Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇದೇನು ವಿಧೇಯಕವೋ, ಹಿಂದು ನಂಬಿಕೆಗಳನ್ನು ಒಡೆವ ಕುತಂತ್ರವೋ?!

ಇದೇನು ವಿಧೇಯಕವೋ, ಹಿಂದು ನಂಬಿಕೆಗಳನ್ನು ಒಡೆವ ಕುತಂತ್ರವೋ?!

“ಹೀಗಿದ್ದರು ಕುವೆಂಪು” ಎಂಬ ಸಣ್ಣ ಪುಸ್ತಕವಿದೆ. ಒಮ್ಮೆ ಕುವೆಂಪು ಹಾಗೂ ಅವರ ಶಿಷ್ಯ ಪ್ರಭುಶಂಕರ ಮೈಸೂರಿನ ಕುಕ್ಕರಹಳ್ಳಿ ಕೆರೆಯ ಬಳಿ ಕುಳಿತಿದ್ದರು. ಚಾಮುಂಡಿ ಬೆಟ್ಟಕ್ಕೆ ಹೋಗಿದ್ದ ಭಕ್ತರು ಸಮೀಪದಲ್ಲೇ ಹಾದುಹೋದರು. ಅವರ ತಲೆಯ ಮೇಲೆ ಪ್ರಸಾದವಾಗಿ ಕೊಟ್ಟಿದ್ದ ಹೂವನ್ನು ನೋಡಿ ಕುವೆಂಪು ಹೇಳಿದರು- “ಎಂಥಾ ಮೂಢರು ನಮ್ಮ ಜನ. ಈ ಕಾಲದಲ್ಲೂ ಹೀಗೆಲ್ಲಾ ಮಾಡುತ್ತಾರಲ್ಲಾ…”. ಆದರೆ ಪ್ರಭುಶಂಕರರು ಪ್ರತಿಕ್ರಿಯಿಸಲಿಲ್ಲ. ಮರುದಿನ ಮತ್ತೆ ಕುವೆಂಪು ಭೇಟಿಯಾಯಿತು. ಆಗ ಹೇಳಿದರು “ಚಾಮುಂಡಿ ಬೆಟ್ಟಕ್ಕೆ ಹೋಗಿ ಗುಡಿಯಲ್ಲಿ ಕೊಟ್ಟ ಹೂವನ್ನು ತಲೆಮೇಲೆ ಇಟ್ಟುಕೊಂಡು ಬರುವವರು ಮೂಢರು. ನಾವು ನೋಡಿ, ಸಂಜೆ ರಾಮಕೃಷ್ಣ ಆಶ್ರಮಕ್ಕೆ ಹೋಗಿ ರಾಮಕೃಷ್ಣ ಪರಮಹಂಸರು, ವಿವೇಕಾನಂದರ ಮೂರ್ತಿ ಮುಂದೆ ಕುಳಿತು ಅವರೇ ದೇವರೆಂದು ಧ್ಯಾನ ಮಾಡಿ ಬರುತ್ತೇವೆ! ಇದು ಮೌಢ್ಯವಲ್ಲವೆ?”.

ಸ್ವತಃ ಒಬ್ಬ ವಿಚಾರವಾದಿಯಾಗಿದ್ದ ಶ್ರೇಷ್ಠ ಸಾಹಿತಿ ಕುವೆಂಪು ಅವರೇ ತಮ್ಮ ಶಿಷ್ಯನ ಮಾತು ಕೇಳಿ ಅಂದು ದಂಗಾಗಿದ್ದರು!

ಹೌದು, ನಂಬಿಕೆ ಎನ್ನುವುದು ಜನರ ಖಾಸಗಿ ವಿಚಾರ. ನಂಬಿಕೆ ತರ್ಕಕ್ಕೆ ನಿಲುಕದ್ದು. ಈ ನಂಬಿಕೆ, ವಿಶ್ವಾಸಗಳು ಗೋಚರಿಸುವುದು ಆಚರಣೆಗಳಲ್ಲಿ. ನಾವು ಕಾರು ತಂದರೂ ಕುಂಬಳಕಾಯಿ ಒಡೆಯುತ್ತೇವೆ, ವೈಜ್ಞಾನಿಕ ಪ್ರಗತಿಯ ಅತ್ಯುನ್ನತ ಸಂಕೇತದಂತಿರುವ ಕಂಪ್ಯೂಟರ್ ತಂದರೂ ಪೂಜಿಸಿ ನಿಂಬೆಹಣ್ಣು ನಿವಾಳಿಸುತ್ತೇವೆ. ಇವೆಲ್ಲ ಜನರ ವೈಯಕ್ತಿಕ ವಿಷಯಗಳು. ಜನರ ದೈನಂದಿನ ಖಾಸಗಿ ವಿಚಾರಕ್ಕೂ ಸರ್ಕಾರಕ್ಕೂ ಏನು ಸಂಬಂಧ? ನಮಗೆ ಯಾವುದು ನಂಬಿಕೆ, ವಿಶ್ವಾಸವಾಗಿ ಕಾಣುತ್ತದೋ ಅದು ಕೆಲವರಿಗೆ ಮೌಢ್ಯವಾಗಿ ಕಾಣಬಹುದು. ಆದರೆ ಯಾವುದು ಮೌಢ್ಯ, ಮೂಢನಂಬಿಕೆ ಎಂದು ನಿರ್ಧರಿಸಬೇಕಾದವರು ಯಾರು? ಭಾನಾಮತಿ, ಬೆತ್ತಲೆ ಸೇವೆ, ಗೆಜ್ಜೆಪೂಜೆ, ನರಬಲಿ, ವಾಮಾಚಾರ, ವಶೀಕರಣ, ಯಕ್ಷಿಣಿ, ಪಂಕ್ತಿಭೇದ, ಮಡಿ-ಮೈಲಿಗೆಗಳ ನಿಷೇಧ ಹಾಗೂ ಶಿಕ್ಷೆಗೆ ಕಾಂಗ್ರೆಸ್ ಸರ್ಕಾರ ತರಲು ಹೊರಟಿರುವ ಕಾನೂನು ಸೀಮಿತವಾಗಿದ್ದರೆ ಯಾರೂ ತಕರಾರು ಎತ್ತುವ ಅಗತ್ಯವಿರಲಿಲ್ಲ. ಆದರೆ ಸರ್ಕಾರ ನೇಮಕ ಮಾಡಿದ್ದ ಸಮಿತಿಯಲ್ಲಿದ್ದ ಮಹಾಮೇಧಾವಿಗಳು ಸಿದ್ಧಪಡಿಸಿರುವ ಕರಡು ಈ ಅನಿಷ್ಟ ಪದ್ಧತಿಗಳಿಗೆ ಮಾತ್ರ ಸೀಮಿತವಾಗಿದೆಯೇ?

ಇಷ್ಟಕ್ಕೂ ಈ ವಿಚಾರವಾದಿಗಳ ಸಮಿತಿ ಮಾಡಿರುವ ಶಿಫಾರಸ್ಸು ಹಾಗೂ ಸರ್ಕಾರ ಜಾರಿಗೆ ತರಲು ಹೊರಟಿರುವುದೇನು ಅಂದುಕೊಂಡಿರಿ?

ಮಠಾಧೀಶರು, ಸನ್ಯಾಸಿಗಳ ಪಾದಪೂಜೆ ಮಾಡಬಾರದಂತೆ! ಸರ್ಕಾರಿ ಕಟ್ಟಡಗಳನ್ನು ಕಟ್ಟುವಾಗ ಗುದ್ದಲಿ ಪೂಜೆ ಮಾಡಬಾರದಂತೆ!! ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ವಾಸ್ತುಶಾಸ್ತ್ರ, ಕಾಲನಿರ್ಣಯಗಳನ್ನು ಪಿಡುಗುಗಳೆಂದು ಗುರುತಿಸಿ ಕಟ್ಟುನಿಟ್ಟಾಗಿ ಅವುಗಳನ್ನು ನಿಷೇಧಿಸಬೇಕಂತೆ. ಜಪಮಾಲೆ, ರುದ್ರಾಕ್ಷಿ, ಮಣಿಸರ, ತಾಯತ, ಹರಳುಗಳ ಮಾರಾಟ ಹಾಗೂ ಬಳಕೆ ಮಾಡಬಾರದಂತೆ. ದೇವಸ್ಥಾನಗಳಲ್ಲಿ ಪ್ರಾಣಿ ಬಲಿ ಮಾಡಬಾರದಂತೆ. ಜಾತ್ರೆ, ಕರಗ ಮಾಡುವ ಮೊದಲು ಕೇಳುವ “ದೈವ ಪ್ರಶ್ನೆ”ಯನ್ನು ಇನ್ನು ಮುಂದೆ ಕೇಳಬಾರದಂತೆ. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು ಮತ-ಮೌಢ್ಯ ಬಿತ್ತುವ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸ ಕರೆಯೊಯ್ಯಬಾರದಂತೆ!

ಇದೇನಿದು ಸ್ವಾಮಿ?

ಮೂಢನಂಬಿಕೆ, ಕಂದಾಚಾರಗಳ ಪ್ರತಿಬಂಧಕ ವಿಧೇಯಕವೋ? ಅಥವಾ ಇವುಗಳ ಸೋಗಿನಲ್ಲಿ ಹಿಂದು ನಂಬಿಕೆ, ಆಚರಣೆಗಳನ್ನು ನಾಶಮಾಡಲು ಹೂಡಿರುವ ತಂತ್ರವೋ? ನೀವು ಕರಡಿನಲ್ಲಿ ಏನು ಹೇಳಲು ಹೊರಟಿದ್ದೀರೋ, 19ನೇ ಶತಮಾನದಲ್ಲಿ ಮತಾಂತರ ಮಾಡಲು ಬಂದ ಪಾದ್ರಿಗಳು ಹಿಂದು ಧರ್ಮದ ಬಗ್ಗೆ ಹೇಳಿದ್ದೂ ಇದನ್ನೇ ಸ್ವಾಮಿ! ಇನ್ನೊಬ್ಬರದ್ದನ್ನು ಮೂಢನಂಬಿಕೆ, ತಮ್ಮದ್ದನ್ನು ಸೈಂಟಿಫಿಕ್ ಅನ್ನೋದು ಪಾದ್ರಿಗಳ ತಂತ್ರವಾಗಿತ್ತು. ನಿಮ್ಮ ಉದ್ದೇಶವೂ ಅದೇ ಆಗಿದೆಯೇನು? ಈಗ ಹೊರಗೆಡವಿರುವುದು ಕಾನೂನಲ್ಲ, ಕರಡು ಪ್ರತಿಯೇ ಆಗಿರಬಹುದು. ಆದರೆ ಆ ಕರಡಿನಲ್ಲಿ ಒಳಗೊಂಡಿರುವ ವಿಚಾರಗಳನ್ನು ನೋಡಿದರೆ ಸರ್ಕಾರದ ನಿಜವಾದ ಉದ್ದೇಶ, ಗುರಿ ಏನು ಎಂಬುದು ತಿಳಿಯುವುದಿಲ್ಲವೆ? ಒಂದು ವೇಳೆ, ಈ ಕರಡು ಕಾಯಿದೆಯಾದರೆ, ಇನ್ನು ಮುಂದೆ ಆಯುಧ ಪೂಜೆ ದಿನ ಪೋಲಿಸರು ತಮ್ಮ ಬಂದೂಕುಗಳಿಗೆ ಪೂಜೆ ಮಾಡುವುದಕ್ಕೂ, ಬಿಎಂಟಿಸಿ-ಕೆಎಸ್‌ಆರ್‌ಟಿಸಿ ಸಿಬ್ಬಂದಿ ವಾಹನವನ್ನು ಶೃಂಗರಿಸಿ ಪೂಜೆ ಸಲ್ಲಿಸುವುದಕ್ಕೂ, ಶಾಲೆಗಳಲ್ಲಿ ಶಾರದೆಯ ಪೂಜೆ ಮಾಡುವುದಕ್ಕೂ ಕುತ್ತು ಬರಲಿದೆ.

ಗುದ್ದಲಿ ಪೂಜೆ ಮಾಡಬಾರದು ಎನ್ನುತ್ತಾರಲ್ಲಾ ಇವರಿಗೆ ಗುದ್ದಲಿ ಪೂಜೆಯ ಮಹತ್ವವಾದರೂ ತಿಳಿದಿದೆಯೇ?

ಭೂಮಿಯನ್ನು ನಾವೇ ಹಣ ಕೊಟ್ಟು ಕೊಂಡರೂ, ಅಲ್ಲಿ ಮನೆ ಕಟ್ಟುವಾಗ ಸ್ಥಳಪೂಜೆ ಮಾಡುತ್ತೇವೆ. ಗುದ್ದಲಿಯ ಪೆಟ್ಟು ಹಾಕುವ ಮೊದಲು ಭೂತಾಯಿಯ ಪೂಜೆ ಮಾಡಿ ಆಕೆಗೆ ನೋವುಂಟು ಮಾಡುತ್ತಿರುವುದಕ್ಕಾಗಿ ಕ್ಷಮೆ ಕೇಳುತ್ತೇವೆ. ಗೃಹ ಪ್ರವೇಶ ಮಾಡುವಾಗ ಹೇಳುವ ಮಂತ್ರದಲ್ಲೂ ಕ್ಷಮೆ ಹಾಗೂ ಆಶೀರ್ವಾದ ಕೋರಿಕೆ ಇರುತ್ತದೆ. ಅಂದರೆ ಅಲ್ಲೊಂದು ಫೀಲಿಂಗ್ ಇರುತ್ತದೆ. ಪ್ರಕೃತಿ ಜತೆ ಒಂದು ಸಂಬಂಧ ಇಟ್ಟುಕೊಳ್ಳುವುದರ ಸಂಕೇತವೇ ಈ ಗುದ್ದಲಿ ಪೂಜೆ.

ಅಂಥ ಗುದ್ದಲಿ ಪೂಜೆಯನ್ನು ಸರ್ಕಾರಿ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಮಾಡಬಾರದು ಎನ್ನುವುದು ಮೌಢ್ಯ ಎಂಬ ಕಾರಣಕ್ಕೋ ಅಥವಾ ಕಾಂಗ್ರೆಸ್‌ನ ಸೆಕ್ಯುಲರೀಕರಣವೆಂಬ ಅಜೆಂಡಾದ ಭಾಗವೋ? ಇವತ್ತು ಸರ್ಕಾರಿ ಕಟ್ಟಡದ ನೆಪ ತೆಗೆದವರು, ನಾಳೆ ಜನರಿಗೂ ಅದೇ ಕಾಯಿದೆ ಅನ್ವಯಿಸುವುದಿಲ್ಲ ಎನ್ನುವುದಕ್ಕೆ ಖಾತ್ರಿಯೇನು? ತೀರಾ ವೈಯಕ್ತಿಕ ವಿಚಾರವಾದ ಮಠಾಧೀಶರು, ಸನ್ಯಾಸಿಗಳ ಪಾದ ಪೂಜೆ ಮಾಡಬೇಡಿ ಎಂದವರು, ಮನೆ ಕಟ್ಟುವಾಗಲೂ ಗುದ್ದಲಿ ಪೂಜೆ ಮಾಡಬೇಡಿ ಎಂದು ಜನರಿಗೆ ಹೇಳುವುದಿಲ್ಲ, ಕಟ್ಟಳೆ ತರುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನಿದೆ ಹೇಳಿ?

ಈ ಸರ್ಕಾರಕ್ಕೆ ಆಚರಣೆಗಳಿಗೂ ಕಂದಾಚಾರಗಳಿಗೂ ವ್ಯತ್ಯಾಸವೂ ಗೊತ್ತಿಲ್ಲವೆ?

ಏಕೆ ಹೀಗೆ ಹೇಳಬೇಕಾಗಿದೆಯೆಂದರೆ, ದೇವಸ್ಥಾನಗಳಲ್ಲಿ ಗಂಟೆ ಬಾರಿಸಬಾರದು, ಇಷ್ಟಕ್ಕೂ ದೇವರೇನು ನಿದ್ರಿಸುತ್ತಿರುತ್ತಾನೆಯೇ ಪೂಜೆ ನಂತರ ತೀರ್ಥಕೊಡಬಾರದು, ಅದು ಹೊಳೆ ನೀರಾಗಿರುವುದರಿಂದ ಆ್ಯಕ್ವಾ ಗಾರ್ಡ್, ಕೆಂಟ್‌ನಂತೆ ಶುದ್ಧವಾಗಿರುವುದಿಲ್ಲ ಎಂದೂ ಮುಂದೊಂದು ದಿನ ಕಾನೂನು ತರಲು ಪ್ರಯತ್ನಿಸಿದರೂ ಆಶ್ಚರ್ಯವಿಲ್ಲ, ಅಲ್ಲವೇ? ಇನ್ನು ಮುಂದೆ ಮದುವೆ ಸಂದರ್ಭದಲ್ಲಿ ಸಪ್ತಪದಿ ತುಳಿಯಬೇಡಿ, ಬರೀ ರಿಜಿಸ್ಟರ್ ಮಾಡಿದರೆ ಸಾಕು, ಸಪ್ತಪದಿ ತುಳಿಯುವುದೂ ಗೊಡ್ಡು ಸಂಪ್ರದಾಯ ಹಾಗೂ ಮೌಢ್ಯ ಎನ್ನಬಹುದು. ಇಷ್ಟಕ್ಕೂ ಸಮಾಜಕ್ಕೆ ಮೌಢ್ಯ, ಮೌಲ್ಯ, ವೈಚಾರಿಕತೆ ಹೇಳಲು ಹೊರಟಿರುವ ಸಮಿತಿಯಲ್ಲಿ ಇರುವ ಒಬ್ಬಾಕೆಯ ತಂಗಿ “ಗಂಡ ಬೇಡ, ಮಗು ಬೇಕು” ಎಂದು ಹಾಗೇ ಮಾಡಿಕೊಂಡಿದ್ದಾರೆ. ಅದನ್ನೂ ಮೌಲ್ಯವೆಂದು, ಮದುವೆ ಮೌಢ್ಯವೆಂದು ಬೋಧಿಸಿ ಬಿಡಬಹುದು ಜೋಕೆ! ಇನ್ನು ಮುಂದೆ ಕನ್ನಡ ರಾಜ್ಯೋತ್ಸವದಂದು “ತಾಯಿ ಭುವನೇಶ್ವರಿ” ಅನ್ನಬೇಡಿ ಅಂತಲೂ ಹೇಳಿಬಿಡಿ. ಇಷ್ಟಕ್ಕೂ ತಾಯಿ ಭುವನೇಶ್ವರಿ ಅಂದರೆ ಅಲ್ಪಸಂಖ್ಯಾತರಿಗೆ ನೋವಾಗುತ್ತದೆ ಅಲ್ಲವೆ ಸಾಹಿತಿಗಳೇ?! ಅಪ್ಪ-ಅಮ್ಮ ತೀರಿಕೊಂಡಾಗ ಕೇಶ ಮುಂಡನ ಮಾಡಬಾರದು. ಅದೂ ಮೂಢನಂಬಿಕೆ ಎಂದಾರು!

ಇವರ ವೈಚಾರಿಕತೆ ಬರೀ ಹಿಂದುಧರ್ಮದ ಆಚರಣೆಗಳಿಗೆ ಮಾತ್ರ ಸೀಮಿತವೇ?

ದೇವಸ್ಥಾನಗಳಲ್ಲಿ ಪ್ರಾಣಿ ಬಲಿ ಮಾಡಬಾರದು ಎನ್ನುವುದಾದರೆ ಬಕ್ರೀದ್ ದಿನ ಮುಸ್ಲಿಮರು ಹಬ್ಬದ ಹೆಸರಿನಲ್ಲಿ ಮಾಡುವುದೂ ಬಲಿಯೇ ಅಲ್ಲವೆ? ರೋಗ ಬಂದ ಜಾನುವಾರುಗಳಿಗೆ ಬರೆ ಹಾಕುವುದು, ಕಿವಿ ಕತ್ತರಿಸುವುದೇ ಹಿಂಸಾತ್ಮಕ ಪದ್ಧತಿ ಎನ್ನುವುದಾದರೆ ಸಧೃಡ ಪ್ರಾಣಿಗಳ ಗಂಟಲು ಸೀಳುವ “ಹಲಾಲ್‌” ಪದ್ಧತಿ ಹಿಂಸೆಯ ಪರಮಾವಧಿಯಲ್ಲವೆ? ಸಾಹಿತಿ ಮಹಾಶಯರೇ ಗೋಹತ್ಯೆಯನ್ನು ಸರಿ ಎನ್ನುವ ನಿಮಗೆ ಪ್ರಾಣಿ ಬಲಿ ಯಾವ ಕಾರಣಕ್ಕಾಗಿ ತಪ್ಪಾಗಿ ಕಾಣುತ್ತದೆ? ಕ್ರೈಸ್ತರ “ಹೋಲಿ ಮೆಸಾಕರ್‌” ಏನು ಸ್ವಾಮಿ? ಹತ್ಯೆಯೇ ಅಲ್ಲವೇ? ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ಚರ್ಮಕ್ಕೆ ಕೊಕ್ಕೆ ಚುಚ್ಚಿಕೊಳ್ಳುವುದು, ಕೊಕ್ಕೆ ಚುಚ್ಚಿಕೊಂಡು ರಥ ಎಳೆಯುವುದು ತಪ್ಪಂತೆ ಹಾಗೂ ಅದನ್ನು ನಿಷೇಧಿಸಬೇಕಂತೆ. ಹೀಗೆ ಹೇಳುವವರಿಗೆ ಮೊಹರಂ ಸಂದರ್ಭದಲ್ಲಿ ಮೈ ಬಡಿದುಕೊಳ್ಳುವುದನ್ನೂ ನಿಷೇಧಿಸಬೇಕೆಂದು ಶಿಫಾರಸ್ಸು ಮಾಡುವ ತಾಕತ್ತೇಕಿಲ್ಲ? ಧರ್ಮವೆನ್ನುವುದು ವೈಚಾರಿಕತೆಯ ವಿರೋಧಿ. ಇಷ್ಟಕ್ಕೂ ದೇವರಿದ್ದಾನೆ ಎಂದು ಹೇಗೆ ಸಾಬೀತು ಮಾಡಲು ಸಾಧ್ಯ? ಹಾಗಾದರೆ ಧರ್ಮದ ಹೆಸರಿನಲ್ಲಿ ಮಾಡುವ ಮತಾಂತರವನ್ನೂ ನೀವು ನಿಷೇಧಿಸಬೇಕಲ್ಲವೆ? ಅಂತಹ ತಾಕತ್ತು ನಿಮಗಿದೆಯೇ? ಇನ್ನು ದರ್ಗಾಗಳಲ್ಲೂ ಭೂತ ಬಿಡಿಸುವುದು, ತಾಯತ ಕಟ್ಟುವುದು ನಿಮಗೆ ಗೊತ್ತಿಲ್ಲವೆ? ಮೌಢ್ಯ ಹಾಗೂ ನಿಷೇಧದ ಬಗ್ಗೆ ಹೇಳುವಾಗ “ದರ್ಗಾಗಳಲ್ಲಿ ನಡೆಯುವ” ಎಂದೂ ಹೆಸರು ಹಿಡಿದು ಹೇಳುವ ಧೈರ್ಯವೇಕಿಲ್ಲ? ಇನ್ನು ಮುಸ್ಲಿಮರ ಸ್ಕಲ್ ಕ್ಯಾಪ್, ಬುರ್ಖಾಗಳಿಗೆ ಧಾರ್ಮಿಕ ಹಾಗೂ ಸಾಮಾಜಿಕ ಕಾರಣಗಳಿರಬಹುದು. ಆದರೆ ವೈಜ್ಞಾನಿಕ ಕಾರಣಗಳು ಖಂಡಿತ ಇಲ್ಲ. ಅವುಗಳನ್ನೂ ಮೌಢ್ಯವೆಂದು ನಿಷೇಧಸಬೇಕೆಂದು ಹೇಳುವ ತಾಕತ್ತನ್ನು ಈ ವಿಚಾರವಾದಿಗಳು ತೋರುತ್ತಾರೆಯೇ? ಆ ಕಾರಣಕ್ಕೆ ತೆಪ್ಪಗಿದ್ದಾರಾ? ಇವರ ವೈಚಾರಿಕತೆಗೂ ಆಯ್ಕೆಗಳಿವೆಯೇ? ಜಾತ್ರೆ, ಉತ್ಸವ, ಕರಗ ಸಂದರ್ಭದಲ್ಲಿ ಕೇಳುವ “ದೈವಪ್ರಶ್ನೆ”ಯನ್ನೇ ಮೂಢನಂಬಿಕೆ ಎನ್ನುವುದಾದರೆ, “ನಿನ್ನನ್ನು ಯೇಸು ಕರೆಯುತ್ತಿದ್ದಾನೆ..”, “ಬನ್ನಿ ಬಾಲ ಯೇಸುವನ್ನು ಪ್ರಾರ್ಥಿಸೋಣ, ರೋಗ ಗುಣಮುಖವಾಗುತ್ತದೆ” ಎಂದು ಮಂಗಳೂರು, ಉಡುಪಿಗಳಲ್ಲಿ ಬೋರ್ಡು ಹಾಕಿ ಜನರನ್ನು ಮಂಗ ಮಾಡುವ ಅಲಲೂಯಾದಂಥ ಪಂಥಗಳದ್ದೂ ಮೌಢ್ಯಾಚರಣೆ ಎಂಬುದು ಕರಡು ಸಿದ್ಧಪಡಿಸುವವರಿಗೆ ಗೊತ್ತಿಲ್ಲವೆ? ನಮ್ಮ ಹಿಂದುಗಳು, ಅದರಲ್ಲೂ ಕೆಳವರ್ಗದವರೆನಿಸಿಕೊಂಡವರು… ಮಾರಮ್ಮ, ಚೌಡಮ್ಮ, ಅಣ್ಣಮ್ಮ, ಪುರದಮ್ಮ, ಕೆಂಚಾಲಮ್ಮನನ್ನು ಪೂಜಿಸುತ್ತಾರೆ, ದೈವಪ್ರಶ್ನೆ ಕೇಳುತ್ತಾರೆ. ಅದು ನಮ್ಮ ನಂಬಿಕೆ. ನಾವು ನೆಲ, ಜಲ, ಸಸ್ಯಸಂಕುಲವನ್ನು ಪೂಜಿಸುವರು. ಇದೆಲ್ಲಾ ಮೂಢನಂಬಿಕೆ ಎಂದು ಹೇಳಲು ಇವರಿಗೆ ಯಾವ ಹಕ್ಕಿದೆ? ಬೆಂಗಳೂರಿನ ಶಿವಾಜಿನಗರದಲ್ಲಿ ಮೇರಿಯಮ್ಮನ ಜಾತ್ರೆಯೂ ನಡೆಯುತ್ತದೆ. ಕ್ರೈಸ್ತರಲ್ಲಿ ಜಾತ್ರೆ ಅನ್ನೋದೇ ಇಲ್ಲ. ಹಾಗಿದ್ದರೂ ಇವರು ಜಾತ್ರೆ ಮಾಡುತ್ತಿರುವುದು ಹಿಂದು ಕೆಳಜಾತಿಯವರನ್ನು ವಂಚಿಸುವುದಕ್ಕಾಗಿ ಎಂದು ನಿಷೇಧಿಸುತ್ತಾರಾ? ಇಂದು ಕೇರಳದಲ್ಲಿ ಇಂಡಿಯನೈಜೇಶನ್ ಅಥವಾ ಭಾರತೀಕರಣದ ಹೆಸರಿನಲ್ಲಿ ಚರ್ಚ್‌ಗಳ ಪ್ರವೇಶ ದ್ವಾರದ ಬಳಿ ಗರುಡಗಂಬ ನೆಡುತ್ತಿದ್ದಾರೆ. ಇಂದು ಚರ್ಚ್‌ಗಳಲ್ಲಿ ಅಗರಬತ್ತಿ ಹಚ್ಚಿ ಪೂಜೆ ಮಾಡುವುದು, ಪ್ರಸಾದ, ತೀರ್ಥ ಕೊಡುವುದನ್ನು ಆರಂಭಿಸಲಾಗಿದೆ. ಇದೆಲ್ಲಾ ಏನನ್ನು ಸೂಚಿಸುತ್ತದೆ ಸ್ವಾಮಿ? ಇದು ಮೋಸ ಎನ್ನುವ ಎದೆಗಾರಿಕೆ ನಿಮಗಿದೆಯೇ? ಇನ್ನು ದರ್ಗಾ ಎಂದರೇನು? ಸಮಾಧಿಯಲ್ಲವೆ? ಸಮಾಧಿ ಪೂಜೆ ಮಾಡುವುದೂ ಮೌಢ್ಯವೆನಿಸುವುದಿಲ್ಲವೆ? ವೈಜ್ಞಾನಿಕವಾದ ನಮ್ಮ ಪಂಚಾಂಗ ಮತ್ತು ಜ್ಯೋತಿಷ್ಯಶಾಸ್ತ್ರಗಳನ್ನು ಮೌಢ್ಯವೆನ್ನುವವರಿಗೆ, ವಿಜ್ಞಾನ ಸಾರಾಸಗಟಾಗಿ ತಿರಸ್ಕರಿಸಿರುವ “ಅಡಮ್ ಮತ್ತು ಈವ್‌” ಥಿಯರಿಯನ್ನು ಹೇಳುವವರಲ್ಲಿ, “ಸೂರ್ಯ ಭೂಮಿಯ ಸುತ್ತ ಸುತ್ತುತ್ತಾನೆ” ಎನ್ನುವವರಲ್ಲಿ ಮೌಢ್ಯ ಕಾಣುವುದಿಲ್ಲವೆ? ಕರಡು ವಿಧೇಯಕ ಅಂಥ ವಿಷಯಗಳ ಬಗ್ಗೆ ಏಕೆ ನೇರ ಅಥವಾ ಪರೋಕ್ಷವಾಗಿ ಪ್ರಸ್ತಾಪಿಸುವುದಿಲ್ಲ? ಅಸ್ಟ್ರಾಲಜಿಯಲ್ಲಿ ಹುಳುಕು ಹುಡುಕುವವರಿಗೆ ಜಗತ್ತಿನ ಮುಂದುವರಿದ ಕ್ರೈಸ್ತ ರಾಷ್ಟ್ರಗಳಲ್ಲಿ ಇರುವ ಟ್ಯಾರಟ್ ಕಾರ್ಡ್ಸ್ ಕಾಣಿಸುವುದಿಲ್ಲವೆ? ಇವತ್ತು ನಿರೀಶ್ವರವಾದದ ಬಗ್ಗೆ ಅತಿ ಹೆಚ್ಚು ಪುಸ್ತಕಗಳು ಬಂದಿರುವುದೇ ಕ್ರಿಶ್ಚಿಯಾನಿಟಿ ವಿರುದ್ಧವಲ್ಲವೆ ಹೇಳಿ? ಇತ್ತೀಚೆಗೆ ನಡೆದ “ಹ್ಯಾಲೋವಿನ್‌”ನಲ್ಲಿ ನಿಮಗೆ ಮೌಢ್ಯ ಕಾಣಿಸುವುದಿಲ್ಲವೇ?

ಪ್ರತಿ ಧರ್ಮದಲ್ಲೂ ಅದರದ್ದೇ ಆದ ಅಂತರ್ಗತ ಕುರುಡು ನಂಬಿಕೆಗಳಿರುತ್ತವೆ. ಇಲ್ಲವಾದರೆ ಕ್ರಿಶ್ಚಿಯಾನಿಟಿಯೇಕೆ ಕ್ಯಾಥೋಲಿಕ್ಸ್ ಹಾಗೂ ಪ್ರೊಟೆಸ್ಟೆಂಟಿಸಂ ಎಂದು ಹೋಳಾಯಿತು? ಏಕೆ 700 ವರ್ಷಗಳಷ್ಟು ಸುದೀರ್ಘ ಕಾಲ ಬಡಿದಾಡಿದರು? ಇಂದಿಗೂ ಕ್ಯಾಥೋಲಿಕ್ಕರು ‘ಪಾದ್ರಿಗಳು ಮದುವೆಯಾಗಬಾರದು ಎಂದರೆ, ಪ್ರೋಟೆಸ್ಟೆಂಟರು ಪಾದ್ರಿಗಳು ಮದುವೆಯಾಗಲೂಬಹುದು, ಮಕ್ಕಳನ್ನೂ ಮಾಡಿಕೊಳ್ಳಬಹುದು’ ಎನ್ನುತ್ತಾರೆ? ದೆವ್ವ ಅನ್ನೋದು ಇಲ್ಲ, ಆತ್ಮ ಇಲ್ಲ, ಮರುಜನ್ಮ ಇಲ್ಲ ಎಂದು ಪ್ರವಾದಿ ಹೇಳಿದರೂ ತಾಯತ ಕಟ್ಟುವ ದರ್ಗಾಗಳಿವೆ, ಸ್ವರ್ಗದಲ್ಲಿ 72 ಕನ್ಯೆಯರ ಜತೆ ಮಜಾ ಮಾಡಲು ಹೊರಡುವ ಭಯೋತ್ಪಾದಕರು ಸೃಷ್ಟಿಯಾಗಿದ್ದಾರೆ, ಕಟ್ಟರ್‌ಪಂಥೀಯ ವಹಾಬಿಗಳು ತಲೆಯೆತ್ತಿದ್ದಾರೆ. ಕಾಲದ ಜತೆ ಹೆಜ್ಜೆ ಹಾಕಬೇಕೆನ್ನುವ ಪ್ರೊಟೆಸ್ಟೆಂಟಿಸಂ ಒಂದು ಕಡೆಯಾದರೆ, ಮೂಲ ಬೈಬಲ್‌ನಲ್ಲಿ ಇರುವಂತೆಯೇ ನಡೆದುಕೊಳ್ಳಬೇಕೆನ್ನುವ “Apocrypha bible” ವಾದಿಗಳಿದ್ದಾರೆ. ಇನ್ನು ಮಂಗಳಯಾನಕ್ಕೆ ಮೊದಲು ತಿರುಪತಿ ದೇವಾಲಯಕ್ಕೆ ತೆರಳಿ ನಿರ್ವಿಘ್ನವಾಗಿ ಉಡಾವಣೆಯಾಗಲಿ ಎಂದು ಇಸ್ರೋ ಮುಖ್ಯಸ್ಥ ರಾಧಾಕೃಷ್ಣನ್ ಪ್ರಾರ್ಥಿಸಿ ನಾಲ್ಕು ದಿನಗಳಾಗಿಲ್ಲ. ವಿಶ್ವವಿಖ್ಯಾತ ಗಣಿತ ಶಾಸ್ತ್ರಜ್ಞರಾದ ಜಿ.ಎಚ್. ಹಾರ್ಡಿ ಕಟ್ಟಾ ನಿರೀಶ್ವರವಾದಿಯಾಗಿದ್ದರೆ, ಅವರ ಸ್ನೇಹಿತ ಹಾಗೂ ವಿಶ್ವವಿಖ್ಯಾತ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಆ ದೇವಿಯೇ ನನ್ನ ಮೂಲಕ ಗಣಿತದ ಸೂತ್ರಗಳನ್ನು ಬರೆಸುತ್ತಿದ್ದಾಳೆ ಎಂದು ನಂಬಿದ್ದರು. ನನಗೆ ಸಾವಿನ ಅನುಭವವಾಯಿತು, ನನ್ನ ಸಾವನ್ನು ನಾನೇ ನೋಡಿದೆ ಎನ್ನುವ ಪ್ಯಾರಾ ಸೈಕಾಲಜಿಯನ್ನು ಇಂದು ನಾವು ಕಾಣುತ್ತಿದ್ದೇವೆ. ಅಲೋಪತಿಯ ವ್ಯಾಪ್ತಿಗೇ ನಿಲುಕದ್ದನ್ನೂ ಗುಣಪಡಿಸುತ್ತಿರುವ ಆಲ್ಟರ್ನೇಟಿವ್ ಮೆಡಿಸಿನ್‌ಗಳಾದ ಪ್ರಾಣಿಕ್ ಹೀಲಿಂಗ್, ರೇಕಿ, ಮ್ಯಾಗ್ನೆಟಿಕ್ ಥೆರಪಿ, ಆಕ್ಯುಪಂಕ್ಚರ್, ಆಕ್ಯುಪ್ರೆಷರ್‌ಗಳು ಬಂದಿವೆ. ನಮ್ಮ ಎಷ್ಟೋ ಹಿಂದು ನಂಬಿಕೆ, ಆಚರಣೆಗಳ ಹಿಂದೆಯೂ ವೈಜ್ಞಾನಿಕ ಕಾರಣಗಳಿವೆ. ಅದಿರಲಿ, ಇದೇನಿದು Guineapig  (ಗಿನಿಪಿಗ್)? ಹೊಸ ಔಷಧಗಳ ಪ್ರಯೋಗವನ್ನು ಪ್ರಾಣಿಗಳ ಮೇಲೆಯೇ ಮಾಡುವುದೇಕೆ? ಮನುಷ್ಯ ಮೇಲು ಎಂಬ ಭಾವನೆ ವಿಜ್ಞಾನಿಗಳಿಗೂ ಇದೆ ಅಲ್ಲವೆ? ಇದೂ ಮೂಢನಂಬಿಕೆಯಲ್ಲವೆ?

ಮುಖ್ಯಮಂತ್ರಿಗಳೇ, ಪ್ರತಿಯೊಂದು ಧರ್ಮಕ್ಕೂ, ಜನರಿಗೂ ಅವರದ್ದೇ ಪಾವಿತ್ರ್ಯ, ನಂಬುಗೆ ಇರುತ್ತವೆ. ನಂಬಿಕೆಗಳು ಅಹೋರಾತ್ರಿ ಸೃಷ್ಟಿಯಾಗುವುದಿಲ್ಲ. ಕಿಡಿಗೇಡಿ ಸಾಹಿತಿಗಳನ್ನು ಸೇರಿಸಿಕೊಂಡು ಇಲ್ಲ ಸಲ್ಲದ ವಿಚಾರಕ್ಕೆ ಕೈಹಾಕಬೇಡಿ. ಡೂಸ್ ಅಂಡ್ ಡೋಂಟ್ಸ್ ಜನ ಮಾಡಿಕೊಳ್ಳುತ್ತಾರೆ. ಜನರ ಯಾವುದಾದರೂ ಆಚರಣೆಗಳಿಂದ ಸಮಾಜಕ್ಕೆ ತೊಂದರೆಯಾಗುತ್ತಿದ್ದರೆ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದ್ದರೆ ಸರ್ಕಾರ ಮಧ್ಯಪ್ರವೇಶಿಸಬೇಕು ಅಷ್ಟೇ. ಸಾಕ್ಷರತೆ, ತಿಳಿವಳಿಕೆ ಹೆಚ್ಚಾದಂತೆ ಹಿಂದುಗಳು, ಕ್ರೈಸ್ತರು, ಮುಸಲ್ಮಾನರಲ್ಲೂ ಬದಲಾವಣೆಗಳಾಗಿವೆ. ಜನರಿಗೆ ಶಿಕ್ಷಣ ಕೊಡಿ ಸ್ವಾಮಿ. ನೂರಕ್ಕೆ 100ರಷ್ಟು ಸಾಕ್ಷರತೆ ತನ್ನಿ. ಅದು ಸರ್ಕಾರ ಮಾಡಬೇಕಾದ ಕೆಲಸ. ಬೆತ್ತಲೆ ಸೇವೆ ನಿಷೇಧ ಮಾಡುವುದರ ಜೊತೆಗೆ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ಜನರಿಗೆ ಸಂಡಾಸಿಗೆ ಹೋಗಲು ಶೌಚಾಲಯ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿಕೊಡಿ. ಇಲ್ಲವಾದಲ್ಲಿ ಶೌಚದ ನೆಪದಲ್ಲಿ ಅವರು ನಿತ್ಯ ಬೆತ್ತಲೆ ಸೇವೆಮಾಡಬೇಕಾಗುತ್ತದೆ!

ನಿಮ್ಮ ಬರಗೂರು ರಾಮಚಂದ್ರಪ್ಪನವರನ್ನು ಕೇಳಿ, ಅವರ ಸಿನಿಮಾಗಳ ಪ್ರಾರಂಭಕ್ಕೆ ಮುನ್ನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವುದಿಲ್ಲವೆ? ನಿಮ್ಮ ಸಾಹಿತಿ ಹಿಂಬಾಲಕರು, ದೇಶಿಯತೇ(ನೇಟಿವಿಟಿ), ಜಾನಪದ ಉಳಿಯಬೇಕು ಎನ್ನುತ್ತಾರೆ. ಅವು ನಿಂತಿರುವುದೇ ನಂಬಿಕೆ, ಆಚರಣೆಗಳ ಮೇಲೆ. ಬರಗೂರರಿಗೆ ಬಹಳ ಇಷ್ಟವಾಗುವ ಹಾಗೂ ಮೆಚ್ಚುವ ರಾಜ್‌ಕುಮಾರ್ ನಟಿಸಿರುವ ಎಷ್ಟು ಸಿನಿಮಾಗಳಲ್ಲಿ ಪವಾಡ, ದೈವೀಕೃಪೆ, ರಕ್ಷಣೆ ಇಲ್ಲ ಹೇಳಿ? ಆ ಚಿತ್ರಗಳನ್ನೇಕೆ ಮೌಢ್ಯವನ್ನು ಬಿತ್ತುತ್ತಿವೆ ಎಂದು ವಿರೋಧಿಸಿರಲಿಲ್ಲ? ಕಾರ್ಲ್ ಮಾರ್ಕ್ಸ್, ಲೆನಿನ್, ನೆಹರು ಹೇಳಿದ್ದೇ ಸರಿ ಎಂದು ನಂಬಿ ಕುಳಿತಿರುವ ಇವರೇ ದೊಡ್ಡ ಮೂಢರು. ಇಷ್ಟಕ್ಕೂ ಮಾರ್ಕ್ಸ್‌ವಾದಕ್ಕೆ ನೇತುಹಾಕಿಕೊಂಡ ಸೋವಿಯತ್ ರಷ್ಯಾ ಸಿಡಿದು ಚೂರಾಗಲಿಲ್ಲವೆ? ಅದಿರಲಿ, ಡಾ. ಸಿದ್ದಲಿಂಗಯ್ಯ, ಡಾ. ಮರುಳಸಿದ್ದಪ್ಪ, ಜಿ. ರಾಮಕೃಷ್ಣರನ್ನು ಇನ್ನೂ “ಸಾಹಿತಿ”ಗಳೆಂದು, “ಚಿಂತಕರೆಂದು” ನಂಬಿಕೊಂಡಿದ್ದೀರಲ್ಲಾ ಇದಕ್ಕಿಂತ ದೊಡ್ಡ “ಮೂಢನಂಬಿಕೆ” ಯಾವುದಿದೆ ಸಿದ್ದರಾಮಯ್ಯನವರೇ? ಇವರು ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಬರೆದ ಹಾಗೂ ಜನಮೆಚ್ಚುಗೆಗೆ ಪಾತ್ರವಾದ ಒಂದು ಕೃತಿಯನ್ನು, ಸಮಾಜಕ್ಕೆ ಲಾಭವಾದ ಇವರ ಒಂದು ಚಿಂತನೆಯನ್ನು ದಯವಿಟ್ಟು ಉದಾಹರಿಸುತ್ತೀರಾ? ಮುಖ್ಯಮಂತ್ರಿಗಳೇ,  ನಿಮ್ಮ “ಮೂಢನಂಬಿಕೆ”ಯಿಂದ ಮೊದಲು ಹೊರಬಂದರೆ ನಿಮ್ಮ ಪಕ್ಷದಲ್ಲೇ ಇರುವ ಜ್ಞಾನಿಗಳಾದ, ಸಮಾಜದ ಸಂವೇದನೆಗಳನ್ನು ಅರಿತುಕೊಂಡಿರುವ ಡಾ. ಪರಮೇಶ್ವರ, ಬಿ.ಎಲ್. ಶಂಕರ್, ಡಾ. ಮಹಾದೇವಪ್ಪ, ವಿ.ಆರ್. ಸುದರ್ಶನ್‌ರು ಕಾಣುತ್ತಾರೆ. ಅವರಂಥವರ ಸಲಹೆ ಪಡೆದರೆ ಇಂಥ ಅನಾಹುತ ತಪ್ಪುತ್ತದೆ.

ಅಲ್ಲ, ದಲಿತ ದೌರ್ಜನ್ಯ ತಡೆಯಂತೆ, ಈ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಕಾಯಿದೆ ಕೂಡಾ ದುರುಪಯೋಗವಾಗುವುದಿಲ್ಲ ಎಂದು ಹೇಗೆ ಹೇಳಲು ಸಾಧ್ಯ? ನಿಮ್ಮ ಮನೆ ಮುಂದೆ ನೀವೇ ನಿಂಬೆಹಣ್ಣು, ಕುಂಕುಮ ಹಾಕಿಕೊಂಡು ಇನ್ಯಾರದ್ದೋ ವಿರುದ್ಧ ಕೇಸು ಹಾಕಿದರೆ ಗತಿಯೇನು? ಈ ಬಗ್ಗೆ ಯೋಚಿಸಿದ್ದೀರಾ? ಶಾಲೆಗಳಲ್ಲಿ ಪೂಜೆ ಮಾಡಬಾರದು ಎಂಬ ನಿರ್ಬಂಧದ ಹಿಂದಿರುವ ಮನಸ್ಥಿತಿ ಏನು ಅಂತ ಬಿಡಿಸಿಹೇಳುತ್ತೀರಾ? ಪೂಜೆಗೂ ಮೌಢ್ಯಕ್ಕೂ ಏನು ಸಂಬಂಧ? ಅಥವಾ ನಿಮ್ಮ ಸೆಕ್ಯುಲರ್ ಅಜೆಂಡಾ ಇಂಥ ಯೋಚನೆಗಳನ್ನು ಸೃಷ್ಟಿಸುತ್ತಿದೆಯೇ? 2005, ಜನವರಿಯಲ್ಲಿ ಬೆನ್ನಿ ಹಿನ್ ಎಂಬ ಮೌಢ್ಯದ ಜಾಗತಿಕ ವ್ಯಾಪಾರಿ ಹಾಗೂ ಸೋಗಲಾಡಿಗೆ ಅರಮನೆ ಮೈದಾನದಲ್ಲಿ ಆತಿಥ್ಯ ಕೊಟ್ಟಿದ್ದ ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ಮೂಢನಂಬಿಕೆಗಳ ಬಗ್ಗೆ ಮಾತನಾಡುವ, ನಿಷೇಧಿಸುವ ನೈತಿಕ ಹಕ್ಕಿದೆಯೇ, ಮೊದಲು ಹೇಳಿ?

ಕೊನೆಯದಾಗಿ, ಸಿದ್ದರಾಮಯ್ಯನವರೇ ನಿಮ್ಮ ಮುಂದೆ ಮಾಡಲು ಬೆಟ್ಟದಷ್ಟು ಕೆಲಸಗಳಿವೆ, ಜವಾಬ್ದಾರಿಗಳಿವೆ. ನಿಮ್ಮನ್ನು ಜನ ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಿರುವುದು ನೀವು ಪ್ರಗತಿಪರರು ಎಂಬ ಕಾರಣಕ್ಕಲ್ಲ ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ಆಗ ಪಡಪೋಶಿ ಸಾಹಿತಿಗಳು, ಚಿಂತಕರ ಕಿಡಿಗೇಡಿತನಕ್ಕೆ ನಿಮ್ಮ ಸರ್ಕಾರ ಹಾಗೂ ರಾಜ್ಯದ ಆಡಳಿತ ಬಲಿಯಾಗುವುದು ತಪ್ಪುತ್ತದೆ.

“ಹೀಗಿದ್ದರು ಕುವೆಂಪು” ಎಂಬ ಸಣ್ಣ ಪುಸ್ತಕವಿದೆ. ಒಮ್ಮೆ ಕುವೆಂಪು ಹಾಗೂ ಅವರ ಶಿಷ್ಯ ಪ್ರಭುಶಂಕರ ಮೈಸೂರಿನ ಕುಕ್ಕರಹಳ್ಳಿ ಕೆರೆಯ ಬಳಿ ಕುಳಿತಿದ್ದರು. ಚಾಮುಂಡಿ ಬೆಟ್ಟಕ್ಕೆ ಹೋಗಿದ್ದ ಭಕ್ತರು ಸಮೀಪದಲ್ಲೇ ಹಾದುಹೋದರು. ಅವರ ತಲೆಯ ಮೇಲೆ ಪ್ರಸಾದವಾಗಿ ಕೊಟ್ಟಿದ್ದ ಹೂವನ್ನು ನೋಡಿ ಕುವೆಂಪು ಹೇಳಿದರು- “ಎಂಥಾ ಮೂಢರು ನಮ್ಮ ಜನ. ಈ ಕಾಲದಲ್ಲೂ ಹೀಗೆಲ್ಲಾ ಮಾಡುತ್ತಾರಲ್ಲಾ…”. ಆದರೆ ಪ್ರಭುಶಂಕರರು ಪ್ರತಿಕ್ರಿಯಿಸಲಿಲ್ಲ. ಮರುದಿನ ಮತ್ತೆ ಕುವೆಂಪು ಭೇಟಿಯಾಯಿತು. ಆಗ ಹೇಳಿದರು “ಚಾಮುಂಡಿ ಬೆಟ್ಟಕ್ಕೆ ಹೋಗಿ ಗುಡಿಯಲ್ಲಿ ಕೊಟ್ಟ ಹೂವನ್ನು ತಲೆಮೇಲೆ ಇಟ್ಟುಕೊಂಡು ಬರುವವರು ಮೂಢರು. ನಾವು ನೋಡಿ, ಸಂಜೆ ರಾಮಕೃಷ್ಣ ಆಶ್ರಮಕ್ಕೆ ಹೋಗಿ ರಾಮಕೃಷ್ಣ ಪರಮಹಂಸರು, ವಿವೇಕಾನಂದರ ಮೂರ್ತಿ ಮುಂದೆ ಕುಳಿತು ಅವರೇ ದೇವರೆಂದು ಧ್ಯಾನ ಮಾಡಿ ಬರುತ್ತೇವೆ! ಇದು ಮೌಢ್ಯವಲ್ಲವೆ?”. ಸ್ವತಃ ಒಬ್ಬ ವಿಚಾರವಾದಿಯಾಗಿದ್ದ ಶ್ರೇಷ್ಠ ಸಾಹಿತಿ ಕುವೆಂಪು ಅವರೇ ತಮ್ಮ ಶಿಷ್ಯನ ಮಾತು ಕೇಳಿ ಅಂದು ದಂಗಾಗಿದ್ದರು!ಹೌದು, ನಂಬಿಕೆ ಎನ್ನುವುದು ಜನರ ಖಾಸಗಿ ವಿಚಾರ. ನಂಬಿಕೆ ತರ್ಕಕ್ಕೆ ನಿಲುಕದ್ದು. ಈ ನಂಬಿಕೆ, ವಿಶ್ವಾಸಗಳು ಗೋಚರಿಸುವುದು ಆಚರಣೆಗಳಲ್ಲಿ. ನಾವು ಕಾರು ತಂದರೂ ಕುಂಬಳಕಾಯಿ ಒಡೆಯುತ್ತೇವೆ, ವೈಜ್ಞಾನಿಕ ಪ್ರಗತಿಯ ಅತ್ಯುನ್ನತ ಸಂಕೇತದಂತಿರುವ ಕಂಪ್ಯೂಟರ್ ತಂದರೂ ಪೂಜಿಸಿ ನಿಂಬೆಹಣ್ಣು ನಿವಾಳಿಸುತ್ತೇವೆ. ಇವೆಲ್ಲ ಜನರ ವೈಯಕ್ತಿಕ ವಿಷಯಗಳು. ಜನರ ದೈನಂದಿನ ಖಾಸಗಿ ವಿಚಾರಕ್ಕೂ ಸರ್ಕಾರಕ್ಕೂ ಏನು ಸಂಬಂಧ? ನಮಗೆ ಯಾವುದು ನಂಬಿಕೆ, ವಿಶ್ವಾಸವಾಗಿ ಕಾಣುತ್ತದೋ ಅದು ಕೆಲವರಿಗೆ ಮೌಢ್ಯವಾಗಿ ಕಾಣಬಹುದು. ಆದರೆ ಯಾವುದು ಮೌಢ್ಯ, ಮೂಢನಂಬಿಕೆ ಎಂದು ನಿರ್ಧರಿಸಬೇಕಾದವರು ಯಾರು? ಭಾನಾಮತಿ, ಬೆತ್ತಲೆ ಸೇವೆ, ಗೆಜ್ಜೆಪೂಜೆ, ನರಬಲಿ, ವಾಮಾಚಾರ, ವಶೀಕರಣ, ಯಕ್ಷಿಣಿ, ಪಂಕ್ತಿಭೇದ, ಮಡಿ-ಮೈಲಿಗೆಗಳ ನಿಷೇಧ ಹಾಗೂ ಶಿಕ್ಷೆಗೆ ಕಾಂಗ್ರೆಸ್ ಸರ್ಕಾರ ತರಲು ಹೊರಟಿರುವ ಕಾನೂನು ಸೀಮಿತವಾಗಿದ್ದರೆ ಯಾರೂ ತಕರಾರು ಎತ್ತುವ ಅಗತ್ಯವಿರಲಿಲ್ಲ. ಆದರೆ ಸರ್ಕಾರ ನೇಮಕ ಮಾಡಿದ್ದ ಸಮಿತಿಯಲ್ಲಿದ್ದ ಮಹಾಮೇಧಾವಿಗಳು ಸಿದ್ಧಪಡಿಸಿರುವ ಕರಡು ಈ ಅನಿಷ್ಟ ಪದ್ಧತಿಗಳಿಗೆ ಮಾತ್ರ ಸೀಮಿತವಾಗಿದೆಯೇ? ಇಷ್ಟಕ್ಕೂ ಈ ವಿಚಾರವಾದಿಗಳ ಸಮಿತಿ ಮಾಡಿರುವ ಶಿಫಾರಸ್ಸು ಹಾಗೂ ಸರ್ಕಾರ ಜಾರಿಗೆ ತರಲು ಹೊರಟಿರುವುದೇನು ಅಂದುಕೊಂಡಿರಿ?ಮಠಾಧೀಶರು, ಸನ್ಯಾಸಿಗಳ ಪಾದಪೂಜೆ ಮಾಡಬಾರದಂತೆ! ಸರ್ಕಾರಿ ಕಟ್ಟಡಗಳನ್ನು ಕಟ್ಟುವಾಗ ಗುದ್ದಲಿ ಪೂಜೆ ಮಾಡಬಾರದಂತೆ!! ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ವಾಸ್ತುಶಾಸ್ತ್ರ, ಕಾಲನಿರ್ಣಯಗಳನ್ನು ಪಿಡುಗುಗಳೆಂದು ಗುರುತಿಸಿ ಕಟ್ಟುನಿಟ್ಟಾಗಿ ಅವುಗಳನ್ನು ನಿಷೇಧಿಸಬೇಕಂತೆ. ಜಪಮಾಲೆ, ರುದ್ರಾಕ್ಷಿ, ಮಣಿಸರ, ತಾಯತ, ಹರಳುಗಳ ಮಾರಾಟ ಹಾಗೂ ಬಳಕೆ ಮಾಡಬಾರದಂತೆ. ದೇವಸ್ಥಾನಗಳಲ್ಲಿ ಪ್ರಾಣಿ ಬಲಿ ಮಾಡಬಾರದಂತೆ. ಜಾತ್ರೆ, ಕರಗ ಮಾಡುವ ಮೊದಲು ಕೇಳುವ “ದೈವ ಪ್ರಶ್ನೆ”ಯನ್ನು ಇನ್ನು ಮುಂದೆ ಕೇಳಬಾರದಂತೆ. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು ಮತ-ಮೌಢ್ಯ ಬಿತ್ತುವ ಧಾರ್ಮಿಕ ಕೇಂದ್ರಗಳಿಗೆ ಪ್ರವಾಸ ಕರೆಯೊಯ್ಯಬಾರದಂತೆ!ಇದೇನಿದು ಸ್ವಾಮಿ?ಮೂಢನಂಬಿಕೆ, ಕಂದಾಚಾರಗಳ ಪ್ರತಿಬಂಧಕ ವಿಧೇಯಕವೋ? ಅಥವಾ ಇವುಗಳ ಸೋಗಿನಲ್ಲಿ ಹಿಂದು ನಂಬಿಕೆ, ಆಚರಣೆಗಳನ್ನು ನಾಶಮಾಡಲು ಹೂಡಿರುವ ತಂತ್ರವೋ? ನೀವು ಕರಡಿನಲ್ಲಿ ಏನು ಹೇಳಲು ಹೊರಟಿದ್ದೀರೋ, 19ನೇ ಶತಮಾನದಲ್ಲಿ ಮತಾಂತರ ಮಾಡಲು ಬಂದ ಪಾದ್ರಿಗಳು ಹಿಂದು ಧರ್ಮದ ಬಗ್ಗೆ ಹೇಳಿದ್ದೂ ಇದನ್ನೇ ಸ್ವಾಮಿ! ಇನ್ನೊಬ್ಬರದ್ದನ್ನು ಮೂಢನಂಬಿಕೆ, ತಮ್ಮದ್ದನ್ನು ಸೈಂಟಿಫಿಕ್ ಅನ್ನೋದು ಪಾದ್ರಿಗಳ ತಂತ್ರವಾಗಿತ್ತು. ನಿಮ್ಮ ಉದ್ದೇಶವೂ ಅದೇ ಆಗಿದೆಯೇನು? ಈಗ ಹೊರಗೆಡವಿರುವುದು ಕಾನೂನಲ್ಲ, ಕರಡು ಪ್ರತಿಯೇ ಆಗಿರಬಹುದು. ಆದರೆ ಆ ಕರಡಿನಲ್ಲಿ ಒಳಗೊಂಡಿರುವ ವಿಚಾರಗಳನ್ನು ನೋಡಿದರೆ ಸರ್ಕಾರದ ನಿಜವಾದ ಉದ್ದೇಶ, ಗುರಿ ಏನು ಎಂಬುದು ತಿಳಿಯುವುದಿಲ್ಲವೆ? ಒಂದು ವೇಳೆ, ಈ ಕರಡು ಕಾಯಿದೆಯಾದರೆ, ಇನ್ನು ಮುಂದೆ ಆಯುಧ ಪೂಜೆ ದಿನ ಪೋಲಿಸರು ತಮ್ಮ ಬಂದೂಕುಗಳಿಗೆ ಪೂಜೆ ಮಾಡುವುದಕ್ಕೂ, ಬಿಎಂಟಿಸಿ-ಕೆಎಸ್‌ಆರ್‌ಟಿಸಿ ಸಿಬ್ಬಂದಿ ವಾಹನವನ್ನು ಶೃಂಗರಿಸಿ ಪೂಜೆ ಸಲ್ಲಿಸುವುದಕ್ಕೂ, ಶಾಲೆಗಳಲ್ಲಿ ಶಾರದೆಯ ಪೂಜೆ ಮಾಡುವುದಕ್ಕೂ ಕುತ್ತು ಬರಲಿದೆ. ಗುದ್ದಲಿ ಪೂಜೆ ಮಾಡಬಾರದು ಎನ್ನುತ್ತಾರಲ್ಲಾ ಇವರಿಗೆ ಗುದ್ದಲಿ ಪೂಜೆಯ ಮಹತ್ವವಾದರೂ ತಿಳಿದಿದೆಯೇ?ಭೂಮಿಯನ್ನು ನಾವೇ ಹಣ ಕೊಟ್ಟು ಕೊಂಡರೂ, ಅಲ್ಲಿ ಮನೆ ಕಟ್ಟುವಾಗ ಸ್ಥಳಪೂಜೆ ಮಾಡುತ್ತೇವೆ. ಗುದ್ದಲಿಯ ಪೆಟ್ಟು ಹಾಕುವ ಮೊದಲು ಭೂತಾಯಿಯ ಪೂಜೆ ಮಾಡಿ ಆಕೆಗೆ ನೋವುಂಟು ಮಾಡುತ್ತಿರುವುದಕ್ಕಾಗಿ ಕ್ಷಮೆ ಕೇಳುತ್ತೇವೆ. ಗೃಹ ಪ್ರವೇಶ ಮಾಡುವಾಗ ಹೇಳುವ ಮಂತ್ರದಲ್ಲೂ ಕ್ಷಮೆ ಹಾಗೂ ಆಶೀರ್ವಾದ ಕೋರಿಕೆ ಇರುತ್ತದೆ. ಅಂದರೆ ಅಲ್ಲೊಂದು ಫೀಲಿಂಗ್ ಇರುತ್ತದೆ. ಪ್ರಕೃತಿ ಜತೆ ಒಂದು ಸಂಬಂಧ ಇಟ್ಟುಕೊಳ್ಳುವುದರ ಸಂಕೇತವೇ ಈ ಗುದ್ದಲಿ ಪೂಜೆ.               ಅಂಥ ಗುದ್ದಲಿ ಪೂಜೆಯನ್ನು ಸರ್ಕಾರಿ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಮಾಡಬಾರದು ಎನ್ನುವುದು ಮೌಢ್ಯ ಎಂಬ ಕಾರಣಕ್ಕೋ ಅಥವಾ ಕಾಂಗ್ರೆಸ್‌ನ ಸೆಕ್ಯುಲರೀಕರಣವೆಂಬ ಅಜೆಂಡಾದ ಭಾಗವೋ? ಇವತ್ತು ಸರ್ಕಾರಿ ಕಟ್ಟಡದ ನೆಪ ತೆಗೆದವರು, ನಾಳೆ ಜನರಿಗೂ ಅದೇ ಕಾಯಿದೆ ಅನ್ವಯಿಸುವುದಿಲ್ಲ ಎನ್ನುವುದಕ್ಕೆ ಖಾತ್ರಿಯೇನು? ತೀರಾ ವೈಯಕ್ತಿಕ ವಿಚಾರವಾದ ಮಠಾಧೀಶರು, ಸನ್ಯಾಸಿಗಳ ಪಾದ ಪೂಜೆ ಮಾಡಬೇಡಿ ಎಂದವರು, ಮನೆ ಕಟ್ಟುವಾಗಲೂ ಗುದ್ದಲಿ ಪೂಜೆ ಮಾಡಬೇಡಿ ಎಂದು ಜನರಿಗೆ ಹೇಳುವುದಿಲ್ಲ, ಕಟ್ಟಳೆ ತರುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನಿದೆ ಹೇಳಿ?ಈ ಸರ್ಕಾರಕ್ಕೆ ಆಚರಣೆಗಳಿಗೂ ಕಂದಾಚಾರಗಳಿಗೂ ವ್ಯತ್ಯಾಸವೂ ಗೊತ್ತಿಲ್ಲವೆ?ಏಕೆ ಹೀಗೆ ಹೇಳಬೇಕಾಗಿದೆಯೆಂದರೆ, ದೇವಸ್ಥಾನಗಳಲ್ಲಿ ಗಂಟೆ ಬಾರಿಸಬಾರದು, ಇಷ್ಟಕ್ಕೂ ದೇವರೇನು ನಿದ್ರಿಸುತ್ತಿರುತ್ತಾನೆಯೇ ಪೂಜೆ ನಂತರ ತೀರ್ಥಕೊಡಬಾರದು, ಅದು ಹೊಳೆ ನೀರಾಗಿರುವುದರಿಂದ ಆ್ಯಕ್ವಾ ಗಾರ್ಡ್, ಕೆಂಟ್‌ನಂತೆ ಶುದ್ಧವಾಗಿರುವುದಿಲ್ಲ ಎಂದೂ ಮುಂದೊಂದು ದಿನ ಕಾನೂನು ತರಲು ಪ್ರಯತ್ನಿಸಿದರೂ ಆಶ್ಚರ್ಯವಿಲ್ಲ, ಅಲ್ಲವೇ? ಇನ್ನು ಮುಂದೆ ಮದುವೆ ಸಂದರ್ಭದಲ್ಲಿ ಸಪ್ತಪದಿ ತುಳಿಯಬೇಡಿ, ಬರೀ ರಿಜಿಸ್ಟರ್ ಮಾಡಿದರೆ ಸಾಕು, ಸಪ್ತಪದಿ ತುಳಿಯುವುದೂ ಗೊಡ್ಡು ಸಂಪ್ರದಾಯ ಹಾಗೂ ಮೌಢ್ಯ ಎನ್ನಬಹುದು. ಇಷ್ಟಕ್ಕೂ ಸಮಾಜಕ್ಕೆ ಮೌಢ್ಯ, ಮೌಲ್ಯ, ವೈಚಾರಿಕತೆ ಹೇಳಲು ಹೊರಟಿರುವ ಸಮಿತಿಯಲ್ಲಿ ಇರುವ ಒಬ್ಬಾಕೆಯ ತಂಗಿ “ಗಂಡ ಬೇಡ, ಮಗು ಬೇಕು” ಎಂದು ಹಾಗೇ ಮಾಡಿಕೊಂಡಿದ್ದಾರೆ. ಅದನ್ನೂ ಮೌಲ್ಯವೆಂದು, ಮದುವೆ ಮೌಢ್ಯವೆಂದು ಬೋಧಿಸಿ ಬಿಡಬಹುದು ಜೋಕೆ! ಇನ್ನು ಮುಂದೆ ಕನ್ನಡ ರಾಜ್ಯೋತ್ಸವದಂದು “ತಾಯಿ ಭುವನೇಶ್ವರಿ” ಅನ್ನಬೇಡಿ ಅಂತಲೂ ಹೇಳಿಬಿಡಿ. ಇಷ್ಟಕ್ಕೂ ತಾಯಿ ಭುವನೇಶ್ವರಿ ಅಂದರೆ ಅಲ್ಪಸಂಖ್ಯಾತರಿಗೆ ನೋವಾಗುತ್ತದೆ ಅಲ್ಲವೆ ಸಾಹಿತಿಗಳೇ?! ಅಪ್ಪ-ಅಮ್ಮ ತೀರಿಕೊಂಡಾಗ ಕೇಶ ಮುಂಡನ ಮಾಡಬಾರದು. ಅದೂ ಮೂಢನಂಬಿಕೆ ಎಂದಾರು!ಇವರ ವೈಚಾರಿಕತೆ ಬರೀ ಹಿಂದುಧರ್ಮದ ಆಚರಣೆಗಳಿಗೆ ಮಾತ್ರ ಸೀಮಿತವೇ? ದೇವಸ್ಥಾನಗಳಲ್ಲಿ ಪ್ರಾಣಿ ಬಲಿ ಮಾಡಬಾರದು ಎನ್ನುವುದಾದರೆ ಬಕ್ರೀದ್ ದಿನ ಮುಸ್ಲಿಮರು ಹಬ್ಬದ ಹೆಸರಿನಲ್ಲಿ ಮಾಡುವುದೂ ಬಲಿಯೇ ಅಲ್ಲವೆ? ರೋಗ ಬಂದ ಜಾನುವಾರುಗಳಿಗೆ ಬರೆ ಹಾಕುವುದು, ಕಿವಿ ಕತ್ತರಿಸುವುದೇ ಹಿಂಸಾತ್ಮಕ ಪದ್ಧತಿ ಎನ್ನುವುದಾದರೆ ಸಧೃಡ ಪ್ರಾಣಿಗಳ ಗಂಟಲು ಸೀಳುವ “ಹಲಾಲ್‌” ಪದ್ಧತಿ ಹಿಂಸೆಯ ಪರಮಾವಧಿಯಲ್ಲವೆ? ಸಾಹಿತಿ ಮಹಾಶಯರೇ ಗೋಹತ್ಯೆಯನ್ನು ಸರಿ ಎನ್ನುವ ನಿಮಗೆ ಪ್ರಾಣಿ ಬಲಿ ಯಾವ ಕಾರಣಕ್ಕಾಗಿ ತಪ್ಪಾಗಿ ಕಾಣುತ್ತದೆ? ಕ್ರೈಸ್ತರ “ಹೋಲಿ ಮೆಸಾಕರ್‌” ಏನು ಸ್ವಾಮಿ? ಹತ್ಯೆಯೇ ಅಲ್ಲವೇ? ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ಚರ್ಮಕ್ಕೆ ಕೊಕ್ಕೆ ಚುಚ್ಚಿಕೊಳ್ಳುವುದು, ಕೊಕ್ಕೆ ಚುಚ್ಚಿಕೊಂಡು ರಥ ಎಳೆಯುವುದು ತಪ್ಪಂತೆ ಹಾಗೂ ಅದನ್ನು ನಿಷೇಧಿಸಬೇಕಂತೆ. ಹೀಗೆ ಹೇಳುವವರಿಗೆ ಮೊಹರಂ ಸಂದರ್ಭದಲ್ಲಿ ಮೈ ಬಡಿದುಕೊಳ್ಳುವುದನ್ನೂ ನಿಷೇಧಿಸಬೇಕೆಂದು ಶಿಫಾರಸ್ಸು ಮಾಡುವ ತಾಕತ್ತೇಕಿಲ್ಲ? ಧರ್ಮವೆನ್ನುವುದು ವೈಚಾರಿಕತೆಯ ವಿರೋಧಿ. ಇಷ್ಟಕ್ಕೂ ದೇವರಿದ್ದಾನೆ ಎಂದು ಹೇಗೆ ಸಾಬೀತು ಮಾಡಲು ಸಾಧ್ಯ? ಹಾಗಾದರೆ ಧರ್ಮದ ಹೆಸರಿನಲ್ಲಿ ಮಾಡುವ ಮತಾಂತರವನ್ನೂ ನೀವು ನಿಷೇಧಿಸಬೇಕಲ್ಲವೆ? ಅಂತಹ ತಾಕತ್ತು ನಿಮಗಿದೆಯೇ? ಇನ್ನು ದರ್ಗಾಗಳಲ್ಲೂ ಭೂತ ಬಿಡಿಸುವುದು, ತಾಯತ ಕಟ್ಟುವುದು ನಿಮಗೆ ಗೊತ್ತಿಲ್ಲವೆ? ಮೌಢ್ಯ ಹಾಗೂ ನಿಷೇಧದ ಬಗ್ಗೆ ಹೇಳುವಾಗ “ದರ್ಗಾಗಳಲ್ಲಿ ನಡೆಯುವ” ಎಂದೂ ಹೆಸರು ಹಿಡಿದು ಹೇಳುವ ಧೈರ್ಯವೇಕಿಲ್ಲ? ಇನ್ನು ಮುಸ್ಲಿಮರ ಸ್ಕಲ್ ಕ್ಯಾಪ್, ಬುರ್ಖಾಗಳಿಗೆ ಧಾರ್ಮಿಕ ಹಾಗೂ ಸಾಮಾಜಿಕ ಕಾರಣಗಳಿರಬಹುದು. ಆದರೆ ವೈಜ್ಞಾನಿಕ ಕಾರಣಗಳು ಖಂಡಿತ ಇಲ್ಲ. ಅವುಗಳನ್ನೂ ಮೌಢ್ಯವೆಂದು ನಿಷೇಧಸಬೇಕೆಂದು ಹೇಳುವ ತಾಕತ್ತನ್ನು ಈ ವಿಚಾರವಾದಿಗಳು ತೋರುತ್ತಾರೆಯೇ? ಆ ಕಾರಣಕ್ಕೆ ತೆಪ್ಪಗಿದ್ದಾರಾ? ಇವರ ವೈಚಾರಿಕತೆಗೂ ಆಯ್ಕೆಗಳಿವೆಯೇ? ಜಾತ್ರೆ, ಉತ್ಸವ, ಕರಗ ಸಂದರ್ಭದಲ್ಲಿ ಕೇಳುವ “ದೈವಪ್ರಶ್ನೆ”ಯನ್ನೇ ಮೂಢನಂಬಿಕೆ ಎನ್ನುವುದಾದರೆ, “ನಿನ್ನನ್ನು ಯೇಸು ಕರೆಯುತ್ತಿದ್ದಾನೆ..”, “ಬನ್ನಿ ಬಾಲ ಯೇಸುವನ್ನು ಪ್ರಾರ್ಥಿಸೋಣ, ರೋಗ ಗುಣಮುಖವಾಗುತ್ತದೆ” ಎಂದು ಮಂಗಳೂರು, ಉಡುಪಿಗಳಲ್ಲಿ ಬೋರ್ಡು ಹಾಕಿ ಜನರನ್ನು ಮಂಗ ಮಾಡುವ ಅಲಲೂಯಾದಂಥ ಪಂಥಗಳದ್ದೂ ಮೌಢ್ಯಾಚರಣೆ ಎಂಬುದು ಕರಡು ಸಿದ್ಧಪಡಿಸುವವರಿಗೆ ಗೊತ್ತಿಲ್ಲವೆ? ನಮ್ಮ ಹಿಂದುಗಳು, ಅದರಲ್ಲೂ ಕೆಳವರ್ಗದವರೆನಿಸಿಕೊಂಡವರು… ಮಾರಮ್ಮ, ಚೌಡಮ್ಮ, ಅಣ್ಣಮ್ಮ, ಪುರದಮ್ಮ, ಕೆಂಚಾಲಮ್ಮನನ್ನು ಪೂಜಿಸುತ್ತಾರೆ, ದೈವಪ್ರಶ್ನೆ ಕೇಳುತ್ತಾರೆ. ಅದು ನಮ್ಮ ನಂಬಿಕೆ. ನಾವು ನೆಲ, ಜಲ, ಸಸ್ಯಸಂಕುಲವನ್ನು ಪೂಜಿಸುವರು. ಇದೆಲ್ಲಾ ಮೂಢನಂಬಿಕೆ ಎಂದು ಹೇಳಲು ಇವರಿಗೆ ಯಾವ ಹಕ್ಕಿದೆ? ಬೆಂಗಳೂರಿನ ಶಿವಾಜಿನಗರದಲ್ಲಿ ಮೇರಿಯಮ್ಮನ ಜಾತ್ರೆಯೂ ನಡೆಯುತ್ತದೆ. ಕ್ರೈಸ್ತರಲ್ಲಿ ಜಾತ್ರೆ ಅನ್ನೋದೇ ಇಲ್ಲ. ಹಾಗಿದ್ದರೂ ಇವರು ಜಾತ್ರೆ ಮಾಡುತ್ತಿರುವುದು ಹಿಂದು ಕೆಳಜಾತಿಯವರನ್ನು ವಂಚಿಸುವುದಕ್ಕಾಗಿ ಎಂದು ನಿಷೇಧಿಸುತ್ತಾರಾ? ಇಂದು ಕೇರಳದಲ್ಲಿ ಇಂಡಿಯನೈಜೇಶನ್ ಅಥವಾ ಭಾರತೀಕರಣದ ಹೆಸರಿನಲ್ಲಿ ಚರ್ಚ್‌ಗಳ ಪ್ರವೇಶ ದ್ವಾರದ ಬಳಿ ಗರುಡಗಂಬ ನೆಡುತ್ತಿದ್ದಾರೆ. ಇಂದು ಚರ್ಚ್‌ಗಳಲ್ಲಿ ಅಗರಬತ್ತಿ ಹಚ್ಚಿ ಪೂಜೆ ಮಾಡುವುದು, ಪ್ರಸಾದ, ತೀರ್ಥ ಕೊಡುವುದನ್ನು ಆರಂಭಿಸಲಾಗಿದೆ. ಇದೆಲ್ಲಾ ಏನನ್ನು ಸೂಚಿಸುತ್ತದೆ ಸ್ವಾಮಿ? ಇದು ಮೋಸ ಎನ್ನುವ ಎದೆಗಾರಿಕೆ ನಿಮಗಿದೆಯೇ? ಇನ್ನು ದರ್ಗಾ ಎಂದರೇನು? ಸಮಾಧಿಯಲ್ಲವೆ? ಸಮಾಧಿ ಪೂಜೆ ಮಾಡುವುದೂ ಮೌಢ್ಯವೆನಿಸುವುದಿಲ್ಲವೆ? ವೈಜ್ಞಾನಿಕವಾದ ನಮ್ಮ ಪಂಚಾಂಗ ಮತ್ತು ಜ್ಯೋತಿಷ್ಯಶಾಸ್ತ್ರಗಳನ್ನು ಮೌಢ್ಯವೆನ್ನುವವರಿಗೆ, ವಿಜ್ಞಾನ ಸಾರಾಸಗಟಾಗಿ ತಿರಸ್ಕರಿಸಿರುವ “ಅಡಮ್ ಮತ್ತು ಈವ್‌” ಥಿಯರಿಯನ್ನು ಹೇಳುವವರಲ್ಲಿ, “ಸೂರ್ಯ ಭೂಮಿಯ ಸುತ್ತ ಸುತ್ತುತ್ತಾನೆ” ಎನ್ನುವವರಲ್ಲಿ ಮೌಢ್ಯ ಕಾಣುವುದಿಲ್ಲವೆ? ಕರಡು ವಿಧೇಯಕ ಅಂಥ ವಿಷಯಗಳ ಬಗ್ಗೆ ಏಕೆ ನೇರ ಅಥವಾ ಪರೋಕ್ಷವಾಗಿ ಪ್ರಸ್ತಾಪಿಸುವುದಿಲ್ಲ? ಅಸ್ಟ್ರಾಲಜಿಯಲ್ಲಿ ಹುಳುಕು ಹುಡುಕುವವರಿಗೆ ಜಗತ್ತಿನ ಮುಂದುವರಿದ ಕ್ರೈಸ್ತ ರಾಷ್ಟ್ರಗಳಲ್ಲಿ ಇರುವ ಟ್ಯಾರಟ್ ಕಾರ್ಡ್ಸ್ ಕಾಣಿಸುವುದಿಲ್ಲವೆ? ಇವತ್ತು ನಿರೀಶ್ವರವಾದದ ಬಗ್ಗೆ ಅತಿ ಹೆಚ್ಚು ಪುಸ್ತಕಗಳು ಬಂದಿರುವುದೇ ಕ್ರಿಶ್ಚಿಯಾನಿಟಿ ವಿರುದ್ಧವಲ್ಲವೆ ಹೇಳಿ? ಇತ್ತೀಚೆಗೆ ನಡೆದ “ಹ್ಯಾಲೋವಿನ್‌”ನಲ್ಲಿ ನಿಮಗೆ ಮೌಢ್ಯ ಕಾಣಿಸುವುದಿಲ್ಲವೇ? ಪ್ರತಿ ಧರ್ಮದಲ್ಲೂ ಅದರದ್ದೇ ಆದ ಅಂತರ್ಗತ ಕುರುಡು ನಂಬಿಕೆಗಳಿರುತ್ತವೆ. ಇಲ್ಲವಾದರೆ ಕ್ರಿಶ್ಚಿಯಾನಿಟಿಯೇಕೆ ಕ್ಯಾಥೋಲಿಕ್ಸ್ ಹಾಗೂ ಪ್ರೊಟೆಸ್ಟೆಂಟಿಸಂ ಎಂದು ಹೋಳಾಯಿತು? ಏಕೆ 700 ವರ್ಷಗಳಷ್ಟು ಸುದೀರ್ಘ ಕಾಲ ಬಡಿದಾಡಿದರು? ಇಂದಿಗೂ ಕ್ಯಾಥೋಲಿಕ್ಕರು ‘ಪಾದ್ರಿಗಳು ಮದುವೆಯಾಗಬಾರದು ಎಂದರೆ, ಪ್ರೋಟೆಸ್ಟೆಂಟರು ಪಾದ್ರಿಗಳು ಮದುವೆಯಾಗಲೂಬಹುದು, ಮಕ್ಕಳನ್ನೂ ಮಾಡಿಕೊಳ್ಳಬಹುದು’ ಎನ್ನುತ್ತಾರೆ? ದೆವ್ವ ಅನ್ನೋದು ಇಲ್ಲ, ಆತ್ಮ ಇಲ್ಲ, ಮರುಜನ್ಮ ಇಲ್ಲ ಎಂದು ಪ್ರವಾದಿ ಹೇಳಿದರೂ ತಾಯತ ಕಟ್ಟುವ ದರ್ಗಾಗಳಿವೆ, ಸ್ವರ್ಗದಲ್ಲಿ 72 ಕನ್ಯೆಯರ ಜತೆ ಮಜಾ ಮಾಡಲು ಹೊರಡುವ ಭಯೋತ್ಪಾದಕರು ಸೃಷ್ಟಿಯಾಗಿದ್ದಾರೆ, ಕಟ್ಟರ್‌ಪಂಥೀಯ ವಹಾಬಿಗಳು ತಲೆಯೆತ್ತಿದ್ದಾರೆ. ಕಾಲದ ಜತೆ ಹೆಜ್ಜೆ ಹಾಕಬೇಕೆನ್ನುವ ಪ್ರೊಟೆಸ್ಟೆಂಟಿಸಂ ಒಂದು ಕಡೆಯಾದರೆ, ಮೂಲ ಬೈಬಲ್‌ನಲ್ಲಿ ಇರುವಂತೆಯೇ ನಡೆದುಕೊಳ್ಳಬೇಕೆನ್ನುವ “Apocrypha bible” ವಾದಿಗಳಿದ್ದಾರೆ. ಇನ್ನು ಮಂಗಳಯಾನಕ್ಕೆ ಮೊದಲು ತಿರುಪತಿ ದೇವಾಲಯಕ್ಕೆ ತೆರಳಿ ನಿರ್ವಿಘ್ನವಾಗಿ ಉಡಾವಣೆಯಾಗಲಿ ಎಂದು ಇಸ್ರೋ ಮುಖ್ಯಸ್ಥ ರಾಧಾಕೃಷ್ಣನ್ ಪ್ರಾರ್ಥಿಸಿ ನಾಲ್ಕು ದಿನಗಳಾಗಿಲ್ಲ. ವಿಶ್ವವಿಖ್ಯಾತ ಗಣಿತ ಶಾಸ್ತ್ರಜ್ಞರಾದ ಜಿ.ಎಚ್. ಹಾರ್ಡಿ ಕಟ್ಟಾ ನಿರೀಶ್ವರವಾದಿಯಾಗಿದ್ದರೆ, ಅವರ ಸ್ನೇಹಿತ ಹಾಗೂ ವಿಶ್ವವಿಖ್ಯಾತ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಆ ದೇವಿಯೇ ನನ್ನ ಮೂಲಕ ಗಣಿತದ ಸೂತ್ರಗಳನ್ನು ಬರೆಸುತ್ತಿದ್ದಾಳೆ ಎಂದು ನಂಬಿದ್ದರು. ನನಗೆ ಸಾವಿನ ಅನುಭವವಾಯಿತು, ನನ್ನ ಸಾವನ್ನು ನಾನೇ ನೋಡಿದೆ ಎನ್ನುವ ಪ್ಯಾರಾ ಸೈಕಾಲಜಿಯನ್ನು ಇಂದು ನಾವು ಕಾಣುತ್ತಿದ್ದೇವೆ. ಅಲೋಪತಿಯ ವ್ಯಾಪ್ತಿಗೇ ನಿಲುಕದ್ದನ್ನೂ ಗುಣಪಡಿಸುತ್ತಿರುವ ಆಲ್ಟರ್ನೇಟಿವ್ ಮೆಡಿಸಿನ್‌ಗಳಾದ ಪ್ರಾಣಿಕ್ ಹೀಲಿಂಗ್, ರೇಕಿ, ಮ್ಯಾಗ್ನೆಟಿಕ್ ಥೆರಪಿ, ಆಕ್ಯುಪಂಕ್ಚರ್, ಆಕ್ಯುಪ್ರೆಷರ್‌ಗಳು ಬಂದಿವೆ. ನಮ್ಮ ಎಷ್ಟೋ ಹಿಂದು ನಂಬಿಕೆ, ಆಚರಣೆಗಳ ಹಿಂದೆಯೂ ವೈಜ್ಞಾನಿಕ ಕಾರಣಗಳಿವೆ. ಅದಿರಲಿ, ಇದೇನಿದು Guineapig  (ಗಿನಿಪಿಗ್)? ಹೊಸ ಔಷಧಗಳ ಪ್ರಯೋಗವನ್ನು ಪ್ರಾಣಿಗಳ ಮೇಲೆಯೇ ಮಾಡುವುದೇಕೆ? ಮನುಷ್ಯ ಮೇಲು ಎಂಬ ಭಾವನೆ ವಿಜ್ಞಾನಿಗಳಿಗೂ ಇದೆ ಅಲ್ಲವೆ? ಇದೂ ಮೂಢನಂಬಿಕೆಯಲ್ಲವೆ? ಮುಖ್ಯಮಂತ್ರಿಗಳೇ, ಪ್ರತಿಯೊಂದು ಧರ್ಮಕ್ಕೂ, ಜನರಿಗೂ ಅವರದ್ದೇ ಪಾವಿತ್ರ್ಯ, ನಂಬುಗೆ ಇರುತ್ತವೆ. ನಂಬಿಕೆಗಳು ಅಹೋರಾತ್ರಿ ಸೃಷ್ಟಿಯಾಗುವುದಿಲ್ಲ. ಕಿಡಿಗೇಡಿ ಸಾಹಿತಿಗಳನ್ನು ಸೇರಿಸಿಕೊಂಡು ಇಲ್ಲ ಸಲ್ಲದ ವಿಚಾರಕ್ಕೆ ಕೈಹಾಕಬೇಡಿ. ಡೂಸ್ ಅಂಡ್ ಡೋಂಟ್ಸ್ ಜನ ಮಾಡಿಕೊಳ್ಳುತ್ತಾರೆ. ಜನರ ಯಾವುದಾದರೂ ಆಚರಣೆಗಳಿಂದ ಸಮಾಜಕ್ಕೆ ತೊಂದರೆಯಾಗುತ್ತಿದ್ದರೆ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದ್ದರೆ ಸರ್ಕಾರ ಮಧ್ಯಪ್ರವೇಶಿಸಬೇಕು ಅಷ್ಟೇ. ಸಾಕ್ಷರತೆ, ತಿಳಿವಳಿಕೆ ಹೆಚ್ಚಾದಂತೆ ಹಿಂದುಗಳು, ಕ್ರೈಸ್ತರು, ಮುಸಲ್ಮಾನರಲ್ಲೂ ಬದಲಾವಣೆಗಳಾಗಿವೆ. ಜನರಿಗೆ ಶಿಕ್ಷಣ ಕೊಡಿ ಸ್ವಾಮಿ. ನೂರಕ್ಕೆ 100ರಷ್ಟು ಸಾಕ್ಷರತೆ ತನ್ನಿ. ಅದು ಸರ್ಕಾರ ಮಾಡಬೇಕಾದ ಕೆಲಸ. ಬೆತ್ತಲೆ ಸೇವೆ ನಿಷೇಧ ಮಾಡುವುದರ ಜೊತೆಗೆ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ಜನರಿಗೆ ಸಂಡಾಸಿಗೆ ಹೋಗಲು ಶೌಚಾಲಯ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿಕೊಡಿ. ಇಲ್ಲವಾದಲ್ಲಿ ಶೌಚದ ನೆಪದಲ್ಲಿ ಅವರು ನಿತ್ಯ ಬೆತ್ತಲೆ ಸೇವೆಮಾಡಬೇಕಾಗುತ್ತದೆ! ನಿಮ್ಮ ಬರಗೂರು ರಾಮಚಂದ್ರಪ್ಪನವರನ್ನು ಕೇಳಿ, ಅವರ ಸಿನಿಮಾಗಳ ಪ್ರಾರಂಭಕ್ಕೆ ಮುನ್ನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವುದಿಲ್ಲವೆ? ನಿಮ್ಮ ಸಾಹಿತಿ ಹಿಂಬಾಲಕರು, ದೇಶಿಯತೇ(ನೇಟಿವಿಟಿ), ಜಾನಪದ ಉಳಿಯಬೇಕು ಎನ್ನುತ್ತಾರೆ. ಅವು ನಿಂತಿರುವುದೇ ನಂಬಿಕೆ, ಆಚರಣೆಗಳ ಮೇಲೆ. ಬರಗೂರರಿಗೆ ಬಹಳ ಇಷ್ಟವಾಗುವ ಹಾಗೂ ಮೆಚ್ಚುವ ರಾಜ್‌ಕುಮಾರ್ ನಟಿಸಿರುವ ಎಷ್ಟು ಸಿನಿಮಾಗಳಲ್ಲಿ ಪವಾಡ, ದೈವೀಕೃಪೆ, ರಕ್ಷಣೆ ಇಲ್ಲ ಹೇಳಿ? ಆ ಚಿತ್ರಗಳನ್ನೇಕೆ ಮೌಢ್ಯವನ್ನು ಬಿತ್ತುತ್ತಿವೆ ಎಂದು ವಿರೋಧಿಸಿರಲಿಲ್ಲ? ಕಾರ್ಲ್ ಮಾರ್ಕ್ಸ್, ಲೆನಿನ್, ನೆಹರು ಹೇಳಿದ್ದೇ ಸರಿ ಎಂದು ನಂಬಿ ಕುಳಿತಿರುವ ಇವರೇ ದೊಡ್ಡ ಮೂಢರು. ಇಷ್ಟಕ್ಕೂ ಮಾರ್ಕ್ಸ್‌ವಾದಕ್ಕೆ ನೇತುಹಾಕಿಕೊಂಡ ಸೋವಿಯತ್ ರಷ್ಯಾ ಸಿಡಿದು ಚೂರಾಗಲಿಲ್ಲವೆ? ಅದಿರಲಿ, ಡಾ. ಸಿದ್ದಲಿಂಗಯ್ಯ, ಡಾ. ಮರುಳಸಿದ್ದಪ್ಪ, ಜಿ. ರಾಮಕೃಷ್ಣರನ್ನು ಇನ್ನೂ “ಸಾಹಿತಿ”ಗಳೆಂದು, “ಚಿಂತಕರೆಂದು” ನಂಬಿಕೊಂಡಿದ್ದೀರಲ್ಲಾ ಇದಕ್ಕಿಂತ ದೊಡ್ಡ “ಮೂಢನಂಬಿಕೆ” ಯಾವುದಿದೆ ಸಿದ್ದರಾಮಯ್ಯನವರೇ? ಇವರು ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಬರೆದ ಹಾಗೂ ಜನಮೆಚ್ಚುಗೆಗೆ ಪಾತ್ರವಾದ ಒಂದು ಕೃತಿಯನ್ನು, ಸಮಾಜಕ್ಕೆ ಲಾಭವಾದ ಇವರ ಒಂದು ಚಿಂತನೆಯನ್ನು ದಯವಿಟ್ಟು ಉದಾಹರಿಸುತ್ತೀರಾ? ಮುಖ್ಯಮಂತ್ರಿಗಳೇ,  ನಿಮ್ಮ “ಮೂಢನಂಬಿಕೆ”ಯಿಂದ ಮೊದಲು ಹೊರಬಂದರೆ ನಿಮ್ಮ ಪಕ್ಷದಲ್ಲೇ ಇರುವ ಜ್ಞಾನಿಗಳಾದ, ಸಮಾಜದ ಸಂವೇದನೆಗಳನ್ನು ಅರಿತುಕೊಂಡಿರುವ ಡಾ. ಪರಮೇಶ್ವರ, ಬಿ.ಎಲ್. ಶಂಕರ್, ಡಾ. ಮಹಾದೇವಪ್ಪ, ವಿ.ಆರ್. ಸುದರ್ಶನ್‌ರು ಕಾಣುತ್ತಾರೆ. ಅವರಂಥವರ ಸಲಹೆ ಪಡೆದರೆ ಇಂಥ ಅನಾಹುತ ತಪ್ಪುತ್ತದೆ.ಅಲ್ಲ, ದಲಿತ ದೌರ್ಜನ್ಯ ತಡೆಯಂತೆ, ಈ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಕಾಯಿದೆ ಕೂಡಾ ದುರುಪಯೋಗವಾಗುವುದಿಲ್ಲ ಎಂದು ಹೇಗೆ ಹೇಳಲು ಸಾಧ್ಯ? ನಿಮ್ಮ ಮನೆ ಮುಂದೆ ನೀವೇ ನಿಂಬೆಹಣ್ಣು, ಕುಂಕುಮ ಹಾಕಿಕೊಂಡು ಇನ್ಯಾರದ್ದೋ ವಿರುದ್ಧ ಕೇಸು ಹಾಕಿದರೆ ಗತಿಯೇನು? ಈ ಬಗ್ಗೆ ಯೋಚಿಸಿದ್ದೀರಾ? ಶಾಲೆಗಳಲ್ಲಿ ಪೂಜೆ ಮಾಡಬಾರದು ಎಂಬ ನಿರ್ಬಂಧದ ಹಿಂದಿರುವ ಮನಸ್ಥಿತಿ ಏನು ಅಂತ ಬಿಡಿಸಿಹೇಳುತ್ತೀರಾ? ಪೂಜೆಗೂ ಮೌಢ್ಯಕ್ಕೂ ಏನು ಸಂಬಂಧ? ಅಥವಾ ನಿಮ್ಮ ಸೆಕ್ಯುಲರ್ ಅಜೆಂಡಾ ಇಂಥ ಯೋಚನೆಗಳನ್ನು ಸೃಷ್ಟಿಸುತ್ತಿದೆಯೇ? 2005, ಜನವರಿಯಲ್ಲಿ ಬೆನ್ನಿ ಹಿನ್ ಎಂಬ ಮೌಢ್ಯದ ಜಾಗತಿಕ ವ್ಯಾಪಾರಿ ಹಾಗೂ ಸೋಗಲಾಡಿಗೆ ಅರಮನೆ ಮೈದಾನದಲ್ಲಿ ಆತಿಥ್ಯ ಕೊಟ್ಟಿದ್ದ ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ಮೂಢನಂಬಿಕೆಗಳ ಬಗ್ಗೆ ಮಾತನಾಡುವ, ನಿಷೇಧಿಸುವ ನೈತಿಕ ಹಕ್ಕಿದೆಯೇ, ಮೊದಲು ಹೇಳಿ? ಕೊನೆಯದಾಗಿ, ಸಿದ್ದರಾಮಯ್ಯನವರೇ ನಿಮ್ಮ ಮುಂದೆ ಮಾಡಲು ಬೆಟ್ಟದಷ್ಟು ಕೆಲಸಗಳಿವೆ, ಜವಾಬ್ದಾರಿಗಳಿವೆ. ನಿಮ್ಮನ್ನು ಜನ ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಿರುವುದು ನೀವು ಪ್ರಗತಿಪರರು ಎಂಬ ಕಾರಣಕ್ಕಲ್ಲ ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ಆಗ ಪಡಪೋಶಿ ಸಾಹಿತಿಗಳು, ಚಿಂತಕರ ಕಿಡಿಗೇಡಿತನಕ್ಕೆ ನಿಮ್ಮ ಸರ್ಕಾರ ಹಾಗೂ ರಾಜ್ಯದ ಆಡಳಿತ ಬಲಿಯಾಗುವುದು ತಪ್ಪುತ್ತದೆ.

120 Responses to “ಇದೇನು ವಿಧೇಯಕವೋ, ಹಿಂದು ನಂಬಿಕೆಗಳನ್ನು ಒಡೆವ ಕುತಂತ್ರವೋ?!”

  1. Ashwin says:

    ಅದಿರಲಿ, ಡಾ. ಸಿದ್ದಲಿಂಗಯ್ಯ, ಡಾ. ಮರುಳಸಿದ್ದಪ್ಪ, ಜಿ. ರಾಮಕೃಷ್ಣರನ್ನು ಇನ್ನೂ “ಸಾಹಿತಿ”ಗಳೆಂದು, “ಚಿಂತಕರೆಂದು” ನಂಬಿಕೊಂಡಿದ್ದೀರಲ್ಲಾ ಇದಕ್ಕಿಂತ ದೊಡ್ಡ “ಮೂಢನಂಬಿಕೆ” ಯಾವುದಿದೆ ಸಿದ್ದರಾಮಯ್ಯನವರೇ?

    For me this was the best sentence which will hit hard (if they read this article).

    Good Article, Keep it up.

  2. Hindu! says:

    Good one!

  3. Ganesh says:

    super,,,,,,ಒಂದು ರಾಜ್ಯ ದ ಸರಕಾರಕ್ಕೆ ಜನರ ಸಮಸ್ಯೆ ಯನ್ನು ನಿವಾರಣೆ ಮಾಡುವುದನ್ನು ಬಿಟ್ಟು ಬಟ್ಟಂಗಿ ಗಳಾದ ವಿಚಾರವಾದಿಗಳು ,ಬುದ್ದಿಜೀವಿಗಳು, ಅಲ್ಪಸಂಕ್ಯತರ ಮಾತು ಕೇಳಿ ಬಹುಸಂಖ್ಯತರನ್ನು ಹೀಯ್ಯಳಿಸುವ ಕೆಲಸ ಮಾಡುತಿದೆ

  4. ravi bannadi says:

    Lekhana sogasaagide, moudyagalu kaanunininda hogalaadisalu saadhyavilla, adannu arivininda nidhanavaagi tholagisabeku. modalu nambike yaavudu, moodanambike yaavudu anta patti maadabeku. kevala hindugalannu target maadi, bere dharmada moudyada bagge maathanaduva dhaira ee karadu samithi rachane kaararigideye? avaralli nijavaaglu PURUSHATHVA iddare bere dharmada nambikegalla bagge bahiranga charchege barali nodona. Hindugala soumya swabhava hinugalige muluvaayithu. nanna anisike prakara hindu dharmadalliruva kelavu kandachaaraglu tholagale beku. avugalu yavudendare, banamathi, vaamachaara, narabali, prani bali innu kelavu krura paddathigalu. aadare avugalannu kaanunininda hogaladisuva badalu, janare oggattagi, shikhanadinda hogaladisalu saadhy.

  5. Manjunath BV says:

    Really a great article..prode to read this…
    We support you for all your protests against this new rule by Karnataka Govt

  6. sampreeth k h says:

    give proper education and basics to the people let them decide whats right r whats wrong

  7. shivaylogi i h says:

    evru buddijevigalu alla evru dadda jevigalu evrind e nadige yav gankarya aguvdilla.pratap sir

  8. vasant Shastri says:

    Superb reply to Congress. Now I have points to put my arguments against seudo intellectuals. Yhank u Pratap ji.

  9. Prakash says:

    Amazing article sir.. Our chief minister doesnt even have a common sense or basic sense, why because bringing these kind of baseless laws will not help anybody. It is so obivious that he is trying to get the attention of minority people just for votes. Watta cheap trick these politicians play. shame on them sir.. If he has genuine reasons to implement this law, let him answer all your questions…

    I have no words to describe the worth of this article.. its a straight slap on CM’s cheek.. Thanks.. you are just amazing Sir..

    Regards,
    Prakash B

  10. Gopalakrishna Bhat says:

    Very good article. Require many more such articles from you sir. This so called “Secular” Congress party doesnt have guts to stop the superstitions followed by Christians and Muslims.

  11. Prakash. P says:

    ಹಿಂದೂ ಧಾರ್ಮಿಕ ನಂಬಿಕೆಗಳೇ ಬೇರೆ, ಮೌಡ್ಯತೆಯೇ ಬೇರೆ .
    ಹಿಂದೂ ಧಾರ್ಮಿಕ ನಂಬಿಕೆಯನ್ನು ಬೆರೆಸಿಕೊಂಡಿರುವ ಅನೇಕ ವೈಜ್ಞಾನಿಕತೆ ಉಂಟು ಅವುಗಳಿಂದ ಸಮಾಜಕ್ಕೆ, ಜನತೆಗೆ ಒಳಿತಾಗುತ್ತಿದೆ.
    ಆದರೆ ಮೌಡ್ಯತೆಗಳೂ ಧಾರ್ಮಿಕ ನಂಬಿಕೆಯ ಸೋಗಿನಲ್ಲಿ ಇದ್ದು
    ಕಲಬೆರಕೆಯಾಗಿದೆ. ಆದ್ದರಿಂದ ಪ್ರತಾಪ್ ರವರೇ ಜನರನ್ನು ಅದರಲ್ಲೂ ಯುವಕರನ್ನು ದಿಕ್ಕುತಪ್ಪಿಸುವ ಕೆಲಸ ಮಾಡಬೇಡಿ , ಸಾದ್ಯವಾದರೆ ಚೆನ್ನಾಗಿ ಅಭ್ಯಾಸ ಮಾಡಿ ಮೂಢ ನಂಬಿಕೆ ಮತ್ತು ಧಾರ್ಮಿಕ ನಂಬಿಕೆಯ ವ್ಯತ್ಯಾಸವನ್ನು ಯುವ ಪೀಳಿಗೆಗೆ ತಿಳಿಸಲು ಪ್ರಯತ್ನಿಸಿ, ನಿಮಗೆ ಉತ್ತಮ ಪ್ರತಿಭೆಯಿದೆ, ವಿಚಾರಗಳನ್ನು ಹೊರಗಿನ ಪ್ರಪಂಚಕ್ಕೆ ಚೆಲ್ಲುವ ಅದ್ಭುತವಾದ ಕಲೆಯನ್ನು ನೀವು ಕರಗತ ಮಾಡಿಕೊಂಡಿದ್ದೀರಿ, ಭೇಷ್. ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು, ಆರೋಗ್ಯಕರವಾದ ಸಮಾಜವನ್ನು ನಿರ್ಮಾಣ ಮಾಡಲು ಅದನ್ನು ಉಪಯೋಗಿಸಿ, ಆದರೆ ಬಿಟ್ಟಿಯಾಗಿ ಪ್ರಸಿದ್ದಿಯಾಗಲು ಪ್ರಯತ್ನಿಸ ಬೇಡಿ. ರಾಜಕಾರಣಿಗಳು ಜಾತಿಯನ್ನು ಉಪಯೋಗಿಸಿ ಪ್ರಸಿದ್ಧಿ ಬರಲು ಪ್ರಯತ್ನಿಸುತ್ತಿರುವುದು ಇವತ್ತಿನ ಟ್ರೆಂಡ್ ಆಗಿದೆ. ಆದರೆ ನೀವು ವಿಚಾರವಂತರು, ಮೂಢ ನಂಬಿಕೆಯನ್ನು ಪ್ರೋತ್ಸಾಹಿಸಿ ನಿಮ್ಮ ಬೇಳೆ ಕಾಳು ಬೇಯಿಸಲು ಪ್ರಯತ್ನಿಸುತ್ತಿರುವುದು ನಿಮಗೆ ಶೋಭೆ ತರುವಂತದ್ದಲ್ಲ.

  12. harish says:

    innu swalpa bidisi heli sir namma darmada bagge siddaramayange………..innu enenu kelbeko ivra kaladalli.

  13. Prakash. P says:

    ಹಿಂದೂ ಧಾರ್ಮಿಕ ನಂಬಿಕೆಗಳೇ ಬೇರೆ, ಮೌಡ್ಯತೆಯೇ ಬೇರೆ .
    ಹಿಂದೂ ಧಾರ್ಮಿಕ ನಂಬಿಕೆಯನ್ನು ಬೆರೆಸಿಕೊಂಡಿರುವ ಅನೇಕ ವೈಜ್ಞಾನಿಕತೆ ಉಂಟು ಅವುಗಳಿಂದ ಸಮಾಜಕ್ಕೆ, ಜನತೆಗೆ ಒಳಿತಾಗುತ್ತಿದೆ.
    ಆದರೆ ಮೌಡ್ಯತೆಗಳೂ ಧಾರ್ಮಿಕ ನಂಬಿಕೆಯ ಸೋಗಿನಲ್ಲಿ ಇದ್ದು
    ಕಲಬೆರಕೆಯಾಗಿದೆ. ಆದ್ದರಿಂದ ಪ್ರತಾಪ್ ರವರೇ ಜನರನ್ನು ಅದರಲ್ಲೂ ಯುವಕರನ್ನು ದಿಕ್ಕುತಪ್ಪಿಸುವ ಕೆಲಸ ಮಾಡಬೇಡಿ , ಸಾದ್ಯವಾದರೆ ಚೆನ್ನಾಗಿ ಅಭ್ಯಾಸ ಮಾಡಿ ಮೂಢ ನಂಬಿಕೆ ಮತ್ತು ಧಾರ್ಮಿಕ ನಂಬಿಕೆಯ ವ್ಯತ್ಯಾಸವನ್ನು ಯುವ ಪೀಳಿಗೆಗೆ ತಿಳಿಸಲು ಪ್ರಯತ್ನಿಸಿ, ನಿಮಗೆ ಉತ್ತಮ ಪ್ರತಿಭೆಯಿದೆ, ವಿಚಾರಗಳನ್ನು ಹೊರಗಿನ ಪ್ರಪಂಚಕ್ಕೆ ಚೆಲ್ಲುವ ಅದ್ಭುತವಾದ ಕಲೆಯನ್ನು ನೀವು ಕರಗತ ಮಾಡಿಕೊಂಡಿದ್ದೀರಿ, ಭೇಷ್. ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು, ಆರೋಗ್ಯಕರವಾದ ಸಮಾಜವನ್ನು ನಿರ್ಮಾಣ ಮಾಡಲು ಅದನ್ನು ಉಪಯೋಗಿಸಿ, ಆದರೆ ಬಿಟ್ಟಿಯಾಗಿ ಪ್ರಸಿದ್ದಿಯಾಗಲು ಪ್ರಯತ್ನಿಸ ಬೇಡಿ. ರಾಜಕಾರಣಿಗಳು ಜಾತಿಯನ್ನು ಉಪಯೋಗಿಸಿ ಪ್ರಸಿದ್ಧಿ ಬರಲು ಪ್ರಯತ್ನಿಸುತ್ತಿರುವುದು ಇವತ್ತಿನ ಟ್ರೆಂಡ್ ಆಗಿದೆ. ಆದರೆ ನೀವು ವಿಚಾರವಂತರು, ಮೂಢ ನಂಬಿಕೆಯನ್ನು ಪ್ರೋತ್ಸಾಹಿಸಿ ನಿಮ್ಮ ಬೇಳೆ ಕಾಳು ಬೇಯಿಸಲು ಪ್ರಯತ್ನಿಸುತ್ತಿರುವುದು ನಿಮಗೆ ಶೋಭೆ ತರುವಂತದ್ದಲ್ಲ.

  14. shweta says:

    very sad to discover that your maturity in writing skills has not improved over the years…..your ideas are quiet biased as always ( like in most of your columns)..in this case many times you seem to have gone off the subject and imagined extreme possibilities…and for the people who have made this legislation,Please make an attempt to touch their brains …not their ego.

  15. Praveen says:

    Hi,

    I am not sure how many people treat Mr.Pratap has a journalist/writer or BJP brand.If guys agree that he is BJP Brand then, this forum is not the right place to discuss far and against. Satish has clearly mention the draw backs that Pratap has done, without reading the article dont come to conclusions. This fellow always try to push BJP in ppl mouth which seems to be not correct. Please compare with this fellow with Chetan Bhagat who is also writer and against BJP, just read his books/articles and then see how he makes man thinking. I think journalist/writer needs to make think about the reality, based on that ppl need to decide. This fellow is alltime baised by Modi because is he will be benefited in many ways. When Former CM’s gave crores together to Mata why you guys kept quiet..I know most of them from Banglore, but in 2008 -09 same BJP couldn’t construct the house in North when they were in trouble. In 2008-09 he was against Yeddi, all of a sudden in 2009-10 he became soft on Yeddi. not sure why..He wrote the book on Modi and tel me how many poor people it reached. I will say it was reached for ppl like u and me who are work in big companies. Not Modi/Congress/Kumarswamy wil sort out our problems.
    We our selfs needs to fix the issue else what will Modi do after becoming PM …he wil just enjoy his Buiness life 🙂

    Praveen

  16. Shreedhar says:

    Hats off Prathap Simha.

  17. Rudresh says:

    it’s amezing article

  18. vishwanathaiah says:

    super sir your knowldge is very well

  19. darshan h u says:

    sir nan hesru darshan antha civil engineering student sir nau 5 clss ninda nim articals odthidini nanage nivu e artical bardiddu hindu dharma da rakshane gagi annodu thumba kushi aguthe……………………….
    sir siddaramaya sarkara modle ganddi neralalli beleda sarkara alva sir ganddi adakke avara dharane tharane erodralli enu sham shayane ella biddi…. yake andre avathu ganddi obba hindu agi hindusthan nalli hutti bere dharma da ollivgagi horadidru hege andre …. andu pakisthana vibhajane adaga bharatha pakisthanada dhoraneyannu kandissi kodabekad 55 kotti roopaiyannu pakisthanadavara jothe seri opasa sathyagraha madi pakisthanakke sahaya madidavaru alva…. hindu gala prarthana mandiradalli kuran na kela ayada bhagagalannu oddi hindugallige muslimara kade oluvu harisodakke kuthanthra madidavara adarshadalli beleda sarkara alva sir adakke evaru hindugallannu bittu bere dharmada ollivigagi pana thottidare alva sir……………by darshan civil engg student shimoga 9972172128

  20. prasanna says:

    enu madodhu sir enthaha nachigetta sarkaravannu gellisidde namma hindugale thane anubavisona…hindugalalle oggatila enu maduvudu..madidunno maharaya…