Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಮೋದಿಯೆಂದರೆ ಮೋಡಿ, ನೀವದನ್ನು ಒಪ್ಪಿ ಬಿಡಿ!

ಮೋದಿಯೆಂದರೆ ಮೋಡಿ, ನೀವದನ್ನು ಒಪ್ಪಿ ಬಿಡಿ!

ಮೊನ್ನೆ ಫೆಬ್ರವರಿ 6ರಂದು ಹೊಸದಿಲ್ಲಿಯ ಪ್ರತಿಷ್ಠಿತ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮಾತಿಗೆ ನಿಲ್ಲುವವರಿದ್ದರು. ಒಂದರ ಹಿಂದೆ ಒಂದರಂತೆ ಹೊರಬರುತ್ತಿರುವ ಚುನಾವಣಾ ಸಮೀಕ್ಷೆಗಳು, ಮೋದಿಯೇ ಮುಂದಿನ ಪ್ರಧಾನಿಯಾಗಬೇಕೆಂಬುದು ಬಹುಜನರ ಅಪೇಕ್ಷೆಯಾಗಿದೆ ಎಂಬ ಜನಾಭಿಪ್ರಾಯಗಳು, ಅದಕ್ಕೂ ಪೂರ್ವದಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸಾಧಿಸಿದ ಸತತ ಮೂರನೇ ವಿಜಯ, ಮೋದಿಯೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಬೇಕೆಂಬ ಕಾರ್ಯಕರ್ತರು ಹಾಗೂ ಕೆಲ ದೊಡ್ಡ ನೇತಾರರ ಕರೆಗಳ ಹಿನ್ನೆಲೆಯಲ್ಲಿ ಮೋದಿಯವರ ಶ್ರೀರಾಮ್ ಕಾಲೇಜಿನ ಭಾಷಣಕ್ಕೆ ಇನ್ನಿಲ್ಲದ ಮಹತ್ವ ದೊರೆತ್ತಿತ್ತು. ನರೇಂದ್ರ ಮೋದಿಯವರ ತಥಾಕಥಿತ ಟೀಕಾಕಾರ ಚಾನೆಲ್‌ಗಳಾದ ಎನ್‌ಡಿಟಿವಿ, ಸಿಎನ್‌ಎನ್-ಐಬಿಎನ್‌ಗಳು ಮಾತ್ರವಲ್ಲ ಹೆಡ್‌ಲೈನ್ಸ್ ಟುಡೆ, ಟೈಮ್ಸ್ ನೌಗಳು ಭಾಷಣದ ನೇರಪ್ರಸಾರಕ್ಕೆ ಮುಂದಾಗಿದ್ದವು. ಇದೆಲ್ಲಕ್ಕಿಂತ ಆಶ್ಚರ್ಯದ ಸಂಗತಿಯೆಂದರೆ ಸರ್ಕಾರಿ ಸ್ವಾಮ್ಯದ ದೂರದರ್ಶನ (ಡಿಡಿ ನ್ಯೂಸ್ ಹಾಗೂ ಡಿಡಿ ಪ್ರಾದೇಶಿಕ) ಕೂಡ ನೇರಪ್ರಸಾರಕ್ಕೆ ಬಂದಿತ್ತು!

Emerging business models in the global scenario!

ಈ ವಿಷಯವಾಗಿ ನರೇಂದ್ರ ಮೋದಿ ಅವರು ಮಾತನಾಡಬೇಕಿತ್ತು. ಆದರೆ ಎಲ್ಲರ ನಿರೀಕ್ಷೆ ರಾಜಕೀಯವನ್ನು ಎಳೆದು ತರುತ್ತಾರೆ, ಭ್ರಷ್ಟ ಕಾಂಗ್ರೆಸ್ಸನ್ನು ಟೀಕಿಸುತ್ತಾರೆ, ಪ್ರಧಾನಿ ಸ್ಥಾನದ ಮೇಲೆ ತಮಗಿರುವ ಆಕಾಂಕ್ಷೆಯನ್ನು ಹೊರಹಾಕುತ್ತಾರೆ ಎಂದೇ ಎಲ್ಲರೂ ಕಾತರದಿಂದಿದ್ದರು. ಇಲ್ಲವಾದರೆ ಒಂದು ರಾಜ್ಯದ ಮುಖ್ಯಮಂತ್ರಿಯ ಭಾಷಣವನ್ನು ಎಲ್ಲ ಇಂಗ್ಲಿಷ್ ಚಾನೆಲ್‌ಗಳು ನೇರಪ್ರಸಾರ ಮಾಡಿದ ಘಟನೆ ಈ ಹಿಂದೆ ಎಂದಾದರೂ ನಡೆದಿತ್ತೆ?! ಅಂದು ಮೋದಿ ರಾಜಕೀಯವನ್ನು ಎಳೆದು ತರುವ ಮಾತು ಬಿಡಿ, 1800 ವಿದ್ಯಾರ್ಥಿಗಳಲ್ಲಿ ಒಂದಿಬ್ಬರು ಆಕಳಿಕೆ ತೆಗೆದಿದ್ದರೂ ಮೋದಿ ಭಾಷಣ ವಿದ್ಯಾರ್ಥಿಗಳಿಗೆ ಬೋರು ಹೊಡೆಸುತ್ತಿತ್ತು ಎಂದು ತೀರ್ಪು ಕೊಡಲು, ಟೀಕಾ ಪ್ರಹಾರ ಮಾಡಲು ಮಾಧ್ಯಮಗಳು ಕಾದು ಕುಳಿತಿದ್ದವು.

ಆದರೆ ಆಗಿದ್ದೇನು?

ಆಯೋಜಕರು ಕೊಟ್ಟಿದ್ದ ನಲವತ್ತೈದು ನಿಮಿಷ ಕಾಲಾವಕಾಶ ಕಳೆದು ಒಂದೂಕಾಲು ಗಂಟೆವರೆಗೂ ಭಾಷಣ ಮುಂದುವರಿಯಿತು. ನರೇಂದ್ರ ಮೋದಿಯವರು ಭಾಷಣ ನಿಲ್ಲಿಸಿದಾಗ ಸಿಕ್ಕಿದ್ದು Standing Ovation! ಇಡೀ ಸಭಾಂಗಣ ಎದ್ದು ನಿಂತು ಕರತಾಡನದ ಮೂಲಕ ಮೆಚ್ಚುಗೆ ಸೂಚಿಸಿತು. ಹಾಗಾದರೆ ಒಂದೂಕಾಲು ಗಂಟೆ ಮೋದಿ ಮಾತನಾಡಿದ್ದಾದರೂ ಏನು? ಆ ಭಾಷಣದ ಕೆಲವು ತುಣುಕುಗಳನ್ನು ನೋಡಿ…

———-

ನಾನೊಮ್ಮೆ ತೈವಾನ್‌ಗೆ ಭೇಟಿ ನೀಡಿದ್ದೆ. ಸ್ಥಳೀಯ ಭಾಷೆ ನಮಗೆ ತಿಳಿಯದ ಕಾರಣ ಐದಾರು ದಿನಗಳ ಭೇಟಿಯ ವೇಳೆ ಎಲ್ಲವನ್ನೂ ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎಂದು ಒಬ್ಬ ಇಂಟರ್‌ಪ್ರಿಟರ್ ಅಥವಾ ದುಭಾಷಿಯನ್ನು ನೇಮಕ ಮಾಡಿಕೊಂಡಿದ್ದೆವು. ಪ್ರವಾಸದ ಕೊನೆಯ ದಿನ, ‘ಮೋದೀಜಿ, ಅನ್ಯಥಾ ಭಾವಿಸದಿದ್ದರೆ ನಿಮಗೊಂದು ಪ್ರಶ್ನೆ ಕೇಳಬಹುದೇ?’ ಎಂದು ಸಂಕೋಚದಿಂದಲೇ ಕೇಳಿದ. ಖಂಡಿತ ಕೇಳು ಎಂದೆ. ‘ನಿಮ್ಮದು ಇಂದಿಗೂ ಹಾವಾಡಿಗರು (Snake charmers), ಮಾಟ-ಮಂತ್ರ ಮಾಡುವವರು, ಎತ್ತಿನ ಬಂಡಿಗಳ ದೇಶವಾಗಿಯೇ ಇದೆಯಾ?’ ಅದಕ್ಕೆ ನಾನಂದೆ- ‘ಇಲ್ಲಾ… ನಮ್ಮ ಈಗಿನ ಯುವಜನರಿಗೆ ಹಾವಾಡಿಸುವಷ್ಟು ಧೈರ್ಯವಿಲ್ಲ, ಹಾಗಾಗಿ ಅವರು Snake charmers ಆಗುವ ಬದಲು Mouse charmers ಆಗಿಬಿಟ್ಟಿದ್ದಾರೆ!! ಪುಂಗಿಯ ಮೇಲೆ ಕೈಯಿಡುವ ಬದಲು ಕಂಪ್ಯೂಟರ್‌ನ ಮೌಸ್ ಮೇಲೆ ಬೆರಳಿಟ್ಟು ಜಗತ್ತನ್ನೇ ಬದಲಿಸುತ್ತಿದ್ದಾರೆ!

———-

ನಾವು ಚಿಕ್ಕವರಿರುವಾಗ ಯಾವುದಾದರೂ ವಸ್ತುವನ್ನು ಖರೀದಿಸಬೇಕಿದ್ದರೆ ‘ಮೇಡ್ ಇನ್ ಜಪಾನ್‌’ ಎಂದಿದೆಯೋ ಇಲ್ಲವೋ ಎಂದು ಮೊದಲು ನೋಡುತ್ತಿದ್ದೇವು. ಜನ ಕಂಪನಿ ಹೆಸರು ನೋಡುತ್ತಿರಲಿಲ್ಲ, ‘ಮೇಡ್ ಇನ್ ಜಪಾನ್‌’ ಇದೆಯೋ ಇಲ್ಲವೋ ಎಂದು ಖಾತ್ರಿ ಮಾಡಿಕೊಳ್ಳುತ್ತಿದ್ದರು. ನಾವೇಕೆ ‘ಮೇಡ್ ಇನ್ ಇಂಡಿಯಾ’ ಎಂಬ ಗೀಳು, ವಿಶ್ವಾಸಾರ್ಹತೆಯನ್ನು ಜಗತ್ತಿನಾದ್ಯಂತ ಸೃಷ್ಟಿಸಬಾರದು? ನಮ್ಮ ದೇಶ ಕೂಡ ಅಂಥದ್ದೇ ಮಟ್ಟಕ್ಕೇರಬೇಕು, ಅಂಥ ಸ್ಥಾನಕ್ಕೆ ಕೊಂಡೊಯ್ಯುವುದೇ ನಮ್ಮ ಗುರಿಯಾಗಬೇಕು.

———-

ಇಡೀ ಜಗತ್ತು ಹೇಳುತ್ತಿದೆ 21ನೇ ಶತಮಾನ ಭಾರತದ ಶತಮಾನ. ಇನ್ನು ಕೆಲವರು ಅದು ಏಷ್ಯಾಕ್ಕೆ ಸೇರಿದ್ದು ಎನ್ನುತ್ತಿದ್ದರೆ, ಮತ್ತೆ ಕೆಲವರು ಚೀನಾದ ಶತಮಾನ ಎಂದು ಹೇಳುತ್ತಿದ್ದಾರೆ. ಆದರೆ ಇತಿಹಾಸದ ಪುಟಗಳನ್ನು ತೆಗೆದು ನೋಡಿ… ಯಾವ್ಯಾವ್ಯಾಗ ಓಟ್ಟಿಢಿಟಜಜ್ಜಜ ್ಝಡ ಡ್ಡಠ್ಠಜಟಜ, ಜ್ಞಾನವೆಂಬುದು ಪ್ರಾಮುಖ್ಯತೆ ಪಡೆದೆದಿಯೋ ಆಗೆಲ್ಲ ಭಾರತ ಜಗತ್ತನ್ನಾಳಿದೆ. ಸ್ನೇಹಿತರೇ, ಇದೂ ಕೂಡ ಜ್ಞಾನಯುಗ. ಹಾಗಾಗಿ ಈ ಶತಮಾನ ಭಾರತಕ್ಕೇ ಸೇರಿದ್ದು ಎಂದು ಆತ್ಮವಿಶ್ವಾಸದಿಂದ ನಿಮಗೆ ಹೇಳುತ್ತೇನೆ.

———-

ಒಮ್ಮೆ ದೇಶವೊಂದರ ರಾಯಭಾರಿಯೊಬ್ಬರು ನನ್ನನ್ನು ಕೇಳಿದರು- ಭಾರತ ಎದುರಿಸುತ್ತಿರುವ ಅತಿದೊಡ್ಡ ಸವಾಲುಗಳಾವುವು? ನಾನಂದೆ- ‘ಅವಕಾಶಗಳನ್ನು ನಾವು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಎಂಬುದೇ ನಮ್ಮ ಮುಂದಿರುವ ದೊಡ್ಡ ಸವಾಲು’. ‘ಯಾವುವು ಆ ಅವಕಾಶ?’ ಎಂದು ಮತ್ತೆ ಕೇಳಿದರು. ಮುಂದುವರಿದು ಹೇಳಿದೆ- ‘ಯುವಶಕ್ತಿ! ಇಡೀ ಯುರೋಪ್‌ಗೆ ವಯಸ್ಸಾಗಿದೆ. ಚೀನಾ ಕೂಡಾ ಬುಡ್ಡನಾಗಿದೆ. ಆದರೆ ನಮ್ಮ ದೇಶದ ಒಟ್ಟು ಜನಸಂಖ್ಯೆಯ ಶೇ.65ರಷ್ಟು ಜನ 35 ವರ್ಷ ವಯೋವಾನದೊಳಗಿನವಾರಾಗಿದ್ದಾರೆ. ನಮ್ಮದೇ ಅತ್ಯಂತ ಯುವದೇಶ. ನಮ್ಮ ಯುವಕರಲ್ಲೇ ಅತಿದೊಡ್ಡ ಅಭಿವೃದ್ಧಿಯ ಅವಕಾಶ ನನಗೆ ಕಾಣುತ್ತಿದೆ.’

———-

ಇವತ್ತು ಸರ್ಕಾರಗಳು ಹೆಚ್ಚು ಹೆಚ್ಚು ಶಾಲೆ, ಕಾಲೇಜುಗಳನ್ನು ತೆರೆಯುತ್ತವೆಯೇ ಹೊರತು, ಹೆಚ್ಚು ಹೆಚ್ಚು ಪದವೀಧರರನ್ನು ಸೃಷ್ಟಿಸಲು ಪ್ರಯತ್ನಿಸುತ್ತವೆಯೇ ಹೊರತು ಒಳ್ಳೆಯ ಶಿಕ್ಷಕರನ್ನು ಸಿದ್ಧಮಾಡುವ, ಆ ಮೂಲಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಬಗ್ಗೆ ಯೋಚಿಸುವುದಿಲ್ಲ. ಆದರೆ ನಮ್ಮ ಯಾವುದೇ ಪೋಷಕರನ್ನು ಕೇಳಿ, ಒಳ್ಳೆಯ ಶಿಕ್ಷಕರು ಬೇಕು ಎನ್ನುತ್ತಾರೆ. ಹಾಗಾಗಿ ನಾವು ಗುಜರಾತ್‌ನಲ್ಲಿ ಐದು ವರ್ಷದ ಟೀಚರ್ಸ್ ಟ್ರೈನಿಂಗ್ ಕೋರ್ಸ್ ಆರಂಭಿಸಿದ್ದೇವೆ. ಪಿಯುಸಿ ನಂತರ ಶುರುವಾಗುವ ಅದು 5 ವರ್ಷದ ಕೋರ್ಸ್ ನಂತರ ಒಬ್ಬ ಯೋಗ್ಯ ಶಿಕ್ಷಕ ಅಲ್ಲಿಂದ ಹೊರಬರುತ್ತಾನೆ. ನಮ್ಮಲ್ಲಿ ಇಷ್ಟೊಂದು ಯುವಶಕ್ತಿಯಿದೆ, ಅದನ್ನು ಸದುಪಯೋಗಪಡಿಸಿಕೊಂಡು ಏಕೆ ಶಿಕ್ಷಕರನ್ನೂ ಎಕ್ಸ್‌ಪೋರ್ಟ್(ರಫ್ತು) ಮಾಡಬಾರದು? ಒಬ್ಬ ಎಂಜಿನಿಯರ್, ಡಾಕ್ಟರ್, ಬ್ಯುಸಿನೆಸ್‌ಮೆನ್ ಹೊರ ದೇಶಕ್ಕೆ ಹೋದರೆ ಆತ ನಮ್ಮ ದೇಶಕ್ಕೆ ಡಾಲರ್ ತರುತ್ತಾನೆ. ಆದರೆ ಒಬ್ಬ ಶಿಕ್ಷಕ ಹೋದರೆ ಇಡಿ ಒಂದು ತಲೆಮಾರಿನ ಮೇಲೆ ಪ್ರಭಾವ ಬೀರುತ್ತಾನೆ, ಮರೆಯದಿರಿ!

———-

ಜನ ಅಂದುಕೊಳ್ಳುತ್ತಾರೆ, ಈ ದೇಶದಲ್ಲಿ ಏನೂ ಬದಲಾಗುವುದಿಲ್ಲ, ಎಲ್ಲರೂ ಕಳ್ಳರೇ, ಮಾಡಿದ್ದೆಲ್ಲಾ ವ್ಯರ್ಥವೇ, ಈ ದೇಶದಲ್ಲಿ ಹುಟ್ಟಿದ್ದೇ ಒಂದು ಶಾಪ. ಹಾಗಾಗಿ ವಿದ್ಯಾಭ್ಯಾಸ ಮುಗಿಸಿದ ಕೂಡಲೇ ದೇಶದಿಂದ ಹೊರಹೋಗಲು ಬಯಸುತ್ತಾರೆ. ಹೌದು ಈ ದೇಶವನ್ನು ನಾಶ ಮಾಡುತ್ತಿರುವುದು ವೋಟ್ ಬ್ಯಾಂಕ್ ಪಾಲಿಟಿಕ್ಸ್. ನಮ್ಮ ದೇಶಕ್ಕೆ ಬೇಕಾಗಿರುವುದು ಡೆವೆಲಪ್‌ಮೆಂಟ್ ಪಾಲಿಟಿಕ್ಸ್. ಒಂದು ವೇಳೆ ನಾವೆಲ್ಲ ಅಭಿವೃದ್ಧಿ ರಾಜಕಾರಣ ಮಾಡಿದರೆ ಈ ದೇಶದಲ್ಲಿ ಶಾಶ್ವತ ಬದಲಾವಣೆ ಹಾಗೂ ಪ್ರಗತಿಯನ್ನು ಕಾಣಬಹುದು. ನನ್ನ ಮಂತ್ರ- Minimum government, maximum governence. ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ!

———-

ಇವತ್ತಿನ ಯುವ ಮತದಾರರನ್ನು ನಮ್ಮ ರಾಜಕೀಯ ಪಕ್ಷಗಳುNew-age vote, ಹೊಸ ತಲೆಮಾರಿನ ಮತದಾರ ಎಂದು ಭಾವಿಸುತ್ತಿವೆ. ಆದರೆ ನನ್ನ ಪ್ರಕಾರ ನೀವು ಹೊಸ ತಲೆಮಾರಿನ ಮತದಾರರು ಮಾತ್ರವಲ್ಲ, ಹೊಸ ತಲೆಮಾರಿನ ಶಕ್ತಿ,New- age powerಕೂಡ ಹೌದು!

———-

ನಮ್ಮ ದೇಶದೆಲ್ಲೆಡೆ ಒಂದು ರೀತಿಯ ನಿರಾಸೆ, ಭ್ರಮನಿರಸನ ಕಾಣುತ್ತಿದೆ. ನನಗೆ ಆತ್ಮವಿಶ್ವಾಸವಿದೆ ನಾವದನ್ನು ಬದಲಾಯಿಸಬಹುದು ಎನ್ನುತ್ತಾ ಅರೆ ತುಂಬಿದ ಗ್ಲಾಸೊಂದನ್ನು ಎತ್ತಿ ಹಿಡಿದ ಮೋದಿ ಹೇಳಿದರು- ‘ಒಬ್ಬ ಆಶಾವಾದಿ ಹೇಳುತ್ತಾನೆ, ಲೋಟ ಅರ್ಧ ತುಂಬಿದೆ. ನಿರಾಶಾವಾದಿ ಹೇಳುತ್ತಾನೆ- ಅರ್ಧ ಖಾಲಿ! ಆದರೆ ನಾನು ಮೂರನೇ ಆಯಾಮ ನೀಡುತ್ತೇನೆ. ನನ್ನ ಪಾಲಿಗೆ ಆ ಲೋಟ ಅರ್ಧ ನೀರಿನಿಂದ, ಮತ್ತರ್ಧ ಗಾಳಿಯಿಂದ ತುಂಬಿದೆ! ಖಂಡಿತ ನಾವು ಭಾರತವನ್ನು ಬದಲಾಯಿಸಬಹುದು!’

———-

ಹೀಗೆ ಮಂತ್ರಮುಗ್ಧಗೊಳಿಸುವಂತಿದ್ದ ಅವರ ಭಾಷಣ ಮುಗಿದ ನಂತರ ವಿದ್ಯಾರ್ಥಿಗಳು, ಇಂಟರ್‌ನೆಟ್‌ನಲ್ಲಿ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

‘1947ರಲ್ಲಿ ಗುಜರಾತ್‌ನ ಒಬ್ಬ ಪರೀಕ್ಷಿತ, ವಿಶ್ವಾಸಾರ್ಹ ನಾಯಕನಿಗೆ (ಸರ್ದಾರ್ ಪಟೇಲ್) ಬದಲಾಗಿ ಸ್ವಪ್ರತಿಷ್ಠೆ ಹಾಗೂ ಮಹತ್ತ್ಯೋನ್ಮಾದವನ್ನೇ ತುಂಬಿಕೊಂಡಿದ್ದ ವ್ಯಕ್ತಿಯೊಬ್ಬನನ್ನು (ನೆಹರು) ನಾವು ಪ್ರಧಾನಿಯಾಗಿ ಆಯ್ದುಕೊಂಡೆವು. ಪರಿಣಾಮ ದೇಶ ಇಂದಿಗೂ ನರಳುತ್ತಿದೆ. 2014ರಲ್ಲಿ ಮತ್ತೆ ಹಾಗಾಗದಂತೆ ನೋಡಿಕೊಳ್ಳಬೇಕು’ ಎಂದು ಆದಿತ್ಯ ಚೌಧರಿ ಹೇಳಿದರೆ, ‘ಮೋದಿ ಎಂಬುವನು ಒಬ್ಬ ವ್ಯಕ್ತಿಯಾಗಿ ಉಳಿದಿಲ್ಲ, ಇಡೀ ದೇಶದ ಯುವಜನತೆ ಹಾಗೂ ಜಾಗತಿಕ ಭಾರತವನ್ನು ಪ್ರತಿನಿಧಿಸುವ ಒಂದು Idea, ಕಲ್ಪನೆ, ಧ್ಯೇಯವಾಗಿದ್ದಾರೆ. ನೀವು ವ್ಯಕ್ತಿಯನ್ನು ತಡೆಗಟ್ಟಬಹುದು, ಆದರೆ ಕಾಲಸನ್ನಿಹಿತವಾಗಿರುವ ಒಂದು ಕಲ್ಪನೆಯನ್ನಲ್ಲ, You can stop a person, but not an idea whose time has come ಎಂದಿದ್ದಾರೆ ಲಕ್ಷ್ಮಣನ್. ಅದು ನಿಜವೆನ್ನುವಂತೆ ಫೆಬ್ರವರಿ 13ರಂದು ಪ್ರಕಟವಾದ 90 ಪರ್ಸೆಂಟ್ ಮುಸ್ಲಿಮರಿರುವ ಸೌರಾಷ್ಟ್ರದ ಸಲಾಯಾ ಮುನ್ಸಿಪಾಲಿಟಿ ಚುನಾವಣೆಯಲ್ಲಿ 27ಕ್ಕೆ 27 ಸೀಟುಗಳನ್ನೂ ಬಿಜೆಪಿ ಗೆದ್ದುಕೊಂಡಿದೆ!

ಇದು ಸೂಚಿಸುವುದಾದರೂ ಏನನ್ನು?

For me, Secularism = India First ಎನ್ನುವ ನರೇಂದ್ರ ಮೋದಿಯವರಂಥ ವ್ಯಕ್ತಿಯೇ ಈ ದೇಶಕ್ಕೆ ಬೇಕು ಎಂಬುದನ್ನಲ್ಲವೇ?

 

ಮೊನ್ನೆ ಫೆಬ್ರವರಿ 6ರಂದು ಹೊಸದಿಲ್ಲಿಯ ಪ್ರತಿಷ್ಠಿತ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮಾತಿಗೆ ನಿಲ್ಲುವವರಿದ್ದರು. ಒಂದರ ಹಿಂದೆ ಒಂದರಂತೆ ಹೊರಬರುತ್ತಿರುವ ಚುನಾವಣಾ ಸಮೀಕ್ಷೆಗಳು, ಮೋದಿಯೇ ಮುಂದಿನ ಪ್ರಧಾನಿಯಾಗಬೇಕೆಂಬುದು ಬಹುಜನರ ಅಪೇಕ್ಷೆಯಾಗಿದೆ ಎಂಬ ಜನಾಭಿಪ್ರಾಯಗಳು, ಅದಕ್ಕೂ ಪೂರ್ವದಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸಾಧಿಸಿದ ಸತತ ಮೂರನೇ ವಿಜಯ, ಮೋದಿಯೇ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಬೇಕೆಂಬ ಕಾರ್ಯಕರ್ತರು ಹಾಗೂ ಕೆಲ ದೊಡ್ಡ ನೇತಾರರ ಕರೆಗಳ ಹಿನ್ನೆಲೆಯಲ್ಲಿ ಮೋದಿಯವರ ಶ್ರೀರಾಮ್ ಕಾಲೇಜಿನ ಭಾಷಣಕ್ಕೆ ಇನ್ನಿಲ್ಲದ ಮಹತ್ವ ದೊರೆತ್ತಿತ್ತು. ನರೇಂದ್ರ ಮೋದಿಯವರ ತಥಾಕಥಿತ ಟೀಕಾಕಾರ ಚಾನೆಲ್‌ಗಳಾದ ಎನ್‌ಡಿಟಿವಿ, ಸಿಎನ್‌ಎನ್-ಐಬಿಎನ್‌ಗಳು ಮಾತ್ರವಲ್ಲ ಹೆಡ್‌ಲೈನ್ಸ್ ಟುಡೆ, ಟೈಮ್ಸ್ ನೌಗಳು ಭಾಷಣದ ನೇರಪ್ರಸಾರಕ್ಕೆ ಮುಂದಾಗಿದ್ದವು. ಇದೆಲ್ಲಕ್ಕಿಂತ ಆಶ್ಚರ್ಯದ ಸಂಗತಿಯೆಂದರೆ ಸರ್ಕಾರಿ ಸ್ವಾಮ್ಯದ ದೂರದರ್ಶನ (ಡಿಡಿ ನ್ಯೂಸ್ ಹಾಗೂ ಡಿಡಿ ಪ್ರಾದೇಶಿಕ) ಕೂಡ ನೇರಪ್ರಸಾರಕ್ಕೆ ಬಂದಿತ್ತು!Emerging business models in the global scenario!ಈ ವಿಷಯವಾಗಿ ನರೇಂದ್ರ ಮೋದಿ ಅವರು ಮಾತನಾಡಬೇಕಿತ್ತು. ಆದರೆ ಎಲ್ಲರ ನಿರೀಕ್ಷೆ ರಾಜಕೀಯವನ್ನು ಎಳೆದು ತರುತ್ತಾರೆ, ಭ್ರಷ್ಟ ಕಾಂಗ್ರೆಸ್ಸನ್ನು ಟೀಕಿಸುತ್ತಾರೆ, ಪ್ರಧಾನಿ ಸ್ಥಾನದ ಮೇಲೆ ತಮಗಿರುವ ಆಕಾಂಕ್ಷೆಯನ್ನು ಹೊರಹಾಕುತ್ತಾರೆ ಎಂದೇ ಎಲ್ಲರೂ ಕಾತರದಿಂದಿದ್ದರು. ಇಲ್ಲವಾದರೆ ಒಂದು ರಾಜ್ಯದ ಮುಖ್ಯಮಂತ್ರಿಯ ಭಾಷಣವನ್ನು ಎಲ್ಲ ಇಂಗ್ಲಿಷ್ ಚಾನೆಲ್‌ಗಳು ನೇರಪ್ರಸಾರ ಮಾಡಿದ ಘಟನೆ ಈ ಹಿಂದೆ ಎಂದಾದರೂ ನಡೆದಿತ್ತೆ?! ಅಂದು ಮೋದಿ ರಾಜಕೀಯವನ್ನು ಎಳೆದು ತರುವ ಮಾತು ಬಿಡಿ, 1800 ವಿದ್ಯಾರ್ಥಿಗಳಲ್ಲಿ ಒಂದಿಬ್ಬರು ಆಕಳಿಕೆ ತೆಗೆದಿದ್ದರೂ ಮೋದಿ ಭಾಷಣ ವಿದ್ಯಾರ್ಥಿಗಳಿಗೆ ಬೋರು ಹೊಡೆಸುತ್ತಿತ್ತು ಎಂದು ತೀರ್ಪು ಕೊಡಲು, ಟೀಕಾ ಪ್ರಹಾರ ಮಾಡಲು ಮಾಧ್ಯಮಗಳು ಕಾದು ಕುಳಿತಿದ್ದವು. ಆದರೆ ಆಗಿದ್ದೇನು?ಆಯೋಜಕರು ಕೊಟ್ಟಿದ್ದ ನಲವತ್ತೈದು ನಿಮಿಷ ಕಾಲಾವಕಾಶ ಕಳೆದು ಒಂದೂಕಾಲು ಗಂಟೆವರೆಗೂ ಭಾಷಣ ಮುಂದುವರಿಯಿತು. ನರೇಂದ್ರ ಮೋದಿಯವರು ಭಾಷಣ ನಿಲ್ಲಿಸಿದಾಗ ಸಿಕ್ಕಿದ್ದು Standing Ovation! ಇಡೀ ಸಭಾಂಗಣ ಎದ್ದು ನಿಂತು ಕರತಾಡನದ ಮೂಲಕ ಮೆಚ್ಚುಗೆ ಸೂಚಿಸಿತು. ಹಾಗಾದರೆ ಒಂದೂಕಾಲು ಗಂಟೆ ಮೋದಿ ಮಾತನಾಡಿದ್ದಾದರೂ ಏನು? ಆ ಭಾಷಣದ ಕೆಲವು ತುಣುಕುಗಳನ್ನು ನೋಡಿ…———-ನಾನೊಮ್ಮೆ ತೈವಾನ್‌ಗೆ ಭೇಟಿ ನೀಡಿದ್ದೆ. ಸ್ಥಳೀಯ ಭಾಷೆ ನಮಗೆ ತಿಳಿಯದ ಕಾರಣ ಐದಾರು ದಿನಗಳ ಭೇಟಿಯ ವೇಳೆ ಎಲ್ಲವನ್ನೂ ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎಂದು ಒಬ್ಬ ಇಂಟರ್‌ಪ್ರಿಟರ್ ಅಥವಾ ದುಭಾಷಿಯನ್ನು ನೇಮಕ ಮಾಡಿಕೊಂಡಿದ್ದೆವು. ಪ್ರವಾಸದ ಕೊನೆಯ ದಿನ, ‘ಮೋದೀಜಿ, ಅನ್ಯಥಾ ಭಾವಿಸದಿದ್ದರೆ ನಿಮಗೊಂದು ಪ್ರಶ್ನೆ ಕೇಳಬಹುದೇ?’ ಎಂದು ಸಂಕೋಚದಿಂದಲೇ ಕೇಳಿದ. ಖಂಡಿತ ಕೇಳು ಎಂದೆ. ‘ನಿಮ್ಮದು ಇಂದಿಗೂ ಹಾವಾಡಿಗರು (Snake charmers), ಮಾಟ-ಮಂತ್ರ ಮಾಡುವವರು, ಎತ್ತಿನ ಬಂಡಿಗಳ ದೇಶವಾಗಿಯೇ ಇದೆಯಾ?’ ಅದಕ್ಕೆ ನಾನಂದೆ- ‘ಇಲ್ಲಾ… ನಮ್ಮ ಈಗಿನ ಯುವಜನರಿಗೆ ಹಾವಾಡಿಸುವಷ್ಟು ಧೈರ್ಯವಿಲ್ಲ, ಹಾಗಾಗಿ ಅವರು Snake charmers ಆಗುವ ಬದಲು Mouse charmers ಆಗಿಬಿಟ್ಟಿದ್ದಾರೆ!! ಪುಂಗಿಯ ಮೇಲೆ ಕೈಯಿಡುವ ಬದಲು ಕಂಪ್ಯೂಟರ್‌ನ ಮೌಸ್ ಮೇಲೆ ಬೆರಳಿಟ್ಟು ಜಗತ್ತನ್ನೇ ಬದಲಿಸುತ್ತಿದ್ದಾರೆ!———-ನಾವು ಚಿಕ್ಕವರಿರುವಾಗ ಯಾವುದಾದರೂ ವಸ್ತುವನ್ನು ಖರೀದಿಸಬೇಕಿದ್ದರೆ ‘ಮೇಡ್ ಇನ್ ಜಪಾನ್‌’ ಎಂದಿದೆಯೋ ಇಲ್ಲವೋ ಎಂದು ಮೊದಲು ನೋಡುತ್ತಿದ್ದೇವು. ಜನ ಕಂಪನಿ ಹೆಸರು ನೋಡುತ್ತಿರಲಿಲ್ಲ, ‘ಮೇಡ್ ಇನ್ ಜಪಾನ್‌’ ಇದೆಯೋ ಇಲ್ಲವೋ ಎಂದು ಖಾತ್ರಿ ಮಾಡಿಕೊಳ್ಳುತ್ತಿದ್ದರು. ನಾವೇಕೆ ‘ಮೇಡ್ ಇನ್ ಇಂಡಿಯಾ’ ಎಂಬ ಗೀಳು, ವಿಶ್ವಾಸಾರ್ಹತೆಯನ್ನು ಜಗತ್ತಿನಾದ್ಯಂತ ಸೃಷ್ಟಿಸಬಾರದು? ನಮ್ಮ ದೇಶ ಕೂಡ ಅಂಥದ್ದೇ ಮಟ್ಟಕ್ಕೇರಬೇಕು, ಅಂಥ ಸ್ಥಾನಕ್ಕೆ ಕೊಂಡೊಯ್ಯುವುದೇ ನಮ್ಮ ಗುರಿಯಾಗಬೇಕು. ———-ಇಡೀ ಜಗತ್ತು ಹೇಳುತ್ತಿದೆ 21ನೇ ಶತಮಾನ ಭಾರತದ ಶತಮಾನ. ಇನ್ನು ಕೆಲವರು ಅದು ಏಷ್ಯಾಕ್ಕೆ ಸೇರಿದ್ದು ಎನ್ನುತ್ತಿದ್ದರೆ, ಮತ್ತೆ ಕೆಲವರು ಚೀನಾದ ಶತಮಾನ ಎಂದು ಹೇಳುತ್ತಿದ್ದಾರೆ. ಆದರೆ ಇತಿಹಾಸದ ಪುಟಗಳನ್ನು ತೆಗೆದು ನೋಡಿ… ಯಾವ್ಯಾವ್ಯಾಗ ಓಟ್ಟಿಢಿಟಜಜ್ಜಜ ್ಝಡ ಡ್ಡಠ್ಠಜಟಜ, ಜ್ಞಾನವೆಂಬುದು ಪ್ರಾಮುಖ್ಯತೆ ಪಡೆದೆದಿಯೋ ಆಗೆಲ್ಲ ಭಾರತ ಜಗತ್ತನ್ನಾಳಿದೆ. ಸ್ನೇಹಿತರೇ, ಇದೂ ಕೂಡ ಜ್ಞಾನಯುಗ. ಹಾಗಾಗಿ ಈ ಶತಮಾನ ಭಾರತಕ್ಕೇ ಸೇರಿದ್ದು ಎಂದು ಆತ್ಮವಿಶ್ವಾಸದಿಂದ ನಿಮಗೆ ಹೇಳುತ್ತೇನೆ.———-ಒಮ್ಮೆ ದೇಶವೊಂದರ ರಾಯಭಾರಿಯೊಬ್ಬರು ನನ್ನನ್ನು ಕೇಳಿದರು- ಭಾರತ ಎದುರಿಸುತ್ತಿರುವ ಅತಿದೊಡ್ಡ ಸವಾಲುಗಳಾವುವು? ನಾನಂದೆ- ‘ಅವಕಾಶಗಳನ್ನು ನಾವು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಎಂಬುದೇ ನಮ್ಮ ಮುಂದಿರುವ ದೊಡ್ಡ ಸವಾಲು’. ‘ಯಾವುವು ಆ ಅವಕಾಶ?’ ಎಂದು ಮತ್ತೆ ಕೇಳಿದರು. ಮುಂದುವರಿದು ಹೇಳಿದೆ- ‘ಯುವಶಕ್ತಿ! ಇಡೀ ಯುರೋಪ್‌ಗೆ ವಯಸ್ಸಾಗಿದೆ. ಚೀನಾ ಕೂಡಾ ಬುಡ್ಡನಾಗಿದೆ. ಆದರೆ ನಮ್ಮ ದೇಶದ ಒಟ್ಟು ಜನಸಂಖ್ಯೆಯ ಶೇ.65ರಷ್ಟು ಜನ 35 ವರ್ಷ ವಯೋವಾನದೊಳಗಿನವಾರಾಗಿದ್ದಾರೆ. ನಮ್ಮದೇ ಅತ್ಯಂತ ಯುವದೇಶ. ನಮ್ಮ ಯುವಕರಲ್ಲೇ ಅತಿದೊಡ್ಡ ಅಭಿವೃದ್ಧಿಯ ಅವಕಾಶ ನನಗೆ ಕಾಣುತ್ತಿದೆ.’ ———-ಇವತ್ತು ಸರ್ಕಾರಗಳು ಹೆಚ್ಚು ಹೆಚ್ಚು ಶಾಲೆ, ಕಾಲೇಜುಗಳನ್ನು ತೆರೆಯುತ್ತವೆಯೇ ಹೊರತು, ಹೆಚ್ಚು ಹೆಚ್ಚು ಪದವೀಧರರನ್ನು ಸೃಷ್ಟಿಸಲು ಪ್ರಯತ್ನಿಸುತ್ತವೆಯೇ ಹೊರತು ಒಳ್ಳೆಯ ಶಿಕ್ಷಕರನ್ನು ಸಿದ್ಧಮಾಡುವ, ಆ ಮೂಲಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಬಗ್ಗೆ ಯೋಚಿಸುವುದಿಲ್ಲ. ಆದರೆ ನಮ್ಮ ಯಾವುದೇ ಪೋಷಕರನ್ನು ಕೇಳಿ, ಒಳ್ಳೆಯ ಶಿಕ್ಷಕರು ಬೇಕು ಎನ್ನುತ್ತಾರೆ. ಹಾಗಾಗಿ ನಾವು ಗುಜರಾತ್‌ನಲ್ಲಿ ಐದು ವರ್ಷದ ಟೀಚರ್ಸ್ ಟ್ರೈನಿಂಗ್ ಕೋರ್ಸ್ ಆರಂಭಿಸಿದ್ದೇವೆ. ಪಿಯುಸಿ ನಂತರ ಶುರುವಾಗುವ ಅದು 5 ವರ್ಷದ ಕೋರ್ಸ್ ನಂತರ ಒಬ್ಬ ಯೋಗ್ಯ ಶಿಕ್ಷಕ ಅಲ್ಲಿಂದ ಹೊರಬರುತ್ತಾನೆ. ನಮ್ಮಲ್ಲಿ ಇಷ್ಟೊಂದು ಯುವಶಕ್ತಿಯಿದೆ, ಅದನ್ನು ಸದುಪಯೋಗಪಡಿಸಿಕೊಂಡು ಏಕೆ ಶಿಕ್ಷಕರನ್ನೂ ಎಕ್ಸ್‌ಪೋರ್ಟ್(ರಫ್ತು) ಮಾಡಬಾರದು? ಒಬ್ಬ ಎಂಜಿನಿಯರ್, ಡಾಕ್ಟರ್, ಬ್ಯುಸಿನೆಸ್‌ಮೆನ್ ಹೊರ ದೇಶಕ್ಕೆ ಹೋದರೆ ಆತ ನಮ್ಮ ದೇಶಕ್ಕೆ ಡಾಲರ್ ತರುತ್ತಾನೆ. ಆದರೆ ಒಬ್ಬ ಶಿಕ್ಷಕ ಹೋದರೆ ಇಡಿ ಒಂದು ತಲೆಮಾರಿನ ಮೇಲೆ ಪ್ರಭಾವ ಬೀರುತ್ತಾನೆ, ಮರೆಯದಿರಿ!———-ಜನ ಅಂದುಕೊಳ್ಳುತ್ತಾರೆ, ಈ ದೇಶದಲ್ಲಿ ಏನೂ ಬದಲಾಗುವುದಿಲ್ಲ, ಎಲ್ಲರೂ ಕಳ್ಳರೇ, ಮಾಡಿದ್ದೆಲ್ಲಾ ವ್ಯರ್ಥವೇ, ಈ ದೇಶದಲ್ಲಿ ಹುಟ್ಟಿದ್ದೇ ಒಂದು ಶಾಪ. ಹಾಗಾಗಿ ವಿದ್ಯಾಭ್ಯಾಸ ಮುಗಿಸಿದ ಕೂಡಲೇ ದೇಶದಿಂದ ಹೊರಹೋಗಲು ಬಯಸುತ್ತಾರೆ. ಹೌದು ಈ ದೇಶವನ್ನು ನಾಶ ಮಾಡುತ್ತಿರುವುದು ವೋಟ್ ಬ್ಯಾಂಕ್ ಪಾಲಿಟಿಕ್ಸ್. ನಮ್ಮ ದೇಶಕ್ಕೆ ಬೇಕಾಗಿರುವುದು ಡೆವೆಲಪ್‌ಮೆಂಟ್ ಪಾಲಿಟಿಕ್ಸ್. ಒಂದು ವೇಳೆ ನಾವೆಲ್ಲ ಅಭಿವೃದ್ಧಿ ರಾಜಕಾರಣ ಮಾಡಿದರೆ ಈ ದೇಶದಲ್ಲಿ ಶಾಶ್ವತ ಬದಲಾವಣೆ ಹಾಗೂ ಪ್ರಗತಿಯನ್ನು ಕಾಣಬಹುದು. ನನ್ನ ಮಂತ್ರ- Minimum government, maximum governence. ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ!———-ಇವತ್ತಿನ ಯುವ ಮತದಾರರನ್ನು ನಮ್ಮ ರಾಜಕೀಯ ಪಕ್ಷಗಳುNew-age vote, ಹೊಸ ತಲೆಮಾರಿನ ಮತದಾರ ಎಂದು ಭಾವಿಸುತ್ತಿವೆ. ಆದರೆ ನನ್ನ ಪ್ರಕಾರ ನೀವು ಹೊಸ ತಲೆಮಾರಿನ ಮತದಾರರು ಮಾತ್ರವಲ್ಲ, ಹೊಸ ತಲೆಮಾರಿನ ಶಕ್ತಿ,New- age powerಕೂಡ ಹೌದು!———-ನಮ್ಮ ದೇಶದೆಲ್ಲೆಡೆ ಒಂದು ರೀತಿಯ ನಿರಾಸೆ, ಭ್ರಮನಿರಸನ ಕಾಣುತ್ತಿದೆ. ನನಗೆ ಆತ್ಮವಿಶ್ವಾಸವಿದೆ ನಾವದನ್ನು ಬದಲಾಯಿಸಬಹುದು ಎನ್ನುತ್ತಾ ಅರೆ ತುಂಬಿದ ಗ್ಲಾಸೊಂದನ್ನು ಎತ್ತಿ ಹಿಡಿದ ಮೋದಿ ಹೇಳಿದರು- ‘ಒಬ್ಬ ಆಶಾವಾದಿ ಹೇಳುತ್ತಾನೆ, ಲೋಟ ಅರ್ಧ ತುಂಬಿದೆ. ನಿರಾಶಾವಾದಿ ಹೇಳುತ್ತಾನೆ- ಅರ್ಧ ಖಾಲಿ! ಆದರೆ ನಾನು ಮೂರನೇ ಆಯಾಮ ನೀಡುತ್ತೇನೆ. ನನ್ನ ಪಾಲಿಗೆ ಆ ಲೋಟ ಅರ್ಧ ನೀರಿನಿಂದ, ಮತ್ತರ್ಧ ಗಾಳಿಯಿಂದ ತುಂಬಿದೆ! ಖಂಡಿತ ನಾವು ಭಾರತವನ್ನು ಬದಲಾಯಿಸಬಹುದು!’———-ಹೀಗೆ ಮಂತ್ರಮುಗ್ಧಗೊಳಿಸುವಂತಿದ್ದ ಅವರ ಭಾಷಣ ಮುಗಿದ ನಂತರ ವಿದ್ಯಾರ್ಥಿಗಳು, ಇಂಟರ್‌ನೆಟ್‌ನಲ್ಲಿ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?’1947ರಲ್ಲಿ ಗುಜರಾತ್‌ನ ಒಬ್ಬ ಪರೀಕ್ಷಿತ, ವಿಶ್ವಾಸಾರ್ಹ ನಾಯಕನಿಗೆ (ಸರ್ದಾರ್ ಪಟೇಲ್) ಬದಲಾಗಿ ಸ್ವಪ್ರತಿಷ್ಠೆ ಹಾಗೂ ಮಹತ್ತ್ಯೋನ್ಮಾದವನ್ನೇ ತುಂಬಿಕೊಂಡಿದ್ದ ವ್ಯಕ್ತಿಯೊಬ್ಬನನ್ನು (ನೆಹರು) ನಾವು ಪ್ರಧಾನಿಯಾಗಿ ಆಯ್ದುಕೊಂಡೆವು. ಪರಿಣಾಮ ದೇಶ ಇಂದಿಗೂ ನರಳುತ್ತಿದೆ. 2014ರಲ್ಲಿ ಮತ್ತೆ ಹಾಗಾಗದಂತೆ ನೋಡಿಕೊಳ್ಳಬೇಕು’ ಎಂದು ಆದಿತ್ಯ ಚೌಧರಿ ಹೇಳಿದರೆ, ‘ಮೋದಿ ಎಂಬುವನು ಒಬ್ಬ ವ್ಯಕ್ತಿಯಾಗಿ ಉಳಿದಿಲ್ಲ, ಇಡೀ ದೇಶದ ಯುವಜನತೆ ಹಾಗೂ ಜಾಗತಿಕ ಭಾರತವನ್ನು ಪ್ರತಿನಿಧಿಸುವ ಒಂದು Idea, ಕಲ್ಪನೆ, ಧ್ಯೇಯವಾಗಿದ್ದಾರೆ. ನೀವು ವ್ಯಕ್ತಿಯನ್ನು ತಡೆಗಟ್ಟಬಹುದು, ಆದರೆ ಕಾಲಸನ್ನಿಹಿತವಾಗಿರುವ ಒಂದು ಕಲ್ಪನೆಯನ್ನಲ್ಲ, You can stop a person, but not an idea whose time has come ಎಂದಿದ್ದಾರೆ ಲಕ್ಷ್ಮಣನ್. ಅದು ನಿಜವೆನ್ನುವಂತೆ ಫೆಬ್ರವರಿ 13ರಂದು ಪ್ರಕಟವಾದ 90 ಪರ್ಸೆಂಟ್ ಮುಸ್ಲಿಮರಿರುವ ಸೌರಾಷ್ಟ್ರದ ಸಲಾಯಾ ಮುನ್ಸಿಪಾಲಿಟಿ ಚುನಾವಣೆಯಲ್ಲಿ 27ಕ್ಕೆ 27 ಸೀಟುಗಳನ್ನೂ ಬಿಜೆಪಿ ಗೆದ್ದುಕೊಂಡಿದೆ! ಇದು ಸೂಚಿಸುವುದಾದರೂ ಏನನ್ನು? For me, Secularism = India First ಎನ್ನುವ ನರೇಂದ್ರ ಮೋದಿಯವರಂಥ ವ್ಯಕ್ತಿಯೇ ಈ ದೇಶಕ್ಕೆ ಬೇಕು ಎಂಬುದನ್ನಲ್ಲವೇ?

26 Responses to “ಮೋದಿಯೆಂದರೆ ಮೋಡಿ, ನೀವದನ್ನು ಒಪ್ಪಿ ಬಿಡಿ!”

 1. satish halemani says:

  jai ho modiji,

 2. manjunath gunaga says:

  yup modi is our next prime minister.. I will definitely support so please every one support modi and remove buddhu and antanio italian pasta

 3. Pradeep says:

  Dear Pratap
  Excellent…As always I really like the way you write and appreciate your style..I am a great believer in Modi and I am sure he will make the best PM

 4. Srini says:

  I totally agree with you Mr.Pratap, because I think every one wants to be Modi jii as become PM…

  So, my vote goes to Modi jiii…!!!!!

  Jai India and Jai Karnataka…………

 5. Dheeraj M Pai says:

  This article is really very helpful to the people who are brainwashed by the deceptive media

 6. Raghavendra.L says:

  Modi is the best..

 7. Shrishail says:

  Its Really Wonder Full Sir .

 8. prakash.a.madugu says:

  superb prathap!!!!
  Nijavagalu modhi bharathada bavishyakara,
  barathada bavishyavannu yuvajanatheya monobavavannu badalayisuva nava yugavannu nirmisuva shakti modhiyallide , adare idu namma samajada kelavu kamale rogigalige idu kesarikaranave kanutte..
  the Indian future prime minister has to be modhi…………

 9. manjunath t kuladi says:

  realy prathap ji’1947ರಲ್ಲಿ ಗುಜರಾತ್‌ನ ಒಬ್ಬ ಪರೀಕ್ಷಿತ, ವಿಶ್ವಾಸಾರ್ಹ ನಾಯಕನಿಗೆ (ಸರ್ದಾರ್ ಪಟೇಲ್) ಬದಲಾಗಿ ಸ್ವಪ್ರತಿಷ್ಠೆ ಹಾಗೂ ಮಹತ್ತ್ಯೋನ್ಮಾದವನ್ನೇ ತುಂಬಿಕೊಂಡಿದ್ದ ವ್ಯಕ್ತಿಯೊಬ್ಬನನ್ನು (ನೆಹರು) ನಾವು ಪ್ರಧಾನಿಯಾಗಿ ಆಯ್ದುಕೊಂಡೆವು. ಪರಿಣಾಮ ದೇಶ ಇಂದಿಗೂ ನರಳುತ್ತಿದೆ. 2014ರಲ್ಲಿ ಮತ್ತೆ ಹಾಗಾಗದಂತೆ ನೋಡಿಕೊಳ್ಳಬೇಕು’ ಎಂದು ಆದಿತ್ಯ ಚೌಧರಿ ಹೇಳಿದರೆ, ‘ಮೋದಿ ಎಂಬುವನು ಒಬ್ಬ ವ್ಯಕ್ತಿಯಾಗಿ ಉಳಿದಿಲ್ಲ, ಇಡೀ ದೇಶದ ಯುವಜನತೆ ಹಾಗೂ ಜಾಗತಿಕ ಭಾರತವನ್ನು ಪ್ರತಿನಿಧಿಸುವ ಒಂದು Idea, ಕಲ್ಪನೆ, ಧ್ಯೇಯವಾಗಿದ್ದಾರೆ. ನೀವು ವ್ಯಕ್ತಿಯನ್ನು ತಡೆಗಟ್ಟಬಹುದು, ಆದರೆ ಕಾಲಸನ್ನಿಹಿತವಾಗಿರುವ ಒಂದು ಕಲ್ಪನೆಯನ್ನಲ್ಲ, You can stop a person, but not an idea whose time has come ಎಂದಿದ್ದಾರೆ ಲಕ್ಷ್ಮಣನ್. ಅದು ನಿಜವೆನ್ನುವಂತೆ ಫೆಬ್ರವರಿ 13ರಂದು ಪ್ರಕಟವಾದ 90 ಪರ್ಸೆಂಟ್ ಮುಸ್ಲಿಮರಿರುವ ಸೌರಾಷ್ಟ್ರದ ಸಲಾಯಾ ಮುನ್ಸಿಪಾಲಿಟಿ ಚುನಾವಣೆಯಲ್ಲಿ 27ಕ್ಕೆ 27 ಸೀಟುಗಳನ್ನೂ ಬಿಜೆಪಿ ಗೆದ್ದುಕೊಂಡಿದೆ!

 10. Vijay says:

  Excellent!!!!

 11. Ram says:

  Totally biased article.

 12. prakash says:

  Thanks you very much Prataap sir for an excellent blog:) Hats off to Narendra Modi.

 13. vilas says:

  Sir nerandhra modhi yanthathoru adre ne nam dhsha mun dhe hogodhu ella andhre K.R market thara agoguthe e kangres edre

 14. Suhas says:

  Nice article Prathap..

 15. smitha says:

  Yes Prathap what ever you have mentioned here is 100% true.India needs changes and we need Leader like Modhi to lead us.

  Appreciate your thoughts and writing skill.Keep it up.

 16. LOKESH.BM says:

  Hopefull politician,and future PM of india!

 17. maantu says:

  nice

 18. Krishnamurthy Hegde says:

  ಹಾಯ್ ಪ್ರತಾಪ್ ನಿಮ್ಮನ್ನು ಹೇಗೆ ಹೊಗಳಿದರು ಸಾಲದು, ಅಂತಹ ಪ್ರತಿಬೆ ನಿಮ್ಮಲ್ಲಿದೆ. ನೀವು ಮೋದಿಯ ಬಗ್ಗೆ ಹೇಳಿರುವುದು ಅಕ್ಷರ ಸಹ ಸತ್ಯ. ಮೋದಿಯವರು ೩ ಬಾರಿ ಗುಜರಾತನ್ನ ಆಳಿದ ಹಾಗೆ ನಮ್ಮ ಭಾರತವನ್ನೂ ಕೊಡ ಆಳುವನ್ತಾಗಲಿ. ಇ ಲೇಖನದಂತೆ ಇನ್ನು ಹಲವಾರು ಲೇಖನಗಳು ನಿಮ್ಮಿಂದ ಪ್ರಕಟವಾಗಲಿ.

 19. kumar says:

  nanage chaikka lekana odine abyasa. edannu nodi doddadide andukondu kastadinda odalu shuru madide. amele lekhanave chhikkadayithu.

  Edakku narendrareeeeeeeeeeeee…..

 20. raj a follower of pratap simha says:

  hats off to modi..

 21. SHWETA H says:

  DEAR SIR,

  I DO AGREE WITH UR POINTS BUT I HAVE ONE QUESTION FOR WHICH I THINK I LL NEVER GET ANSWER, AND MY QUESTION IS,CANT OUR POLITICAL PARTIES EVER WORK TOGETHER?IF IT HAPPEN SO, NO WORDS TO EXPLAIN ABOUT GROWTH……. JUST IMAGINE,AND KINDLY EXUSE ME, IF I AM WRONG IN MY REPLY.

  THANKS AND REGARDS
  SHWETA H

 22. p.shyamsundar shetty says:

  WHEN ANNOUNCED NEXT PM MR.NARENDRA MODI?….

 23. Prajwal.V says:

  Modi should be the next PM for better India. Can’t wait to see Modi as the Prime Minister Of India.. Jai Modiji

 24. ARUN GOPAL says:

  We need person like Modi as our leader…….

 25. gangadhar says:

  namma desha abivrddiya pathadalli sagabekidre modiji pradhani agabekidhe……

 26. Naveen says:

  Superb article pratap ji….