Date : 05-05-2013, Sunday | 19 Comments
ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಯಾವ ಮುಖವಿಟ್ಟುಕೊಂಡು ಬಂದು ಪ್ರಚಾರ ಮಾಡುತ್ತಾರೆ? ಇಂಥದ್ದೊಂದು ಭ್ರಷ್ಟ ಆಡಳಿತವನ್ನು ಕೊಟ್ಟ ಸರ್ಕಾರಕ್ಕೆ ಮತ್ತೆ ಮತ ಕೊಡಿ, ಪುನರಾಯ್ಕೆ ಮಾಡಿ ಎಂದು ಹೇಗೆ ತಾನೇ ಕೇಳಿಯಾರು? ಮತ ಕೊಡಿ ಎಂದು ಕೇಳುವಾಗ ಕೊಡಲು ಕಾರಣಗಳಾದರೂ ಯಾವಿವೆ ಹೇಳಿ?
ಹಾಗಂತ ಕೆಲವರು ಕುಹಕವಾಡುತ್ತಿದ್ದರು.
ಇನ್ನೊಂದೆಡೆ ಕರ್ನಾಟಕದಲ್ಲಿ ಬಿಜೆಪಿ ಸೋಲುವುದು ಖಚಿತ. ಅಲ್ಲಿಗೆ ಹೋಗಲು ಮೋದಿಯವರೇ ಧೈರ್ಯ ಮಾಡುವುದಿಲ್ಲ ಎಂದು ರಾಷ್ಟ್ರೀಯ ಮಾಧ್ಯಮಗಳು ಹೇಳುತ್ತಿದ್ದವು. ನರೇಂದ್ರ ಮೋದಿಯವರು 2014ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ತಂದುಕೊಡುತ್ತಾರೆ ಎಂಬ ನಂಬಿಕೆಯಲ್ಲಿರುವ ಕೇಂದ್ರ ಬಿಜೆಪಿಯೇ ಮೋದಿಯವರನ್ನು ಕರ್ನಾಟಕಕ್ಕೆ ಕಳುಹಿಸುವುದಿಲ್ಲ. ಅಲ್ಲಿ ಸೋಲುವುದು ಗ್ಯಾರಂಟಿ. ಅದನ್ನು ಕಾಂಗ್ರೆಸ್ ಹಾಗೂ ಮಾಧ್ಯಮಗಳು ಮೋದಿ ತಲೆಗೆ ಕಟ್ಟಿಬಿಡುತ್ತಾರೆ, ಮೋದಿ ಮ್ಯಾಜಿಕ್ ನಡೆಯಲಿಲ್ಲ ಎಂದು ಅಣಕಿಸುತ್ತಾರೆಂಬ ಭಯ ಅದನ್ನು ಕಾಡುತ್ತಿದೆ ಎಂದು ಇಂಗ್ಲಿಷ್ ಮಾಧ್ಯಮಗಳು ವಿಶ್ಲೇಷಿಸುತ್ತಿದ್ದವು.
ಕಳೆದ ಭಾನುವಾರ (ಏಪ್ರಿಲ್ 28ರಂದು) ಇಂಥ ಎಲ್ಲ ಪ್ರಶ್ನೆಗಳಿಗೂ, ಊಹಾಪೋಹಗಳಿಗೂ ತೆರೆಬಿದ್ದು ಬಿಟ್ಟಿತು!
ಅಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೋದಿ ಭಾಷಣ ದಿಢೀರ್ ಆಯೋಜನೆಯಾಗಿತ್ತು. ಅವರು ಏನು ಮಾತನಾಡುತ್ತಾರೆ, ಹೇಗೆ ಬಿಜೆಪಿಯನ್ನು ಸಮರ್ಥಿಸಿಕೊಳ್ಳುತ್ತಾರೆ ಎಂಬ ಬಗ್ಗೆ ಬಿಜೆಪಿ ಕಾರ್ಯಕರ್ತರು, ಕಟ್ಟಾ ಅಭಿಮಾನಿಗಳು ಮಾತ್ರವಲ್ಲ, ಮನೆ ಮನೆಗೆ, ಊರೂರುಗಳಿಗೆ ಹೋಗಿ ಮತಯಾಚಿಸುತ್ತಿರುವ ರಾಜ್ಯ ಬಿಜೆಪಿ ನಾಯಕರಲ್ಲೂ ಒಂದು ರೀತಿಯ ಕುತೂಹಲ ಸೃಷ್ಟಿಯಾಗಿತ್ತು. ವಾರದ ಮೊದಲೇ ಲಾಲಕೃಷ್ಣ ಆಡ್ವಾಣಿ, ಸುಷ್ಮಾ ಸ್ವರಾಜ್ ಮುಂತಾದ ನಾಯಕರು ರಾಜ್ಯದಲ್ಲಿ ಚುನಾವಣಾ ಪ್ರಚಾರ, ಭಾಷಣ ಆರಂಭಿಸಿದ್ದರೂ ಬಿಜೆಪಿ ಪಾಳಯದಲ್ಲಿ ಮಾತ್ರ ಸೂತಕದ ಛಾಯೆಯೇ ಇತ್ತು. ಅಧಿಕಾರದ ಗದ್ದುಗೆ ಹಿಡಿಯುವ ತವಕದಲ್ಲಿರುವ ಕಾಂಗ್ರೆಸ್‌ಗೆ ಬಿಸಿ ಮುಟ್ಟಿಸುವುದಿರಲಿ, ಬಿಜೆಪಿ ಕಾರ್ಯಕರ್ತರಲ್ಲೇ ಉತ್ಸಾಹ ತುಂಬಲು ಪ್ರಧಾನಿ ಸ್ಥಾನದ ಆಕಾಂಕ್ಷಿಗಳಾಗಿರುವ ಈ ಸುಷ್ಮಾ, ಆಡ್ವಾಣಿಯವರಿಂದಾಗಿರಲಿಲ್ಲ. ಇಂಥ ಸಂದರ್ಭದಲ್ಲಿ ಬೆಂಗಳೂರಿಗೆ ಬಂದಿಳಿದ ಮೋದಿ ಮಾತಿಗಿಳಿದಾಗ…
2005ರ ಆಹಾರಕ್ಕಾಗಿ ತೈಲ ಹಗರಣದಿಂದ ಆರಂಭವಾಗಿ 2ಜಿ, ಕಲ್ಲಿದ್ದಲು ಸ್ಕ್ಯಾಮ್‌ವರೆಗೂ 20ಕ್ಕೂ ಹೆಚ್ಚು ಹಗರಣಗಳನ್ನು ಸೃಷ್ಟಿಸಿದ್ದರೂ ಬಿಜೆಪಿಯನ್ನು ಭ್ರಷ್ಟ ಎನ್ನುತ್ತಿರುವ, ಭ್ರಷ್ಟಾಚಾರದ ಸಲುವಾಗಿಯೇ ಕಳೆದ ನಾಲ್ಕು ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ (ದೇಶ್‌ಮುಖ್-ಅಶೋಕ್-ಪೃಥ್ವಿರಾಜ್ ಚವ್ಹಾಣ್) 3 ಮುಖ್ಯಮಂತ್ರಿಗಳನ್ನು ಬದಲಾಯಿಸಿದ್ದರೂ ಸ್ಥಿರ ಹಾಗೂ ಸ್ವಚ್ಛ ಸರ್ಕಾರದ ಮಾತನಾಡುತ್ತಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಂತೆ ನರೇಂದ್ರ ಮೋದಿಯವರು ಅಪ್ರಮಾಣಿಕ ಮಾತುಗಳನ್ನಾಡಲಿಲ್ಲ!
1995, ಮಾರ್ಚ್ 14ರಂದು ಕೇಶುಭಾಯಿ ಪಟೇಲ್ ಗುಜರಾತ್‌ನ ಮೊಟ್ಟಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಮುಖ್ಯಮಂತ್ರಿಯವರ ತವರಾದ ಸೌರಾಷ್ಟ್ರಕ್ಕೆ ಹೆಚ್ಚಿನ ಪ್ರಾತಿನಿಧ್ಯ ಕೊಡಲಾಗಿದೆ, ಯೋಗ್ಯ ವ್ಯಕ್ತಿಗಳಿಗೆ ಮಂತ್ರಿಗಿರಿ ಕೊಟ್ಟಿಲ್ಲ ಎಂದು ಅಧಿಕಾರಕ್ಕೆ ಬಂದ ಮೊದಲ ದಿನವೇ ಸಂಘರ್ಷ ಆರಂಭವಾಯಿತು. ರಾಜ್ಯ ಸರ್ಕಾರದ 42 ನಿಗಮ ಮಂಡಳಿಗಳು ಹಾಗೂ ಪಾಲಿಕೆಗಳಿಗೆ ಅಧ್ಯಕ್ಷರನ್ನು ನೇಮಿಸುವಾಗ ನನ್ನನ್ನು ಕೇಳಬೇಕೆಂದು ಮತ್ತೊಬ್ಬ ಬಲಿಷ್ಠ ಬಿಜೆಪಿ ನಾಯಕ ಶಂಕರ್‌ಸಿನ್ಹ್ ವಾಘೇಲಾ ಮುಖ್ಯಮಂತ್ರಿಯವರಿಗೆ ಎಚ್ಚರಿಕೆ ನೀಡಿದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲಿ ನಾವು ಯಾವ ದರ್ಪವನ್ನು ಕಂಡೆವೋ ಅದೇ ತೆರನಾದ ಹುಂಬತನವನ್ನು ಅಂದು ಕೇಶುಭಾಯಿ ಪಟೇಲ್ ಕೂಡ ತೋರಿದರು. ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯಲ್ಲಿ ಮೂಗು ತೂರಿಸಬೇಡ ಎಂದು ಪಟೇಲ್ ಖಾರವಾಗಿ ಹೇಳಿದರು. ಆಗ, ವಿದೇಶ ಪ್ರವಾಸಕ್ಕೆ ಹೊರಟು ನಿಂತಿದ್ದ ಮುಖ್ಯಮಂತ್ರಿಯವರನ್ನುದ್ದೇಶಿಸಿ, ‘ನೀನು ವಿದೇಶದಿಂದ ವಾಪಸ್ಸಾಗುವ ವೇಳೆಗೆ ಮುಖ್ಯಮಂತ್ರಿಯಾಗಿರುವುದೇ ಇಲ್ಲ’ ಎಂದು ವಾಘೇಲಾ ಮಾರುತ್ತರ ನೀಡಿದರು. ಇಷ್ಟಾಗಿಯೂ ಪಟೇಲ್ 1995, ಸೆಪ್ಟೆಂಬರ್ 8ರಂದು ಒಂದು ತಿಂಗಳ ಅಮೆರಿಕ ಪ್ರವಾಸಕ್ಕೆ ಹೋದರು. ಸೆಪ್ಟೆಂಬರ್ 25ರಂದು ವಾಘೇಲಾ ಬಂಡಾಯ ಸದಸ್ಯರ ಸಭೆಯೊಂದನ್ನು ಏರ್ಪಡಿಸಿದರು. ಇದಾಗಿ ಎರಡು ದಿನಗಳಲ್ಲಿ ಬಿಜೆಪಿಯೂ ತನ್ನ ಶಾಸಕರ ಸಭೆ ನಡೆಸಿತು. ಅದರಲ್ಲಿ ಭಾಗಿಯಾಗಿದ್ದು ಕೇವಲ 60 ಜನ. ವಾಘೇಲಾ ಸಭೆಗೆ 47 ಮಂದಿ ಬಂದಿದ್ದರು. ಮೊಟ್ಟಮೊದಲ ಬಿಜೆಪಿ ಸರ್ಕಾರ ಬೀಳುವುದು ಖಚಿತವಾಯಿತು. ಮುಖ್ಯಮಂತ್ರಿ ಪಟೇಲ್ ದರ್ಪಕ್ಕೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ನರೇಂದ್ರ ಮೋದಿಯವರ ಮೇಲೆ ಭಿನ್ನರು ಬಾವುಟ ಹಾರಿಸಿದರು. ‘ನನಗೊಂದು ಕಥೆ ನೆನಪಾಗುತ್ತಿದೆ. ಮಗುವೊಂದು ತನಗೆ ಸೇರಬೇಕೆಂದು ನಿಜವಾದ ತಾಯಿ ಹಾಗೂ ಮಲತಾಯಿ ಜಗಳಕ್ಕೆ ನಿಂತಿರುತ್ತಾರೆ. ವಿಷಯ ನ್ಯಾಯಾಲಯದ ಕಟಕಟೆ ಹತ್ತುತ್ತದೆ. ಮಗುವನ್ನು ಎರಡು ತುಂಡು ಮಾಡಿ ಹಂಚಿಕೊಳ್ಳಿ ಎನ್ನುತ್ತಾರೆ ನ್ಯಾಯಾಧೀಶರು. ಆದರೆ ತುಂಡರಿಸಬೇಡಿ ಎಂದು ಅಂಗಲಾಚುತ್ತಾಳೆ ನಿಜವಾದ ತಾಯಿ. ನಾನೂ ಅಂಥದ್ದೇ ನಿರ್ಧಾರಕ್ಕೆ ಬಂದಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ನಾನು ಬಲಿಯಾಗಲು ಸಿದ್ಧನಾಗಿದ್ದೇನೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ’ ಎಂದು ಮನನೊಂದು ಪತ್ರ ಬರೆದ ಮೋದಿ ರಾಜಕೀಯ ವನವಾಸಕ್ಕೆ ತೆರಳುತ್ತಾರೆ.
ಹಾಗಂತ ವಾಘೇಲಾ ಸುಮ್ಮನಾಗಲಿಲ್ಲ. ಅವರಿಗೆ ಬೇಕಿದ್ದುದು ಅಧಿಕಾರ ಹಾಗೂ ಅಧಿಕಾರ ಮಾತ್ರ. ರಾಷ್ಟ್ರೀಯ ಅಧ್ಯಕ್ಷ ಲಾಲಕೃಷ್ಣ ಆಡ್ವಾಣಿಯವರನ್ನೂ ಟೀಕಿಸಿದರು. ಸಮಸ್ಯೆ ಪರಿಹರಿಸಲು ಸ್ವತಃ ವಾಜಪೇಯಿಯವರೇ ಆಗಮಿಸಿದರು. ಮುಖ್ಯಮಂತ್ರಿಯವರೊಂದಿಗೆ ಮಾತುಕತೆ ನಡೆಸಿದ ವಾಜಪೇಯಿ, ಪಕ್ಷದ ಹಿತದೃಷ್ಟಿಯಿಂದ ರಾಜಿನಾಮೆ ನೀಡುವಂತೆ ಸೂಚಿಸಿದರು. ಅದೊಂದು ರಾಜೀಸೂತ್ರವೂ ಆಗಿತ್ತು. ಬಂಡಾಯವೆದ್ದಿದ್ದ ಶಾಸಕರು ಅಹಮದಾಬಾದ್‌ಗೆ ಮರಳಿ ಕೇಶುಭಾಯಿಯವರಿಗೆ ತಮ್ಮ ನಿಷ್ಠೆ ವ್ಯಕ್ತಪಡಿಸಬೇಕು ಹಾಗೂ ವಿಶ್ವಾಸಮತ ಗೊತ್ತುವಳಿ ಪರ ಮತ ಹಾಕಬೇಕು. ನಂತರ ಕೇಶುಭಾಯಿ ರಾಜಿನಾಮೆ ನೀಡುತ್ತಾರೆ. ಎಲ್ಲವೂ ಅಂದುಕೊಂಡಂತೇ ಆಯಿತು. ವಿಶ್ವಾಸಮತ ಗೆದ್ದ ಕೇಶುಭಾಯಿ ಮರುದಿನ ರಾಜಿನಾಮೆ ನೀಡಿದರು. ಆದರೆ ವಾಘೇಲಾಗೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ. ಸುರೇಶ್ ಮೆಹ್ತಾ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಒಂದಿಷ್ಟು ಕಾಲ ಸುಮ್ಮನಿದ್ದ ವಾಘೇಲಾ 1996ರಲ್ಲಿ ಮಹಾ ಗುಜರಾತ್ ಜನತಾ ಪಾರ್ಟಿ ಎಂದು ನೂತನ ಪಕ್ಷ ಕಟ್ಟಿದರು. ಅವತ್ತು 42 ಶಾಸಕರು ವಾಘೇಲಾ ಹಿಂದೆ ನಡೆದರು. 45 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಬೆಂಬಲ ಪಡೆದ ವಾಘೇಲಾ ಮುಖ್ಯಮಂತ್ರಿಯಾದರು. ವರ್ಷ ಕಳೆಯುವಷ್ಟರಲ್ಲಿ ಕಾಂಗ್ರೆಸ್ ಕಾಲೆಳೆಯಿತು. ವಾಘೇಲಾ ಸರ್ಕಾರ ಉರುಳಿತು. ಆಗ ಮಧ್ಯಂತರ ಚುನಾವಣೆ ಏರ್ಪಾಡಾಯಿತು.
ಈ ಘಟನೆಯನ್ನು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಉಲ್ಲೇಖಿಸಿದ ನರೇಂದ್ರ ಮೋದಿಯವರು, ಕರ್ನಾಟಕದಂತೆಯೇ ಮೊದಲ ಬಾರಿ ಅಧಿಕಾರಕ್ಕೆ ಬಂದಾಗ ಗುಜರಾತ್ ಬಿಜೆಪಿಯಲ್ಲೂ ತೀವ್ರತರವಾದ ಆಂತರಿಕ ಕಚ್ಚಾಟವಿತ್ತು. ಆದರೂ ಗುಜರಾತ್ ಮತದಾರ ಬಿಜೆಪಿಯನ್ನು ಮತ್ತೆ ಮೂರನೇ ಎರಡು ಬಹುಮತ ಕೊಟ್ಟು ಗೆಲ್ಲಿಸಿದ ಎಂದರು!
ಏಕೆಂದರೆ….
ನಮ್ಮ ಆಂತರಿಕ ಕಚ್ಚಾಟ ಹಾಗೂ ನಾವು ಮಾಡಿದ ಕೆಲಸಗಳನ್ನು ಜನ ಪ್ರತ್ಯೇಕಿಸಿ ನೋಡಿದರು. ಕರ್ನಾಟಕದ ಜನರಾದ ನೀವೂ ಬಿಜೆಪಿಯಲ್ಲಿನ ಒಳಜಗಳ ಹಾಗೂ ಅವರ ಸಾಧನೆಯನ್ನು ಬೇರೆ ಬೇರೆ ಮಾಡಿ ನೋಡಿ ಎಂದರು ಮೋದಿ. ನರೇಂದ್ರ ಮೋದಿಯವರು ಹೇಳುವವರೆಗೂ ರಾಜ್ಯ ಬಿಜೆಪಿಯ ದಡ್ಡ ನಾಯಕರಿಗೆ ಹಾಗೂ ರಾಜ್ಯ ಪ್ರವಾಸ ಮಾಡುತ್ತಿರುವ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಇಂಥದ್ದೊಂದು ವಿಚಾರ ತಲೆಗೇ ಹೋಗಿರಲಿಲ್ಲ. ಬೆಂಗಳೂರಿನ ಸಿರ್ಸಿ ಸರ್ಕಲ್‌ನಿಂದ ಕೆ.ಆರ್. ಮಾರ್ಕೆಟ್‌ವರೆಗೂ ಒಂದು ಫ್ಲೈಓವರ್ ಮಾಡಲು ಕಾಂಗ್ರೆಸ್, ದಳ ಸರ್ಕಾರಗಳಿಗೆ ಒಂದು ದಶಕವೇ ಬೇಕಾಗಿತ್ತು. ನಿರ್ಮಾಣವಾಗಿ ದಶಕ ಕಳೆಯುವಷ್ಟರಲ್ಲಿ ರೀಪೇರಿಯೂ ಆರಂಭವಾಗಿದೆ! ಆದರೆ ಬಿಜೆಪಿ ಸರ್ಕಾರದಲ್ಲಿ ಬರೀ ಮೂರೂವರೆ ವರ್ಷದಲ್ಲಿ ಮೆಟ್ರೋ 1, 2ನೇ ಹಂತ ಮುಕ್ತಾಯದತ್ತ ಸಾಗುತ್ತಿವೆ. ಅಟಲ್ ಬಿಹಾರಿ ವಾಜಪೇಯಿಯವರ ಆಡಳಿತದ ಕಾರ್ಯದಕ್ಷತೆಗೆ ಪ್ರತೀಕದಂತಿರುವ 15 ಸಾವಿರ ಕಿ.ಮೀ. ವ್ಯಾಪ್ತಿಯ ಸುವರ್ಣ ಚತುಷ್ಪಥ ರಸ್ತೆಯಂತೆ ಬೆಂಗಳೂರಿನ ಮೆಟ್ರೋ ನಿರ್ಮಾಣ ಭ್ರಷ್ಟಾಚಾರದ ಹೊರತಾಗಿಯೂ ರಾಜ್ಯ ಬಿಜೆಪಿ ಆಡಳಿತದಲ್ಲಿ ಕಂಡುಬಂದ ಪ್ರಗತಿಗೆ ಸಾಕ್ಷೀಭೂತವಾಗಿದೆ. ಪ್ರಯಾಣವನ್ನು ನರಕಯಾತನೆ ಮಾಡಿದ್ದ ನೆಲಮಂಗಲ-ನವರಂಗ್ ನಡುವಿನ 16-18 ಕಿ.ಮೀ.ಗಳು ಇಂದು ಅಹ್ಲಾದ ಕೊಡುತ್ತವೆ. ಈ ಹಿನ್ನೆಲೆಯಲ್ಲೇ ಮಾತನಾಡಿದ ಮೋದಿ, ಮಾಧ್ಯಮ ಸೇರಿದಂತೆ ಎಲ್ಲರಿಗೂ ಸವಾಲೆಸೆಯುತ್ತಾ, ದೇಶದ ಯಾವುದೇ ಭಾಗದಲ್ಲಿರುವ ಬಿಜೆಪಿ ಸರ್ಕಾರಗಳ ಅಭಿವೃದ್ಧಿ ಕೆಲಸಗಳನ್ನು ಕಾಂಗ್ರೆಸ್ ರಾಜ್ಯಗಳ ಜತೆ ತುಲನೆ ಮಾಡಿ ನೋಡಿ, ನಮಗೆ ಸಮನಾಗಿ ನಿಲ್ಲುವುದು ಹಾಗಿರಲಿ, ಸಮೀಪಕ್ಕೂ ಬರಲು ಸಾಧ್ಯವಿಲ್ಲ ಎಂದರು.
ಇಂತಹ ಮಾತುಗಳು ಕಳಂಕಿತ ಬಿಜೆಪಿಯಲ್ಲಿ ವಿದ್ಯುತ್ ಸಂಚಾರವನ್ನುಂಟುಮಾಡಿದ್ದಲ್ಲದೆ ಪ್ರಚಾರಾಂದೋಲನಕ್ಕೆ ಹೊಸ ಆಯಾಮವನ್ನೇ ಕೊಟ್ಟುಬಿಟ್ಟವು. ಬಿಜೆಪಿ ಸ್ವಲ್ಪ ಚೇತರಿಸಿಕೊಂಡಂತೆ ಕಂಡಿದ್ದು ಮೋದಿ ಭಾಷಣದ ನಂತರವೇ ಎಂದರೆ ಅತಿಶಯೋಕ್ತಿಯೆನಿಸದು.
‘ಸುಷ್ಮಾ ಸ್ವರಾಜ್ ಮಾತಿಗೆ ನಿಂತರೆ ನನಗೆ ವಾಜಪೇಯಿ ನೆನಪಾಗುತ್ತಾರೆ’ ಎಂದು ಲಾಲಕೃಷ್ಣ ಆಡ್ವಾಣಿಯವರು ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಂದರ್ಭದಲ್ಲಿ ಹೇಳಿದ್ದರು. ಅದಕ್ಕೆ ಪ್ರತಿಯಾಗಿ ಆಡ್ವಾಣಿಯವರಿಗೆ ಪ್ರಧಾನಿಯಾಗುವ ಅವಕಾಶ ಇನ್ನೂ ಇದೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಅದಿರಿನ ಹಗಲು ದರೋಡೆ ನಡೆಸುತ್ತಿದ್ದ ಜನಾರ್ದನ ರೆಡ್ಡಿ-ಶ್ರೀರಾಮುಲು ಅವರನ್ನು ‘ನನ್ನ ದತ್ತು ಪುತ್ರರು’ ಎಂದು ಲಜ್ಜೆಯಿಲ್ಲದೆ ಹೊಗಳುತ್ತಿದ್ದ ಈ ಸುಷ್ಮಾ “ಸ್ವಾಹ”ರಾಜ್ ಹಾಗೂ ಆಡ್ವಾಣಿಯವರ Mutual Back-Scratching ಕಥೆ ಹಾಗಿರಲಿ, ಇಂದು ಇಡೀ ದೇಶದಲ್ಲಿ ಯಾರಾದರೂ ವಾಜಪೇಯಿಯವರ ಹಾಸ್ಯಭರಿತ ವಾಗ್ಝರಿಯನ್ನು ಸರಿಗಟ್ಟುವ ಅಥವಾ ಮೀರಿಸುವ ನಾಯಕನಿದ್ದರೆ ಅದು ನರೇಂದ್ರ ದಾಮೋದರದಾಸ್ ಮೋದಿ ಮಾತ್ರ. ಒಂದು ಗಂಭೀರ ಟೀಕೆಯನ್ನೂ ಎಷ್ಟು ಸ್ವಾರಸ್ಯಕರವಾಗಿ ಮಾಡಿದರು ಅಂದುಕೊಂಡಿರಿ? “2ಜಿ ಹಗರಣದ ಕಿಮ್ಮತ್ತು ಎಷ್ಟು ಗೊತ್ತಾ? 1.76 ಲಕ್ಷ ಕೋಟಿಯನ್ನು ರಸ್ತೆ ಮೇಲೆ ಬರೆಯಲು 7 ರೇಸ್ ಕೋರ್ಸ್‌ನಿಂದ (ಪ್ರಧಾನಿ ನಿವಾಸ-ಕಾರ್ಯಾಲಯ) ಆರಂಭಿಸಿದರೆ ಕೊನೆಯ ಸೊನ್ನೆ 10ನೇ ಜನಪಥ್‌ಗೆ (ಸೋನಿಯಾ ನಿವಾಸ) ಬಂದು ತಲುಪು ತ್ತದೆ” ಎಂದರು! ಆ ದುಡ್ಡು ಸೋನಿಯಾ ಗಾಂಧಿಯವರಿಗೂ ಸಂದಿದೆ ಎಂಬ ಟೀಕೆಯನ್ನೂ ಬಹಳ ಮಜಬೂತಾಗಿ, ಸೂಚ್ಯವಾಗಿ ಚುಚ್ಚಿದರು.
ಇಂದಿರಾಗಾಂಧಿ, ಜಾರ್ಜ್ ಫರ್ನಾಂಡೀಸ್, ಅಟಲ್ ಬಿಹಾರಿ ವಾಜಪೇಯಿಯವರು ಭಾಷಣ ಮಾಡಲು ಬರುತ್ತಿದ್ದಾರೆ ಅಂದರೆ ಲಕ್ಷ ಲಕ್ಷಗಟ್ಟಲೆ ಜನ ಸೇರುತ್ತಿದ್ದ ಕಾಲವೊಂದಿತ್ತು. ಆ ಕಾಲದ ಅನಿವಾರ್ಯತೆಯೂ ಹಾಗಿತ್ತು. ತಮ್ಮ ನಾಯಕನನ್ನು ನೋಡಬೇಕೆಂದರೆ, ಆತನ ಭಾಷಣವನ್ನು ಕೇಳಬೇಕೆಂದರೆ ಸ್ವತಃ ಹೋಗಬೇಕಿತ್ತು. ಆದರೆ ಇಂದು ಮನೆಯಲ್ಲೇ ಕುಳಿತು ಭಾಷಣವನ್ನು ನೋಡಬಹುದು. 24×7 ಬಿತ್ತರವಾಗುವ ಸುದ್ದಿ ಚಾನೆಲ್‌ಗಳು ಭಾಷಣವನ್ನು ನೇರ ಪ್ರಸಾರ ಮಾಡಿ ಬಿಡುತ್ತವೆ. ಹೇಗೂ ಟೀವಿಯಲ್ಲಿ ಬರುತ್ತದಲ್ಲಾ, ತ್ರಾಸವೇಕೆ? ಎಂದು ಮನೆಯಲ್ಲೇ ಕುಳಿತು ಜನ ಟಿವಿ ಹಾಕಿಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲೂ ಕಳೆದ ಭಾನುವಾರ ನ್ಯಾಷನಲ್ ಕಾಲೇಜು ಮೈದಾನ ತುಂಬಿ ತುಳುಕುತ್ತಿತ್ತು. ಸುಮಾರು 30-35 ಸಾವಿರ ಜನ ಅಂದು ಅಲ್ಲಿ ಸೇರಿದ್ದರು. ಮೊನ್ನೆ ಗುರುವಾರ ಅರಮನೆ ಮೈದಾನದಲ್ಲಿ ಸೋನಿಯಾ ಗಾಂಧಿಯವರ ಭಾಷಣವೂ ಇತ್ತು. ಟ್ರಕ್ಕು, ಬಸ್ಸುಗಳಲ್ಲಿ ದಿನಕ್ಕೆ ಇಂತಿಷ್ಟು ದುಡ್ಡು, ಊಟ, ಎಣ್ಣೆ ಕೊಟ್ಟು ಜನರನ್ನು ಕರೆತಂದರೂ ಸಂಖ್ಯೆ ನಾಲ್ಕೈದು ಸಾವಿರವನ್ನು ಮೀರಿರಲಿಲ್ಲ. ಇನ್ನು ಏಪ್ರಿಲ್ 29ರಂದು ಹುಬ್ಬಳ್ಳಿಗೆ ಬಂದಿದ್ದ ಪ್ರಧಾನಿ ಮನಮನೋಹನ್ ಸಿಂಗ್‌ಗೆ ಎದುರಾಗಿದ್ದು ಖಾಲಿ ಮೈದಾನ, ಕೊನೆಗೆ 1 ಗಂಟೆ ತಡವಾಗಿ ಕಾರ್ಯಕ್ರಮ ಆರಂಭಿಸಲಾಯಿತು.
ಇದು ಜನ ಮೋದಿ ಮೇಲಿಟ್ಟಿರುವ ಭರವಸೆ, ವಿಶ್ವಾಸ, ಆಶಯ ಹಾಗೂ ಮೋದಿಯವರ ತಾಕತ್ತು ಪ್ರಭಾವವನ್ನು ತೋರಿಸುತ್ತದೆ!
ಅಲ್ಲವಾಗಿದ್ದರೆ ಮೋದಿ ಬಂದು ಹೋದ ಮೇಲೆ ಕಾಂಗ್ರೆಸ್ ನಾಯಕರು ಸರದಿಯ ಮೇಲೆ ಏಕೆ ಮೋದಿ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿದ್ದಾರೆ ಹೇಳಿ? ಒಬ್ಬರೇ ಒಬ್ಬರೂ ಮುಖ್ಯಮಂತ್ರಿ ಶೆಟ್ಟರ್ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ವಿರುದ್ಧ ಏಕೆ ಹೇಳಿಕೆ ಕೊಡುವುದಿಲ್ಲ? ಆಡ್ವಾಣಿ, ಸುಷ್ಮಾ, ಶೆಟ್ಟರ್ ಅವರನ್ನು ಏಕೆ ಟಾರ್ಗೆಟ್ ಮಾಡುವುದಿಲ್ಲ? ಜೀವನದಲ್ಲಿ ಒಂದೇ ಒಂದು ನೇರ ಚುನಾವಣೆಯಲ್ಲಿ ಗೆಲ್ಲಲಾಗದಿದ್ದರೂ, ಹಿತ್ತಲ ಬಾಗಿಲಿನಿಂದ ರಾಜ್ಯಸಭೆ ಸೇರಿರುವ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ಹರಿಪ್ರಸಾದ್ ಕೂಡಾ ಮೋದಿ ವಿರುದ್ಧ ಹುಚ್ಚಾಪಟ್ಟೆ ಮಾತನಾಡುತ್ತಿದ್ದಾರೆ. ಏಕೆಂದರೆ ಗುಜರಾತ್ ಕಾಂಗ್ರೆಸ್‌ನ ಉಸ್ತುವಾರಿ ಹೊತ್ತಿದ್ದ ಹರಿಪ್ರಸಾದ್‌ಗೆ ಮೋದಿ ಸಾಮರ್ಥ್ಯದ ಅರಿವಿದೆ. ಅದಕ್ಕೇ ವಿಚಲಿತರಾಗಿರುವಂತೆ ಮಾತನಾಡುತ್ತಿದ್ದಾರೆ.
ಅಷ್ಟೇ ಏಕೆ, ಅಂದು ಮೋದಿ ವೇದಿಕೆ ಏರಿದ ಮೇಲೆ ಆಡ್ವಾಣಿಯವರ ಬಲಗೈ ಬಂಟ ಹಾಗೂ ಐದು ಸಲ ಸಂಸದರಾಗಿರುವ ಅನಂತ್‌ಕುಮಾರ್ ಮತ್ತು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭಾಷಣ ಮಾಡುವುದಕ್ಕೇ ಜನ ಬಿಡಲಿಲ್ಲ. ಮೋದಿಯೇ ಮಾತನಾಡಬೇಕೆಂದು ಕೂಗಾಡಿ, ವಾಪಸ್ಸಟ್ಟಿದರು. ಐದೈದೇ ನಿಮಿಷ ಮಾತನಾಡುತ್ತಾರೆ ಎಂದು ಉಪಮುಖ್ಯಮಂತ್ರಿ ಆರ್. ಅಶೋಕ್ ಗೋಗರೆದರೂ ಕೇಳುವ ಸ್ಥಿತಿಯಲ್ಲಿ ಜನರಿರಲಿಲ್ಲ. ಕೊನೆಗೆ ಮೋದಿಯವರೇ ಬಂದು ಮನವಿ ಮಾಡಿಕೊಂಡ ಮೇಲಷ್ಟೇ ಮಾತನಾಡಲು ಅವಕಾಶ ಮಾಡಿಕೊಟ್ಟರು. ಈ ಘಟನೆಯ ನಂತರ ಅನಂತ್‌ಕುಮಾರ್ ಕೂಡ ಮೋದಿಯವರು ಮುಂದಿನ ಪ್ರಧಾನಿಯಾಗಬೇಕೆನ್ನುವವರ ಪಾಳಯಕ್ಕೆ ಸೇರಿದ್ದಾರೆ! ಆ ಬಗ್ಗೆ ‘ಬೆಂಗಳೂರು ಮಿರರ್’ ಪತ್ರಿಕೆ “Has Ananth Kumar dumped LK Advani?’ ಶೀರ್ಷಿಕೆಯಡಿ ಚೆಂದದ ವಿಶ್ಲೇಷಣೆಯನ್ನೂ ಮಾಡಿದೆ. ಇದೇನೇ ಇರಲಿ, ಇಲ್ಲಿ ಗಮನಿಸಬೇಕಾದ ಮತ್ತೊಂದು ಗಮನಾರ್ಹ ಅಂಶವೆಂದರೆ ಮೋದಿ ಭಾಷಣದ ದಿನ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಎಲ್ಲ ಬಿಜೆಪಿ ಅಭ್ಯರ್ಥಿಗಳನ್ನೂ ವೇದಿಕೆ ಎಡಭಾಗದಲ್ಲಿ ತೆರೆದ ಸ್ಟೇಜು ನಿರ್ಮಿಸಿ ಕುಳ್ಳಿರಿಸಿ, ಪ್ರದರ್ಶನ ಮಾಡಿದರು! ಬಹುಶಃ ಇಂಥದ್ದೊಂದು ಘಟನೆ ಬೇರಾವ ನಾಯಕರು ಬಂದ ಸಂದರ್ಭದಲ್ಲಿ ನಡೆದಿರಲಿಲ್ಲ. ಕಳೆದ ತಿಂಗಳು ನಡೆದ ‘ಇಂಡಿಯಾ ಟುಡೆ’ ವಿಚಾರ ಸಂಕಿರಣದಲ್ಲಿ ಮೋದಿಯವರ ಭಾಷಣವನ್ನು ನೇರ ಪ್ರಸಾರ ಮಾಡಿದ ‘ಹೆಡ್‌ಲೈನ್ಸ್ ಟುಡೆ’ ಚಾನೆಲ್‌ನ ಟಿಆರ್‌ಪಿ ಎಂದಿನ 4ನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ಜಿಗಿದಿತ್ತು! ಇದು ಜನ ಮೋದಿಯವರ ಮಾತು ಕೇಳಲು ಹೇಗೆ ಮುಗಿಬೀಳುತ್ತಾರೆ ಎಂಬುದನ್ನು ತೋರಿಸುವುದಿಲ್ಲವೇ?
ಹಾಗಂತ ಈ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದು ಬಿಡುತ್ತದೆ, ಮೈಕೊಡವಿ ನಿಲ್ಲುತ್ತದೆ ಎಂದು ಹೇಳುತ್ತಿಲ್ಲ. ಆದರೆ ಕಳಂಕಿತ, ಕಳಾಹೀನಗೊಂಡಿರುವ ಪಕ್ಷಕ್ಕೂ ಚೇತರಿಕೆ ನೀಡುವ ತಾಕತ್ತು ಯಾರಿಗಾದರೂ ಇದ್ದರೆ ಅದು ಮೋದಿಯವರಿಗೆ ಮಾತ್ರ ಎಂಬುದು ಕಳೆದ ಭಾನುವಾರ ಸಾಬೀತಾಗಿದೆ ಹಾಗೂ ಅದರ ಪರಿಣಾಮ ಈ ಚುನಾವಣೆಯಲ್ಲಲ್ಲ 2014ರ ಲೋಕಸಭೆ ಚುನಾವಣೆಯಲ್ಲಿ ಕಾಣುತ್ತದೆ ಅಷ್ಟೇ.
tremendous……..
Nice article, well said Pratap
you r wright pratap sir modhji bagge estsu gowrav ideyo aste gourava nimma melide narendra modijiyanata 10 nayakaridre edi baratha no 1 desha vagute
Nice article once again flooded with truth and facts! Hope Modi would be our next PM and Dr. Swamy will back him up. I am fed up of waiting (just how long is 2014 election?).
And this time I hope I won’t be disappointed as I was because of Karnataka Assembly results 🙁
I request you to write an article about Dr. Subramanian Swamy too. His contributions to critical issues like Ramasetu, Ayodhya are priceless.
It’s also worth noting that, so called ‘great leaders’ of congress don’t get into discussion with Dr. Swamy 🙂 that’s for obvious reasons!
Expecting many more from you..
Sorry Dear, Results are out…
BJP has dug there own grave so deep that no one can prevent them falling down.
BJP gone so now who is the caretaker for Culture,Hindutva,Patriotism…
Future PM of India
Nimma prathiyondu mathinallu sathyansha minchagi kaneesuthide.. Nijavagiyu Shree Narendra Modiyavru deshakke,hindusthannake adara hirithana gaurava taruvalli ditta hejjeyanittiddare. Adare avarannu NDA ethakkagi Pradhana Mantri Abyarthiyannagi ghoshisalu hinjariiyuthide?
Mr Simha i have always liked your articles from the days you wrote on VIJAYA KARNATAKA some years back.
I feel if BJP misses one leader most today that is late Shri Pramod Mahajan. i feel he had the ability to revive BJP and take it to power.
ಮೋದಿ ಜೀ ಗೆ ಅವರೇ ಸಾಟಿ ..ಅಣà³à²£ ಮೋದಿ ಅವರೠಪà³à²°à²§à²¾à²¨à²¿ ಆಗà³à²¤à²¾à²°à²¾?
Modi is the frontrunner for the race of Prime Minister. He has the acumen and ability to steward the nation.
However, the so called National leaders of BJP such as Advani, Jailtley, Sushma are very sceptical about the charisma of Narendra Modi.
That apart, RSS and its functionaries must stop doing all mischief which are detrimental to the candidacy of Modi.
Jai ho Modi. but not BJP
ಬಿ.ಜೆ.ಪಿ ಈ ವಿಧಾನಸà²à³† ಚà³à²¨à²¾à²µà²£à³†à²¯ ಸೋಲಿನ ಪರಾಮರà³à²¶à³† ನಡೆಸಿದೆ, ಆದರೆ ೨೦೧೪ ಲೋಕಸà²à³† ಚà³à²¨à²¾à²µà²£à³†à²¯à²²à³à²²à²¿ ಕರà³à²¨à²¾à²Ÿà²•ದ ಪಾತà³à²° ಮತà³à²¤à³ ಆಂತರಿಕ ಕಚà³à²šà²¾à²Ÿà²—ಳನà³à²¨à³ ಬಿಟà³à²Ÿà³ ಮà³à²‚ದಿವರಿಯಬೇಕಿದೆ. ಇಲà³à²²à²¦ ಹೋದರೆ ಮತà³à²¤à³† ಕರà³à²¨à²¾à²Ÿà²•ದಲà³à²²à²¿ ಸೋಲಿನ ವಿಮರà³à²¶à³† ನಡೆಸಬೇಕಾಗà³à²¤à³à²¤à²¦à³†.
http://santhosh-vijay.blogspot.in/2013/05/the-iron-lady-of-oil-collected.html
ಸರೠನಾನೂ ನಿಮà³à²®à²¨à³à²¨à³ ತà³à²‚ಬಾ ಇಷà³à²Ÿ ಪಡà³à²¤à²¿à²¨à²¿
Dear Sir
My wish is always Shri Modi should be our future Prime Minister. I hope if possible if all indian citizen can vote for Prime Minister directly like how we elect our MLA.
Shri Modi , Shri Atalji are great leaders……
regards
Prathap ,
Don’t you think Narendra Modi is a over hyped leader ?? Every one boasts about Gujarat’s development .. My question – ‘What is development ??’ .. That itself has numerous facets ..
I hear that there is water scarcity in Gujarat .. I hear Modi employs a popular PR firm to boost his image.. My friends in Gujarat say that all the media boasts about Modi is not actually true ..
In a large democracy like India dictators like Modi will not suit .. They can be leaders in their own state but when it comes to national scene , they cannot handle it .. India doesn’t have two party system .. So there are numerous state leaders with whom you should have a good rappo to lead the nation..
I am a novice seeking answers ..
Hello Prathp,
I like your blogs. Here i agree with you on Modi but we should respect Mr. Advani,
because he and Mr. ABV only given a shape to BJP.
super article….
preethiya pratap simha ji
Modalaneyadagi naanu nimma abhimani!. neevu helida maatellavu satya.
aadare Narendra modiyavaru Corporate Darling aagiddareye horatu janasaamanyarige avara koduge yenide?. ivattu neevu gujaraat na yavudaadaro factory ge visit maadi noodi. aalli dinakke 12 hrs kelasavannu bengali, bihaari galu maadutthiddare. avarige koduttiruva vetana bahala kadime. rs 6000/7000 ashte.aavara jeevana pranigaliginta kadeyagide. avaru namma bharatiyare allave.?
kannadadalli ondu gaade ide. ATTAKKE HAARADAWA AAKASHAKKE HAARUVANA? yendu . modalu kelamattadalli sudarisi nantara melakke hogalu aasepaduvudu vobba nijawada rashtra bhaktana lakshna.
Innu Adwaniji yawara vicharadalli heluvudenendare avaru vobba bahalashtu experience iruvanta jananayaka. brashtachrada vishya bandaaga adhikaara hodaru chinteilla,modalu brashtacharigalannu kittogeyiri yendu helida obba nijavaada PRAMANIKA SAJJANA RAASHTRA BHAKTA. ivattu bharata dalli B.J.P. paksha yenaadaro astitwadalliddare adara shreyassu Adwani ji yavarige salla beku. andu nedediiddu B.J.P. rathayathre yendu janara manassige barallilla. Adwani Rathayathre yendee indiguu prasidda vagide. nimage nenapirabahudu. Atalji yavaru P.M aagiddagalu aavarigu B.J.P. yalli bahalashtu virodhigaliddaru. yene aadaru janasaamanyara hita rakshisi yellaruu voggattininda saagidalli maatra pakshakke uligaalavide . illavaadalli matte congress ge red carpet wel-come maadida haagaguttade.