Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಅವರು ರಾಷ್ಟ್ರಪಿತನಾದರೆ, ಇವರು ಗ್ರಾಂಡ್್ಫಾದರ್ ಆಫ್ ದಿ ನೇಶನ್!

ಅವರು ರಾಷ್ಟ್ರಪಿತನಾದರೆ, ಇವರು ಗ್ರಾಂಡ್್ಫಾದರ್ ಆಫ್ ದಿ ನೇಶನ್!


ಅವರನ್ನು ನೆನಪಿಸಿಕೊಂಡರೆ ಸಾಕು ಮನಸು ಪುಳಕಿತಗೊಳ್ಳುತ್ತದೆ, ಅವರ ಮಾತುಗಳನ್ನು ಕೇಳಿದರೆ ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾಗುತ್ತದೆ, ಬದುಕಿಗೆ ಹೊಸ ಪ್ರೇರಣೆ ದೊರೆಯುತ್ತದೆ. ಇಷ್ಟಕ್ಕೂ ಆ ಶಕ್ತಿ ಯಾವುದು?

Look down at your feet! The road that is under your feet is the road you have passed over and is the same road that you see before. It will be soon under your feet, March on!!

ಒಬ್ಬ ಪರಿವ್ರಾಜಕ ಸನ್ಯಾಸಿಯಾಗಿ ಸ್ವಾಮಿ ವಿವೇಕಾನಂದರು ಹಿಮಾಲಯವನ್ನು ಏರುತ್ತಿರುತ್ತಾರೆ. ಅವರ ಜತೆಗಿದ್ದ ಸನ್ಯಾಸಿಯೊಬ್ಬ ಇನ್ನು ನನ್ನಿಂದ ನಡೆಯಲಾಗುವುದಿಲ್ಲ ಎಂದು ಅಲ್ಲಿಯೇ ಕುಳಿತು ಬಿಡುತ್ತಾನೆ. ಆಗ ವಿವೇಕಾನಂದರು ಈ ಪ್ರೇರಕ ನುಡಿಗಳನ್ನಾಡುತ್ತಾರೆ-‘ಒಮ್ಮೆ ತಿರುಗಿ ನೋಡು. ನೀನು ಹಿಂದೆ ಯಾವ ರಸ್ತೆಯನ್ನು ಕ್ರಮಿಸಿ ಬಂದಿದ್ದಿಯೋ, ಮುಂದೆ ಇರುವುದೂ ಅದೇ ರಸ್ತೆ. ಹೆಜ್ಜೆ ಹಾಕು, ಅದೂ ಕ್ಷಣಮಾತ್ರದಲ್ಲಿ ಸಾಗಿಬಿಡುತ್ತದೆ.

Conquer

ಮುನ್ನುಗ್ಗು

ಡೋಂಟ್ ಲುಕ್್ಬ್ಯಾಕ್

ಗೋ ಅಹೆಡ್

ಸ್ವಾಮಿ ವಿವೇಕಾನಂದರ ಸಮಗ್ರ ಸಾಹಿತ್ಯವನ್ನು ಓದಿದರೆ ಇಂತಹ ಮಾತುಗಳೇ ಹೆಚ್ಚಾಗಿ ಕಾಣುತ್ತವೆ. ಅವರು ನಿಜವಾದ “Youth Icon’ ಪ್ರತಿವರ್ಷ ಜನವರಿ 12ರಂದು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವದಿನವಾಗಿ ಆಚರಿಸುತ್ತಿರುವುದು ನಿಜಕ್ಕೂ ಅರ್ಥಗರ್ಭಿತವೆನಿಸುತ್ತದೆ. ಅವರೊಬ್ಬ ಸನ್ಯಾಸಿ, ಹಿಂದು ಧರ್ಮೋದ್ಧಾರಕ ಮಾತ್ರವಾಗಿರಲಿಲ್ಲ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಾವ ಗುಣನೀತಿಗಳನ್ನು ಅಳವಡಿಸಿಕೊಳ್ಳಬೇಕೋ ಅವುಗಳ ಸಾಕಾರಮೂರ್ತಿಯೂ ಆಗಿದ್ದರು. ವಿಶ್ವಧರ್ಮ ಸಮ್ಮೇಳನದ ನಂತರ ಯೂರೋಪ್ ಪ್ರವಾಸದಲ್ಲಿದ್ದ ವಿವೇಕಾನಂದರ ವೇಷಭೂಷಣಗಳನ್ನು ಕಂಡ ಬ್ರಿಟಿಷನೊಬ್ಬ, ‘ಒಬ್ಬ ಜಂಟಲ್್ಮನ್ ಥರ ಡ್ರೆಸ್ ಮಾಡಿಕೊಳ್ಳುವುದಕ್ಕಾಗುವುದಿಲ್ಲವೇ?’ ಎಂದು ಕಿಚಾಯಿಸುತ್ತಾನೆ. ‘ನಿಮ್ಮ ಸಂಸ್ಕೃತಿಯಲ್ಲಿ ಬಟ್ಟೆಯಿಂದ ಒಬ್ಬ ವ್ಯಕ್ತಿ ಜಂಟಲ್್ಮನ್ ಹೌದೋ ಅಲ್ಲವೋ ಎಂಬುದನ್ನು ಅಳೆಯುತ್ತೀರಿ. ಆದರೆ ನಮ್ಮ ಸಂಸ್ಕೃತಿಯಲ್ಲಿ ಒಬ್ಬನ ಚಾರಿತ್ರ್ಯದ ಮೇಲೆ ಅದು ನಿರ್ಧಾರಿತವಾಗುತ್ತದೆ’ ಎಂದು ವಿವೇಕಾನಂದರು ಹೇಳಿದಾಗ ಬ್ರಿಟಿಷನು ತಲೆತಗ್ಗಿಸಿ ನಿಲ್ಲುವಂತಾಗುತ್ತದೆ. ವಿವೇಕಾನಂದರ ಮಾತುಗಳೇ ಹಾಗೆ, ಗುಂಡಿಗಿಂತ ಬಲಿಷ್ಠ.

ಅವರ ಮೂಲ ಹೆಸರು ನರೇಂದ್ರ. ಒಮ್ಮೆ ತರಗತಿಯ ಜಿಯೋಗ್ರಫಿ ಮೇಷ್ಟ್ರು ತಪ್ಪು ಉತ್ತರ ಕೊಟ್ಟನೆಂಬ ಕಾರಣಕ್ಕೆ ನರೇಂದ್ರನನ್ನು ದಂಡಿಸುತ್ತಾರೆ. ಆದರೆ ತಾನು ಕೊಟ್ಟಿದ್ದು ಸರಿಯಾದ ಉತ್ತರವನ್ನೇ ಎಂದು ನರೇಂದ್ರನಿಗೆ ಗೊತ್ತಿತ್ತು. ಹಾಗಾಗಿ ನರೇಂದ್ರ ವಾದಕ್ಕಿಳಿಯುತ್ತಾನೆ. ಕುಪಿತರಾದ ಮೇಷ್ಟ್ರು, ‘ತಪ್ಪು ಉತ್ತರ ಹೇಳಿದ್ದಲ್ಲದೆ, ವಾದ ಮಾಡುತ್ತೀಯಾ?’ ಎಂದು ಮತ್ತೆರಡು ಭಾರಿಸುತ್ತಾರೆ. ಈ ಘಟನೆಯಿಂದ ನೊಂದ ನರೇಂದ್ರ ಅಳುತ್ತಲೇ ಮನೆಗೆ ಬರುತ್ತಾನೆ. ಏನಾಯಿತೆಂದು ಅಮ್ಮ ಕೇಳುತ್ತಾಳೆ. ಆಗ ನಡೆದ ಘಟನೆಯನ್ನು ಹೇಳುತ್ತಾನೆ. ನಾನು ಸರಿಯಾದ ಉತ್ತರ ಹೇಳಿದರೂ ಮೇಷ್ಟ್ರು ದಂಡಿಸಿದರು ಎಂದಾಗ, ಅಮ್ಮ ಹೇಳುತ್ತಾಳೆ- Follow the truth always no matter what happens!! ಇದು ನರೇಂದ್ರನ ಮೇಲೆ ಬಹಳ ದೊಡ್ಡ ಪ್ರಭಾವ ಬೀರುತ್ತದೆ. ಆತ ಬೆಳೆದು ದೊಡ್ಡವನಾಗಿ ಸ್ವಾಮಿ ವಿವೇಕಾನಂದರಾದ ಮೇಲೆ ಹೇಳುತ್ತಾರೆ-“Everything can be sacrificed for truth, but truth cannot be sacrificed for anything!” ಸ್ವಾಮಿ ವಿವೇಕಾನಂದರ ಅಮೆರಿಕದ ಶಿಷ್ಯೆ ಮಿಸ್ ಮ್ಯಾಕ್್ಲಾರ್ಡ್ ಹೀಗೆ ಹೇಳುತ್ತಾಳೆ-‘ನಾನು ಈ ಆಧುನಿಕ ಪ್ರಪಂಚದಲ್ಲಿ ಇಬ್ಬರು ಮಹಾನ್ ವ್ಯಕ್ತಿಗಳನ್ನು ಕಂಡಿದ್ದೇನೆ. ಮೊದಲನೆಯವರು ಜರ್ಮನಿಯ ಚಕ್ರವರ್ತಿ ಕೈಸರ್ ಹಾಗೂ ಎರಡನೆಯವರು ಸ್ವಾಮಿ ವಿವೇಕಾನಂದ’. ಆಕೆಯೇ ಮುಂದುವರಿದು ‘ಈ ಇಬ್ಬರ ನಡುವೆ ಇರುವ ವ್ಯತ್ಯಾಸವೇನು?’ ಎಂದು ತನಗೆ ತಾನೇ ಪ್ರಶ್ನೆ ಹಾಕಿಕೊಳ್ಳುತ್ತಾಳೆ ಹಾಗೂ ಅವಳೇ ಉತ್ತರಿಸುತ್ತಾಳೆ. ‘ಒಂದು ವೇಳೆ ನೀವೇನಾದರೂ ಕೈಸರ್ ಎದುರು ನಿಂತರೆ ತೀರಾ ಕುಬ್ಜರಾಗಿ ಕಾಣುತ್ತೀರಿ, ಸಣ್ಣ ಧೂಳಿನ ಕಣದಂತೆ ಭಾಸವಾಗುತ್ತೀರಿ. ಆದರೆ ಸ್ವಾಮಿ ವಿವೇಕಾನಂದರಂಥ ಆಧ್ಯಾತ್ಮ ಶಕ್ತಿಯ ಎದುರು ನಿಂತಾಗ ನಿಮಗೆ ನೀವೇ ಬೃಹದಾಕಾರವಾಗಿ ಕಾಣುತ್ತೀರಿ, ಉಬ್ಬಿಹೋಗುತ್ತೀರಿ, ನಿಮ್ಮೊಳಗೂ ಒಬ್ಬ ದೊಡ್ಡ ವ್ಯಕ್ತಿ ಇದ್ದಾನೆ ಎಂದನಿಸುತ್ತದೆ. ಏಕೆಂದರೆ ಅವರ ಪ್ರೇರಕ ಮಾತುಗಳು ಹಾಗಿರುತ್ತವೆ’! “Before any wordly greatness you feel very small, Before any spiritual greatness like Swami Vivekananda you feel very strong! ಎಂದು ಆಕೆ ವಿವರಿಸುತ್ತಾಳೆ. 1893ರಲ್ಲಿ ವಿಶ್ವಧರ್ಮ ಸಮ್ಮೇಳವನ್ನುದ್ದೇಶಿ ಸ್ವಾಮಿ ವಿವೇಕಾನಂದರು ಆಡಿದ ಮಾತುಗಳನ್ನು ಕೇಳಿ ಮೂಕವಿಸ್ಮಿತನಾದ ಅಮೆರಿಕದ ಪತ್ರಕರ್ತನೊಬColumbus discovered the soil of America, Vivekananda discovered the Soul of America!”ಎಂದು ಮರುದಿನ ಪತ್ರಿಕೆಯಲ್ಲಿ ಬರೆಯುತ್ತಾನೆ.

ಹೌದು, ಅವರು ಹಿಂದು ಧರ್ಮದ ನಿಜವಾದ ರಾಯಭಾರಿ!

ವಿಶ್ವಧರ್ಮ ಸಮ್ಮೇಳನಕ್ಕಾಗಿ ಅಮೆರಿಕಕ್ಕೆ ಆಗಮಿಸಿದಾಗ, ‘ಬುದ್ಧ ಏಷ್ಯಾಗೆ ಸಂದೇಶವನ್ನು ತಂದಂತೆ, ನಾನು ಪಾಶ್ಚಿಮಾತ್ಯ ಜಗತ್ತಿಗೆ ಭಾರತದ ಸಂದೇಶವನ್ನು ತಂದಿದ್ದೇನೆ’ ಎಂದು ವಿವೇಕಾನಂದರು ಹೇಳುತ್ತಾರೆ. ಅವರನ್ನು ‘ಹಿಂದೂ ಧರ್ಮದ ರಾಯಭಾರಿ’ ಎಂದು ಸುಖಾಸುಮ್ಮನೆ ಹೇಳಿದ್ದಲ್ಲ. ಶಂಕರಾಚಾರ್ಯ, ರಾಜಾರಾಮ್ ಮೋಹನ್ ರಾಯ್ ಮುಂತಾದವರೂ ದೇಶ ಸುತ್ತಿ, ಸಾಮಾಜಿಕ ಬದಲಾವಣೆಯನ್ನು ತರಲು ಯತ್ನಿಸಿದರಾದರೂ ಹಿಂದೂ ಧರ್ಮದ ಹಿರಿಮೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟ ಮೊದಲ ವ್ಯಕ್ತಿ ವಿವೇಕಾನಂದ. ಯಾವ ಧರ್ಮಗಳನ್ನೂ ತೆಗಳದೆ ಆ ಕೆಲಸ ಮಾಡಿದ್ದು ಇನ್ನೂ ದೊಡ್ಡ ಸಾಧನೆ. ವಿವೇಕಾನಂದರಿಗಿಂತ ಮೊದಲು ಯಾರೂ ಕೂಡ ವಿದೇಶಗಳಿಗೆ ಹೋಗಿ ಧರ್ಮಪ್ರಚಾರ, ಪ್ರಸಾರ ಮಾಡಿರಲಿಲ್ಲ. ಅವನ ಶಿಷ್ಯಂದಿರು ಹೋಗಿದ್ದರೇ ಹೊರತು ಬುದ್ಧನೂ ಕೂಡ ಹೊರದೇಶಗಳಲ್ಲಿ ಧರ್ಮಪ್ರಚಾರ ಮಾಡಿರಲಿಲ್ಲ. ಶಂಕರಾಚಾರ್ಯರು ದೇಶ ಸುತ್ತಿದರೇ ಹೊರತು ವಿದೇಶಕ್ಕೆ ಹೋದವರಲ್ಲ. ಈ ಹಿನ್ನೆಲೆಯಲ್ಲಿ, He was the globalface of India. He was the first Ambassador of 衫odern 背ndia to the world ಎಂದು ಅನುಮಾನವೇ ಇಲ್ಲದೆ ಹೇಳಬಹುದು. ಅವರೊಬ್ಬ ಸಾಂಸ್ಕೃತಿಕ ರಾಯಭಾರಿಯೂ ಹೌದು. ಸಾಂಸ್ಕೃತಿಕ ರಾಷ್ಟ್ರೀಯತೆ(ಕಲ್ಚರಲ್ ನ್ಯಾಶನಲಿಸಂ) ಎಂಬ ಹೊಸ ಕಲ್ಪನೆಯನ್ನು ಕೊಟ್ಟಿದ್ದೂ ಅವರೇ. ಬುದ್ಧನ ನಂತರ ಐಟಿಜ್ಝಛಟಿ ಜಝ್ಟಿಡ, ಭಾರತೀಯ ಮೌಲ್ಯಗಳನ್ನು ಜಗತ್ತಿಗೆ ಕೊಂಡೊಯ್ದ ಹಾಗೂ ಅರಿವು ಮೂಡಿಸಿದ ಮೊದಲ ವ್ಯಕ್ತಿಯೂ ವಿವೇಕಾನಂದ. ನಾವು ಆಗಾಗ ಉದಾಹರಿಸುವ Indianness, ಭಾರತೀಯತೆ ಎಂಬ ಕಾನ್ಸೆಪ್ಟ್ ಕೊಟ್ಟಿದ್ದೇ ವಿವೇಕಾನಂದ. ತುಂಬ articulate AW, extemporeಆಗಿ ಮಾತನಾಡುತ್ತಿದ್ದ ವಿವೇಕಾನಂದರ ನುಡಿಗಳು ನಮ್ಮ ಸುಪ್ರೀಂಕೋರ್ಟ್್ನ ಐತಿಹಾಸಿಕ ತೀರ್ಪಿಗೂ ದಿಗ್ಜೋತಿಯಾಗಿವೆ. ಹೌದು, “Hinduism is not just a religion, it’s a way of life”‘ (ಹಿಂದುತ್ವವೆಂಬುದು ಒಂದು ಧರ್ಮ ಮಾತ್ರವಲ್ಲ, ಜೀವನ ವಿಧಾನವೂ ಹೌದು) ಎಂದು ಜಗತ್ತಿಗೆ ಹೇಳಿದ್ದು, ಮನವರಿಕೆ ಮಾಡಿಕೊಟ್ಟಿದ್ದೂ ವಿವೇಕಾನಂದ ಅವರೇ. ಭಾರತದಲ್ಲಿ ಇಷ್ಟೆಲ್ಲಾ ಅಲ್ಪಸಂಖ್ಯಾತರನ್ನು ಕಾಣಲು ಹಿಂದೂಗಳು ಬಹುಸಂಖ್ಯಾತರಾಗಿರುವುದೇ ಕಾರಣ. ಹಿಂದೂಯಿಸಂ ಎಂಬುದು ಧರ್ಮಮಾತ್ರವಲ್ಲ, ಅದೊಂದು ಸ್ಪಿರಿಚ್ಯುಯಾಲಿಟಿ ಎಂದವರು ಅವರು. ಸ್ಪಿರಿಚ್ಯುಯೆಲ್ ಅಂದರೆ ತನ್ನ ಹಿತವೇ ಮುಖ್ಯ ಎಂಬ ಆಲೋಚನೆ ಬಿಟ್ಟು ಇತರರ ಶ್ರೇಯೋಭಿವೃದ್ಧಿಯ ಬಗ್ಗೆಯೂ ಯೋಚಿಸಬೇಕು ಎಂಬುದು. ಅವತ್ತು ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತೀಯತೆ, ಹಿಂದೂ ಧರ್ಮದ ಹಿರಿಮೆ, ಸಹಿಷ್ಣುತೆ ಬಗ್ಗೆ ವಿವೇಕಾನಂದರು ಆಡಿದ ಮಾತುಗಳನ್ನು ಕೇಳಿದ ಅಮೆರಿಕದ ಪ್ರತಿಷ್ಠಿತ ‘ನ್ಯೂಯಾರ್ಕ್ ಟೈಮ್ಸ್್’ ಪತ್ರಿಕೆ ತನ್ನ ಮರುದಿನದ ಆವೃತ್ತಿಯಲ್ಲಿ “Church should be ashamed for sending its preachers to India…” ಎಂದು ಬರೆದಿತ್ತು!!

ಹಾಗಾದರೆ ಸ್ವಾತಂತ್ರ್ಯ ಚಳವಳಿಗೆ ವಿವೇಕಾನಂದರ ಕೊಡುಗೆಯೇನು? ಹಾಗೆಂದು ಕೇಳಿದರೆ ನೇರವಾಗಿ ಅವರು ಭಾಗಿಯಾಗದಿದ್ದರೂ ಸ್ವಾತಂತ್ರ್ಯ ಹೋರಾಟಗಾರರಾದ ಸುಭಾಷ್್ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ಭಗತ್್ಸಿಂಗ್ ವಿವೇಕಾನಂದರಿಂದ ಪ್ರಭಾವಿತರಾಗಿದ್ದರು. ಈ ದೇಶದ ಮೇರು ನಾಯಕ ಮಹಾತ್ಮ ಗಾಂಧೀಜಿಯವರು, ‘ನಾನು ವಿವೇಕಾನಂದರ ಚಿಂತನೆ ಹಾಗೂ ವಿಚಾರಧಾರೆಯನ್ನು ಆಮೂಲಾಗ್ರವಾಗಿ ಓದಿದ್ದೇನೆ. ಹಾಗೆ ಓದಿದ ಮೇಲೆ ನನ್ನಲ್ಲಿದ್ದ ರಾಷ್ಟ್ರಪ್ರೇಮ ಸಹಸ್ರ ಪಟ್ಟು ಹೆಚ್ಚಾಯಿತು’ ಎಂದು ಸ್ವತಃ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, If Gandhiji is the father of the nation, then Vivekananda is the grandfather of the nationಿ ಎಂದು ಹೇಳಬಹುದಲ್ಲವೇ?!

ಒಂದು ಸಲ ಸ್ವಾಮಿ ವಿವೇಕಾನಂದರು ರೈಲಿನಲ್ಲಿ ಪ್ರಯಾಣಿಸುತ್ತಿರುತ್ತಾರೆ. ಎದುರಲ್ಲೇ ಇಬ್ಬರು ಫಿರಂಗಿಗಳು ಕುಳಿತಿರುತ್ತಾರೆ. ಅವರು ಸನ್ಯಾಸಿ ವಿವೇಕಾನಂದರನ್ನು ಕಂಡು ಗೇಲಿ ಮಾಡಲಾರಂಭಿಸುತ್ತಾರೆ, ಆವರಿಗೆ ಇಂಗ್ಲಿಷ್ ಬರುವುದಿಲ್ಲ ಎಂಬುದು ಅವರ ಊಹೆಯಾಗಿರುತ್ತದೆ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಮುಂದಿನ ನಿಲ್ದಾಣದಲ್ಲಿ ವಿವೇಕಾನಂದರನ್ನು ಬಲ್ಲವರೊಬ್ಬರು ರೈಲು ಹತ್ತುತ್ತಾರೆ, ಅವರೊಂದಿಗೆ ವಿವೇಕಾನಂದರು ಬಹಳ ಸೊಗಸಾಗಿ ಇಂಗ್ಲಿಷ್್ನಲ್ಲಿ ಮಾತನಾಡುವುದನ್ನು ಕಂಡು ದಂಗುಬಡಿದಂತಾದ ಫಿರಂಗಿಗಳಲ್ಲಿ ಒಬ್ಬ ವಿವೇಕಾನಂದರ ಬಳಿಗೆ ಬಂದು, ‘ನಿಮಗೆ ಇಂಗ್ಲಿಷ್ ಬರುವುದಿಲ್ಲವೆಂಬ ಕಾರಣಕ್ಕೆ ಏನೆಲ್ಲ ಮಾತನಾಡಿದೆವು. ಆದರೆ ನೀವೇಕೆ ಪ್ರತಿಕ್ರಿಯಿಸಲೂ ಇಲ್ಲ, ಕೋಪಿಸಿಕೊಳ್ಳಲೂ ಇಲ್ಲ’ ಎಂದು ಪ್ರಶ್ನಿಸುತ್ತಾನೆ. ಅಗ ವಿವೇಕಾನಂದರು ಹೇಳುತ್ತಾರೆ-‘ನಾನು ಮೂರ್ಖರನ್ನು ನೋಡುತ್ತಿರುವುದು ಇದೇ ಮೊದಲಲ್ಲ’!

ಹಾಗಂತ ವಿವೇಕಾನಂದರು ಎಲ್ಲ ಸಂದರ್ಭಗಳಲ್ಲೂ ಸುಮ್ಮನಿರುತ್ತಿದ್ದರು ಎಂದು ಭಾವಿಸಬೇಡಿ!

ವಿಶ್ವಧರ್ಮ ಸಮ್ಮೇಳನ ಮುಗಿಸಿ ಸ್ವಾಮಿ ವಿವೇಕಾನಂದರು ಹಡಗಿನಲ್ಲಿ ವಾಪಸ್ಸಾಗುತ್ತಿರುತ್ತಾರೆ. ಅದೇ ಹಡಗಿನಲ್ಲಿ ಇಬ್ಬರು ಪಾದ್ರಿಗಳು ಮತಾಂತರ ಮಾಡಲು ಭಾರತಕ್ಕೆ ಆಗಮಿಸುತ್ತಿರುತ್ತಾರೆ. ವಿವೇಕಾನಂದರನ್ನು ಕಂಡ ಅವರು ಬಹಳ ಕೀಳಾಗಿ ಮಾತನಾಡಲು, ನಿಂದಿಸಲು ಆರಂಭಿಸುತ್ತಾರೆ. ವಿವೇಕಾನಂದರು ಏನೂ ಮಾತನಾಡುವುದಿಲ್ಲ. ಕೊನೆಗೆ ಪಾದ್ರಿಗಳು ಹಿಂದು ಧರ್ಮವನ್ನು, ಭಾರತವನ್ನು, ಭಾರತೀಯರನ್ನು ನಿಂದಿಸಲು ಆರಂಭಿಸುತ್ತಾರೆ. ಅದುವರೆಗೂ ಸುಮ್ಮನಿದ್ದ ದೃಢಕಾಯರಾದ ವಿವೇಕಾನಂದರು ಕುಪಿತಗೊಂಡು ಪಾದ್ರಿಗಳಿಬ್ಬರ ಕುತ್ತಿಗೆ ಪಟ್ಟಿ ಹಿಡಿದೆಳೆದು, ‘ಭಾರತ ಹಾಗೂ ಭಾರತೀಯರ ಬಗ್ಗೆ ಇನ್ನೊಂದು ಕೆಟ್ಟ ಮಾತನಾಡಿದರೆ ಸಮುದ್ರಕ್ಕೆಸೆಯುತ್ತೇನೆ’ ಎನ್ನುತ್ತಾರೆ. ಅವಕ್ಕಾದ ಪಾದ್ರಿಗಳು ಬಾಯಿಮುಚ್ಚಿಕೊಳ್ಳುತ್ತಾರೆ. ಆದರೆ ಇದನ್ನು ಕಂಡು ವಿವೇಕಾನಂದರ ಶಿಷ್ಯಂದಿರಿಗೇ ಆಶ್ಚರ್ಯವಾಗುತ್ತದೆ ‘ನೀವೊಬ್ಬ ಸ್ವಾಮಿಯಾಗಿ ಈ ರೀತಿ ಕೋಪಿಸಿಕೊಳ್ಳುವುದು, ಹಿಂಸಿಸಲು ಹೋಗುವುದು ಸರಿಯೇ?’ ಎಂದು ಪ್ರಶ್ನಿಸುತ್ತಾರೆ. ಆಗ ವಿವೇಕಾನಂದರು ಉತ್ತರಿಸುವ ಬದಲು ಶಿಷ್ಯಂದಿರನ್ನೇ ಪ್ರಶ್ನಿಸುತ್ತಾರೆ- ‘ನಿಮ್ಮ ತಾಯಿಯನ್ನು ಯಾರಾದರೂ ಕೆಣಕಿದರೆ, ಅವಮಾನಿಸಿದರೆ ಸುಮ್ಮನಿರುತ್ತೀರಾ? ಹಾಗೆ ಭಾರತ ಮಾತೆ ಕೂಡ ನನ್ನ ತಾಯಿ, ಭಾರತೀಯರು ನನ್ನ ಬಂಧುಗಳು. ಅವರನ್ನ ನಿಂದಿಸಿದರೆ, ಅಪಮಾನಿಸಿದರೆ ಸುಮ್ಮನಿರುವುದಕ್ಕಾಗುತ್ತದಾ?’ ಎನ್ನುತ್ತಾರೆ. ಮತಾಂತರದ ಬಗ್ಗೆ ಅವರು ಹೇಳಿದ್ದೇನು ಗೊತ್ತೆ?-“ಹಿಂದುವೊಬ್ಬ ಮತಾಂತರಗೊಂಡರೆ ನಮ್ಮ ಸಂಖ್ಯೆಯಲ್ಲಿ ಒಂದು ಕಡಿಮೆಯಾಗುವುದು ಮಾತ್ರವಲ್ಲ, ಒಬ್ಬ ಶತ್ರುವು ಸೃಷ್ಟಿಯಾದಂತೆ”. ಇಂತಹ ಸ್ವಾಮಿ ವಿವೇಕಾನಂದರು ಜನಿಸಿದ್ದು 1863, ಜನವರಿ 12ರಂದು. ಇದೇ ತಿಂಗಳ 12ಕ್ಕೆ ಅವರ 150ನೇ ಜನ್ಮದಿನ. ಈ ದೇಶ ಹಾಗೂ ಸನಾತನ ಧರ್ಮವನ್ನು ತಾಯಿಯಂತೆ ಪ್ರೀತಿಸುವುದು, ಪೂಜಿಸುವುದು, ರಕ್ಷಿಸುವುದೇ ಅವರಿಗೆ ನಾವು ತೋರುವ ನಿಜವಾದ ಗೌರವ.

106 Responses to “ಅವರು ರಾಷ್ಟ್ರಪಿತನಾದರೆ, ಇವರು ಗ್ರಾಂಡ್್ಫಾದರ್ ಆಫ್ ದಿ ನೇಶನ್!”

  1. anushree says:

    the great power vivekananda is Indian we are so great to be inspired by him we must know charecter is lost everything is last

  2. C V MANJUNATHA says:

    Pratap simha avare hats up nimage very good article yuva janathege idhe thara sandesha kodi…

  3. mahantesh V U says:

    Dear sir (Simha)

    Hats up sir Namage gotte illada esto vicharagalannu nimma Haritavada lekhanadinda Namage tilisuttiri adakke naanu sada tamage chiraruni……

    sir please please tammalli Vandu Savineya Korike Prati dina NARENDRA MODI Ji yavara abhivruddi ,vektitva,avarigiruva Bhavvya Bharatada Kanasu gala bagge Taavu tamma Lekhana dinda Naadina janakke Tilisi Kodabekendu kai mugidu Bedikolluttene pls sir…..tamma uttarada nirikheyalli Bhavvya bharatada kanasu kanuttiruva Tamma Haagu Modi ji Abhimani …..(mahant555.math@gmail.com) 09886930504/8762055455 pls sir

  4. Avinash says:

    Gr8 person

  5. Pramod says:

    Nice article Pratap!! Very inspiring article.. Keep up the good work 🙂 Expect more awesome articles from u 🙂

  6. prabhudev says:

    yes, he is
    grand father of our nation