Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಮತಾಂಧರಿಗೆ ತಲೆ ಬಾಗಿಸುವುದರಲ್ಲೇ ನಿಜವಾದ ಸಾವು ಅಡಗಿದೆ!

ಮತಾಂಧರಿಗೆ ತಲೆ ಬಾಗಿಸುವುದರಲ್ಲೇ ನಿಜವಾದ ಸಾವು ಅಡಗಿದೆ!

ಸ್ವಗತ ಎಂದೆನಿಸಿದರೂ ಅಡ್ಡಿಯಿಲ್ಲ, ಸ್ವಂತ ಅನುಭವ ಹೇಳಿಕೊಂಡೇ ಈ ವಾರದ ಅಂಕಣ ಎದುರಿಗಿಡುತ್ತಿದ್ದೇನೆ. ಬಂಧಿತ ಉಗ್ರರ ಗುರಿಗಳ ಪೈಕಿ ನಾನೂ ಪ್ರಮುಖನಾಗಿದ್ದೆ ಎಂಬ ಸುದ್ದಿ ಬಿತ್ತರವಾಗುತ್ತಲೇ, ಫೋನ್ ಮಾಡಿ ಕಾಳಜಿ- ಒತ್ತಾಸೆಗಳನ್ನು ನೀಡಿದವರ ಸಂಖ್ಯೆ ದೊಡ್ಡದು. ಇಂಥದೊಂದು ವಿದ್ಯಮಾನ ಹುಟ್ಟುಹಾಕುವ ಸಹಜ ತಳಮಳಗಳು, ಕೌಟುಂಬಿಕ ಹಂತದಲ್ಲಿ ಉಂಟಾಗುವ ಆತಂಕ ಇವುಗಳ ಹೊರತಾಗಿ ‘ನಡುಗು’ ಅನ್ನುವಂಥ ಅಧೀರತೆಯೇನೂ ನನ್ನನ್ನು ಕಾಡುತ್ತಿಲ್ಲ. ‘ಸಾರಿ, ಐ ಹ್ಯಾವ್ ದ ಆರ್ಡರ್ಸ್. ನಾನು ನಿನ್ನನ್ನು ಕೊಲ್ಲಲೇಬೇಕು’ ಎಂದು ಗಾಯಗೊಂಡ ಚೆಗೆವೆರಾ ಎದುರು ಬೊಲಿವಿಯನ್ ಸೇನಾ ಅಧಿಕಾರಿ ಪಿಸ್ತೂಲು ಹಿಡಿದು ನಿಂತ ಸಂದರ್ಭದಲ್ಲಿ ಆತ ಹೇಳಿದ್ದ ಮಾತು-I know you are here to kill me. Shoot, coward, you are only going to kill a man, ಏ ಹೇಡಿ. ಗುಂಡು ಹೊಡಿ. ನೀನು ಸಾಯಿಸುವುದು ವ್ಯಕ್ತಿಯನ್ನೇ ಹೊರತು ವಿಚಾರವನ್ನಲ್ಲ’! ಹಾಗಂತ ಆತನೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಿಲ್ಲ.

ಆದರೆ…

ಅವನ ಮಾತುಗಳ ಅಂತಃಸತ್ವ ನಮ್ಮೆಲ್ಲರನ್ನೂ ಪ್ರಚೋದಿಸಬೇಕು. ಮೂಲಭೂತವಾದಿಗಳಿಗೆ ಹೆದರಿ ವಿಚಾರ ಬದಲಿಸಿಕೊಳ್ಳುವುದರಲ್ಲಿ, ಅಂಥ ಮತಾಂಧರಿಗೆ ತಲೆ ಬಗ್ಗಿಸುವುದರಲ್ಲೇ ನಿಜವಾದ ಸಾವು ಅಡಗಿದೆ.

ಅದಿರಲಿ, ಪೊಲೀಸರ ಎದುರಿಗೆ ಕುಳಿತಾಗ ನಿನ್ನೆಯ ಬಂಧನ ಘಟನೆಗೂ ಮೊದಲಿನ ಅನೇಕ ಸಂಗತಿಗಳು ತಿಳಿದುಬಂದವು. ಇನ್ನೊಂದೆಡೆ, ನಮ್ಮ ಸಂಪಾದಕರೂ ಸೇರಿದಂತೆ ಕರ್ನಾಟಕದ ಪ್ರಮುಖ ವ್ಯಕ್ತಿಗಳನ್ನೇ ಗುರಿಯಾಗಿಸಿಕೊಂಡಿದ್ದ ಈ ಯೋಜನೆಯ ರೂಪುರೇಷೆ ಸಾರ್ವತ್ರಿಕವಾಗಿ ಹೊಸ ಬಗೆಯ ಥ್ರೆಟ್ ಒಂದನ್ನು ಪರಿಚಯಿಸಿದೆ. ಈ ಮೊದಲು ಉಗ್ರ ಕೃತ್ಯವೆಂದರೆ ಪಾಕಿಸ್ತಾನದಿಂದ ಬಂದವರು ದಾಳಿ ಮಾಡುವುದು ಎಂದಾಗಿತ್ತು. ಕೊನೆಗೆ ಅದು ಸ್ಥಳೀಯ ಇಸ್ಲಾಂ ತೀವ್ರವಾದಿಗಳ ತಾಂತ್ರಿಕ ಬೆಂಬಲ ಪಡೆದುಕೊಂಡು ಇಲ್ಲಿ ಸೃಷ್ಟಿಸುವ ವಿಧ್ವಂಸಕ ಕೃತ್ಯಗಳಾಗಿ ಮಾರ್ಪಾಟಾಯಿತು. ಅವೆಲ್ಲ ಜನ ಸಾಂದ್ರತೆಯ ಸ್ಥಳದಲ್ಲಿ ಬಾಂಬ್ ಇರಿಸಿ ಅತಿಹೆಚ್ಚು ಸಾವು-ನೋವಿಗೆ ಕಾರಣವಾಗುವುದು, ಸರ್ಕಾರದ ಪ್ರಮುಖ ಹುದ್ದೆಗಳಲ್ಲಿರುವವರನ್ನು ಗುರಿಯಾಗಿಸಿಕೊಳ್ಳುವುದು ಇಂಥ ಮಾರ್ಗ ಅನುಸರಿಸುತ್ತಿದ್ದವು. ಆದರೆ ಈಗ ಅಂಥ ಸಂಘಟನೆಗಳ ಪರವಾಗಿ ಒಟ್ಟಾರೆ ಯೋಜನೆ ರೂಪಿಸುವ ಹೊಣೆಯನ್ನು ಸ್ಥಳೀಯರೇ ವಹಿಸಿಕೊಂಡಿರುವುದು ಸ್ಪಷ್ಟವಾಗುತ್ತಿದೆ. ನೀವು ಒಂದು ಕ್ಷಣ ಯೋಚಿಸಿ. ಇಂಥದೇ ಸ್ಥಳೀಯ ಘಟಕಗಳು ಪ್ರತಿ ರಾಜ್ಯದಲ್ಲೂ ತಲೆ ಎತ್ತಿ (ಈಗಲೇ ಒಂದು ಹಂತದಲ್ಲಿ ಅಂತ ಸಿದ್ಧತೆಯಾಗಿರುವ ಲಕ್ಷಣಗಳಿವೆ), ಅಲ್ಲಿನ ಸ್ಥಳೀಯ ಗಣ್ಯರು, ಅಭಿಪ್ರಾಯ ನಿರೂಪಕರು, ಮತಾಂಧತೆಯನ್ನು ವಿರೋಧಿಸುತ್ತಿರುವವರು ಇಂಥವರ ಹಿಟ್್ಲಿಸ್ಟ್ ತಯಾರಿಸಿ ಕೊಲ್ಲುವುದರಲ್ಲಿ ಸಕ್ಸಸ್ ಆದದ್ದೇ ಹೌದಾದರೆ, ಎಷ್ಟೇ ಸೇನಾಬಲದಿಂದಲೂ ಜಯಿಸಲು ಕಷ್ಟವೆನಿಸುವ ಭಾರತವನ್ನು ಇಸ್ಲಾಂ ಮೂಲಭೂತವಾದಿಗಳು, ಪಾಕಿಸ್ತಾನಿಗಳು ಸುಲಭಕ್ಕೆ ಒಳಗಿನಿಂದಲೇ ವಶಪಡಿಸಿಕೊಂಡುಬಿಡಬಹುದಲ್ಲವೇ? ಮಾಥಿಉರ್ ರೆಹಮಾನ್್ನಂಥವರು ಸೃಷ್ಟಿಸುವ ‘ಲೋಕಲ್ ಮಾಡ್ಯೂಲ್್’ನ ಅಸಲಿಯತ್ತು ಇದೇ ಎಂದು ನಿಮಗನಿಸುವುದಿಲ್ಲವೇ? ಹೌದು ಎಂದಾದರೆ ಅಂಥ ಆಕ್ರಮಣವನ್ನು ತಡೆಯುವುದಕ್ಕೆ ದೇಶವೂ ಗ್ರಾಸ್್ರೂಟ್್ನಿಂದಲೇ ಸಿದ್ಧವಾಗಬೇಕಾಗುತ್ತದೆ. ಪೊಲೀಸ್ ಪಡೆಗೆ ಬಲ ತುಂಬಬೇಕಾದ ತುರ್ತು ಅಗತ್ಯ ಕಾಣಿಸಿಕೊಳ್ಳುವುದು ಇಲ್ಲೇ! ‘ಮೂರು ತಿಂಗಳುಗಳಿಂದ ನಿಮಗರಿವಿಲ್ಲದೇ ನಿಮ್ಮನ್ನು ಹಿಂಬಾಲಿಸುತ್ತಿದ್ದೆವು’ ಎಂಬ ಆಶ್ಚರ್ಯದ ಸಂಗತಿಯನ್ನು ನನ್ನೆದುರು ಇಟ್ಟ ಪೊಲೀಸರು ನಾನು ಇತ್ತೀಚೆಗೆ ಎಲ್ಲೆಲ್ಲಿ ಹೋಗಿದ್ದೆ, ನನ್ನ ದಿನಚರಿ ಏನು, ಯಾವ ದಿನ ಏನು ಮಾಡಿದೆ ಎಂಬುದನ್ನೆಲ್ಲ ನಿಖರವಾಗಿ ಹೇಳಿದಾಗ ನಿಬ್ಬೆರಗಾಗಿಹೋದೆ! ‘ಕೆಲದಿನಗಳ ಹಿಂದೆ ನಿಮ್ಮ ಮನೆಯೆದುರು ಇಬ್ಬರು ಯುವಕರು ಪಲ್ಸರ್ ಬೈಕ್್ನಲ್ಲಿ ನಿಂತಿದ್ದರು. ಕೆಲ ನಿಮಿಷಗಳಲ್ಲೇ ಅಲ್ಲಿಗೆ ಬಂದ ಪೊಲೀಸ್ ವ್ಯಾನ್ ಅವರನ್ನು ವಾಹನದ ಸಮೇತ ಸದ್ದಿಲ್ಲದೇ ಎತ್ತಿಕೊಂಡು ಹೋಗಿತ್ತು. ಹಾಗೇಕಾಯಿತು ಎಂಬುದು ನನಗೆ ಶುಕ್ರವಾರದ ನ್ಯೂಸ್ ನೋಡಿದಾಗಲೇ ಅರ್ಥವಾಗಿ ಶಾಕ್ ಆಯ್ತು’ ಅಂತ ನನ್ನ ಪರಿಚಯದ ಅಂಗಡಿಯವರು ವಿವರಿಸಿದರು!

ನಾನು ಮಾತ್ರವಲ್ಲ, ಟಾರ್ಗೆಟ್ ಆಗಿದ್ದ ಎಲ್ಲ ಗಣ್ಯರ ಬಗ್ಗೆಯೂ ಪೊಲೀಸರು ಇಷ್ಟೇ ಆಸಕ್ತಿ ವಹಿಸಿದ್ದಾರೆ. ಅವಘಡವೊಂದನ್ನು ತಪ್ಪಿಸಿದ್ದಾರೆ. ಅವರ ಕರ್ತವ್ಯ ಪ್ರಜ್ಞೆಯನ್ನು ಕೃತಜ್ಞತೆಯಿಂದ ನೆನೆಯುತ್ತಲೇ ಇಂಥ ಪೊಲೀಸ್ ಪಡೆಗೆ ಒತ್ತಾಸೆಯಾಗಬಲ್ಲ ‘ಪೊಲೀಸ್ ರಿಫಾರ್ಮ್್’ ಬಗ್ಗೆ, ಬ್ರಿಟಿಷರ ಕಾಲದ ಬಂದೂಕುಗಳಿಂದಲೇ ಭಯೋತ್ಪಾದಕರ ಎಕೆ-47ಗಳಿಗೆ ಮಾರುತ್ತರ ನೀಡಿದ ಪಂಜಾಬ್ ಪೊಲೀಸ್ ಪಡೆಯ ಶೌರ್ಯದ ಬಗ್ಗೆ  ಈಗ ಮತ್ತೆ ಹೇಳಬೇಕೆನಿಸಿದೆ.

Bullet for bullet ಎನ್ನುತ್ತಿದ್ದ ಡಿ.ಜಿ.ಪಿ. ಜೂಲಿಯಸ್ ರೆಬೆರೋ ಅವರೇ ಅಸಹಾಯಕತೆಯಿಂದ ಕೈಚೆಲ್ಲುವಂತಾಗಿತ್ತು. ಇನ್ನೇನು ಪಂಜಾಬ್ ಸಿಡಿದು ಸ್ವತಂತ್ರಗೊಳ್ಳುತ್ತದೇನೋ ಎಂಬಂತಹ ವಾತಾವರಣ ಸೃಷ್ಟಿಯಾಗಿತ್ತು. ಇಡೀ ರಾಜ್ಯವೇ ಕದಡಿತ್ತು. ಇತ್ತ ಅಜಿತ್ ಸಿಂಗ್ ಸಂಧು, ಸೀನಿಯರ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆಗಿ ಪಂಜಾಬ್್ನ ತರನ್ ತಾರನ್ ಜಿಲ್ಲೆಗೆ ಕಾಲಿಟ್ಟಾಗ, ಸಾಮಾನ್ಯ ಜನರಿಗಿಂತ ಭಯೋತ್ಪಾದಕರೇ ಹೆಚ್ಚಿದ್ದರು. ಏಕೆಂದರೆ ಅದು ಖಾಲಿಸ್ತಾನಿ ಪ್ರತ್ಯೇಕತಾವಾದಿಗಳ ರಾಜಧಾನಿಯೆನಿಸಿತ್ತು. ತರನ್ ತಾರನ್್ಗೆ ಕಾಲಿಡುವುದೆಂದರೆ ಸಾವಿಗೆ ಆಹ್ವಾನ ನೀಡಿದಂತೆಯೇ ಎಂಬಂತಿತ್ತು. ಜತೆಗೆ ಸ್ವತಃ ಸಿಖ್ ಪಂಥಕ್ಕೆ ಸೇರಿದ್ದರೂ ಸಂಧು, ಸಿಖ್ಖರ ವಿರುದ್ಧವೇ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಸಾಲದೆಂಬಂತೆ ಭಯೋತ್ಪಾದಕರ ಎ.ಕೆ. 47 ರೈಫಲ್್ಗಳೆದುರು ಬ್ರಿಟಿಷರ ಕಾಲದ ಬಂದೂಕು ಹಿಡಿದಿದ್ದ ಪೊಲೀಸರ ಆತ್ಮಸ್ಥೈರ್ಯವೇ ಸತ್ತುಹೋಗಿತ್ತು. ಆದರೂ ಸಂಧು ಧೃತಿಗೆಡಲಿಲ್ಲ. ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುವ ಮೊದಲು ಪೊಲೀಸರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಿದರು.

ಆನಂತರ ಪ್ರಾರಂಭವಾಗಿದ್ದೇ…

ಆಪರೇಷನ್ ವುಡ್್ರೋಸ್,

ಆಪರೇಷನ್ ಲಿಲ್ಲಿವೈಟ್,

ಆಪರೇಷನ್ ಫ್ಲಶೌಟ್!

1984ರಿಂದ 94ರವರೆಗೂ ನಡೆದ ಈ ಕಾರ್ಯಾಚರಣೆಗಳ ಮೂಲಕ ಪ್ರತ್ಯೇಕತಾವಾದವನ್ನು ಬೇರು ಸಮೇತ ಕಿತ್ತೊಗೆಯಲಾಯಿತು. ಭಿಂದ್ರನ್್ವಾಲೆಯ ಟೈಗರ್ ಫೋರ್ಸನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲಾಯಿತು. ಒಟ್ಟು 13 ವರ್ಷಗಳ ಕಾಲ ನಡೆದ ಸಂಘರ್ಷದ ನಂತರ ಪಂಜಾಬ್್ನಲ್ಲಿ ಶಾಂತಿಯೇನೋ ಸ್ಥಾಪನೆಯಾಯಿತು. ಆದರೆ ಅಂದು ಜೀವ ಒತ್ತೆಯಿಟ್ಟು ಪ್ರಾಣದ ಹಂಗುತೊರೆದು ಹೋರಾಡಿದ ಪೊಲೀಸರಿಗೆ ಈ ದೇಶ ಕೃತಜ್ಞತೆ ಅರ್ಪಿಸುವ ಬದಲು ಕೋರ್ಟಿಗೆಳೆಯಿತು!

ಅಜಿತ್ ಸಿಂಗ್ ಸಂಧು ವಿರುದ್ಧ 43 ಕೊಲೆ ಮತ್ತು ಮಾನವಹಕ್ಕು ಉಲ್ಲಂಘನೆ ಆರೋಪಗಳನ್ನು ಹೊರಿಸಲಾಯಿತು. ಮೊಕದ್ದಮೆ ಹೂಡಿ ನ್ಯಾಯಾಲಯಕ್ಕೆಳೆಯಲಾಯಿತು. ಭಿಂದ್ರನ್್ವಾಲೆಯ ರಕ್ಕಸೀ ಕೃತ್ಯವನ್ನು ಮೌನವಾಗಿ ವೀಕ್ಷಿಸುತ್ತಿದ್ದ ಮಾನವಹಕ್ಕು ಆಯೋಗ, ಸಂಧು ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿತು. ದುರದೃಷ್ಟವಶಾತ್, 1996ರಲ್ಲಿ ಸಂಧು ಅವರನ್ನು ಕೆಲಸದಿಂದ ಕಿತ್ತೊಗೆದು ಜೈಲಿಗೆ ತಳ್ಳಲಾಯಿತು! ಕಟ್ಟಾ ಭಯೋತ್ಪಾದಕ ನಿಶಾನ್ ಸಿಂಗ್ ಕಲನೂರ್ ಅದೇ ಜೈಲಿನಲ್ಲಿದ್ದ. ಪಂಜಾಬ್ ಪ್ರತ್ಯೇಕಗೊಳ್ಳುವ ಅಪಾಯ ಎದುರಾಗಿದ್ದಾಗ ಎಂತಹ ಕಠಿಣಕ್ರಮವನ್ನಾದರೂ ತೆಗೆದುಕೊಂಡು ಪರಿಸ್ಥಿತಿಯನ್ನು ಹತೋಟಿಗೆ ತನ್ನಿ ಎಂದಿದ್ದ ಸರಕಾರ, ಜೈಲಿನಲ್ಲಿ ಸಂಧು ಮೇಲೆ ಆಕ್ರಮಣ ಮಾಡಲು ನಿಶಾನ್ ಸಿಂಗ್್ಗೆ ಅವಕಾಶ ಮಾಡಿಕೊಟ್ಟಿತು! ಎಲ್ಲರೂ ಎಣಿಸಿದಂತೆಯೇ ಸಂಧು ಮೇಲೆ ಹಲ್ಲೆ ನಡೆಯಿತು. ಹೇಗೋ ಒಂದು ವರ್ಷ ಜೈಲುವಾಸ ಅನುಭವಿಸಿದ ಸಂಧು, 1997ರಲ್ಲಿ ಬಿಡುಗಡೆಯಾದರು. ಆದರೆ ನ್ಯಾಯಾ’ಲಯ’ಕ್ಕೆ ಅಲೆಯುವುದು ತಪ್ಪಲಿಲ್ಲ.

ಈ ಮಧ್ಯೆ, ಸಂಧು ಅವರಿಗೆ ನೀಡಿದ್ದ ಜಾಮೀನನ್ನು ವಜಾ ಮಾಡಬೇಕು ಎಂದು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬಂತು. ಆದರೆ ಜಾಮೀನು ವಜಾಗೊಂಡು ಮತ್ತೆ ಜೈಲು ಸೇರಬೇಕಾಗುತ್ತದೆಂಬ ಬಗ್ಗೆ ಸಂಧು ಮನದಲ್ಲಿ ಯಾವ ಸಂಶಯವೂ ಇರಲಿಲ್ಲ. ಅವತ್ತು 1997, ಮೇ 13. ಸಂಧು ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ. ಕಟಕಟೆಯಲ್ಲಿ ನಿಲ್ಲಲಿಲ್ಲ. “ಕಳಂಕಿತ ಬದುಕಿಗಿಂತ ಸಾವೇ ಮೇಲು” ಎಂದು ಬರೆದಿಟ್ಟು, “ಹಿಮಾಲಯನ್ ಕ್ವೀನ್ ಎಕ್ಸ್್ಪ್ರೆಸ್್” ರೈಲಿಗೆ ತಲೆಕೊಟ್ಟರು! ಆತ್ಮಹತ್ಯೆ ಮಾಡಿಕೊಂಡರು!!  ಟ್ರಕ್್ಗಳಲ್ಲಿ ಹಣ, ಆರ್್ಡಿಎಕ್ಸ್, ಎಕೆ-47 ರೈಫಲ್್ಗಳನ್ನು ತುಂಬಿ ಕಳುಹಿಸಿದರೂ ಕೈಗೂಡದ ಪಾಕಿಸ್ತಾನದ ಐಎಸ್್ಐ ಕನಸನ್ನು ಮಾನವ ಹಕ್ಕುಗಳ ಹೆಸರಲ್ಲಿ ಭಾರತೀಯರೇ ಸಾಕಾರಗೊಳಿಸಿದರು!

ನಾವೆಂತಹ ಕೃತಘ್ನರು ಅಲ್ಲವೇ?

Bolting the stable after the horse has left! ಅಂದರೆ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಅಂತ ಪೊಲೀಸರನ್ನು ಮೂದಲಿಸುವುದನ್ನು, ಕುಹಕವಾಡುವುದನ್ನು ನಾವೆಂದೂ ಮರೆಯುವುದಿಲ್ಲ. ಆದರೆ ಕೊಳ್ಳೆಹೊಡೆಯುವ ಮೊದಲೇ ಕ್ರಮಕೈಗೊಂಡರೆ ಮಾನವ ಹಕ್ಕು ಉಲ್ಲಂಘನೆ, ಕಾನೂನು ದುರುಪಯೋಗ, ದೌರ್ಜನ್ಯವೆನ್ನುತ್ತಾ ಬಾಯಿಬಡಿದುಕೊಳ್ಳುತ್ತೇವೆ. ಹಾಗಾಗಿಯೇ ಒಮ್ಮೊಮ್ಮೆ ನಡೆಯುವ ಲಾಕಪ್ ಡೆತ್್ಗಳನ್ನು, ಎನ್್ಕೌಂಟರ್್ಗಳನ್ನು ಮುಂದಿಟ್ಟುಕೊಂಡು ಸಂಪಾದಕೀಯ ಬರೆಯುವ ನಮ್ಮ ಮಾಧ್ಯಮಗಳು ಪೊಲೀಸ್ ವ್ಯವಸ್ಥೆಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತವೆ. ಆದರೆ 2001ರಲ್ಲಿ ಒಂದೇ ವರ್ಷ ಒಟ್ಟು 828 ಪೊಲೀಸರು ನಕ್ಸಲರು ಹಾಗೂ ಇತರ ಆಂತರಿಕ ದೊಂಬಿ ನಿಯಂತ್ರಣ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡರು! ಅಂದರೆ ಪ್ರತಿವರ್ಷ ಎಷ್ಟು ಪೊಲೀಸರು ಹತ್ಯೆಯಾಗುತ್ತಾರೆ ಎಂಬುದನ್ನು ಊಹಿಸಿಕೊಳ್ಳಿ? ಅವರ ಬಗ್ಗೆ ಮಾಧ್ಯಮಗಳಾಗಲಿ, ಸಮಾಜವಾಗಲಿ ಏಕೆ ಎಂದೂ ಯೋಚಿಸುವುದಿಲ್ಲ? ಮತ್ತು ಅವರನ್ನೇ ನಂಬಿಕೊಂಡಿರುವ ಹೆಂಡತಿ-ಮಕ್ಕಳ ಗತಿಯೇನು? ಅಪ್ಪ-ಅಮ್ಮಂದಿರಿಗೆ ಆಸರೆ ಯಾರು? ಗಡಿ ಕಾಯುವ ಸೈನಿಕ ಮೃತನಾದರೆ ಆತನಿಗೆ ಹುತಾತ್ಮ ಪಟ್ಟ, ದೇಶಕ್ಕಾಗಿ ಮಡಿದನೆಂಬ ಗೌರವದ ನೆನಕೆಯಾದರೂ ಸಿಗುತ್ತದೆ. ಒಬ್ಬ ಮಾಜಿ ಸಚಿವ ಅಥವಾ ಭ್ರಷ್ಟ ರಾಜಕಾರಣಿ ಸತ್ತರೂ ದೇಶಸೇವೆ ಮಾಡಿದರು, ಜನಸೇವೆಯೇ ಜನಾರ್ದನನ ಸೇವೆ ಎಂದು ನಂಬಿದ್ದರು ಎಂದು ಪುಟಗಟ್ಟಲೆ ಬರೆಯುತ್ತೇವೆ. ಹಾಲಿ ಸಚಿವರು ಹೂಗುಚ್ಛ ಇಟ್ಟು ಕಂಬನಿ ಮಿಡಿದು ಹೋಗುತ್ತಾರೆ. ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡುತ್ತೇವೆ. ಆದರೆ ಮಳೆ, ಚಳಿಯೆನ್ನದೆ ಮಣಭಾರದ ಬಂದೂಕು ಹೊತ್ತು ಹಗಲೂ ರಾತ್ರಿ ಗಸ್ತು ತಿರುಗುವ ‘ಬೀಟ್ ಪೊಲೀಸರು ನಮಗೆ ಜೋಕರ್್ಗಳಂತೆ, ಭ್ರಷ್ಟಾಚಾರದ ಪ್ರತಿರೂಪದಂತೆ ಕಾಣುತ್ತಾರೆ. ಏಕೆಂದರೆ ನಮಗೆ ಮನೆಯ ಬೀಗ ಮತ್ತು ಅಗುಳಿಯ ಮೇಲೆಯೇ ಹೆಚ್ಚು ವಿಶ್ವಾಸ. ಆದರೆ ಪೊಲೀಸರ ಹೆದರಿಕೆಯಿಂದಾಗಿ ಕಾನೂನು ಪಾಲನೆಯಾಗುತ್ತಿದೆ, ಸುವ್ಯವಸ್ಥೆ ನೆಲೆಗೊಂಡಿದೆ ಎಂಬ ಕನಿಷ್ಠ ಜ್ಞಾನವೂ ನಮಗಿರುವುದಿಲ್ಲ. ಪೊಲೀಸರನ್ನು ನಾವೆಷ್ಟೇ ತೆಗಳಬಹುದು. ಅವರು ಎಸಗುವ ದೌರ್ಜನ್ಯದ ಬಗ್ಗೆ ಹುಯಿಲೆಬ್ಬಿಸಬಹುದು. ಆದರೆ ನಮ್ಮಷ್ಟೂ ಸ್ವಾತಂತ್ರ್ಯ ಪೊಲೀಸರಿಗಿಲ್ಲ. ಏಕೆಂದರೆ ಸ್ವಾತಂತ್ರ್ಯ ಬಂದು 65 ವರ್ಷಗಳಾದರೂ ಇಂದಿಗೂ ಬ್ರಿಟಿಷರ ಕಾಲದ “ಕಲೋನಿಯಲ್ ಸಿಸ್ಟಮ್್” ನಮ್ಮಲ್ಲಿದೆ. ಅಂದರೆ ಆಳುವವರ ಕೈಲಿ ಪೊಲೀಸರ ಲಂಗು-ಲಗಾಮಿದೆ. ರೂಲರ್ಸ್ ಹೇಳಿದಂತೆ ಕೇಳಬೇಕು. ಭದ್ರತೆಗೆಂದು ಹಾಕಿದಾಗ ಬೆಳಗಿನಿಂದ ಸಂಜೆಯವರೆಗೂ ಬಿಸಿಲಿನಲ್ಲಿ ಬೇಯುತ್ತಾರೆ. ಆದರೂ ಗಲಾಟೆ, ದೊಂಬಿಯಾದರೆ, ಆಸ್ತಿ-ಪಾಸ್ತಿಗೆ ಹಾನಿಯುಂಟಾದರೆ, ವಾಹನಗಳು ಜಖಂಗೊಂಡರೆ ದೂರುವುದು ಪೊಲೀಸರನ್ನೇ. ನಮ್ಮ ವ್ಯವಸ್ಥೆ ಅವರಿಗೆ ”Functional Autonomy” “ಕೊಟ್ಟಿಲ್ಲ ಎಂಬುದು ಎಷ್ಟು ಜನರಿಗೆ ಗೊತ್ತು?

“ರಾಜ್ಯದಲ್ಲಿ ಪೊಲೀಸ್ ಇಲಾಖೆ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಹಗಲೂ-ರಾತ್ರಿಯೆನ್ನದೆ ಕರ್ತವ್ಯ ನಿರ್ವಹಿಸುವ ಅವರಿಗೆ ಸರ್ಕಾರದ ಬೆಂಬಲವಿಲ್ಲ. ಅವರು ಪಡುವ ಕಷ್ಟಗಳು ನೆನಪಾದಾಗ ಕಣ್ಣೀರು ಬರುತ್ತದೆ” ಎನ್ನುತ್ತಲೇ ಪತ್ರಿಕಾಗೋಷ್ಠಿಯಲ್ಲಿ ಗದ್ಗದಿತರಾದ ವಿಜಯವಾಣಿ ಮಾಲೀಕರಾದ ಸಂಕೇಶ್ವರರ ಮಾತುಗಳು ನಿಜಕ್ಕೂ ಮನಕಲಕಿದವು.

ಅದಿರಲಿ, ನಮ್ಮ ದೇಶದಲ್ಲಿ ಆಂತರಿಕವಾಗಿ ಎಂತಹ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ, ನಮ್ಮ ಪೊಲೀಸರು ಎಂತಹ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ ಅಂದುಕೊಂಡಿರಿ? ಪಾಕಿಸ್ತಾನ, ಬಾಂಗ್ಲಾ, ಚೀನಾದಂಥ ಬಾಹ್ಯ ಶಕ್ತಿಗಳು ಎರಗಿಬಿದ್ದರೂ ಹಿಮ್ಮೆಟ್ಟಿಸಬಹುದು. ಆದರೆ ದೇಶವಾಸಿಗಳೇ ದೇಶನಾಶಕ್ಕೆ ನಿಂತಾಗ ಯಾರೇನು ಮಾಡಲು ಸಾಧ್ಯ? “”A nation can survive its fools, and even the ambitious. But it cannot survive treason from within.” ” ಎಂದಿದ್ದ ಮಾರ್ಕಸ್ ಟುಲಿಯಸ್ ಸಿಸೆರೋ. ಅಂದರೆ ಯಾವುದೇ ದೇಶ ತನ್ನೊಳಗಿನ ವೈರುದ್ಧ್ಯಗಳಿಂದ ತುಂಡಾಗುವುದಿಲ್ಲ. ಮೂರ್ಖರು, ಚೋರರು, ಮಹತ್ವಾಕಾಂಕ್ಷಿಗಳ ಉಪದ್ರವ, ಉಪದ್ವ್ಯಾಪ ದೇಶವೆಂಬ ಸೌಧದ ಬುಡ ಅಲ್ಲಾಡಿಸುವುದಿಲ್ಲ. ಆದರೆ, ಒಂದು ದೇಶದ ಅಡಿಪಾಯ ಶಿಥಿಲವಾಗುವುದು ಅಲ್ಲಿನ ಜನಜೀವನದಲ್ಲಿ ಕಲೆತು-ಬೆರೆತಿರುವ ಛದ್ಮವೇಶದ ಶತ್ರುಗಳಿಂದ. ಗಡಿಯಾಚೆಗಿನ ಶತ್ರು ಕಣ್ಣಿಗೆ ಕಾಣುತ್ತಾನೆ. ಆತನ ಚಹರೆ ಗುರುತುಹಿಡಿಯಬಹುದು. ಆದರೆ, ದೇಶದೊಳಗಿರುವ ಶತ್ರುಗಳನ್ನು ಗುರುತಿಸುವುದೇ ಕಷ್ಟ. ಅವರು ನಮ್ಮ-ನಿಮ್ಮ ನಡುವೆ ಇರುತ್ತಾರೆ. ನಮ್ಮಂತೆಯೇ ಇರುತ್ತಾರೆ. ನಮ್ಮ ಮುಖವಾಗಿರುತ್ತಾರೆ, ನಮ್ಮದೇ ಮಾತಾಡುತ್ತಾರೆ. ಆದರೆ ಹಾವ-ಭಾವದಲ್ಲಿ ಬೆಸೆಯುವ ಇವರು ಜೀವ ಜೀವದಲ್ಲಿ ಸೇರಲಾರರು. ಊರೆಲ್ಲ ಮಲಗಿದಾಗ ಇವರು ಏಳುತ್ತಾರೆ. ಕತ್ತಲಲ್ಲಿ ಇವರ ನಿಜಮುಖ ಅನಾವರಣಗೊಳ್ಳುತ್ತದೆ. ತಿಳಿದೊ, ತಿಳಿಯದೆಯೋ ತಮಗೂ ಆಶ್ರಯ ನೀಡಿರುವ ಮನೆಯ ಅಡಿಪಾಯದ ಒಂದೊಂದೇ ಕಲ್ಲುಗಳನ್ನು ಅಲ್ಲಾಡಿಸುತ್ತಾರೆ. ಇಡೀ ವ್ಯವಸ್ಥೆಯನ್ನು ರೋಗಗ್ರಸ್ತಗೊಳಿಸುತ್ತಾರೆ. ಕೊನೆಗೆ ದೇಶ ಒಡೆಯುತ್ತಾರೆ. ಒಬ್ಬ ಕೊಲೆಗಾರನನ್ನು ಸಹಿಸಬಹುದು. ಆತನ ಕೃತ್ಯಕ್ಕೆ ಒಂದು ಕಾರಣವಿರುತ್ತದೆ. ಆದರೆ ಒಬ್ಬ ದೇಶದ್ರೋಹಿ, ಊಹೂಂ, ಆತ ಪ್ಲೇಗ್ ಇದ್ದಂತೆ. ಇಡೀ ಸಮುದಾಯವನ್ನೇ ನಾಶ ಮಾಡುತ್ತಾನೆ ಎಂದು ರೋಮನ್ ತತ್ವಜ್ಞಾನಿ, ದಾರ್ಶನಿಕ ಸಿಸೆರೋ ಕ್ರಿ.ಪೂ.ದಲ್ಲೇ ಹೇಳಿದ್ದ. ಇವತ್ತು ನಮ್ಮ ದೇಶದಲ್ಲಿ ನಿರ್ಮಾಣವಾಗುತ್ತಿರುವುದು ಅಂತಹ ದುರದೃಷ್ಟಕರ ಪರಿಸ್ಥಿತಿಯೇ. 11 ಜನರ ಬಂಧನದ ಬಗ್ಗೆ ಹೇಳುತ್ತಾ, ಇವರೆಲ್ಲ Home grown ಅಥವಾ ಸ್ಥಳೀಯರೇ ಎಂಬ ಇಂಟೆಲಿಜೆನ್ಸ್ ಐಜಿ ಗೋಪಾಲ್ ಹೊಸೂರರ ಮಾತು ಪರಿಸ್ಥಿತಿಗೆ ಹಿಡಿದ ಕನ್ನಡಿ. ಪೊಲೀಸರ ಕ್ಷಮತೆಗೆ ನಮ್ಮ ನಾಗರಿಕ ಪ್ರಜ್ಞೆಯೂ ಜತೆಗೂಡಬೇಕು. ಅಕ್ಕಪಕ್ಕದವರ ಬಗ್ಗೆ, ಮನೆಬಾಡಿಗೆಗಿರುವವರ ಪೂರ್ವಾಪರ, ನಡತೆಗಳನ್ನು ತಿಳಿದುಕೊಳ್ಳುವುದಕ್ಕೆ ಮುಜುಗರ ಬೇಡ. ಹಣ, ಖಾಸಗಿ ಬದುಕುಗಳ ನಡುವೆ ಸಾರ್ವಜನಿಕವಾಗಿ ಇಂಥ ಮತಾಂಧ ಮನಸ್ಥಿತಿಗಳನ್ನು ಖಂಡಿಸುವ ನೇರವಂತಿಕೆ ಇನ್ನಾದರೂ ಮೈಗೂಡಿಸಿಕೊಳ್ಳೋಣ. ಯಾರೋ ಏನೋ ಹಣೆಪಟ್ಟಿ ಕಟ್ಟುತ್ತಾರೆ ಎಂದು ಭಯ ಪಟ್ಟುಕೊಂಡರೆ ಅಸ್ತಿತ್ವವೇ ಮುಸುಕಾಗಿಬಿಡುತ್ತದೆ, ಎಚ್ಚರ!

64 Responses to “ಮತಾಂಧರಿಗೆ ತಲೆ ಬಾಗಿಸುವುದರಲ್ಲೇ ನಿಜವಾದ ಸಾವು ಅಡಗಿದೆ!”

  1. H.R SHREEPADARAO says:

    Hats off.ಪ್ರತಾಪ್.ನಿಮ್ಮ ಧೈರ್ಯಕ್ಕೆ ಮೆಚ್ಚಿದೆ. ನೀವು ಟಾರ್ಗೆಟ್ ಅ೦ದಾಗ ಹೆದರಿಕೆ ಆಗಿರಬಹುದು ಅ೦ದುಕೊ೦ಡಿದ್ದೆ. ಕೊಲ್ಲುವವನಿಗಿ೦ತ ಕಾಯುವವ ದೊಡ್ಡವ. ನಿಮ್ಮ ಈ ಲೇಖನ ನನ್ನನ್ನೂ ಕಾನೂನನ್ನು ಕೈಗೆ ಯಾಕೆ ತೆಗೆದುಕೊಳ್ಳಬಾರದು ಅನ್ನುವ ಅಭಿಪ್ರಾಯ ಮೂಡಿಸಿದೆ. ಜೈ ಹೋ. ಯಾವಾಗ ಭಾರತ ನಿಜಕ್ಕೂ ರಾಮರಾಜ್ಯವಾಗುವುದೋ ಮತ್ತೆ ಬ್ರಿಟಿಶರೇ ಬರಬೇಕೆ? ಅಥವಾ ಮಿಲಿಟೆರಿ ಆಡಲಿತವೇ ಸೂಕ್ತವೇ??

  2. chethan says:

    nice article pratap 🙂 i was also one of the many who always thought our police force is fit for nothing. but recent develpoments changed my perspective. i totally agree that they should be given more power. chances are that intelligence reports are always ignored stating lack of conclusive evidence. but its time that we remain at utmost alert and give importance to all the intelligence reports.
    there is urgent requirement to upgrade all the divisions of police and military. are the law makers listening..

  3. prasanna says:

    i read this in kannadaprabha. really horrible to hear Mr Sandu getting into act of suicide being a top cop. i dont know when our hindus start to unite

  4. ಭಯೋತ್ಪಾದನೆಯನ್ನು ಯಾವ ದೇಶವೂ ಬೆಳೆಯಲು ಬಿಡಬಾರದು.
    ಭಯೋತ್ಪಾದಕರಿಗೆ / ಉಗ್ರರಿಗೆ ಸಹಕಾರ ನೀಡುವ ರಾಜಕೀಯ ಪಕ್ಷಗಳು ಯೋಚಿಸಬೇಕು, ಅವರಿಗೆ ಉಗ್ರ ಶಿಕ್ಷೆ ಜಾರಿಯಾಗಬೇಕು ಮತ್ತು ಪೋಟ ಕಾಯ್ದೆ ಅಸ್ತಿತ್ವಕ್ಕೆ ಬರಬೇಕು, ಉಗ್ರರ ವಿರುದ್ದ ೦೦೦೦೦ ಟಾಲರೆನ್ಸ್ ಪಾಲಿಸಿ ರೂಪಿಸಬೇಕು,
    ಸ್ಥಳೀಯ ಮುಸ್ಲಿಂರ ಬೆಂಬಲವಿಲ್ಲದೆ ಪಾಕಿಸ್ತಾನದ ಐಸ್ಐ ಅಥವಾ ಉಗ್ರಗಾಮಿ ಸಂಘಟನೆಗಳು ಸಫಲವಾಗದು.
    ಸಂಯುಕ್ತ ರಷ್ಯಾವನ್ನು ತುಂಡರಿಸಿದ ಹಾಗೆ ಭಾರತವನ್ನು ಛಿದ್ರ ಮಾಡುವುದೆ ಉಗ್ರ ಸಂಘಟನೆಗಳ ಉದ್ದೇಶವಾಗಿದೆ.
    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭಾರತವನ್ನು ಭಾರತವಾಗಿಡುವುದರ ಬಗ್ಗೆ ಯೋಚಿಸಲಿ……

  5. GURUKIRAN says:

    We all with you Pratap Sir.

  6. DILIP says:

    Dear mitra pratap simha.
    nimma i article ondu kannadi idda hage. namma ella deshada so called rajakaranigalu odale beku. Adare namma deshada/ rajyada duradrushta intharavara kaiyalli namma desh/ rajya ide. Yavaga Jana gaguti adaga maatra namma desh uddaravaguttade not by any Selfish Politicians.
    once again dhanyavad.
    from BHOPAL-MP

  7. hi sir i am great fan to ur books and ur artical but shocking news is terriers target to u that was shock to me sir have nice day take care sir gn8 sir

  8. Mahalakshmi says:

    wat ever u hv written its true….when i saw news i was shocked please u just take care n be alert in every situation….

  9. ANIL HUGAR says:

    very good article.lot people in our society dont know the responsibility of police.this article themselves

  10. Veeresh Bagewadi says:

    Pratrapji aap aage bado hum tumare saath hai

  11. darshan says:

    these people never known thier mother ……..

  12. jaihind says:

    devaru nimma jategiddane mattu hindu darma yendigoo nashavagadu

  13. shrivathsa says:

    bayothpadakarannu baggu badi

  14. charitra kumar says:

    ಭಾರತದಲ್ಲಿ ಮತಾಂಧರಿಗೆ ಕೊಟ್ಟ ಸಲುಗೆ ಜಾಸ್ತಿಆಗಿದೆ. ವಸುದೇವ ಕುಟುಂಬಕಂ ಸರ್ವೇ ಜನಃ ಸುಖಿನ ಭವಂತು,ಎಂಬ ನಮ್ಮ ಸಿದ್ದಂಥವನ್ನು ಮತಾಂಧರು ದುರುಪಯೋಗ ಮಾಡುತ್ತಾರೆ. ಕಾಂಗ್ರೆಸಿನವರು ತಮ್ಮ ಓಟುಬ್ಯಾಂಕಿಗಾಗಿ ಮತಾಂಧರನ್ನು ಬೆಂಬಲಿಸಿ ಮುಂದೊಂದುದಿನ ಭಾರತದೆಶವನ್ನು ಇನೋನ್ನುದು ಪಾಕಿಸ್ಥಾನ ಮಾಡುದರಲ್ಲಿ ಸಂಶಯವಿಲ್ಲ.ಹಿಂದುಗಳಿಗೆ ಮಾತ್ರವೇ ಸರ್ವ ಜನಾoಗದವರನ್ನು ಸಹಬಾಳ್ವೆಯಲ್ಲಿ ಒಟ್ಟಿಗೆ ಕೊಂಡುಹೂಗಲು ಸಾದ್ಯ.ಇವತ್ತು ಜಗತ್ತಿನಲ್ಲಿ ಯಾವುದೇ ಒಂದು ಮತಾಂತರಿಗಳ ದೇಶವಾಗಲಿ ಅತವಾ ಮತಾಂಧರ ದೇಶವಾಗಲಿ ಅಲ್ಲೀರುವ ಅಲ್ಪಸಂಕ್ಯಾತರಿಗೆ ಕೊಡುವ ಸ್ವಾತಂತ್ರ್ಯ ನೋಡಿಯಾದರು ಇಲ್ಲಿ ಇರುವ ಅಲ್ಪಸಂಕ್ಯಾತರು ತಮಗೆ ಇರುವ ಸ್ವಾತಂತ್ರ್ಯ ವನ್ನು ದುರುಪಯೋಗ ಮಾಡಬಾರದು.ಒಡೆದು ಬಾಳುವ ನೀತಿಯನ್ನು ಬಿಟ್ಟು ಒಟ್ಟಿಗೆ ಸಹಬಾಳ್ವೆ ನಡೆಸಲು ಕಲಿಯಿರಿ, ಆಗದಿದ್ದರೆ ನೀವು ನಿಮ್ಮ ನಿಮ್ಮ ಮೂಲ ಸ್ತಳಗಳಿಗೆ ಹೋಗಿ ಅಲ್ಲೇ ಇರಿ.

  15. Sandeep Kharvi says:

    Good work Pratap……. Unfortunately our Governor himself has doubt on police,, though they have arrested terrorists with all evidance…………..

  16. sriram v dongre says:

    Very true, an eye opening article. thank u

  17. You are absolutely correct pratap.

    But I wonder whenever some fellow caught by police usually his family members will say even though the police has enough proofs. It happened in this case also. Those 11 people had guns, 10-15 sim cards, bullets and some soft copies of their plan etc… but the parents are still claiming they are innocent. They have to give full support to police to find out the truth. Patriotism is seldom seen in many of us. This is the real fall our country.

    Anyways don’t loose your heart (I know you wont, but still I have to say) and keep on working for our country.

    Nagaraja K K
    National Institute of Technology Karnataka.

  18. pankaj says:

    HATS OF TO YOU, I thought u deter yourself from writing any further!!!! The problem with us is we have short memory, and we bunked history classes…… It’s better be awake now or History repeats itself!!

  19. Suneel says:

    Please remain safe. May God help you remain safe and protect you and your family at all times. We shall pray for your safety every day. We do not need any more Martyrs. We only need just some more time before the cult of hate will necrose and die from within as we are seeing in the middle east today

  20. madhusuraj says:

    ನನ್ನ ಪ್ರೀತಿಯ ಪ್ರತಾಪ್ ಸಿಂಹ ಸಾರ್……
    ನಮ್ಮ ಸರ್ಕಾರ ಕ್ಕೆ ದೇಶ ಜನಗಳು ಬೇಕಿಲ್ಲ ಸಾರ್ ಯಾವಗ ಬೇಕು ಅಂದ್ರೆ ಓಟಿಗೆ ಮಾತ್ರ. ಮೊದಲು ಜನ ಬದಲಾಗಬೇಕು ನಮ್ಮ ಜನ ಎಂಥವರು ಅಂದರೆ ನಮ್ಮ ಪಕ್ಕದ ಮನೆಗೆ ಬೆಂಕಿ ಬಿದ್ರೆ, ಸದ್ಯ ನಮ್ಮ ಮನೆಗೆ ಬಿದ್ದಿಲವಲ್ಲ ಅಂತಾರೆ ಈ ಒಂದು ಕೆಟ್ಟ ಮನಸ್ತಿತಿ ನಮ್ಮ ಜನರು.
    ಸಾರ್ ನಮಗೆ ಸಾಥ್ ಕೊಡಿ ಸಾರ್ …ನಮ್ಮ ಭಾರತ ದೇಶದ ಅನ್ನತಿಂದು ನಮ್ಮ ದೇಶನ ನಾಶ ಮಾಡಕೆ ಬಂದಿರವರು ಯಾರು ಇರಬಾರದು..ಹಾಗ್ ಮಾಡ್ತವಿ ಎಲ್ಲಾ ಕೆಲವನ್ನ ನಮ್ಮ ಪೋಲೀಸರೇ ಮಾಡೋದಕ್ಕಗಾಲ್ಲ …ಜನ ಸಮಾನ್ಯರು ಹೊಂದಾಗಬೇಕು ಆ ಕೆಲಸ ನಾವು ಮಾಡ್ತವಿ…ನಾವು ಸುಬಾಷ್ ಚಂದ್ರ ಬೋಸ್ ಟೀಮ್ ನವರು ನಮಗೂಂದು ಅವಕಾಶ ಕೊಡ್ಸಿ ಸಾರ್ ನನ್ನ ದೇಶಕೊಸ್ಕರ ಪ್ರಾಣ ಕೊಟ್ಟದ್ರು ನಮ್ಮ ದೇಶನ ಉಳಿಸಿ ಕೊಳ್ತೀವಿ….ಸಹಾಯ ಮಾಡಿ ಸಾರ್

  21. ರಂಜಿತ್ says:

    ಬಹಳ ಸಂತೋಷವಾಯಿತು. ಈ Article ಅನ್ನು ಓದಿಯಾದರೂ ಜನಸಾಮಾನ್ಯರಿಗೆ Police life ಹೇಗಿರುತ್ತೆ ಅನ್ನೋ ವಿಚಾರ ಗೊತ್ತಾದ್ರೆ ಸಾಕು. ಬಹಳ ಧನ್ಯವಾದಗಳು.

  22. Venkatesh.K.S says:

    Soniya Ghandhiyanthaha Deshadolagina mahan Bayothpadakige thale kedisikolladanthaha jana …….. idakkella thale kedisikoltharaaaa!!!!!!!!!!!!!!!!!!!!

  23. umesh says:

    ಭಾರತ ಮಾತೆಯ ಮಡಿಲಲ್ಲೆ ಇದ್ದುಕೊಂಡು ಇಂತಹ ದುಷ್ಕ್ರತ್ಯ ಎಸೆಗಿದವರನ್ನು ಗಲ್ಲಿಗೆರಸಬೆಕು ಸರ್, ಮತ್ತು ಅವರು ನಿಮ್ಮನ್ನು ಗುರಿಯಾಗಿಸಿಕೊಂಡಿದ್ದು ಮಾತ್ರ ನನಗೆ ನೊವುಂಟು ಮಾಡಿದೆ.ಈ ಮತಾಂಧರಿಗೆ ನಾವೇಕೆ ತಲೆಬಾಗಬೆಕು ಇವರನ್ನು ನಮ್ಮ ದೇಶದಿಂದಲೇ ಹೊರಗೆ ಹಾಕಬೇಕು ಅಥವಾ ಗುಂಡಿಕ್ಕಿ ಕೊಲ್ಲಬೇಕು,ನಮ್ಮ ನೆಲದವರೆ ನಮ್ಮ ಹಿಂದೂ ಸಂಘಟನೆಗಳನ್ನು ಟಿಕೆ ಮಾಡುವುದನ್ನ ಬಿಡಬೇಕು,ಇದನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ನಮ್ಮ ನೆಲದಲ್ಲೆ ನಾವೆ ಅಲ್ಪಸಂಖ್ಯಾತರಾಗುತ್ತೇವೆ.

  24. Raghavendra prasad c says:

    TAKE CARE WE NEED YOU

  25. Nagesh says:

    Congress govt’s vote bank Administration is responsible for all These.

  26. Nagesh says:

    Congress govt’s vote bank Administration is responsible for all These.

  27. Sharath Shetty says:

    Rightly said……………

  28. sunil kumar dp says:

    dear prathap anna ,

    istella admyalu soole maklu tarrerist bage nam devegowda agli ,congress na yavude leadergalu strike agli or ondu volle statement agli kodo mansu madodilvalla yenantha ugibeku eee thayi ganda makklige ,haage hindhuthvada hesaralle adhikarakke bandiro BJP agli yavude strike madade irodu viparyasa ……….

    sunil kumar dp

  29. ARUNSHANKAR RAGA says:

    SIR
    THIS IS THE PLAN TO FEAR THOSE WHO WRITE ABOUT THE NATION & AGAINST THE MUSLIM FUNDAMENTALIST.BUT WE PROUD ABOUT OUR KARNATAKA POLICE.AND ABOUT YOU SIR FOR YOU BRAVENESS…………………….

  30. Ishwaraling Arer says:

    thumba hrudaya vidravakavagide…….

  31. Pavan Kumar says:

    Nammallina rajakarinigalu votina dhahadalli mulugidddare endare , aa paapi pakisthanavannu siupport maduva deshadrohigalannu hididagalu ee vyuhavannu bedisiruva hinde bjp kyvada ide endu heluva manassinavaru. Intavarannu naavu namma nayakarendu helutheve naventha educated fools.

  32. chethan says:

    sir, karnataka police department is the most efficient in whole India…we have to congrats them because they rescue many efficient people is karnataka….ee mathaandarige mathru abhimana bekagilla…avarige bekagirodu avara anista dharma… …..but simha avare nim antha desha bhaktha ri ge yavathu gelevu eruthade…nim garjane yavathu molagali……………aaa anista dharma hindustana dinda tolagali….

  33. ಅರುಣ್ ಕಶ್ಯಪ್ says:

    ಬುದ್ದಿ(ಇಲ್ಲದ)ಜೀವಿಗಳು FOREIGN TOUR-ಗೆ ಹೋಗಿದ್ದಾರಾ….. ????
    ಯಾಕೋ ಈ ಟೆರರಿಸ್ಟ್-ಗಳು ಸರೆಸಿಕ್ಕಾಗಿನಿಂದಾ Agni Sridhar, GK Govinda Rao, Gori Lankesh ಮತ್ತು ‘ಡೋಂಗಿ ಮಾನವ ಹಕ್ಕುಗಳ ಅಯೋಗ್ಯರು’ ಕಾಣಿಸುತ್ತಿಲ್ಲಾ…. ಈ ವಿಶಯದ ಬಗ್ಗೆ ಕನ್ನಡಪ್ರಭಾ ಮತ್ತು ಸುವರ್ಣ ನ್ಯೂಸ್-ಅಲ್ಲಿ ಅವಿತುಕೊಂಡಿರೋ ಇವರುಗಳದ್ದೆಲ್ಲಾ ಪ್ರತಿಕ್ರಿಯೆ ಪಡೆದುಕೊಳ್ಳಬೇಕೆಂದು ವಿನಂತಿ.

    ಪೋಲೀಸರು ಮಾಡುವ ದೌರ್ಜನ್ಯವನ್ನು ಹೇಗೆ ಜನಗಳ ಮುಂದಿಡುತ್ತೀರೋ ಹಾಗೆಯೇ ಅವರು ಮಾಡುವ ಉತ್ತಮ ಕೆಲಸಗಳನ್ನು ಜನಗಳು ಮತ್ತು ಜನಪ್ರತಿನಿಧಿಗಳಿಗೆ ಮುಟ್ಟುವಂತೆ ಮಾಡಿ…. ನಾಡು ಮತ್ತು ದೇಶವನ್ನು ಕಾಯುವ ಅವರಿಗೆ ಬೇಕಾಗುವ ಸವಲತ್ತುಗಳನ್ನು ಗುರುತಿಸಿ ಸರ್ಕಾರದ ಗಮನಕ್ಕೆ ತನ್ನಿ , ಇದು ನಿಮ್ಮಂತಹ ಪತ್ರಕರ್ತರು ಸುಲಭವಾಗಿ ಮಾಡಬಹುದಾದ ಕೆಲಸ…

    ಧನ್ಯವಾದಗಳು

  34. Nandeesh says:

    Oppalebekadantha satya

  35. tuLuva says:

    I dont see any solution for this as far as we have current politicians (including most of politicians in karnataka BJP). only NAMO can fix this. there are no big hopes of NAMO becoming the PM 🙁

  36. yallappa says:

    very nice.

  37. yallappa says:

    I am not understanding what to write.But I felt very bad.Dear LION you have done a grate job.We are always with you.

  38. GOWTHAM PRADEEP P V says:

    Prathap ji first of all thanks u a lot to giving us such true information about our nation,all patriots praying for u all, who doing some thing for this great INDIA ,nothing will happen to u ,u have lot to do for this country for our Mother Bharathi.
    VANDHE MATHARAM

  39. Akshay says:

    very true …. fact is we are leaving in the base of 50 – 60 year old methodology and thinking… whatever related to life style its changed & we are up to date on that.. its because no one restricting us to do that isn’t it; its up to us !!!
    but i wonder how many time we revised our Constitution which was drafted long a go how many changes and additions are done one this ! ? answer will be single digit number… this thinking need to be changed current set-up whatever is there the final / top end is controlled by politics/ politician. there is no way to change our decision once we vote …if so we have to wait for 5 more year !!! y like this ?

    We cant change any system until common citizen get a power to review his decision every day/week/ month. There might be lot of technical difficulty to do so but its not impossible task. its very interesting topic too….. think on it 🙂

  40. ManjunathBangalore says:

    ರವಿ ಬೆಳಗೆರೆಯವರ WebSiteನಲ್ಲ್ಲಿನ Heading ನೋಡಿ. “ಇವರಿಬ್ಬರು ಸತ್ತರೆ ಅಳುವವರು ಯಾರು?” ಸ್ವಾಮಿ, ಬೆಳಗೆರೆಯವರೆ, ಇವರಿಬ್ಬರು ಸತ್ತರೆ ಜನ ಅಳುತ್ತಾರೋ ಇಲ್ಲವೊ ಗೊತ್ತಿಲ್ಲ. ಆದರೆ ನೀವು ಸತ್ತರೆ ಮಾತ್ರ ಪಾಯಸ, ಬಾದಾಮಿ ಹಾಲು ಮಾಡಿಕೊಂಡು ಕುಡಿಯಲು ಜನ ಕಾಯುತ್ತಿದ್ದಾರೆ. ಒಂದು ಸ್ವಲ್ಪ ಹೆಣ್ಣು ಮಕ್ಕಳ ಹೊಟ್ಟೆ ಉರಿಸಿಕೊಂಡಿದ್ದೀರಾ? ಅವರ ನೋವಿನಲ್ಲಿ sadistic ಆನಂದ ಪಡೆಯುವ ನೀವು ಸತ್ತರೆ ಭೂಮಿಯಲ್ಲಿ ಹುಟ್ಟಿದ್ದ ಒಂದು ಕೆಟ್ಟ ಹುಳು ಸತ್ತಿತು ಎಂದು ಹೇಳಿ ನಾನು ಬಾದಾಮಿ ಹಾಲು ಕುಡಿಯುತ್ತೇನೆ. ಪ್ರತಾಪ್ ರವರು muslims ಬಗ್ಗೆ ಬರೆದರೆ ದಾಖಲೆ ಇಟ್ಟುಕೊಂಡು ಬರೆಯುತ್ತಾರೆ. ನೀವು ಹೆಣ್ಣು ಮಕ್ಕಳ ಶೀಲದ ಬಗ್ಗೆ ಬರೆಯುವಾಗ ಯಾವ ದಾಖಲೆ ಇಟ್ಟುಕೊಂಡು ಬರೆಯುತ್ತಿದ್ದೀರ. ನಾಚಿಕೆ ಆಗಬೇಕು ನಿಮ್ಮ ಜನ್ಮಕ್ಕೆ. ಥ್ಹೂ. ಬೇರೆಯವರಿಗೆ ಹೇಳುವುದಕ್ಕೆ ಮುಂಚೆ ನೀವು ಸರಿಯಾಗಿ ಬರೆಯುವುದನ್ನು ಕಲಿಯಿರಿ.

  41. raghu says:

    chadmaveshada shatrugalu endu manemurukara bagge sariyagi barediddiri. Ak subbaaih, BT lalita nayak agale `ugravadigala’ bagge suvvi raaga haadi tamma `nija banna’ bayalu madikondiddare. `mooru sagara, nooru mandira daiva sasiraviddare, vedaviddare, jnanaviddare ghana parampare iddare, gange iddare, tunge iddare giri himalayaviddare, enu sarthaka maneya janare malagi nidrisutiddare’ endu haadida kavi shivaramu avara kavanada salugalu nenapaguttive. `dhushman kahan hai, andre `bagal me hai’ anta uttara siddavagide. `sashakta hindu, samartha bharata, hindu eddare desha edditu’ ennuva ghoshaneye idakke ditta uttara.

  42. Jeeva bedarikeyannu lekkisade bhayotpadaneya virudda lekanada moolaka horata nedesuttiruva nimage aatmasthyrya tumbabekagiddu nammellara kartavya.
    Thanks Pratap sir for impormation

  43. Nagaraj Vishwanath says:

    Sir,
    Whenever i start reading your article, i feel feared not because of these cowards and muslim people but about the matter what you say about my country. Sir, I am ready to do anything for my country. But finding no way and no support. So please suggest me the proper way and guide me out. You have huge knowledge and concern about our country and I am ready to do anything for my country. Please do help me and give me ‘saath’.

  44. vijayanarayan says:

    AS ALWAYS GOOD…

  45. Gangangouda C Totad says:

    Dear sir… i think some Muslims never chang them mind set…. so first we should kickout that Muslims from India….. but now days Indian youth need leaders like YOU sir…..

  46. nagu says:

    Superb article

  47. Sachin says:

    nice article sir.

  48. Akshay says:

    very true …. fact is we are leaving in the base of 50 – 60 year old methodology and thinking… whatever related to life style its changed & we are up to date on that.. its because no one restricting us to do that isn’t it; its up to us !!!
    but i wonder how many time we revised our Constitution which was drafted long a go how many changes and additions are done one this ! ? answer will be single digit number… this thinking need to be changed current set-up whatever is there the final / top end is controlled by politics/ politician. there is no way to change our decision once we vote …if so we have to wait for 5 more year !!! y like this ?
    We cant change any system until common citizen get a power to review his decision every day/week/ month. There might be lot of technical difficulty to do so but its not impossible task. its very interesting topic too….. think on it

  49. Keshav says:

    You are 100% right Pratap.
    Go with your aims, We are all with you..

  50. subbu u says:

    nice article pratap