Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Others > ಕಾಂಗ್ರೆಸ್-ಶಾಂತಿಭೂಷಣ್ ಮಧ್ಯೆ ಹಳೆ ವೈಷಮ್ಯವೇನಾದರೂ ಇದೆಯೇ?

ಕಾಂಗ್ರೆಸ್-ಶಾಂತಿಭೂಷಣ್ ಮಧ್ಯೆ ಹಳೆ ವೈಷಮ್ಯವೇನಾದರೂ ಇದೆಯೇ?

 “ಇದು ಒಬ್ಬ ವ್ಯಕ್ತಿಯ ಪಿತೂರಿಯಲ್ಲ. ಸರಕಾರ ಹಾಗೂ ಕಾಂಗ್ರೆಸ್ ಪಕ್ಷದ ಒಳಗಿರುವ ಅನೇಕರು ಭಾಗಿಯಾಗಿದ್ದಾರೆ’ ಎಂದಿದ್ದಾರೆ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್. ತಮ್ಮ ವಿರುದ್ಧ ಹೊರಬಿದ್ದಿರುವ ಸಿ.ಡಿ.ಯ ಹಿಂದಿರುವ ಕಾಣದ  “ಕೈ’ಗಳ ಬಗ್ಗೆ ಹಾಗೆ ಹೇಳಿದ್ದಾರೆ. 2008ರಲ್ಲಿ ನಾಗರೀಕ ಅಣು ಸಹಕಾರ ಒಪ್ಪಂದ ಸಲುವಾಗಿ ಕಮ್ಯುನಿಸ್ಟರು ಬೆಂಬಲ ವಾಪಸ್ ತೆಗೆದುಕೊಂಡಾಗ ಕಾಂಗ್ರೆಸ್ ಸರಕಾರವನ್ನು ಉಳಿಸಿದ್ದೇ ಅಮರ್ ಸಿಂಗ್. ಅಂತಹ ವ್ಯಕ್ತಿ ಪ್ರಸ್ತುತ ಹೊರಹಾಕಿರುವ ಸಿ.ಡಿ.ಯ ಹಿಂದೆ ಕಾಂಗ್ರೆಸ್ ಕೈವಾಡ ಇರುವುದನ್ನ ಯಾರೂ ತಳ್ಳಿಹಾಕಲು ಸಾಧ್ಯವಿಲ್ಲ. ಇಷ್ಟಕ್ಕೂ ಕಾಂಗ್ರೆಸ್ ಏಕೆ ಶಾಂತಿ ಭೂಷಣ್ ಅವರ ಚಾರಿತ್ರ್ಯವಧೆಗಿಳಿದಿದೆ ಕಾಂಗ್ರೆಸ್್ಗೂ ಶಾಂತಿ ಭೂಷಣ್್ಗೂ ಏನಾದರೂ ಹಳೇ ವೈಷಮ್ಯವಿದೆಯೇ?

1971ರ ಲೋಕಸಭೆ ಚುನಾವಣೆಯನ್ನು ನೆನಪಿಸಿಕೊಳ್ಳಿ.

ಉತ್ತರ ಪ್ರದೇಶದ ರಾಯ್್ಬರೇಲಿಯಿಂದ ಸ್ಪರ್ಧಿಸಿದ್ದ ಪ್ರಧಾನಿ ಇಂದಿರಾ ಗಾಂಧಿಯವರು ಜನತಾ ಪಕ್ಷದ ರಾಜ್್ನಾರಾಯಣ್ ಅವರನ್ನು ಸೋಲಿಸಿದ್ದರು. ಆದರೆ ಚುನಾವಣಾ ಅಕ್ರಮದ ಅರೋಪ ಹೊರಿಸಿ ರಾಜ್್ನಾರಾಯಣ್ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದರು. ಅಂದು ರಾಜ್್ನಾರಾಯಣ್ ಪರ ವಾದಕ್ಕಿಳಿದ ವಕೀಲ ಮತ್ತಾರೂ ಅಲ್ಲ ಶಾಂತಿ ಭೂಷಣ್. ಚುನಾವಣೆ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು 1951ರ ಪ್ರಜಾಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಶಾಂತಿ ಭೂಷಣ್, ಒಟ್ಟು 7 ದುರುಪಯೋಗಗಳನ್ನು ಪಟ್ಟಿ ಮಾಡಿದರು. 1. ಪ್ರಚಾರಕ್ಕೆ ವಾಯುಪಡೆಯ ವಿಮಾನಗಳು ಹಾಗೂ ಹೆಲಿಕಾಪ್ಟರ್್ಗಳ ದುರ್ಬಳಕೆ. 2. ಮತದಾರರಿಗೆ ಬಟ್ಟೆ ಮತ್ತು ಮದ್ಯ ಹಂಚಿಕೆ. 3. ಚುನಾವಣೆಗೆ ಹಸು ಮತ್ತು ಕರು ಮುಂತಾದ ಧಾರ್ಮಿಕ ಸಂಕೇತಗಳ ಬಳಕೆ. 4. ಮತಗಟ್ಟೆಗೆ ಆಗಮಿಸಲು ಮತದಾರರಿಗೆ ಉಚಿತ ವಾಹನ ವ್ಯವಸ್ಥೆ. 5. ನಿಗದಿಗಿಂತ ಹೆಚ್ಚು ಚುನಾವಣಾ ವೆಚ್ಚ. 6. ಜಿಲ್ಲಾ ಮ್ಯಾಜಿಸ್ಟ್ರೇಟ್, ಎಸ್ಪಿ, ಎಕ್ಸಿಕ್ಯುಟಿವ್ ಎಂಜಿನಿಯರ್ ಮುಂತಾದ ಸರಕಾರಿ ಅಧಿಕಾರಿಗಳನ್ನು ಪ್ರಚಾರ ಕಾರ್ಯಕ್ಕೆ ಬಳಕೆ. 7. ಭಾರತ ಸರಕಾರದ ಸೇವೆಯಲ್ಲಿದ್ದ ಗೆಝೆಟೆಡ್ ಅಧಿಕಾರಿ ಯಶ್ಪಾಲ್ ಕಪೂರ್ ಅವರನ್ನು ತಮ್ಮ ಚುನಾವಣಾ ಅನುಕೂಲಕ್ಕೆ ಉಪಯೋಗ.

ಇವುಗಳಲ್ಲಿ ಕೊನೆಯ ಎರಡು ಅರೋಪಗಳನ್ನು ಸಾಬೀತಾದ ಚುನಾವಣಾ ಅಕ್ರಮಗಳೆಂದು ಪರಿಗಣಿಸಿದ ನ್ಯಾಯಮೂರ್ತಿ ಜಗ್ಮೋಹನ್್ಲಾಲ್ ಸಿನ್ಹಾ, 1975, ಜೂನ್ 12ರಂದು ನೀಡಿದ ತೀರ್ಪಿನಲ್ಲಿ 1971ರಲ್ಲಿ ಇಂದಿರಾ ಗಾಂಧಿಯವರು ಲೋಕಸಭೆಗೆ ಆಯ್ಕೆಯಾಗಿದ್ದನ್ನು ಅಸಿಂಧು ಎಂದು ಘೋಷಿಸಿದರು. ಜತೆಗೆ 6 ವರ್ಷ ವಿಧಾನಸಭೆ ಅಥವಾ ಲೋಕಸಭೆ ಈ ಯಾವ ಶಾಸನಸಭೆಗಳಿಗೂ ಸ್ಪರ್ಧಿಸದಂತೆ ನಿರ್ಬಂಧ ಹೇರಿದರು. ದಿಕ್ಕೆಟ್ಟ ಇಂದಿರಾ ಗಾಂಧಿ 1975, ಜೂನ್ 25ರಂದು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದರು. ಇಂತಹ ಸ್ಥಿತಿಗೆ ತಂದ ಶಾಂತಿ ಭೂಷಣ್ ಅವರನ್ನು ನೆಹರು ಕುಟುಂಬ ಮರೆಯುವುದಕ್ಕಾಗಲಿ, ಮನ್ನಿಸುವುದಕ್ಕಾಗಲಿ ಸಾಧ್ಯವೇ?

ಇಷ್ಟು ಮಾತ್ರವಲ್ಲ, 1990ರಿಂದ 2007ರವರೆಗೂ ಅಂದರೆ ನ್ಯಾಯಮೂರ್ತಿ ರಂಗನಾಥ ಮಿಶ್ರಾರಿಂದ ವೈ.ಕೆ. ಸಭರ್್ವಾಲ್ ವರೆಗೂ ನೇಮಕವಾದ ಒಟ್ಟು 16 ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳಲ್ಲಿ 8 ಮಂದಿ ಭ್ರಷ್ಟರು ಎಂದು 2010, ಸೆಪ್ಟೆಂಬರ್್ನಲ್ಲಿ ತೆಹೆಲ್ಕಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಗಂಭೀರ ಅರೋಪ ಮಾಡಿದರು. ಯಾರ್ಯಾರು ಭ್ರಷ್ಟರು ಎಂಬುದನ್ನು ಪಟ್ಟಿ ಮಾಡಿದ ಲಕೋಟೆಯನ್ನು ಸುಪ್ರೀಂ ಕೋರ್ಟ್್ಗೂ ಸಲ್ಲಿಸಿದ್ದರು. ಅಂತಹ ಭ್ರಷ್ಟ ನ್ಯಾಯಮೂರ್ತಿಗಳನ್ನು ನೇಮಕ ಮಾಡಿದ್ದೇ ಕಾಂಗ್ರೆಸ್ ಎಂಬುದನ್ನು ಪರೋಕ್ಷವಾಗಿ ಬಯಲಿಗೆಳೆದಿದ್ದರು. ಹಾಗಿರುವಾಗ ಕಾಂಗ್ರೆಸ್ ಶಾಂತಿ ಭೂಷಣ್್ರನ್ನು ಸುಮ್ಮನೆ ಬಿಟ್ಟೀತೆ? 2ಜಿ ಹಗರಣಕ್ಕೆ ಸಂಬಂಧಿಸಿದ ಟೆಲಿಫೋನ್ ಕರೆಗಳನ್ನು (ರಾಡಿಯಾ ಟೇಪ್) ಗೌಪ್ಯವಾಗಿ ರೆಕಾರ್ಡ್ ಮಾಡಿದ್ದು ರಿಲಾಯನ್ಸ್ ಕಂಪನಿ. 2006-2007ರ ನಡುವೆ ಸಂಬಂಧಿಸಿದ ನೂರಾರು ಕರೆಗಳನ್ನು ಅದು ರೆಕಾರ್ಡ್ ಮಾಡಿತ್ತು. ಸಮಾಜವಾದಿ ಪಕ್ಷದಿಂದ ಹೊರದಬ್ಬಲ್ಪಟ್ಟಿರುವ ಹಾಗೂ ಸಂದರ್ಭ ಸಿಕ್ಕಾಗಲೆಲ್ಲ ಕಾಂಗ್ರೆಸ್ ಜತೆ ಕೈಜೋಡಿಸುವ ಅಮರ್ ಸಿಂಗ್ ಇಂಥದ್ದೇ ಸಂಪರ್ಕವನ್ನು ಬಳಸಿಕೊಂಡು ಶಾಂತಿ ಭೂಷಣ್ ಅವರ ಕರೆಯೊಂದನ್ನು ಸಮಯ, ಸಂದರ್ಭ, ಸನ್ನಿವೇಶಗಳನ್ನು ತಿರುಚಿ ಸಿ.ಡಿ. ಮಾಡಿ ಹೊರಹಾಕಿದ್ದಾರೆ. ಸತ್ಯಾಸತ್ಯತೆ ಇನ್ನೂ ಸಾಬೀತಾಗಬೇಕು. ಅದರೆ ರಾಜಕೀಯ ಪುನರ್ವಸತಿಗಾಗಿ ತಡಕಾಡುತ್ತಿರುವ ಅಮರ್ ಸಿಂಗ್ ಹಾಗೂ ಶಾಂತಿ ಭೂಷಣ್ ಅವರನ್ನು ಹಣಿಯಲು ಹವಣಿಸುತ್ತಿದ್ದ ಕಾಂಗ್ರೆಸ್ ಪರಸ್ಪರ ಈಗ ಕೈಜೋಡಿಸಿವೆ ಅಷ್ಟೇ.

27 Responses to “ಕಾಂಗ್ರೆಸ್-ಶಾಂತಿಭೂಷಣ್ ಮಧ್ಯೆ ಹಳೆ ವೈಷಮ್ಯವೇನಾದರೂ ಇದೆಯೇ?”

 1. ತುಂಬಾ ಧನ್ಯವಾದಗಳು ಪ್ರತಾಪ ಸಿಂಹ ಇಷ್ಟೊಂದು ಸವಿಸ್ತಾರವಾದ ಮಾಹಿತಿ ನೀಡಿ ಅವರ ಚಾರಿತ್ರ್ಯ ಏನು ಎಂಬುದು ನಮಗೆ ತಿಳಿಸಿದ್ದಿರಿ.

 2. Raghunandan says:

  Very well said prathap..
  you have given info regarding parts which were not complete and clarified my unclear mind 🙂

 3. Nice Facts to reveal with…

 4. Madhav Kulkarni says:

  Hello sir,

  thanks for providing facts nd figures..,
  when congress mentality will be changed?? Fed up with its behaviour.

  regards,

  Madhav

 5. Shivappa says:

  Fantastic………………no wonder congress is bloody corrupt dogs!!!

 6. paresh says:

  the article was good a small correction the janata party came to existence in 1977 so during 1971 election raj narayan was not a janata candidate

 7. raj says:

  its good that you are writing more often now….one article about digvijay singh…please…..

 8. rajanna says:

  very good article about shanthibushan who is the great lawyre in india

 9. Santoshkuamr says:

  Superrrrrrrrr… very informative.

 10. impana` says:

  see prathap how can we atttack on pakistan becas we love our neighbours as we love our self!!!!!!!!!

 11. Anasuya M.R. says:

  very good article, which shows the ability of shanthibushan and at the same time cunning nature of Nehru famly. Thank you.

 12. ash says:

  Hey Pratap Sir,

  Idella nimge heg gothagathe???? HATSSS OF 2 UUUU

 13. Vishwanatha says:

  Its really a very good inforamation & today’s generation dont know what happened at the time of national emergency

 14. ananth says:

  1 article about dog vijay(Digvijay) please…..

 15. pramod rai ,kadaba says:

  Hiiii
  very good article.

  Thanking you,

 16. Great information.
  Thank u sir:-)

 17. sudeesh says:

  ಸ್ವಹಿತಾಸಕ್ತಿಗಾಗಿ ದೆಶಕ್ಕೆ ತುರ್ತುಪರಿಸ್ತಿತಿ

 18. guruprasad badiger says:

  nice sir it is true and also publish article on rajivdixit please

 19. guruprasad badiger says:

  nice sir it is true and also publish article on rajivdixit please

 20. santhosh shetty says:

  Fantastic prathap sir….very good article.

 21. Sandeep K.V says:

  Great work by u sir.Keep Enlightening the people about the wrong doings of political people.

 22. ravi G says:

  Hai i’m Ravi i love to read ur articles . One of my desire is to see the great person Narendra modi as a prime minister of India. You are a great writer. i think u r the fan of Narendra damodar modi . Why cant u exhibit our opinions through ur articles to see modi as pm of India.

 23. murali says:

  tumba thanks sir shantibushan yaru antha telece kottedake & also congress ketta budde vevaresedakke

 24. bshankaragoud says:

  thank you sir for given information

 25. Channu says:

  nice Pratap……

 26. suguna.s says:

  Dear Pratap,

  Im writing to you in reply of your Saturday article on FDI in retail. I have been following you from years, but i didnt understand why should we oppose FDI in Retail your justifications are valid. But tell me one thing being afraid of the threats should we not go for better future. I see a positive future sorry i can not agree with you in this article.

 27. basavaraj says:

  great informauion