*/
Date : 27-05-2011 | 15 Comments. | Read More
ಇಂದು ರಾತ್ರಿ ಗಂಟೆ 10.30 ಆಗುವುದನ್ನು ಅದೆಷ್ಟು ಮಂದಿ ನಿರೀಕ್ಷಿಸುತ್ತಾ ಕುಳಿತಿದ್ದಾರೆಂಬುದನ್ನು ಅಂದಾಜು ಮಾಡುವುದಕ್ಕೂ ಸಾಧ್ಯವಿಲ್ಲ. ಅದೆಷ್ಟು ಜನ ಉಸಿರು ಬಿಗಿಹಿಡಿದುಕೊಂಡು ಆ ಕ್ಷಣಕ್ಕಾಗಿ ಕಾಯುತ್ತಿದ್ದಾರೋ, ಅದೆಷ್ಟು ಮಂದಿ ತಮ್ಮ ನೆಚ್ಚಿನ ಕ್ಲಬ್ ಗೇ ವಿಜಯ ಪ್ರಾಪ್ತಿಯಾಗಲಿ ಎಂದು ದೇವರಿಗೆ ಮೊರೆಯಿಡುತ್ತಿದ್ದಾರೋ, ಅದೆಷ್ಟು ಜೀವಗಳಲ್ಲಿ ಇದಾಗಲೇ ತುಡಿತ, ತುಮುಲ ಆರಂಭವಾಗಿದೆಯೋ ಗೊತ್ತಿಲ್ಲ. ಇಂದು ರಾತ್ರಿ ಜಗತ್ತಿನ ಫುಟ್ಬಾಲ್ ಪ್ರೇಮಿಗಳೆಲ್ಲರ ನೋಟ ಮಾತ್ರ ಇಂಗ್ಲೆಂಡ್್ನ ವೆಂಬ್ಲಿಯ ಮೇಲೆ ನೆಟ್ಟಿರುತ್ತದೆ. ಇಷ್ಟಕ್ಕೂ ಚಾಂಪಿಯನ್ಸ್ ಲೀಗ್ ಫೈನಲ್್ನಲ್ಲಿ ಮುಖಾಮುಖಿಯಾಗುತ್ತಿರುವುದು ಬ್ರಿಟನ್ ನ […]
Date : 27-05-2011 | 48 Comments. | Read More
ಆ ವೀರ ಕಲಿಯನ್ನು ನೆನಪಿಸಿಕೊಂಡಾಗಲೆಲ್ಲ ದಿವಂಗತ ವಿದ್ಯಾನಂದ ಶೆಣೈ ಕಣ್ಣಮುಂದೆ ಬರುತ್ತಾರೆ. ಆರು ವರ್ಷಗಳ ಹಿಂದೆ ಅವರು ಮಾಡಿದ್ದ ಭಾಷಣದ ಝೇಂಕಾರ ಕಿವಿಯಲ್ಲಿ ಇನ್ನೂ ಹಸಿಯಾಗಿಯೇ ಇದೆ. “ಅವತ್ತು ಛಾಫೇಕರ್ ಸಹೋದರರು ಬ್ರಿಟಿಷ್ ಅಧಿಕಾರಿ ರಾಂಡ್ ನನ್ನು ಹತ್ಯೆ ಮಾಡಿದರು. ಅದು ಬ್ರಿಟಿಷರಿಗೆ ತಿಳಿದುಹೋಯಿತು. ಬಂಧಿಸಿ ವಿಚಾರಣೆಗೆ ಗುರಿಪಡಿಸಿದ ಬ್ರಿಟಿಷರು ಛಾಫೇಕರ್ ಸಹೋದರರ ಮೇಲೆ “ಕೊಲೆ’ ಆರೋಪ ಹೊರಿಸಿದರು. ಕೊನೆಗೆ ಗಲ್ಲಿಗೂ ಏರಿಸಿದರು. ಇದನ್ನೆಲ್ಲಾ ನೋಡಿದ 14 ವರ್ಷದ ಬಾಲಕ ವಿನಾಯಕ ದಾಮೋದರ ಸಾವರ್ಕರ್ ಮನಸ್ಸಿಗೆ ಬಹಳ […]
Date : 15-05-2011 | 28 Comments. | Read More
ಇದು ಎರಡು ಬೀದಿ ನಾಯಿಗಳ ಕಥೆ. ಒಂದು ಭಾರತದ್ದು, ಮತ್ತೊಂದು ಚೀನಾದ್ದು. ಭಾರತದ ನಾಯಿ ಚೀನಾಕ್ಕೆ ಹೊರಟಿತ್ತು. ಚೀನಾದ ನಾಯಿ ಭಾರತದತ್ತ ಹೊರಟಿತ್ತು. ಹೀಗೆ ದೇಶಬಿಟ್ಟು ಹೊರಟಿದ್ದ ಆ ಎರಡೂ ನಾಯಿಗಳು ಭಾರತ-ಚೀನಾ ಗಡಿಯಲ್ಲಿ ಮುಖಾಮುಖಿಯಾದವು. ಭಾರತದ ನಾಯಿ ಸೊರಗಿ, ಬಡಕಲಾಗಿ ಹೋಗಿತ್ತು. ಹೊಟ್ಟೆ ಬೆನ್ನಿಗೆ ಅಂಟಿಕೊಂಡಿತ್ತು. ಇತ್ತ ಮೈ ಕೈ ತುಂಬಿಕೊಂಡು ದಷ್ಟ-ಪುಷ್ಟವಾಗಿದ್ದ ಚೀನಿ ನಾಯಿ, “ಏಕೆ ಚೀನಾಕ್ಕೆ ಹೊರಟಿದ್ದೀಯಾ?’ ಅಂತ ಆಶ್ಚರ್ಯದಿಂದ ಭಾರತದ ನಾಯಿಯನ್ನು ಪ್ರಶ್ನಿಸುತ್ತದೆ. “ಅಯ್ಯೋ ಭಾರತದಲ್ಲಿ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲ. ಆಹಾರ […]
Date : 09-05-2011 | 45 Comments. | Read More
ಆ ಘಟನೆ ಮತ್ತೆ ನೆನಪಾಗುತ್ತಿದೆ. ಅಂದು 1976, ಜೂನ್ 27. ಮಧ್ಯಾಹ್ನ 12.30ಕ್ಕೆ ಆಗಸಕ್ಕೆ ಚಿಮ್ಮಿದ ಕೆಲವೇ ಕ್ಷಣಗಳಲ್ಲಿ ಏರ್ ಫ್ರಾನ್ಸ್್ನ ‘ಎಎಫ್-139’ ವಿಮಾನವನ್ನು ನಾಲ್ವರು ಭಯೋತ್ಪಾದಕರು ಅಪಹರಣ ಮಾಡಿದ್ದಾರೆ ಎಂಬ ಸುದ್ದಿ ತಿಳಿಯಿತು. ಆ ವಿಮಾನ ‘ಲಾಡ್ ಏರ್್ಫೋರ್ಟ್್’ನಲ್ಲಿ ಇಳಿಯಬಹುದು ಎಂದು ಭಾವಿಸಿದ ಇಸ್ರೇಲಿನ ಕಮಾಂಡೋಗಳು ವಿಮಾನ ನಿಲ್ದಾಣವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಲು ಸನ್ನದ್ಧರಾಗಿ ನಿಂತರು. ಲಾಡ್ ಬದಲು ಬೆಂಗಾಝಿ ಏರ್್ಫೋರ್ಟ್್ನಲ್ಲಿ ತಾತ್ಕಾಲಿಕವಾಗಿ ವಿಮಾನವನ್ನು ಕೆಳಗಿಳಿಸಿದ ಭಯೋತ್ಪಾದಕರು ಆರೂವರೆ ಗಂಟೆಯ ಬಳಿಕ ಮತ್ತೆ ಟೇಕ್ ಆಫ್ […]