Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಲಾರಾನನ್ನು ನೆನಪಿಸಿದ ಲಕ್ಷ್ಮಣ!

ಲಾರಾನನ್ನು ನೆನಪಿಸಿದ ಲಕ್ಷ್ಮಣ!

ಆ ಪಂದ್ಯವನ್ನು ಯಾವ ಕ್ರಿಕೆಟ್ ಪ್ರೇಮಿಯೂ ಮರೆಯಲು ಸಾಧ್ಯವಿಲ್ಲ. ಅದು 1999 ಮಾರ್ಚ್ 26-30, ಬಾರ್ಬಡಾಸ್. ಅಂದು ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್‌ನ ಮೊದಲ ಮೂರು ದಿನಗಳಲ್ಲೂ ಆಸ್ಟ್ರೇಲಿಯಾದ್ದೇ ಪ್ರಾಬಲ್ಯ. ನಾಯಕ ಸ್ಟೀವ್ ವಾ ಬಾರಿಸಿದ ಅಮೋಘ 199 ರನ್‌ಗಳ  ನೆರವಿನೊಂದಿಗೆ ಆಸ್ಟ್ರೇಲಿಯಾ 490 ರನ್‌ಗಳನ್ನು ಹೊಡೆಯಿತು. ವೆಸ್ಟ್ ಇಂಡೀಸ್ 98 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು. ಅಂತಹ ಸ್ಥಿತಿಯಲ್ಲಿ ಶೆರ್ವಿನ್ ಕ್ಯಾಂಬೆಲ್ ಮತ್ತು ರಿಡ್ಲಿ ಜೇಕಬ್ಸ್ ನೀಡಿದ 153 ರನ್‌ಗಳ ಜತೆಯಾಟದಿಂದ ವೆಸ್ಟ್ ಇಂಡೀಸ್ ಸ್ವಲ್ಪ ಚೇತರಿಸಿಕೊಂಡಿತು. ಮರು ದಿನ ಬೌಲಿಂಗ್‌ಗೆ ಇಳಿದ ವೆಸ್ಟ್ ಇಂಡೀಸ್ ತನ್ನ ಪ್ರತಿದಾಳಿಯನ್ನು ಮುಂದುವರಿಸಿತು. ಆಸ್ಟ್ರೇಲಿಯಾವನ್ನು 146 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯೂ ಆಯಿತು. ಇಷ್ಟಾಗಿಯೂ ಪಂದ್ಯ ಗೆಲ್ಲಲು ವೆಸ್ಟ್ ಇಂಡೀಸ್ 308 ರನ್ ಗಳಿಸಬೇಕಿತ್ತು. ನಾಲ್ಕನೇ ದಿನದಾಟದ ಅಂತ್ಯದ ವೇಳೆಗೆ ವೆಸ್ಟ್ ಇಂಡೀಸ್‌ನ ಮೂರು ವಿಕೆಟ್‌ಗಳು ತಪತಪನೆ ಉದುರಿದವು.

ಎರಡು ರನ್‌ಗಳಿಸಿದ್ದ ಬ್ರಯಾನ್ ಚಾರ್ಲ್ಸ್ ಲಾರಾ ಮಾತ್ರ ಔಟಾಗದೇ ಉಳಿದಿದ್ದರು!

ಐದನೇ ದಿನದ ಆಟ ಆರಂಭವಾದಾಗಲೂ ರನ್‌ಗಳಿಗಿಂತಲೂ ಹೆಚ್ಚಾಗಿ ಬಿದ್ದಿದ್ದು ವಿಕೆಟ್‌ಗಳು. 105  ರನ್ ಗಳಿಸುವಷ್ಟರಲ್ಲಿ 5 ವಿಕೆಟ್‌ಗಳು ಪತನಗೊಂಡಿದ್ದವು. ಅಂದು ಪಂದ್ಯ ಗೆಲ್ಲಬೇಕಾದರೆ ಲಾರಾ ಅವರೇನಾದರೂ ಮ್ಯಾಜಿಕ್ ಮಾಡಬೇಕಿತ್ತು. ಅದೃಷ್ಟವಶಾತ್, ವಿಕೆಟ್‌ಗೆ ಅಂಟಿಕೊಂಡ ಜಿಮ್ಮಿ ಆಡಮ್ಸ್ ಸಾಥ್ ನೀಡತೊಡಗಿದರು. ಕ್ರಮೇಣ ಸ್ಕೋರ್ ಹೆಚ್ಚಾಗುತ್ತಾ ಹೋಯಿತು. ಲಾರಾ ಇನ್ನೂ ಬ್ಯಾಟಿಂಗ್ ಮಾಡುತ್ತಿದ್ದಾರೆ, ವೆಸ್ಟ್ ಇಂಡೀಸ್ ಉತ್ತಮ ಪ್ರದರ್ಶನ ನೀಡುತ್ತಿದೆ ಎನ್ನುವ ಸುದ್ದಿ ಬರುತ್ತಿದ್ದಂತೆ ಖಾಲಿ ಹೊಡೆಯುತ್ತಿದ್ದ ಸ್ಟೇಡಿಯಂ ಭರ್ತಿಯಾಗತೊಡಗಿತು. ವೆಸ್ಟ್ ಇಂಡೀಸ್‌ನ ಸ್ಕೋರ್ ಹೆಚ್ಚುತ್ತಾ ಹೋದಂತೆ ಸ್ಟೇಡಿಯಂನಲ್ಲಿ ಒಂದು ರೀತಿಯ ಒತ್ತಡ ನಿರ್ಮಾಣವಾಗತೊಡಗಿತು. ಪ್ರೇಕ್ಷಕರ ಕೂಗು ಪ್ರತಿಧ್ವನಿಸತೊಡಗಿತು. ಏನಾಗಬಹುದೆಂದು ಪ್ರೇಕ್ಷಕರು ಕಣ್ಣು ಮಿಟುಕಿಸದೆ ಪ್ರತಿಯೊಂದು ಎಸೆತವನ್ನೂ ನೋಡುತ್ತಿದ್ದರು. ಇಂಥ ಸನ್ನಿವೇಶದಲ್ಲಿ ವೆಸ್ಟ್ ಇಂಡೀಸ್‌ಗೆ ಮತ್ತೆ ಹೊಡೆತ ಬಿದ್ದಿತು. ಆಡಮ್ಸ್ ಔಟಾದರು. ಮತ್ತೆ ಗೆಲುವಿನ ಆಸೆ ಕಮರಿತು. ಬಾಲಂಗೋಚಿ ಕರ್ಟ್ಲಿ ಆಂಬ್ರೋಸ್ ಕ್ರೀಸ್‌ಗೆ ಬಂದಾಗ ವೆಸ್ಟ್ ಇಂಡೀಸ್ ಎಂಟು ವಿಕೆಟ್ ಕಳೆದುಕೊಂಡಿತ್ತು. ಕಡೆಯಲ್ಲಿ ಉಳಿದಿದ್ದು ಎರಡು ವಿಕೆಟ್, ಗೆಲುವಿಗೆ ಬೇಕಾಗಿದ್ದು 60 ರನ್. ಒಂದು ಕಡೆ ಯಾರಾದರೂ ಗಟ್ಟಿಯಾಗಿ ನಿಂತು ವಿಕೆಟ್ ಉಳಿಸಿಕೊಂಡರೆ ಸಾಕು, ಲಾರಾ ಉಳಿದ ರನ್‌ಗಳನ್ನು ಹೊಡೆಯುತ್ತಾರೆ ಎಂಬ ಭರವಸೆ ವ್ಯಕ್ತವಾದರೂ ವಿಕೆಟ್ ಉಳಿಸಿ ಕೊಳ್ಳುವ ತಾಕತ್ತಾದರೂ ಯಾರಿಗಿತ್ತು?! ಆಶ್ಚರ್ಯವೆಂದರೆ ಆಂಬ್ರೋಸ್ ನಿರೀಕ್ಷೆಗೂ ಮೀರಿ 82 ನಿಮಿಷಗಳ ಕಾಲ ಕ್ರೀಸ್‌ಗೆ ಅಂಟಿಕೊಂಡರು. ಇದೇ ವೇಳೆ ಲಾರಾ ಲೆಕ್ಕಾಚಾರದ ಆಟವಾಡಿ ಮಾರಕ ಹೊಡೆತಗಳ ಮೂಲಕ ಉತ್ತಮ ಸ್ಕೋರ್ ಮಾಡಿದರು. ಆ ದಿನವನ್ನು, ಗೆಲುವನ್ನು ತಮ್ಮದನ್ನಾಗಿ ಮಾಡಿಕೊಳ್ಳಲು ಆಸ್ಟ್ರೇಲಿಯಾ ಕೂಡ ಹೋರಾಡಿತು. ಇಯಾನ್ ಹೀಲಿ ಗ್ಲೌಸ್‌ನಿಂದ ಚೆಂಡು ಹಾರಿ ಹೋಗುತ್ತಿದ್ದಂತೆ ದೊಡ್ಡ ನಿಟ್ಟುಸಿರು ಬಿಟ್ಟ ಲಾರಾ, ಮತ್ತೆ ಹೊಸ ಹುಮ್ಮಸ್ಸಿನಿಂದ ಮೈಕೊಡವಿ ಆಟಕ್ಕೆ ನಿಂತರು. ಇದೇ ವೇಳೆ ಆಂಬ್ರೋಸ್ ಔಟಾಗಿ, ಕೋರ್ಟ್ನಿ ವಾಲ್ಷ್ ಬ್ಯಾಟಿಂಗ್‌ಗೆ ಬಂದರು.

ಆ ವೇಳೆಗೆ ವೆಸ್ಟ್ ಇಂಡೀಸ್‌ಗೆ ಗೆಲ್ಲುವುದಕ್ಕೆ ಬೇಕಿದ್ದಿದ್ದು ಕೇವಲ ಏಳು ರನ್!

ಹಾಗಂತ ಬ್ಯಾಟ್ ಹಿಡಿಯುವುದಕ್ಕೇ ಬಾರದ ವಾಲ್ಷ್ ಅವರನ್ನು ನಂಬುವುದಕ್ಕಾಗುತ್ತದಾ? ಗೆಲುವಿಗೆ ತುಂಬಾ ಹತ್ತಿರ ಆದರೆ, ಅಷ್ಟೇ ದೂರ! ಅಂದು ತಮ್ಮೆಡೆಗೆ ಬಂದ ಇನ್‌ಸ್ವಿಂಗ್ ಯಾರ್ಕರ್ ಅನ್ನು ವಾಲ್ಷ್ ದೂರಕ್ಕೆ ತಳ್ಳಿದಾಗ ಇಡೀ ವೆಸ್ಟ್ ಇಂಡೀಸೇ ನಿಟ್ಟುಸಿರು ಬಿಟ್ಟಿತು. ಲಾರಾ ಸ್ಟ್ರ್ರೈಕ್‌ಗೆ ಬಂದರು. ಒಂದು ವೈಡ್, ಆ ಬಳಿಕ ನೋಬಾಲ್ ಹಾಕುವ ಮೂಲಕ ಬೌಲರ್‌ಗಳು ಮೈ, ಮನಸ್ಸುಗಳೆಡರನ್ನೂ ಹಿಂಡಿ ಹಿಪ್ಪೆ ಮಾಡಿಕೊಂಡರು. ಆ ಬಳಿಕ ಲಾರಾ ಚೆಂಡನ್ನು ಎದುರಿಸಿ, ಗೆಲುವಿನ ರನ್ ಬಾರಿಸಿದರು. 6 ಸಿಕ್ಸರ್, 19 ಬೌಂಡರಿಗಳ ನೆರವಿನೊಂದಿಗೆ ಲಾರಾ 153 ರನ್ ಗಳಿಸಿ ಔಟಾಗದೇ ಉಳಿದರು. ಇಡೀ ತಂಡವೇ ಲಾರಾ ಅವರನ್ನು ತಬ್ಬಿಕೊಂಡು ಸಂಭ್ರಮಿಸಿತು. ಜಗತ್ತಿಗೆ ಜಗತ್ತೇ ಲಾರಾನನ್ನು ಹೊಗಳಿತು. ಅಂತಹ ಪಂದ್ಯವನ್ನು ನೋಡಿ 10 ವರ್ಷಗಳೇ ಕಳೆದಿದ್ದವು. 2010, ಅಕ್ಟೋಬರ್ 5ರಂದು ನಮ್ಮ ವಿ.ವಿ.ಎಸ್. ಲಕ್ಷ್ಮಣ್ ಹಾಗೂ ಇಶಾಂತ್ ಶರ್ಮಾ ನಡುವಿನ 86 ರನ್ ಜತೆಯಾಟ ಹಾಗೂ ಗೆಲುವಿಗೆ 11 ರನ್ ಬೇಕಾಗಿದ್ದಾಗ ಇಶಾಂತ್ ಶರ್ಮಾ ಔಟಾಗಿ ಪ್ರಗ್ಯಾನ್ ಓಜಾ ಕ್ರೀಸ್‌ಗೆ ಬಂದಾಗ ಮನಸ್ಸು ಹತ್ತು ವರ್ಷ ಹಿಂದಕ್ಕೆ ಹೋಗಿ ನಿಂತಿತ್ತು. ಆದರೆ ಒಂದೇ ವ್ಯತ್ಯಾಸ-ಬ್ರಯಾನ್ ಲಾರಾನ ಜಾಗದಲ್ಲಿ ಅತೀವ ಬೆನ್ನುನೋವಿನಿಂದ ನರಳುತ್ತಿದ್ದ ಲಕ್ಷ್ಮಣ್ ನಿಂತಿದ್ದರು.

Who’s gone????
And how much we need?
11 to win…
Laxman and Ojha at the crease…

ಆಸ್ಟ್ರೇಲಿಯಾ-ಭಾರತ ನಡುವಿನ ಮೊದಲನೇ ಟೆಸ್ಟ್ ಪಂದ್ಯದ ಕೊನೆಯ ದಿನ ಲಂಚ್ ಬ್ರೇಕ್ ನಂತರ ಟ್ವಿಟ್ಟರ್‌ನಲ್ಲೂ ಹೀಗೆ ಕ್ರಿಕೆಟ್‌ನ ಕಾವೇರತೊಡಗಿತು. ಅದರಲ್ಲೂ ಗೆಲ್ಲುವುದಕ್ಕೆ 11 ರನ್‌ಗಳು ಬೇಕಿರುವಾಗ ಇಯಾನ್ ಗೌಲ್ಡ್ ಕೊಟ್ಟ ಕೆಟ್ಟ ತೀರ್ಪಿಗೆ ಇಶಾಂತ್ ಶರ್ಮಾ ಔಟಾದಾಗ ಒಂದು ಕ್ಷಣಕ್ಕೆ ಹೃದಯದ ಬಡಿತವೇ ನಿಂತುಹೋದಂತಾಗಿತ್ತು. ಮರುಕ್ಷಣವೇ, ‘ಎಲ್ಲ ಮುಗಿಯಿತು’ ಎಂಬ ಶೂನ್ಯ ಆವರಿಸಿ ಬಿಟ್ಟಿತು. ಕೊನೆಯ ಬ್ಯಾಟ್ಸ್ ಮನ್ ‘ಪ್ರಗ್ಯಾನ್ ಓಜಾ ಬ್ಯಾಟಿಂಗ್ ಮಾಡಿದ್ದನ್ನು ಯಾರೂ ನೋಡಿಲ್ಲ…’ ಎಂದು ವೀಕ್ಷಕ ವಿಶ್ಲೇಷಣೆಕಾರರು ಹೇಳತೊಡಗಿದ ಮೇಲಂತೂ ಭರವಸೆ ಇಟ್ಟುಕೊಳ್ಳಲು ಕಾರಣಗಳೇ ಉಳಿದಿರಲಿಲ್ಲ. ಆಸ್ಟ್ರೇಲಿಯಾದ ಬೌಲರ್ ಬೆನ್ ಹಿಲ್ಫೆನಾಸ್ ಅವರ ಓವರ್‌ನಲ್ಲಿ ಇನ್ನೂ 4 ಎಸೆತಗಳು ಬಾಕಿಯಿದ್ದವು. ಆ ನಾಲ್ಕು ಬಾಲುಗಳಲ್ಲಿ ಓಜಾ ಔಟಾಗದಿದ್ದರೆ ಭಾರತದ ಪುಣ್ಯ ಎಂದು ದೇವರ ಮೇಲೆ ಭಾರ ಹಾಕಿ ಕುಳಿತುಕೊಳ್ಳಬೇಕಾಯಿತು.

Uffffff…

ಆ ಕ್ಷಣಗಳನ್ನು ಪದಗಳಲ್ಲಿ ಹಿಡಿದಿಡಲು ಖಂಡಿತ ಸಾಧ್ಯವಿಲ್ಲ. ನೀವೊಬ್ಬ ಟೆಸ್ಟ್ ಕ್ರಿಕೆಟ್ ಪ್ರೇಮಿಯಾಗಿದ್ದರಷ್ಟೇ ಅದನ್ನು ಅರ್ಥ ಮಾಡಿಕೊಳ್ಳಲು, ಆ ಕ್ಷಣಗಳನ್ನು ಅನುಭವಿಸಲು ಸಾಧ್ಯ. ಉಸಿರನ್ನು ಬಿಗಿ ಹಿಡಿದಿಟ್ಟುಕೊಂಡರೂ ಮುಖದಲ್ಲಿ ಹತಾಶೆ ವ್ಯಕ್ತವಾಗಿ ಬಿಡುತ್ತದೆ. ಇನ್ನು ಕ್ರೀಸ್‌ನಲ್ಲಿ ಇದ್ದವರ ಕಥೆ ಏನಾಗಿರಬೇಕು! Angry Lax A rare sight. Laxman is furious. He is shouting at Ojha. OMG!  ಐವತ್ತೆಂಟನೇ ಓವರ್‌ನಲ್ಲಿ ಇಂಥದ್ದೊಂದು ವಿರಳವಾದ ಘಟನೆಯನ್ನು ನೋಡಬೇಕಾಯಿತು. ಆ ಓವರ್‌ನ ಐದನೇ ಬಾಲನ್ನು ಮಿಡಾಫ್‌ಗೆ ತಳ್ಳಿ ಒಂದು ರನ್ ತೆಗೆದುಕೊಂಡು, ಮುಂದಿನ ಓವರ್‌ನಲ್ಲಿ ತಾನೇ ಸ್ಟ್ರೈಕ್ ಉಳಿಸಿಕೊಳ್ಳಲು ಲಕ್ಷ್ಮಣ್ ಯೋಚಿಸುತ್ತಿದ್ದರೆ ಇನ್ನೊಂದು ತುದಿಯಲ್ಲಿದ್ದ ಓಜಾ ರನ್ ತೆಗೆದುಕೊಳ್ಳುವ ಬದಲು ಬಾಲನ್ನು ನೋಡುತ್ತಾ ನಿಂತಿದ್ದನ್ನು ಕಂಡು ಲಕ್ಷ್ಮಣ್ ಸಿಟ್ಟಿಗೆದ್ದುಬಿಟ್ಟರು. ಆಗ ಭಾರತ ಗೆಲ್ಲುವುದಕ್ಕೆ 6 ರನ್ ಬೇಕಿದ್ದವು. ಐವತ್ತೊಂಬತ್ತನೇ ಓವರ್ ಹಾಕಲು ಮಿಚೆಲ್ ಜಾನ್ಸನ್ ಬಂದಾಗಲಂತೂ ಸ್ಟ್ರೈಕ್ ತೆಗೆದುಕೊಂಡ ಓಜಾನನ್ನು ನೋಡಿ ಅಯ್ಯೋ ಎನ್ನುವುದೋ, ಭಾರತದ ಸ್ಥಿತಿ ನೋಡಿ ಅಯ್ಯೋ ಎನ್ನಬೇಕೋ, ಅಂತಹ ಪಂದ್ಯವನ್ನು ನೋಡುತ್ತಿದ್ದೇವಲ್ಲಾ ಎಂದು ನಮ್ಮ ಪರಿಸ್ಥಿತಿಗೆ ಅಯ್ಯೋ ಎಂದುಕೊಳ್ಳಬೇಕೋ ಎಂಬ ಸ್ಥಿತಿ. ಯಾವ ಟ್ವೆಂಟಿ20 ಪಂದ್ಯವೂ ಅಂಥದ್ದೊಂದು ಥ್ರಿಲ್ ಕೊಡಲು, ನಮ್ಮನ್ನು ಅಂತಹ ಉದ್ವೇಗಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ. ಆ ಓವರ್‌ನ ಎರಡನೇ ಬಾಲ್‌ಗೆ ಆಸ್ಟ್ರೇಲಿಯಾ ತಂಡ ಒಕ್ಕೊರಲಿನಿಂದ ಎಲ್‌ಬಿಡಬ್ಲ್ಯೂಗೆ ಮನವಿ ಮಾಡಿದಾಗ ಅಂಪೈರ್ ಬಿಲ್ಲಿ ಬೌಡೆನ್ ನಕಾರ ವ್ಯಕ್ತಪಡಿಸಿ, ಇನ್‌ಸೈಡ್ ಎಡ್ಜ್ ಎಂದಿದ್ದು, ಓವರ್ ಥ್ರೋನಲ್ಲಿ 4 ರನ್‌ಗಳು ದೊರೆತಿದ್ದು ಮತ್ತೆ ನಮ್ಮನ್ನು ತುದಿಗಾಲಿಗೆ ತಂದು ನಿಲ್ಲಿಸಿತು. ನಾಲ್ಕನೇ ಬಾಲ್‌ನಲ್ಲಿ ೨ ಲೆಗ್‌ಬೈಸ್ ಸಿಕ್ಕಿ ಭಾರತ ಗೆಲುವು ಸಾಧಿಸಿದಾಗ ಮನದಲ್ಲಾದ ನಿರಾಳತೆಯನ್ನು ವರ್ಣಿಸಲಾಗದು.

ಮೊಹಾಲಿ ಮ್ಯಾಚ್ ನಿಜಕ್ಕೂ ಒಂದು Heart-stopper!

ವಂಗಿಪುರಪ್ಪು ವೆಂಕಟಸಾಯಿ ಲಕ್ಷ್ಮಣ್‌ಗೆ ಎಷ್ಟು ಬಾರಿ ಥ್ಯಾಂಕ್ಸ್ ಹೇಳಿದರೂ ಸಾಲದು. ಆತನ ಆಟ ಹೇಗಿತ್ತು ಎಂದರೆ Cricinfo.comನಲ್ಲಿ What a shot? Laxy! ಎಂಬ ಡಜನ್‌ಗೂ ಅಧಿಕ ಉದ್ಗಾರಗಳನ್ನು ಕಾಣಬಹುದು. ಕಳೆದ ಎರಡು ತಿಂಗಳಲ್ಲಿ ಲಕ್ಷ್ಮಣ್ ಎರಡನೇ ಬಾರಿಗೆ ಭಾರತಕ್ಕೆ ಅಸಮಾನ್ಯ ಜಯ ತಂದುಕೊಟ್ಟಿದ್ದಾರೆ. ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಭಾರತ ಮೊದಲನೇ ಸ್ಥಾನದಿಂದ ಕೆಳಗುರುಳುವುದನ್ನು ಎರಡು ಭಾರಿ ತಪ್ಪಿಸಿದ್ದಾರೆ. ಶ್ರೀಲಂಕಾದಲ್ಲಿ 258 ರನ್‌ಗಳ ಗುರಿಯನ್ನಟ್ಟಿ ಹೊರಟು 103 ರನ್ ಬಾರಿಸಿದ್ದನ್ನು ಮರೆಯುವ ಮೊದಲೇ ಮೊಹಾಲಿಯಲ್ಲಿ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದ ಭಾರತಕ್ಕೆ ಅನಿರೀಕ್ಷಿತ ಜಯ ತಂದುಕೊಟ್ಟಿದ್ದಾರೆ. ಅಂಥದ್ದೊಂದು ಕ್ಷಣವನ್ನು ತಂದುಕೊಟ್ಟ ಲಕ್ಷ್ಮಣ್ ಬಗ್ಗೆ ಟ್ವಿಟ್ಟರ್‌ನಲ್ಲಿ ಕ್ರಿಕೆಟ್ ಪ್ರೇಮಿಗಳು ಹೇಗೆ ತಮ್ಮ ಕೃತಜ್ಞತೆ, ಮೆಚ್ಚುಗೆ ವ್ಯಕ್ತಪಡಿಸಿದರು ಎಂಬುದಕ್ಕೆ ಕೆಲವು ಝಲಕ್‌ಗಳನ್ನು ಓದಿ…

1. Last words of Mahatma Gandhi were, ‘Hey Ram’, No wonder the last words of Ricky Ponting would be ‘Hey Laxman’!
2. Last week, Ram took the headlines. This week, it’s Laxman!
3. Australia needed to cross “Laxman Rekha” which they couldn’t!
4. Laxman is our answer to all the whining and complaining Aussies in the CWG! Take it Aussies!
5. VVS is the Gabbar of Australia. When kids can’t sleep, their mothers say.
6. Sachin may be the God of cricket, but Laxman is the devil for Aussies!
7. Australia should declare some ares in their country as Lax Janmastan!

Canonisationಗೆ ಮೊದಲು ಮದರ್ ತೆರೆಸಾ ಮತ್ತೊಂದು ಮ್ಯಾಜಿಕ್ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಮೊನ್ನೆ ಮೊಹಾಲಿಯಲ್ಲಿ ಲಕ್ಷ್ಮಣ್-ಇಶಾಂತ್ ಮಾಡಿದ್ದು ಮಾತ್ರ Sheer Magic. ದುರದೃಷ್ಟವಶಾತ್, ಲಕ್ಷ್ಮಣ್ ಎಷ್ಟೇ ಒಳ್ಳೆಯ ಆಟಗಾರನೆನಿಸಿದರೂ ಆತನ ಸುತ್ತ ಒಂದು “Aura” ಸೃಷ್ಟಿಯಾಗಿಲ್ಲ. ಆತ ಎಷ್ಟು ಬಾರಿ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದರೂ, ಆತನ  ಬ್ಯಾಟಿಂಗ್ ಸಾಮರ್ಥ್ಯ, ವೆರೈಟಿ ಆಫ್ ಸ್ಟ್ರೋಕ್ಸ್ ಬಗ್ಗೆ ಕ್ರಿಕೆಟ್ ವಿಶ್ಲೇಷಕರು ಎಷ್ಟೇ ಹೊಗಳಿದರೂ ಜನಮಾನಸದಲ್ಲಿ ಮಾತ್ರ ಆತನಿಗೆ “Iconic Status” ಸಿಗಲೇ ಇಲ್ಲ, ‘Great’ ಎಂಬ ಲೇಬಲ್ ಕೊಡಲಿಲ್ಲ. ಮೊಹಮದ್ ಅಜರುದ್ದೀನ್ ಹೋದ ನಂತರ ಆತನ ಮನಮೋಹಕ ಆಟವನ್ನು ಮತ್ತೆ ಮತ್ತೆ ನೆನಪು ಮಾಡಿಕೊಟ್ಟವನು, ಅಜರ್ ಆಟದ ಶೈಲಿಯನ್ನು ಒಂದು ಪರಂಪರೆಯಂತೆ ಮುಂದುವರಿಸಿಕೊಂಡು ಬಂದವನು ಲಕ್ಷ್ಮಣ್ ಮಾತ್ರ.

ಆತನದ್ದು Lazy elegance!

ಬಹುಶಃ ಲಕ್ಷ್ಮಣ್‌ನ ಮಹತ್ವ ಭಾರತೀಯರಿಗಿಂತ ಆಸ್ಟ್ರೇಲಿ ಯನ್ನರಿಗೇ ಚೆನ್ನಾಗಿ ಗೊತ್ತು. 1998ರಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೊರಟು ನಿಂತಾಗ ಭಾರತ ೦-3 ಅಂತರದಲ್ಲಿ ಸೋತು ಬರುತ್ತದೆ ಎಂದು ಬಿಸಿಸಿಐನ ಕಾರ್ಯದರ್ಶಿ ಜಯವಂತ್ ಲೆಲೆ ಅವರೇ ಹೇಳಿ ಬಿಟ್ಟಿದ್ದರು. ಆಸ್ಟ್ರೇಲಿಯಾ ಅಂದರೆ ಭಾರತಕ್ಕೆ ಒಂಥರಾ ಭೀತಿಪಡುವ ರಾಷ್ಟ್ರವಾಗಿಬಿಟ್ಟಿತ್ತು. ಅಂಥದ್ದೊಂದು ಭೀತಿಯನ್ನು ತೊಡೆದುಹಾಕಿದ್ದೇ ಕೋಲ್ಕತಾದಲ್ಲಿ ಲಕ್ಷ್ಮಣ್ ಹೊಡೆದ 282 ರನ್! Infact, ಭಾರತ ಎಂದರೆ ಆಸ್ಟ್ರೇಲಿಯಾ ಭೀತಿ ಪಡುವಂತೆ ಮಾಡಿದ್ದೇ ಲಕ್ಷ್ಮಣ್. ಇವತ್ತು ತೆಂಡೂಲ್ಕರ್ ಎಷ್ಟೇ ದೊಡ್ಡ ತಾರೆಯಾಗಿರಬಹುದು. ಆದರೆ ಆತ ಬ್ಯಾಟ್ ಹಿಡಿದು ಹೊರಟಾಗ ನಮ್ಮ ಮನದಲ್ಲಿ ಮೂಡುವ ಭಾವನೆಗಳಿಗೂ ಲಕ್ಷ್ಮಣ್‌ಗೆ ಕ್ರೀಸ್ ಬಂದಾಗ ಉಂಟಾಗುವ ಭಾವನೆಗೂ ಇರುವ ವ್ಯತ್ಯಾಸ ನೋಡಿ… ಸಚಿನ್ ಬ್ಯಾಟಿಂಗ್‌ಗೆ ಹೊರಟ ಕೂಡಲೇ, ಆತ ಸೆಂಚುರಿ ಹೊಡೆಯುತ್ತಾನೋ ಇಲ್ಲವೋ, ಇವತ್ತು ಯಾವ ದಾಖಲೆ ಮುರಿಯಬಹುದು, ಇಷ್ಟು ರನ್ ಹೊಡೆದರೆ ಯಾವ ದಾಖಲೆ ಮುರಿಯುತ್ತದೆ ಎಂಬ ಲೆಕ್ಕಾಚಾರಗಳಷ್ಟೇ ನಮ್ಮ ಮನದಲ್ಲುಂಟಾಗುತ್ತವೆ. ದ್ರಾವಿಡ್ ಹೊರಟ ಕೂಡಲೇ ಇನ್ನು ಒಂದು ಕಡೆ ವಿಕೆಟ್ ಬೀಳುವುದಿಲ್ಲ ಎಂಬ ಭದ್ರತೆಯ ಭಾವನೆ. ಅದೇ ಲಕ್ಷ್ಮಣ್ ಬರುವಷ್ಟರಲ್ಲಿ ಒಂದೋ ಪ್ರಾರಂಭಿಕ ಬ್ಯಾಟ್ಸ್‌ಮನ್‌ಗಳು ಚೆನ್ನಾಗಿ ರನ್ ಗಳಿಸಿ, ರನ್ ಗತಿಯನ್ನು ಹೆಚ್ಚು ಮಾಡಬೇಕಾದ ಸ್ಥಿತಿ ಇರುತ್ತದೆ. ಇಲ್ಲವೇ ವಿಕೆಟ್ ಉದುರಿ ಭಾರತ ಫಾಲೋಆನ್ ತಪ್ಪಿಸಿಕೊಳ್ಳಲು ಹೆಣಗುತ್ತಿರುತ್ತದೆ ಅಥವಾ ಸೋಲು ತಪ್ಪಿಸಿಕೊಳ್ಳುವುದು ಹೇಗೆಂಬ ಬಗ್ಗೆ ಚಿಂತೆ ಆರಂಭವಾಗಿರುತ್ತದೆ. ಅಂತಹ ಸ್ಥಿತಿಯಲ್ಲಿ ಲಕ್ಷ್ಮಣ್ ಬ್ಯಾಟಿಂಗ್‌ಗೆ ಬಂದರೂ ‘ಲಕ್ಷ್ಮಣ್ ಆಡಿದರೆ ಇಂಡಿಯಾ ಗೆಲ್ಲುತ್ತೆ…’ ಎಂದು ನಾವಾಡಿಕೊಳ್ಳುತ್ತೇವೆ. ಅಂದರೆ ಪ್ರತಿಸಾರಿ ಕ್ರೀಸ್‌ಗಿಳಿದಾಗಲೂ ಲಕ್ಷ್ಮಣ್ ಆಡುವುದು ದೇಶಕ್ಕೇ ಎಂಬ ಭಾವನೆ ನಮ್ಮಲ್ಲೇ ಮೂಡಿರುತ್ತದೆ. ಅದನ್ನು ಬಹಳಷ್ಟು ಸಂದರ್ಭದಲ್ಲಿ ನಾವೇ ಗುರುತಿಸಿರುವುದಿಲ್ಲ. ನಾವು ಮಾತ್ರವಲ್ಲ ಪತ್ರಿಕೆ, ಚಾನೆಲ್, ಸುದ್ದಿಸಂಸ್ಥೆಗಳೂ ಕೂಡ ಲಕ್ಷ್ಮಣ್ ಮಹತ್ವವನ್ನು ಎಂದೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಮೊಹಾಲಿ ಟೆಸ್ಟ್‌ನ ನಾಲ್ಕನೇ ದಿನದಾಟ ಮುಗಿದಾಗಲೂ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ(ಪಿಟಿಐ) ಕಳುಹಿಸಿದ ಸುದ್ದಿ ಹೇಗಿತ್ತು ಗೊತ್ತೆ-The only man who stands between Australia and victory is Sachin Tendulkar! ಆತ ಅದುವರೆಗೂ ಆಡಿದ ನೂರಾಅರವತ್ತೊಂಬತ್ತು ಟೆಸ್ಟ್‌ಗಳಲ್ಲಿ ಒಂದನ್ನೂ ಎರಡನೇ ಇನ್ನಿಂಗ್ಸ್‌ನಲ್ಲಿ ಗೆಲ್ಲಿಸಿಕೊಟ್ಟಿಲ್ಲ ಎಂಬ ಸತ್ಯ ಮುಂದಿದ್ದರೂ ಮಾಧ್ಯಮಗಳು ಹೀಗೆ ಬರೆಯುತ್ತವೆ. ಆದರೆ ಐದನೇ ದಿನದ ಲಂಚ್ ಬ್ರೇಕ್‌ಗೆ ಹೋದಾಗ ಆಸ್ಟ್ರೇಲಿಯಾ ಹಾಗೂ ಜಯದ ಮಧ್ಯ ನಿಂತಿದ್ದವನು ಲಕ್ಷ್ಮಣ್!!

ಆಸ್ಟ್ರೇಲಿಯಾ ವಿರುದ್ಧ ಸಾಧಿಸಿರುವ 2-0 ಸರಣಿ ಜಯಕ್ಕೆ ಮೂಲ ಕಾರಣಕರ್ತನಾಗಿರುವ ಲಕ್ಷ್ಮಣ್ ಎಂಬ ನಿಸ್ವಾರ್ಥ ಕ್ರಿಕೆಟಿಗನ ಕೊಡುಗೆಯನ್ನು ತಡವಾಗಿಯಾದರೂ ನೆನಪಿಸಿಕೊಳ್ಳ ಬೇಕೆನಿಸಿತು.

Thanq Laxy!

15 Responses to “ಲಾರಾನನ್ನು ನೆನಪಿಸಿದ ಲಕ್ಷ್ಮಣ!”

  1. swarna says:

    “The only man who stands between Australia and victory is sachin Tendulkar” I think it’s right statement. of course Laxman is very talented player but don’t forget sachin is more prominent cricketer than any other players

  2. Swapna says:

    Very true Pratap he is a great player and he is the reason for winning Mohali test 🙂

  3. Gururaj says:

    Sir, E article yaradroo baribahudu. Adakke neeve yaake beku. topic chennagide adre adu nimma columnge alla!!

  4. stany pinto says:

    Hai .. This is to bring to your kind notice that Mother Theresa is already Beatified as Blessed Mother Theresa on the 19th of October 2003. You seems to have used a wrong information saying that she will make a new magic before Beatification. She is on her way to be a saint and that step is called “Canonization”. Roman Catholic Church doesn’t require a magic for Beatification rather it requires a miracle. There is a vast difference between Miracle and Magic. Thank you

  5. Shiva Kumar says:

    LONG LIVE LAXY…:)

  6. Pratap Simha says:

    Mr Pinto, Mother Teresa was beatified only after she “miraculously” cured the cancer tumor of hapless MONICA BESRA. And she needs to perform one more such MAGIC before Canonisation.

    Stop bluffing…

    Well, please enrich my knowledge abt the diff between Miracle and Magic…….. Catholic churches are still thriving on medieval bullshits like “miracle”

  7. shastri says:

    @Gururaj

    Hey Guru,
    Any others could also write this article, off course You & I can throw such comments as well. That doesn’t make any difference. right?

    Then, What makes us different from others?

    Just chill man. Dont be in a rush.

    You won’t see such matches everyday, nor every player could play like Laxman.

  8. vivek says:

    hi sir…ya whatever you say is true but still i dont think so he dint get iconic status actually he has massive name and fame.every INDIAN knows who is laxman.even he is a big celeb

  9. vivek says:

    hi sir…ya whatever you say is true but still i dont think so he dint get iconic status actually he has massive name and fame.every INDIAN knows who is laxman.even he is a big celeb

  10. Vikram says:

    Hi Pratap,
    Being a nationalist from the sangha and Ramakrishna Mission background , I have been a regular reader of your column. Even when I go home on vacation, I wait eagerly for Saturday edition of Vijaya Karnataka. Ever since your “bettale jagattu” has started featuring, I think I haven’t missed any.
    Though this write up does not suit your style, it is good to see your hold on various subjects. Also helps you to answer those who consider you as radical. Here’s what I have to say,

    Please start a TV channel. Your message should reach more people. What we lack today is a medium that reports truth, that stands for the right of the Hindus. The so called BJP (business house) do not seem to be doing anything for us after they got elected.

    Why don’t you think seriously about starting the news channel which we can actually take pride in and which does not fade away with time and which does not compromise the fundamental values for increasing the viewer base.

    If I can be of any help for this noble cause, let me know. We can discuss further.

    Thank you,
    Vikram

  11. suresh bandekar says:

    it is a great history…….. i love VVS………

  12. V.S says:

    I think you are against sachin…? when ever you write about cricket i always find you writing against him…! you mentioned sachin has never won a match for india in second innings…! can you remember his recent century in 4th innings against S.A…? he made a century and won for us…

  13. pramod says:

    any how sir, test cricket is the best to watch…

    thanks for your article

  14. Chithaiah Yarapalya says:

    thank u pratap for the article, u wrote about the test match…..

  15. Rajesh says:

    Fantastic article…..Pratap Sir…. I am a big fan of you. eventhogh i am staying in Pune,(Doing MBA) i download ur article from Vijay Karnataka e paper,every saturday… It enriches my knowledge, its helps me to think in a broader way….

    Hats off to u….

    Nimma Preetiya Abhimani,

    Rajesh, Udupi.