Date : 04-05-2012, Friday | 32 Comments
ಭಾರತ ಎಂಬುದೇ ಒಂದು ಬೆರಗು. ಈ ದೇಶದ ಉದ್ದಗಲಕ್ಕೂ ಬೆರಗಿನ ನೂರಾರು ಉದಾಹರಣೆಗಳು ಕಾಣಸಿಗುತ್ತವೆ. ಮನಸ್ಸಿದ್ದರೆ ಏನೆಲ್ಲ ಸಾಧನೆಗಳನ್ನು ಮಾಡಲು ಸಾಧ್ಯ. ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಹೆಜ್ಜೆಗೊಂದು ಉದಾಹರಣೆ ಸಿಗುತ್ತದೆ. ಅತಿ ಸಾಮಾನ್ಯರು ಅಸಾಮಾನ್ಯ ಸಂಶೋಧನೆಗಳನ್ನು ಮಾಡಿದ್ದಾರೆ. ಈ ಸಾಮಾನ್ಯರು ಸುಶಿಕ್ಷಿತ ಪಂಡಿತರಲ್ಲ. ನುರಿತ ಉದ್ಯಮಿಗಳಲ್ಲ. ಆದರೂ ತಮ್ಮ ವಿವೇಚನೆಯ ಇತಿಮಿತಿಯಲ್ಲೇ ರಿಸ್ಕ್ ತೆಗೆದುಕೊಂಡಿದ್ದಾರೆ. ತಮ್ಮ ಸುತ್ತಲ ಪರಿಸರದ ಬಾಳು ಹಸನಾಗಿಸುವ ಪ್ರಯತ್ನ ಮಾಡಿ ಗೆದ್ದಿದ್ದಾರೆ. ಅಂಥವರ ಪೈಕಿ ತಮಿಳುನಾಡಿನ ಅರುಣಾಚಲಂ ಮುರುಘನಾಥಂ ಕೂಡ ಒಬ್ಬರು. ಶಾಲೆಯನ್ನು ಅರ್ಧಕ್ಕೇ ಬಿಟ್ಟ ಈ ಆಸಾಮಿ, ಸ್ವದೇಶಿ ನಿರ್ಮಿತ ನ್ಯಾಪ್್ಕಿನ್್ಗಳನ್ನು ತಯಾರಿಸಿದ ಧೀರ. ತುಂಬಾ ಕಡಿಮೆ ಬೆಲೆಗೆ ನ್ಯಾಪ್್ಕಿನ್ ಮಾರುತ್ತಾ ಅಮೆರಿಕನ್ ಕಂಪನಿಯ ಉತ್ಪನ್ನಗಳಿಗೆ ಸೆಡ್ಡು ಹೊಡೆದಿರುವ ಗಟ್ಟಿಗ. ಆಂಗ್ಲ ನಿಯತಕಾಲಿಕ ‘ಓಪನ್್’ ಪ್ರಕಟಿಸಿರುವ ಲೇಖನದಲ್ಲಿನ ಅವರ ಸಾಧನೆಯ ಹಾದಿಯನ್ನು ಅವರದೇ ಮಾತುಗಳಲ್ಲಿ ಕೇಳೋಣ.
****
ಸಂಕೋಚವಿಲ್ಲದೆ ಹೇಳಿಬಿಡುತ್ತೇನೆ: ಮುಜುಗರವಿಲ್ಲದೆ ನ್ಯಾಪ್್ಕಿನ್ ಧರಿಸಿ ಓಡಾಡಿದ ಮೊದಲ ಪುರುಷ ನಾನೇ! ‘ಪೀರಿಯಡ್ಸ್್’ನ ಸಂದರ್ಭದಲ್ಲಿ ಮಹಿಳೆಯರು ಅನುಭವಿಸುವ ದೈಹಿಕ/ಮಾನಸಿಕ ಯಾತನೆ ಎಂಥದೆಂಬುದನ್ನು ಉಳಿದೆಲ್ಲರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡವನೂ ನಾನೇ. ‘ಆ ಮೂರು ದಿನಗಳಲ್ಲಿ’ ಅವರು ಅನುಭವಿಸುವ ಕಿರಿಕಿರಿ, ನಡಿಗೆಯಲ್ಲಿನ ನಾಟಕೀಯತೆ, ಮಾತಿನಲ್ಲಿ ಕಾಣಿಸಿಕೊಳ್ಳುವ ಸಿಡಿಮಿಡಿ… ಬಿಡಿ, ಅದನ್ನು ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಭಾರೀ ಗಾತ್ರದ ಸರಪಳಿಯೊಂದನ್ನು ಕುತ್ತಿಗೆಗೆ ನೇತುಹಾಕಿಕೊಂಡು ಅಡ್ಡಾಡುವಾಗ ಗಂಡಸಿಗೆ ಆಗುವ ಸಂಕಟವಿದೆಯಲ್ಲ; ಅಂಥದೇ ಯಾತನೆಯನ್ನು ‘ಪೀರಿಯಡ್ಸ್್’ನ ದಿನಗಳಲ್ಲಿ ಹೆಣ್ಣುಮಕ್ಕಳು ಅನುಭವಿಸುವುದನ್ನು ಕಂಡವನು ನಾನು.
ನಮ್ಮ ದೇಶದಲ್ಲಿರುವ ಎಲ್ಲ ಹೆಣ್ಣುಮಕ್ಕಳೂ ನ್ಯಾಪ್್ಕಿನ್ ಬಳಸುವಂತಾಗಬೇಕು. ತೀರಾ ಬಡವರ ಮನೆಯ ಮಕ್ಕಳಿಗೂ ಕೈಗೆಟುಕುವಂಥ ಬೆಲೆಗೆ ನ್ಯಾಪ್್ಕಿನ್ ಮಾರಾಟ ಸಾಧ್ಯವಾಗಬೇಕು ಎಂಬುದು ನನ್ನ ಆಸೆ, ಕನಸು. ನಿಮಗೆ ಗೊತ್ತುಂಟಾ? ನಮ್ಮ ದೇಶದ ಕೆಲವು ಬುಡಕಟ್ಟು ಜನಾಂಗದ ಹೆಂಗಸರು ‘ಪೀರಿಯಡ್ಸ್್’ನ ದಿನಗಳಲ್ಲಿ ಕಲ್ಮಶ ರಕ್ತ ಸಂಗ್ರಹಣೆಗೆ ತಟ್ಟೆಯಾಕಾರದ ಎಲೆಗಳನ್ನು ಬಳಸುತ್ತಾರೆ. ಅದರರ್ಥವಿಷ್ಟೇ: ಈ ಜನ ಒಳಉಡುಪುಗಳನ್ನೇ ಧರಿಸುವುದಿಲ್ಲ! ಇಂಥವರಿಗೆಂದೇ ವಿಶೇಷ ವಿನ್ಯಾಸದ ನ್ಯಾಪ್್ಕಿನ್್ಗಳನ್ನು ತಯಾರಿಸಬೇಕು ಎಂಬುದೂ ನನ್ನನ್ನು ಕಚ್ಚಿಕೊಂಡಿರುವ ಇನ್ನೊಂದು ಕನಸು.
ಈ ಮನುಷ್ಯ ಹೋಗಿ ಹೋಗಿ ನ್ಯಾಪ್್ಕಿನ್್ಗೇ ಏಕೆ ಗಂಟುಬಿದ್ದ ಎಂದು ನೀವೆಲ್ಲಾ ಕುತೂಹಲಗೊಳ್ಳುವ ಮೊದಲೇ ನನ್ನ ಹಿನ್ನೆಲೆ ಹೇಳಿಬಿಡುತ್ತೇನೆ. ತಮಿಳುನಾಡಿನ ಪುದೂಲ್ ಎಂಬ ಪಟ್ಟಣಕ್ಕೆ ಸಮೀಪದ ಒಂದು ಹಳ್ಳಿ ನನ್ನೂರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡೆ. ನನ್ನ ಜೊತೆಗೆ ಅಮ್ಮ ಹಾಗೂ ಇಬ್ಬರು ತಂಗಿಯರಿದ್ದರು. ಹೊಟ್ಟೆಪಾಡಿಗೆಂದು ಅಮ್ಮ ಮನೆಗೆಲಸಕ್ಕೆ ಸೇರಿಕೊಂಡಳು. ಅವಳ ಸಂಪಾದನೆ ಯಾವುದಕ್ಕೂ ಸಾಲುತ್ತಿರಲಿಲ್ಲ. ಖರ್ಚಿಗೆ ಕಾಸು ಬೇಕು ಅನ್ನಿಸಿದಾಗ ಅಪ್ಪ ಬಿಟ್ಟು ಹೋಗಿದ್ದ ಆಭರಣ, ಪಾತ್ರೆ-ಪಗಡ, ಸೈಕಲ್ಲು, ಬಟ್ಟೆ… ಹೀಗೆ ಎಲ್ಲವನ್ನೂ ಮಾರಿಕೊಂಡೆವು. ಮಾರುವುದಕ್ಕೆ ಇನ್ನೇನೂ ಇಲ್ಲ ಅನ್ನಿಸಿದಾಗ ನನ್ನನ್ನು ಶಾಲೆ ಬಿಡಿಸಿ ಒಂದು ಫಾರ್ಮ್್ಹೌಸ್್ನಲ್ಲಿ ಕೆಲಸಕ್ಕೆ ಸೇರಿಸಲಾಯಿತು. ಈ ಮಧ್ಯೆ ಫ್ಯಾಕ್ಟರಿ ಕೆಲಸಗಾರರಿಗೆ ಮಧ್ಯಾಹ್ನದ ಹೊತ್ತು ಊಟವನ್ನು ಪಾರ್ಸೆಲ್್ನಲ್ಲಿ ಕೊಂಡೊಯ್ಯುವ ಮೂಲಕ ಒಂದಿಷ್ಟು ಬಿಡಿಗಾಸು ಸಂಪಾದಿಸಲು ಕಲಿತೆ. ನಂತರದ ಕೆಲವೇ ದಿನಗಳಲ್ಲಿ ವೆಲ್ಡಿಂಗ್ ಶಾಪ್ ಒಂದರಲ್ಲಿ ಸಹಾಯಕನಾಗಿ ಸೇರಿಕೊಂಡೆ. ಒಂದೆರಡು ವರ್ಷಗಳ ನಂತರ ಕೆಲಸ ಮತ್ತು ವ್ಯವಹಾರದ ಗುಟ್ಟು ಅರ್ಥವಾಯಿತು. ಮುಂದೆ, ನಾನೇ ಒಂದು ವೆಲ್ಡಿಂಗ್ ವರ್ಕ್್ಶಾಪ್ ಆರಂಭಿಸಿದೆ.
25 ವರ್ಷ ತುಂಬುತ್ತಿದ್ದಂತೆ ನನಗೆ ಶಾಂತಿ ಎಂಬಾಕೆಯೊಂದಿಗೆ ಮದುವೆಯಾಯಿತು. ಹೀಗೇ ಆರು ವರ್ಷ ಕಳೆದುಹೋದವು. ಅದೊಂದು ದಿನ ನಾನು ಟೀವಿ ನೋಡುತ್ತಾ ಕುಳಿತಿದ್ದೆ. ಆಗ ನನ್ನ ಹೆಂಡತಿ ಅದೇನನ್ನೋ ಕೈಲಿ ಹಿಡಿದು ಒಂದೊಂದೇ ಹೆಜ್ಜೆ ಹಿಂದು ಹಿಂದಕ್ಕೆ ಹೋಗತೊಡಗಿದಳು. ಆಕೆಯ ಮುಖ ಕಳೆಗುಂದಿದಂತೆ ಕಾಣಿಸಿತು. ನಾನು ಕೂತಲ್ಲಿಂದಲೇ ಕೇಳಿದೆ: ‘ಏನದು, ನೀನು ಆ ಕೈಲಿ ಹಿಡಿದಿರೋದು? ಅದ್ಯಾಕೆ ಅಡಗಿಸಿಕೊಂಡಿದ್ದೀಯ? ತೋರಿಸಬಾರದಾ?’ ಆಕೆ ಸಿಡಿಮಿಡಿಯಿಂದ- ಅದು ನನಗೆ ಮಾತ್ರ ಸಂಬಂಧಿಸಿದ ವಿಷಯ. ನಿಮಗ್ಯಾಕೆ? ತೆಪ್ಪಗೆ ಕೂತ್ಕೊಂಡಿರಿ…’ ಅಂದಳು. ನಾನು ವಾರೆಗಣ್ಣಿನಿಂದಲೇ ಗಮನಿಸಿದೆ. ಅವಳ ಕೈಲಿದ್ದುದು ಮನೆ ಒರೆಸಲು ಬಳಸುತ್ತಿದ್ದಂಥ ಬಟ್ಟೆ! ಸಂದರ್ಭ ಏನೆಂದು ತಕ್ಷಣವೇ ಅರ್ಥವಾಯಿತು. ಈ ಹಳೆಯ ಬಟ್ಟೆ ಬಳಸುವುದರಿಂದ ಇನ್್ಫೆಕ್ಷನ್ ಆದರೆ ಗತಿ ಏನು ಅನ್ನಿಸಿತು. ಅದನ್ನೇ ಹೆಂಡತಿಗೆ ವಿವರಿಸಿ- ‘ನೀನು ನ್ಯಾಪ್್ಕಿನ್ ಬಳಸಬಾರ್ದಾ? ಅದರಿಂದ ಎಷ್ಟೆಲ್ಲ ಅನುಕೂಲವಿದೆ ಅಂತ ಟಿ.ವಿ.ಯಲ್ಲಿ ತೋರಿಸ್ತಾ ಇರ್ತಾರೆ. ನೋಡಿಲ್ವಾ? ಎಂದು ಪ್ರಶ್ನಿಸಿದೆ. ಹೆಂಡತಿ ತಕ್ಷಣವೇ ಹೇಳಿದಳು: ‘ಸ್ವಾಮೀ, ಟಿ.ವಿ.ಯ ಜಾಹೀರಾತುಗಳನ್ನು ನಾನೂ ನೋಡಿದೀನಿ. ನಾವು ಮನೆಯ ಹೆಂಗಸರೆಲ್ಲ ನ್ಯಾಪ್್ಕಿನ್ ಖರೀದಿಗೆ ಹೊರಟರೆ ಅಷ್ಟೆ: ಮನೇಲಿ ಹಾಲು ಖರೀದಿಗೆ ಅಗತ್ಯವಿರುವಷ್ಟೂ ಕಾಸು ಉಳಿಯೋದಿಲ್ಲ…’
ಈ ಮಾತಿಂದ ನನಗೆ ಶಾಕ್ ಆಯಿತು. ನ್ಯಾಪ್್ಕಿನ್್ಗಳು ಅಷ್ಟೊಂದು ದುಬಾರಿ ಎಂದು ಅದುವರೆಗೂ ನನಗೆ ಗೊತ್ತೇ ಇರಲಿಲ್ಲ. ದುಬಾರಿ ಬೆಲೆಗೆ ಮಾರುವಂಥ ಯಾವ ವಸ್ತು ಅದರಲ್ಲಿರುತ್ತೆ ನೋಡಿಯೇಬಿಡೋಣ ಅನ್ನಿಸ್ತು. ಮರುದಿನವೇ ಸಮೀಪದ ಮೆಡಿಕಲ್ ಸ್ಟೋರ್್ಗೆ ಹೋದೆ. ನ್ಯಾಪ್್ಕಿನ್ ಬೇಕಿತ್ತು ಅಂತ ಕೇಳಿದೆ. ಸ್ಟೋರ್್ನ ಹುಡುಗ ನನ್ನನ್ನೇ ಮಿಕಿಮಿಕಿ ನೋಡುತ್ತಾ ಒಂದು ಪೇಪರ್್ನಲ್ಲಿ ನ್ಯಾಪ್್ಕಿನ್ ಸುತ್ತಿ ಕೊಟ್ಟ. ಮನೆಗೆ ಬಂದು ಕುತೂಹಲದಿಂದ ಬಿಚ್ಚಿ ನೋಡಿದೆ. ನಿರಾಸೆಯಾಯಿತು. ಏಕೆಂದರೆ, ತೀರಾ ಹಗುರವಾಗಿದ್ದ ಆ ನ್ಯಾಪ್್ಕಿನ್್ನಲ್ಲಿ ಹತ್ತಿಯ ಬಟ್ಟೆ ಮಾತ್ರ ಕಾಣಿಸಿತು. ಅದರ ಉತ್ಪಾದನೆಗೆ ತಗಲುವುದು ತುಂಬಾ ಕಡಿಮೆ ಹಣ ಎಂಬುದು ಆಗಲೇ ಗೊತ್ತಾಯಿತು. ಆದರೆ, ಉತ್ಪಾದನೆಗೆ ತಗಲುವ ಹಣಕ್ಕಿಂತ ಹತ್ತುಪಟ್ಟು ಹೆಚ್ಚಿನ ಹಣಕ್ಕೆ ನ್ಯಾಪ್್ಕಿನ್್ಗಳನ್ನು ಮಾರಾಟ ಮಾಡಲಾಗುತ್ತಿತ್ತು. ತುಂಬಾ ಕಡಿಮೆ ಬೆಲೆಯ ನ್ಯಾಪ್್ಕಿನ್ ತಯಾರಿಸಬೇಕು. ಅದನ್ನು ಮೊದಲು ನನ್ನ ಹೆಂಡತಿಗೇ ಕೊಡಬೇಕು ಎಂದು ಆಗಲೇ ನಿರ್ಧರಿಸಿದೆ.
ಮೊದಲಿಗೆ, ಹತ್ತಿರದ ಗಿರಣಿಯೊಂದರಲ್ಲಿ ಒಂದಷ್ಟು ಹತ್ತಿ ಬಟ್ಟೆ ಖರೀದಿಸಿದೆ. ಮೆಡಿಕಲ್ ಸ್ಟೋರ್್ನಲ್ಲಿ ನೋಡಿದ್ದೆನಲ್ಲ; ಅದೇ ಶೇಪ್್ಗೆ ಈ ಬಟ್ಟೆಯನ್ನು ಕತ್ತರಿಸಿದೆ. ಅದು ಮೆತ್ತಗಿದೆ ಎಂಬುದನ್ನೂ ಗ್ಯಾರಂಟಿ ಮಾಡಿಕೊಂಡೆ. ನಂತರ ಹೆಂಡತಿಯ ಬಳಿ ಹೋಗಿ- ಇದು ನನ್ನದೇ ತಯಾರಿಕೆ. ನೀನು ಬಳಸು. ನಂತರ ಹೇಗಿದೆ ಅಂತ ಹೇಳು ಅಂದೆ. ಇನ್ನು ಒಂದರ್ಧ ಗಂಟೆಯ ನಂತರ ಆಕೆ ಉತ್ತರ ಹೇಳಬಹುದು ಅಂದುಕೊಂಡರೆ, ಆಕೆ ಇಡೀ ದಿನ ಏನೂ ಹೇಳಲಿಲ್ಲ. ‘ಏನಾಯ್ತು ನಿಂಗೆ, ಏನೂ ಹೇಳಲೇ ಇಲ್ಲವಲ್ಲ’ ಎಂದು ಕೇಳಿದೆ. ಆಕೆ ಜೋರಾಗಿ ನಕ್ಕು- ‘ಪೆದ್ದ, ನನಗೆ ಪೀರಿಯಡ್ಸ್ ಆಗಲಿಕ್ಕೆ ಇನ್ನೂ 10 ದಿನ ಬೇಕು. ಈಗಲೇ ಹೇಗೆ ಉತ್ತರ ಹೇಳಲಿ?’ ಅಂದಳು.
ಕಡೆಗೂ ಆ ದಿನ ಬಂತು. ನನ್ನ ಹೆಂಡತಿ ಮುಖ ಕಿವಿಚಿಕೊಂಡು ಬಂದು ಹೇಳಿದಳು: ‘ಇದೆಂಥ ದರಿದ್ರ ಬಟ್ಟೆ ನೀವು ಬಳಸಿರೋದು? ತುಂಬಾ ಹಿಂಸೆ ಆಯ್ತು. ಇದರಷ್ಟು ಕೊಳಕು ಬಟ್ಟೇನ ನಾನು ನೋಡಿರಲೇ ಇಲ್ಲ…’ ಈ ಮಾತಿಂದ ನನಗೆ ಶಾಕ್ ಅಯಿತು. ಏಕೆಂದರೆ ಕೊಯಮತ್ತೂರಿನ ಹೆಸರಾಂತ ಫ್ಯಾಕ್ಟರಿಯಿಂದ ಅತ್ಯುತ್ತಮ ಗುಣಮಟ್ಟದ ಹತ್ತಿಬಟ್ಟೆಯನ್ನೇ ನಾನು ಖರೀದಿಸಿ ತಂದಿದ್ದೆ. ಅದು ಕೊಳಕು ಬಟ್ಟೆಯಾಗಲು ಸಾಧ್ಯವೇ ಇರಲಿಲ್ಲ. ನಾನು ಎಲ್ಲಿ ತಪ್ಪು ಮಾಡಿದೆ ಎಂಬುದು ತಕ್ಷಣಕ್ಕೆ ಅರ್ಥವಾಗಲಿಲ್ಲ. ಇರಲಿ, ಮತ್ತೊಮ್ಮೆ ಪ್ರಯತ್ನಿಸೋಣ ಅಂದುಕೊಂಡು ಮತ್ತೆ ನ್ಯಾಪ್್ಕಿನ್ ತಯಾರಿಸಿದೆ. ಹೆಂಡತಿಯೇ ಮತ್ತೆ ನ್ಯಾಪ್್ಕಿನ್ ಬಳಸಲಿ ಎಂದು ಯೋಚಿಸಿದರೆ, ಒಂದಿಡೀ ತಿಂಗಳು ಕಾಯಬೇಕಿತ್ತು. ಅಂಥ ತಾಳ್ಮೆ ನನಗಿರಲಿಲ್ಲ. ತಕ್ಷಣವೇ ತಂಗಿಯರು ನೆನಪಾದರು. ಅವರ ಮನೆಗೆ ಓಡಿದೆ. ನನ್ನ ಪ್ರಯೋಗದ ಬಗ್ಗೆ ಹೇಳಿಕೊಂಡೆ. ಸಹಕರಿಸುವಂತೆ ಕೋರಿಕೊಂಡೆ. ಅವರಿಬ್ಬರೂ ನನಗೆ ಏನೂ ಹೇಳಲಿಲ್ಲ. ಆದರೆ ನನ್ನ ಹೆಂಡತಿಯನ್ನು ಕರೆದು- ‘ಇಂಥ ‘ಸೂಕ್ಷ್ಮ’ ವಿಷಯವನ್ನು ಅಣ್ಣ ಅನ್ನಿಸಿಕೊಂಡವನ ಜೊತೆ ಬಿಡಿಸಿ ಹೇಳಲು ಸಾಧ್ಯವೆ? ಅಣ್ಣನಿಗೆ ನೀವಾದ್ರೂ ಬುದ್ಧಿ ಹೇಳಿ. ಇದೇ ವಿಷಯ ಕೇಳುವುದಾದ್ರೆ ಅವನು ಮಾತಾಡುವುದೇ ಬೇಡ’ ಅಂದುಬಿಟ್ಟರು.
ಇಂಥ ಹಿನ್ನಡೆಗಳಿಂದ ನಾನು ಎದೆಗುಂದಲಿಲ್ಲ. ಕೊಯಮತ್ತೂರಿನ ಮೆಡಿಕಲ್ ಕಾಲೇಜಿನಲ್ಲಿರುವ ವಿದ್ಯಾರ್ಥಿನಿಯರಿಗೆ ನನ್ನ ‘ಸಂಶೋಧನೆ’ಯ ಬಗ್ಗೆ ಹೇಳಿಕೊಳ್ಳಲು ನಿರ್ಧರಿಸಿದೆ. ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಿದ್ದ ಹೆಂಡತಿ ಮತ್ತು ತಂಗಿಯರಿಗಿಂತ ಹೊಸ ಪರಿಚಯದ ವಿದ್ಯಾರ್ಥಿನಿಯರೊಂದಿಗಿನ ಚರ್ಚೆಯೇ ಒಳ್ಳೆಯದು ಅನಿಸಿತ್ತು. ನನ್ನ ಪ್ರಯೋಗಕ್ಕೆ ಪಾತ್ರಧಾರಿಗಳಾಗಲು 12 ಹುಡುಗಿಯರು ಮುಂದೆ ಬಂದರು ನಿಜ. ಆದರೆ, ನ್ಯಾಪ್್ಕಿನ್್ನ ಬಳಕೆ, ಅದರಿಂದ ಉಂಟಾಗುವ ಅನುಕೂಲದಂಥ ವಿಷಯವನ್ನು ಮುಕ್ತವಾಗಿ ಹೇಳಿಕೊಳ್ಳಲು ಅವರಿಗೆ ಸಂಕೋಚವಿತ್ತು. ಅದು ತಿಳಿದಾಕ್ಷಣ, ಒಂದು ಹಾಳೆಯಲ್ಲಿ ನನ್ನ ಪ್ರಯೋಗದ ಉದ್ದೇಶ ಏನೆಂಬುದನ್ನು ಮೊದಲು ತಮಿಳಿನಲ್ಲಿ ಬರೆದೆ. ನಂತರ ಅದನ್ನು ಇಂಗ್ಲಿಷಿಗೆ ಭಾಷಾಂತರಿಸಿ, ಎಲ್ಲ ವಿದ್ಯಾರ್ಥಿನಿಯರಿಗೂ ಹಂಚಿದೆ. ನ್ಯಾಪ್್ಕಿನ್್ಗಳು ಹೇಗಿದ್ದರೆ ಚೆಂದ ಎಂದು ನಂತರ ವಿದ್ಯಾರ್ಥಿನಿಯರು ಬರೆದುಕೊಟ್ಟಿದ್ದರು.
ನ್ಯಾಪ್್ಕಿನ್್ಗಳು ತೂಕ ಅನ್ನಿಸಬಾರದು. ಅಂಟಿಕೊಳ್ಳಬಾರದು. ಜಾರಿಹೋಗಬಾರದು… ಎಂದೆಲ್ಲ ವಿದ್ಯಾರ್ಥಿನಿಯರು ಸೂಚಿಸಿದ್ದರು. ಅಂಥದೊಂದು ಅನುಭವ ಪಡೆಯುವುದು ಹೇಗೆ? ಆಗ ಒಂದು ಐಡಿಯಾ ಬಂತು. ಮೊದಲು ನನಗೆ ಪರಿಚಯವಿದ್ದ ಮಟನ್್ಸ್ಟಾಲ್್ನ ಮಾಲೀಕರಿಂದ ಮೇಕೆಯ ರಕ್ತ ಸಂಗ್ರಹಿಸಿದೆ. ಅದನ್ನು ಫುಟ್ಬಾಲ್್ನ ಬ್ಲಾಡರ್್ಗೆ ತುಂಬಿದೆ. ಈ ಸಂಗ್ರಹವನ್ನು ನ್ಯಾಪ್್ಕಿನ್ ಮೇಲಿಟ್ಟು ಅದನ್ನು ನಾನೇ ಧರಿಸಿ ಒಂದಿಡೀ ವಾರ ಓಡಾಡಿದೆ. ಒಂದೆರಡು ಕಡೆ ಕುಳಿತುಕೊಂಡು ಪರೀಕ್ಷಿಸಿದೆ. ತುಂಬಾ ಹಿಂಸೆ ಅನಿಸಿತು. ನಿರಾಸೆಯಿಂದ ಈ ನ್ಯಾಪ್್ಕಿನ್ ಹಾಗೂ ಬ್ಲಾಡರ್ ಅನ್ನು ಊರ ಕೆರೆಯಲ್ಲಿ ತೊಳೆಯುತ್ತಿದ್ದೆ. ಅದನ್ನು ಕಂಡವರು- ‘ಇವನಿಗೆ ಯಾವುದೋ ಗುಣವಾಗದ ಲೈಂಗಿಕ ರೋಗ ಇರಬೇಕು, ತಕ್ಷಣವೇ ಊರಿಂದ ಹೊರಹಾಕಿ’ ಎಂದರು. ಅದು ದೊಡ್ಡ ಸುದ್ದಿಯಾಗುವ ಮೊದಲೇ ನಾನು ಊರಿಂದ ಓಡಿಹೋದೆ.
ಈ ಎಲ್ಲ ಗೊಂದಲಗಳ ಮಧ್ಯೆಯೂ ನನ್ನ ಪ್ರಯೋಗ ನಡೆದೇ ಇತ್ತು. ನಾನು ಮೆಡಿಕಲ್ ಕಾಲೇಜಿನ ಹುಡುಗಿಯರ ಬಳಿ ನ್ಯಾಪ್್ಕಿನ್ ಬಗ್ಗೆ ಚರ್ಚಿಸಿದ ಸುದ್ದಿ ಅದು ಹೇಗೋ ನನ್ನ ಹೆಂಡತಿಯ ಕಿವಿಗೆ ಬಿತ್ತು. ಆಕೆ ರಣಚಂಡಿಯಂತೆ ಕೂಗಾಡಿದಳು. ನಿನ್ನಂಥವನ ಜೊತೆ ಬದುಕುವುದು ಸಾಧ್ಯವೇ ಇಲ್ಲ ಎನ್ನುತ್ತಾ ತವರಿಗೆ ಹೋಗಿಯೇಬಿಟ್ಟಳು.
‘ಈಗಾಗಲೇ ಬಳಸಿರುವ ನ್ಯಾಪ್್ಕಿನ್್ಗಳನ್ನು ಒಮ್ಮೆ ನೋಡಿದರೆ ಹೇಗೆ?’ ಎಂಬ ರಿಸ್ಕೀ ಯೋಚನೆಯೊಂದು ಆಗಲೇ ಬಂತು. ಆದರೆ, ಬಳಸಲಾದ ನ್ಯಾಪ್್ಕಿನ್್ಗಳನ್ನು ಹುಡುಕುವುದಾದರೂ ಎಲ್ಲಿ?’ ಈ ಪ್ರಶ್ನೆಗೂ ನನ್ನೊಳಗೇ ಉತ್ತರವಿತ್ತು. ಮರುದಿನವೇ ಮೆಡಿಕಲ್ ಸ್ಟೋರ್್ನಿಂದ ಒಂದಿಷ್ಟು ನ್ಯಾಪ್್ಕಿನ್ ಖರೀದಿಸಿ, ಮೆಡಿಕಲ್ ಕಾಲೇಜಿನ ಬಳಿ ಹೋದೆ. ನನ್ನ ‘ಸಂಶೋಧನೆ’ಯ ಬಗ್ಗೆ ಆಸಕ್ತಿ ಹೊಂದಿದ್ದ ಯುವತಿಯೊಬ್ಬಳು ಸಿಕ್ಕಳು. ಅವಳಿಗೆ ಕವರ್ ಕೊಟ್ಟು ಹೇಳಿದೆ: ‘ಇದರಲ್ಲಿ ನ್ಯಾಪ್್ಕಿನ್್ಗಳಿವೆ. ನೀವು ಬಳಸಿ ನಂತರ ಅವುಗಳನ್ನು ಇದೇ ಕವರ್್ಗೆ ಹಾಕಿ ಹಿಂದಿರುಗಿಸಿ. ಹಾಗೆ ಮಾಡಿದರೆ, ನನ್ನ ಸಂಶೋಧನೆಗೆ ತುಂಬ ಸಹಾಯವಾಗುತ್ತದೆ.’ ಆ ಹುಡುಗಿ ಹಾಗೇ ಮಾಡಿದಳು. ಅವಳೊಂದಿಗೆ ಮತ್ತೂ ಕೆಲವರು ಕೈಜೋಡಿಸಿದ್ದರು.
ಬಳಕೆಯಾದ ನಂತರ ನ್ಯಾಪ್್ಕಿನ್್ಗಳು ಹೇಗಿರುತ್ತವೆ? ಅವುಗಳಿಗೆ ಯಾವ ಬಟ್ಟೆಯನ್ನು ‘ಎಕ್ಸ್್ಟ್ರಾ’ ಆಗಿ ಬಳಸಿರುತ್ತಾರೆ ಎಂದು ತಿಳಿಯಬೇಕಿತ್ತು. ಅದೊಂದು ಸಂಜೆ, ಮೂಗಿಗೆ ಕರ್ಚಿಫ್ ಕಟ್ಟಿಕೊಂಡು, ಗ್ಲೌಸ್ ಧರಿಸಿ, ಬಳಸಲಾಗಿದ್ದ ನ್ಯಾಪ್್ಕಿನ್್ಗಳನ್ನು ಒಂದೊಂದಾಗಿ ಪರೀಕ್ಷಿಸುತ್ತಿದ್ದೆ. ಆಗಲೇ ಹೊರಗೆ ಹೋಗಿದ್ದ ಅಮ್ಮ ಮನೆಗೆ ಬಂದಳು. ನನ್ನ ಹೊಸ ಅವತಾರ ಕಂಡು ಆಕೆಯೂ ಹೇಸಿಕೊಂಡಳು. ಮಗನಿಗೆ ಒಂದೊ ಹುಚ್ಚು ಹಿಡಿದಿರಬೇಕು ಅಥವಾ ಅವನು ವಾಮಾಚಾರದ ಹಿಂದೆ ಬಿದ್ದಿರಬೇಕು ಎಂದು ಆಕೆ ನಿರ್ಧರಿಸಿದಳು. ಎರಡು ದಿನಗಳ ನಂತರ, ಗಂಟುಮೂಟೆ ಕಟ್ಟಿಕೊಂಡು ಆಕೆಯೂ ಮಗಳ ಮನೆಗೆ ಹೋಗಿಬಿಟ್ಟಳು. ಹೆಂಡತಿ-ಅಮ್ಮ ಇಬ್ಬರ ಕಾಟವೂ ತಪ್ಪಿತು. ನಾನು ತುಂಬ ಖುಷಿಯಿಂದ ನನ್ನ ಸಂಶೋಧನೆಯಲ್ಲಿ ತೊಡಗಿಕೊಂಡೆ.
ನ್ಯಾಪ್್ಕಿನ್್ನ ಒಂದೊಂದು ಎಳೆಯನ್ನೂ ಬಿಡಿಸಿ ನೋಡಿದ ನಂತರ, ಹತ್ತಿ ಬಟ್ಟೆಯ ನಡುವೆ ಸ್ಪಂಜ್್ನಂತಹ ಪದರುಗಳನ್ನು ಹೊಂದಿರುವ ಮತ್ತೊಂದು ತೆಳುವಾದ ಬಟ್ಟೆ ಬಳಕೆಯಾಗಿರುವುದು ನನ್ನ ಗಮನಕ್ಕೆ ಬಂತು. ಅಮೆರಿಕ, ಕೆನಡ ಮತ್ತು ಆಸ್ಟ್ರೇಲಿಯಾಗಳಲ್ಲಿ ಕಂಡುಬರುವ ಪೈನ್ ಮರದತೊಗಟೆಗಳಿಂದ ಈ ತೆಳುವಾದ ಬಟ್ಟೆಯ ಉತ್ಪಾದನೆಯಾಗುತ್ತಿತ್ತು. ಈ ಗುಟ್ಟು ಗೊತ್ತಿಲ್ಲದ ನಾನು ನ್ಯಾಪ್್ಕಿನ್್ಗೆ ಒಂದರ ಮೇಲೊಂದು ಹತ್ತಿ ಬಟ್ಟೆಯನ್ನೇ ಜೋಡಿಸಿ ಸೋಲು ಕಂಡಿದ್ದೆ.
ಪೈನ್ ಮರದ ತೊಗಟೆಯಿಂದ ದೊರೆವ ಕಚ್ಚಾವಸ್ತು ಹೇಗಿರುತ್ತದೆ ಎಂಬುದನ್ನು ನಾನೀಗ ಪರೀಕ್ಷಿಸಬೇಕಿತ್ತು. ಅದಕ್ಕಾಗಿ ಅಮೆರಿಕದ ಐದಾರು ಕಂಪನಿಗಳನ್ನು ಸಂಪರ್ಕಿಸಿದೆ. ಆ ದಿನಗಳಲ್ಲಿ ಇ-ಮೇಲ್್ನ ಭರಾಟೆ ಶುರುವಾಗಿರಲಿಲ್ಲ. ಹಾಗಾಗಿ ಐಎಸ್್ಡಿ ಕಾಲ್ ಮೂಲಕವೇ ಎಲ್ಲವನ್ನೂ ವಿವರಿಸಬೇಕಿತ್ತು. ಕಡೆಗೂ ಒಂದಷ್ಟು ಸ್ಯಾಂಪಲ್ ಪಡೆಯುವಲ್ಲಿ ಯಶಸ್ವಿಯಾದೆ. ಆದರೆ, ಇಲ್ಲೂ ಅಮೆರಿಕನ್ ಕಂಪನಿ ‘ಕಡ್ಡಿ ಆಡಿಸಿತ್ತು’. ಅತ್ಯಂತ ಕಳಪೆ ಗುಣಮಟ್ಟದ, ಬಳಕೆಗೆ ಯೋಗ್ಯವಲ್ಲದ ಸ್ಯಾಂಪಲ್ ಕಳಿಸಿಕೊಟ್ಟಿತ್ತು. ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ, ಬಾಳೆಹಣ್ಣಿನ ಸಿಪ್ಪೆ, ಕತ್ತಾಳೆ ಗಿಡದ ಎಲೆ ಹಾಗೂ ಬಿದಿರಿನ ಒಳಭಾಗದಲ್ಲಿರುವ ತಿರುಳನ್ನು ಬಳಸಿ ನ್ಯಾಪ್್ಕಿನ್್ನ ಒಳಗೆ ಬಳಕೆಯಾಗುವ ತೆಳುವಾದ ಬಟ್ಟೆಯೊಂದನ್ನು ತಯಾರಿಸಬಹುದು ಎಂಬುದನ್ನು ಅರ್ಥಮಾಡಿಕೊಂಡೆ. ನನ್ನ ಅದೃಷ್ಟಕ್ಕೆ ಅಂಥ ಉತ್ಪನ್ನವನ್ನು ತಯಾರಿಸುವವರು ಕೊಯಮತ್ತೂರಿನಲ್ಲೇ ಸಿಕ್ಕರು.
ಆನಂತರ ನಾನು ಹಿಂತಿರುಗಿ ನೋಡಲಿಲ್ಲ. ವಿದೇಶಿ ಕಂಪನಿಗಳು ತಯಾರಿಸುವ ನ್ಯಾಪ್್ಕಿನ್್ಗೆ ಸರಿಸಾಟಿ ಅನ್ನಿಸುವಂಥ ನ್ಯಾಪ್್ಕಿನ್್ಗಳನ್ನು ಉತ್ಪಾದಿಸಲು ತೊಡಗಿದೆ. ತುಂಬಾ ಕಡಿಮೆ ಬೆಲೆ ಇಟ್ಟೆ. ಕೆಲವೇ ದಿನಗಳಲ್ಲಿ ನಮ್ಮ ಉತ್ಪಾದನೆಗೆ ಹೆಚ್ಚಿನ ಆರ್ಡರ್ ಬರತೊಡಗಿತು. ದಿಢೀರನೆ ಹಣ ಸಂಪಾದಿಸಿ ಕೋಟ್ಯಧಿಪತಿ ಆಗಬೇಕೆಂಬ ಹಂಬಲ ನನಗಿರಲಿಲ್ಲ. ದೇಶದ ಎಲ್ಲ ಹೆಂಗಳೆಯರಿಗೂ ಕೈಗೆಟುಕುವ ದರದಲ್ಲಿ ನ್ಯಾಪ್್ಕಿನ್ ಒದಗಿಸಬೇಕು ಎಂಬುದಷ್ಟೇ ನನ್ನ ಆಸೆಯಾಗಿತ್ತು.
ನನ್ನ ‘ಸಂಶೋಧನೆ’ ಹತ್ತು ಕುಟುಂಬಗಳ ಹೊಟ್ಟೆ ತುಂಬಿಸಲಿ ಎಂಬ ಯೋಚನೆ ಬಂದಿದ್ದೇ ಆಗ. ತಕ್ಷಣವೇ ತೆಳುವಾದ ಹತ್ತಿಬಟ್ಟೆ ಉತ್ಪಾದಿಸುವ ಪುಟ್ಟ ಯಂತ್ರಗಳನ್ನು ಖರೀದಿಸಿ, ದೇಶದ ಪ್ರಮುಖ ನಗರಗಳಿಗೆ ಹಂಚಿದೆ. ಈ ಯಂತ್ರಗಳಿಂದ ಬಟ್ಟೆ ನೂಲುವ ಹೆಂಗಸರು, ಆ ಮೂಲಕ ಸ್ವಾವಲಂಬಿಗಳಾಗಬಹುದಿತ್ತು. ಉದ್ಯಮಿಗಳಾಗಬಹುದಿತ್ತು.
ಕಡೆಗೂ ನನ್ನ ಶ್ರಮ ವ್ಯರ್ಥವಾಗಲಿಲ್ಲ. ಈಗ ನ್ಯಾಪ್್ಕಿನ್ ತಯಾರಿಕೆಯಲ್ಲಿ ಅಮೆರಿಕದ ಕಂಪನಿಗಳಿಗೆ ನಾವು ಭಾರೀ ಪೈಪೋಟಿ ನೀಡುತ್ತಿದ್ದೇವೆ. ತುಂಬಾ ಕಡಿಮೆ ಬೆಲೆಗೆ ನ್ಯಾಪ್್ಕಿನ್ ಮಾರುತ್ತಿದ್ದೇವೆ. ಸಾವಿರಾರು ಮಂದಿ ಹೆಂಗಳೆಯರಿಗೆ ನಮ್ಮ ಉದ್ಯಮ ಸಂಪಾದನೆಯ ದಾರಿ ತೋರಿಸಿದೆ. ನನ್ನ ಯಶೋಗಾಥೆ ಕೇಳಿದ ನಂತರ ತವರಿಗೆ ಹೋಗಿದ್ದ ಹೆಂಡತಿ ಮರಳಿ ಬಂದಿದ್ದಾಳೆ. ನಾನೀಗ ಖುಷಿಯಾಗಿದ್ದೇನೆ. ಒಂದು ಮಹತ್ವದ ಸಾಧನೆ ಮಾಡಿರುವೆನೆಂಬ ಹೆಮ್ಮೆ ಖಂಡಿತ ನನಗಿದೆ.
PS: Many of the readers are seeking the address of Arunachalam Muruganantham, here is contact details- 577, KNG Pudur Road, Somayampalaym, Coimbatore 641018
Cell: 92831 55128, 94422 24069
One of the real Indian…..He is not bothering others,he is continuing with his dreams and achievements and Won’t think about other people(But u r thinking only rivalry leave it plz and think about society)….
Marvelous!!!!!!!!!!
sir the article is really good and appreciate the innovative work of the man behind it. but through the passage i was searching for the company name of the napkin so that i can get to know how popular it is. so could you please let me know about it.
Nija tumba olleya kelsa madiddiri Arunachalam. Nimmi samshodhaneya uddesha tumba udattavagide. Ivara bagge tiLisiddakke dhanyavaadagaLu Pratap.
sir namaste,
“TEARS BEHIND SMILE”
“TIME OF 5 MIN PLEASE”
i am a guest faculty working since 4yrs in government first grade college.i just follow the articles and try sharing the information to students obtained from the articles published by you.we being considerd the pillars of the society has lot of problems where we are not getting the solution since years we are struggling. i am just trying to reach my voice to the people who can hear us.media is the 4th face in the constitution.i read articles once in a while but the respone factor is seen in the dustbin of the representitives. kindly carry the voice of pain of guest faculties of first grade college.its been a year we have got salaries. if you ask me what is the pain i can give you the list sir but 1 or 2 i will mention as below:
1. no monthly salary
2. no work protection
sir kindly consider this request and do the need full and help us reaching and solving the problems………
evru thayarisidva nyapkin na hesaru enu.? adhbhta sadane namaskra.
Great achivement from a common person…we educated people should learn a lot from these type of guys…I learnt some of the key ingredient for success in this…
1. Should not quit the work at anycost
2. Focus
3.commitment
4. Faith
5. Hard work
6 Away from distraction
7.. using the opportunity rite…
I think it given lot of inspiration to the common man to be a successful person..
Thanks to sharing this Prathap..
what is the product name
wow wonderfull real story.thank you sirji.
superb article.. what a effort from that great.. hats off to him…
superb determination sir…
salutes to Arunachalam Muruganantham……dedication at its best…
Thanks For the address of Arunachalam Muruganatham
periods nalli baruvudu kalmasha rakta valla adu shudda rakta yembudu nanna nambike.
Awesome..
Thanks for sharing this with us.. 🙂
ಬಹಳ ಸà³à²‚ದರ ಲೇಖನ. ಅನà³à²µà³‡à²·à²•ನೊಬà³à²¬à²¨ ಕà³à²¤à³‚ಹಲ, ಸಾಹಸ, ಅಡೆ-ತಡೆ, ಯಶೋಗಾಥೆಯನà³à²¨à³ ಓದಿ ಬಹಳ ಸಂತೋಷ ಆಯಿತà³. ನಮà³à²®à²²à³à²²à²¿ ಇಂಥಾ ಸಂಶೋಧಕರೠಇರà³à²µà³à²¦à²¿à³¦à²¦ ಜನೋಪಯೋಗಿ ಸಂಶೋಧನೆಗಳೠಇನà³à²¨à³‚ ಆಗà³à²¤à³à²¤à²¿à²µà³†. ಧನà³à²¯à²µà²¾à²¦ ಪà³à²°à²¤à²¾à²ªà³ ಲೇಖನಕà³à²•ೆ.
HI pratap,
Very inspiring story.thanks for sharing this.
Sir,
what is the brand name of this swadeshi napkin?
very good writing sir ……. we indians should stop concentrating on service providing and turn over towards RESEARCH & DEVOLOPMENT ……. then automatically we achieve independence in all fields defence, electronics, IC fabrication, automobiles,,,,,,,,really its a moral story,,,, thanks ….keep it up………
Hai pratap ji
Nijjakku bahala adbutavada vishaya hagu deshakkagi enadaru koduge needalu panathotta ee nagarika tumba gattiga jai muruganatham, pratapji nimagu vandanegalu inta aparupada matu chintanshila mukhigala mele belaku chelli.
ಇವರ ತಾಳà³à²®à³†à²—ೆ ತಕà³à²• ಪà³à²°à²¤à²¿à²«à²²!!!!!!!!!!!!
Hi Pratap, Really Amazing the way he tried and achived finally was superb. India need such kind of presons. So that we can use all Desi Brands. Many Many Thanks to him and thanks for publishing such a article
As my understanding you have not mentioned his Compnay Name in the article!
THANKS FOR SUCH A MOTIVATING STORY
Prathap jee,
This article is really inspiring one. Hats up to Mr Murgaanantham and his vision.
Namaskara sir,artical th.mba arthapurnavageday
Hi pratap sir,how are u,this artical is so inspiring matter.kasta patary sukha eday.
please mention the company name
its jayashree industries
http://newinventions.in/index.aspx
good information
Hi prathap sir, nange nimma articles thumba ista agthave…prathi shanivaravu thappade nimma articles odatini…nanu nimma ella 12 bethale jagathu book,yaru thuliyada hadi odiodini…really a good job…istella buddivantike iro nivu sathya meva jayathe proramme madabarde….!!!!!
pratap ji thanks for sharing this meaning full article with us,,,,,,,, really very informative………………………………