*/
Date : 09-03-2014 | 17 Comments. | Read More
ಆಕೆ ಮೂಲತಃ ಉಡುಪಿಯಾಕೆ. ಸಂಸ್ಕೃತ ಹಾಗೂ ವೇದಾಧ್ಯಯನ ಮಾಡುತ್ತಿದ್ದಳು. ನನ್ನ ಕಾಲಂನ ಕಾಯಂ ಓದುಗಳು. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಲಿಯಲು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿರುವ ಮೈಲಾಪುರಿಗೆ ಹೋಗಿದ್ದಳು. ಅದು 2006. ಅಲ್ಲಿಗೆ ಹೋದ ಹೊಸದರಲ್ಲೂ ಪ್ರತಿ ಶನಿವಾರ ನನಗೆ ಕರೆ ಮಾಡಿ, ಲೇಖನದ ಪಿಡಿಎಫ್ ತರಿಸಿಕೊಂಡು ಓದುತ್ತಿದ್ದಳು. ಹೀಗೇ ವರ್ಷ ಕಳೆಯಿತು. ಅಚಾನಕ್ ಅವಳಿಂದ ಕರೆ ಬರುವುದೇ ನಿಂತುಬಿಟ್ಟಿತು. ಎರಡೂವರೆ ವರ್ಷ ನಾಪತ್ತೆ. “ಕೂಡಲೇ ನಿನ್ನ ನಂಬರ್ ಕಳುಹಿಸು” ಎಂದು ಮತ್ತೆ ಅವಳಿಂದ ಈ-ಮೇಲ್ ಬಂದಿದ್ದು 2009ರಲ್ಲಿ. […]
Date : 04-03-2014 | 17 Comments. | Read More
ಕಬ್ಬಿಣ ಹಾಗೂ ಉಕ್ಕು ಕಂಪನಿ ಸ್ಥಾಪನೆ ಜಲವಿದ್ಯುತ್ ಉತ್ಪಾದನೆ ವಿಶ್ವದರ್ಜೆಯ ಶೈಕ್ಷಣಿಕ ಸಂಸ್ಥೆಗಳ ನಿರ್ಮಾಣ ಈ ಮೂರೂ ಕನಸುಗಳು ಅವರ ಜೀವಿತಾವಧಿಯಲ್ಲಿ ಸಾಕಾರಗೊಳ್ಳಲಿಲ್ಲ. ಆದರೆ ಅವರ ಉತ್ತರಾಧಿಕಾರಿಗಳಿಗೆ ದಿಕ್ಸೂಚಿಯಾದವು, ದೃಷ್ಟಿಕೋನ ಕೊಟ್ಟವು, ದಾರಿ ದೀಪವಾದವು, ಭಾರತ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸಿದವು. ಇಂತಹ ಕನಸುಗಳನ್ನು ಕಂಡಾತ ಈ ದೇಶ ಕಂಡ ಯಾವ ನಾಯಕನೂ ಅಲ್ಲ, ಪ್ರಧಾನಿ, ಮುಖ್ಯಮಂತ್ರಿಗಳೂ ಅಲ್ಲ. ಪಾರ್ಸಿ ಸಮುದಾಯದ ಅರ್ಚಕ ಅಥವಾ ಪೂಜಾರಿಯೊಬ್ಬರ ಮಗ.
Date : 02-03-2014 | 13 Comments. | Read More
ಲೆಫ್ಟಿನೆಂಟ್ ಕಮಾಂಡರ್ ಕಪಿಶ್ ಮುವಾಲ್ ಲೆಫ್ಟಿನೆಂಟ್ ಮನೋರಂಜನ್ ಕುಮಾರ್ ನಮ್ಮ ನೌಕಾ ಪಡೆಯ ರಷ್ಯಾ ನಿರ್ಮಿತ ಜಲಾಂತರ್ಗಾಮಿ “ಸಿಂಧೂರತ್ನ”ದಲ್ಲಿ ಬುಧವಾರ ಸಂಭವಿಸಿದ ಅನಾವಶ್ಯಕ ಅವಘಡದಲ್ಲಿ ಈ ಇಬ್ಬರು ಯುವ ಅಧಿಕಾರಿಗಳು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಬ್ಯಾಟರಿ ದೋಷದಿಂದ ಸಂಭವಿಸಿದ ವಿಷಪೂರಿತ ಅನಿಲ ಇವರನ್ನು ಆಹುತಿ ತೆಗೆದುಕೊಂಡಿದೆ. ಕಳೆದ ಆಗಸ್ಟ್ 14ರಂದು ಭಾರತೀಯ ನೌಕಾ ಪಡೆಯ ಮತ್ತೊಂದು ರಷ್ಯಾ ನಿರ್ಮಿತ ಜಲಾಂತರ್ಗಾಮಿ “ಸಿಂಧೂರಕ್ಷಕ” ಮುಂಬೈ ಬಂದರಿನಲ್ಲಿ ನಿಂತಿರುವಾಗಲೇ ಸ್ಫೋಟಗೊಂಡು 18 ಅಧಿಕಾರಿಗಳು ಸುಟ್ಟು ಕರಕಲಾಗಿದ್ದರು. ಜನವರಿ 17ರಂದು “ಸಿಂಧೂಘೋಷ್” […]
Date : 28-02-2014 | 25 Comments. | Read More
ಅದು 1975, ಜೂನ್ 12. ಅಂದು ಅಲಹಾಬಾದ್ ಹೈಕೋರ್ಟ್ 1971ರಲ್ಲಿ ಇಂದಿರಾ ಗಾಂಧಿಯವರು ಲೋಕಸಭೆಗೆ ಆಯ್ಕೆಯಾಗಿದ್ದನ್ನು ಅನೂರ್ಜಿತಗೊಳಿಸಿ ಐತಿಹಾಸಿಕ ತೀರ್ಪು ನೀಡಿತು. ಅದನ್ನು ಗೌರವಯುತವಾಗಿ ಒಪ್ಪಿಕೊಳ್ಳುವ ಬದಲು ರಾಷ್ಟ್ರದಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬ ನೆಪವೊಡ್ಡಿದ ಇಂದಿರಾ ಗಾಂಧಿಯವರು ಜೂನ್ 25ರಂದು ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿದರು. ಆ ಸಂದರ್ಭದಲ್ಲಿ ಕಾಂಗ್ರೆಸ್ಸೇತರ ಪಕ್ಷಗಳೆಲ್ಲ ಒಗ್ಗೂಡಿ ಮರಳಿ ಸ್ವಾತಂತ್ರ್ಯ ಗಳಿಸಿಕೊಳ್ಳುವ ಹೋರಾಟಕ್ಕೆ ಧುಮುಕಿದವು. ತುರ್ತುಪರಿಸ್ಥಿತಿ ಹೇರಿದ ಬೆನ್ನಲ್ಲೇ ನಮ್ಮ ರಾಜಧಾನಿ ದಿಲ್ಲಿಯಲ್ಲಿ ಕಾಮನ್ವೆಲ್ತ್ ರಾಷ್ಟ್ರಗಳ ಸಂಸತ್ ಪ್ರತಿನಿಧಿಗಳ ಅಂತಾರಾಷ್ಟ್ರೀಯ […]
Date : 25-02-2014 | 11 Comments. | Read More
ಸಂತ ಬಂತ ಜೋಕ್ಸ್ ಸರ್ದಾರ್ಜಿ ಜೋಕ್ಸ್ ಮಿಲೇನಿಯಮ್ ಜೋಕ್ಸ್ ಜಾರ್ಜ್ ಬುಷ್ ಜೋಕ್ಸ್ ಜತೆಗೆ ಹಳೆಯ… ಮಲ್ಲು ಜೋಕ್ಸ್ ಲೇಡಿಸ್ ಜೋಕ್ಸ್ ಅಡಲ್ಟ್ ಜೋಕ್ಸ್ ಫನ್ನಿ ಜೋಕ್ಸ್ ಬೀChiಯುವರ ತಿಂಮನ ಜೋಕ್ಸ್ ದಕ್ಷಿಣ ಕನ್ನಡದ ರಾಂಪಣ್ಣ ಜೋಕ್ಸ್ ರಜನೀಕಾಂತ್ ಜೋಕ್ಸ್…. ಇವೆಲ್ಲಕ್ಕಿಂತಲೂ ಅತಿ ಹೆಚ್ಚು ಮಜಾ ಕೊಟ್ಟಿದ್ದು, ತುಂಬಾ ಕ್ರಿಯೇಟಿವ್ ಎನಿಸಿದ್ದು ಇತ್ತೀಚಿನ ಕೇಜ್ರೀವಾಲ್ ಜೋಕ್ಸ್! ಎಲ್ಲರೂ ಭ್ರಷ್ಟರು, ತಾನೊಬ್ಬನೇ ಸುಭಗ, ಸಾಚಾ ಎಂದು ಬಿಂಬಿಸಿಕೊಂಡ ಸಾರ್ವಜನಿಕ ವ್ಯಕ್ತಿಯೊಬ್ಬನ ಮಾತು ಹಾಗೂ ನಡತೆ ನಡುವೆ ವ್ಯತ್ಯಾಸವುಂಟಾದರೆ ಜನ […]
Date : 21-02-2014 | 8 Comments. | Read More
“ಜೀವಾವಧಿ ಶಿಕ್ಷೆಗೆ ಒಳಗಾಗಿರುವ ನಳಿನಿ, ರಾಬರ್ಟ್ ಪ್ಯಾಸ್, ಜಯಕುಮಾರ್ ಹಾಗೂ ರವಿಚಂದ್ರನ್ ಮುಂತಾದ ನಾಲ್ವರ ಜತೆಗೆ ಮುರುಗನ್, ಪೆರಾರಿವಾಲನ್ ಹಾಗೂ ಸಂತನ್ರನ್ನೂ ಬಿಡುಗಡೆ ಮಾಡಲು ಕ್ಯಾಬಿನೆಟ್ ನಿರ್ಧಾರ ತೆಗೆದುಕೊಂಡಿದೆ. ಮುಂದಿನ ಕ್ರಮಕ್ಕಾಗಿ ಈ ನಿರ್ಧಾರವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲಾಗುವುದು. ಒಂದು ವೇಳೆ, 3 ದಿನಗಳೊಳಗಾಗಿ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ಭಾರತೀಯ ಸಂವಿಧಾನ ರಾಜ್ಯಕ್ಕೆ ನೀಡಿರುವ ಹಕ್ಕಿನಡಿ ಎಲ್ಲ 7 ಅಪರಾಧಿಗಳನ್ನೂ ಬಿಡುಗಡೆ ಮಾಡಲಾಗುವುದು”!
Date : 16-02-2014 | 6 Comments. | Read More
ಮೊನ್ನೆ ಮಂಗಳವಾರ ರಾಜಧಾನಿ ದಿಲ್ಲಿಯಲ್ಲಿ “Border and Naxal Management” (ಗಡಿ ಹಾಗೂ ನಕ್ಸಲ್ ನಿರ್ವಹಣೆ) ಎಂಬ ವಿಷಯದ ಮೇಲೆ ವಿಚಾರ ಸಂಕಿರಣವೊಂದು ಏರ್ಪಾಡಾಗಿತ್ತು. ರಕ್ಷಣಾ ವಿಷಯಗಳಿಗೆ ಸಂಬಂಧಿಸಿದ ಚಿಂತಕರ ಚಾವಡಿಯೊಂದು ಅದನ್ನು ಆಯೋಜನೆ ಮಾಡಿತ್ತು. ಅದನ್ನು ಉದ್ದೇಶಿಸಿ ಮಾತನಾಡಿದ ವ್ಯಕ್ತಿ ಯಾವುದೋ ಕೋಮುವಾದಿ ಪಕ್ಷದ ನಾಯಕನೂ ಆಗಿರಲಿಲ್ಲ, ವಕ್ತಾರನೂ ಅಲ್ಲ ಅಥವಾ ಬಲಪಂಥೀಯನಂತೂ ಅಲ್ಲವೇ ಅಲ್ಲ. ಈ ದೇಶದ ಸೇನೆಯ ಮುಖ್ಯಸ್ಥ ಜನರಲ್ ವಿಕ್ರಮ್ ಸಿಂಗ್! ಗಡಿ ವಿಷಯ ಪ್ರಸ್ತಾಪಿಸಿದ ಅವರು “ಬಾಂಗ್ಲಾದೇಶದಿಂದ ಆಗಮಿಸುತ್ತಿರುವ ಅಕ್ರಮ […]
Date : 09-02-2014 | 33 Comments. | Read More
ಕಳೆದ ಮಂಗಳವಾರ ಖ್ಯಾತ ವಿಜ್ಞಾನಿ ಸಿಎನ್ಆರ್ ರಾವ್ ಹಾಗೂ ಕ್ರಿಕೆಟ್ನ ದಂತಕಥೆ ಸಚಿನ್ ತೆಂಡೂಲ್ಕರ್ ಈ ದೇಶದ ಮೇರು ಪುರಸ್ಕಾರವಾದ ಭಾರತ ರತ್ನವನ್ನು ಅತ್ಯಂತ ಧನ್ಯತೆಯಿಂದ ಸ್ವೀಕರಿಸಿದರು. 2013 ನವೆಂಬರ್ 16ರಂದು ಈ ಪುರಸ್ಕಾರಕ್ಕೆ ತಮ್ಮನ್ನು ಆಯ್ಕೆ ಮಾಡಿದಾಗಲೂ ರಾವ್ ಹಾಗೂ ಸಚಿನ್ ಸರ್ಕಾರಕ್ಕೆ ಧನ್ಯತೆಯನ್ನು ವ್ಯಕ್ತಪಡಿಸಿದ್ದರು. ಅದರಲ್ಲಿ ತಪ್ಪೇನೂ ಇಲ್ಲ ಬಿಡಿ. ಆದರೆ ಭಾರತ ರತ್ನಕ್ಕೆ ತಮ್ಮನ್ನು ಆಯ್ಕೆ ಮಾಡಿದಾಗ ಪ್ರಧಾನಿಗೇ ಎಚ್ಚರಿಕೆ ಕೊಟ್ಟ ಮಹಾನುಭಾವರೊಬ್ಬರಿದ್ದಾರೆ ಎಂದರೆ ನಂಬುತ್ತೀರಾ?!
Date : 02-02-2014 | 28 Comments. | Read More
ಏಕೆ ಇಂಥ ಪ್ರಶ್ನೆ ಕೇಳಬೇಕಾಗಿದೆಯೆಂದರೆ… 1. ಕೊಡಗು: ಕದನ ಕಲಿಗಳ ನಾಡು 2. 18ನೇ ಶತಮಾನದಲ್ಲಿ ಮೈಸೂರು ದಸರಾ ವೈಭವ 3. ಸಾವಿರ ಕಂಬದ ಬಸದಿ ಇಂಥ ಮೂರು ವಿಷಯಗಳು ಕರ್ನಾಟಕ ಸರ್ಕಾರದ ಮುಂದಿದ್ದವು. ಗಣರಾಜ್ಯೋತ್ಸವದ ಪರೇಡ್ಗೆ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದಿತ್ತು. ಆದರೆ… ಕರ್ನಾಟಕದ ವೀರಪುತ್ರರಾದ ಕೊಡವರ ಸೇವೆಯನ್ನು ಸಾರುವ, ನಮ್ಮ ಪರಂಪರೆಯ ಭಾಗವಾಗಿರುವ ದಸರಾದ ವೈಭವವನ್ನು ಪರಿಚಯಿಸುವ, ಸೌಮ್ಯ ಸ್ವಭಾವದ ಜೈನರು ನಮ್ಮ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗೆ ಮನ್ನಣೆ ಕೊಡುವ ಇಂಥ ಅಂಶಗಳನ್ನು ಬಿಟ್ಟು […]