Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಅವರು ರಾಷ್ಟ್ರಪಿತನಾದರೆ, ಇವರು ಗ್ರಾಂಡ್್ಫಾದರ್ ಆಫ್ ದಿ ನೇಶನ್!

ಅವರು ರಾಷ್ಟ್ರಪಿತನಾದರೆ, ಇವರು ಗ್ರಾಂಡ್್ಫಾದರ್ ಆಫ್ ದಿ ನೇಶನ್!


ಅವರನ್ನು ನೆನಪಿಸಿಕೊಂಡರೆ ಸಾಕು ಮನಸು ಪುಳಕಿತಗೊಳ್ಳುತ್ತದೆ, ಅವರ ಮಾತುಗಳನ್ನು ಕೇಳಿದರೆ ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾಗುತ್ತದೆ, ಬದುಕಿಗೆ ಹೊಸ ಪ್ರೇರಣೆ ದೊರೆಯುತ್ತದೆ. ಇಷ್ಟಕ್ಕೂ ಆ ಶಕ್ತಿ ಯಾವುದು?

Look down at your feet! The road that is under your feet is the road you have passed over and is the same road that you see before. It will be soon under your feet, March on!!

ಒಬ್ಬ ಪರಿವ್ರಾಜಕ ಸನ್ಯಾಸಿಯಾಗಿ ಸ್ವಾಮಿ ವಿವೇಕಾನಂದರು ಹಿಮಾಲಯವನ್ನು ಏರುತ್ತಿರುತ್ತಾರೆ. ಅವರ ಜತೆಗಿದ್ದ ಸನ್ಯಾಸಿಯೊಬ್ಬ ಇನ್ನು ನನ್ನಿಂದ ನಡೆಯಲಾಗುವುದಿಲ್ಲ ಎಂದು ಅಲ್ಲಿಯೇ ಕುಳಿತು ಬಿಡುತ್ತಾನೆ. ಆಗ ವಿವೇಕಾನಂದರು ಈ ಪ್ರೇರಕ ನುಡಿಗಳನ್ನಾಡುತ್ತಾರೆ-‘ಒಮ್ಮೆ ತಿರುಗಿ ನೋಡು. ನೀನು ಹಿಂದೆ ಯಾವ ರಸ್ತೆಯನ್ನು ಕ್ರಮಿಸಿ ಬಂದಿದ್ದಿಯೋ, ಮುಂದೆ ಇರುವುದೂ ಅದೇ ರಸ್ತೆ. ಹೆಜ್ಜೆ ಹಾಕು, ಅದೂ ಕ್ಷಣಮಾತ್ರದಲ್ಲಿ ಸಾಗಿಬಿಡುತ್ತದೆ.

Conquer

ಮುನ್ನುಗ್ಗು

ಡೋಂಟ್ ಲುಕ್್ಬ್ಯಾಕ್

ಗೋ ಅಹೆಡ್

ಸ್ವಾಮಿ ವಿವೇಕಾನಂದರ ಸಮಗ್ರ ಸಾಹಿತ್ಯವನ್ನು ಓದಿದರೆ ಇಂತಹ ಮಾತುಗಳೇ ಹೆಚ್ಚಾಗಿ ಕಾಣುತ್ತವೆ. ಅವರು ನಿಜವಾದ “Youth Icon’ ಪ್ರತಿವರ್ಷ ಜನವರಿ 12ರಂದು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವದಿನವಾಗಿ ಆಚರಿಸುತ್ತಿರುವುದು ನಿಜಕ್ಕೂ ಅರ್ಥಗರ್ಭಿತವೆನಿಸುತ್ತದೆ. ಅವರೊಬ್ಬ ಸನ್ಯಾಸಿ, ಹಿಂದು ಧರ್ಮೋದ್ಧಾರಕ ಮಾತ್ರವಾಗಿರಲಿಲ್ಲ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಾವ ಗುಣನೀತಿಗಳನ್ನು ಅಳವಡಿಸಿಕೊಳ್ಳಬೇಕೋ ಅವುಗಳ ಸಾಕಾರಮೂರ್ತಿಯೂ ಆಗಿದ್ದರು. ವಿಶ್ವಧರ್ಮ ಸಮ್ಮೇಳನದ ನಂತರ ಯೂರೋಪ್ ಪ್ರವಾಸದಲ್ಲಿದ್ದ ವಿವೇಕಾನಂದರ ವೇಷಭೂಷಣಗಳನ್ನು ಕಂಡ ಬ್ರಿಟಿಷನೊಬ್ಬ, ‘ಒಬ್ಬ ಜಂಟಲ್್ಮನ್ ಥರ ಡ್ರೆಸ್ ಮಾಡಿಕೊಳ್ಳುವುದಕ್ಕಾಗುವುದಿಲ್ಲವೇ?’ ಎಂದು ಕಿಚಾಯಿಸುತ್ತಾನೆ. ‘ನಿಮ್ಮ ಸಂಸ್ಕೃತಿಯಲ್ಲಿ ಬಟ್ಟೆಯಿಂದ ಒಬ್ಬ ವ್ಯಕ್ತಿ ಜಂಟಲ್್ಮನ್ ಹೌದೋ ಅಲ್ಲವೋ ಎಂಬುದನ್ನು ಅಳೆಯುತ್ತೀರಿ. ಆದರೆ ನಮ್ಮ ಸಂಸ್ಕೃತಿಯಲ್ಲಿ ಒಬ್ಬನ ಚಾರಿತ್ರ್ಯದ ಮೇಲೆ ಅದು ನಿರ್ಧಾರಿತವಾಗುತ್ತದೆ’ ಎಂದು ವಿವೇಕಾನಂದರು ಹೇಳಿದಾಗ ಬ್ರಿಟಿಷನು ತಲೆತಗ್ಗಿಸಿ ನಿಲ್ಲುವಂತಾಗುತ್ತದೆ. ವಿವೇಕಾನಂದರ ಮಾತುಗಳೇ ಹಾಗೆ, ಗುಂಡಿಗಿಂತ ಬಲಿಷ್ಠ.

ಅವರ ಮೂಲ ಹೆಸರು ನರೇಂದ್ರ. ಒಮ್ಮೆ ತರಗತಿಯ ಜಿಯೋಗ್ರಫಿ ಮೇಷ್ಟ್ರು ತಪ್ಪು ಉತ್ತರ ಕೊಟ್ಟನೆಂಬ ಕಾರಣಕ್ಕೆ ನರೇಂದ್ರನನ್ನು ದಂಡಿಸುತ್ತಾರೆ. ಆದರೆ ತಾನು ಕೊಟ್ಟಿದ್ದು ಸರಿಯಾದ ಉತ್ತರವನ್ನೇ ಎಂದು ನರೇಂದ್ರನಿಗೆ ಗೊತ್ತಿತ್ತು. ಹಾಗಾಗಿ ನರೇಂದ್ರ ವಾದಕ್ಕಿಳಿಯುತ್ತಾನೆ. ಕುಪಿತರಾದ ಮೇಷ್ಟ್ರು, ‘ತಪ್ಪು ಉತ್ತರ ಹೇಳಿದ್ದಲ್ಲದೆ, ವಾದ ಮಾಡುತ್ತೀಯಾ?’ ಎಂದು ಮತ್ತೆರಡು ಭಾರಿಸುತ್ತಾರೆ. ಈ ಘಟನೆಯಿಂದ ನೊಂದ ನರೇಂದ್ರ ಅಳುತ್ತಲೇ ಮನೆಗೆ ಬರುತ್ತಾನೆ. ಏನಾಯಿತೆಂದು ಅಮ್ಮ ಕೇಳುತ್ತಾಳೆ. ಆಗ ನಡೆದ ಘಟನೆಯನ್ನು ಹೇಳುತ್ತಾನೆ. ನಾನು ಸರಿಯಾದ ಉತ್ತರ ಹೇಳಿದರೂ ಮೇಷ್ಟ್ರು ದಂಡಿಸಿದರು ಎಂದಾಗ, ಅಮ್ಮ ಹೇಳುತ್ತಾಳೆ- Follow the truth always no matter what happens!! ಇದು ನರೇಂದ್ರನ ಮೇಲೆ ಬಹಳ ದೊಡ್ಡ ಪ್ರಭಾವ ಬೀರುತ್ತದೆ. ಆತ ಬೆಳೆದು ದೊಡ್ಡವನಾಗಿ ಸ್ವಾಮಿ ವಿವೇಕಾನಂದರಾದ ಮೇಲೆ ಹೇಳುತ್ತಾರೆ-“Everything can be sacrificed for truth, but truth cannot be sacrificed for anything!” ಸ್ವಾಮಿ ವಿವೇಕಾನಂದರ ಅಮೆರಿಕದ ಶಿಷ್ಯೆ ಮಿಸ್ ಮ್ಯಾಕ್್ಲಾರ್ಡ್ ಹೀಗೆ ಹೇಳುತ್ತಾಳೆ-‘ನಾನು ಈ ಆಧುನಿಕ ಪ್ರಪಂಚದಲ್ಲಿ ಇಬ್ಬರು ಮಹಾನ್ ವ್ಯಕ್ತಿಗಳನ್ನು ಕಂಡಿದ್ದೇನೆ. ಮೊದಲನೆಯವರು ಜರ್ಮನಿಯ ಚಕ್ರವರ್ತಿ ಕೈಸರ್ ಹಾಗೂ ಎರಡನೆಯವರು ಸ್ವಾಮಿ ವಿವೇಕಾನಂದ’. ಆಕೆಯೇ ಮುಂದುವರಿದು ‘ಈ ಇಬ್ಬರ ನಡುವೆ ಇರುವ ವ್ಯತ್ಯಾಸವೇನು?’ ಎಂದು ತನಗೆ ತಾನೇ ಪ್ರಶ್ನೆ ಹಾಕಿಕೊಳ್ಳುತ್ತಾಳೆ ಹಾಗೂ ಅವಳೇ ಉತ್ತರಿಸುತ್ತಾಳೆ. ‘ಒಂದು ವೇಳೆ ನೀವೇನಾದರೂ ಕೈಸರ್ ಎದುರು ನಿಂತರೆ ತೀರಾ ಕುಬ್ಜರಾಗಿ ಕಾಣುತ್ತೀರಿ, ಸಣ್ಣ ಧೂಳಿನ ಕಣದಂತೆ ಭಾಸವಾಗುತ್ತೀರಿ. ಆದರೆ ಸ್ವಾಮಿ ವಿವೇಕಾನಂದರಂಥ ಆಧ್ಯಾತ್ಮ ಶಕ್ತಿಯ ಎದುರು ನಿಂತಾಗ ನಿಮಗೆ ನೀವೇ ಬೃಹದಾಕಾರವಾಗಿ ಕಾಣುತ್ತೀರಿ, ಉಬ್ಬಿಹೋಗುತ್ತೀರಿ, ನಿಮ್ಮೊಳಗೂ ಒಬ್ಬ ದೊಡ್ಡ ವ್ಯಕ್ತಿ ಇದ್ದಾನೆ ಎಂದನಿಸುತ್ತದೆ. ಏಕೆಂದರೆ ಅವರ ಪ್ರೇರಕ ಮಾತುಗಳು ಹಾಗಿರುತ್ತವೆ’! “Before any wordly greatness you feel very small, Before any spiritual greatness like Swami Vivekananda you feel very strong! ಎಂದು ಆಕೆ ವಿವರಿಸುತ್ತಾಳೆ. 1893ರಲ್ಲಿ ವಿಶ್ವಧರ್ಮ ಸಮ್ಮೇಳವನ್ನುದ್ದೇಶಿ ಸ್ವಾಮಿ ವಿವೇಕಾನಂದರು ಆಡಿದ ಮಾತುಗಳನ್ನು ಕೇಳಿ ಮೂಕವಿಸ್ಮಿತನಾದ ಅಮೆರಿಕದ ಪತ್ರಕರ್ತನೊಬColumbus discovered the soil of America, Vivekananda discovered the Soul of America!”ಎಂದು ಮರುದಿನ ಪತ್ರಿಕೆಯಲ್ಲಿ ಬರೆಯುತ್ತಾನೆ.

ಹೌದು, ಅವರು ಹಿಂದು ಧರ್ಮದ ನಿಜವಾದ ರಾಯಭಾರಿ!

ವಿಶ್ವಧರ್ಮ ಸಮ್ಮೇಳನಕ್ಕಾಗಿ ಅಮೆರಿಕಕ್ಕೆ ಆಗಮಿಸಿದಾಗ, ‘ಬುದ್ಧ ಏಷ್ಯಾಗೆ ಸಂದೇಶವನ್ನು ತಂದಂತೆ, ನಾನು ಪಾಶ್ಚಿಮಾತ್ಯ ಜಗತ್ತಿಗೆ ಭಾರತದ ಸಂದೇಶವನ್ನು ತಂದಿದ್ದೇನೆ’ ಎಂದು ವಿವೇಕಾನಂದರು ಹೇಳುತ್ತಾರೆ. ಅವರನ್ನು ‘ಹಿಂದೂ ಧರ್ಮದ ರಾಯಭಾರಿ’ ಎಂದು ಸುಖಾಸುಮ್ಮನೆ ಹೇಳಿದ್ದಲ್ಲ. ಶಂಕರಾಚಾರ್ಯ, ರಾಜಾರಾಮ್ ಮೋಹನ್ ರಾಯ್ ಮುಂತಾದವರೂ ದೇಶ ಸುತ್ತಿ, ಸಾಮಾಜಿಕ ಬದಲಾವಣೆಯನ್ನು ತರಲು ಯತ್ನಿಸಿದರಾದರೂ ಹಿಂದೂ ಧರ್ಮದ ಹಿರಿಮೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟ ಮೊದಲ ವ್ಯಕ್ತಿ ವಿವೇಕಾನಂದ. ಯಾವ ಧರ್ಮಗಳನ್ನೂ ತೆಗಳದೆ ಆ ಕೆಲಸ ಮಾಡಿದ್ದು ಇನ್ನೂ ದೊಡ್ಡ ಸಾಧನೆ. ವಿವೇಕಾನಂದರಿಗಿಂತ ಮೊದಲು ಯಾರೂ ಕೂಡ ವಿದೇಶಗಳಿಗೆ ಹೋಗಿ ಧರ್ಮಪ್ರಚಾರ, ಪ್ರಸಾರ ಮಾಡಿರಲಿಲ್ಲ. ಅವನ ಶಿಷ್ಯಂದಿರು ಹೋಗಿದ್ದರೇ ಹೊರತು ಬುದ್ಧನೂ ಕೂಡ ಹೊರದೇಶಗಳಲ್ಲಿ ಧರ್ಮಪ್ರಚಾರ ಮಾಡಿರಲಿಲ್ಲ. ಶಂಕರಾಚಾರ್ಯರು ದೇಶ ಸುತ್ತಿದರೇ ಹೊರತು ವಿದೇಶಕ್ಕೆ ಹೋದವರಲ್ಲ. ಈ ಹಿನ್ನೆಲೆಯಲ್ಲಿ, He was the globalface of India. He was the first Ambassador of 衫odern 背ndia to the world ಎಂದು ಅನುಮಾನವೇ ಇಲ್ಲದೆ ಹೇಳಬಹುದು. ಅವರೊಬ್ಬ ಸಾಂಸ್ಕೃತಿಕ ರಾಯಭಾರಿಯೂ ಹೌದು. ಸಾಂಸ್ಕೃತಿಕ ರಾಷ್ಟ್ರೀಯತೆ(ಕಲ್ಚರಲ್ ನ್ಯಾಶನಲಿಸಂ) ಎಂಬ ಹೊಸ ಕಲ್ಪನೆಯನ್ನು ಕೊಟ್ಟಿದ್ದೂ ಅವರೇ. ಬುದ್ಧನ ನಂತರ ಐಟಿಜ್ಝಛಟಿ ಜಝ್ಟಿಡ, ಭಾರತೀಯ ಮೌಲ್ಯಗಳನ್ನು ಜಗತ್ತಿಗೆ ಕೊಂಡೊಯ್ದ ಹಾಗೂ ಅರಿವು ಮೂಡಿಸಿದ ಮೊದಲ ವ್ಯಕ್ತಿಯೂ ವಿವೇಕಾನಂದ. ನಾವು ಆಗಾಗ ಉದಾಹರಿಸುವ Indianness, ಭಾರತೀಯತೆ ಎಂಬ ಕಾನ್ಸೆಪ್ಟ್ ಕೊಟ್ಟಿದ್ದೇ ವಿವೇಕಾನಂದ. ತುಂಬ articulate AW, extemporeಆಗಿ ಮಾತನಾಡುತ್ತಿದ್ದ ವಿವೇಕಾನಂದರ ನುಡಿಗಳು ನಮ್ಮ ಸುಪ್ರೀಂಕೋರ್ಟ್್ನ ಐತಿಹಾಸಿಕ ತೀರ್ಪಿಗೂ ದಿಗ್ಜೋತಿಯಾಗಿವೆ. ಹೌದು, “Hinduism is not just a religion, it’s a way of life”‘ (ಹಿಂದುತ್ವವೆಂಬುದು ಒಂದು ಧರ್ಮ ಮಾತ್ರವಲ್ಲ, ಜೀವನ ವಿಧಾನವೂ ಹೌದು) ಎಂದು ಜಗತ್ತಿಗೆ ಹೇಳಿದ್ದು, ಮನವರಿಕೆ ಮಾಡಿಕೊಟ್ಟಿದ್ದೂ ವಿವೇಕಾನಂದ ಅವರೇ. ಭಾರತದಲ್ಲಿ ಇಷ್ಟೆಲ್ಲಾ ಅಲ್ಪಸಂಖ್ಯಾತರನ್ನು ಕಾಣಲು ಹಿಂದೂಗಳು ಬಹುಸಂಖ್ಯಾತರಾಗಿರುವುದೇ ಕಾರಣ. ಹಿಂದೂಯಿಸಂ ಎಂಬುದು ಧರ್ಮಮಾತ್ರವಲ್ಲ, ಅದೊಂದು ಸ್ಪಿರಿಚ್ಯುಯಾಲಿಟಿ ಎಂದವರು ಅವರು. ಸ್ಪಿರಿಚ್ಯುಯೆಲ್ ಅಂದರೆ ತನ್ನ ಹಿತವೇ ಮುಖ್ಯ ಎಂಬ ಆಲೋಚನೆ ಬಿಟ್ಟು ಇತರರ ಶ್ರೇಯೋಭಿವೃದ್ಧಿಯ ಬಗ್ಗೆಯೂ ಯೋಚಿಸಬೇಕು ಎಂಬುದು. ಅವತ್ತು ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತೀಯತೆ, ಹಿಂದೂ ಧರ್ಮದ ಹಿರಿಮೆ, ಸಹಿಷ್ಣುತೆ ಬಗ್ಗೆ ವಿವೇಕಾನಂದರು ಆಡಿದ ಮಾತುಗಳನ್ನು ಕೇಳಿದ ಅಮೆರಿಕದ ಪ್ರತಿಷ್ಠಿತ ‘ನ್ಯೂಯಾರ್ಕ್ ಟೈಮ್ಸ್್’ ಪತ್ರಿಕೆ ತನ್ನ ಮರುದಿನದ ಆವೃತ್ತಿಯಲ್ಲಿ “Church should be ashamed for sending its preachers to India…” ಎಂದು ಬರೆದಿತ್ತು!!

ಹಾಗಾದರೆ ಸ್ವಾತಂತ್ರ್ಯ ಚಳವಳಿಗೆ ವಿವೇಕಾನಂದರ ಕೊಡುಗೆಯೇನು? ಹಾಗೆಂದು ಕೇಳಿದರೆ ನೇರವಾಗಿ ಅವರು ಭಾಗಿಯಾಗದಿದ್ದರೂ ಸ್ವಾತಂತ್ರ್ಯ ಹೋರಾಟಗಾರರಾದ ಸುಭಾಷ್್ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ಭಗತ್್ಸಿಂಗ್ ವಿವೇಕಾನಂದರಿಂದ ಪ್ರಭಾವಿತರಾಗಿದ್ದರು. ಈ ದೇಶದ ಮೇರು ನಾಯಕ ಮಹಾತ್ಮ ಗಾಂಧೀಜಿಯವರು, ‘ನಾನು ವಿವೇಕಾನಂದರ ಚಿಂತನೆ ಹಾಗೂ ವಿಚಾರಧಾರೆಯನ್ನು ಆಮೂಲಾಗ್ರವಾಗಿ ಓದಿದ್ದೇನೆ. ಹಾಗೆ ಓದಿದ ಮೇಲೆ ನನ್ನಲ್ಲಿದ್ದ ರಾಷ್ಟ್ರಪ್ರೇಮ ಸಹಸ್ರ ಪಟ್ಟು ಹೆಚ್ಚಾಯಿತು’ ಎಂದು ಸ್ವತಃ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, If Gandhiji is the father of the nation, then Vivekananda is the grandfather of the nationಿ ಎಂದು ಹೇಳಬಹುದಲ್ಲವೇ?!

ಒಂದು ಸಲ ಸ್ವಾಮಿ ವಿವೇಕಾನಂದರು ರೈಲಿನಲ್ಲಿ ಪ್ರಯಾಣಿಸುತ್ತಿರುತ್ತಾರೆ. ಎದುರಲ್ಲೇ ಇಬ್ಬರು ಫಿರಂಗಿಗಳು ಕುಳಿತಿರುತ್ತಾರೆ. ಅವರು ಸನ್ಯಾಸಿ ವಿವೇಕಾನಂದರನ್ನು ಕಂಡು ಗೇಲಿ ಮಾಡಲಾರಂಭಿಸುತ್ತಾರೆ, ಆವರಿಗೆ ಇಂಗ್ಲಿಷ್ ಬರುವುದಿಲ್ಲ ಎಂಬುದು ಅವರ ಊಹೆಯಾಗಿರುತ್ತದೆ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಮುಂದಿನ ನಿಲ್ದಾಣದಲ್ಲಿ ವಿವೇಕಾನಂದರನ್ನು ಬಲ್ಲವರೊಬ್ಬರು ರೈಲು ಹತ್ತುತ್ತಾರೆ, ಅವರೊಂದಿಗೆ ವಿವೇಕಾನಂದರು ಬಹಳ ಸೊಗಸಾಗಿ ಇಂಗ್ಲಿಷ್್ನಲ್ಲಿ ಮಾತನಾಡುವುದನ್ನು ಕಂಡು ದಂಗುಬಡಿದಂತಾದ ಫಿರಂಗಿಗಳಲ್ಲಿ ಒಬ್ಬ ವಿವೇಕಾನಂದರ ಬಳಿಗೆ ಬಂದು, ‘ನಿಮಗೆ ಇಂಗ್ಲಿಷ್ ಬರುವುದಿಲ್ಲವೆಂಬ ಕಾರಣಕ್ಕೆ ಏನೆಲ್ಲ ಮಾತನಾಡಿದೆವು. ಆದರೆ ನೀವೇಕೆ ಪ್ರತಿಕ್ರಿಯಿಸಲೂ ಇಲ್ಲ, ಕೋಪಿಸಿಕೊಳ್ಳಲೂ ಇಲ್ಲ’ ಎಂದು ಪ್ರಶ್ನಿಸುತ್ತಾನೆ. ಅಗ ವಿವೇಕಾನಂದರು ಹೇಳುತ್ತಾರೆ-‘ನಾನು ಮೂರ್ಖರನ್ನು ನೋಡುತ್ತಿರುವುದು ಇದೇ ಮೊದಲಲ್ಲ’!

ಹಾಗಂತ ವಿವೇಕಾನಂದರು ಎಲ್ಲ ಸಂದರ್ಭಗಳಲ್ಲೂ ಸುಮ್ಮನಿರುತ್ತಿದ್ದರು ಎಂದು ಭಾವಿಸಬೇಡಿ!

ವಿಶ್ವಧರ್ಮ ಸಮ್ಮೇಳನ ಮುಗಿಸಿ ಸ್ವಾಮಿ ವಿವೇಕಾನಂದರು ಹಡಗಿನಲ್ಲಿ ವಾಪಸ್ಸಾಗುತ್ತಿರುತ್ತಾರೆ. ಅದೇ ಹಡಗಿನಲ್ಲಿ ಇಬ್ಬರು ಪಾದ್ರಿಗಳು ಮತಾಂತರ ಮಾಡಲು ಭಾರತಕ್ಕೆ ಆಗಮಿಸುತ್ತಿರುತ್ತಾರೆ. ವಿವೇಕಾನಂದರನ್ನು ಕಂಡ ಅವರು ಬಹಳ ಕೀಳಾಗಿ ಮಾತನಾಡಲು, ನಿಂದಿಸಲು ಆರಂಭಿಸುತ್ತಾರೆ. ವಿವೇಕಾನಂದರು ಏನೂ ಮಾತನಾಡುವುದಿಲ್ಲ. ಕೊನೆಗೆ ಪಾದ್ರಿಗಳು ಹಿಂದು ಧರ್ಮವನ್ನು, ಭಾರತವನ್ನು, ಭಾರತೀಯರನ್ನು ನಿಂದಿಸಲು ಆರಂಭಿಸುತ್ತಾರೆ. ಅದುವರೆಗೂ ಸುಮ್ಮನಿದ್ದ ದೃಢಕಾಯರಾದ ವಿವೇಕಾನಂದರು ಕುಪಿತಗೊಂಡು ಪಾದ್ರಿಗಳಿಬ್ಬರ ಕುತ್ತಿಗೆ ಪಟ್ಟಿ ಹಿಡಿದೆಳೆದು, ‘ಭಾರತ ಹಾಗೂ ಭಾರತೀಯರ ಬಗ್ಗೆ ಇನ್ನೊಂದು ಕೆಟ್ಟ ಮಾತನಾಡಿದರೆ ಸಮುದ್ರಕ್ಕೆಸೆಯುತ್ತೇನೆ’ ಎನ್ನುತ್ತಾರೆ. ಅವಕ್ಕಾದ ಪಾದ್ರಿಗಳು ಬಾಯಿಮುಚ್ಚಿಕೊಳ್ಳುತ್ತಾರೆ. ಆದರೆ ಇದನ್ನು ಕಂಡು ವಿವೇಕಾನಂದರ ಶಿಷ್ಯಂದಿರಿಗೇ ಆಶ್ಚರ್ಯವಾಗುತ್ತದೆ ‘ನೀವೊಬ್ಬ ಸ್ವಾಮಿಯಾಗಿ ಈ ರೀತಿ ಕೋಪಿಸಿಕೊಳ್ಳುವುದು, ಹಿಂಸಿಸಲು ಹೋಗುವುದು ಸರಿಯೇ?’ ಎಂದು ಪ್ರಶ್ನಿಸುತ್ತಾರೆ. ಆಗ ವಿವೇಕಾನಂದರು ಉತ್ತರಿಸುವ ಬದಲು ಶಿಷ್ಯಂದಿರನ್ನೇ ಪ್ರಶ್ನಿಸುತ್ತಾರೆ- ‘ನಿಮ್ಮ ತಾಯಿಯನ್ನು ಯಾರಾದರೂ ಕೆಣಕಿದರೆ, ಅವಮಾನಿಸಿದರೆ ಸುಮ್ಮನಿರುತ್ತೀರಾ? ಹಾಗೆ ಭಾರತ ಮಾತೆ ಕೂಡ ನನ್ನ ತಾಯಿ, ಭಾರತೀಯರು ನನ್ನ ಬಂಧುಗಳು. ಅವರನ್ನ ನಿಂದಿಸಿದರೆ, ಅಪಮಾನಿಸಿದರೆ ಸುಮ್ಮನಿರುವುದಕ್ಕಾಗುತ್ತದಾ?’ ಎನ್ನುತ್ತಾರೆ. ಮತಾಂತರದ ಬಗ್ಗೆ ಅವರು ಹೇಳಿದ್ದೇನು ಗೊತ್ತೆ?-“ಹಿಂದುವೊಬ್ಬ ಮತಾಂತರಗೊಂಡರೆ ನಮ್ಮ ಸಂಖ್ಯೆಯಲ್ಲಿ ಒಂದು ಕಡಿಮೆಯಾಗುವುದು ಮಾತ್ರವಲ್ಲ, ಒಬ್ಬ ಶತ್ರುವು ಸೃಷ್ಟಿಯಾದಂತೆ”. ಇಂತಹ ಸ್ವಾಮಿ ವಿವೇಕಾನಂದರು ಜನಿಸಿದ್ದು 1863, ಜನವರಿ 12ರಂದು. ಇದೇ ತಿಂಗಳ 12ಕ್ಕೆ ಅವರ 150ನೇ ಜನ್ಮದಿನ. ಈ ದೇಶ ಹಾಗೂ ಸನಾತನ ಧರ್ಮವನ್ನು ತಾಯಿಯಂತೆ ಪ್ರೀತಿಸುವುದು, ಪೂಜಿಸುವುದು, ರಕ್ಷಿಸುವುದೇ ಅವರಿಗೆ ನಾವು ತೋರುವ ನಿಜವಾದ ಗೌರವ.

106 Responses to “ಅವರು ರಾಷ್ಟ್ರಪಿತನಾದರೆ, ಇವರು ಗ್ರಾಂಡ್್ಫಾದರ್ ಆಫ್ ದಿ ನೇಶನ್!”

  1. GOPI.S says:

    super!!!! very good artical i ever seen about vivekananda………. thanks pratap simha

  2. ಸ್ವಾಮಿ ವಿವೇಕಾನಂದರು ಬಹಳ ಬೇಗ ದೇಹತ್ಯಾಗ ಮಾಡಿಬಿಟ್ಟರು, ಇಲ್ಲದಿದ್ದಲ್ಲಿ ಅವರಿಂದ ಮತ್ತಷ್ಟು ಬೆಳಕನ್ನು ನಿರೀಕ್ಷಿಸಬಹುದಿತ್ತು!

  3. anilgowda.g.j says:

    alli heliruva hadagina hagu railina prasangagalu tumba chennagiddu aa tarahada vishayagalige hecchu ottukodi

  4. avinash.k.nagaraj says:

    chennagide…..

  5. Ravi says:

    ಪರ್ವಾಗಿಲ್ವೆ ಕಾಂಗ್ರೆಸ್ಸನ್ನು ಟೀಕಿಸಿದೆ ಒಂದು ಇಡೀ ಲೇಖನ ಬರೆದಿದ್ದೀರಿ….?

  6. Ravi says:

    ಪರ್ವಾಗಿಲ್ವೆ ಕಾಂಗ್ರೆಸ್ಸನ್ನು ಟೀಕಿಸಿದೆ ಒಂದು ಇಡೀ ಲೇಖನ ಬರೆದಿದ್ದೀರಿ….!!!?

  7. shreenivas says:

    awesome…..really true:)

  8. arunshankar raga says:

    swamiji awara jivan ivattina yuva pilegege daree deepvidanthe.awara huttu
    habbada prayuktha e article prstutvagide..
    dhanyvadgalu sir

  9. Purushotham says:

    Nice article… which can teach a lesson to all Indians and Hindus…Love your nation and Love your religion…

  10. Nisha says:

    Very nice !!!!

  11. santosh says:

    Sir,
    150th year of birth celebration will be celebrated in 2013 not now…. please make it correction….

  12. Parashivamurthy says:

    ವಿವೇಕಾನಂದರು ಮಹಾನ್ ವ್ಯಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಅವರು ಹಿಂದೂ ಧರ್ಮದ ಪ್ರತಿ ಪಾದಕರು. ಆದರೆ ಭಾರತದಲ್ಲಿ ಈ ಹಿಂದೂ ಧರ್ಮದಿಂದಲೇ ಜಾತಿ ವ್ಯವಸ್ಥೆ ಎಂಬ ಅನಿಷ್ಠ ಪದ್ದತಿ ಜಾರಿಯಲ್ಲಿದೆ. ನಾನು ಒಂದು ಬಾರಿ ನೀವೇ ಬರೆದಿದ್ದ ಒಂದು ಲೇಖನ ಓದಿದ್ದೆ, ದಿನಾಂಕ ನೆನಪಿಲ್ಲ. ಅದು ಆರ್.ಎಸ್.ಎಸ್. ಕುರಿತದ್ದು. ಅದರಲ್ಲಿ ನೀವೊಬ್ಬ ಕ್ರಿಶ್ಚಿಯನ್ ಎಂದು ನೀವೇ ಸಂಭೋದಿಸಿದ್ದರ ನೆನಪು. ಆದರೆ ನೀವು ಹಿಂದೂ ಧರ್ಮದ ಬಗ್ಗೆ ಇಷ್ಟೊಂದು ವ್ಯಾಮೋಹ ಇಟ್ಟುಕೊಂಡಿರುವುದು ನಿಜಕ್ಕೂ ಆಶ್ಚರ್ಯ ಉಂಟು ಮಾಡುತ್ತಿದೆ. ಕಾರಣ ನೀವು ಯಾವಗಲೂ ಹಿಂದೂ ಧರ್ಮದ ಪರವಾಗಿಯೇ ನಿಮ್ಮ ಲೇಖನಗಳನ್ನು ಪ್ರಸ್ತುತ ಪಡಿಸುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಆದರೆ ಈ ಹಿಂದೂ ಧರ್ಮದಿಂದಲೇ ಭಾರದಲ್ಲಿ ಶತ ಶತಮಾನಗಳಿಂದ ಅಸ್ಪುರ್ಶತೆ ಇನ್ನೂ ಜೀವಂತವಾಗಿದೆ. ಇದಕ್ಕೆ ಹಿಂದೂ ಧರ್ಮದ ತತ್ವವೇ ಕಾರಣವಲ್ಲವೇ? ಇದಕ್ಕೆ ಹಿಂದಿನಿಂದಲೂ ಹಿಂದೂ ಧರ್ಮದ ಪ್ರತಿಪಾದಕರು ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ, ಇಂದಿಗೂ ನೀಡುತ್ತಾ ಬಂದಿದ್ದಾರೆ. ಹಿಂದೂ ಧರ್ಮದಲ್ಲಿನ ಶ್ರೇಷ್ಠತೆಯನ್ನು ಹೇಳುವ ನೀವು ಇದರಲ್ಲಿನ ತಪ್ಪುಗಳ ಬಗ್ಗೆ ಏಕೆ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ. ಅಲ್ಲದೆ ಹಿಂದೂ ಧರ್ಮದ ಜಾತಿ ವ್ಯವಸ್ಥೆಯ ಕುರಿತು ಹಲವಾರು ಮಹಾನ್ ವ್ಯಕ್ತಿಗಳು ಉದಾ: ಜ್ಯೋತಿ ಬಾಪುಲೆ, ಸಾವಿತ್ರಿ ಬಾಪುಲೆ, ತಂದೆ ಪೆರಿಯಾರ್, ರಾಮಸ್ವಾಮಿ ನಾಯಕರು, ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವದ ಮಹಾನ್ ಮಾನವತಾವಾದಿ ಸಾಮಾಜಿಕ ಹರಿಕಾರ ಡಾ: ಅಂಬೇಡ್ಕರ್ ಇವರುಗಳ ಬಗ್ಗೆ ಏಕೆ ನೀವು ನಿಮ್ಮ ಲೇಖನ ಪ್ರಕಟಿಸುವುದಿಲ್ಲ. ಇಂದಿನ ದಿನಗಳಲ್ಲಿ ಪ್ರತಿಕೆಗಳು, ದೂರದರ್ಶನ ಜನರಿಗೆ ಹತ್ತಿರುವವಾಗಿರುವ ಒಬ್ಬ ಸ್ನೇಹಿತನಿದ್ದಂತೆ. ಜಗತ್ತಿನ ಯಾವುದೇ ವಿಷಯಗಳನ್ನು ಜನರಿಗೆ ತಿಳಿಸುತ್ತದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಹಲವಾರು ವಿಷಯಗಳ ಬಗ್ಗೆ ಜನರು ಅತಿ ಹೆಚ್ಚು ಸ್ಪಂದಿಸುತ್ತಾ. ಹೀಗಿರುವುವಾಗ ಇಂದಿನ ದಿನಗಳಲ್ಲಿ ಮತ್ತೆ ನೀವು ಜನರನ್ನು ಹಿಂದುತ್ವ ಶ್ರೇಷ್ಠಎಂಬ ಬಗ್ಗೆ ತಿಳಿಸುತ್ತಿರುವುದು ಎಷ್ಟು ಸರಿ? ಈ ಬಗ್ಗೆ ನಿಮ್ಮ ಉತ್ತರ ಏನು? ತಿಳಿಸಲು ಸಾಧ್ಯವಾ?

  13. Parashivamurthy says:

    ವಿವೇಕಾನಂದರು ಮಹಾನ್ ವ್ಯಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಅವರು ಹಿಂದೂ ಧರ್ಮದ ಪ್ರತಿ ಪಾದಕರು. ಆದರೆ ಭಾರತದಲ್ಲಿ ಈ ಹಿಂದೂ ಧರ್ಮದಿಂದಲೇ ಜಾತಿ ವ್ಯವಸ್ಥೆ ಎಂಬ ಅನಿಷ್ಠ ಪದ್ದತಿ ಜಾರಿಯಲ್ಲಿದೆ. ನಾನು ಒಂದು ಬಾರಿ ನೀವೇ ಬರೆದಿದ್ದ ಒಂದು ಲೇಖನ ಓದಿದ್ದೆ, ದಿನಾಂಕ ನೆನಪಿಲ್ಲ. ಅದು ಆರ್.ಎಸ್.ಎಸ್. ಕುರಿತದ್ದು. ಅದರಲ್ಲಿ ನೀವೊಬ್ಬ ಕ್ರಿಶ್ಚಿಯನ್ ಎಂದು ನೀವೇ ಸಂಭೋದಿಸಿದ್ದರ ನೆನಪು. ಆದರೆ ನೀವು ಹಿಂದೂ ಧರ್ಮದ ಬಗ್ಗೆ ಇಷ್ಟೊಂದು ವ್ಯಾಮೋಹ ಇಟ್ಟುಕೊಂಡಿರುವುದು ನಿಜಕ್ಕೂ ಆಶ್ಚರ್ಯ ಉಂಟು ಮಾಡುತ್ತಿದೆ. ಕಾರಣ ನೀವು ಯಾವಗಲೂ ಹಿಂದೂ ಧರ್ಮದ ಪರವಾಗಿಯೇ ನಿಮ್ಮ ಲೇಖನಗಳನ್ನು ಪ್ರಸ್ತುತ ಪಡಿಸುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಆದರೆ ಈ ಹಿಂದೂ ಧರ್ಮದಿಂದಲೇ ಭಾರದಲ್ಲಿ ಶತ ಶತಮಾನಗಳಿಂದ ಅಸ್ಪುರ್ಶತೆ ಇನ್ನೂ ಜೀವಂತವಾಗಿದೆ. ಇದಕ್ಕೆ ಹಿಂದೂ ಧರ್ಮದ ತತ್ವವೇ ಕಾರಣವಲ್ಲವೇ? ಇದಕ್ಕೆ ಹಿಂದಿನಿಂದಲೂ ಹಿಂದೂ ಧರ್ಮದ ಪ್ರತಿಪಾದಕರು ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ, ಇಂದಿಗೂ ನೀಡುತ್ತಾ ಬಂದಿದ್ದಾರೆ. ಹಿಂದೂ ಧರ್ಮದಲ್ಲಿನ ಶ್ರೇಷ್ಠತೆಯನ್ನು ಹೇಳುವ ನೀವು ಇದರಲ್ಲಿನ ತಪ್ಪುಗಳ ಬಗ್ಗೆ ಏಕೆ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ. ಅಲ್ಲದೆ ಹಿಂದೂ ಧರ್ಮದ ಜಾತಿ ವ್ಯವಸ್ಥೆಯ ಕುರಿತು ಹಲವಾರು ಮಹಾನ್ ವ್ಯಕ್ತಿಗಳು ಉದಾ: ಜ್ಯೋತಿ ಬಾಪುಲೆ, ಸಾವಿತ್ರಿ ಬಾಪುಲೆ, ತಂದೆ ಪೆರಿಯಾರ್, ರಾಮಸ್ವಾಮಿ ನಾಯಕರು, ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವದ ಮಹಾನ್ ಮಾನವತಾವಾದಿ ಸಾಮಾಜಿಕ ಹರಿಕಾರ ಡಾ: ಅಂಬೇಡ್ಕರ್ ಇವರುಗಳ ಬಗ್ಗೆ ಏಕೆ ನೀವು ನಿಮ್ಮ ಲೇಖನ ಪ್ರಕಟಿಸುವುದಿಲ್ಲ. ಇಂದಿನ ದಿನಗಳಲ್ಲಿ ಪ್ರತಿಕೆಗಳು, ದೂರದರ್ಶನ ಜನರಿಗೆ ಹತ್ತಿರುವವಾಗಿರುವ ಒಬ್ಬ ಸ್ನೇಹಿತನಿದ್ದಂತೆ. ಜಗತ್ತಿನ ಯಾವುದೇ ವಿಷಯಗಳನ್ನು ಜನರಿಗೆ ತಿಳಿಸುತ್ತದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಹಲವಾರು ವಿಷಯಗಳ ಬಗ್ಗೆ ಜನರು ಅತಿ ಹೆಚ್ಚು ಸ್ಪಂದಿಸುತ್ತಾ. ಹೀಗಿರುವುವಾಗ ಇಂದಿನ ದಿನಗಳಲ್ಲಿ ಮತ್ತೆ ನೀವು ಜನರನ್ನು ಹಿಂದುತ್ವ ಶ್ರೇಷ್ಠಎಂಬ ಬಗ್ಗೆ ತಿಳಿಸುತ್ತಿರುವುದು ಎಷ್ಟು ಸರಿ?

  14. gurudev says:

    Hello sir, I’m Gurudev, living in Gadag. Once I met u in Girinagar Yogashrama, Bengalore.
    I read your saterday’s article, and i feel it is the best among all your article. and my humble request is, please write still more article of swami V.K. so that, our youths can understand swamiji’s modern India’s aim(i.e, Tyaga mattu Seve)
    If u do so, youth generation will be very thankful to you. and, I’m waiting for your reply.
    Jai RamaKrishna…

  15. Harish says:

    He is truly grand father of India

  16. Rakesh Nadig says:

    Namaste… article was good.

  17. Hariprasad says:

    Yes he is the Grand father, My salute to this Great Saint. Everyone Should inspire from him Especially youth In future for a Better India is in the Hands of Youth.

  18. Super article sir. Swami vivekananda is role model for youth.

  19. Hanumanthraya says:

    I am reading your articles every week without fail…..plz write more about of patriotism.

  20. Reddi says:

    Great article…

  21. Jagadeesh says:

    I love this article.This is the best article which covers 360 degrees of his personality.
    Thanks a lot pratap.

  22. Raju.N says:

    nice article, agree with u ……..

  23. guru says:

    ಅದ್ಮುತವಾದ ಬರಹ ಸ್ವಾಮಿ ವಿವೇಕನಂದರ ಬಗ್ಗೆ ತಾವು ಬರೆದ ಲೇಖನವನ್ನು ಓದುತ್ತಿದ್ದರೆ ಮೈ ಜುಮ್ ಎನ್ನುತ್ತದೆ ..ತಮ್ಮ ಈ ಲೇಕನಗಳು ಯುವ ಶಕ್ತಿಯನ್ನು ಬಡಿದೆಬ್ಬಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ ..ಸ್ವಾಮಿ ವಿವೇಕನಂದರ ೧೫೦ ನೆ ಜನ್ಮ ದಿನದ ಶುಭಾಶಯಗಳು .ಜೈ ಹಿಂದ್.

  24. santhosh m says:

    We indians have not seen god anywhere on this world, but can be felt in the name itself- SWAMI VIVEKANANDA.
    He is really the GREAT GRAND FATHER of INDIA.

  25. Kiran says:

    ”ಹಿಂದುವೊಬ್ಬ ಮತಾಂತರಗೊಂಡರೆ ನಮ್ಮ ಸಂಖ್ಯೆಯಲ್ಲಿ ಒಂದು ಕಡಿಮೆಯಾಗುವುದು ಮಾತ್ರವಲ್ಲ, ಒಬ್ಬ ಶತ್ರುವು ಸೃಷ್ಟಿಯಾದಂತೆ”.
    Thanks for the article.

  26. appu says:

    yeddelu bharatiyaaaaaaaaaaaaaaa

  27. Chandru says:

    Inspiring personality

  28. ravi says:

    its great shree swammi vivekanda is power of youth.

  29. Asha says:

    We read Vivekananada, we respect and finally we start worshiping him, rather than following his thoughts, isn’t it the tragedy with us ???

  30. ashokt says:

    Hi sir, i read this articles in kannada prabha more then 3 times, bez great articls ever read in my life..

  31. BASHU .M says:

    good & fantastic sir.

  32. mamatha says:

    Manushyanige viveka idre avanu yavaglu jayashali age agthane.

  33. Prapthi says:

    Hey Pratap,

    The article has come out real good… Swami V K is our youth icon… yes it makes a lot of sense to call him as youth icon than calling a politician Raeev Gandhi as youth icon when he himself doesnt have any values for his own life.

    I have been reading your articles since my childhood… you have been really thoughtful… Keep writing.

    May god bless you

    Prapthi

  34. Prapthi says:

    Hi Pratap,

    Loved your article.. I totally agree that Swami Vivekananda is our youth icon..

    Keep up your good writing.

  35. dhanush says:

    suprb article…actually i saw some bad comments about swami vivekananda in prajavani and tore that page..now satisfied..thank u sir

  36. sharad says:

    can someone throw light on the man who wrote this.. ?
    http://www.prajavani.net/web/include/story.php?news=3203&section=144&menuid=14

  37. dayanand says:

    I think that man not born for single mother… Its fantastic non sense… he doesnt know anythin abt that great personality…

  38. Manju hiremath MBL says:

    Swami Vivekananda Guruji is Grand Father of nation
    and Also wrold.. Rrdru Thak’s tor the article..
    Ind rock’s JAi ind..

  39. vani KS says:

    very good article sir…

  40. suraj thavare says:

    fantastic, marvellous dont hv words 2 describe sir febraury 19th s CHHATRAPATHI SHIVAJI MAHARAJ b’day pls write article on hm d real HINDU dharma samsthapaka

  41. aparna says:

    nice artucle

  42. vasundhara says:

    nice article pratapji.

    An inspirational stmnt by Swami vivekananda “arise,awake stop not till the Goal is reached”…. Hats off to this Youth Icon 🙂

  43. Manasvi says:

    Mr. Prathap,
    good article indeed! It would be fair on your part, if you had written more about Swamy Vivekananda and his real idea of Hinduism. I have read a lot about him since childhood and a great fan of him since then. He gave the image of real sanathana dharma to the world, but the Hinduism that we practice today is not the same as he expected. He was very much against the discrimination of people based on caste and so called rituals. Why don’t know let the people know about it in your articles. I think it would be great towards building a true and real Hindu values in our nation.

  44. HEY PRATHAP,

    REALLY NICE ARTICLE BUT DON’T YOU THINK THAT Y THIS INDIA ONLY CONSIDER FATHER AND WHY NOT GRANDFATHER..
    what best gandhi does which swaami didn’t. really i hate gandhi most bcoz he is the root cause for this communal war and other indian issues.

    i never consider him as father but as a stabber, its the fate that bludy nehru, indira, rajiv and now sonia is trying to spoil our nation. i really love india but not india bcoz of this bludy indian who elected this bludy congress twice after our beloved Atulji..and also kept mum when congress thrown out my Role model APJ.Kalm. i hereby request you to come up with some good article to educate people in this regards even i am trying to do the same,

    with regards,
    a humble indian,
    KAPU RAJESHRAJ SHETTY,
    9964244911

  45. santosh ch says:

    thank u pratap sir

  46. Aravind says:

    Long live Pratap 🙂

  47. Pradeep Hebri says:

    Each & every1 shold read it

  48. raghu says:

    its great shree swammi vivekanda is power of youth.

  49. mallikarjun heggannavar says:

    wonderful article

  50. Naveen says:

    Even i read about Swami Vivekananda… he is really the the man of god..
    he shows the Indian values to world..

    World is very wow full to Swami Vivekananda ..

    i am trying to read all your article.. all are nice and really to truth ..

    Very thankful to you sir