Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ರಾಷ್ಟ್ರಗಳು ಉದಯಿಸುವುದು ಕವಿಗಳ ಹೃದಯದಲ್ಲಿ ಎಂದವ ರಾಷ್ಟ್ರಪ್ರೇಮಿಯಾದಾನೇ?

ರಾಷ್ಟ್ರಗಳು ಉದಯಿಸುವುದು ಕವಿಗಳ ಹೃದಯದಲ್ಲಿ ಎಂದವ ರಾಷ್ಟ್ರಪ್ರೇಮಿಯಾದಾನೇ?

ಸರ್ ಮೊಹಮದ್ ಇಕ್ಬಾಲ್ ಎಂದರೆ ಸಾಮಾನ್ಯ ವ್ಯಕ್ತಿಯೇ?

ನಮ್ಮೆಲ್ಲರಲ್ಲೂ ರಾಷ್ಟ್ರಪ್ರೇಮವನ್ನು ಬಡಿದೆಬ್ಬಿಸುವ ‘ಸಾರೆ ಜಹಾಂಸೆ ಅಚ್ಛಾ’ ಬರೆದ ಕವಿ ಅವರು. ಭಾರತದ ಬಗ್ಗೆ ಅಪಾರ ಗೌರವ ಹೊಂದಿದವರು. ಇಂತಹ ಅಭಿಪ್ರಾಯವನ್ನು ಇಂದಿಗೂ ಇಟ್ಟುಕೊಂಡಿರುವವರು ಸಾಕಷ್ಟು ಜನರಿದ್ದಾರೆ. ಆದರೂ ನಮ್ಮ ಪತ್ರಿಕೆಯ ‘ಹಿರಿಯರ ಹಾದಿ’ ಅಂಕಣದಲ್ಲಿ ಪ್ರಕಟವಾಗಿದ್ದ ‘ಮೊಹಮದ್ ಇಕ್ಬಾಲರ ದೇಶಪ್ರೇಮ’ ಲೇಖನಕ್ಕೆ ಬಹಳಷ್ಟು ಓದುಗರು ತಗಾದೆ ಎತ್ತಿದರು. ಮೊಹಮದ್ ಇಕ್ಬಾಲ್ ರಾಷ್ಟ್ರಪ್ರೇಮಿಯಾಗಿರಲಿಲ್ಲ, ಆತನೂ ಒಬ್ಬ ಮತಾಂಧನಾಗಿದ್ದ ಎಂದು ಕೆಲವರು ವಾದಿಸಿದರೆ ಉಮರ್ ಫಾರೂಕ್ ಎಂಬ ಓದುಗರು ಇಕ್ಬಾಲರನ್ನು ಸಮರ್ಥಿಸಿ ಬರೆದರು. ಈ ರೀತಿಯ ವಾದ-ಪ್ರತಿವಾದ ಕಳೆದೆರಡು ತಿಂಗಳಿನಿಂದ ನಡೆಯುತ್ತಲೇ ಬರುತ್ತಿದೆ.

ಇಷ್ಟಕ್ಕೂ ವಾಸ್ತವವೇನು?

ಸರ್ ಮೊಹಮದ್ ಇಕ್ಬಾಲ್ ನಿಜಕ್ಕೂ ಒಬ್ಬ ರಾಷ್ಟ್ರಪ್ರೇಮಿಯಾಗಿದ್ದರೇ? ಸಾರೆ ಜಹಾಂಸೆ ಅಚ್ಛಾ ಬರೆದ ಮಾತ್ರಕ್ಕೆ ಅವರನ್ನು ಒಬ್ಬ ದೇಶಪ್ರೇಮಿ ಎಂದು ನಂಬಿಬಿಡಬೇಕಾ? ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಇಕ್ಬಾಲ್ ನಡೆದುಕೊಂಡ ರೀತಿಯಾದರೂ ಹೇಗಿತ್ತು? ಭಾರತದ ವಿಭಜನೆಗೆ ಜಿನ್ನಾ, ಗಾಂಧಿ, ನೆಹರು ಅವರಷ್ಟೇ ಇಕ್ಬಾಲ್ ಕೂಡ ಕಾರಣರೇ?

ಹೌದು!

ಒಂದು ಕೈ ಮೇಲಾಗಿ ಹೇಳುವುದಾದರೆ ಆತನೇ ಕಾರಣಕರ್ತೃ! ಅಲಿಘಡ ಚಳವಳಿಯ ಮೂಲಕ ಆರಂಭವಾದ ಪ್ರತ್ಯೇಕತೆಯ ಮನೋಭಾವವನ್ನು ಇಕ್ಬಾಲ್ ಹೇಗೆ ಮುಂದುವರಿಸಿದರು ಎನ್ನುವುದನ್ನು Studies in Islamic Culture in the Indian Environment’ ಪುಸ್ತಕದಲ್ಲಿ ವಿವರಿಸಲಾಗಿದೆ-“ಸರ್ ಸಯ್ಯದ್ ಅಹಮದ್ ಖಾನ್ ಮತ್ತು ಮೊಹಮದ್ ಇಕ್ಬಾಲ್್ರ ಪ್ರತ್ಯಕ್ಷ ಮತ್ತು ಪರೋಕ್ಷ ಪಾತ್ರದಿಂದ ಮುಸಲ್ಮಾನರಲ್ಲಿ ಕೋಮುವಾರು ಪ್ರಜ್ಞೆ ಬೆಳೆಯಿತು. ಸರ್ ಸಯ್ಯದ್ ಅಹಮದ್ ಖಾನ್ ಭವಿಷ್ಯದ ಉನ್ನತಿಗೋಸ್ಕರ ಆಧುನಿಕ ಶಿಕ್ಷಣ ಪಡೆಯಿರಿ ಎಂದು ಮುಸಲ್ಮಾನರಲ್ಲಿರುವ ಉನ್ನತ ವರ್ಗದವರಿಗೆ ಆಗ್ರಹ ಮಾಡಿದರು. ಅವರು ಸ್ಥಾಪಿಸಿದ ಅಲಿಘಡ ಕಾಲೇಜು, ಪ್ರತ್ಯೇಕ ಹಾಗೂ ಸ್ವತಂತ್ರ ಸ್ಥಾನ ಹೊಂದಬೇಕೆಂಬ ಪ್ರಜ್ಞೆಯನ್ನು ಮುಸ್ಲಿಮರಲ್ಲಿ ಮೂಡಿಸಿತು. 1930ರಲ್ಲಿ ನಡೆದ ಅಲಹಾಬಾದಿನ ಮುಸ್ಲಿಂ ಲೀಗ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಮೊಹಮ್ಮದ್ ಇಕ್ಬಾಲ್, ಮುಸಲ್ಮಾನರು ಪ್ರತ್ಯೇಕ ರಾಷ್ಟ್ರವಾಗಬೇಕು ಎಂದು ಒತ್ತಿಹೇಳಿದ್ದರಿಂದಾಗಿ ಹಿಂದೂ ಮತ್ತು ಮುಸ್ಲಿಮರ ನಡುವೆ ಭಿನ್ನತೆಗಳು ಹೆಚ್ಚಿದವು. ನಂತರ ಮುಸ್ಲಿಂ ಲೀಗ್್ನ ನೇತಾರರಾದ ಮಹಮ್ಮದ್ ಅಲಿ ಜಿನ್ನಾ ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರಸಾರ ಮಾಡತೊಡಗಿದರು ಮತ್ತು ಹಿಂದೂ, ಮುಸ್ಲಿಮರು ಎರಡು ಭಿನ್ನ ರಾಷ್ಟ್ರಗಳಾಗಿದ್ದು ಒಂದಾಗಿ ಬಾಳಲಾರರು ಎಂದು ತೀರ್ಮಾನಿಸಿದರು. ಅವರ ಹಲವು ಬೇಡಿಕೆಗಳನ್ನು 1930ರ ನಂತರ ಕಾಂಗ್ರೆಸ್ ನಿರ್ಲಕ್ಷಿಸುತ್ತಾ ಹೋದಂತೆ ರಾಜಕೀಯ ಒಂಟಿತನವನ್ನು ಎದುರಿಸಿದ ಜಿನ್ನಾ ಅವರ ರಾಜಕಾರಣದಲ್ಲಿ ಈ ನಿಲುವು ಮಹತ್ವ ಪಡೆಯಿತು.”

ಇಕ್ಬಾಲರ ಜೀವನ ಕಾನೂನು-ರಾಜಕೀಯದ ನಡುವೆ ಹಂಚಿಹೋಗಿತ್ತು. ಅಂತಾರಾಷ್ಟ್ರೀಯ ರಾಜಕಾರಣವನ್ನು ಮುಸ್ಲಿಮರ ಹಿತದೃಷ್ಟಿಯಿಂದ ನೋಡುವ ದೃಷ್ಟಿಕೋನ ಇಕ್ಬಾಲ್್ಗಿತ್ತು. ಉದಾಹರಣೆಗೆ, ಮೊದಲ ವಿಶ್ವಯುದ್ಧದಲ್ಲಿ ಭಾರತ ಭಾಗವಹಿಸಬೇಕು ಎಂದು ಸಮರ್ಥಿಸಿದವರು ಅವರು. ಖಿಲಾಫತ್ ಚಳವಳಿಯೊಂದಿಗೆ ನಿಕಟ ಸಂಪರ್ಕವಿದ್ದ ಆತ ಆ ಚಳವಳಿಯ ಮುಂದಾಳಾದ ಮೌಲಾನಾ ಮಹಮದ್ ಅಲಿಗೆ ಹತ್ತಿರವಾಗಿದ್ದರು. ಭಾರತ ರಾಷ್ಟ್ರೀಯ ಕಾಂಗ್ರೆಸ್್ನ ಬದ್ಧವೈರಿಯಾಗಿದ್ದ ಈ ಕವಿ, ಕಾಂಗ್ರೆಸ್ಸನ್ನು ಎಂದೂ ಒಂದು ರಾಷ್ಟ್ರೀಯ ಪಕ್ಷವಾಗಿ ನೋಡಲೇ ಇಲ್ಲ. ಅವರ ಪಾಲಿಗೆ ಕಾಂಗ್ರೆಸ್ ಎಂದರೆ ಬಹುಸಂಖ್ಯಾತ ಹಿಂದೂಗಳ ಪಕ್ಷ.

ಇನ್ನೊಂದೆಡೆ 1920ರ ಸುಮಾರಿಗೆ ಮುಸ್ಲಿಂ ಲೀಗ್ ಕೂಡ ಆಂತರಿಕ ರಾಜಕೀಯದಿಂದ ಬಳಲತೊಡಗಿತ್ತು. ಲೀಗ್್ನೊಳಗೇ ಎರಡು ಬಣಗಳಿದ್ದವು. ಬ್ರಿಟಿಷ್ ಬೆಂಬಲಿಗ ಮಹಮ್ಮದ್ ಶಫಿ ಬಣ ಮತ್ತು ತಟಸ್ಥ ನಿಲುವಿನ ಜಿನ್ನಾ ಗುಂಪಿನ ನಡುವಿನ ಶೀತಲಸಮರ ಕಂಡು ಇಕ್ಬಾಲ್ ಕಂಗೆಟ್ಟಿದ್ದರು. ಕೇವಲ ಓದು, ಬರಹ, ಭಾಷಣದ ಮೂಲಕ ಮುಸ್ಲಿಂ ಅಸ್ತಿತ್ವವನ್ನು ಸಮರ್ಥಿಸುತ್ತಿದ್ದ ಇಕ್ಬಾಲ್, ನೇರವಾಗಿ ಚುನಾವಣೆಯಲ್ಲೂ ಸ್ಪರ್ಧಿಸಿದರು. ಪಂಜಾಬ್ ಲೆಜಿಸ್ಲೇಟಿವ್ ಅಸೆಂಬ್ಲಿ ಚುನಾವಣೆಗೆ 1926ರಲ್ಲಿ ಲಾಹೋರ್್ನಿಂದ ನಿಂತರು. ಅಲ್ಲದೆ 3,177 ವೋಟುಗಳ ಅಂತರದಲ್ಲಿ ವಿಜಯ ಸಾಧಿಸಿಬಿಟ್ಟರು. ಮುಸ್ಲಿಂ ಲೀಗನ್ನು ಒಗ್ಗೂಡಿಸುವುದು ಅವರ ಮುಂದಿನ ಹೊಣೆಯಾಯಿತು. ಮುಸ್ಲಿಂ ಲೀಗ್್ನ ಅಧ್ಯಕ್ಷರಾಗಿ ಇಕ್ಬಾಲ್ ಮಾಡಿದ ಭಾಷಣ ಪಾಕಿಸ್ತಾನ ನಿರ್ಮಾಣದ ಬೀಜ. ಅಲಹಾಬಾದ್್ನಲ್ಲಿ ಡಿಸೆಂಬರ್ 29, 1930ರಂದು ಅವರು ಮಾಡಿದ ಭಾಷಣ ಅತ್ಯಂತ ಮಹತ್ವದ್ದು-Nations are born in the hearts of poets, they prosper and die in the hands of politicians! ರಾಷ್ಟ್ರಗಳು ಉದಯಿಸುವುದು ಕವಿಗಳ ಹೃದಯದಲ್ಲಿ, ಅವು ರಾಜಕಾರಣಿಗಳ ಕೈಯಲ್ಲಿ ಬೆಳೆದು, ಸಾವನ್ನಪ್ಪುತ್ತವೆ ಎಂದರು ಇಕ್ಬಾಲ್! ಸ್ವತಂತ್ರ ಸಾರ್ವಭೌಮ ಮುಸ್ಲಿಂ ರಾಜ್ಯದ ಬೇಡಿಕೆಯನ್ನು ಜಿನ್ನಾರಿಗಿಂತ ಮೊದಲು ಎತ್ತಿದ್ದೇ ಇಕ್ಬಾಲ್. ಮುಸ್ಲಿಮರ ರಾಜಕಾರಣದ ದೃಷ್ಟಿಯಿಂದ ಖಿಲಾಫತ್ ನಂತರದ ಅತಿಮುಖ್ಯ ಘಟ್ಟ ಮುಸ್ಲಿಂ ಲೀಗ್್ನ ಬೆಳ್ಳಿಹಬ್ಬದ ಈ ಅಧಿವೇಶನ. “ನೈತಿಕ ಆದರ್ಶ ಮತ್ತು ಒಂದು ರೀತಿಯ ರಾಜನೀತಿಯಾಗಿರುವ ಇಸ್ಲಾಂ (ಅಂದರೆ ನನ್ನ ಪ್ರಕಾರ ಕಾನೂನು ವ್ಯವಸ್ಥೆಯ ಮೂಲಕ ನಿಯಂತ್ರಿಸಲ್ಪಡುವ ಸಾಮಾಜಿಕ ರಚನೆ ಹಾಗೂ ನಿರ್ದಿಷ್ಟ ನೈತಿಕ ಆದರ್ಶದಿಂದ ಉಜ್ವಲಗೊಂಡಿರುವುದು) ಭಾರತದ ಮುಸ್ಲಿಮರ ಜೀವನೇತಿಹಾಸ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದೆ. ಹರಿದು ಹಂಚಿಹೋಗಿರುವ ವ್ಯಕ್ತಿಗಳು ಮತ್ತು ಗುಂಪುಗಳನ್ನು ಕ್ರಮೇಣ ಒಗ್ಗೂಡಿಸಿ, ಅಂತಿಮವಾಗಿ ನಿರ್ದಿಷ್ಟ ವ್ಯಾಖ್ಯೆಗೊಳಪಡುವ ವ್ಯಕ್ತಿಗಳಾಗಿ ಅವರನ್ನು ಪರಿವರ್ತಿಸುವುದರ ಜೊತೆಗೆ ಅವರಿಗೆ ತಮ್ಮದೇ ಆದ ನೈತಿಕ ಪ್ರಜ್ಞೆ ಹೊಂದಲು ಬೇಕಾದ ಮೂಲಭೂತ ಭಾವನೆಗಳು ಮತ್ತು ನಿಷ್ಠೆಯನ್ನು ಅದು(ಇಸ್ಲಾಂ) ನೀಡಿದೆ. ಇಸ್ಲಾಂ ಇಡೀ ಜಗತ್ತಿನಲ್ಲೇ ಏನಾದರೂ ಜನ ನಿರ್ಮಾಪಕ ಶಕ್ತಿಯಾಗಿ ಉತ್ಕೃಷ್ಟವಾಗಿ ಕೆಲಸ ಮಾಡಿರುವುದಾದರೆ ಅದು ಭಾರತದಲ್ಲೇ ಎಂದು ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಹೇಳಬಹುದು. ಉಳಿದೆಡೆಯಂತೆ ಭಾರತದಲ್ಲೂ ಸಹ ಇಸ್ಲಾಂ ಒಂದು ಸಮಾಜದ ಸಂರಚನೆ ಹೊಂದಿರುವುದು ಇಸ್ಲಾಂ ನಿರ್ದಿಷ್ಟ ನೈತಿಕ ಆದರ್ಶದಿಂದ ಸ್ಫೂರ್ತಿ ಪಡೆದು ಕೆಲಸ ಮಾಡಿರುವುದರಿಂದ. ಮುಸ್ಲಿಂ ಸಮಾಜ, ಗಣನೀಯ ಏಕರೂಪದ ಮತ್ತು ಒಳಒಗ್ಗಟ್ಟಿನಿಂದ, ಅದರ ಸಂಸ್ಕೃತಿಯ ಕಾನೂನುಗಳು ಮತ್ತು ಸಂಸ್ಥೆಗಳ ಒತ್ತಡದ ಮೂಲಕ ಅದು ಈಗಿರುವ ಸ್ಥಿತಿ ತಲುಪಿದೆ ಎಂಬುದು ನನ್ನ ಮಾತಿನ ಅರ್ಥ” ಎಂದರು ಇಕ್ಬಾಲ್.

‘ಭಾರತದೊಳಗಿನ ಮುಸ್ಲಿಂ ಭಾರತ’ ಎಂಬ ಉಪಶೀರ್ಷಿಕೆಯಲ್ಲಿ ಇಕ್ಬಾಲ್ ಆಡಿದ ಮಾತುಗಳು ಪಾಕಿಸ್ತಾನ ಸೃಷ್ಟಿಯ ಮೂಲಸ್ವರೂಪವನ್ನು ಹಿಡಿದಿಟ್ಟಿವೆ-“ಭಾರತದಂಥ ದೇಶದಲ್ಲಿ ಸಾಮರಸ್ಯದ ಅಖಂಡತೆಯನ್ನು ತರುವಲ್ಲಿ ಅದರ ಉನ್ನತ ಆಯಾಮದಲ್ಲಿ, ಕೋಮುವಾದ ಅನಿವಾರ್ಯ. ಯುರೋಪಿನ ದೇಶಗಳ ರೀತಿಯಲ್ಲಿ ಭಾರತೀಯ ಸಮಾಜದ ಘಟಕಗಳು ಪ್ರಾದೇಶಿಕವಾಗಿಲ್ಲ. ಭಾರತವು ವಿವಿಧ ಜನಾಂಗ, ಹಲವು ಭಾಷೆಗಳನ್ನಾಡುವುದರ, ಅನೇಕ ಮತಧರ್ಮಗಳಿಗೆ ಸೇರಿರುವ ಮನುಷ್ಯರ ಗುಂಪುಗಳಿರುವ ಖಂಡ. ಸಾಮಾನ್ಯ ಜನಾಂಗ ಪ್ರಜ್ಞೆಯಿಂದ ಅವರ ನಡವಳಿಕೆ ನಿಯಂತ್ರಿತವಾಗುತ್ತಿಲ್ಲ. ಅಷ್ಟೇಕೆ ಹಿಂದೂಗಳು ಕೂಡ ಏಕರೂಪದ ಗುಂಪಲ್ಲ. ಕೋಮುವಾರು ಗುಂಪುಗಳನ್ನು ಗುರುತಿಸದೆ ಯುರೋಪಿನ ಪ್ರಜಾಪ್ರಭುತ್ವದ ತತ್ತ್ವವನ್ನು ಭಾರತಕ್ಕೆ ಅನ್ವಯಿಸುವುದು ಸಾಧ್ಯವಿಲ್ಲ. ಭಾರತದೊಳಗೇ ‘ಮುಸ್ಲಿಂ ಭಾರತ’ಕ್ಕಾಗಿ ಮುಸಲ್ಮಾನರು ಬೇಡುತ್ತಿರುವುದು ಅತ್ಯಂತ ಸರಿಯಾಗಿದೆ.’

ಮುಸಲ್ಮಾನರಿಗೆ ಪ್ರತ್ಯೇಕ ಅಸ್ತಿತ್ವ ಬೇಕೇಬೇಕು ಎಂಬ ವಾದ ಅವರಲ್ಲಿ ಎಷ್ಟು ಬಲವಾಗಿತ್ತೆಂದರೆ ಇದೇ ಭಾಷಣದಲ್ಲಿ ಅವರು ಹೇಳಿದರು-‘“I would never advise the Muslims of India to agree to a system, whether of British or of Indian origin, which virtually negates the principle of true federation or fails to recognise them as a distinct political entity.”

ಅದೇ ಭಾಷಣದ ಕಟ್ಟಕಡೆಗೆ ಹೇಳಿದ್ದೇನು ಗೊತ್ತೇ?

“I would like to see the Punjab, North-West Frontier Province, Sindh and Bluchistan amalgamated into a single state. Self-government within the British Empire, or without the British Empire, the formation of a consolidated Northwest Indian Muslim state appears to me to be the final destiny of the Muslims, at least of Northwest India.”ಪಂಜಾಬ್ ಸರಹದ್ದು ಪ್ರಾಂತ್ಯ, ಸಿಂಧ್, ಬಲೂಚಿಸ್ತಾನಗಳನ್ನು ಒಗ್ಗೂಡಿಸಿಕೊಂಡು ಅದೊಂದು ಸಂಯುಕ್ತ ಪ್ರಾಂತ್ಯವಾಗಿ ರೂಪುಗೊಳ್ಳುವುದನ್ನು ನಾನು ಕಾಣಲಿಚ್ಛಿಸುತ್ತೇನೆ ಎಂದ ಸರ್ ಮೊಹಮದ್ ಇಕ್ಬಾಲ್ ಬಿತ್ತಿದ್ದು ಮತ್ತೇನನ್ನೂ ಅಲ್ಲ ಪ್ರತ್ಯೇಕ ರಾಷ್ಟ್ರದ ಬೀಜವನ್ನೇ! 1931ರಲ್ಲಿ ದೇಶ ಬಿಟ್ಟು ಬ್ರಿಟನ್್ನಲ್ಲಿ ನೆಲೆಸಲು ಹೋಗಿದ್ದ ಮಹಮದ್ ಅಲಿ ಜಿನ್ನಾಗೆ “ಮುಸ್ಲಿಂ ಪಾಕಿಸ್ತಾನ ರಚನೆ ಮಾಡಬೇಕಾದ ಅಗತ್ಯವಿದ್ದು ಆ ಕಾರ್ಯ ಸಾಧನೆಗಾಗಿ ನೀನು ಭಾರತಕ್ಕೆ ಹಿಂದಿರುಗು” ಎಂದು ಪತ್ರ ಬರೆದು ವಾಪಸ್ ಕರೆಸಿಕೊಂಡಿದ್ದೇ ಇಕ್ಬಾಲ್. ಪಾಕಿಸ್ತಾನವೆಂಬ ಪ್ರತ್ಯೇಕ ರಾಷ್ಟ್ರದ ಕಲ್ಪನೆಗೆ ಜಿನ್ನಾ ತಾಯಿಯಾದರೆ ಇಕ್ಬಾಲರೇ ತಂದೆ. ಏನೇ ರಾಜಕೀಯ ಕುಸಿತ, ಹತಾಶೆ, ಭಿನ್ನಾಭಿಪ್ರಾಯಗಳಿದ್ದರೂ ಇಕ್ಬಾಲರು ಜಿನ್ನಾಗೆ ಪ್ರಚೋದನೆ ನೀಡದಿದ್ದರೆ ಪಾಕಿಸ್ತಾನದ ಭ್ರೂಣ ಸಿದ್ಧವಾಗುತ್ತಿರಲಿಲ್ಲ. ನಾನು ಮತ್ತು ಡಾ. ಜಿ.ಬಿ. ಹರೀಶ್ ಬರೆದಿರುವ “ಮಹಮದ್ ಅಲಿ ಜಿನ್ನಾ: ಮೊದಲು ನಾನು ಭಾರತೀಯ ಎಂದವನು ಭಾರತವನ್ನೇ ಒಡೆದನೇ?” ಪುಸ್ತಕದಲ್ಲಿ ಇಕ್ಬಾಲರು ಬರೆದಿರುವ ಪತ್ರಗಳನ್ನು ಪ್ರಕಟಿಸಲಾಗಿದೆ. ಇಕ್ಬಾಲ್ ಜಿನ್ನಾಗೆ ಬರೆದಿರುವ ಪ್ರತಿ ಪತ್ರದಲ್ಲೂ ಕಾಣುವುದು ಪ್ರತ್ಯೇಕ ರಾಷ್ಟ್ರದ ವಿಷಬೀಜವೇ.

ಇಕ್ಬಾಲ್ ಮತ್ತು ಜಿನ್ನಾರನ್ನು ಆಳವಾಗಿ ಅರಿಯಲು ‘ಸಾರೆ ಜಹಾಂಸೆ ಅಚ್ಛಾ’ ಗೀತೆಯ ಒಳಗುಟ್ಟನ್ನು ಸ್ವಲ್ಪ ಬಗೆಯಬೇಕು. ಉರ್ದುವಿನಲ್ಲಿ ಇಕ್ಬಾಲ್ ರಚಿಸಿದ ಈ ಕವಿತೆ ಮೊದಲು ಪ್ರಕಟವಾಗಿದ್ದು 1904ರ ಆಗಸ್ಟ್ 16ರಂದು ‘ಇತ್ತೆಹಾದ್್’ ಎಂಬ ವಾರಪತ್ರಿಕೆಯಲ್ಲಿ. ಇದನ್ನು ದೇಶಭಕ್ತಿಗೀತೆಯೆಂದು ಮುಂದೆ ಬಿಂಬಿಸಿದರೂ ಇಕ್ಬಾಲ್ ಬರೆದದ್ದು ಗಜಲ್ ಶೈಲಿಯಲ್ಲಿ, ಮಕ್ಕಳ ಕವಿತೆಯಾಗಿ. 1905ರಲ್ಲಿ ಸ್ವತಃ ಇಕ್ಬಾಲ್ ಇದನ್ನು ಲಾಹೋರಿನ ಸರ್ಕಾರಿ ಕಾಲೇಜಿನ ಸಭೆಯೊಂದರಲ್ಲಿ ವಾಚನ ಮಾಡಿದರು. ತಕ್ಷಣವೇ ಈ ಕವಿತೆ ಜನರ ಹೃದಯಕ್ಕೆ ಲಗ್ಗೆ ಇಟ್ಟಿತು. ತರಾನಾ-ಎ-ಹಿಂದ್ (ಭಾರತೀಯರ ಹಾಡು) ಎಂದೇ ಪ್ರಸಿದ್ಧವಾಗಿ ಹಾಡಿನ ರೂಪ ಪಡೆಯಿತು. ಈ ಹಾಡು ಬರೆದಾಗಿನ ಇಕ್ಬಾಲೇ ಬೇರೆ, 1930ರ ಮುಸ್ಲಿಂ ಲೀಗ್್ನ ಅಧಿವೇಶನದಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟ ಇಕ್ಬಾಲೇ ಬೇರೆ. ಅದೇ ದೇಹ, ಆದರೆ ಮನಸ್ಸು ಮಾತ್ರ ಭಾರತದಿಂದ ದೂರ ಹೋಗಿಬಿಟ್ಟಿತ್ತು. 1904ರಲ್ಲಿ ಈ ಕವಿತೆ ಜನರ ಕಿವಿಗೆ ಬಿದ್ದಾಗ ಅದರ ವಿಶಾಲ ದೃಷ್ಟಿ ವಿಶೇಷವಾಗಿ ಹಲವರನ್ನು ಆಕರ್ಷಿಸಿತ್ತು.

ಮಜ್್ಹಬ್ ನಹೀಂ ಸಿಖಾತಾ ಆಪಸ್ ಮೇಂ ಬೈರ್ ರಖನಾ

ಹಿಂದೀ ಹೈ ಹಂ, ವತನ್ ಹೈ ಹಿಂದೂಸ್ತಾನ್ ಹಮಾರಾ

ನಮ್ಮ ನಮ್ಮಲ್ಲೇ ದ್ವೇಷ ತಂದುಕೊಳ್ಳುವುದನ್ನು ಮತಧರ್ಮ ಕಲಿಸುವುದಿಲ್ಲ, ನಾವು ಹಿಂದ್, ನಮ್ಮ ಭೂಮಿ ಹಿಂದೂಸ್ತಾನ.

ಆದರೆ ಇಕ್ಬಾಲರು 1910ರಲ್ಲಿ ಬರೆದ ‘ತರಾನಾ-ಇ-ಮಿಲ್ಲಿ’ ಕವನದ ಮೊದಲ ಚರಣದಲ್ಲಿ ಒಡಕಿನ ಅಪಸ್ವರ ಕೇಳಿಸಿತ್ತು.

ಚೀನ್-ಒ-ಅರಬ್ ಹಮಾರಾ, ಹಿಂದೂಸ್ತಾನ್ ಹಮಾರಾ

ಮುಸ್ಲಿಂ ಹೈ ಹಂ, ವತನ್ ಹೈ ಸಾರಾ ಜಹಾಂ ಹಮಾರಾ

ಅಂದರೆ ಮಧ್ಯ ಏಷ್ಯಾ ಮತ್ತು ಅರೇಬಿಯಾ ನನ್ನದು, ಹಿಂದೂಸ್ತಾನ ನಮ್ಮದು, ನಾವು ಮುಸ್ಲಿಮರು, ಇಡೀ ಜಗತ್ತೇ ನಮ್ಮ ಭೂಮಿ. ಈ ಎರಡನೆಯ ಕವಿತೆಯಲ್ಲಿ ಒಂದು ರೀತಿ ಇಡೀ ವಿಶ್ವವೇ ನಮ್ಮದು ಎಂಬ ವಿಶಾಲತೆ ಇದೆ ಎಂದು ಹೇಳೋಣವೇ? ಅಥವಾ ‘ನಾವು ಮುಸ್ಲಿಮರು ಇಡೀ ಜಗತ್ತು ನಮ್ಮದು’ ಎಂಬ ಸಾಲಿನಲ್ಲಿ ಪ್ರತ್ಯೇಕತೆ ಕಾಣುತ್ತದೆಯೋ? ಅಷ್ಟಕ್ಕೂ ‘ಸಾರಾ ಜಗಕೋ ಇಸ್ಲಾಂ ಬನಾಯೇಂಗೆ’ ಎಂಬ ಪ್ರಾಚೀನ ಇಸ್ಲಾಂನ ಘೋಷಣೆಗಿಂತ ಇದು ಯಾವ ರೀತಿ ಬೇರೆಯಾಗಿದೆ?!

ಭಾರತ ಭಕ್ತಿಯ ಪರಾಕಾಷ್ಠೆಯೆಂದು ಈಗಲೂ ‘ಸಾರೇ ಜಹಾಂಸೆ ಅಚ್ಛಾ’ ಹಾಡುವವರಿದ್ದಾರೆ. ಆದರೆ ಈ ಹಾಡು ಬರೆದಾತನೇ ಭಾರತ ವಿಭಜನೆಯ ಮೂಲ ಖಳನಾಯಕನೆಂದು ಅದೆಷ್ಟು ಜನರಿಗೆ ಗೊತ್ತು?

31 Responses to “ರಾಷ್ಟ್ರಗಳು ಉದಯಿಸುವುದು ಕವಿಗಳ ಹೃದಯದಲ್ಲಿ ಎಂದವ ರಾಷ್ಟ್ರಪ್ರೇಮಿಯಾದಾನೇ?”

 1. Shree says:

  thnq sir…satya mukhada darshana maadisiddakke dhanyavaadagalu…

 2. H.R.SHREEPADA RAO says:

  ಒಮ್ಮೆ ಎಲ್ಲಿಯೋ ಒದಿದ್ದೆ ಇಕ್ಬಾಲ್ ಅವರು ಹೇಳಿದ್ದು… ನಮ್ಮ ಪೂರ್ವಜರು ಹಿ೦ದೂ ಬ್ರಾಹ್ಮಣರು. ನಮ್ಮ ಮನೆಯಲ್ಲಿ ಗು೦ಡು ಗು೦ಡು ಕಲ್ಲುಗಳು [ ಸಾಲಿಗ್ರಾಮ ಇತ್ಯಾದಿ ] ಇವೆ . ಪೂರ್ವಜರು ಅದನ್ನು ಪೂಜಿಸುತ್ತಿದ್ದರು ಅ೦ತ ನಾನು ಕೇಳಿದ್ದೆ. ಅ೦ತ ಹೇಳಿಕೊ೦ಡ ಹಾಗೆ. ಈಗ ನೋಡಿದರೆ ಅದೂ ಕೂಡಾ ಯಾರೋ ಸುಮ್ಮನೆ ಪ್ರಚಾರಕ್ಕೆ ಹೇಳಿದ್ದಿರಬಹುದು ಅನ್ನಿಸುತ್ತೆ…. …………………….. …..ನಿಜವಾಗಿಯೂ ಗೊತ್ತಿರಲಿಲ್ಲ.ನಾನೂ ಮೆಚ್ಚಿದ್ದೆ. ಈಗ ನಿಜ ತಿಳಿಯಿತು. ಧನ್ಯವಾದಗಳು
  ಶ್ರೀಪಾದರಾವ್.

 3. Sudheer says:

  Dear Pratap! it is our fate that our leaders hide real historical facts from us. TRUTH is always bitter. Right?

 4. sandeep vb says:

  ಹುಟ್ಟು ಬುಧ್ಧಿ ಸುಟ್ರೂ ಬಿಡಲ್ಲ ಅನ್ನೋದು ಇದಕ್ಕೇ..

 5. murthy m gowda says:

  super article sir.

 6. Bharath K H says:

  nice article prataap

 7. Shantkumar n k says:

  Desha bhaktarendu bimbitaragiruva Deshadrohigalu namma HISTORY pages nalli iro vishaya igataane gotytu Sir ..

 8. gk says:

  ಪ್ರತಾಪ್ ಜಿ ಕೆಲವು ವಿಚಾರಧಾರೆಗಳು, ಸಾಹಿತ್ಯಗಳು, ಚಿಂತನೆಗಳು ಯಾರು ವ್ಯಕ್ತಪಡಿಸುತ್ತಾರೋ ಅವರ ವ್ಯಕ್ತಿತ್ವವನ್ನು ಮೀರಿ ನಿಲ್ಲುತ್ತವಲ್ಲವೆ. ಓಶೋ ವಿಚಾರಧಾರೆಗಳು ಅಧ್ಬುತ ಲೋಕವನ್ನು ಸೃಷ್ಟಿಸುತ್ತವೆ, ಆದರೆ ಅವರನ್ನು ನಮ್ಮ ಸಮಾಜ ಅಷ್ಟು ಸಲೀಸಾಗಿ ಒಪ್ಪುವುದಿಲ್ಲ. ಹೀಗೆ ತುಂಬಾ ಜನರಿದ್ದಾರೆ, ಅವರ ವ್ಯಕ್ತಿತ್ವವನ್ನು ಮೀರಿಸಿದ ಕೊಡಗೆ ನೀಡಿದವರು. ಇಕ್ಬಾಲ್ ದೇಶ ವಿಭಜನೆಯ ಬೀಜ ಬಿತ್ತಿದವರಿರಬಹುದು, ಆ ವಿಭಜನೆ ಈಗಿನ ಪರಿಸ್ಥಿತಿಗೆ ಹೋಲಿಸಿದಲ್ಲಿ, ಒಂದು ಉತ್ತಮ ಕೆಲಸವಲ್ಲವೆ. ಈಗಿರವು 18% ಮುಸ್ಲಿಂರಿಗಾಗಿ ಮತಬ್ಯಾಂಕ್ ರಾಜಕಾರಣ ನಡೆಯುತ್ತಿದೆ, ಅಕಸ್ಮಾತ್ ಅಷ್ಟೂ ಮುಸ್ಲಿಂರು ನಮ್ಮಲ್ಲಿದ್ದಿದ್ದರೆ ನಮ್ಮ ಪಾಡು ಆ ದೇವರೆ ಬಲ್ಲ. ನಿಮ್ಮ ಬರವಣಿಗೆಯ ಧಾಟಿ ಪದೇ ಪದೇ ಓದಬೇಕೆನಿಸುತ್ತದೆ. ಸಮಾಜವನ್ನು ಬರವಣಿಗೆಯ ಮೂಲಕ ಜಾಗೃತಗೊಳಿಸುವ ಕಾರ್ಯ ಹೀಗೆ ಮುಂದುವರೆಯಲಿ.

 9. sreekanth says:

  all Indians need to know this

 10. prajwalpremsagar says:

  from childhood till now i admired and filled that song in my heart ……. whenever i heard it .its true i respect and love to hear it ……. it inspires us as indians………. but its really sad to hear that the creater of this legendary patriotic song is not at all a patriot and dedicated to his mother country………. MOTHER INDIA dnt worry we your childrens will be here for u untill our last breath to see u a supreme sovereign country…………

 11. Avinash says:

  I think he has nothing made wrong by dividing the country. As you know there respect is only for there dharma but not for the country. It is better they are away from us. Being outside India they have made so many damages imagine what would they have done if they are inside.

 12. Raghu says:

  Last week you went aggresive on ravi belagere, bheemateeradali just apparent reason. But in actual sense it was opprutinity for you to defame him, which he also did previously. Whatever it gave lot of enterainment but no social benifit. Let me see whether you same guts for social cause i.e. ‘kannada version of satyameva jayate’. Film industry is not allowing for dubbing. It is really ridiculous, because most of films are remake and they say it is for protecting kannada culture. Pratap if you have really have guts and social responsibility start program now on media. Friends if you feel what i said is right ask pratap to do it now.

 13. Baswaraj N Bidar says:

  Sir u r 100% correct. let tolumn print in Kannada Prabha too…

 14. Super article sir.people of India should learn this.thanks for impormation

 15. Dilipkumar says:

  Hi dear sir i need a u mobille no
  thank u gm.

 16. Arvind says:

  Can’t believe that Sir Mohammad IQbal is the person behind the india division and even after reading this article, my inner thoughts are not supporting me that its true. Appreciate if you could provide more evidences here (once i read your book, hopefully it may all clear )

  Any way, in the history of india , no one was against united india till 1900, however soon after the religions were weapons in the brutal muslim politicians, and infact british have started these 2 main groups in india , and few started supporting and believing that they should separate themselves with indian hindus, despite we were under the control of british, muslims started of their own “territory” and finally succeed in dividing the india. This hasn’t stopped yet, there are innumerable muslims in india are always wanted and wish to go pakistan(ot atleast they make pakistand wherever they stay currently) as they believe they are well treated there. and show that traits in every aspects,. I strongly believe that more and more truths of the indian leaders has yet come out and reach the people, hats off to you Pratap in bringing this to light.

 17. MUTHURAJ says:

  VERY NICE ARTICLE

 18. anvith says:

  first we should turn into spirited Hindus there is always lack of killer instinct in us we get satisfied quite easily and fast we have to understand Vivekananda to give an answer to this separatist morons

 19. lalithachoudhary says:

  POEM – ಬರೆಯೋವಾಗ ದೇಶ ಭಕ್ತೀ ಇತ್ತು ಆಮೇಲೆ ಅದು ಯಾರು Brain Wash ಮಾಡಿದ್ರು ಅಂತ ಸ್ವಾರ್ಥ ಭಾವನೆಯನ್ನ ಬೆಳೆಸಿಕೊಂಡು ಪ್ರತ್ಯೇಕವಾದವನ್ನ ಮುಂದುವರೆಸಿದರೋ ಒಟ್ಟಿನಲ್ಲಿ ನಮ್ಮ ಹಿಂದು ದೇಶವನ್ನ ಹಿಂದುಗಳನ್ನ ಯಾರು ಬೇಕಾದರು Blame ಮಾಡಬಹುದು ಅದು ನಮ್ಮ ದೇಶದಲ್ಲೇನೆ ಆವಾಗ ಅದು ದೊಡ್ಡ ವಿಷಯಾನೆ ಆಗೊಲ್ಲಾ ಅದೇ ಬೇರೆ ಧರ್ಮದ ಬಗ್ಗೆ ಹಿಂದುಗಳು ಏನು ಅನ್ನೋ ಹಾಗೆ ಇಲ್ಲಾ ಒಂದು ವೇಳೆ ಅಂದು ಬಿಟ್ಟರೆ ರುಂಡ.ಮುಂಡ ಬೇರೆ ಮಾಡಿಕ್*ತ್ತಾರೆ. ಹಿಂದುಗಳೆ ಹಿಂದು ಧರ್ಮನಾ ಬೈತಾರೆ, ಆದರೆ ಮುಸ್ಲಿಂಗಳು ತಮ್ಮನ್ನ ತಾವು ಯಾವತ್ತು ಬಿಟ್ಟುಕೊಡಲ್ಲಾ ನಮ್ಮ ಹಿಂದುಗಳು ಎಲ್ಲರಿಗೂ ಬನ್ನಿ ಬನ್ನಿ ಅಂತ ಇಡೀ ದೇಶಾನೆ ಬಿಟ್ಟುಕೋಡುತ್ತಾ ಇರ್ತಾರೆ ಅಲ್ವಾ ದಯಾಮಯಿಗಳು ಅದಕ್ಕೆ ನಮ್ಮ ಪರವಾಗಿ ಇದ್ದಂಗೆ ಇದ್ದು ನಮ್ಮ ಬೆನ್ನಿಗೆ ಚೂರಿ ಹಾಕ್ತಾರೆ ಇಕ್ಬಾಲ್ ತರಹ .

 20. vinod says:

  nice

 21. praveen says:

  Pratap,

  Nice dig up. Great revelation and insight how a person can change through time. I heard somewhere that the holy Khoran has a statement saying “Islam is supreme and we shall spread everywhere”.

  @others
  By the way does anybody know what are the dates when ‘Caste-wise census’ will be out? August 30?

 22. devaraju says:

  Sir, this is best article.,

  We want to know more about our own these things. pls write more again…

  Thanks a lot….

 23. nitin says:

  its right knowledge for true indians…. nice article dear

 24. Manoj says:

  Great article after many days

 25. Anil says:

  YES PRATHAP JI………….

 26. divya vinay says:

  yes you are correct,,,,,,,,,,,,, its really our bad luck people today does not know anything about the true national leaders. we are teaching anything about
  savarkar,subash,tilak, but we are teaching about the Gandhi family,

  sri. bakhim chandra ru bareda vande matram nallli iroda da ru yenu?
  barata mate yannu adi inda mudiyavarege banni siddare,,, namage namma
  tayi yanna hogaluvudanna kelalu namge sirane illa, talme illa, samya villa,
  adare navu secular anta sogu hako janara hadanna thumba abhimana dinda hadutheve,,, adu namage hemmeya vishaya vagide alave?
  namma makkalige navu poorthi vande matram yeshtu jana kalisideve? vande matram bagge gotaga bekadre sri. vidyananda shenoy avara
  baratha darshana oodugare yagi kodi,,,, AMMA ANDRE YENU ? ANTA ADAKINTA SOGASAGI YARU VARNISILLA,,,,,,
  NAMMA JANARIGE ITIHASA NA NAVU TIRUCHI KODTA IDDIVII ADRE
  ADARA PRABHAVA YELLIVARGE AGUTHALIDE ANTA NAMEGE YARIGU ARIVILLA
  ADRINDA NIJAVAGI VACHITA RAGUVAARU NAMMA MAKKALU,
  olle lekana satya da mele belaku chelida nimage nannna abhinadanegalu.

 27. charushree says:

  In my schools,,,clgs,,,we have to sing this song,,when i thought what a combination of words ,,,melodious composition,,then i wana know abt the author and abt him,,,,,,,,,,,,now realy its foolish,,their is no matter abt dividing or any yet,,,,but what respect he had abt INDIA ?,,,his ideal to think that the whole land belongs to muslims,,,,says his cruel intension,,,thank u very much,,bez truth is always bitter but u like peoples r opening this,,,but my dad always tells to me,,the poet heart is very sensible,,,but,,

 28. charushree says:

  In our schools,,i sung this song many times,,,on that i am mad abt words composition ant at all,,, now its realy foolish,that is not a matter abt dividing a country,,,,but its a matter what respect he had abt INDIA,,,,his words that whole land belong to muslims ,,tells what intenstion he had,,so the right use of talent is very important,,,thank u very much,,,bez u like peoples r making us aware,,,we requires like this articles frm u,,,.i thought the heart of the poets is very sensible,,,but here more than a poet ikbal is a selfish abt communolism

 29. charushree says:

  In our schools ,,,i sung this song many times,when i thought ,what a composition of words and at all,,,but now its just foolish,,its not a matter abt dividing of nation r any thing else,,its a matter abt what a respect he had abt INDIA,,,his words that whole world belongs to muslims ,shows what intention he had,,so the right use of talent is very important,,i thought the heart of the poets is very sensible,,but here more than a poet ikbal is the selfish towords communolism

 30. Santosh&Raj says:

  Realy hatsup for your great article. This article gives us truth of history. by your articles awareness to people so we wish you go ahead with your writings.

 31. C. Ravindrakumar says:

  he is traitor