*/
Date : 19-10-2010 | 15 Comments. | Read More
ಆ ಪಂದ್ಯವನ್ನು ಯಾವ ಕ್ರಿಕೆಟ್ ಪ್ರೇಮಿಯೂ ಮರೆಯಲು ಸಾಧ್ಯವಿಲ್ಲ. ಅದು 1999 ಮಾರ್ಚ್ 26-30, ಬಾರ್ಬಡಾಸ್. ಅಂದು ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ನ ಮೊದಲ ಮೂರು ದಿನಗಳಲ್ಲೂ ಆಸ್ಟ್ರೇಲಿಯಾದ್ದೇ ಪ್ರಾಬಲ್ಯ. ನಾಯಕ ಸ್ಟೀವ್ ವಾ ಬಾರಿಸಿದ ಅಮೋಘ 199 ರನ್ಗಳ ನೆರವಿನೊಂದಿಗೆ ಆಸ್ಟ್ರೇಲಿಯಾ 490 ರನ್ಗಳನ್ನು ಹೊಡೆಯಿತು. ವೆಸ್ಟ್ ಇಂಡೀಸ್ 98 ರನ್ಗಳಿಗೆ 6 ವಿಕೆಟ್ಗಳನ್ನು ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು. ಅಂತಹ ಸ್ಥಿತಿಯಲ್ಲಿ ಶೆರ್ವಿನ್ ಕ್ಯಾಂಬೆಲ್ ಮತ್ತು ರಿಡ್ಲಿ ಜೇಕಬ್ಸ್ ನೀಡಿದ 153 ರನ್ಗಳ […]
Date : 03-10-2010 | 31 Comments. | Read More
After Nehru, Who? 1964ರ ಮೇ 27ರಂದು ಇಂಥದ್ದೊಂದು ಪ್ರಶ್ನೆ ಕಾಶ್ಮೀರ ದಿಂದ ಕನ್ಯಾಕುಮಾರಿಯವರೆಗೂ ಕಾಡಿದ್ದು ಖಂಡಿತ ನಿಜ. ಸ್ವತಂತ್ರ ಭಾರತದ ಮೊಟ್ಟ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಹೃದಯಾಘಾತದಿಂದ ನಿಧನರಾಗಿದ್ದರು. ಹಾಗಂತ ಆಳುವ ಕಾಂಗ್ರೆಸ್ ಪಕ್ಷದಲ್ಲಿ ಈ ದೇಶವನ್ನು ಮುನ್ನಡೆಸು ವಂಥ ನಾಯಕರೇ ಇಲ್ಲ ಎಂಬ ಕಾರಣಕ್ಕೆ ಆ ಪ್ರಶ್ನೆ ಮೂಡಿರಲಿಲ್ಲ. ಭಾರತಕ್ಕೆ ಸಮರ್ಥ ನಾಯಕತ್ವ ನೀಡುತ್ತಾರೆ, ಪ್ರಗತಿಯ ಪಥ ದಲ್ಲಿ ಕೊಂಡೊಯ್ಯುತ್ತಾರೆ, ಇನ್ನು ಮುಂದಾದರೂ ನಮ್ಮೆಲ್ಲರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾರೆ, ಹಿತಾಸಕ್ತಿಯನ್ನು ಕಾಪಾಡುತ್ತಾರೆ ಎಂಬ […]
Date : 28-09-2010 | 42 Comments. | Read More
ಒಂದು ದಿನ ಸಾಯಂಕಾಲ ವೀರಕಲಿಗಳ ಕತೆ ಹೇಳುತ್ತಿದ್ದ ಅಪ್ಪ ಮುಂದೆ ಮುಂದೆ ಸಾಗುತ್ತಿದ್ದರೆ, ಮೂರು ವರ್ಷದ ಮಗ ಹಿಂದೆ ಹಿಂದೆ ಹೆಜ್ಜೆ ಹಾಕುತ್ತಿದ್ದ. ಅಪ್ಪನ ಕತೆ ಮುಂದು ವರಿದಿತ್ತು. ಗದ್ದೆ ದಾಟಿ ಆಚೆ ಬದಿಗೆ ಬಂದು ಸೇರಿದ್ದೂ ಆಯಿತು. ಆದರೆ ಬರಬರುತ್ತಾ ಹೆಜ್ಜೆ ಸಪ್ಪಳವೇ ನಿಂತುಹೋಗಿತ್ತು. ಹಿಂದಿರುಗಿ ನೋಡಿದರೆ ಮಗನೇ ಇಲ್ಲ. ನಡೆದು ಬಂದ ದಾರಿಯಲ್ಲೇ ವಾಪಸ್ ಬಂದರೆ ಆ ಮೂರು ವರ್ಷದ ಬಾಲಕ ಗದ್ದೆಯಲ್ಲಿ ಗುಂಡಿ ತೋಡುತ್ತಿದ್ದ. ಆಶ್ಚರ್ಯಚಕಿತನಾದ ಅಪ್ಪ, ಏನು ಮಾಡುತ್ತಿ ದ್ದೀಯಾ? ಅಂತ […]
Date : 26-09-2010 | 16 Comments. | Read More
ಇದ್ದ ಒಬ್ಬ ಮಗನನ್ನೂ ಮೃತ್ಯು ಕಿತ್ತುಕೊಳ್ಳುವ ಭಯ, ಆತಂಕ ಮುಖ, ಮನಸ್ಸು ಎಲ್ಲವನ್ನೂ ಆವರಿಸಿದೆ. ಅಂತಹ ಸ್ಥಿತಿಯಲ್ಲಿ ಡಾ. ವೆಸ್ ಪೇಸ್ ಮುಂಬೈ ವಿಮಾನ ನಿಲ್ದಾಣದಲ್ಲಿ ನಿಂತಿದ್ದಾರೆ. ಅಷ್ಟರಲ್ಲಿ ಪರಿಚಿತವಲ್ಲದ ನಂಬರೊಂದ ರಿಂದ ಅವರ ಮೊಬೈಲ್ಗೆ ಮೆಸೇಜ್ ಬಂತು- “ಬಾಂಬೆ ಹಾಸ್ಪಿಟಲ್ನ ಡಾ. ಭೀಮ್ ಸಿಂಘಾಲ್ರನ್ನು ಕೂಡಲೇ ಸಂಪರ್ಕಿಸಿ”. ಆ ಸಂದೇಶವನ್ನು ಕಳುಹಿಸಿದ್ದವರು ಉದ್ಯಮಿ ಪಾರ್ಥಿವ್ ಕಿಲಾಚಂದ್. ಅವರ ಪತ್ನಿಯ ಮೆದುಳಿನಲ್ಲಿ ಗಡ್ಡೆಯೊಂದು ಬೆಳೆದಿತ್ತು. ಶಸ್ತ್ರಚಿಕಿತ್ಸೆಗಾಗಿ ನ್ಯೂಯಾರ್ಕ್ಗೆ ಹೋದರೂ ಫಲಕಾರಿಯಾಗದೆ ವಾಪಸ್ ಬಂದಿದ್ದರು. ಹೀಗೆ ಯಾವುದೇ ದಾರಿ […]
Date : 15-09-2010 | 18 Comments. | Read More
ಜ್ಯೋತಿ ಬಸು 25 ವರ್ಷ ಪಶ್ಚಿಮ ಬಂಗಾಳವನ್ನಾಳಿದರು. ಕರುಣಾನಿಧಿ ಇದುವರೆಗೂ 18 ವರ್ಷ ತಮಿಳು ನಾಡನ್ನಾಳಿದ್ದಾರೆ. ನವೀನ್ ಪಟ್ನಾಯಕ್ ಕಳೆದ 10 ವರ್ಷಗಳಿಂದ ಒರಿಸ್ಸಾವನ್ನಾಳುತ್ತಿದ್ದಾರೆ. ಇವರ ಹೆಸರು ಹೇಳಿದಾಕ್ಷಣ, ಕೇಳಿದಾಕ್ಷಣ ನಿಮಗೆ ಒಂದಾದರೂ ಸಾಧನೆ ನೆನಪಾಗುತ್ತದೆಯೇ? ಅಳಿದ ಮೇಲೂ ನೆನಪಿಸಿ ಕೊಳ್ಳುವಂತಹ ಒಂದಾದರೂ ಸಾಧನೆ ಮಾಡಿದ್ದಾರೆಯೇ? ಮಾಡುವ ಲಕ್ಷ್ಮಣವಾದರೂ ಇದೆಯೇ? ಆದರೆ… ಮೈಸೂರು ಒಡೆಯರು ಹಾಗೂ ಬ್ರಿಟಿಷರ ಅಂಕುಶದಡಿ 1912ರಿಂದ 1918ರವರೆಗೂ ಆಡಳಿತ ನಡೆಸಿದ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಆಳಿದ್ದು ಕೇವಲ 6 ವರ್ಷಗಳಾದರೂ, ಮಾಡಿದ್ದು ಎಂತಹ […]
Date : 15-09-2010 | 6 Comments. | Read More
Dear Friends, My editor Vishweshwar Bhat’s book on Capt. Gopinath, titled “BAANAYAANA”, is getting released on Sept 18th at Ravindra Kalakshetra. You are all cordially invited. Please do come and make it a success. Venue: Ravindra Kalakshetra Time:10: 30 AM Regards Pratap Simha
Date : 12-09-2010 | 26 Comments. | Read More
ಏಕಂ ಸತ್ ವಿಪ್ರಾಃ ಬಹುಧಾ ವದಂತಿ! ಹಾಗಂತ ಋಷಿಮುನಿ ದೀರ್ಘ ತಮಸ್ಸು ವೇದಕಾಲ ದಲ್ಲೇ ಹೇಳಿದ್ದ. ಮಹಾಭಾರತದ ಕಾಲಕ್ಕೆ ಬಂದರೆ “ಯಾರ್ಯಾರಿಗೆ ಯಾವ್ಯಾವ ರೂಪಗಳಲ್ಲಿ ಶ್ರದ್ಧೆಯಿದೆಯೋ ಅವರಿಗೆ ಆಯಾ ವಿಧಗಳಲ್ಲೇ ಸದ್ಗತಿ ಸಿಗುತ್ತದೆ” ಎಂದು ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ. As many are the people, so many may be the religions, ಅಂದರೆ ಯಾವ ಯಾವ ದಾರಿಯಿಂದ ಮನುಷ್ಯನಿಗೆ ತನ್ನಾತ್ಮದ ಸಾಕ್ಷಾತ್ಕಾರ ಆಗುತ್ತದೋ ಆ ದಾರಿಯೇ ಸರಿ, ಅದು ಇಂಥದ್ದೇ ದಾರಿ ಎನ್ನುವ ಹರವಿಲ್ಲ […]
Date : 06-09-2010 | 27 Comments. | Read More
ಅಫ್ಘಾನಿಸ್ತಾನದ ಪುಶ್ತೂನ್ ಬುಡಕಟ್ಟು ಜನಾಂಗದಲ್ಲಿ ಪದ್ಧತಿಯೊಂದಿದೆ. ಎರಡು ಕುಟುಂಬಗಳ ಮಧ್ಯೆ ಯಾವುದಾದರೂ ವ್ಯಾಜ್ಯಗಳಿದ್ದು, ಒಂದು ಕುಟುಂಬ ಮತ್ತೊಂದು ಕುಟುಂಬಕ್ಕೆ ಸೇರಿದವರ ಪ್ರಾಣಹಾನಿ ಮಾಡಿದ್ದರೆ ಅದಕ್ಕೆ ಪರಿಹಾರವಾಗಿ ಮಗಳನ್ನು ಕೊಡುತ್ತಾರೆ. ಅದನ್ನು Baad transactions ಎನ್ನುತ್ತಾರೆ. ಬೀಬಿ ಐಶಾಳ ಚಿಕ್ಕಪ್ಪ ಮಾಡಿದ್ದ ಕೊಲೆಗೆ ಪ್ರತಿಯಾಗಿ ಐಶಾ ಹಾಗೂ ಆಕೆಯ ಸಹೋದರಿಯನ್ನು ಕೊಲೆಯಾದವನ ಕುಟುಂಬಕ್ಕೆ ನೀಡುವುದಾಗಿ ವಾಗ್ದಾನ ಮಾಡ ಲಾಗಿತ್ತು. ಇಂಥದ್ದೊಂದು ದುರಂತ ಕಥೆ ಆರಂಭವಾದಾಗ ಐಶಾಗಿನ್ನೂ 8 ವರ್ಷ.
Date : 30-08-2010 | 30 Comments. | Read More
I want my country back! ಹಾಗಂತ ಈ ದೇಶದ ಹೆಮ್ಮೆಯ ಪುತ್ರನೇ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತೆ? ಈ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟ ಚೆಸ್ ತಾರೆ, ತಾನು ಯಾವ ದೇಶದ ಪ್ರಜೆ ಎಂದು ಸಾಬೀತುಪಡಿಸಬೇಕಾದ ಸನ್ನಿವೇಶ ಸೃಷ್ಟಿಯಾಯಿತೆ? ಏನಾಗಿದೆ ಕಾಂಗ್ರೆಸ್ ನೇತೃತ್ವದ ಈ ಕೇಂದ್ರ ಸರಕಾರಕ್ಕೆ? ಒಂದು ಕಡೆ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭ್ರಷ್ಟಾಚಾರವೆಸಗುವ ಮೂಲಕ, ಕಳಪೆ ಕಾಮಗಾರಿಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಳಂಕ ತರುತ್ತಿದೆ. ಇನ್ನೊಂದೆಡೆ ಭಾರತಕ್ಕೆ ವಿಶ್ವಮನ್ನಣೆ ಗಳಿಸಿಕೊಟ್ಟಿರುವ ಕ್ರೀಡಾತಾರೆಯಾದ ವಿಶ್ವನಾಥನ್ […]
Date : 22-08-2010 | 24 Comments. | Read More
Yellow Journalism. ಹಾಗೆಂದು ಕೂಡಲೇ ತಟ್ಟನೆ ನೆನಪಾಗುವುದು ವಿಲಿಯಂ ರ್ಯಾಂಡಾಲ್ಫ್ ಹರ್ಸ್ಟ್. ‘ದಿ ಸ್ಯಾನ್ ಫ್ರಾನ್ಸಿಸ್ಕೋ ಎಕ್ಷಾಮಿನರ್’ ಎಂಬ ಪತ್ರಿಕೆಯನ್ನು ಅಪ್ಪನಿಂದ ಪಡೆದುಕೊಂಡ ಹರ್ಸ್ಟ್, 1897ರಲ್ಲಿ ಅಧಿಕೃತವಾಗಿ ಮುದ್ರಣ ಕ್ಷೇತ್ರಕ್ಕೆ ಕಾಲಿಟ್ಟ. ಅದರ ಬೆನ್ನಲ್ಲೇ ‘ದಿ ನ್ಯೂಯಾರ್ಕ್ ಜರ್ನಲ್’ ಎಂಬ ಮತ್ತೊಂದು ಪತ್ರಿಕೆಯನ್ನು ಖರೀದಿ ಮಾಡಿದ. ಈ ‘ದಿ ನ್ಯೂಯಾರ್ಕ್ ಜರ್ನಲ್’ಗೂ ಹಾಗೂ ಜೋಸೆಫ್ ಪುಲಿಟ್ಝರ್ನ ‘ನ್ಯೂಯಾರ್ಕ್ ವರ್ಲ್ಡ್’ ಪತ್ರಿಕೆಗೂ ತೀವ್ರ ಸೆಣಸಾಟ ಆರಂಭವಾಯಿತು. ಪ್ರಸಾರ ಸಂಖ್ಯೆಯಲ್ಲಿ ಮೇಲುಗೈ ಸಾಧಿಸುವ ಸಲುವಾಗಿ ಪತ್ರಿಕೋದ್ಯಮದ ಮೂಲತತ್ತ್ವಗಳನ್ನೇ ಗಾಳಿಗೆ ತೂರಲಾ […]