Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಮೂರ್ತಿಯವರೇ, ನಿಮಗೇಕೆ ಈ ಅಪದ್ಧ ನುಡಿವ ಅನಿವಾರ್ಯ?

ಮೂರ್ತಿಯವರೇ, ನಿಮಗೇಕೆ ಈ ಅಪದ್ಧ ನುಡಿವ ಅನಿವಾರ್ಯ?

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು 2014ರ ಲೋಕಸಭೆ ಚುನಾವಣೆಯ ಪ್ರಚಾರಾಂದೋಲನ ಸಮಿತಿಯ ಮುಖ್ಯಸ್ಥರನ್ನಾಗಿ ಬಿಜೆಪಿ ನೇಮಕ ಮಾಡಿದ್ದು ಗೋವಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಹಾಗೂ ಜೂನ್ 9ರಂದು. ಇಂಥದ್ದೊಂದು ಮಹತ್ವದ ತೀರ್ಮಾನದ ನಂತರ ಸುದ್ದಿಸಂಸ್ಥೆ ರಾಯಿಟರ್ಸ್‌ನ ವರದಿಗಾರರಾದ ರಾಸ್ ಗಾಲ್ವಿನ್ ಹಾಗೂ ಶೃತಿ ಗೊಟ್ಟಿಪಟಿ ನರೇಂದ್ರ ಮೋದಿಯವರ ಸಂದರ್ಶನಕ್ಕೆ ಕಾಲಾವಕಾಶ ಕೇಳಿದರು. ಕಳೆದ ಜುಲೈ 12ರಂದು ಸಂದರ್ಶನವನ್ನೂ ನಡೆಸಿದರು. ಅವರ ಸಹಜವಾಗಿಯೇ 2002ರ ಗುಜರಾತ್ ಹಿಂಸಾಚಾರವನ್ನು ಪ್ರಸ್ತಾಪಿಸಿದರು.

-ಪ್ರಶ್ನೆ: 2002ರಲ್ಲಿ ನಡೆದ ಘಟನೆ ಬಗ್ಗೆ ನೀವು ಪಶ್ಚಾತ್ತಾಪ ಹೊಂದಿದ್ದೀರಾ?

ಮೋದಿ: ನೋಡಿ, ಭಾರತ ಸರ್ವೋಚ್ಚ ನ್ಯಾಯಾಲಯವನ್ನು ಇಂದು ವಿಶ್ವದ ಅತ್ಯಂತ ಯೋಗ್ಯ ನ್ಯಾಯಾಲಯಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ಅಂಥ ಸುಪ್ರೀಂಕೋರ್ಟ್ ಒಂದು ವಿಶೇಷ ತನಿಖಾ ತಂಡವನ್ನು (SIT) ನೇಮಕ ಮಾಡಿತ್ತು. ಅದರಲ್ಲಿ ಅತ್ಯಂತ ಪ್ರತಿಭಾನ್ವಿತ ಅಧಿಕಾರಿಗಳಿದ್ದರು. ಅದರ ವರದಿ ಬಂದಿದೆ ಹಾಗೂ ನನಗೆ ಕ್ಲೀನ್ ಚಿಟ್ (ನಿರ್ದೋಷಿ) ಕೊಡಲಾಗಿದೆ. ಮತ್ತೊಂದು ವಿಚಾರ: ನಾವೊಂದು ಕಾರಿನಲ್ಲಿ ತೆರಳುತ್ತಿದ್ದೇವೆಂದರೆ, ನಾವೇ ಕಾರನ್ನು ಚಲಾಯಿಸುತ್ತಿರಬಹುದು ಇಲ್ಲವೆ ಬೇರೊಬ್ಬರು ಕಾರು ಚಲಾಯಿಸುತ್ತಿರಬಹುದು ಹಾಗೂ ನಾವು ಹಿಂದೆ ಕುಳಿತಿರಬಹುದು. ಒಂದು ನಾಯಿಮರಿ ಕಾರಿನ ಚಕ್ರಕ್ಕೆ ಸಿಕ್ಕಿದರೂ ನಮ್ಮ ಮನಸ್ಸಿಗೆ ನೋವಾಗುತ್ತದೋ ಇಲ್ಲವೋ ನೀವೇ ಹೇಳಿ? ಖಂಡಿತ ನೋವಾಗುತ್ತದೆ. ನಾನು ಮುಖ್ಯಮಂತ್ರಿ ಅಲ್ಲವೋ ಹೌದೋ, ನಾನೊಬ್ಬ ಮನುಷ್ಯ. ಜಗತ್ತಿನಲ್ಲಿ ಎಲ್ಲೇ ಏನೇ ಕೆಟ್ಟದ್ದು ಸಂಭವಿಸಿದರೂ ಸ್ವಾಭಾವಿಕವಾಗಿಯೇ ದುಃಖವಾಗುತ್ತದೆ.

ಈ ಉತ್ತರದಲ್ಲಿ ಏನು ತಪ್ಪಿದೆ ಹೇಳಿ? ಮೋದಿ ಮುಸ್ಲಿಮರನ್ನು ಎಲ್ಲಿ ನಾಯಿಮರಿಗೆ ಹೋಲಿಸಿದ್ದಾರೆ ದಯವಿಟ್ಟು ವಿವರಿಸಿ? ಆದರೂ ಮಾಧ್ಯಮಗಳು ದೊಡ್ಡ ಬೊಬ್ಬೆ ಹಾಕಿದವು, ಚೀರಾಡಿದವು, ಮೋದಿಯವರನ್ನು ಅಹಂಕಾರಿ, ತಪ್ಪಿತಸ್ಥರು ಎಂದು ತೀರ್ಪುಕೊಟ್ಟವು. ಒಂದು ಕಾಲದಲ್ಲಿ ಮೋದಿಯವರನ್ನು ಗುಜರಾತ್ ಗಲಭೆ ಸಂಬಂಧ ಅಂತಾರಾಷ್ಟ್ರೀಯ ನ್ಯಾಯಾಲಯದೆದುರು ತಂದು ನಿಲ್ಲಿಸಲು ಜಾಗತಿಕ ಮಟ್ಟದಲ್ಲಿ ಹೋರಾಟಿಕ್ಕಿಳಿದಿದ್ದ ಗುಜರಾತಿ ಮುಸ್ಲಿಂ ಝಫರ್ ಸರೇಶ್‌ವಾಲಾ ‘ನಾಯಿಮರಿ’ ಟಿಪ್ಪಣಿ ಬಗ್ಗೆ ವಿವರಣೆ ನೀಡುವಂತೆ ಖುದ್ದಾಗಿ ಮೋದಿಯವರನ್ನು ಕೇಳಿದಾಗ “ಒಂದು ಇರುವೆಯನ್ನು ಕೊಂದರೂ ನೋವಾಗುತ್ತದೆ ಎಂಬ ಉದಾಹರಣೆ ಮೂಲಕ ನನ್ನ ಮನಸ್ಸಿಗಾದ ನೋವನ್ನು ವ್ಯಕ್ತಪಡಿಸಬೇಕೆಂದಿದ್ದೆ, ಕಾರಿನ ಉದಾಹರಣೆ ತೆಗೆದುಕೊಂಡಿದ್ದರಿಂದ ನಾಯಿಮರಿ ಎಂದೆ” ಎಂದರು. ಜಫರ್ ಸರೇಶ್‌ವಾಲಾಗೆ ಕೂಡ ಅವರ ಮನವರಿಕೆಯಾಯಿತು. ತಮ್ಮ ಟಿಆರ್‌ಪಿ ದಾಹವನ್ನು ತಣಿಸಿಕೊಂಡ ನಂತರ ಮಾಧ್ಯಮಗಳೂ ತಣ್ಣಗಾದವು.

ಆದರೆ ನಮ್ಮ ಜ್ಞಾನಪೀಠ ‘ವಿಜೇತ’ (ಸ್ವ)ಸಾಹಿತಿ ಅನಂತಮೂರ್ತಿಯವರ ದಾಹ, ಉದ್ದೇಶ ಯಾವುದು? ಏಕಾಗಿ ಮೋದಿ ಉತ್ತರವನ್ನು ತಮ್ಮ ಮೂಗಿನ ನೇರಕ್ಕೆ ತಿರುಚಿಕೊಂಡು ಒಂದೊಂದೇ ಪತ್ರಿಕೆಗಳಿಗೆ ಸಂದರ್ಶನ ನೀಡುತ್ತಿದ್ದಾರೆ? “ಅಷ್ಟು ಜನ ಕೋಮು ಗಲಭೆಯಲ್ಲಿ ಸತ್ತರಲ್ಲ, ಅವರು ಓಡ್ತಾ ಇರೋ ಕಾರಿನ ಚಕ್ರಕ್ಕೆ ಕುನ್ನಿಗಳು ಸಿಕ್ಕಂಗೆ ಅಂತಂದನಲ್ಲಾ…” ಎಂದು ಹೇಳಿಕೆ ಕೊಡುತ್ತಿದ್ದಾರಲ್ಲಾ ಈ ಅನಂತಮೂರ್ತಿಯವರಿಗೆ ಆತ್ಮಸಾಕ್ಷಿ ಅನ್ನೋದೇ ಇಲ್ಲವೇ? ಸಮಾಜ ಸಾಕ್ಷೀಪ್ರಜ್ಞೆಯನ್ನು ಎತ್ತಿಹಿಡಿಯಬೇಕಾದ ಸಾಹಿತಿಗಳ ವರ್ಗಕ್ಕೆ ಸೇರಿದ ವ್ಯಕ್ತಿಗೇ ಆತ್ಮಸಾಕ್ಷಿ ಇಲ್ಲದಿದ್ದರೆ ಅವರಿಂದ ಪಾಠ ಹೇಳಿಸಿಕೊಳ್ಳುವ ಸಮಾಜದ ಗತಿಯೇನು? ಮೋದಿ ಉತ್ತರದ ಯಾವ ಭಾಗದಲ್ಲಿ ಅವರು ಗಲಭೆಯಲ್ಲಿ ಸತ್ತವರನ್ನು ನಾಯಿಗೆ ಹೋಲಿಸಿದ್ದಾರೆ? ಇಂಗ್ಲಿಷ್ ಪ್ರಾಧ್ಯಾಪಕರಾದ ಅನಂತಮೂರ್ತಿಯವರಿಗೆ ರಾಯಿಟರ್ಸ್ ಸಂದರ್ಶನದಲ್ಲಿರುವ ಸರಳ ಇಂಗ್ಲಿಷನ್ನೂ ಅರ್ಥಮಾಡಿಕೊಳ್ಳದಷ್ಟು ಬುದ್ಧಿ ಮಂಕಾಗಿದೆಯೇ? ಯುಪಿಎ-1 ಸರ್ಕಾರದಲ್ಲಿ ಕೇಂದ್ರ ಗೃಹಖಾತೆ ರಾಜ್ಯ ಸಚಿವರಾಗಿದ್ದ ಶ್ರೀಪ್ರಕಾಶ್ ಜೈಸ್ವಾಲ್ 2005ರಲ್ಲಿ ಸಂಸತ್‌ಗೆ ನೀಡಿದ ವಿವರಣೆಯಲ್ಲಿ “ಗುಜರಾತ್ ಗಲಭೆಯಲ್ಲಿ 252 ಹಿಂದುಗಳೂ ಸತ್ತಿದ್ದಾರೆ” ಎಂದು ತಿಳಿಸಿದ್ದಾರೆ. ಗಲಭೆಯಲ್ಲಿ ಸತ್ತವರನ್ನೆಲ್ಲ ನಾಯಿಗೆ ಹೋಲಿಸಿದ್ದರೆ, ಆ 252 ಹಿಂದುಗಳನ್ನೂ ನಾಯಿಗೆ ಹೋಲಿಸಿದ್ದಾರೆ ಎಂದು ಹಿಂದುಗಳೂ ಬೊಬ್ಬೆಹಾಕಬೇಕಿತ್ತಲ್ಲವೆ? ಜ್ಞಾನಿಗಳಾದ, ಅದಕ್ಕೆ ಮನ್ನಣೆ ಎಂಬಂತೆ ಜ್ಞಾನಪೀಠ ಪಡೆದ ನೀವೇ ಏಕೆ ಸುಳ್ಳು ಹೇಳುತ್ತೀರಿ ಅನಂತಮೂರ್ತಿಯವರೇ?

“ರಾಹುಲ್ ಗಾಂಧಿ 10 ಸಾವಿರ ಪದಗಳ ಭಾಷಣ ಮಾಡಿದರೆ ಆತನನ್ನು ಹೊಗಳಲು ಒಂದೆರಡು ಒಳ್ಳೆಯ ಪದಗಳನ್ನು ಮಾಧ್ಯಮಗಳು ಹುಡುಕುತ್ತಿರುತ್ತವೆ, ಅದೇ ಮೋದಿ 10 ಸಾವಿರ ಪದಗಳ ಭಾಷಣ ಮಾಡಿದರೆ ಅವರನ್ನು ತೆಗಳುವಂಥ ಒಂದೆರಡು ಹುಳುಕುಗಳಿಗೆ ಮಾಧ್ಯಮ ತಡಕಾಡುತ್ತಿರುತ್ತದೆ” ಎಂಬ ಮಾತಿದೆ. ಏನೂ ಸಿಗದಿದ್ದರೆ ಕೊನೆಗೆ ಟ್ವಿಸ್ಟು, ಟರ್ನು ಮಾಡಿಕೊಂಡು ಮೋದಿಯವರನ್ನು ತೆಗಳುತ್ತವೆ. ಅವುಗಳಿಗಾದರೂ ಟಿಆರ್‌ಪಿ ಚಿಂತೆಯಿದೆ. ನಿಮಗ್ಯಾವ ದರ್ದಿದೆ ಸ್ವಾಮಿ?

“ಮೋದಿ ಪ್ರಧಾನಿಯಾದರೆ ಈ ದೇಶದಲ್ಲಿ ನಾನಿರುವುದಿಲ್ಲ” ಎಂಬ ಅನಂತಮೂರ್ತಿಯವರ ಮತ್ತೊಂದು ಮಾತಿಗೆ ಬರೋಣ. ಪ್ರಜಾಪ್ರಭುತ್ವದಲ್ಲಿ ಟೀಕಿಸುವ, ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಖಂಡಿತ ಎಲ್ಲರಿಗೂ ಇದೆ. ಅಭಿಪ್ರಾಯ, ಅಭಿಪ್ರಾಯಭೇದ ವ್ಯಕ್ತಪಡಿಸುವುದಕ್ಕೂ, ದ್ವೇಷ, ಮತ್ಸರ ಹೊರಹಾಕುವುದಕ್ಕೂ ವ್ಯತ್ಯಾಸವಿಲ್ಲವೆ 2004ರಲ್ಲಿ ಸೋನಿಯಾ ಗಾಂಧಿಯವರು ಪ್ರಧಾನಿಯಾಗುವ ಪರಿಸ್ಥಿತಿ ಸೃಷ್ಟಿಯಾದಾಗ “ಆಕೆ ಪ್ರಧಾನಿಯಾದರೆ ನಾನು ತಲೆ ಬೋಳಿಸಿಕೊಳ್ಳುತ್ತೇನೆ, ಬಿಳಿ ಬಟ್ಟೆ ತೊಡುತ್ತೇನೆ, ಕಾಳು-ಕಡ್ಡಿ ತಿನ್ನುತ್ತೇನೆ, ನೆಲದ ಮೇಲೆ ಮಲಗುತ್ತೇನೆ” ಎಂದು ಹೇಳಿಕೆ ನೀಡಿದ್ದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹೇಗೆ ನಗೆಪಾಟಲಿಗೀಡಾಗಿದ್ದರು ಎಂಬುದು ನಿಮಗೆ ಗೊತ್ತಿಲ್ಲವೆ? ಆದರೆ ಸುಷ್ಮಾ ಸ್ವರಾಜ್‌ಗಿಂತಲೂ ಕೀಳಾದ ಹೇಳಿಕೆ ಕೊಟ್ಟಿರಲ್ಲಾ ನಿಮ್ಮ ಮಾತಿನ ಉದ್ದೇಶ, ಅರ್ಥವೇನು? ಮೋದಿಯನ್ನು ಸರ್ವಾಧಿಕಾರಿ ಎನ್ನುವ ನೀವು, 1975ರಲ್ಲಿ ಇಂದಿರಾ ಗಾಂಧಿಯವರು ದೇಶದ ಸಂವಿಧಾನವನ್ನೇ ಅಮಾನತ್ತಿನಲ್ಲಿಟ್ಟು ತುರ್ತು ಪರಿಸ್ಥಿತಿ ಹೇರಿದಾಗ ಆಕೆ ತೋರಿದ್ದು ನಿಜವಾದ ಸರ್ವಾಧಿಕಾರಿ ಧೋರಣೆ. ಆಗೇಕೆ ದೇಶಬಿಟ್ಟು ಹೋಗುವ ಮಾತು ನಿಮ್ಮ ಬಾಯಿಂದ ಬಂದಿರಲಿಲ್ಲ 1983ರಲ್ಲಿ ಅಸ್ಸಾಂನ ನೆಲ್ಲಿಯಲ್ಲಿ 24 ಗಂಟೆಯೊಳಗೆ 3,300 ಮುಸ್ಲಿಮರ ಮಾರಣಹೋಮ ನಡೆಯಿತು. ಆಗಲೂ ಇಂದಿರಾ ಗಾಂಧಿಯವರೇ ಪ್ರಧಾನಿಯಾಗಿದ್ದರು. ಯುಪಿಎ ಸರ್ಕಾರವೇ ಸಂಸತ್ತಿಗೆ ತಿಳಿಸಿದಂತೆ ಗುಜರಾತ್ ಹಿಂಸಾಚಾರದಲ್ಲಿ ಮಡಿದ ಮುಸ್ಲಿಮರ ಸಂಖ್ಯೆ 790. ಅಸ್ಸಾಂನಲ್ಲಿ ಸತ್ತಿದ್ದು 3 ಸಾವಿರದ ಮೂನ್ನೂರಕ್ಕೆ, 3 ಸಾವಿರದ ಮೂನ್ನೂರೂ ಮುಸಲ್ಮಾನರೇ. ಆಗ ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಇದ್ದಿದ್ದು ಕಾಂಗ್ರೆಸ್ ಸರ್ಕಾರಗಳೇ. “ಮೋದಿ ಪ್ರಧಾನಿಯಾಗಿಯೇ ಬಿಟ್ಟರೆ ಏನು ಮಾಡುತ್ತೀರಿ?” ಎಂಬ ಪ್ರಶ್ನೆಗೆ, “ಪ್ರಾಯವಾಯಿತು, ಏನು ಮಾಡುವುದಕ್ಕಾಗುತ್ತೆ. ಮೊದಲಾಗಿದ್ದರೆ ಖಂಡಿತ ಮೋದಿ ಪ್ರಧಾನಿಯಾಗುವುದಕ್ಕೆ ಬಿಡುತ್ತಿರಲಿಲ್ಲ” ಎಂದಿದ್ದೀರಲ್ಲಾ ಮೂರ್ತಿಗಳೇ, ನೆಲ್ಲಿ ಹತ್ಯಾಕಾಂಡ ನಡೆದಾಗ ವಿಶ್ವವಿದ್ಯಾಲಯಗಳಲ್ಲಿ ಚಿರ ಯುವಕನಂತೆಯೇ ವರ್ತಿಸುತ್ತಾ ಇದ್ದಿರಿ. ಆಗ ನಿಮ್ಮ ಪೌರುಷ, ಗಂಡಸುತನ ಎಲ್ಲಿ ಹೋಗಿತ್ತು? ಅಥವಾ ಯಾವುದಕ್ಕೆ ಸೀಮಿತವಾಗಿತ್ತು? ಅದು ಬಿಡಿ, 1984ರಲ್ಲಿ ಮೂರೂವರೆ ಸಾವಿರ ಸಿಖ್ಖರ ಹತ್ಯೆಯಾದಾಗಲೂ ನಿಮ್ಮ ದೇಹದಲ್ಲಿ ಚಿರ ಯೌವನವೇ ಇತ್ತು. ಆಗೇಕೆ ಇಂಥ ಮಾತುಗಳು ನಿಮ್ಮಿಂದ ಹೊರಬಂದಿರಲಿಲ್ಲ?

ಇವೆಲ್ಲ ಬೇಡ ಬಿಡಿ, 1983, ಡಿಸೆಂಬರ್ 3ನ್ನು ಭಾರತೀಯರು ಮಾತ್ರವಲ್ಲ, ಇಡೀ ಮನುಕುಲ ಮರೆಯುವಂತಿಲ್ಲ. ಅವತ್ತು ನೀವು ದ್ವೇಷಿಸುವ ಅಮೆರಿಕದ ಯೂನಿಯನ್ ಕಾರ್ಬೈಡ್ ಕಂಪನಿಯಿಂದ ವಿಷಾನಿಲ ಸೋರಿಕೆಯಾಗಿ ಮಧ್ಯಪ್ರದೇಶದ ಭೋಪಾಲದಲ್ಲಿ ಮಕ್ಕಳು, ಮರಿ ಎನ್ನದೆ 15 ಸಾವಿರ ಜನ ಕೂತು, ನಿಂತು, ಮಲಗಿದಲ್ಲೇ ಮಸಣ ಸೇರಿದರು. 3 ಲಕ್ಷ ಜನ ವಿಷಾನಿಲ ಸೇವಿಸಿ ಅಸ್ವಸ್ಥರಾದರು. ಒಟ್ಟು ಐದೂವರೆ ಲಕ್ಷ ಜನರ ವಿಷಾನಿಲದ ವಿಕೋಪಕ್ಕೆ ತುತ್ತಾದರು. ಆ ಕಂಪನಿಯ ಮುಖ್ಯಸ್ಥ ವಾರೆನ್ ಆ್ಯಂಡರ್‌ಸನ್‌ನನ್ನು ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಬಂಧಿಸಿದರೂ ಆತನನ್ನು ಬಿಡುಗಡೆ ಮಾಡುವಂತೆ ಆದೇಶಿಸಿದ, ಕೊನೆಗೆ ಖಾಸಗಿ ವಿಮಾನದಲ್ಲಿ ದೇಶಬಿಟ್ಟು ಪಲಾಯನ ಮಾಡಲು ಅವಕಾಶ ಮಾಡಿಕೊಟ್ಟ ರಾಜೀವ್ ಗಾಂಧಿ ನಿಮಗೆ ಏಕೆ ಯಾವತ್ತೂ ನರಹಂತಕರಂತೆ ಕಾಣಲಿಲ್ಲ? ತುಂಬುಪ್ರಾಯದಲ್ಲೇ ಇದ್ದ ನೀವು 1984ರ ಚುನಾವಣೆಯಲ್ಲಾದರೂ ರಾಜೀವ್ ಗಾಂಧಿ ವಿರುದ್ಧ ಪ್ರಚಾರಾಂದೋಲನ ಮಾಡಬಹುದಿತ್ತಲ್ಲವೆ? ಅಂದೇಕೆ, ರಾಜೀವ್ ಗಾಂಧಿಯಂಥ ವ್ಯಕ್ತಿ ಪ್ರಧಾನಿಯಾಗಿರುವ ನಾಡಿನಲ್ಲಿ ನಾನಿರಬಾರದು ಎಂದು ನಿಮಗನಿಸಲಿಲ್ಲ?

ಇನ್ನು ನೀವು ಹೇಳಿದ ಸೋನಿಯಾ ಗಾಂಧಿಯವರ “ಕ್ಷಮೆ, ಪಶ್ಚಾತ್ತಾಪ”ದ ಕಥೆಗೆ ಬರೋಣ. “ಇಂದಿರಾ ಹತ್ಯೆ ನಂತರದ ಸಿಖ್ ಹತ್ಯಾಕಾಂಡವೂ ಭೀಕರವಾದುದೇ. ಆದರೆ ಅದಕ್ಕೆ ಸೋನಿಯಾ ಗಾಂಧಿ ಪಶ್ಚಾತ್ತಾಪ ಪಟ್ಟಿದ್ದಾರೆ” ಎಂದು ಹೇಳಿದ್ದೀರಿ. ಸೋನಿಯಾ ಗಾಂಧಿಯವರು ಯಾವಾಗ ಸಿಖ್ಖರ ಕ್ಷಮೆ ಕೇಳಿದರು? ಯಾವ ಸಂದರ್ಭದಲ್ಲಿ ಪಶ್ಚಾತ್ತಾಪ ವ್ಯಕ್ತಪಡಿಸಿದರು? ಸ್ವಲ್ಪ ಆಧಾರ ಕೊಡುತ್ತೀರಾ? 2005, ಆಗಸ್ಟ್ 12ರಂದು ಸಂಸತ್ತಿನಲ್ಲಿ ಮಾತಿಗೆ ನಿಂತಿದ್ದ ಪ್ರಧಾನಿ ಮನಮೋಹನ್ ಸಿಂಗ್, “1984ರ ದಂಗೆ ಸಲುವಾಗಿ ಸಿಖ್ ಸಮುದಾಯದ ಕ್ಷಮೆ ಕೇಳಲು ನನಗೆ ಯಾವ ಅಂಜಿಕೆಯೂ ಇಲ್ಲ. ನಾನು ಬರೀ ಸಿಖ್ ಸಮುದಾಯಕ್ಕೆ ಮಾತ್ರವಲ್ಲ, ಇಡೀ ದೇಶದ ಕ್ಷಮೆ ಕೇಳುತ್ತೇನೆ” ಎಂದರು. ಇದನ್ನು ಒಟ್ಟಾರೆ ಕಾಂಗ್ರೆಸ್ ಪಕ್ಷ ಕೇಳಿದ ಕ್ಷಮೆ ಎಂದು ಬಿಂಬಿಸಲಾಯಿತು ಅಷ್ಟೇ ಸ್ವಾಮಿ. ಸೋನಿಯಾ ಗಾಂಧಿಯವರು ಕ್ಷಮೆ ಕೇಳಿದ್ದು ಆಪರೇಶನ್ ಬ್ಲೂ ಸ್ಟಾರ್ ಕಾರ್ಯಾಚರಣೆ ಮಾಡಿದ್ದಕ್ಕೆ. ಒಂದು ವೇಳೆ, ಸೋನಿಯಾ ಗಾಂಧಿಯವರಿಗೆ ಸಿಖ್ ಹತ್ಯಾಕಾಂಡದ ಬಗ್ಗೆ ನಿಜಕ್ಕೂ ಪಶ್ಚಾತ್ತಾಪವಾಗಿದ್ದರೆ 2004ರ ಲೋಕಸಭೆ ಚುನಾವಣೆಯಲ್ಲಿ ಏಕೆ ಸಿಖ್ಖರ ಹತ್ಯೆಯ ನೇತೃತ್ವ ವಹಿಸಿದ್ದ ಜಗದೀಶ್ ಟೈಟ್ಲರ್ ಹಾಗೂ ಸಜ್ಜನ್ ಕುಮಾರ್‌ಗೆ ಟಿಕೆಟ್ ನೀಡಿದ್ದರು? ಏಕಾಗಿ ಜಗದೀಶ್ ಟೈಟ್ಲರ್ ಅವರನ್ನು ಸಾಗರೋತ್ತರ ಖಾತೆ ರಾಜ್ಯ ಸಚಿವರನ್ನಾಗಿ ಮಾಡಿದ್ದರು?

ಇನ್ನು ಪ್ರಧಾನಿ ಏಕಾಗಿ ಕ್ಷಮೆ ಕೇಳಿದರು ಎಂಬ ಕಥೆ ಕೇಳಿ. 2000ದಲ್ಲಿ ವಾಜಪೇಯಿ ಸರ್ಕಾರ ಸಿಖ್ ಹತ್ಯಾಕಾಂಡದ ಬಗ್ಗೆ ಮರು ತನಿಖೆ ನಡೆಸುವಂತೆ ನಾನಾವತಿ ಆಯೋಗವನ್ನು ರಚನೆ ಮಾಡಿತ್ತು. ಅದು 2005, ಫೆಬ್ರವರಿಯಲ್ಲಿ ವರದಿ ನೀಡಿತು. ಆ ವರದಿಯ ಬಗ್ಗೆ ಚರ್ಚೆ ನಡೆಯಬೇಕೆಂದು ಪ್ರತಿಪಕ್ಷಗಳು ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಪಟ್ಟು ಹಿಡಿದವು. ಎಡಪಕ್ಷಗಳೂ ಹಠ ಹಿಡಿದಿದ್ದರಿಂದ ಅನಿವಾರ್ಯತೆಗೆ ಸಿಲುಕಿದ ಕಾಂಗ್ರೆಸ್ ಚರ್ಚೆಗೆ ಒಪ್ಪಿತು. ವರದಿಯಲ್ಲಿ ತೀವ್ರ ಆರೋಪಕ್ಕೆ ಗುರಿಯಾಗಿದ್ದ ಸಚಿವ ಜಗದೀಶ್ ಟೈಟ್ಲರ್ ರಾಜೀನಾಮೆ ನೀಡಬೇಕೆಂದು ವಿರೋಧ ಪಕ್ಷಗಳು ಹಠ ಹಿಡಿದಿದ್ದರಿಂದ 2005, ಆಗಸ್ಟ್ 11ರಂದು ಟೈಟ್ಲರ್ ರಾಜೀನಾಮೆ ನೀಡಿದರು. ಮರುದಿನ, ಪ್ರಕರಣಗಳ ಮರು ತನಿಖೆಯಾಗಬೇಕೆಂಬ ಒತ್ತಾಯ ಬಂದಾಗ ಪ್ರಧಾನಿ ಬಾಯ್ಬಿಟ್ಟರು. ಸಿಖ್ ಸಮುದಾಯದ ಕ್ಷಮೆ ಕೇಳಲು ನನಗೆ ಯಾವ ಅಂಜಿಕೆಯೂ ಇಲ್ಲ ಎಂದರು ಅಷ್ಟೇ. ಒಂದು ವೇಳೆ, ಸೋನಿಯಾ ಗಾಂಧಿಯವರಿಗೆ ನಿಜಕ್ಕೂ ಪಶ್ಚಾತ್ತಾಪವಾಗಿದ್ದರೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಅವರ ಮನಸ್ಸಿಗನಿಸಿದ್ದರೆ 2009ರಲ್ಲಿ ಜಗದೀಶ್ ಟೈಟ್ಲರ್‌ಗೆ ಹೇಗೆ ಸಿಬಿಐ ಕ್ಲೀನ್ ಚಿಟ್ ಕೊಟ್ಟಿತು? ಏಕಾಗಿ ಟೈಟ್ಲರ್ ಹಾಗೂ ಸಜ್ಜನ್ ಕುಮಾರ್ ವಿರುದ್ಧದ ಪ್ರಕರಣ ಹಿಂತೆಗೆದುಕೊಳ್ಳಲು ಮುಂದಾಯಿತು? ಇದುವರೆಗೂ ಸಿಖ್ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದವರಲ್ಲಿ ಎಷ್ಟು ಜನರಿಗೆ ಶಿಕ್ಷೆಯಾಗಿದೆ ಹೇಳಿ? ಒಬ್ಬ ಸಿಖ್ ಪ್ರಧಾನಿಯೇ ಇದ್ದರೂ ಏಕೆ ಸಿಖ್ಖರಿಗೆ ನ್ಯಾಯ ಕೊಡಿಸಲಾಗಿಲ್ಲ? ಪಿ. ಚಿದಂಬರಂ ಮೇಲೆ ಬೂಟನ್ನೆಸೆದ ಜರ್ನೈಲ್‌ಸಿಂಗನ “”I Accuse” ಪುಸ್ತಕವನ್ನೋದಿದ್ದೀರಾ? ಒಂದು ವೇಳೆ ಓದಿದ್ದರೆ ಸೋನಿಯಾ ಗಾಂಧಿಯವರು ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ ಎಂದು ಖಂಡಿತ ನೀವು ಹೇಳುತ್ತಿರಲಿಲ್ಲ. ಅದಿರಲಿ ಸೋನಿಯಾ ಗಾಂಧಿಯವರ ಪರ ವಕಾಲತ್ತು  ವಹಿಸುವ ಜರೂರತ್ತು ನಿಮಗೇನಿತ್ತು?

“ನಾನು ಯಾವ ರಾಜಕಾರಣಿಯಲ್ಲೂ ಮೋದಿಯಲ್ಲಿರುವಂಥ ಒರಟುತನವನ್ನು ಕಾಣಲಿಲ್ಲ” ಎಂದಿದ್ದೀರಿ! ಅನಂತಮೂರ್ತಿಯವರೇ, ಮೋದಿಯವರನ್ನು ನೀವು ಯಾವಾಗ ಭೇಟಿಯಾಗಿದ್ದಿರಿ? ಕೃಷಿ ಭೂಮಿ, ಬಂಗಲೆ ಕೇಳುವುದಕ್ಕಾಗಿ ಭೇಟಿಯಾದಾಗ ಮೋದಿ ಒಪ್ಪದೆ ಒರಟುತನ ತೋರಿದರೇ?! ಖಂಡಿತ ಒಬ್ಬರ ಒರಟುತನವನ್ನು ವೈಯಕ್ತಿಕ ಭೇಟಿ, ಅನುಭವದಿಂದಲೇ ಅರ್ಥಮಾಡಿಕೊಳ್ಳಬೇಕೆಂದೇನೂ ಇಲ್ಲ. ಮಾತು ಒರಟಾಗಿದ್ದರೂ ಮನಸ್ಸು ಮೃದುವಾಗಿರುವಂಥ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉದಾಹರಣೆ ಕಣ್ಣಮುಂದಿದೆ. ಆದರೆ ನಮ್ಮ ಅನಂತಮೂರ್ತಿಯವರಿಗೆ ಮೋದಿಯವರಲ್ಲಿ ಯಾವ ದೃಷ್ಟಿಯಲ್ಲಿ ಒರಟುತನ ಕಂಡಿತು? ಉತ್ತರ ಪ್ರದೇಶದ ರಾಜಕಾರಣಿ ಹಾಗೂ ಉರ್ದು ಪತ್ರಿಕೆ “ನಯೀ ದುನಿಯಾ”ದ ಶಾಹಿದ್ ಸಿದ್ಧಿಕಿಯವರಿಗೆ 2012ರಲ್ಲಿ ನೀಡಿದ ಸಂದರ್ಶನದಲ್ಲಿ “ಒಂದು ವೇಳೆ ಗುಜರಾತ್ ಹಿಂಸಾಚಾರದಲ್ಲಿ ನನ್ನ ಪಾತ್ರವಿದೆ ಎಂದು ಸಾಬೀತಾದರೆ ನನ್ನನ್ನು ಸಾರ್ವಜನಿಕವಾಗಿ ಗಲ್ಲಿಗೆ ಹಾಕಿ. ಅದರಿಂದ ಮುಂದಿನವರಿಗೂ ಒಂದು ಪಾಠವಾಗುತ್ತದೆ” ಎಂದು ಬಹಿರಂಗವಾಗಿ ಹೇಳಿರುವ ಮೋದಿಯವರಲ್ಲಿ ವಿನಮ್ರತೆ ಬದಲು ಒರಟುತನ ಮೂರ್ತಿಯವರಿಗೆ ಹೇಗೆ ಕಂಡಿತು? 1984ರ ಸಿಖ್ ಹತ್ಯಾಕಾಂಡದ ಬಗ್ಗೆ ಕೇಳಿದಾಗ ‘ಒಂದು ದೊಡ್ಡ ಮರ ಉರುಳಿದಾಗ ಭೂಮಿ ಅಲುಗುವುದು ಸಹಜ” ಎಂದು ಲಜ್ಜೆಯಿಲ್ಲದೆ ಸಮರ್ಥಿಸಿಕೊಂಡಿದ್ದ ರಾಜೀವ್ ಗಾಂಧಿಯವರಲ್ಲಿ ಕಾಣದ ಒರಟುತನ ಮೋದಿಯವರಲ್ಲಿ ಕಾಣುತ್ತಿದೆಯೇ? 1.86 ಲಕ್ಷ ಕೋಟಿ ರೂ. ಹಗರಣದ ಕಲ್ಲಿದ್ದಲು ಗುತ್ತಿಗೆಗೆ ಸಂಬಂಧಿಸಿದ ಫೈಲುಗಳೆಲ್ಲಿ ಎಂದರೆ, “I am not the custodian of files”  (ಕಡತಗಳನ್ನು ಕಾಪಿಡುವ ಕೆಲಸ ನನ್ನದಲ್ಲ), ಅರ್ಥವ್ಯವಸ್ಥೆಯೇಕೆ ಕುಸಿಯುತ್ತಿದೆಯೆಂದರೆ, “ದುಡ್ಡು ಗಿಡದಲ್ಲಿ ಬೆಳೆಯುವುದಿಲ್ಲ’’(Money does not grow on trees) ಎನ್ನುವ ಪ್ರಧಾನಿ, ಈರುಳ್ಳಿ ಬೆಲೆಯೇಕೆ ಗಗನಕ್ಕೇರಿದೆ ಎಂದರೆ ‘ಸರ್ಕಾರ ಈರುಳ್ಳಿ ಮಾರುವುದಿಲ್ಲ, ವ್ಯಾಪಾರಿಯನ್ನು ಕೇಳಿ’ ಎನ್ನುವ ಮಾನವ ಸಂಪನ್ಮೂಲ ಖಾತೆ ಸಚಿವ ಕಪಿಲ್ ಸಿಬಲ್‌ರಲ್ಲಿ ಕಾಣದ ಒರಟುತನ, ಅಹಂಕಾರ ನಿಮಗೆ ಮೋದಿಯಲ್ಲಿ ಕಾಣುತ್ತಿದೆ ಅಲ್ಲವೆ? ಅನಂತಮೂರ್ತಿಗಳೇ ಇಷ್ಟಕ್ಕೂ ಮೋದಿಯೇನು ನಿಮ್ಮನ್ನು ಕೇಂದ್ರೀಯ ವಿವಿ ಮುಖ್ಯಸ್ಥರನ್ನಾಗಿಯೂ ಮಾಡಿಲ್ಲ, ಮುಂದೆ “ಕರ್ನಾಟಕ ರತ್ನ”ವನ್ನೂ ನೀಡುವುದಿಲ್ಲ. ಅವುಗಳನ್ನು ಕೊಡುವುದೇನಿದ್ದರೂ ಕಾಂಗ್ರೆಸ್ಸೇ. ನೀವು ಹಿಡಿದಿರುವ ಮಾರ್ಗ ಸರಿಯಾಗಿಯೇ ಇದೆ ಬಿಡಿ. ಇನ್ನು, ವೈಯಕ್ತಿಕ ಮಾತುಗಳಲ್ಲಿ, ಕಾಡುಹರಟೆ ಸಂದರ್ಭದಲ್ಲಿ ಯಾರನ್ನೂ ಏಕವಚನದಿಂದ ಸಂಬೋಧಿಸುವುದು, ಕರೆಯುವುದು ಸಹಜ. ಆದರೆ ಮಾಧ್ಯಮಗಳು ಹಾಗೂ ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡುವಾಗಲೂ ಒಂದು ರಾಜ್ಯದ ಮುಖ್ಯಮಂತ್ರಿಯನ್ನು, ಒಂದು ರಾಷ್ಟ್ರೀಯ ಪಕ್ಷದ ಪ್ರಧಾನಿ ಅಭ್ಯರ್ಥಿಯನ್ನು ಏಕವಚನದಲ್ಲಿ ಕರೆಯುವುದು ಎಷ್ಟರಮಟ್ಟಿಗೆ ಸರಿ? ರಾಹುಲ್ ಗಾಂಧಿಯವರೂ ಕಾಂಗ್ರೆಸ್ ಪಕ್ಷದ ಅಘೋಷಿತ ಪ್ರಧಾನಿ ಅಭ್ಯರ್ಥಿಯೇ. ಅವರನ್ನು ವಿರೋಧಿಸುವವರೆಲ್ಲ ಪತ್ರಿಕೆಗಳಲ್ಲಿ ಅವನು, ಇವನು ಎಂದು ಸಂಭೋದಿಸಿದರೆ ಸರಿ ಎನಿಸುತ್ತದೆಯೇ? ಹಾಗಿದ್ದರೂ ಅನಂತಮೂರ್ತಿಯವರು, ಮೋದಿಯವರನ್ನು ಅವನು, ಇವನು ಎಂದು ಸಂಭೋದಿಸಿರುವುದು ಏನನ್ನು ಸೂಚಿಸುತ್ತದೆ?

ಕಡೆಯದಾಗಿ, ನಿಮಗೊಂದು ಪ್ರಶ್ನೆ: ಕರ್ನಾಟಕ ಕೋಮುವಾದಿಗಳ ನೆಲೆಯಾಗುತ್ತಿದೆ ಎಂದು ಕಳೆದ ಹತ್ತಾರು ವರ್ಷಗಳಿಂದ ಹೇಳುತ್ತಲೇ ಬಂದಿದ್ದೀರಿ, ಬಿಜೆಪಿ ಅಧಿಕಾರದಲ್ಲಿದ್ದ 5 ವರ್ಷಗಳಲ್ಲಂತೂ ಇನ್ನೂ ಜೋರಾಗಿ ಬೊಬ್ಬೆ ಹಾಕಿದಿರಿ. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ನಿಯಂತ್ರಣದಲ್ಲೇ ಇರುವ ಎನ್‌ಐಎ “ಮಂಗಳೂರು ಭಯೋತ್ಪಾದಕರ ತಾಣವಾಗುತ್ತಿದೆ” ಎಂದಿದೆ. ಯಾಸೀನ್ ಭಟ್ಕಳ ಬಂಧನದ ನಂತರ ತನಿಖೆಗಾಗಿ ಮಂಗಳೂರಿಗೂ ಬಂದಿತ್ತು. ನಮ್ಮ ಕರಾವಳಿಯು ದೇಶದ್ರೋಹಿಗಳ, ಭಯೋತ್ಪಾದಕರ ನೆಲೆಯಾಗುತ್ತಿದೆ ಎಂದೇಕೆ ನೀವು ಹೇಳುತ್ತಿಲ್ಲ?

ನಿಮ್ಮ ಪ್ರತಿ ವಾಕ್ಯದಲ್ಲೂ ಇರುವ ಅಪದ್ಧ, ಅಸಹಿಷ್ಣತೆಯನ್ನು, ಅವಹೇಳನಕಾರಿ ಧ್ವನಿಯನ್ನು ಎತ್ತಿತೋರಬಹುದು. ಸಾಧ್ಯವಾದರೆ ಸಹವರ್ತಿಗಳ ಮೂಲಕ ಸುಳ್ಳುಗಳನ್ನು ಸಾರುವ ಬದಲು ಅಭಿಪ್ರಾಯಭೇದವಿರುವವರ ಜತೆ ಸಾರ್ವಜನಿಕ ಚರ್ಚೆಗೆ ಬನ್ನಿ. ರಾಜ್ಯದ ಜನತೆಗೆ ಸತ್ಯವೇನೆಂದು ಗೊತ್ತಾಗಲಿ. ಅದಕ್ಕೆ ನೀವು ಸಿದ್ಧರಿದ್ದೀರಾ?

87 Responses to “ಮೂರ್ತಿಯವರೇ, ನಿಮಗೇಕೆ ಈ ಅಪದ್ಧ ನುಡಿವ ಅನಿವಾರ್ಯ?”

 1. Mahantesh says:

  Super Sir….

 2. Sri says:

  ಇನ್ನು ನೀವು ಹೇಳಿದ ಸೋನಿಯಾ ಗಾಂಧಿಯವರ “ಕ್ಷಮೆ, ಪಶ್ಚಾತ್ತಾಪ”ದ ಕಥೆಗೆ ಬರೋಣ. “ಇಂದಿರಾ ಹತ್ಯೆ ನಂತರದ ಸಿಖ್ ಹತ್ಯಾಕಾಂಡವೂ ಭೀಕರವಾದುದೇ. ಆದರೆ ಅದಕ್ಕೆ ಸೋನಿಯಾ ಗಾಂಧಿ ಪಶ್ಚಾತ್ತಾಪ ಪಟ್ಟಿದ್ದಾರೆ” ಎಂದು ಹೇಳಿದ್ದೀರಿ. ಸೋನಿಯಾ ಗಾಂಧಿಯವರು ಯಾವಾಗ ಸಿಖ್ಖರ ಕ್ಷಮೆ ಕೇಳಿದರು? ಯಾವ ಸಂದರ್ಭದಲ್ಲಿ ಪಶ್ಚಾತ್ತಾಪ ವ್ಯಕ್ತಪಡಿಸಿದರು? ಸ್ವಲ್ಪ ಆಧಾರ ಕೊಡುತ್ತೀರಾ?

  http://www.rediff.com/news/1998/jan/27sorry.htm

  Sonia says sorry to Sikhs for Bluestar, 1984 riots

  Sonia Gandhi kicked off the party’s election campaign in Chandigarh by tendering a veiled apology for the army storming the Golden Temple, and the anti-Sikh riots that followed the assassination of Indira Gandhi.

  Addressing a public meeting at the Ramlila grounds, Gandhi also touched upon the 1984 anti-Sikh riots, rising corruption and crime, the slump in the economy and general lack of governability at all levels, in her ten-minute speech in Hindi.

  Indirectly referring to Operation Bluestar, Sonia Gandhi said, “Ju kuchh June 6 ko hua, uska mujhe dukh hua (I am anguished by the events of June 6). The then prime minister Indira Gandhi ordered the army into the Sikh community’s holiest shrine on June 6, 1984, after Punjabi militants set up their headquarters within the temple complex and conducted their war against the State from there. Subsequently, she was riddled with bullets by her own bodyguards who held her guilty of sacrilege, which in turn resulted in the worst-ever pogrom against Sikhs allegedly by Congressmen.

  On the riots, Sonia Gandhi said she could ”understand” the pain of Sikhs as she herself had experienced it, losing her husband Rajiv and mother-in-law Indira Gandhi that way.

  ”There is no use recalling what we have collectively lost. No words can balm that pain. Consolation from others always somehow sound hollow,” she said.

  ”Three generations of my family have contributed in the fight for the country’s independence. I ask you on their behalf to ensure victory to their dreams.”

  Punjab and Haryana, she said, was the bread basket of the country. The hardworking people of Punjab have to learn to put back the years of terrorism and contribute to the nation’s growth.

  Recalling how Rajiv Gandhi dreamt of a prosperous Punjab, Sonia said, ”So much work is still to be done”.

  She, however, reminded the people that no progress was possible in a climate of rising caste and communal politics. ”The politics of division is destroying what was carefully nurtured over years by our great leaders.”

  ”I have never entertained any political ambitions. I do not have any such dreams now. But how can one sit back quitely in such times,” she asked.

  She began her speech with a ”Namaskar,” and in Punjabi, ”Sat sri akal.” She ended her address with the slogan ”Jai Hind” — ala her mother-in-law — three times.

  Punjab Chief Minister Parkash Singh Badal dubbed Sonia’s apology as an ”election gimmick.” He expressed surprise that it was not Congress president Sitaram Kesri but Sonia who was making such statements.

  Neither the Congress’s election manifesto released on Saturday or the half-a-dozen manifestoes released since 1984 ever mentioned Operation Bluestar or the anti-Sikh riots, he said.

  Even Narasimha Rao visited Punjab twice as prime minister but never uttered a single word of sympathy to the Sikhs, he charged.

  UNI

 3. Gouraswamy krishna murthy says:

  Hats off to Shri simha who has rightly commented on idiotic statement of Shri.anantha murthy. The most unfortunate tragedy in our country, is we have even misguided
  Intellectuals like him,who by his wisdom should study the situation and give the statement ,who should not allow his senility to take over.

 4. lamp says:

  jna(a)napeethi allave,adakke heege maatadta irodu……….. “naalige kula nudiyuttade” ante,haage odorella melinavara kula tilkobahudu ashte…….

 5. MANJUNATH says:

  Dear Sir,
  Fentastic Truth…. Tel to Mr. URA to Leave the country asap…

 6. MANJUNATH Ko.Vem says:

  Sri Prathap simha ravare

  “Aane daariyalli hoguttiddare halavaaru naayigalu bogaluttave,
  Aane iddru ondee bele sattaru onde bele”.

  Neevu barediruva lekhana tumba chenngide upayukta maahithi neediddiri. Sri Bhyrappanavarnthe charchege baralu, Sri anantha murthy yavara taleyalli sarkellide?
  A M, Bargoor Ramavhandrappa,GK Govindaraya,Girish karnaad ivarellaru beedi badiya naayigaliddanthe, Maadyamadavaru inthavara bagge maahiti odagisuvudu atyvshyaka, neevu aa kelasa maduttiddiri nimage ollyadaagali

  Tumbu Hrudayadinda

  Manjunatha Ko.Vem.
  Mahalakshmipuram
  Bengalooru-5600086

 7. Ajeet says:

  Congress agent aagiddare U R A

 8. Mallesh k b says:

  I hope we are not expect more than this from Ananth murthy he is congress slave.

 9. yogendra H says:

  ಅನಂತಮೂರ್ತಿಗಳು ಯಾವ ದುರುದ್ದೇಶದಿಂದ ಈ ರೀತಿ ವರ್ತಿಸುತಿದ್ದಾರೋ …..
  ನಿಜವಾಗಿಯೂ ಅವರು ಒಬ್ಬ ದೇಶದ್ರೋಹಿಗಿಂತ ಹೆಚ್ಚು ,,,,,
  ಒಬ್ಬ ತೀರಾ ಅಜ್ಞಾನಿಗೆ ಪ್ರತಿಷ್ಠಿತ ಜ್ಞಾನಪೀಠ ಕೊಟ್ಟಿದ್ದಾರೆ ,,ನಾಚಿಕೆಯಾಗಬೇಕು ..
  ಒಟ್ಟಾರೆ ಈತನೊಬ್ಬ : ಅಜ್ಞಾನಿ , ನೀಚ , ದೇಶದ್ರೋಹಿ ,,,,,,,
  (ಬೇರೆ ಬೇರೆ ತರಹ ಬರೆಯಬೇಕೆನಿಸುತ್ತಿದೆ , ಆದರೆ ಕೊಚ್ಚೆಗೆ ಕಲ್ಲು ಹಾಕಲು ಇಷ್ಟ ಇಲ್ಲ .),

 10. Prakash M says:

  we have to avoid him at any cost.

 11. Nandeesha says:

  ಹಾಯ್ ಸರ್, ನಾನು ನಿಮ್ಮ ಅಂಕಣವನ್ನು ಓದುತ್ತಿರುವುದು 2012 ನವೆಂಬರ್ ತಿಂಗಳಿಂದ ಮಾತ್ರ ಅಲ್ಲಿಯವರೆಗೂ ಜಗತ್ತಿನಲ್ಲಿ ಏನೇ ಆದರೂ ಅದರ ಬಗ್ಗೆ ಸ್ವಲ್ಪನೂ ಅರಿವು ಇಲ್ಲದ ರೀತಿಯಲ್ಲಿ ಬದುಕುತ್ತಿದ್ದೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಸತ್ಯದ ಅರಿವು ಅರ್ಥವಾಗುತ್ತಿದೆ ಸರ್ ನಾವು ದೇವರು ಅಂತ ಪೂಜಿಸುತ್ತಿರುವ ವ್ಯಕ್ತಿಗಳೇ ಅನಾಚಾರ, ವಂಚನೆ, ಸುಲಿಗೆ, ಭ್ರಷ್ಟಾಚಾರದಂತಹ ಹೀನ ಕೃತ್ಯಗಳನ್ನು ನಮಗೆ ಅರ್ಥವಾಗದ ರೀತಿಯಲ್ಲಿ ಮಾಡುತ್ತಿದ್ದಾರೆ ಅವರ ಬಂಡವಾಳವನ್ನು ನಿಮ್ಮ ಅಂಕಣದಿಂದ ತಿಳುಯುತ್ತಿದ್ದೇನೆ ಸರ್ ಪ್ರತಿ ಶನಿವಾರ ಎಷ್ಟೇ ಕೆಲಸವಿದ್ದರೂ ಸಹ ನಿಮ್ಮ ಅಂಕಣವನ್ನು ನೋಡದೇ ಏನೂ ಮಾಡಲು ಮನಸ್ಸು ಬರುವುದಿಲ್ಲ ಸರ್ ನಾನು ಒಬ್ಬ ಬಡ ವಿದ್ಯಾರ್ಥಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದೇನೆ ಆದರೂ ನಿಮ್ಮ ಲೇಖನಗಳನ್ನು ಓದಲು ಕಷ್ಟಪಟ್ಟು ಹಣ ಸಂಗ್ರಹಿಸಿ ನಿಮ್ಮ ಬೆತ್ತಲೆ ಜಗತ್ತು 1ರಿಂದ14ರವರೆಗೆ ಅಂಕಣ ಪುಸ್ತಕವನ್ನು, ಮೈನಿಂಗ ಮಾಫಿಯಾ, ಟಿಪ್ಪು ಸುಲ್ತಾನ್, ಸುಬಾಷ್ ರವರದು, ನರೇಂದ್ರ ಮೋದಿ ಪುಸ್ಟಕಗಳನ್ನು ತೆಗದುಕೊಂಡು ಓದುತ್ತಿದ್ದೇನೆ. ನಿಮ್ಮ ಲೇಖನಗಳನ್ನು ಓದುತ್ತಿದ್ದೇರೆ ಮೈ ನೆಟ್ಟಾಗಾಗುತ್ತೇ ಸರ್ ನಿಜಕ್ಕೂ realy great sir… ಸಾಹಿತಿಗಳು ಹೀಗೇಕೆ ಆಗುತ್ತಿದ್ದಾರೆ ನಿಜಕ್ಕೂ ವಿಷಾದನೀಯ ಸರ್ ದೇಶದ ಪ್ರಧಾನಿ ಯಾರೇ ಆದರೂ ಸಹ ಅದಕ್ಕೆ ಬೆಂಬಲ, ಬಿದ್ದಾಗ ಮೇಲೇಳಿಸುವ ಕೆಲಸ ಅವರಾದಾಗಿರಬೇಕು ಅದನ್ನು ಬಿಟ್ಟು ಒಂದು ಪಕ್ಷದ ಕುರಿತು ಮಾತಾನಾಡುವುದು ಎಷ್ಟು ಸರಿ ಇದು ತಿಳಿಯದೇ ಮಾಡುವ ತಪ್ಪಾ? ಅಥವಾ ತಿಳಿದು ಮಾಡುತ್ತಿರುವ ತಪ್ಪಾ? ಅವರನ್ನು ಬಹಿರಂಗ ಚರ್ಚೆಗೆ ಕರೆತನ್ನಿ ನಾವು ಅವರಿಗೆ ಪ್ರಶ್ನೆ ಕೇಳುತ್ತೇವೆ. ದೇಶ ಬಿಟ್ಟು ಓಡುವುದು ಹೇಡಿಗಳು ಆಡುವ ಮಾತು, ಇಂತಹ ಮಾತು ಆಡಲು ಅವರಿಗೆ ನಾಚಿಕೆ ಆಗಲಿಲ್ಲವೆ? ಅಷ್ಟಾದರು ಮೋದಿಯವರು ಮಾಡಿರುವ ತಪ್ಪಾದರೂ ಏನು? ನಿಜಕ್ಕೂ ಕೇಳೇಲೆ ಬೇಕಾದ ಪ್ರಶ್ನೆ ಸರ್….

 12. lovely lamp says:

  he is a hypocrite for “KANNADA”,and has got the highest award. namma bhasheya dusthitige bere udaharane beka? vayassaytu,summane pinchani tegedukollata biddirod bittu,taleyella haratatane. if his name would be “u r arishtamurthy” then it would be more suitable.

 13. Raghavendra Rao says:

  good comment. Anantha Murthy he him self declared he become mad. intha buddi bramane iroranna modalu gruha bandanadalli idabeku. Modi orataraadare bhayotpaadakarige chinthe. Anantha Murthy hogi avara jothe samsaara maadabeka ? ivarigeke aa chithe. Anantha Murthy thilidukondiddare prapanchadalli avarobbare jnaani antha. Janasaamanyanige iro viveka kooda illa annodu avara varthane inda thililidide. idu modalenalla. ivarige sanda jnaana Peetakke avamaana maaduttiddare. bari baredare saaladu. Aachara heloke ,,,,,,,,,,,,,,,, thinnoke.

 14. nandeesha says:

  hai sir, good evening….

 15. Ram says:

  I agree with your comments on Mr.Ananthamurthy. But once agin biased article by you.

 16. Vithal Navade says:

  This man (URA) is sick and paid sahithi and no control on his word. He want to attract the people & media by usless comment & critism.

 17. anil says:

  i dont know how ananthamurthy got jnanapeeta prize people like kuvempu bendre were honored with jnanapeeta for their great works along with their behavior even today also parents suggest their kids to follow them but the fuck anantha making his money with these brothel activities shame on anantha it is immediate to take back jnanapeeta prize from him nation like india will not improve because of these fucks as he said that he want leave nation let him leave so that there will be decrease of 1 in indias bitches

 18. Shivanand says:

  Yava purvalochane illade takshnakke bandiddannu heluva reeti nodidare Shri Anantmurthy avaru nijakku Jnanapitigara emba shanke muduttade.

 19. Dheeraj says:

  Article is very nice sir,
  If Ananthmurthy sir had said this about Rahul Gandhi then we could have given him complete support.

 20. Maruti K.jambagi says:

  Realy supab

 21. Muthuraj says:

  thumba olleya article sir. U R A anthavaru e tharahada statement kodabaradu adu avara ghanatege dhakke tharuthe.

 22. Kiran says:

  super article sir

 23. sudharshanvyas says:

  Dear Sir, Mr. Anantha Murthy has always written about only one community, which in fact is on the verge of extinguished, and he always knows that said community would not riot against him. I have ready his books Samsakara and Bharathipura. They are aimed at a particular community. he is least bothered about this country because he has married a foreign woman and hence he talks against Modi. But as there is a say in Kannada, that Nayi Bogilidare Develoka Hale. People like Mr. Murthy cannot stop Modi from becoming Prime Minister of this country.

 24. Siddu he says:

  ಅನಂತಮೂರ್ತಿಯವರು ಓರ್ವ ‘ಜ್ಞಾನಪೀಠಿ’ ಎಂಬ ಏಕೈಕ ಕಾರಣಕ್ಕಾಗಿ ಅವರ ಎಲ್ಲಾ ಅಸಂಬದ್ಧ ಹೇಳಿಕೆಗಳನ್ನೂ ಅವಡುಗಚ್ಚಿಕೊಂಡು ಕೇಳಬೇಕಾದ ಕೆಟ್ಟ ಪರಿಸ್ಥಿತಿ ನಮ್ಮಗೆ ಬಂದಿರುವುದು ದುರಂತವೇ ಸರಿ. ಪ್ರತಾಪ್ ಸರ್, ನಿಮ್ಮ ಲೇಖನಲ್ಲಿ ಗುಲಗಂಜಿಯಷ್ಟೂ ಮಿಥ್ಯವಿಲ್ಲ. ಇಷ್ಟೊಂದು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ಮೇಲಾದರೂ ಅನಂತಮೂರ್ತಿಯವರು ಬಹಿರಂಗವಾಗಿ ಚರ್ಚೆಗೆ ಬರಬಹುತ್ತಿಲ್ಲ! ಸಂಧ್ಯಾಕಾಲದಲ್ಲಿಯೂ ಮನ್ನಣೆಯ ದಾಹ ತೀರಿಲ್ಲವೆಂದಾದರೆ ಇನ್ನೊಬ್ಬರಿಗೆ ಇವರು ಮಾದರಿ ಆಗುವುದಾದರೂ ಹೇಗೆ?
  ಅನಂತಮೂರ್ತಿಯವರೇ ನಿಮ್ಮ ಸಾಹಿತ್ಯವನ್ನು ಗೌರವಿಸುತ್ತೇನೆ ಹೊರತು ನಿಮ್ಮ ವಿಕಾರ ಮನಸ್ಥಿಯನ್ನಲ್ಲ…
  ಚಿನ್ನತ ಸೂಜಿಯೆಂದು ಯಾರಾದರೂ ಕಣ್ಣಲ್ಲಿ ಇಟ್ಟುಕೊಳ್ಳುವರೇ?
  ನೀವು ಮಾತಿಗೆ ತಪ್ಪುವುದಿಲ್ಲವೆಂದು ಭಾವಿದ್ದೇನೆ; ತಯಾರಾಗಿರಿ ದೇಶತೊರೆಯಲಿಕ್ಕೆ. ಸಂಶಯಬೇಡ, ಮೊದಿ ಪ್ರಧಾನಿಯಾಗುತ್ತಾರೆ…

 25. DATTA DESHPANDE says:

  ANANTH MURTHY JUST BECAUSE YOU ARE BORN IN BRAHMIN COMMUNITY YOU COULD ABLE TO FIND THE LOOP HOLES AND WROTE SANSKARS AND GOT JNANAPEET
  WE REALLY REGRETS WHY DID YOU BORN IN MY COMMUNITY.
  FIRST YOU ADMIT THAT YOU EAT COW MEAT EVERYDAY . AND WRITE ABOUT THE PEOPLE
  WHO EAT COW MEAT AT PRESENT NOT 2000 YEARS BACK. IF IT REALLY HAPPENS
  THAT YOU LEAVE THIS COUNTRY I WILL STAND ON THE STREET TO DISTRIBUTE
  SWEETS

 26. sampath says:

  Ananatha muthy yavare nivu bharatha desha bidalu ready agiri yakandre neevu nudidanthe nadeva gnanigalu yakandre 2015 election result bandmele deshada belevanigi noodi nimage hottehuri barabahudu

  happy journey
  mundina janmadalli namdeshadalli utbeedi

 27. Basavaraj says:

  ಅನಂತಮೂರ್ತಿ ನಿಜವಾಗಿಯೂ ಸ್ವಾಭಿಮಾನಿ .
  ಖಂಡಿತವಾಗಿಯೂ ನುಡಿದಂತೆ ಮಾಡುವ ಛಲಗಾರ .
  ನನಗಂತೂ ಅವರು ದೇಶ ಬಿಟ್ಟು ಹೋಗೇ ಹೋಗ್ತಾರೆ ಅನ್ನೋ ನಂಬಿಕೆ ಇದೆ .
  ಎಲ್ಲಾ ದೇಶದ್ರೋಹಿಗಳೂ ಅನಂತಮೂತಿ೯ಯವರಂತೆ ದೇಶ ಬಿಟ್ಟು ಹೋಗಲಿ ದೇವರೇ . .ನಮೋ ಪವರ್ ಅಂದ್ರೆ ಹೀಗೇನೆ .

 28. Prashant Gouni says:

  neevu Rajakiyadalli baruvudu nimma daddatna

 29. sachin says:

  nothing will change if dog shouts

 30. Raghu nandan says:

  Well said. thanks for writing these kind of articles.

 31. RAGHAVENDRA says:

  Murti awarige deshabhimana bittu yella ede
  Deshabhimana elladawarige Deshada abhiruddi bekagilla
  adake ansatte awaru e thara matadatidare.

 32. Ramachandra B says:

  According to social scientists, if two persons from different religions get married, they start advocating the religion of their opposite gender!!…
  Unfortunately the same thing is happening in one way in URA’s case..
  He should advocate the party which is led by a female of same religion of his wife!! nothing else!!

 33. Shwetha says:

  ಈ ನಮ್ಮ ಭಾರತರ ಜನಗಳಿಗೆ ಏನಾಗಿದೆಯೋ ತಿಳಿಯುತ್ತಿಲ್ಲ. ಒಳ್ಳೆ ಕೆಲಸ ಮಾಡುವವರನ್ನು ತೆಗೆಳುತ್ತಾರೆ ಹಾಗೂ ಕೆಟ್ಟ ಕೆಲಸ ಮಾಡುವವರನ್ನು ಹೊಗಳಿ ಅಟ್ಟಕ್ಕೇರಿಸುತ್ತಾರೆ. ತಮ್ಮ ಸ್ವಾರ್ಥ ಸಾಧನೆಗೆ ದೇಶವನ್ನು ಹಾಗೂ ದೇಶದ ರಕ್ಷಣೆಗೆ ಹೋರಾಡುವವರನ್ನು ತುಚ್ಚ ಭಾವದಿಂದ ನೋಡುವ ಇಂತಹ ಕಲ್ಮಶ ತುಂಬಿದ ವ್ಯಕ್ತಿಗಳನ್ನು ಇನ್ನೂ ಸಹ ತನ್ನ ಒಡಲಲ್ಲಿಟ್ಟು ಪೋಷಿಸುತ್ತಿರುವ ಭಾರತ ಮಾತೆಯೇ ಸರಿಯಾದ ಪಾಠ ಕಲಿಸಲಿ. ಹಿಂದುಸ್ತಾನದಲ್ಲಿ ಹಿಂದುನೇ ಸಾರ್ವಭಾಮ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾನು ಹಿಂದು ಎಂದು ಎದೆ ತಟ್ಟಿ ಹೇಳುವ ಧೀರ ಮೋದಿ ಬಗ್ಗೆ ಮಾತನಾಡುವ ಅಧಿಕಾರ ಯಾವ ನರ ಸತ್ತ ನಾಮರ್ದರಿಗೂ ಇಲ್ಲ. ಇಷ್ಟಕ್ಕೂ ಮೋದಿ ಕೋಮುವಾದಿಯಾದರೆ ಹಾಗೂ ಮುಸ್ಲಿಂರಿಗೆ ತೊಂದರೆ ಮಾಡಿದ್ದರೆ ಮುಸಲ್ಮಾನರಿಗಾಗಿಯೇ ಇರುವ ಪಾಪಿ ಪಾಕಿಸ್ತಾನಕ್ಕೆ ಹೋಗಲಿ. ಅವರನ್ನು ಹಿಂದೂಸ್ತಾನದಲ್ಲಿ ಇರು ಅಂತ ಯಾರೂ ಇಲ್ಲಿ ಬೇಡಿಕೊಂಡಿಲ್ಲ. ಭಾರತದ ಅನ್ನ ಗಾಳಿ ನೀರು ಸೇವಿಸಿ ಭಾರತಕ್ಕ ಕೇಡು ಬಗೆಯುತ್ತಿರುವ ಇಂತಹ ಲಜ್ಜೆಗೆಟ್ಟ ಮಡಿವಂತರಿಗೆ ಆದಷ್ಟು ಬೇಗ ದೇವರು ಒಂದು ಗತಿ ಗಾಣಿಸಲಿ.

  ಪ್ರತಾಪ್ ಸಿಂಹರಿಗೆ ನನ್ನಂತಹ ಸಹಸ್ರಾರು ಹಿಂದುಗಳ ಬೆಂಬಲವಿದ್ದೆ ಇರುತ್ತದೆ. ಪ್ರತಾಪ್ ಸಿಂಹ ಬರೆಯುವ ಅಂಕಣಗಳು ಸತ್ಯ ಹಾಗೂ ಎಂದಿಗೂ ಅಮರ. ಅವರು ಚಿರಾಯುವಾಗಿರಲಿ.

  ಜೈ ಹಿಂದ್.

 34. Shwetha says:

  ಈ ನಮ್ಮ ಭಾರತರ ಜನಗಳಿಗೆ ಏನಾಗಿದೆಯೋ ತಿಳಿಯುತ್ತಿಲ್ಲ. ಒಳ್ಳೆ ಕೆಲಸ ಮಾಡುವವರನ್ನು ತೆಗೆಳುತ್ತಾರೆ ಹಾಗೂ ಕೆಟ್ಟ ಕೆಲಸ ಮಾಡುವವರನ್ನು ಹೊಗಳಿ ಅಟ್ಟಕ್ಕೇರಿಸುತ್ತಾರೆ. ತಮ್ಮ ಸ್ವಾರ್ಥ ಸಾಧನೆಗೆ ದೇಶವನ್ನು ಹಾಗೂ ದೇಶದ ರಕ್ಷಣೆಗೆ ಹೋರಾಡುವವರನ್ನು ತುಚ್ಚ ಭಾವದಿಂದ ನೋಡುವ ಇಂತಹ ಕಲ್ಮಶ ತುಂಬಿದ ವ್ಯಕ್ತಿಗಳನ್ನು ಇನ್ನೂ ಸಹ ತನ್ನ ಒಡಲಲ್ಲಿಟ್ಟು ಪೋಷಿಸುತ್ತಿರುವ ಭಾರತ ಮಾತೆಯೇ ಸರಿಯಾದ ಪಾಠ ಕಲಿಸಲಿ. ಹಿಂದುಸ್ತಾನದಲ್ಲಿ ಹಿಂದುನೇ ಸಾರ್ವಭಾಮ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾನು ಹಿಂದು ಎಂದು ಎದೆ ತಟ್ಟಿ ಹೇಳುವ ಧೀರ ಮೋದಿ ಬಗ್ಗೆ ಮಾತನಾಡುವ ಅಧಿಕಾರ ಯಾವ ನರ ಸತ್ತ ನಾಮರ್ದರಿಗೂ ಇಲ್ಲ. ಇಷ್ಟಕ್ಕೂ ಮೋದಿ ಕೋಮುವಾದಿಯಾದರೆ ಹಾಗೂ ಮುಸ್ಲಿಂರಿಗೆ ತೊಂದರೆ ಮಾಡಿದ್ದರೆ ಮುಸಲ್ಮಾನರಿಗಾಗಿಯೇ ಇರುವ ಪಾಪಿ ಪಾಕಿಸ್ತಾನಕ್ಕೆ ಹೋಗಲಿ. ಅವರನ್ನು ಹಿಂದೂಸ್ತಾನದಲ್ಲಿ ಇರು ಅಂತ ಯಾರೂ ಇಲ್ಲಿ ಬೇಡಿಕೊಂಡಿಲ್ಲ. ಭಾರತದ ಅನ್ನ ಗಾಳಿ ನೀರು ಸೇವಿಸಿ ಭಾರತಕ್ಕ ಕೇಡು ಬಗೆಯುತ್ತಿರುವ ಇಂತಹ ಲಜ್ಜೆಗೆಟ್ಟ ಮಡಿವಂತರಿಗೆ ಆದಷ್ಟು ಬೇಗ ದೇವರು ಒಂದು ಗತಿ ಗಾಣಿಸಲಿ.
  ಪ್ರತಾಪ್ ಸಿಂಹರಿಗೆ ನನ್ನಂತಹ ಸಹಸ್ರಾರು ಹಿಂದುಗಳ ಬೆಂಬಲವಿದ್ದೆ ಇರುತ್ತದೆ. ಪ್ರತಾಪ್ ಸಿಂಹ ಬರೆಯುವ ಅಂಕಣಗಳು ಸತ್ಯ ಹಾಗೂ ಎಂದಿಗೂ ಅಮರ. ಅವರು ಚಿರಾಯುವಾಗಿರಲಿ.
  ಜೈ ಹಿಂದ್.

 35. Arun Gowda says:

  Murthy avarige dayavaittu Jnaanapeeta Vijetha anta karibedi,,, Yaakandre avaru Jnaanapeetana vijayiyagi galsilla…. Adu rajakiya preritavagi avarige bandirodu…

 36. Akshay says:

  Ananthamurthy obba ‘Samskara’ illada manushya … E deshakke ‘NaMo’ antha nayaka beku … Brasta ‘congress’annu samarthisikondu maathaduva murthy avarige cheap publicity bekagide… adakke avaru yaava ‘vama marga’ bekadaru hidiyutthare.
  Nice article pratap …

 37. Rudresh says:

  mr. ananthmurthy ready pack ur things. I allready book the tickets to italy for u and Sonia. mr.murthi its my sincer requist to u dont again come back india