Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಮೂರ್ತಿಯವರೇ, ನಿಮಗೇಕೆ ಈ ಅಪದ್ಧ ನುಡಿವ ಅನಿವಾರ್ಯ?

ಮೂರ್ತಿಯವರೇ, ನಿಮಗೇಕೆ ಈ ಅಪದ್ಧ ನುಡಿವ ಅನಿವಾರ್ಯ?

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು 2014ರ ಲೋಕಸಭೆ ಚುನಾವಣೆಯ ಪ್ರಚಾರಾಂದೋಲನ ಸಮಿತಿಯ ಮುಖ್ಯಸ್ಥರನ್ನಾಗಿ ಬಿಜೆಪಿ ನೇಮಕ ಮಾಡಿದ್ದು ಗೋವಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಹಾಗೂ ಜೂನ್ 9ರಂದು. ಇಂಥದ್ದೊಂದು ಮಹತ್ವದ ತೀರ್ಮಾನದ ನಂತರ ಸುದ್ದಿಸಂಸ್ಥೆ ರಾಯಿಟರ್ಸ್‌ನ ವರದಿಗಾರರಾದ ರಾಸ್ ಗಾಲ್ವಿನ್ ಹಾಗೂ ಶೃತಿ ಗೊಟ್ಟಿಪಟಿ ನರೇಂದ್ರ ಮೋದಿಯವರ ಸಂದರ್ಶನಕ್ಕೆ ಕಾಲಾವಕಾಶ ಕೇಳಿದರು. ಕಳೆದ ಜುಲೈ 12ರಂದು ಸಂದರ್ಶನವನ್ನೂ ನಡೆಸಿದರು. ಅವರ ಸಹಜವಾಗಿಯೇ 2002ರ ಗುಜರಾತ್ ಹಿಂಸಾಚಾರವನ್ನು ಪ್ರಸ್ತಾಪಿಸಿದರು.

-ಪ್ರಶ್ನೆ: 2002ರಲ್ಲಿ ನಡೆದ ಘಟನೆ ಬಗ್ಗೆ ನೀವು ಪಶ್ಚಾತ್ತಾಪ ಹೊಂದಿದ್ದೀರಾ?

ಮೋದಿ: ನೋಡಿ, ಭಾರತ ಸರ್ವೋಚ್ಚ ನ್ಯಾಯಾಲಯವನ್ನು ಇಂದು ವಿಶ್ವದ ಅತ್ಯಂತ ಯೋಗ್ಯ ನ್ಯಾಯಾಲಯಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ಅಂಥ ಸುಪ್ರೀಂಕೋರ್ಟ್ ಒಂದು ವಿಶೇಷ ತನಿಖಾ ತಂಡವನ್ನು (SIT) ನೇಮಕ ಮಾಡಿತ್ತು. ಅದರಲ್ಲಿ ಅತ್ಯಂತ ಪ್ರತಿಭಾನ್ವಿತ ಅಧಿಕಾರಿಗಳಿದ್ದರು. ಅದರ ವರದಿ ಬಂದಿದೆ ಹಾಗೂ ನನಗೆ ಕ್ಲೀನ್ ಚಿಟ್ (ನಿರ್ದೋಷಿ) ಕೊಡಲಾಗಿದೆ. ಮತ್ತೊಂದು ವಿಚಾರ: ನಾವೊಂದು ಕಾರಿನಲ್ಲಿ ತೆರಳುತ್ತಿದ್ದೇವೆಂದರೆ, ನಾವೇ ಕಾರನ್ನು ಚಲಾಯಿಸುತ್ತಿರಬಹುದು ಇಲ್ಲವೆ ಬೇರೊಬ್ಬರು ಕಾರು ಚಲಾಯಿಸುತ್ತಿರಬಹುದು ಹಾಗೂ ನಾವು ಹಿಂದೆ ಕುಳಿತಿರಬಹುದು. ಒಂದು ನಾಯಿಮರಿ ಕಾರಿನ ಚಕ್ರಕ್ಕೆ ಸಿಕ್ಕಿದರೂ ನಮ್ಮ ಮನಸ್ಸಿಗೆ ನೋವಾಗುತ್ತದೋ ಇಲ್ಲವೋ ನೀವೇ ಹೇಳಿ? ಖಂಡಿತ ನೋವಾಗುತ್ತದೆ. ನಾನು ಮುಖ್ಯಮಂತ್ರಿ ಅಲ್ಲವೋ ಹೌದೋ, ನಾನೊಬ್ಬ ಮನುಷ್ಯ. ಜಗತ್ತಿನಲ್ಲಿ ಎಲ್ಲೇ ಏನೇ ಕೆಟ್ಟದ್ದು ಸಂಭವಿಸಿದರೂ ಸ್ವಾಭಾವಿಕವಾಗಿಯೇ ದುಃಖವಾಗುತ್ತದೆ.

ಈ ಉತ್ತರದಲ್ಲಿ ಏನು ತಪ್ಪಿದೆ ಹೇಳಿ? ಮೋದಿ ಮುಸ್ಲಿಮರನ್ನು ಎಲ್ಲಿ ನಾಯಿಮರಿಗೆ ಹೋಲಿಸಿದ್ದಾರೆ ದಯವಿಟ್ಟು ವಿವರಿಸಿ? ಆದರೂ ಮಾಧ್ಯಮಗಳು ದೊಡ್ಡ ಬೊಬ್ಬೆ ಹಾಕಿದವು, ಚೀರಾಡಿದವು, ಮೋದಿಯವರನ್ನು ಅಹಂಕಾರಿ, ತಪ್ಪಿತಸ್ಥರು ಎಂದು ತೀರ್ಪುಕೊಟ್ಟವು. ಒಂದು ಕಾಲದಲ್ಲಿ ಮೋದಿಯವರನ್ನು ಗುಜರಾತ್ ಗಲಭೆ ಸಂಬಂಧ ಅಂತಾರಾಷ್ಟ್ರೀಯ ನ್ಯಾಯಾಲಯದೆದುರು ತಂದು ನಿಲ್ಲಿಸಲು ಜಾಗತಿಕ ಮಟ್ಟದಲ್ಲಿ ಹೋರಾಟಿಕ್ಕಿಳಿದಿದ್ದ ಗುಜರಾತಿ ಮುಸ್ಲಿಂ ಝಫರ್ ಸರೇಶ್‌ವಾಲಾ ‘ನಾಯಿಮರಿ’ ಟಿಪ್ಪಣಿ ಬಗ್ಗೆ ವಿವರಣೆ ನೀಡುವಂತೆ ಖುದ್ದಾಗಿ ಮೋದಿಯವರನ್ನು ಕೇಳಿದಾಗ “ಒಂದು ಇರುವೆಯನ್ನು ಕೊಂದರೂ ನೋವಾಗುತ್ತದೆ ಎಂಬ ಉದಾಹರಣೆ ಮೂಲಕ ನನ್ನ ಮನಸ್ಸಿಗಾದ ನೋವನ್ನು ವ್ಯಕ್ತಪಡಿಸಬೇಕೆಂದಿದ್ದೆ, ಕಾರಿನ ಉದಾಹರಣೆ ತೆಗೆದುಕೊಂಡಿದ್ದರಿಂದ ನಾಯಿಮರಿ ಎಂದೆ” ಎಂದರು. ಜಫರ್ ಸರೇಶ್‌ವಾಲಾಗೆ ಕೂಡ ಅವರ ಮನವರಿಕೆಯಾಯಿತು. ತಮ್ಮ ಟಿಆರ್‌ಪಿ ದಾಹವನ್ನು ತಣಿಸಿಕೊಂಡ ನಂತರ ಮಾಧ್ಯಮಗಳೂ ತಣ್ಣಗಾದವು.

ಆದರೆ ನಮ್ಮ ಜ್ಞಾನಪೀಠ ‘ವಿಜೇತ’ (ಸ್ವ)ಸಾಹಿತಿ ಅನಂತಮೂರ್ತಿಯವರ ದಾಹ, ಉದ್ದೇಶ ಯಾವುದು? ಏಕಾಗಿ ಮೋದಿ ಉತ್ತರವನ್ನು ತಮ್ಮ ಮೂಗಿನ ನೇರಕ್ಕೆ ತಿರುಚಿಕೊಂಡು ಒಂದೊಂದೇ ಪತ್ರಿಕೆಗಳಿಗೆ ಸಂದರ್ಶನ ನೀಡುತ್ತಿದ್ದಾರೆ? “ಅಷ್ಟು ಜನ ಕೋಮು ಗಲಭೆಯಲ್ಲಿ ಸತ್ತರಲ್ಲ, ಅವರು ಓಡ್ತಾ ಇರೋ ಕಾರಿನ ಚಕ್ರಕ್ಕೆ ಕುನ್ನಿಗಳು ಸಿಕ್ಕಂಗೆ ಅಂತಂದನಲ್ಲಾ…” ಎಂದು ಹೇಳಿಕೆ ಕೊಡುತ್ತಿದ್ದಾರಲ್ಲಾ ಈ ಅನಂತಮೂರ್ತಿಯವರಿಗೆ ಆತ್ಮಸಾಕ್ಷಿ ಅನ್ನೋದೇ ಇಲ್ಲವೇ? ಸಮಾಜ ಸಾಕ್ಷೀಪ್ರಜ್ಞೆಯನ್ನು ಎತ್ತಿಹಿಡಿಯಬೇಕಾದ ಸಾಹಿತಿಗಳ ವರ್ಗಕ್ಕೆ ಸೇರಿದ ವ್ಯಕ್ತಿಗೇ ಆತ್ಮಸಾಕ್ಷಿ ಇಲ್ಲದಿದ್ದರೆ ಅವರಿಂದ ಪಾಠ ಹೇಳಿಸಿಕೊಳ್ಳುವ ಸಮಾಜದ ಗತಿಯೇನು? ಮೋದಿ ಉತ್ತರದ ಯಾವ ಭಾಗದಲ್ಲಿ ಅವರು ಗಲಭೆಯಲ್ಲಿ ಸತ್ತವರನ್ನು ನಾಯಿಗೆ ಹೋಲಿಸಿದ್ದಾರೆ? ಇಂಗ್ಲಿಷ್ ಪ್ರಾಧ್ಯಾಪಕರಾದ ಅನಂತಮೂರ್ತಿಯವರಿಗೆ ರಾಯಿಟರ್ಸ್ ಸಂದರ್ಶನದಲ್ಲಿರುವ ಸರಳ ಇಂಗ್ಲಿಷನ್ನೂ ಅರ್ಥಮಾಡಿಕೊಳ್ಳದಷ್ಟು ಬುದ್ಧಿ ಮಂಕಾಗಿದೆಯೇ? ಯುಪಿಎ-1 ಸರ್ಕಾರದಲ್ಲಿ ಕೇಂದ್ರ ಗೃಹಖಾತೆ ರಾಜ್ಯ ಸಚಿವರಾಗಿದ್ದ ಶ್ರೀಪ್ರಕಾಶ್ ಜೈಸ್ವಾಲ್ 2005ರಲ್ಲಿ ಸಂಸತ್‌ಗೆ ನೀಡಿದ ವಿವರಣೆಯಲ್ಲಿ “ಗುಜರಾತ್ ಗಲಭೆಯಲ್ಲಿ 252 ಹಿಂದುಗಳೂ ಸತ್ತಿದ್ದಾರೆ” ಎಂದು ತಿಳಿಸಿದ್ದಾರೆ. ಗಲಭೆಯಲ್ಲಿ ಸತ್ತವರನ್ನೆಲ್ಲ ನಾಯಿಗೆ ಹೋಲಿಸಿದ್ದರೆ, ಆ 252 ಹಿಂದುಗಳನ್ನೂ ನಾಯಿಗೆ ಹೋಲಿಸಿದ್ದಾರೆ ಎಂದು ಹಿಂದುಗಳೂ ಬೊಬ್ಬೆಹಾಕಬೇಕಿತ್ತಲ್ಲವೆ? ಜ್ಞಾನಿಗಳಾದ, ಅದಕ್ಕೆ ಮನ್ನಣೆ ಎಂಬಂತೆ ಜ್ಞಾನಪೀಠ ಪಡೆದ ನೀವೇ ಏಕೆ ಸುಳ್ಳು ಹೇಳುತ್ತೀರಿ ಅನಂತಮೂರ್ತಿಯವರೇ?

“ರಾಹುಲ್ ಗಾಂಧಿ 10 ಸಾವಿರ ಪದಗಳ ಭಾಷಣ ಮಾಡಿದರೆ ಆತನನ್ನು ಹೊಗಳಲು ಒಂದೆರಡು ಒಳ್ಳೆಯ ಪದಗಳನ್ನು ಮಾಧ್ಯಮಗಳು ಹುಡುಕುತ್ತಿರುತ್ತವೆ, ಅದೇ ಮೋದಿ 10 ಸಾವಿರ ಪದಗಳ ಭಾಷಣ ಮಾಡಿದರೆ ಅವರನ್ನು ತೆಗಳುವಂಥ ಒಂದೆರಡು ಹುಳುಕುಗಳಿಗೆ ಮಾಧ್ಯಮ ತಡಕಾಡುತ್ತಿರುತ್ತದೆ” ಎಂಬ ಮಾತಿದೆ. ಏನೂ ಸಿಗದಿದ್ದರೆ ಕೊನೆಗೆ ಟ್ವಿಸ್ಟು, ಟರ್ನು ಮಾಡಿಕೊಂಡು ಮೋದಿಯವರನ್ನು ತೆಗಳುತ್ತವೆ. ಅವುಗಳಿಗಾದರೂ ಟಿಆರ್‌ಪಿ ಚಿಂತೆಯಿದೆ. ನಿಮಗ್ಯಾವ ದರ್ದಿದೆ ಸ್ವಾಮಿ?

“ಮೋದಿ ಪ್ರಧಾನಿಯಾದರೆ ಈ ದೇಶದಲ್ಲಿ ನಾನಿರುವುದಿಲ್ಲ” ಎಂಬ ಅನಂತಮೂರ್ತಿಯವರ ಮತ್ತೊಂದು ಮಾತಿಗೆ ಬರೋಣ. ಪ್ರಜಾಪ್ರಭುತ್ವದಲ್ಲಿ ಟೀಕಿಸುವ, ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಖಂಡಿತ ಎಲ್ಲರಿಗೂ ಇದೆ. ಅಭಿಪ್ರಾಯ, ಅಭಿಪ್ರಾಯಭೇದ ವ್ಯಕ್ತಪಡಿಸುವುದಕ್ಕೂ, ದ್ವೇಷ, ಮತ್ಸರ ಹೊರಹಾಕುವುದಕ್ಕೂ ವ್ಯತ್ಯಾಸವಿಲ್ಲವೆ 2004ರಲ್ಲಿ ಸೋನಿಯಾ ಗಾಂಧಿಯವರು ಪ್ರಧಾನಿಯಾಗುವ ಪರಿಸ್ಥಿತಿ ಸೃಷ್ಟಿಯಾದಾಗ “ಆಕೆ ಪ್ರಧಾನಿಯಾದರೆ ನಾನು ತಲೆ ಬೋಳಿಸಿಕೊಳ್ಳುತ್ತೇನೆ, ಬಿಳಿ ಬಟ್ಟೆ ತೊಡುತ್ತೇನೆ, ಕಾಳು-ಕಡ್ಡಿ ತಿನ್ನುತ್ತೇನೆ, ನೆಲದ ಮೇಲೆ ಮಲಗುತ್ತೇನೆ” ಎಂದು ಹೇಳಿಕೆ ನೀಡಿದ್ದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹೇಗೆ ನಗೆಪಾಟಲಿಗೀಡಾಗಿದ್ದರು ಎಂಬುದು ನಿಮಗೆ ಗೊತ್ತಿಲ್ಲವೆ? ಆದರೆ ಸುಷ್ಮಾ ಸ್ವರಾಜ್‌ಗಿಂತಲೂ ಕೀಳಾದ ಹೇಳಿಕೆ ಕೊಟ್ಟಿರಲ್ಲಾ ನಿಮ್ಮ ಮಾತಿನ ಉದ್ದೇಶ, ಅರ್ಥವೇನು? ಮೋದಿಯನ್ನು ಸರ್ವಾಧಿಕಾರಿ ಎನ್ನುವ ನೀವು, 1975ರಲ್ಲಿ ಇಂದಿರಾ ಗಾಂಧಿಯವರು ದೇಶದ ಸಂವಿಧಾನವನ್ನೇ ಅಮಾನತ್ತಿನಲ್ಲಿಟ್ಟು ತುರ್ತು ಪರಿಸ್ಥಿತಿ ಹೇರಿದಾಗ ಆಕೆ ತೋರಿದ್ದು ನಿಜವಾದ ಸರ್ವಾಧಿಕಾರಿ ಧೋರಣೆ. ಆಗೇಕೆ ದೇಶಬಿಟ್ಟು ಹೋಗುವ ಮಾತು ನಿಮ್ಮ ಬಾಯಿಂದ ಬಂದಿರಲಿಲ್ಲ 1983ರಲ್ಲಿ ಅಸ್ಸಾಂನ ನೆಲ್ಲಿಯಲ್ಲಿ 24 ಗಂಟೆಯೊಳಗೆ 3,300 ಮುಸ್ಲಿಮರ ಮಾರಣಹೋಮ ನಡೆಯಿತು. ಆಗಲೂ ಇಂದಿರಾ ಗಾಂಧಿಯವರೇ ಪ್ರಧಾನಿಯಾಗಿದ್ದರು. ಯುಪಿಎ ಸರ್ಕಾರವೇ ಸಂಸತ್ತಿಗೆ ತಿಳಿಸಿದಂತೆ ಗುಜರಾತ್ ಹಿಂಸಾಚಾರದಲ್ಲಿ ಮಡಿದ ಮುಸ್ಲಿಮರ ಸಂಖ್ಯೆ 790. ಅಸ್ಸಾಂನಲ್ಲಿ ಸತ್ತಿದ್ದು 3 ಸಾವಿರದ ಮೂನ್ನೂರಕ್ಕೆ, 3 ಸಾವಿರದ ಮೂನ್ನೂರೂ ಮುಸಲ್ಮಾನರೇ. ಆಗ ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಇದ್ದಿದ್ದು ಕಾಂಗ್ರೆಸ್ ಸರ್ಕಾರಗಳೇ. “ಮೋದಿ ಪ್ರಧಾನಿಯಾಗಿಯೇ ಬಿಟ್ಟರೆ ಏನು ಮಾಡುತ್ತೀರಿ?” ಎಂಬ ಪ್ರಶ್ನೆಗೆ, “ಪ್ರಾಯವಾಯಿತು, ಏನು ಮಾಡುವುದಕ್ಕಾಗುತ್ತೆ. ಮೊದಲಾಗಿದ್ದರೆ ಖಂಡಿತ ಮೋದಿ ಪ್ರಧಾನಿಯಾಗುವುದಕ್ಕೆ ಬಿಡುತ್ತಿರಲಿಲ್ಲ” ಎಂದಿದ್ದೀರಲ್ಲಾ ಮೂರ್ತಿಗಳೇ, ನೆಲ್ಲಿ ಹತ್ಯಾಕಾಂಡ ನಡೆದಾಗ ವಿಶ್ವವಿದ್ಯಾಲಯಗಳಲ್ಲಿ ಚಿರ ಯುವಕನಂತೆಯೇ ವರ್ತಿಸುತ್ತಾ ಇದ್ದಿರಿ. ಆಗ ನಿಮ್ಮ ಪೌರುಷ, ಗಂಡಸುತನ ಎಲ್ಲಿ ಹೋಗಿತ್ತು? ಅಥವಾ ಯಾವುದಕ್ಕೆ ಸೀಮಿತವಾಗಿತ್ತು? ಅದು ಬಿಡಿ, 1984ರಲ್ಲಿ ಮೂರೂವರೆ ಸಾವಿರ ಸಿಖ್ಖರ ಹತ್ಯೆಯಾದಾಗಲೂ ನಿಮ್ಮ ದೇಹದಲ್ಲಿ ಚಿರ ಯೌವನವೇ ಇತ್ತು. ಆಗೇಕೆ ಇಂಥ ಮಾತುಗಳು ನಿಮ್ಮಿಂದ ಹೊರಬಂದಿರಲಿಲ್ಲ?

ಇವೆಲ್ಲ ಬೇಡ ಬಿಡಿ, 1983, ಡಿಸೆಂಬರ್ 3ನ್ನು ಭಾರತೀಯರು ಮಾತ್ರವಲ್ಲ, ಇಡೀ ಮನುಕುಲ ಮರೆಯುವಂತಿಲ್ಲ. ಅವತ್ತು ನೀವು ದ್ವೇಷಿಸುವ ಅಮೆರಿಕದ ಯೂನಿಯನ್ ಕಾರ್ಬೈಡ್ ಕಂಪನಿಯಿಂದ ವಿಷಾನಿಲ ಸೋರಿಕೆಯಾಗಿ ಮಧ್ಯಪ್ರದೇಶದ ಭೋಪಾಲದಲ್ಲಿ ಮಕ್ಕಳು, ಮರಿ ಎನ್ನದೆ 15 ಸಾವಿರ ಜನ ಕೂತು, ನಿಂತು, ಮಲಗಿದಲ್ಲೇ ಮಸಣ ಸೇರಿದರು. 3 ಲಕ್ಷ ಜನ ವಿಷಾನಿಲ ಸೇವಿಸಿ ಅಸ್ವಸ್ಥರಾದರು. ಒಟ್ಟು ಐದೂವರೆ ಲಕ್ಷ ಜನರ ವಿಷಾನಿಲದ ವಿಕೋಪಕ್ಕೆ ತುತ್ತಾದರು. ಆ ಕಂಪನಿಯ ಮುಖ್ಯಸ್ಥ ವಾರೆನ್ ಆ್ಯಂಡರ್‌ಸನ್‌ನನ್ನು ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಬಂಧಿಸಿದರೂ ಆತನನ್ನು ಬಿಡುಗಡೆ ಮಾಡುವಂತೆ ಆದೇಶಿಸಿದ, ಕೊನೆಗೆ ಖಾಸಗಿ ವಿಮಾನದಲ್ಲಿ ದೇಶಬಿಟ್ಟು ಪಲಾಯನ ಮಾಡಲು ಅವಕಾಶ ಮಾಡಿಕೊಟ್ಟ ರಾಜೀವ್ ಗಾಂಧಿ ನಿಮಗೆ ಏಕೆ ಯಾವತ್ತೂ ನರಹಂತಕರಂತೆ ಕಾಣಲಿಲ್ಲ? ತುಂಬುಪ್ರಾಯದಲ್ಲೇ ಇದ್ದ ನೀವು 1984ರ ಚುನಾವಣೆಯಲ್ಲಾದರೂ ರಾಜೀವ್ ಗಾಂಧಿ ವಿರುದ್ಧ ಪ್ರಚಾರಾಂದೋಲನ ಮಾಡಬಹುದಿತ್ತಲ್ಲವೆ? ಅಂದೇಕೆ, ರಾಜೀವ್ ಗಾಂಧಿಯಂಥ ವ್ಯಕ್ತಿ ಪ್ರಧಾನಿಯಾಗಿರುವ ನಾಡಿನಲ್ಲಿ ನಾನಿರಬಾರದು ಎಂದು ನಿಮಗನಿಸಲಿಲ್ಲ?

ಇನ್ನು ನೀವು ಹೇಳಿದ ಸೋನಿಯಾ ಗಾಂಧಿಯವರ “ಕ್ಷಮೆ, ಪಶ್ಚಾತ್ತಾಪ”ದ ಕಥೆಗೆ ಬರೋಣ. “ಇಂದಿರಾ ಹತ್ಯೆ ನಂತರದ ಸಿಖ್ ಹತ್ಯಾಕಾಂಡವೂ ಭೀಕರವಾದುದೇ. ಆದರೆ ಅದಕ್ಕೆ ಸೋನಿಯಾ ಗಾಂಧಿ ಪಶ್ಚಾತ್ತಾಪ ಪಟ್ಟಿದ್ದಾರೆ” ಎಂದು ಹೇಳಿದ್ದೀರಿ. ಸೋನಿಯಾ ಗಾಂಧಿಯವರು ಯಾವಾಗ ಸಿಖ್ಖರ ಕ್ಷಮೆ ಕೇಳಿದರು? ಯಾವ ಸಂದರ್ಭದಲ್ಲಿ ಪಶ್ಚಾತ್ತಾಪ ವ್ಯಕ್ತಪಡಿಸಿದರು? ಸ್ವಲ್ಪ ಆಧಾರ ಕೊಡುತ್ತೀರಾ? 2005, ಆಗಸ್ಟ್ 12ರಂದು ಸಂಸತ್ತಿನಲ್ಲಿ ಮಾತಿಗೆ ನಿಂತಿದ್ದ ಪ್ರಧಾನಿ ಮನಮೋಹನ್ ಸಿಂಗ್, “1984ರ ದಂಗೆ ಸಲುವಾಗಿ ಸಿಖ್ ಸಮುದಾಯದ ಕ್ಷಮೆ ಕೇಳಲು ನನಗೆ ಯಾವ ಅಂಜಿಕೆಯೂ ಇಲ್ಲ. ನಾನು ಬರೀ ಸಿಖ್ ಸಮುದಾಯಕ್ಕೆ ಮಾತ್ರವಲ್ಲ, ಇಡೀ ದೇಶದ ಕ್ಷಮೆ ಕೇಳುತ್ತೇನೆ” ಎಂದರು. ಇದನ್ನು ಒಟ್ಟಾರೆ ಕಾಂಗ್ರೆಸ್ ಪಕ್ಷ ಕೇಳಿದ ಕ್ಷಮೆ ಎಂದು ಬಿಂಬಿಸಲಾಯಿತು ಅಷ್ಟೇ ಸ್ವಾಮಿ. ಸೋನಿಯಾ ಗಾಂಧಿಯವರು ಕ್ಷಮೆ ಕೇಳಿದ್ದು ಆಪರೇಶನ್ ಬ್ಲೂ ಸ್ಟಾರ್ ಕಾರ್ಯಾಚರಣೆ ಮಾಡಿದ್ದಕ್ಕೆ. ಒಂದು ವೇಳೆ, ಸೋನಿಯಾ ಗಾಂಧಿಯವರಿಗೆ ಸಿಖ್ ಹತ್ಯಾಕಾಂಡದ ಬಗ್ಗೆ ನಿಜಕ್ಕೂ ಪಶ್ಚಾತ್ತಾಪವಾಗಿದ್ದರೆ 2004ರ ಲೋಕಸಭೆ ಚುನಾವಣೆಯಲ್ಲಿ ಏಕೆ ಸಿಖ್ಖರ ಹತ್ಯೆಯ ನೇತೃತ್ವ ವಹಿಸಿದ್ದ ಜಗದೀಶ್ ಟೈಟ್ಲರ್ ಹಾಗೂ ಸಜ್ಜನ್ ಕುಮಾರ್‌ಗೆ ಟಿಕೆಟ್ ನೀಡಿದ್ದರು? ಏಕಾಗಿ ಜಗದೀಶ್ ಟೈಟ್ಲರ್ ಅವರನ್ನು ಸಾಗರೋತ್ತರ ಖಾತೆ ರಾಜ್ಯ ಸಚಿವರನ್ನಾಗಿ ಮಾಡಿದ್ದರು?

ಇನ್ನು ಪ್ರಧಾನಿ ಏಕಾಗಿ ಕ್ಷಮೆ ಕೇಳಿದರು ಎಂಬ ಕಥೆ ಕೇಳಿ. 2000ದಲ್ಲಿ ವಾಜಪೇಯಿ ಸರ್ಕಾರ ಸಿಖ್ ಹತ್ಯಾಕಾಂಡದ ಬಗ್ಗೆ ಮರು ತನಿಖೆ ನಡೆಸುವಂತೆ ನಾನಾವತಿ ಆಯೋಗವನ್ನು ರಚನೆ ಮಾಡಿತ್ತು. ಅದು 2005, ಫೆಬ್ರವರಿಯಲ್ಲಿ ವರದಿ ನೀಡಿತು. ಆ ವರದಿಯ ಬಗ್ಗೆ ಚರ್ಚೆ ನಡೆಯಬೇಕೆಂದು ಪ್ರತಿಪಕ್ಷಗಳು ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಪಟ್ಟು ಹಿಡಿದವು. ಎಡಪಕ್ಷಗಳೂ ಹಠ ಹಿಡಿದಿದ್ದರಿಂದ ಅನಿವಾರ್ಯತೆಗೆ ಸಿಲುಕಿದ ಕಾಂಗ್ರೆಸ್ ಚರ್ಚೆಗೆ ಒಪ್ಪಿತು. ವರದಿಯಲ್ಲಿ ತೀವ್ರ ಆರೋಪಕ್ಕೆ ಗುರಿಯಾಗಿದ್ದ ಸಚಿವ ಜಗದೀಶ್ ಟೈಟ್ಲರ್ ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷಗಳು ಹಠ ಹಿಡಿದಿದ್ದರಿಂದ 2005, ಆಗಸ್ಟ್ 11ರಂದು ಟೈಟ್ಲರ್ ರಾಜೀನಾಮೆ ನೀಡಿದರು. ಮರುದಿನ, ಪ್ರಕರಣಗಳ ಮರು ತನಿಖೆಯಾಗಬೇಕೆಂಬ ಒತ್ತಾಯ ಬಂದಾಗ ಪ್ರಧಾನಿ ಬಾಯ್ಬಿಟ್ಟರು. ಸಿಖ್ ಸಮುದಾಯದ ಕ್ಷಮೆ ಕೇಳಲು ನನಗೆ ಯಾವ ಅಂಜಿಕೆಯೂ ಇಲ್ಲ ಎಂದರು ಅಷ್ಟೇ. ಒಂದು ವೇಳೆ, ಸೋನಿಯಾ ಗಾಂಧಿಯವರಿಗೆ ನಿಜಕ್ಕೂ ಪಶ್ಚಾತ್ತಾಪವಾಗಿದ್ದರೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಅವರ ಮನಸ್ಸಿಗನಿಸಿದ್ದರೆ 2009ರಲ್ಲಿ ಜಗದೀಶ್ ಟೈಟ್ಲರ್‌ಗೆ ಹೇಗೆ ಸಿಬಿಐ ಕ್ಲೀನ್ ಚಿಟ್ ಕೊಟ್ಟಿತು? ಏಕಾಗಿ ಟೈಟ್ಲರ್ ಹಾಗೂ ಸಜ್ಜನ್ ಕುಮಾರ್ ವಿರುದ್ಧದ ಪ್ರಕರಣ ಹಿಂತೆಗೆದುಕೊಳ್ಳಲು ಮುಂದಾಯಿತು? ಇದುವರೆಗೂ ಸಿಖ್ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದವರಲ್ಲಿ ಎಷ್ಟು ಜನರಿಗೆ ಶಿಕ್ಷೆಯಾಗಿದೆ ಹೇಳಿ? ಒಬ್ಬ ಸಿಖ್ ಪ್ರಧಾನಿಯೇ ಇದ್ದರೂ ಏಕೆ ಸಿಖ್ಖರಿಗೆ ನ್ಯಾಯ ಕೊಡಿಸಲಾಗಿಲ್ಲ? ಪಿ. ಚಿದಂಬರಂ ಮೇಲೆ ಬೂಟನ್ನೆಸೆದ ಜರ್ನೈಲ್‌ಸಿಂಗನ “”I Accuse” ಪುಸ್ತಕವನ್ನೋದಿದ್ದೀರಾ? ಒಂದು ವೇಳೆ ಓದಿದ್ದರೆ ಸೋನಿಯಾ ಗಾಂಧಿಯವರು ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ ಎಂದು ಖಂಡಿತ ನೀವು ಹೇಳುತ್ತಿರಲಿಲ್ಲ. ಅದಿರಲಿ ಸೋನಿಯಾ ಗಾಂಧಿಯವರ ಪರ ವಕಾಲತ್ತು  ವಹಿಸುವ ಜರೂರತ್ತು ನಿಮಗೇನಿತ್ತು?

“ನಾನು ಯಾವ ರಾಜಕಾರಣಿಯಲ್ಲೂ ಮೋದಿಯಲ್ಲಿರುವಂಥ ಒರಟುತನವನ್ನು ಕಾಣಲಿಲ್ಲ” ಎಂದಿದ್ದೀರಿ! ಅನಂತಮೂರ್ತಿಯವರೇ, ಮೋದಿಯವರನ್ನು ನೀವು ಯಾವಾಗ ಭೇಟಿಯಾಗಿದ್ದಿರಿ? ಕೃಷಿ ಭೂಮಿ, ಬಂಗಲೆ ಕೇಳುವುದಕ್ಕಾಗಿ ಭೇಟಿಯಾದಾಗ ಮೋದಿ ಒಪ್ಪದೆ ಒರಟುತನ ತೋರಿದರೇ?! ಖಂಡಿತ ಒಬ್ಬರ ಒರಟುತನವನ್ನು ವೈಯಕ್ತಿಕ ಭೇಟಿ, ಅನುಭವದಿಂದಲೇ ಅರ್ಥಮಾಡಿಕೊಳ್ಳಬೇಕೆಂದೇನೂ ಇಲ್ಲ. ಮಾತು ಒರಟಾಗಿದ್ದರೂ ಮನಸ್ಸು ಮೃದುವಾಗಿರುವಂಥ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉದಾಹರಣೆ ಕಣ್ಣಮುಂದಿದೆ. ಆದರೆ ನಮ್ಮ ಅನಂತಮೂರ್ತಿಯವರಿಗೆ ಮೋದಿಯವರಲ್ಲಿ ಯಾವ ದೃಷ್ಟಿಯಲ್ಲಿ ಒರಟುತನ ಕಂಡಿತು? ಉತ್ತರ ಪ್ರದೇಶದ ರಾಜಕಾರಣಿ ಹಾಗೂ ಉರ್ದು ಪತ್ರಿಕೆ “ನಯೀ ದುನಿಯಾ”ದ ಶಾಹಿದ್ ಸಿದ್ಧಿಕಿಯವರಿಗೆ 2012ರಲ್ಲಿ ನೀಡಿದ ಸಂದರ್ಶನದಲ್ಲಿ “ಒಂದು ವೇಳೆ ಗುಜರಾತ್ ಹಿಂಸಾಚಾರದಲ್ಲಿ ನನ್ನ ಪಾತ್ರವಿದೆ ಎಂದು ಸಾಬೀತಾದರೆ ನನ್ನನ್ನು ಸಾರ್ವಜನಿಕವಾಗಿ ಗಲ್ಲಿಗೆ ಹಾಕಿ. ಅದರಿಂದ ಮುಂದಿನವರಿಗೂ ಒಂದು ಪಾಠವಾಗುತ್ತದೆ” ಎಂದು ಬಹಿರಂಗವಾಗಿ ಹೇಳಿರುವ ಮೋದಿಯವರಲ್ಲಿ ವಿನಮ್ರತೆ ಬದಲು ಒರಟುತನ ಮೂರ್ತಿಯವರಿಗೆ ಹೇಗೆ ಕಂಡಿತು? 1984ರ ಸಿಖ್ ಹತ್ಯಾಕಾಂಡದ ಬಗ್ಗೆ ಕೇಳಿದಾಗ ‘ಒಂದು ದೊಡ್ಡ ಮರ ಉರುಳಿದಾಗ ಭೂಮಿ ಅಲುಗುವುದು ಸಹಜ” ಎಂದು ಲಜ್ಜೆಯಿಲ್ಲದೆ ಸಮರ್ಥಿಸಿಕೊಂಡಿದ್ದ ರಾಜೀವ್ ಗಾಂಧಿಯವರಲ್ಲಿ ಕಾಣದ ಒರಟುತನ ಮೋದಿಯವರಲ್ಲಿ ಕಾಣುತ್ತಿದೆಯೇ? 1.86 ಲಕ್ಷ ಕೋಟಿ ರೂ. ಹಗರಣದ ಕಲ್ಲಿದ್ದಲು ಗುತ್ತಿಗೆಗೆ ಸಂಬಂಧಿಸಿದ ಫೈಲುಗಳೆಲ್ಲಿ ಎಂದರೆ, “I am not the custodian of files”  (ಕಡತಗಳನ್ನು ಕಾಪಿಡುವ ಕೆಲಸ ನನ್ನದಲ್ಲ), ಅರ್ಥವ್ಯವಸ್ಥೆಯೇಕೆ ಕುಸಿಯುತ್ತಿದೆಯೆಂದರೆ, “ದುಡ್ಡು ಗಿಡದಲ್ಲಿ ಬೆಳೆಯುವುದಿಲ್ಲ’’(Money does not grow on trees) ಎನ್ನುವ ಪ್ರಧಾನಿ, ಈರುಳ್ಳಿ ಬೆಲೆಯೇಕೆ ಗಗನಕ್ಕೇರಿದೆ ಎಂದರೆ ‘ಸರ್ಕಾರ ಈರುಳ್ಳಿ ಮಾರುವುದಿಲ್ಲ, ವ್ಯಾಪಾರಿಯನ್ನು ಕೇಳಿ’ ಎನ್ನುವ ಮಾನವ ಸಂಪನ್ಮೂಲ ಖಾತೆ ಸಚಿವ ಕಪಿಲ್ ಸಿಬಲ್‌ರಲ್ಲಿ ಕಾಣದ ಒರಟುತನ, ಅಹಂಕಾರ ನಿಮಗೆ ಮೋದಿಯಲ್ಲಿ ಕಾಣುತ್ತಿದೆ ಅಲ್ಲವೆ? ಅನಂತಮೂರ್ತಿಗಳೇ ಇಷ್ಟಕ್ಕೂ ಮೋದಿಯೇನು ನಿಮ್ಮನ್ನು ಕೇಂದ್ರೀಯ ವಿವಿ ಮುಖ್ಯಸ್ಥರನ್ನಾಗಿಯೂ ಮಾಡಿಲ್ಲ, ಮುಂದೆ “ಕರ್ನಾಟಕ ರತ್ನ”ವನ್ನೂ ನೀಡುವುದಿಲ್ಲ. ಅವುಗಳನ್ನು ಕೊಡುವುದೇನಿದ್ದರೂ ಕಾಂಗ್ರೆಸ್ಸೇ. ನೀವು ಹಿಡಿದಿರುವ ಮಾರ್ಗ ಸರಿಯಾಗಿಯೇ ಇದೆ ಬಿಡಿ. ಇನ್ನು, ವೈಯಕ್ತಿಕ ಮಾತುಗಳಲ್ಲಿ, ಕಾಡುಹರಟೆ ಸಂದರ್ಭದಲ್ಲಿ ಯಾರನ್ನೂ ಏಕವಚನದಿಂದ ಸಂಬೋಧಿಸುವುದು, ಕರೆಯುವುದು ಸಹಜ. ಆದರೆ ಮಾಧ್ಯಮಗಳು ಹಾಗೂ ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡುವಾಗಲೂ ಒಂದು ರಾಜ್ಯದ ಮುಖ್ಯಮಂತ್ರಿಯನ್ನು, ಒಂದು ರಾಷ್ಟ್ರೀಯ ಪಕ್ಷದ ಪ್ರಧಾನಿ ಅಭ್ಯರ್ಥಿಯನ್ನು ಏಕವಚನದಲ್ಲಿ ಕರೆಯುವುದು ಎಷ್ಟರಮಟ್ಟಿಗೆ ಸರಿ? ರಾಹುಲ್ ಗಾಂಧಿಯವರೂ ಕಾಂಗ್ರೆಸ್ ಪಕ್ಷದ ಅಘೋಷಿತ ಪ್ರಧಾನಿ ಅಭ್ಯರ್ಥಿಯೇ. ಅವರನ್ನು ವಿರೋಧಿಸುವವರೆಲ್ಲ ಪತ್ರಿಕೆಗಳಲ್ಲಿ ಅವನು, ಇವನು ಎಂದು ಸಂಭೋದಿಸಿದರೆ ಸರಿ ಎನಿಸುತ್ತದೆಯೇ? ಹಾಗಿದ್ದರೂ ಅನಂತಮೂರ್ತಿಯವರು, ಮೋದಿಯವರನ್ನು ಅವನು, ಇವನು ಎಂದು ಸಂಭೋದಿಸಿರುವುದು ಏನನ್ನು ಸೂಚಿಸುತ್ತದೆ?

ಕಡೆಯದಾಗಿ, ನಿಮಗೊಂದು ಪ್ರಶ್ನೆ: ಕರ್ನಾಟಕ ಕೋಮುವಾದಿಗಳ ನೆಲೆಯಾಗುತ್ತಿದೆ ಎಂದು ಕಳೆದ ಹತ್ತಾರು ವರ್ಷಗಳಿಂದ ಹೇಳುತ್ತಲೇ ಬಂದಿದ್ದೀರಿ, ಬಿಜೆಪಿ ಅಧಿಕಾರದಲ್ಲಿದ್ದ 5 ವರ್ಷಗಳಲ್ಲಂತೂ ಇನ್ನೂ ಜೋರಾಗಿ ಬೊಬ್ಬೆ ಹಾಕಿದಿರಿ. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ನಿಯಂತ್ರಣದಲ್ಲೇ ಇರುವ ಎನ್‌ಐಎ “ಮಂಗಳೂರು ಭಯೋತ್ಪಾದಕರ ತಾಣವಾಗುತ್ತಿದೆ” ಎಂದಿದೆ. ಯಾಸೀನ್ ಭಟ್ಕಳ ಬಂಧನದ ನಂತರ ತನಿಖೆಗಾಗಿ ಮಂಗಳೂರಿಗೂ ಬಂದಿತ್ತು. ನಮ್ಮ ಕರಾವಳಿಯು ದೇಶದ್ರೋಹಿಗಳ, ಭಯೋತ್ಪಾದಕರ ನೆಲೆಯಾಗುತ್ತಿದೆ ಎಂದೇಕೆ ನೀವು ಹೇಳುತ್ತಿಲ್ಲ?

ನಿಮ್ಮ ಪ್ರತಿ ವಾಕ್ಯದಲ್ಲೂ ಇರುವ ಅಪದ್ಧ, ಅಸಹಿಷ್ಣತೆಯನ್ನು, ಅವಹೇಳನಕಾರಿ ಧ್ವನಿಯನ್ನು ಎತ್ತಿತೋರಬಹುದು. ಸಾಧ್ಯವಾದರೆ ಸಹವರ್ತಿಗಳ ಮೂಲಕ ಸುಳ್ಳುಗಳನ್ನು ಸಾರುವ ಬದಲು ಅಭಿಪ್ರಾಯಭೇದವಿರುವವರ ಜತೆ ಸಾರ್ವಜನಿಕ ಚರ್ಚೆಗೆ ಬನ್ನಿ. ರಾಜ್ಯದ ಜನತೆಗೆ ಸತ್ಯವೇನೆಂದು ಗೊತ್ತಾಗಲಿ. ಅದಕ್ಕೆ ನೀವು ಸಿದ್ಧರಿದ್ದೀರಾ?

87 Responses to “ಮೂರ್ತಿಯವರೇ, ನಿಮಗೇಕೆ ಈ ಅಪದ್ಧ ನುಡಿವ ಅನಿವಾರ್ಯ?”

  1. Ajay Rajput says:

    ಅನಂತಮೂರ್ತಿ ನಿಜವಾಗಿಯೂ ಸ್ವಾಭಿಮಾನಿ .
    ಖಂಡಿತವಾಗಿಯೂ ನುಡಿದಂತೆ ಮಾಡುವ ಛಲಗಾರ .
    ನನಗಂತೂ ಅವರು ದೇಶ ಬಿಟ್ಟು ಹೋಗೇ ಹೋಗ್ತಾರೆ ಅನ್ನೋ ನಂಬಿಕೆ ಇದೆ .
    ಎಲ್ಲಾ ದೇಶದ್ರೋಹಿಗಳೂ ಅನಂತಮೂತಿ೯ಯವರಂತೆ ದೇಶ ಬಿಟ್ಟು ಹೋಗಲಿ ದೇವರೇ . .ನಮೋ ಪವರ್ ಅಂದ್ರೆ ಹೀಗೇನೆ .

  2. Dr.Tanmay says:

    Wonderful reply to the fake writer. People like ananth murthy are really a burden for this country. No wonder he has won so many awards by pleasing the central govt and appeasing the minorities…

  3. vijay says:

    Everybody have their own way of justification..but wat mr.ura statement was crossing the limit..no doubt he is a marvellous literrateur but he should not have a notion dat people will agree to whatever he essays…respect the country if not humans….

  4. Bheemsain Tekkalaki says:

    I always admire you Pratap Simha Sir. As expected, a wonderful article. Keep spreading truth, awareness and patriotism.
    Regards
    Bheemsain

  5. Prakash says:

    Thu ugiri anath moorthige, ucha nanmaga, tale kettogirodakke e tara uchu statement kodtane….

  6. Deepak says:

    Excellent article..!! Unfortunately URA won’t understand it, because after all he is behind something else 😉

  7. naveen says:

    i hate him……..

  8. Sunil Shivarudraswamy says:

    Superb !!!!!! article…

  9. prajwal says:

    tumba kharavaada haagu aadhaaravulla pratikriye kotiddira…tumba chennagide

  10. Vinayaka BC says:

    well said.. Educated ppl like URA are highly Serving the nation..!! We have Salute with sandals to URA ..!!

  11. raghu says:

    prathap r u b j p agent ?

  12. Gajanan says:

    He should come to public discussion..

  13. magendran says:

    what a beautiful, circastic, teasing write-up..!
    most talented.

  14. Rakesh B Jain says:

    Jaisa aapne kaha swa saahiti, bro superb article, god speed

  15. santhosh says:

    Hi sir I am big fan of u
    I read all of ur articals in newspapers
    Our country is not an multi religious country
    Un digestive fact is muslim and Christian prioritized country
    this blody politicians because of vote they are rouing Hindus
    Only peple like u can stop this we support u pls go ahead wit ur articals

  16. Manjunath says:

    Mr.Pratap Simha, Hats off to you,,, Very Good and accurate analization of the perspective of URA speech and comments on Mr.Modi,,, URA needs mental examination of his mental health and need to rectify it as soon ass possible. If he cannot afford the treatment cost we all the group of light minded persons can afford his treatment cost. If he continues with the same attitude towards the person whom we respect staying out of politics, he will be considered not as sahithi, instead he will be considered as an paid agent of a some non BJP party who is incharge to create this kind of bulshit,,, Keep it up for a dare and accurate critic with regard to his speech and perspective towards Mr.Modi of being declared as BJP PM Candidate,,, Mr.URA KEEP HOLD ON YOUR TOUNGE, OTHERWISE THERE WILL BE NO MUCH DIFFERENCE BETWEEN YOU MENTALLY ILL HEALTH PSYCHO….

  17. Bheema says:

    Well said Pratap. Definitely he is waiting for Bharata Ratna award from congress. Because Cong only knows how to make use of frauds like Anantha Moorti (Anaksharasta Muttala)

  18. Ashwath says:

    No Word…!!! Hats Off…!!!

  19. praveen says:

    URA avruna karnataka pradesha congress prachara samithige adyaksharu agidare . aduke e rethi maduthiruvaru

  20. manoj kumar says:

    nimma kelavondu tv shows nodidini hagu kelavondu articles kooda odidini , nanage nimma baravanigeyalli bias kanisthide neevu sikka avakashavanella congress nalliro thappu , avru madiro ketta kelsada bagge hagu indira gandi family bagge bareyoke upyogisiddira adralli nan yava thappanu hudukodilla adre obba barahagarana baravanige thumba prabhavashaliyagiruthe adralli swantha niluvugalirabaradu antha andkondidhini , congress virudha ishtu helo nimge kaleda 5 varshadalli BJP madida thappu yavdu kanisllilve …………..? hagenadru kanisidre avra bagge barediddira…….? , baredide aadalli dayavittu url nange kalisi illavadalli yake baredilla vendu kalisi ….

  21. AMR says:

    ANATH MURTY BUY TICKETS TO GO TO SONIA HOUSE IN ITALY

  22. shobha . patil. says:

    murty avarige MLC mele kannu adakke hige haradutiddare.

  23. Sachin Joshi says:

    Awesome!!!!..although people like me without much knowledge of history can straightaway condemn the so called ” Intellectual” Mr. Murthy’s insanity , thank you for writing up details with historical evidences to prove Murthy has gone beyond recovery!!..Mr.Murthy please do remember people who have the education to read and understand your literature , also have the capability to decide who is what.No matter how much the educated adult-erators like you try to delude us we still know what we want!!!

  24. Manoj says:

    Pratap sir… Ur right… If he honestly blaming NAMO..let him to come to discuss the issue in public…or else it will be like barking A STRAY DOG….for while people may bother it later on they will disregard him and he will loose respect himself…

  25. Basavaraj says:

    ananth murthy obba con. pracharakana thara matadta idane avanige cong. serkollke heli avanobba BUDDI jivee alla DADDA jivi agiddane avana matige yaru tale kedasikollodilla ( ekavachanadalli matadidakke kshame irali )

  26. Dinesh says:

    supr artical.. ThnQ pratap sir

  27. ravi bannadi says:

    sir, neevu yaavude reethiyalli ugidaru ee kaadu manushyanige arthavaagodilla, yaakendare idu congress uppu thinda jeeva, congress runa ee manushyana mele ide. Modi vyakthithva ee pranige thililikke ee janmadalli saadhyvilla.

    Modi ge Modi ye saati, esto kunnigalu bogalidare devaloka haalaguvudilla, haage ee nindane maaduvavaru handige sama antha daasa sresta purandara daasaru heliddare. ee handigalu kolaku thindastu Modi parishudda raaguthare.

    ee ananthamurthiyannu care maaadade irode olledu, ee manushyanige thiraskarave maddu. akanda balista desha nirmanakke eegagale obba Sri Krishna (Modi) huttiddane. avarannu naavellaru ottagi gellisi, Rastra nayakanagalu Shramisona. Jai Hind, Jai Modi.

  28. vidya says:

    supurb article sir

  29. Maruti Jadhav says:

    Very nice sir

  30. ravi bannadi says:

    obba saamanya manushya kuda balasada bhasheyannu ee ananth murthy Modi bagge maadiddare. Ekavachanadalli Prajegalinda aarisi banda ondu rajyada mukhya mantriyannu ‘avanu’ ‘ivanu’ anta sambhodisiddare. idu jnana peeta padeda vyktige bhushanave? teeke tippani saiddanthika vaagirabeku, vykthigatha vaagirabaradu. 2001rinda illiyavarege onde ondu komu galabe gujarathnalli nadedilla, aadaru avrannu Komu vaadi anta sambhodisuthare. idu duradrasta.

  31. Kiran Kumar says:

    very true sir……….

    Ananthamurthy avrige maana, maryadi, baddhate iddare charchege barli….

    Chatakkagi statement kodtaro athva congress na agent aagi mataadtaro confuse aagthide..

  32. Guru says:

    ಸಾಧ್ಯವಾದರೆ ಸಹವರ್ತಿಗಳ ಮೂಲಕ ಸುಳ್ಳುಗಳನ್ನು ಸಾರುವ ಬದಲು ಅಭಿಪ್ರಾಯಭೇದವಿರುವವರ ಜತೆ ಸಾರ್ವಜನಿಕ ಚರ್ಚೆಗೆ ಬನ್ನಿ

    Good….

  33. AMIT says:

    ಅಂದು ಒವೈಸಿ ಬಾಯಿಗೆ ಬಂದಂತೆ ಭಾಷಣ ಮಾಡುತ್ತಿದ್ದಾಗ ಶಾಂತ ಮೂರ್ತಿಗಳಾದ ನಮ್ಮ ಅನಂತ ಮೂರ್ತಿಯವರು ಇಂದೇಕೆ ಮಾತನಾಡುತಿದ್ದಾರೆ? ಇದು ಇವರ ಏಕ ಪಕ್ಷೀಯ ಧೋರಣೆಯಲ್ಲವೇ? ಕೇವಲ ಭಾಜಪ ಮತ್ತು ಮೋದಿ ವಿರುದ್ಧ ಮಾತನಾಡಲು ಏಕೆ ಬಾಯಿ ತೆರೆಯುತ್ತಾರೆ? ಈಗಿರುವ ಮೋದಿ ಪರವಾಗಿರುವ ನ್ಯಾಯ ತೀರ್ಪನ್ನು ಗೌರವಿಸುವದನ್ನು ಕಲಿಯಲಿ ಇಲ್ಲವೇ ಇವರಿಗೆ ಮೋದಿ ಮಾಡಿದ್ದು ತಪ್ಪು ಎನಿಸಿದರೆ ಮತ್ತೊಮ್ಮೆ ನ್ಯಾಯಾಲಯದ ಕದ ತಟ್ಟಲಿ.

    ಮೂರ್ತಿಯವರೇ, ನಿಮ್ಮ ಸಾಹಿತ್ಯ ಕೃಷಿಯೆಷ್ಟಿದೆ ಎಂದು ನಿಮ್ಮ ವಿಕಿಪೀಡಿಯ ಪುಟ ತೆರೆದು ನೋಡಿದರೆ ನನಗೆ ಆಶ್ಚರ್ಯವಾಯಿತು ಕೇವಲ ಬೇರೆಣಿಕೆಯಷ್ಟು ಕೃತಿ ರಚಿಸಿ ನೀವು ಹೇಗೆ ಇಷ್ಟು ಮಲೆರಿದರೆಂದು ತಿಳಿಯಲಿಲ್ಲ, ಭೈರಪ್ಪನವರನ್ನು ವಿರೋಧಿಸುವ ನೀವು ಅವರ ಕೃತಿಗಳ ಸಂಖ್ಯೆಯ ಅರ್ಧ ಭಾಗದಷ್ಟು ಕೆಲಸವನ್ನು ಕೂಡ ಮಾಡಿಲ್ಲ ಎಂದು ನನಗೆ ಅನಿಸುತ್ತದೆ. ಬೇಂದ್ರೆ, ಕಾರಂತ, ಕುವೆಂಪು ಅವರಂತಹ ಮಹಾನ್ ಸಾಹಿತಿಗಳನ್ನು ಕಂಡ ಕನ್ನಡಿಗರಿಗೆ ನಿಮ್ಮ ಹೇಳಿಕೆಗಳು, ಭಾಷಣಗಳು ನಾಚಿಕೆ ಪಡುವಂತೆ ಮಾಡಿವೆ. ಆ ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ ಅದಕ್ಕೆ ಅವರಿಗೆ ಜ್ಞಾನಪೀಠ ಪುರಸ್ಕೃತರು ಎನ್ನುವರು. ಆದರೆ ನಿಮಗೆ ನಾನು ಹಾಗೆ ಹೇಳಲಾರೆ, ನೀವು ಜ್ಞಾನಪೀಠ ಪ್ರಶಸ್ತಿ ವಿಜೇತರು. (ಗೆಳೆಯರೇ ಪುರಸ್ಕೃತ ಮತ್ತು ವಿಜೇತ ಪದಗಳ ಸರಿಯಾದ ಬಳಕೆಯನ್ನು ಅರ್ಥಮಾಡಿಕೊಳ್ಳಿ.) ನಿಮ್ಮ ಇಂತ ನಡುವಳಿಕೆಯಿಂದ ಆ ಪ್ರಶಸ್ತಿಯ ಗೌರವ ಕಳೆಯುತ್ತಿದ್ದೀರಿ.

    ಯಾರೇ ಆಗಲಿ ಒಂದು ಪ್ರಶಸ್ತಿಯನ್ನು ಸ್ವೀಕರಿಸಿದಾಗ ಹೇಳುತ್ತಾರೆ, ಈ ಸನ್ಮಾನದಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ ಎಂದು. ಅದೇ ರೀತಿ ಅವರು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆ, ಆದರೆ ನೀವು ಅದಕ್ಕೆ ತದ್ವಿರುದ್ಧ. ನೀವು ಯಾವಾಗ ನಮ್ಮ ನಾಡು ದೇಶವನ್ನು ಬಿಟ್ಟು ತೊಲಗುತ್ತೀರಿ ಎಂದು ತುಂಬಾ ಜನ ಕಾಯುತ್ತಾ ಕುಳಿತಿದ್ದಾರೆ. ನೀವು ನಿರ್ಗಮಿಸಿದ ದಿನ ಎಲ್ಲರೂ ಸಂತೋಷದಿಂದ ಸಂಭ್ರಮಿಸುವರು.

    ಆ ದೇವರು ನಿಮಗೆ ಸ್ವಲ್ಪ ವಿವೇಕ ಕರುಣಿಸಲಿ ಎಂದು ಪ್ರಾರ್ಥಿಸುವೆ. Get well soon. ನಿಮಗೆ ಒಳ್ಳೆಯದಾಗಲಿ.

  34. NAGARAJ SINDAGERI says:

    well done pratap, very nice article, thiis sickular ananthmurthy is doing all this drama to show he is congress supporter and he will be rewarded from congress with prize, money and positions..

  35. B.Viseanath says:

    V.good article…

  36. gorli harish says:

    ಕೇಳೆನ್ನ ಮೊರೆ.
    ————-.
    ಕೈಬರ್ ಕಣಿವೆಯಲಿ, ಬೋಲಾನ್ ಬೊಗಸೆಯಲಿ,
    ಹಿ೦ದೂಗಳ ತುಳಿ ತುಳಿದು ಕೊ೦ದಿರುವ
    ಕಾಲ ಚಕ್ರ ತಣಿಸಿಲ್ಲವೇ ನಿನ್ನ ತ್ರುಷೆ,
    ಭಾರತ ಭಾಗ್ಯ ವಿಧಾತಾ, ಕೇಳೆನ್ನ ಮೊರೆ!
    ಧರ್ಮ ಭೂಮಿಯಾ ನಾಮದಾ ನೆಪ,
    ನಡೆ-ನುಡಿ ಸ್ವಾರ್ಥದಾ ಜಪ.
    ತುರುಕರಾ ಕಾಲ್ನೆಕ್ಕಿ, ಬಿಳಿಯರಾ ತಿಕ ತೊಳೆದು,
    ಸಹಸ್ರ ವರ್ಷ್ ಸಹಿಸಿ ಹಿಗ್ಗುವಾ ಶಿಖ೦ಡಿಗಳ
    ಭಾರತ ಭಾಗ್ಯ ವಿಧಾತಾ, ಕೇಳುವೆಯಾ ಮೊರೆ?
    ಕಾದು, ಕಾದು ಸಾಕಾಗಿದೆ, ನೋಡಿ ಕಣ್ಣು ಹುಣ್ಣಾಗಿದೆ,
    ನುಡಿದು, ನುಡಿದು, ಬಾಯಿ ಬೊಚ್ಚಾಗಿದೆ,
    ಯುಗ ಪುರುಷನಾ ಕನಸು ನನಸಾಗದೇ!
    “ನಮೋ” ಭಾರತ ಭಾಗ್ಯ ವಿಧಾತ, ಕೇಳೆನ್ನ ಮೊರೆ.

  37. Keshav says:

    Good Pratap, Keep it up.

    ಕಳೆದೊಂದು ದಶಕದಲ್ಲಿ ಒಂದೆ ಒಂದೂ ಕೋಮು ದಂಗೆ ನಡೆಯದಂತೆ ಸೌಹಾರ್ದಯುತ ಆಡಳಿತ ನಡೆಸಿದ ಮೋದಿಯವರು ಕೋಮುವಾದಿಯಾಗುತ್ತಾರೆ ಇವರಿಗೆ. ಅದೇ ಉತ್ತರ ಪ್ರದೇಶದಲ್ಲಿ ೧ ವರ್ಷದಲ್ಲಿ ಸುಮಾರು ೧೦೦ ಕ್ಕೂ ಅಧಿಕ ಕೋಮು ದಂಗೆಗಳು ನಡೆದು ಸಾವಿರಾರು ಅಮಾಯಕರು ಪ್ರಾಣಿಗಳಂತೆ ರಸ್ತೆಯಲ್ಲಿ ಸತ್ತು ಬೀಳುತ್ತಾರೆ. ಅಂಥ ಅಖಿಲೇಶ್ ಅವರು ಇವರಿಗೆ ಜ್ಯಾತ್ಯಾತೀತರಾಗುತ್ತಾರೆ. ಇದೆಲ್ಲ ಬರಿ ಬೂಟಾಟಿಕೆ. ಹಣ ತಿಂದು ಸುದ್ದಿಯನ್ನು ಕೋಮಿನ ಕನ್ನಡಕದಲ್ಲಿ ಪ್ರಸ್ತುತ ಪಡಿಸುವ ದಲ್ಲಾಳಿ ಸುದ್ದಿ ವಾಹಿಸಿಗಳಿಗೂ, ಲಾಬಿ ನಡೆಸಿ ಪ್ರಶಸ್ತಿಯನ್ನು ಪಡೆದುಕೊಂಡು ತಮ್ಮ ಪಾಂಡಿತ್ಯದ(!?) ಪಾರಮ್ಯವನ್ನು ಮೆರೆಯುವ ಇಂಥ ಸೊಗಲಾಡಿಗಳಿಗೂ ಏನು ವ್ಯತ್ಯಾಸ?? ಒಂದು ಸಲ ಇವರ ಬ್ಯಾಂಕಿನ ಖಾತೆಯನ್ನು ಮುಟ್ಟೊಗೊಲು ಹಾಕಿಕೊಳ್ಳಲಿ ಮತ್ತು ತನಿಖೆ ನಡೆಸಲಿ ಆಗ ನಿಜವಾದ ಬಣ್ಣ ಬಯಲಾಗುವುದು. ಕೆಲವು ಪಟ್ಟ ಭಧ್ರ ಶಕ್ತಿಗಳು ದುಡ್ಡು ಕೊಟ್ಟು ಇವರಿಂದ ಬೇಕಾದರೀತಿಯಲ್ಲಿ ಬರೆಸುತ್ತವೆ ಹೇಳಿಕೆ ನಿಡಿಸುತ್ತವೆ. ಆದರೆ ತನ್ನ ಹೊಟ್ಟೆಪಾಡಿಗಾಗಿ ತನ್ನ ಆತ್ಮ ವಂಚನೆ ಮಾಡಿಕೊಂಡು ಬದುಕುವ ಇಂಥ ಲದ್ದಿ ಜೀವಿಗಳ ಭಂಢತನಕ್ಕೆ ನನ್ನ ಧಿಕ್ಕಾರವಿರಲಿ !! ಜೈ ಭಾರತಮಾತೆ ಜೈ ಮೋದಿ !!
    ಭೈರಪ್ಪನವರನ್ನು ವಿರೋಧಿಸುವ ನೀವು ಅವರ ಕೃತಿಗಳ ಸಂಖ್ಯೆಯ ಅರ್ಧ ಭಾಗದಷ್ಟು ಕೆಲಸವನ್ನು ಕೂಡ ಮಾಡಿಲ್ಲ ಎಂದು ನನಗೆ ಅನಿಸುತ್ತದೆ. ಬೇಂದ್ರೆ, ಕಾರಂತ, ಕುವೆಂಪು ಅವರಂತಹ ಮಹಾನ್ ಸಾಹಿತಿಗಳನ್ನು ಕಂಡ ಕನ್ನಡಿಗರಿಗೆ ನಿಮ್ಮ ಹೇಳಿಕೆಗಳು, ಭಾಷಣಗಳು ನಾಚಿಕೆ ಪಡುವಂತೆ ಮಾಡಿವೆ. ಆ ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ ಅದಕ್ಕೆ ಅವರಿಗೆ ಜ್ಞಾನಪೀಠ ಪುರಸ್ಕೃತರು ಎನ್ನುವರು. ಆದರೆ ನಿಮಗೆ ನಾನು ಹಾಗೆ ಹೇಳಲಾರೆ, ನೀವು ಜ್ಞಾನಪೀಠ ಪ್ರಶಸ್ತಿ ವಿಜೇತರು. (ಪುರಸ್ಕೃತ ಮತ್ತು ವಿಜೇತ ಪದಗಳ ಸರಿಯಾದ ಬಳಕೆಯನ್ನು ಅರ್ಥಮಾಡಿಕೊಳ್ಳಿ.) ನಿಮ್ಮ ಇಂತ ನಡುವಳಿಕೆಯಿಂದ ಆ ಪ್ರಶಸ್ತಿಯ ಗೌರವ ಕಳೆಯುತ್ತಿದ್ದೀರಿ. ಯಾರೇ ಆಗಲಿ ಒಂದು ಪ್ರಶಸ್ತಿಯನ್ನು ಸ್ವೀಕರಿಸಿದಾಗ ಹೇಳುತ್ತಾರೆ, ಈ ಸನ್ಮಾನದಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ ಎಂದು. ಅದೇ ರೀತಿ ಅವರು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆ, ಆದರೆ ನೀವು ಅದಕ್ಕೆ ತದ್ವಿರುದ್ಧ. ನೀವು ಯಾವಾಗ ನಮ್ಮ ನಾಡು ದೇಶವನ್ನು ಬಿಟ್ಟು ತೊಲಗುತ್ತೀರಿ ಎಂದು ತುಂಬಾ ಜನ ಕಾಯುತ್ತಾ ಕುಳಿತಿದ್ದಾರೆ. ನೀವು ನಿರ್ಗಮಿಸಿದ ದಿನ ಎಲ್ಲರೂ ಸಂತೋಷದಿಂದ ಸಂಭ್ರಮಿಸುವರು. ಆ ದೇವರು ನಿಮಗೆ ಸ್ವಲ್ಪ ವಿವೇಕ ಕರುಣಿಸಲಿ ಎಂದು ಪ್ರಾರ್ಥಿಸುವೆ. ನಿಮಗೆ ಒಳ್ಳೆಯದಾಗಲಿ.”
    ಅತ್ಯಂತ ಸಂತೋಷದ ವಿಷಯ……. ಮೋದಿಯವರು ಪ್ರಧಾನಿಯಾಗೋದು.
    ಅದಕ್ಕಿಂತ ಸಂತೋಷದ ವಿಷಯ….. ಅನಂತಮೂರ್ತಿ ದೇಶ ಬಿಡೋದು.
    ಒಂದು ಭಾರತೀಯರ ಪುಣ್ಯ……….. ಇನ್ನೊಂದು ಕನ್ನಡಿಗರ ಪುಣ್ಯ.

  38. Vijeth says:

    superb……. he(ananth moorthy) has no dignity…he has totally lost his mind…let him go to foreign, Modi will be the PM of India next year.

  39. samanth shetty says:

    good artical pratap sir

  40. mahi says:

    wah! yen punch ri super sir

  41. suhas says:

    is ananthmurthy a party worker of congress……….

  42. MJ Nayak says:

    Hats off u man !! Bravest writer on Earth!!

  43. Ramesh Chandra says:

    Please forgive ura murthy. Old man has lost balance. Even bangalore street dogs do not dare to in the same road as he.

  44. Vasudev CM says:

    I have heard to Modiji’s speech, he says he is not bothered about what media says but he has been doing good to the society hence people have selected him for the second time. But I think media is taking he name and patience beyond the limit even after getting a clean chit from the supreme court. Why don’t some one file a case against the media and the people are unnecessarily blaming Modiji even after supreme court accepted and given the verdict that Modiji has got nothing to do with 2002 issue in Gujarath. Some responsible public procedures please take it ahead. I don’t know much about Law.

    Regards,
    Vasudev

  45. vivek aditya k says:

    good article … much factual it could have helped me if i take these facts to the class.. anyways much informative. POSITIVE JOURNALISM in a era of overriding people with biased nature.
    thank you

  46. vivek aditya k says:

    it is a good article with regard to good journalism. its factual and informative in a era of overriding biased way of judging.
    thank you

  47. vivek aditya k says:

    so called intellectuals and rational thinkers just taking a mileage out of MODI’s popularity.

  48. Darshan Patel YG says:

    Sir , really a grt article..hope ananthmurthy read dis and plz inform us also if he is ready for open debate..!

  49. Raj says:

    PratapSimha avare,

    I like your article and argument on Anantmurty’s statement and his corrected statement. I had the question in mind who was forcing this man to live in this country. If he does not feel like living if NaMo becomes PM, he is welcome to leave the country.

    I personally feel, its a waste of time talking about Anantmurthy, I don’t really know what is his contribution to literacy in Karnataka. He is always known for creating controversy just for the sake of cheap publicity. He visibly looks, he is so desperate in seeking attention from people.

    You are doing a great job as a young writer, you can inspire lot of youngsters, I suggest, do not waste your time and energy in this old man’s statements.

    Regards,
    Raj

  50. Madhusudhan says:

    I saw a video in Youtube in which Narendramodi was saying “Ham kyo america ke visa ke liye line me Khadenge, me america walonko India ke visa ke liye line me Kadthe huye dekna chahtha hu” which politician in India ever said these kind of words than Upendra said it in “Super” movie if we are really a sensitive voters, if we want our country to be developed we have to vote NaMo. one day while i was watching a news channel showing a news of an accident happened in America do they really do not have any news? are they work less news less ? and as per above article Mr. Anantha Murthy Manenalli Hako anna thindkonku muleli biddiri Hagga katti bettana eleyo prayathna madabedi nimma dehakke olledalla.