*/
Date : 12-06-2011 | 71 Comments. | Read More
ಅವರು ಕುಸುರಿ ಕೆಲಸ ಬಿಟ್ಟು ಬಹಳ ಸರಳವಾಗಿ ಚಿತ್ರಿಸುತ್ತಾ ಹೋದರು. ಎಲ್ಲರಿಗಿಂತ ವಿಭಿನ್ನ ಎನಿಸುವಂತೆ ಚಿತ್ರಿಸಿದರು. ಏನೋ ಹೊಸತನ ನೀಡಿದರು. ಆ ಕಾರಣಕ್ಕಾಗಿಯೇ ಎಲ್ಲರ ಗಮನ ಸೆಳೆದರು. ಮಾಡರ್ನ್ ಆರ್ಟ್್ನ ಈ ಪರ್ವದಲ್ಲಿ ಇಂಡಿಯನ್ ಆರ್ಟ್್ಗೆ ವಿಶ್ವಮನ್ನಣೆ ತಂದು ಕೊಟ್ಟರು. ಭಾರತೀಯ ಕಲಾವಿದರ ಚಿತ್ರಗಳೂ ಲಕ್ಷಾಂತರ ರೂ.ಗಳಿಗೆ ಮಾರಾಟವಾಗಬಲ್ಲವು ಎಂಬುದನ್ನು ತೋರಿಸಿಕೊಟ್ಟರು. ಚಿತ್ರಗಳಿಗೆ ಬಣ್ಣಗಳಿಂದ ಜೀವ ತುಂಬಿದರು. ಆ ಬಣ್ಣಗಳಲ್ಲೇ ಭಾವನೆಯನ್ನು ವ್ಯಕ್ತಪಡಿಸಲು ಹೊರಟರು. ಹಾಗಿದ್ದರೂ ಈ ದೇಶ, ಅದರ ನೆಲ, ಜಲ, ಕಣ ಕಣಗಳಲ್ಲೂ ದೈವತ್ವವನ್ನು […]
Date : 05-06-2011 | 53 Comments. | Read More
1. ಕಪ್ಪು ಹಣ ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬೇಕು. 2. ಭ್ರಷ್ಟ ಕೋಟ್ಯಧಿಪತಿಗಳಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬೇಕು. 3. ಭಾರತೀಯರು ವಿದೇಶಗಳಲ್ಲಿ ಹೊಂದಿರುವ ಖಾತೆ (ಅಕೌಂಟ್)ಗಳ ವಿವರ ನೀಡಬೇಕು. 4. ಕಪ್ಪು ಹಣ ಸಂಗ್ರಹಣೆಗೆ ಕಾರಣವಾಗಿರುವ 500/ 1000 ನೋಟುಗಳನ್ನು ಹಿಂತೆಗೆದುಕೊಳ್ಳಬೇಕು. 5. ಪ್ರಧಾನಿಯನ್ನು ಜನರೇ ನೇರವಾಗಿ ಆಯ್ಕೆ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು.
Date : 27-05-2011 | 15 Comments. | Read More
ಇಂದು ರಾತ್ರಿ ಗಂಟೆ 10.30 ಆಗುವುದನ್ನು ಅದೆಷ್ಟು ಮಂದಿ ನಿರೀಕ್ಷಿಸುತ್ತಾ ಕುಳಿತಿದ್ದಾರೆಂಬುದನ್ನು ಅಂದಾಜು ಮಾಡುವುದಕ್ಕೂ ಸಾಧ್ಯವಿಲ್ಲ. ಅದೆಷ್ಟು ಜನ ಉಸಿರು ಬಿಗಿಹಿಡಿದುಕೊಂಡು ಆ ಕ್ಷಣಕ್ಕಾಗಿ ಕಾಯುತ್ತಿದ್ದಾರೋ, ಅದೆಷ್ಟು ಮಂದಿ ತಮ್ಮ ನೆಚ್ಚಿನ ಕ್ಲಬ್ ಗೇ ವಿಜಯ ಪ್ರಾಪ್ತಿಯಾಗಲಿ ಎಂದು ದೇವರಿಗೆ ಮೊರೆಯಿಡುತ್ತಿದ್ದಾರೋ, ಅದೆಷ್ಟು ಜೀವಗಳಲ್ಲಿ ಇದಾಗಲೇ ತುಡಿತ, ತುಮುಲ ಆರಂಭವಾಗಿದೆಯೋ ಗೊತ್ತಿಲ್ಲ. ಇಂದು ರಾತ್ರಿ ಜಗತ್ತಿನ ಫುಟ್ಬಾಲ್ ಪ್ರೇಮಿಗಳೆಲ್ಲರ ನೋಟ ಮಾತ್ರ ಇಂಗ್ಲೆಂಡ್್ನ ವೆಂಬ್ಲಿಯ ಮೇಲೆ ನೆಟ್ಟಿರುತ್ತದೆ. ಇಷ್ಟಕ್ಕೂ ಚಾಂಪಿಯನ್ಸ್ ಲೀಗ್ ಫೈನಲ್್ನಲ್ಲಿ ಮುಖಾಮುಖಿಯಾಗುತ್ತಿರುವುದು ಬ್ರಿಟನ್ ನ […]
Date : 27-05-2011 | 48 Comments. | Read More
ಆ ವೀರ ಕಲಿಯನ್ನು ನೆನಪಿಸಿಕೊಂಡಾಗಲೆಲ್ಲ ದಿವಂಗತ ವಿದ್ಯಾನಂದ ಶೆಣೈ ಕಣ್ಣಮುಂದೆ ಬರುತ್ತಾರೆ. ಆರು ವರ್ಷಗಳ ಹಿಂದೆ ಅವರು ಮಾಡಿದ್ದ ಭಾಷಣದ ಝೇಂಕಾರ ಕಿವಿಯಲ್ಲಿ ಇನ್ನೂ ಹಸಿಯಾಗಿಯೇ ಇದೆ. “ಅವತ್ತು ಛಾಫೇಕರ್ ಸಹೋದರರು ಬ್ರಿಟಿಷ್ ಅಧಿಕಾರಿ ರಾಂಡ್ ನನ್ನು ಹತ್ಯೆ ಮಾಡಿದರು. ಅದು ಬ್ರಿಟಿಷರಿಗೆ ತಿಳಿದುಹೋಯಿತು. ಬಂಧಿಸಿ ವಿಚಾರಣೆಗೆ ಗುರಿಪಡಿಸಿದ ಬ್ರಿಟಿಷರು ಛಾಫೇಕರ್ ಸಹೋದರರ ಮೇಲೆ “ಕೊಲೆ’ ಆರೋಪ ಹೊರಿಸಿದರು. ಕೊನೆಗೆ ಗಲ್ಲಿಗೂ ಏರಿಸಿದರು. ಇದನ್ನೆಲ್ಲಾ ನೋಡಿದ 14 ವರ್ಷದ ಬಾಲಕ ವಿನಾಯಕ ದಾಮೋದರ ಸಾವರ್ಕರ್ ಮನಸ್ಸಿಗೆ ಬಹಳ […]
Date : 15-05-2011 | 28 Comments. | Read More
ಇದು ಎರಡು ಬೀದಿ ನಾಯಿಗಳ ಕಥೆ. ಒಂದು ಭಾರತದ್ದು, ಮತ್ತೊಂದು ಚೀನಾದ್ದು. ಭಾರತದ ನಾಯಿ ಚೀನಾಕ್ಕೆ ಹೊರಟಿತ್ತು. ಚೀನಾದ ನಾಯಿ ಭಾರತದತ್ತ ಹೊರಟಿತ್ತು. ಹೀಗೆ ದೇಶಬಿಟ್ಟು ಹೊರಟಿದ್ದ ಆ ಎರಡೂ ನಾಯಿಗಳು ಭಾರತ-ಚೀನಾ ಗಡಿಯಲ್ಲಿ ಮುಖಾಮುಖಿಯಾದವು. ಭಾರತದ ನಾಯಿ ಸೊರಗಿ, ಬಡಕಲಾಗಿ ಹೋಗಿತ್ತು. ಹೊಟ್ಟೆ ಬೆನ್ನಿಗೆ ಅಂಟಿಕೊಂಡಿತ್ತು. ಇತ್ತ ಮೈ ಕೈ ತುಂಬಿಕೊಂಡು ದಷ್ಟ-ಪುಷ್ಟವಾಗಿದ್ದ ಚೀನಿ ನಾಯಿ, “ಏಕೆ ಚೀನಾಕ್ಕೆ ಹೊರಟಿದ್ದೀಯಾ?’ ಅಂತ ಆಶ್ಚರ್ಯದಿಂದ ಭಾರತದ ನಾಯಿಯನ್ನು ಪ್ರಶ್ನಿಸುತ್ತದೆ. “ಅಯ್ಯೋ ಭಾರತದಲ್ಲಿ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲ. ಆಹಾರ […]
Date : 09-05-2011 | 45 Comments. | Read More
ಆ ಘಟನೆ ಮತ್ತೆ ನೆನಪಾಗುತ್ತಿದೆ. ಅಂದು 1976, ಜೂನ್ 27. ಮಧ್ಯಾಹ್ನ 12.30ಕ್ಕೆ ಆಗಸಕ್ಕೆ ಚಿಮ್ಮಿದ ಕೆಲವೇ ಕ್ಷಣಗಳಲ್ಲಿ ಏರ್ ಫ್ರಾನ್ಸ್್ನ ‘ಎಎಫ್-139’ ವಿಮಾನವನ್ನು ನಾಲ್ವರು ಭಯೋತ್ಪಾದಕರು ಅಪಹರಣ ಮಾಡಿದ್ದಾರೆ ಎಂಬ ಸುದ್ದಿ ತಿಳಿಯಿತು. ಆ ವಿಮಾನ ‘ಲಾಡ್ ಏರ್್ಫೋರ್ಟ್್’ನಲ್ಲಿ ಇಳಿಯಬಹುದು ಎಂದು ಭಾವಿಸಿದ ಇಸ್ರೇಲಿನ ಕಮಾಂಡೋಗಳು ವಿಮಾನ ನಿಲ್ದಾಣವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಲು ಸನ್ನದ್ಧರಾಗಿ ನಿಂತರು. ಲಾಡ್ ಬದಲು ಬೆಂಗಾಝಿ ಏರ್್ಫೋರ್ಟ್್ನಲ್ಲಿ ತಾತ್ಕಾಲಿಕವಾಗಿ ವಿಮಾನವನ್ನು ಕೆಳಗಿಳಿಸಿದ ಭಯೋತ್ಪಾದಕರು ಆರೂವರೆ ಗಂಟೆಯ ಬಳಿಕ ಮತ್ತೆ ಟೇಕ್ ಆಫ್ […]
Date : 30-04-2011 | 27 Comments. | Read More
“ಇದು ಒಬ್ಬ ವ್ಯಕ್ತಿಯ ಪಿತೂರಿಯಲ್ಲ. ಸರಕಾರ ಹಾಗೂ ಕಾಂಗ್ರೆಸ್ ಪಕ್ಷದ ಒಳಗಿರುವ ಅನೇಕರು ಭಾಗಿಯಾಗಿದ್ದಾರೆ’ ಎಂದಿದ್ದಾರೆ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್. ತಮ್ಮ ವಿರುದ್ಧ ಹೊರಬಿದ್ದಿರುವ ಸಿ.ಡಿ.ಯ ಹಿಂದಿರುವ ಕಾಣದ “ಕೈ’ಗಳ ಬಗ್ಗೆ ಹಾಗೆ ಹೇಳಿದ್ದಾರೆ. 2008ರಲ್ಲಿ ನಾಗರೀಕ ಅಣು ಸಹಕಾರ ಒಪ್ಪಂದ ಸಲುವಾಗಿ ಕಮ್ಯುನಿಸ್ಟರು ಬೆಂಬಲ ವಾಪಸ್ ತೆಗೆದುಕೊಂಡಾಗ ಕಾಂಗ್ರೆಸ್ ಸರಕಾರವನ್ನು ಉಳಿಸಿದ್ದೇ ಅಮರ್ ಸಿಂಗ್. ಅಂತಹ ವ್ಯಕ್ತಿ ಪ್ರಸ್ತುತ ಹೊರಹಾಕಿರುವ ಸಿ.ಡಿ.ಯ ಹಿಂದೆ ಕಾಂಗ್ರೆಸ್ ಕೈವಾಡ ಇರುವುದನ್ನ ಯಾರೂ ತಳ್ಳಿಹಾಕಲು ಸಾಧ್ಯವಿಲ್ಲ. ಇಷ್ಟಕ್ಕೂ […]
Date : 30-04-2011 | 68 Comments. | Read More
1923ರಲ್ಲಿ ಆಂಧ್ರದ ಕಾಕಿನಾಡದಲ್ಲಿ ಕಾಂಗ್ರೆಸ್್ನ ವಾರ್ಷಿಕ ಅಧಿವೇಶನಆಯೋಜನೆಯಾಗಿತ್ತು. ಅವು ‘ವಂದೇ ಮಾತರಂ’ನೊಂದಿಗೆ ಆರಂಭವಾಗುವುದು ಅದಾಗಲೇ ಸಂಪ್ರದಾಯವಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರ ಪ್ರೇರಕ ಶಕ್ತಿಯಾಗಿದ್ದ ಆ ಗೀತೆಯನ್ನು ಹಾಡಬೇಕೆಂದು ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್್ಗೆ ಆಹ್ವಾನ ಕಳುಹಿಸಿಕೊಡಲಾಗಿತ್ತು. ಭಾರತೀಯ ಶಾಸ್ತ್ರೀಯ ಸಂಗೀತ ಕಲಿಸಲೆಂದೇ ಗಂಧರ್ವ ಮಹಾವಿದ್ಯಾಲಯ ರಚಿಸಿದ ಮಹಾನುಭಾವ ಅವರು. ಮಹಾತ್ಮ ಗಾಂಧೀಜಿಯವರ ಅಚ್ಚುಮೆಚ್ಚಿನ ‘ರಘುಪತಿ ರಾಘವ ರಾಜಾರಾಂ, ಪತೀತ ಪಾವನ ಸೀತಾರಾಂ’ ಭಜನೆಗೂ ಸಂಗೀತ ಸಂಯೋಜನೆ ಮಾಡಿದ್ದವರು ಅವರೇ. ಸ್ವಾತಂತ್ರ್ಯ ಚಳವಳಿಯ ನೇರ ಸಂಪರ್ಕ ಹೊಂದಿದ್ದ ಅವರು ಲೋಕಮಾನ್ಯ […]
Date : 23-04-2011 | 109 Comments. | Read More
ಖಂಡಿತ ಆ ಬಗ್ಗೆ ಅನುಮಾನಗಳು ಕಾಡುತ್ತಿವೆ. ಇತರರ ಯಶಸ್ಸನ್ನು ಸಹಿಸುವ ಗುಣ ನೆಹರು ಕುಟುಂಬದ ರಕ್ತದಲ್ಲೇ ಇಲ್ಲ. ಭಾರತ ರಾಷ್ಟ್ರೀಯ ಸೇನೆಯನ್ನು (INA) ಕಟ್ಟಿದ್ದ ಸುಭಾಷ್್ಚಂದ್ರ ಬೋಸ್, ಬರ್ಮಾ ಮೂಲಕ ಬ್ರಿಟಿಷರ ಮೇಲೆ ದಾಳಿ ಮಾಡುವುದಾಗಿ 1944ರಲ್ಲಿ ರೇಡಿಯೋ ಭಾಷಣ ಮಾಡಿದಾಗ “ಸುಭಾಷ್ ವಿರುದ್ಧ ನಾನೇ ಖಡ್ಗ ಹಿಡಿದು ಹೋರಾಡುತ್ತೇನೆ’ ಎಂದು ಸಾರ್ವಜನಿಕವಾಗಿ ಹೇಳಿದ್ದ ವ್ಯಕ್ತಿ ಜವಾಹರಲಾಲ್ ನೆಹರು. ಅಧಿಕಾರಕ್ಕಾಗಿ ಯಾವ ಮಟ್ಟಕ್ಕೂ ಇಳಿಯುವ ಸೂಚನೆಯನ್ನು ಸ್ವಾತಂತ್ರ್ಯ ಪೂರ್ವದಲ್ಲೇ ನೀಡಿದ್ದರು. ಅಂತಹ ನೆಹರು ಕುಟುಂಬ ಇಡೀ ದೇಶವಾಸಿಗಳ […]
Date : 16-04-2011 | 27 Comments. | Read More
ಇಂಥದ್ದೊಂದು ಪ್ರಶ್ನೆ ನಿಮ್ಮನ್ನೂ ಕಾಡಿರಬಹುದು! ಒಬ್ಬ ಅಣ್ಣಾ ಹಜಾರೆ ಲೋಕಪಾಲ್ ಮಸೂದೆಯನ್ನು ಜಾರಿಗೆ ತರಲೇಬೇಕೆಂದು ಉಪವಾಸಕ್ಕೆ ಕುಳಿತ ಮಾತ್ರಕ್ಕೆ ಇಡೀ ದೇಶವೇ ಅವರ ಹಿಂದೆ ಟೊಂಕ ಕಟ್ಟಿ ನಿಂತಿದ್ದೇಕೆ? ಸ್ವತಃ ಅಣ್ಣಾ ಅವರಿಗೇ ಅಶ್ಚರ್ಯವಾಗುವಂಥ ರೀತಿಯಲ್ಲಿ ದೇಶವಾಸಿಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಲು ಕಾರಣವಾದ ಅಂಶಗಳಾದರೂ ಯಾವುವು? ಅವರ ಉಪವಾಸಕ್ಕೆ ಇಡೀ ದೇಶದ ಸಾಕ್ಷಿಪ್ರಜ್ಞೆಯನ್ನು ಬಡಿದೆಬ್ಬಿಸುವ ಶಕ್ತಿ ಬಂದಿದ್ದಾದರೂ ಹೇಗೆ? ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರಂತಹ ಮೇರು ನಾಯಕ ಕರೆಕೊಟ್ಟ ಕಾರಣಕ್ಕೆ ವಿದ್ಯಾರ್ಥಿಗಳು ಶಾಲೆ-ಕಾಲೇಜು ತೊರೆದು ಹೋರಾಟಕ್ಕೆ […]