*/
Date : 10-12-2016 | no Comment. | Read More
ಬಂದೇ ಬಿಟ್ಟಿತು ಪುತ್ತರಿ, ಉಳಿದವರಿಗೆ ಸಂಕ್ರಾಂತಿ, ತಮಿಳರಿಗೆ ಪೊಂಗಲ್, ಅಸ್ಸಾಮಿಗೆ ಬಿಹು, ಪಂಜಾಬಿಗೆ ಬೈಸಾಕಿ! ಇಳೆ, ಮಳೆಯಿಂದ ತೊಯ್ದು ಹದವಾದಾಗ ಆರಂಭವಾಗುವಾಗುವ ಬಿತ್ತನೆ ಅಥವಾ ನಾಟಿ ಪೈರಾಗಿ ಬೆಳೆದು ತೆನೆ ಮೂಡಿ, ಹಾಲುಗಟ್ಟಿ ಮಾಗಿ ಕಟಾವಿಗೆ ಬಂದಾಗ ಆರಂಭವಾಗುತ್ತದೆ ವರ್ಷದ ಕೂಳು ಕೊಡುವ ಭೂತಾಯಿಗೆ ಧನ್ಯತೆಯನ್ನು ವ್ಯಕ್ತಪಡಿಸುವ ಹಬ್ಬ. ಬರುವ 13ನೇ ತಾರೀಖು ನಮ್ಮ ಕೊಡಗಿನಲ್ಲಿ ಈ ಹಬ್ಬ ಪುತ್ತರಿ ಅಥವಾ ಹುತ್ತರಿಯಾಗಿ ಆಚರಣೆಯಾಗುತ್ತದೆ, ಉಳಿದ ಭಾಗಗಳಲ್ಲಿ ಮಕರ ಸಂಕ್ರಾಂತಿಯಾಗಿ, ಅಸ್ಸಾಮಿನಲ್ಲಿ ಬಿಹುವಾಗಿ, ತಮಿಳುನಾಡಿನಲ್ಲಿ ಪೊಂಗಲ್ ಆಗಿ, […]
Date : 03-12-2016 | no Comment. | Read More
ನೋಟು ರದ್ದೇನೋ ಸರಿ, ಆದರಿಂದ ನಮಗೇನು ಸಿಗುತ್ತೇ ರೀ?! ಎರಡು ವರ್ಷ ಕಳೆಯಿತು, ನಮಗೇನು ದೊರೆಯಿತು? ಈ ಪ್ರಶ್ನೆ ಕೆಲ ತಿಂಗಳ ಹಿಂದೆ ನಿಮ್ಮನ್ನು ಕಾಡಿತ್ತು, ಅದರ ಬೆನ್ನಲ್ಲೇ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಯಿತು, ನಿಮಗೂ ಸಮಾಧಾನವಾಯಿತು. ಅದಾಗಿ ಕೆಲವೇ ತಿಂಗಳಲ್ಲಿ 500, 1000 ರೂಪಾಯಿ ನೋಟನ್ನು ರದ್ದು ಮಾಡಿದ್ದಾರೆ ಮೋದಿ, ಕೆಲವರಿಗೆ ಒಳಗೊಳಗೇ ಬೇಗುದಿ, ಮುಂದೇನು ಕಾದಿದೆ ಎಂಬ ಆತಂಕ. ಇನ್ನು ನೋಟು ರದ್ದು ಮಾಡಿದ್ದೇನೋ ಸರಿ, ಆದರೆ ನಮಗೇನು ಸಿಗುತ್ತೇ ರೀ? […]
Date : 26-11-2016 | no Comment. | Read More
ಗೇಲಿ ಮಾಡುತ್ತಿದ್ದವರ ಮುಂದೆಯೇ ಬೆಳೆದುನಿಂತ ಪತಂಜಲಿ ಮತ್ತು ಜಾಲಿ ನೋಟಿನ ಕಥೆ ನಾವು ಬೆಳಗ್ಗೆ ಎದ್ದ ಕೂಡಲೇ ಬಳಸುವ ಬ್ರಸ್ಸು, ಟೂತ್ ಪೇಸ್ಟ್, ಸಾಬೂನಿನಿಂದ ಹಿಡಿದು ಚಪಾತಿ ಹಿಟ್ಟಿನವರೆಗೂ ಮನೆಬಳಕೆಯ ಎಲ್ಲ ವಸ್ತುಗಳ ಉತ್ಪಾದನೆಯಲ್ಲಿ ಭಾರತೀಯ ಮಾರುಕಟ್ಟೆಯನ್ನೇ ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ವಿದೇಶಿ ಕಂಪನಿಗಳಾದ ಹಿಂದೂಸ್ಥಾನ್ ಲೀವರ್ ಲಿಮಿಟೆಡ್ ಮತ್ತು ಐಟಿಸಿಯನ್ನು ಹೆಡೆಮುರಿ ಕಟ್ಟುವುದು ಅಥವಾ ಹಿಂದಕ್ಕೆ ಹಾಕುವುದನ್ನು ಮತ್ತೊಂದು ಬಹುರಾಷ್ಟ್ರೀಯ ಕಂಪನಿಗೂ ಕೂಡಾ ಊಹಿಸಿಕೊಳ್ಳಲೂ ಸಾಧ್ಯವಾಗದ ಮಾತಾಗಿತ್ತು. ಇನ್ನು ಭಾರತೀಯ ಕಂಪನಿಯೊಂದು ಅಂಥ ಸಾಹಸಕ್ಕೆ ಕೈಹಾಕುವುದನ್ನು […]
Date : 19-11-2016 | no Comment. | Read More
ಇನ್ನೂ ಸ್ವಲ್ಪ ಸಾವಕಾಶ, ಇದು ದೇಶವನ್ನು ಸರಿಪಡಿಸಲು ನಿಮಗೇ ಸಿಕ್ಕಿರುವ ಅವಕಾಶ! ——————————————————————————————————– ಒಮ್ಮೆ ಹಳೆಯದ್ದನ್ನೆಲ್ಲ ನೆನಪಿಸಿಕೊಳ್ಳಿ…. ಕಾರಿನ ಸೀಟ್ ಬೆಲ್ಟ್ ಹಾಕಿಕೊಳ್ಳಲೇಬೇಕು ಎಂದು ನಿಯಮ ಮಾಡಿದಾಗ ನಿಮಗೆ ಕಿರಿ ಕಿರಿಯಾಗಿತ್ತಲ್ಲವೆ? ಬೆಲ್ಟ್ ಹಾಕಿಕೊಳ್ಳುವುದನ್ನು ಪದೇ ಪದೆ ಮರೆತು ದಂಡ ಹಾಕಿಸಿಕೊಂಡಾಗ ನಿಯಮ ಮಾಡಿದವರ ಮೇಲೆ ಸಿಟ್ಟುಗೊಂಡಿದ್ದಿರಲ್ಲವೆ? ಹೆಲ್ಮೆಟ್ ಕಡ್ಡಾಯ ಮಾಡಿದಾಗಲೂ ಕೋಪ ಬಂದಿತ್ತು! ಅದರಲ್ಲೂ ಹಿಂಬದಿ ಸವಾರನಿಗೂ ಹೆಲ್ಮೆಟ್ ಕಡ್ಡಾಯವೆಂದಾಗಲಂತೂ ಸಿಟ್ಟು ನೆತ್ತಿಗೇರಿತ್ತು ಅಲ್ವಾ? ಹೌದು, ಯಾವುದೇ ಹೊಸ ವ್ಯವಸ್ಥೆ, ನಿಯಮ ಬಂದಾಗ ಅದಕ್ಕೆ ಹೊಂದಿಕೊಳ್ಳಲು […]
Date : 13-11-2016 | no Comment. | Read More