*/
Date : 28-05-2012 | 45 Comments. | Read More
ಶ್ರೀ ನಾರಾಯಣ ಗುರುಗಳು ಯಾರಿಗೆ ತಾನೇ ಗೊತ್ತಿಲ್ಲ? ಒಮ್ಮೆ ಗುರುಗಳು ರೈಲಿನಲ್ಲಿ ಸಂಚರಿಸುತ್ತಿರುತ್ತಾರೆ. ಅವರ ಸಹಪ್ರಯಾಣಿಕನಾಗಿದ್ದ ನಂಬೂದರಿಯೊಬ್ಬ,”ನಿಮ್ಮ ಹೆಸರೇನು?’ ಎಂದು ಪ್ರಶ್ನಿಸುತ್ತಾನೆ. ಗುರುಗಳು: ನಾರಾಯಣ ನಂಬೂದರಿ: ನಿಮ್ಮ ಜಾತಿ? ಗುರುಗಳು: ನೋಡಿದರೆ ಗೊತ್ತಾಗುವುದಿಲ್ಲವೆ? ನಂಬೂದರಿ: ಉಹೂಂ ಗುರುಗಳು: ನೋಡಿದರೆ ಗೊತ್ತಾಗದಿದ್ದಾಗ ಹೇಳಿದರೆ ಹೇಗೆ ಗೊತ್ತಾಗುತ್ತದೆ?! ಎಂದು ಕೇಳಿದಾಗ ನಂಬೂದರಿ ತಬ್ಬಿಬ್ಬಾಗುತ್ತಾನೆ.
Date : 22-05-2012 | 64 Comments. | Read More
ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳ Barmy Army, ಅದಕ್ಕೆ ಪ್ರತಿಯಾಗಿ ಬ್ರಿಟನ್್ನಲ್ಲಿ ನೆಲಸಿರುವ ಭಾರತ ಸಂಜಾತರು ಆರಂಭಿಸಿದ – Bharath Armyಗಳನ್ನು ಕೇಳಿದ್ದೇವೆ, ಆದರೆ ಇದ್ಯಾವುದೀ ಹೊಸ ಆರ್ಮಿ ಎನ್ನುತ್ತೀರಾ? ಹಲವಾರು ರಾಜಕೀಯ ವಿಪ್ಲವಗಳನ್ನು ಕಂಡ 1990ರ ದಶಕಕ್ಕೆ ಸಾಕ್ಷೀಭೂತರಾದ ಯಾರೊಬ್ಬರನ್ನು ಕೇಳಿದರೂ ಆ ವ್ಯಕ್ತಿ ಯಾರು ಎಂದು ತಟ್ಟನೆ ಉತ್ತರಿಸಿ ಬಿಡುತ್ತಾರೆ. ಖಂಡಿತ ಅವರನ್ನು ಪರಿಚಯ ಮಾಡಿಕೊಡಬೇಕಾದ ಅವಶ್ಯಕತೆಯೇ ಇಲ್ಲ. ಗೋವಿಂದ ರಾವ್ ಖೈರ್ನಾರ್!
Date : 14-05-2012 | 16 Comments. | Read More
ಕುಂಬಾರ ವೀರಭದ್ರಪ್ಪ ಆಲಿಯಾಸ್ ಕುಂ. ವೀರಭದ್ರಪ್ಪ ಅಲಿಯಾಸ್ ಕುಂವೀ! ಇವರ ‘ಬೇಟೆ’ ಕೃತಿ ‘ಮನಮೆಚ್ಚಿದ ಹುಡುಗಿ’ಯಾಗಿ ಶಿವರಾಜ್್ಕುಮಾರ್್ಗೆ ಹ್ಯಾಟ್ರಿಕ್ ಹೀರೊ ಪಟ್ಟ ತಂದುಕೊಟ್ಟಿದೆ, ‘ಬೇಲಿಯ ಹೂಗಳು’ ‘ದೊರೆ’ಯಾಗಿದೆ, ‘ಕೆಂಡದ ಮಳೆ ಗೆರೆವಲ್ಲಿ ಉದಕವಾಗಿದ್ದವರ ಕಥೆ’ ‘ಕೆಂಡದ ಮಳೆ’ಯಾಗಿದೆ, ‘ಕೊಟ್ರ ಹೈಸ್ಕೂಲಿಗೆ ಸೇರಿದ್ದು’ ‘ಕೊಟ್ರೇಶಿಯ ಕನಸು’ ಆಗಿ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರವೆಂಬ ರಾಷ್ಟ್ರೀಯ ಹೆಗ್ಗಳಿಕೆಗೆ ಭಾಜನವಾಗಿದೆ, ‘ಕೂರ್ಮಾವತಾರ’ವೂ ಚಲನಚಿತ್ರವಾಗಿ ಈ ವರ್ಷದ ಕೇಂದ್ರ ರಜತ ಕಮಲ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲ, ಅವರ ‘ಅರಮನೆ’ ಕಾದಂಬರಿಗೆ 2007ರಲ್ಲಿ ಕೇಂದ್ರ […]
Date : 06-05-2012 | 31 Comments. | Read More
ಸರ್ ಮೊಹಮದ್ ಇಕ್ಬಾಲ್ ಎಂದರೆ ಸಾಮಾನ್ಯ ವ್ಯಕ್ತಿಯೇ? ನಮ್ಮೆಲ್ಲರಲ್ಲೂ ರಾಷ್ಟ್ರಪ್ರೇಮವನ್ನು ಬಡಿದೆಬ್ಬಿಸುವ ‘ಸಾರೆ ಜಹಾಂಸೆ ಅಚ್ಛಾ’ ಬರೆದ ಕವಿ ಅವರು. ಭಾರತದ ಬಗ್ಗೆ ಅಪಾರ ಗೌರವ ಹೊಂದಿದವರು. ಇಂತಹ ಅಭಿಪ್ರಾಯವನ್ನು ಇಂದಿಗೂ ಇಟ್ಟುಕೊಂಡಿರುವವರು ಸಾಕಷ್ಟು ಜನರಿದ್ದಾರೆ. ಆದರೂ ನಮ್ಮ ಪತ್ರಿಕೆಯ ‘ಹಿರಿಯರ ಹಾದಿ’ ಅಂಕಣದಲ್ಲಿ ಪ್ರಕಟವಾಗಿದ್ದ ‘ಮೊಹಮದ್ ಇಕ್ಬಾಲರ ದೇಶಪ್ರೇಮ’ ಲೇಖನಕ್ಕೆ ಬಹಳಷ್ಟು ಓದುಗರು ತಗಾದೆ ಎತ್ತಿದರು. ಮೊಹಮದ್ ಇಕ್ಬಾಲ್ ರಾಷ್ಟ್ರಪ್ರೇಮಿಯಾಗಿರಲಿಲ್ಲ, ಆತನೂ ಒಬ್ಬ ಮತಾಂಧನಾಗಿದ್ದ ಎಂದು ಕೆಲವರು ವಾದಿಸಿದರೆ ಉಮರ್ ಫಾರೂಕ್ ಎಂಬ ಓದುಗರು ಇಕ್ಬಾಲರನ್ನು […]
Date : 04-05-2012 | 32 Comments. | Read More
ಭಾರತ ಎಂಬುದೇ ಒಂದು ಬೆರಗು. ಈ ದೇಶದ ಉದ್ದಗಲಕ್ಕೂ ಬೆರಗಿನ ನೂರಾರು ಉದಾಹರಣೆಗಳು ಕಾಣಸಿಗುತ್ತವೆ. ಮನಸ್ಸಿದ್ದರೆ ಏನೆಲ್ಲ ಸಾಧನೆಗಳನ್ನು ಮಾಡಲು ಸಾಧ್ಯ. ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಹೆಜ್ಜೆಗೊಂದು ಉದಾಹರಣೆ ಸಿಗುತ್ತದೆ. ಅತಿ ಸಾಮಾನ್ಯರು ಅಸಾಮಾನ್ಯ ಸಂಶೋಧನೆಗಳನ್ನು ಮಾಡಿದ್ದಾರೆ. ಈ ಸಾಮಾನ್ಯರು ಸುಶಿಕ್ಷಿತ ಪಂಡಿತರಲ್ಲ. ನುರಿತ ಉದ್ಯಮಿಗಳಲ್ಲ. ಆದರೂ ತಮ್ಮ ವಿವೇಚನೆಯ ಇತಿಮಿತಿಯಲ್ಲೇ ರಿಸ್ಕ್ ತೆಗೆದುಕೊಂಡಿದ್ದಾರೆ. ತಮ್ಮ ಸುತ್ತಲ ಪರಿಸರದ ಬಾಳು ಹಸನಾಗಿಸುವ ಪ್ರಯತ್ನ ಮಾಡಿ ಗೆದ್ದಿದ್ದಾರೆ. ಅಂಥವರ ಪೈಕಿ ತಮಿಳುನಾಡಿನ ಅರುಣಾಚಲಂ ಮುರುಘನಾಥಂ ಕೂಡ ಒಬ್ಬರು. ಶಾಲೆಯನ್ನು […]