Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಕೊಲ್ಲುವ ಕೈಗಳಿಗಿಂತ ಕಾಯುವವನು ಮೇಲು, ಆದರೆ ನಮ್ಮನ್ನು ಕಾಯುತ್ತಿರುವವರು ಎಂಥವರು?

ಕೊಲ್ಲುವ ಕೈಗಳಿಗಿಂತ ಕಾಯುವವನು ಮೇಲು, ಆದರೆ ನಮ್ಮನ್ನು ಕಾಯುತ್ತಿರುವವರು ಎಂಥವರು?

2011, ಮೇ 2.

ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಡಗಿ ಕುಳಿತಿದ್ದ ಒಸಾಮಾ ಬಿನ್ ಲಾಡೆನ್‌ನನ್ನು ಹೆಕ್ಕಿ ಕೊಂದಿದ್ದಲ್ಲದೆ ಆತನ ಹೆಣವನ್ನು ಸಂಸ್ಕಾರ ಮಾಡುವ ಬದಲು ಸಮುದ್ರಕ್ಕೆ ಬಿಸಾಡಿ ಅಮೆರಿಕ ಸೇಡು ತೀರಿಸಿಕೊಂಡಾಗ ಅಲ್ ಖೈದಾ ಅಮೆರಿಕದ ವಿರುದ್ಧ ಪ್ರತೀಕಾರ ತೆಗೆದುಕೊಂಡೇ ತೀರುತ್ತದೆ ಎಂದು ಎಲ್ಲರೂ ಭಾವಿಸಿದರು. ಅದಕ್ಕೆ ತಕ್ಕಂತೆ 2011, ಮೇ 6ರಂದು ಲಾಡೆನ್ ಸಾವನ್ನು ಖಾತ್ರಿಪಡಿಸಿದ ಅಲ್ ಖೈದಾ ಕೂಡ ತನ್ನ ವೆಬ್‌ಸೈಟ್‌ನಲ್ಲಿ ಅಂಥದ್ದೇ ಮಾತನಾಡಿತು. ಪಾಕಿಸ್ತಾನದ ತೆಹ್ರೀಕೆ ತಾಲಿಬಾನ್ ಕೂಡ ಸೇಡಿನ ಸೊಲ್ಲೆತ್ತಿತು. ಹಾಗಾಗಿ ಭಯ, ಆತಂಕಗಳು ಇನ್ನಷ್ಟು ಹೆಚ್ಚಾದವು. ಅಲ್ ಖೈದಾ ಸುಮ್ಮನೆ ಕೂರುವುದಿಲ್ಲ ಎಂದು ಅಮೆರಿಕನ್ನೇತರರೂ ಆತಂಕಗೊಂಡರು.

ಈ ಘಟನೆ ನಡೆದು ಸುಮಾರು ಎರಡು ವರ್ಷ ತುಂಬುವತ್ತ ಬಂತು, ಅಮೆರಿಕದ ಮೇಲೆ ಎಷ್ಟು ಭಯೋತ್ಪಾದಕ ದಾಳಿಗಳು ನಡೆದಿವೆ ಹೇಳಿ?!

ಆತ ಸತ್ತ ನಂತರದ ಕತೆ ಹಾಗಿರಲಿ, ಅದಕ್ಕೂ ಮೊದಲಿನ 2001, ಸೆಪ್ಟೆಂಬರ್ 11ರ ನಂತರ ಅಮೆರಿಕದ ಮೇಲೆ ಅದೆಷ್ಟು ಆಕ್ರಮಣಗಳು, ಅಮೆರಿಕದ ನೆಲದಲ್ಲಿ ಅವೆಷ್ಟು ಭಯೋತ್ಪಾದಕ ಸ್ಫೋಟಗಳು ನಡೆದಿವೆ ಒಮ್ಮೆ ತಡಕಾಡಿ? ಒಂದೇ ಒಂದು ಉದಾಹರಣೆ ಕೊಡಿ ನೋಡೋಣ? ಅಲ್ ಖೈದಾ, ತೆಹ್ರಿಕೆ ತಾಲಿಬಾನ್‌ಗಳಂಥ ಕೊಲ್ಲುವ ಕೈಗಳಿಗೆ ಜಯ ಸಿಕ್ಕಿತೋ, ಅಮೆರಿಕ ಸರ್ಕಾರವೆಂಬ ಕಾಯುವ ಕೈ ಬಲಿಷ್ಠವೆಂದು ಸಾಬೀತಾಯಿತೋ?

ಆದರೆ ನಮ್ಮಲ್ಲೇನಾಯಿತು?

2012 ನವೆಂಬರ್ 21ರಂದು ಮುಂಬೈ ದಾಳಿ ರೂವಾರಿ ಅಜ್ಮಲ್ ಕಸಬ್‌ನನ್ನು ಗಲ್ಲಿಗೆ ಹಾಕಲಾಯಿತು. 2013 ಫೆಬ್ರವರಿ 9ರಂದು ಸಂಸತ್ ದಾಳಿಯ ಪಿತೂರಿದಾರ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲಾಯಿತು. ಈ ಘಟನೆ ನಡೆದು ಕೇವಲ 12 ದಿನಗಳಲ್ಲಿ ಇಂಡಿಯನ್ ಮುಜಾಹಿದ್ದೀನ್ ಹೈದರಾಬಾದ್‌ನಲ್ಲಿ ಅವಳಿ ಸ್ಫೋಟ ಮಾಡಿ 14 ಜನರನ್ನು ಬಲಿತೆಗೆದುಕೊಂಡು 119 ಜನರನ್ನು ಗಾಯಗೊಳಿಸಿ ಪ್ರತೀಕಾರ ತೆಗೆದುಕೊಳ್ಳಲು ಹೇಗೆ ಸಾಧ್ಯವಾಯಿತು? ಇಂಟಲಿಜೆನ್ಸ್ ಬ್ಯೂರೋಕ್ಕೆ ಮೊದಲೇ ಮಾಹಿತಿ ಇತ್ತಂತೆ, ಹೈದರಾಬಾದ್ ಪೊಲೀಸರನ್ನೂ ಅಲರ್ಟ್ ಮಾಡಲಾಗಿತ್ತಂತೆ. ಇಷ್ಟಾಗಿಯೂ ಇಂಥದ್ದೊಂದು ಅಮಾನವೀಯ ಘಟನೆ ಹೇಗೆ ಸಂಭವಿಸಿತು? ಇಲ್ಲಿ ಯಾರನ್ನು ದೂರಬೇಕು? ಕೊಲ್ಲುವ ಕೈಗಳನ್ನೋ, ಕಾಪಾಡಬೇಕಾದ ಜವಾಬ್ದಾರಿ ಹೊಂದಿದ್ದರೂ ಕೈಕಟ್ಟಿ ಕುಳಿತಿರುವ ಷಂಡ ಸರ್ಕಾರವನ್ನೋ?

2001, ಸೆಪ್ಟೆಂಬರ್ 11ರಂದು ದಾಳಿ ನಡೆದ ನಂತರ ಅಮೆರಿಕ ಹೇಗೆ ನಡೆದುಕೊಂಡಿತು?

ಆ ದಾಳಿ ನಡೆದಾಗ, 3 ಸಾವಿರ ಜನರು ಮಡಿದಾಗ ‘The most important thing is for us to find Osama bin Laden. It is our No. 1 priority and we will not rest until we find him’, ‘ಒಸಾಮಾ ಬಿನ್ ಲಾಡೆನ್‌ನನ್ನು ಪತ್ತೆ ಹಚ್ಚುವುದೇ ನಮ್ಮ ಮುಖ್ಯ ಕೆಲಸ. ಅದು ನಮ್ಮ ಮೊದಲ ಆದ್ಯತೆ ಹಾಗೂ ಆತನನ್ನು ಪತ್ತೆ ಮಾಡುವವರೆಗೂ ನಾವು ವಿಶ್ರಮಿಸಿಕೊಳ್ಳುವುದಿಲ್ಲ’ ಎಂದ ಆಗಿನ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್, ಈ ಘಟನೆ ನಡೆದು ಒಂದು ತಿಂಗಳೊಳಗೆ ಅಂದರೆ 2001, ಅಕ್ಟೋಬರ್ 7ರಂದು ತಾಲಿಬಾನ್ ಮೇಲೆ ಯುದ್ಧ ಸಾರಿದರು. ಅಷ್ಟು ಮಾತ್ರವಲ್ಲ, ತಮ್ಮ ದೇಶದ ಬೇಲಿಯನ್ನೂ ಗಟ್ಟಿಗೊಳಿಸತೊಡಗಿದರು. ಯುದ್ಧ ಮುಗಿದು ಅಲ್ಲೊಂದು ಹಂಗಾಮಿ ಸರ್ಕಾರವನ್ನು ಪ್ರತಿಷ್ಠಾಪಿಸುವುದರೊಳಗೆ Terrorist Threat Integration Cente, ಭಯೋತ್ಪಾದಕ ಬೆದರಿಕೆ ಅನುಕಲನ ಕೇಂದ್ರವನ್ನು ಸ್ಥಾಪನೆ ಮಾಡಿದರು. ಅದಕ್ಕೆ ಕಾನೂನಿನ ರೂಪಕೊಟ್ಟು 2004ರಲ್ಲಿ National Counter Terrorism Cente (NCTC)ಆಗಿ ಪರಿವರ್ತಿಸಿದರು. ಇದರಡಿ ಸಿಐಎ, ಎಫ್‌ಬಿಐ ಸೇರಿದಂತೆ ವಿವಿಧ ರಾಜ್ಯಗಳ 20 ತನಿಖಾ ದಳಗಳನ್ನು ಸೇರಿಸಿದರು. 2011, ಮೇ 6ರಂದು ಅಲ್ ಖೈದಾ ಹಾಗೂ ತೆಹ್ರಿಕೆ ತಾಲಿಬಾನ್ ಬೆದರಿಕೆ ಹಾಕಿದರೂ, ಪ್ರತೀಕಾರದ ಮಾತನಾಡಿದರೂ ಇದುವರೆಗೂ ಅಮೆರಿಕದ ಮೇಲಾಗಲಿ, ವಿಶ್ವದ ಇತರೆಡೆಗಳಲ್ಲಿ ನೆಲೆಸಿರುವ ಅಮೆರಿಕನ್ನರ ಮೇಲೆ ದಾಳಿ ಮಾಡುವುದಕ್ಕಾಗಲಿ, ಕನಿಷ್ಠ ಕೂದಲು ಕೊಂಕಿಸುವುದಕ್ಕಾಗಲಿ ಏಕೆ ಸಾಧ್ಯವಾಗಿಲ್ಲವೆಂದರೆ ಇದೇ ಕಾರಣಕ್ಕೆ. ಹಾಗಂತ ಅಮೆರಿಕದ ಮೇಲಾಗಲಿ, ಒಳಗಿಂದಾಗಲಿ ದಾಳಿ ಪ್ರಯತ್ನಗಳಾಗಲಿಲ್ಲ ಎಂದಲ್ಲ. ಇದುವರೆಗೂ ಅಂತಹ 50 ಪ್ರಯತ್ನಗಳು ನಡೆದಿವೆ. ಅವುಗಳನ್ನು ಃಈಖಿಈ  ಪ್ರಯತ್ನದ ಹಂತದಲ್ಲೇ ವಿಫಲಗೊಳಿಸಿದೆ.

ಆದರೆ…

2008, ನವೆಂಬರ್ 26ರಂದು ಮುಂಬೈ ಮೇಲೆ ದಾಳಿ ನಡೆದ ನಂತರ ನಮ್ಮ ಪ್ರಧಾನಿ ಮನಮೋಹನ್ ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ? ಮುಂಬೈ ದಾಳಿಗೆ ಸಂಘಪರಿವಾರವೇ ಕಾರಣ ಎಂದು ಕೇಂದ್ರದಲ್ಲಿ ಮಂತ್ರಿಯಾಗಿದ್ದ ಅಬ್ದುರ್ ರೆಹಮಾನ್ ಅಂಟುಳೆ ಹೇಳಿದರೆ, ಇನ್ನೊಂದೆಡೆ ಮಾಲೆಗಾಂವ್ ಸ್ಫೋಟವನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಕೇಸರಿ’ ಭಯೋತ್ಪಾದನೆ ಎಂದು ರಾಜಕೀಯ ಮಾಡಲು ಹೊರಟರು ಆಗಿನ ಗೃಹ ಸಚಿವ ಚಿದಂಬರಂ. ಅಷ್ಟು ಮಾತ್ರವಲ್ಲ, ಅಜ್ಮಲ್ ಕಸಬ್ ಸೆರೆಸಿಕ್ಕಿ ಪಾಕಿಸ್ತಾನದ ಪಾತ್ರ ಬಹಿರಂಗವಾಗಿದ್ದರೂ ಸಂಘಪರಿವಾರದ ಮೇಲೆ ಗೂಬೆ ಕೂರಿಸಲು ಎಸ್.ಎಂ. ಮುಶ್ರಿಫ್ ಎಂಬ ಮತಾಂಧನೊಬ್ಬ ‘Who Killed Karkare’ ಎಂಬ ಪುಸ್ತಕ ಬರೆದಾಗ ಅದರ ಬಿಡುಗಡೆಗೆ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಎಂಬ ನಾಲಾಯಕ್ಕು ಮನುಷ್ಯನೇ ಹೋದರು.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಸಾಕ್ಷಿ ಪ್ರಜ್ಞೆಯಂತೆ, ದಿಗ್ಜೋತಿಯಂತಿರುವ ಈ ವ್ಯಕ್ತಿ ಮಾಡುತ್ತಿರುವ ಕೆಲಸವಾದರೂ ಎಂಥದ್ದು ಅಂದುಕೊಂಡಿರಿ?

ಮುಂಬೈ ದಾಳಿ ನಡೆದಿದ್ದು 2008, ನವೆಂಬರ್ 26ರಂದು. ಅದಕ್ಕೂ ಎರಡು ತಿಂಗಳ ಮೊದಲಷ್ಟೇ, 2008 ಸೆಪ್ಟೆಂಬರ್ 19ರಂದು ಹೊಸದಿಲ್ಲಿಯ ಜಾಮಿಯಾ ನಗರದಲ್ಲಿ ಬಾಟ್ಲಾ ಹೌಸ್ ಎನ್‌ಕೌಂಟರ್ ನಡೆಯಿತು. ಆತಿಫ್ ಅಮೀನ್ ಹಾಗೂ ಮೊಹಮದ್ ಸಾಜಿದ್ ಎಂಬ ಇಬ್ಬರು ಉಗ್ರರು ಹತರಾದರೆ ಮೊಹಮದ್‌ಸೈಫ್ ಹಾಗೂ ಜೀಶಾನ್ ಎಂಬ ಇನ್ನಿಬ್ಬರು ತಪ್ಪಿಸಿಕೊಂಡರು. ಇದೇ ಮನೆಯಲ್ಲಿ ಇಂಡಿಯನ್ ಮುಜಾಹಿದ್ದೀನ್‌ನ ಕಮಾಂಡರ್ ಆತಿಫ್ ಅಮೀನ್ ಬಾಡಿಗೆಗೆ ಇದ್ದಾನೆಂಬ ನಿರ್ದಿಷ್ಟ ಸುಳಿವಿನ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಈ ಎನ್‌ಕೌಂಟರ್ ವೇಳೆ ದಿಲ್ಲಿ ಪೊಲೀಸ್‌ನ ಪ್ರತಿಷ್ಠಿತ ಅಧಿಕಾರಿ ಹಾಗೂ ಎನ್‌ಕೌಂಟರ್ ಸ್ಪೆಷಲಿಸ್ಟ್ ಇನ್‌ಸ್ಪೆಕ್ಟರ್ ಮೋಹನ್ ಚಂದ್ ಶರ್ಮಾ ಕೂಡ ಪ್ರಾಣ ಕಳೆದುಕೊಂಡರು. ಈ ಶರ್ಮ ಅತ್ಯಂತ ಶಿಸ್ತಿನ ಅಧಿಕಾರಿ. ಏಳು ಶೌರ್ಯ ಪದಕ ಪಡೆದಿದ್ದ ವ್ಯಕ್ತಿ. ಇಂತಹ ಅಧಿಕಾರಿಯ ಮರಣಕ್ಕೆ ದುಃಖಿಸುವ ಬದಲು, ಅವರ ಕುಟುಂಬವನ್ನು ಕಂಡು ಸಾಂತ್ವನ ಹೇಳುವ, ಧೈರ್ಯ ತುಂಬುವ, ಭವಿಷ್ಯದ ಬಗ್ಗೆ ಭರವಸೆ ನೀಡುವ ಬದಲು ಈ ದಿಗ್ವಿಜಯ್ ಸಿಂಗ್ ಎಂಬ ಮಹಾಶಯ ಎನ್‌ಕೌಂಟರ್‌ನಲ್ಲಿ ಸತ್ತ ಇಬ್ಬರು ವಿದ್ಯಾರ್ಥಿಗಳ ಮೂಲಸ್ಥಳವಾದ ಉತ್ತರ ಪ್ರದೇಶದ ಅಜಂಗಢಕ್ಕೆ ಹೋಗಿ ಅವರ ಕುಟುಂಬಸ್ಥರನ್ನು ಭೇಟಿಯಾದರು. ಅಷ್ಟು ಮಾತ್ರವಲ್ಲ, ಪೊಲೀಸರದ್ದು ನಕಲಿ ಎನ್‌ಕೌಂಟರ್‌ಎಂದು ಆರೋಪ ಮಾಡಿದರು. ಇದರಿಂದ ಉತ್ತೇಜಿತರಾದ ತಥಾಕಥಿತ ಬುದ್ಧಿಜೀವಿಗಳು,  SICKulaವಾದಿಗಳು ಪೋಲೀಸ್ ವ್ಯವಸ್ಥೆಯೊಳಗಿನ ವೈರತ್ವವೇ ಮೋಹನ್ ಚಂದ್ ಶರ್ಮಾರ ಕೊಲೆಗೆ ಕಾರಣ, ಪೊಲೀಸರೇ ಹಿಂದಿನಿಂದ ಹೊಡೆದು ಸಾಯಿಸಿದ್ದಾರೆ ಎಂದು ಆರೋಪಿಸಿದರು. ಅಷ್ಟುಮಾತ್ರವಲ್ಲ, ರಾಷ್ಟ್ರೀಯ ಮಾನವ ಹಕ್ಕು ಆಯೋಗದಿಂದ ತನಿಖೆಯಾಗಬೇಕು ಎಂದರು. ಕೊನೆಗೆ ಮಾನವ ಹಕ್ಕು ಆಯೋಗವೇ ತನಿಖೆ ನಡೆಸಿತು. ಅದು ಸಲ್ಲಿಸಿದ 30 ಪುಟದ ವರದಿಯಲ್ಲಿ ದಿಲ್ಲಿ ಪೊಲೀಸರಿಗೆ Clean chit(ಶುದ್ಧಹಸ್ತ) ಕೊಟ್ಟಿದ್ದು ಮಾತ್ರವಲ್ಲ, ಪೊಲೀಸರೇ ಹಿಂದಿನಿಂದ ಹೊಡೆದಿದ್ದಾರೆ ಎಂಬ ಆರೋಪವನ್ನೂ ತಳ್ಳಿಹಾಕಿತು.

ಇಷ್ಟಾಗಿಯೂ…

2012 ಫೆಬ್ರವರಿ, ಮಾರ್ಚ್‌ನಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಘೋಷಣೆಯಾದಾಗ ಮುಸ್ಲಿಮರ ಓಲೈಕೆಗೆ ಮುಂದಾದ ದಿಗ್ವಿಜಯ್ ಸಿಂಗ್, ‘ಬಾಟ್ಲಾಹೌಸ್‌ನಲ್ಲಿ ನಡೆದದ್ದು ನಕಲಿ ಎನ್ ಕೌಂಟರ್‌’ ಎಂದು ಬಿಟ್ಟರು. ‘ಅದಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಹಮತವೂ ಇದೆ’ ಎಂದರು! ಇತ್ತ ಅಧಿಕಾರಕ್ಕೇರಿದ ಸಮಾಜವಾದಿ ಪಕ್ಷವಂತೂ ತುಷ್ಟೀಕರಣವನ್ನೇ ಒಡಲಲ್ಲಿ ಇಟ್ಟುಕೊಂಡಿದೆ. ಮುಲ್ಲಾ ಮುಲಾಯಂ ಮಗ ಅಖಿಲೇಶ್ ಯಾದವ್ ಅಧಿಕಾರಕ್ಕೇರಿದ ಕೂಡಲೇ ಮಾಡಿದ ಮೊದಲ ಕೆಲಸ ಬಾಟ್ಲಾ ಹೌಸ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಕಾರಣಕ್ಕೆ ಅಝಂಗಢದಲ್ಲಿ ಬಂಧಿತರಾಗಿದ್ದವರ ವಿರುದ್ಧದ ಪ್ರಕರಣಗಳನ್ನು ವಾಪಸ್ ತೆಗೆದುಕೊಂಡದ್ದು. ಅದರ ಜತೆಗೆ 2007ರಲ್ಲಿ ನಡೆದ ವಾರಾಣಸಿ, ಗೋರಖ್‌ಪುರ್, ಫೈಝಾಬಾದ್ ಹಾಗೂ ರಾಮ್‌ಪುರ್‌ನ ಸಿಆರ್‌ಪಿಎಫ್ ಮೇಲೆ ನಡೆದ ಸರಣಿ ದಾಳಿಯಲ್ಲಿ ಭಾಗಿಯಾಗಿದ್ದವರ ವಿರುದ್ಧದ ಕೇಸುಗಳನ್ನೂ ಹಿಂತೆಗೆದುಕೊಳ್ಳಲು ಈಗ ಮುಂದಾಗಿದ್ದಾರೆ. ಹೀಗೆ ಚಾರ್ಜ್‌ಶೀಟ್ ಸಲ್ಲಿಸಲಾಗಿರುವ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು, ಪ್ರಕರಣ ಮುಂದುವರಿಸಲು ತನಗೆ ಆಸಕ್ತಿಯಿಲ್ಲ ಎಂದು ಹೈಕೋರ್ಟ್‌ಗೆ ತಿಳಿಸಲು ಹೊರಟರೆ ಅದರಿಂದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರಿಗೆ ಯಾವ ಸಂದೇಶ ಹೋಗುತ್ತದೆ? ಪೊಲೀಸರ ಆತ್ಮಸ್ಥೈರ್ಯ ಏನಾಗಬೇಕು? ಜೀವ ಒತ್ತೆಯಿಟ್ಟು, ಕೆಲವೊಮ್ಮೆ ಕಳೆದುಕೊಂಡು ಭಯೋತ್ಪಾದಕರನ್ನು ಹಿಡಿದು ತಂದು ಸಾಕ್ಷಿ ಕಲೆಹಾಕಿ ಶಿಕ್ಷೆ ಕೊಡಿಸುವ ಹಂತಕ್ಕೆ ಹೋಗಿರುವ ಪ್ರಕರಣಗಳನ್ನು ಹಿಂತೆಗೆದುಕೊಂಡರೆ, ದೇಶದ್ರೋಹಿಗಳನ್ನು ಬಿಡುಗಡೆ ಮಾಡಿದರೆ ಅದರಿಂದ ಎಂಥಾ ಮೆಸೇಜ್ ಕೊಟ್ಟಂತಾಗುತ್ತದೆ? 1998ರ ಕೊಯಮತ್ತೂರು ಬಾಂಬ್ ಸ್ಫೋಟದ ರೂವಾರಿ ಮದನಿಯನ್ನೂ ತಮಿಳುನಾಡಿನ ಕರುಣಾನಿಧಿ ಸರ್ಕಾರ, ಕೇರಳದ ಕಮ್ಯುನಿಸ್ಟ್ ಸರ್ಕಾರಗಳು ರಾಜ್ಯ ವಿಧಾನಸಭೆಗಳಲ್ಲಿ ಗೊತ್ತುವಳಿ ಅಂಗೀಕರಿಸಿ ಬಿಡುಗಡೆ ಮಾಡಿದವು. ಇಂತಹ ಅಯೋಗ್ಯರು ಆಳುವವರಾಗಿರುವಾಗ ಪೊಲೀಸರು ತಾನೇ ಏನು ಮಾಡಿಯಾರು? ಏಕಾಗಿ ಜೀವಕೊಟ್ಟು ತಮ್ಮ ಹೆಂಡತಿಯರನ್ನು ವಿಧವೆಯರನ್ನಾಗಿ ಮಾಡಲು ಮುಂದಾಗುತ್ತಾರೆ? ಹೈದರಾಬಾದ್ ಪೊಲೀಸರೇನು ಅಸಮರ್ಥರಲ್ಲ. ಕಳೆದ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಪ್ರಮುಖ ವ್ಯಕ್ತಿಗಳನ್ನು ಕೊಲ್ಲಲು ರೂಪಿಸಿದ್ದ ಭಯೋತ್ಪಾದಕ ಸಂಚಿನ ಬಗ್ಗೆ ಬೆಂಗಳೂರು ಪೊಲೀಸರಿಗೆ ಸುಳಿವು ನೀಡಿದ್ದೇ ಹೈದರಾಬಾದ್ ಪೊಲೀಸ್. 2007, ಆಗಸ್ಟ್ 25ರಂದು ನಡೆದಿದ್ದ ಲುಂಬಿಣಿ ಪಾರ್ಕ್ ಬ್ಲಾಸ್ಟ್‌ನ ನಂತರ ಅವರದ್ದೇ ಆದ ಭಯೋತ್ಪಾದನೆ ಪತ್ತೆ ಹಾಗೂ ಹತ್ತಿಕ್ಕುವಿಕೆ ತಂತ್ರವನ್ನು ಹೈದರಾಬಾದ್ ಪೊಲೀಸರು ಅಳವಡಿಸಿಕೊಂಡಿದ್ದಾರೆ. ಹಾಗಿದ್ದರೂ ಏಕೆ ಫೆಬ್ರವರಿ 21ರಂದು ಅವಳಿ ಸ್ಫೋಟಗಳಾಗಿವೆಯೆಂದರೆ ಆಳುವವರು ಆಯೋಗ್ಯರಾದಾಗ ಮತ್ತೀನ್ನೇನು ಸಂಭವಿಸಲು ಸಾಧ್ಯ?

ಹಾಗಂತ ನಮ್ಮ, ನಿಮ್ಮ ಜವಾಬ್ದಾರಿ ಇದರಲ್ಲಿಲ್ಲ ಎಂದುಕೊಳ್ಳಬೇಡಿ. ಬಾಡಿಗೆಗೆ ಮನೆ ಕೇಳಲು ಬಂದಾಗ ಜಾತಿ,  ಗೋತ್ರ ಕೇಳುವ ಬದಲು, ಅವನ ಕಿಸೆಯಲ್ಲಿ ಎಷ್ಟು ಕಾಸಿದೆ ಎಂದು ಯೋಚಿಸುವ ಬದಲು ಬಾಡಿಗೆಗೆ ಬರುವವನು ಎಂಥವನು ಎಂದು ಮೊದಲು ತಿಳಿದುಕೊಳ್ಳಿ. ನಿಮ್ಮ ಬೀದಿ, ಏರಿಯಾಕ್ಕೆ ಬರುವ ಅಪರಿಚಿತರ ಬಗ್ಗೆ ಒಂದು ಕಣ್ಣಿಡಿ. ಅನುಮಾನ ಬಂದರೆ ಪೊಲೀಸರಿಗೆ ಮಾಹಿತಿ ನೀಡಿ. ನಿಮ್ಮ ಆಸ್ತಿಯನ್ನು ಮಾರುವಾಗ ಎಷ್ಟು ಗಿಟ್ಟುತ್ತದೆ ಎನ್ನುವುದಕ್ಕಿಂತ ಯಾರ ಹಿಡಿತಕ್ಕೆ ಸಿಲುಕುತ್ತಿದೆ ಎಂದು ಮೊದಲು ಯೋಚಿಸಿ. ಇವತ್ತು ಮಡಿಕೇರಿಯಿಂದ ಶಿವಮೊಗ್ಗದವರೆಗೂ ಪಶ್ಚಿಮ ಘಟ್ಟದಲ್ಲಿ ಅಪಾಯಕಾರಿ ಬೆಳವಣಿಗೆಗಳು ಸಂಭವಿಸುತ್ತಿವೆ, ಭೂಮಿಯ ಮೇಲಿನ ಹಿಡಿತ ಅನ್ಯರ ಪಾಲಾಗುತ್ತಿದೆ. ಇದನ್ನು ತಡೆಯಲು ಮೊದಲು ನೀವೇ ಎಚ್ಚರವಹಿಸಬೇಕು. ಇಷ್ಟಕ್ಕೂ ಯಾಸಿನ್ ಮಲ್ಲಿಕ್ ಲಾಹೋರ್‌ಗೆ ಹೋಗಿ ಮುಂಬೈ ದಾಳಿಯ ರೂವಾರಿ ಹಫೀಸ್ ಸಯೀದ್ ಜತೆ ವೇದಿಕೆ ಹಂಚಿಕೊಂಡರೂ, ಸತ್ಯಾಗ್ರಹ ಮಾಡಿದರೂ ಕ್ರಮ ತೆಗೆದುಕೊಳ್ಳುವ ತಾಕತ್ತಿಲ್ಲದ ಈ ಸರ್ಕಾರದಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಎಸ್‌ಎಆರ್ ಗಿಲಾನಿ ದಿಲ್ಲಿಗೆ ಬಂದು ರಾಷ್ಟ್ರವಿರೋಧಿ ಮಾತನಾಡಿ ಹೋಗುತ್ತಾರೆ, ಆದರೆ ಆತನನ್ನು ಬಂಧಿಸಿ ಜೈಲಿಗೆ ಒಗೆಯುವ ಧೈರ್ಯ ಮನಮೋಹನ್ ಸರ್ಕಾರಕ್ಕಿಲ್ಲ. ಅಮೆರಿಕ 9/11 ದಾಳಿಯ ನಂತರ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಕೇಂದ್ರವನ್ನು ತಂದರೆ, ಯುಪಿಎ ಪೋಟೋ ಕಾಯಿದೆಯನ್ನೇ ಕಿತ್ತೊಗೆಯಿತು. ಕೊನೆಗೆ ಅನಿವಾರ್ಯವಾಗಿ ಮುಂಬೈ ದಾಳಿಯ ನಂತರ 2009ರಲ್ಲಿ National Investigation Agency (NIA), ರಾಷ್ಟ್ರೀಯ ತನಿಖಾ ದಳ ಎಂಬ ವ್ಯವಸ್ಥೆಯನ್ನು ಜಾರಿಗೆ ತಂದಿತು. ಆದರೆ ಪ್ರಯೋಜನವೇನಾಯಿತು? ಅಮೆರಿಕದ NCTCಇಲ್ಲಿವರೆಗೂ 50 ಭಯೋತ್ಪಾದಕ ದಾಳಿಗಳನ್ನು ತಡೆದಿದ್ದರೆ, ನಮ್ಮ ಎನ್‌ಐಎ 48 ಕೇಸುಗಳನ್ನು ದಾಖಲು ಮಾಡಿಕೊಂಡಿದೆ.  ಅವುಗಳಲ್ಲಿ 23 ಕೇಸುಗಳಲ್ಲಿ ಚಾರ್ಜ್‌ಶೀಟ್ ಹಾಕುವುದಕ್ಕೂ ಅದರಿಂದಾಗಿಲ್ಲ. ಇನ್ನುಳಿದ 25 ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದರೂ ಆ ಪ್ರಕರಣಗಳಿಗೆ ಸಂಬಂಧಿಸಿದ 45 ಆರೋಪಿಗಳನ್ನು ಹಿಡಿದು ತರುವುದಕ್ಕೂ ಅದರಿಂದಾಗಿಲ್ಲ. ಕೇವಲ ಎರಡು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ, ಅದರಲ್ಲೂ ಇಬ್ಬರಿಗೆ ಶಿಕ್ಷೆಯಾಗಿದ್ದರೆ ಇನ್ನಿಬ್ಬರು ದೋಷಮುಕ್ತರೆಂದು ತಪ್ಪಿಸಿಕೊಂಡಿದ್ದಾರೆ.

ಇದೆಲ್ಲ ಏನನ್ನು ಸೂಚಿಸುತ್ತದೆ?

ಈ ದೇಶದ ಸಂಪತ್ತನ್ನು ಲಜ್ಜೆಯಿಲ್ಲದೆ ಲೂಟಿ ಮಾಡುತ್ತಿರುವ ಸರ್ಕಾರ ರೂಪಿಸಿರುವ ವ್ಯವಸ್ಥೆಯಿಂದ ಇದಕ್ಕಿಂತ ಬೇರೇನನ್ನು ನಿರೀಕ್ಷಿಸಲು ಸಾಧ್ಯ ಹೇಳಿ? ಕೊಲ್ಲುವ ಕೈಗಳಿಗಿಂತ ಕಾಯುವವನು ಮೇಲು ಎನ್ನುತ್ತಾರೆ. ಆದರೆ ನಮ್ಮನ್ನು ಕಾಯುವ ಕೆಲಸವನ್ನು ಎಂಥ ಅಯೋಗ್ಯರಿಗೆ ಕೊಟ್ಟಿದ್ದೇವೆ, ನೋಡಿ?!

16 Responses to “ಕೊಲ್ಲುವ ಕೈಗಳಿಗಿಂತ ಕಾಯುವವನು ಮೇಲು, ಆದರೆ ನಮ್ಮನ್ನು ಕಾಯುತ್ತಿರುವವರು ಎಂಥವರು?”

  1. NaveenJ says:

    Yes sir our Government is supporting terrorism. By realising of terrorists, this government doing vote bank politics. Govt. has taken appreciation by porkistani terrorist hafis sayeed. What a pretty??? What is the meaning of this appreciation ??

  2. Rakesh K R says:

    Congress government is just an impotent government. It can neither create a fair source of investigation against public criminals nor give protection to the normal people. India has resources including skilled professionals in IT to make effective weapons to trace the original identity of people around the globe. Still can’t use such valuable resources. On a whole a shameless rule from Mr.Manmohan Singh’s govt n who else to blame for the innocent lives lost? They enjoy a secured life in bullet proof cars while people die in bomb blasts…
    “Intha duddanna tinnokadru mansu heg baratto gottilla?? “. Kelsa na 100% madi torsodu BJP govt onde, alli kayyalli hiddiro kelsa na mugsovargu malgde iro gandsre irodu- intha namardha mamu galilla…

  3. Aditya says:

    Sir, what we need is a pure rashtravaadi govt. not the govt which is busy in strengthening its Vote bank……One more thing sir, There was a plan to assassinate you… Intelligence bureau must have known this, I doubt people let the terrorists to succeed in their intentions only to get rid of you, be careful here on we are with you.

  4. Siddappa ballodi says:

    Sir neevu istondu stdy maadi bardiro vishaya odoke chennagirutte aadre karya rupakke taralu yaaru ee bagge tale kedskolla yakandre yellarigu tavu chennagidre saaku anno bhavane eede adke nam pauz nalli 1matide apna kaam banta gand marvaye janata ee matna ee holasu politicians node madidare

  5. Aravinda keekan says:

    Right way of thinking and u r leading us in right path,thank u…..

  6. manjunath says:

    yes prathap u r right…..

  7. manjunath gunaga says:

    if this continue further then what about our future..

  8. Vishwa says:

    Nammalliro main problem corruption. Adara root cause yenandre very weak laws & implementation. Our fight should be to improve our law & its implementation. Uladiddella almost than thaanaage sari hogatte.

  9. ranganath says:

    sir good

  10. Very True says:

    Very True..!!

  11. raj a great fan of pratap simha says:

    we shd realy thnk dat,y shd v vote fr congres?wht d hel dey r doing odr dan looting d country?

  12. raj a follower of pratap simha says:

    we shd thnk,y shd v vote fr congres?wht d hell dey r doing odr dan looting d country???

  13. basavesh says:

    super article sir

  14. Prakash says:

    very nice article

  15. gunapal says:

    grt fact