Date : 28-02-2014, Friday | 25 Comments
ಅದು 1975, ಜೂನ್ 12. ಅಂದು ಅಲಹಾಬಾದ್ ಹೈಕೋರ್ಟ್ 1971ರಲ್ಲಿ ಇಂದಿರಾ ಗಾಂಧಿಯವರು ಲೋಕಸಭೆಗೆ ಆಯ್ಕೆಯಾಗಿದ್ದನ್ನು ಅನೂರ್ಜಿತಗೊಳಿಸಿ ಐತಿಹಾಸಿಕ ತೀರ್ಪು ನೀಡಿತು. ಅದನ್ನು ಗೌರವಯುತವಾಗಿ ಒಪ್ಪಿಕೊಳ್ಳುವ ಬದಲು ರಾಷ್ಟ್ರದಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬ ನೆಪವೊಡ್ಡಿದ ಇಂದಿರಾ ಗಾಂಧಿಯವರು ಜೂನ್ 25ರಂದು ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿದರು. ಆ ಸಂದರ್ಭದಲ್ಲಿ ಕಾಂಗ್ರೆಸ್ಸೇತರ ಪಕ್ಷಗಳೆಲ್ಲ ಒಗ್ಗೂಡಿ ಮರಳಿ ಸ್ವಾತಂತ್ರ್ಯ ಗಳಿಸಿಕೊಳ್ಳುವ ಹೋರಾಟಕ್ಕೆ ಧುಮುಕಿದವು. ತುರ್ತುಪರಿಸ್ಥಿತಿ ಹೇರಿದ ಬೆನ್ನಲ್ಲೇ ನಮ್ಮ ರಾಜಧಾನಿ ದಿಲ್ಲಿಯಲ್ಲಿ ಕಾಮನ್ವೆಲ್ತ್ ರಾಷ್ಟ್ರಗಳ ಸಂಸತ್ ಪ್ರತಿನಿಧಿಗಳ ಅಂತಾರಾಷ್ಟ್ರೀಯ ಶೃಂಗ ಏರ್ಪಾಡಾಯಿತು. ಆ ಸಂದರ್ಭದಲ್ಲಿ ಕೈಪಿಡಿಗಳನ್ನು ಹೊರತಂದು, ಸಂದಸರಿಗೆ ಹಂಚುವ ಮೂಲಕ ಇಂದಿರಾ ಗಾಂಧಿಯವರ ನಿಜರೂಪವನ್ನು ಬಯಲು ಮಾಡಲು ಮುಂದಾಯಿತು ಜನಸಂಘ (ಈಗ ಬಿಜೆಪಿ). ಒಂದರ ಮೇಲೆ ಒಂದರಂತೆ ಸುಳ್ಳಿನ ಕಂತೆಗಳನ್ನೇ ಸೃಷ್ಟಿಸುತ್ತಿದ್ದ ಇಂದಿರಾ ಗಾಂಧಿಯವರನ್ನುದ್ದೇಶಿಸಿ ಒಂದು ಪ್ರಶ್ನೆ ಮಾಲೆಯನ್ನೂ ಸಿದ್ಧಪಡಿಸಲಾಯಿತು. ಅದರ ಕರಡು ಪ್ರತಿಯನ್ನು ತೆಗೆದುಕೊಂಡು ಪಕ್ಷದ ವರಿಷ್ಠ ನೇತಾರ ಅಟಲ್ ಬಿಹಾರಿ ವಾಜಪೇಯಿಯವರ ಬಳಿಗೆ ಹೋಗಲಾಯಿತು. ಪ್ರತಿಯೊಂದು ಪ್ರಶ್ನೆಗಳ ಮೇಲೂ ಕಣ್ಣಾಡಿಸಿದ ವಾಜಪೇಯಿ ಯಾವುದೇ ತಿದ್ದುಪಡಿ ಮಾಡದೆ ಎಲ್ಲವಕ್ಕೂ ಸಮ್ಮತಿಯ ತಲೆಯಾಡಿಸಿದರು. ಇನ್ನೇನು ಕರಡು ಪ್ರತಿಯನ್ನು ಮರಳಿ ಕೊಡಬೇಕು, ಅಷ್ಟರಲ್ಲಿ ಪೆನ್ನು ಕೈಗೆತ್ತಿಕೊಂಡ ಅಟಲ್, ಪ್ರಶ್ನೆ ಮಾಲೆಯ ಶೀರ್ಷಿಕೆ “ಇಂದಿರಾ ಜವಾಬ್ ದೋ”ವನ್ನು “ಇಂದಿರಾಜಿ ಜವಾಬ್ ದೀಜಿಯೇ” ಎಂದು ತಿದ್ದಿದರು!
ಇಡೀ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರುವ ಮೂಲಕ ನೂರೈವತ್ತು ವರ್ಷಗಳ ಕಾಲ ಹೋರಾಡಿ, ಲಕ್ಷಾಂತರ ಜನ ಪ್ರಾಣಕೊಟ್ಟು ಗಳಿಸಿದ್ದ ಸ್ವಾತಂತ್ರ್ಯವನ್ನು ಹರಣ ಮಾಡಿದ್ದಾಕೆಯನ್ನು ಸಂಬೋಧಿಸುವಾಗಲೂ ಗೌರವಾದರಗಳನ್ನು ಕೊಡಬೇಕು ಎಂಬ ಪಾಠ ವಾಜಪೇಯಿ ಅವರ ತಿದ್ದುಪಡಿಯಲ್ಲಿತ್ತು!
ಇಂತಹ ವಾಜಪೇಯಿಯವರನ್ನು ಇಂದಿರಾ ಗಾಂಧಿ ಸೊಸೆ ಸೋನಿಯಾ ಗಾಂಧಿಯವರು 1999ರಲ್ಲಿ “ಗದ್ದಾರ್”(ದೇಶದ್ರೋಹಿ) ಎಂದು ಕೀಳಾಗಿ ಟೀಕಿಸಿದ್ದನ್ನೂ ನೋಡಿದ್ದೇವೆ. “ಭಾರತದ ಜನಸಂಖ್ಯೆಗೆ ಎರಡು ಮಕ್ಕಳನ್ನು ಸೇರಿಸಿದ್ದೇ ಆಕೆ ಕೊಟ್ಟ ದೊಡ್ಡ ಕೊಡುಗೆ” ಎಂದು ಜಾರ್ಜ್ ಫರ್ನಾಂಡಿಸ್ ಸೋನಿಯಾ ಗಾಂಧಿಯವರನ್ನು ಕೆಟ್ಟದಾಗಿ ಟೀಕಿಸಿದ್ದೂ ಇದೆ. 2010ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು “ಬ್ಲಡಿ ಬಾಸ್ಟರ್ಡ್” ಎಂದು ಕರೆಯುವ ಮೂಲಕ ಮಾಜಿ ಪ್ರಧಾನಿ ದೇವೇಗೌಡರು ತೀರಾ ಕೆಳ ಹಾಗೂ ಕೀಳು ಮಟ್ಟಕ್ಕೆ ಇಳಿದಿದ್ದನ್ನೂ ಕಂಡಿದ್ದೇವೆ. ಇಂತಹ ನೀಚ, ಅಸಭ್ಯ ಮಾತುಗಳನ್ನಾಡಿದವರ ಪಟ್ಟಿಗೆ ಆಕ್ಸ್‌ಫರ್ಡ್‌ನಲ್ಲಿ ಕಲಿತ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಕೂಡ ಮೊನ್ನೆ ಸೇರಿಕೊಂಡಿದ್ದಾರೆ! ಫರೂಕಾಬಾದ್‌ನಲ್ಲಿ ಮಾತನಾಡುತ್ತಿದ್ದ ಅವರು, ಸ್ವಜಾತಿ ಬಾಂಧವರನ್ನು ಮೆಚ್ಚಿಸುವ ಸಲುವಾಗಿ ಗುಜರಾತ್ ಹಿಂಸಾಚಾರವನ್ನು ಎಳೆದುತಂದರು. ಮುಸಲ್ಮಾ ನರನ್ನು ರಕ್ಷಿಸದ ನರೇಂದ್ರ ಮೋದಿ ಒಬ್ಬ “ನಪುಂಸಕ” ಎಂದು ತಮ್ಮ ಕೀಳುನಾಲಗೆಯನ್ನು ಹರಿ ಬಿಟ್ಟಿದ್ದಾರೆ. 2002ರಲ್ಲಿ ಗುಜರಾತ್ ಗಲಭೆ ಸಂಭವಿಸಿದಾಗ ಹಿಂಸಾಚಾರ ಕ್ಷಣಮಾತ್ರದಲ್ಲಿ ರಾಜ್ಯದ17 ಜಿಲ್ಲೆಗೆ ವ್ಯಾಪಿಸಿತು. ನೆರೆಯ ಕಾಂಗ್ರೆಸ್ ಸರ್ಕಾರಗಳ ಅಸಹಕಾರದ ಹೊರತಾಗಿಯೂ 3 ದಿನಗಳಲ್ಲಿ ಹಿಂಸೆಯನ್ನು ನಿಯಂತ್ರಣಕ್ಕೆ ತರಲಾಯಿತಾದರೂ ಅಷ್ಟರಲ್ಲಿ 790 ಮುಸಲ್ಮಾನರು ಬಲಿಯಾಗಿದ್ದರು. ಪೋಲಿಸರ ಗೋಲಿಬಾರಿಗೆ 252 ಹಿಂದುಗಳೂ ಸತ್ತರು. ಇಷ್ಟಾಗಿಯೂ ಒಟ್ಟಾರೆ ಹಿಂಸಾಚಾರದ ನೈತಿಕ ಹೊಣೆಯನ್ನು ಮುಖ್ಯಮಂತ್ರಿಯಾದ ನರೇಂದ್ರ ಮೋದಿಯವರು ಹೊರಲೇಬೇಕು. ಅದರಲ್ಲಿ ಎರಡು ಮಾತಿಲ್ಲ. ಅವರು ಹಿಂಸೆಯನ್ನು ತಹಬಂದಿಗೆ ತರಲು ವಿಫಲರಾದರು, ಅಸಮರ್ಥರಾದರು ಎಂದು ಟೀಕಿಸಲಿ. ಯಾರೂ ಬೇಡವೆನ್ನುವುದಿಲ್ಲ. ಆದರೆ “ನಪುಂಸಕ” ಎಂದು ಕರೆಯುವುದು ಎಷ್ಟರಮಟ್ಟಿಗೆ ಸರಿ? ಸಲ್ಮಾನ್ ಖುರ್ಷಿದ್ ಅವರಲ್ಲಿರುವ ಸಂಸ್ಕಾರ ಇದೇನಾ?
ಒಂದು ವೇಳೆ, ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಅಸಮರ್ಥರಾದವರನ್ನು “ನಪುಂಸಕ” ಎಂದು ಜರಿಯುವುದಾದರೆ ಕಾಂಗ್ರೆಸ್‌ನಲ್ಲಿ, ಅದರಲ್ಲೂ ಸ್ವತಃ ನೆಹರು ಹಾಗೂ ಅವರ ಕುಟುಂಬದಲ್ಲಿ ಅಂತಹ ನಪುಂಸಕರೇ ತುಂಬಿದ್ದಾರೆ ಎಂದನಿಸುವುದಿಲ್ಲವೆ?!
1984ರಲ್ಲಿ ಇಂದಿರಾ ಗಾಂಧಿಯವರು ಹತ್ಯೆಯಾದ ಬೆನ್ನಲ್ಲೇ ಸತತ ಮೂರು ದಿನಗಳ ಕಾಲ ದಿಲ್ಲಿಯಲ್ಲಿ ಮೂರೂವರೆ ಸಾವಿರ ಸಿಖ್ಖರನ್ನು ಹೆಕ್ಕಿ ಕೊಂದಾಗ ಕಣ್ಣುಮುಚ್ಚಿಕೊಂಡು ಕುಳಿತಿದ್ದ ಪ್ರಧಾನಿ ರಾಜೀವ್ ಗಾಂಧಿಯವರನ್ನೂ ನಪುಂಸಕ ಎಂದು ಕರೆಯುತ್ತೀರಾ ಸಲ್ಮಾನ್ ಖುರ್ಷಿದ್? 790 ಮುಸಲ್ಮಾನರ ಹತ್ಯೆಯನ್ನು ತಡೆಯದ ಮೋದಿ ನಪುಂಸಕರಾದರೆ ಅದರ ಐದು ಪಟ್ಟು ಸಿಖ್ಖರ ಹತ್ಯೆಯನ್ನು ತಡೆಯಲು ವಿಫಲರಾದ, ಜತೆಗೆ ದಿಲ್ಲಿಯಲ್ಲೇ ಸೇನೆಯಿದ್ದರೂ ನಿಯೋಜನೆ ಮಾಡದೆ ಮೂಕಪ್ರೇಕ್ಷಕನಂತೆ ಕುಳಿತಿದ್ದ ರಾಜೀವ್ ಗಾಂಧಿ ಕೂಡ ನಪುಂಸಕರಲ್ಲವೆ? ಹಾಗೆ ಕರೆಯುವ ತಾಕತ್ತು ನಿಮಗಿದೆಯೇ? “ಒಂದು ದೊಡ್ಡ ಮರ ಉರುಳಿದಾಗ ಭೂಮಿ ಅಲುಗುವುದು ಸಹಜ” ಎಂದು ಸಿಖ್ಖರ ಹತ್ಯೆಯನ್ನು ಲಜ್ಜೆಯಿಲ್ಲದೆ ಸಮರ್ಥಿಸಿಕೊಂಡ ರಾಜೀವ್ ಗಾಂಧಿಯವರಲ್ಲಿದ್ದ ನಪುಂಸಕತೆ ನಿಮಗೆ ಕಾಣುತ್ತಿಲ್ಲವೆ? 1947ರಲ್ಲಿ ದೇಶ ಒಡೆದು ಜಾಗ ಖಾಲಿ ಮಾಡುವಾಗಲೂ ಬ್ರಿಟಿಷರು ತಮ್ಮ ನೀಚ ಬುದ್ಧಿ ಬಿಟ್ಟಿರಲಿಲ್ಲ. ಭಾರತದೊಳಗಿದ್ದ 554 ಪ್ರಾಂತಗಳು, ಸಣ್ಣಪುಟ್ಟ ರಾಜ್ಯಗಳು, ಅಧೀನ ಸಂಸ್ಥಾನಗಳು ಎಲ್ಲಕ್ಕೂ ಸ್ವಾತಂತ್ರ್ಯ ಕೊಟ್ಟುಬಿಟ್ಟರು. ಇಂತಹ ಒಂದೊಂದು ರಾಜ್ಯಗಳನ್ನೂ ಮನವೊಲಿಸಿ, ಕೆಲವನ್ನು ಬೆದರಿಸಿ, ಕೆಲವು ಕಡೆ ಸೇನೆ ಕಳುಹಿಸಿ ಭಾರತದ ಒಕ್ಕೂಟಕ್ಕೆ ಸೇರಿಸಿದ್ದು ಸರ್ದಾರ್ ಪಟೇಲ್. ಕೇವಲ ಒಂದು ಕಾಶ್ಮೀರವನ್ನು ಇಡಿಯಾಗಿ ಉಳಿಸಿಕೊಳ್ಳದ, ಪಾಕಿಸ್ತಾನವನ್ನು ನಮ್ಮ ಸೇನೆ ಹಿಮ್ಮೆಟ್ಟಿಸಿದರೂ ಯುದ್ಧರಂಗದಲ್ಲೇ ತೀರ್ಮಾನ ಮಾಡುವುದು ಬಿಟ್ಟು ಸಮಸ್ಯೆಯನ್ನು ವಿಶ್ವಸಂಸ್ಥೆ ಬಾಗಿಲಿಗೆ ಕೊಂಡೊಯ್ದು ನ್ಯಾಯ ಕೊಡಿಸಿ ಎಂದು ಗೋಗರೆದ ನಿಮ್ಮ ಪಕ್ಷದ ಮಹಾನ್ ನೇತಾರ ಜವಾಹರಲಾಲ್ ನೆಹರು ತೋರಿದ್ದೂ ನಪುಂಸಕತೆಯನ್ನೇ ಅಲ್ಲವೆ? 1962 ಚೀನಾ ಆಕ್ರಮಣ ಮಾಡಿದಾಗ, ನಮ್ಮ 37 ಸಾವಿರ ಚದುರ ಕಿ.ಮೀ. ಭೂಭಾಗವನ್ನು ವಶಪಡಿಸಿಕೊಂಡಾಗ ಪ್ರಧಾನಿಯಾಗಿದ್ದವರನ್ನೂ ನಪುಂಸಕ ಎಂದು ಕರೆಯುವ ಧೈರ್ಯ ತೋರುತ್ತೀರಾ? 1962ರಲ್ಲಿ ನಮ್ಮ ವಾಯುಪಡೆಯನ್ನು ಯುದ್ಧಕ್ಕೆ ಕಳುಹಿಸಲು ಒಪ್ಪದೆ ಭಾರತ ಚೀನಾಕ್ಕೆ ಶರಣಾಗುವಂತೆ ಮಾಡಿದ ನಪುಂಸಕ ಯಾರು ಸಲ್ಮಾನ್ ಖುರ್ಷಿದ್? 1962, ನವೆಂಬರ್‌ನಲ್ಲಿ ಎರಡನೇ ಭಾರಿಗೆ ಚೀನಾ ಆಕ್ರಮಣ ಮಾಡಿದಾಗ ಅದುವರೆಗೂ ತಾವು ಯಾರನ್ನು ವಿರೋಧಿಸಿಕೊಂಡು ಬರುತ್ತಿದ್ದರೋ ಅಂತಹ ಅಮೆರಿಕದ ಸಹಾಯಕ್ಕಾಗಿ ಮೊರೆಯಿಟ್ಟ ನೆಹರು ಅವರಲ್ಲಿ ಅಂದು ಗೋಚರಿಸಿದ್ದೂ ನಪುಂಸಕತೆಯೇ ಅಲ್ಲವೆ?
ಇನ್ನು ಮತ್ತೆ ಗುಜರಾತ್ ವಿಚಾರಕ್ಕೆ ಬರುವುದಾದರೆ, ಅಲ್ ಅಕ್ಷಾ ಮಸೀದಿಯನ್ನು ಇಸ್ರೇಲ್ ನೆಲಸಮ ಮಾಡಿದೆ ಎಂಬ ಸುಳ್ಳು ವದಂತಿಗೆ ಕಿವಿಗೊಟ್ಟು ಜಗನ್ನಾಥ ಮಂದಿರಕ್ಕೆ ಹೋಗಿದ್ದ ಭಕ್ತರ ಮೇಲೆ ಆಕ್ರಮಣ ಮಾಡುವುದರೊಂದಿಗೆ ಆರಂಭವಾದ 1969ರ ಕೋಮು ಹಿಂಸೆಗೆ ಗುಜರಾತ್‌ನ ಇತಿಹಾಸದಲ್ಲೇ ಅತಿ ಹೆಚ್ಚು ಜನ ಬಲಿಯಾಗಿದ್ದರು. ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ಹಿತೇಂದ್ರ ದೇಸಾಯಿಯವರನ್ನೂ ನಪುಂಸಕ ಎನ್ನುತ್ತೀರಾ? 1983ರಲ್ಲಿ ಅಸ್ಸಾಂನ ನೆಲ್ಲಿಯಲ್ಲಿ ರಾತ್ರೋರಾತ್ರಿ 3 ಸಾವಿರ ಮುಸ್ಲಿಮರ ಹತ್ಯೆ ಯಾಯಿತು. ಅದು ನೆಲ್ಲಿ ಹತ್ಯಾಕಾಂಡವೆಂದೇ ಪ್ರಸಿದ್ಧಿಯಾಗಿದೆ. ಅಂದು ಅಸ್ಸಾಂನಲ್ಲೂ ಕಾಂಗ್ರೆಸ್ ಸರ್ಕಾರವಿತ್ತು, ಕೇಂದ್ರದಲ್ಲೂ ಇಂದಿರಾ ಗಾಂಧಿಯ ವರು ಅಧಿಕಾರ ನಡೆಸುತ್ತಿದ್ದರು. ಅವರಿಬ್ಬರೂ ನಪುಂಸಕರೆನಿಸುವುದಿಲ್ಲವೆ? 1984ರಲ್ಲಿ ಭಿಂದ್ರನ್‌ವಾಲೆ ಯನ್ನು ಮುಗಿಸಲು ಇಂದಿರಾ ಗಾಂಧಿಯವರು ಸ್ವರ್ಣ ಮಂದಿರದೊಳಕ್ಕೆ ಸೈನಿಕರನ್ನು ನುಗ್ಗಿಸಿದರು, ಫಿರಂಗಿ ಯಿಂದ ಗೋಪುರದ ಒಂದು ಭಾಗವನ್ನು ಉಡಾಯಿಸಿದರು. ಆದರೆ 1993ರಲ್ಲಿ ಕಾಶ್ಮೀರದ ಹಝರತ್‌ಬಾಲ್ ಮಸೀದಿಯಲ್ಲಿ ಭಯೋತ್ಪಾದಕರು ಅಡಗಿಕೊಂಡಾಗ ನಿಮ್ಮ ಕಾಂಗ್ರೆಸ್ಸಿನ ನರಸಿಂಹರಾವ್ ಸರ್ಕಾರ ಸೇನೆಯನ್ನು ನುಗ್ಗಿಸುವ ಬದಲು ಆರ್ಮಿಯನ್ನು ಹಿಂತೆಗೆದು ಭಯೋತ್ಪಾದಕರು ಹೊರಹೋಗಲು ಮುಕ್ತ ಅವಕಾಶ ಕೊಟ್ಟರಲ್ಲಾ ಅದು ನಪುಂಸಕತೆಯಲ್ಲದೆ ಮತ್ತೇನು ಸ್ವಾಮಿ?
ಅದಿರಲಿ, ನಮ್ಮ ಸೈನಿಕರ ಶಿರಚ್ಚೇದ ಮಾಡಿ ಬರೀ ರುಂಡ ಕಳುಹಿಸಿದಾಗಲೂ ತಕ್ಕನಾದ ಪ್ರತೀಕಾರ ತೆಗೆದುಕೊಳ್ಳುವಂತೆ ನಮ್ಮ ಸೇನೆಗೆ ಸೂಚಿಸಲು ಹಿಂದೇಟು ಹಾಕಿದ ನಪುಂಸಕ ಯಾರು ಸ್ವಾಮಿ? ಮುಝಫ್ಫರಾಬಾದ್ ಹಿಂಸಾಚಾರವನ್ನು ತಡೆಯದ ಅಖಿಲೇಶ್ ಯಾದವ್‌ರನ್ನೂ ಹಾಗೇ ಕರೆಯುತ್ತೀರಾ? ನಮ್ಮ ಜಮ್ಮು-ಕಾಶ್ಮೀರದ ನಾಗರಿಕರಿಗೆ ಕಳೆದ ನಾಲ್ಕು ವರ್ಷಗಳಿಂದ ಚೀನಾ ಸ್ಟೇಪಲ್ಡ್ ವೀಸಾ ನೀಡುತ್ತಾ ಬರುತ್ತಿದೆ. 2007ರಲ್ಲಿ ಬೀಜಿಂಗ್‌ಗೆ ಹೊರಟಿದ್ದ ನಮ್ಮ 100 ಐಎಎಸ್ ಅಧಿಕಾರಿಗಳ ಪ್ರವಾಸವನ್ನೇ ರದ್ದು ಮಾಡಬೇಕಾಯಿತು. ಏಕೆಂದರೆ ಅದರಲ್ಲಿದ್ದ ಒಬ್ಬ ವ್ಯಕ್ತಿ ಅರುಣಾಚಲ ಪ್ರದೇಶದವರಾಗಿದ್ದರು. ಆಗಿನ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಗೆಗಾಂಗ್ ಅಪಾಂಗ್ ಅವರಿಗೂ ಚೀನಾ ವೀಸಾ ನಿರಾಕರಿಸಿತ್ತು. ಅರುಣಾಚಲ ಪ್ರದೇಶಕ್ಕೆ ಏಷ್ಯಾ ಅಭಿವೃದ್ಧಿ ಬ್ಯಾಂಕಿನಿಂದ ಬರಬೇಕಿದ್ದ ಸಹಾಯ ನಿಧಿಯನ್ನೂ ತಡೆಯಿತು. ಅಷ್ಟೇಕೆ 2010, ಆಗಸ್ಟ್‌ನಲ್ಲಿ ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಅರುಣಾಚಲ ಪ್ರದೇಶ ಭೇಟಿ ನೀಡಿದ್ದಕ್ಕೂ ಚೀನಾ ತಕರಾರು ಎತ್ತಿತು. ಇಷ್ಟಾಗಿಯೂ ಚೀನಾಕ್ಕೆ ಕಟು ಎಚ್ಚರಿಕೆ ಕೊಡಲು ಹಿಂಜರಿದ ಪ್ರಧಾನಿಯಲ್ಲಿ ಕಂಡಿದ್ದು ನಪುಂಸಕತೆಯೇ ಎಂದು ಹೇಳಬಲ್ಲಿರಾ ಸಲ್ಮಾನ್ ಖುರ್ಷಿದ್?! ಕಳೆದ ಅಗಸ್ಟ್‌ನಲ್ಲಿ ಚೀನಿ ಸೈನಿಕರು ನಮ್ಮ ಲದ್ದಾಕ್ ಬಳಿ ಭಾರತೀಯ ಗಡಿರೇಖೆಯೊಳಕ್ಕೆ 19 ಕಿ.ಮೀ.ವರೆಗೂ ಅತಿಕ್ರಮಣ ಮಾಡಿ ಎರಡು ವಾರ ಕದಲದೇ ಇದ್ದಾಗ ಬಂದೂಕು ಹಿಡಿದು ಹಿಮ್ಮೆಟ್ಟಿಸುವ ಬದಲು ಚೀನಾಕ್ಕೆ ಮನವಿ ಮಾಡಿಕೊಳ್ಳುವುದರಲ್ಲೇ, ಗೋಗರೆಯುವುದರಲ್ಲೇ ಕಳೆದವರು ನಪುಂಸಕರೋ ಅಥವಾ ಮೊನ್ನೆ ಫೆಬ್ರವರಿ 23ರಂದು ಅರುಣಾಚಲ ಪ್ರದೇಶದ ಪಾಸಿಘಾಟ್‌ನಲ್ಲಿ ನಿಂತು “ಅರುಣಾಚಲ ಪ್ರದೇಶದ ಮೇಲೆ ಹಕ್ಕು ಪ್ರತಿಪಾದನೆ ಮಾಡುವುದನ್ನು ಹಾಗೂ ತನ್ನ ವಿಸ್ತರಣಾವಾದಿ ಧೋರಣೆಯನ್ನು ಚೀನಾ ಮೊದಲು ಬಿಡಬೇಕು. ಜಗತ್ತಿನ ಯಾವ ಶಕ್ತಿಯೂ ಅರುಣಾಚಲವನ್ನು ಭಾರತದಿಂದ ಬೇರ್ಪಡಿಸಲು ಸಾಧ್ಯವಿಲ್ಲ” ಎಂದು ಚೀನಾಕ್ಕೆ ಎಚ್ಚರಿಕೆ ಕೊಟ್ಟ ಮೋದಿ ನಪುಂಸಕರೋ, ಹೇಳ್ರೀ?
you are realising somany facts in this article prathap sir. This is very shameful to all of us because we have a great leaders bludy like this.
this article have good weight pratap translate it and make reachable to cong people . very good article Pratap
“plz…ದಮà³à²®à²¯à³à²¯,. ಈ ರೀತಿ ಮಾಡಬೇಡಿ.. .” ಅಂತ ಆಗಾಗ ಪಾಕಿಸà³à²¤à²¾à²¨, ಚೈನಾಕà³à²•ೆ ಲವೠಲೆಟರೠಬರಿಯೋರೠನಪà³à²‚ಸಕರೇ ಹೊರತà³.. “ಹೆಜà³à²œà³† ಮà³à²‚ದಿಟà³à²Ÿà²°à³† ಎಚà³à²šà²°à²¿à²•ೆ” ಅಂತ ಚೈನಾಕà³à²•ೆ ಆವಾಜೠಹಾಕೋ ಗಂಡà³à²—ಲಿಯಲà³à²²..
We all know these cong leaders r impotent because they can’t able to face a lady.
Please translate it into English and send a copy to ” Nampumsaka ” salman khurshid , mouna mohan singh, Pappu, sonia….
nice article….tumba mechhuge aythu…..
good article sir. but they (congress) can’t understand real fact or if understand they can’t told. they want only Minorities votes. real impotent all congress leaders only.
Simhaji all bloody congress fed up bastards are frustrated of the popularity of namoji…..even these kurshid shinde aiyyer etc can eat her shit and drink her u…ne….I feel ashamed of them
Prathap why so much explanation? Khangress does not have a single person who can call himself a MAN before Sonia! it only goes to say whole of Khangress is A BUNCH OF EAUNCH’S
All these Eaunch’s know how it is done but they cannot do themselves !! What a Pity
Dear Sir ,
I am a great fan of yours but the fire in your articles seems to loose its charm which was seen earlier … i feel articles written by prakash konamaney has larger or broader aspect compared to your artilces … But any way your the best and a good trend setter
Nice article Pratap. Keep writing.
Wow.. Etige eduretu pratap sir, sabbyate illade matanaaduva kurshid avare dodda napumsaka sir…..
kangress adu.. kurshid obbaaa ..meer sadik avarbbgee yallarigu gottu
Very gooood reply to Salman kurshid
Super guru but napunshakakinta shandaru annnu tiddare innu chennagittu yakendare ella iddu illadavaru e namma congresigaru cenral onde saaku naayi state tumba bidi naayinayigalive
pratap sir e congress nalli swalpa jana bittu elru napumsakare…….
a holasu party pak,bangla,italy gagi dudiyuttide…..inna modi bandmele mugitu awra ata…
Brother don’t say anything about congress
madam will get angry…!!!!
pappu cant dance **** !
One Vote
One Hope
One Modiji
Support to Modiji,
ivanobba mindriguttida soole maga prathap sir
Sir!
Please find here an attempt to translate your article into English
http://imoptentantinationals.blogspot.com/2014/03/mr-sullyman-khurshid-is-narendra-modi.html
Really use ful msg to all indian patriots
You are the Man Mr.Pratap… applause…
Plz write about veera savarkar
Kudos nice article will be counting more on you
NAPUMSAKARIGU MATHADANADA HAKKU KODONA AGA THANAGIYE KURSHID VIRUDDA AVARU TIRUGI BIDDE BILUTHARE. ESTADARU NAPUMSAKARADDE PANGADA THUMBA DODDADIDE HAGU AVARU NAMMANTHE MANUSHYARU.
really super…