Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇದೇನು ವಿಧೇಯಕವೋ, ಹಿಂದು ನಂಬಿಕೆಗಳನ್ನು ಒಡೆವ ಕುತಂತ್ರವೋ?!

ಇದೇನು ವಿಧೇಯಕವೋ, ಹಿಂದು ನಂಬಿಕೆಗಳನ್ನು ಒಡೆವ ಕುತಂತ್ರವೋ?!

“ಹೀಗಿದ್ದರು ಕುವೆಂಪು” ಎಂಬ ಸಣ್ಣ ಪುಸ್ತಕವಿದೆ. ಒಮ್ಮೆ ಕುವೆಂಪು ಹಾಗೂ ಅವರ ಶಿಷ್ಯ ಪ್ರಭುಶಂಕರ ಮೈಸೂರಿನ ಕುಕ್ಕರಹಳ್ಳಿ ಕೆರೆಯ ಬಳಿ ಕುಳಿತಿದ್ದರು. ಚಾಮುಂಡಿ ಬೆಟ್ಟಕ್ಕೆ ಹೋಗಿದ್ದ ಭಕ್ತರು ಸಮೀಪದಲ್ಲೇ ಹಾದುಹೋದರು. ಅವರ ತಲೆಯ ಮೇಲೆ ಪ್ರಸಾದವಾಗಿ ಕೊಟ್ಟಿದ್ದ ಹೂವನ್ನು ನೋಡಿ ಕುವೆಂಪು ಹೇಳಿದರು- “ಎಂಥಾ ಮೂಢರು ನಮ್ಮ ಜನ. ಈ ಕಾಲದಲ್ಲೂ ಹೀಗೆಲ್ಲಾ ಮಾಡುತ್ತಾರಲ್ಲಾ…”. ಆದರೆ ಪ್ರಭುಶಂಕರರು ಪ್ರತಿಕ್ರಿಯಿಸಲಿಲ್ಲ. ಮರುದಿನ ಮತ್ತೆ ಕುವೆಂಪು ಭೇಟಿಯಾಯಿತು. ಆಗ ಹೇಳಿದರು “ಚಾಮುಂಡಿ ಬೆಟ್ಟಕ್ಕೆ ಹೋಗಿ ಗುಡಿಯಲ್ಲಿ ಕೊಟ್ಟ ಹೂವನ್ನು ತಲೆಮೇಲೆ ಇಟ್ಟುಕೊಂಡು ಬರುವವರು ಮೂಢರು. ನಾವು ನೋಡಿ, ಸಂಜೆ ರಾಮಕೃಷ್ಣ ಆಶ್ರಮಕ್ಕೆ ಹೋಗಿ ರಾಮಕೃಷ್ಣ ಪರಮಹಂಸರು, ವಿವೇಕಾನಂದರ ಮೂರ್ತಿ ಮುಂದೆ ಕುಳಿತು ಅವರೇ ದೇವರೆಂದು ಧ್ಯಾನ ಮಾಡಿ ಬರುತ್ತೇವೆ! ಇದು ಮೌಢ್ಯವಲ್ಲವೆ?”.

ಸ್ವತಃ ಒಬ್ಬ ವಿಚಾರವಾದಿಯಾಗಿದ್ದ ಶ್ರೇಷ್ಠ ಸಾಹಿತಿ ಕುವೆಂಪು ಅವರೇ ತಮ್ಮ ಶಿಷ್ಯನ ಮಾತು ಕೇಳಿ ಅಂದು ದಂಗಾಗಿದ್ದರು!

ಹೌದು, ನಂಬಿಕೆ ಎನ್ನುವುದು ಜನರ ಖಾಸಗಿ ವಿಚಾರ. ನಂಬಿಕೆ ತರ್ಕಕ್ಕೆ ನಿಲುಕದ್ದು. ಈ ನಂಬಿಕೆ, ವಿಶ್ವಾಸಗಳು ಗೋಚರಿಸುವುದು ಆಚರಣೆಗಳಲ್ಲಿ. ನಾವು ಕಾರು ತಂದರೂ ಕುಂಬಳಕಾಯಿ ಒಡೆಯುತ್ತೇವೆ, ವೈಜ್ಞಾನಿಕ ಪ್ರಗತಿಯ ಅತ್ಯುನ್ನತ ಸಂಕೇತದಂತಿರುವ ಕಂಪ್ಯೂಟರ್ ತಂದರೂ ಪೂಜಿಸಿ ನಿಂಬೆಹಣ್ಣು ನಿವಾಳಿಸುತ್ತೇವೆ. ಇವೆಲ್ಲ ಜನರ ವೈಯಕ್ತಿಕ ವಿಷಯಗಳು. ಜನರ ದೈನಂದಿನ ಖಾಸಗಿ ವಿಚಾರಕ್ಕೂ ಸರ್ಕಾರಕ್ಕೂ ಏನು ಸಂಬಂಧ? ನಮಗೆ ಯಾವುದು ನಂಬಿಕೆ, ವಿಶ್ವಾಸವಾಗಿ ಕಾಣುತ್ತದೋ ಅದು ಕೆಲವರಿಗೆ ಮೌಢ್ಯವಾಗಿ ಕಾಣಬಹುದು. ಆದರೆ ಯಾವುದು ಮೌಢ್ಯ, ಮೂಢನಂಬಿಕೆ ಎಂದು ನಿರ್ಧರಿಸಬೇಕಾದವರು ಯಾರು? ಭಾನಾಮತಿ, ಬೆತ್ತಲೆ ಸೇವೆ, ಗೆಜ್ಜೆಪೂಜೆ, ನರಬಲಿ, ವಾಮಾಚಾರ, ವಶೀಕರಣ, ಯಕ್ಷಿಣಿ, ಪಂಕ್ತಿಭೇದ, ಮಡಿ-ಮೈಲಿಗೆಗಳ ನಿಷೇಧ ಹಾಗೂ ಶಿಕ್ಷೆಗೆ ಕಾಂಗ್ರೆಸ್ ಸರ್ಕಾರ ತರಲು ಹೊರಟಿರುವ ಕಾನೂನು ಸೀಮಿತವಾಗಿದ್ದರೆ ಯಾರೂ ತಕರಾರು ಎತ್ತುವ ಅಗತ್ಯವಿರಲಿಲ್ಲ. ಆದರೆ ಸರ್ಕಾರ ನೇಮಕ ಮಾಡಿದ್ದ ಸಮಿತಿಯಲ್ಲಿದ್ದ ಮಹಾಮೇಧಾವಿಗಳು ಸಿದ್ಧಪಡಿಸಿರುವ ಕರಡು ಈ ಅನಿಷ್ಟ ಪದ್ಧತಿಗಳಿಗೆ ಮಾತ್ರ ಸೀಮಿತವಾಗಿದೆಯೇ?

ಇಷ್ಟಕ್ಕೂ ಈ ವಿಚಾರವಾದಿಗಳ ಸಮಿತಿ ಮಾಡಿರುವ ಶಿಫಾರಸ್ಸು ಹಾಗೂ ಸರ್ಕಾರ ಜಾರಿಗೆ ತರಲು ಹೊರಟಿರುವುದೇನು ಅಂದುಕೊಂಡಿರಿ?

ಮಠಾಧೀಶರು, ಸನ್ಯಾಸಿಗಳ ಪಾದಪೂಜೆ ಮಾಡಬಾರದಂತೆ! ಸರ್ಕಾರಿ ಕಟ್ಟಡಗಳನ್ನು ಕಟ್ಟುವಾಗ ಗುದ್ದಲಿ ಪೂಜೆ ಮಾಡಬಾರದಂತೆ!! ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ವಾಸ್ತುಶಾಸ್ತ್ರ, ಕಾಲನಿರ್ಣಯಗಳನ್ನು ಪಿಡುಗುಗಳೆಂದು ಗುರುತಿಸಿ ಕಟ್ಟುನಿಟ್ಟಾಗಿ ಅವುಗಳನ್ನು ನಿಷೇಧಿಸಬೇಕಂತೆ. ಜಪಮಾಲೆ, ರುದ್ರಾಕ್ಷಿ, ಮಣಿಸರ, ತಾಯತ, ಹರಳುಗಳ ಮಾರಾಟ ಹಾಗೂ ಬಳಕೆ ಮಾಡಬಾರದಂತೆ. ದೇವಸ್ಥಾನಗಳಲ್ಲಿ ಪ್ರಾಣಿ ಬಲಿ ಮಾಡಬಾರದಂತೆ. ಜಾತ್ರೆ, ಕರಗ ಮಾಡುವ ಮೊದಲು ಕೇಳುವ “ದೈವ ಪ್ರಶ್ನೆ”ಯನ್ನು ಇನ್ನು ಮುಂದೆ ಕೇಳಬಾರದಂತೆ. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು ಮತ-ಮೌಢ್ಯ ಬಿತ್ತುವ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸ ಕರೆಯೊಯ್ಯಬಾರದಂತೆ!

ಇದೇನಿದು ಸ್ವಾಮಿ?

ಮೂಢನಂಬಿಕೆ, ಕಂದಾಚಾರಗಳ ಪ್ರತಿಬಂಧಕ ವಿಧೇಯಕವೋ? ಅಥವಾ ಇವುಗಳ ಸೋಗಿನಲ್ಲಿ ಹಿಂದು ನಂಬಿಕೆ, ಆಚರಣೆಗಳನ್ನು ನಾಶಮಾಡಲು ಹೂಡಿರುವ ತಂತ್ರವೋ? ನೀವು ಕರಡಿನಲ್ಲಿ ಏನು ಹೇಳಲು ಹೊರಟಿದ್ದೀರೋ, 19ನೇ ಶತಮಾನದಲ್ಲಿ ಮತಾಂತರ ಮಾಡಲು ಬಂದ ಪಾದ್ರಿಗಳು ಹಿಂದು ಧರ್ಮದ ಬಗ್ಗೆ ಹೇಳಿದ್ದೂ ಇದನ್ನೇ ಸ್ವಾಮಿ! ಇನ್ನೊಬ್ಬರದ್ದನ್ನು ಮೂಢನಂಬಿಕೆ, ತಮ್ಮದ್ದನ್ನು ಸೈಂಟಿಫಿಕ್ ಅನ್ನೋದು ಪಾದ್ರಿಗಳ ತಂತ್ರವಾಗಿತ್ತು. ನಿಮ್ಮ ಉದ್ದೇಶವೂ ಅದೇ ಆಗಿದೆಯೇನು? ಈಗ ಹೊರಗೆಡವಿರುವುದು ಕಾನೂನಲ್ಲ, ಕರಡು ಪ್ರತಿಯೇ ಆಗಿರಬಹುದು. ಆದರೆ ಆ ಕರಡಿನಲ್ಲಿ ಒಳಗೊಂಡಿರುವ ವಿಚಾರಗಳನ್ನು ನೋಡಿದರೆ ಸರ್ಕಾರದ ನಿಜವಾದ ಉದ್ದೇಶ, ಗುರಿ ಏನು ಎಂಬುದು ತಿಳಿಯುವುದಿಲ್ಲವೆ? ಒಂದು ವೇಳೆ, ಈ ಕರಡು ಕಾಯಿದೆಯಾದರೆ, ಇನ್ನು ಮುಂದೆ ಆಯುಧ ಪೂಜೆ ದಿನ ಪೋಲಿಸರು ತಮ್ಮ ಬಂದೂಕುಗಳಿಗೆ ಪೂಜೆ ಮಾಡುವುದಕ್ಕೂ, ಬಿಎಂಟಿಸಿ-ಕೆಎಸ್‌ಆರ್‌ಟಿಸಿ ಸಿಬ್ಬಂದಿ ವಾಹನವನ್ನು ಶೃಂಗರಿಸಿ ಪೂಜೆ ಸಲ್ಲಿಸುವುದಕ್ಕೂ, ಶಾಲೆಗಳಲ್ಲಿ ಶಾರದೆಯ ಪೂಜೆ ಮಾಡುವುದಕ್ಕೂ ಕುತ್ತು ಬರಲಿದೆ.

ಗುದ್ದಲಿ ಪೂಜೆ ಮಾಡಬಾರದು ಎನ್ನುತ್ತಾರಲ್ಲಾ ಇವರಿಗೆ ಗುದ್ದಲಿ ಪೂಜೆಯ ಮಹತ್ವವಾದರೂ ತಿಳಿದಿದೆಯೇ?

ಭೂಮಿಯನ್ನು ನಾವೇ ಹಣ ಕೊಟ್ಟು ಕೊಂಡರೂ, ಅಲ್ಲಿ ಮನೆ ಕಟ್ಟುವಾಗ ಸ್ಥಳಪೂಜೆ ಮಾಡುತ್ತೇವೆ. ಗುದ್ದಲಿಯ ಪೆಟ್ಟು ಹಾಕುವ ಮೊದಲು ಭೂತಾಯಿಯ ಪೂಜೆ ಮಾಡಿ ಆಕೆಗೆ ನೋವುಂಟು ಮಾಡುತ್ತಿರುವುದಕ್ಕಾಗಿ ಕ್ಷಮೆ ಕೇಳುತ್ತೇವೆ. ಗೃಹ ಪ್ರವೇಶ ಮಾಡುವಾಗ ಹೇಳುವ ಮಂತ್ರದಲ್ಲೂ ಕ್ಷಮೆ ಹಾಗೂ ಆಶೀರ್ವಾದ ಕೋರಿಕೆ ಇರುತ್ತದೆ. ಅಂದರೆ ಅಲ್ಲೊಂದು ಫೀಲಿಂಗ್ ಇರುತ್ತದೆ. ಪ್ರಕೃತಿ ಜತೆ ಒಂದು ಸಂಬಂಧ ಇಟ್ಟುಕೊಳ್ಳುವುದರ ಸಂಕೇತವೇ ಈ ಗುದ್ದಲಿ ಪೂಜೆ.

ಅಂಥ ಗುದ್ದಲಿ ಪೂಜೆಯನ್ನು ಸರ್ಕಾರಿ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಮಾಡಬಾರದು ಎನ್ನುವುದು ಮೌಢ್ಯ ಎಂಬ ಕಾರಣಕ್ಕೋ ಅಥವಾ ಕಾಂಗ್ರೆಸ್‌ನ ಸೆಕ್ಯುಲರೀಕರಣವೆಂಬ ಅಜೆಂಡಾದ ಭಾಗವೋ? ಇವತ್ತು ಸರ್ಕಾರಿ ಕಟ್ಟಡದ ನೆಪ ತೆಗೆದವರು, ನಾಳೆ ಜನರಿಗೂ ಅದೇ ಕಾಯಿದೆ ಅನ್ವಯಿಸುವುದಿಲ್ಲ ಎನ್ನುವುದಕ್ಕೆ ಖಾತ್ರಿಯೇನು? ತೀರಾ ವೈಯಕ್ತಿಕ ವಿಚಾರವಾದ ಮಠಾಧೀಶರು, ಸನ್ಯಾಸಿಗಳ ಪಾದ ಪೂಜೆ ಮಾಡಬೇಡಿ ಎಂದವರು, ಮನೆ ಕಟ್ಟುವಾಗಲೂ ಗುದ್ದಲಿ ಪೂಜೆ ಮಾಡಬೇಡಿ ಎಂದು ಜನರಿಗೆ ಹೇಳುವುದಿಲ್ಲ, ಕಟ್ಟಳೆ ತರುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನಿದೆ ಹೇಳಿ?

ಈ ಸರ್ಕಾರಕ್ಕೆ ಆಚರಣೆಗಳಿಗೂ ಕಂದಾಚಾರಗಳಿಗೂ ವ್ಯತ್ಯಾಸವೂ ಗೊತ್ತಿಲ್ಲವೆ?

ಏಕೆ ಹೀಗೆ ಹೇಳಬೇಕಾಗಿದೆಯೆಂದರೆ, ದೇವಸ್ಥಾನಗಳಲ್ಲಿ ಗಂಟೆ ಬಾರಿಸಬಾರದು, ಇಷ್ಟಕ್ಕೂ ದೇವರೇನು ನಿದ್ರಿಸುತ್ತಿರುತ್ತಾನೆಯೇ ಪೂಜೆ ನಂತರ ತೀರ್ಥಕೊಡಬಾರದು, ಅದು ಹೊಳೆ ನೀರಾಗಿರುವುದರಿಂದ ಆ್ಯಕ್ವಾ ಗಾರ್ಡ್, ಕೆಂಟ್‌ನಂತೆ ಶುದ್ಧವಾಗಿರುವುದಿಲ್ಲ ಎಂದೂ ಮುಂದೊಂದು ದಿನ ಕಾನೂನು ತರಲು ಪ್ರಯತ್ನಿಸಿದರೂ ಆಶ್ಚರ್ಯವಿಲ್ಲ, ಅಲ್ಲವೇ? ಇನ್ನು ಮುಂದೆ ಮದುವೆ ಸಂದರ್ಭದಲ್ಲಿ ಸಪ್ತಪದಿ ತುಳಿಯಬೇಡಿ, ಬರೀ ರಿಜಿಸ್ಟರ್ ಮಾಡಿದರೆ ಸಾಕು, ಸಪ್ತಪದಿ ತುಳಿಯುವುದೂ ಗೊಡ್ಡು ಸಂಪ್ರದಾಯ ಹಾಗೂ ಮೌಢ್ಯ ಎನ್ನಬಹುದು. ಇಷ್ಟಕ್ಕೂ ಸಮಾಜಕ್ಕೆ ಮೌಢ್ಯ, ಮೌಲ್ಯ, ವೈಚಾರಿಕತೆ ಹೇಳಲು ಹೊರಟಿರುವ ಸಮಿತಿಯಲ್ಲಿ ಇರುವ ಒಬ್ಬಾಕೆಯ ತಂಗಿ “ಗಂಡ ಬೇಡ, ಮಗು ಬೇಕು” ಎಂದು ಹಾಗೇ ಮಾಡಿಕೊಂಡಿದ್ದಾರೆ. ಅದನ್ನೂ ಮೌಲ್ಯವೆಂದು, ಮದುವೆ ಮೌಢ್ಯವೆಂದು ಬೋಧಿಸಿ ಬಿಡಬಹುದು ಜೋಕೆ! ಇನ್ನು ಮುಂದೆ ಕನ್ನಡ ರಾಜ್ಯೋತ್ಸವದಂದು “ತಾಯಿ ಭುವನೇಶ್ವರಿ” ಅನ್ನಬೇಡಿ ಅಂತಲೂ ಹೇಳಿಬಿಡಿ. ಇಷ್ಟಕ್ಕೂ ತಾಯಿ ಭುವನೇಶ್ವರಿ ಅಂದರೆ ಅಲ್ಪಸಂಖ್ಯಾತರಿಗೆ ನೋವಾಗುತ್ತದೆ ಅಲ್ಲವೆ ಸಾಹಿತಿಗಳೇ?! ಅಪ್ಪ-ಅಮ್ಮ ತೀರಿಕೊಂಡಾಗ ಕೇಶ ಮುಂಡನ ಮಾಡಬಾರದು. ಅದೂ ಮೂಢನಂಬಿಕೆ ಎಂದಾರು!

ಇವರ ವೈಚಾರಿಕತೆ ಬರೀ ಹಿಂದುಧರ್ಮದ ಆಚರಣೆಗಳಿಗೆ ಮಾತ್ರ ಸೀಮಿತವೇ?

ದೇವಸ್ಥಾನಗಳಲ್ಲಿ ಪ್ರಾಣಿ ಬಲಿ ಮಾಡಬಾರದು ಎನ್ನುವುದಾದರೆ ಬಕ್ರೀದ್ ದಿನ ಮುಸ್ಲಿಮರು ಹಬ್ಬದ ಹೆಸರಿನಲ್ಲಿ ಮಾಡುವುದೂ ಬಲಿಯೇ ಅಲ್ಲವೆ? ರೋಗ ಬಂದ ಜಾನುವಾರುಗಳಿಗೆ ಬರೆ ಹಾಕುವುದು, ಕಿವಿ ಕತ್ತರಿಸುವುದೇ ಹಿಂಸಾತ್ಮಕ ಪದ್ಧತಿ ಎನ್ನುವುದಾದರೆ ಸಧೃಡ ಪ್ರಾಣಿಗಳ ಗಂಟಲು ಸೀಳುವ “ಹಲಾಲ್‌” ಪದ್ಧತಿ ಹಿಂಸೆಯ ಪರಮಾವಧಿಯಲ್ಲವೆ? ಸಾಹಿತಿ ಮಹಾಶಯರೇ ಗೋಹತ್ಯೆಯನ್ನು ಸರಿ ಎನ್ನುವ ನಿಮಗೆ ಪ್ರಾಣಿ ಬಲಿ ಯಾವ ಕಾರಣಕ್ಕಾಗಿ ತಪ್ಪಾಗಿ ಕಾಣುತ್ತದೆ? ಕ್ರೈಸ್ತರ “ಹೋಲಿ ಮೆಸಾಕರ್‌” ಏನು ಸ್ವಾಮಿ? ಹತ್ಯೆಯೇ ಅಲ್ಲವೇ? ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ಚರ್ಮಕ್ಕೆ ಕೊಕ್ಕೆ ಚುಚ್ಚಿಕೊಳ್ಳುವುದು, ಕೊಕ್ಕೆ ಚುಚ್ಚಿಕೊಂಡು ರಥ ಎಳೆಯುವುದು ತಪ್ಪಂತೆ ಹಾಗೂ ಅದನ್ನು ನಿಷೇಧಿಸಬೇಕಂತೆ. ಹೀಗೆ ಹೇಳುವವರಿಗೆ ಮೊಹರಂ ಸಂದರ್ಭದಲ್ಲಿ ಮೈ ಬಡಿದುಕೊಳ್ಳುವುದನ್ನೂ ನಿಷೇಧಿಸಬೇಕೆಂದು ಶಿಫಾರಸ್ಸು ಮಾಡುವ ತಾಕತ್ತೇಕಿಲ್ಲ? ಧರ್ಮವೆನ್ನುವುದು ವೈಚಾರಿಕತೆಯ ವಿರೋಧಿ. ಇಷ್ಟಕ್ಕೂ ದೇವರಿದ್ದಾನೆ ಎಂದು ಹೇಗೆ ಸಾಬೀತು ಮಾಡಲು ಸಾಧ್ಯ? ಹಾಗಾದರೆ ಧರ್ಮದ ಹೆಸರಿನಲ್ಲಿ ಮಾಡುವ ಮತಾಂತರವನ್ನೂ ನೀವು ನಿಷೇಧಿಸಬೇಕಲ್ಲವೆ? ಅಂತಹ ತಾಕತ್ತು ನಿಮಗಿದೆಯೇ? ಇನ್ನು ದರ್ಗಾಗಳಲ್ಲೂ ಭೂತ ಬಿಡಿಸುವುದು, ತಾಯತ ಕಟ್ಟುವುದು ನಿಮಗೆ ಗೊತ್ತಿಲ್ಲವೆ? ಮೌಢ್ಯ ಹಾಗೂ ನಿಷೇಧದ ಬಗ್ಗೆ ಹೇಳುವಾಗ “ದರ್ಗಾಗಳಲ್ಲಿ ನಡೆಯುವ” ಎಂದೂ ಹೆಸರು ಹಿಡಿದು ಹೇಳುವ ಧೈರ್ಯವೇಕಿಲ್ಲ? ಇನ್ನು ಮುಸ್ಲಿಮರ ಸ್ಕಲ್ ಕ್ಯಾಪ್, ಬುರ್ಖಾಗಳಿಗೆ ಧಾರ್ಮಿಕ ಹಾಗೂ ಸಾಮಾಜಿಕ ಕಾರಣಗಳಿರಬಹುದು. ಆದರೆ ವೈಜ್ಞಾನಿಕ ಕಾರಣಗಳು ಖಂಡಿತ ಇಲ್ಲ. ಅವುಗಳನ್ನೂ ಮೌಢ್ಯವೆಂದು ನಿಷೇಧಸಬೇಕೆಂದು ಹೇಳುವ ತಾಕತ್ತನ್ನು ಈ ವಿಚಾರವಾದಿಗಳು ತೋರುತ್ತಾರೆಯೇ? ಆ ಕಾರಣಕ್ಕೆ ತೆಪ್ಪಗಿದ್ದಾರಾ? ಇವರ ವೈಚಾರಿಕತೆಗೂ ಆಯ್ಕೆಗಳಿವೆಯೇ? ಜಾತ್ರೆ, ಉತ್ಸವ, ಕರಗ ಸಂದರ್ಭದಲ್ಲಿ ಕೇಳುವ “ದೈವಪ್ರಶ್ನೆ”ಯನ್ನೇ ಮೂಢನಂಬಿಕೆ ಎನ್ನುವುದಾದರೆ, “ನಿನ್ನನ್ನು ಯೇಸು ಕರೆಯುತ್ತಿದ್ದಾನೆ..”, “ಬನ್ನಿ ಬಾಲ ಯೇಸುವನ್ನು ಪ್ರಾರ್ಥಿಸೋಣ, ರೋಗ ಗುಣಮುಖವಾಗುತ್ತದೆ” ಎಂದು ಮಂಗಳೂರು, ಉಡುಪಿಗಳಲ್ಲಿ ಬೋರ್ಡು ಹಾಕಿ ಜನರನ್ನು ಮಂಗ ಮಾಡುವ ಅಲಲೂಯಾದಂಥ ಪಂಥಗಳದ್ದೂ ಮೌಢ್ಯಾಚರಣೆ ಎಂಬುದು ಕರಡು ಸಿದ್ಧಪಡಿಸುವವರಿಗೆ ಗೊತ್ತಿಲ್ಲವೆ? ನಮ್ಮ ಹಿಂದುಗಳು, ಅದರಲ್ಲೂ ಕೆಳವರ್ಗದವರೆನಿಸಿಕೊಂಡವರು… ಮಾರಮ್ಮ, ಚೌಡಮ್ಮ, ಅಣ್ಣಮ್ಮ, ಪುರದಮ್ಮ, ಕೆಂಚಾಲಮ್ಮನನ್ನು ಪೂಜಿಸುತ್ತಾರೆ, ದೈವಪ್ರಶ್ನೆ ಕೇಳುತ್ತಾರೆ. ಅದು ನಮ್ಮ ನಂಬಿಕೆ. ನಾವು ನೆಲ, ಜಲ, ಸಸ್ಯಸಂಕುಲವನ್ನು ಪೂಜಿಸುವರು. ಇದೆಲ್ಲಾ ಮೂಢನಂಬಿಕೆ ಎಂದು ಹೇಳಲು ಇವರಿಗೆ ಯಾವ ಹಕ್ಕಿದೆ? ಬೆಂಗಳೂರಿನ ಶಿವಾಜಿನಗರದಲ್ಲಿ ಮೇರಿಯಮ್ಮನ ಜಾತ್ರೆಯೂ ನಡೆಯುತ್ತದೆ. ಕ್ರೈಸ್ತರಲ್ಲಿ ಜಾತ್ರೆ ಅನ್ನೋದೇ ಇಲ್ಲ. ಹಾಗಿದ್ದರೂ ಇವರು ಜಾತ್ರೆ ಮಾಡುತ್ತಿರುವುದು ಹಿಂದು ಕೆಳಜಾತಿಯವರನ್ನು ವಂಚಿಸುವುದಕ್ಕಾಗಿ ಎಂದು ನಿಷೇಧಿಸುತ್ತಾರಾ? ಇಂದು ಕೇರಳದಲ್ಲಿ ಇಂಡಿಯನೈಜೇಶನ್ ಅಥವಾ ಭಾರತೀಕರಣದ ಹೆಸರಿನಲ್ಲಿ ಚರ್ಚ್‌ಗಳ ಪ್ರವೇಶ ದ್ವಾರದ ಬಳಿ ಗರುಡಗಂಬ ನೆಡುತ್ತಿದ್ದಾರೆ. ಇಂದು ಚರ್ಚ್‌ಗಳಲ್ಲಿ ಅಗರಬತ್ತಿ ಹಚ್ಚಿ ಪೂಜೆ ಮಾಡುವುದು, ಪ್ರಸಾದ, ತೀರ್ಥ ಕೊಡುವುದನ್ನು ಆರಂಭಿಸಲಾಗಿದೆ. ಇದೆಲ್ಲಾ ಏನನ್ನು ಸೂಚಿಸುತ್ತದೆ ಸ್ವಾಮಿ? ಇದು ಮೋಸ ಎನ್ನುವ ಎದೆಗಾರಿಕೆ ನಿಮಗಿದೆಯೇ? ಇನ್ನು ದರ್ಗಾ ಎಂದರೇನು? ಸಮಾಧಿಯಲ್ಲವೆ? ಸಮಾಧಿ ಪೂಜೆ ಮಾಡುವುದೂ ಮೌಢ್ಯವೆನಿಸುವುದಿಲ್ಲವೆ? ವೈಜ್ಞಾನಿಕವಾದ ನಮ್ಮ ಪಂಚಾಂಗ ಮತ್ತು ಜ್ಯೋತಿಷ್ಯಶಾಸ್ತ್ರಗಳನ್ನು ಮೌಢ್ಯವೆನ್ನುವವರಿಗೆ, ವಿಜ್ಞಾನ ಸಾರಾಸಗಟಾಗಿ ತಿರಸ್ಕರಿಸಿರುವ “ಅಡಮ್ ಮತ್ತು ಈವ್‌” ಥಿಯರಿಯನ್ನು ಹೇಳುವವರಲ್ಲಿ, “ಸೂರ್ಯ ಭೂಮಿಯ ಸುತ್ತ ಸುತ್ತುತ್ತಾನೆ” ಎನ್ನುವವರಲ್ಲಿ ಮೌಢ್ಯ ಕಾಣುವುದಿಲ್ಲವೆ? ಕರಡು ವಿಧೇಯಕ ಅಂಥ ವಿಷಯಗಳ ಬಗ್ಗೆ ಏಕೆ ನೇರ ಅಥವಾ ಪರೋಕ್ಷವಾಗಿ ಪ್ರಸ್ತಾಪಿಸುವುದಿಲ್ಲ? ಅಸ್ಟ್ರಾಲಜಿಯಲ್ಲಿ ಹುಳುಕು ಹುಡುಕುವವರಿಗೆ ಜಗತ್ತಿನ ಮುಂದುವರಿದ ಕ್ರೈಸ್ತ ರಾಷ್ಟ್ರಗಳಲ್ಲಿ ಇರುವ ಟ್ಯಾರಟ್ ಕಾರ್ಡ್ಸ್ ಕಾಣಿಸುವುದಿಲ್ಲವೆ? ಇವತ್ತು ನಿರೀಶ್ವರವಾದದ ಬಗ್ಗೆ ಅತಿ ಹೆಚ್ಚು ಪುಸ್ತಕಗಳು ಬಂದಿರುವುದೇ ಕ್ರಿಶ್ಚಿಯಾನಿಟಿ ವಿರುದ್ಧವಲ್ಲವೆ ಹೇಳಿ? ಇತ್ತೀಚೆಗೆ ನಡೆದ “ಹ್ಯಾಲೋವಿನ್‌”ನಲ್ಲಿ ನಿಮಗೆ ಮೌಢ್ಯ ಕಾಣಿಸುವುದಿಲ್ಲವೇ?

ಪ್ರತಿ ಧರ್ಮದಲ್ಲೂ ಅದರದ್ದೇ ಆದ ಅಂತರ್ಗತ ಕುರುಡು ನಂಬಿಕೆಗಳಿರುತ್ತವೆ. ಇಲ್ಲವಾದರೆ ಕ್ರಿಶ್ಚಿಯಾನಿಟಿಯೇಕೆ ಕ್ಯಾಥೋಲಿಕ್ಸ್ ಹಾಗೂ ಪ್ರೊಟೆಸ್ಟೆಂಟಿಸಂ ಎಂದು ಹೋಳಾಯಿತು? ಏಕೆ 700 ವರ್ಷಗಳಷ್ಟು ಸುದೀರ್ಘ ಕಾಲ ಬಡಿದಾಡಿದರು? ಇಂದಿಗೂ ಕ್ಯಾಥೋಲಿಕ್ಕರು ‘ಪಾದ್ರಿಗಳು ಮದುವೆಯಾಗಬಾರದು ಎಂದರೆ, ಪ್ರೋಟೆಸ್ಟೆಂಟರು ಪಾದ್ರಿಗಳು ಮದುವೆಯಾಗಲೂಬಹುದು, ಮಕ್ಕಳನ್ನೂ ಮಾಡಿಕೊಳ್ಳಬಹುದು’ ಎನ್ನುತ್ತಾರೆ? ದೆವ್ವ ಅನ್ನೋದು ಇಲ್ಲ, ಆತ್ಮ ಇಲ್ಲ, ಮರುಜನ್ಮ ಇಲ್ಲ ಎಂದು ಪ್ರವಾದಿ ಹೇಳಿದರೂ ತಾಯತ ಕಟ್ಟುವ ದರ್ಗಾಗಳಿವೆ, ಸ್ವರ್ಗದಲ್ಲಿ 72 ಕನ್ಯೆಯರ ಜತೆ ಮಜಾ ಮಾಡಲು ಹೊರಡುವ ಭಯೋತ್ಪಾದಕರು ಸೃಷ್ಟಿಯಾಗಿದ್ದಾರೆ, ಕಟ್ಟರ್‌ಪಂಥೀಯ ವಹಾಬಿಗಳು ತಲೆಯೆತ್ತಿದ್ದಾರೆ. ಕಾಲದ ಜತೆ ಹೆಜ್ಜೆ ಹಾಕಬೇಕೆನ್ನುವ ಪ್ರೊಟೆಸ್ಟೆಂಟಿಸಂ ಒಂದು ಕಡೆಯಾದರೆ, ಮೂಲ ಬೈಬಲ್‌ನಲ್ಲಿ ಇರುವಂತೆಯೇ ನಡೆದುಕೊಳ್ಳಬೇಕೆನ್ನುವ “Apocrypha bible” ವಾದಿಗಳಿದ್ದಾರೆ. ಇನ್ನು ಮಂಗಳಯಾನಕ್ಕೆ ಮೊದಲು ತಿರುಪತಿ ದೇವಾಲಯಕ್ಕೆ ತೆರಳಿ ನಿರ್ವಿಘ್ನವಾಗಿ ಉಡಾವಣೆಯಾಗಲಿ ಎಂದು ಇಸ್ರೋ ಮುಖ್ಯಸ್ಥ ರಾಧಾಕೃಷ್ಣನ್ ಪ್ರಾರ್ಥಿಸಿ ನಾಲ್ಕು ದಿನಗಳಾಗಿಲ್ಲ. ವಿಶ್ವವಿಖ್ಯಾತ ಗಣಿತ ಶಾಸ್ತ್ರಜ್ಞರಾದ ಜಿ.ಎಚ್. ಹಾರ್ಡಿ ಕಟ್ಟಾ ನಿರೀಶ್ವರವಾದಿಯಾಗಿದ್ದರೆ, ಅವರ ಸ್ನೇಹಿತ ಹಾಗೂ ವಿಶ್ವವಿಖ್ಯಾತ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಆ ದೇವಿಯೇ ನನ್ನ ಮೂಲಕ ಗಣಿತದ ಸೂತ್ರಗಳನ್ನು ಬರೆಸುತ್ತಿದ್ದಾಳೆ ಎಂದು ನಂಬಿದ್ದರು. ನನಗೆ ಸಾವಿನ ಅನುಭವವಾಯಿತು, ನನ್ನ ಸಾವನ್ನು ನಾನೇ ನೋಡಿದೆ ಎನ್ನುವ ಪ್ಯಾರಾ ಸೈಕಾಲಜಿಯನ್ನು ಇಂದು ನಾವು ಕಾಣುತ್ತಿದ್ದೇವೆ. ಅಲೋಪತಿಯ ವ್ಯಾಪ್ತಿಗೇ ನಿಲುಕದ್ದನ್ನೂ ಗುಣಪಡಿಸುತ್ತಿರುವ ಆಲ್ಟರ್ನೇಟಿವ್ ಮೆಡಿಸಿನ್‌ಗಳಾದ ಪ್ರಾಣಿಕ್ ಹೀಲಿಂಗ್, ರೇಕಿ, ಮ್ಯಾಗ್ನೆಟಿಕ್ ಥೆರಪಿ, ಆಕ್ಯುಪಂಕ್ಚರ್, ಆಕ್ಯುಪ್ರೆಷರ್‌ಗಳು ಬಂದಿವೆ. ನಮ್ಮ ಎಷ್ಟೋ ಹಿಂದು ನಂಬಿಕೆ, ಆಚರಣೆಗಳ ಹಿಂದೆಯೂ ವೈಜ್ಞಾನಿಕ ಕಾರಣಗಳಿವೆ. ಅದಿರಲಿ, ಇದೇನಿದು Guineapig  (ಗಿನಿಪಿಗ್)? ಹೊಸ ಔಷಧಗಳ ಪ್ರಯೋಗವನ್ನು ಪ್ರಾಣಿಗಳ ಮೇಲೆಯೇ ಮಾಡುವುದೇಕೆ? ಮನುಷ್ಯ ಮೇಲು ಎಂಬ ಭಾವನೆ ವಿಜ್ಞಾನಿಗಳಿಗೂ ಇದೆ ಅಲ್ಲವೆ? ಇದೂ ಮೂಢನಂಬಿಕೆಯಲ್ಲವೆ?

ಮುಖ್ಯಮಂತ್ರಿಗಳೇ, ಪ್ರತಿಯೊಂದು ಧರ್ಮಕ್ಕೂ, ಜನರಿಗೂ ಅವರದ್ದೇ ಪಾವಿತ್ರ್ಯ, ನಂಬುಗೆ ಇರುತ್ತವೆ. ನಂಬಿಕೆಗಳು ಅಹೋರಾತ್ರಿ ಸೃಷ್ಟಿಯಾಗುವುದಿಲ್ಲ. ಕಿಡಿಗೇಡಿ ಸಾಹಿತಿಗಳನ್ನು ಸೇರಿಸಿಕೊಂಡು ಇಲ್ಲ ಸಲ್ಲದ ವಿಚಾರಕ್ಕೆ ಕೈಹಾಕಬೇಡಿ. ಡೂಸ್ ಅಂಡ್ ಡೋಂಟ್ಸ್ ಜನ ಮಾಡಿಕೊಳ್ಳುತ್ತಾರೆ. ಜನರ ಯಾವುದಾದರೂ ಆಚರಣೆಗಳಿಂದ ಸಮಾಜಕ್ಕೆ ತೊಂದರೆಯಾಗುತ್ತಿದ್ದರೆ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದ್ದರೆ ಸರ್ಕಾರ ಮಧ್ಯಪ್ರವೇಶಿಸಬೇಕು ಅಷ್ಟೇ. ಸಾಕ್ಷರತೆ, ತಿಳಿವಳಿಕೆ ಹೆಚ್ಚಾದಂತೆ ಹಿಂದುಗಳು, ಕ್ರೈಸ್ತರು, ಮುಸಲ್ಮಾನರಲ್ಲೂ ಬದಲಾವಣೆಗಳಾಗಿವೆ. ಜನರಿಗೆ ಶಿಕ್ಷಣ ಕೊಡಿ ಸ್ವಾಮಿ. ನೂರಕ್ಕೆ 100ರಷ್ಟು ಸಾಕ್ಷರತೆ ತನ್ನಿ. ಅದು ಸರ್ಕಾರ ಮಾಡಬೇಕಾದ ಕೆಲಸ. ಬೆತ್ತಲೆ ಸೇವೆ ನಿಷೇಧ ಮಾಡುವುದರ ಜೊತೆಗೆ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ಜನರಿಗೆ ಸಂಡಾಸಿಗೆ ಹೋಗಲು ಶೌಚಾಲಯ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿಕೊಡಿ. ಇಲ್ಲವಾದಲ್ಲಿ ಶೌಚದ ನೆಪದಲ್ಲಿ ಅವರು ನಿತ್ಯ ಬೆತ್ತಲೆ ಸೇವೆಮಾಡಬೇಕಾಗುತ್ತದೆ!

ನಿಮ್ಮ ಬರಗೂರು ರಾಮಚಂದ್ರಪ್ಪನವರನ್ನು ಕೇಳಿ, ಅವರ ಸಿನಿಮಾಗಳ ಪ್ರಾರಂಭಕ್ಕೆ ಮುನ್ನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವುದಿಲ್ಲವೆ? ನಿಮ್ಮ ಸಾಹಿತಿ ಹಿಂಬಾಲಕರು, ದೇಶಿಯತೇ(ನೇಟಿವಿಟಿ), ಜಾನಪದ ಉಳಿಯಬೇಕು ಎನ್ನುತ್ತಾರೆ. ಅವು ನಿಂತಿರುವುದೇ ನಂಬಿಕೆ, ಆಚರಣೆಗಳ ಮೇಲೆ. ಬರಗೂರರಿಗೆ ಬಹಳ ಇಷ್ಟವಾಗುವ ಹಾಗೂ ಮೆಚ್ಚುವ ರಾಜ್‌ಕುಮಾರ್ ನಟಿಸಿರುವ ಎಷ್ಟು ಸಿನಿಮಾಗಳಲ್ಲಿ ಪವಾಡ, ದೈವೀಕೃಪೆ, ರಕ್ಷಣೆ ಇಲ್ಲ ಹೇಳಿ? ಆ ಚಿತ್ರಗಳನ್ನೇಕೆ ಮೌಢ್ಯವನ್ನು ಬಿತ್ತುತ್ತಿವೆ ಎಂದು ವಿರೋಧಿಸಿರಲಿಲ್ಲ? ಕಾರ್ಲ್ ಮಾರ್ಕ್ಸ್, ಲೆನಿನ್, ನೆಹರು ಹೇಳಿದ್ದೇ ಸರಿ ಎಂದು ನಂಬಿ ಕುಳಿತಿರುವ ಇವರೇ ದೊಡ್ಡ ಮೂಢರು. ಇಷ್ಟಕ್ಕೂ ಮಾರ್ಕ್ಸ್‌ವಾದಕ್ಕೆ ನೇತುಹಾಕಿಕೊಂಡ ಸೋವಿಯತ್ ರಷ್ಯಾ ಸಿಡಿದು ಚೂರಾಗಲಿಲ್ಲವೆ? ಅದಿರಲಿ, ಡಾ. ಸಿದ್ದಲಿಂಗಯ್ಯ, ಡಾ. ಮರುಳಸಿದ್ದಪ್ಪ, ಜಿ. ರಾಮಕೃಷ್ಣರನ್ನು ಇನ್ನೂ “ಸಾಹಿತಿ”ಗಳೆಂದು, “ಚಿಂತಕರೆಂದು” ನಂಬಿಕೊಂಡಿದ್ದೀರಲ್ಲಾ ಇದಕ್ಕಿಂತ ದೊಡ್ಡ “ಮೂಢನಂಬಿಕೆ” ಯಾವುದಿದೆ ಸಿದ್ದರಾಮಯ್ಯನವರೇ? ಇವರು ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಬರೆದ ಹಾಗೂ ಜನಮೆಚ್ಚುಗೆಗೆ ಪಾತ್ರವಾದ ಒಂದು ಕೃತಿಯನ್ನು, ಸಮಾಜಕ್ಕೆ ಲಾಭವಾದ ಇವರ ಒಂದು ಚಿಂತನೆಯನ್ನು ದಯವಿಟ್ಟು ಉದಾಹರಿಸುತ್ತೀರಾ? ಮುಖ್ಯಮಂತ್ರಿಗಳೇ,  ನಿಮ್ಮ “ಮೂಢನಂಬಿಕೆ”ಯಿಂದ ಮೊದಲು ಹೊರಬಂದರೆ ನಿಮ್ಮ ಪಕ್ಷದಲ್ಲೇ ಇರುವ ಜ್ಞಾನಿಗಳಾದ, ಸಮಾಜದ ಸಂವೇದನೆಗಳನ್ನು ಅರಿತುಕೊಂಡಿರುವ ಡಾ. ಪರಮೇಶ್ವರ, ಬಿ.ಎಲ್. ಶಂಕರ್, ಡಾ. ಮಹಾದೇವಪ್ಪ, ವಿ.ಆರ್. ಸುದರ್ಶನ್‌ರು ಕಾಣುತ್ತಾರೆ. ಅವರಂಥವರ ಸಲಹೆ ಪಡೆದರೆ ಇಂಥ ಅನಾಹುತ ತಪ್ಪುತ್ತದೆ.

ಅಲ್ಲ, ದಲಿತ ದೌರ್ಜನ್ಯ ತಡೆಯಂತೆ, ಈ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಕಾಯಿದೆ ಕೂಡಾ ದುರುಪಯೋಗವಾಗುವುದಿಲ್ಲ ಎಂದು ಹೇಗೆ ಹೇಳಲು ಸಾಧ್ಯ? ನಿಮ್ಮ ಮನೆ ಮುಂದೆ ನೀವೇ ನಿಂಬೆಹಣ್ಣು, ಕುಂಕುಮ ಹಾಕಿಕೊಂಡು ಇನ್ಯಾರದ್ದೋ ವಿರುದ್ಧ ಕೇಸು ಹಾಕಿದರೆ ಗತಿಯೇನು? ಈ ಬಗ್ಗೆ ಯೋಚಿಸಿದ್ದೀರಾ? ಶಾಲೆಗಳಲ್ಲಿ ಪೂಜೆ ಮಾಡಬಾರದು ಎಂಬ ನಿರ್ಬಂಧದ ಹಿಂದಿರುವ ಮನಸ್ಥಿತಿ ಏನು ಅಂತ ಬಿಡಿಸಿಹೇಳುತ್ತೀರಾ? ಪೂಜೆಗೂ ಮೌಢ್ಯಕ್ಕೂ ಏನು ಸಂಬಂಧ? ಅಥವಾ ನಿಮ್ಮ ಸೆಕ್ಯುಲರ್ ಅಜೆಂಡಾ ಇಂಥ ಯೋಚನೆಗಳನ್ನು ಸೃಷ್ಟಿಸುತ್ತಿದೆಯೇ? 2005, ಜನವರಿಯಲ್ಲಿ ಬೆನ್ನಿ ಹಿನ್ ಎಂಬ ಮೌಢ್ಯದ ಜಾಗತಿಕ ವ್ಯಾಪಾರಿ ಹಾಗೂ ಸೋಗಲಾಡಿಗೆ ಅರಮನೆ ಮೈದಾನದಲ್ಲಿ ಆತಿಥ್ಯ ಕೊಟ್ಟಿದ್ದ ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ಮೂಢನಂಬಿಕೆಗಳ ಬಗ್ಗೆ ಮಾತನಾಡುವ, ನಿಷೇಧಿಸುವ ನೈತಿಕ ಹಕ್ಕಿದೆಯೇ, ಮೊದಲು ಹೇಳಿ?

ಕೊನೆಯದಾಗಿ, ಸಿದ್ದರಾಮಯ್ಯನವರೇ ನಿಮ್ಮ ಮುಂದೆ ಮಾಡಲು ಬೆಟ್ಟದಷ್ಟು ಕೆಲಸಗಳಿವೆ, ಜವಾಬ್ದಾರಿಗಳಿವೆ. ನಿಮ್ಮನ್ನು ಜನ ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಿರುವುದು ನೀವು ಪ್ರಗತಿಪರರು ಎಂಬ ಕಾರಣಕ್ಕಲ್ಲ ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ಆಗ ಪಡಪೋಶಿ ಸಾಹಿತಿಗಳು, ಚಿಂತಕರ ಕಿಡಿಗೇಡಿತನಕ್ಕೆ ನಿಮ್ಮ ಸರ್ಕಾರ ಹಾಗೂ ರಾಜ್ಯದ ಆಡಳಿತ ಬಲಿಯಾಗುವುದು ತಪ್ಪುತ್ತದೆ.

“ಹೀಗಿದ್ದರು ಕುವೆಂಪು” ಎಂಬ ಸಣ್ಣ ಪುಸ್ತಕವಿದೆ. ಒಮ್ಮೆ ಕುವೆಂಪು ಹಾಗೂ ಅವರ ಶಿಷ್ಯ ಪ್ರಭುಶಂಕರ ಮೈಸೂರಿನ ಕುಕ್ಕರಹಳ್ಳಿ ಕೆರೆಯ ಬಳಿ ಕುಳಿತಿದ್ದರು. ಚಾಮುಂಡಿ ಬೆಟ್ಟಕ್ಕೆ ಹೋಗಿದ್ದ ಭಕ್ತರು ಸಮೀಪದಲ್ಲೇ ಹಾದುಹೋದರು. ಅವರ ತಲೆಯ ಮೇಲೆ ಪ್ರಸಾದವಾಗಿ ಕೊಟ್ಟಿದ್ದ ಹೂವನ್ನು ನೋಡಿ ಕುವೆಂಪು ಹೇಳಿದರು- “ಎಂಥಾ ಮೂಢರು ನಮ್ಮ ಜನ. ಈ ಕಾಲದಲ್ಲೂ ಹೀಗೆಲ್ಲಾ ಮಾಡುತ್ತಾರಲ್ಲಾ…”. ಆದರೆ ಪ್ರಭುಶಂಕರರು ಪ್ರತಿಕ್ರಿಯಿಸಲಿಲ್ಲ. ಮರುದಿನ ಮತ್ತೆ ಕುವೆಂಪು ಭೇಟಿಯಾಯಿತು. ಆಗ ಹೇಳಿದರು “ಚಾಮುಂಡಿ ಬೆಟ್ಟಕ್ಕೆ ಹೋಗಿ ಗುಡಿಯಲ್ಲಿ ಕೊಟ್ಟ ಹೂವನ್ನು ತಲೆಮೇಲೆ ಇಟ್ಟುಕೊಂಡು ಬರುವವರು ಮೂಢರು. ನಾವು ನೋಡಿ, ಸಂಜೆ ರಾಮಕೃಷ್ಣ ಆಶ್ರಮಕ್ಕೆ ಹೋಗಿ ರಾಮಕೃಷ್ಣ ಪರಮಹಂಸರು, ವಿವೇಕಾನಂದರ ಮೂರ್ತಿ ಮುಂದೆ ಕುಳಿತು ಅವರೇ ದೇವರೆಂದು ಧ್ಯಾನ ಮಾಡಿ ಬರುತ್ತೇವೆ! ಇದು ಮೌಢ್ಯವಲ್ಲವೆ?”. ಸ್ವತಃ ಒಬ್ಬ ವಿಚಾರವಾದಿಯಾಗಿದ್ದ ಶ್ರೇಷ್ಠ ಸಾಹಿತಿ ಕುವೆಂಪು ಅವರೇ ತಮ್ಮ ಶಿಷ್ಯನ ಮಾತು ಕೇಳಿ ಅಂದು ದಂಗಾಗಿದ್ದರು!ಹೌದು, ನಂಬಿಕೆ ಎನ್ನುವುದು ಜನರ ಖಾಸಗಿ ವಿಚಾರ. ನಂಬಿಕೆ ತರ್ಕಕ್ಕೆ ನಿಲುಕದ್ದು. ಈ ನಂಬಿಕೆ, ವಿಶ್ವಾಸಗಳು ಗೋಚರಿಸುವುದು ಆಚರಣೆಗಳಲ್ಲಿ. ನಾವು ಕಾರು ತಂದರೂ ಕುಂಬಳಕಾಯಿ ಒಡೆಯುತ್ತೇವೆ, ವೈಜ್ಞಾನಿಕ ಪ್ರಗತಿಯ ಅತ್ಯುನ್ನತ ಸಂಕೇತದಂತಿರುವ ಕಂಪ್ಯೂಟರ್ ತಂದರೂ ಪೂಜಿಸಿ ನಿಂಬೆಹಣ್ಣು ನಿವಾಳಿಸುತ್ತೇವೆ. ಇವೆಲ್ಲ ಜನರ ವೈಯಕ್ತಿಕ ವಿಷಯಗಳು. ಜನರ ದೈನಂದಿನ ಖಾಸಗಿ ವಿಚಾರಕ್ಕೂ ಸರ್ಕಾರಕ್ಕೂ ಏನು ಸಂಬಂಧ? ನಮಗೆ ಯಾವುದು ನಂಬಿಕೆ, ವಿಶ್ವಾಸವಾಗಿ ಕಾಣುತ್ತದೋ ಅದು ಕೆಲವರಿಗೆ ಮೌಢ್ಯವಾಗಿ ಕಾಣಬಹುದು. ಆದರೆ ಯಾವುದು ಮೌಢ್ಯ, ಮೂಢನಂಬಿಕೆ ಎಂದು ನಿರ್ಧರಿಸಬೇಕಾದವರು ಯಾರು? ಭಾನಾಮತಿ, ಬೆತ್ತಲೆ ಸೇವೆ, ಗೆಜ್ಜೆಪೂಜೆ, ನರಬಲಿ, ವಾಮಾಚಾರ, ವಶೀಕರಣ, ಯಕ್ಷಿಣಿ, ಪಂಕ್ತಿಭೇದ, ಮಡಿ-ಮೈಲಿಗೆಗಳ ನಿಷೇಧ ಹಾಗೂ ಶಿಕ್ಷೆಗೆ ಕಾಂಗ್ರೆಸ್ ಸರ್ಕಾರ ತರಲು ಹೊರಟಿರುವ ಕಾನೂನು ಸೀಮಿತವಾಗಿದ್ದರೆ ಯಾರೂ ತಕರಾರು ಎತ್ತುವ ಅಗತ್ಯವಿರಲಿಲ್ಲ. ಆದರೆ ಸರ್ಕಾರ ನೇಮಕ ಮಾಡಿದ್ದ ಸಮಿತಿಯಲ್ಲಿದ್ದ ಮಹಾಮೇಧಾವಿಗಳು ಸಿದ್ಧಪಡಿಸಿರುವ ಕರಡು ಈ ಅನಿಷ್ಟ ಪದ್ಧತಿಗಳಿಗೆ ಮಾತ್ರ ಸೀಮಿತವಾಗಿದೆಯೇ? ಇಷ್ಟಕ್ಕೂ ಈ ವಿಚಾರವಾದಿಗಳ ಸಮಿತಿ ಮಾಡಿರುವ ಶಿಫಾರಸ್ಸು ಹಾಗೂ ಸರ್ಕಾರ ಜಾರಿಗೆ ತರಲು ಹೊರಟಿರುವುದೇನು ಅಂದುಕೊಂಡಿರಿ?ಮಠಾಧೀಶರು, ಸನ್ಯಾಸಿಗಳ ಪಾದಪೂಜೆ ಮಾಡಬಾರದಂತೆ! ಸರ್ಕಾರಿ ಕಟ್ಟಡಗಳನ್ನು ಕಟ್ಟುವಾಗ ಗುದ್ದಲಿ ಪೂಜೆ ಮಾಡಬಾರದಂತೆ!! ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ವಾಸ್ತುಶಾಸ್ತ್ರ, ಕಾಲನಿರ್ಣಯಗಳನ್ನು ಪಿಡುಗುಗಳೆಂದು ಗುರುತಿಸಿ ಕಟ್ಟುನಿಟ್ಟಾಗಿ ಅವುಗಳನ್ನು ನಿಷೇಧಿಸಬೇಕಂತೆ. ಜಪಮಾಲೆ, ರುದ್ರಾಕ್ಷಿ, ಮಣಿಸರ, ತಾಯತ, ಹರಳುಗಳ ಮಾರಾಟ ಹಾಗೂ ಬಳಕೆ ಮಾಡಬಾರದಂತೆ. ದೇವಸ್ಥಾನಗಳಲ್ಲಿ ಪ್ರಾಣಿ ಬಲಿ ಮಾಡಬಾರದಂತೆ. ಜಾತ್ರೆ, ಕರಗ ಮಾಡುವ ಮೊದಲು ಕೇಳುವ “ದೈವ ಪ್ರಶ್ನೆ”ಯನ್ನು ಇನ್ನು ಮುಂದೆ ಕೇಳಬಾರದಂತೆ. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು ಮತ-ಮೌಢ್ಯ ಬಿತ್ತುವ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸ ಕರೆಯೊಯ್ಯಬಾರದಂತೆ!ಇದೇನಿದು ಸ್ವಾಮಿ?ಮೂಢನಂಬಿಕೆ, ಕಂದಾಚಾರಗಳ ಪ್ರತಿಬಂಧಕ ವಿಧೇಯಕವೋ? ಅಥವಾ ಇವುಗಳ ಸೋಗಿನಲ್ಲಿ ಹಿಂದು ನಂಬಿಕೆ, ಆಚರಣೆಗಳನ್ನು ನಾಶಮಾಡಲು ಹೂಡಿರುವ ತಂತ್ರವೋ? ನೀವು ಕರಡಿನಲ್ಲಿ ಏನು ಹೇಳಲು ಹೊರಟಿದ್ದೀರೋ, 19ನೇ ಶತಮಾನದಲ್ಲಿ ಮತಾಂತರ ಮಾಡಲು ಬಂದ ಪಾದ್ರಿಗಳು ಹಿಂದು ಧರ್ಮದ ಬಗ್ಗೆ ಹೇಳಿದ್ದೂ ಇದನ್ನೇ ಸ್ವಾಮಿ! ಇನ್ನೊಬ್ಬರದ್ದನ್ನು ಮೂಢನಂಬಿಕೆ, ತಮ್ಮದ್ದನ್ನು ಸೈಂಟಿಫಿಕ್ ಅನ್ನೋದು ಪಾದ್ರಿಗಳ ತಂತ್ರವಾಗಿತ್ತು. ನಿಮ್ಮ ಉದ್ದೇಶವೂ ಅದೇ ಆಗಿದೆಯೇನು? ಈಗ ಹೊರಗೆಡವಿರುವುದು ಕಾನೂನಲ್ಲ, ಕರಡು ಪ್ರತಿಯೇ ಆಗಿರಬಹುದು. ಆದರೆ ಆ ಕರಡಿನಲ್ಲಿ ಒಳಗೊಂಡಿರುವ ವಿಚಾರಗಳನ್ನು ನೋಡಿದರೆ ಸರ್ಕಾರದ ನಿಜವಾದ ಉದ್ದೇಶ, ಗುರಿ ಏನು ಎಂಬುದು ತಿಳಿಯುವುದಿಲ್ಲವೆ? ಒಂದು ವೇಳೆ, ಈ ಕರಡು ಕಾಯಿದೆಯಾದರೆ, ಇನ್ನು ಮುಂದೆ ಆಯುಧ ಪೂಜೆ ದಿನ ಪೋಲಿಸರು ತಮ್ಮ ಬಂದೂಕುಗಳಿಗೆ ಪೂಜೆ ಮಾಡುವುದಕ್ಕೂ, ಬಿಎಂಟಿಸಿ-ಕೆಎಸ್‌ಆರ್‌ಟಿಸಿ ಸಿಬ್ಬಂದಿ ವಾಹನವನ್ನು ಶೃಂಗರಿಸಿ ಪೂಜೆ ಸಲ್ಲಿಸುವುದಕ್ಕೂ, ಶಾಲೆಗಳಲ್ಲಿ ಶಾರದೆಯ ಪೂಜೆ ಮಾಡುವುದಕ್ಕೂ ಕುತ್ತು ಬರಲಿದೆ. ಗುದ್ದಲಿ ಪೂಜೆ ಮಾಡಬಾರದು ಎನ್ನುತ್ತಾರಲ್ಲಾ ಇವರಿಗೆ ಗುದ್ದಲಿ ಪೂಜೆಯ ಮಹತ್ವವಾದರೂ ತಿಳಿದಿದೆಯೇ?ಭೂಮಿಯನ್ನು ನಾವೇ ಹಣ ಕೊಟ್ಟು ಕೊಂಡರೂ, ಅಲ್ಲಿ ಮನೆ ಕಟ್ಟುವಾಗ ಸ್ಥಳಪೂಜೆ ಮಾಡುತ್ತೇವೆ. ಗುದ್ದಲಿಯ ಪೆಟ್ಟು ಹಾಕುವ ಮೊದಲು ಭೂತಾಯಿಯ ಪೂಜೆ ಮಾಡಿ ಆಕೆಗೆ ನೋವುಂಟು ಮಾಡುತ್ತಿರುವುದಕ್ಕಾಗಿ ಕ್ಷಮೆ ಕೇಳುತ್ತೇವೆ. ಗೃಹ ಪ್ರವೇಶ ಮಾಡುವಾಗ ಹೇಳುವ ಮಂತ್ರದಲ್ಲೂ ಕ್ಷಮೆ ಹಾಗೂ ಆಶೀರ್ವಾದ ಕೋರಿಕೆ ಇರುತ್ತದೆ. ಅಂದರೆ ಅಲ್ಲೊಂದು ಫೀಲಿಂಗ್ ಇರುತ್ತದೆ. ಪ್ರಕೃತಿ ಜತೆ ಒಂದು ಸಂಬಂಧ ಇಟ್ಟುಕೊಳ್ಳುವುದರ ಸಂಕೇತವೇ ಈ ಗುದ್ದಲಿ ಪೂಜೆ.               ಅಂಥ ಗುದ್ದಲಿ ಪೂಜೆಯನ್ನು ಸರ್ಕಾರಿ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಮಾಡಬಾರದು ಎನ್ನುವುದು ಮೌಢ್ಯ ಎಂಬ ಕಾರಣಕ್ಕೋ ಅಥವಾ ಕಾಂಗ್ರೆಸ್‌ನ ಸೆಕ್ಯುಲರೀಕರಣವೆಂಬ ಅಜೆಂಡಾದ ಭಾಗವೋ? ಇವತ್ತು ಸರ್ಕಾರಿ ಕಟ್ಟಡದ ನೆಪ ತೆಗೆದವರು, ನಾಳೆ ಜನರಿಗೂ ಅದೇ ಕಾಯಿದೆ ಅನ್ವಯಿಸುವುದಿಲ್ಲ ಎನ್ನುವುದಕ್ಕೆ ಖಾತ್ರಿಯೇನು? ತೀರಾ ವೈಯಕ್ತಿಕ ವಿಚಾರವಾದ ಮಠಾಧೀಶರು, ಸನ್ಯಾಸಿಗಳ ಪಾದ ಪೂಜೆ ಮಾಡಬೇಡಿ ಎಂದವರು, ಮನೆ ಕಟ್ಟುವಾಗಲೂ ಗುದ್ದಲಿ ಪೂಜೆ ಮಾಡಬೇಡಿ ಎಂದು ಜನರಿಗೆ ಹೇಳುವುದಿಲ್ಲ, ಕಟ್ಟಳೆ ತರುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನಿದೆ ಹೇಳಿ?ಈ ಸರ್ಕಾರಕ್ಕೆ ಆಚರಣೆಗಳಿಗೂ ಕಂದಾಚಾರಗಳಿಗೂ ವ್ಯತ್ಯಾಸವೂ ಗೊತ್ತಿಲ್ಲವೆ?ಏಕೆ ಹೀಗೆ ಹೇಳಬೇಕಾಗಿದೆಯೆಂದರೆ, ದೇವಸ್ಥಾನಗಳಲ್ಲಿ ಗಂಟೆ ಬಾರಿಸಬಾರದು, ಇಷ್ಟಕ್ಕೂ ದೇವರೇನು ನಿದ್ರಿಸುತ್ತಿರುತ್ತಾನೆಯೇ ಪೂಜೆ ನಂತರ ತೀರ್ಥಕೊಡಬಾರದು, ಅದು ಹೊಳೆ ನೀರಾಗಿರುವುದರಿಂದ ಆ್ಯಕ್ವಾ ಗಾರ್ಡ್, ಕೆಂಟ್‌ನಂತೆ ಶುದ್ಧವಾಗಿರುವುದಿಲ್ಲ ಎಂದೂ ಮುಂದೊಂದು ದಿನ ಕಾನೂನು ತರಲು ಪ್ರಯತ್ನಿಸಿದರೂ ಆಶ್ಚರ್ಯವಿಲ್ಲ, ಅಲ್ಲವೇ? ಇನ್ನು ಮುಂದೆ ಮದುವೆ ಸಂದರ್ಭದಲ್ಲಿ ಸಪ್ತಪದಿ ತುಳಿಯಬೇಡಿ, ಬರೀ ರಿಜಿಸ್ಟರ್ ಮಾಡಿದರೆ ಸಾಕು, ಸಪ್ತಪದಿ ತುಳಿಯುವುದೂ ಗೊಡ್ಡು ಸಂಪ್ರದಾಯ ಹಾಗೂ ಮೌಢ್ಯ ಎನ್ನಬಹುದು. ಇಷ್ಟಕ್ಕೂ ಸಮಾಜಕ್ಕೆ ಮೌಢ್ಯ, ಮೌಲ್ಯ, ವೈಚಾರಿಕತೆ ಹೇಳಲು ಹೊರಟಿರುವ ಸಮಿತಿಯಲ್ಲಿ ಇರುವ ಒಬ್ಬಾಕೆಯ ತಂಗಿ “ಗಂಡ ಬೇಡ, ಮಗು ಬೇಕು” ಎಂದು ಹಾಗೇ ಮಾಡಿಕೊಂಡಿದ್ದಾರೆ. ಅದನ್ನೂ ಮೌಲ್ಯವೆಂದು, ಮದುವೆ ಮೌಢ್ಯವೆಂದು ಬೋಧಿಸಿ ಬಿಡಬಹುದು ಜೋಕೆ! ಇನ್ನು ಮುಂದೆ ಕನ್ನಡ ರಾಜ್ಯೋತ್ಸವದಂದು “ತಾಯಿ ಭುವನೇಶ್ವರಿ” ಅನ್ನಬೇಡಿ ಅಂತಲೂ ಹೇಳಿಬಿಡಿ. ಇಷ್ಟಕ್ಕೂ ತಾಯಿ ಭುವನೇಶ್ವರಿ ಅಂದರೆ ಅಲ್ಪಸಂಖ್ಯಾತರಿಗೆ ನೋವಾಗುತ್ತದೆ ಅಲ್ಲವೆ ಸಾಹಿತಿಗಳೇ?! ಅಪ್ಪ-ಅಮ್ಮ ತೀರಿಕೊಂಡಾಗ ಕೇಶ ಮುಂಡನ ಮಾಡಬಾರದು. ಅದೂ ಮೂಢನಂಬಿಕೆ ಎಂದಾರು!ಇವರ ವೈಚಾರಿಕತೆ ಬರೀ ಹಿಂದುಧರ್ಮದ ಆಚರಣೆಗಳಿಗೆ ಮಾತ್ರ ಸೀಮಿತವೇ? ದೇವಸ್ಥಾನಗಳಲ್ಲಿ ಪ್ರಾಣಿ ಬಲಿ ಮಾಡಬಾರದು ಎನ್ನುವುದಾದರೆ ಬಕ್ರೀದ್ ದಿನ ಮುಸ್ಲಿಮರು ಹಬ್ಬದ ಹೆಸರಿನಲ್ಲಿ ಮಾಡುವುದೂ ಬಲಿಯೇ ಅಲ್ಲವೆ? ರೋಗ ಬಂದ ಜಾನುವಾರುಗಳಿಗೆ ಬರೆ ಹಾಕುವುದು, ಕಿವಿ ಕತ್ತರಿಸುವುದೇ ಹಿಂಸಾತ್ಮಕ ಪದ್ಧತಿ ಎನ್ನುವುದಾದರೆ ಸಧೃಡ ಪ್ರಾಣಿಗಳ ಗಂಟಲು ಸೀಳುವ “ಹಲಾಲ್‌” ಪದ್ಧತಿ ಹಿಂಸೆಯ ಪರಮಾವಧಿಯಲ್ಲವೆ? ಸಾಹಿತಿ ಮಹಾಶಯರೇ ಗೋಹತ್ಯೆಯನ್ನು ಸರಿ ಎನ್ನುವ ನಿಮಗೆ ಪ್ರಾಣಿ ಬಲಿ ಯಾವ ಕಾರಣಕ್ಕಾಗಿ ತಪ್ಪಾಗಿ ಕಾಣುತ್ತದೆ? ಕ್ರೈಸ್ತರ “ಹೋಲಿ ಮೆಸಾಕರ್‌” ಏನು ಸ್ವಾಮಿ? ಹತ್ಯೆಯೇ ಅಲ್ಲವೇ? ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ಚರ್ಮಕ್ಕೆ ಕೊಕ್ಕೆ ಚುಚ್ಚಿಕೊಳ್ಳುವುದು, ಕೊಕ್ಕೆ ಚುಚ್ಚಿಕೊಂಡು ರಥ ಎಳೆಯುವುದು ತಪ್ಪಂತೆ ಹಾಗೂ ಅದನ್ನು ನಿಷೇಧಿಸಬೇಕಂತೆ. ಹೀಗೆ ಹೇಳುವವರಿಗೆ ಮೊಹರಂ ಸಂದರ್ಭದಲ್ಲಿ ಮೈ ಬಡಿದುಕೊಳ್ಳುವುದನ್ನೂ ನಿಷೇಧಿಸಬೇಕೆಂದು ಶಿಫಾರಸ್ಸು ಮಾಡುವ ತಾಕತ್ತೇಕಿಲ್ಲ? ಧರ್ಮವೆನ್ನುವುದು ವೈಚಾರಿಕತೆಯ ವಿರೋಧಿ. ಇಷ್ಟಕ್ಕೂ ದೇವರಿದ್ದಾನೆ ಎಂದು ಹೇಗೆ ಸಾಬೀತು ಮಾಡಲು ಸಾಧ್ಯ? ಹಾಗಾದರೆ ಧರ್ಮದ ಹೆಸರಿನಲ್ಲಿ ಮಾಡುವ ಮತಾಂತರವನ್ನೂ ನೀವು ನಿಷೇಧಿಸಬೇಕಲ್ಲವೆ? ಅಂತಹ ತಾಕತ್ತು ನಿಮಗಿದೆಯೇ? ಇನ್ನು ದರ್ಗಾಗಳಲ್ಲೂ ಭೂತ ಬಿಡಿಸುವುದು, ತಾಯತ ಕಟ್ಟುವುದು ನಿಮಗೆ ಗೊತ್ತಿಲ್ಲವೆ? ಮೌಢ್ಯ ಹಾಗೂ ನಿಷೇಧದ ಬಗ್ಗೆ ಹೇಳುವಾಗ “ದರ್ಗಾಗಳಲ್ಲಿ ನಡೆಯುವ” ಎಂದೂ ಹೆಸರು ಹಿಡಿದು ಹೇಳುವ ಧೈರ್ಯವೇಕಿಲ್ಲ? ಇನ್ನು ಮುಸ್ಲಿಮರ ಸ್ಕಲ್ ಕ್ಯಾಪ್, ಬುರ್ಖಾಗಳಿಗೆ ಧಾರ್ಮಿಕ ಹಾಗೂ ಸಾಮಾಜಿಕ ಕಾರಣಗಳಿರಬಹುದು. ಆದರೆ ವೈಜ್ಞಾನಿಕ ಕಾರಣಗಳು ಖಂಡಿತ ಇಲ್ಲ. ಅವುಗಳನ್ನೂ ಮೌಢ್ಯವೆಂದು ನಿಷೇಧಸಬೇಕೆಂದು ಹೇಳುವ ತಾಕತ್ತನ್ನು ಈ ವಿಚಾರವಾದಿಗಳು ತೋರುತ್ತಾರೆಯೇ? ಆ ಕಾರಣಕ್ಕೆ ತೆಪ್ಪಗಿದ್ದಾರಾ? ಇವರ ವೈಚಾರಿಕತೆಗೂ ಆಯ್ಕೆಗಳಿವೆಯೇ? ಜಾತ್ರೆ, ಉತ್ಸವ, ಕರಗ ಸಂದರ್ಭದಲ್ಲಿ ಕೇಳುವ “ದೈವಪ್ರಶ್ನೆ”ಯನ್ನೇ ಮೂಢನಂಬಿಕೆ ಎನ್ನುವುದಾದರೆ, “ನಿನ್ನನ್ನು ಯೇಸು ಕರೆಯುತ್ತಿದ್ದಾನೆ..”, “ಬನ್ನಿ ಬಾಲ ಯೇಸುವನ್ನು ಪ್ರಾರ್ಥಿಸೋಣ, ರೋಗ ಗುಣಮುಖವಾಗುತ್ತದೆ” ಎಂದು ಮಂಗಳೂರು, ಉಡುಪಿಗಳಲ್ಲಿ ಬೋರ್ಡು ಹಾಕಿ ಜನರನ್ನು ಮಂಗ ಮಾಡುವ ಅಲಲೂಯಾದಂಥ ಪಂಥಗಳದ್ದೂ ಮೌಢ್ಯಾಚರಣೆ ಎಂಬುದು ಕರಡು ಸಿದ್ಧಪಡಿಸುವವರಿಗೆ ಗೊತ್ತಿಲ್ಲವೆ? ನಮ್ಮ ಹಿಂದುಗಳು, ಅದರಲ್ಲೂ ಕೆಳವರ್ಗದವರೆನಿಸಿಕೊಂಡವರು… ಮಾರಮ್ಮ, ಚೌಡಮ್ಮ, ಅಣ್ಣಮ್ಮ, ಪುರದಮ್ಮ, ಕೆಂಚಾಲಮ್ಮನನ್ನು ಪೂಜಿಸುತ್ತಾರೆ, ದೈವಪ್ರಶ್ನೆ ಕೇಳುತ್ತಾರೆ. ಅದು ನಮ್ಮ ನಂಬಿಕೆ. ನಾವು ನೆಲ, ಜಲ, ಸಸ್ಯಸಂಕುಲವನ್ನು ಪೂಜಿಸುವರು. ಇದೆಲ್ಲಾ ಮೂಢನಂಬಿಕೆ ಎಂದು ಹೇಳಲು ಇವರಿಗೆ ಯಾವ ಹಕ್ಕಿದೆ? ಬೆಂಗಳೂರಿನ ಶಿವಾಜಿನಗರದಲ್ಲಿ ಮೇರಿಯಮ್ಮನ ಜಾತ್ರೆಯೂ ನಡೆಯುತ್ತದೆ. ಕ್ರೈಸ್ತರಲ್ಲಿ ಜಾತ್ರೆ ಅನ್ನೋದೇ ಇಲ್ಲ. ಹಾಗಿದ್ದರೂ ಇವರು ಜಾತ್ರೆ ಮಾಡುತ್ತಿರುವುದು ಹಿಂದು ಕೆಳಜಾತಿಯವರನ್ನು ವಂಚಿಸುವುದಕ್ಕಾಗಿ ಎಂದು ನಿಷೇಧಿಸುತ್ತಾರಾ? ಇಂದು ಕೇರಳದಲ್ಲಿ ಇಂಡಿಯನೈಜೇಶನ್ ಅಥವಾ ಭಾರತೀಕರಣದ ಹೆಸರಿನಲ್ಲಿ ಚರ್ಚ್‌ಗಳ ಪ್ರವೇಶ ದ್ವಾರದ ಬಳಿ ಗರುಡಗಂಬ ನೆಡುತ್ತಿದ್ದಾರೆ. ಇಂದು ಚರ್ಚ್‌ಗಳಲ್ಲಿ ಅಗರಬತ್ತಿ ಹಚ್ಚಿ ಪೂಜೆ ಮಾಡುವುದು, ಪ್ರಸಾದ, ತೀರ್ಥ ಕೊಡುವುದನ್ನು ಆರಂಭಿಸಲಾಗಿದೆ. ಇದೆಲ್ಲಾ ಏನನ್ನು ಸೂಚಿಸುತ್ತದೆ ಸ್ವಾಮಿ? ಇದು ಮೋಸ ಎನ್ನುವ ಎದೆಗಾರಿಕೆ ನಿಮಗಿದೆಯೇ? ಇನ್ನು ದರ್ಗಾ ಎಂದರೇನು? ಸಮಾಧಿಯಲ್ಲವೆ? ಸಮಾಧಿ ಪೂಜೆ ಮಾಡುವುದೂ ಮೌಢ್ಯವೆನಿಸುವುದಿಲ್ಲವೆ? ವೈಜ್ಞಾನಿಕವಾದ ನಮ್ಮ ಪಂಚಾಂಗ ಮತ್ತು ಜ್ಯೋತಿಷ್ಯಶಾಸ್ತ್ರಗಳನ್ನು ಮೌಢ್ಯವೆನ್ನುವವರಿಗೆ, ವಿಜ್ಞಾನ ಸಾರಾಸಗಟಾಗಿ ತಿರಸ್ಕರಿಸಿರುವ “ಅಡಮ್ ಮತ್ತು ಈವ್‌” ಥಿಯರಿಯನ್ನು ಹೇಳುವವರಲ್ಲಿ, “ಸೂರ್ಯ ಭೂಮಿಯ ಸುತ್ತ ಸುತ್ತುತ್ತಾನೆ” ಎನ್ನುವವರಲ್ಲಿ ಮೌಢ್ಯ ಕಾಣುವುದಿಲ್ಲವೆ? ಕರಡು ವಿಧೇಯಕ ಅಂಥ ವಿಷಯಗಳ ಬಗ್ಗೆ ಏಕೆ ನೇರ ಅಥವಾ ಪರೋಕ್ಷವಾಗಿ ಪ್ರಸ್ತಾಪಿಸುವುದಿಲ್ಲ? ಅಸ್ಟ್ರಾಲಜಿಯಲ್ಲಿ ಹುಳುಕು ಹುಡುಕುವವರಿಗೆ ಜಗತ್ತಿನ ಮುಂದುವರಿದ ಕ್ರೈಸ್ತ ರಾಷ್ಟ್ರಗಳಲ್ಲಿ ಇರುವ ಟ್ಯಾರಟ್ ಕಾರ್ಡ್ಸ್ ಕಾಣಿಸುವುದಿಲ್ಲವೆ? ಇವತ್ತು ನಿರೀಶ್ವರವಾದದ ಬಗ್ಗೆ ಅತಿ ಹೆಚ್ಚು ಪುಸ್ತಕಗಳು ಬಂದಿರುವುದೇ ಕ್ರಿಶ್ಚಿಯಾನಿಟಿ ವಿರುದ್ಧವಲ್ಲವೆ ಹೇಳಿ? ಇತ್ತೀಚೆಗೆ ನಡೆದ “ಹ್ಯಾಲೋವಿನ್‌”ನಲ್ಲಿ ನಿಮಗೆ ಮೌಢ್ಯ ಕಾಣಿಸುವುದಿಲ್ಲವೇ? ಪ್ರತಿ ಧರ್ಮದಲ್ಲೂ ಅದರದ್ದೇ ಆದ ಅಂತರ್ಗತ ಕುರುಡು ನಂಬಿಕೆಗಳಿರುತ್ತವೆ. ಇಲ್ಲವಾದರೆ ಕ್ರಿಶ್ಚಿಯಾನಿಟಿಯೇಕೆ ಕ್ಯಾಥೋಲಿಕ್ಸ್ ಹಾಗೂ ಪ್ರೊಟೆಸ್ಟೆಂಟಿಸಂ ಎಂದು ಹೋಳಾಯಿತು? ಏಕೆ 700 ವರ್ಷಗಳಷ್ಟು ಸುದೀರ್ಘ ಕಾಲ ಬಡಿದಾಡಿದರು? ಇಂದಿಗೂ ಕ್ಯಾಥೋಲಿಕ್ಕರು ‘ಪಾದ್ರಿಗಳು ಮದುವೆಯಾಗಬಾರದು ಎಂದರೆ, ಪ್ರೋಟೆಸ್ಟೆಂಟರು ಪಾದ್ರಿಗಳು ಮದುವೆಯಾಗಲೂಬಹುದು, ಮಕ್ಕಳನ್ನೂ ಮಾಡಿಕೊಳ್ಳಬಹುದು’ ಎನ್ನುತ್ತಾರೆ? ದೆವ್ವ ಅನ್ನೋದು ಇಲ್ಲ, ಆತ್ಮ ಇಲ್ಲ, ಮರುಜನ್ಮ ಇಲ್ಲ ಎಂದು ಪ್ರವಾದಿ ಹೇಳಿದರೂ ತಾಯತ ಕಟ್ಟುವ ದರ್ಗಾಗಳಿವೆ, ಸ್ವರ್ಗದಲ್ಲಿ 72 ಕನ್ಯೆಯರ ಜತೆ ಮಜಾ ಮಾಡಲು ಹೊರಡುವ ಭಯೋತ್ಪಾದಕರು ಸೃಷ್ಟಿಯಾಗಿದ್ದಾರೆ, ಕಟ್ಟರ್‌ಪಂಥೀಯ ವಹಾಬಿಗಳು ತಲೆಯೆತ್ತಿದ್ದಾರೆ. ಕಾಲದ ಜತೆ ಹೆಜ್ಜೆ ಹಾಕಬೇಕೆನ್ನುವ ಪ್ರೊಟೆಸ್ಟೆಂಟಿಸಂ ಒಂದು ಕಡೆಯಾದರೆ, ಮೂಲ ಬೈಬಲ್‌ನಲ್ಲಿ ಇರುವಂತೆಯೇ ನಡೆದುಕೊಳ್ಳಬೇಕೆನ್ನುವ “Apocrypha bible” ವಾದಿಗಳಿದ್ದಾರೆ. ಇನ್ನು ಮಂಗಳಯಾನಕ್ಕೆ ಮೊದಲು ತಿರುಪತಿ ದೇವಾಲಯಕ್ಕೆ ತೆರಳಿ ನಿರ್ವಿಘ್ನವಾಗಿ ಉಡಾವಣೆಯಾಗಲಿ ಎಂದು ಇಸ್ರೋ ಮುಖ್ಯಸ್ಥ ರಾಧಾಕೃಷ್ಣನ್ ಪ್ರಾರ್ಥಿಸಿ ನಾಲ್ಕು ದಿನಗಳಾಗಿಲ್ಲ. ವಿಶ್ವವಿಖ್ಯಾತ ಗಣಿತ ಶಾಸ್ತ್ರಜ್ಞರಾದ ಜಿ.ಎಚ್. ಹಾರ್ಡಿ ಕಟ್ಟಾ ನಿರೀಶ್ವರವಾದಿಯಾಗಿದ್ದರೆ, ಅವರ ಸ್ನೇಹಿತ ಹಾಗೂ ವಿಶ್ವವಿಖ್ಯಾತ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಆ ದೇವಿಯೇ ನನ್ನ ಮೂಲಕ ಗಣಿತದ ಸೂತ್ರಗಳನ್ನು ಬರೆಸುತ್ತಿದ್ದಾಳೆ ಎಂದು ನಂಬಿದ್ದರು. ನನಗೆ ಸಾವಿನ ಅನುಭವವಾಯಿತು, ನನ್ನ ಸಾವನ್ನು ನಾನೇ ನೋಡಿದೆ ಎನ್ನುವ ಪ್ಯಾರಾ ಸೈಕಾಲಜಿಯನ್ನು ಇಂದು ನಾವು ಕಾಣುತ್ತಿದ್ದೇವೆ. ಅಲೋಪತಿಯ ವ್ಯಾಪ್ತಿಗೇ ನಿಲುಕದ್ದನ್ನೂ ಗುಣಪಡಿಸುತ್ತಿರುವ ಆಲ್ಟರ್ನೇಟಿವ್ ಮೆಡಿಸಿನ್‌ಗಳಾದ ಪ್ರಾಣಿಕ್ ಹೀಲಿಂಗ್, ರೇಕಿ, ಮ್ಯಾಗ್ನೆಟಿಕ್ ಥೆರಪಿ, ಆಕ್ಯುಪಂಕ್ಚರ್, ಆಕ್ಯುಪ್ರೆಷರ್‌ಗಳು ಬಂದಿವೆ. ನಮ್ಮ ಎಷ್ಟೋ ಹಿಂದು ನಂಬಿಕೆ, ಆಚರಣೆಗಳ ಹಿಂದೆಯೂ ವೈಜ್ಞಾನಿಕ ಕಾರಣಗಳಿವೆ. ಅದಿರಲಿ, ಇದೇನಿದು Guineapig  (ಗಿನಿಪಿಗ್)? ಹೊಸ ಔಷಧಗಳ ಪ್ರಯೋಗವನ್ನು ಪ್ರಾಣಿಗಳ ಮೇಲೆಯೇ ಮಾಡುವುದೇಕೆ? ಮನುಷ್ಯ ಮೇಲು ಎಂಬ ಭಾವನೆ ವಿಜ್ಞಾನಿಗಳಿಗೂ ಇದೆ ಅಲ್ಲವೆ? ಇದೂ ಮೂಢನಂಬಿಕೆಯಲ್ಲವೆ? ಮುಖ್ಯಮಂತ್ರಿಗಳೇ, ಪ್ರತಿಯೊಂದು ಧರ್ಮಕ್ಕೂ, ಜನರಿಗೂ ಅವರದ್ದೇ ಪಾವಿತ್ರ್ಯ, ನಂಬುಗೆ ಇರುತ್ತವೆ. ನಂಬಿಕೆಗಳು ಅಹೋರಾತ್ರಿ ಸೃಷ್ಟಿಯಾಗುವುದಿಲ್ಲ. ಕಿಡಿಗೇಡಿ ಸಾಹಿತಿಗಳನ್ನು ಸೇರಿಸಿಕೊಂಡು ಇಲ್ಲ ಸಲ್ಲದ ವಿಚಾರಕ್ಕೆ ಕೈಹಾಕಬೇಡಿ. ಡೂಸ್ ಅಂಡ್ ಡೋಂಟ್ಸ್ ಜನ ಮಾಡಿಕೊಳ್ಳುತ್ತಾರೆ. ಜನರ ಯಾವುದಾದರೂ ಆಚರಣೆಗಳಿಂದ ಸಮಾಜಕ್ಕೆ ತೊಂದರೆಯಾಗುತ್ತಿದ್ದರೆ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದ್ದರೆ ಸರ್ಕಾರ ಮಧ್ಯಪ್ರವೇಶಿಸಬೇಕು ಅಷ್ಟೇ. ಸಾಕ್ಷರತೆ, ತಿಳಿವಳಿಕೆ ಹೆಚ್ಚಾದಂತೆ ಹಿಂದುಗಳು, ಕ್ರೈಸ್ತರು, ಮುಸಲ್ಮಾನರಲ್ಲೂ ಬದಲಾವಣೆಗಳಾಗಿವೆ. ಜನರಿಗೆ ಶಿಕ್ಷಣ ಕೊಡಿ ಸ್ವಾಮಿ. ನೂರಕ್ಕೆ 100ರಷ್ಟು ಸಾಕ್ಷರತೆ ತನ್ನಿ. ಅದು ಸರ್ಕಾರ ಮಾಡಬೇಕಾದ ಕೆಲಸ. ಬೆತ್ತಲೆ ಸೇವೆ ನಿಷೇಧ ಮಾಡುವುದರ ಜೊತೆಗೆ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ಜನರಿಗೆ ಸಂಡಾಸಿಗೆ ಹೋಗಲು ಶೌಚಾಲಯ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿಕೊಡಿ. ಇಲ್ಲವಾದಲ್ಲಿ ಶೌಚದ ನೆಪದಲ್ಲಿ ಅವರು ನಿತ್ಯ ಬೆತ್ತಲೆ ಸೇವೆಮಾಡಬೇಕಾಗುತ್ತದೆ! ನಿಮ್ಮ ಬರಗೂರು ರಾಮಚಂದ್ರಪ್ಪನವರನ್ನು ಕೇಳಿ, ಅವರ ಸಿನಿಮಾಗಳ ಪ್ರಾರಂಭಕ್ಕೆ ಮುನ್ನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವುದಿಲ್ಲವೆ? ನಿಮ್ಮ ಸಾಹಿತಿ ಹಿಂಬಾಲಕರು, ದೇಶಿಯತೇ(ನೇಟಿವಿಟಿ), ಜಾನಪದ ಉಳಿಯಬೇಕು ಎನ್ನುತ್ತಾರೆ. ಅವು ನಿಂತಿರುವುದೇ ನಂಬಿಕೆ, ಆಚರಣೆಗಳ ಮೇಲೆ. ಬರಗೂರರಿಗೆ ಬಹಳ ಇಷ್ಟವಾಗುವ ಹಾಗೂ ಮೆಚ್ಚುವ ರಾಜ್‌ಕುಮಾರ್ ನಟಿಸಿರುವ ಎಷ್ಟು ಸಿನಿಮಾಗಳಲ್ಲಿ ಪವಾಡ, ದೈವೀಕೃಪೆ, ರಕ್ಷಣೆ ಇಲ್ಲ ಹೇಳಿ? ಆ ಚಿತ್ರಗಳನ್ನೇಕೆ ಮೌಢ್ಯವನ್ನು ಬಿತ್ತುತ್ತಿವೆ ಎಂದು ವಿರೋಧಿಸಿರಲಿಲ್ಲ? ಕಾರ್ಲ್ ಮಾರ್ಕ್ಸ್, ಲೆನಿನ್, ನೆಹರು ಹೇಳಿದ್ದೇ ಸರಿ ಎಂದು ನಂಬಿ ಕುಳಿತಿರುವ ಇವರೇ ದೊಡ್ಡ ಮೂಢರು. ಇಷ್ಟಕ್ಕೂ ಮಾರ್ಕ್ಸ್‌ವಾದಕ್ಕೆ ನೇತುಹಾಕಿಕೊಂಡ ಸೋವಿಯತ್ ರಷ್ಯಾ ಸಿಡಿದು ಚೂರಾಗಲಿಲ್ಲವೆ? ಅದಿರಲಿ, ಡಾ. ಸಿದ್ದಲಿಂಗಯ್ಯ, ಡಾ. ಮರುಳಸಿದ್ದಪ್ಪ, ಜಿ. ರಾಮಕೃಷ್ಣರನ್ನು ಇನ್ನೂ “ಸಾಹಿತಿ”ಗಳೆಂದು, “ಚಿಂತಕರೆಂದು” ನಂಬಿಕೊಂಡಿದ್ದೀರಲ್ಲಾ ಇದಕ್ಕಿಂತ ದೊಡ್ಡ “ಮೂಢನಂಬಿಕೆ” ಯಾವುದಿದೆ ಸಿದ್ದರಾಮಯ್ಯನವರೇ? ಇವರು ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಬರೆದ ಹಾಗೂ ಜನಮೆಚ್ಚುಗೆಗೆ ಪಾತ್ರವಾದ ಒಂದು ಕೃತಿಯನ್ನು, ಸಮಾಜಕ್ಕೆ ಲಾಭವಾದ ಇವರ ಒಂದು ಚಿಂತನೆಯನ್ನು ದಯವಿಟ್ಟು ಉದಾಹರಿಸುತ್ತೀರಾ? ಮುಖ್ಯಮಂತ್ರಿಗಳೇ,  ನಿಮ್ಮ “ಮೂಢನಂಬಿಕೆ”ಯಿಂದ ಮೊದಲು ಹೊರಬಂದರೆ ನಿಮ್ಮ ಪಕ್ಷದಲ್ಲೇ ಇರುವ ಜ್ಞಾನಿಗಳಾದ, ಸಮಾಜದ ಸಂವೇದನೆಗಳನ್ನು ಅರಿತುಕೊಂಡಿರುವ ಡಾ. ಪರಮೇಶ್ವರ, ಬಿ.ಎಲ್. ಶಂಕರ್, ಡಾ. ಮಹಾದೇವಪ್ಪ, ವಿ.ಆರ್. ಸುದರ್ಶನ್‌ರು ಕಾಣುತ್ತಾರೆ. ಅವರಂಥವರ ಸಲಹೆ ಪಡೆದರೆ ಇಂಥ ಅನಾಹುತ ತಪ್ಪುತ್ತದೆ.ಅಲ್ಲ, ದಲಿತ ದೌರ್ಜನ್ಯ ತಡೆಯಂತೆ, ಈ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಕಾಯಿದೆ ಕೂಡಾ ದುರುಪಯೋಗವಾಗುವುದಿಲ್ಲ ಎಂದು ಹೇಗೆ ಹೇಳಲು ಸಾಧ್ಯ? ನಿಮ್ಮ ಮನೆ ಮುಂದೆ ನೀವೇ ನಿಂಬೆಹಣ್ಣು, ಕುಂಕುಮ ಹಾಕಿಕೊಂಡು ಇನ್ಯಾರದ್ದೋ ವಿರುದ್ಧ ಕೇಸು ಹಾಕಿದರೆ ಗತಿಯೇನು? ಈ ಬಗ್ಗೆ ಯೋಚಿಸಿದ್ದೀರಾ? ಶಾಲೆಗಳಲ್ಲಿ ಪೂಜೆ ಮಾಡಬಾರದು ಎಂಬ ನಿರ್ಬಂಧದ ಹಿಂದಿರುವ ಮನಸ್ಥಿತಿ ಏನು ಅಂತ ಬಿಡಿಸಿಹೇಳುತ್ತೀರಾ? ಪೂಜೆಗೂ ಮೌಢ್ಯಕ್ಕೂ ಏನು ಸಂಬಂಧ? ಅಥವಾ ನಿಮ್ಮ ಸೆಕ್ಯುಲರ್ ಅಜೆಂಡಾ ಇಂಥ ಯೋಚನೆಗಳನ್ನು ಸೃಷ್ಟಿಸುತ್ತಿದೆಯೇ? 2005, ಜನವರಿಯಲ್ಲಿ ಬೆನ್ನಿ ಹಿನ್ ಎಂಬ ಮೌಢ್ಯದ ಜಾಗತಿಕ ವ್ಯಾಪಾರಿ ಹಾಗೂ ಸೋಗಲಾಡಿಗೆ ಅರಮನೆ ಮೈದಾನದಲ್ಲಿ ಆತಿಥ್ಯ ಕೊಟ್ಟಿದ್ದ ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ಮೂಢನಂಬಿಕೆಗಳ ಬಗ್ಗೆ ಮಾತನಾಡುವ, ನಿಷೇಧಿಸುವ ನೈತಿಕ ಹಕ್ಕಿದೆಯೇ, ಮೊದಲು ಹೇಳಿ? ಕೊನೆಯದಾಗಿ, ಸಿದ್ದರಾಮಯ್ಯನವರೇ ನಿಮ್ಮ ಮುಂದೆ ಮಾಡಲು ಬೆಟ್ಟದಷ್ಟು ಕೆಲಸಗಳಿವೆ, ಜವಾಬ್ದಾರಿಗಳಿವೆ. ನಿಮ್ಮನ್ನು ಜನ ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಿರುವುದು ನೀವು ಪ್ರಗತಿಪರರು ಎಂಬ ಕಾರಣಕ್ಕಲ್ಲ ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ಆಗ ಪಡಪೋಶಿ ಸಾಹಿತಿಗಳು, ಚಿಂತಕರ ಕಿಡಿಗೇಡಿತನಕ್ಕೆ ನಿಮ್ಮ ಸರ್ಕಾರ ಹಾಗೂ ರಾಜ್ಯದ ಆಡಳಿತ ಬಲಿಯಾಗುವುದು ತಪ್ಪುತ್ತದೆ.

120 Responses to “ಇದೇನು ವಿಧೇಯಕವೋ, ಹಿಂದು ನಂಬಿಕೆಗಳನ್ನು ಒಡೆವ ಕುತಂತ್ರವೋ?!”

  1. Sharath Chandra says:

    Pratap Anna!What a wonderful article,just mezmerized by your clarity of thought !

  2. shobha . patil. says:

    chennagilla.

  3. Vasanth says:

    Sir i am also thought about that what i am think you right an artical so thank you sir allway i spport your knowledge thoghts

  4. Amrith Mayya says:

    ಪ್ರತಾಪ್ ಸಿಂಹ ರವರೆ ನಿಮ್ಮ ಆರ್ಟಿಕಲ್ ಸರಿಯಾದ ಸಮಯ ದಲ್ಲಿ ಬಂದಿದೆ …. ಈ ಕಾಂಗ್ರೆಸ್ ನವರಿಗೆ ಬರಿ ಹಿಂದೂ ಗಳನ್ನೇ ಟಾರ್ಗೆಟ್ ಮಾಡಿ ಅವರ ಮೇಲೆ ಏನೆಲ್ಲಾ ಪ್ರಯೋಗೋ ಮಾಡಬಹುದೋ ಅದೆಲ್ಲ ಮಾಡುತಿದ್ದಾರೆ . ಅಂಥಹ ಕಾಯಿದೆ ಬರುವುದೇ ಆದರೆ ಅದು ಯಲ್ಲಾ ಧರ್ಮಕ್ಕೂ ಮೀಸಲಾಗಿರಬೇಕು . ಯಲ್ಲ ಧರ್ಮದಲ್ಲಿಯೂ ಬೇಕಾದಷ್ಟು ಮೂಢ ನಂಬಿಕೆ ಗಳಿವೆ ಅದನ್ನು ಮೊದಲು ಸರಿಮಾಡಲಿ . ಅದರಲ್ಲೂ ಅಲ್ಪ ಸಂಕ್ಯಾಥರಿಗೆ ಜಾಸ್ತಿ ಮೀಸಲು ಇರುತ್ತಲ್ಲ ಹಾಗೆ ಇದರಲ್ಲೂ ಅವರಿಗೆ ಮೀಸಲಾತಿ ಕೊಡಲಿ . ಶಾದಿ ಭಾಗ್ಯ ಅಂತ ಬರಿ ಅಲ್ಪಸಂಖ್ಯಾತರಿಗೆ ಬಡ ಹಿಂದೂ ಗಳು ಸಾಯಬೇಕು ಅದೇ ಉದ್ದೇಶ . ಅಲ್ಪಸಂಖ್ಯಾತಾರೆ ಇದನ್ನ ಮಾಡಿದರೆ ಬೇಜಾರಿಲ್ಲ ಇದನ್ನು ಮಾಡುವವರು ಹಿಂಧು ಧರ್ಮದಲ್ಲೇ ಹುಟ್ಟಿದ ಬುದ್ಹಿಜೀವಿಗಳು ಅದನ್ನ ನೆನಸಿ ಕೊಂಡರೆ ಬಾಯಲ್ಲಿ ಬರಿ ಸಂಸ್ಕ್ರುತನೆ ಬರ್ತೆ ಬಯ್ಯೋಕೆ . ಅವರಿಗೆ ಏನ್ ಹೇಳಿದ್ರು ಅಸ್ಟೆ ನಾಯಿ ಬಾಲ ದೊಂಕೆ ಯಾವತ್ಹಿದ್ರು . ಸಿದ್ದರಾಮಯ್ಯ ಕದ್ದು ಮುಚ್ಚಿ ಆಫೀಸ್ ನಲ್ಲಿ ಪೂಜೆ ಮಾಡ್ಸೋದು ಯಾರಿಗೂ ಗೊತ್ತಾಗಲ್ಲ . ಅದರಲ್ಲೂ ಅವರು ಪೂಜೆ ಮಾಡಲು ಪಾದ್ರಿಗಳನ್ನೋ ಅಥವಾ ಮುಸ್ಲಿಮರನ್ನೂ ಕರೆಸುವುದಿಲ್ಲ ಅವರಿಗೆ ಹಿಂಧು ಗಳೇ ಆಗಬೇಕು . ಬೇರೆವ್ಯೋರೆದ್ರು ಶೋ ಮಾಡೋದ್ ಅಸ್ಟೆ .

    ಬೇಗ ಪ್ರಳಯ ಆದ್ರೆ ಸಾಕು …..

  5. Hemant Shetty says:

    Well Said.

  6. Mahantesh says:

    Nice Article..

  7. Rahul says:

    Very good article. I support some more article of this kind. No one has power to speak about our dharma. Even in future you shloud not love anyone because that also stands on trust.

  8. ಮೂಢರು ಮೌಢ್ಯವನ್ನು ಹೋಗಲಾಡಿಸಿ ಎಂದಾಗ ಮೂಢರನ್ನೇ ಹೋಗಲಾಡಿಸುವುದೇ ಉತ್ತಮ. ದೇವರ ಹೆಸರನ್ನೇ ಹೊಂದಿರುವ ಮುಖ್ಯಮಂತ್ರಿಗಳು ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆಯೇ?
    ಮೊನ್ನೆಮೊನ್ನೆಯಷ್ಟೇ ಸಾಧುವೊಬ್ಬನ ಕನಸಿಗೆ ಕೋಟಿಗಳನ್ನು ವ್ಯಯಿಸಿ ಎಲ್ಲರ ಬಾಯಿಗೆ ಮಣ್ಣು ಹಾಕಿದಾಗ ಈ ಎಲ್ಲ ಸ್ವಾಮಿ(ನಿ)ಭಕ್ತರು ಎಲ್ಲಿ ಮಲಗಿ ಕನಸು ಕಾಣುತ್ತಿದ್ದರು?
    “ಶಾದಿ ಭಾಗ್ಯ” ಯೋಜನೆಯ ಮೂಲಕ ಇನ್ನಷ್ಟು ಮತದಾರರನ್ನು ಸೃಷ್ಟಿಸುತ್ತಿದೆಯೇ ಈ ಘನಸರ್ಕಾರ?

  9. chandra bp says:

    if siddaramayya secularism: He-siddaramyya

    why he has to wear muslim cap @ muslim function.

    If he cuts the ribbon @ some inauguration function, dont he thinks ribbon is wasted.

    if he not believe in anything thats fine why he will catch hold of hindu’s ritual only.

    as per siddu: shake hands, Namaskar , good morning will become blind belief in future.

  10. Subramanya says:

    Rightly said..this thing is not expected from siddaramayyah..there is lot of work to do from government not cheap vote bonk tricks

  11. Wonderful post 🙂 It is really fatal action what the Govt is planning to do.

  12. adarsh nayak says:

    solid 1……

  13. shriram v dongre says:

    ಒಳ್ಳೆಯ ಲೇಖನ ಧನ್ಯವಾದಗಳು

  14. Narendra Prabhu Gurusiddappa says:

    ವೈದಿಕವಾಗಲಿ ಆಗಮಿಕವಾಗಲಿ, ಸಂಸ್ಕಾರಗಳೆಲ್ಲವೋ ಒಂದೊಂದು ವೈಜ್ಞಾನಿಕ ಮೌಲ್ಯವುಳ್ಳ ನಡತೆಗಳೇ.

    ಆಚರಣೆಗಳ ಒಳಮರ್ಮಗಳನ್ನ ಆರಾಯ್ದು ಅರಿತು ಜನರಿಗೆ ಮನವರಿಕೆ ಮಾಡಿಕೊಟ್ಟು ಮೆರೆಸಬೇಕಾದವರೇ ಹೀಗೆ ಇಷ್ಟು ಸಂಕುಚಿತತೆಗೆ ಸಿಲುಕಿ ಯಾರನ್ನೋ ಒಲಿಸಿ ಓಲೈಸಿಕೊಳ್ಳಲೋಸುಗವೇ ತಂದಿರುವ ವಿಧೇಯಕದಂತಿದೆ.

    ಯಾವುದಾದರು ಅಂಗದಲ್ಲಿ ನೋವಾಗುತ್ತಿದ್ದರೆ ಅಂಗವನ್ನೇ ಕಿತ್ತೆಸೆಯುವುದು ಎಷ್ಟು ಸಾಧು?, ಮದ್ದು ಬಳಸಿ ಅಂಗಸೌಖ್ಯಕ್ಕೆ ಪ್ರಯತ್ನಿಸಬೇಕೇ ಹೊರತು ಬೇರೆಯವರಿಂದ ಕನಿಕರಗಳಿಸಲೋಸುಗ ಅಂಗಗಳನ್ನು ಕತ್ತರಿಸುವುದಲ್ಲ!.

    ಧರ್ಮ ಧರಿಸಿದವನ ಸ್ವಯಾರ್ಜಿತ ಆಸ್ತಿ, ಅದರ ಮೇಲೆ ಬೇರೆ ಯಾರದ್ದು ಹಕ್ಕಿರುವುದಿಲ್ಲ. ಹಾಗೊಂದು ವೇಳೆ ಸರ್ಕಾರ ಈ ಆತ್ಮಾಭಿಮಾನಗೇಡಿ ವಿಧೇಯಕಕ್ಕೆ ಹೂಂಕರಿಸಿದಲ್ಲಿ (ಅದು ಅಸಾಧ್ಯದ ಮಾತಾದರೂ!), ಅದಕ್ಕೆ ಮರ್ಯಾದೆ ಎಷ್ಟರ ಮಟ್ಟಕ್ಕೆ ಸಿಗುತ್ತದೆಂಬುದು ನಗೆಪಾಟಲ ಸಂಗತಿಯಂತೂ ಶತಸಿದ್ಧ, ಈ ನಾಚಿಕೆಗೇದಿತನದ ಮೇಲೆ ಮೂಡುವ ಮೂದಲಿಕೆಗಳಿಗೆ ನಾನಂತೂ ಕಾದುಕುಳಿತಿರುವೆ ;).

    ತಂದಿರುವ ವಿಧೇಯಕವನ್ನು ಅಣಿಗೊಳಿಸಿದ ಸಮಿತಿಗೆ ನನ್ನದೊಂದು ಧಿಕ್!

  15. ಕೇಂದ್ರ ಸರ್ಕಾರ ಹಿಂದುಗಳನ್ನು ಮತ್ತು ಸನಾತನ ಧರ್ಮವನ್ನು ಅಲ್ಪಸಂಖ್ಯಾತರ ಬಾಯಿಗೆ ದೂಡುತ್ತಿವೆ.
    ಉದಾ: Prevention of Communal and Targeted Voilence ( Access to Justice and reparation) Bill – 2011 ಈಗ ಮೂಢನಂಬಿಕೆ, ಕಂದಾಚಾರಗಳ ಪ್ರತಿಬಂಧಕ ವಿಧೇಯಕ ಮೂಲಕ ಹಿಂದುಗಳ ಧರ್ಮ, ಶ್ರದ್ದೆಗಳನ್ನು ಅಣಕಿಸುತ್ತಿದೆ.
    ಕಾಂಗ್ರೆಸ್ ಭಾರತ ವಿರೋಧಿಯಾಗಿದೆ.
    ಕಾಂಗ್ರೆಸ್ ಸರ್ಕಾರದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಇವರು ಭಾರತವನ್ನು ಭಾರತವಾಗಿಡಲು ಬಿಡುವುದಿಲ್ಲ ಅದ್ದಾಕ್ಕಾಗಿ ನಾವು ಮತದಾನದ ದಿನ ಉತ್ತರಿಸಬೇಕಾಗಿದೆ.

  16. MANJUNATH says:

    GOOD ONE SIR AS ALWAYS. SEND A COPY OF THIS TO Mr.SIDDARAMAIAH, HIGHLIGHTING THE LAST PARAGRAPH FOR HIS IMMEDIATE UNDERSTANDING. I DONOT THING HE WOULD LISTEN TO WISDOM, IN THESE TIMES OF ELECTIONS.

  17. pramod says:

    ಆಹಾ.. ಅತ್ಯಂತ ಪ್ರಭುದ್ದ ಲೇಖನ ಪ್ರತಾಪ್ ಅವರೇ…

    ಈ ನಮ್ಮ ಮುಖ್ಯ ಮಂತ್ರಿಯವರಿಗೆ ಮಾಡ ಬೇಕಾದದ್ದು ಬೇಕಾದಷ್ಟಿದೆ.. ಆದರೊ ತಮ್ಮ ಮೂಗನ್ನು ಹಿಂದೊ ಸಂಪ್ರದಾಯದಲ್ಲಿ ತೋರಿಸುತ್ತಾರೆ.. ಅಲ್ಲಾ .. ಈ ಕಾಂಗ್ರೆಸ್ ನವರಿಗೆ ಹಿಂದುಗಳೆಂದರೆ ಏಕೆ ಇಷ್ಟು ನಿರಾಸಕ್ತಿ… ಯಾವಾಗಲು ಬಿ.ಜೆ.ಪಿ ಸರ್ಕಾರ ಕೈಗೊಂಡ ಯೋಜನೆಗಳಿಗೆ ತದ್ವಿರುದ್ದವಾಗಿ ಇವರು ಯೋಜನೆಗಳನ್ನು ರೂಪಿಸುತ್ತಾರೆ.. ಅಲ್ಲವೇ??

  18. DR umesh rao says:

    u r great merabharat mahan agiruvudu nimmanthaha mahan vyakthigalind hats of to u sir dr umeshrao

  19. bhavana says:

    seriously..khangress bai vote ge ee haa kantri kelasa madta ide … module khangress na oddis beku naavu

  20. Sathish says:

    I don’t know what this stupid congress govt going to do…….

  21. Sathwik says:

    Wonderfully written sir! Yavella prashnegalu janarellara manassinalli eluttiveyo avellavannoo barediddiri.

  22. Chidanand says:

    ಒಳ್ಳೆಯ ಲೇಖನ.

  23. Sudarshan b r says:

    Sir,
    very brisk comment, but y r they targeting hindus treditions & cultural practices, r they r not born to Hindu Parents.
    if they have guts let them modify the law to allow people belong to all religion to enter mosque & ban marriage divorce law(3times they say talak , then marriage is broken)which is practiced by muslimes even today, also implement Single women for men marriage act among Muslim community.

  24. Vishwanath Sheeri Gadag says:

    100% Right,
    This issue is only MP elections Vote Bank

  25. Punith Kumar G says:

    Nimma idhuvaregina lekhanagaLali nange idhe atuthamavagi kaNisthaidhe.

  26. niranjan adiga says:

    great article thanx for raising voice for us (hindus)

  27. sachin jain says:

    ultimate slap to congress government…verry nice article

  28. k ravichandra acharya says:

    alla pratap simha avre aa karadu masoode maado committee alli iro budhijeevigalu bruhat saahitigalu annorella are hucharallave ??????/
    bekaadaddannu bittu bedavaadaddanne maado ivarugalannu innuu jeevanta bittirode tappu alve?

  29. Srinivas says:

    This is epic:
    “ಇಲ್ಲವಾದಲ್ಲಿ ಶೌಚದ ನೆಪದಲ್ಲಿ ಅವರು ನಿತ್ಯ ಬೆತ್ತಲೆ ಸೇವೆಮಾಡಬೇಕಾಗುತ್ತದೆ!”

  30. chandru puttaswamy says:

    I too agree with your words. For the sake of vote, position and support of a few, people giving bad statements about hinduism beliefs

  31. Raghavendra says:

    Congrats pratap….. Fantastic work and article, I don’t think Mr CM is able to answer to you. He is just trying to create sensational news and wants to prove he has power and he is CM.

  32. manju says:

    nice article sir…
    this bill is the stupidity of siddu…

  33. Manju Vaibhav says:

    Super Prathap!!!!

    E munde maklige mettige sagnihachhi hodibeku…

    Namm deshavannu halumadlikke Pakistana athava Inyavudoo deshadinda yaaru barabekilla, e sogaladi laddi jeevigale saaku.

    Ishtakku e laddijeevigelige idaralli nambike illa andre avaru follow madodu beda.

    Mangalana moola mantrada aadarada mele NASA mangalayaana shuru maadiddu.

  34. hari shankar says:

    ಅದ್ಬುತವಾದ ಬರವಣಿಗೆ.. ನಿಮ್ಮ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ಬೇಗ ಉತ್ತರಿಸಲಿ ಇಲ್ಲದಿದ್ದರೇ ರಾಜಿನಾಮೆ ಕೊಟ್ಟು ಕರ್ನಾಟಕ ಉಳಿಸಲಿ

  35. Jeevan vasudev says:

    Really good one.. Keep firing with ur pen..

  36. Pradeep says:

    sir, this statute is entirely unconstitutional.. preamble of indian constitution says “LIBERTY, of thought, expression, belief, faith and worship..” its my fundamental right to believe in something.. govt cannot stop me from doing it. if it does, it is ultra virus the constitution.

    I have right of belief, gvt has no business to decide whether it is blind or not, unless my belief is against the interest of general public , defamatory, or interferes with somebody’s fundamental right or security of state..

  37. Sachin says:

    ಕರೆಕ್ಟ್ ಸರ್, ಇವ್ವ್ರ ಸೆಕುಲರಿಸಮ್ ತೋರಿಸಲಿಕ್ಕೆ ನಮ್ಮ ಹಿಂದೂ ಆಚರಣೆಗಳಿಗೆ ಪೆಟು ಕೂಟ್ರು. ನಮ್ಮ ಸಂಸ್ಕೃತಿ ಮೇಲೆ ಬೇರೆಯವರಿಂದ ದಾಳಿ ಆಗುತ್ತಿಲ್ಲ ಬದಲಾಗಿ ನಮ್ಮವರಿಂದಲೇ ತೊಂದರೆ ಆಗುತಿದ್ದೆ. ಆ ದೇವರೇ ಈವರಿಗೆ ಬುದ್ದಿ ಕೊಡ್ಬೇಕು

  38. Seshagiri Rao Kulkarni says:

    Tumba vicharatmaka baraha! Sidharamayaanavaru mukhya matri adaagalinda, eddu kaanuttiruvadu enendare, avaru tamma abhiprayagalannu janabhiprayagalannagi bhavisuttiruvadu. idakke pratyaksha udaharaneye ee ‘Moodhanambike Pratibhandhaka Kanoonu’. Inthaha vyaktigatavaada samajika sandeha/samasyagalige hechchu samaya kottu, mukhyamantriyaagi taavu maadabekada jana hita, pragatipara kaaryagalalli aasakti kadime torisuttiruvadu namma kannada janateya duraadrushta. Siddaramayyanavaru intaha sankuchita bhavanegalinda horabandu aalochane madabekaadaddu atyanta avasara.

  39. Santhsoh Nag says:

    Very good article.
    He is completely useless CM, he can’t resolve small Sand issue in his own constiutency, how can you expect him to rule whole state.
    it is the fate of people of karnataka.

  40. LAXMIAPTHI says:

    KINDLY ARRANGE DEBATE ON THIS ISSUE IN SUVARNA NEWS ATLEAST 2 DAYS

  41. Bheema says:

    Tumba Chennagi heliddira sir. Navu e politician galanna Kocchi hakabeku. Manukulada, prakrutiya moulyavannariyada moorkaru

  42. Ravi says:

    Where it has mentioned that the rule is supposed to be followed by Hindus only?

  43. Shilpa Hidakal says:

    Really it’s awesome article sir..thank u for making aware for our society..

  44. Suresha says:

    Rudrakhi mani Japamaale dharisuvudu aparadhavaadare… Karnatakadalliruva ella shiva haagu vishnu devalayagala gathi enu chinthakare haagu vicharavaadigale?

    Rudrakshi dharisiruva devarige pooje nilisbeko athava… shiva rudrakshiyannu tegedu barovaregu….. devalayada bagilu hakbeko……???

    Andahaage chappali shoe annu horage bittu hogodu kuda moudhya vadare shirt, pant hagu slipper sametha devasthanakke hogabahuda bedava????

  45. Sudhir says:

    ಆತ್ಮೀಯ ಪ್ರತಾಪ್ ,
    ಇದು ಕಾಂಗ್ರೆಸ್ ರಾಜ್ಯಭಾರ , ಇಲ್ಲಿ ಏನು ಮಾಡಿದ್ರು ತಪ್ಪಿಲ್ಲ , ಹಗರಣ ಗಳ ಮಂತ್ರಿಗಳು ಇದ್ರೂ ಅವರನ್ನು ಸಂಪುಟದಿಂದ ಕೈ ಬಿಡಲ್ಲ . ಇಲ್ಲಿ ಯಾರನ್ನು ದೂಶಿಸೋಣ , ಇವರನ್ನು ಆಯ್ಕೆ ಮಾಡಿದ ಜನಗಳಿಗೋ, ಅಥವಾ ವೋಟಿಂಗ್ ಮಷೀನ್ ಗೋ .
    ಒಂದು ಮಾತು ಮಾತ್ರ ಸತ್ಯ , ಕಾಂಗ್ರೆಸ್ ನದ್ದು , ವೋಟಿಂಗ್ ಮಷೀನ್ ಮಾಸದಲ್ಲಿ ಎತ್ತಿದ ಕೈ .

    ಇಲ್ಲಿ ದೇವಸ್ತಾನಕ್ಕೆ ಹೋಗಬಾರದು ಅನ್ನುತ್ತಾರಲ್ಲ ಮಾನ್ಯ ಮುಖ್ಯಮಂತ್ರಿಗಳು , ಮುಸ್ಲಿಂ ಹಬ್ಬದ ದಿನ ಎಲ್ಲ ಟೋಪಿ ಹಾಕಿಕೊಂಡು ಹೋಗಿ ಮಸ್ಜೀದ್ ನಲ್ಲಿ ನಮಸ್ಕಾರ ಹಾಕುತ್ತಾರೆ , ಇದು ಯಾವ ದೇವರ ಓಲೈಕೆ ಗೋ ಗೊತ್ತಿಲ್ಲ.
    ನಾನು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವನು , ಕಳೆದ ಚುನಾವಣೆಯಲ್ಲಿ ಪುತ್ತೂರು ಶಾಸಕಿ ಶಕುಂಥಳ ಶೆಟ್ಟಿ , ಜಯಗಳಿಸಿದಾಗ , ಅರಬ್ ರಾಷ್ಟ್ರದಲ್ಲಿರುವ ದಕ್ಷಿಣ ಕನ್ನಡದ ಮುಸ್ಲಿಂ ಎಲ್ಲ ಶುಭಾಶಯ ಪತ್ರ ವಿನಿಮಯ ಮಾಡಿಕೊಂಡಿದ್ದಾರೆ ಎಂದು ಕೇಳಿದ್ದೆ . ಇನ್ನೊಂದು ವಿಚಾರ ನಿಜವಾಗಲು ತಲೆ ಕೆಡಿಸಿಕೊಳ್ಳುವುದು , ಪುತ್ತೂರು ತಾಲೂಕ್ ಒಂದು ದಿನ ಸುತ್ತಾಡಿದರೆ ಗೊತ್ತಾಗುವುದು , ಇಲ್ಲಿ ಹಿಂದೂ ಗಳಿಗಿಂತ ಮುಸ್ಲಿಂ ಜನಸಂಖ್ಯೆ ಜಾಸ್ತಿ ಇದೆ , ಯಾವ ಬಸ್ ನಲ್ಲಿ ನೋಡಿದರು , ಯಾವ ಹೊತ್ತಿಗೂ ನೋಡಿದರು ಕನಿಷ್ಠ ೧೦ ಜನ ಮುಸ್ಲಿಂ ಜನ ಇರುತ್ತಾರೆ .
    ಇದು ನಮ್ಮ ದೇಶದ ಕಾನೂನು ವ್ಯವಸ್ಥೆಯ ದುರ್ಬಳಕೆಯಿಂದ ಆಗಿರುವಂಥದ್ದು , ಒಬ್ಬೊಬ್ಬರಿಗೆ 5 , 6 ಮಕ್ಕಳು .

  46. Keshav says:

    Kudos Pratap..Good one!! Loved the article..
    Our constitution was framed such that everyone should have freedom of religion and not freedom from religion..
    There is no need for us all to be alike and think the same way, neither do we need a common enemy to force us to come together and reach out to each other. If we allow ourselves and everyone else the freedom to fully individuate as spiritual beings in human form, there will be no need for us to be forced by worldly circumstances to take hands and stand together. Our souls will automatically want to flock together with unique patterns of our individual human expression..
    as they say.. Religion is like a pair of shoes…..Find one that fits for you, but don’t make me wear your shoes..

    We really need leader who think of society and country with broader horizon and vision of future..which unfortunately is hard to find 🙁

  47. Good Citizen says:

    Superbly Written !! Its a shame to Govt. Nobody has authority to intercept personal believes and Faith.

  48. mahesh says:

    Very well written article. Mr. CM should compulsorily read this & answer.

  49. Sharath says:

    Excellent Article. Shame on Such mind Sets.

  50. sureendra says:

    sir super article can i use this in our magazine with permision