*/
Date : 14-07-2012 | 56 Comments. | Read More
ಇನ್ನು ಐವತ್ತು ವರ್ಷಗಳ ನಂತರ ಇತಿಹಾಸಕಾರರು ಆಧುನಿಕ ಭಾರತದ ನಿರ್ಮಾತೃಗಳಾರು ಎಂಬ ಪ್ರಶ್ನೆಯನ್ನಿಟ್ಟುಕೊಂಡು ತುಲನೆ ಮಾಡಿದರೆ ನಮ್ಮ ಕಾಲದ ಇಬ್ಬರು ವ್ಯಕ್ತಿಗಳು ಬಹಳ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಒಂದು ಪಿ.ವಿ. ನರಸಿಂಹರಾವ್ ಹಾಗೂ ಮತ್ತೊಬ್ಬರು ಅಟಲ್ ಬಿಹಾರಿ ವಾಜಪೇಯಿ. ಒಂದು ವೇಳೆ ನ್ಯಾಯ ಸಂದಿದ್ದೇ ಆದರೆ ಆ ವೇಳೆಗೆ ಇವರಿಬ್ಬರಿಗೂ ‘ಭಾರತರತ್ನ’ ನೀಡಿ ಈ ದೇಶ ಸಮ್ಮಾನಿಸಿರುತ್ತದೆ. ಹಾಗೆಂದು ಬರೆಯಲಾಗಿದೆ, ಕಳೆದ ವಾರ ಇದೇ ಅಂಕಣದಲ್ಲಿ ಉಲ್ಲೇಖಿಸಲಾಗಿದ್ದ “A forgotten Revolutionary’ ಲೇಖನದಲ್ಲಿ! ಈ ಮಾತು ನಿಮಗೆ ಅತಿಶಯೋಕ್ತಿ […]
Date : 10-07-2012 | 13 Comments. | Read More
ನಮ್ಮ ಅರ್ಥವ್ಯವಸ್ಥೆ ಕುಂಟುತ್ತಿದೆ, ಆರ್ಥಿಕ ಅಭಿವೃದ್ಧಿ ದರ ಕುಸಿಯುತ್ತಿದೆ. ರುಪಾಯಿಯ ಮೌಲ್ಯ ಕಳೆದ ನವೆಂಬರ್್ನಿಂದ ಗಣನೀಯವಾಗಿ ಕುಸಿಯುತ್ತಲೇ ಇದೆ. ಕಚ್ಛಾ ತೈಲದ ಬೆಲೆ ಏರದಿದ್ದರೂ ಪೆಟ್ರೋಲ್ ಬೆಲೆ ಮಾತ್ರ ಗಗನಕ್ಕೇರುತ್ತಿದೆ, ಬೆಲೆ ಏರಿಕೆಯ ಬಿಸಿ ಎಲ್ಲ ವರ್ಗವನ್ನೂ ತಟ್ಟುತ್ತಿದೆ. 1991ರಲ್ಲಿ ನಿರ್ಮಾಣವಾಗಿದ್ದ ಪರಿಸ್ಥಿತಿ ಮತ್ತೆ ಮರುಕಳಿಸುತ್ತಿದೆಯೇನೋ ಎಂಬ ಆತಂಕ ಉದ್ಯಮ, ಮಾಧ್ಯಮ ಎಲ್ಲ ವಲಯಗಳಲ್ಲೂ ವ್ಯಕ್ತವಾಗುತ್ತಿದೆ. ಈ ದೇಶದಲ್ಲಿ ಏನೇ ಸಕಾರಾತ್ಮಕ ಬೆಳವಣಿಗೆಗಳಾದರೂ, ಅಭಿವೃದ್ಧಿಯಾದರೂ ಅದಕ್ಕೆಲ್ಲ ಸೋನಿಯಾ ಗಾಂಧಿಯವರೇ ಕಾರಣ, ಆದರೆ ಕೆಡುಕಿಗೆಲ್ಲ ಅನ್ಯರು ಕಾರಣವೆಂಬಂತೆ ಬಿಂಬಿಸುವ […]
Date : 01-07-2012 | 15 Comments. | Read More
ಅವರ ಹೆಸರು ಅರುಣ್ ಕುಮಾರ್. ಅಪ್ಪಟ ಕನ್ನಡಿಗರು. ಮೂಲತಃ ಮೈಸೂರಿನವರು. ದಾವಣಗೆರೆಯ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದವರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್್ನಲ್ಲಿ ಪದವಿ ಪಡೆದವರು. ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್ ಆದರೂ ಅದರಲ್ಲಿ ಒಂದು ಕಂಪ್ಯೂಟರ್ ವಿಷಯಇರುತ್ತಿತ್ತು. ಅರುಣ್ ಕುಮಾರ್್ ಗೆ ಮೆಕ್ಯಾನಿಕಲ್ಗಿಂತ ಕಂಪ್ಯೂಟರ್ನಲ್ಲಿ ಹೆಚ್ಚು ಆಸಕ್ತಿಯಿತ್ತು. ಪದವಿ ಮುಗಿದ ನಂತರ ಕಂಪ್ಯೂಟರ್ ಬಗೆಗಿನ ಗೀಳಿನ ಹಿಂದೆಯೇ ಹೊರಟರು. ಅದು 1980ರ ದಶಕದ ಕೊನೆಯ ಭಾಗ. ಪ್ರತಿಭಾ ಪಲಾಯನದ ಕೂಗು ಮೊಳಗುತ್ತಿದ್ದ ಕಾಲ. ಆದರೂ ಭವ್ಯ ಬದುಕಿನ […]
Date : 25-06-2012 | 48 Comments. | Read More
ಈ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್್ಗೇನಾಗಿದೆ? ಅವರ ಚೇಲಾಗಳು ಯಾಕಾಗಿ ಅಟಲ್ ಬಿಹಾರಿ ವಾಜಪೇಯಿಯವರನ್ನು ಎಳೆದು ತರುತ್ತಿದ್ದಾರೆ? ಯಾವ ಉದ್ದೇಶ ಸಾಧನೆಗಾಗಿ ರಾಜಧರ್ಮವನ್ನು ಪಾಲಿಸಿ ಎಂಬ ವಾಜಪೇಯಿಯವರ ಕಿವಿಮಾತನ್ನು ಈಗ ಉಲ್ಲೇಖಿಸುತ್ತಿದ್ದಾರೆ? ನಿತೀಶ್ ಕುಮಾರ್ ಮಾತನಾಡುತ್ತಿರುವ ಜಾತ್ಯತೀತತೆಯಾದರೂ ಯಾವುದು? ಇಷ್ಟಕ್ಕೂ ಜಾತ್ಯತೀತತೆ ಎಂದರೇನು? ಒಂದು ವೇಳೆ ಹಿಂದೂಗಳು ಬಹುಸಂಖ್ಯಾತರಾಗಿಲ್ಲದೇ ಹೋಗಿದ್ದರೆ ಈ ದೇಶ ಜಾತ್ಯತೀತವಾಗಿರುವುದಕ್ಕಾದರೂ ಸಾಧ್ಯವಿತ್ತೆ? ಯಾವ ಕಾರಣಕ್ಕಾಗಿ ಇವರೆಲ್ಲ ನರೇಂದ್ರ ದಾಮೋದರ ದಾಸ್ ಮೋದಿಯವರನ್ನು ಕೋಮುವಾದಿ ಎಂದು ಜರಿಯುತ್ತಿದ್ದಾರೆ? 2002, ಫೆಬ್ರವರಿ 27 ಹಾಗೂ ತದನಂತರ […]
Date : 03-06-2012 | 79 Comments. | Read More
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಾಮಾನ್ಯವಾಗಿ ಮುಕ್ತಾಯವಾಗುವುದೇ ಸಾರ್ವಜನಿಕ ರ್ಯಾಲಿಯೊಂದಿಗೆ. ಅದರಲ್ಲಿ ಪಕ್ಷದ ಬಹುತೇಕ ಎಲ್ಲ ಗಣ್ಯಾತಿಗಣ್ಯ ನಾಯಕರೂ ಭಾಗವಹಿಸುತ್ತಾರೆ. ಒಂದು ರೀತಿಯಲ್ಲಿ ಅದು ಶಕ್ತಿ ಹಾಗೂ ನಾಯಕರ ನಡುವಿನ ಸಾಮರಸ್ಯ ಪ್ರದರ್ಶನವೂ ಆಗಿರುತ್ತದೆ. ಆದರೆ ಕಳೆದ ವಾರ (ಮೇ-25) ಮುಂಬೈನಲ್ಲಿ ನಡೆದ ರ್ಯಾಲಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿತ್ತು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಹೆಚ್ಚಿನ ಸದಸ್ಯರು ಹಾಗೂ ರಾಷ್ಟ್ರೀಯ ನಾಯಕರು ಕಾಣೆಯಾಗಿದ್ದರು. ಅಧ್ಯಕ್ಷ ನಿತಿನ್ ಗಡ್ಕರಿ, ಅರುಣ್ ಜೇಟ್ಲಿ ಬಿಟ್ಟರೆ ಹೇಳಿಕೊಳ್ಳುವಂಥ ಯಾವ ನಾಯಕರೂ ಇರಲಿಲ್ಲ. […]
Date : 28-05-2012 | 45 Comments. | Read More
ಶ್ರೀ ನಾರಾಯಣ ಗುರುಗಳು ಯಾರಿಗೆ ತಾನೇ ಗೊತ್ತಿಲ್ಲ? ಒಮ್ಮೆ ಗುರುಗಳು ರೈಲಿನಲ್ಲಿ ಸಂಚರಿಸುತ್ತಿರುತ್ತಾರೆ. ಅವರ ಸಹಪ್ರಯಾಣಿಕನಾಗಿದ್ದ ನಂಬೂದರಿಯೊಬ್ಬ,”ನಿಮ್ಮ ಹೆಸರೇನು?’ ಎಂದು ಪ್ರಶ್ನಿಸುತ್ತಾನೆ. ಗುರುಗಳು: ನಾರಾಯಣ ನಂಬೂದರಿ: ನಿಮ್ಮ ಜಾತಿ? ಗುರುಗಳು: ನೋಡಿದರೆ ಗೊತ್ತಾಗುವುದಿಲ್ಲವೆ? ನಂಬೂದರಿ: ಉಹೂಂ ಗುರುಗಳು: ನೋಡಿದರೆ ಗೊತ್ತಾಗದಿದ್ದಾಗ ಹೇಳಿದರೆ ಹೇಗೆ ಗೊತ್ತಾಗುತ್ತದೆ?! ಎಂದು ಕೇಳಿದಾಗ ನಂಬೂದರಿ ತಬ್ಬಿಬ್ಬಾಗುತ್ತಾನೆ.
Date : 22-05-2012 | 64 Comments. | Read More
ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳ Barmy Army, ಅದಕ್ಕೆ ಪ್ರತಿಯಾಗಿ ಬ್ರಿಟನ್್ನಲ್ಲಿ ನೆಲಸಿರುವ ಭಾರತ ಸಂಜಾತರು ಆರಂಭಿಸಿದ – Bharath Armyಗಳನ್ನು ಕೇಳಿದ್ದೇವೆ, ಆದರೆ ಇದ್ಯಾವುದೀ ಹೊಸ ಆರ್ಮಿ ಎನ್ನುತ್ತೀರಾ? ಹಲವಾರು ರಾಜಕೀಯ ವಿಪ್ಲವಗಳನ್ನು ಕಂಡ 1990ರ ದಶಕಕ್ಕೆ ಸಾಕ್ಷೀಭೂತರಾದ ಯಾರೊಬ್ಬರನ್ನು ಕೇಳಿದರೂ ಆ ವ್ಯಕ್ತಿ ಯಾರು ಎಂದು ತಟ್ಟನೆ ಉತ್ತರಿಸಿ ಬಿಡುತ್ತಾರೆ. ಖಂಡಿತ ಅವರನ್ನು ಪರಿಚಯ ಮಾಡಿಕೊಡಬೇಕಾದ ಅವಶ್ಯಕತೆಯೇ ಇಲ್ಲ. ಗೋವಿಂದ ರಾವ್ ಖೈರ್ನಾರ್!
Date : 14-05-2012 | 16 Comments. | Read More
ಕುಂಬಾರ ವೀರಭದ್ರಪ್ಪ ಆಲಿಯಾಸ್ ಕುಂ. ವೀರಭದ್ರಪ್ಪ ಅಲಿಯಾಸ್ ಕುಂವೀ! ಇವರ ‘ಬೇಟೆ’ ಕೃತಿ ‘ಮನಮೆಚ್ಚಿದ ಹುಡುಗಿ’ಯಾಗಿ ಶಿವರಾಜ್್ಕುಮಾರ್್ಗೆ ಹ್ಯಾಟ್ರಿಕ್ ಹೀರೊ ಪಟ್ಟ ತಂದುಕೊಟ್ಟಿದೆ, ‘ಬೇಲಿಯ ಹೂಗಳು’ ‘ದೊರೆ’ಯಾಗಿದೆ, ‘ಕೆಂಡದ ಮಳೆ ಗೆರೆವಲ್ಲಿ ಉದಕವಾಗಿದ್ದವರ ಕಥೆ’ ‘ಕೆಂಡದ ಮಳೆ’ಯಾಗಿದೆ, ‘ಕೊಟ್ರ ಹೈಸ್ಕೂಲಿಗೆ ಸೇರಿದ್ದು’ ‘ಕೊಟ್ರೇಶಿಯ ಕನಸು’ ಆಗಿ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರವೆಂಬ ರಾಷ್ಟ್ರೀಯ ಹೆಗ್ಗಳಿಕೆಗೆ ಭಾಜನವಾಗಿದೆ, ‘ಕೂರ್ಮಾವತಾರ’ವೂ ಚಲನಚಿತ್ರವಾಗಿ ಈ ವರ್ಷದ ಕೇಂದ್ರ ರಜತ ಕಮಲ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲ, ಅವರ ‘ಅರಮನೆ’ ಕಾದಂಬರಿಗೆ 2007ರಲ್ಲಿ ಕೇಂದ್ರ […]
Date : 06-05-2012 | 31 Comments. | Read More
ಸರ್ ಮೊಹಮದ್ ಇಕ್ಬಾಲ್ ಎಂದರೆ ಸಾಮಾನ್ಯ ವ್ಯಕ್ತಿಯೇ? ನಮ್ಮೆಲ್ಲರಲ್ಲೂ ರಾಷ್ಟ್ರಪ್ರೇಮವನ್ನು ಬಡಿದೆಬ್ಬಿಸುವ ‘ಸಾರೆ ಜಹಾಂಸೆ ಅಚ್ಛಾ’ ಬರೆದ ಕವಿ ಅವರು. ಭಾರತದ ಬಗ್ಗೆ ಅಪಾರ ಗೌರವ ಹೊಂದಿದವರು. ಇಂತಹ ಅಭಿಪ್ರಾಯವನ್ನು ಇಂದಿಗೂ ಇಟ್ಟುಕೊಂಡಿರುವವರು ಸಾಕಷ್ಟು ಜನರಿದ್ದಾರೆ. ಆದರೂ ನಮ್ಮ ಪತ್ರಿಕೆಯ ‘ಹಿರಿಯರ ಹಾದಿ’ ಅಂಕಣದಲ್ಲಿ ಪ್ರಕಟವಾಗಿದ್ದ ‘ಮೊಹಮದ್ ಇಕ್ಬಾಲರ ದೇಶಪ್ರೇಮ’ ಲೇಖನಕ್ಕೆ ಬಹಳಷ್ಟು ಓದುಗರು ತಗಾದೆ ಎತ್ತಿದರು. ಮೊಹಮದ್ ಇಕ್ಬಾಲ್ ರಾಷ್ಟ್ರಪ್ರೇಮಿಯಾಗಿರಲಿಲ್ಲ, ಆತನೂ ಒಬ್ಬ ಮತಾಂಧನಾಗಿದ್ದ ಎಂದು ಕೆಲವರು ವಾದಿಸಿದರೆ ಉಮರ್ ಫಾರೂಕ್ ಎಂಬ ಓದುಗರು ಇಕ್ಬಾಲರನ್ನು […]
Date : 04-05-2012 | 32 Comments. | Read More
ಭಾರತ ಎಂಬುದೇ ಒಂದು ಬೆರಗು. ಈ ದೇಶದ ಉದ್ದಗಲಕ್ಕೂ ಬೆರಗಿನ ನೂರಾರು ಉದಾಹರಣೆಗಳು ಕಾಣಸಿಗುತ್ತವೆ. ಮನಸ್ಸಿದ್ದರೆ ಏನೆಲ್ಲ ಸಾಧನೆಗಳನ್ನು ಮಾಡಲು ಸಾಧ್ಯ. ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಹೆಜ್ಜೆಗೊಂದು ಉದಾಹರಣೆ ಸಿಗುತ್ತದೆ. ಅತಿ ಸಾಮಾನ್ಯರು ಅಸಾಮಾನ್ಯ ಸಂಶೋಧನೆಗಳನ್ನು ಮಾಡಿದ್ದಾರೆ. ಈ ಸಾಮಾನ್ಯರು ಸುಶಿಕ್ಷಿತ ಪಂಡಿತರಲ್ಲ. ನುರಿತ ಉದ್ಯಮಿಗಳಲ್ಲ. ಆದರೂ ತಮ್ಮ ವಿವೇಚನೆಯ ಇತಿಮಿತಿಯಲ್ಲೇ ರಿಸ್ಕ್ ತೆಗೆದುಕೊಂಡಿದ್ದಾರೆ. ತಮ್ಮ ಸುತ್ತಲ ಪರಿಸರದ ಬಾಳು ಹಸನಾಗಿಸುವ ಪ್ರಯತ್ನ ಮಾಡಿ ಗೆದ್ದಿದ್ದಾರೆ. ಅಂಥವರ ಪೈಕಿ ತಮಿಳುನಾಡಿನ ಅರುಣಾಚಲಂ ಮುರುಘನಾಥಂ ಕೂಡ ಒಬ್ಬರು. ಶಾಲೆಯನ್ನು […]