Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇತಿಹಾಸದ ವಾಮನ, ಆ ವ್ಯಕ್ತಿತ್ವದೆತ್ತರಕ್ಕೆ ನಮ್ಮ ನಮನ!

ಇತಿಹಾಸದ ವಾಮನ, ಆ ವ್ಯಕ್ತಿತ್ವದೆತ್ತರಕ್ಕೆ ನಮ್ಮ ನಮನ!

After Nehru, Who?

1964ರ ಮೇ 27ರಂದು ಇಂಥದ್ದೊಂದು ಪ್ರಶ್ನೆ ಕಾಶ್ಮೀರ ದಿಂದ ಕನ್ಯಾಕುಮಾರಿಯವರೆಗೂ ಕಾಡಿದ್ದು ಖಂಡಿತ ನಿಜ. ಸ್ವತಂತ್ರ ಭಾರತದ ಮೊಟ್ಟ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಹೃದಯಾಘಾತದಿಂದ ನಿಧನರಾಗಿದ್ದರು. ಹಾಗಂತ ಆಳುವ ಕಾಂಗ್ರೆಸ್ ಪಕ್ಷದಲ್ಲಿ ಈ ದೇಶವನ್ನು ಮುನ್ನಡೆಸು ವಂಥ ನಾಯಕರೇ ಇಲ್ಲ ಎಂಬ ಕಾರಣಕ್ಕೆ ಆ ಪ್ರಶ್ನೆ ಮೂಡಿರಲಿಲ್ಲ. ಭಾರತಕ್ಕೆ ಸಮರ್ಥ ನಾಯಕತ್ವ ನೀಡುತ್ತಾರೆ, ಪ್ರಗತಿಯ ಪಥ ದಲ್ಲಿ ಕೊಂಡೊಯ್ಯುತ್ತಾರೆ, ಇನ್ನು ಮುಂದಾದರೂ ನಮ್ಮೆಲ್ಲರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾರೆ, ಹಿತಾಸಕ್ತಿಯನ್ನು ಕಾಪಾಡುತ್ತಾರೆ ಎಂಬ ವಿಶ್ವಾಸದಿಂದಲೇ ಧರ್ಮದ ಆಧಾರದ ಮೇಲೆ ದೇಶವನ್ನು ಇಬ್ಭಾಗ ಮಾಡುವುದಕ್ಕೆ ಕಾಂಗ್ರೆಸ್ ಒಪ್ಪಿ ಕೊಂಡಾಗಲೂ ಜನ ಸಮ್ಮತಿಸಿದ್ದರು, ಕಾಂಗ್ರೆಸ್ ಮೇಲೆ ನಂಬಿಕೆ ಉಳಿಸಿಕೊಂಡಿದ್ದರು. ಅದಕ್ಕೆ ತಕ್ಕಂತೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಸೋಮನಾಥ ದೇವಾಲಯದ ಜೀರ್ಣೋದ್ಧಾರ ಮಾಡಿ, ಮತ್ತೆ ಧರ್ಮಪ್ರತಿಷ್ಠಾಪನೆ ಮಾಡಿದರು. ಸಣ್ಣಪುಟ್ಟ ರಾಜರನ್ನು ಮಟ್ಟಹಾಕಿ ಎಲ್ಲ ರಾಜ್ಯಗಳೂ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಳ್ಳುವಂತೆ ಮಾಡಿದರು.

ಆದರೆ….

1962ರ ಚೀನಾ ಯುದ್ಧ ಇದೆಲ್ಲವನ್ನೂ ಮಣ್ಣುಪಾಲು ಮಾಡಿತ್ತು. ಪ್ರಧಾನಿ ನೆಹರು ನಡೆದುಕೊಂಡ ರೀತಿ, ತೋರಿದ ಪುಕ್ಕಲುತನ ನಾವು ಕೈಲಾಗದವರೇನೋ ಎಂಬ ಕೀಳರಿಮೆ ಮೂಡುವಂತೆ ಮಾಡಿತ್ತು. ಅದೊಂದು ಸೋಲು ಮಾತ್ರವಾಗಿರಲಿಲ್ಲ. ನಮ್ಮ ಆತ್ಮಗೌರವ, ಸ್ವಾಭಿಮಾನಕ್ಕೇ ಪೆಟ್ಟು ಬಿದ್ದಿತ್ತು. ಅವಮಾನಿತಗೊಂಡಿ ದ್ದೆವು. ಅದರ ಬೆನ್ನಲ್ಲೇ ಪಾಕಿಸ್ತಾನ ತಗಾದೆ ತೆಗೆಯಲಾರಂಭಿಸಿತ್ತು. ಚೀನಾ ಎದುರು ಸೋತುಸುಣ್ಣಾಗಿರುವ ಭಾರತವನ್ನು ಸೋಲಿಸಲು ಇದೇ ಸರಿಯಾದ ಸಮಯ ಎಂದು ಜನರಲ್ ಅಯೂಬ್ ಖಾನ್ ಭಾವಿಸಿದ್ದರು. ಕಾಶ್ಮೀರವನ್ನು ಸಂಪೂರ್ಣವಾಗಿ ನುಂಗಿ ಹಾಕಲು ಪಾಕ್ ಹವಣಿಸುತ್ತಿತ್ತು. ಹಾಗಾಗಿ ನೆಹರು ಮಡಿದಾಗ, ಮುಂದೆ ಇನ್ನೇನು ಕಾದಿದೆಯೋ, ಯಾವ ಗಂಡಾಂತರ ಬರಲಿದೆಯೋ ಎಂಬ ಭಯ, ಆತಂಕಗಳು ‘ನೆಹರು ನಂತರ ಯಾರು?’ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದ್ದವು. ಈ ವಿಷಯವಾಗಿ ಆಡಳಿತ ಪಕ್ಷವಾದ ಕಾಂಗ್ರೆಸ್ ಮುಖಂಡರು ಆಳವಾಗಿ ಚಿಂತನೆ ನಡೆಸಿದರು. ಪ್ರಧಾನಿ ಹುದ್ದೆಗೆ ಯೋಗ್ಯರಾಗಬಹುದಾದಂತಹ ಕೆಲವೇ ಕೆಲವು ಮಂದಿಯನ್ನು ಬೆರಳೆಣಿಕೆ ಮಾಡಿದರು. ಇವರಲ್ಲಿ ಯಾರು ಉತ್ತಮ ಆಯ್ಕೆ? ಯಾರು ಒಳ್ಳೆಯ ಪ್ರಧಾನಿಯಾಗಬಲ್ಲರು? ಎನ್ನುವುದರ ಕುರಿತು ಸುದೀರ್ಘ ಚರ್ಚೆ ನಡೆಯಿತು. ಅಂತಿಮವಾಗಿ ಎಲ್ಲರೂ ಒಮ್ಮತದಿಂದ ಆಯ್ಕೆ ಮಾಡಿದ್ದು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರನ್ನು! ಸಂಕಷ್ಟ ಸ್ಥಿತಿಯಲ್ಲಿರುವ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಶಾಸ್ತ್ರಿಯವರಿಗಿದೆ ಎನ್ನುವುದನ್ನು ಮುಖಂಡರು ಮನಗಂಡಿದ್ದರು. ಹೀಗಾಗಿ ಪ್ರಧಾನಿ ಹುದ್ದೆಗೆ ಶಾಸ್ತ್ರಿಯವರನ್ನೇ ಆಯ್ಕೆ ಮಾಡಿದರು. ಕುಳ್ಳಗೆ ಹಾಗೂ ತೆಳ್ಳಗೆ ಇದ್ದ ಶಾಸ್ತ್ರಿಯವರ ಕಣ್ಣುಗಳು ಮಾತ್ರ ರಥದ ಗಾಲಿಯಷ್ಟು ದೊಡ್ಡದಾಗಿದ್ದವು. ಅವರು ಧರಿಸುತ್ತಿದ್ದ ಉಡುಪು ಕೂಡಾ ತೀರಾ ಸರಳ. ಯಾರೊಬ್ಬರಿಗೂ ಕೇಳಿಸದಷ್ಟು ಮೆಲು ಧ್ವನಿ. ಸದಾ ಮಂದಸ್ಮಿತ. ಅವರ ಮಾತುಗಳಿಗೆ ಹೊಳಪು ನೀಡುತ್ತಿದ್ದುದೇ ಈ ನಗು. ಅಹಮಿಕೆಯಾಗಲಿ ಅಥವಾ ದೌಲತ್ತಾಗಲಿ ಅವರಲ್ಲಿ ಕೊಂಚವೂ ಇರಲಿಲ್ಲ. ಇಂತಹ ವ್ಯಕ್ತಿ ದೇಶವನ್ನು ಮುನ್ನಡೆಸಬಲ್ಲರೇ ಎಂಬ ಅನುಮಾನವೂ ಹಲವರನ್ನು ಕಾಡಲಾರಂಭಿಸಿತು.

ಭಾರತದ ಇತಿಹಾಸದಲ್ಲೇ, ಈ ನೆಲ ಕಂಡ ಅತ್ಯಂತ ಸಂಕಷ್ಟದ ದಿನಗಳಲ್ಲಿ ಶಾಸ್ತ್ರಿಯವರು ಪ್ರಧಾನಿಯಾದರು.

ಇಂಥ ಪರಿಸ್ಥಿತಿಯಲ್ಲಿ ತಾನು ಪ್ರಧಾನಿಯಾದೆನಲ್ಲಾ ಎಂದು ಅವರು ಕೊರಗಲಿಲ್ಲ. ದೈಹಿಕವಾಗಿ ನೋಡುವುದಕ್ಕೆ ದುರ್ಬಲರಂತೆ ಕಾಣಿಸುತ್ತಿದ್ದರೂ ದೇಶದ ಸಮಸ್ಯೆಗಳನ್ನು ಅತ್ಯಂತ ದಿಟ್ಟತನದಿಂದ ಎದುರಿಸಿದರು. ಇತ್ತ ಪಾಕಿಸ್ತಾನ ಕಾಶ್ಮೀರದಲ್ಲಿ ಭಾರತದ ಭೂಮಿಯನ್ನು ಕಬಳಿಸುವುದರ ಜತೆಗೆ ಭಾರತದಲ್ಲಿದ್ದ ಮುಸ್ಲಿಮರನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಿತ್ತು. ಪಾಕಿಸ್ತಾನಕ್ಕೆ ಯುದ್ಧದ ಭಾಷೆ ಬಿಟ್ಟು ಬೇರೆ ಯಾವ ಭಾಷೆಯೂ ಅರ್ಥವಾಗುತ್ತಿರಲಿಲ್ಲ. 1965ರ ಆಗಸ್ಟ್ 13ರಂದು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಶಾಸ್ತ್ರಿಯವರು, ಪಾಕಿಸ್ತಾನದ ಭೀತಿ ಯನ್ನು ಪ್ರಸ್ತಾಪಿಸಿ, ‘ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು’ ಎಂದರು!

ಹತ್ಯಾರೋಂ ಕಾ ಜವಾಬ್, ಹತ್ಯಾರೋಂ ಸೆ ದೇಂಗೆ!

ಎರಡು ದಿನಗಳ ಬಳಿಕ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೆಂಪು ಕೋಟೆಯನ್ನೇರಿದ ಶಾಸ್ತ್ರೀಜಿ, ಹೀಗೊಂದು ಬಾಂಬ್ ಸಿಡಿಸಿದರು. ಮುಂದುವರಿದು, ‘ನಾವು ನಾಶವಾದರೂ ಚಿಂತೆ ಇಲ್ಲ. ಆದರೆ ಭಾರತ ದೇಶದ ಉನ್ನತಿ ಹಾಗೂ ಅದರ ಧ್ವಜವನ್ನು ಕಾಪಾಡಿಕೊಳ್ಳಲು ಕೊನೆ ಗಳಿಗೆಯವರೆಗೂ ಹೋರಾಡುತ್ತೇವೆ’ ಎಂದರು!! ಇದಾಗಿ ಎರಡು ವಾರಗಳಾಗಿವೆಯಷ್ಟೆ. ಅವತ್ತು 1965, ಆಗಸ್ಟ್ 31ನೇ ತಾರೀಖು. ಮಧ್ಯಾಹ್ನ ಹೊತ್ತಿಗೆ ಮೊದಲೇ ಶಾಸ್ತ್ರಿ  ಮನೆಗೆ ಬಂದಿದ್ದರು. ಇನ್ನೇನು ಊಟಕ್ಕೆ ಕುಳಿತುಕೊಳ್ಳಬೇಕು. ಹತ್ತಿರಕ್ಕೆ ಬಂದ ಆಪ್ತ ಕಾರ್ಯದರ್ಶಿಯೊಬ್ಬರು ಕಿವಿಯಲ್ಲೇನೋ ಪಿಸುಗುಟ್ಟಿದರು. ಹಸಿವನ್ನೇ ಮರೆತ ಅವರು ‘10, ಜನಪಥ್’ ರಸ್ತೆಯಲ್ಲಿದ್ದ ಪ್ರಧಾನಿ ಕಚೇರಿಯತ್ತ ನಡೆದೇ ಬಿಟ್ಟರು. ಭೂಸೇನೆ, ವಾಯುಸೇನೆ ಮತ್ತು ನೌಕಾದಳದ ಮುಖ್ಯಸ್ಥರು ಪ್ರಧಾನಿಯ ಹಾದಿಯನ್ನೇ ಎದುರು ನೋಡುತ್ತಿದ್ದರು. ಶಾಸ್ತ್ರಿಯ ವರು ಬಂದಿದ್ದೇ ತಡ ಎಲ್ಲರೂ ಪ್ರಧಾನಿ ಕೊಠಡಿಯನ್ನು ಸೇರಿದರು. ಏನಿರಬಹುದು? ಎಂದು ಉಳಿದವರು ಯೋಚಿಸುವ ಮೊದಲೇ ಎಲ್ಲರೂ ಹೊರಬಂದರು. ಕೇವಲ ೫ ನಿಮಿಷಗಳಲ್ಲಿ ಪ್ರಧಾನಿ ಶಾಸ್ತ್ರಿಯವರು ಎದೆ ಝಲ್ಲೆನ್ನುವಂತಹ ನಿರ್ಧಾರ ಕೈಗೊಂಡಿದ್ದರು. ಪಾಕ್ ಮೇಲೆ ಯುದ್ಧ ಘೋಷಣೆಯಾಗಿತ್ತು! ಜಮ್ಮುವಿನ ಛಾಂಬ್ ವಿಭಾಗದಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿದ್ದ ಪಾಕಿಸ್ತಾನಿ ಪಡೆಗಳು ಸುಮಾರು ನೂರಕ್ಕೂ ಅಧಿಕ ಯುದ್ಧ ಟ್ಯಾಂಕ್‌ಗಳ ಮೂಲಕ ಭಾರತದ ಮೇಲೆ ಮುಗಿಬಿದ್ದಿದ್ದವು. ಇನ್ನು ಕೆಲವೇ ಗಂಟೆಗಳಲ್ಲಿ ಇಡೀ ಕಾಶ್ಮೀರವೇ ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ಕಳೆದುಕೊಳ್ಳುವ ಅಪಾಯ ಎದುರಾಗಿತ್ತು. ಛಾಂಬ್ ಅನ್ನು ರಕ್ಷಿಸಿಕೊಳ್ಳುವುದು ಅಸಾಧ್ಯ ಎಂದು ಸೇನಾ ಜನರಲ್ ಅನುಮಾನ ವ್ಯಕ್ತಪಡಿಸಿದರು. ಆದರೆ ಶಾಸ್ತ್ರೀಜಿ ಅಳುಕಲಿಲ್ಲ! ನೆಹರೂ ಅವರಂತೆ ಗೋಗರೆಯುತ್ತ ವಿಶ್ವಸಂಸ್ಥೆಯ ಕದತಟ್ಟಲಿಲ್ಲ. ಅಂತಾರಾಷ್ಟ್ರೀಯ ಒತ್ತಡದ ಬಗ್ಗೆಯೂ ಚಿಂತಿಸಲಿಲ್ಲ. ವಿಶ್ವದ ನಾಯಕರು ಏನನ್ನುತ್ತಾರೋ ಎಂದು ಯೋಚಿಸಲಿಲ್ಲ. ‘ಹಮಾರಾ ದೇಶ್ ರಹೇಗಾ ತೋ, ಹಮಾರಾ ತಿರಂಗಾ ರಹೇಗಾ’ ಎಂದು ಹದಿನೈದು ದಿನಗಳ ಹಿಂದಷ್ಟೇ ತಾವೇ ಹೇಳಿದ್ದ ಮಾತುಗಳನ್ನು ಅವರು ಮರೆತಿರಲಿಲ್ಲ. ‘ಛಾಂಬ್ ಕೈಜಾರುವ ಮೊದಲು, ಲಾಹೋರನ್ನು ವಶಪಡಿಸಿಕೊಳ್ಳಿ’ ಎಂದು ಭಾರತೀಯ ಪಡೆಗಳಿಗೆ ನಿರ್ದೇಶನ ನೀಡಿಯೇ ಬಿಟ್ಟರು.

ಎರಡನೇ ಜಾಗತಿಕ ಸಮರದ ನಂತರ ಭುಗಿಲೆದ್ದ ಅತಿದೊಡ್ಡ ಸಂಘರ್ಷ ಅದಾಗಿತ್ತು. ಏಕೆಂದರೆ ಎರಡೂ ರಾಷ್ಟ್ರಗಳು ಸಾವಿರಕ್ಕೂ ಅಧಿಕ ಟ್ಯಾಂಕ್‌ಗಳೊಂದಿಗೆ ಪರಸ್ಪರ ಮುಗಿಬಿದ್ದಿದ್ದವು. ಆರಂಭದಲ್ಲಿ ಪಾಕಿಸ್ತಾನದ್ದೇ ಮೇಲುಗೈ. ಅಮೆರಿಕ ದಾನ ಮಾಡಿದ್ದ ಸುಧಾರಿತ ಎಂ-48 ಟ್ಯಾಂಕ್‌ಗಳನ್ನು ಹೊಂದಿದ್ದ ಪಾಕಿಸ್ತಾನದ ಎರಡು ಸೇನಾ ತುಕಡಿಗಳು ಭಾರತದ ಮೇಲೆ ಆಕ್ರಮಣ ಮಾಡಿದರೆ, ನಮ್ಮ ಒಂದೇ ತುಕಡಿ ಶತ್ರುವನ್ನು ಹಿಮ್ಮೆಟ್ಟಿಸಬೇಕಿತ್ತು. ಜತೆಗೆ ಪ್ರತಿ ದಾಳಿಯನ್ನೂ ಮಾಡಬೇಕಿತ್ತು. ಆದರೇನಂತೆ ಸೆಪ್ಟೆಂಬರ್ 10 ರಂದು ‘ಅಸಲ್ ಉತ್ತರ್’ (True North) ಬಳಿ ನಡೆದ ನಿರ್ಣಾಯಕ ಸಮರದಲ್ಲಿ ನಮ್ಮ ಸೈನಿಕರು ಪಾಕ್‌ನ 97 ಟ್ಯಾಂಕ್‌ಗಳನ್ನು ವಶಪಡಿಸಿಕೊಂಡರು. ಲಾಹೋರನ್ನು ರಣರಂಗವಾಗಿಸಿದರು. ಶಾಸ್ತ್ರೀಜಿ ಅವರ ತಾಕತ್ತಿನ ಬಗ್ಗೆ ಕೀಳಂದಾಜು ಮಾಡಿದ್ದ ಜನರಲ್ ಅಯೂಬ್ ಖಾನ್ ಬೆವರಿದ. ಚೀನಾ ಕೈಯಲ್ಲಿ ಸೋತಿದ್ದ ನಮ್ಮನ್ನು ಬಗ್ಗುಬಡಿಯಲು ಇದೇ ಸರಿಯಾದ ಸಮುಯವೆಂದು ಭಾವಿಸಿದ್ದ ಅಯೂಬ್ ಖಾನ್‌ಗೆ ಶಾಸ್ತ್ರೀಜಿ ತಕ್ಕ ಪ್ರತ್ಯುತ್ತರ ನೀಡಿದ್ದರು. ಈ ಮಧ್ಯೆ ಪಾಕಿಸ್ತಾನ ಪರ ನಿಲುವು ತಳೆದಿದ್ದ ಚೀನಾ, ಯುದ್ಧದಲ್ಲಿ ಮೂಗುತೂರಿಸುವ ಮಾತನಾಡಿತು. ಬೆದರಿಕೆಗೆ ಬಗ್ಗಲಿಲ್ಲ ಭಾರತ. ಯುದ್ಧ ಮುಂದು ವರಿಯಿತು. ಏಕೆಂದರೆ ಅಂದು ಪ್ರಧಾನಿಯಾಗಿದ್ದದ್ದು ನೆಹರೂ ಅಲ್ಲ. ಲಾಲ್ ಬಹಾದ್ದೂರ್ ಶಾಸ್ತ್ರಿ! ಹಾಗಾಗಿಯೇ ‘ದೇಶಕ್ಕಾಗಿ ಒಂದು ಹೊತ್ತು ಉಪವಾಸ ಮಾಡಿ’ ಎಂಬ ಕರೆಗೆ 50 ಕೋಟಿ ಭಾರತೀಯರೂ ಮನಃಪೂರ್ವಕವಾಗಿ ಓಗೊಟ್ಟಿದ್ದರು. ಇತ್ತ ಪರಿಸ್ಥಿತಿ ತೀವ್ರ ಸ್ಥಿತಿಗೆ ತಲುಪಿತು. ಕೈಮೀರಿ ಹೋಗುವ ಲಕ್ಷಣ ಕಂಡುಬಂತು. ಮುಂದಾಗಬಹುದಾದ ಅಪಾಯವನ್ನರಿತ ವಿಶ್ವಸಂಸ್ಥೆ ಮಧ್ಯಪ್ರವೇಶಿಸಿತು. ಫಲವಾಗಿ, ಸೆಪ್ಟೆಂಬರ್ 21 ರಂದು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕದನ ವಿರಾಮ ಒಪ್ಪಂದವೇರ್ಪಟ್ಟಿತು. ಆದರೆ ಯುದ್ಧ ಮುಗಿದಾಗ ಪಾಕಿಸ್ತಾನ ಸುಮಾರು 300 ಯುದ್ಧ ಟ್ಯಾಂಕ್‌ಗಳನ್ನು ಕಳೆದುಕೊಂಡಿತ್ತು. ಅವುಗಳಲ್ಲಿ 152 ಟ್ಯಾಂಕ್‌ಗಳನ್ನು ನಮ್ಮ ಸೈನಿಕರು ನಾಶಪಡಿಸುವ ಬದಲು ವಶಪಡಿಸಿಕೊಂಡಿದ್ದರು. ಅದು ನಮ್ಮ ಬಹಾದ್ದೂರಿಕೆಯ ಪ್ರತೀಕವಾಗಿತ್ತು. ಆದರೆ ಪ್ರತಿಯಾಗಿ ಭಾರತ ಕಳೆದುಕೊಂಡಿದ್ದು ಕೇವಲ 128 ಟ್ಯಾಂಕ್‌ಗಳು. ಇತ್ತ ಶಾಸ್ತ್ರಿಯವರ ಬಗ್ಗೆ ಹಗುರವಾಗಿ ಮಾತನಾಡಿದ್ದವರು ಯುದ್ಧ ಮುಗಿದ ಮೇಲೆ ಸೊಲ್ಲೇ ಎತ್ತಲಿಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ, 1962ರಲ್ಲಿ ಚೀನಾ ಆಕ್ರಮಣ ಮಾಡಿ ದಾಗ ನೆಹರೂ ಬದಲು ಶಾಸ್ತ್ರೀಜಿ ಪ್ರಧಾನಿಯಾಗಿರಬೇಕಿತ್ತು ಎಂಬ ಭಾವನೆ ಜನಮನದಲ್ಲುಂಟಾಯಿತು. ಸೋವಿಯತ್ ರಷ್ಯಾ, ಅಮೆರಿಕ ಮತ್ತು ಚೀನಾಗಳೂ ಹುಬ್ಬೇರಿಸಿದವು. ರಣರಂಗದಲ್ಲಿ ಶಾಸ್ತ್ರಿಯವರನ್ನು ಮಣಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತವು. ಮಾತುಕತೆಗೆ ಕರೆದವು. ಈಗಿನ ಕಜಕಿಸ್ತಾನದ ತಾಷ್ಕೆಂಟ್‌ನಲ್ಲಿ ಸಂಧಾನ ಮಾತುಕತೆ ಏರ್ಪಾಡಾಯಿತು.

ಮುಂದಿನದ್ದು ಮಹಾನ್ ದುರಂತ.

1966 ಜನವರಿ 10ರಂದು ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಬಿತ್ತು. ಅದರ ಶಾಯಿ ಆರುವ ಮೊದಲೇ ಮಧ್ಯರಾತ್ರಿ 1.32 ನಿಮಿಷಕ್ಕೆ ಲಾಲ್ ಬಹಾದೂರ್ ಶಾಸ್ತ್ರಿಯವರು ಅನುಮಾನಾಸ್ಪದವಾಗಿ ‘ಹೃದಯಾಘಾತ’ಕ್ಕೆ ಬಲಿಯಾಗಿದ್ದರು. ಇಡೀ ದೇಶ ಶೋಕ ಸಾಗರದಲ್ಲಿ ಮುಳುಗಿತು. ವಿಶ್ವ ಸಂಸ್ಥೆಯಲ್ಲಿ ಭಾರತಕ್ಕೆ ಆತ್ಮ ಗೌರವ ಗಳಿಸಿಕೊಟ್ಟ ಧೀರೋದಾತ್ತ ನಾಯಕ, ಮುತ್ಸದ್ದಿ ರಾಜ ಕಾರಣಿ  ನಮಗಿಲ್ಲವಾದರು. ನೋಡುವುದಕ್ಕೆ ಕುಳ್ಳಗಿದ್ದರೂ ಹಿಮಾಲಯದೆತ್ತರದ ವ್ಯಕ್ತಿತ್ವ ಹೊಂದಿದ್ದ ಶಾಸ್ತ್ರಿಯವರು ಮಾತು ಮತ್ತು ಕೃತಿಯಲ್ಲಿ ಪರಿಶುದ್ಧತೆಯನ್ನು ಪ್ರದರ್ಶಿಸಿದ್ದರು.

ಇವತ್ತಿನ ರಾಜಕಾರಣಿಗಳು ಅಧಿಕಾರ ಸಿಗುವವರೆಗೂ ಸರಳ, ಸಜ್ಜನ, ಪ್ರಾಮಾಣಿಕ ಎಂಬ ಹೆಸರು ಹೊಂದಿರುತ್ತಾರೆ. ಗದ್ದುಗೆ ಯೇರಿದ ಮೇಲೆ ಕಾನೂನಿಗೆ ಅನುಗುಣವಾಗಿಯೇ ಮಾಡಿದ್ದೇನೆ ಎಂದು ಭ್ರಷ್ಟಾಚಾರವನ್ನೂ ಸಮರ್ಥಿಸಿಕೊಳ್ಳುತ್ತಾರೆ. ಆದರೆ ಲಾಲ್ ಬಹಾದೂರ್ ಶಾಸ್ತ್ರೀಜಿ ಇದಕ್ಕೊಂದು ಅಪವಾದ. ಆರನೇ ವಯಸ್ಸಿನಲ್ಲಿ ನಡೆದ ಒಂದು ಘಟನೆ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಮನಸ್ಸಿನಲ್ಲಿ ಮರೆಯಲಾಗದಂತಹ ಮುದ್ರೆಯ ನ್ನೊತ್ತಿತು. ಒಮ್ಮೆ ಗೆಳೆಯರೊಂದಿಗೆ ಲಾಲ್ ಬಹಾದ್ದೂರ್ ಹಣ್ಣಿನ ತೋಟಕ್ಕೆ ಹೋಗಿದ್ದರು. ಗೆಳೆಯರೆಲ್ಲರೂ ಮರ ಹತ್ತಿ ಹಣ್ಣು ಕೀಳುವುದರಲ್ಲಿ ಮಗ್ನರಾಗಿದ್ದರು. ಲಾಲ್ ಬಹಾದ್ದೂರ್ ಮಾತ್ರ ಮರದ ಬುಡದಲ್ಲಿ ನಿಂತಿದ್ದರು. ಪೊದೆಯೊಂದರ ಬಳಿ ಬೆಳೆದಿದ್ದ ಗಿಡದಿಂದ ಹೂವೊಂದನ್ನು ಕಿತ್ತರು. ಅದೇ ಸಮಯಕ್ಕೆ ಸರಿಯಾಗಿ ತೋಟದ ಮಾಲೀಕ ಬಂದ. ಮರ ಹತ್ತಿದ್ದ ಹುಡುಗರು ತುಪತುಪನೆ ಇಳಿದು ಓಡಿಹೋದರು. ಲಾಲ್ ಬಹಾದ್ದೂರ್ ಮಾತ್ರ ಮಾಲೀಕನಿಗೆ ಸಿಕ್ಕಿಬಿದ್ದರು. ಆತ ಮನ ಬಂದಂತೆ ಥಳಿಸಿದ. ಆಗ ಲಾಲ್ ಬಹಾದ್ದೂರ್ ಅಳುತ್ತಾ, ‘ನಾನು ಅನಾಥ. ನನಗೆ ಹೊಡೆಯಬೇಡಿ’ ಎಂದರು. ಮಾಲೀಕನಿಗೆ ಅನುಕಂಪ ಮೂಡಿತು. ‘ನೀನು ಅನಾಥನಾಗಿರುವುದರಿಂದಲೇ ಹೆಚ್ಚಿನ ನಡವಳಿಕೆಯನ್ನು ಕಲಿತುಕೊಳ್ಳಬೇಕು’ ಎಂದು ಹೇಳಿದ. ಆ ಮಾತುಗಳು ಲಾಲ್ ಬಹಾದ್ದೂರ್ ಮೇಲೆ ತೀವ್ರ ಪರಿಣಾಮವನ್ನು ಉಂಟು ಮಾಡಿತು. ‘ಇನ್ನು ಮುಂದೆ ನಾನು ಉತ್ತಮ ನಡವಳಿಕೆಯನ್ನು ಕಲಿತುಕೊಳ್ಳುತ್ತೇನೆ’ ಎಂದು ಲಾಲ್ ಬಹಾದ್ದೂರ್ ಆ ಮಾಲೀಕನಿಗೆ ಹೇಳಿದರು.

1950ರಲ್ಲಿ ಭಾರತ ಗಣತಂತ್ರವಾದ ಮೇಲೆ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತವನ್ನು ಪಡೆದುಕೊಂಡಿತು. ಕಾಂಗ್ರೆಸ್‌ನ ಈ ಯಶಸ್ಸಿಗೆ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಪರಿಶ್ರಮವೂ ಕಾರಣವಾಗಿತ್ತು. ಆ ಸಮಯದಲ್ಲಿ ಅವರು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಶಾಸ್ತ್ರಿಯವರ ಮಾರ್ಗದರ್ಶನದಡಿ ಅಭ್ಯರ್ಥಿಗಳ ಆಯ್ಕೆ, ಚುನಾವಣೆ ಪ್ರಚಾರ ಎಲ್ಲವೂ ಕೂಡ ಅಚ್ಚುಕಟ್ಟಾಗಿ ನಡೆದವು. ಅವರು ಮಾತ್ರ ಚುನಾವಣೆಗೆ ನಿಲ್ಲಲಿಲ್ಲ. ಅಂಥ ನಿಷ್ಠಾವಂತ ಹಾಗೂ ಪ್ರಾಮಾಣಿಕ ವ್ಯಕ್ತಿಯನ್ನು ಸರಕಾರದಿಂದ ಹೊರಗಿಡುವುದು ನೆಹರು ಅವರಿಗೆ ಒಪ್ಪಿತವಾಗಲಿಲ್ಲ. ರಾಜ್ಯಸಭೆಗೆ ಸ್ಪರ್ಧಿಸುವಂತೆ ಅವರು ಶಾಸ್ತ್ರಿಯವರನ್ನು ಒತ್ತಾಯಿಸಿ ಅವರ ಮನವೊಲಿಸಿದರು. ಆಯ್ಕೆ ಬಳಿಕ ರೈಲ್ವೆ ಹಾಗೂ ಸಾರಿಗೆ ಸಚಿವರಾಗಿ ನೇಮಿಸಲಾಯಿತು. ಅದೇ ವೇಳೆ ರೈಲು ದುರಂತವೊಂದು ಸಂಭವಿಸಿತು. ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ಶಾಸ್ತ್ರಿ ರಾಜೀನಾಮೆ ನೀಡಿದರು. ಶಾಸ್ತ್ರಿಯವರ ನಿರ್ಗಮನ ಕಾಂಗ್ರೆಸ್ ಪಾಲಿಗೆ ವರದಾನವಾಗಿ ಪರಿಣಮಿಸಿತು. ಮುಂದಿನ ಮಹಾ ಚುನಾವಣೆಯಲ್ಲಿಯೂ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ವ್ಯಾಪಕವಾದ ಕೆಲಸವನ್ನು ಮಾಡಿದರು. ಆ ಬಳಿಕ ರಚನೆಯಾದ ಸರಕಾರದಲ್ಲಿ ಅವರು ಸಾರಿಗೆ ಮತ್ತು ಸಂಪರ್ಕ ಖಾತೆ ಸಚಿವರಾಗಿದ್ದರು. ನಂತರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿದ್ದರು. ಗೋವಿಂದ ವಲ್ಲಭ ಪಂತ್ ಅವರ ನಿಧನದ ಬಳಿಕ 1961ರಲ್ಲಿ ಶಾಸ್ತ್ರಿಯವರು ಗೃಹ ಸಚಿವರಾದರು. ನಿಮಗೆ ಗೊತ್ತಾ, ಶಾಸ್ತ್ರಿಯವರು ಗೃಹ ಸಚಿವರಾಗಿದ್ದರೂ ಅವರದೇ ಆದ ಸ್ವಂತ ಮನೆ ಇರಲಿಲ್ಲ! ಜನ ಅವರನ್ನು ಗೃಹ ರಹಿತ ಗೃಹ ಸಚಿವ ಎಂದೇ ಕರೆಯುತ್ತಿದ್ದರು. ಅವತ್ತು ನೆಹರು ಅಗಲಿದಾಗ ಶಾಸ್ತ್ರಿಯವರಿಗಿಂತ ಯೋಗ್ಯ ಉತ್ತರಾಧಿಕಾರಿ ಇನ್ಯಾರಿದ್ದಿರಲು ಸಾಧ್ಯ?!

ಇಂದು ಅವರ ಜನ್ಮದಿನ. ಅವರು ಜನಿಸಿದ್ದು 1904ರ ಅಕ್ಟೋಬರ್ 2ರಂದು.  ಅಂತಹ ಮಹಾನ್ ವ್ಯಕ್ತಿ ನಮ್ಮ ದೇಶದಲ್ಲಿ ಹುಟ್ಟಿದ್ದೇ ನಮ್ಮ ಪುಣ್ಯ.

31 Responses to “ಇತಿಹಾಸದ ವಾಮನ, ಆ ವ್ಯಕ್ತಿತ್ವದೆತ್ತರಕ್ಕೆ ನಮ್ಮ ನಮನ!”

  1. keerti says:

    very good.
    thanks

  2. Srivatsa says:

    Very good piece of work… Rather facts, i must say….
    Unknown to most ppl…
    India would be really blessed if another “Shastri” takes birth very soon…

  3. Siddalingeshwar Patil says:

    I wonder how Congress could forget such a great person! The most of the severe problems that India is facing today (including Kashmir) are due to the blunders committed by few Congress leaders before and after Independence. Among such selfish leaders the real gem Sri Shashtriji was an exception and today that party showcases only Nehru, Indira, Rajiv, Sonia, Rahul and even Priyanka as its leaders but not Shashtriji, Patel and many more, disgusting. “Jai Jawaan, Jai Kisaan” the most appropriate proverb explaining the independent India is very much relevant till date even after six decades.
    Thank you Mr. Shashtriji we owe you a lot and we are missing you badly. Long live your charisma and simplicity.
    Pratap Simha, I would like to congratulate you for this apt and unconventional writing on such a holy day.

  4. Shiva Kumar says:

    good one…

  5. NIVEDITA says:

    THE ARTICLE HAS FAILED TO SUMMARIZE SHASTRIJI,,,,,,,,,,,,,,,,,,

  6. NIVEDITA says:

    The artile has failed to sumarize shastriji,,,,,,,,,,

  7. ತುಂಬಾ ಒಳ್ಳೆಯ ಲೇಖನ..

    ಧನ್ಯವಾದಗಳು.

  8. VAIJUNATH says:

    TUMBA CHENAGIDE SIR

  9. swapna says:

    Very nice article. I was expected that you will right about shastri. Gandhi and Shastri born on same day but every one remembers Gandhi birth day and celebrates. I always has a question that why history is always reach people in a wrong way or with half truth???????? Thanks for such a nice article. Very true its our fate to have such a good president in our country.

  10. THOMAS12 says:

    Muslim Persecution of Hindus In India — The Story You Won’t See In the Western Mainstream Media

    By Phyllis Chesler
    Published September 09, 2010 | FoxNews.com

    They are crossing the border illegally and violently displacing the indigenous population whose homes and possessions they either destroy or occupy. They are attacking the young, the elderly, and especially the girls and women, whom they kidnap, forcibly convert, or traffic into brothels. The locals are terrified of them. The police rarely come to their aid, nor do the politically correct media or government. Both are terrified by the criminals and terrorists who are riding these immigrant waves.

    I am not talking about illegal immigrants to Europe or North America. I am describing Muslims who are penetrating India’s West Bengal region. These Bangladeshi immigrants are becoming conduits for criminal activities (arms, drugs, and sexual slavery) which also fund global jihad.

    You won’t read about this in the Western mainstream media—or even in the Indian media, which has turned a blind eye to this ongoing tragedy because they are afraid to be labeled “politically incorrect” or “Islamophobic.” They are also afraid of reprisals. When Islamic zealots ransacked the office of the renowned newspaper, ‘The Statesman’ in Kolkata, in retaliation for a mere reproduction of an article condemning Islamic extremism, the Indian press remained silent. The editor and publisher of the newspaper were arrested for offending Muslim sentiments and no action was taken against the rioters.

    Fortunately, there are a few very brave Hindus who are taking a stand against the Muslim terror campaign in India. One of them is Tapan Ghosh, whom I had the privilege of meeting recently when he came to New York City to talk about anti-Hindu persecution in his homeland. In 2008, Ghosh founded “Hindu Samhati” (Hindu Solidarity Movement), which serves persecuted Hindu communities in both West Bengal and Bangladesh.

    As Ghosh emphasized in our interview, the Muslim persecution of Hindus in India is nothing new. Over a period of 800 years, millions of Hindus were slaughtered by Muslims as infidels or converted by the sword. In 1946-1947, when British India was divided into India and Pakistan, Muslims massacred many thousands of Hindus in Calcutta, the capital of West Bengal, and all along the fault line which separated India and Pakistan. Anti-Hindu riots and massacres continued during the 1950s and 1960s, but it was in 1971, when East Pakistan broke away to form the country of Bangladesh, that things worsened for Hindus in the area.
    As Ghosh explained to me, “The liberation movement for Bangladesh was characterized by an escalation of atrocities against the Hindus and pro-liberation Muslims. Hindus were specifically singled out because they were considered a hindrance to the Islamisation of East Pakistan. In March 1971, the government of Pakistan and its supporters in Bangladesh launched a violent operation, codenamed “Operation Searchlight,” to crush all pro-liberation activities. Bangladeshi government figures put the death toll at 300,000, though nearly 3 million Hindus were never accounted for and are presumed dead.” U.S. officials in both India and Washington used the word “genocide” to describe what took place.

    According to Ghosh, there has recently been a sharp increase in incidents of “Muslim rioting during Hindu festivals, destruction of Temples, desecration of Deities, and large-scale, provocative cow slaughter.” Worse: “Hundreds, thousands, of Hindu girls have been kidnapped, trafficked into sexual slavery, or taken as second or third wives for wealthy Muslim men. In recent years, Ghosh’s organization has rescued nearly 100 such girls, and one of his main missions has been to help reintegrate those survivors into their families and societies.

    Ghosh wants the Indian government to stop the illegal immigration from Bangladesh and to force the return of undocumented Muslims; to ban madrassas and polygamy; to enforce a single standard of law and education; and to arrest and prosecute known Muslim mafia kingpins and terrorists. He challenges the media to report on the anti-Hindu atrocities and to address the issue of religious apartheid.

    Ghosh is not optimistic. “The establishment of massive Saudi-funded Madrasas across rural Bengal is only contributing to the growing religious extremism among Muslims, [and] implementation of Sharia laws by [Islamic] courts is quite prevalent in many villages.” His greatest fear, he tells me, is that one day shouts of “Allahu Akbar” will ring out across the land and that Muslim zealots will demand that Hindus either convert or leave West Bangal—or die.

    Ghosh came to America not just to appeal to Indian-Americans with family and historical ties in West Bengal and Bangladesh but to appeal to all Americans for their support. As he sees it, the battle against Muslim persecution in India is just one front in a much larger battle against Islamic expansionism and terror throughout the world.

    All Americans must realize, he told me, “that the war on Islamic terrorism cannot be won without curbing religious extremism amongst the Muslim masses, be it in the suburbs of Detroit or Delhi or villages in rural Bengal. And this will require the active support and cooperation with each other, ranging from cooperation at the highest level to those who work at the grassroots level. We hope that Americans and Westerners will come out and support the Hindus in Bengal in raising resources and creating awareness about our on-the-ground realities.”

    Phyllis Chesler, Ph.D. is professor emerita of psychology and the author of thirteen books including “Woman’s Inhumanity to Woman” and “The New Anti-Semitism.” She has written extensively about Islamic gender apartheid and about honor killings. She once lived in Kabul, Afghanistan. She may be reached through her website: http://www.phyllis-chesler.com.

    The author would like to acknowledge the assistance of Nathan Bloom in the preparation of this article.

    Fox News Opinion is on Twitter. Follow us @fxnopinion.

  11. karthik says:

    nice article about shastriji i never knew that much about him…Tashkent event was a shameful act India never responded…i wonder how did the people keep quite about his sudden death

  12. MANJU... says:

    ಹಾಯ್ !
    ಪ್ರತಾಪ್ ಸರ್ !!

    ನಮಗೆ ಗೊತ್ತಿಲ್ಲದ ಸಾವಿರಾರು ಧೀಮಂತ ವ್ಯಕ್ತಿಗಳ ವ್ಯಕ್ತಿತ್ವವನ್ನು ನಿನ್ನ ಖಡ್ಗದಂತ ಲೇಖನಿಯಲ್ಲಿ ಮೂಡಿಬಂದ ರೀತಿ ಅದ್ಬುತ ಶಾಸ್ತ್ರೀ ಅಂತ ಮಹಾನುಭಾವನನಿಂದ ಪಾಕಿಸ್ತಾನದ ಮೇಲಿನ ಯುದ್ದಗೆದ್ದ ರೀತಿ ನೆನೆಸಿಕೊಂಡರೆ ಹೆಮ್ಮೆ ಅನಿಸುತ್ತೆ .ನೆಹರು ಅಂತ ಹೇಡಿ ರಾಜಕಾರಣಿಹಿಂದ ಚೈನಾ ಮೇಲಿನ ಸೋಲು ಮೈ ಉರಿಯುತ್ತೆ .ಯಾವತ್ತು ನಮ್ಮ ದೇಶದಲ್ಲಿ ಯುವಕರು ಎದ್ದು ನಿಲ್ಲುವದಿಲ್ಲ್ವೋ ಅಲ್ಲಿಯವರಿಗೆ ಕಳ್ಳರು,ದೇಶದ್ರೋಹಿಗಳು, ಧರ್ಮವಿರೋದಿಗಳು ಅವರೇ ನಮ್ಮನ್ನಾಳುವ ರಾಜಕಾರನಿಗಲಾಗುತ್ತಾರೆ .ಇಂಥ ಸಂಧರ್ಭದಲ್ಲಿ ಯುವಕರಲ್ಲಿ ದೇಶಭಕ್ತಿ ತುಂಬುವಂತ ಇನ್ನು ಹೆಚ್ಚು ! ಹೆಚ್ಚು ಸಿಡಿಲಿನಂತ ಲೀಖನಗಳು ಪ್ರತಾಪ್ ಸರ್ ಖಡ್ಗದಿಂದ ಮೂಡಿಭರಲೆಂದು ಆಶಿಸುತ್ತೇನೆ

    ಧನ್ಯವಾದಗಳು !!

  13. Giriraj says:

    It’s a very good atricle. Every indian should read this article.
    Thank you for such a nice article.

  14. Darshan J says:

    Pratap ur article is timely !

    When the whole world chants mahatma on oct – 2nd we often tend to forget an equally inspiring man called lal bahadur shastri ji .

    Thanks again

  15. manmohan shenoy says:

    regards for highlighting this true news to this younger generation thank you

  16. Prashant Bhat says:

    Hi Pratap

    timely article,

    some times we realy sodline the real heroes of india…

    must read article for all congressman.

    salute to great hero!!!!

    gud job.

    thanks

  17. adarsha k says:

    nice work sir…
    As many people (including media)…. was busy in celebratind gandhiji’s birthday..
    almost everyone forgotten that its b’day of the “true hero”, true politician.. , true leader.., and ofcourse nimma bashe yalle heluvudadre.. true MAN( GANDASU)..!!

    but some ppl lik u remembered him.. honoured him.., and wrote few words on him.. so that many ppl will come to know about THE GREAT HIDDEN PERSONALITY OF INDIA… relly good work… THANK U..

    jai hind..

  18. lakshmipriya says:

    hi sir …. really its a good one… i like it very much….

  19. venkatesh k v says:

    Shastri jee bagee gowrava hecheside,avaru konda car na bagge bareya bhahudethu.

  20. shruthi.bv says:

    nimma lekhanagalu thumha chennagirutthve.namage thiliyadha aneka vishayagalannu thilisuttheeri. lal bhahaddhur avara bagge baredha article namage avara bagge iddha hemme yannu innu hecchuvanthe madithu. intha vishayagalannu thilisikoduva nimage dhanyavadha

  21. Bhuvan shyam says:

    Hi pratap…Great article abt the GREAT MAN…

  22. Bhuvan says:

    great article abt THE GREAT MAN

  23. Venugopal Halambi says:

    since Vijay Karnataka has been taken over by TOI group, simha’s article should be given a place in TOI main edition covering all over india, so that such good articles, informations spreads across india which are worth reading. Lets hope that we will see that day….

  24. Rajesh says:

    yes….i also agree with Mr.Venugopal Halambi… Such mind provoking articles should spread across all over India.

    Pratap Bro,Is it possible to publish your articles in Major National News papers like TOI?

  25. Numraju says:

    ಮಾನ್ಯರೆ, ಪ್ರಮಾನಿಕರಾದ ಶಾಸ್ತ್ರಿಯವರು ಕಾಂಗ್ರೆಸ್ಸಿಗರಾಗಿದ್ದರೆಂದರೆ ನಂಬಲಾಗುತ್ತಿಲ್ಲ. ಅಂತಹ ದೀಮಂತರ ಮಕ್ಕಳು ರಾಜೀವಗಾಂದಿ ರಾಹುಲ್ ಗಾಂದಿಯಂತೆ ಬೆಳೆಯಲಿಲ್ಲವಲ್ಲ. ಲೇಖನ ತುಂಬಾ ಸ್ಫೂರ್ತಿದಾಯಕ. ಧನ್ಯವಾದಗಳು.

  26. vinay says:

    it is a great article

  27. Spurana says:

    Article is very good. Thank you Pratap.

    Numraju avre, khushipadi, anthaa dheemantara makkaloo kooda dheemantare adakke, avaru tamma jeevanavanna taavu roopisikondiddaare.

    Appa maadida daareena pukkate upayogiso saadhaarana janarate aal.
    Rajeev, Rahul enu kashta pattu aa position ge hodru.? Politician maklu, sose, aliya ella politics, Film star maklu, film industry… Huh…

  28. Vishu says:

    Congress has forgotten it’s true heros and ruling the coutry with generations of particular dynasty.What a SHAME to Congress.It should have been dissolved right after independence.

  29. Harsha says:

    Thank u Pratap, very nice one…

  30. Madhuraj kavoor says:

    ಭಾರತ ಮಾತೆಯ ಬಹಾದ್ದೂರ್ ಪುತ್ರ ಲಾಲ್ ಬಹಾದ್ದುರ್ ಶಾಸ್ತ್ರಿ ನಮ್ಮಿಂದ ಬಹು ದೂರ ಹೋಗಿದ್ದರೂ ಅವರ ವ್ಯಕ್ತಿತ್ವ ನಮಗೆ ಆದರ್ಶಪ್ರಾಯವಾಗಿದೆ, ಅಂತಹ ನಾಯಕನ ನಾಯಕತ್ವದ ಕಿರುಚಿತ್ರಣವನ್ನು ನೀಡಿದಂತಹ ಪ್ರತಾಪ್ ಸಿಂಹ ರಿಗೆ ಧನ್ಯವಾದಗಳು.
    ॥ಜೈ ಜವಾನ್ ಜೈ ಕಿಸಾನ್॥
    ॥ವಂದೇ ಮಾತರಂ॥