Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇಂದು ರಾತ್ರಿ ವೆಂಬ್ಲಿಯಲ್ಲಿ ನಡೆಯಲಿದೆ ಕಾಳಗ!

ಇಂದು ರಾತ್ರಿ ವೆಂಬ್ಲಿಯಲ್ಲಿ ನಡೆಯಲಿದೆ ಕಾಳಗ!

ಇಂದು ರಾತ್ರಿ ಗಂಟೆ 10.30 ಆಗುವುದನ್ನು ಅದೆಷ್ಟು ಮಂದಿ ನಿರೀಕ್ಷಿಸುತ್ತಾ ಕುಳಿತಿದ್ದಾರೆಂಬುದನ್ನು ಅಂದಾಜು ಮಾಡುವುದಕ್ಕೂ ಸಾಧ್ಯವಿಲ್ಲ. ಅದೆಷ್ಟು ಜನ ಉಸಿರು ಬಿಗಿಹಿಡಿದುಕೊಂಡು ಆ ಕ್ಷಣಕ್ಕಾಗಿ ಕಾಯುತ್ತಿದ್ದಾರೋ, ಅದೆಷ್ಟು ಮಂದಿ ತಮ್ಮ ನೆಚ್ಚಿನ ಕ್ಲಬ್ ಗೇ ವಿಜಯ ಪ್ರಾಪ್ತಿಯಾಗಲಿ ಎಂದು ದೇವರಿಗೆ ಮೊರೆಯಿಡುತ್ತಿದ್ದಾರೋ, ಅದೆಷ್ಟು ಜೀವಗಳಲ್ಲಿ ಇದಾಗಲೇ ತುಡಿತ, ತುಮುಲ ಆರಂಭವಾಗಿದೆಯೋ ಗೊತ್ತಿಲ್ಲ. ಇಂದು ರಾತ್ರಿ ಜಗತ್ತಿನ ಫುಟ್ಬಾಲ್ ಪ್ರೇಮಿಗಳೆಲ್ಲರ ನೋಟ ಮಾತ್ರ ಇಂಗ್ಲೆಂಡ್್ನ ವೆಂಬ್ಲಿಯ ಮೇಲೆ ನೆಟ್ಟಿರುತ್ತದೆ. ಇಷ್ಟಕ್ಕೂ ಚಾಂಪಿಯನ್ಸ್ ಲೀಗ್ ಫೈನಲ್್ನಲ್ಲಿ ಮುಖಾಮುಖಿಯಾಗುತ್ತಿರುವುದು ಬ್ರಿಟನ್ ನ ವಿಶ್ವವಿಖ್ಯಾತ ಫುಟ್ಬಾಲ್ ಕ್ಲಬ್ “ಮ್ಯಾಂಚೆಸ್ಟರ್ ಯುನೈಟೆಡ್ ” ಹಾಗೂ ಜಗತ್ತಿನ ಅತ್ಯಂತ ಶ್ರೀಮಂತ ಕ್ಲಬ್ ಎನಿಸಿರುವ ಸ್ಪೇನ್ ನ ರಿಯಲ್ ಮ್ಯಾಡ್ರಿಡ್ ನ ಸೊಕ್ಕು ಮುರಿದಿರುವ “ಎಫ್ ಸಿ ಬಾರ್ಸಿಲೋನಾ’!

 WOW!

ಮ್ಯಾಂಚೆಸ್ಟರ್ ಯುನೈಟೆಡ್ ನ ವೆಯ್ನ್ ರೂನಿ, ರಿಯೋ ಫರ್ಡಿನಾಂಡ್, ನೆಮನ್ಜಾ ವಿಡಿಚ್, ರೆಯಾನ್ ಗಿಗ್ಸ್, ಮೈಕೆಲ್ ಕ್ಯಾರಿಕ್, ಎಡ್ವಿನ್ ವ್ಯಾಂಡರ್ಸಾರ್, ಜೇವಿಯರ್ ಹೆರ್ನಾಂಡೆಸ್ ಒಂದೆಡೆಯಾದರೆ ಬಾರ್ಸಿಲೋನಾದ ಡೆವಿಡ್ ವಿಯಾ, ಲಯೋನೆಲ್ ಮೆಸ್ಸಿ, ಝಾವಿ, ಆಂಡ್ರೆ ಇನಿಯೆಸ್ಟಾ, ಗೆರಾರ್ಡ್ ಪಿಕೆ, ಕಾರ್ಲೋಸ್ ಪುಯೋಲ್, ವಿಕ್ಟರ್ ವಾಲ್ಡೆಝ್, ಎರಿಕ್ ಅಬಿದಾಲ್, ಪೆಡ್ರೋ ಮತ್ತೊಂದೆಡೆ. ಅಷ್ಟೇ ಅಲ್ಲ, 1986ರಿಂದ ಇರುವ ಲೆಜೆಂಡರಿ ಕೋಚ್ ಅಲೆಕ್ಸ್ ಫರ್ಗೂಸನ್ ಮ್ಯಾಂಚೆಸ್ಟರ್ ನ ಕಾರ್ಯತಂತ್ರವನ್ನು ರೂಪಿಸುತ್ತಿದ್ದರೆ, ಬಾರ್ಸಿಲೋನಾದ ಒಂದೊಂದು ನಡೆಗಳನ್ನೂ ನಿರ್ಧರಿಸುವವರು ವಿಶ್ವವಿಖ್ಯಾತ ಕೋಚ್ ಜೋಸ್ ಮರ್ಹಿನೋ ಅವರನ್ನೇ ತಂತ್ರದಲ್ಲಿ ಹಣಿದಿರುವ ಪೆಪ್ ಗಾರ್ಡಿಯೋಲಾ.

ಮಿಗಿಲಾಗಿ, ಚಾಂಪಿಯನ್ಸ್ ಲೀಗ್ ಫೈನಲ್ ಅಂದರೇನು ಸಾಮಾನ್ಯ ಸ್ಪರ್ಧೆಯೇ?

ಯುರೋಪ್ ಖಂಡದ ಅತ್ಯುನ್ನತ ಫುಟ್ಬಾಲ್ ಕ್ಲಬ್ ಗಳ ಮಧ್ಯೆ ಸ್ಪರ್ಧೆ ಏರ್ಪಡಿಸುವ ಈ ಕಪ್ 1955ರಲ್ಲಿ ಪ್ರಾರಂಭವಾದಾಗ “European Cup‘ ಎನ್ನುತ್ತಿದ್ದರು. ಈಗ “UEFA Champions League’ ಎನ್ನುತ್ತಾರೆ. ಅದನ್ನೇ ಸರಳವಾಗಿ Champions League‘ ಎಂದು ಕರೆಯುವುದು ರೂಢಿ. ವಿಶ್ವಕಪ್ ಫುಟ್ಬಾಲ್ ಬಿಟ್ಟರೆ ಅತ್ಯಂತ ಪ್ರತಿಷ್ಠಿತ ಕಪ್ ಎಂಬ ಹೆಗ್ಗಳಿಕೆ ಇದಕ್ಕಿದೆ. ದಕ್ಷಿಣ ಅಮೆರಿಕ ಸೇರಿದಂತೆ ಜಗತ್ತಿನ ಎಲ್ಲ ಭಾಗಗಳ ಪ್ರತಿಭಾನ್ವಿತ ಆಟಗಾರರು ಯುರೋಪ್  ನ ಒಂದಿಲ್ಲೊಂದು ಕ್ಲಬ್ ಗಳಲ್ಲಿ ಆಡುವುದರಿಂದ ಪ್ರತಿಭೆಯ ದೊಡ್ಡ ಪ್ರದರ್ಶನವೇ ಇಲ್ಲಿ ನಡೆಯುತ್ತದೆ. ಜುಲೈನಿಂದ ಆರಂಭವಾಗಿ ಮೇನಲ್ಲಿ ಪರ್ಯಾವಸಾನಗೊಳ್ಳುವ ಈ ಸ್ಪರ್ಧೆಯಲ್ಲಿ ಅಂತಿಮವಾಗಿ 32 ಕ್ಲಬ್ ಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಿದರೂ ಅರ್ಹತಾ ಸುತ್ತು ಹಾಗೂ ಎಲಿಮಿನೇಷನ್ ರೌಂಡ್ ಸೇರಿದರೆ 70ಕ್ಕೂ ಹೆಚ್ಚು ಕ್ಲಬ್ ಗಳು ಇದರಲ್ಲಿ ಭಾಗವಹಿಸುತ್ತವೆ. ಇಂತಹ ಕಠಿಣ ಸುತ್ತುಗಳನ್ನು ದಾಟಿ ಫೈನಲ್ ನಲ್ಲಿ ಮುಖಾಮುಖಿಯಾಗಬೇಕೆಂದರೆ ಅವಿನ್ನೆಷ್ಟು ಬಲಿಷ್ಠ ತಂಡಗಳಾಗಿರಬೇಕು?

ಖಂಡಿತ it will be a treat for your eyes!

ಮ್ಯಾಂಚೆಸ್ಟರ್ ಯುನೈಟೆಡ್ ನದ್ದು ಫಾಸ್ಟ್ ಫೇಸ್ಡ್ ಕೌಂಟರ್ ಅಟ್ಯಾಕಿಂಗ್(ತ್ವರಿತ ಪ್ರತಿದಾಳಿ) ಶೈಲಿಯಾದರೆ, ಬಾರ್ಸಿಲೋನಾದ್ದು ಬಾಲನ್ನು ಹಿಡಿದಿಟ್ಟುಕೊಂಡು ಎದುರಾಳಿಯನ್ನು ಹತಾಶಗೊಳಿಸುವ ಪೋಸೆಷನ್ ಗೇಮ್. ಮ್ಯಾಂಚೆಸ್ಟರ್್ನ ದೊಡ್ಡ ಸಾಮರ್ಥ್ಯವೆಂದರೆ ಎಂತಹ ಸನ್ನಿವೇಶಕ್ಕೂ ಹೊಂದಿಕೊಳ್ಳುವ ಅಡಾಪ್ಟೆಬಿಲಿಟಿ ಮತ್ತು ಕಾಲ-ಸನ್ನಿವೇಶಕ್ಕೆ ತಕ್ಕಂತೆ ತಂತ್ರ ರೂಪಿಸುವ ಕೋಚ್ ಅಲೆಕ್ಸ್ ಫರ್ಗೂಸನ್. ಇಪ್ಪತ್ತೈದು ವರ್ಷಗಳಿಂದ ಒಂದೇ ಕ್ಲಬ್ಬಿನ ಕೋಚ್ ಆಗಿರುವ ಅವರು ಮ್ಯಾಂಚೆಸ್ಟರ್ ಯುನೈಟೆಡ್ ಅನ್ನು ಕಳೆದ ನಾಲ್ಕು ವರ್ಷಗಳಲ್ಲಿ ಮೂರು ಭಾರಿ ಚಾಂಪಿಯನ್ಸ್ ಲೀಗ್ ಫೈನಲ್ ಗೆ ತಂದಿದ್ದಾರೆ. ಹಾಗಂತ ಬಾರ್ಸಿಲೋನಾವೇನೂ ಸಾಮಾನ್ಯ ತಂಡವಲ್ಲ. ಇದರಲ್ಲಿರುವವರು ವರ್ಲ್ಡ್ ಕ್ಲಾಸ್ ಪ್ಲೇಯರ್ಸ್. ಅದು ವಿಶ್ವದರ್ಜೆಯ ಆಟಗಾರರ ಒಂದು ಪೂಲ್. ಬಾರ್ಸಿಲೋನಾದ 11 ಆಟಗಾರರಲ್ಲಿ ವಿಶ್ವಕಪ್ ಗೆದ್ದ ಸ್ಪೇನ್ ತಂಡದ 7 ಸದಸ್ಯರಿದ್ದಾರೆ. ಒಬ್ಬರನ್ನೊಬ್ಬರು ಚೆನ್ನಾಗಿ ಅರಿತಿರುವುದರಿಂದ ಹೆಚ್ಚು ಸಾಂಘಿಕವಾಗಿ ಆಡಬಲ್ಲರು. ಒತ್ತಡವನ್ನು ನಿಭಾಯಿಸುವ ತಾಕತ್ತೂ ಇದೆ. ಬಾರ್ಸಿಲೋನಾದಲ್ಲಿರುವ ಲಯೋನೆಲ್ ಮೆಸ್ಸಿಯಿಂದ ಹಿಡಿದು ಹೆಚ್ಚಿನವರು ಅದೇ ಕ್ಲಬ್ಬಿನ ಯೂತ್ ಅಕಾಡೆಮಿಯಿಂದ ಬಂದಿದ್ದು, 10-15 ವರ್ಷಗಳಿಂದ ಜತೆಯಾಗಿ ಆಡಿರುವ ಕಾರಣ ಉತ್ತಮ ಅಂಡರ್್ಸ್ಟ್ಯಾಂಡಿಂಗ್ ಕೂಡ ಇದೆ. ಪುಯೋಲ್, ಝಾವಿ ಅವರಂತೂ ಕ್ಲಬ್ ನ ಕೋಚ್ ಪೆಪ್ ಗಾರ್ಡಿಯೋಲಾ ಜತೆ ಕೂಡ ಆಡಿದ್ದಾರೆ!

ಇತ್ತ ಇಂಗ್ಲಿಷ್ ಪ್ರೀಮಿಯರ್ ಲೀಗ್್ನ ತಂಡಗಳು ಸಾಮಾನ್ಯ ಅಲ್ಲ. ಅವು “ಏರಿಯಲಿ ಸ್ಟ್ರಾಂಗ್ ” ಇರುತ್ತವೆ. ಅಂದರೆ ದೂರದಿಂದ ಬರುವ ಪಾಸನ್ನು ಚೆಸ್ಟ್ ಮಾಡಿ ತೆಗೆದುಕೊಂಡು ಹೋಗಿ “ಡಿ’ನೊಳಕ್ಕೆ ನುಗ್ಗಿ ಅಡ್ಡ ಪಾಸ್ ಕೊಡುತ್ತಾರೆ ವಿಂಗರ್ಸ್. ಸ್ಟ್ರೈಕರ್ಸ್ ಅದನ್ನು ಹೆಡ್ ಮಾಡಿ ಅಥವಾ ಕಾಲನ್ನು ಅಡ್ಡವಿಟ್ಟು ಗೋಲು ಹೊಡೆದು ಬಿಡುತ್ತಾರೆ. ಬಾರ್ಸಿಲೋನಾ ಆಟಗಾರರು ಕಾಲಲ್ಲಿ ಆಡುವುದರಲ್ಲಿ (ನೆಲದಲ್ಲೇ ಬಾಲನ್ನು ದೂಡಿಕೊಂಡು ಹೋಗುವುದು) ಗಟ್ಟಿಗರು. ಟೆಕ್ನಿಕಲಿ ಸ್ಟ್ರಾಂಗ್. ಇಂಗ್ಲಿಷ್ ಪ್ರೀಮಿಯರ್ ಲೀಗ್ ನ ಆಟಗಾರರು ಲಾಂಗ್ ಪಾಸ್, ಲಾಂಗ್ ಗೋಲ್ ಹೊಡೆಯಲು ಪ್ರಯತ್ನಿಸಿದರೆ, ಬಾರ್ಸಿಲೋನಾ ಆಟಗಾರರದ್ದೇನಿದ್ದರೂ ಶಾರ್ಟ್ ಪಾಸ್. ಗೋಲು ಪೆಟ್ಟಿಗೆ ಸಮೀಪಕ್ಕೆ ಹೋಗಿಯೇ ಒಳತಳ್ಳಲು ಪ್ರಯತ್ನಿಸುತ್ತಾರೆ. ThroughBall  ಕೊಡುವುದರಲ್ಲಿ ಬಾರ್ಸಿಲೋನಾ ಆಟಗಾರರು ನಿಸ್ಸೀಮರು. ThroughBall ಅಂದರೆ ಬಾರ್ಸಿಲೋನಾ ಸ್ಟ್ರೈಕರ್ ಗಳು ಎದುರಾಳಿ ಡಿಫೆಂಡರ್ ಗಳ ಹಿಂದೆ ಹಿಂದೆಯೇ ಸಾಗುತ್ತಿರುತ್ತಾರೆ. ಸಮಯಕ್ಕಾಗಿ ಕಾಯುತ್ತಿರುವ ಮಿಡ್ ಫೀಲ್ಡರ್ ಗಳು ಎದುರಾಳಿ ಡಿಫೆಂಡರ್ ಗಳ ಮಧ್ಯೆ ಬಾಲನ್ನು ಪಾಸ್ ಮಾಡುತ್ತಾರೆ. ಅಂತಹ ಪಾಸ್ ಬರುತ್ತದೆಂಬ ಊಹೆ ಸ್ಟ್ರೈಕರ್ ಗೆ ಇರುವುದರಿಂದ ಡಿಫೆಂಡರ್ ಗಳು ಪ್ರತಿಕ್ರಿಯಿಸುವ ಮೊದಲೇ ಓಡಲು ಆರಂಭಿಸುತ್ತಾನೆ. ಆಗ ಸ್ಟ್ರೈಕರ್ ಮುಂದಿರುವುದು ಕೇವಲ ಗೋಲ್ ಕೀಪರ್. ಆತನೊಬ್ಬನನ್ನು ದಾರಿತಪ್ಪಿಸಿದರೆ ಗೋಲು ಪಕ್ಕಾ. ಇದನ್ನೇ One On One ಎನ್ನುವುದು ಅಂತಹ ಪಾಸ್ ಕೊಡುವ ಝಾವಿ, ಇನಿಯೆಸ್ಟಾ, ಮೆಸ್ಸಿ ಬಾರ್ಸಿಲೋನಾದಲ್ಲಿದ್ದಾರೆ.

ಇವುಗಳ ಜತೆಗೆ ಬಾರ್ಸಿಲೋನಾದ ದೊಡ್ಡ ಸ್ಟ್ರೆಂಥ್ ಏನೆಂದರೆ Total Football. ಇದನ್ನು Box to Box ಆಟ ಎಂದೂ ಕರೆಯುತ್ತಾರೆ. ಈ Total Football ನ ಪಯೋನೀರ್ ಜೋಹಾನ್ ಕ್ರುಯ್ಫ್. ಈತ ಬಾರ್ಸಿಲೋನಾದ ದಿಗ್ಗಜನಾಗಿದ್ದ. ಈತನೇ ಬಾರ್ಸಿಲೋನಾದ ಕೋಚ್ ಕೂಡ ಆಗಿ ಕನಸಿನ ತಂಡ ಕಟ್ಟಿದ್ದು. ಅದನ್ನು “Cruyff Dream Team” ಎನ್ನುತ್ತಾರೆ. ಕ್ರುಯ್ಫ್ ಶಿಷ್ಯನೇ ಹಾಲಿ ಕೋಚ್ ಪೆಪ್ ಗಾರ್ಡಿಯೋಲಾ. Total Football ಅಂದರೆ ಪ್ಲೇಯರ್ಸ್ ಒಂದೇ ಕಡೆ ನಿರ್ದಿಷ್ಟವಾಗಿ ಆಡುವುದಿಲ್ಲ. ಫ್ಲೋಟ್ ಆಗುತ್ತಿರುತ್ತಾರೆ. ಉದಾಹರಣೆಗೆ ಇನಿಯೆಸ್ಟಾ ಸ್ಟ್ರೈಕರ್ ಮಾತ್ರವಲ್ಲ, ಮಿಡ್ ಫೀಲ್ಡರ್, ಡಿಫೆಂಡರ್ ಆಗಿ ಕೂಡ ಆಟವಾಡುತ್ತಾನೆ. ಸಂದರ್ಭಕ್ಕೆ ತಕ್ಕಹಾಗೆ ಪಾತ್ರ ಬದಲಿಸಿಕೊಳ್ಳುತ್ತಾರೆ. ಸೆಂಟರ್ ಫಾರ್ವರ್ಡ್ ಆಟಗಾರನೊಬ್ಬನಿಗೆ ಅವಕಾಶವೊದಗಿ ಆತನೇ ಬಾಲನ್ನು “ಡಿ’ನೊಳಕ್ಕೆ ಕೊಂಡೊಯ್ದರೆ ಸ್ಟ್ರೈಕರ್ ವಿಂಗರ್ ಪಾತ್ರ ವಹಿಸುತ್ತಾನೆ. ಒಂದು ವೇಳೆ ಎದುರಾಳಿ ಆಟಗಾರರು ಕೂಡಲೇ ಪ್ರತಿದಾಳಿ ಮಾಡಿದರೆ ಸ್ಟ್ರೈಕರ್ ಗಳು ಧಾವಿಸಿ ಬಂದು ಡಿಫೆಂಡಿಂಗ್ ಕೆಲಸ ಮಾಡುತ್ತಾರೆ. ಅದಕ್ಕೆ ತುಂಬಾ ಶಕ್ತಿ ಬೇಗಾಗುತ್ತದೆ. ಜೋಹಾನ್ ಕ್ರುಯ್ಫ್ ನಂತೆ Total Football ಆಟವಾಡುವ ಸಾಮರ್ಥ್ಯ ಈಗಿನವರಿಗಿಲ್ಲದಿದ್ದರೂ ಬಾರ್ಸಿಲೋನಾ ತಂಡದಲ್ಲಿ ತಕ್ಕಮಟ್ಟಿಗೆ ಅಂತಹ ಪಾತ್ರ ನಿರ್ವಹಿಸುವ ಸಾಕಷ್ಟು ಜನರಿದ್ದಾರೆ. ಇನ್ನು ಬಾರ್ಸಿಲೋನಾ ಹೆಚ್ಚಾಗಿ ಆಡುವುದು One Two ಆಟ. ಅಂದರೆ ಎಡಕ್ಕೊಬ್ಬ ಬಲಕ್ಕೊಬ್ಬ ಆಟಗಾರನಿದ್ದಾನೆ, ಅವರಿಬ್ಬರ ಮುಂದೆ ಎದುರಾಳಿ ತಂಡದ ರಕ್ಷಣಾ ಆಟಗಾರನಿದ್ದಾನೆ ಎಂದಿಟ್ಟುಕೊಳ್ಳಿ. ಎಡ ಆಟಗಾರ ಬಲಭಾಗದ ಆಟಗಾರನಿಗೆ ಬಾಲ್ ಪಾಸ್ ಮಾಡುತ್ತಾನೆ. ಅದು ಆತನ ಕಾಲ ಬಳಿ ಹೋಗುವಷ್ಟರಲ್ಲಿ ಪಾಸ್ ಕೊಟ್ಟವರು ಮುಂದೆ ಓಡಿ ಬಲಗಡೆ ಆಟಗಾರ ಕ್ಷಣಮಾತ್ರದಲ್ಲೇ ಕೊಡುವ ಮರು ಪಾಸನ್ನು ತಾನೇ ಪಡೆದುಕೊಳ್ಳುತ್ತಾನೆ. ಆ ಪ್ರಕ್ರಿಯೆ ಹಾಗೇ ಮುಂದುವರಿಯುತ್ತದೆ. ಇದಕ್ಕೆ ಭಾರಿ ತಾಳಮೇಳ, ಆಂಟಿಸಿಪೇಷನ್ ಬೇಕಾಗುತ್ತದೆ. ಬಾರ್ಸಿಲೋನಾ ಆಟಗಾರರನ್ನು ಇದರಲ್ಲಿ ಮಾಸ್ಟರ್ಸ್ ಎಂದೇ ಕರೆಯಬಹುದು. ಬಾಲ್ ಬರುತ್ತಲೇ ಇನ್ನೊಬ್ಬನಿಗೆ ಕೊಡುವ ಕಟಿಜ One Touch ನಲ್ಲೂ ಬಾರ್ಸಿಲೋನಾ ಮುಂದು.

ಹಾಗಂತ ಮ್ಯಾಂಚೆಸ್ಟರ್ ಯುನೈಟೆಡ್ ಅನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸ್ಪ್ಯಾನಿಶ್ ಲೀಗ್ (ಲಾ ಲಿಗಾ)ಗಿಂತ ಇಂಗ್ಲಿಷ್ ಪ್ರೀಮಿಯರ್ ಲೀಗ್ ನಿಜಕ್ಕೂ ಕಠಿಣ ಸ್ಪರ್ಧೆ. ಲಾ ಲಿಗಾದ ಅಂಕ ಪಟ್ಟಿಯನ್ನು ನೋಡಿ. ಅತ್ಯುತ್ತಮ ತಂಡಗಳಾದ ಬಾರ್ಸಿಲೋನಾ ಹಾಗೂ ರಿಯಲ್ ಮ್ಯಾಡ್ರಿಡ್ ನ ಅಂಕ ಸಾಮಾನ್ಯವಾಗಿ 100, 110 ದಾಟಿರುತ್ತದೆ. ಆದರೆ ಇಂಗ್ಲಿಷ್ ಪ್ರೀಮಿಯರ್ ಲೀಗ್ ನಲ್ಲಿ ಲೀಗ್ ಚಾಂಪಿಯನ್ ಹಾಗೂ ರನ್ನರ್ಸ್ ಅಪ್ ಆದವರ ಅಂಕ 80 ದಾಟಿರುವುದಿಲ್ಲ. ಅಂದರೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ 20 ಕ್ಲಬ್ ಗಳಲ್ಲಿ ಯಾವೊಂದನ್ನೂ ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮ್ಯಾಂಚೆಸ್ಟರ್ ಯುನೈಟೆಡ್, ಚೆಲ್ಸಿ, ಲಿವರ್ ಪೂಲ್ ಗಳಂಥ ಪ್ರತಿಷ್ಠಿತ ತಂಡಗಳು ಸಣ್ಣ-ಪುಟ್ಟ ಕ್ಲಬ್ ಗಳೆದುರು ಸೋತ ಉದಾಹರಣೆ ವರ್ಷದಲ್ಲಿ ಸಾಕಷ್ಟು ಸಿಗುತ್ತವೆ. ಅಂತಹ ತೀವ್ರ ಸ್ಪರ್ಧೆಯನ್ನು ಒಡ್ಡ