲಿರುವ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಹೆಸರಿಡುವುದನ್ನು ವಿರೋಧಿಸುವಾಗ ಟಿಪ್ಪು ಹಿಂದು ದ್ವೇಷಿಯೆಂದೂ, 71 ಸಾವಿರ ಹಿಂದುಗಳನ್ನು ಬಲಾತ್ಕಾರವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದನೆಂದು ಸುಳ್ಳು ಹೇಳಿದ್ದಾರೆ. ಇದನ್ನು ಕೇಳಿದೊಡನೆ ಅವನ ಆಳ್ವಿಕೆಯ ಕಾಲದಲ್ಲಿ ಕೊಡಗು ಪ್ರಾಂತ್ಯದಲ್ಲಿ ಅಷ್ಟು ಜನಸಂಖ್ಯೆ ಇತ್ತೇ ಎಂಬ ಬಗ್ಗೆ ಸಂಶಯವಿದೆ. ಸರ್ಕಾರವೇ ಪ್ರಕಟಿಸಿರುವ ಕೂರ್ಗ್ ಗೆಝೆಟಿಯರ್ ನೋಡಿದೆ. 1871ರಲ್ಲಿ ಕೂರ್ಗ್ನಲ್ಲಿ ಕೇವಲ 1,68,312 ಜನರಿದ್ದರು. 1981ರ ಜನಗಣತಿ ಪ್ರಕಾರ 3,22,829 ಜನಸಂಖ್ಯೆಯಿತ್ತು. […]
Date : 15-03-2013 | 2 Comments. | Read More
ಇಂಥದ್ದೊಂದು ಸಕಾರಾತ್ಮಕ ಬೆಳವಣಿಗೆ ಕನಿಷ್ಠ ಗುಜರಾತ್ನಲ್ಲಂತೂ ಕಂಡುಬರುತ್ತಿದೆ! ಅದಕ್ಕೂ ಮೊದಲು ಹತ್ತು ವರ್ಷಗಳ ಕಾಲ ಹಿಂದು-ಮುಸ್ಲಿಮರು ಪರಸ್ಪರ ಮುಖ ನೋಡಿಕೊಳ್ಳದಷ್ಟು ದೂರವಾಗುವಂತೆ ಮಾಡಿದ ಘಟನೆಯನ್ನು ಗಮನಿಸೋಣ. 2001, ಅಕ್ಟೋಬರ್ 7ರಂದು ಗುಜರಾತ್ನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಇನ್ನೂ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿಯೇ ಇರಲಿಲ್ಲ. ಸಂವಿಧಾನದ ನಿಯಮದಂತೆ ಚುನಾವಣೆಯಲ್ಲಿ ಆರಿಸಿಬರುವ ಸಲುವಾಗಿ 2002, ಫೆಬ್ರವರಿ 19ರಂದು ರಾಜ್ಕೋಟ್ನಿಂದ ವಿಧಾನಸಭೆಗೆ ಸ್ಪರ್ಧಿಸಿದರು. ಫೆಬ್ರವರಿ 24ರಂದು ಫಲಿತಾಂಶ ಪ್ರಕಟವಾಯಿತು. ಮೋದಿ ಗೆಲುವು ಸಾಧಿಸಿದರು. ಇದಾಗಿ ಮೂರು ದಿನಗಳಲ್ಲಿಯೇ ಅಂದರೆ, […]
Date : 23-02-2013 | 16 Comments. | Read More
2011, ಮೇ 2. ಪಾಕಿಸ್ತಾನದ ಅಬೋಟಾಬಾದ್ನಲ್ಲಿ ಅಡಗಿ ಕುಳಿತಿದ್ದ ಒಸಾಮಾ ಬಿನ್ ಲಾಡೆನ್ನನ್ನು ಹೆಕ್ಕಿ ಕೊಂದಿದ್ದಲ್ಲದೆ ಆತನ ಹೆಣವನ್ನು ಸಂಸ್ಕಾರ ಮಾಡುವ ಬದಲು ಸಮುದ್ರಕ್ಕೆ ಬಿಸಾಡಿ ಅಮೆರಿಕ ಸೇಡು ತೀರಿಸಿಕೊಂಡಾಗ ಅಲ್ ಖೈದಾ ಅಮೆರಿಕದ ವಿರುದ್ಧ ಪ್ರತೀಕಾರ ತೆಗೆದುಕೊಂಡೇ ತೀರುತ್ತದೆ ಎಂದು ಎಲ್ಲರೂ ಭಾವಿಸಿದರು. ಅದಕ್ಕೆ ತಕ್ಕಂತೆ 2011, ಮೇ 6ರಂದು ಲಾಡೆನ್ ಸಾವನ್ನು ಖಾತ್ರಿಪಡಿಸಿದ ಅಲ್ ಖೈದಾ ಕೂಡ ತನ್ನ ವೆಬ್ಸೈಟ್ನಲ್ಲಿ ಅಂಥದ್ದೇ ಮಾತನಾಡಿತು. ಪಾಕಿಸ್ತಾನದ ತೆಹ್ರೀಕೆ ತಾಲಿಬಾನ್ ಕೂಡ ಸೇಡಿನ ಸೊಲ್ಲೆತ್ತಿತು. ಹಾಗಾಗಿ ಭಯ, […]
Date : 23-02-2013 | 26 Comments. | Read More
ಮೊನ್ನೆ ಫೆಬ್ರವರಿ 6ರಂದು ಹೊಸದಿಲ್ಲಿಯ ಪ್ರತಿಷ್ಠಿತ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್ನಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮಾತಿಗೆ ನಿಲ್ಲುವವರಿದ್ದರು. ಒಂದರ ಹಿಂದೆ ಒಂದರಂತೆ ಹೊರಬರುತ್ತಿರುವ ಚುನಾವಣಾ ಸಮೀಕ್ಷೆಗಳು, ಮೋದಿಯೇ ಮುಂದಿನ ಪ್ರಧಾನಿಯಾಗಬೇಕೆಂಬುದು ಬಹುಜನರ ಅಪೇಕ್ಷೆಯಾಗಿದೆ ಎಂಬ ಜನಾಭಿಪ್ರಾಯಗಳು, ಅದಕ್ಕೂ ಪೂರ್ವದಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸಾಧಿಸಿದ ಸತತ ಮೂರನೇ ವಿಜಯ, ಮೋದಿಯೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಬೇಕೆಂಬ ಕಾರ್ಯಕರ್ತರು ಹಾಗೂ ಕೆಲ ದೊಡ್ಡ ನೇತಾರರ ಕರೆಗಳ ಹಿನ್ನೆಲೆಯಲ್ಲಿ ಮೋದಿಯವರ ಶ್ರೀರಾಮ್ ಕಾಲೇಜಿನ ಭಾಷಣಕ್ಕೆ ಇನ್ನಿಲ್ಲದ ಮಹತ್ವ […]
Date : 15-02-2013 | 8 Comments. | Read More
Netaji Subhash Chandra Bose and Germany! ಈ ಹೆಸರಿನ ಪುಸ್ತಕವೊಂದು ಮೊನ್ನೆ ಬುಧವಾರ ರಾಷ್ಟ್ರಪತಿ ಭವನದಲ್ಲಿ ಬಿಡುಗಡೆಯಾಯಿತು. ಅದನ್ನು ಬರೆದವರು ಮತ್ತಾರೂ ಅಲ್ಲ ನೇತಾಜಿ ಸುಭಾಶ್ಚಂದ್ರ ಬೋಸರ ಏಕಮಾತ್ರ ಪುತ್ರಿ ಪ್ರೊ.ಅನಿತಾ ಬೋಸ್ ಫಾಫ್! ಪುಸ್ತಕವನ್ನು ಬಿಡುಗಡೆ ಮಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ‘ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿ ಪಾತ್ರ ತುಂಬಾ ವಿಶಿಷ್ಟವಾದುದು. ‘ಇಂದಿಗೂ’ ನೇತಾಜಿ ಭಾರತೀಯರೆಲ್ಲರಿಗೂ ಪ್ರೇರಕರಾಗಿದ್ದಾರೆ’ ಎಂದರು.
Date : 05-02-2013 | 7 Comments. | Read More
2009, ಫೆಬ್ರವರಿ 16ರಂದೂ ಹೀಗೆಯೇ ಆಗಿತ್ತು. ಕೆಎಸ್ಆರ್ಪಿ ಕಾನ್ಸ್ಟೆಬಲ್ ಶಿವಕುಮಾರ್ ರಜೆ ಮೇಲೆ ತೆರಳಿದ್ದರು. ಆದರೆ ಕಮಾಂಡೆಂಟ್ ರಜೆ ದಯಪಾಲಿಸಿದ್ದರೂ ಅವರ ಕೆಳಗಿನ ಇನ್ಸ್ಪೆಕ್ಟರ್ ನಾಗೇಗೌಡರಿಗೆ ಸಹಿಸಲಾಗಲಿಲ್ಲ. ಆ ರಜೆಯನ್ನು ಕಡಿತ ಮಾಡಿ, ವಾಪಸ್ ಬಾ ಎಂದರು. ಶಿವಕುಮಾರ್ಗೂ ಹತಾಶೆಯ ಕಟ್ಟೆಯೊಡೆಯಿತು, ಬಂದೂಕನ್ನೆತ್ತಿ ಇನ್ಸ್ಪೆಕ್ಟರ್ ನಾಗೇಗೌಡರ ಎದೆ ಸೀಳಿ, ಕೆಳಕ್ಕುರುಳಿಸಿದ. ಅಷ್ಟು ಮಾತ್ರವಲ್ಲ, ತಾನೂ ಆತ್ಮಹತ್ಯೆ ಮಾಡಿಕೊಂಡ. ಕಳೆದ ಭಾನುವಾರ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲೂ ರಕ್ತ ಹರಿಯಿತು. ಗೌರಿಬಿದನೂರಿನಲ್ಲಿ ಕಟ್ಟಿಸಿರುವ ಹೊಸಮನೆಯ ಗೃಹಪ್ರವೇಶಕ್ಕೆ ಕಾನ್ಸ್ಟೆಬಲ್ ಆನಂದ್ ಕುಮಾರ್ […]
Date : 30-01-2013 | 32 Comments. | Read More
Mr. Subhas Chandra Bose is dead! ಇಂಥದ್ದೊಂದು ಆಘಾತಕಾರೀ ಸುದ್ದಿ ಮೊದಲು ಹೊರಬಿದ್ದದ್ದು 1945ರ ಆಗಸ್ಟ್ 23ನೇ ತಾರೀಕು. ಸುದ್ದಿ ಬಿತ್ತರಿಸಿದ್ದು ಜಪಾನಿನ ‘ರೇಡಿಯೋ ಟೋಕಿಯೋ’. ಇಡೀ ಜಗತ್ತು ಇವತ್ತಿಗೂ ಅನುಮಾನದಿಂದಲೇ ನೋಡುವ ಅತ್ಯಂತ ದೊಡ್ಡ ಐತಿಹಾಸಿಕ ಸುಳ್ಳೊಂದು ಸದ್ದಿಲ್ಲದೆ ಹೀಗೆ ಹುಟ್ಟಿಕೊಂಡಿತು. ರೇಡಿಯೋ ಟೋಕಿಯೋದ ನ್ಯೂಸ್ ರೀಡರ್ ಹೇಳಿದ್ದಿಷ್ಟು “ವಿಮಾನ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡ ಮಿಸ್ಟರ್ ಸುಭಾಶ್ಚಂದ್ರ ಬೋಸ್ ಜಪಾನಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಭಾರತದ ‘ಆಜಾದ್ ಹಿಂದ್’ ಪ್ರಾಂತೀಯ ಸರ್ಕಾರದ ಮುಖ್ಯಸ್ಥರಾಗಿದ್ದ ಮಿ. ಬೋಸ್ […]
Date : 30-01-2013 | 18 Comments. | Read More
ಘಟನೆ-1 ಬುಧವಾರ ರಾತ್ರಿ ತಮಿಳುನಾಡು ಸರ್ಕಾರ ಏಕಾಏಕಿ ಕಮಲ್ ಹಾಸನ್ ಅವರ ‘ವಿಶ್ವರೂಪಂ’ ಚಿತ್ರದ ಬಿಡುಗಡೆಗೆ ಎರಡು ವಾರಗಳ ನಿರ್ಬಂಧ ಹಾಕಿಬಿಟ್ಟಿದೆ! ಈ ಚಿತ್ರ ಮುಸಲ್ಮಾನರು ಹಾಗೂ ಅವರ ನಂಬಿಕೆಗಳಿಗೆ ಘಾಸಿಯುಂಟುಮಾಡುತ್ತದೆ. ಒಂದು ವೇಳೆ, ಚಿತ್ರವನ್ನು ಬಿಡುಗಡೆ ಮಾಡಿದ್ದೇ ಆದರೆ ಸಾಮಾಜಿಕ ಸೌಹಾರ್ದ ಕದಡಲಿದೆ, ಹಾಗಾಗಿ ಬಿಡುಗಡೆ ಮಾಡಕೂಡದು ಎಂದು ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಳಗಂ (ಖಿಂಂಓ) ಹಾಗೂ ಅದರ ಶಾಸಕ ಜವಾಹಿರುಲ್ಲಾ ಎಚ್ಚರಿಕೆ ನೀಡಿದ್ದಾರೆ. ಕೆಲವು ದೃಶ್ಯಗಳನ್ನು ಕಿತ್ತು ಹಾಕಿದರೂ ಮುಸಲ್ಮಾನ ಸಮುದಾಯ ಒಪ್ಪುವುದಿಲ್ಲ ಎಂದು […]