Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಮತಾಂಧರಿಗೆ ತಲೆ ಬಾಗಿಸುವುದರಲ್ಲೇ ನಿಜವಾದ ಸಾವು ಅಡಗಿದೆ!

ಮತಾಂಧರಿಗೆ ತಲೆ ಬಾಗಿಸುವುದರಲ್ಲೇ ನಿಜವಾದ ಸಾವು ಅಡಗಿದೆ!

ಸ್ವಗತ ಎಂದೆನಿಸಿದರೂ ಅಡ್ಡಿಯಿಲ್ಲ, ಸ್ವಂತ ಅನುಭವ ಹೇಳಿಕೊಂಡೇ ಈ ವಾರದ ಅಂಕಣ ಎದುರಿಗಿಡುತ್ತಿದ್ದೇನೆ. ಬಂಧಿತ ಉಗ್ರರ ಗುರಿಗಳ ಪೈಕಿ ನಾನೂ ಪ್ರಮುಖನಾಗಿದ್ದೆ ಎಂಬ ಸುದ್ದಿ ಬಿತ್ತರವಾಗುತ್ತಲೇ, ಫೋನ್ ಮಾಡಿ ಕಾಳಜಿ- ಒತ್ತಾಸೆಗಳನ್ನು ನೀಡಿದವರ ಸಂಖ್ಯೆ ದೊಡ್ಡದು. ಇಂಥದೊಂದು ವಿದ್ಯಮಾನ ಹುಟ್ಟುಹಾಕುವ ಸಹಜ ತಳಮಳಗಳು, ಕೌಟುಂಬಿಕ ಹಂತದಲ್ಲಿ ಉಂಟಾಗುವ ಆತಂಕ ಇವುಗಳ ಹೊರತಾಗಿ ‘ನಡುಗು’ ಅನ್ನುವಂಥ ಅಧೀರತೆಯೇನೂ ನನ್ನನ್ನು ಕಾಡುತ್ತಿಲ್ಲ. ‘ಸಾರಿ, ಐ ಹ್ಯಾವ್ ದ ಆರ್ಡರ್ಸ್. ನಾನು ನಿನ್ನನ್ನು ಕೊಲ್ಲಲೇಬೇಕು’ ಎಂದು ಗಾಯಗೊಂಡ ಚೆಗೆವೆರಾ ಎದುರು ಬೊಲಿವಿಯನ್ ಸೇನಾ ಅಧಿಕಾರಿ ಪಿಸ್ತೂಲು ಹಿಡಿದು ನಿಂತ ಸಂದರ್ಭದಲ್ಲಿ ಆತ ಹೇಳಿದ್ದ ಮಾತು-I know you are here to kill me. Shoot, coward, you are only going to kill a man, ಏ ಹೇಡಿ. ಗುಂಡು ಹೊಡಿ. ನೀನು ಸಾಯಿಸುವುದು ವ್ಯಕ್ತಿಯನ್ನೇ ಹೊರತು ವಿಚಾರವನ್ನಲ್ಲ’! ಹಾಗಂತ ಆತನೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಿಲ್ಲ.

ಆದರೆ…

ಅವನ ಮಾತುಗಳ ಅಂತಃಸತ್ವ ನಮ್ಮೆಲ್ಲರನ್ನೂ ಪ್ರಚೋದಿಸಬೇಕು. ಮೂಲಭೂತವಾದಿಗಳಿಗೆ ಹೆದರಿ ವಿಚಾರ ಬದಲಿಸಿಕೊಳ್ಳುವುದರಲ್ಲಿ, ಅಂಥ ಮತಾಂಧರಿಗೆ ತಲೆ ಬಗ್ಗಿಸುವುದರಲ್ಲೇ ನಿಜವಾದ ಸಾವು ಅಡಗಿದೆ.

ಅದಿರಲಿ, ಪೊಲೀಸರ ಎದುರಿಗೆ ಕುಳಿತಾಗ ನಿನ್ನೆಯ ಬಂಧನ ಘಟನೆಗೂ ಮೊದಲಿನ ಅನೇಕ ಸಂಗತಿಗಳು ತಿಳಿದುಬಂದವು. ಇನ್ನೊಂದೆಡೆ, ನಮ್ಮ ಸಂಪಾದಕರೂ ಸೇರಿದಂತೆ ಕರ್ನಾಟಕದ ಪ್ರಮುಖ ವ್ಯಕ್ತಿಗಳನ್ನೇ ಗುರಿಯಾಗಿಸಿಕೊಂಡಿದ್ದ ಈ ಯೋಜನೆಯ ರೂಪುರೇಷೆ ಸಾರ್ವತ್ರಿಕವಾಗಿ ಹೊಸ ಬಗೆಯ ಥ್ರೆಟ್ ಒಂದನ್ನು ಪರಿಚಯಿಸಿದೆ. ಈ ಮೊದಲು ಉಗ್ರ ಕೃತ್ಯವೆಂದರೆ ಪಾಕಿಸ್ತಾನದಿಂದ ಬಂದವರು ದಾಳಿ ಮಾಡುವುದು ಎಂದಾಗಿತ್ತು. ಕೊನೆಗೆ ಅದು ಸ್ಥಳೀಯ ಇಸ್ಲಾಂ ತೀವ್ರವಾದಿಗಳ ತಾಂತ್ರಿಕ ಬೆಂಬಲ ಪಡೆದುಕೊಂಡು ಇಲ್ಲಿ ಸೃಷ್ಟಿಸುವ ವಿಧ್ವಂಸಕ ಕೃತ್ಯಗಳಾಗಿ ಮಾರ್ಪಾಟಾಯಿತು. ಅವೆಲ್ಲ ಜನ ಸಾಂದ್ರತೆಯ ಸ್ಥಳದಲ್ಲಿ ಬಾಂಬ್ ಇರಿಸಿ ಅತಿಹೆಚ್ಚು ಸಾವು-ನೋವಿಗೆ ಕಾರಣವಾಗುವುದು, ಸರ್ಕಾರದ ಪ್ರಮುಖ ಹುದ್ದೆಗಳಲ್ಲಿರುವವರನ್ನು ಗುರಿಯಾಗಿಸಿಕೊಳ್ಳುವುದು ಇಂಥ ಮಾರ್ಗ ಅನುಸರಿಸುತ್ತಿದ್ದವು. ಆದರೆ ಈಗ ಅಂಥ ಸಂಘಟನೆಗಳ ಪರವಾಗಿ ಒಟ್ಟಾರೆ ಯೋಜನೆ ರೂಪಿಸುವ ಹೊಣೆಯನ್ನು ಸ್ಥಳೀಯರೇ ವಹಿಸಿಕೊಂಡಿರುವುದು ಸ್ಪಷ್ಟವಾಗುತ್ತಿದೆ. ನೀವು ಒಂದು ಕ್ಷಣ ಯೋಚಿಸಿ. ಇಂಥದೇ ಸ್ಥಳೀಯ ಘಟಕಗಳು ಪ್ರತಿ ರಾಜ್ಯದಲ್ಲೂ ತಲೆ ಎತ್ತಿ (ಈಗಲೇ ಒಂದು ಹಂತದಲ್ಲಿ ಅಂತ ಸಿದ್ಧತೆಯಾಗಿರುವ ಲಕ್ಷಣಗಳಿವೆ), ಅಲ್ಲಿನ ಸ್ಥಳೀಯ ಗಣ್ಯರು, ಅಭಿಪ್ರಾಯ ನಿರೂಪಕರು, ಮತಾಂಧತೆಯನ್ನು ವಿರೋಧಿಸುತ್ತಿರುವವರು ಇಂಥವರ ಹಿಟ್್ಲಿಸ್ಟ್ ತಯಾರಿಸಿ ಕೊಲ್ಲುವುದರಲ್ಲಿ ಸಕ್ಸಸ್ ಆದದ್ದೇ ಹೌದಾದರೆ, ಎಷ್ಟೇ ಸೇನಾಬಲದಿಂದಲೂ ಜಯಿಸಲು ಕಷ್ಟವೆನಿಸುವ ಭಾರತವನ್ನು ಇಸ್ಲಾಂ ಮೂಲಭೂತವಾದಿಗಳು, ಪಾಕಿಸ್ತಾನಿಗಳು ಸುಲಭಕ್ಕೆ ಒಳಗಿನಿಂದಲೇ ವಶಪಡಿಸಿಕೊಂಡುಬಿಡಬಹುದಲ್ಲವೇ? ಮಾಥಿಉರ್ ರೆಹಮಾನ್್ನಂಥವರು ಸೃಷ್ಟಿಸುವ ‘ಲೋಕಲ್ ಮಾಡ್ಯೂಲ್್’ನ ಅಸಲಿಯತ್ತು ಇದೇ ಎಂದು ನಿಮಗನಿಸುವುದಿಲ್ಲವೇ? ಹೌದು ಎಂದಾದರೆ ಅಂಥ ಆಕ್ರಮಣವನ್ನು ತಡೆಯುವುದಕ್ಕೆ ದೇಶವೂ ಗ್ರಾಸ್್ರೂಟ್್ನಿಂದಲೇ ಸಿದ್ಧವಾಗಬೇಕಾಗುತ್ತದೆ. ಪೊಲೀಸ್ ಪಡೆಗೆ ಬಲ ತುಂಬಬೇಕಾದ ತುರ್ತು ಅಗತ್ಯ ಕಾಣಿಸಿಕೊಳ್ಳುವುದು ಇಲ್ಲೇ! ‘ಮೂರು ತಿಂಗಳುಗಳಿಂದ ನಿಮಗರಿವಿಲ್ಲದೇ ನಿಮ್ಮನ್ನು ಹಿಂಬಾಲಿಸುತ್ತಿದ್ದೆವು’ ಎಂಬ ಆಶ್ಚರ್ಯದ ಸಂಗತಿಯನ್ನು ನನ್ನೆದುರು ಇಟ್ಟ ಪೊಲೀಸರು ನಾನು ಇತ್ತೀಚೆಗೆ ಎಲ್ಲೆಲ್ಲಿ ಹೋಗಿದ್ದೆ, ನನ್ನ ದಿನಚರಿ ಏನು, ಯಾವ ದಿನ ಏನು ಮಾಡಿದೆ ಎಂಬುದನ್ನೆಲ್ಲ ನಿಖರವಾಗಿ ಹೇಳಿದಾಗ ನಿಬ್ಬೆರಗಾಗಿಹೋದೆ! ‘ಕೆಲದಿನಗಳ ಹಿಂದೆ ನಿಮ್ಮ ಮನೆಯೆದುರು ಇಬ್ಬರು ಯುವಕರು ಪಲ್ಸರ್ ಬೈಕ್್ನಲ್ಲಿ ನಿಂತಿದ್ದರು. ಕೆಲ ನಿಮಿಷಗಳಲ್ಲೇ ಅಲ್ಲಿಗೆ ಬಂದ ಪೊಲೀಸ್ ವ್ಯಾನ್ ಅವರನ್ನು ವಾಹನದ ಸಮೇತ ಸದ್ದಿಲ್ಲದೇ ಎತ್ತಿಕೊಂಡು ಹೋಗಿತ್ತು. ಹಾಗೇಕಾಯಿತು ಎಂಬುದು ನನಗೆ ಶುಕ್ರವಾರದ ನ್ಯೂಸ್ ನೋಡಿದಾಗಲೇ ಅರ್ಥವಾಗಿ ಶಾಕ್ ಆಯ್ತು’ ಅಂತ ನನ್ನ ಪರಿಚಯದ ಅಂಗಡಿಯವರು ವಿವರಿಸಿದರು!

ನಾನು ಮಾತ್ರವಲ್ಲ, ಟಾರ್ಗೆಟ್ ಆಗಿದ್ದ ಎಲ್ಲ ಗಣ್ಯರ ಬಗ್ಗೆಯೂ ಪೊಲೀಸರು ಇಷ್ಟೇ ಆಸಕ್ತಿ ವಹಿಸಿದ್ದಾರೆ. ಅವಘಡವೊಂದನ್ನು ತಪ್ಪಿಸಿದ್ದಾರೆ. ಅವರ ಕರ್ತವ್ಯ ಪ್ರಜ್ಞೆಯನ್ನು ಕೃತಜ್ಞತೆಯಿಂದ ನೆನೆಯುತ್ತಲೇ ಇಂಥ ಪೊಲೀಸ್ ಪಡೆಗೆ ಒತ್ತಾಸೆಯಾಗಬಲ್ಲ ‘ಪೊಲೀಸ್ ರಿಫಾರ್ಮ್್’ ಬಗ್ಗೆ, ಬ್ರಿಟಿಷರ ಕಾಲದ ಬಂದೂಕುಗಳಿಂದಲೇ ಭಯೋತ್ಪಾದಕರ ಎಕೆ-47ಗಳಿಗೆ ಮಾರುತ್ತರ ನೀಡಿದ ಪಂಜಾಬ್ ಪೊಲೀಸ್ ಪಡೆಯ ಶೌರ್ಯದ ಬಗ್ಗೆ  ಈಗ ಮತ್ತೆ ಹೇಳಬೇಕೆನಿಸಿದೆ.

Bullet for bullet ಎನ್ನುತ್ತಿದ್ದ ಡಿ.ಜಿ.ಪಿ. ಜೂಲಿಯಸ್ ರೆಬೆರೋ ಅವರೇ ಅಸಹಾಯಕತೆಯಿಂದ ಕೈಚೆಲ್ಲುವಂತಾಗಿತ್ತು. ಇನ್ನೇನು ಪಂಜಾಬ್ ಸಿಡಿದು ಸ್ವತಂತ್ರಗೊಳ್ಳುತ್ತದೇನೋ ಎಂಬಂತಹ ವಾತಾವರಣ ಸೃಷ್ಟಿಯಾಗಿತ್ತು. ಇಡೀ ರಾಜ್ಯವೇ ಕದಡಿತ್ತು. ಇತ್ತ ಅಜಿತ್ ಸಿಂಗ್ ಸಂಧು, ಸೀನಿಯರ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆಗಿ ಪಂಜಾಬ್್ನ ತರನ್ ತಾರನ್ ಜಿಲ್ಲೆಗೆ ಕಾಲಿಟ್ಟಾಗ, ಸಾಮಾನ್ಯ ಜನರಿಗಿಂತ ಭಯೋತ್ಪಾದಕರೇ ಹೆಚ್ಚಿದ್ದರು. ಏಕೆಂದರೆ ಅದು ಖಾಲಿಸ್ತಾನಿ ಪ್ರತ್ಯೇಕತಾವಾದಿಗಳ ರಾಜಧಾನಿಯೆನಿಸಿತ್ತು. ತರನ್ ತಾರನ್್ಗೆ ಕಾಲಿಡುವುದೆಂದರೆ ಸಾವಿಗೆ ಆಹ್ವಾನ ನೀಡಿದಂತೆಯೇ ಎಂಬಂತಿತ್ತು. ಜತೆಗೆ ಸ್ವತಃ ಸಿಖ್ ಪಂಥಕ್ಕೆ ಸೇರಿದ್ದರೂ ಸಂಧು, ಸಿಖ್ಖರ ವಿರುದ್ಧವೇ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಸಾಲದೆಂಬಂತೆ ಭಯೋತ್ಪಾದಕರ ಎ.ಕೆ. 47 ರೈಫಲ್್ಗಳೆದುರು ಬ್ರಿಟಿಷರ ಕಾಲದ ಬಂದೂಕು ಹಿಡಿದಿದ್ದ ಪೊಲೀಸರ ಆತ್ಮಸ್ಥೈರ್ಯವೇ ಸತ್ತುಹೋಗಿತ್ತು. ಆದರೂ ಸಂಧು ಧೃತಿಗೆಡಲಿಲ್ಲ. ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುವ ಮೊದಲು ಪೊಲೀಸರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಿದರು.

ಆನಂತರ ಪ್ರಾರಂಭವಾಗಿದ್ದೇ…

ಆಪರೇಷನ್ ವುಡ್್ರೋಸ್,

ಆಪರೇಷನ್ ಲಿಲ್ಲಿವೈಟ್,

ಆಪರೇಷನ್ ಫ್ಲಶೌಟ್!

1984ರಿಂದ 94ರವರೆಗೂ ನಡೆದ ಈ ಕಾರ್ಯಾಚರಣೆಗಳ ಮೂಲಕ ಪ್ರತ್ಯೇಕತಾವಾದವನ್ನು ಬೇರು ಸಮೇತ ಕಿತ್ತೊಗೆಯಲಾಯಿತು. ಭಿಂದ್ರನ್್ವಾಲೆಯ ಟೈಗರ್ ಫೋರ್ಸನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲಾಯಿತು. ಒಟ್ಟು 13 ವರ್ಷಗಳ ಕಾಲ ನಡೆದ ಸಂಘರ್ಷದ ನಂತರ ಪಂಜಾಬ್್ನಲ್ಲಿ ಶಾಂತಿಯೇನೋ ಸ್ಥಾಪನೆಯಾಯಿತು. ಆದರೆ ಅಂದು ಜೀವ ಒತ್ತೆಯಿಟ್ಟು ಪ್ರಾಣದ ಹಂಗುತೊರೆದು ಹೋರಾಡಿದ ಪೊಲೀಸರಿಗೆ ಈ ದೇಶ ಕೃತಜ್ಞತೆ ಅರ್ಪಿಸುವ ಬದಲು ಕೋರ್ಟಿಗೆಳೆಯಿತು!

ಅಜಿತ್ ಸಿಂಗ್ ಸಂಧು ವಿರುದ್ಧ 43 ಕೊಲೆ ಮತ್ತು ಮಾನವಹಕ್ಕು ಉಲ್ಲಂಘನೆ ಆರೋಪಗಳನ್ನು ಹೊರಿಸಲಾಯಿತು. ಮೊಕದ್ದಮೆ ಹೂಡಿ ನ್ಯಾಯಾಲಯಕ್ಕೆಳೆಯಲಾಯಿತು. ಭಿಂದ್ರನ್್ವಾಲೆಯ ರಕ್ಕಸೀ ಕೃತ್ಯವನ್ನು ಮೌನವಾಗಿ ವೀಕ್ಷಿಸುತ್ತಿದ್ದ ಮಾನವಹಕ್ಕು ಆಯೋಗ, ಸಂಧು ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿತು. ದುರದೃಷ್ಟವಶಾತ್, 1996ರಲ್ಲಿ ಸಂಧು ಅವರನ್ನು ಕೆಲಸದಿಂದ ಕಿತ್ತೊಗೆದು ಜೈಲಿಗೆ ತಳ್ಳಲಾಯಿತು! ಕಟ್ಟಾ ಭಯೋತ್ಪಾದಕ ನಿಶಾನ್ ಸಿಂಗ್ ಕಲನೂರ್ ಅದೇ ಜೈಲಿನಲ್ಲಿದ್ದ. ಪಂಜಾಬ್ ಪ್ರತ್ಯೇಕಗೊಳ್ಳುವ ಅಪಾಯ ಎದುರಾಗಿದ್ದಾಗ ಎಂತಹ ಕಠಿಣಕ್ರಮವನ್ನಾದರೂ ತೆಗೆದುಕೊಂಡು ಪರಿಸ್ಥಿತಿಯನ್ನು ಹತೋಟಿಗೆ ತನ್ನಿ ಎಂದಿದ್ದ ಸರಕಾರ, ಜೈಲಿನಲ್ಲಿ ಸಂಧು ಮೇಲೆ ಆಕ್ರಮಣ ಮಾಡಲು ನಿಶಾನ್ ಸಿಂಗ್್ಗೆ ಅವಕಾಶ ಮಾಡಿಕೊಟ್ಟಿತು! ಎಲ್ಲರೂ ಎಣಿಸಿದಂತೆಯೇ ಸಂಧು ಮೇಲೆ ಹಲ್ಲೆ ನಡೆಯಿತು. ಹೇಗೋ ಒಂದು ವರ್ಷ ಜೈಲುವಾಸ ಅನುಭವಿಸಿದ ಸಂಧು, 1997ರಲ್ಲಿ ಬಿಡುಗಡೆಯಾದರು. ಆದರೆ ನ್ಯಾಯಾ’ಲಯ’ಕ್ಕೆ ಅಲೆಯುವುದು ತಪ್ಪಲಿಲ್ಲ.

ಈ ಮಧ್ಯೆ, ಸಂಧು ಅವರಿಗೆ ನೀಡಿದ್ದ ಜಾಮೀನನ್ನು ವಜಾ ಮಾಡಬೇಕು ಎಂದು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬಂತು. ಆದರೆ ಜಾಮೀನು ವಜಾಗೊಂಡು ಮತ್ತೆ ಜೈಲು ಸೇರಬೇಕಾಗುತ್ತದೆಂಬ ಬಗ್ಗೆ ಸಂಧು ಮನದಲ್ಲಿ ಯಾವ ಸಂಶಯವೂ ಇರಲಿಲ್ಲ. ಅವತ್ತು 1997, ಮೇ 13. ಸಂಧು ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ. ಕಟಕಟೆಯಲ್ಲಿ ನಿಲ್ಲಲಿಲ್ಲ. “ಕಳಂಕಿತ ಬದುಕಿಗಿಂತ ಸಾವೇ ಮೇಲು” ಎಂದು ಬರೆದಿಟ್ಟು, “ಹಿಮಾಲಯನ್ ಕ್ವೀನ್ ಎಕ್ಸ್್ಪ್ರೆಸ್್” ರೈಲಿಗೆ ತಲೆಕೊಟ್ಟರು! ಆತ್ಮಹತ್ಯೆ ಮಾಡಿಕೊಂಡರು!!  ಟ್ರಕ್್ಗಳಲ್ಲಿ ಹಣ, ಆರ್್ಡಿಎಕ್ಸ್, ಎಕೆ-47 ರೈಫಲ್್ಗಳನ್ನು ತುಂಬಿ ಕಳುಹಿಸಿದರೂ ಕೈಗೂಡದ ಪಾಕಿಸ್ತಾನದ ಐಎಸ್್ಐ ಕನಸನ್ನು ಮಾನವ ಹಕ್ಕುಗಳ ಹೆಸರಲ್ಲಿ ಭಾರತೀಯರೇ ಸಾಕಾರಗೊಳಿಸಿದರು!

ನಾವೆಂತಹ ಕೃತಘ್ನರು ಅಲ್ಲವೇ?

Bolting the stable after the horse has left! ಅಂದರೆ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಅಂತ ಪೊಲೀಸರನ್ನು ಮೂದಲಿಸುವುದನ್ನು, ಕುಹಕವಾಡುವುದನ್ನು ನಾವೆಂದೂ ಮರೆಯುವುದಿಲ್ಲ. ಆದರೆ ಕೊಳ್ಳೆಹೊಡೆಯುವ ಮೊದಲೇ ಕ್ರಮಕೈಗೊಂಡರೆ ಮಾನವ ಹಕ್ಕು ಉಲ್ಲಂಘನೆ, ಕಾನೂನು ದುರುಪಯೋಗ, ದೌರ್ಜನ್ಯವೆನ್ನುತ್ತಾ ಬಾಯಿಬಡಿದುಕೊಳ್ಳುತ್ತೇವೆ. ಹಾಗಾಗಿಯೇ ಒಮ್ಮೊಮ್ಮೆ ನಡೆಯುವ ಲಾಕಪ್ ಡೆತ್್ಗಳನ್ನು, ಎನ್್ಕೌಂಟರ್್ಗಳನ್ನು ಮುಂದಿಟ್ಟುಕೊಂಡು ಸಂಪಾದಕೀಯ ಬರೆಯುವ ನಮ್ಮ ಮಾಧ್ಯಮಗಳು ಪೊಲೀಸ್ ವ್ಯವಸ್ಥೆಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತವೆ. ಆದರೆ 2001ರಲ್ಲಿ ಒಂದೇ ವರ್ಷ ಒಟ್ಟು 828 ಪೊಲೀಸರು ನಕ್ಸಲರು ಹಾಗೂ ಇತರ ಆಂತರಿಕ ದೊಂಬಿ ನಿಯಂತ್ರಣ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡರು! ಅಂದರೆ ಪ್ರತಿವರ್ಷ ಎಷ್ಟು ಪೊಲೀಸರು ಹತ್ಯೆಯಾಗುತ್ತಾರೆ ಎಂಬುದನ್ನು ಊಹಿಸಿಕೊಳ್ಳಿ? ಅವರ ಬಗ್ಗೆ ಮಾಧ್ಯಮಗಳಾಗಲಿ, ಸಮಾಜವಾಗಲಿ ಏಕೆ ಎಂದೂ ಯೋಚಿಸುವುದಿಲ್ಲ? ಮತ್ತು ಅವರನ್ನೇ ನಂಬಿಕೊಂಡಿರುವ ಹೆಂಡತಿ-ಮಕ್ಕಳ ಗತಿಯೇನು? ಅಪ್ಪ-ಅಮ್ಮಂದಿರಿಗೆ ಆಸರೆ ಯಾರು? ಗಡಿ ಕಾಯುವ ಸೈನಿಕ ಮೃತನಾದರೆ ಆತನಿಗೆ ಹುತಾತ್ಮ ಪಟ್ಟ, ದೇಶಕ್ಕಾಗಿ ಮಡಿದನೆಂಬ ಗೌರವದ ನೆನಕೆಯಾದರೂ ಸಿಗುತ್ತದೆ. ಒಬ್ಬ ಮಾಜಿ ಸಚಿವ ಅಥವಾ ಭ್ರಷ್ಟ ರಾಜಕಾರಣಿ ಸತ್ತರೂ ದೇಶಸೇವೆ ಮಾಡಿದರು, ಜನಸೇವೆಯೇ ಜನಾರ್ದನನ ಸೇವೆ ಎಂದು ನಂಬಿದ್ದರು ಎಂದು ಪುಟಗಟ್ಟಲೆ ಬರೆಯುತ್ತೇವೆ. ಹಾಲಿ ಸಚಿವರು ಹೂಗುಚ್ಛ ಇಟ್ಟು ಕಂಬನಿ ಮಿಡಿದು ಹೋಗುತ್ತಾರೆ. ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡುತ್ತೇವೆ. ಆದರೆ ಮಳೆ, ಚಳಿಯೆನ್ನದೆ ಮಣಭಾರದ ಬಂದೂಕು ಹೊತ್ತು ಹಗಲೂ ರಾತ್ರಿ ಗಸ್ತು ತಿರುಗುವ ‘ಬೀಟ್ ಪೊಲೀಸರು ನಮಗೆ ಜೋಕರ್್ಗಳಂತೆ, ಭ್ರಷ್ಟಾಚಾರದ ಪ್ರತಿರೂಪದಂತೆ ಕಾಣುತ್ತಾರೆ. ಏಕೆಂದರೆ ನಮಗೆ ಮನೆಯ ಬೀಗ ಮತ್ತು ಅಗುಳಿಯ ಮೇಲೆಯೇ ಹೆಚ್ಚು ವಿಶ್ವಾಸ. ಆದರೆ ಪೊಲೀಸರ ಹೆದರಿಕೆಯಿಂದಾಗಿ ಕಾನೂನು ಪಾಲನೆಯಾಗುತ್ತಿದೆ, ಸುವ್ಯವಸ್ಥೆ ನೆಲೆಗೊಂಡಿದೆ ಎಂಬ ಕನಿಷ್ಠ ಜ್ಞಾನವೂ ನಮಗಿರುವುದಿಲ್ಲ. ಪೊಲೀಸರನ್ನು ನಾವೆಷ್ಟೇ ತೆಗಳಬಹುದು. ಅವರು ಎಸಗುವ ದೌರ್ಜನ್ಯದ ಬಗ್ಗೆ ಹುಯಿಲೆಬ್ಬಿಸಬಹುದು. ಆದರೆ ನಮ್ಮಷ್ಟೂ ಸ್ವಾತಂತ್ರ್ಯ ಪೊಲೀಸರಿಗಿಲ್ಲ. ಏಕೆಂದರೆ ಸ್ವಾತಂತ್ರ್ಯ ಬಂದು 65 ವರ್ಷಗಳಾದರೂ ಇಂದಿಗೂ ಬ್ರಿಟಿಷರ ಕಾಲದ “ಕಲೋನಿಯಲ್ ಸಿಸ್ಟಮ್್” ನಮ್ಮಲ್ಲಿದೆ. ಅಂದರೆ ಆಳುವವರ ಕೈಲಿ ಪೊಲೀಸರ ಲಂಗು-ಲಗಾಮಿದೆ. ರೂಲರ್ಸ್ ಹೇಳಿದಂತೆ ಕೇಳಬೇಕು. ಭದ್ರತೆಗೆಂದು ಹಾಕಿದಾಗ ಬೆಳಗಿನಿಂದ ಸಂಜೆಯವರೆಗೂ ಬಿಸಿಲಿನಲ್ಲಿ ಬೇಯುತ್ತಾರೆ. ಆದರೂ ಗಲಾಟೆ, ದೊಂಬಿಯಾದರೆ, ಆಸ್ತಿ-ಪಾಸ್ತಿಗೆ ಹಾನಿಯುಂಟಾದರೆ, ವಾಹನಗಳು ಜಖಂಗೊಂಡರೆ ದೂರುವುದು ಪೊಲೀಸರನ್ನೇ. ನಮ್ಮ ವ್ಯವಸ್ಥೆ ಅವರಿಗೆ ”Functional Autonomy” “ಕೊಟ್ಟಿಲ್ಲ ಎಂಬುದು ಎಷ್ಟು ಜನರಿಗೆ ಗೊತ್ತು?

“ರಾಜ್ಯದಲ್ಲಿ ಪೊಲೀಸ್ ಇಲಾಖೆ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಹಗಲೂ-ರಾತ್ರಿಯೆನ್ನದೆ ಕರ್ತವ್ಯ ನಿರ್ವಹಿಸುವ ಅವರಿಗೆ ಸರ್ಕಾರದ ಬೆಂಬಲವಿಲ್ಲ. ಅವರು ಪಡುವ ಕಷ್ಟಗಳು ನೆನಪಾದಾಗ ಕಣ್ಣೀರು ಬರುತ್ತದೆ” ಎನ್ನುತ್ತಲೇ ಪತ್ರಿಕಾಗೋಷ್ಠಿಯಲ್ಲಿ ಗದ್ಗದಿತರಾದ ವಿಜಯವಾಣಿ ಮಾಲೀಕರಾದ ಸಂಕೇಶ್ವರರ ಮಾತುಗಳು ನಿಜಕ್ಕೂ ಮನಕಲಕಿದವು.

ಅದಿರಲಿ, ನಮ್ಮ ದೇಶದಲ್ಲಿ ಆಂತರಿಕವಾಗಿ ಎಂತಹ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ, ನಮ್ಮ ಪೊಲೀಸರು ಎಂತಹ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ ಅಂದುಕೊಂಡಿರಿ? ಪಾಕಿಸ್ತಾನ, ಬಾಂಗ್ಲಾ, ಚೀನಾದಂಥ ಬಾಹ್ಯ ಶಕ್ತಿಗಳು ಎರಗಿಬಿದ್ದರೂ ಹಿಮ್ಮೆಟ್ಟಿಸಬಹುದು. ಆದರೆ ದೇಶವಾಸಿಗಳೇ ದೇಶನಾಶಕ್ಕೆ ನಿಂತಾಗ ಯಾರೇನು ಮಾಡಲು ಸಾಧ್ಯ? “”A nation can survive its fools, and even the ambitious. But it cannot survive treason from within.” ” ಎಂದಿದ್ದ ಮಾರ್ಕಸ್ ಟುಲಿಯಸ್ ಸಿಸೆರೋ. ಅಂದರೆ ಯಾವುದೇ ದೇಶ ತನ್ನೊಳಗಿನ ವೈರುದ್ಧ್ಯಗಳಿಂದ ತುಂಡಾಗುವುದಿಲ್ಲ. ಮೂರ್ಖರು, ಚೋರರು, ಮಹತ್ವಾಕಾಂಕ್ಷಿಗಳ ಉಪದ್ರವ, ಉಪದ್ವ್ಯಾಪ ದೇಶವೆಂಬ ಸೌಧದ ಬುಡ ಅಲ್ಲಾಡಿಸುವುದಿಲ್ಲ. ಆದರೆ, ಒಂದು ದೇಶದ ಅಡಿಪಾಯ ಶಿಥಿಲವಾಗುವುದು ಅಲ್ಲಿನ ಜನಜೀವನದಲ್ಲಿ ಕಲೆತು-ಬೆರೆತಿರುವ ಛದ್ಮವೇಶದ ಶತ್ರುಗಳಿಂದ. ಗಡಿಯಾಚೆಗಿನ ಶತ್ರು ಕಣ್ಣಿಗೆ ಕಾಣುತ್ತಾನೆ. ಆತನ ಚಹರೆ ಗುರುತುಹಿಡಿಯಬಹುದು. ಆದರೆ, ದೇಶದೊಳಗಿರುವ ಶತ್ರುಗಳನ್ನು ಗುರುತಿಸುವುದೇ ಕಷ್ಟ. ಅವರು ನಮ್ಮ-ನಿಮ್ಮ ನಡುವೆ ಇರುತ್ತಾರೆ. ನಮ್ಮಂತೆಯೇ ಇರುತ್ತಾರೆ. ನಮ್ಮ ಮುಖವಾಗಿರುತ್ತಾರೆ, ನಮ್ಮದೇ ಮಾತಾಡುತ್ತಾರೆ. ಆದರೆ ಹಾವ-ಭಾವದಲ್ಲಿ ಬೆಸೆಯುವ ಇವರು ಜೀವ ಜೀವದಲ್ಲಿ ಸೇರಲಾರರು. ಊರೆಲ್ಲ ಮಲಗಿದಾಗ ಇವರು ಏಳುತ್ತಾರೆ. ಕತ್ತಲಲ್ಲಿ ಇವರ ನಿಜಮುಖ ಅನಾವರಣಗೊಳ್ಳುತ್ತದೆ. ತಿಳಿದೊ, ತಿಳಿಯದೆಯೋ ತಮಗೂ ಆಶ್ರಯ ನೀಡಿರುವ ಮನೆಯ ಅಡಿಪಾಯದ ಒಂದೊಂದೇ ಕಲ್ಲುಗಳನ್ನು ಅಲ್ಲಾಡಿಸುತ್ತಾರೆ. ಇಡೀ ವ್ಯವಸ್ಥೆಯನ್ನು ರೋಗಗ್ರಸ್ತಗೊಳಿಸುತ್ತಾರೆ. ಕೊನೆಗೆ ದೇಶ ಒಡೆಯುತ್ತಾರೆ. ಒಬ್ಬ ಕೊಲೆಗಾರನನ್ನು ಸಹಿಸಬಹುದು. ಆತನ ಕೃತ್ಯಕ್ಕೆ ಒಂದು ಕಾರಣವಿರುತ್ತದೆ. ಆದರೆ ಒಬ್ಬ ದೇಶದ್ರೋಹಿ, ಊಹೂಂ, ಆತ ಪ್ಲೇಗ್ ಇದ್ದಂತೆ. ಇಡೀ ಸಮುದಾಯವನ್ನೇ ನಾಶ ಮಾಡುತ್ತಾನೆ ಎಂದು ರೋಮನ್ ತತ್ವಜ್ಞಾನಿ, ದಾರ್ಶನಿಕ ಸಿಸೆರೋ ಕ್ರಿ.ಪೂ.ದಲ್ಲೇ ಹೇಳಿದ್ದ. ಇವತ್ತು ನಮ್ಮ ದೇಶದಲ್ಲಿ ನಿರ್ಮಾಣವಾಗುತ್ತಿರುವುದು ಅಂತಹ ದುರದೃಷ್ಟಕರ ಪರಿಸ್ಥಿತಿಯೇ. 11 ಜನರ ಬಂಧನದ ಬಗ್ಗೆ ಹೇಳುತ್ತಾ, ಇವರೆಲ್ಲ Home grown ಅಥವಾ ಸ್ಥಳೀಯರೇ ಎಂಬ ಇಂಟೆಲಿಜೆನ್ಸ್ ಐಜಿ ಗೋಪಾಲ್ ಹೊಸೂರರ ಮಾತು ಪರಿಸ್ಥಿತಿಗೆ ಹಿಡಿದ ಕನ್ನಡಿ. ಪೊಲೀಸರ ಕ್ಷಮತೆಗೆ ನಮ್ಮ ನಾಗರಿಕ ಪ್ರಜ್ಞೆಯೂ ಜತೆಗೂಡಬೇಕು. ಅಕ್ಕಪಕ್ಕದವರ ಬಗ್ಗೆ, ಮನೆಬಾಡಿಗೆಗಿರುವವರ ಪೂರ್ವಾಪರ, ನಡತೆಗಳನ್ನು ತಿಳಿದುಕೊಳ್ಳುವುದಕ್ಕೆ ಮುಜುಗರ ಬೇಡ. ಹಣ, ಖಾಸಗಿ ಬದುಕುಗಳ ನಡುವೆ ಸಾರ್ವಜನಿಕವಾಗಿ ಇಂಥ ಮತಾಂಧ ಮನಸ್ಥಿತಿಗಳನ್ನು ಖಂಡಿಸುವ ನೇರವಂತಿಕೆ ಇನ್ನಾದರೂ ಮೈಗೂಡಿಸಿಕೊಳ್ಳೋಣ. ಯಾರೋ ಏನೋ ಹಣೆಪಟ್ಟಿ ಕಟ್ಟುತ್ತಾರೆ ಎಂದು ಭಯ ಪಟ್ಟುಕೊಂಡರೆ ಅಸ್ತಿತ್ವವೇ ಮುಸುಕಾಗಿಬಿಡುತ್ತದೆ, ಎಚ್ಚರ!

64 Responses to “ಮತಾಂಧರಿಗೆ ತಲೆ ಬಾಗಿಸುವುದರಲ್ಲೇ ನಿಜವಾದ ಸಾವು ಅಡಗಿದೆ!”

  1. vinay says:

    “ರಾಜ್ಯದಲ್ಲಿ ಪೊಲೀಸ್ ಇಲಾಖೆ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಹಗಲೂ-ರಾತ್ರಿಯೆನ್ನದೆ ಕರ್ತವ್ಯ ನಿರ್ವಹಿಸುವ ಅವರಿಗೆ ಸರ್ಕಾರದ ಬೆಂಬಲವಿಲ್ಲ. ಅವರು ಪಡುವ ಕಷ್ಟಗಳು ನೆನಪಾದಾಗ ಕಣ್ಣೀರು ಬರುತ್ತದೆ” ಎನ್ನುತ್ತಲೇ ಪತ್ರಿಕಾಗೋಷ್ಠಿಯಲ್ಲಿ ಗದ್ಗದಿತರಾದ ವಿಜಯವಾಣಿ ಮಾಲೀಕರಾದ ಸಂಕೇಶ್ವರರ ಮಾತುಗಳು ನಿಜಕ್ಕೂ ಮನಕಲಕಿದವು. i dont no how much they r good in thier deed….?

  2. krishnamurthy says:

    DearSir, nijavagalu neeu ondu olle kelasa madtha edira. enuu holodikke tumbha ede.
    yavagalu nimma jothe edi karnatakakane erutte.you don’t worry.
    god bless you.

  3. prashanth says:

    pratap simha you are like a “Bhagat signh, Subhas chandra bose”, we indians are in worry since from 1947 not from yesterday,

    god with you , with all indians.

    live as like you want.

    make some more nice till Indians start to destroy terrorism.

    i am with you

    prashanth.gu

  4. someguy says:

    who elect those politicians ! folks who are balming the politicians confess how many of you have missed voting the last general elections ! how many of you voted after carefully evaluating the candidates by their manifestos and not by the party, caste or family lineage ! All are on their toes to point finger at others and blaming someone else ! And all these guys who are with daredevil pratap (he is !) I have one question ! what will you do if he is in trouble ?? write comments on his page ? sending sympathy mails ??
    These are the educated lot , creamy layer of India , who can’t even try to look for the facts before opening their mouth ! and yeah kick the muslims ! they are the root cause for all your problems you good for nothing potheads!

  5. Arjun says:

    The muslims can kill one pratap simha, How they can kill all those PRATAP SIMHAS whom he created by his PEN???

  6. suma says:

    nice article and this is true

  7. well said if there is no end for vote bank politics these terror activities continues

  8. sudheendra says:

    Good work sir, keep on writing. We all are with you.

  9. shoban says:

    tumba chenngide ankana ,keep it up

  10. Akash says:

    Funny thing is:

    immediately after this terror module was busted, on the same week’s ‘Hi Bangalore’ paper MR. RB gave a small news caption: “That he is going to Pakistan” !

    What a Gulle-nari he is !

  11. GANGADHAR says:

    Dear sri prathapji since four weeks BETTALE JAGATHU is not appearing in your home page. PLEASE DO NOT DISCONTINUE.

  12. Hariprasad says:

    nam dheshdhalli navu yarigu hedharuva agathyathe illa

  13. chandrashekar says:

    onthr hindu artcl don was born. in hindu……….jai hindu

  14. abcd says:

    yako yava muslim vyaktinoo idakke response maadilvalla?