Date : 11-11-2017 | no Comment. | Read More
ಕನ್ನಡ ಬಾರದ ಪರಪುಟ್ಟನಿಗೆ ಕಾರ್ಯಪ್ಪ ಹೇಗೆ ತಾನೇ ಅರ್ಥವಾದಾರು? ಕಳೆದ ವಾರ ಪತ್ರಿಕೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ನೋಡಿದವರಿಗೆ ಗಾಬರಿಯಾಗುವ ಸಂಗತಿಯೊಂದು ಕಾದಿತ್ತು. ನಾಡು–ನುಡಿಗಳ ಸಾಧಕರ ಹೆಸರಿನ ಜತೆಗೆ ಕನ್ನಡದಲ್ಲದ, ಕನ್ನಡದ ಗಂಧ ಗಾಳಿಯೂ ಇಲ್ಲದ ರಾಮಚಂದ್ರ ಗುಹಾ ಎಂಬ ಹೆಸರು ಕರ್ನಾಟಕದ ಏಕೀಕರಣವನ್ನೂ, ಕನ್ನಡದ ಮಣ್ಣಿನ ವಾಸನೆಯನ್ನೂ ಅಣಕಿಸುವಂತೆ ರಾರಾಜಿಸುತ್ತಿತ್ತು. ಹಲವರ ವಿರೋಧದ ನಡುವೆ ರಾಮಚಂದ್ರ ಗುಹಾ ಪ್ರಶಸ್ತಿಯನ್ನು ಯಾವ ನಾಚಿಕೆ ಇಲ್ಲದೆ ಸ್ವೀಕರಿಸಿದ್ದರು. ಸದಾ ಬಲಪಂಥೀಯ ವಿಚಾರಧಾರೆಯ ವಿರುದ್ಧ ಇಂಗ್ಲಿಷಿನಲ್ಲಿ ಬರೆವ ಗುಹಾನನ್ನು […]
Date : 04-11-2017 | no Comment. | Read More
ಕೊಡಗಿಗೆ ಜನರಲ್ಗಳು ಬರುವುದೆಂದರೆ ಊರಿಗೇ ಹಬ್ಬ ಬಂದಂತೆ ಕೊಡಗಿನಲ್ಲಿ ನಾಟಿ ಕೆಲಸವಿರಲಿ, ಕಟಾವಿನ ಭರಾಟೆಯಿರಲಿ, ಕಾಫಿಯ ಸೀಸನ್ನೇ ಇರಲಿ ಬೆಳಗೆದ್ದು ಕ್ಷೌರ ಮುಗಿಸಿ ಟಾಕುಠೀಕಾಗಿ ತಯಾರಾಗಿ ಪೇಟೆಗೆ ಹೋಗುವ ಮಧ್ಯವಯಸ್ಕರನ್ನು ಕಂಡರೆ ನಿಸ್ಸಂಶಯವಾಗಿ ಅವರು ಮಾಜಿ ಯೋಧರೆಂದೇ ಅರ್ಥ! ಪುಟಿಯುವ ಚೆಂಡಿನಂಥಾ ಉತ್ಸಾಹ, ಬಿರುಸಾದ ನಡಿಗೆ, ಮಾತಿನಲ್ಲಿ ಶಿಸ್ತು, ಸಮಯದಲ್ಲಿ ಕಟ್ಟುನಿಟ್ಟು. ಅಂಥ ಮಾಜಿ ಯೋಧರು ಕೆಲದಿನಗಳಿಂದ ಎಂದಿಗಿಂತ ಹೆಚ್ಚು ಉಲ್ಲಸಿತರಾಗಿದ್ದರು. ಏಕೆಂದರೆ ಅವರ ಮೆಚ್ಚಿನ ಚೀಫ್ ‘ಆಫ್ ಆರ್ಮಿ ಸ್ಟಾಫ್’ ಇಂದು ಕೊಡಗಿಗೆ ಆಗಮಿಸುತ್ತಿದ್ದಾರೆ. ಅದರಲ್ಲೂ […]
Date : 28-10-2017 | no Comment. | Read More
ಧರ್ಮ ಗೆಲ್ಲುವವರೆಗೂ ಹೋರಾಡುತ್ತಲೇ ಇರುತ್ತೇವೆ… ಶತವಧಾನಿ ರಾ. ಗಣೇಶ್ ಅವರು ತಮ್ಮ ಉಪನ್ಯಾಸದಲ್ಲಿ ಆಗಾಗ್ಗೆ ಒಂದು ಮಾತನ್ನಾಡುತ್ತಿರುತ್ತಾರೆ. ಶಂಖ ಊದಬೇಕು, ಊದುತ್ತಲೇ ಇರಬೇಕು. ಕುರುಕ್ಷೇತ್ರ ಯುದ್ಧದಲ್ಲೇ ನೋಡಿ ಕ್ರಷ್ಣ ಪಾಂಚಜನ್ಯವೊಂದನ್ನು ಊದಿದ್ದರೂ ಸಾಕಾಗಿತ್ತು. ಆದರೆ ಭೀಮಾರ್ಜುನ ಯುಧಿಷ್ಠಿರಾಧಿಗಳೂ ಶಂಖ ಊದಿದರು. ಹೇಳುವುದನ್ನೇ ಮತ್ತೆ ಮತ್ತೆ ಹೇಳಬೇಕು. ಮತ್ತೆ ಮತ್ತೆ ಶಂಖ ಊದುತ್ತಲೇ ಇರಬೇಕು. ಹಾಗೆ ಮತ್ತೆ ಮತ್ತೆ ಶಂಖವನ್ನು ಊದುವ ಪರಿಸ್ಥಿತಿ ಈಗ ನಮ್ಮದು, ಹಿಂದುಗಳದ್ದು ಮತ್ತು ಕ್ಯಾಥೋಲಿಕರದ್ದು. ಏಕೆಂದರೆ ಮತ್ತೆ ಟಿಪ್ಪು ಜಯಂತಿ ಬಂದಿದೆ. ಭಾವನೆಗಳಿಗೆ […]
Date : 21-10-2017 | no Comment. | Read More
ಬೆಳಕಿನ ಹಬ್ಬದಲ್ಲಿ ಆರದಿರಲಿ ದೃಷ್ಟಿದೀಪ ! ಪ್ರತಿವರ್ಷ ಬೆಳಕಿನ ಹಬ್ಬವಾದ ದೀಪಾವಳಿ ಬಂತೆಂದರೆ ಸಂಭ್ರಮದ ಬಗಲಲ್ಲೇ ಆತಂಕ ಸುಳಿದಾಡತೊಡಗುತ್ತದೆ. ಈ ಹಬ್ಬದ ಬೆನ್ನಲ್ಲೇ ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ವರ್ಷ ವರ್ಷವೂ ದೃಷ್ಟಿಭಾಗ್ಯ ಕಳೆದುಕೊಂಡು ಬದುಕಿಗೆ ಕತ್ತಲೆಯನ್ನು ಆಹ್ವಾನಿಸಿಕೊಂಡು ಮಲಗುವ ಮಕ್ಕಳ ಚಿತ್ರಣ ಕಣ್ಣಮುಂದೆ ಬರುತ್ತದೆ. ಹುಟ್ಟಿ ಹದಿನೆಂಟು ತಿಂಗಳು ತುಂಬುವಷ್ಟರಲ್ಲೇ ದೃಷ್ಟಿ ಕಳೆದುಕೊಂಡ ದಂತಕತೆ ಹೆಲೆನ್ ಕೆಲ್ಲರ್, 1933, ಜನವರಿಯಲ್ಲಿ “ದಿ ಅಟ್ಲಾಂಟಿಕ್ ಮಂತ್ಲಿ” ಎನ್ನುವ ನಿಯತಕಾಲಿಕೆಗೆ ಬರೆದ “Three Days to See” ಪ್ರಬಂಧ ನೆನಪಾಗುತ್ತದೆ. […]