Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಅಫ್ಘಾನಿಸ್ತಾನದ ದುರಂತ ಕಥೆ, ಭಾರತಕ್ಕೆ ಬಾರದಿರಲಿ ಆ ವ್ಯಥೆ!

ಅಫ್ಘಾನಿಸ್ತಾನದ ದುರಂತ ಕಥೆ, ಭಾರತಕ್ಕೆ ಬಾರದಿರಲಿ ಆ ವ್ಯಥೆ!

ಅಫ್ಘಾನಿಸ್ತಾನದ ಪುಶ್ತೂನ್ ಬುಡಕಟ್ಟು ಜನಾಂಗದಲ್ಲಿ ಪದ್ಧತಿಯೊಂದಿದೆ. ಎರಡು ಕುಟುಂಬಗಳ ಮಧ್ಯೆ ಯಾವುದಾದರೂ ವ್ಯಾಜ್ಯಗಳಿದ್ದು, ಒಂದು ಕುಟುಂಬ ಮತ್ತೊಂದು ಕುಟುಂಬಕ್ಕೆ ಸೇರಿದವರ ಪ್ರಾಣಹಾನಿ ಮಾಡಿದ್ದರೆ ಅದಕ್ಕೆ ಪರಿಹಾರವಾಗಿ ಮಗಳನ್ನು ಕೊಡುತ್ತಾರೆ. ಅದನ್ನು Baad transactions ಎನ್ನುತ್ತಾರೆ. ಬೀಬಿ ಐಶಾಳ ಚಿಕ್ಕಪ್ಪ ಮಾಡಿದ್ದ ಕೊಲೆಗೆ ಪ್ರತಿಯಾಗಿ ಐಶಾ ಹಾಗೂ ಆಕೆಯ ಸಹೋದರಿಯನ್ನು ಕೊಲೆಯಾದವನ ಕುಟುಂಬಕ್ಕೆ ನೀಡುವುದಾಗಿ ವಾಗ್ದಾನ ಮಾಡ ಲಾಗಿತ್ತು.

ಇಂಥದ್ದೊಂದು ದುರಂತ ಕಥೆ ಆರಂಭವಾದಾಗ ಐಶಾಗಿನ್ನೂ 8 ವರ್ಷ.

ಮದುವೆ ಮಾಡಿಕೊಡಲು ಆಕೆಯಿನ್ನೂ ದೊಡ್ಡವಳೇ ಆಗಿರಲಿಲ್ಲ. ನಾಲ್ಕು ವರ್ಷಗಳ ನಂತರ ಅಂದರೆ ೧೨ ವರ್ಷ ತುಂಬಿದಾಗ ಐಶಾಗೆ ಋತುಚಕ್ರ ಆರಂಭವಾಯಿತು. ವಾಗ್ದಾನಕ್ಕೆ ಅನುಗುಣವಾಗಿ ಆಕೆಯನ್ನು ಭಾವಿ ಪತಿಯ ಮನೆಗೆ ಕಳುಹಿಸಿಕೊಡಲಾಯಿತು. ದುರದೃಷ್ಟವಶಾತ್, ಭಾವಿ ಪತಿಯ ಕುಟುಂಬಕ್ಕೆ ಕುಟುಂಬವೇ ತಾಲಿಬಾನಿಗಳಾಗಿದ್ದರು! ಐಶಾ ತನ್ನ ಭಾವಿ ಗಂಡನ ಮನೆಗೆ ಹೋದರೆ, ಭಾವಿ ಗಂಡ ನೆರೆಯ ಪಾಕಿಸ್ತಾನದ ಗುಡ್ಡಗಾಡಿನಲ್ಲಿ ನೆಲೆಸಿರುವ ತಾಲಿಬಾನಿಗಳ ಅಡಗುತಾಣದಲ್ಲಿದ್ದ. ಆತನ ಕುಟುಂಬದ ಜತೆ ಕಾಲತಳ್ಳಲಾರಂಭಿಸಿದ ಬೀಬಿ ಐಶಾಳಿಗೆ ದನ-ಕರುಗಳ ಕೊಟ್ಟಿಗೆಯೇ ವಾಸಸ್ಥಾನವಾಯಿತು. ದಿನ ಬೆಳಗಾದ ಕೂಡಲೇ ಮನೆಗೆಲಸ, ಪಾತ್ರೆ ತಿಕ್ಕುವುದು, ಅಡುಗೆ ಮಾಡುವುದು. ಅದನ್ನು ಬಿಟ್ಟರೆ ಬದುಕಿನಲ್ಲಿ ಏನೂ ಇರಲಿಲ್ಲ. ಗುಲಾಮಳಾಗಿಬಿಟ್ಟಿದ್ದಳು. ಜತೆಗೆ ಬೈಗುಳ, ಹಿಂಸೆ ನಿತ್ಯ ಸಂಗತಿಗಳಾದವು. ಎರಡು ವರ್ಷಗಳು ಹೀಗೇ ಕಳೆದುಹೋದವು. ಜೀವನ ನಿಜವಾದ ಅರ್ಥದಲ್ಲಿ ನರಕವೆನಿಸತೊಡಗಿತು. ಈ ನಡುವೆ ನೆರೆಯ ಇಬ್ಬರು ಮಹಿಳೆಯರು ಆ ನರಕದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುವುದಾಗಿ ಆಕೆಗೆ ಭರವಸೆ ಕೊಟ್ಟರು. ತಾನಿದ್ದ ಒರುಝ್ಗಾನ್‌ನಿಂದ ಕಂದಹಾರ್‌ಗೆ ಪಲಾಯನ ಮಾಡಲು ಸಹಕರಿಸುವುದಾಗಿ ಹೇಳಿದರು. ಅವರ ಮಾತನ್ನು ನಂಬಿದ ಐಶಾ ಕಂದಹಾರ್‌ಗೆ ಹೋದರೆ ಆ ಮಹಿಳೆಯರು ಐಶಾಳನ್ನು ಬೇರೊಬ್ಬ ವ್ಯಕ್ತಿಗೆ ಮಾರಾಟ ಮಾಡಲು ಸಂಚು ನಡೆಸುತ್ತಿದ್ದರು. ಅದು ಫಲಕಾರಿಯಾಗುವಷ್ಟರಲ್ಲಿ ಮೂವರೂ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಐಶಾಳೂ ಕಂಬಿ ಎಣಿಸಬೇಕಾಗಿ ಬಂತು. ಮಹಿಳೆಯೊಬ್ಬಳು ಮನೆಯಿಂದ ಓಡಿಹೋಗುವುದು ಅಫ್ಘಾನಿಸ್ತಾನದಲ್ಲಿ ಶಿಕ್ಷಾರ್ಹ ಅಪರಾಧ. ಅಂತಹ ತಪ್ಪೆಸಗಿದ್ದಕ್ಕಾಗಿ ಐಶಾಳಿಗೆ ಮೂರು ವರ್ಷ ಜೈಲು ಶಿಕ್ಷೆ ನೀಡಲಾಯಿತು. ಈ ವಿಷಯ ಅಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಝಾಯಿ ಅವರ ಗಮನಕ್ಕೆ ಬಂತು. ಅವರು ಆಕೆಯ ಜೈಲುವಾಸವನ್ನು 5 ತಿಂಗಳಿಗೆ ಇಳಿಸಿದರು. ಕೊನೆಗೂ ಐಶಾಳ ಇರುವಿಕೆಯನ್ನು ಪತ್ತೆ ಮಾಡಿದ ಆಕೆಯ ಮಾವ ವಾಪಸ್ ಮನೆಗೆ ಕರೆದೊಯ್ದ. ಐಶಾ ತನ್ನ ಗಂಡನನ್ನು ಮೊಟ್ಟಮೊದಲ ಬಾರಿಗೆ ನೋಡಿದ್ದೇ ಆಗ. ಹಾಗಂತ ಆತ ಪತ್ನಿಯನ್ನು ನೋಡುವುದಕ್ಕಾಗಿ ಬಂದಿರಲಿಲ್ಲ. ಮನೆಯಿಂದ ಪಲಾಯನ ಮಾಡಿ, ಕುಂಟುಂಬಕ್ಕೆ ಅವಮಾನ, ಅಗೌರವ ತಂದಿದ್ದಕ್ಕಾಗಿ ಆಕೆಯನ್ನು ತಾಲಿಬಾನ್ ಕೋರ್ಟ್ ಮುಂದೆ ನಿಲ್ಲಿಸಲು ಪಾಕಿಸ್ತಾನದಿಂದ ಆಗಮಿಸಿದ್ದ.

ತಾಲಿಬಾನ್ ಕೋರ್ಟ್‌ಗಳಲ್ಲಿ ಭಯೋತ್ಪಾದಕರೇ ನ್ಯಾಯಾ ಧೀಶರು!

ನನ್ನ ಅತ್ತೆ-ಮಾವ ನಿತ್ಯವೂ ಹಿಂಸೆ ಕೊಡುತ್ತಿದ್ದರು, ಬೈಗುಳಗಳ ಸುರಿಮಳೆಗೈಯುತ್ತಿದ್ದರು, ಕೈಮಾಡುತ್ತಿದ್ದರು, ನಾನು ಓಡಿ ಹೋಗದಿದ್ದರೆ ನನ್ನ ಪ್ರಾಣವೇ ಹೋಗುತ್ತಿತ್ತು ಎಂದು ಐಶಾ ಪರಿಪರಿಯಾಗಿ ಬಿಡಿಸಿಟ್ಟಳು, ಮಾಫಿ ಮಾಡುವಂತೆ ಅಂಗಲಾಚಿ ದಳು. ಆದರೆ ತಾಲಿಬಾನಿ ನ್ಯಾಯಾಧೀಶ ಅದ್ಯಾವುದರಿಂದಲೂ ಕರಗಲಿಲ್ಲ. ಐಶಾಳ ಚಿಕ್ಕಪ್ಪನತ್ತ ಮುಖ ಮಾಡಿ, ‘ಇನ್ನು ಮುಂದೆ ಯಾವ ಹುಡುಗಿಯೂ ಓಡಿ ಹೋಗಬಾರದು, ಅಂತಹ ಶಿಕ್ಷೆ ನೀಡುತ್ತೇನೆ’ ಎಂದು ಹೂಂಕರಿಸಿದ. ಕೂಡಲೇ ತೀರ್ಪೂ ಹೊರಬಿತ್ತು. ಐಶಾಳ ಮೈದುನ ಆಕೆಯನ್ನು ನೆಲಕ್ಕೆ ಅದುಮಿ ಹಿಡಿದುಕೊಂಡ, ಆಕೆಯ ಗಂಡ ಚಾಕು ತೆಗೆದು ಮೂಗನ್ನೇ ಕಿತ್ತುಬಿಟ್ಟ. ನಂತರ ಕಿವಿಗಳನ್ನೂ ಸೀಳಿದರು. ಐಶಾ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ ಮೂಗು-ಕಿವಿಯನ್ನು ಕೊಯ್ದ ದುರುಳರು ಕಿಂಚಿತ್ತೂ ಮರುಕವಿಲ್ಲದೆ ಆಕೆಯನ್ನು ಅಲ್ಲೇ ಸಾಯಲು ಬಿಟ್ಟು ಹೊರಟುಹೋದರು.
ಇದೇನು ಹತ್ತು ವರ್ಷಗಳ ಹಿಂದೆ, ಅಫ್ಘಾನಿಸ್ತಾನವನ್ನು ತಾಲಿಬಾನ್ ಭಯೋತ್ಪಾದಕರು ಆಳುತ್ತಿದ್ದ ಕಾಲದಲ್ಲಿ ನಡೆದ ಘಟನೆಯಲ್ಲಾ  ಸ್ವಾಮಿ!

ಕಳೆದ ವರ್ಷವಷ್ಟೇ ಇಂಥದ್ದೊಂದು ಅಮಾನವೀಯ ಘಟನೆ ನಡೆದುಹೋಯಿತು. ನರಳುತ್ತಾ ಬಿದ್ದಿದ್ದ ಐಶಾಳನ್ನು ಅಮೆರಿಕದ ಪರಿಹಾರ ಕಾರ್ಯಕರ್ತನೊಬ್ಬ ಕಾಬೂಲ್‌ನಲ್ಲಿರುವ Women for Afghan Women(WAW) ಎಂಬ ಸಂಘಟನೆಯ ಆಶ್ರಯತಾಣಕ್ಕೆ ಕೊಂಡೊಯ್ದ. 2009, ನವೆಂಬರ್ 15ರಂದು ಹಾಗೆ ಕರೆತಂದಾಗ ಆಕೆ ಎಷ್ಟು ಭಯಭೀತಳಾಗಿದ್ದಳೆಂದರೆ ಮಾತನಾಡುವುದಕ್ಕೂ ಹೆದರುತ್ತಿದ್ದಳು. ಮನಶ್ಶಾಸ್ತ್ರಜ್ಞರೊಬ್ಬರು ಚಿಕಿತ್ಸೆ ನೀಡಿದ ನಂತರ ಕ್ರಮೇಣ ಚೇತರಿಸಿಕೊಂಡಳು. ಆಕೆಯ ಬಗ್ಗೆ ಅಮೆರಿಕದ ಸಿಎನ್‌ಎನ್ ಚಾನೆಲ್ ವರದಿ ಮಾಡಿತು. ಈ ಮಧ್ಯೆ, ಕ್ಯಾಲಿಫೋರ್ನಿಯಾದ ‘ಗ್ರಾಸ್‌ಮನ್ ಬರ್ನ್ ಫೌಂಡೇಶನ್’ ಆಕೆಯ ಮೂಗನ್ನು ಮತ್ತೆ ಸರಿಪಡಿಸುವ ಸರ್ಜರಿಗೆ ಸಹಾಯ ನೀಡಲು ಮುಂದಾಯಿತು. ಅಮೆರಿಕದ ಖ್ಯಾತ ವಾರಪತ್ರಿಕೆ ‘ಟೈಮ್’, 2010, ಜುಲೈ 29ರ ಸಂಚಿಕೆಯಲ್ಲಿ ಬೀಬಿ ಐಶಾಳ ಹೃದಯ ವಿದ್ರಾವಕ ಫೋಟೊ ಪ್ರಕಟಿಸುವ ಮೂಲಕ ತಾಲಿಬಾನಿಗಳ ಕ್ರೂರ ಮುಖವನ್ನು ಪ್ರಪಂಚಕ್ಕೇ ಪರಿಚಯಿಸಿತು. ಕೊನೆಗೂ 2010, ಆಗಸ್ಟ್ 4ರಂದು ಶಸ್ತ್ರಚಿಕಿತ್ಸೆಗಾಗಿ ಐಶಾಳನ್ನು ಅಮೆರಿಕಕ್ಕೆ ಕರೆದೊಯ್ಯಲಾಗಿದೆ. ‘ನಾವು ಜೋರಾಗಿ ನಗುವಂತೆಯೂ ಇಲ್ಲ’ ಎನ್ನುತ್ತಾರೆ ಅಫ್ಘಾನಿಸ್ತಾನ ಸಂಸತ್ತಿನ ಮಾಜಿ ಉಪಸಭಾಧ್ಯಕ್ಷೆ ಫೌಝಿಯಾ ಕೋಫಿ. ಮದುವೆಯಾದ ಹೊಸತರಲ್ಲಿ ನಿಖಾ ಸಂದರ್ಭದಲ್ಲಿ ಹಾಕಿದ್ದ ‘ನೇಲ್ ಪಾಲಿಶ್’ ತೆಗೆದಿದ್ದಕ್ಕಾಗಿ ನನಗೆ ರಸ್ತೆಯಲ್ಲೇ ಥಳಿಸಲಾಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ. ನಲವತ್ತು ವರ್ಷಗಳ ಹಿಂದೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲನ್ನು “Playground of Central Asia” ಎನ್ನಲಾಗುತ್ತಿತ್ತು. ಹುಡುಗಿಯರು ಜೀನ್ಸ್ ಧರಿಸುತ್ತಿದ್ದರು, ಸ್ಕರ್ಟ್ ಹಾಕುತ್ತಿದ್ದರು. ಆದರೆ 1996ರಿಂದ 2001ರವರೆಗೂ ಇದ್ದ ತಾಲಿಬಾನ್ ಆಡಳಿತದಡಿ ಸ್ಕರ್ಟ್ ಹಾಕುವುದು ಬಿಡಿ, ಹೆಣ್ಣುಮಕ್ಕಳು ಶಾಲೆಗೆ ಹೋಗುವುದಕ್ಕೂ ನಿರ್ಬಂಧ ಹೇರಲಾ ಯಿತು. ಯಾವುದಾದರೂ ಮಹಿಳೆ ವಿವಾಹೇತರ ಸಂಬಂಧ ಹೊಂದಿ ದ್ದಾಳೆ ಎಂಬ ಶಂಕೆ ಮೂಡಿದರೂ ಸಾಕು ಬೀದಿಯಲ್ಲಿ ನಿಲ್ಲಿಸಿ ಕಲ್ಲು ಹೊಡೆದು ಸಾಯಿಸಲಾರಂಭಿಸಿದರು.

ಎಂತಹ ಅಮಾನವೀಯತೆ?

ಇಲ್ಲಾ, ಇಲ್ಲಾ… ಎಲ್ಲಾ ದೇಶಗಳೂ ಅಫ್ಘಾನಿಸ್ತಾನದಂತಲ್ಲ, ಎಲ್ಲಾ ಮುಸ್ಲಿಂ ದೇಶಗಳಲ್ಲೂ ಹೀಗೇ ಆಗೋಲ್ಲ ಎನ್ನುತ್ತೀರಾ? ಹಾಗಾದರೆ ಇರಾನಿನ ಸಕೀನಾ ಮೊಹಮ್ಮದಿ ಆಶ್ತಿಯಾನಿಯ ಹಾಲಿ ಕಥೆ ಕೇಳಿ. 1967ರಲ್ಲಿ ಜನಿಸಿದ ಆಕೆ, ೨೦೦೬ರಿಂದ ಮರಣ ದಂಡನೆಗೊಳಗಾಗುವವರ ಸರದಿಯಲ್ಲಿ ನಿಂತಿದ್ದಾಳೆ. ಆಕೆಯನ್ನು ಮೊದಲು ಬಂಧಿಸಿದ್ದು ಐದು ವರ್ಷಗಳ ಹಿಂದೆ. 2006, ಮೇ 15ರಂದು. ಮೊದಲಿಗೆ ತೀರ್ಪು ನೀಡಿದ ಇರಾನ್ ನ್ಯಾಯಾಲಯ, ಇಬ್ಬರ ಜತೆ ಅನೈತಿಕ ಸಂಬಂಧ ಹೊಂದಿದ್ದಕ್ಕಾಗಿ ಆಶ್ತಿಯಾನಿಗೆ 100 ಛಡಿಯೇಟಿನ ಶಿಕ್ಷೆ ನೀಡಿತು. ಆ ವೇಳೆಗಾಗಲೇ ಆಕೆಯ ಗಂಡ ತೀರಿಕೊಂಡಿದ್ದ ಹಾಗೂ ವಿಧವೆಯಾಗಿದ್ದ ಆಕೆ ಅನ್ಯಪುರುಷರ ಜತೆ ದೈಹಿಕ ಸಂಪರ್ಕ ಬೆಳೆಸಿದಳೆಂಬ ಹುಸಿ ಕಾರಣವೊಡ್ಡಿ ಛಡಿಯೇಟಿನ ಶಿಕ್ಷೆ ನೀಡಲಾಗಿತ್ತು. ಅದರ ಜಾರಿಯನ್ನೂ ಮಾಡಲಾಯಿತು. ಈ ಮಧ್ಯೆ, 2006 ಸೆಪ್ಟೆಂಬರ್‌ನಲ್ಲಿ ಮತ್ತೆ ಆಕೆಯ ಪಾತ್ರದ ಬಗ್ಗೆ ಅನು ಮಾನಗಳೇಳಲಾರಂಭಿಸಿದವು. ಪತಿ ಮೊಹಮ್ಮದಿ ಆಶ್ತಿಯಾನಿಯ ಕೊಲೆಯಲ್ಲಿ ಆಕೆಯೂ ಭಾಗಿಯಾಗಿದ್ದಾಳೆ ಎಂಬ ಶಂಕೆ ಮೂಡಿತು. ಮತ್ತೆ ಅನೈತಿಕ ಸಂಬಂಧದ ಆರೋಪವನ್ನು ಕೈಗೆತ್ತಿಕೊಳ್ಳಲಾಯಿತು. ಆದರೆ ವಾಸ್ತವದಲ್ಲಿ ಸಕೀನಾ ಅಂತಹ ಯಾವ ತಪ್ಪನ್ನೂ ಮಾಡಿರಲಿಲ್ಲ. ತಾನು ಅನೈತಿಕ ಸಂಬಂಧವನ್ನು ಬೆಳೆಸಿಲ್ಲ ಎಂದು ಮೊದಲ ವಿಚಾರಣೆ ವೇಳೆಯೇ ಅಂಗಲಾಚಿದ್ದಳು. ಈ ಮಧ್ಯೆ, ಕೊಲೆ ಹಾಗೂ ಅನೈತಿಕ ಸಂಬಂಧ ಎರಡೂ ಪ್ರಕರಣಗಳ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ, ಕೊಲೆಯಲ್ಲಿ ಆಕೆ ಭಾಗಿಯಾಗಿದ್ದಾಳೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಸಿಗದೆ ನಿರ್ದೋಷಿ ಎಂದಿತು. ಆದರೇನಂತೆ ಗಂಡ ಬದುಕಿರುವಾಗಲೇ ಆಕೆ ಅನೈತಿಕ ಸಂಬಂಧ ಹೊಂದಿದ್ದಳು ಎಂಬ ಹೊಸ ಪ್ರತಿಪಾದನೆ ಮಂಡಿಸಿ, ಆಕೆಗೆ ಕಲ್ಲುಹೊಡೆದು ಸಾಯಿಸುವಂತಹ ಶಿಕ್ಷೆಯನ್ನು (ಮರಣದಂಡನೆ) ವಿಧಿಸಿತು. ಅಷ್ಟಕ್ಕೂ ಇರಾನಿನ ಇಸ್ಲಾಮಿಕ್ ಕಾನೂನಿನ ಪ್ರಕಾರ ಮದುವೆಗಿಂತ ಮೊದಲು ದೈಹಿಕ ಸಂಪರ್ಕ ಮಾಡಿದರೆ ೧೦೦ ಛಡಿಯೇಟು ಹಾಗೂ ವಿವಾಹದ ನಂತರ ಅನೈತಿಕ ಸಂಬಂಧ ಮಾಡಿದರೆ ಮರಣದಂಡನೆ ಶಿಕ್ಷೆ ವಿಧಿಸಲಾಗುವುದು. ಹಾಗಾಗಿ ಸಕೀನಾ ಸಂಕಷ್ಟಕ್ಕೆ ಸಿಲುಕಿದಳು. ತಾನು ನಿರ್ದೋಷಿ ಎಂದು ಮನವರಿಕೆ ಮಾಡಿಕೊಡಲು ಎಷ್ಟೇ ಪ್ರಯತ್ನಿಸಿದರೂ ನ್ಯಾಯಾಲಯ ಒಪ್ಪಲಿಲ್ಲ. ಆಕೆಯ ಪರ ವಾದ ಮಾಡಿದ ವಕೀಲ ಮೊಹಮದ್ ಮೊಸ್ತಫೆ ದೇಶವನ್ನೇ ಬಿಟ್ಟು ಪಲಾಯನ ಮಾಡಬೇಕಾಗಿ ಬಂತು. ಈ ಮಧ್ಯೆ ಆಕೆಯ ಪುತ್ರ ಹಾಗೂ ಪುತ್ರಿ ಫರೀದಾ, ಅಮ್ಮನಿಗಾದ ಅನ್ಯಾಯದ ವಿರುದ್ಧ ಧ್ವನಿಯೆತ್ತಿದ್ದಾರೆ. ಕ್ಷಮಾದಾನ ನೀಡುವಂತೆ ಇರಾನ್‌ನ ಧಾರ್ಮಿಕ ಗುರು ಅಲಿ ಖೊಮೇನಿ, ಅಧ್ಯಕ್ಷರಾದ ಅಹ್ಮದಿನೆಜಾದ್ ಹಾಗೂ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಆಯಾತೊಲ್ಲಾ ಲರಿಜಾನಿ ಅವರಿಗೆ ಮೊರೆಯಿಟ್ಟಿದ್ದಾರೆ. ‘ನನ್ನ ತಾಯಿಯನ್ನು ಏಕಾಗಿ ಒಂದೇ ಆರೋಪದ ಮೇಲೆ ಎರಡು ಬಾರಿ ವಿಚಾರಣೆಗೆ ಒಳಪಡಿಸಲಾಯಿತು? ಇಸ್ಲಾಮಿಕ್ ಕ್ರಿಮಿನಲ್ ಕಾನೂನಿನ ಪ್ರಕಾರ ಕೂಡ ಒಬ್ಬರನ್ನು ಒಂದು ತಪ್ಪಿಗಾಗಿ ಒಮ್ಮೆ ಮಾತ್ರ ವಿಚಾರಣೆಗೆ ಗುರಿಪಡಿಸಬೇಕು ಎಂದಿದೆ. ಆದರೂ ಏಕೀ ಅನ್ಯಾಯ?’ ಎಂದು ಪ್ರಶ್ನಿಸಿದ್ದಾರೆ. “We stretch our hands to the people of the world. No matter who you are or where in the world, save our mother” ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಬಹಿರಂಗ ಪತ್ರ ಬರೆದಿದ್ದಾರೆ. ಅದಕ್ಕೆ ಸ್ಪಂದಿಸಿರುವ ಫ್ರಾನ್ಸ್ ಅಧ್ಯಕ್ಷ ನಿಕೋಲಾಸ್ ಸರ್ಕೋಝಿ ಪತ್ನಿ ಕಾರ್ಲಾ ಬ್ರೂನಿ, ಫ್ರೆಂಚ್ ನಟಿ ಇಸಬೆಲ್ ಅದ್ಜಾನಿ ಕೂಡ ಸಕೀನಾ ಪರ ಧ್ವನಿಯೆತ್ತಿದ್ದಾರೆ. ಕಲ್ಲು ಹೊಡೆಯುವಂತಹ ಅಮಾನವೀಯ ಶಿಕ್ಷೆಯನ್ನು ನೀಡಬಾರದು ಎಂದು ಒತ್ತಾಯಿಸಿದ್ದಾರೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರಾನ್ ಮೇಲೆ ಒತ್ತಡ ತರಲು ಪ್ರಯತ್ನಿಸುತ್ತಿದ್ದಾರೆ. ಇಷ್ಟಾಗಿಯೂ ಸಕೀನಾ ಅವರ ಕ್ಷಮಾದಾನ ಅರ್ಜಿ ತಿರಸ್ಕೃತವಾಗಿದೆ. ಹಾಗಾಗಿ ದೇಹವನ್ನು ಭುಜದವರೆಗೂ ಹುಗಿದು ತಲೆಗೆ ಕಲ್ಲುಹೊಡೆದು ಯಾವ ಕ್ಷಣದಲ್ಲೂ ಆಕೆಯನ್ನು ಸಾಯಿಸಬಹುದು!

Alas!

ಇವುಗಳು ಏನನ್ನು ಸೂಚಿಸುತ್ತವೆ? ನಾವು ಬದುಕುತ್ತಿರುವುದು ನಾಗರಿಕ ಸಮಾಜದಲ್ಲೇನಾ? ಅಫ್ಘಾನಿಸ್ತಾನದ ಪ್ರಜಾತಂತ್ರ ಇನ್ನೂ ಶೈಶವಾವಸ್ಥೆಯಲ್ಲೇ ಇದ್ದು, ಬೀಬಿ ಐಶಾಳಂತಹ ಘಟನೆ ಗಳು ಸಂಭವಿಸಿರುವುದರಲ್ಲಿ ಅಂತಹ ಆಶ್ಚರ್ಯವೇನೂ ಇಲ್ಲ ಎನ್ನಬಹುದು. ಆದರೆ ಪ್ರಬಲ ಪ್ರಜಾತಂತ್ರ ವ್ಯವಸ್ಥೆಯನ್ನು ಹೊಂದಿರುವ ಇರಾನ್‌ನಲ್ಲೂ ಇಂತಹ ಘಟನೆಗಳು ಸಂಭವಿಸುತ್ತಿರು ವುದರ ಬಗ್ಗೆ ಏನನ್ನಬೇಕು? ಅಥವಾ ಇವುಗಳು ದೂರದ ಇರಾನ್ ಹಾಗೂ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಘಟನೆಗಳು ಎಂದು ಸುಮ್ಮನಿರುತ್ತೀರಾ? ಹಾಗಾದರೆ ಪ್ರಸ್ತುತ ಕಾಶ್ಮೀರದಲ್ಲೇನಾಗುತ್ತಿದೆ ಎಂದು ಗಮನಿಸಿದ್ದೀರಾ? ಪ್ರತ್ಯೇಕತಾವಾದಿ ಸಂಘಟನೆ ಹುರ್ರಿಯತ್ ಕಾನ್ಫರೆನ್ಸ್ ಕಾಶ್ಮೀರದಲ್ಲಿ ತನ್ನದೇ ಆದ ಹೊಸ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. ಇಡೀ ದೇಶಕ್ಕೆ ಭಾನುವಾರ ರಜಾ ದಿನವಾದರೆ ಕಾಶ್ಮೀರಕ್ಕೆ ಶುಕ್ರವಾರ ರಜಾದಿನ! ಶನಿವಾರ ಅರ್ಧ ದಿನ ಶಾಲೆ ತೆರೆಯುತ್ತವೆ, ಭಾನುವಾರ ಪೂರ್ಣಕಾಲ ಪಾಠಪ್ರವಚನ ನಡೆಯುತ್ತವೆ. ಸರಕಾರಿ ಕಚೇರಿಗಳೂ ಭಾನುವಾರ ತೆರೆಯಲಾರಂಭಿಸಿವೆ. ಇಂತಹ ಕ್ಯಾಲೆಂಡರ್ ಇರುವುದು ಇಸ್ಲಾಮಿಕ್ ದೇಶಗಳಲ್ಲಿ ಮಾತ್ರ!! ಬುರ್ಖಾ ಹಾಕದೆ ಹೋದ ಹೆಣ್ಣುಮಕ್ಕಳ ತಲೆ ಬೋಳಿಸಿದ, ಆಸಿಡ್ ಹಾಕುತ್ತೇವೆ ಎಂದು ಬೆದರಿಸಿದ ಘಟನೆಗಳು ಕಾಶ್ಮೀರದಲ್ಲಿ ಮೊದಲಿನಿಂದಲೂ ಸಂಭವಿಸುತ್ತಾ ಬಂದಿವೆ. ಅಷ್ಟೇಕೆ, ಅತ್ಯಾಚಾರವೆಸಗಿದ ಮಾವನನ್ನು ಗಂಡ ಎಂದು ಒಪ್ಪಿಕೊಂಡು, ಗಂಡನನ್ನು ಮಗನೆಂಬಂತೆ ಕಾಣು ಎಂಬ ತೀರ್ಪು ಕೊಟ್ಟ ‘ಇಮ್ರಾನಾ’ ಪ್ರಕರಣ ಉತ್ತರ ಪ್ರದೇಶ ದಲ್ಲಿ ನಡೆದು ನಾಲ್ಕು ವರ್ಷಗಳೂ ಕಳೆದಿಲ್ಲ. ಸಾನಿಯಾ ಮಿರ್ಜಾಳ ಲಂಗದ ಮೇಲೇ ಕೆಂಗಣ್ಣುಬೀರಿದ ‘ಫತ್ವಾ’ ಇನ್ನೂ ಹಸಿಯಾಗಿಯೇ ಇದೆ. ಇವೆಲ್ಲಾ ಯಾವುದರ ಸೂಚನೆ? ಇಂತಹ ತಾಲಿಬಾನಿ ಮನಸ್ಥಿತಿಯ ಬಗ್ಗೆ ನಾವೂ ಭಯಪಡದೆ ಇರಲಾದೀತೆ? ಕಾಶ್ಮೀರದಂತಹ ಒಂದು ರಾಜ್ಯದಲ್ಲಿ ಮುಸ್ಲಿಮರು ಬಹುಸಂಖ್ಯಾತರಾದರೆ ಅಲ್ಲಿನ ನೀತಿ-ನಿಯಮಗಳೇ ಬದಲಾಗು ವುದಾದರೆ ಉಳಿದ ರಾಜ್ಯಗಳಲ್ಲೂ ಅದೇ ಪರಿಸ್ಥಿತಿ ಸೃಷ್ಟಿಯಾದರೆ ಕಥೆಯೇನಾದೀತು?

ಬೀಬಿ ಐಶಾಳ ಕರುಣಾಜನಕ ಕಥೆಯನ್ನು ಬಿಡಿಸಿಟ್ಟ ‘ಟೈಮ್’ ಮ್ಯಾಗಝಿನ್, ತನ್ನ ಕವರ್ ಪೇಜ್ ಮೇಲೆ “What Happens if We(America) Leave Afghanistan…” ಎಂದು ಪ್ರಶ್ನಿಸಿದೆ. ಕಾಶ್ಮೀರದಲ್ಲಾಗುತ್ತಿರುವ ಕಹಿ ಅನುಭವದ ಹಿನ್ನೆಲೆಯಲ್ಲಿ ನಮ್ಮ ದೇಶದ ಭವಿಷ್ಯದ ಬಗ್ಗೆಯೂ ಸ್ವಲ್ಪ ಯೋಚಿಸಿ… What Happens if Muslims become majority?!

27 Responses to “ಅಫ್ಘಾನಿಸ್ತಾನದ ದುರಂತ ಕಥೆ, ಭಾರತಕ್ಕೆ ಬಾರದಿರಲಿ ಆ ವ್ಯಥೆ!”

  1. Raviraj says:

    Pratap,
    nice article. So, what is the solution?

    In my view, the solution is
    1> Ask Hindus to produce more kids compared to muslims, which will be treated as regressive in India.
    2> Bring strict laws to control everyone’s population, which definately is not possible in India.

    Any other solution ?

  2. swamy says:

    Nice article once again, this point v really need to think of (ಕಾಶ್ಮೀರದಲ್ಲಾಗುತ್ತಿರುವ ಕಹಿ ಅನುಭವದ ಹಿನ್ನೆಲೆಯಲ್ಲಿ ನಮ್ಮ ದೇಶದ ಭವಿಷ್ಯದ ಬಗ್ಗೆಯೂ ಸ್ವಲ್ಪ ಯೋಚಿಸಿ… What Happens if Muslims become majority?), our so called elected government appraising them for the need of their votes n indirectly allowing to make their strong hold here, just see the situation created during arrest of Madani…….
    In future v become minority in our own country, v too get Friday as our national holiday?

  3. Manju.... says:

    Pratap Anna
    Super awareness message we should wake up otherwise days are count. in my opinion youth can only change our system otherwise we can’t save our culture,country,freedom please if u have another copy please send it to Ravibeligere,ananthmurthy,agni sridhar, sharuk khan ,NDTV staff ,ajthak and sonia gandhi…..thanks anna for giving wonderful message we are always with u

    by…manju

  4. Chethan, Coorg says:

    It is very dangerous message to the world. Let us save my country with this brutal attitude.

    Always Dangerous 🙁 🙁

  5. vinay ndk says:

    what has happened to these people..are they really humans ???..they should be punished equally…

  6. guruprasad.n.nayak says:

    pratap simha nanu nima doda fan .tavheludu correct adrey congress partyge yake estu muslim r kandrey preeti anta gotagala.pratap will u write one article on should gohatyey .please i want to know your view on that topic.please

  7. guruprasad.n.nayak says:

    hi pratap this is guruprasasd .n.nayak.i am your great fan what u said is correct but who will make understand this congress government. and please i have one request to you .can you write a article on should ban against cattle murder imposed in karnataka.and please can i get your cell number.waiting for your reply

  8. GURU says:

    hi, pratap sir,
    it’s shame to human society. as you told it’ll spread to our country also. so we have to save our country from taliban.

  9. ಕುಮಾರ says:

    ಶೀರ್ಶಿಕೆಗೆ ತಕ್ಕಂತಹ ಲೇಖನ
    ದುರ್ದೈವದ ಸಂಗತಿ ಯೆಂದರೆ ಇದು ನಮ್ಮ ದೇಶಕ್ಕೂ ಕಾಲಿಟ್ಟಿದೆ
    ಮೇಲಿನ ಫೋಟೋ ನೋಡಿದರೆ ಇಂತಹ ಪರಿಸ್ಥತಿ ನಮ್ಮ ಶತ್ರುವಿಗೂ ಕೂಡ ಬರಬಾರದು

  10. ULLEKH HEGDE says:

    The day of us becoming minorities is very near!! If we don’t wake up then our glorious culture will be lost in time!! And we Hindus are responsible for this. We should unite and face these problems.

  11. 3veni says:

    hi…..
    Pratap….
    i m waiting for this coming saturday…..wht i vll get???????

  12. shoban says:

    en madodu e congress pakshdoru jatytita anta helkondu muslimmra votegoskara hindugala kadeganisidddare , muslimaru en tappu madidru sahaja, avra mele matado gandstana ella cogressnorge, nammane hindu terrosim anta karitare , loaffers , hindgalu election bandaga nodkalli , ag Anta BJP SUPPORT MADTA ILLA , IDEPENDENTS OLLEJANA NILTARE AVRGEADRU VOTE MADI , Edeshana CONGRESS enda kapai PLEASE PLEASE THANKS PRATAP SIR

  13. Prashanth somanna says:

    Namasthe,

    To live life we do not need any religion, it is humanity which is essential for life.

    If humanity, freedom is not there in the religion why we should follow that.

    I feel a proper education can change the society & the country, unfortunatly afgan

    is in the hands of fundamentalists who do not have humanity & commmon sense.

    The story here is a live example of women exploitation. I think these religeous

    people do not consider women as human being who has given birth to men. Any

    way lets pray for the good of peolple like Bibi Aisha.

    As far as our country is concerned.

    If we see in the world culture the only indian culture highly respected women.

    To protect our country we require able leaders in all fields, we can not expect these

    leaders from cogress or any other poilitican party because all politican paties look

    the matters from the interest of party future not country’s future.

    Young india need to take resposibility & accountability of country’s future &

    contribute in some way for the better india.

    Lets hope for the best, lets contribute in our own way little to country,

    definetly india will shine.

    Jai Hind, Jai Bharath.

    Prashanth

  14. A lemary says:

    Unless we unite and stop dividing our society based on caste, religion, language etc, it is certain we are going to be a nation of minorities with muslims becoming majority with no other effort and teach us the same lessons they teach every where else.

  15. vadiraj says:

    nice article …. but question is how to control this kind of unhuman activities……

  16. Perduru Santhoosha says:

    Kashmeerada vimochaneya sandarbadalluu ide tharaha muslim yuvakare muslim yuvathiyarannu athyaachara maaduththiddaru endu odida nenepu. Muslim dharmada bagge bareda baangla lekhaki thaslima ge aadanthaha paristhitiyuu saha muslim mahilleyarigiruva swathanthryavannu thilisikoduththade. “Yatra naaryanthu pujyanthe ramanthe thatru devathaha ” embanthe namma hinduu darmadlli mahileyarige needuva sthaanamaana bere yaava dharmadalluu kaanalu saadyavilla.

  17. Arun says:

    good article. i cannot say what is going on…..

  18. suhas.v.athreya says:

    superb article:-) nice job done in collecting information about these things …. Its one of the best quoted examples for cruelity in islam…its not about thing to hate islam.. Its about in us we people should awake ourself and bring in reforms to human race…

    Thanking you

  19. Rakeshkumar says:

    hi pratap,

    Even though india is a democratic country but every person comes under the common roof of jurisdiction but why government is allowing fatwa and all?

  20. THOMAS says:

    BJPs defeat: The Hindu perspective
    By: Bandyopadhyay Arindam

    The BJP has lost in the recently concluded Lok Shabha 2009 elections. The political party, conceived as the face of Hindu interest has lost to the dynastic Congress Party. The people of India, the land of ancient Hindu civilization, with over 700 million electorate, arguably 80% of whom are Hindus, participated and chose not to elect the party that is accused of being communal and non-secular for promoting Hindu agendas and looking after Hindu concerns. Logically then one has to raise the following questions: Are there really any Hindu specific agendas? Are the majority Hindus disinterested in Hindu agendas and concerns? Or are the Hindus disenchanted with the BJP and believe that they do not represent Hindu interest in the way they should?

    It appears that the Muslim community who dumped the Communists and the Laloos, Mulayams, Paswans and Mayabatis this time, have returned to the fold of the Congress with renewed hope that the Congress lead government will finally address their problems and concerns , rather than continuing with their appeasements policies for vote banks. The small Christian community, empowered by the support of the ruling caucus of India as well as the international solidarity with the global Christian world and emboldened by their success in Orissa and Karnataka in recent times, had openly called for en bloc vote against the BJP. Post poll they are optimistic that it will “definitely benefit the growth of Christianity in the next five years”. Such calls for mass voting on religious lines are not perceived as communal in case of the minorities; it is defended as their religious freedom.

    But despite the swings of minority votes, it is conceivable that, barring a few pockets in the country, most Indian who voted would still be from the majority population, the Hindu community. So are there any Hindu specific issues and if so why does it fail to be important to the Hindus? Religion to most Hindus is a private affair. Perhaps resulting from centuries of oppression, Hindus generally do not openly claim their religiosity. Even in socio-political issues related to Hindu interest, they hardly ever want to take any collective stand as a religious body but prefer to appear neutral and secular. Neither do they take interest in the consequences of religiously divisive politics.

    India is a secular nation because Indian Hindus want it to be secular. Religious plurality is integral to the Hindu Dharma which is way beyond one scripture and one prophet and preaches “truth is one; sages call it by various names.” Hindu India had given shelter and coexisted harmoniously with the early Syrian Christians, Jews, the Parsees and more recently the Dalai Lama and had seen the birth of Buddhism, Jainism and Sikhism in its land. And this continued until the advent of the proselytizing Abrahmanic religions. Post-independence while Pakistan chose to be Islamic, India opted to be religiously secular and barring stray communal tension, in a land of one billions, have had a peaceful path of development. India has the second largest Muslim population in the world and the Indian Muslims are the only Muslims in the world to enjoy sustained democracy. But India must also be the only country in the current world and even perhaps in history where the majority population, sacrifices their own interests and failing to take a united stand, allows the minorities to dictate terms. Hindus, largely socio-politically dispassionate, fail to realize implications of such blatant communal calls like” “Muslims must have first claim on national resources” or the significance of the fact that their temple donations, instead of being used for uplift of the temples, its priests and its facilities are funneled to fund madrassas and Haj pilgrimage. Hindu parents are media managed to harm and hurt educational, employment, economic and business opportunities of their own children and grandchildren by giving their notes and votes to such political parties which shout from their political rooftops that they will give special preferences to Muslims and Christians over Hindu youth in matters of education, training facilities, government jobs, jobs under police and paramilitary forces, employment in banks and other public sector undertakings and bank loans, educational loans etc.

    The unconstitutional, undemocratic and divisive politics of minority appeasements is not only depriving the Hindus of their rightful claims but is also fragmenting the country.

    On the other hand, if and when Hindus raise any issue it is throttled as communal? Secularism has a different meaning in Congress ruled India. When the Morarji Desai government moved the 45th Constitutional Amendment Bill in 1978 which, among other issues, defined secularism as equal respect to all religions, that bill was passed in the Lok Sabha, but turned down by the Congress majority in the Rajya Sabha. Is secularism a burden of Hindus alone? Do Hindus have to prove it at every step – in thoughts, words and deeds, casting their own religion, tradition and faith into oblivion? Is it communal to portray the glory of Pre-Islamic Hindu civilization or to demand an accurate Indian history to be taught to our children? Is it communal to call for a uniform civil code for all Indian citizens? Is it communal to challenge Bangladeshi infiltration or to integrate Kashmir to the rest of India? Is it communal to expect strong laws against terrorism and to see it implemented, irrespective of political affiliation, religion, caste or creed? If a Hindus laments for the Palestinians he is lauded as a liberal but if he demands rehabilitation of Hindu Kashmiri Pundits or protests Hindu decimation in Bangladesh or Pakistan, he becomes a religious narrow-minded hardliner. If the Muslims riot for a Muslim cause like Danish cartoon or Saddam Hussein, it is defended as their religious sentiment but if Taslima Nasreen happens to speak of Muslim atrocities on Hindus, she is driven out of the country.

    The Hindu majority cannot be unaware of these Hindu issues but they do not seem to be concerned. Even if they are, their voice does not reach the required decibel to penetrate the ears of authorities or to influence the media. Or else they allow themselves to be cleverly manipulated to maintain religious amity. Hindus are required to self sacrifice for communal harmony for the sake of national interest and minority rights protection. The same is not required from the other religious denominations.

    Each individual Hindu is been delicately trapped into this game of communalism and pseudo- secularism that the media and the politicos play with the mass, such that he or she is hesitant to fight for his or her own rights now, in fear of becoming branded as nonsecular.

    The BJP or any so called “Hindu” party or organization had never been any favorite of the media, neither has any Hindu cause ever been given a decent hearing by the self proclaimed judges of secularism. A demolition of (Ram) Janmasthan Mosque (aka Babri Masjid) is a subject of eternal condemnation because it gives an perpetual opportunity for Hindu bashing. One hardly sees similar criticism verbalized in defense of the Hindu issues of Amarnath or Ram Sethu. Hindu agendas, like control of temple funds and educational institutions, are dealt only with conventional formality because defending Hindu cause in India is equated with being communal. Most political parties and leaders are careful to appear politically correct by dissociating themselves from Hindu issues. They pretend to be ignorant or noncommittal even if the issue is of such national interest as terrorism and defense of the country or accountability of NGO funding or retrieving illegal foreign bank funds, lest they appear as against minorities. On the other hand, the same so called “secular and liberal” politicians, leaders, media personnel”s, statesmen or activists are ever alert not to miss any opportunity to hog the limelight and get some brownie points by condemning Hindus on the slightest provocation.

    On the one hand, by continuously harping on special status and minority victim hood for vote bank politics, the secular brigade of post independent India, like their English predecessors, have successfully mixed the poison of distrust against the majorities, thus alienating the minorities from the national main stream. On the other hand they continue to divide the plural Hindu society – each individual is either a dalit, an OBC or a brahmin, a Marathi, Gujrati or a Punjabi, a Jadav or a Thakur, never a Hindu, never an Indian.

    A lot has been written about the state of BJP in the post election phase. From regional to national and international news media, blogs, news articles, letters and editorials have flooded with analyses and advices, both from supporters and adversaries. Understandably many are obviously relieved to see BJP”s defeat. In some cases, the mood of gleeful over joy at their dismal failure is hardly suppressible. It is a defeat of Hindus and of Hindutva, a decisive blow to majority communalism, the rejection of the Hindu hardliners, the end of Hindu nationalism – claims the pundits. It was a vote for Congress on the basis of development and stability, they analyze. They fail to explain why there are several states starting from Gujarat which are developing rapidly in the country but are not blessed by the Congress government. India, as they say, is developing despite the government and thankfully so.

    As for stability, the statistics on terrorism speaks for itself. Even before the Mumbai carnage of 26/11/08 in which at least 172 people died, in 69 Islamic terrorist attacks since 2000, there were 1,120 deaths. In 2007, the United States” National Institute of Counter Terrorism calculated that between January 2004 and March 2007, the death toll in India from all terrorist attacks was 3,674, second only to Iraq during the same period. After each terrorist punch, India reels and falls, chants “zero tolerance to terror” and assures to “bring all culprits to justice”, stands up wobbly, only to be knocked down again with the next punch. The farce after the Mumbai carnage was there for the world to see and is still continuing. Not a single terrorist has ever been punished in India. The whole world knows now that India is a soft state, unable to take care of herself, but the government remains paralyzed from fear of disturbing the minority votes. The same paralysis also prevails in dealing with Maoist terror. Is that the stability we are counting upon?

    The well wishers of BJP themselves are divided whether BJP should embrace Hindu interest more vigorously or shun it to present an acceptable face to all religious factions. Those who want BJP to shed their Hindu character are forgetting that it is the Hindus who made BJP what they are now. Asking BJP to discard its Hindu interest would be endorsing the toxic propaganda of the pseudo-secular brigade that Hindu nationalists will ruin the country and retard its development. It would be naivety to think that the BJP, already branded as a Hindu nationalist party all over the world, can convince the minorities enough to get any significant share of their votes in future. The party has been trying to “reach out” to minorities, but that hardly made any impact to their conviction. BJP in the process forgot the basis of its birth and the reason for its existence. On top of the failure to connect to the millions of Hindus who are sitting on the fence, unsure of their rights and ignorant of their collective political power, the party risks losing the faith of the millions of its Hindu supporters who looked up to it with an expectation of being a party with a difference, that will not hesitate or provide lame excuses to address the problems of the country, including those of the Hindus. The BJP has been accused to imitate others and try to appear “secular” and shy away from their commitment to the Hindus and to the nation, which had brought them to power in the first place. They squandered their initial opportunity five years ago and then, without any media support of their own, failed to counter the relentless propaganda of the anti Hindu, pseudo secular media and politicians. They needed to convince the electorate that they wanted to build a strong nation with an essential Hindu character that had defined India civilization from ancient times and had identified it as separate from all other countries of the world. It would have been the proverbial Ram Rajya, based on Dharma, which included equal rights and benefits for all its proja or citizens, including the nationalistic minorities. They had to convince that they were capable of fighting all internal and external influences that would otherwise love to see India disintegrate. They had to provide the vision of putting the nation of India, ahead of all its fractions but they have been unable to do so. A lot of self analysis and introspection is required for the party to come back to their right path. The pseudo-secular intelligentsia and media which have tasted blood will try hard to ensure that there is no easy recovery and that is perhaps the first thing that the party has to counter.

    But even if the BJP fail the Hindus and moves away from its ideology, should it be the end of the dream of the Hindus? BJP is merely a blip, tumbling in its infancy, in the eternal history of Sanatan Hindu Dharma. Not too long ago the Hindus of Hindustan, the home of over 80% of the world”s billion plus Hindu population, used to find solace in the fact that Nepal was the only Hindu country of the world. They cannot relish the idea anymore. India is not a declared Hindu country but still is the land of Hindu civilization. The sons of the soil are either Hindus or mostly of Hindu ancestry, with a culture and tradition that perhaps distinguishes even an Indian Muslim or Indian Christian from its co-religionist abroad. It is that Indian-ness of the country, which is essentially a Hindu identity and its continuity that is in danger. That is all the Hindus have and they have to fight to preserve it, with or without the BJP. India is at crossroad. The violent religious aggression of Islam and the more subtle cultural and religious invasion of Christianity to what is remaining of the once mighty Indian civilization are very real. The Naxal-Christian alliance is true no matter how much our media and politicians want to downplay it. India is the last bastion of ancient civilization that has resisted the aggression and maintained its continuity for millennia, because of the Hindus. Hindus have fought for centuries against foreign invaders, now it is time to clean their own house as well.

    The political leaders and media should be careful not to play with Hindu sentiments with divisive politics. The people of India have successfully reduced the stature of the small players in this election. The big teams are thus warned to stay away from politics of minorityism. But to ensure that Hindus themselves need to be much more vigilant and socio-politically active. They need to verbalize their resentment and unite to fight together irrespective of their caste, creed and individual interest. Every swami or sadhu should encourage his followers, every temple should become grounds for sociopolitical awareness, and every Hindu gathering should be an opportunity of active discussion. Each and every person who cares for Hinduism and is proud to be a Hindu is to join hands. And above all, they need to be prepared for a long battle that can become ugly, for a noble cause.

  21. Gangaraju says:

    Namaskara,
    the views from
    Prashanth somanna
    September 9th, 2010 at 262530

    and
    Bandyopadhyay Arindam

    are perfectly right.

    MathaDaara re dayavittu , yochane maadi matha chalayisi.

  22. prabhu says:

    please frds viatsit faithfreedom.org to no the more realty and dangerness

  23. Swapna says:

    As usual nice article Pratap, really your question makes us scary???

  24. Raviraj says:

    Pratap,

    Demonising muslims or creating a ghost of them will never help India’s cause. We must get them to mainstream to stop radicals taking control over them and what is the way? I believe Language plays a major role in there.

    See how muslims in Tamilnadu have joined the tamil mainstream there. In masjids, muslims pray in tamil. They speak tamil at home. A tamil speaking muslim will never feel brotherhood with a radical muslim in Pakistan or Arab country. So, it’s very important to get them our local mainstream to disconnect from other radical forces that exist in that religion. So, instead of seeing linguistic diversity as an impediment or hurdle to India’s unity, we must make efforts to preserve and get people of all religion to embrace the mainstream of the state they live in. May be connecting muslims of Karnataka to Kannada is a step in that direction.

  25. chetan says:

    I am first time visitor to your website, a very nice article and really makes us worry about future.

    One of my european clients had recently been to kerala for tour and was surprised to see the conversions in a local church. this client had deep interest in hinduism and he questioned them why they are leaving the most ancient religion, to his surprise the reply from the church priest was that missionaries are more organised and that hindus are not..

    People in the WEST are questioning the authencity of bible/koran etc.. 1. refer Bill mahers documentry ” REligiousity” and 2. http://www.islam-watch.org, while these missionaries focus on rural-tribal areas to increase their headcount..

    Hindu masses are very ignorant about their religion. we never take pride in learning our sastras and puranas / itihasas.. we just ape the WEST…

    We need to spread more awareness, sadly we are responsible for our fates.. in our materialistic lives we give only prominence to career and jobs..

    We have to break free from self centrered goals and work towards Hindu Unity….

    We cannot forget the sacrifices made by Vir savarkar, Hedgewar, Golwalkar, Godse et al..

    They were not hindu extremists ..but protectors of hindu people..

    JAI SANATHANA DHARMA..

  26. Anantharama Shetty says:

    @Raviraj,

    A very wel thought. Its a good observation and I also observed the same in malayaali Muslims.

  27. Narendra P Sastry says:

    Dear Pratap
    One more gem out of your reality reveal articles…thanks millions
    also i would request you to have all these articles converted into english as well…
    thanks
    Narendra P Sastry