Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಸಾವರ್ಕರ್ ಎಂಬ ಸ್ಫೂರ್ತಿ ಕಿಡಿಗೆ ಎದೆಗೂಡಲ್ಲಿ ಜಾಗವಿಡಿ!

ಸಾವರ್ಕರ್ ಎಂಬ ಸ್ಫೂರ್ತಿ ಕಿಡಿಗೆ ಎದೆಗೂಡಲ್ಲಿ ಜಾಗವಿಡಿ!

ಆ ವೀರ ಕಲಿಯನ್ನು ನೆನಪಿಸಿಕೊಂಡಾಗಲೆಲ್ಲ ದಿವಂಗತ ವಿದ್ಯಾನಂದ ಶೆಣೈ ಕಣ್ಣಮುಂದೆ ಬರುತ್ತಾರೆ. ಆರು ವರ್ಷಗಳ ಹಿಂದೆ ಅವರು ಮಾಡಿದ್ದ ಭಾಷಣದ ಝೇಂಕಾರ ಕಿವಿಯಲ್ಲಿ ಇನ್ನೂ ಹಸಿಯಾಗಿಯೇ ಇದೆ.

“ಅವತ್ತು ಛಾಫೇಕರ್ ಸಹೋದರರು ಬ್ರಿಟಿಷ್ ಅಧಿಕಾರಿ ರಾಂಡ್ ನನ್ನು ಹತ್ಯೆ ಮಾಡಿದರು. ಅದು ಬ್ರಿಟಿಷರಿಗೆ ತಿಳಿದುಹೋಯಿತು. ಬಂಧಿಸಿ ವಿಚಾರಣೆಗೆ ಗುರಿಪಡಿಸಿದ ಬ್ರಿಟಿಷರು ಛಾಫೇಕರ್ ಸಹೋದರರ ಮೇಲೆ “ಕೊಲೆ’ ಆರೋಪ ಹೊರಿಸಿದರು. ಕೊನೆಗೆ ಗಲ್ಲಿಗೂ ಏರಿಸಿದರು. ಇದನ್ನೆಲ್ಲಾ ನೋಡಿದ 14 ವರ್ಷದ ಬಾಲಕ ವಿನಾಯಕ ದಾಮೋದರ ಸಾವರ್ಕರ್ ಮನಸ್ಸಿಗೆ ಬಹಳ ನೋವಾಗುತ್ತದೆ. ಮನೆಗೆ ಓಡೋಡಿ ಬಂದ ಆತ ದೇವರ ಕೋಣೆಯ ಬಾಗಿಲು ತೆರೆದು ದೇವಿಯ ಮುಂದೆ ಕುಳಿತು ಕೇಳುತ್ತಾನೆ. “ಅಮ್ಮಾ…. ಛಾಫೇಕರ್ ಸಹೋದರರು ಮಾಡಿದ್ದು “ಕೊಲೆ’ಯೋ, “ಸಂಹಾರ’ವೋ ನಾವು “ದುರುಳರ ಸಂಹಾರ’ ಎನ್ನುತ್ತೇವೆ. ಪುಣೆಗೆ ಪ್ಲೇಗ್ ಬಡಿದಾಗ ಉಸ್ತುವಾರಿ ವಹಿಸಿ ಬಂದ ರಾಂಡ್  ಮಾಡಿದ್ದೇನು? ಪ್ಲೇಗ್ ಪೀಡಿತರನ್ನು ಪತ್ತೆ ಹಚ್ಚುವ ಸಲುವಾಗಿ ಜನರನ್ನು ಬೀದಿಗೆಳೆದ. ಮಹಿಳೆಯರು ಮನೆ ಮುಂದೆ ಅರೆಬೆತ್ತಲಾಗಿ ನಿಲ್ಲುವಂತೆ ಮಾಡಿದ, ಕೆಲ ಮಹಿಳೆಯರ ಮೇಲೆ ಅತ್ಯಾಚಾರ ಕೂಡ ನಡೆಯಿತು. ಅಂತಹ ಪ್ರಜಾಪೀಡಕ ರಾಂಡ್ ನನ್ನು ಕೊಂದರೆ ಅದು ಹೇಗೆ ಕೊಲೆಯಾಗುತ್ತದೆ? ಅದು ದುಷ್ಟ ಸಂಹಾರವಲ್ಲವೆ ದೇವಿ?”

ಒಂದು ಕಡೆ ವಿದ್ಯಾನಂದ ಶೆಣೈ ಅವರ ಭಾಷಣ ನಮ್ಮನ್ನು ಮಂತ್ರಮುಗ್ಧಗೊಳಿಸುತ್ತಿದ್ದರೆ ಮತ್ತೊಂದೆಡೆ ಸಾವರ್ಕರರು ಮನವನ್ನೆಲ್ಲ ಆವರಿಸಿಬಿಡುತ್ತಾರೆ. ವಿನಾಯಕ ದಾಮೋದರ ಸಾವರ್ಕರ್ ಎಂಬ ವ್ಯಕ್ತಿತ್ವವೇ ಅಂಥದ್ದು. ಅವರ ಪ್ರಭಾವಕ್ಕೆ ಒಳಗಾಗದವರು ಯಾರಿದ್ದಾರೆ?

ಇಂಡಿಯಾ ಹೌಸ್.

ಆ ಕಾಲದಲ್ಲಿ ಉನ್ನತ ವ್ಯಾಸಂಗಕ್ಕೆಂದು ಬ್ರಿಟನ್ ಗೆ ತೆರಳಿದ ಭಾರತೀಯ ವಿದ್ಯಾರ್ಥಿಗಳೆಲ್ಲ ತಂಗುತ್ತಿದ್ದುದೇ ಅಲ್ಲ್ಲಿ. ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ಬಿಎ ಪದವಿ ಪೂರೈಸಿ ಲಾ ಓದಲು ಬ್ರಿಟನ್ನಿನ ಪ್ರತಿಷ್ಠಿತ Gray’s Inn  ಕಾಲೇಜಿಗೆ ಸೇರಿದಾಗ ಸಾವರ್ಕರ್ ಕೂಡ ಆಶ್ರಯ ಪಡೆದುಕೊಂಡಿದ್ದು ಅದೇ ಇಂಡಿಯಾ ಹೌಸ್ ನಲ್ಲಿ. ಅವರು ಕಾನೂನು ಪದವಿ ಕಲಿಯುವುದಕ್ಕೆಂದು ಬಂದಿದ್ದರೂ ಅದು ನೆಪಮಾತ್ರವಾಗಿತ್ತು. ಅಪ್ಪಟ ದೇಶಪ್ರೇಮಿಯಾದ ಅವರಿಗೆ ಬ್ರಿಟಿಷರಿಂದ ಪದವಿ ಪಡೆದುಕೊಳ್ಳುವುದಕ್ಕಿಂತ ಸ್ವಾತಂತ್ರ್ಯ ಗಳಿಸಿಕೊಳ್ಳುವುದು ಮುಖ್ಯವಾಗಿತ್ತು. ಇಂಡಿಯಾ ಹೌಸ್ ನಲ್ಲೇ ವಿದ್ಯಾರ್ಥಿಗಳನ್ನು ಕಲೆಹಾಕಿ ದಾಸ್ಯದಿಂದ ಬಳಲುತ್ತಿರುವ ದೇಶದ ಪರಿಸ್ಥಿತಿಯನ್ನು ವಿವರಿಸತೊಡಗಿದರು. ಅದು ನಿತ್ಯ ಕಾಯಕವಾಯಿತು. ಸಮ್ಮೋಹನಗೊಳಿಸುವಂಥ ಅವರ ಭಾಷಣವನ್ನು ಕೇಳಲು ಬರುವವರ ಸಂಖ್ಯೆಯೂ ಹೆಚ್ಚಾಗತೊಡಗಿತು. ಅದೊಂದು ದಿನ ಲಂಡನ್ನಿನಲ್ಲಿ ಅಲೆಯುತ್ತಿದ್ದ ಶೋಕಿಲಾಲನೊಬ್ಬ ತನ್ನ ಮಾರ್ಗ ಮಧ್ಯದಲ್ಲಿ ಕಂಡ ಇಂಡಿಯಾ ಹೌಸ್್ಗೆ ಆಗಮಿಸಿದ. ಅದೇ ವೇಳೆಗೆ ಸಾವರ್ಕರ್ ಭಾಷಣ ನಡೆಯುತಿತ್ತು. ಅವರು ತಾಯ್ನಾಡಿನ ಪರಿಸ್ಥಿತಿಯನ್ನು ವಿವರಿಸುತ್ತಿದ್ದರೆ ದೇಶಕ್ಕೆ ಎದುರಾಗಿರುವ ಹೀನಾತಿ ಹೀನ ಸ್ಥಿತಿಯನ್ನು ಕೇಳಿ ಆ ಶೋಕಿಲಾಲನ ರಕ್ತ ಕುದಿಯತೊಡಗಿತು. ಆ ದಿನದಿಂದ ಶೋಕಿಲಾಲ ಕೂಡ ಇಂಡಿಯಾ ಹೌಸ್್ಗೆ ಕಾಯಂ ಬರಲಾರಂಭಿಸಿದ. ವಿನಾಯಕ ದಾಮೋದರ ಸಾವರ್ಕರ್ ಅವನನ್ನು ಆವಾಹನೆ ಮಾಡಿಬಿಟ್ಟರು. ಆತ ಅವರ ಭಕ್ತನಾಗಿಬಿಟ್ಟ.

ಆ ಶೋಕಿಲಾಲ ಮತ್ತಾರೂ ಅಲ್ಲ, ಮದನ್ ಲಾಲ್ ಧೀಂಗ್ರಾ!

1908ರಲ್ಲಿ ಸಾವರ್ಕರ್ ಲಂಡನ್ ನಲ್ಲೊಂದು ಕಾರ್ಯಕ್ರಮವನ್ನು ಆಯೋಜಿಸಿದರು. ಅದು 1857ರಲ್ಲಿ ನಡೆದಿದ್ದ ಮೊದಲ ಭಾರತ ಸ್ವಾತಂತ್ರ ಸಂಗ್ರಾಮದ ವಾರ್ಷಿಕ ದಿನ ಸ್ಮರಣೆಯಾಗಿತ್ತು. ಬಹುತೇಕ ಭಾರತೀಯ ವಿದ್ಯಾರ್ಥಿಗಳು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಾವರ್ಕರ್ ಭಾಷಣ ಅವರನ್ನು ಅದೆಷ್ಟು ಪ್ರಭಾವಿತಗೊಳಿಸಿತ್ತೆಂದರೆ ತಮ್ಮ ಕೋಟಿನ ಮೇಲೆ 1857ರ ಸ್ಮರಣೆ’ ಎಂದು ಬರೆದಿರುವ ಬ್ಯಾಡ್ಜ್ ಹಾಕಿಕೊಂಡು ತಮ್ಮ ತಮ್ಮ ತರಗತಿಗಳಿಗೆ ಹೋಗಿದ್ದರು. ಬ್ರಿಟಿಷ್ ಅಧಿಪತ್ಯದ ಬಗ್ಗೆ ಅತಿಯಾದ ಹೆಮ್ಮೆ ಇಟ್ಟುಕೊಂಡಿದ್ದ ಇಂಗ್ಲಿಷರಿಗೆ ಇದನ್ನು ಸಹಿಸಲಾಗಲಿಲ್ಲ. ಬ್ರಿಟನ್ನಿನಲ್ಲೇ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಸಡ್ಡುಹೊಡೆಯುವುದೇನು ಸಾಮಾನ್ಯ ಮಾತೆ? ಇದು ಇಂಗ್ಲಿಷರನ್ನು ಕುಪಿತಗೊಳಿಸಿತು. ಬಹಳ ಚಂದವಾಗಿ ಧಿರಿಸು ಮಾಡಿಕೊಂಡು, ಅದರ ಮೇಲೆ ಬ್ಯಾಡ್ಜ್ ಅಂಟಿಸಿಕೊಂಡು ಹೋಗುತ್ತಿದ್ದ ಧೀಂಗ್ರಾನತ್ತ ಧಾವಿಸಿದ ಇಂಗ್ಲಿಷನೊಬ್ಬ ಬ್ಯಾಡ್ಜನ್ನು ಕಿತ್ತೊಗೆಯಲು ಕೈಚಾಚಿದ. ಅಷ್ಟರಲ್ಲಿ ಅವನ ಕೈ ತಡೆದು ಕಪಾಳಮೋಕ್ಷ ಮಾಡಿದ ಧೀಂಗ್ರಾ, ಆತನನ್ನು ನೆಲಕ್ಕುರುಳಿಸಿ ಎದೆ ಮೇಲೆ ಕುಳಿತು, “ನನ್ನ ದೇಶದ ಚಿಹ್ನೆ ಮೇಲೆ ಕೈಹಾಕಿದರೆ ಜೋಕೆ’ ಎಂದು ಧಮಕಿ ಹಾಕಿದ. ಭಾರತೀಯ ವಿದ್ಯಾರ್ಥಿಗಳಲ್ಲಿ ಅಂತಹ ತೀವ್ರ ದೇಶಪ್ರೇಮವನ್ನು ತುಂಬಿದ್ದರು ಸಾವರ್ಕರ್. ಮದನ್ ಲಾಲ್ ಧೀಂಗ್ರಾ 1909ರಲ್ಲಿ ಕರ್ಝನ್ ವೇಯ್ಲಿಯನ್ನು ಕೊಂದುಹಾಕಿದ್ದು ಸಾವರ್ಕರ್ ಆದೇಶದಂತೆಯೇ. ಆತ ವಿದೇಶದಲ್ಲಿ ನೇಣಿಗೇರಿದ ಮೊದಲ ಭಾರತೀಯ ಕ್ರಾಂತಿಕಾರಿ. ಸಾವರ್ಕರ್ ಅಂದರೆ ಒಂದು ಪ್ರೇರಕ ಶಕ್ತಿಯಾಗಿತ್ತು. ಗೆರಿಲ್ಲಾ ಯುದ್ಧದ ಮೂಲಕ ಬ್ರಿಟಿಷರನ್ನು ಹೊಡೆದೋಡಿಸಬೇಕು ಎನ್ನುತ್ತಿದ್ದರು. ಅಭಿನವ ಭಾರತ, ಫ್ರೀ ಇಂಡಿಯಾ ಸೊಸೈಟಿಗಳನ್ನು ಸ್ಥಾಪಿಸಿದ್ದ ಸಾವರ್ಕರ್ ಒಬ್ಬ ಮಹಾನ್ ಚಿಂತಕ ಕೂಡ ಹೌದು. 1857ರಲ್ಲಿ ನಡೆದಿದ್ದ ಕ್ರಾಂತಿಯನ್ನು ಬ್ರಿಟಿಷರು “ಸಿಂಪಾಯಿ ದಂಗೆ’ ಎಂದು ಕರೆಯುತ್ತಿದ್ದರು. ಉಳಿದವರೂ ಹಾಗೆಂದೇ ಭಾವಿಸಿದ್ದರು. ಅದು ಸಿಪಾಯಿ ದಂಗೆಯಲ್ಲ, “ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದು ಮೊದಲು ಹೇಳಿದ್ದೇ ಸಾವರ್ಕರ್. The Indian War Of Independence  ಎಂಬ ಪುಸ್ತಕವನ್ನೇ ಬರೆದರು. ಆ ಪುಸ್ತಕ ಬ್ರಿಟಿಷರನ್ನು ಯಾವ ರೀತಿ ಭೀತಿಗೊಳಿಸಿತೆಂದರೆ ಅದರ ಮಾರಾಟವನ್ನೇ ನಿಷೇಧ ಮಾಡಿದರು.

ಇಂತಹ ಸಾವರ್ಕರ್ ಅವರನ್ನು ಬ್ರಿಟನ್ ಆಡಳಿತ 1910ರಲ್ಲಿ ಇಂಡಿಯಾ ಹೌಸ್ ನಲ್ಲೇ ಬಂಧಿಸಿತು.

ಅವರ ಬಗ್ಗೆ, ಅವರ ಚಟುವಟಿಕೆಯ ಬಗ್ಗೆ ಬ್ರಿಟಿಷರಿಗೆ ಎಂತಹ ಭಯವಿತ್ತೆಂದರೆ ಎರಡು ಜೀವಾವಧಿ ಶಿಕ್ಷೆ(50 ವರ್ಷ) ವಿಧಿಸಿ ಅಂಡಮಾನ್ ಜೈಲಿಗೆ ದಬ್ಬಿತು. ಸಾವರ್ಕರ್ ಅಲ್ಲೂ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಧರ್ಮದ ಆಧಾರದ ಮೇಲೆ ದೇಶ ಒಡೆಯಲು ಹೊರಟ ಮುಸ್ಲಿಮರನ್ನು ಮಟ್ಟಹಾಕುವ ಸಲುವಾಗಿ ಭಾರತವನ್ನು ಹಿಂದುರಾಷ್ಟ್ರವನ್ನಾಗಿ ಮಾಡಬೇಕೆಂದು ಸಾರ್ವಜನಿಕವಾಗಿ ಪ್ರತಿಪಾದಿಸಿದರು. ಹಿಂದು ರಾಷ್ಟ್ರವಾದವನ್ನು ಪ್ರತಿಪಾದಿಸಿ ಜೈಲಿನಲ್ಲೇ Hindutva: Who is a hindu?‘ ಎಂಬ ಪುಸ್ತಕ ಬರೆದರು. ಹಿಂದುಯಿಸಂ, ಜೈನಿಸಂ, ಬುದ್ಧಿಸಂ ಹಾಗೂ ಸಿಖ್ಖಿಸಂ ಇವೆಲ್ಲವೂ ಒಂದೇ ಎಂದು ಮೊದಲು ಪ್ರತಿಪಾದಿಸಿದ್ದು, “ಅಖಂಡ ಭಾರತ’ದ ಕಲ್ಪನೆಯನ್ನು ಮೊದಲು ಕೊಟ್ಟಿದ್ದೂ ಇವರೇ.

1921ರಲ್ಲಿ ಷರತ್ತಿನ ಆಧಾರದ ಮೇಲೆ ಬಿಡುಗಡೆಯಾದ ಸಾವರ್ಕರ್, ಹಿಂದು ಮಹಾಸಭಾದ ಅಧ್ಯಕ್ಷರಾಗಿ ಸ್ವಧ ರ್ಮೀಯರನ್ನು ಒಗ್ಗೂಡಿಸಲು ಹೊರಟರು. ಕಾಂಗ್ರೆಸ್ ಮಾಡುತ್ತಿದ್ದ ಮುಸ್ಲಿಮರ ಓಲೈಕೆ ಹಾಗೂ ಮುಸ್ಲಿಮರ ವಿಭಜ ನಾವಾದಿ ಮನಸ್ಥಿತಿಯನ್ನು ಸಾವರ್ಕರ್ ಬಹಳ ಕಟುವಾಗಿ ವಿರೋಧಿಸಿದರು.

 ನೀವು ಬಂದರೆ ನಿಮ್ಮ ಜತೆ

ಬರದಿದ್ದರೆ ನಿಮ್ಮನ್ನು ಬಿಟ್ಟು

ಅಡ್ಡವಾದರೆ ಮೊದಲು ನಿಮ್ಮನ್ನೇ ಮೆಟ್ಟಿ

ಸ್ವಾತಂತ್ರ್ಯ ಗಳಿಸುತ್ತೇವೆ….

ಎಂದು ಎಚ್ಚರಿಕೆಯನ್ನೇ ನೀಡಿದ್ದರು. ಅವರನ್ನು ನೀವು ಒಪ್ಪಿಬಿಡಿ, ಆದರೆ ತಾವು ನಂಬಿದ್ದ ಸಿದ್ಧಾಂತಗಳಿಗೆ ಅವರು ನಿಷ್ಠರಾಗಿದ್ದರು. ಬಹುತೇಕ ಟೋಪಿಧಾರಿ ಕಾಂಗ್ರೆಸ್ಸಿಗರ ಸ್ವಾತಂತ್ರ್ಯ ಹೋರಾಟಕ್ಕೆ ರಾಜಕೀಯ ಅಧಿಕಾರದ ಗುರಿಯಿತ್ತು. ಆದರೆ ಸಾವರ್ಕರ್ ಅವರಿಗೆ ರಾಜಕೀಯ ಮಹತ್ವಾಕಾಂಕ್ಷೆ ಎಂದೂ ಇರಲಿಲ್ಲ. ಅವರಿಗಿದ್ದ ಜನಪ್ರಿಯತೆಯ ಅಲೆಯಲ್ಲಿ ಚುನಾವಣೆಯಲ್ಲಿ ಆರಿಸಿ ಬರಬಹುದಿತ್ತು. ಸಾವರ್ಕರ್ ಗುರಿ ಈ ದೇಶದ ಸ್ವಾತಂತ್ರ್ಯ, ಈ  ನೆಲದ ನಂಬಿಕೆ, ಸಂಸ್ಕೃತಿಯ ರಕ್ಷಣೆಯಷ್ಟೇ ಆಗಿತ್ತು. 

ಸಾವರ್ಕರ್ ಜನಿಸಿದ್ದು 1883, ಮೇ 28ರಂದು.

ಇಂದು ಅವರ ಜನ್ಮದಿನ. ಇಂಗ್ಲೆಂಡಿನ ಐತಿಹಾಸಿಕ ಕಟ್ಟಡ ಹಾಗೂ ಸ್ಮಾರಕಗಳ ಆಯೋಗ “ಇಂಡಿಯಾ ಹೌಸ್’ ಮೇಲೆ ತೂಗುಹಾಕಿರುವ ನೀಲಿ ಫಲಕದ ಮೇಲೆ “ಭಾರತದ ರಾಷ್ಟ್ರಪ್ರೇಮಿ, ದಾರ್ಶನಿಕ ವಿನಾಯಕ ದಾಮೋದರ ಸಾವರ್ಕರ್ (1883-1966) ಇಲ್ಲಿ ನೆಲೆಸಿದ್ದರು’ ಎಂದು ಬರೆಯಲಾಗಿದೆ. ಅವರು ನಮ್ಮ ಹೃದಯದಲ್ಲೂ ಶಾಶ್ವತವಾಗಿ ನೆಲೆಸಲಿ.

48 Responses to “ಸಾವರ್ಕರ್ ಎಂಬ ಸ್ಫೂರ್ತಿ ಕಿಡಿಗೆ ಎದೆಗೂಡಲ್ಲಿ ಜಾಗವಿಡಿ!”

  1. ದೇಶದ ನಿಜ ನಾಯಕರು (ಕ್ರಾಂತಿಕಾರಿ)ಗಳ ಮನದಾಳದ ಮಾತನ್ನು ಜನ ಸಾಮಾನ್ಯರಿಗೆ ಮನದಟ್ಟು ಮಾಡುತ್ತಿರುವ ಪ್ರತಾಪ ಸಿಂಹ ರಿಗೆ ನನ್ನ ಧನ್ಯವಾದಗಳು.

    ಚಿ.ನ.ಸಂಜಯ
    ವಂದೇ ಮಾತರಂ

  2. Veeresh Bagewadi says:

    Pratap anna great article Thank you anna

  3. SRIKANTH V BALLAL says:

    indhina rajakiya vyavasthe haagu rajakaranigaligaagi maththobba saavarkar beku annisodhu sahaja alva prathap? any how, aa mahaan kranthikariya bagge avara janma dhinadhandhe e ankanavannu baredhiddhu santhasa thandhidhe, great job n great article.

  4. DM Mahesh says:

    hi sir…nimma..prathi yondu…baravanige yannu oduthibbadre…eno ondu usthava..baruthade..sir…aneka..swathanathara..virara..bagge…thilisuthiddira..
    …esto..visaya.galannu….kela prabavi nayakaru…mucchiakuthare….nammidda namage.aneka visaya.galu..thiliyothave…sir………….

  5. allappa says:

    superb, really we all Indians r greatful to vinayak damodar savarkar

  6. ABHYUDAYA says:

    am ur grt fan…. ur wrds r like bullets it will penetrate the heats of the readers…
    u r doing grt job.

  7. Prashant says:

    Hi Pratap,

    Article is good. But, not in the expected way. We have very high expectations on Veer Savarkar’s life informations. Thank you very much.

  8. Sunaath says:

    ಇಂಗ್ಲಂಡಿನ ಇಂಡಿಯಾಹೌಸಿನಲ್ಲಿ ಸಾವರಕರರ ಸ್ಮರಣೆ ಇದೆ. ಆದರೆ ನಮ್ಮವರೇ ಆದ ದೇಶದ್ರೋಹಿಗಳು ಅಂದಮಾನದ ಸೆರೆಮನೆಯ ಮುಂದಿರುವ ಅವರ ಸ್ಮರಣೆಯನ್ನು ಕಿತ್ತೊಗೆದಿದ್ದಾರೆ!

  9. karthik says:

    good prataap,
    Really young generation should read stories like above and get inspiration and get ready to fight against the corruption ..keep writing like this articles

  10. Vikas V Prabhu says:

    Nice article on Veer Savarkar.
    I was very much happy to read the article on VD Savarkarkar’s B’day.
    Had read his biography “Aatmahuythi” (in kannada) long back.
    Savarkar was the person who actually gave an awakening call to many revolutionaries against the Brits.
    He was a multi-dimensional personality who worked for the nation wiothout any expectation for any name/ fame.
    A TRUE HERO…..

  11. Jnanesha KS says:

    ಬಹಳ ಸಂತೋಷ ಆಯಿತು ನಿಮ್ಮ ಇವತ್ತಿನ ಆಯ್ಕೆ.
    ಆದರೆ ವೀರ್ ಸಾವರ್ಕರ್ ಅವರ ಬದುಕಿನ ಇನ್ನು ಎರಡು-ಮೂರು ಘಟನೆಗಳನ್ನು ಇಲ್ಲಿ ಬರೆದಿದ್ದರೆ ಇನ್ನು ಚೆನ್ನಗಿರುಥ್ಥಿಥ್ತು ಅನಿಸುತಿದೆ.

    ಜ್ನಾನೇಶ ಕಂ.ಸು

  12. vishwa says:

    ನೀವು ಬಂದರೆ ನಿಮ್ಮ ಜತೆ

    ಬರದಿದ್ದರೆ ನಿಮ್ಮನ್ನು ಬಿಟ್ಟು

    ಅಡ್ಡವಾದರೆ ಮೊದಲು ನಿಮ್ಮನ್ನೇ ಮೆಟ್ಟಿ

    ಸ್ವಾತಂತ್ರ್ಯ ಗಳಿಸುತ್ತೇವೆ….

  13. naveen says:

    now also congress is on behalf of muslims only they had spent 300 crores for kasab only…They dont want india to improve they want only politics…

  14. Shrikant Yalakki says:

    V D Savarkar, Dhingra, Bose…These are real heros of freedom fighting… As per me if these people were there we would have got the freedom much earlier than 1947.
    Thanks Pratap… Really a touchy article… 🙂

  15. basavaraj says:

    hai sir ennu jasti desapremigala artical bareeri

  16. vanaja gowda says:

    senior ur d best………….aricle in kannada prabha was exellent…….it was great..i m speechless….wat to say no words…….

  17. Suraj Vadulas says:

    Thank you, Pratapa I have always wanted to know more about Savarkarji, our syllabus never gave any details about his life, none of the chapters was dedicated to him.

  18. dayananda says:

    One of the great freedom fighter.we should follow his way.really great person.

  19. Rama Krishna says:

    Wonderfull …. I like V.D. Savarkar for his ability to not to accept the defeat at any cost ….

  20. Vinay HS says:

    Thaks , Simha

  21. gururaj k says:

    ನಿಜಕ್ಕೂ ಅದ್ಭುತ ಲೇಖನ ಪ್ರತಾಪ್ ಒ೦ದು ಕ್ಷಣ ಕಣ್ಣಲ್ಲಿ ನೀರು ಜಿನುಗಿತು.ಆದರೆ ಅವರ ನ೦ತರ ಈ ದೇಶದ ರಾಜಕಾರಣಿಗಳು ಅವರನ್ನು ನಡೆಸಿಕೊ೦ಡ ರೀತಿ ಇದೆಯಲ್ಲ,ಅದು ತು೦ಬಾ ನೋವು ಕೊಡುತ್ತದೆ.ನಾವ್ಯಾಕೋ ಅವರ ಬಗ್ಗೆ ತು೦ಬಾ thankless ಆದೆವಾ ಎನಿಸಿಬಿಡುತ್ತದೆ.

  22. sudeesh says:

    really we need Savarkar, Subash chandra bose, Bagat singh, Naturam goodse(recently his web page is launched) in text books of next generation so that they follow these grate people in their life. NICE ARTICLE

  23. sudeesh says:

    really we need Savarkar, Subash chandra bose, Bagat singh, Naturam goodse(recently his web page is launched) in text books of next generation so that they follow these grate people in their life. NICE ARTICLE ಸಾವರ್ಕರ್ ಎಂಬ ಸ್ಫೂರ್ತಿ ಕಿಡಿಗೆ ಎದೆಗೂಡಲ್ಲಿ ಜಾಗವಿಡಿ

  24. mahesh yadawad, bijbpur says:

    nice arthcle.

  25. Shiva Kumar says:

    ಇನ್ನು ಸ್ವಲ್ಪ ಬರೆಯ ಬೇಕಿತ್ತು

  26. ashok says:

    superb article
    we need some more information for savarkarji

  27. adarsha says:

    ಇಂಗ್ಲಂಡಿನ ಇಂಡಿಯಾಹೌಸಿನಲ್ಲಿ ಸಾವರಕರರ ಸ್ಮರಣೆ ಇದೆ. ಆದರೆ ನಮ್ಮವರೇ ಆದ ದೇಶದ್ರೋಹಿಗಳು ಅಂದಮಾನದ ಸೆರೆಮನೆಯ ಮುಂದಿರುವ ಅವರ ಸ್ಮರಣೆಯನ್ನು ಕಿತ್ತೊಗೆದಿದ್ದಾರೆ! Congress party avaru avarnu desha dhrohi thara nodtha idhrye. Jai Savarkar.

  28. Anna can you give more details on chapekar brothers

  29. Chiranthan says:

    Hi,

    Nice article…Interested people can read a book on V D Savarkar…I thk availabel @ sapna book house…A must Read if you want to know more about Savarkarji

  30. Santosh Kumar says:

    Hi,

    Even english people is writing the Savarkar’s name in “India House”, unfortunately our own India people (specially UPA Govt.) dont even remember him.

    Thanks Prathap for your wonderful writing.

  31. Sangamesh says:

    Hats off to such patriots. I hope the present generation realises the sacrifices made by these great men. Its every ones duty to preserve the sanctity of such sacrifices.

    Another master piece by the Lion 🙂

  32. pavithra shetty says:

    ಸರ್​ ನಿಜಕ್ಕೂ ಒಂದು ಒಳ್ಳೆಯ ಲೇಖನ. ಇಂದಿನ ಯುವ ಜನಾಂಗಕ್ಕೆ ಈ ಲೇಖನದ ಅವಶ್ಯಕತೆ ಇದೆ ಸರ್​

  33. Dr.Krishna Reddy says:

    Mr. Simha, there is no doubt regarding the patriotism and sacrifice made by this great revolutionary.But there are some aspersions regarding sudden release of Savarkar after awarding him double imprisonment for life and communal orientation after release from jail. what pictured here is only one point of view.

  34. kishor says:

    hats of to patriots young ppl should move fwd with did priciples

  35. good evening Mr.Pratap. i like this writting.. i m technical engg but want to read history books….history is my feverate subject.

  36. manjunath hegde says:

    Savarkar namma Rastrada swatantrya horatakke hosa aayamavannu needida parama desha bhaktaru. Duradrastavashat endina youva peeligege avara bagge hechina tiluvalike needuva shikshana ella.Chandrashekar Azad ,Bhagath Singh rantaha ella krantikarigalige avare spoorthi . Nimma lekana yuvakaralli history bagge kuthoohala modisuvantide. Thank you Pratap

  37. anand says:

    realy great………………………………………

  38. Jnanambika says:

    Thank you Pratap Sir Its is a good article

  39. Krishna R says:

    ನಿಜಕ್ಕೂ ಅದ್ಭುತ ಲೇಖನ ಪ್ರತಾಪ್ ಒ೦ದು ಕ್ಷಣ ಕಣ್ಣಲ್ಲಿ ನೀರು ಜಿನುಗಿತು.ಆದರೆ ಅವರ ನ೦ತರ ಈ ದೇಶದ ರಾಜಕಾರಣಿಗಳು ಅವರನ್ನು ನಡೆಸಿಕೊ೦ಡ ರೀತಿ ಇದೆಯಲ್ಲ,ಅದು ತು೦ಬಾ ನೋವು ಕೊಡುತ್ತದೆ.ನಾವ್ಯಾಕೋ ಅವರ ಬಗ್ಗೆ ತು೦ಬಾ thankless ಆದೆವಾ ಎನಿಸಿಬಿಡುತ್ತದೆ.

  40. Shiv says:

    Article is very good, and …. my eyes goes wet all time for this heroes,,, i really feel very bad about todays india…. it was not our BHARAT…. it was not our real heroes (Bhagat, Azad, Dingra, Kartar Singh, Godse ) DREAM Bharat … is their a way to bring back our glory back??? is anybody have an answer to end this imperialism of CONGRESS??? oh people of my bharat pls wake up!!!! do something to bring our mothers glory….

    Jai Hind

  41. B S N CHETAN says:

    Thank you sir, veer savarkar bhagge innu thilisi.

  42. Raghu says:

    Super Sir,,

  43. pavan kumar, kolar says:

    really superb article, by this article SAVARKAR JYOTHI glows in every home, thanks a lot for giving this type of great articles to youth, we expect a lot about al revolutionaries from you…thank you sir

  44. ravikiran says:

    thank u sir,
    V.D. SAVARKAR is real hero of INDIA

  45. channu kittur says:

    ಪ್ರತಾಪ ಸಿಂಹ ರಿಗೆ ನನ್ನ ಧನ್ಯವಾದಗಳು

  46. manjunath.v.c says:

    THANK YOU FOR THIS ARTICLE SIR……. VEER SAVARKAR (BRAVE INDIAN)………

  47. ganeshdeshabhandari says:

    savarkar antha deshabhaktanannu navindu namma makkalige parichayisalu mareyabaradu, gandhi, neharurannu matra swatantrya horatagararu endu vaibhaveekarisuva indina patya pustakagalu namminda naija itihasavannu maremachide. nimma naija baravanigeyinda matra nijavada swatantrya yodhara parichaya sadhya.
    thank you pratap simha

  48. SHIVANAND says:

    Your thoughts are remarkable, all books are wonder full, gives real picturesque explanations I am proud of you be a kannadiga .hats up