*/
Date : 22-06-2013 | 40 Comments. | Read More
ಟೋಪಿ ಔರ್ ತಿಲಕ್! ಕಳೆದ ಏಪ್ರಿಲ್ನಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ದಾಮೋದರದಾಸ್ ಮೋದಿಯವರನ್ನು ಪರೋಕ್ಷವಾಗಿ ಕುಟುಕುತ್ತಾ, “ಕಭಿ ಟೋಪಿ ಭಿ ಪಹನ್ನಾ ಪಡ್ತಾ ಹೈ, ಕಭಿ ಟಿಕಾ ಭಿ ಲಗಾನಾ ಪಡ್ತಾ ಹೈ”, ಅಂದರೆ ಕೆಲವೊಮ್ಮೆ ಟೋಪಿಯನ್ನೂ(ಮುಸಲ್ಮಾನರ) ಹಾಕಬೇಕಾಗುತ್ತದೆ, ತಿಲಕವನ್ನೂ(ಹಿಂದುಗಳ) ಇಟ್ಟುಕೊಳ್ಳಬೇಕಾಗುತ್ತದೆ ಎಂದಾಗಲೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರರ ನಿಜ ಬಣ್ಣ, ಉದ್ದೇಶ ಬಯಲಾಗಿತ್ತು. ಮುಂದುವರೆದು, “ಕೇವಲ್ ಹವಾ ಬನಾನೆ ಸೆ ಕುಛ್ ನಹೀ ಹೋಗಾ” ಎಂದಾಗಲಂತೂ ಅವರು ನರೇಂದ್ರ ಮೋದಿಯವರ ಬಗ್ಗೆ ಮತ್ಸರ ಹೊಂದಿದ್ದಾರೆ ಮಾತ್ರವಲ್ಲ, […]
Date : 17-06-2013 | 14 Comments. | Read More
ಇದ್ದ ಒಬ್ಬ ಮಗನನ್ನೂ ಮೃತ್ಯು ಕಿತ್ತುಕೊಳ್ಳುವ ಭಯ, ಆತಂಕ ಮುಖ, ಮನಸ್ಸು ಎಲ್ಲವನ್ನೂ ಆವರಿಸಿದೆ. ಅಂತಹ ಸ್ಥಿತಿಯಲ್ಲಿ ಡಾ. ವೆಸ್ ಪೇಸ್ ಮುಂಬೈ ವಿಮಾನ ನಿಲ್ದಾಣದಲ್ಲಿ ನಿಂತಿದ್ದಾರೆ. ಅಷ್ಟರಲ್ಲಿ ಪರಿಚಿತವಲ್ಲದ ನಂಬರೊಂದರಿಂದ ಅವರ ಮೊಬೈಲ್ಗೆ ಮೆಸೇಜ್ ಬಂತು- “ಬಾಂಬೆ ಹಾಸ್ಪಿಟಲ್ನ ಡಾ. ಭೀಮ್ಸಿಂಘಾಲ್ರನ್ನು ಕೂಡಲೇ ಸಂಪರ್ಕಿಸಿ”. ಆ ಸಂದೇಶವನ್ನು ಕಳುಹಿಸಿದ್ದವರು ಉದ್ಯಮಿ ಪಾರ್ಥಿವ್ ಕಿಲಾಚಂದ್. ಅವರ ಪತ್ನಿಯ ಮೆದುಳಿನಲ್ಲಿ ಗಡ್ಡೆಯೊಂದು ಬೆಳೆದಿತ್ತು. ಶಸ್ತ್ರಚಿಕಿತ್ಸೆಗಾಗಿ ನ್ಯೂಯಾರ್ಕ್ಗೆ ಹೋದರೂ ಫಲಕಾರಿಯಾಗದೆ ವಾಪಸ್ ಬಂದಿದ್ದರು. ಹೀಗೆ ಯಾವುದೇ ದಾರಿ ಕಾಣದೆ ಕೈಚೆಲ್ಲಿ […]
Date : 02-06-2013 | 20 Comments. | Read More
ಇದನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ. ಒಂದು ಕಣದಷ್ಟಾದರೂ ವಿಶ್ವಾಸಾರ್ಹತೆ ಉಳಿದಿದೆಯೇ? ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಕೂಡಲೇ ರಾಜಿನಾಮೆ ನೀಡಬೇಕು! -ಕಮಲ್ನಾಥ್, ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಒಂದು ವೇಳೆ ನಿಮ್ಮ ಕುಟುಂಬ ಸದಸ್ಯನೊಬ್ಬನ ಮೇಲೆ ಅವ್ಯವಹಾರದ ಆರೋಪ ಬಂದರೆ ಋಜುವರ್ತನೆ, ನಡವಳಿಕೆಯ ಪ್ರಕಾರ ಯಜಮಾನ ರಾಜಿನಾಮೆ ನೀಡಲೇಬೇಕು. ಶ್ರೀನಿವಾಸನ್ ಜಾಗದಲ್ಲಿ ನಾನಿದ್ದರೆ ನಾನೂ ಅದನ್ನೇ ಮಾಡುತ್ತಿದ್ದೆ. -ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ವಾಣಿಜ್ಯ,ಕೈಗಾರಿಕಾ ಖಾತೆ ರಾಜ್ಯ ಸಚಿವ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರು ನೈತಿಕ […]
Date : 26-05-2013 | 11 Comments. | Read More
“ಆ ಕರಾಳ ರಾತ್ರಿ ಕಳೆದು ಮೂವತ್ತೈದು ವರ್ಷಗಳೇ ಆದವು. ಕಾಲ ಉರುಳೇ ಬಿಟ್ಟಿತು ಎಂಬಂತೆ ಭಾಸವಾಗುತ್ತಿದೆ. ಆದರೆ ಹಸಿ ನೆನಪುಗಳು ಇನ್ನೂ ದಿಟ್ಟಿಸಿ, ದುರುಗುಟ್ಟಿ ನೋಡುತ್ತಿವೆ. ನನ್ನ ಮಟ್ಟಿಗೆ ನೌಕಾಪಡೆಯೆಂಬುದು ಮನೆಯಾಚೆಗಿನ ಮನೆ. ಯಾವತ್ತೂ ನೆರವಿಗೆ ಬಂದಿದೆ. ಸಹೋದರತ್ವ, ಕೌಟುಂಬಿಕ ಬೆಸುಗೆ ಮತ್ತು ರಾಷ್ಟ ರೂಪಿಸುವುದು- ಇವುಗಳಿಗೆ ಅತ್ಯುತ್ತಮ ಉದಾಹರಣೆಯೆಂದರೆ ಸೇನಾ ಪಡೆ. ಇಂತಹ ಮಹಾನ್ ಸೇನಾ ಕುಟುಂಬದ ಭಾಗವಾಗಿ ನನ್ನನ್ನು ಸ್ವೀಕರಿಸಿದ್ದಕ್ಕಾಗಿ ಧನ್ಯವಾದಗಳು”.
Date : 05-05-2013 | 19 Comments. | Read More
ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಯಾವ ಮುಖವಿಟ್ಟುಕೊಂಡು ಬಂದು ಪ್ರಚಾರ ಮಾಡುತ್ತಾರೆ? ಇಂಥದ್ದೊಂದು ಭ್ರಷ್ಟ ಆಡಳಿತವನ್ನು ಕೊಟ್ಟ ಸರ್ಕಾರಕ್ಕೆ ಮತ್ತೆ ಮತ ಕೊಡಿ, ಪುನರಾಯ್ಕೆ ಮಾಡಿ ಎಂದು ಹೇಗೆ ತಾನೇ ಕೇಳಿಯಾರು? ಮತ ಕೊಡಿ ಎಂದು ಕೇಳುವಾಗ ಕೊಡಲು ಕಾರಣಗಳಾದರೂ ಯಾವಿವೆ ಹೇಳಿ? ಹಾಗಂತ ಕೆಲವರು ಕುಹಕವಾಡುತ್ತಿದ್ದರು.
Date : 01-05-2013 | 21 Comments. | Read More
ಖ್ಯಾತ ಸಾಹಿತಿ ಬೀChiಯುವರ ‘ಬೆಳ್ಳಿ ತಿಂಮ ನೂರೆಂಟು ಹೇಳಿದ’ ಪುಸ್ತಕದಲ್ಲಿ ಒಬ್ಬ ರಾಜಕಾರಣಿಯ ಕಥೆ ಬರುತ್ತದೆ. ಮೈದಾನಕ್ಕೆ ಕಾಪೌಂಡ್ ಇಲ್ಲ, ಭಾಷಣಕ್ಕೆ ಇತಿಮಿತಿಯಿಲ್ಲ, ಹೇಳುವವರಿಗೆ ಬೇಸರವಿಲ್ಲ, ಕೇಳುವವರಿಗೆ ಬೇರೆ ಕೆಲಸವಿಲ್ಲ. ರಾಜಕಾರಣಿಯ ಭಾಷಣ ಹರಿಯಿತು, ಊರ ಮಧ್ಯೆಯ ಗಟಾರದಂತೆ. ರಾಜಕಾರಣಿ: ಇಂದು ನಮ್ಮ ಜನಕ್ಕೆ ಏನು ಬೇಕು ಹೈಡ್ರೋಜನ್, ಆಟಂ ಬಾಂಬುಗಳೇನು? ‘ಅಲ್ಲ, ಅಲ್ಲ..’ ಎಂದು ಒಕ್ಕೊರಲಿನಿಂದ ಕೂಗಿತು ಸಭೆ. ರಾಜಕಾರಣಿ: ಸಾವಿರಾರು ಮೈಲು ಸಮುದ್ರವನ್ನು ಹಾರುವ ವಿಮಾನವೇನು? ಜನ: ಅಲ್ಲ, ಅಲ್ಲ! ಅದರಿಂದ ಉತ್ತೇಜಿತನಾದ ರಾಜಕಾರಣಿ […]
Date : 23-04-2013 | 9 Comments. | Read More
Why Tendulkar must retire now? ಹಾಗಂತ ಕ್ರಿಕೆಟ್ ಇತಿಹಾಸಕಾರ ರಾಮಚಂದ್ರ ಗುಹಾ ಕಳೆದ ತಿಂಗಳು ಲೇಖನವೊಂದನ್ನು ಬರೆದಿದ್ದರು. 1951, ಡಿಸೆಂಬರ್. ಹೊಸದಿಲ್ಲಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಪಂದ್ಯವೊಂದು ಆರಂಭವಾಯಿತು. ವಿಜಯ್ ಮರ್ಚೆಂಟ್ ಸೊಗಸಾದ ಸೆಂಚುರಿ ಹೊಡೆದರು. ಅದರ ಬೆನ್ನಲ್ಲೇ ಅಶ್ಚರ್ಯಕರವಾಗಿ ನಿವೃತ್ತಿ ಘೋಷಿಸಿಬಿಟ್ಟರು. ಈ ಬಗ್ಗೆ ಸ್ನೇಹಿತರೊಬ್ಬರು ಪ್ರಶ್ನಿಸಿದಾಗ, ‘ಇವನಿನ್ನೂ ಏಕೆ ರಿಟೈರ್ಡ್ಆಗಿಲ್ಲ?’ ಎಂದು ಜನ ಕೇಳುವವರೆಗೂ ಕಾಯಬಾರದು ಎಂದಿದ್ದರು. ಈ ದೃಷ್ಟಾಂತವನ್ನು ಉದಾಹರಿಸಿ ಗುಹಾ ಬರೆದಿದ್ದರು. ದುರಾದೃಷ್ಟವಶಾತ್, ‘ನೀವು ನಿವೃತ್ತಿಯಾಗುವುದು ಯಾವಾಗ?’ […]
Date : 16-04-2013 | 24 Comments. | Read More
ಅಂಬೇಡ್ಕರ್ ಎಂದರೆ ಹಿಂದು ಧರ್ಮದಲ್ಲಿನ ಹುಳುಕುಗಳನ್ನು ಎತ್ತಿ ತೋರಿದವರು, ಜಾತಿ ವ್ಯವಸ್ಥೆಯ ಕೆಡುಕು ಮತ್ತು ದೌರ್ಜನ್ಯದ ವಿರುದ್ಧ ಧ್ವನಿಯೆತ್ತಿದವರು, ಕೇವಲ ದಲಿತ ನಾಯಕರು, ಮೀಸಲಾತಿಯ ಪ್ರತಿಪಾದಕರು ಎಂದು ದಯವಿಟ್ಟು ಭಾವಿಸಬೇಡಿ. ಅವರೊಬ್ಬ ಅಪ್ರತಿಮ ರಾಷ್ಟ್ರವಾದಿಯೂ ಹೌದು. ಒಮ್ಮೆ ಶಾಲೆಯಲ್ಲಿ ಓದುತ್ತಿರುವಾಗ ಅಪ್ಪನನ್ನು ನೋಡಬೇಕೆನಿಸಿತು. ಸಹೋದರನ ಜತೆಗೂಡಿ ಹೊರಟೇಬಿಟ್ಟ. ಇಬ್ಬರೂ ಮಾಸೂರು ರೈಲು ನಿಲ್ದಾಣಕ್ಕೆ ಬಂದಿಳಿದರು. ಗಾಡಿಯೊಂದನ್ನು ಗೊತ್ತುಪಡಿಸಿ ಊರತ್ತ ಹೊರಟರು. ಸ್ವಲ್ಪ ದೂರ ಹೋಗಿದ್ದಾರೆ, ಗಾಡಿಚಾಲಕನಿಗೆ ಗೊತ್ತಾಯಿತು ಅವರು ಮಹರ್ ಎಂಬ ಕೆಳಜಾತಿಗೆ ಸೇರಿದವರು, ದಲಿತರೆಂದು. ಗಾಡಿಯನ್ನು […]
Date : 09-04-2013 | 15 Comments. | Read More
ಮೊನ್ನೆ ಗುರುವಾರ ಬೆಳಗ್ಗೆ ಭಾರತೀಯ ಕೈಗಾರಿಕಾ ಒಕ್ಕೂಟ(CII)ವನ್ನು ಉದ್ದೇಶಿಸಿ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗುತ್ತಿರುವ ರಾಹುಲ್ ಗಾಂಧಿಯವರು ಮಾಡಿದ ಭಾಷಣವನ್ನು ಕೇಳಿದ ನಂತರ ಖಂಡಿತ ಅವರ ಕಟ್ಟಾ ವಿರೋಧಿಗಳಲ್ಲೂ ಅಯ್ಯೋ ಎಂಬ ಭಾವನೆ ಮೂಡಿರದೆ ಇರದು. ಭಾಷಣ ಮುಗಿಸುವ ವೇಳೆಗೆ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ನಲ್ಲಿ ಜಾಗತಿಕ ಮಟ್ಟದ(ವರ್ಲ್ಡ್ವೈಡ್) Trendingನಲ್ಲಿ (ಚಾಲ್ತಿಯಲ್ಲಿರುವ ವಿಷಯ) ರಾಹುಲ್ ಎರಡನೇ ಸ್ಥಾನಕ್ಕೇರಿ ಬಿಟ್ಟಿದ್ದರು. Pappu, PappuCII, Rahul Gandhi ಇನ್ನು ಮುಂತಾದ ಹೆಸರಿನ ಹ್ಯಾಶ್ಟ್ಯಾಗ್ಗಳು (ಪದ, ಪದಗುಚ್ಛ) […]
Date : 01-04-2013 | 21 Comments. | Read More
Should i marry every woman I sleep with? ‘ನನ್ನ ಪತ್ನಿಯನ್ನು ಮದುವೆಯಾಗುತ್ತೀಯಾ?’ ಎಂದು ಕವಾಸ್ ಮಾಣಿಕ್ಷಾ ನಾನಾವತಿ ಕೇಳಿದಾಗ ಪ್ರೇಮ್ ಭಗವಾನ್ ದಾಸ್ ಅಹುಜಾ ಹೇಳಿದ ಮಾತುಗಳಿವು. ಕವಾಸ್ ಮಾಣಿಕ್ಷಾ ನಾನಾವತಿ ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಆಗಿದ್ದರು. ಹಾಗಾಗಿ ಕರ್ತವ್ಯದ ಸಲುವಾಗಿ ಸದಾ ಮನೆಯಿಂದ ದೂರವೇ ಇರುತ್ತಿದ್ದರು. ಈ ಮಧ್ಯೆ 1959, ಏಪ್ರಿಲ್ 27ರಂದು ಮನೆಗೆ ಮರಳಿದಾಗ ಪತ್ನಿ ಸಿಲ್ವಿಯಾ ಏಕೋ ತನ್ನಿಂದ ವಿಮುಖಳಾಗಿರುವುದನ್ನು ಗಮನಿಸುತ್ತಾರೆ. ಆಕೆ ಸಮೀಪದಲ್ಲೇ ಇದ್ದ ಸ್ಫುರದ್ರೂಪಿ ಪ್ಲೇ […]