Date : 07-11-2013, Thursday | 120 Comments
“ಹೀಗಿದ್ದರು ಕುವೆಂಪು” ಎಂಬ ಸಣ್ಣ ಪುಸ್ತಕವಿದೆ. ಒಮ್ಮೆ ಕುವೆಂಪು ಹಾಗೂ ಅವರ ಶಿಷ್ಯ ಪ್ರಭುಶಂಕರ ಮೈಸೂರಿನ ಕುಕ್ಕರಹಳ್ಳಿ ಕೆರೆಯ ಬಳಿ ಕುಳಿತಿದ್ದರು. ಚಾಮುಂಡಿ ಬೆಟ್ಟಕ್ಕೆ ಹೋಗಿದ್ದ ಭಕ್ತರು ಸಮೀಪದಲ್ಲೇ ಹಾದುಹೋದರು. ಅವರ ತಲೆಯ ಮೇಲೆ ಪ್ರಸಾದವಾಗಿ ಕೊಟ್ಟಿದ್ದ ಹೂವನ್ನು ನೋಡಿ ಕುವೆಂಪು ಹೇಳಿದರು- “ಎಂಥಾ ಮೂಢರು ನಮ್ಮ ಜನ. ಈ ಕಾಲದಲ್ಲೂ ಹೀಗೆಲ್ಲಾ ಮಾಡುತ್ತಾರಲ್ಲಾ…”. ಆದರೆ ಪ್ರಭುಶಂಕರರು ಪ್ರತಿಕ್ರಿಯಿಸಲಿಲ್ಲ. ಮರುದಿನ ಮತ್ತೆ ಕುವೆಂಪು ಭೇಟಿಯಾಯಿತು. ಆಗ ಹೇಳಿದರು “ಚಾಮುಂಡಿ ಬೆಟ್ಟಕ್ಕೆ ಹೋಗಿ ಗುಡಿಯಲ್ಲಿ ಕೊಟ್ಟ ಹೂವನ್ನು ತಲೆಮೇಲೆ ಇಟ್ಟುಕೊಂಡು ಬರುವವರು ಮೂಢರು. ನಾವು ನೋಡಿ, ಸಂಜೆ ರಾಮಕೃಷ್ಣ ಆಶ್ರಮಕ್ಕೆ ಹೋಗಿ ರಾಮಕೃಷ್ಣ ಪರಮಹಂಸರು, ವಿವೇಕಾನಂದರ ಮೂರ್ತಿ ಮುಂದೆ ಕುಳಿತು ಅವರೇ ದೇವರೆಂದು ಧ್ಯಾನ ಮಾಡಿ ಬರುತ್ತೇವೆ! ಇದು ಮೌಢ್ಯವಲ್ಲವೆ?”.
ಸ್ವತಃ ಒಬ್ಬ ವಿಚಾರವಾದಿಯಾಗಿದ್ದ ಶ್ರೇಷ್ಠ ಸಾಹಿತಿ ಕುವೆಂಪು ಅವರೇ ತಮ್ಮ ಶಿಷ್ಯನ ಮಾತು ಕೇಳಿ ಅಂದು ದಂಗಾಗಿದ್ದರು!
ಹೌದು, ನಂಬಿಕೆ ಎನ್ನುವುದು ಜನರ ಖಾಸಗಿ ವಿಚಾರ. ನಂಬಿಕೆ ತರ್ಕಕ್ಕೆ ನಿಲುಕದ್ದು. ಈ ನಂಬಿಕೆ, ವಿಶ್ವಾಸಗಳು ಗೋಚರಿಸುವುದು ಆಚರಣೆಗಳಲ್ಲಿ. ನಾವು ಕಾರು ತಂದರೂ ಕುಂಬಳಕಾಯಿ ಒಡೆಯುತ್ತೇವೆ, ವೈಜ್ಞಾನಿಕ ಪ್ರಗತಿಯ ಅತ್ಯುನ್ನತ ಸಂಕೇತದಂತಿರುವ ಕಂಪ್ಯೂಟರ್ ತಂದರೂ ಪೂಜಿಸಿ ನಿಂಬೆಹಣ್ಣು ನಿವಾಳಿಸುತ್ತೇವೆ. ಇವೆಲ್ಲ ಜನರ ವೈಯಕ್ತಿಕ ವಿಷಯಗಳು. ಜನರ ದೈನಂದಿನ ಖಾಸಗಿ ವಿಚಾರಕ್ಕೂ ಸರ್ಕಾರಕ್ಕೂ ಏನು ಸಂಬಂಧ? ನಮಗೆ ಯಾವುದು ನಂಬಿಕೆ, ವಿಶ್ವಾಸವಾಗಿ ಕಾಣುತ್ತದೋ ಅದು ಕೆಲವರಿಗೆ ಮೌಢ್ಯವಾಗಿ ಕಾಣಬಹುದು. ಆದರೆ ಯಾವುದು ಮೌಢ್ಯ, ಮೂಢನಂಬಿಕೆ ಎಂದು ನಿರ್ಧರಿಸಬೇಕಾದವರು ಯಾರು? ಭಾನಾಮತಿ, ಬೆತ್ತಲೆ ಸೇವೆ, ಗೆಜ್ಜೆಪೂಜೆ, ನರಬಲಿ, ವಾಮಾಚಾರ, ವಶೀಕರಣ, ಯಕ್ಷಿಣಿ, ಪಂಕ್ತಿಭೇದ, ಮಡಿ-ಮೈಲಿಗೆಗಳ ನಿಷೇಧ ಹಾಗೂ ಶಿಕ್ಷೆಗೆ ಕಾಂಗ್ರೆಸ್ ಸರ್ಕಾರ ತರಲು ಹೊರಟಿರುವ ಕಾನೂನು ಸೀಮಿತವಾಗಿದ್ದರೆ ಯಾರೂ ತಕರಾರು ಎತ್ತುವ ಅಗತ್ಯವಿರಲಿಲ್ಲ. ಆದರೆ ಸರ್ಕಾರ ನೇಮಕ ಮಾಡಿದ್ದ ಸಮಿತಿಯಲ್ಲಿದ್ದ ಮಹಾಮೇಧಾವಿಗಳು ಸಿದ್ಧಪಡಿಸಿರುವ ಕರಡು ಈ ಅನಿಷ್ಟ ಪದ್ಧತಿಗಳಿಗೆ ಮಾತ್ರ ಸೀಮಿತವಾಗಿದೆಯೇ?
ಇಷ್ಟಕ್ಕೂ ಈ ವಿಚಾರವಾದಿಗಳ ಸಮಿತಿ ಮಾಡಿರುವ ಶಿಫಾರಸ್ಸು ಹಾಗೂ ಸರ್ಕಾರ ಜಾರಿಗೆ ತರಲು ಹೊರಟಿರುವುದೇನು ಅಂದುಕೊಂಡಿರಿ?
ಮಠಾಧೀಶರು, ಸನ್ಯಾಸಿಗಳ ಪಾದಪೂಜೆ ಮಾಡಬಾರದಂತೆ! ಸರ್ಕಾರಿ ಕಟ್ಟಡಗಳನ್ನು ಕಟ್ಟುವಾಗ ಗುದ್ದಲಿ ಪೂಜೆ ಮಾಡಬಾರದಂತೆ!! ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ವಾಸ್ತುಶಾಸ್ತ್ರ, ಕಾಲನಿರ್ಣಯಗಳನ್ನು ಪಿಡುಗುಗಳೆಂದು ಗುರುತಿಸಿ ಕಟ್ಟುನಿಟ್ಟಾಗಿ ಅವುಗಳನ್ನು ನಿಷೇಧಿಸಬೇಕಂತೆ. ಜಪಮಾಲೆ, ರುದ್ರಾಕ್ಷಿ, ಮಣಿಸರ, ತಾಯತ, ಹರಳುಗಳ ಮಾರಾಟ ಹಾಗೂ ಬಳಕೆ ಮಾಡಬಾರದಂತೆ. ದೇವಸ್ಥಾನಗಳಲ್ಲಿ ಪ್ರಾಣಿ ಬಲಿ ಮಾಡಬಾರದಂತೆ. ಜಾತ್ರೆ, ಕರಗ ಮಾಡುವ ಮೊದಲು ಕೇಳುವ “ದೈವ ಪ್ರಶ್ನೆ”ಯನ್ನು ಇನ್ನು ಮುಂದೆ ಕೇಳಬಾರದಂತೆ. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು ಮತ-ಮೌಢ್ಯ ಬಿತ್ತುವ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸ ಕರೆಯೊಯ್ಯಬಾರದಂತೆ!
ಇದೇನಿದು ಸ್ವಾಮಿ?
ಮೂಢನಂಬಿಕೆ, ಕಂದಾಚಾರಗಳ ಪ್ರತಿಬಂಧಕ ವಿಧೇಯಕವೋ? ಅಥವಾ ಇವುಗಳ ಸೋಗಿನಲ್ಲಿ ಹಿಂದು ನಂಬಿಕೆ, ಆಚರಣೆಗಳನ್ನು ನಾಶಮಾಡಲು ಹೂಡಿರುವ ತಂತ್ರವೋ? ನೀವು ಕರಡಿನಲ್ಲಿ ಏನು ಹೇಳಲು ಹೊರಟಿದ್ದೀರೋ, 19ನೇ ಶತಮಾನದಲ್ಲಿ ಮತಾಂತರ ಮಾಡಲು ಬಂದ ಪಾದ್ರಿಗಳು ಹಿಂದು ಧರ್ಮದ ಬಗ್ಗೆ ಹೇಳಿದ್ದೂ ಇದನ್ನೇ ಸ್ವಾಮಿ! ಇನ್ನೊಬ್ಬರದ್ದನ್ನು ಮೂಢನಂಬಿಕೆ, ತಮ್ಮದ್ದನ್ನು ಸೈಂಟಿಫಿಕ್ ಅನ್ನೋದು ಪಾದ್ರಿಗಳ ತಂತ್ರವಾಗಿತ್ತು. ನಿಮ್ಮ ಉದ್ದೇಶವೂ ಅದೇ ಆಗಿದೆಯೇನು? ಈಗ ಹೊರಗೆಡವಿರುವುದು ಕಾನೂನಲ್ಲ, ಕರಡು ಪ್ರತಿಯೇ ಆಗಿರಬಹುದು. ಆದರೆ ಆ ಕರಡಿನಲ್ಲಿ ಒಳಗೊಂಡಿರುವ ವಿಚಾರಗಳನ್ನು ನೋಡಿದರೆ ಸರ್ಕಾರದ ನಿಜವಾದ ಉದ್ದೇಶ, ಗುರಿ ಏನು ಎಂಬುದು ತಿಳಿಯುವುದಿಲ್ಲವೆ? ಒಂದು ವೇಳೆ, ಈ ಕರಡು ಕಾಯಿದೆಯಾದರೆ, ಇನ್ನು ಮುಂದೆ ಆಯುಧ ಪೂಜೆ ದಿನ ಪೋಲಿಸರು ತಮ್ಮ ಬಂದೂಕುಗಳಿಗೆ ಪೂಜೆ ಮಾಡುವುದಕ್ಕೂ, ಬಿಎಂಟಿಸಿ-ಕೆಎಸ್‌ಆರ್‌ಟಿಸಿ ಸಿಬ್ಬಂದಿ ವಾಹನವನ್ನು ಶೃಂಗರಿಸಿ ಪೂಜೆ ಸಲ್ಲಿಸುವುದಕ್ಕೂ, ಶಾಲೆಗಳಲ್ಲಿ ಶಾರದೆಯ ಪೂಜೆ ಮಾಡುವುದಕ್ಕೂ ಕುತ್ತು ಬರಲಿದೆ.
ಗುದ್ದಲಿ ಪೂಜೆ ಮಾಡಬಾರದು ಎನ್ನುತ್ತಾರಲ್ಲಾ ಇವರಿಗೆ ಗುದ್ದಲಿ ಪೂಜೆಯ ಮಹತ್ವವಾದರೂ ತಿಳಿದಿದೆಯೇ?
ಭೂಮಿಯನ್ನು ನಾವೇ ಹಣ ಕೊಟ್ಟು ಕೊಂಡರೂ, ಅಲ್ಲಿ ಮನೆ ಕಟ್ಟುವಾಗ ಸ್ಥಳಪೂಜೆ ಮಾಡುತ್ತೇವೆ. ಗುದ್ದಲಿಯ ಪೆಟ್ಟು ಹಾಕುವ ಮೊದಲು ಭೂತಾಯಿಯ ಪೂಜೆ ಮಾಡಿ ಆಕೆಗೆ ನೋವುಂಟು ಮಾಡುತ್ತಿರುವುದಕ್ಕಾಗಿ ಕ್ಷಮೆ ಕೇಳುತ್ತೇವೆ. ಗೃಹ ಪ್ರವೇಶ ಮಾಡುವಾಗ ಹೇಳುವ ಮಂತ್ರದಲ್ಲೂ ಕ್ಷಮೆ ಹಾಗೂ ಆಶೀರ್ವಾದ ಕೋರಿಕೆ ಇರುತ್ತದೆ. ಅಂದರೆ ಅಲ್ಲೊಂದು ಫೀಲಿಂಗ್ ಇರುತ್ತದೆ. ಪ್ರಕೃತಿ ಜತೆ ಒಂದು ಸಂಬಂಧ ಇಟ್ಟುಕೊಳ್ಳುವುದರ ಸಂಕೇತವೇ ಈ ಗುದ್ದಲಿ ಪೂಜೆ.
ಅಂಥ ಗುದ್ದಲಿ ಪೂಜೆಯನ್ನು ಸರ್ಕಾರಿ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಮಾಡಬಾರದು ಎನ್ನುವುದು ಮೌಢ್ಯ ಎಂಬ ಕಾರಣಕ್ಕೋ ಅಥವಾ ಕಾಂಗ್ರೆಸ್‌ನ ಸೆಕ್ಯುಲರೀಕರಣವೆಂಬ ಅಜೆಂಡಾದ ಭಾಗವೋ? ಇವತ್ತು ಸರ್ಕಾರಿ ಕಟ್ಟಡದ ನೆಪ ತೆಗೆದವರು, ನಾಳೆ ಜನರಿಗೂ ಅದೇ ಕಾಯಿದೆ ಅನ್ವಯಿಸುವುದಿಲ್ಲ ಎನ್ನುವುದಕ್ಕೆ ಖಾತ್ರಿಯೇನು? ತೀರಾ ವೈಯಕ್ತಿಕ ವಿಚಾರವಾದ ಮಠಾಧೀಶರು, ಸನ್ಯಾಸಿಗಳ ಪಾದ ಪೂಜೆ ಮಾಡಬೇಡಿ ಎಂದವರು, ಮನೆ ಕಟ್ಟುವಾಗಲೂ ಗುದ್ದಲಿ ಪೂಜೆ ಮಾಡಬೇಡಿ ಎಂದು ಜನರಿಗೆ ಹೇಳುವುದಿಲ್ಲ, ಕಟ್ಟಳೆ ತರುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನಿದೆ ಹೇಳಿ?
ಈ ಸರ್ಕಾರಕ್ಕೆ ಆಚರಣೆಗಳಿಗೂ ಕಂದಾಚಾರಗಳಿಗೂ ವ್ಯತ್ಯಾಸವೂ ಗೊತ್ತಿಲ್ಲವೆ?
ಏಕೆ ಹೀಗೆ ಹೇಳಬೇಕಾಗಿದೆಯೆಂದರೆ, ದೇವಸ್ಥಾನಗಳಲ್ಲಿ ಗಂಟೆ ಬಾರಿಸಬಾರದು, ಇಷ್ಟಕ್ಕೂ ದೇವರೇನು ನಿದ್ರಿಸುತ್ತಿರುತ್ತಾನೆಯೇ ಪೂಜೆ ನಂತರ ತೀರ್ಥಕೊಡಬಾರದು, ಅದು ಹೊಳೆ ನೀರಾಗಿರುವುದರಿಂದ ಆ್ಯಕ್ವಾ ಗಾರ್ಡ್, ಕೆಂಟ್‌ನಂತೆ ಶುದ್ಧವಾಗಿರುವುದಿಲ್ಲ ಎಂದೂ ಮುಂದೊಂದು ದಿನ ಕಾನೂನು ತರಲು ಪ್ರಯತ್ನಿಸಿದರೂ ಆಶ್ಚರ್ಯವಿಲ್ಲ, ಅಲ್ಲವೇ? ಇನ್ನು ಮುಂದೆ ಮದುವೆ ಸಂದರ್ಭದಲ್ಲಿ ಸಪ್ತಪದಿ ತುಳಿಯಬೇಡಿ, ಬರೀ ರಿಜಿಸ್ಟರ್ ಮಾಡಿದರೆ ಸಾಕು, ಸಪ್ತಪದಿ ತುಳಿಯುವುದೂ ಗೊಡ್ಡು ಸಂಪ್ರದಾಯ ಹಾಗೂ ಮೌಢ್ಯ ಎನ್ನಬಹುದು. ಇಷ್ಟಕ್ಕೂ ಸಮಾಜಕ್ಕೆ ಮೌಢ್ಯ, ಮೌಲ್ಯ, ವೈಚಾರಿಕತೆ ಹೇಳಲು ಹೊರಟಿರುವ ಸಮಿತಿಯಲ್ಲಿ ಇರುವ ಒಬ್ಬಾಕೆಯ ತಂಗಿ “ಗಂಡ ಬೇಡ, ಮಗು ಬೇಕು” ಎಂದು ಹಾಗೇ ಮಾಡಿಕೊಂಡಿದ್ದಾರೆ. ಅದನ್ನೂ ಮೌಲ್ಯವೆಂದು, ಮದುವೆ ಮೌಢ್ಯವೆಂದು ಬೋಧಿಸಿ ಬಿಡಬಹುದು ಜೋಕೆ! ಇನ್ನು ಮುಂದೆ ಕನ್ನಡ ರಾಜ್ಯೋತ್ಸವದಂದು “ತಾಯಿ ಭುವನೇಶ್ವರಿ” ಅನ್ನಬೇಡಿ ಅಂತಲೂ ಹೇಳಿಬಿಡಿ. ಇಷ್ಟಕ್ಕೂ ತಾಯಿ ಭುವನೇಶ್ವರಿ ಅಂದರೆ ಅಲ್ಪಸಂಖ್ಯಾತರಿಗೆ ನೋವಾಗುತ್ತದೆ ಅಲ್ಲವೆ ಸಾಹಿತಿಗಳೇ?! ಅಪ್ಪ-ಅಮ್ಮ ತೀರಿಕೊಂಡಾಗ ಕೇಶ ಮುಂಡನ ಮಾಡಬಾರದು. ಅದೂ ಮೂಢನಂಬಿಕೆ ಎಂದಾರು!
ಇವರ ವೈಚಾರಿಕತೆ ಬರೀ ಹಿಂದುಧರ್ಮದ ಆಚರಣೆಗಳಿಗೆ ಮಾತ್ರ ಸೀಮಿತವೇ?
ದೇವಸ್ಥಾನಗಳಲ್ಲಿ ಪ್ರಾಣಿ ಬಲಿ ಮಾಡಬಾರದು ಎನ್ನುವುದಾದರೆ ಬಕ್ರೀದ್ ದಿನ ಮುಸ್ಲಿಮರು ಹಬ್ಬದ ಹೆಸರಿನಲ್ಲಿ ಮಾಡುವುದೂ ಬಲಿಯೇ ಅಲ್ಲವೆ? ರೋಗ ಬಂದ ಜಾನುವಾರುಗಳಿಗೆ ಬರೆ ಹಾಕುವುದು, ಕಿವಿ ಕತ್ತರಿಸುವುದೇ ಹಿಂಸಾತ್ಮಕ ಪದ್ಧತಿ ಎನ್ನುವುದಾದರೆ ಸಧೃಡ ಪ್ರಾಣಿಗಳ ಗಂಟಲು ಸೀಳುವ “ಹಲಾಲ್” ಪದ್ಧತಿ ಹಿಂಸೆಯ ಪರಮಾವಧಿಯಲ್ಲವೆ? ಸಾಹಿತಿ ಮಹಾಶಯರೇ ಗೋಹತ್ಯೆಯನ್ನು ಸರಿ ಎನ್ನುವ ನಿಮಗೆ ಪ್ರಾಣಿ ಬಲಿ ಯಾವ ಕಾರಣಕ್ಕಾಗಿ ತಪ್ಪಾಗಿ ಕಾಣುತ್ತದೆ? ಕ್ರೈಸ್ತರ “ಹೋಲಿ ಮೆಸಾಕರ್” ಏನು ಸ್ವಾಮಿ? ಹತ್ಯೆಯೇ ಅಲ್ಲವೇ? ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ಚರ್ಮಕ್ಕೆ ಕೊಕ್ಕೆ ಚುಚ್ಚಿಕೊಳ್ಳುವುದು, ಕೊಕ್ಕೆ ಚುಚ್ಚಿಕೊಂಡು ರಥ ಎಳೆಯುವುದು ತಪ್ಪಂತೆ ಹಾಗೂ ಅದನ್ನು ನಿಷೇಧಿಸಬೇಕಂತೆ. ಹೀಗೆ ಹೇಳುವವರಿಗೆ ಮೊಹರಂ ಸಂದರ್ಭದಲ್ಲಿ ಮೈ ಬಡಿದುಕೊಳ್ಳುವುದನ್ನೂ ನಿಷೇಧಿಸಬೇಕೆಂದು ಶಿಫಾರಸ್ಸು ಮಾಡುವ ತಾಕತ್ತೇಕಿಲ್ಲ? ಧರ್ಮವೆನ್ನುವುದು ವೈಚಾರಿಕತೆಯ ವಿರೋಧಿ. ಇಷ್ಟಕ್ಕೂ ದೇವರಿದ್ದಾನೆ ಎಂದು ಹೇಗೆ ಸಾಬೀತು ಮಾಡಲು ಸಾಧ್ಯ? ಹಾಗಾದರೆ ಧರ್ಮದ ಹೆಸರಿನಲ್ಲಿ ಮಾಡುವ ಮತಾಂತರವನ್ನೂ ನೀವು ನಿಷೇಧಿಸಬೇಕಲ್ಲವೆ? ಅಂತಹ ತಾಕತ್ತು ನಿಮಗಿದೆಯೇ? ಇನ್ನು ದರ್ಗಾಗಳಲ್ಲೂ ಭೂತ ಬಿಡಿಸುವುದು, ತಾಯತ ಕಟ್ಟುವುದು ನಿಮಗೆ ಗೊತ್ತಿಲ್ಲವೆ? ಮೌಢ್ಯ ಹಾಗೂ ನಿಷೇಧದ ಬಗ್ಗೆ ಹೇಳುವಾಗ “ದರ್ಗಾಗಳಲ್ಲಿ ನಡೆಯುವ” ಎಂದೂ ಹೆಸರು ಹಿಡಿದು ಹೇಳುವ ಧೈರ್ಯವೇಕಿಲ್ಲ? ಇನ್ನು ಮುಸ್ಲಿಮರ ಸ್ಕಲ್ ಕ್ಯಾಪ್, ಬುರ್ಖಾಗಳಿಗೆ ಧಾರ್ಮಿಕ ಹಾಗೂ ಸಾಮಾಜಿಕ ಕಾರಣಗಳಿರಬಹುದು. ಆದರೆ ವೈಜ್ಞಾನಿಕ ಕಾರಣಗಳು ಖಂಡಿತ ಇಲ್ಲ. ಅವುಗಳನ್ನೂ ಮೌಢ್ಯವೆಂದು ನಿಷೇಧಸಬೇಕೆಂದು ಹೇಳುವ ತಾಕತ್ತನ್ನು ಈ ವಿಚಾರವಾದಿಗಳು ತೋರುತ್ತಾರೆಯೇ? ಆ ಕಾರಣಕ್ಕೆ ತೆಪ್ಪಗಿದ್ದಾರಾ? ಇವರ ವೈಚಾರಿಕತೆಗೂ ಆಯ್ಕೆಗಳಿವೆಯೇ? ಜಾತ್ರೆ, ಉತ್ಸವ, ಕರಗ ಸಂದರ್ಭದಲ್ಲಿ ಕೇಳುವ “ದೈವಪ್ರಶ್ನೆ”ಯನ್ನೇ ಮೂಢನಂಬಿಕೆ ಎನ್ನುವುದಾದರೆ, “ನಿನ್ನನ್ನು ಯೇಸು ಕರೆಯುತ್ತಿದ್ದಾನೆ..”, “ಬನ್ನಿ ಬಾಲ ಯೇಸುವನ್ನು ಪ್ರಾರ್ಥಿಸೋಣ, ರೋಗ ಗುಣಮುಖವಾಗುತ್ತದೆ” ಎಂದು ಮಂಗಳೂರು, ಉಡುಪಿಗಳಲ್ಲಿ ಬೋರ್ಡು ಹಾಕಿ ಜನರನ್ನು ಮಂಗ ಮಾಡುವ ಅಲಲೂಯಾದಂಥ ಪಂಥಗಳದ್ದೂ ಮೌಢ್ಯಾಚರಣೆ ಎಂಬುದು ಕರಡು ಸಿದ್ಧಪಡಿಸುವವರಿಗೆ ಗೊತ್ತಿಲ್ಲವೆ? ನಮ್ಮ ಹಿಂದುಗಳು, ಅದರಲ್ಲೂ ಕೆಳವರ್ಗದವರೆನಿಸಿಕೊಂಡವರು… ಮಾರಮ್ಮ, ಚೌಡಮ್ಮ, ಅಣ್ಣಮ್ಮ, ಪುರದಮ್ಮ, ಕೆಂಚಾಲಮ್ಮನನ್ನು ಪೂಜಿಸುತ್ತಾರೆ, ದೈವಪ್ರಶ್ನೆ ಕೇಳುತ್ತಾರೆ. ಅದು ನಮ್ಮ ನಂಬಿಕೆ. ನಾವು ನೆಲ, ಜಲ, ಸಸ್ಯಸಂಕುಲವನ್ನು ಪೂಜಿಸುವರು. ಇದೆಲ್ಲಾ ಮೂಢನಂಬಿಕೆ ಎಂದು ಹೇಳಲು ಇವರಿಗೆ ಯಾವ ಹಕ್ಕಿದೆ? ಬೆಂಗಳೂರಿನ ಶಿವಾಜಿನಗರದಲ್ಲಿ ಮೇರಿಯಮ್ಮನ ಜಾತ್ರೆಯೂ ನಡೆಯುತ್ತದೆ. ಕ್ರೈಸ್ತರಲ್ಲಿ ಜಾತ್ರೆ ಅನ್ನೋದೇ ಇಲ್ಲ. ಹಾಗಿದ್ದರೂ ಇವರು ಜಾತ್ರೆ ಮಾಡುತ್ತಿರುವುದು ಹಿಂದು ಕೆಳಜಾತಿಯವರನ್ನು ವಂಚಿಸುವುದಕ್ಕಾಗಿ ಎಂದು ನಿಷೇಧಿಸುತ್ತಾರಾ? ಇಂದು ಕೇರಳದಲ್ಲಿ ಇಂಡಿಯನೈಜೇಶನ್ ಅಥವಾ ಭಾರತೀಕರಣದ ಹೆಸರಿನಲ್ಲಿ ಚರ್ಚ್‌ಗಳ ಪ್ರವೇಶ ದ್ವಾರದ ಬಳಿ ಗರುಡಗಂಬ ನೆಡುತ್ತಿದ್ದಾರೆ. ಇಂದು ಚರ್ಚ್‌ಗಳಲ್ಲಿ ಅಗರಬತ್ತಿ ಹಚ್ಚಿ ಪೂಜೆ ಮಾಡುವುದು, ಪ್ರಸಾದ, ತೀರ್ಥ ಕೊಡುವುದನ್ನು ಆರಂಭಿಸಲಾಗಿದೆ. ಇದೆಲ್ಲಾ ಏನನ್ನು ಸೂಚಿಸುತ್ತದೆ ಸ್ವಾಮಿ? ಇದು ಮೋಸ ಎನ್ನುವ ಎದೆಗಾರಿಕೆ ನಿಮಗಿದೆಯೇ? ಇನ್ನು ದರ್ಗಾ ಎಂದರೇನು? ಸಮಾಧಿಯಲ್ಲವೆ? ಸಮಾಧಿ ಪೂಜೆ ಮಾಡುವುದೂ ಮೌಢ್ಯವೆನಿಸುವುದಿಲ್ಲವೆ? ವೈಜ್ಞಾನಿಕವಾದ ನಮ್ಮ ಪಂಚಾಂಗ ಮತ್ತು ಜ್ಯೋತಿಷ್ಯಶಾಸ್ತ್ರಗಳನ್ನು ಮೌಢ್ಯವೆನ್ನುವವರಿಗೆ, ವಿಜ್ಞಾನ ಸಾರಾಸಗಟಾಗಿ ತಿರಸ್ಕರಿಸಿರುವ “ಅಡಮ್ ಮತ್ತು ಈವ್” ಥಿಯರಿಯನ್ನು ಹೇಳುವವರಲ್ಲಿ, “ಸೂರ್ಯ ಭೂಮಿಯ ಸುತ್ತ ಸುತ್ತುತ್ತಾನೆ” ಎನ್ನುವವರಲ್ಲಿ ಮೌಢ್ಯ ಕಾಣುವುದಿಲ್ಲವೆ? ಕರಡು ವಿಧೇಯಕ ಅಂಥ ವಿಷಯಗಳ ಬಗ್ಗೆ ಏಕೆ ನೇರ ಅಥವಾ ಪರೋಕ್ಷವಾಗಿ ಪ್ರಸ್ತಾಪಿಸುವುದಿಲ್ಲ? ಅಸ್ಟ್ರಾಲಜಿಯಲ್ಲಿ ಹುಳುಕು ಹುಡುಕುವವರಿಗೆ ಜಗತ್ತಿನ ಮುಂದುವರಿದ ಕ್ರೈಸ್ತ ರಾಷ್ಟ್ರಗಳಲ್ಲಿ ಇರುವ ಟ್ಯಾರಟ್ ಕಾರ್ಡ್ಸ್ ಕಾಣಿಸುವುದಿಲ್ಲವೆ? ಇವತ್ತು ನಿರೀಶ್ವರವಾದದ ಬಗ್ಗೆ ಅತಿ ಹೆಚ್ಚು ಪುಸ್ತಕಗಳು ಬಂದಿರುವುದೇ ಕ್ರಿಶ್ಚಿಯಾನಿಟಿ ವಿರುದ್ಧವಲ್ಲವೆ ಹೇಳಿ? ಇತ್ತೀಚೆಗೆ ನಡೆದ “ಹ್ಯಾಲೋವಿನ್”ನಲ್ಲಿ ನಿಮಗೆ ಮೌಢ್ಯ ಕಾಣಿಸುವುದಿಲ್ಲವೇ?
ಪ್ರತಿ ಧರ್ಮದಲ್ಲೂ ಅದರದ್ದೇ ಆದ ಅಂತರ್ಗತ ಕುರುಡು ನಂಬಿಕೆಗಳಿರುತ್ತವೆ. ಇಲ್ಲವಾದರೆ ಕ್ರಿಶ್ಚಿಯಾನಿಟಿಯೇಕೆ ಕ್ಯಾಥೋಲಿಕ್ಸ್ ಹಾಗೂ ಪ್ರೊಟೆಸ್ಟೆಂಟಿಸಂ ಎಂದು ಹೋಳಾಯಿತು? ಏಕೆ 700 ವರ್ಷಗಳಷ್ಟು ಸುದೀರ್ಘ ಕಾಲ ಬಡಿದಾಡಿದರು? ಇಂದಿಗೂ ಕ್ಯಾಥೋಲಿಕ್ಕರು ‘ಪಾದ್ರಿಗಳು ಮದುವೆಯಾಗಬಾರದು ಎಂದರೆ, ಪ್ರೋಟೆಸ್ಟೆಂಟರು ಪಾದ್ರಿಗಳು ಮದುವೆಯಾಗಲೂಬಹುದು, ಮಕ್ಕಳನ್ನೂ ಮಾಡಿಕೊಳ್ಳಬಹುದು’ ಎನ್ನುತ್ತಾರೆ? ದೆವ್ವ ಅನ್ನೋದು ಇಲ್ಲ, ಆತ್ಮ ಇಲ್ಲ, ಮರುಜನ್ಮ ಇಲ್ಲ ಎಂದು ಪ್ರವಾದಿ ಹೇಳಿದರೂ ತಾಯತ ಕಟ್ಟುವ ದರ್ಗಾಗಳಿವೆ, ಸ್ವರ್ಗದಲ್ಲಿ 72 ಕನ್ಯೆಯರ ಜತೆ ಮಜಾ ಮಾಡಲು ಹೊರಡುವ ಭಯೋತ್ಪಾದಕರು ಸೃಷ್ಟಿಯಾಗಿದ್ದಾರೆ, ಕಟ್ಟರ್‌ಪಂಥೀಯ ವಹಾಬಿಗಳು ತಲೆಯೆತ್ತಿದ್ದಾರೆ. ಕಾಲದ ಜತೆ ಹೆಜ್ಜೆ ಹಾಕಬೇಕೆನ್ನುವ ಪ್ರೊಟೆಸ್ಟೆಂಟಿಸಂ ಒಂದು ಕಡೆಯಾದರೆ, ಮೂಲ ಬೈಬಲ್‌ನಲ್ಲಿ ಇರುವಂತೆಯೇ ನಡೆದುಕೊಳ್ಳಬೇಕೆನ್ನುವ “Apocrypha bible” ವಾದಿಗಳಿದ್ದಾರೆ. ಇನ್ನು ಮಂಗಳಯಾನಕ್ಕೆ ಮೊದಲು ತಿರುಪತಿ ದೇವಾಲಯಕ್ಕೆ ತೆರಳಿ ನಿರ್ವಿಘ್ನವಾಗಿ ಉಡಾವಣೆಯಾಗಲಿ ಎಂದು ಇಸ್ರೋ ಮುಖ್ಯಸ್ಥ ರಾಧಾಕೃಷ್ಣನ್ ಪ್ರಾರ್ಥಿಸಿ ನಾಲ್ಕು ದಿನಗಳಾಗಿಲ್ಲ. ವಿಶ್ವವಿಖ್ಯಾತ ಗಣಿತ ಶಾಸ್ತ್ರಜ್ಞರಾದ ಜಿ.ಎಚ್. ಹಾರ್ಡಿ ಕಟ್ಟಾ ನಿರೀಶ್ವರವಾದಿಯಾಗಿದ್ದರೆ, ಅವರ ಸ್ನೇಹಿತ ಹಾಗೂ ವಿಶ್ವವಿಖ್ಯಾತ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಆ ದೇವಿಯೇ ನನ್ನ ಮೂಲಕ ಗಣಿತದ ಸೂತ್ರಗಳನ್ನು ಬರೆಸುತ್ತಿದ್ದಾಳೆ ಎಂದು ನಂಬಿದ್ದರು. ನನಗೆ ಸಾವಿನ ಅನುಭವವಾಯಿತು, ನನ್ನ ಸಾವನ್ನು ನಾನೇ ನೋಡಿದೆ ಎನ್ನುವ ಪ್ಯಾರಾ ಸೈಕಾಲಜಿಯನ್ನು ಇಂದು ನಾವು ಕಾಣುತ್ತಿದ್ದೇವೆ. ಅಲೋಪತಿಯ ವ್ಯಾಪ್ತಿಗೇ ನಿಲುಕದ್ದನ್ನೂ ಗುಣಪಡಿಸುತ್ತಿರುವ ಆಲ್ಟರ್ನೇಟಿವ್ ಮೆಡಿಸಿನ್‌ಗಳಾದ ಪ್ರಾಣಿಕ್ ಹೀಲಿಂಗ್, ರೇಕಿ, ಮ್ಯಾಗ್ನೆಟಿಕ್ ಥೆರಪಿ, ಆಕ್ಯುಪಂಕ್ಚರ್, ಆಕ್ಯುಪ್ರೆಷರ್‌ಗಳು ಬಂದಿವೆ. ನಮ್ಮ ಎಷ್ಟೋ ಹಿಂದು ನಂಬಿಕೆ, ಆಚರಣೆಗಳ ಹಿಂದೆಯೂ ವೈಜ್ಞಾನಿಕ ಕಾರಣಗಳಿವೆ. ಅದಿರಲಿ, ಇದೇನಿದು Guineapig (ಗಿನಿಪಿಗ್)? ಹೊಸ ಔಷಧಗಳ ಪ್ರಯೋಗವನ್ನು ಪ್ರಾಣಿಗಳ ಮೇಲೆಯೇ ಮಾಡುವುದೇಕೆ? ಮನುಷ್ಯ ಮೇಲು ಎಂಬ ಭಾವನೆ ವಿಜ್ಞಾನಿಗಳಿಗೂ ಇದೆ ಅಲ್ಲವೆ? ಇದೂ ಮೂಢನಂಬಿಕೆಯಲ್ಲವೆ?
ಮುಖ್ಯಮಂತ್ರಿಗಳೇ, ಪ್ರತಿಯೊಂದು ಧರ್ಮಕ್ಕೂ, ಜನರಿಗೂ ಅವರದ್ದೇ ಪಾವಿತ್ರ್ಯ, ನಂಬುಗೆ ಇರುತ್ತವೆ. ನಂಬಿಕೆಗಳು ಅಹೋರಾತ್ರಿ ಸೃಷ್ಟಿಯಾಗುವುದಿಲ್ಲ. ಕಿಡಿಗೇಡಿ ಸಾಹಿತಿಗಳನ್ನು ಸೇರಿಸಿಕೊಂಡು ಇಲ್ಲ ಸಲ್ಲದ ವಿಚಾರಕ್ಕೆ ಕೈಹಾಕಬೇಡಿ. ಡೂಸ್ ಅಂಡ್ ಡೋಂಟ್ಸ್ ಜನ ಮಾಡಿಕೊಳ್ಳುತ್ತಾರೆ. ಜನರ ಯಾವುದಾದರೂ ಆಚರಣೆಗಳಿಂದ ಸಮಾಜಕ್ಕೆ ತೊಂದರೆಯಾಗುತ್ತಿದ್ದರೆ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದ್ದರೆ ಸರ್ಕಾರ ಮಧ್ಯಪ್ರವೇಶಿಸಬೇಕು ಅಷ್ಟೇ. ಸಾಕ್ಷರತೆ, ತಿಳಿವಳಿಕೆ ಹೆಚ್ಚಾದಂತೆ ಹಿಂದುಗಳು, ಕ್ರೈಸ್ತರು, ಮುಸಲ್ಮಾನರಲ್ಲೂ ಬದಲಾವಣೆಗಳಾಗಿವೆ. ಜನರಿಗೆ ಶಿಕ್ಷಣ ಕೊಡಿ ಸ್ವಾಮಿ. ನೂರಕ್ಕೆ 100ರಷ್ಟು ಸಾಕ್ಷರತೆ ತನ್ನಿ. ಅದು ಸರ್ಕಾರ ಮಾಡಬೇಕಾದ ಕೆಲಸ. ಬೆತ್ತಲೆ ಸೇವೆ ನಿಷೇಧ ಮಾಡುವುದರ ಜೊತೆಗೆ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ಜನರಿಗೆ ಸಂಡಾಸಿಗೆ ಹೋಗಲು ಶೌಚಾಲಯ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿಕೊಡಿ. ಇಲ್ಲವಾದಲ್ಲಿ ಶೌಚದ ನೆಪದಲ್ಲಿ ಅವರು ನಿತ್ಯ ಬೆತ್ತಲೆ ಸೇವೆಮಾಡಬೇಕಾಗುತ್ತದೆ!
ನಿಮ್ಮ ಬರಗೂರು ರಾಮಚಂದ್ರಪ್ಪನವರನ್ನು ಕೇಳಿ, ಅವರ ಸಿನಿಮಾಗಳ ಪ್ರಾರಂಭಕ್ಕೆ ಮುನ್ನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವುದಿಲ್ಲವೆ? ನಿಮ್ಮ ಸಾಹಿತಿ ಹಿಂಬಾಲಕರು, ದೇಶಿಯತೇ(ನೇಟಿವಿಟಿ), ಜಾನಪದ ಉಳಿಯಬೇಕು ಎನ್ನುತ್ತಾರೆ. ಅವು ನಿಂತಿರುವುದೇ ನಂಬಿಕೆ, ಆಚರಣೆಗಳ ಮೇಲೆ. ಬರಗೂರರಿಗೆ ಬಹಳ ಇಷ್ಟವಾಗುವ ಹಾಗೂ ಮೆಚ್ಚುವ ರಾಜ್‌ಕುಮಾರ್ ನಟಿಸಿರುವ ಎಷ್ಟು ಸಿನಿಮಾಗಳಲ್ಲಿ ಪವಾಡ, ದೈವೀಕೃಪೆ, ರಕ್ಷಣೆ ಇಲ್ಲ ಹೇಳಿ? ಆ ಚಿತ್ರಗಳನ್ನೇಕೆ ಮೌಢ್ಯವನ್ನು ಬಿತ್ತುತ್ತಿವೆ ಎಂದು ವಿರೋಧಿಸಿರಲಿಲ್ಲ? ಕಾರ್ಲ್ ಮಾರ್ಕ್ಸ್, ಲೆನಿನ್, ನೆಹರು ಹೇಳಿದ್ದೇ ಸರಿ ಎಂದು ನಂಬಿ ಕುಳಿತಿರುವ ಇವರೇ ದೊಡ್ಡ ಮೂಢರು. ಇಷ್ಟಕ್ಕೂ ಮಾರ್ಕ್ಸ್‌ವಾದಕ್ಕೆ ನೇತುಹಾಕಿಕೊಂಡ ಸೋವಿಯತ್ ರಷ್ಯಾ ಸಿಡಿದು ಚೂರಾಗಲಿಲ್ಲವೆ? ಅದಿರಲಿ, ಡಾ. ಸಿದ್ದಲಿಂಗಯ್ಯ, ಡಾ. ಮರುಳಸಿದ್ದಪ್ಪ, ಜಿ. ರಾಮಕೃಷ್ಣರನ್ನು ಇನ್ನೂ “ಸಾಹಿತಿ”ಗಳೆಂದು, “ಚಿಂತಕರೆಂದು” ನಂಬಿಕೊಂಡಿದ್ದೀರಲ್ಲಾ ಇದಕ್ಕಿಂತ ದೊಡ್ಡ “ಮೂಢನಂಬಿಕೆ” ಯಾವುದಿದೆ ಸಿದ್ದರಾಮಯ್ಯನವರೇ? ಇವರು ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಬರೆದ ಹಾಗೂ ಜನಮೆಚ್ಚುಗೆಗೆ ಪಾತ್ರವಾದ ಒಂದು ಕೃತಿಯನ್ನು, ಸಮಾಜಕ್ಕೆ ಲಾಭವಾದ ಇವರ ಒಂದು ಚಿಂತನೆಯನ್ನು ದಯವಿಟ್ಟು ಉದಾಹರಿಸುತ್ತೀರಾ? ಮುಖ್ಯಮಂತ್ರಿಗಳೇ, ನಿಮ್ಮ “ಮೂಢನಂಬಿಕೆ”ಯಿಂದ ಮೊದಲು ಹೊರಬಂದರೆ ನಿಮ್ಮ ಪಕ್ಷದಲ್ಲೇ ಇರುವ ಜ್ಞಾನಿಗಳಾದ, ಸಮಾಜದ ಸಂವೇದನೆಗಳನ್ನು ಅರಿತುಕೊಂಡಿರುವ ಡಾ. ಪರಮೇಶ್ವರ, ಬಿ.ಎಲ್. ಶಂಕರ್, ಡಾ. ಮಹಾದೇವಪ್ಪ, ವಿ.ಆರ್. ಸುದರ್ಶನ್‌ರು ಕಾಣುತ್ತಾರೆ. ಅವರಂಥವರ ಸಲಹೆ ಪಡೆದರೆ ಇಂಥ ಅನಾಹುತ ತಪ್ಪುತ್ತದೆ.
ಅಲ್ಲ, ದಲಿತ ದೌರ್ಜನ್ಯ ತಡೆಯಂತೆ, ಈ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಕಾಯಿದೆ ಕೂಡಾ ದುರುಪಯೋಗವಾಗುವುದಿಲ್ಲ ಎಂದು ಹೇಗೆ ಹೇಳಲು ಸಾಧ್ಯ? ನಿಮ್ಮ ಮನೆ ಮುಂದೆ ನೀವೇ ನಿಂಬೆಹಣ್ಣು, ಕುಂಕುಮ ಹಾಕಿಕೊಂಡು ಇನ್ಯಾರದ್ದೋ ವಿರುದ್ಧ ಕೇಸು ಹಾಕಿದರೆ ಗತಿಯೇನು? ಈ ಬಗ್ಗೆ ಯೋಚಿಸಿದ್ದೀರಾ? ಶಾಲೆಗಳಲ್ಲಿ ಪೂಜೆ ಮಾಡಬಾರದು ಎಂಬ ನಿರ್ಬಂಧದ ಹಿಂದಿರುವ ಮನಸ್ಥಿತಿ ಏನು ಅಂತ ಬಿಡಿಸಿಹೇಳುತ್ತೀರಾ? ಪೂಜೆಗೂ ಮೌಢ್ಯಕ್ಕೂ ಏನು ಸಂಬಂಧ? ಅಥವಾ ನಿಮ್ಮ ಸೆಕ್ಯುಲರ್ ಅಜೆಂಡಾ ಇಂಥ ಯೋಚನೆಗಳನ್ನು ಸೃಷ್ಟಿಸುತ್ತಿದೆಯೇ? 2005, ಜನವರಿಯಲ್ಲಿ ಬೆನ್ನಿ ಹಿನ್ ಎಂಬ ಮೌಢ್ಯದ ಜಾಗತಿಕ ವ್ಯಾಪಾರಿ ಹಾಗೂ ಸೋಗಲಾಡಿಗೆ ಅರಮನೆ ಮೈದಾನದಲ್ಲಿ ಆತಿಥ್ಯ ಕೊಟ್ಟಿದ್ದ ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ಮೂಢನಂಬಿಕೆಗಳ ಬಗ್ಗೆ ಮಾತನಾಡುವ, ನಿಷೇಧಿಸುವ ನೈತಿಕ ಹಕ್ಕಿದೆಯೇ, ಮೊದಲು ಹೇಳಿ?
ಕೊನೆಯದಾಗಿ, ಸಿದ್ದರಾಮಯ್ಯನವರೇ ನಿಮ್ಮ ಮುಂದೆ ಮಾಡಲು ಬೆಟ್ಟದಷ್ಟು ಕೆಲಸಗಳಿವೆ, ಜವಾಬ್ದಾರಿಗಳಿವೆ. ನಿಮ್ಮನ್ನು ಜನ ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಿರುವುದು ನೀವು ಪ್ರಗತಿಪರರು ಎಂಬ ಕಾರಣಕ್ಕಲ್ಲ ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ಆಗ ಪಡಪೋಶಿ ಸಾಹಿತಿಗಳು, ಚಿಂತಕರ ಕಿಡಿಗೇಡಿತನಕ್ಕೆ ನಿಮ್ಮ ಸರ್ಕಾರ ಹಾಗೂ ರಾಜ್ಯದ ಆಡಳಿತ ಬಲಿಯಾಗುವುದು ತಪ್ಪುತ್ತದೆ.
samporna Rajya sarakar alpasankyatranna bembalke nithedu bhusankaytra bhavane gallige novu untu made de….
prathap simha is real simha for dummy writers
MADODAKKE BERE YAVA KELSA ILLADA DUSTA CHATUSTAYARU KOODIKONDARE INTHA ANAVASHYAKA AALOCHANEGALE BARUHUDU SAHAJA.
YES THEY ARE TARGETED HINDUS ONLY SINCE THEY CAME INTO POWER. OUR CM IS NOT SIDDARAMAIAH HE IS PEDDARAMAIAH
ಮೂಢನಂಬಿಕೆಗಳನà³à²¨à³ ವಿರೋಧಿಸà³à²µà³à²¦à³†à²‚ದರೆ, ಜನರ ಧಾರà³à²®à²¿à²• ನಂಬಿಕೆಗಳನà³à²¨à³ ಅಲà³à²²à²—ಳೆಯà³à²µà³à²¦à²²à³à²², ಹೀನಾಯಿಸà³à²µà³à²¦à²²à³à²². ಜನಸಾಮಾನà³à²¯à²°à³ ತಮà³à²® ಬದà³à²•ಿನ ಅನà³à²à²µà²—ಳಿಂದ, ಸà³à²¤à³à²¤à²®à³à²¤à³à²¤à²² ಸಾಮಾಜಿಕ ಪà³à²°à³‡à²°à²£à³†à²—ಳಿಂದ ಹಾಗೂ ಪà³à²°à²šà³‹à²¦à²¨à³†à²—ಳಿಂದ ಹಲವಾರೠನಂಬಿಕೆಗಳನà³à²¨à³ ಬೆಳೆಸಿಕೊಂಡಿರà³à²¤à³à²¤à²¾à²°à³†. ನಂಬಿಕೆಗಳಿಂದ ಆಚರಣೆಗಳೠಹà³à²Ÿà³à²Ÿà²¿à²•ೊಳà³à²³à³à²¤à³à²¤à²µà³†. ನಂಬಿಕೆಗಳೠಮೂಲ ಅಸà³à²¤à²¿à²¤à³à²µ ಕಳೆದà³à²•ೊಂಡಾಗ ಮೂಢನಂಬಿಕೆಗಳಾಗà³à²µà³à²¦à³ ಇನà³à²¨à³Šà²‚ದೠಹಂತ. ಸಾಮಾಜಿಕ ಅಸಮಾನತೆ, ವೈಚಾರಿಕ ಜà³à²žà²¾à²¨à²¦ ಅಲà²à³à²¯à²¤à³†, ಜà³à²žà²¾à²¨ ಸಂವಹನದ ಕೊರತೆ ಮà³à²‚ತಾದ ಹಲವಾರೠಕಾರಣಗಳಿಂದ ಕೆಲವೠಮೂಢಾಚಾರಗಳೠಕಾರà³à²¯à²•ಾರಣ ಸಂಬಂಧವಿಲà³à²²à²¦à³†à²¯à³‡ ನಂಬà³à²µà²‚ತೆ ಮಾಡà³à²¤à³à²¤à²µà³†. ಇಂಥ ನಂಬಿಕೆಗಳ ಮೇಲೆ ರೂಢಿಗೆ ಬಂದ ಆಚರಣೆಗಳೠಅರà³à²¥à²¹à³€à²¨à²µà²¾à²—ಿರà³à²¤à³à²¤à²µà³†. ಇವೠಅಜà³à²žà²¾à²¨à²µà²¨à³à²¨à³, ಅಂಧಶà³à²°à²¦à³à²§à³†à²¯à²¨à³à²¨à³ ಹೇರà³à²µ ಮತà³à²¤à³ ಪೋಷಿಸà³à²µ ಶಕà³à²¤à²¿à²—ಳ ಕೈಯಲà³à²²à²¿ ದà³à²°à³à²¬à²³à²•ೆಯಾಗà³à²¤à³à²¤à²µà³†.
ಮೂಢನಂಬಿಕೆ ಮತà³à²¤à³ ಧಾರà³à²®à²¿à²• ಶà³à²°à²¦à³à²§à³† ನಡà³à²µà²¿à²¨ ಅಂತರ ತೀರಾ ತೆಳà³à²µà²¾à²¦à²¦à³à²¦à²¾à²¦à²°à³‚ ಇವೆರಡರ ನಡà³à²µà²¿à²¨ ವà³à²¯à²¤à³à²¯à²¾à²¸à²µà²¨à³à²¨à³ ಗà³à²°à³à²¤à²¿à²¸à³à²µ ಕೆಲಸ ಅತà³à²¯à²‚ತ ಜರೂರಾಗಿ ಆಗಬೇಕಿದೆ. ಹೀಗೆ ಗರà³à²¤à²¿à²¸à²²à³ ನಮಗೆ ಸಂವಿಧಾನಬದà³à²§à²µà²¾à²¦ ಮೂಲà²à³‚ತ ಕರà³à²¤à²µà³à²¯à²—ಳೠಮತà³à²¤à³ ಮಾನವ ಹಕà³à²•à³à²—ಳ ಪರಿಕಲà³à²ªà²¨à³†à²—ಳೠಹಾಗೂ ನಮà³à²® ಬಹà³à²®à³à²–ಿ ಸಂಸà³à²•ೃತಿಯ ನೆಲೆಗಳೠಒಂದೠವಿಶಾಲ à²à²¿à²¤à³à²¤à²¿à²¯à²¨à³à²¨à³ ಒದಗಿಸಬಹà³à²¦à³. ಯಾವ ಮೂಢನಂಬಿಕೆಯ ಆಚರಣೆಗಳೠದೈಹಿಕ ಮತà³à²¤à³ ಮಾನಸಿಕ ಹಿಂಸೆಗೆ ಕಾರಣವಾಗà³à²¤à³à²¤à²µà²¯à³‹, ಮಾನವನ ಸಾಮಾಜಿಕ ಘನತೆ-ಗೌರವಕà³à²•ೆ ಧಕà³à²•ೆಯನà³à²¨à³à²‚ಟà³à²®à²¾à²¡à³à²¤à³à²¤à²µà³†à²¯à³‹ ಹಾಗೂ ಆರà³à²¥à²¿à²•ವಾಗಿ ಸಹಮಾನವರನà³à²¨à³ ಶೋಷಿಸಲೠವಂಚಕ ಶಕà³à²¤à²¿à²—ಳಿಂದ ಬಳಕೆಯಾಗà³à²¤à³à²¤à²µà³†à²¯à³‹, ಅವà³à²—ಳನà³à²¨à³ ಈ ವಿಧೇಯಕದ ವà³à²¯à²¾à²ªà³à²¤à²¿à²¯à³Šà²³à²—ೆ ತರಬಹà³à²¦à³.
ಜà³à²¯à³‹à²¤à²¿à²·à²¿à²—ಳà³, ಮà³à²²à³à²²à²¾à²—ಳà³, ಬಾಬಾಗಳà³, ಪಾದà³à²°à²¿à²—ಳà³, ಪà³à²°à³‹à²¹à²¿à²¤à²°à³ ಹೀಗೆ ಪಂಚಾಂಗವನà³à²¨à³ ತಮà³à²® ಮೂಗಿನ ನೇರಕà³à²•ೆ ವà³à²¯à²¾à²–à³à²¯à²¾à²¨à²¿à²¸à²¿ à²à²µà²¿à²·à³à²¯ ಹೇಳà³à²¤à³à²¤à³‡à²µà³†à²‚ದೠಜನರನà³à²¨à³ ಶೋಷಿಸà³à²µ ಮತà³à²¤à³ ಮೌಢà³à²¯à²¦ ಬೀಜ ಬಿತà³à²¤à³à²µ ಎಲà³à²²à²°à²¨à³à²¨à³‚ ಈ ಕಾಯà³à²¦à³†à²¯à²¡à²¿ ಅಪರಾಧಿಗಳೆಂದೠಘೋಷಿಸಬಹà³à²¦à²¾à²—ಿದೆ. (courtesy SAMANA)
Is cong government so idiot, that it cant make out wats wrong n wats right?
Jyotishya, sankhya, Vastu etc all are pure science not the superstitions. 1000yrs ago itself acharya varahamira etc hve explained about 9 planets and their features also, now we know Mars is red, Saturn is blue, while it was told 1000yrs ago only.
MANGANIGENU GOTUU MAANIKYA BELE, these cong peo[le are goin to ruin our culture, tradition. Every real indian should protest this bill n Pratapji hve done it.
VANDE MATARAM
Dear Pratap,
It is really unwanted move from the Siddaramayya. Let he think over your comments, which is voice of thousands of Hindus.
Regards,
Babu
It is voice of Crores of Hindus
Thanks prathap sir
sooper prathap
Anna Nijakku Noorake Nooru Sathyavaada Mathugalu Vicharagalu Nimma E Barahadallive Danyavadagalu
super writing sir, this message should reach all the hindu youths. i hate congress.
Truth!!!
You are exactly right. Govt stand by 120 MLA’s, Not only by Siddaramaiah, What they all doing there. Is everybody support him in this case?
it seems congress has taken a contract( from cristien missinarys to destroy the hindu socity on behest of ITALY Agent
Mr prathap sinha,
Meditation as such, has scientific backing, and its completely non religious.Kuvempu was inspired by western philosophers as much as inspired by vivekananda.practising meditation is not a dogma and it has great benefits to offer to the humanity. Kuvempu- prabhushankar conversation upholds the secular principles of kuvempu.Similarly, the idea putforth by national law school
is also very good, which has the potential to save a lot of lower class people getting exploited by the upper class. The draf bill doesnot stop you from going to a temple,Doing pooja at home or celebrating any festival as you wish.It only prohibits doing things like mata/ mantra, vamachara publicly, meaning such actions are not performed at the behest of government.The idea is uphold the science and scientific principles in daily life and more importantly save the one who is getting
exploited.
good article sir…..
very good article sir…..
Its enough for a normal man to understand… I think Siddharamaiah is also a normal man.. hats up Pratap.
Hats up Pratap.
Chennagi baarseeri sir.
Dear Pratap,
You’ve written meaning full article its shows everything about our useless CM “PEEDARAMAIAH” good one.
Dear prathap I read your all articals without missing.Since you are a Gowda you have so much of guts to write these articals.These so called rationalists talk of animal sacrifice,will they have guts to talk against Halal the maximum cruality to animals.THese people talk about belifs in hinduism because ,in Hinduism so much of liberty is given to people to express their views.Let them include a muslim reationalist if they find one.Is it possible to change a single muslim from his belifs.Can these people answer.
ಕಾಂಗà³à²°à³†à²¸à³ ಎ0ದರೆ ವೋಟೠಬà³à²¯à²¾à²¨à³à²•ೠರಾಜಕೀಯ ಅಂತ ಯಾರೠನ0ಬಲà³à²²à²µà³‹ ಅವರಿಗೆ ಬà³à²¦à³à²¦à²¿ ಹೇಳಲೠಈ ಮಸೂದೆ ಬ0ದಿದೆ ಅನà³à²¸à³à²¤à³à²¤à³† !!!
ಪà³à²°à²¤à²¾à²ª ಸಿಂಹರವರೇ ಪà³à²°à²¤à²¿à²¯à³Šà²‚ದೠವಿಷಯವನà³à²¨à³, ತರà³à²•ಬದà³à²¦à²µà²¾à²—ಿ ತಿಳಿಸಿದà³à²¦à³€à²°à²¿. ಮಾನà³à²¯ ಮà³à²–à³à²¯ ಮಂತà³à²°à²¿à²—ಳೠಇದನà³à²¨à³ ಓದಬೇಕಷà³à²Ÿà³†.
I read the entire anti-superstition bill at http://www.nls.ac.in/results/superstitionbill2013.pdf. Firstly, I did not see any of the points that you have mentioned (padapuje, guddalipuje, rudraksha and others) for which you take exception. I see that it actually contains the points that you too are in agreement. Secondly, I find some of the exploitative & harmful practices that are sought to be made cognizable offences are prevalent among both Hindus and Muslims such as throwing children from heights. I did not see the draft bill even contain the word god or Hindu. Thirdly, did you suggest any of your changes to the draft bill when it was open for public debate and if so, what was the outcome. Fourthly, instead of refutation and logical counter-argument on the actual content of the draft bill, you have resorted to ad hominem abuse such as the committee members are Marxists (in fact, if you see the list of people mentioned in the drafting committee, it is not true that they are all Marxists). Finally, please clarify what is your source and what is your actual contention. Otherwise, this article becomes a blatant case of misinformation.
Wow wonderful article sir thank you sir . i like your guts, sir what he knows about Rudrakshi and other things, C M has to understand he belongs to Hindu Religion . people will answer for it ?
Its too good……………………..
ಪà³à²°à²¤à²¾à²ªà³ ಸಾರà³
ನಿಮà³à²® ವಾದದ ಸಮರà³à²¥à²¨à³†à²—ೆ ಯಾಕೆ ಕà³à²µà³†à²‚ಪà³à²°à²µà²°à²¨à³à²¨à³ ಬಳಸಿಕೊಳà³à²¤à²¿à²°à²¿ ಸಾರà³. ಆ ಪà³à²¸à³à²¤à²•ದಲà³à²²à²¿ ಹೇಗಿದೆಯೋ ಗೊತà³à²¤à²¿à²²à³à²².ಆದರೆ ಕà³à²µà³†à²‚ಪೠಆತà³à²®à²•ತೆ ನೆನೆಪಿನದೋಣಿಯಲà³à²²à²¿ ಕà³à²°à²¤à²¿à²¯à²²à³à²²à²¿ ಆ ಘಟನೆ ಬರà³à²¤à³à²¤à²¦à³†à²¯à²¾à²¦à²°à³‚ ಅಲà³à²²à²¿ ನೀವೠಹೇಳಿರà³à²µ ವಾಕà³à²¯à²¦ ಉಲà³à²²à³‡à²–ವಿಲà³à²².ಬಹà³à²·à²ƒ ಈಗ ಕà³à²µà³†à²‚ಪೠಇದà³à²¦à²¿à²¦à³à²¦à²°à³‡ ಈ ವಿದೇಯಕವನà³à²¨à³ ಬೆಂಬಲಿಸಿಕೊಳà³à²²à³à²¤à³à²¤à²¿à²¦à³à²¦à²°à³.
Today Bharat is attractive to foreign tourists mainly because of architecture in Hindu temples. Foreigners learn yoga and other traditions of bharat. Bharat is a living history. But here is a party which spoils a culture which has history of thousands of years.
This is the best example for congress vote bank politics. Nations economy, religion, peace, congress spoils everything in its hands.
he needs whacking from people I thought he would develop but he himself is a big foolish hypocrite
he needs whacking from people
chief minister has gone insane
ರಾಜಕೀಯ ಮà³à²–ಂಡರೆ,
ತಾಕತà³à²¤à²¿à²¦à³à²¦à²°à³† ಬೇರೆಧರà³à²®à²¦ ಹೂರಣ ಚರà³à²šà²¿à²¸à²¿ ಬಿಡಿಸಿ. ಅಸಾದà³à²¯ ಕಾರಣ ಬೇರೆಧರà³à²® ಹೇಳà³à²¤à³à²¤à³† ಮಾನವರೠನನà³à²¨à²¿à²‚ದ ಆದರೆ ಜಗದ à²à²•ೈಕ ಧರà³à²® ಹಿಂದೂಧರà³à²® ಹೇಳà³à²¤à³à²¤à³† ಮಾನವರಿಂದ ನಾನà³. ಈ ಗà³à²Ÿà³à²Ÿà³ ಅರಿಯದ ಹಿಂದೂಗಳೇ ಹಿಂದೂಧರà³à²®à²¦ ವೈರಿಗಳà³.
ಮನಸೠನಂಬಿಕೆಯ ಗೂಡà³.ಅದನà³à²¨à³‡ ಸà³à²Ÿà³à²Ÿà²®à³à²¯à²¾à²— ಮನಷà³à²¯ ಸತà³à²¤ ಹೆಣದಂತೆ.
ನಾನà³à²¯à²¾à²°à³†à²‚ದೠತಿಳಿಯಲೠಅಛಲವಾದ ನಂಬಿಕೆ ಬೇಕà³.ಅಛಲ ಸಿಥಿಲವಾದರೆ ಸಮಾಜ ಒಣಗಿದ ಮರà²à³‚ಮಿಯಂತೆ.
ಹಿಂದೂಗಳ ಗೌರವಕà³à²•ೆ ದಕà³à²•ೆ ಬಂದಾಗ ಗರà³à²œà²¿à²¸à³à²µ ಕನà³à²¨à²¡à²¦ ಗಂಡà³à²—ಲಿ ಈ ಪà³à²°à²¤à²¾à²ª ಸಿಂಹರವರà³.ನಿಮà³à²® ಗರà³à²œà²¨à³† ಸದಾ ಮಲಗಿದವರನà³à²¨à³ ಎಬà³à²¬à²¿à²¸à²²à²¿. ಅದೇ ನನà³à²¨ ಬಯಕೆ.
à²à²¨à²‚ತೀರಾ ಗೆಳೆಯರೆ.
ಹಿಂದೂ ಧರà³à²® ತಿಳಿನೀರಿನಂತೆ,
ಹà³à²¯à²¾à²‚ಗ ಇಣà³à²•ಿ ನೋಡಿದರೂ ಮà³à²– ಚೆಂದ.
ಹಿಂದೂ ಧರà³à²® ಮೃದೠಕನಕದಂತೆ,
ಹà³à²¯à²¾à²‚ಗ ಲಟà³à²Ÿà²¿à²¸à²¿ ಮಾಡಿದರೂ ಅಡಿಗೆ ಅಂದ.
ಹಿಂದೂ ಧರà³à²® ತೋಯà³à²¦ à²à³‚ಮಿಯಂತೆ,
ಹà³à²¯à²¾à²‚ಗ ಬೀಜ ಬಿತà³à²¤à²¿à²¦à²°à³‚ ಸಸಿ ಸೊಗಸà³.
ಹಿಂದೂ ಧರà³à²® ಬೂದಿಯ ಕೆಂಡದಂತೆ,
ಹà³à²¯à²¾à²‚ಗ ತರà³à²• ತೆಗೆದರೂ ಉತà³à²¤à²° ಕಷà³à²Ÿ.
ಹಿಂದೂ ಧರà³à²® ಗಾಳಿ ಪಟದಂತೆ,
ಹà³à²¯à²¾à²‚ಗ ಸೂತà³à²° ಕಟà³à²Ÿà²¿à²¦à²°à³‚ ಹಾರಾಟ ಅಚà³à²šà²°à²¿.
ಹಿಂದೂ ಧರà³à²® ಅಡವಿ ದಾರಿಯಂತೆ,
ಹà³à²¯à²¾à²‚ಗ ಸà³à²¤à³à²¤à²¾à²¡à²¿ ಬಂದರೂ ಪಯಣ ಇಷà³à²Ÿ.
ಹಿಂದೂ ಧರà³à²® ಬಿಳಿ ಗೋಡೆಯಂತೆ,
ಹà³à²¯à²¾à²‚ಗ ಬಣà³à²£ ಹಚà³à²šà²¿à²¦à²°à³‚ ಚಿತà³à²° ಚೆಂದ.
ಹಿಂದೂ ಧರà³à²® ನದಿಯ ಹೊರà³à²¤à²¿à²¯à²‚ತೆ,
ಹà³à²¯à²¾à²‚ಗ ಹಗೆದೠತೆಗೆದರೂ ನೀರೠಸಕà³à²•ರೆ.
ಹಿಂದೂ ಧರà³à²® ಊರ ಚಾವಡಿಯಂತೆ,
ಹà³à²¯à²¾à²‚ಗ ಚರà³à²šà³† ಮಾಡಿದರೂ ನಗà³à²µ ಗೊಂಬೆ.
ಹಿಂದೂ ಧರà³à²® ಕಾಮನ ಬಿಲà³à²²à²¿à²¨à²‚ತೆ,
ಹà³à²¯à²¾à²‚ಗ ಕಣà³à²£ ಬಿಟà³à²Ÿà²°à³‚ ಆಕಾಶ ಅಂದ.
ಬà³à²¦à³à²¦à³.
Sanmaanyare,
odedu aaluvudu kaangressigara neeti. adannu sampoornavaagi siddarasaamaih alavadisikondiddare. intaha vichaaravaadi Dasara habbadalli chaamundeswariya poojeyalli paalgondiddeke? Dongi vichaaravaadigalu iga avara sutta mutta odaadi avara oddolagada hogalubhattaraagiruvudu shochaneeyavaagide. ottare muslimara otugalannu keelalu ee hunaara. B.J.P sarkaaradalli muslimaru kshemavaagiddaru embudannu alpasankyaatararu managaanabekaagide. chunaavane hattira baruttide. jana eega daddaralla bidi. Nimma I baraha bahusankayaata hindugalige echcharikeya ganteyaagali.
Very good article sir.. Mukhada mele hodeda hage helidira, ,
Ultimate…. This is reality…
Should screw those people in public….
nice…. sir
Good article ,every kannadiga has read it
Urige acharya helovru katte kalu hidadidrante.uttar kannad bhasheli innu kettadagi helbahudu beda bidi , amel siddaramayya avru mara nodbekagutte. Pratapad simha eragiddu sariyad bete mele..jai simha….
excellent
Good one…
“Curiosity about the mystery of the cosmos and the unwillingness to condemn the unknowable as non-existent are what religion is all about
“If god doesn’t exist, it would’ve become a necessity to invent him”
anna e bhuddi jeevigalin enu kalliyuva avasyakathe ella ,hindu daram hodeyuva hina krutheke kay akidare aste evara kate
Every Hindu must have selfrespect andproud to being Hindu.good article.thanks
Dear all readers,
I haven’t read the draft law fully. But i do support the points where doing the religious pooja by government in public is banned. Government is a representative of group of people from various religion. So, if they do pooja on government property, functions, then they must do it according to all religion, not one religion. I will say, do follow what u want to in your personal life, not in public life. I agree that there are some stupid points in this law. But that doesn’t mean that highlight them and condemn them.
This law has some good and bad points. What media has done is suppress good points and highlight the bad points. Killing cow is insane and killing sheep, chicken and goats are sane. Is that so? BJP bans killing cow, but not other animals, this is for hindus. Congress allows killing of cow and support other religion. So, my friends, it is two faces of the same coin and it is politics.
Don’t support any party. Support good person/politician. This article is good in bits. But as a whole it has disappointed me.
very well written, with compiled data! Hats off to you, Pratap!
Sir,
I want 2 knw ur opinion regarding “Bhart Ratna Award” through ur column…Recently Sachin tendulkar got it,but y cant Lata mangeshkar & AB Vajpeyi…both did lot to nation.. Dey r elegible persons to get this award.. hope i ll get reply through ur column.
Thanx n Regds:
S.H,PRAKASH
JR,ENGG
JSW STEEL LTD.
BELLARY
Good. Worth reading. …..!
Biggest superstitiution we indians have , even today, is One family of india will uplift them from all their problems as well of our countries. That needs to be removed first then automatically the country will move forward, progressively and successfully.