Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Others > ರವಿ ಬೆಳಗೆರೆ ನೀಡಿದ ಉತ್ತರ, ಅವರಿಗೆ ದೊರೆತ ಪ್ರತ್ಯುತ್ತರ

ರವಿ ಬೆಳಗೆರೆ ನೀಡಿದ ಉತ್ತರ, ಅವರಿಗೆ ದೊರೆತ ಪ್ರತ್ಯುತ್ತರ

ravi-belagere03
ಅಕ್ಟೋಬರ್ 16ರಂದು ‘ವಿಜಯ ಕರ್ನಾಟಕ’ ಪತ್ರಿಕೆಯ ಮುಖಪುಟದಲ್ಲಿ “ಇಂಥ ಘಟನೆ ಬೇರೆ ಯಾವ ದೇಶದಲ್ಲಿ ನಡೆದೀತು?” ಎಂಬ ಶೀರ್ಷಿಕೆಯಡಿ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರು ಬರೆದ ವಿಚಾರಪೂರ್ಣ ಲೇಖನವನ್ನು ಖಂಡಿತ ನೀವು ಓದಿರುತ್ತೀರಿ. ಅವರ ಲೇಖನಕ್ಕೆ ಪ್ರತಿಕ್ರಿಯಿಸಿ ಜನಪ್ರಿಯ ಪತ್ರಕರ್ತ ರವಿ ಬೆಳಗೆರೆಯವರು ಅಕ್ಟೋಬರ್ 19ರಂದು  “ಭೈರಪ್ಪ ಇತಿಹಾಸಕಾರ, ಬರಹಗಾರ: ಸದ್ಯ ಮುತ್ಸದ್ದಿಯಲ್ಲ?” ಎಂಬ ಲೇಖನ ಬರೆದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ಅಕ್ಟೋಬರ್ 20ರಂದು ಉತ್ತರ ಪಡೆದುಕೊಳ್ಳುವ ಸರದಿ ರವಿ ಬೆಳಗೆರೆಯವರದ್ದಾಗಿತ್ತು. ಮಂಗಳೂರಿನ ರಾಮಚಂದ್ರ ಶೆಣೈ (None, but Myself!!) ನೀಡಿದ ಉತ್ತರ ಹಾಗೂ ರವಿ ಬೆಳಗೆರೆಯವರ ಲೇಖನಗಳರಡೂ ಇಲ್ಲಿವೆ-ಸಮಯವಿದ್ದಾಗ ಓದಿಕೊಳ್ಳಿ.

ಭೈರಪ್ಪ ಇತಿಹಾಸಕಾರ, ಬರಹಗಾರ: ಸದ್ಯ ಮುತ್ಸದ್ದಿಯಲ್ಲ?

ಅಕ್ಟೋಬರ್ 16, 2008ರ ವಿಜಯ ಕರ್ನಾಟಕ ಕೈಗೆತ್ತಿಕೊಳ್ಳುತ್ತಿ ದ್ದಂತೆಯೇ ಕಣ್ಣಿಗೆ ಬಿದ್ದುದು ಎಸ್.ಎಲ್. ಭೈರಪ್ಪನವರ ಸುದೀರ್ಘ ಲೇಖನ, ‘ಆವರಣ’ ಕಾದಂಬರಿ ಬರೆದು ಮುಗಿಸಿದ ಮೇಲೆ ಒಮ್ಮೆ ಅವರು ವಾಡಿಯಾ ರಸ್ತೆಯ ವರ್ಲ್ಡ್ ಕಲ್ಚರ್ ಕಟ್ಟಡದ ಅಂಗಳದಲ್ಲಿ ಸಿಕ್ಕಿದ್ದರು. ‘ಆವ ರಣ’ದ ಬಗ್ಗೆ ಪದೇಪದೆ ಪ್ರಶ್ನೆಗಳನ್ನು ಅಲ್ಲಿದ್ದವರು ಕೇಳಿದಾಗ,

‘ನನ್ನನ್ನು ಆವರಣದಿಂದ ಹೊರಕ್ಕೆ ಬರಲು ಬಿಡಿ. ಅದನ್ನು ಬರೆದಾಯಿತಲ್ಲ?’ ಅಂದಿದ್ದರು ಭೈರಪ್ಪ,  ಕ್ರಿಯಾಶೀಲ ಲೇಖಕನೊಬ್ಬನ ಪ್ರಾಮಾಣಿಕ, ಸಾತ್ವಿಕ ಸಿಡುಕು ಆ ದನಿಯಲ್ಲಿತ್ತು. ನನಗೆ ಮತ್ತೇನನ್ನೋ ಬರೆಯ ಬೇಕಾಗಿದೆ. ಧೇನಿಸಬೇಕಾಗಿದೆ: ನನ್ನ ಪಾಡಿಗೆ ಬಿಡಿ ಎಂಬ ಸಿಡುಕು ಅದು ಅಂತ ನಾನು ಅರ್ಥಮಾಡಿಕೊಂಡಿದ್ದೆ. ಆದರೆ ವಿಜಯ ಕರ್ನಾಟಕದಲ್ಲಿ ಅವರ ಲೇಖನ  ಓದಿದ ಮೇಲೆ, ಅವರು ‘ಆವರಣ’ದಿಂದ ಹೊರಬರು ವುದು ಹಾಗಿರಲಿ, ಪೂರ್ತಿ ಪೂರ್ತಿ ಗುಹಾಂತರಾಳವನ್ನೇ ಹೊಕ್ಕಂತೆ ಕಾಣುತ್ತಿದೆ. ಭೈರಪ್ಪ ವಿಪರೀತ paranoid ಆಗಿದ್ದಾರೆ. ತುಂಬ ಚೆಲುವಾಗಿ, ಮುದ ನೀಡಿ, ಯೋಚನೆಗೆ ಹಚ್ಚಿ, ಭಾವೋತ್ಕರ್ಷಕ್ಕೆ ಕೊಂಡೊಯ್ದು ಓದುಗನಿಗೊಂದು ಮಧುರಾನುಭೂತಿ ನೀಡುತ್ತಿದ್ದ ಭೈರಪ್ಪ  ಇದೇಕೆ ಹೀಗೆ ’ ಎಲ್ಲ ಬಗೆಯ ಕರ್ಮಠ’ರಂತೆ ಬರೆಯತೊಡಗಿದ್ದಾರೆ?

‘ಎಲ್ಲ ಬಗೆಯ ಕರ್ಮಠರು’ ಎಂಬುದನ್ನು ನಾನು ಬಳಸಿದ್ದು ಹಿಂದೂ ಕರ್ಮಠರು, ಕರ್ಮಠ ಬ್ರಾಹ್ಮಣರು, ಕರ್ಮಠ ವೀರಶೈವರು, ಕರ್ಮಠ ಭಜರಂಗಿಗಳು, ಕರ್ಮಠ ಕಮ್ಯುನಿಸ್ಟರು, ಕರ್ಮಠ ನಕ್ಸಲರು ಎಂಬ ಅರ್ಥದಲ್ಲಿ. ಭೈರಪ್ಪನವರೂ ಸೇರಿದಂತೆ ನೀವು ಕೂಡ ಈ ಮಾತನ್ನು ಹೀಗೇ ಅರ್ಥಮಾಡಿಕೊಳ್ಳಬೇಕಾಗಿ ವಿನಂತಿ.

ನೀವು ಮತ್ತೇನೂ ಮಾಡಬೇಕಿಲ್ಲ. ಅಕ್ಟೋಬರ್ ೧೬ನೇ ತಾರೀಕಿನ ವಿಜಯ ಕರ್ನಾಟಕ ತೆರೆದು ಅದರಲ್ಲಿನ  ಭೈರಪ್ಪನವರ ಲೇಖನವನ್ನು ಒಬ್ಬರೇ ಕುಳಿತು ದೊಡ್ಡ ದನಿಯಲ್ಲಿ  ಓದಿಕೊಳ್ಳಿ. ಸ್ವಲ್ಪ ಹೊತ್ತಿಗೆ ನೀವು ಯಾರಿಗೋ ಲೆಕ್ಚರು ಕೊಡುತ್ತಿದ್ದೀರಿ ಎಂಬಂತೆ ಭಾಸವಾಗುತ್ತದೆ, ನಿಮಗೂ ಒಬ್ಬ  ಕ್ರೈಸ್ತರ ಮತ ಬೋಧಕನಿಗೂ ವ್ಯತ್ಯಾಸವಿಲ್ಲ  ಅನಿಸುತ್ತದೆ. ಹದಿನೈದು ಜನರನ್ನು ಕೂರಿಸಿಕೊಂಡು ಓದಿ ಬಿಡಿ: ನೀವು ಮುಸ್ಲಿಂ ಧರ್ಮ ಬೋಧಕನಂತೆ ಧ್ವನಿಸತೊಡಗುತ್ತೀರಿ. ಇದನ್ನೇ ನಾನು ಒಂದು ಬರಹದಲ್ಲಿ ನ ಕರ್ಮಠ ಗುಣ ಅನ್ನುವುದು. It starts Preaching. Writer starts barking. ಯಾವಾಗ ನಮ್ಮ ಬರವಣಿಗೆಗೆ ‘ಪ್ರವಾದೀ ಗುಣ’ ಬಂದು ಬಿಡುತ್ತದೋ, ಆವಾಗ ನಮ್ಮೊಳಗಿನ ಸೃಜನಶೀಲ ಬರಹಗಾರ ಸತ್ತು ಹೋಗಿ ಬಿಡುತ್ತಾನೆ. sorry, ಭೈರಪ್ಪ.

‘ಇಂಥ ಘಟನೆ ಯಾವ ದೇಶದಲ್ಲಿ ನಡೆದೀತು?’ ಎಂಬ ತಲೆಬರಹದೊಂದಿಗೆ ಸವಿಸ್ತಾರ ಲೇಖನ ಆರಂಭಿಸುವ ಭೈರಪ್ಪ ಉದ್ದಕ್ಕೂ ಕ್ರೈಸ್ತ ಮಿಷನರಿಗಳ ಮೇಲೆ ಹರಿಹಾಯು ತ್ತಾರೆ. ಅವರು ಎತ್ತುವ ಒಂದು ಪ್ರಶ್ನೆಗೆ ಮಾತ್ರ ನನ್ನ ಸಹಮತವಿದೆ. ‘ಸೆಪ್ಟೆಂಬರ್ ೧೧ರ ನಂತರ ಅಮೆರಿಕದಲ್ಲಿ ಒಂದೇ ಒಂದು ಮುಸ್ಲಿಂ ವಿಧ್ವಂಸಕ ಕೃತ್ಯ ನಡೆಯಲಿಲ್ಲ. ಭಾರತದಲ್ಲಿ ದಿನಕ್ಕೆ ಐದಾರು ಜನರನ್ನು ಕೊಲ್ಲುತ್ತಿದ್ದಾರೆ. ಹೀಗೇಕೆ?’ ಅಂತ ಭೈರಪ್ಪ  ಕೇಳುವುದರಲ್ಲಿ Sence ಇದೆ. ಆದರೆ ಇನ್ನೊಂಚೂರು ಸಹನೆಯಿಟ್ಟುಕೊಂಡಿದ್ದಿದ್ದರೆ ಭೈರಪ್ಪನವರ ಪ್ರಶ್ನೆಗೂ ಉತ್ತರ ಸಿಗುತ್ತಿತ್ತು.

ಅಮೆರಿಕದಲ್ಲಿ ನಡೆಯದ ಮುಸ್ಲಿಂ ವಿಧ್ವಂಸಕ ಕೃತ್ಯಗಳು ಲಂಡನ್ನಲ್ಲಿ ನಡೆದವು. ಇಸ್ರೇಲ್ ಇವತ್ತಿಗೂ ಅದರ ತವರು. ಪಾಕಿಸ್ತಾನದಲ್ಲೇ ಜಿಹಾದಿಗಳು ಬೆನಜೀರ್ರನ್ನು ಕೊಂದರು. ಚೀನದಂತಹ ಕರ್ಮಠ ಕಮ್ಯುನಿಸ್ಟ್  ಖಬರ ಸ್ತಾನದಲ್ಲಿ ಮುಸ್ಲಿಮರು ತಿರುಗಿಬಿದ್ದರು. ಅಮೆರಿಕಕ್ಕೆ ತನ್ನ ದೇಶದ ಮಟ್ಟಿಗೆ ಮುಸ್ಲಿಂ ಭಯೋತ್ಪಾದನೆಯನ್ನು ಬಗ್ಗು ಬಡಿಯುವ ತಾಕತ್ತು (ಹಣವಿರುವುದರಿಂದಾಗಿ) ಇದೆಯೇ ಹೊರತು, ಅಫಘನಿಸ್ತಾನದಂತಹ ದೇಶದಲ್ಲಿ ಮುಸ್ಲಿಂ ಉಗ್ರರು ಅಮೆರಿಕಕ್ಕೆ ಇವತ್ತಿಗೂ ನೆಗ್ಗಲು ಮುಳ್ಳುಗಳೇ. Pan Islamism ಎಂಬುದು ರಾಕ್ಷಸ ಸ್ವರೂಪ ಪಡೆದು ಬಿಟ್ಟಿದೆಯೆಂಬುದು ನಿಜ. ಅದು ಆರಂಭಿಸಿರುವ ಜಾಗತಿಕ ಮಟ್ಟದ ಹಿಂಸೆಯನ್ನು ಯಾವ ರಾಜಕೀಯ ಮುತ್ಸದ್ದಿಯ ಇಚ್ಛಾಶಕ್ತಿಯೂ ತಮಣಿ ಮಾಡಲಾರದು. ಮುಸ್ಲಿಂ ಸಮುದಾಯದಲ್ಲೇ ಇವತ್ತು ಭಯೋತ್ಪಾದನೆಯ ವಿರುದ್ಧ ಜಾಗೃತಿ ಮೂಡಬೇಕು. ಅವರಿಂದಲೇ ಅವರ ಉಗ್ರವಾದ ಅಂತ್ಯವಾಗಬೇಕು. ಈಗಾಗಲೇ ಪಾಕಿಸ್ತಾನಿಗಳು ‘ಪಾನ್ ಇಸ್ಲಾಮಿಕ್ ಜಿಹಾದಿ’ಗಳ ವಿರುದ್ಧ ದನಿಯೆತ್ತ ತೊಡಗಿದ್ದಾರೆ.

ಆದರೆ ಭೈರಪ್ಪನವರ ತಕರಾರು ಈಗ ಮುಸಲರ ವಿರುದ್ಧ ಅಲ್ಲ. ಅದು ಕ್ರೈಸ್ತರ ವಿರುದ್ಧ. ಅವರ ಪ್ರಕಾರ ಏಸುವನ್ನು ಶಿಲುಬೆಗೆ ಏರಿಸಿದ್ದು ಯಹೂದಿಗಳಲ್ಲ. (ಹಾಗಾದರೆ ಮತ್ಯಾರೋ?) ಈಗ ಭಾರತದಲ್ಲಿ ಮತಾಂತರ ಎಷ್ಟು ಬಿರುಸಾಗಿ ನಡೆಯುತ್ತಿದೆ ಅಂದರೆ, ಆಂಧ್ರದ ಮುಖ್ಯಮಂತ್ರಿ (ಸ್ಯಾಮುಯೆಲ್) ರಾಜಶೇಖರ ರೆಡ್ಡಿ ಕೂಡ ಭೈರಪ್ಪನವರ ಪ್ರಕಾರ ಭಾರತದ ಐವರು ಕ್ರೈಸ್ತ ಮುಖ್ಯಮಂತ್ರಿಗಳಲ್ಲಿ ಒಬ್ಬರು ! ಅಂದರೆ, ಕ್ರಿಶ್ಚಿಯನ್ನರ ಸಂಖ್ಯೆ ಆ ಪರಿ ಹೆಚ್ಚಿದೆ ಎಂಬುದು ಭೈರಪ್ಪನವರ ಭಯ. ಅದು  ಅವರದೇ ವಿನೂತನ ‘ವಾದ’ ಎಂಬಂತೆ ಲೇಖನ ದಲ್ಲಿ ಸಾದರಪಡಿಸುತ್ತಾರಾದರೂ,  ಈ ಬಗ್ಗೆ  ಒಂದು ವರ್ಷದ ಹಿಂದೆಯೇ ಲೇಖನಗಳು ದೇಶದ ನಾನಾ ಪತ್ರಿಕೆಗಳೂ ಸೇರಿದಂತೆ, ಇಂಟರ್ನೆಟ್ ತುಂಬ ಸರಿದಾಡಿವೆ. ಇಲ್ಲಿ ಭೈರಪ್ಪನವರಿಗೆ ಒಂದೆರಡು ಅಂಶಗಳನ್ನು ಸ್ಪಷ್ಟಪಡಿಸಲು ಯತ್ನಿಸುತ್ತೇನೆ. ನೀವು ಆಂಧ್ರದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರನ್ನು ಕ್ರೈಸ್ತರು ಅಂತ ಭಾವಿಸಿದ್ದರೆ ಅದಕ್ಕಿಂತ ಅಪದ್ಧ ಮತ್ತೊಂದಿಲ್ಲ. ಅವರ ಪೂರ್ವಜರ್ಯಾರೋ ಕ್ರೈಸ್ತರಾಗಿದ್ದಿರಬಹುದು. ಆದರೆ ಬೀಗತನಗಳಿಂದ ಹಿಡಿದು ರಾಜಕಾರಣದ ತನಕ ರಾಜಶೇಖರ ರೆಡ್ಡಿಯವರು ಶುದ್ಧಾನು ಶುದ್ಧ ರೆಡ್ಡಿಯೇ. ಆಂಧ್ರದಲ್ಲಿ ರೆಡ್ಡಿ-ಕಮ್ಮ-ಕಾಪು ಕದನ ತಲಾಂತರಗಳಿಂದ ನಡೆದುಬಂದಿದೆ. ಅದರ ಚುಕ್ಕಾಣಿ ಹಿಡಿದು ‘ರೆಡ್ಡಿ ರಾಜತ್ವ’ ಸ್ಥಾಪಿಸಿರುವುದೇ ರಾಜಶೇಖರ ರೆಡ್ಡಿ.

ಇನ್ನು ‘ಮಣಿಪುರ, ನಾಗಾಲ್ಯಾಂಡ್’ಗಳ ಜನರೆಲ್ಲ ಕ್ರೈಸ್ತ ರಾಗಿದ್ದಾರೆ’ ಎಂಬುದನ್ನು ಹೊಸ (ಸ್ವಂತ) ಕೂಗೇನೋ ಎಂಬಂತೆ ಎಬ್ಬಿಸುತ್ತಿದ್ದಾರೆ ಭೈರಪ್ಪ. ಅದು ಕೂಡ ಹಳೇ ಸಂಗತಿಯೇ. ಭಾರತದ ಒಟ್ಟಾರೆ ಹಿಂದೂ ಜನಸಂಖ್ಯೆಗೆ ಹೋಲಿಸಿಕೊಂಡರೆ, ಮಣಿಪುರ-ನಾಗಾಲ್ಯಾಂಡ್ಗಳ ಸಮಸ್ಯೆ ತುಂಬಾ ಬೃಹತ್ತಾಗಿ ಕಾಣುವುದಿಲ್ಲ. ಹಿಂದೂ ಜನಸಂಖ್ಯೆಯೂ ವಾಕರಿಕೆ ಬರುವಷ್ಟು ಬೆಳೆದಿದೆ. ಆದರೆ ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಮಣಿಪುರ- ನಾಗಾಲ್ಯಾಂಡ್ ಇತ್ಯಾದಿಗಳಲ್ಲಿ ಕ್ರೈಸ್ತರಾಗಿ ಮತಾಂತರ ಹೊಂದಿರುವವರು ಮೊದಲು ಹಿಂದೂಗಳಾಗಿದ್ದವರಲ್ಲ. ಅವರಲ್ಲಿ ಹೆಚ್ಚಿನವರು ಬುಡಕಟ್ಟುಗಳವರು. ತಪ್ಪಿದರೆ ಬೌದ್ಧರು. ಆದರೆ ಅಲ್ಲಿ ಸಾಮೂಹಿಕ ಕ್ರೈಸ್ತ ಮತಾಂತರ ಗಳಾಗಿರುವುದು ಮಾತ್ರ ನಿಜ. ಇಂಥ ಮತಾಂತರಗಳು ಉಗಾಂಡಾ, ಕೀನ್ಯಾ, ಝೈರೆ, ತಾಂಜೀನಿಯಾದಂತಹ ದೇಶಗಳಲ್ಲೂ ಆದವು. ಏಕೆಂದರೆ, ಅಲ್ಲಿ ಕ್ರೈಸ್ತ ಮಿಷನರಿಗಳು ಕಾಲಿಡುವುದಕ್ಕೆ ಮುಂಚೆ ಯಾವುದೇ ಒಂದು ಧರ್ಮ ಪ್ರಬಲವಾಗಿರಲಿಲ್ಲ. ಎರಡನೆಯದಾಗಿ, ಕ್ರೈಸ್ತ ಮಿಷನರಿಗಳು ಒಂದು ಕೈಲಿ ಆಸ್ಪತ್ರೆ, ಇನ್ನೊಂದು ಕೈಲಿ ಸ್ಕೂಲು, ಕಿಸೆಯಲ್ಲಿ ಕಾಸು, ಕೊರಳಿಗೆ ಏಸು- ಹೊತ್ತುಕೊಂಡೇ ಉಗಾಂಡಾದಂಥ ಬುಡಕಟ್ಟು ಹಾಗೂ Virgin landಗಳಿಗೆ ಹೋದರು. ಮುಸ್ಲಿಮರು ಒದ್ದು ಮತಾಂತರಗೊಳಿಸಿದರೆ ಕ್ರೈಸ್ತರು ಕಾಸು ಕೊಟ್ಟು, ಬೇರೆಯದೇ ತೆರೆನಾದ ಭೀತಿ ಹುಟ್ಟಿಸಿ ಪ್ರಬಲ ಧರ್ಮದ ಮುಂದಾಳತ್ವವಿಲ್ಲದ ಬುಡಕಟ್ಟು, ಬಡವ ಮತ್ತು ಧಾರ್ಮಿಕ ಅಮಾಯಕರನ್ನು ಮತಾಂತರಗೊಳಿಸುತ್ತಾರೆ.

ಇದನ್ನೆಲ್ಲ ಭೈರಪ್ಪನವರೂ ಸರಿಯಾಗಿಯೇ ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಇದ್ದಕ್ಕಿದ್ದಂತೆ ಅವರು fanatic (ಮತಭ್ರಾಂತ) ಹಿಂದೂ ಆಗಿಬಿಡುತ್ತಾರೆ. ಅಲ್ಲಾಹುನನ್ನು ನಂಬದಿರುವವರನ್ನು ಕೊಲ್ಲಿರಿ ಎಂದು ಕುರ್-ಆನ್ ಹೇಳಿದಂತೆಯೇ (ಆವರಣದ ಅವರ ವಾದ ಇದು) ಆತನನ್ನು ಶಿಲುಬೆಗೇರಿಸಿದ್ದೇ ಕಟ್ಟು ಕತೆ ಅಂತ ವಿತಂಡ ವಾದ ಮಂಡಿಸ ಹೊರಡುತ್ತಾರೆ. ಭೈರಪ್ಪನವರು ತಿಳಿದುಕೊಳ್ಳಬೇಕಾದ ಐತಿಹಾಸಿಕ ಸತ್ಯವೊಂದಿದೆ: ಅದೇನೆಂದರೆ, ಪ್ರತಿ ಪ್ರವಾದಿಯೂ ದೇವರಿಗೆ mediator ಆಗಿ ಹುಟ್ಟಿದವನೇ. ಪ್ರತಿ ಧರ್ಮವೂ ಮೂಲದಲ್ಲಿ ಶ್ರೇಷ್ಠವಾಗಿದ್ದುಕೊಂಡು ಕಾಲಾಂತರದಲ್ಲಿ fanatic  ಸ್ವರೂಪ ಪಡೆದಂತಹುದೇ. ಶಂಕರಾಚಾರ್ಯರು ಕೂಡ ಅಗ್ರೆಸಿವ್ ಸ್ವರೂಪ ತಾಳಿದವರೇ. ಬುದ್ಧನ ಶಿಷ್ಯರೂ ಕೊಡಲಿ ಕೈಗೆತ್ತಿಕೊಂಡವರೇ. ಅಂಥದರಲ್ಲಿ ಪೋರ್ಚು ಗೀಸರು ಹೊರಡಿಸಿದ ಫರ್ಮಾನುಗಳನ್ನೂ, ಇಂಗ್ಲಿಷರು ಕಾಫಿ ತೋಟ ಕಿತ್ತುಕೊಂಡ ಬಗೆಯನ್ನೂ, ಮದರ್ ಥೆರೇಸಾ ಮಾಡಿದ ಮಾನವ ಸೇವೆಯನ್ನೂ ಒಂದೇ ತಕ್ಕಡಿ ಯಲ್ಲಿಟ್ಟು ತೂಗುವುದು at least, ಭೈರಪ್ಪನವರಿಗೆ ತರವಲ್ಲ. ಕುಷ್ಠರನ್ನ, ಕೊಳೆತು ಹೋದವರನ್ನ, ಸಾಯಲನುವಾದವರನ್ನ ಮತಾಂತರಗೊಳಿಸಿ ಥೆರೇಸಾಗೆ ಆಗಬೇಕಾದ್ದಾದರೂ ಏನಿತ್ತು? ಆಯ್ತು, ಆಕೆ ಅನಾಥ ಮಕ್ಕಳಿಗೆಲ್ಲ ಶಿಲುಬೆ ಹಾಕಿದಳು: ಆದರೆ ಸಿದ್ದಗಂಗೆಯ ಶ್ರೀಗಳು ಯಾವ ಬಡವನಿಗೂ ಲಿಂಗ ಕಟ್ಟಲಿಲ್ಲ ಎಂಬ ಭೈರಪ್ಪನವರ ವಾದವನ್ನೇ ಒಪ್ಪಿಕೊಳ್ಳೋಣ. ಆದರೆ ಭೈರಪ್ಪ ಯಾವ extremityಗೆ ಹೋಗುತ್ತಾರೆಂದರೆ, ‘ಥೆರೇಸಾಗೆ ಸಿಕ್ಕ ಗೌರವ ಸಿದ್ದಗಂಗೆ ಶ್ರೀಗಳಿಗೆ ಯಾಕೆ ಸಿಗಲಿಲ್ಲ’ ಅಂತ ವಾದಿಸುತ್ತಾರೆ. (ಥೆರೇಸಾಗೆ ಸಿಕ್ಕ ಗೌರವ ಲಿಂಗಾಯತರ ಮಾತೆ ಮಹಾದೇವಿಗೆ ಸಿಕ್ಕಿದ್ದಿದ್ದರೆ ಭೈರಪ್ಪ ಸಿಟ್ಟಾಗ ಬೇಕಿತ್ತು! ಹ್ಹ)

ಇತಿಹಾಸಕ್ಕೆ ಸಂಬಂಧಿಸಿದಂತೆ ಒಂದು ಸರಿಯಾದ ಪರಿಕಲ್ಪನೆ ಇಲ್ಲದೆ ಹೋದರೆ ಹೀಗಾಗುತ್ತದೆ. Basically, ಸಿದ್ದಗಂಗೆಯ ಶ್ರೀಗಳನ್ನು ತಾಯಿ ಥೆರೇಸಾಗೆ ಹೋಲಿಸುವುದೇ ತಪ್ಪು. ಅವರ ಕೆಲಸ, ವ್ಯಾಪ್ತಿ, ಉದ್ದೇಶ ಮತ್ತು reach  ಎಲ್ಲವೂ ಬೇರೆಬೇರೆ. ಸಿದ್ದಗಂಗೆ ಶ್ರೀಗಳು ಪಾಠ ಹೇಳಿದರು, ಮಠದಲ್ಲಿ ಮಕ್ಕಳನ್ನಿಟ್ಟುಕೊಂಡರು. ಮಠದ ಕೀರ್ತಿ ಹೆಚ್ಚಿಸಿದರು. (ಕೊಂಚ ತಿರುಗಿಬಿದ್ದ ಕಿರಿಯ ಶ್ರೀಗಳನ್ನು ಎಡಗಾಲಲ್ಲಿ ತುಳಿದು ಸರ್ವನಾಶ ಮಾಡುತ್ತಿದ್ದರೆ ಸಣ್ಣ ಆಕ್ಷೇಪವೂ ಎತ್ತದೆ ಸುಮ್ಮನಿದ್ದರು. ಆ ಮಾತು ಬೇರೆ.) ಆದರೆ ಶ್ರೀಗಳು ಯಾವತ್ತಿಗೂ ಕುಷ್ಠರನ್ನು, ಕೊಳೆತವರನ್ನು ಮುಟ್ಟಲಿಲ್ಲ. ಚರಂಡಿಯಲ್ಲಿ ಹುಳು ಹಿಡಿದು ಮಲಗಿದ ನಿರ್ಗತಿಕನನ್ನು ಅವಚಿ ಎದೆಗಪ್ಪಿಕೊಳ್ಳಲಿಲ್ಲ. ಅವರು ಆಯ್ದುಕೊಂಡ ರಂಗವೇ ಬೇರೆಯಾಗಿದ್ದರಿಂದ, ಅವರ ಕೀರ್ತಿ ಕರ್ನಾಟಕದ ಆಸುಪಾಸು ಬಿಟ್ಟು ಆಚೆಗೆ ಹೋಗಲಿಲ್ಲ. ಇನ್ನು ಮಾಧ್ಯಮಗಳು, ಅದರಲ್ಲೂ ಇಂಗ್ಲಿಷ್ ಮಾಧ್ಯಮಗಳು ಥೆರೇಸಾಗೆ ಅನವಶ್ಯಕ ಪ್ರಚಾರ ಕೊಟ್ಟವು ಎನ್ನುತ್ತಾರೆ ಭೈರಪ್ಪ. Once again,ಸಿದ್ದಗಂಗಾ ಶ್ರೀಗಳು ಕರ್ನಾಟಕಕ್ಕೆ ಸಂಬಂಧಪಟ್ಟವರು. ಅವರು, ಅವರ ಶಿಕ್ಷಣ ಕ್ಷೇತ್ರ, ಅವರ ಮಠ ಇಲ್ಲಿಗೆ ಸೀಮಿತವಾದುದು. ಅದರಾಚೆಗಿನ ಮನುಷ್ಯ, he is not interested. ಅಷ್ಟೇಕೆ, ಗುಜರಾತಿಗೆ ಹೋಗಿ ನೀವು ಸತತ ಹದಿನೈದು ದಿನ ರಾಘವೇಂದ್ರ ಸ್ವಾಮಿಗಳ ಭಜನೆ ಮಾಡಿ. ಅದು ಪರಿಣಾಮ ಬೀರುವುದಿಲ್ಲ. ಏಕೆಂದರೆ issue ಅಲ್ಲಿಗೆ ಸಂಬಂಧಪಟ್ಟುದಾಗಿರುವುದಿಲ್ಲ. ಥೆರೇಸಾ ಅಥವಾ ಬಾಬಾ ಆಮ್ಟೆ ಈ ಪರಿಧಿಯನ್ನು ದಾಟಿದವರು. ಅವರು ಸಿದ್ದಗಂಗಾ ಶ್ರೀಗಳಿಗಿಂತ ಉತ್ತಮರು ಅಂತ ನಾನು ವಾದಿಸುತ್ತಿಲ್ಲ. ಅವರು ಆರಿಸಿಕೊಂಡ ಕ್ಷೇತ್ರ ಶ್ರೀಗಳ ಕ್ಷೇತ್ರಕ್ಕಿಂತ ವಿಸ್ತಾರವಾದದ್ದು. ಇಡೀ ದೇಶಕ್ಕೆ, ಪ್ರಪಂಚಕ್ಕೆ, ಮನುಕುಲಕ್ಕೆ ಸಂಬಂಧಿಸಿದ್ದು.

ಇಷ್ಟಾಗಿ ಥೆರೇಸಾ ತುಂಬಾ subtle ಆಗಿ ಅನಾಥ ಹಿಂದೂ(?) ಕಂದಮ್ಮಗಳನ್ನು ಸದ್ದಿಲ್ಲದೆ ಮತಾಂತರ ಗೊಳಿಸಿದ ರಾಕ್ಷಸಿ ಅಂತಲೇ ಇಟ್ಟುಕೊಳ್ಳೋಣ. ಅವೇ ಅನಾಥ ಹಿಂದೂ ಕಂದಮ್ಮಗಳನ್ನು ಎದೆಗವಚಿಕೊಂಡು ‘ನಾನು ಸಾಕುತ್ತೇನೆ’ ಅಂದಂಥ ಒಬ್ಬ ಹಿಂದೂ ಮಾತೃದೇವತೆ ಹುಟ್ಟಲಿಲ್ಲವಲ್ಲ ಸ್ವಾಮಿ? ಅದೂ ಇಷ್ಟು ದೊಡ್ಡ ಭಾರತದಲ್ಲಿ!

ನೋಡಿ, ಮನಸ್ಸು ಜಡಗೊಂಡರೆ ವಿವೇಕ ಸತ್ತು ಹೋಗುತ್ತದೆ.  ವಾದ ವಿತಂಡವೂ, ಬರಹ ವಾಚಾಮವೂ ಆಗುತ್ತದೆ. ಭೈರಪ್ಪನವರ ವಿಷಯದಲ್ಲಿ ಅದೇ ಆಗತೊಡಗಿದೆ. ಇಂಗ್ಲಿಷರ ವಿರುದ್ಧ ಬಂಡೆದ್ದ ಬಾಪೂ ಸ್ವದೇಶಿ ಕಾಲೇಜು, ಬಟ್ಟೆ, ಬ್ಯಾಂಕು-ಹೀಗೆ ಪ್ರತಿ ಯೊಂದಕ್ಕೂ ಸ್ವದೇಶಿ ಪರ್ಯಾಯವನ್ನು ಹುಡುಕಿ ಚಳವಳಿಯನ್ನು ಮುನ್ನಡೆಸಿದರು. ಭೈರಪ್ಪನವರಲ್ಲಿ ಅಂಥ ಯಾವ ಲಕ್ಷಣವೂ ಕಾಣುತ್ತಿಲ್ಲ. ಅವರು ಮತಾಂತರಕ್ಕೆ ಯಾವ ಪರಿಹಾರವನ್ನೂ ಸೂಚಿಸುತ್ತಿಲ್ಲ. ಪೊಲೀಸರನ್ನಿಟ್ಟು ಮಿಷನರಿಗಳನ್ನು ಒದ್ದೋಡಿಸಿ ಎಂಬ ಧಾಟಿಯಲ್ಲಿ ಮಾತಾಡುತ್ತಾರೆ. ಇವರಿಗೂ ಪೋರ್ಚುಗೀಸರಿಗೂ ಯಾವ ವ್ಯತ್ಯಾಸ ಉಳಿಯಿತು? ಭೈರಪ್ಪನವರು ಯಾವ ತಲೆಮಾರನ್ನು ಲೀಡ್ ಮಾಡಲು ಹೊರಟಿದ್ದಾರೆ? (‘ನಂಗೆ ಆ ಉದ್ದೇಶವೇ ಇಲ್ಲ’ ಅಂತ ಪ್ರತಿಕ್ರಿಯಿಸಿ ಮುಟ್ಟಾಗುವುದು ಬೇಡ. Please)

ಇವತ್ತು ಭೈರಪ್ಪ ನೆನಪು ಮಾಡಿಕೊಳ್ಳಬೇಕಾದುದು  ಪ್ರೊ. ನಂಜುಂಡಸ್ವಾಮಿಯಂತಹ ಚಿಂತಕರನ್ನ. ಕರ್ನಾ ಟಕಕ್ಕೆ after all, ಒಂದು ಕೋಳಿ ಮಾಂಸ ಮಾರುವ ಅಂಗಡಿ ಬರುತ್ತದೆ ಅಂದದ್ದಕ್ಕೆ ಭೂಮಿ ಆಕಾಶ  ಒಂದು ಮಾಡಿ ಕೂಗಾಡಿದ್ದರು ಪ್ರೊಫೆಸರ್. ಏಕೆಂದರೆ, ಅವರಿಗೆ ಗೊತ್ತಿತ್ತು: ಒಬ್ಬ ಮಿಷನರಿ ಬರುವುದಕ್ಕಿಂತ ಒಬ್ಬ ವ್ಯಾಪಾರಿ ಬರುವುದು ದೇಶಕ್ಕೆ ಗಂಡಾಂತರಕಾರಿ ! ಅವರ ಮಾತು ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಅಕ್ಕಿ ಬೆಳೆಯುತ್ತಿದ್ದ ನೆಲದಲ್ಲಿ ಕಂಪ್ಯೂಟರ್ ಬೆಳೆ ಬೆಳೆಯಿತು. ಕೋಟ್ಯಂತರ ರೂಪಾಯಿ ಬಂದೇ ಬಿಟ್ಟಿತೇನೋ ಎಂಬಂತೆ ಭಾಸವಾಯಿತು. ದೊಡ್ಡದೊಂದು ಐಟಿ-ಬಿಟಿ ಗುಳ್ಳೆ ಎದ್ದು ನಿಂತಿತು. ಅದಕ್ಕೀಗ ಸೂಜಿ ಚುಚ್ಚಲಾಗಿದೆ. ಅಮೆರಿಕದಲ್ಲಿ  ಬಡವರಿಗೆ (I mean, ಆದಾಯವಿಲ್ಲದ high risk group peopleಗೆ) ಮನೆ ಸಾಲ ಕೊಡುವುದರಲ್ಲಿ ಆದ ಚಿಕ್ಕದೊಂದು ಯಡವಟ್ಟು ಇಡೀ ಜಗತ್ತಿನ  ಎಕಾನಮಿಗೆ ಹೊಡೆತ ಕೊಡುತ್ತಿದೆ. ಷೇರು ಮಾರ್ಕೆಟ್ ಮಣ್ಣು ಮುಕ್ಕಿದೆ. ರಿಯಲ್ ಎಸ್ಟೇಟ್ ಬೋರಲು ಬಿದ್ದಿದೆ. ಲಕ್ಷಾಂತರ ಸಂಬಳ ತರುತ್ತೇವೆಂದು ಇಲ್ಲಿಂದ ಹೋದವರು ಕ್ರಮೇಣ ಹಿಂತಿರುಗುತ್ತಿದ್ದಾರೆ. ಎಲ್ಲ ವೈಭವ ಕಳಚಿ ಬೀಳುತ್ತಿದೆ. ಇನ್ನು ಸರದಿಯಿಟ್ಟು ಭಾರತಕ್ಕೆ ಎಲ್ಲರೂ ಹಿಂತಿರುಗುತ್ತಾರೆ. ಬೋಧಿಸಲಿ ಅವರಿಗೆ ಹಿಂದೂ ಧರ್ಮವನ್ನು ಭೈರಪ್ಪ.

ಪ್ರಯಾರಿಟಿಗಳನ್ನು ಇತಿಹಾಸಕಾರ ಮುತ್ಸದ್ದಿ ಮತ್ತು ಬರಹಗಾರ ಯಾವತ್ತಿಗೂ ಮರೆಯಬಾರದು. ಭೈರಪ್ಪನವರು ಇತಿಹಾಸಕಾರರೂ ಹೌದು, ಬರಹಗಾರರೂ ಹೌದು. ಸದ್ಯ, ಮುತ್ಸದ್ದಿಯಲ್ಲ.

-ರವಿ ಬೆಳಗೆರೆ
ಭೈರಪ್ಪ ‘ಮುತ್ಸದ್ದಿ’ಯಲ್ಲ ಅಂತ ಸರ್ಟಿಫಿಕೆಟ್ ಕೊಡಲು ಇವರ್ಯಾರು?

ನಿಮಗೆ ಸಮಯವಿದ್ದರೆ, ಈ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂಬ ಇಚ್ಛೆ ನಿಮ್ಮಲ್ಲಿದ್ದರೆ ಕೊನ್ರಾಡ್ ಎಲ್ಟ್ಸ್ ಬರೆದಿರುವ “Negationism in India” ಎಂಬ ಪುಸ್ತಕವನ್ನು ಒಮ್ಮೆ ಓದಿ.

ಭಾರತದಲ್ಲಿ ಮುಸ್ಲಿಮ್ ಆಕ್ರಮಣಕಾರರು, ಆಡಳಿತಗಾರರು ನಡೆಸಿದ ದೌರ್ಜನ್ಯವನ್ನು ಹೇಗೆ ಮರೆಮಾಚಲಾಗುತ್ತಿದೆ ಎಂಬುದನ್ನು ಬಯಲು ಮಾಡಲು ಯತ್ನಿಸಿರುವ ಎಲ್ಟ್ಸ್, ಮೊದಲಿಗೆ ಯುರೋಪ್ನಲ್ಲಿ ನಡೆದ ಇಂತಹದ್ದೇ ಪ್ರಯತ್ನಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. “ಇಲ್ಲ, ಇಲ್ಲ.. ಹಿಟ್ಲರ್ ಯಹೂದಿಗಳ ಮಾರಣಹೋಮವನ್ನೇ ಮಾಡಲಿಲ್ಲ. ಅಲ್ಲೊಂದು ಇಲ್ಲೊಂದು ದೌರ್ಜನ್ಯಗಳು ನಡೆದವಷ್ಟೇ. ಜರ್ಮನಿ ಹಾಗೂ ರಷ್ಯಾದಲ್ಲಿ ಹೋಲೋಕಾಸ್ಟ್ ನಡೆಯಲೇ ಇಲ್ಲ” ಎಂದು ವಾಸ್ತವ ಸತ್ಯವನ್ನೇ ಮರೆಮಾಚುವ ಪ್ರಯತ್ನ ಯುರೋಪ್ನಲ್ಲಿ ನಡೆದಿತ್ತು. ಹಾಗಂತ ಉದಾಹರಣೆ ಸಮೇತವಾಗಿ ಭಾರತದ ಮೇಲೆ ಬೆಳಕು ಚೆಲ್ಲುವ ಎಲ್ಟ್ಸ್, ಒಂದು ಸಾವಿರ ವರ್ಷಗಳ ಕಾಲ ಮುಸ್ಲಿಮರು ನಡೆಸಿದ ದೌರ್ಜನ್ಯಗಳನ್ನು ನಮ್ಮ ಇತಿಹಾಸಕಾರರು ಹೇಗೆ ಮುಚ್ಚಿಹಾಕುತ್ತಾ ಬಂದಿದ್ದಾರೆ, ಹೇಗೆ ದೌರ್ಜನ್ಯವೇ ನಡೆದಿಲ್ಲ ಎಂದು ನಿರಾಕರಿ ಸುತ್ತಾರೆ ಎಂಬುದನ್ನು ವಿವರಿಸುತ್ತಾರೆ.

ಅಯೋಧ್ಯೆ ವಿಷಯದಲ್ಲೂ ಹೀಗೇ ಆಯಿತು.

ಮೊದಲಿಗೆ, ಅಲ್ಲಿ ರಾಮನ ದೇವಸ್ಥಾನವೇ ಇರಲಿಲ್ಲ ಎಂದು ನಿರಾಕರಿಸಿದರು. ಇತ್ತು ಎಂದು ಗಟ್ಟಿಯಾಗಿ ವಾದಿಸಿದ ಕೂಡಲೇ, ‘ಹಾಗಾದರೆ ರಾಮ ಅಲ್ಲೇ ಜನಿಸಿದ ಎಂಬುದಕ್ಕೆ ಸಾಕ್ಷ್ಯಾಧಾರ ಗಳನ್ನು ಕೊಡಿ’ ಎಂದು ಕೇಳಿದರು. ಸಾಕ್ಷ್ಯಾಧಾರಗಳನ್ನು ಕೊಟ್ಟ ಕೂಡಲೇ, “ಇಲ್ಲ, ಇಲ್ಲ, ಇಷ್ಟು ಸಾಕಾಗುವುದಿಲ್ಲ. ಇನ್ನೂ ಗಟ್ಟಿಯಾದ, ನಂಬುವಂತಹ ಸಾಕ್ಷ್ಯ ನೀಡಿ” ಎಂದು ಒತ್ತಾಯಿಸಿ ದರು. ಅಂತಹ ಪ್ರಭಲವಾದ ಸಾಕ್ಷ್ಯವೂ ಇದೆ ಎಂದು ಗೊತ್ತಾದರೆ ಏನು ಮಾಡುತ್ತಾರೆ ಗೊತ್ತೆ? ಎರಡು ತಂತ್ರಗಳನ್ನು ಒಡ್ಡುತ್ತಾರೆ. ಎಂದೋ ನಡೆದ ಘಟನೆಯ ಬಗ್ಗೆ ಇಂದಿಗೂ ಚರ್ಚೆ ನಡೆಸುವುದು ಎಷ್ಟು ಸರಿ? ಹಳೆಯದ್ದನ್ನೆಲ್ಲಾ ನಾವು ಮರೆತು ಹೊಸ ಸಮಾಜವನ್ನು ಕಟ್ಟಬೇಕು. ಇಂದು ನಮ್ಮ ಮುಂದಿರುವ ಸಮಸ್ಯೆ ಎಂದರೆ ಉತ್ತಮ ರಸ್ತೆಗಳು ಬೇಕು, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು, ಫೋನು, ವಿದ್ಯುತ್ ನಮಗೆ ಬೇಕು. ಹಳೆಯದ್ದನ್ನೆಲ್ಲ ಕೆದಕಿ ತೆಗೆಯಬಾರದು ಎಂದು ನಿಮ್ಮ ತಲೆಸವರಲು ಯತ್ನಿಸುತ್ತಾರೆ. ಒಂದು ವೇಳೆ ನೀವೇನಾದರೂ ಅಂತಹ ಮಾತುಗಳಿಗೆ ಸೊಪ್ಪುಹಾಕದಿದ್ದರೆ, “ಮುಸ್ಲಿಮರು ಭಾರತಕ್ಕೆ ಆಗಮಿಸಲು ನಮ್ಮಲ್ಲಿನ ಜಾತಿ ಪದ್ಧತಿಯೇ ಕಾರಣ. ದಲಿತರನ್ನು ದೂರವಿಟ್ಟಿದ್ದ ಸಾಮಾಜಿಕ ಅಸಮಾನತೆಯೇ ಮುಖ್ಯ ಕಾರಣ. ನಾವು ದಲಿತರನ್ನು ಸಮಾನವಾಗಿ ಕಂಡಿದ್ದರೆ, ನಡೆಸಿಕೊಂಡಿದ್ದರೆ ಜಾತಿ ಹೆಸರಿನಲ್ಲಿ ಸಮಾಜವನ್ನು  ಒಡೆಯದಿದ್ದರೆ ಪರಕೀಯರು ನಮ್ಮ ಮೇಲೆ ಆಕ್ರಮಣ ಮಾಡಲು ಸಾಧ್ಯವಾಗುತ್ತಿತ್ತೇ?” ಎಂದು ವಿಷಯಾಂತರ ಮಾಡಲು ಯತ್ನಿಸುತ್ತಾರೆ.

ಹೀಗೆ ಒಂದು ಗಂಭೀರ ಸಮಸ್ಯೆ, ಐತಿಹಾಸಿಕ ದೌರ್ಜನ್ಯದ ಬಗೆಗಿನ ಚರ್ಚೆಯನ್ನು ದಾರಿತಪ್ಪಿಸಿ ಸಾಮಾಜಿಕ ಅಸಮಾನತೆಯ ಹೆಸರಿನಲ್ಲಿ ಜಾತಿ ಜಾತಿಗಳ ನಡುವೆಯೇ ಕಲಹವನ್ನು ತಂದಿಡು ತ್ತಾರೆ.

ಕಮ್ಯುನಿಸ್ಟರು ಮಾಡಿಕೊಂಡು ಬಂದಿರುವುದು ಇದನ್ನೇ. ಒಂದು ವೇಳೆ, ನಿಮ್ಮನ್ನು ಮನವೊಲಿಸಬಹುದಾಗಿದ್ದರೆ ತಮ್ಮ ಪ್ರತಿಭೆ, ವಾಕ್ಚಾತುರ್ಯವನ್ನು ಬಳಸಿ ನಿಮ್ಮನ್ನು ಮಂಗನನ್ನಾಗಿ ಮಾಡುತ್ತಾರೆ. ವಾದದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಗೊತ್ತಾದ ಕೂಡಲೇ ನಿಮ್ಮನ್ನು confuse ಮಾಡಲು, ಕೊನೆಗೆ Discredit ಮಾಡಲು ಯತ್ನಿಸುತ್ತಾರೆ. ತರ್ಕದಲ್ಲಿ ಸೋಲಿಸಲಾಗದಿದ್ದರೆ ವ್ಯಕ್ತಿ ನಿಂದನೆಗೆ ಇಳಿದು ಬಿಡುತ್ತಾರೆ. ನಿಮ್ಮ ಬಟ್ಟೆಗೆ ಕೊಚ್ಚೆ ಎರಚಿ ಬಿಡುತ್ತಾರೆ, ತೊಳೆದುಕೊಳ್ಳುವ ಕೆಲಸ ನಿಮ್ಮದಾಗುತ್ತದೆ.

“ವಿಚಾರ ನಪುಂಸಕತೆ” ಇರುವವರು ಇನ್ನೇನನ್ನು ಮಾಡಲು ಸಾಧ್ಯ?

ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪನವರು ಮತಾಂತರದ ಬಗ್ಗೆ ಸ್ಥಳೀಯವಾಗಿಯೇ ಜಾಗತಿಕ ಮಟ್ಟದ ಒಂದು ಚರ್ಚೆ ಯನ್ನು ಆರಂಭಿಸಿದ್ದಾರೆ. ಕ್ರಿಶ್ಚಿಯಾನಿಟಿಯ ನಿಜವಾದ ಮುಖ ವನ್ನು ಜಾಗತಿಕ ಸ್ಥರದಲ್ಲಿ ಅನಾವರಣ ಮಾಡಿದ್ದಾರೆ. ಹಾಗೆ ಭೈರಪ್ಪನವರು ಆಧಾರ ಸಮೇತ ಎತ್ತಿರುವ ಪ್ರಶ್ನೆಗಳಿಗೆ ತಾರ್ಕಿಕ ಹಾಗೂ ಆಧಾರ ಸಮೇತವಾಗಿಯೇ ಉತ್ತರ ಕೊಡಬೇಕಾದುದು ಸಹಜ ಆಶಯ.

ಆದರೆ “ವಿಜಯ ಕರ್ನಾಟಕದಲ್ಲಿ ಅವರ ಲೇಖನ ಓದಿದ ಮೇಲೆ, ಅವರು ‘ಆವರಣ’ದಿಂದ ಹೊರಬರುವುದು ಹಾಗಿರಲಿ, ಪೂರ್ತಿಗುಹಾಂತರಾಳವನ್ನೇ ಹೊಕ್ಕಂತೆ ಕಾಣುತ್ತಿದೆ. ಭೈರಪ್ಪ ವಿಪರೀತ Paranoid ಆಗಿದ್ದಾರೆ. ತುಂಬ ಚೆಲುವಾಗಿ, ಮುದ ನೀಡಿ, ಯೋಚನೆಗೆ ಹಚ್ಚಿ, ಭಾವೋತ್ಕರ್ಷಕ್ಕೆ ಕೊಂಡೊಯ್ದು ಓದುಗನಿಗೊಂದು ಮಧುರಾನುಭೂತಿ ನೀಡುತ್ತಿದ್ದ ಭೈರಪ್ಪ  ಇದೇಕೆ ಹೀಗೆ’ ಎಲ್ಲ ಬಗೆಯ ಕರ್ಮಠ’ರಂತೆ ಬರೆಯತೊಡಗಿ ದ್ದಾರೆ”.

“ಅಕ್ಟೋಬರ್ 16ನೇ ತಾರೀಕಿನ ವಿಜಯ ಕರ್ನಾಟಕ ತೆರೆದು ಅದರಲ್ಲಿನ  ಭೈರಪ್ಪನವರ ಲೇಖನವನ್ನು ಒಬ್ಬರೇ ಕುಳಿತು ದೊಡ್ಡ ದನಿಯಲ್ಲಿ  ಓದಿಕೊಳ್ಳಿ. ಸ್ವಲ್ಪ ಹೊತ್ತಿಗೆ ನೀವು ಯಾರಿಗೋ ಲೆಕ್ಚರು ಕೊಡುತ್ತಿದ್ದೀರಿ ಎಂಬಂತೆ ಭಾಸವಾಗುತ್ತದೆ, ನಿಮಗೂ ಒಬ್ಬ  ಕ್ರೈಸ್ತರ ಮತ ಬೋಧಕನಿಗೂ ವ್ಯತ್ಯಾಸವಿಲ್ಲ  ಅನಿಸುತ್ತದೆ. ಹದಿನೈದು ಜನರನ್ನು ಕೂರಿಸಿಕೊಂಡು ಓದಿ ಬಿಡಿ: ನೀವು ಮುಸ್ಲಿಂ ಧರ್ಮ ಬೋಧಕನಂತೆ ಧ್ವನಿಸತೊಡಗುತ್ತೀರಿ. ಇದನ್ನೇ ನಾನು ಒಂದು ಬರಹದಲ್ಲಿ ನ ಕರ್ಮಠ ಗುಣ ಅನ್ನುವುದು. It starts Preaching. Writer starts barking. ಯಾವಾಗ ನಮ್ಮ ಬರವಣಿಗೆಗೆ ‘ಪ್ರವಾದೀ ಗುಣ’ ಬಂದು ಬಿಡುತ್ತದೋ, ಆವಾಗ ನಮ್ಮೊಳಗಿನ ಸೃಜನಶೀಲ ಬರಹಗಾರ ಸತ್ತು ಹೋಗಿ ಬಿಡುತ್ತಾನೆ. sorry, ಭೈರಪ್ಪ.”

ಹೀಗೆ ಸಾಗುವ ರವಿ ಬೆಳಗೆರೆಯವರ ಲೇಖನ(ಅಕ್ಟೋಬರ್ ೧೯)ವನ್ನು ಓದುತ್ತಿದ್ದರೆ  ಇದೇನು “ಚರ್ಚೆಯೋ ಅಥವಾ ಚಾರಿತ್ರ್ಯವಧೆಯೋ”, “ತರ್ಕವೋ ಅಥವಾ ತರ್ಲೆಯೋ” ಎಂಬ ಅನುಮಾನ ಕಾಡಲಾರಂಭಿಸಿತು!

‘ಮಧುರಾನುಭೂತಿ’, ‘ಭಾವೋತ್ಕರ್ಷ’, ‘ಕರ್ಮಠ’ ಮುಂತಾದ ಪದಗಳನ್ನು ಬೆಳಗೆರೆ ವಿನಾಕಾರಣ ಎಳೆದುಕೊಂಡು ಬಂದುಬಿಡುತ್ತಾರೆ. ಅದನ್ನು ನೋಡಿದಾಗ ಈ “ಪ್ರೀಚಿಂಗು, ಬಾರ್ಕಿಂಗು” ಮಾಡುತ್ತಿರುವುದು ಭೈರಪ್ಪನವರೋ ಅಥವಾ ರವಿ ಬೆಳಗೆರೆಯವರೋ ಎಂಬ ಗೊಂದಲವುಂಟಾಗಿ ಬಿಡುತ್ತದೆ. ಅಲ್ಲಾ ಸ್ವಾಮಿ, ಮಧುರಾನುಭೂತಿ ಬೇಕೆಂದರೆ ‘ಗೃಹಭಂಗ’ ಓದಿ, ಅದು ಬೇಡವೆಂದರೆ ‘ಗ್ರಹಣ’ ಓದಿ, ಒಳ್ಳೇ ಸಾಥ್ ಬೇಕೆಂದರೆ ‘ಸಾರ್ಥ’ವನ್ನು ಕೈಗೆತ್ತಿಕೊಳ್ಳಿ.

ಆದರೆ ಸಾಹಿತಿಯೇ ಆಗಿದ್ದರೂ ಭೈರಪ್ಪನವರು  ‘ವಿಜಯ ಕರ್ನಾಟಕ’ದಲ್ಲಿ ಅವರು ಬರೆದಿರು ವುದು ಕಾದಂಬರಿಯಲ್ಲ, ಲೇಖನ. ಸಾಹಿತ್ಯ ನವಿರಾಗಿರಬೇಕು ನಿಜ. ಆದರೆ ಲೇಖನ ವಸ್ತುನಿಷ್ಠವಾಗಿರ ಬೇಕು. ಸಾಹಿತ್ಯಕ್ಕೆ ಸತ್ಯನಿಷ್ಠೆಯ ಅಗತ್ಯವಿಲ್ಲ. ನಿಮಗೆ ಬೇಕಾದ ರೀತಿಯಲ್ಲಿ ಕಾಲ್ಪನಿಕ ಪ್ರಸಂಗಗಳನ್ನು ಹೆಣೆದುಕೊಂಡು ಹೋಗಬಹುದು. ಮಿಗಿಲಾಗಿ ಭೈರಪ್ಪನವರ ಕಾದಂಬರಿಗಳಲ್ಲಿ ನವಿರಾದ ಭಾಷೆ ಇದ್ದರೂ, ಅವುಗಳನ್ನು ಓದಿದಾಗ ಮಧುರ ಅನುಭವ ಸಿಗುವುದೇ ಆಗಿದ್ದರೂ ಅರುಣ್ ಶೌರಿಯವ ರಂತೆ ಅವರೊಬ್ಬ Serious Writer. ಶೌರಿ ನಿಮ್ಮ ಮಿದುಳಿಗೆ ತ್ರಾಸ ಕೊಟ್ಟು ನಿಮ್ಮನ್ನು ಚಿಂತನೆಗೆ ಹಚ್ಚುತ್ತಾರೆ. ಖುಷವಂತ್ಸಿಂಗ್ ನಿಮ್ಮ ಮನಸ್ಸಿಗೆ ಕಚಗುಳಿ ಇಕ್ಕುತ್ತಾರೆ. ನಿಮಗೆ ಕಚಗುಳಿಯಲ್ಲಿ ಮಾತ್ರ ಮಧುರಾನುಭೂತಿ ಸಿಗುತ್ತದೆ ಎಂಬ ಕಾರಣಕ್ಕೆ ಒಬ್ಬ ಗಂಭೀರ ಲೇಖಕನಿಂದಲೂ ಕಚಗುಳಿಯನ್ನು ನಿರೀಕ್ಷಿಸುವುದು ಎಷ್ಟು ಸರಿ? “ಟೈಂಪಾಸ್” ಅಥವಾ “ಕಂಪನಿ ಆಫ್ ವಿಮೆನ್”ನಲ್ಲಿ ಸಿಕ್ಕಿದ್ದೇ “ಆವರಣ” ದಲ್ಲೂ ಸಿಗಬೇಕು ಎಂದರೆ ಹೇಗಾದೀತು ಸ್ವಾಮಿ!

ನಿಮಗೆ ಬೇಕಾದದ್ದು ‘ಆವರಣ’ದಲ್ಲಿ ಸಿಗಲಿಲ್ಲ ಎಂಬ ಕಾರಣಕ್ಕೆ ಭೈರಪ್ಪನವರು ‘ಜಡ್ಡುಗಟ್ಟಿದ್ದಾರೆ’ ಎಂದು ತೀರ್ಪು ನೀಡುವು ದನ್ನು ಹೇಗೆತಾನೇ ಒಪ್ಪಿಕೊಳ್ಳಲು ಸಾಧ್ಯ?

ಇನ್ನು ನೀವು ಒಂದಿಷ್ಟು ದಿನ ಇತಿಹಾಸ ಬೋಧಕರಾಗಿದ್ದಿರಬಹುದು. ಆದರೆ ಪ್ಯಾನ್ ಇಸ್ಲಾಮಿಸಂ, ವರ್ಜಿನ್ ಲ್ಯಾಂಡ್ ಅಂತ ಗೋಜಲು ಗೋಜಲಾಗಿ ಯಾವ ಆಧಾರಗಳನ್ನೂ ಕೊಡದೆ ಬರೀ ನಿಂದನೆಗೆ ಪೂರಕವಾಗಿ ಕೆಲವು ಪದಗುಚ್ಛಗಳನ್ನು ಉಲ್ಲೇಖ ಮಾಡಿದ್ದೀರಿ. ಹಾಗಾಗಿ ನಿಮ್ಮ ಲೇಖನ eನವನ್ನೂ ಹೆಚ್ಚಿಸುವುದಿಲ್ಲ, ಬೆಳಕನ್ನೂ ಚೆಲ್ಲುವುದಿಲ್ಲ!! ಕಾರ್ಖಾನೆಯೊಂದರ ಸೈಕಲ್ ಸ್ಟಾಂಡ್ನಲ್ಲಿ ನಿಂತುಕೊಂಡು ಕಮ್ಯುನಿಸ್ಟ್ ನೇತಾರನೊಬ್ಬ  ಭಾಷಣ ಕೊಡುತ್ತಿರುವಂತೆ ಭಾಸವಾಗುತ್ತದೆ!

ರವಿ ಬೆಳಗೆರೆಯವರೇ, ಭೈರಪ್ಪನವರು ಹೇಳಲು ಹೊರಟಿರುವುದೇನು ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದಾದರೆ “ಒಬ್ಬರೇ ಕುಳಿತು ದೊಡ್ಡ ಧ್ವನಿಯಲ್ಲಿ ಓದಿಕೊಳ್ಳಬೇಡಿ”. ಒಮ್ಮೆ ನಿಮ್ಮಷ್ಟಕ್ಕೆ ಓದಿಕೊಂಡು, ಒಂದಿಷ್ಟೊತ್ತು ಶಾಂತಚಿತ್ತರಾಗಿ ಕುಳಿತುಕೊಂಡು ಭೈರಪ್ಪ ಎತ್ತಿರುವ ಪ್ರಶ್ನೆಗಳು ಹಾಗೂ ಆಧಾರಸಮೇತ ಬೆಳಕು ಚೆಲ್ಲಿರುವ ಅಂಶಗಳ ಬಗ್ಗೆ ಚಿಂತನೆ ಮಾಡಿ, ಸಾಕು.

ವಿಶ್ವದ ಅತ್ಯಂತ ಪುರಾತನ ನಾಗರೀಕತೆಗಳೆಂದರೆ ರೋಮನ್, ಗ್ರೀಕ್ ಹಾಗೂ ನಮ್ಮ ಸಿಂಧೂನದಿ ನಾಗರೀಕತೆ. ರೋಮನ್ ಸಾಮ್ರಾಜ್ಯದಲ್ಲಿ ರಾಜನನ್ನೇ ದೇವರು ಎಂದು ಭಾವಿಸಲಾಗುತ್ತಿತ್ತು, ಪೂಜಿಸಲಾಗುತ್ತಿತ್ತು. ಆದರೆ ಜೀಸಸ್  “ನಾನೇ ದೇವರ ಪುತ್ರ. ಜನರ ಉದ್ಧಾರಕ ನಾನೇ” ಎಂದು ಹೇಳಿಕೊಳ್ಳಲಾರಂಭಿಸಿದ. ಹಾಗಾಗಿ ಸಹಜವಾಗಿಯೇ ರೋಮನ್ ರಾಜನ ಕೋಪಕ್ಕೆ ತುತ್ತಾದ. ರಾಜ ತನ್ನ ಪ್ರತಿನಿಧಿಯನ್ನು ಕಳುಹಿಸಿ ಜೀಸಸ್ಗೆ ಎಚ್ಚರಿಕೆಯನ್ನೂ ನೀಡಿದ. ಆದರೆ ಜೀಸಸ್ ತನ್ನ ಪ್ರತಿಪಾದನೆ ಯನ್ನು ಮಾತ್ರ ನಿಲ್ಲಿಸಲಿಲ್ಲ. ಒಂದು ವೇಳೆ, ಜನ ಜೀಸಸ್ನನ್ನೇ ದೇವರ ಪುತ್ರ ಎಂದು ಒಪ್ಪಿಕೊಂಡರೆ, ಆತನನ್ನು ಆರಾಧಿಸಲು ಆರಂಭಿಸಿದರೆ ತನ್ನ ಮಹತ್ವವೇ ಕಳೆದುಹೋಗುತ್ತದೆ ಎಂಬುದನ್ನು ಅರಿತ ರೋಮನ್ ರಾಜ ಜೀಸಸ್ಗೆ ಮರಣ ದಂಡನೆಯನ್ನು ವಿಧಿಸಿದ. ನಮ್ಮಲ್ಲಿ ಹೇಗೆ ಮರಣ ದಂಡನೆಯೆಂದರೆ ನೇಣಿಗೇರಿ ಸುತ್ತಾರೋ ಹಾಗೆಯೇ ರೋಮನ್ ಸಾಮ್ರಾಜ್ಯದಲ್ಲಿ ಮರಣ ದಂಡನೆಗೆ ಗುರಿಯಾಗುವವರನ್ನು ಶಿಲುಬೆಗೇರಿಸುತ್ತಿದ್ದರು. ಕ್ರೈಸ್ತರು ‘ಹೋಲಿ ಕ್ರಾಸ್’ ಎಂದು ಹೇಳುವ ಶಿಲುಬೆ ರೋಮನ್ ಸಾಮ್ರಾಜ್ಯದಲ್ಲಿ ನಮ್ಮ ಕುಣಿಕೆಗೆ ಸಮನಾಗಿತ್ತು. ಜೀಸಸ್ಗೆ ಮರಣದಂಡನೆ ವಿಧಿಸಿದ್ದು ಯಹೂದಿಗಳಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ ಸ್ವಾಮಿ.

ಇನ್ನು ನೀವೇ ಹೇಳಿದಂತೆ ಭೈರಪ್ಪನವರು ಖಂಡಿತ ಹಿಸ್ಟಾರಿ ಯನ್. ಎರಡು ಭಾರಿ ಇಸ್ರೇಲ್ಗೆ ಭೇಟಿ ಕೊಟ್ಟು, ಸತತ ೧೫ ದಿನಗಳ ಕಾಲ ಜೀಸಸ್ ಜನಿಸಿದ, ಓಡಾಡಿದ, ಆತನನ್ನು ಶಿಲುಬೆ ಗೇರಿಸಿದ ಸ್ಥಳಗಳಲ್ಲೆಲ್ಲ ಓಡಾಡಿ ತಿಳಿದುಕೊಂಡು ಬಂದು ಬರೆದಿದ್ದಾರೆ. ಜಗತ್ತಿನ ೫೦ಕ್ಕೂ ಹೆಚ್ಚು ದೇಶಗಳನ್ನು ಸಂದರ್ಶಿಸಿರುವ ಅವರು ಸತ್ಯನಿಷ್ಠರು ಹಾಗೂ ಸತ್ಯ ಯಾವತ್ತೂ ನಿಷ್ಠುರವಾಗಿ ರುತ್ತದೆಯೇ ಹೊರತು ನವಿರಾಗಿರುವುದಿಲ್ಲ.

ಮತ್ತೆ ಇತಿಹಾಸಕ್ಕೆ ಬರೋಣ.

ಕ್ರಿಶ್ಚಿಯಾನಿಟಿ ಪ್ರಾಮುಖ್ಯತೆಗೆ ಬಂದಿದ್ದೇ ಜೀಸಸ್ ಮರಣದ ನಂತರ. ಒಂದೆಡೆ ಸಾಮಾಜಿಕ ಕಲಹದಿಂದಾಗಿ ರೋಮನ್ ಸಾಮ್ರಾಜ್ಯ ದುರ್ಬಲವಾಗತೊಡಗಿತು. ಇನ್ನೊಂದೆಡೆ ಜೀಸಸ್ ಸಂದೇಶ ಸಾರಲು ಹೊರಟ್ಟಿದ್ದವರ ಧ್ವನಿ ಬಲಗೊಳ್ಳುತ್ತಾ ಹೋಯಿತು. Infact, Roman Empire was wiped out by Christians. ನಮ್ಮ ನಳಂದ ವಿಶ್ವವಿದ್ಯಾಲಯವನ್ನು ಹೇಗೆ ಮುಸ್ಲಿಮರು ಸುಟ್ಟು ಹಾಕಿದರೋ ಹಾಗೆಯೇ ಅಲೆಗ್ಸಾಂಡ್ರಿಯಾದ ಬೃಹತ್ ಗ್ರಂಥಾಲಯವನ್ನು ನಾಶಪಡಿಸಿದ್ದು ಕ್ರಿಶ್ಚಿಯನ್ನರೇ.ಎಡ್ವರ್ಡ್ ಗಿಬ್ಬನ್ನ “Decline and Fall of the Roman Empire” ಎಂಬ ಪುಸ್ತಕನ್ನೊಮ್ಮೆ ಓದಿ.

ಅಷ್ಟೇ ಅಲ್ಲ, ಪ್ಲೇಟೋ, ಅರಿಸ್ಟಾಟಲ್ಗೆ ಜನ್ಮ ನೀಡಿದ ವಿಶ್ವದ ಅತ್ಯಂತ ಪುರಾತನ ಹಾಗೂ ಶ್ರೇಷ್ಠ ನಾಗರೀಕತೆಗಳಾದ ಗ್ರೀಕ್ ಹಾಗೂ ರೋಮನ್ ಸಿವಿಲೈಜೇಶನ್ಗಳನ್ನು ಬಲಿತೆಗೆದುಕೊಂಡಿದ್ದೇ ಕ್ರೈಸ್ತರು. ಅಂತಹ Christian Evangelist ಗಳ ಮುಂದಿನ ಗುರಿ ಏಷ್ಯಾ. ಅದರಲ್ಲೂ ಭಾರತ. ಹಾಗಂತ ದಿವಂಗತ ಪೋಪ್ ಜಾನ್ ಪಾಲ್ ಅವರೇ ಹೇಳಿದ್ದಾರೆ.

ಇಂದು ವಿಶ್ವದ ಅತ್ಯಂತ ಹಳೆಯ ಹಾಗೂ surviving civilisation ಅಂದರೆ ನಮ್ಮ ಭಾರತದ ನಾಗರೀಕತೆಯೊಂದೇ. ಅದೂ ಕೂಡ ರೋಮನ್ ಹಾಗೂ ಗ್ರೀಕ್ ನಾಗರೀಕತೆಗಳಂತೆ ಇತಿಹಾಸದ ಪುಟ ಸೇರಿ ಪಳೆಯುಳಿಕೆಯಾಗಿರುವ ಡೈನೋಸಾರ್ನಂತಾಗಬೇಕೆ? ಅಂತಹ ಅಪಾಯದ ಬಗ್ಗೆ ಎಚ್ಚರಿಸಲು ಹೊರಟರೆ ‘ಜಡ್ಡುಗಟ್ಟಿ’ದವರಾಗಿ ಬಿಡುತ್ತಾರೆಯೇ? ನೀವು ಅಣಕವಾಗಿ ಹೇಳಿರುವಂತೆ ಭೈರಪ್ಪನವರು ಹೊಸವಿಚಾರವನ್ನೇನೂ ಎತ್ತಿಲ್ಲ. ಆದರೆ ಇತಿ ಹಾಸದ ಪುಟಗಳಲ್ಲಿ ದಾಖಲಾಗಿರುವ ಹಳೆಯ ವಿಚಾರಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಹೊಸ ಅನಾಹುತಗಳಾಗದಂತೆ ತಡೆಯಬೇಕೆಂಬ ಉದ್ದೇಶ ಖಂಡಿತ ಅವರಿಗಿದೆ. ಅವರ ಕಾಳಜಿಯನ್ನು ಅರ್ಥಮಾಡಿಕೊಳ್ಳುವಷ್ಟು ಮತಿ ಇಲ್ಲದವರಿಗೆ ಭೈರಪ್ಪ ‘ಮತಭ್ರಾಂತ’ರಂತೆ ಕಾಣುತ್ತಾರೆ ಅಷ್ಟೇ.

ಇನ್ನು ನಗುತರುವ ವಿಚಾರವೆಂದರೆ “ನೀವು ಆಂಧ್ರದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರನ್ನು ಕ್ರೈಸ್ತರು ಅಂತ ಭಾವಿಸಿದ್ದರೆ ಅದಕ್ಕಿಂತ ಅಪದ್ಧ ಮತ್ತೊಂದಿಲ್ಲ. ಅವರ ಪೂರ್ವಜರ್ಯಾರೋ ಕ್ರೈಸ್ತರಾಗಿದ್ದಿರಬಹುದು. ಆದರೆ ಬೀಗತನ ಗಳಿಂದ ಹಿಡಿದು ರಾಜಕಾರಣದ ತನಕ ರಾಜಶೇಖರ ರೆಡ್ಡಿಯ ವರು ಶುದ್ಧಾನು ಶುದ್ಧ ರೆಡ್ಡಿಯೇ” ಎನ್ನುವ ಬೆಳಗೆರೆಯವರದು ತರ್ಕವಿಲ್ಲದ ಪ್ರತಿಪಾದನೆ. ದೇಶದ ತುಂಬ ಇರುವವರೆಲ್ಲ ಪೂರ್ವಜರು ಹಿಂದೂಗಳಾಗಿದ್ದು ಈಗ ಕ್ರೈಸ್ತರಾಗಿರುವವರೇ. “ಪೂರ್ವಜರ್ಯಾರೋ ಕ್ರೈಸ್ತರಾಗಿದ್ದಿರಬಹುದು” ಎಂದು ಹೊಸ ವಾದ ಹುಟ್ಟುಹಾಕುತ್ತಿದ್ದೀರಲ್ಲಾ, ರಾಜಶೇಖರ ರೆಡ್ಡಿಯವರು ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬುದಕ್ಕೆ ನಿಮ್ಮ ಬಳಿ ದಾಖಲೆ ಇದ್ದರೆ ಜನರ ಮುಂದಿಡಿ. ಆತನಲ್ಲಿ ರೆಡ್ಡಿ ಗುಣಗಳಿವೆ ಎಂಬ ಕಾರಣಕ್ಕೆ, ರೆಡ್ಡಿಗಳೊಂದಿಗೇ ಸಂಬಂಧ ಬೆಳೆಸಿದ್ದಾರೆ ಎಂಬ ಕಾರಣಕ್ಕೆ ಹಿಂದುವಾಗಿ ಬಿಡಲ್ಲ. ಆತ ಹಿಂದೂವಾಗಿದ್ದರೆ ಆತನ ಹೆಸರು ‘ಯೇಸುಪದ ಸಾಮ್ಯುಯೆಲ್ ರಾಜಶೇಖರ ರೆಡ್ಡಿ’ ಏಕಾಗುತ್ತಿತ್ತು? ತಿರುಪತಿಯಲ್ಲಿ ಮತಾಂತರ ನಡೆದಿದ್ದು ಯಾರ ಕುರ್ಚಿಯ ಕೆಳಗೆ? ಆಂಧ್ರದಲ್ಲಿ ನಾಯಿ ಕೊಡೆಗಳಂತೆ ಚರ್ಚ್ಗಳು ತಲೆಯೆತ್ತುತ್ತಿರುವುದು ಯಾರ ಆಡಳಿತದಲ್ಲಿ?

ಸ್ವಾಮಿ, ಮನಸ್ಸು ಜಡಗೊಂಡರೆ ವಿವೇಕಕ್ಕೆ ಮಂಕೂ ಕವಿಯು ತ್ತದೆ, ತರ್ಕರಹಿತ ವಾದಕ್ಕಿಳಿದರೆ ವಿವೇಕ ಸತ್ತೂ ಹೋಗುತ್ತದೆ. “ಥೆರೇಸಾಗೆ ಸಿಕ್ಕ ಗೌರವ ಲಿಂಗಾಯತರ ಮಾತೆ ಮಹಾದೇವಿಗೆ ಸಿಕ್ಕಿದ್ದಿದ್ದರೆ ಭೈರಪ್ಪ ಸಿಟ್ಟಾಗ ಬೇಕಿತ್ತು! ಹ್ಹ”, “ನಂಗೆ ಆ ಉದ್ದೇಶವೇ ಇಲ್ಲ’ ಅಂತ ಪ್ರತಿಕ್ರಿಯಿಸಿ ಮುಟ್ಟಾಗುವುದು ಬೇಡ. Please” ಎಂದು ನಾಡೇ ಮೆಚ್ಚಿಕೊಂಡಿರುವ ಹಿರಿಯ ಸಾಹಿತಿಯ ಬಗ್ಗೆ ಉಡಾಫೆಯ ಮಾತುಗಳನ್ನಾಡಿ ಅದನ್ನು ‘Demonstrate‘ ಮಾಡುವ ಅಗತ್ಯವಿಲ್ಲ.

ಇನ್ನು ಮದರ್ ತೆರೆಸಾ ಅವರ ವಿಷಯಕ್ಕೆ ಬರೋಣ. ನೀವು ಹೇಳುವಷ್ಟು ಆಕೆ ಒಳ್ಳೆಯವರಾಗಿದ್ದರೆ, ಆಕೆಗೆ ಮತಾಂತರ ಮಾಡುವ ಉದ್ದೇಶ ಇಲ್ಲದೇ ಹೋಗಿದ್ದಿದ್ದರೆ ನಾವೆಲ್ಲರೂ ಖುಷಿಪಡಬಹುದಿತ್ತು. ಆದರೆ ಕ್ರಿಷ್ಟೋಫರ್ ಹಿಚೆನ್ಸ್ ಹಾಗೂ ತಾರಿಕ್ ಅಲಿ ಅವರು ಬ್ರಿಟನ್ ಚಾನೆಲ್ಗಾಗಿ ರೂಪಿಸಿದ “Hell’s Angel” ಎಂಬ ಡಾಕ್ಯೂಮೆಂಟರಿಯನ್ನು ವೀಕ್ಷಿಸಿದ್ದೀರಾ? ಹೇಗೋ ನಿಮಗೆ ಇಂಟರ್ನೆಟ್ ಬಗ್ಗೆ ಚೆನ್ನಾಗಿ ಗೊತ್ತಲ್ಲ, “ಯು ಟ್ಯೂಬ್”ನಲ್ಲಿ ತಡಕಾಡಿ ನೋಡಿ. ಇಲ್ಲವೆ ಡಾಕ್ಯುಮೆಂಟ ರಿಯ ಪುಸ್ತಕ ರೂಪವಾದ “The Missionary Position” ಓದಿ, ಸತ್ಯದ ಅರಿವಾಗುತ್ತದೆ.

ಮದರ್ ತೆರೆಸಾ ಅವರ ಮಿಡಿಯುವ ಹೃದಯ, ಅದರೊಳಗಿರುವ ಅನುಕಂಪದ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಆಕೆ ಜನಿಸಿದ್ದು ಅವಿಭಜಿತ ಯುಗೋಸ್ಲಾವಿಯಾದಲ್ಲಿ. ಅದೇ ಯುಗೋಸ್ಲಾವಿಯಾದಲ್ಲಿ ಅಧ್ಯಕ್ಷ ಸ್ಲೊಬಡಾನ್ ಮಿಲೋಸೆವಿಚ್ ಅವರ ಆಡಳಿತಾವಧಿಯಲ್ಲಿ ಮುಸ್ಲಿಮರ ಮಾರಣಹೋಮ ನಡೆದಿದ್ದನ್ನು ನೆನಪಿಸಿಕೊಳ್ಳಿ. ಕೊನೆಗೆ ‘ನೇಟೋ’ ಪಡೆಗಳು ಯುಗೋಸ್ಲಾವಿಯಾದ ಮೇಲೆ ದಾಳಿ ಮಾಡಿ, ಮಿಲೋಸೆವಿಚ್ ಅವರನ್ನು ಬಂಧಿಸಿ ಜೈಲಿಗೆ ತಳ್ಳಬೇಕಾಗಿ ಬಂತು. ಅಂದು ತನ್ನ ಹುಟ್ಟೂರಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ಘೋರ ದೌರ್ಜನ್ಯ ನಡೆಯುತ್ತಿದ್ದಾಗ ಮದರ್ ತೆರೆಸಾ ಅವರ ಮನವೇಕೆ ಮಿಡಿಯಲಿಲ್ಲ? ಕಲ್ಕತ್ತಾದ ಕೊಳೆಗೇರಿಗಳ ಬಗ್ಗೆ ಅನುಕಂಪ ಹೊಂದಿದ್ದ ತೆರೆಸಾ ಅವರು ತಮ್ಮ ಧರ್ಮೀಯನೇ ಆಗಿದ್ದ ಮಿಲೋಸೆವಿಚ್ಗೆ ಏಕೆ ಬುದ್ಧಿವಾದ ಹೇಳಲಿಲ್ಲ? ಇಂದಿಗೂ ಮುಸ್ಲಿಮ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಇಸ್ಲಾಮ್ ಮತಾನುಯಾಯಿಗಳನ್ನು ಕೊಲ್ಲುತ್ತಿರುವುದು ಕ್ರೈಸ್ತ ರಾಷ್ಟ್ರಗಳೇ.

ಅದಿರಲಿ, ನೀವೇ ಮೆಚ್ಚಿಕೊಳ್ಳುವ ಓಶೋ ಅವರು ಮದರ್ ತೆರೆಸಾ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಓದಿದ್ದೀರಾ? ಚರಂಡಿಯಲ್ಲಿ ಮಲಗುವ ನಿರ್ಗತಿಕ ಮಕ್ಕಳನ್ನು ಎದೆಗವುಚಿ ಕೊಳ್ಳಲು ಮದರ್ ತೆರೆಸಾ ಅವರೇ ಆಗಬೇಕಿಲ್ಲ.

ಪೋಸು ಯಾರು ಬೇಕಾದರೂ ಕೊಡಬಹುದು. ಐಶ್ವರ್ಯಾ ರೈ ಕೂಡ ಅನಾಥ ಮಕ್ಕಳನ್ನು ಅಪ್ಪಿಕೊಂಡು ಫೋಟೋಕ್ಕೆ ಪೋಸು ಕೊಡುತ್ತಾಳೆ. ಪ್ರತಿ ವರ್ಷ ಮಿಸ್ ವರ್ಲ್ಡ್, ಮಿಸ್ ಯುನಿವರ್ಸ್ ಆದವರೆಲ್ಲ ಅಂತಹ ಪೋಸು ಕೊಟ್ಟೇ ಕೊಡು ತ್ತಾರೆ. “ಅನಾಥ ಹಿಂದೂ ಕಂದಮ್ಮಗಳನ್ನು ಎದೆಗವಚಿಕೊಂಡು ‘ನಾನು ಸಾಕುತ್ತೇನೆ’ ಅಂದಂಥ ಒಬ್ಬ ಹಿಂದೂ ಮಾತೃದೇವತೆ ಹುಟ್ಟಲಿಲ್ಲವಲ್ಲ ಸ್ವಾಮಿ?” ಎಂದು ಪ್ರಶ್ನಿಸಿದ್ದೀರಲ್ಲಾ, ಒಂದು ವೇಳೆ ನೀವೆಂದಾದರೂ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದಿದ್ದರೆ ಆ ಪ್ರಶ್ನೆಯನ್ನು ಕೇಳುತ್ತಿರಲಿಲ್ಲ. ನಿಮ್ಮ ಪ್ರಶ್ನೆಗೆ ಉತ್ತರ ಕಣ್ಣ ಎದುರೇ ಕಾಣುತ್ತಿತ್ತು. ೧೦ ಸಾವಿರ ಅನಾಥ ಮತ್ತು ನಿರ್ಲಕ್ಷಿತ ಮಕ್ಕಳಿಗೆ ನಿತ್ಯವೂ ಅನ್ನ ಹಾಗೂ ಅಕ್ಷರ ದಾಸೋಹಗಳೆರಡೂ ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿದೆ. ಮದರ್ ತೆರೆಸಾ ಅವರಿಗಿದ್ದ “ಮಾರ್ಕೆಟಿಂಗ್ ಬ್ಯೂರೋ” ಸಿದ್ಧಗಂಗಾ ಶ್ರೀಗಳಿಗೂ ಇದ್ದಿದ್ದರೆ ಹಾಗೂ ಅವರು ಕ್ರೈಸ್ತ ಪಾದ್ರಿಯಾಗಿದ್ದಿದ್ದರೆ ಖಂಡಿತ ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿರುತ್ತಿದ್ದರು, ಭಾರತರತ್ನವೂ ಸಿಕ್ಕಿರುತ್ತಿತ್ತು. ನಮ್ಮ ರಾಜ್ಯದಲ್ಲೇ ಇರುವ ವಿವಿಧ ಲಿಂಗಾಯತ ಮಠಗಳು ಹಾಗೂ ಆದಿ ಚುಂಚನಗಿರಿ ಮಠವೂ ಅನಾಥ ಮಕ್ಕಳಿಗೆ ಅನ್ನ ಹಾಕುತ್ತಿವೆ. ಕಣ್ತೆರೆದು ನೋಡಬೇಕಷ್ಟೇ. ಶಿವಕುಮಾರ ಸ್ವಾಮೀಜಿ ಒಂದು ರಾಜ್ಯ, ಒಂದು ಭಾಗಕ್ಕೆ ಸಂಬಂಧಪಟ್ಟವರೇ ಆಗಿರ ಬಹುದು. ಆದರೆ ಕಾಳಜಿಗೆ ರಾಜ್ಯ, ಭಾಗ ಎಂಬ ಚೌಕಟ್ಟು ಹಾಕಲು ಸಾಧ್ಯವೆ? ಅಷ್ಟಕ್ಕೂ ಮದರ್ ತೆರೆಸಾ ಅವರೇನು ದೇಶದುದ್ದಗಲಕ್ಕೂ, ಜಗತ್ತಿನ ಮೂಲೆ ಮೂಲೆಗೂ ಹೋಗಿ ನಿರ್ಗತಿಕ, ಕ್ಷಯ ರೋಗಿಗಳ ಉದ್ಧಾರ ಮಾಡಲಿಲ್ಲ. ಆಕೆಯ ಕಾರ್ಯಕ್ಷೇತ್ರವೂ ಕಲ್ಕತ್ತಾ ಕೊಳಗೇರಿಗೆ ಸೀಮಿತವಾಗಿತ್ತು. ಆದರೆ ತೆರೆಸಾ ಅವರಿಗೆ ಜಾಗತಿಕ ಮಟ್ಟದಲ್ಲಿ ಪ್ರಚಾರ ಸಿಕ್ಕಿತು ಅಷ್ಟೇ.

ಒಂದು ಘಟನೆ ನೆನಪಾಗುತ್ತಿದೆ. ಖ್ಯಾತ ಐರಿಷ್ ನಾಟಕ ರಚನೆಕಾರ ಜಾರ್ಜ್ ಬರ್ನಾರ್ಡ್ ಶಾ ಮಾತುಗಳೆಂದರೆ ಅವರು ಹೇಳುತ್ತಿದ್ದ ಪ್ರತಿ ವಾಕ್ಯಗಳೂ “Quotable Quotes” ನಂತಿರುತ್ತಿದ್ದವು. ಈ ಬರ್ನಾರ್ಡ್ ಶಾ ಹಾಗೂ ಬ್ರಿಟನ್ನ ಆಗಿನ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಕೆಲವೊಮ್ಮೆ ಪರಸ್ಪರ ಕಾಲೆಳೆದುಕೊಳ್ಳುತ್ತಿದ್ದರು. ತತ್ತ್ವeನಿಯಂತೆ ಮಾತನಾಡುತ್ತಿದ್ದ ಬರ್ನಾರ್ಡ್ ಶಾ ಅವರನ್ನು ಉಲ್ಲೇಖಿಸಿ “ಭಾರೀ ಭಾರೀ ಮಾತನಾಡುವವರು ಅವುಗಳಲ್ಲಿ ಬಹಳ ಕಡಿಮೆ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ. ಆದರೆ None less than George Bernard Shaw” ಎಂದು ಛೇಡಿಸಿದ್ದರು ಚರ್ಚಿಲ್.

ಖಂಡಿತ ರವಿ ಬೆಳೆಗೆರೆಯವರನ್ನು ಬರ್ನಾಡ್ ಶಾ ಮಟ್ಟಕ್ಕೇರಿಸಿ ಹೋಲಿಸುತ್ತಿಲ್ಲ. ಆದರೆ ಭಾನುವಾರದ ಅವರ ಲೇಖನವನ್ನು ಓದಿದಾಗ ಚರ್ಚಿಲ್ ಮಾತು ನೆನಪಾಯಿತು!!

ಒಂದು ವಾಕ್ಯದಲ್ಲಿ ಬೆನ್ನು ಸವರುವುದು, ಆನಂತರ ಚಿವುಟುತ್ತಾ ಹೋಗುವುದು, ನಡುನಡುವೆ ಉಡಾಫೆ, ಅವಹೇಳನ, ಚಾರಿತ್ರ್ಯವಧೆ. ಆದರೆ ಇಂತಹ ನಿಂದನೆ, ಅಗೌರವ ಗಳು ಚರ್ಚೆಯ ಪರಿಧಿಯೊಳಕ್ಕೆ ನುಸುಳಬಾರದು. ಒಂದು ಗಂಭೀರ ಸಮಸ್ಯೆಯನ್ನು ತೆಗೆದುಕೊಂಡು, ಆಧಾರ ಸಮೇತ ಓದುಗರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿರುವ ಭೈರಪ್ಪ ನವರನ್ನು ಹೊಗಳಬೇಕೆಂದಿಲ್ಲ. ಸಾಧ್ಯವಾದರೆ ತಾರ್ಕಿಕವಾಗಿ ಉತ್ತರ ಕೊಡಲಿ. ನಿಂದನೆ ಮಾಡಿದರೆ ಬೆತ್ತಲಾಗುವುದು ತಾವೇ ಎಂಬುದು ನೆನಪಿರಲಿ.

Come on, ಸಂವಾದ ಮುಂದುವರಿಯಲಿ ಬಿಡಿ.

ರಾಮಚಂದ್ರ ಶೆಣೈ, ಮಂಗಳೂರು

(Pratap Simha!)

134 Responses to “ರವಿ ಬೆಳಗೆರೆ ನೀಡಿದ ಉತ್ತರ, ಅವರಿಗೆ ದೊರೆತ ಪ್ರತ್ಯುತ್ತರ”

  1. SOWMYA says:

    really fantastic..answer…

  2. manju says:

    Brain of ravi is emptied pratap simha is realy a simha simha simha

  3. Suhas says:

    I must congratulate Mr. Ramachandra Shanai for his brilliant reply.
    Was there a reply from the illiterate Ravi Belegere after this tight slap for his ridiculous, absurd and mostly lame attempted argument ? or did he chicken out like all the other “Buddhijeevi’s” ala Anantamurthy ?

  4. raag says:

    e level comment Mr dealing master ge artha agalla

    belegere level ge thumba dodda book odhake heledare.

    raghu

  5. Bharath says:

    Yuva manassugala akarshanegalannu grahisi bareyuva vyapari manobhavada sahitya krishi(?)yannu Bhairappanavaranthaha sahithigala munde thorisuva munna Belegereyavru bahalashtu yochisbekagittu

  6. naveen says:

    sir

    i am your die hard fan…….. please i’d like to speak to you………. my mail id is naveen.lg1987@gmail.com… plz contact me soon………..

  7. raju says:

    Dear Ravi Sir

    Nanu istu dina nimma fan agidde, but nimma baraha odida mele nimma mele
    nan ittiruva gaurava hogibittitu anista ide.

    Sorry Ravi belagere

  8. RAKESH MANGALORE says:

    wov… reaaly superb… fantastic answer….

  9. ರಾಜೇಶ್ says:

    All the three best writers are being analysed here. unfortunately my favorite Ravi Belegere become dull this time. He is a quick learner, i guess. He has taken too many things in his mind and has not done much homework…..

    Dear Ravi its a lesson for you. We are not Voters. We are Readers, readers from all segments of society- Rich, poor, Literate, Educate….. Time is changing… people are becoming more and more smarter…. We dont want your thoughts to be biased like ‘Agni’ ‘Lankesh(new)’….. FACT IS FACT……People are not FOOLS

    I might have written the comment long long back, But I am lazy to write to your postal address. There is no email id of yours either….. Cant you have a email id for ‘Hai Bangalore’ editor??

  10. latha says:

    sir neevu saturday bareda LOVE JEHAD artical odide tumba channge bandide sir nimmantha yuva lekakara agAthya ondu patrikege kanditha ide sir nimma artical yava saturdya miss madade odthene sir nemma HINDHU para kalajige ,HATSOFF SIR

  11. channu says:

    realy good one,hats up to mr.ramachandra ….. bad ravi

  12. Jagadish Namboodiri says:

    Firstly my big Thanks to Ramachandra Sir…. his answer is brilliant…

    Being a popular journalist he should not publically give nonsense comments like this.. he should understand this not “Bengalurina boogatha Jagatthu” or “yaddi’s political new” .. he writers are talking large issue then these with futuristic thinking….

    Ravi… I liked your articals initially when Hai Bangalore started… but readers have evolved and hope you as well….

    Ravi’s artical littraly feels like he is barking…. He think he lost his thinking cap now days….

    and last but not least… thanks to Simha (realy one) for bring this online…

  13. Jagadish Namboodiri says:

    Firstly my big Thanks to Ramachandra Sir…. his answer is brilliant…

    Being a popular journalist he should not publically give nonsense comments like this.. he should understand this not “Bengalurina boogatha Jagatthu” or “yaddi’s political news” .. he writers are talking large issue then these with futuristic thinking….

    Ravi… I liked your articals initially when Hai Bangalore started… but readers have evolved and hope you as well….

    Ravi’s artical littraly feels like he is barking…. He think he lost his thinking cap now days….

    and last but not least… thanks to Simha (realy one) for bring this online…

  14. Sandeep says:

    This is really very sad to see that two of popular eminent writers fighting with each other…
    Ravi is really a Great achiever for his genre.. and undoubted that pratap also have caliber,, but stop fighting for your personal ethics….

  15. Ranganath Pai says:

    Ravi Belagere has a mask of great thinker,but actually he is a opportunitist and a commercial minded so called journalist.

  16. Raju says:

    Belagere thinks that by criticising Hindu swamiji’s people may accept him as a great thinker.But actually he is blind on other issues and he can not see the other side of coin.

  17. Jayarama Chari says:

    Hi,
    This is Jayarama Chari. I M a fan of SL Byrappa.. I Hav plan to play a drama from Avarana.. I Need ur Suggestion ,… pls reply me.. Hav a wonderful life

  18. K GURU PRASAD says:

    RAVI BELEGAREYANTHA VYAKTHIGALU KOODA HADI TAPPI NADEDAGA NUDIDAAGA INTHAHA UTTARAGALU OVARANNU SARI DAARIGE TANDITENOO ANNUVA ASHAYA NANNADU TOOTALLY FANTASTIC ANSWER

  19. Rajshekar says:

    HI sir,
    I am rajshekar,Hard fan of you sir,,,,m reading all your articals weekly sir,,,,,,,This is a fantastic answer

  20. ULLEKH HEGDE says:

    hats off to Mr. Ramachandra Shenoy….this should be enough for half learned, commercial journalist like Ravi Belagere…..

  21. Sridhar Krishna says:

    R U Get any suggestions…..

  22. ullas koteshwar says:

    Excellent article. Hat’s of to you Sir…

  23. Mahantesh Belagali says:

    These many days i was thinking something different abut Ravi Belegere but when he commented like this on Shri S L Bairappa. My way of viewing is changed towords Belegere, Thanks for giving him proper answer with facts, bcoz any one can write articles but writing truth is real article.

  24. pisumathu says:

    ಈ ಲೇಖನಗಳನ್ನ ನಾನು ವಿಕದಲ್ಲೇ ಓದಿದ್ದೆ. ಬೆಳಗೆರೆಗೆ ಸರಿಯಾಗಿ ಜಾಡಿಸಿದ್ದಾರೆ ಅಂತ ಬಹಳಾ ಜನರಿಗೆ ತೋರಿಸಿದ್ದೆ ಕೂಡಾ.

  25. Manjula says:

    Hey Pratap….

    thnx for posting thse articles online… I am not a regualr reader of VK, but i buy saturdays’ papaer only for ur article… Keep d gud work goin…

    N thnx for Mr.Shenoy for such an article…

  26. Narendra says:

    I had read all the articles, including Bairappa’s initial article on the subject, in Vijaya Karnataka.
    Also, I have bought the book the Vijaya Karnataka published later.

    Ravi Belagere is not alone in giving this kind of response.
    Even U.R.Anantha Murthy and Girish Karnad have given similar comments.

    The sad part is that, in Karnataka we have given the title of “Intellectuals” to these people!
    After reading their replies to Bairappa’s articles, I don’t see any reason to call these people as intellectuals.
    They might be good Kannada Writers or Play Writes.
    But, when it comes to the field of Intellectual debates, their mind becomes completely blank.
    This debate has thrown away all the colorful dresses (read as “Intellectuals”, “Secularists”, “Progressive”, etc) they were wearing!! Now they stand naked infront of the readers and writers of Karnataka.

    Hope they have atleast learnt the lesson and will be careful in the future.

    Many Many thanks to VK for bringing out such a healthy debate and also for opening the eyes of Kannadigas.

    Thanks to Pratap Simha for posting the link here.
    It refreshed my memories and I can send this to all of my Kannada friends.

    -Narendra

  27. Naveen says:

    ya fentastic and real good brave reply.I think now Ravi can unerstand.

  28. S.Sharma says:

    Hi Pratap Simha, Thanks a ton for giving access to this article and this conversation.I had been searching everywhere for this article since all this came about.If possible, plz give also the complete conversation that had happened in VK.

  29. Santhosh Navule says:

    ಪ್ರತಾಪ್ ಸಿಂಹರವರ ಪ್ರತಿಕ್ರಿಯೆ ಬಹಳ ಕೆಟ್ಟದಾಗಿದೆ. ಏಕೆಂದರೆ ಇತಿಹಾಸದ ಕಾಲಘಟ್ಟದಲ್ಲಿ ಮುಸ್ಲಿಂರು ದಾಳಿಯನ್ನೇ ಮಾಡಿರಬಹುದು ಅಥವಾ ಎಲ್ಲವನ್ನೂ ನಾಶಮಾಡಿರಬಹುದು, ಆದರೆ ಅದನ್ನು ಕೆದಕುವುದರಿಂದ ಏಣು ಲಾಭ ಎಂದು ಬೆಳೆಗೆರೆಯವರು ಕೇಳಿರುವ ಪ್ರಶ್ನೆ ಸರಿಯಾಗಿಯೇ ಇದೆ. ಒಂದೊಮ್ಮೆ ಇತಿಹಾಸವು ಸತ್ಯವನ್ನೇ ಹೇಳಿ ಅದರಿಂದ ಇಂದಿನ ಸಮಾಜದ ಸಾಮರಸ್ಯ ಕಡಿಮೆಯಾಗುತ್ತದೆ ಅಥವಾ ಹದಗೆಡುತ್ತದೆ ಎಂದರೆ ಅಂತಹ ಇತಿಹಾಸದ ಅವಶ್ಯಕತೆಯೇ ಇಲ್ಲ. ಒಳ್ಳೆಯದನ್ನಷ್ಟೇ ನೆನಪಿಟ್ಟುಕೊಂಡು ಕೆಟ್ಟದ್ದನ್ನು ಮರೆಯಲು ಇತಿಹಾಸದ ಅಧ್ಯಯಯನದಿಂದ ಸಾಧ್ಯವಿರದಿದ್ದರೆ ಅಂತಹ ಇತಿಹಾಸದಿಂದ ಏನು ಪ್ರಯೋಜನ?

  30. Nagaraj CM says:

    ಇವರಿಗೆ ಬುದ್ದಿ ಹೆಳಬೇಕಾ ಅಥವ ನಾವು ಬುದ್ದಿ ಇಲ್ಲದವರ,
    ಒಬ್ಬ ಸಾಮಾನ್ಯ ಮನುಷ್ಯ ಒಳ್ಳೆಯವನಾ ?
    ಸ೦ಜೆ ಕುಡಿದು ಹಾಡು ಹೆಳುತ್ತಾನಲ್ಲಾ ಅವನ ಮನಸ್ಸು ಮತ್ತು
    ಥಿಯೆಟರಿನಲ್ಲಿ ಸಿನೆಮ ನೋಡುತ್ತಾ ಅದ್ರಲ್ಲೆ ಮುಳುಗುವ ವ್ಯಕ್ತಿ ?

  31. Prajwal Mysore says:

    Sorry to say RaviBelegere till now I had good opinion about you but I lost respect towards you after reading the above article. Don’t ever comment any thing about Hinduism nor about sidganga swamiji. I feel you can join congress and become a successful politicisation.

  32. Mahesh says:

    hi Santosh Navule,

    Your response to this article seems like an opportunist one. You are asking us to forget what muslims have done to us. If tommorrow assume India is taken over by Pakisthan or China. Will you die fighting or will you go join your hands with them ?

  33. Santhosh Navule says:

    Dear Mahesh

    Do you think that is going to happen? See, that is your guess not a fact. And actually we not in a position to subjugate ourselves to others. So, just guessing the future does not make sense. Ok, can give an arguement how Pakistan or China will take over India?

    See i am not opposing Simha or Belegere. Even am not interested in that, because, RSS arguments are really baseless. They just learnt from Golvalkar and Hegdevar and they learnt their arguments simply from colonials. So, neither interested in Simha nor Belegere…..

    Tell me why i look like oopurtunis? what the hell is that?????????

  34. Krishnaprasad says:

    Dear Santhosh just leave them alone Can’t you see they are brain washed just like those Jehadis.Don’t expect any rational answer from either Pratap or His Followers.

  35. swamy says:

    bad ravi

  36. Yogesh says:

    Dear Santhosh Navule,
    can give an arguement how Pakistan or China will take over India?
    Answer for your question:
    1.2000-2008ವರೆಗೂ ಭಾರತದ ಮೇಲೆ ಸತತ ಭಯೋತ್ಪಾದಕ ದಾಳಿ.
    2.ಈಚೆಗೆ ಜಮ್ಮು-ಕಾಶ್ಮೀರ, ಅರುಣಾಚಲ ಪ್ರದೇಶಗಳಲ್ಲಿ ಚೀನಾದ ಅತಿಕ್ರಮಣ.
    3. ಭಾರತದ ಪಾಸ್‌ಪೋರ್ಟ್ ಹೊಂದಿರುವ ಜಮ್ಮು-ಕಾಶ್ಮೀರಿ ನಾಗರಿಕರಿಗೆ ಪ್ರತ್ಯೇಕ ವೀಸಾ ನೀಡಿರುವುದು ಬೆಳಕಿಗೆ ಬಂದಿದೆ.
    4. ಈಗಾಗಲೇ ಅರುಣಾಚಲ ಪ್ರದೇಶದ ನಾಗರಿಕರಿಗೆ ಪ್ರತ್ಯೇಕ ವೀಸಾ ವಿತರಣೆ ಮಾಡಿರುವ ಚೀನಾ, ಆ ಮೂಲಕ ಅರುಣಾ ಚಲದ ಮೇಲೆ ತನ್ನ ಹಕ್ಕು ಪ್ರತಿಪಾದನೆ ಮಾಡಿದೆ.
    5.ನಾಗರಿಕ ಅಣು ಸಹಕಾರ ಒಪ್ಪಂದದ ಅಂಗವಾದ ಅಣು ಇಂಧನ ಪೂರೈಕೆ ವಿಚಾರ ೨೦೦೮, ಸೆಪ್ಟೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯಲ್ಲಿ (ಐಅಉಅ) ಚರ್ಚೆಗೆ ಬಂದಾಗ ಅದನ್ನು ತಡೆಯಲು ಚೀನಾ ಸಕಲ ಪ್ರಯತ್ನವನ್ನೂ ಮಾಡಿತು.
    6.2.9 ಶತಕೋಟಿ ಡಾಲರ್‌ನಲ್ಲಿ 60 ದಶಲಕ್ಷ ಡಾಲರ್ ಹಣವನ್ನು ಅರುಣಾಚಲ ಪ್ರದೇಶದ ಅಭಿವೃದ್ಧಿಗೆ ವಿನಿಯೋಗಿಸುವುದಾಗಿ ಭಾರತ ಉಲ್ಲೇಖಿಸಿತ್ತು.ಆಶ್ಚರ್ಯವೆಂದರೆ ಚೀನಾ ಅದಕ್ಕೆ ವಿರೋಧ ವ್ಯಕ್ತಪಡಿಸಿತು.
    7.“ಟಿಬೆಟ್ ಅಂಗೈಯಾದರೆ ಲದ್ದಾಕ್, ಸಿಕ್ಕಿಂ, ಭೂತಾನ್, ನೇಪಾಳ ಮತ್ತು (ಭಾರತದ) ಈಶಾನ್ಯ ಭಾಗ ಐದು ಬೆರಳು ಗಳಿದ್ದಂತೆ. ಅವು ಚೀನಾದ ಭೂಪ್ರದೇಶಗಳು, ಅವುಗಳನ್ನು ಸ್ವತಂತ್ರಗೊಳಿಸಬೇಕು” ಎಂದು ಚೀನಿ ನಾಯಕ ಮಾವೋ ಝೆಡಾಂಗ್ ಹೇಳಿ ಹಲವು ದಶಕಗಳೇ ಕಳೆದವು.
    8.ಬುದ್ಧಿಗೇಡಿ ಪಾಕಿಸ್ತಾನಕ್ಕೆ ಕ್ಷಿಪಣಿ, ಅಣ್ವಸ್ತ್ರಗಳನ್ನು ಕೊಟ್ಟು ಭಾರತವನ್ನು ಆಂತರಿಕವಾಗಿ ಅಸ್ಥಿರಗೊಳಿಸಲು ಆರಂಭಿಸಿದೆ.
    9.ಕಮ್ಯುನಿಸ್ಟ್ ನೇತಾರ ಪ್ರಚಂಡ ಹಾಗೂ ಮಾವೋವಾದಿಗಳ ಮೂಲಕ ನೇಪಾಳವನ್ನೂ ಹೆಚ್ಚೂಕಡಿಮೆ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.
    10.ಬಂದರು ಅಭಿವೃದ್ಧಿ, ರಸ್ತೆ ನಿರ್ಮಾಣ, ಅಭಿವೃದ್ಧಿ ಕಾರ್ಯಗಳಿಗೆ ದೀರ್ಘಕಾಲಿಕ ಸಾಲ ಮುಂತಾದ ನೆಪಗಳನ್ನಿಟ್ಟುಕೊಂಡು ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶಗಳಿಗೂ ಆಗಮಿಸಿದೆ.
    11.ಕಳೆದ ಮೇ.ವರೆಗೂ ನಡೆದ ಎಲ್‌ಟಿಟಿಇ ವಿರುದ್ಧದ ಕಾರ್ಯಾಚರಣೆಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ಪೂರೈಸುವ ಮೂಲಕ ಶ್ರೀಲಂಕಾದ ಮೇಲೂ ತನ್ನ ಪ್ರಭಾವ ಇಟ್ಟುಕೊಳ್ಳಲು ಚೀನಾ ಪ್ರಯತ್ನಿಸಿದೆ.
    12.ಭಾರತದ ನಕ್ಸಲರ ಕೈಯಲ್ಲಿರುವುದೂ ಚೀನಾ ತಯಾರಿಸುತ್ತಿರುವ ಎಕೆ-47ರೈಫಲ್‌ಗಳೇ. ಅದು ಪೂರೈಕೆಯಾಗುತ್ತಿರುವುದು ನೇಪಾಳದ ಮೂಲಕ.
    13.ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 7 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಬುಂಜಿ ಡ್ಯಾಂ ನಿರ್ಮಾಣ ಮಾಡಿಕೊಡುವುದಾಗಿ ವಾಗ್ದಾನ ಮಾಡಿದೆ. ಆದರೆ ಅಣೆಕಟ್ಟು ನಿರ್ಮಾಣವಾಗಬೇಕಿರುವ ಸ್ಥಳ ತನ್ನದೆಂದು ಭಾರತ 1948ರಿಂದಲೂ ಪ್ರತಿಪಾದಿಸುತ್ತಾ ಬಂದಿದೆ.
    14.ನೇಪಾಳ ಮಾರ್ಗವಾಗಿ ನಕಲಿ ನೋಟುಗಳನ್ನು ಹರಿಬಿಡುವ ಮೂಲಕ ಭಾರತದ ಅರ್ಥವ್ಯವಸ್ಥೆಯನ್ನು ಹಾಳುಗೆಡವುವ ಕಾರ್ಯವನ್ನೂ ಪಾಕ್ ಮತ್ತು ಚೀನಾಗಳು ನಿರಾತಂಕವಾಗಿ ಮಾಡುತ್ತಲೇ ಇವೆ.

    ಚೀನಾದ ಸಾಮ್ರಾಜ್ಯಶಾಹಿತ್ವ ಹಾಗೂ ವಿಸ್ತರಣಾವಾದ ಎಂದೋ ಆರಂಭವಾಗಿದೆ. ತೈವಾನ್, ಟಿಬೆಟ್, ಹೈನನ್ ದ್ವೀಪಗಳು ಒಂದು ಕಾಲದಲ್ಲಿ ಚೀನಾಕ್ಕೆ ಸೇರಿದ್ದವು. ಅವುಗಳನ್ನು ಮರಳಿ ಗಳಿಸಿಕೊಳ್ಳಲಾಗುತ್ತದೆ ಎಂದು ೧೯೫೦ರ ನಂತರ ಮಾವೋ ಝೆಡಾಂಗ್ ಆಗಾಗ್ಗೆ ಹೇಳಿಕೆ ನೀಡಿದ್ದರು. ಮಕಾವು, ಹಾಂಕಾಂಗ್, ಟಿಬೆಟ್ ಈಗಾಗಲೇ ಚೀನಾದ ಕೈವಶವಾಗಿವೆ. ಭಯೋತ್ಪಾದಕರು, ಪಾಕ್, ಚೀನಿಯರೆದುರು ಅಹಿಂಸೆ, ಭಾಯಿ ಭಾಯಿ ಎಂದರೆ ಬಾಯಿಗೇ ವಿಷಹಾಕುತ್ತಾರೆ…

  37. HarshaK says:

    Hi Ramachandra Sir,
    Your reply was too good, infact well beyond Belegeres reach…. problem with these people is they just come out and make a counter argument without knowing anything in detail. I pity belegere that he does not even have a commonsense when it comes to addressing great people like SL Bhiarappa…he is just brainwashed and fit for only those stupid crime stories….Belgere thinks he is a great writer. Its a very well known fact that from which background he comes from.

    Now is the time people should become little aware of whats happening in India… They should come out and stage a bold protest against outfits which are either directly or indirectly involved in conversions.

    I would highly appreciate if belegere can come out and give a reply to Sir Ramachandra (if he has guts).

    Thanks,
    Hindu Kannada Abhimani.

  38. srimathi tantry says:

    really pratap good article…………….

    thanks to you and Mr. Shenoy…

    live more than 100 years.. you are the valuable asset

  39. Vitthal says:

    Dear All Learned People
    1)The self centered Intellectuals ( the way they them self claim )like Ravi Biligere& other are very harm ful for us & society..They are as dangerous as the corrupt politicians & Govt officres.We should oppose all these cateory of people when ever they appear.
    2)Let Mr Belegere under stands the subject in right perspective ( not his ) & write
    VITTHAL

  40. Anu says:

    Thanks for this article Mr.Pratap……..

    The article and its replies r really enlightening…. But to understand them clearly it wld b good to read the books stated in the above articles. For eg. “Avarana”.
    Hope i’ll read it soon.. for a better understanding….

    Smiles
    Anu

  41. ravindra says:

    yes this article bring great discussions let the people know the Real history not real history.this people we teach reel history if we keep quite now.

  42. ravindra says:

    yes this article bring great discussions let the people know the Real history not reel history.This people we teach reel history if we keep quite now.

  43. anand says:

    plz reorder the headings. it has come in between the article and making paras confusing.

  44. Murali Mohan, H. says:

    Ravi Belagere is a greatest unethical journalist, lair, opportunist on this earth. He is a chameleon only interested in amassing wealth unfairly.

  45. ಓದುಗ says:

    ರವಿ ಬೆಳಗೆರೆಯವರೇ,

    ನಾನು ಲೇಖನವನ್ನು ತುಂಬ ತಡವಾಗಿ ಓದಿರಬಹುದು. ಆದರೆ ಒಬ್ಬ ಭಾರತೀಯನಾದ ನನಗೆ ಮನೆಯೊಳಗೇ ಇರುವ ಇನ್ನೊಬ್ಬ ಸದಸ್ಯ ಮನೆಗೆ ಬೆಂಕಿ ಹಚ್ಚುತ್ತಿರುವುದನ್ನು ನೋಡಿ ತಡೆಯಲಾರದೇ ಈ ಪ್ರತಿಕ್ರಿಯೆ ನೀಡುತ್ತಿದ್ದೇನೆ.

    ಶೆಣೈಯವರು ಬರೆದಂತೆ ನಿಜವಾಗಲೂ ತಮ್ಮ ಲೇಖನ ತರ್ಕಬದ್ಧವಾಗಿಲ್ಲ. ನಿಮಗೆ ನಿಜವಾಗಲೂ ಭೈರಪ್ಪನವರ ಲೇಖನದ ಬಗ್ಗೆ ವಿರೋಧವಿದ್ದಲ್ಲಿ ಅದನ್ನು ಉಚಿತವಾದ (ಪುಕ್ಕಟೆಯೆಂದರ್ಥವಲ್ಲ-ತಾವು ಅನ್ಯಥಾ ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಜಾಸ್ತಿ.) ವೇದಿಕೆಯ ಮೇಲೆ ತಾರ್ಕಿಕವಾಗಿ ಪರಾಮರ್ಶಿಸಿ ಪ್ರತಿಕ್ರಿಯಿಸಬೇಕಿತ್ತೇ ಹೊರತು ಇಂತಹ ಹೀನಾಯವಾದ, ಅಸಂಬದ್ಧವಾದ ಲೇಖನದಿಂದಲ್ಲ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಉಕ್ತಿಯಂತೆ ಈ ಲೇಖನದಿಂದ ತಾವು ಪಾತಾಳಕ್ಕಿಳಿದುಬಿಟ್ಟಿದ್ದೀರಿ. ಬಾವಿಯಲ್ಲಿರುವ ಕಪ್ಪೆ ತಾನಿರುವ ಬಾವಿಗಿಂತ ದೊಡ್ಡ ಜಗತ್ತೇ ಇಲ್ಲ ಎಂಬ ಕುರುಡು ಕಲ್ಪನೆ ಹೊಂದಿರುವಂತೆ ನಿಮ್ಮ ಅಂತಶ್ಚಕ್ಷುವಿನ ತೇಜಸ್ಸು (ಇರಲೇ ಇಲ್ಲ ಬಿಡಿ) ಸತ್ತು ಹೋಗಿದೆ.

    ಶೆಣೈಯವರು ಹೇಳುವಂತೆ ನೀವು ನಿಮ್ಮ ಶಬ್ದಚಾತುರ್ಯವನ್ನು ತೋರಿಸಲು ಹೋಗಿ ಎಡವಟ್ಟಾಗಿ ಬರೆದಿದ್ದೀರಿ. ತಾವು ತಮ್ಮ ಲೇಖನವನ್ನು ಹತ್ತು ಬಾರಿಯಲ್ಲ, ಒಮ್ಮೆ ಓದಿ ಸಾಕು, ನಿಮ್ಮ ಶಬ್ದ ಚಾತುರ್ಯ ಇಲ್ಲಿ ಕ್ಲಿಕ್ ಆಗಿಲ್ಲ ಎಂಬುದು ಮನವರಿಕೆಯಾಗುತ್ತೆ. ಹೋಗಲಿ, ತಮ್ಮ ಮತ್ತು ಭೈರಪ್ಪನವರ ಲೇಖನಗಳನ್ನು ಕೂಲಂಕಶವಾಗಿ ಅಧ್ಯಯನ ಮಾಡಿ ಪ್ರತಿಕ್ರಿಯಿಸಿದ ಶೆಣೈಯವರ ಲೇಖನದ ಪ್ರಬುದ್ಧತೆಯ ಹತ್ತು ಶೇಕಡಾ ಕೂಡ ತಮ್ಮ ಲೇಖನವಿಲ್ಲ. ಇಷ್ಟೊಂದು ಒಳ್ಳೆಯ ಪತ್ರಕರ್ತ ಎನಿಸಿಕೊಂಡ ತಮಗೆ ಈ ಒಂದು ಲೇಖನದಿಂದ ಪಾತಾಳಕ್ಕಿಳಿಯುವ ಅವಕಾಶ ಸೃಷ್ಟಿಸಿಕೊಳ್ಳಬೇಕಿತ್ತೇ? ತಾವ್ಯಾಕೆ ಬುದ್ಧಿ ಜೀವಿಗಳ ಥರ ವರ್ತಿಸುತ್ತೀರಿ?

    ಜಗತ್ತಿನಲ್ಲಿರುವ ಯುವಕ ಯುವತಿಯರನ್ನೆಲ್ಲಾ “ಮಗಳೇ, ತಮ್ಮಾ” ಎಂದೆಲ್ಲ ಸಂಬೋಧಿಸುವ ತಮಗೆ ತಮಗಿಂತ ಹಿರಿಯರಾದ, ಪ್ರಬುದ್ಧರಾದ, ಭಾಷಾಪ್ರಾವೀಣ್ಯವನ್ನು ಹೊಂದಿರುವ, ತಮ್ಮಂತೆ ಕಳಂಕಿತರಲ್ಲದ ಸಮುದ್ರದ ಕಪ್ಪೆಗೆ (ಎಸ್. ಎಲ್. ಭೈರಪ್ಪನವರಿಗೆ) “ತಂದೆ” ಅಥವಾ “ಅಪ್ಪಾ” ಎಂದು ಕರೆಯಲು ಮುಜುಗರವೇ? ಅವರೆಂದಾದರೂ ನಿಮ್ಮ ಲೇಖನಗಳ ಬಗ್ಗೆ ಕೇವಲವಾಗಿ ಎಲ್ಲಾದರೂ ಉಲ್ಲೇಖಿಸಿದ ನಿದರ್ಶನವಾದರೂ ಇದೆಯೇ? ಎಂದೂ ತುಂಬಿದ ಕೊಡ ತುಳುಕುವುದಿಲ್ಲವೆಂಬ ಸತ್ಯ ತಮಗೆಲ್ಲಿ ಅರ್ಥವಾದೀತು? ಅಷ್ಟಕ್ಕೂ ಅವರ್ಯಾಕೆ ನಿಮ್ಮ ಲೇಖನಗಳ ಬಗ್ಗೆ ಯೋಚಿಸುತ್ತಾರೆ? ಅವರೇನಿದ್ದರೂ ಅವರಿಗೆ ಸಮಾನ ಅಥವಾ ಅವರಿಗಿಂತ ಯೋಗ್ಯರ ಜೊತೆ ಮಾತ್ರ ಸಂಪರ್ಕ ಹೊಂದುತ್ತಾರೆ. ಸಗಣಿಯವನೊಡನೆ ಜಗಳಕ್ಕಿಂತ ಗಂಧದವನೊಡನೆ ಗುದ್ದಾಟ ಲೇಸು ಎಂಬ ಸತ್ಯ ಅವರಿಗೆ ಗೊತ್ತಿದೆ.

    ಹಿಂದೂ ಕರ್ಮಠರು, ಕರ್ಮಠ ಬ್ರಾಹ್ಮಣರು, ಕರ್ಮಠ ವೀರಶೈವರು, ಕರ್ಮಠ ಭಜರಂಗಿಗಳು, ಕರ್ಮಠ ಕಮ್ಯುನಿಸ್ಟರು, ಕರ್ಮಠ ನಕ್ಸಲರು ಇತ್ಯಾದಿಯಾಗಿ ಬರೆದಿದ್ದೀರಲ್ಲಾ! ತಮಗೆ “ಕರ್ಮಠ” ಎಂಬ ಪದದ ಅರ್ಥ ಗೊತ್ತೇ? ತನ್ನ ಕರ್ಮದಲ್ಲಿ (ಕರ್ತವ್ಯದಲ್ಲಿ) ಅತ್ಯಂತ ನಿಷ್ಠೆಯನ್ನು ಹೊಂದಿದವ ಕರ್ಮಠನಾಗುವನೇ ಹೊರತು ತನ್ನ ಧರ್ಮವೇ(ಜಾತಿಯೇ) ದೊಡ್ಡದು ಎಂದು ಹಲುಬುವವರಲ್ಲ. ತಾವು ಬ್ರಾಹ್ಮಣ ಅಥವಾ ವೀರಶೈವನಿಗೆ ಕರ್ಮಠ ಎಂದು ಹೇಳಿದರೆ ಇಲ್ಲಿ ಯಾವ ಕರ್ತವ್ಯನಿಷ್ಠ ಬ್ರಾಹ್ಮಣ, ವೀರಶೈವನೂ ಬೇಸರಿಸುವುದಿಲ್ಲ. ಯಾಕೆಂದರೆ ಅವರಿಗೆ ತಾವು ಮಾಡುವ ಆಚರಣೆಯಲ್ಲಿ ಶ್ರದ್ಧೆಯಿದೆ ಎಂದು ನೀವು ಮತ್ತಷ್ಟು ಎತ್ತಿ ಹೇಳಿದ ಹಾಗಾಯಿತು, ಅಷ್ಟೆ. ಆದರೆ ಅರ್ಥ ಗೊತ್ತಿಲ್ಲದೇ ಈ ಶಬ್ದವನ್ನು ಕಮ್ಯುನಿಸ್ಟರಿಗೋ, ನಕ್ಸಲರಿಗೋ ಬಳಸಬೇಡಿ. ತಾವೊಬ್ಬ ಕರ್ಮಠ ಪತ್ರಕರ್ತರಾಗಿದ್ದರೆ ಈ ರೀತಿ ಬರೆಯುತ್ತಿರಲಿಲ್ಲ. ಕರ್ಮಠನೆಂದರೆ ಧರ್ಮಾಂಧನೆಂದರ್ಥವಲ್ಲ. ಕರ್ಮಠ ಎಂಬ ಪದವನ್ನು ಧರ್ಮಾಂಧ ಎನ್ನುವ ಅರ್ಥದಲ್ಲಿ ಬಳಸಿದ ತಾವು ಎಲ್ಲಿಯೂ, ಅಪ್ಪಿ ತಪ್ಪಿಯೂ ಮುಸ್ಲಿಮರಿಗಾಗಲಿ, ಅಥವಾ ಕ್ರಿಶ್ಚಿಯನ್ನರಿಗಾಗಲಿ ಕರ್ಮಠ ಎಂಬ ಪದವನ್ನು ಬಳಸಿಲ್ಲ. ಯಾಕೆ? ಆ ಧೈರ್ಯ ಬರಲಿಲ್ಲವೇ? ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವ ಗೀಳೇ ತಮಗೆ? ಧರ್ಮಕ್ಕೆ ಜಾತಿ, ಮತಗಳ ಸೀಮೆಯಿಲ್ಲ. ನೀತಿಯುಕ್ತವಾದ ಕರ್ತವ್ಯವನ್ನು ಮುಸ್ಲಿಂ ಬಳಸಲಿ ಅಥವಾ ಕ್ರಿಶ್ಚಿಯನ್ ಬಳಸಲಿ ಅದು ಧರ್ಮ ಎಂದೆನಿಸಿಕೊಳ್ಳುತ್ತದೆ. ರಾಜಧರ್ಮ ಎಂದರೆ ರಾಜನ ಜಾತಿ ಎಂದರ್ಥವಲ್ಲ.

    ಇನ್ನು ಇತಿಹಾಸದ ಬಗ್ಗೆ ಮಾತನಾಡೊಣ. ತಾವು ಇತಿಹಾಸದ ಬಗ್ಗೆ ಇಷ್ಟೆಲ್ಲಾ ಗೊತ್ತಿರುವವರಂತೆ ಮಾತಾಡುತ್ತಿದ್ದೀರಲ್ಲಾ! ಹಿಂದೂ ಎನ್ನುವುದು ಒಂದು ಧರ್ಮವಲ್ಲ, ಜೀವನ ಪದ್ಧತಿ ಎಂದು ಓದಿದ ನೆನಪೂ ನಿಮಗಿಲ್ಲವೇ? ಧರ್ಮ ಎಂದರೆ ತಮ್ಮರ್ಥದಲ್ಲಿ ಜಾತಿ ಎಂದೇ? ಧರ್ಮ ಎಂದರೆ ಜೀವನ ವಿಧಾನ, ಕರ್ತವ್ಯವೆಂದೆ ಹೊರತು ಒಂದು ಸಮೂಹ ಒಂದು ಪ್ರವಾದಿ ಹೇಳಿದನೆಂದು ಅನುಸರಿಸಿ ಕಟ್ಟಿದ ಗುಂಪಲ್ಲ. ಇಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಿ ಎಂದು ಯಾರೂ ಯಾರನ್ನೂ ಪೀಡಿಸಲಿಲ್ಲ. ಇದು ಈ ಜಗತ್ತಿನಲ್ಲಿ ತಮ್ಮ ಹುಟ್ಟಿನಂತೆ ಜನರಿಂದ ಅನುಸರಿಸಲ್ಪಟ್ಟ ಸಹಜ ಜೀವನ ರೀತಿ ಎಂದು ಒಮ್ಮೆಯಾದರೂ ಯೋಚಿಸಿದ್ದೀರಾ? ಇಂಥ ಶ್ರೇಷ್ಠವಾದ ಜೀವನ ಪದ್ಧತಿಯಲ್ಲಿ ಜನ್ಮ ತಾಳಿದ ತಮಗೆ ಇಂದು ಮೂಗು ಮುಚ್ಚಿಕೊಳ್ಳುವಷ್ಟು ಅಸಹ್ಯವೇ? ಹಾಗಾದರೆ ತಾವ್ಯಾಕೆ ಮುಸ್ಲಿಂ ಅಥವಾ ಕ್ರಿಶ್ಚಿಯನ್ನಾಗಿ ಮತಾಂತರವಾಗಬಾರದು? ಮಾದರಿ ಪತ್ರಕರ್ತರಾದ ತಾವು ಈ ವಿಷಯದಲ್ಲೂ ಮಾದರಿಯಾಗಬಹುದಲ್ಲ! ಯಾವಾಗಲೂ ತನ್ನತನದ ಬಗ್ಗೆ ಸ್ವಾಭಿಮಾನವಿರಬೇಕು. ಅದು ಇನ್ನೊಬ್ಬರು ಕಲಿಸಿ ಬರುವಂತಹುದ್ದಲ್ಲ. ಈ ನೆಲ ನಿಮಗೆ ಅನ್ನ ಹಾಕಿದೆ. ಈ ನೆಲ, ಜಲ, ಜನರ ಬಗ್ಗೆ ನಿಮಗೆ ಸ್ವಾಭಿಮಾನವಿಲ್ಲದಿದ್ದರೂ ನಮಗೆ ಚಿಂತೆಯಿಲ್ಲ ಬಿಡಿ, ಆದರೆ ಕನ್ನ ಹಾಕುವ ಕೆಲಸ ಮಾಡಬೇಡಿ. ಯಾವಾಗಲೂ ಹಸುವಿಗೆ ಆಚೆ ದಡದಲ್ಲಿರುವ ಹುಲ್ಲೇ ಹುಲುಸಾಗಿ ಕಾಣುವುದಂತೆ.

    ನಮ್ಮ ಸನಾತನ ಧರ್ಮ ವೇದಗಳನ್ನು ಕಂಠಪಾಠ ಮಾಡಲು ಮಾತ್ರವಲ್ಲ, ನ್ಯಾಯ, ತರ್ಕ, ವ್ಯಾಕರಣ, ಆಯುರ್ವೇದ, ಇತ್ಯಾದಿಗಳನ್ನು ಕಲಿಸಿ ಒಬ್ಬನನ್ನು ತುಂಬಿದ ಕೊಡವನ್ನಾಗಿಸುತ್ತಿತ್ತು. ಸ್ವತಂತ್ರಪೂರ್ವ ಭಾರತದಲ್ಲಿ ಒಬ್ಬನೇ ಒಬ್ಬ ಹಸಿವಿನಿಂದ ನರಳಿದ ದಾಖಲೆಯಿದ್ದರೆ ತೋರಿಸಿ ಬೆಳಗೆರೆಯವರೇ. ನೆಮ್ಮದಿಯ ಬದುಕು ಕಟ್ಟಿಕೊಂಡು, ಇತರರಿಗೂ ಹಂಚಿ ತಾವೂ ತಿಂದುಂಡು ಬಾಳುತ್ತಿದ್ದರು. ತಾವು ಕಾಡು ಕಡಿದು ಎಸ್ಟೇಟ್ ಗಳನ್ನಾಗಿ ಪರಿವರ್ತಿಸಿದ್ದಲ್ಲದೇ ಆರ್ಯರು ಹೊರಗಿನಿಂದ ಬಂದು ಕಾಡು ಕಡಿದು ಕೃಷಿಭೂಮಿಯನ್ನಾಗಿ ಪರಿವರ್ತಿಸಿದರೆಂದು ಎಲ್ಲರ ಕಣ್ಣು ಕಟ್ಟುವಂತೆ ಬ್ರಿಟಿಷರು ನಂಬಿಸಿದರು, ಇವರು ಹಣದ ಆಸೆಗಾಗಿ ನಂಬಿದರು. “ಇಷ್ಟಾಗಿ ಥೆರೇಸಾ ತುಂಬಾ subtle ಆಗಿ ಅನಾಥ ಹಿಂದೂ(?) ಕಂದಮ್ಮಗಳನ್ನು ಸದ್ದಿಲ್ಲದೆ ಮತಾಂತರ ಗೊಳಿಸಿದ ರಾಕ್ಷಸಿ ಅಂತಲೇ ಇಟ್ಟುಕೊಳ್ಳೋಣ. ಅವೇ ಅನಾಥ ಹಿಂದೂ ಕಂದಮ್ಮಗಳನ್ನು ಎದೆಗವಚಿಕೊಂಡು “ನಾನು ಸಾಕುತ್ತೇನೆ” ಅಂದಂಥ ಒಬ್ಬ ಹಿಂದೂ ಮಾತೃದೇವತೆ ಹುಟ್ಟಲಿಲ್ಲವಲ್ಲ ಸ್ವಾಮಿ? ಅದೂ ಇಷ್ಟು ದೊಡ್ಡ ಭಾರತದಲ್ಲಿ!” ಎಂದು ಬರೆದಿದ್ದೀರಲ್ಲಾ, ಈ ಕೆಲಸವನ್ನು ತಾವ್ಯಾಕೆ ಮಾಡಬಾರದು? ಇಷ್ಟು ದೊಡ್ಡ ಭಾರತ ದೇಶದಲ್ಲಿ ತಮಗೆ ತಮ್ಮನ್ನು ಕಂಡುಕೊಳ್ಳುವುದೇ ಅಷ್ಟೊಂದು ಕಷ್ಟವಾಯಿತೇ? ತಮ್ಮದೇ ಆದ ಪ್ರಾರ್ಥನಾ ಸ್ಕೂಲ್ ನಲ್ಲಿ ಒಂದು ಪೈಸಾ ಶುಲ್ಕ ಕೂಡ ಇಲ್ಲದೇ ಶಿಕ್ಷಣವನ್ನು ಕೊಡುವಂತಹ ತ್ಯಾಗವನ್ನೇನೂ ತಾವು ಮಾಡಿಲ್ಲ. ಅಂಥಾದ್ದರಲ್ಲಿ ಸಾವಿರಾರು ಮಕ್ಕಳಿಗೆ ಪುಕ್ಕಟೆ ಅನ್ನ ವಸ್ತ್ರ ಮತ್ತು ಸೂರು ನೀಡಿ ಶಿಕ್ಷಣವನ್ನೊದಗಿಸುವ ಸಿದ್ದಗಂಗಾ ಮಠದ ಸ್ವಾಮಿಯವರ ಬಗ್ಗೆ ಅಸಡ್ಡೆಯಿಂದ ಮಾತಾಡಲು ತಮಗೆ ಸಂಕೋಚವಾಗುವುದಿಲ್ಲವೇ? ಇದೇ ಕೆಲಸವನ್ನು ಒಂದು ಕ್ರಿಶ್ಚಿಯನ್ ಮಿಶನರಿ ಮಾಡಿದ್ದರೆ ಅದು ಮಾಧ್ಯಮಗಳಲ್ಲಿ ರಾರಾಜಿಸುತ್ತಿತ್ತಲ್ಲವೇ ರವಿಯವರೇ. ನಮ್ಮ ಧರ್ಮ ಬಿಸಿನೆಸ್ ಮೈಂಡ್ ಹೊಂದಿಲ್ಲ, ಬದಲಾಗಿ ಧರ್ಮವನ್ನನುಸರಿಸುತ್ತಿದೆ. ಧರ್ಮಾಂಧತೆಯನ್ನಲ್ಲ. ನಾವು ನಮ್ಮ ತಾಯಿಯನ್ನು ಮಾತ್ರ “ಅಮ್ಮಾ!” ಎಂದು ಸಂಬೋಧಿಸುತ್ತೇವೆಯೇ ಹೊರತು ಇನ್ನೊಬ್ಬರನ್ನಲ್ಲ. ಹಾಗೆಯೇ ನಮ್ಮತನ, ನೆಲ, ಜಲ ಕೂಡ.

    ಬೆಳಗೆರೆಯವರೇ, ಕೊನೆಯದಾಗಿ ಒಂದು ಸಲಹೆ- ನಮ್ಮ ನೆಲದ ಸಂಸ್ಕೃತಿ, ವೇದ, ವೇದಾಂಗಗಳು, ವ್ಯಾಕರಣಾದಿಗಳು ಉಳಿಯಬೇಕಾದರೆ ನೀವೇನೂ ದೊಡ್ಡ ತ್ಯಾಗ ಮಾಡಬೇಕಿಲ್ಲ. ಯಾರ ಮೇಲೂ, ಗನ್ನು ಬಾಂಬುಗಳನ್ನು ತೋರಿಸಿ ಭಯೋತ್ಪಾದನೆ ಸೃಷ್ಟಿ ಮಾಡುವ ಚಾಳಿಯಿಲ್ಲದ ಸನಾತನ ಧರ್ಮೀಯರ ಬಗ್ಗೆ ತುಚ್ಛವಾಗಿ ಮಾತಾಡಿ, ಬರೆದು ಮಾಡಬೇಡಿ. ನಾವೆಲ್ಲ ನಿಮ್ಮ ಪತ್ರಿಕೆಯನ್ನು ಕೊಂಡು ಓದುವುದರಿಂದಲೇ ನೀವಿವತ್ತು ಇಷ್ಟು ಮೇಲೆ ಬಂದಿರುವುದೆಂದು ನೆನಪಿರಲಿ. ಎಂದೂ ಮರೆಯದ ಹಾಡುಗಳಂತಹ ಕಾರ್ಯಕ್ರಮಗಳನ್ನು ನೀವು ನಡೆಸಿಕೊಟ್ಟಾಗ “ನಮ್ಮ ರವಿ ಬೆಳಗೆರೆ” ಎಂದು ನಿಮ್ಮನ್ನು ಕೊಂಡಾಡಿದವರು ತಮ್ಮಂತೆ ಸಾಂಸ್ಕೃತಿಕ ಕಂಪನ್ನು ಸವಿಯುವ ಸಮಾನ ಮನಸ್ಕರಾದ ನಮ್ಮ ನೆಲದ ಜನ ಎಂಬುದನ್ನು ಎಂದೂ ಮರೆಯದಿರಿ. ನಿಮ್ಮ ಲೇಖನಗಳಲ್ಲಿ ವೈಚಾರಿಕ ಪ್ರಜ್ಞೆಯಿದ್ದರೆ ನಾವ್ಯಾರೂ ಅಲ್ಲಗಳೆಯುವುದಿಲ್ಲ. ಅಸಂಬದ್ಧತೆ ಬೇಡ ಅಷ್ಟೆ.

    ಇತಿ
    ಓದುಗ

  46. Shruthi Thanthri says:

    Very meaningful response..
    As a follower of hinduism(no need to be an hindu) think whats happeneing in the real world and where exactly its effecting????

  47. raghu padiyar says:

    we are all with you simha you are in the right way keep going

  48. santhosh says:

    this will what happen if someone try to act too smart!!!!!! u deserved it MR.belegere!!!!

  49. Reader says:

    I was great Fan of Ravi, but by reading his article and comments of others I really hate myself being the fan all these day.

    Sorry for my misunderstanding on great Belgere

  50. uday says:

    Hi Pratap
    I’ve been a big fan of yours since the time you wrote under “Vishva Vihara” tag.

    For many weeks I’ve been searching for the CONCLUDING ARTICLE BY BHYRAPPA with which the conversion debate ended in VK. In that I suppose he has answered all the objections (if i remember correctly the title is about our ancestors’ social reforms). I searched Internet but couldn’t find its e-copy, can you PLEASE UPLOAD IT?