Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Others > ರವಿ ಬೆಳಗೆರೆ ನೀಡಿದ ಉತ್ತರ, ಅವರಿಗೆ ದೊರೆತ ಪ್ರತ್ಯುತ್ತರ

ರವಿ ಬೆಳಗೆರೆ ನೀಡಿದ ಉತ್ತರ, ಅವರಿಗೆ ದೊರೆತ ಪ್ರತ್ಯುತ್ತರ

ravi-belagere03
ಅಕ್ಟೋಬರ್ 16ರಂದು ‘ವಿಜಯ ಕರ್ನಾಟಕ’ ಪತ್ರಿಕೆಯ ಮುಖಪುಟದಲ್ಲಿ “ಇಂಥ ಘಟನೆ ಬೇರೆ ಯಾವ ದೇಶದಲ್ಲಿ ನಡೆದೀತು?” ಎಂಬ ಶೀರ್ಷಿಕೆಯಡಿ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರು ಬರೆದ ವಿಚಾರಪೂರ್ಣ ಲೇಖನವನ್ನು ಖಂಡಿತ ನೀವು ಓದಿರುತ್ತೀರಿ. ಅವರ ಲೇಖನಕ್ಕೆ ಪ್ರತಿಕ್ರಿಯಿಸಿ ಜನಪ್ರಿಯ ಪತ್ರಕರ್ತ ರವಿ ಬೆಳಗೆರೆಯವರು ಅಕ್ಟೋಬರ್ 19ರಂದು  “ಭೈರಪ್ಪ ಇತಿಹಾಸಕಾರ, ಬರಹಗಾರ: ಸದ್ಯ ಮುತ್ಸದ್ದಿಯಲ್ಲ?” ಎಂಬ ಲೇಖನ ಬರೆದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ಅಕ್ಟೋಬರ್ 20ರಂದು ಉತ್ತರ ಪಡೆದುಕೊಳ್ಳುವ ಸರದಿ ರವಿ ಬೆಳಗೆರೆಯವರದ್ದಾಗಿತ್ತು. ಮಂಗಳೂರಿನ ರಾಮಚಂದ್ರ ಶೆಣೈ (None, but Myself!!) ನೀಡಿದ ಉತ್ತರ ಹಾಗೂ ರವಿ ಬೆಳಗೆರೆಯವರ ಲೇಖನಗಳರಡೂ ಇಲ್ಲಿವೆ-ಸಮಯವಿದ್ದಾಗ ಓದಿಕೊಳ್ಳಿ.

ಭೈರಪ್ಪ ಇತಿಹಾಸಕಾರ, ಬರಹಗಾರ: ಸದ್ಯ ಮುತ್ಸದ್ದಿಯಲ್ಲ?

ಅಕ್ಟೋಬರ್ 16, 2008ರ ವಿಜಯ ಕರ್ನಾಟಕ ಕೈಗೆತ್ತಿಕೊಳ್ಳುತ್ತಿ ದ್ದಂತೆಯೇ ಕಣ್ಣಿಗೆ ಬಿದ್ದುದು ಎಸ್.ಎಲ್. ಭೈರಪ್ಪನವರ ಸುದೀರ್ಘ ಲೇಖನ, ‘ಆವರಣ’ ಕಾದಂಬರಿ ಬರೆದು ಮುಗಿಸಿದ ಮೇಲೆ ಒಮ್ಮೆ ಅವರು ವಾಡಿಯಾ ರಸ್ತೆಯ ವರ್ಲ್ಡ್ ಕಲ್ಚರ್ ಕಟ್ಟಡದ ಅಂಗಳದಲ್ಲಿ ಸಿಕ್ಕಿದ್ದರು. ‘ಆವ ರಣ’ದ ಬಗ್ಗೆ ಪದೇಪದೆ ಪ್ರಶ್ನೆಗಳನ್ನು ಅಲ್ಲಿದ್ದವರು ಕೇಳಿದಾಗ,

‘ನನ್ನನ್ನು ಆವರಣದಿಂದ ಹೊರಕ್ಕೆ ಬರಲು ಬಿಡಿ. ಅದನ್ನು ಬರೆದಾಯಿತಲ್ಲ?’ ಅಂದಿದ್ದರು ಭೈರಪ್ಪ,  ಕ್ರಿಯಾಶೀಲ ಲೇಖಕನೊಬ್ಬನ ಪ್ರಾಮಾಣಿಕ, ಸಾತ್ವಿಕ ಸಿಡುಕು ಆ ದನಿಯಲ್ಲಿತ್ತು. ನನಗೆ ಮತ್ತೇನನ್ನೋ ಬರೆಯ ಬೇಕಾಗಿದೆ. ಧೇನಿಸಬೇಕಾಗಿದೆ: ನನ್ನ ಪಾಡಿಗೆ ಬಿಡಿ ಎಂಬ ಸಿಡುಕು ಅದು ಅಂತ ನಾನು ಅರ್ಥಮಾಡಿಕೊಂಡಿದ್ದೆ. ಆದರೆ ವಿಜಯ ಕರ್ನಾಟಕದಲ್ಲಿ ಅವರ ಲೇಖನ  ಓದಿದ ಮೇಲೆ, ಅವರು ‘ಆವರಣ’ದಿಂದ ಹೊರಬರು ವುದು ಹಾಗಿರಲಿ, ಪೂರ್ತಿ ಪೂರ್ತಿ ಗುಹಾಂತರಾಳವನ್ನೇ ಹೊಕ್ಕಂತೆ ಕಾಣುತ್ತಿದೆ. ಭೈರಪ್ಪ ವಿಪರೀತ paranoid ಆಗಿದ್ದಾರೆ. ತುಂಬ ಚೆಲುವಾಗಿ, ಮುದ ನೀಡಿ, ಯೋಚನೆಗೆ ಹಚ್ಚಿ, ಭಾವೋತ್ಕರ್ಷಕ್ಕೆ ಕೊಂಡೊಯ್ದು ಓದುಗನಿಗೊಂದು ಮಧುರಾನುಭೂತಿ ನೀಡುತ್ತಿದ್ದ ಭೈರಪ್ಪ  ಇದೇಕೆ ಹೀಗೆ ’ ಎಲ್ಲ ಬಗೆಯ ಕರ್ಮಠ’ರಂತೆ ಬರೆಯತೊಡಗಿದ್ದಾರೆ?

‘ಎಲ್ಲ ಬಗೆಯ ಕರ್ಮಠರು’ ಎಂಬುದನ್ನು ನಾನು ಬಳಸಿದ್ದು ಹಿಂದೂ ಕರ್ಮಠರು, ಕರ್ಮಠ ಬ್ರಾಹ್ಮಣರು, ಕರ್ಮಠ ವೀರಶೈವರು, ಕರ್ಮಠ ಭಜರಂಗಿಗಳು, ಕರ್ಮಠ ಕಮ್ಯುನಿಸ್ಟರು, ಕರ್ಮಠ ನಕ್ಸಲರು ಎಂಬ ಅರ್ಥದಲ್ಲಿ. ಭೈರಪ್ಪನವರೂ ಸೇರಿದಂತೆ ನೀವು ಕೂಡ ಈ ಮಾತನ್ನು ಹೀಗೇ ಅರ್ಥಮಾಡಿಕೊಳ್ಳಬೇಕಾಗಿ ವಿನಂತಿ.

ನೀವು ಮತ್ತೇನೂ ಮಾಡಬೇಕಿಲ್ಲ. ಅಕ್ಟೋಬರ್ ೧೬ನೇ ತಾರೀಕಿನ ವಿಜಯ ಕರ್ನಾಟಕ ತೆರೆದು ಅದರಲ್ಲಿನ  ಭೈರಪ್ಪನವರ ಲೇಖನವನ್ನು ಒಬ್ಬರೇ ಕುಳಿತು ದೊಡ್ಡ ದನಿಯಲ್ಲಿ  ಓದಿಕೊಳ್ಳಿ. ಸ್ವಲ್ಪ ಹೊತ್ತಿಗೆ ನೀವು ಯಾರಿಗೋ ಲೆಕ್ಚರು ಕೊಡುತ್ತಿದ್ದೀರಿ ಎಂಬಂತೆ ಭಾಸವಾಗುತ್ತದೆ, ನಿಮಗೂ ಒಬ್ಬ  ಕ್ರೈಸ್ತರ ಮತ ಬೋಧಕನಿಗೂ ವ್ಯತ್ಯಾಸವಿಲ್ಲ  ಅನಿಸುತ್ತದೆ. ಹದಿನೈದು ಜನರನ್ನು ಕೂರಿಸಿಕೊಂಡು ಓದಿ ಬಿಡಿ: ನೀವು ಮುಸ್ಲಿಂ ಧರ್ಮ ಬೋಧಕನಂತೆ ಧ್ವನಿಸತೊಡಗುತ್ತೀರಿ. ಇದನ್ನೇ ನಾನು ಒಂದು ಬರಹದಲ್ಲಿ ನ ಕರ್ಮಠ ಗುಣ ಅನ್ನುವುದು. It starts Preaching. Writer starts barking. ಯಾವಾಗ ನಮ್ಮ ಬರವಣಿಗೆಗೆ ‘ಪ್ರವಾದೀ ಗುಣ’ ಬಂದು ಬಿಡುತ್ತದೋ, ಆವಾಗ ನಮ್ಮೊಳಗಿನ ಸೃಜನಶೀಲ ಬರಹಗಾರ ಸತ್ತು ಹೋಗಿ ಬಿಡುತ್ತಾನೆ. sorry, ಭೈರಪ್ಪ.

‘ಇಂಥ ಘಟನೆ ಯಾವ ದೇಶದಲ್ಲಿ ನಡೆದೀತು?’ ಎಂಬ ತಲೆಬರಹದೊಂದಿಗೆ ಸವಿಸ್ತಾರ ಲೇಖನ ಆರಂಭಿಸುವ ಭೈರಪ್ಪ ಉದ್ದಕ್ಕೂ ಕ್ರೈಸ್ತ ಮಿಷನರಿಗಳ ಮೇಲೆ ಹರಿಹಾಯು ತ್ತಾರೆ. ಅವರು ಎತ್ತುವ ಒಂದು ಪ್ರಶ್ನೆಗೆ ಮಾತ್ರ ನನ್ನ ಸಹಮತವಿದೆ. ‘ಸೆಪ್ಟೆಂಬರ್ ೧೧ರ ನಂತರ ಅಮೆರಿಕದಲ್ಲಿ ಒಂದೇ ಒಂದು ಮುಸ್ಲಿಂ ವಿಧ್ವಂಸಕ ಕೃತ್ಯ ನಡೆಯಲಿಲ್ಲ. ಭಾರತದಲ್ಲಿ ದಿನಕ್ಕೆ ಐದಾರು ಜನರನ್ನು ಕೊಲ್ಲುತ್ತಿದ್ದಾರೆ. ಹೀಗೇಕೆ?’ ಅಂತ ಭೈರಪ್ಪ  ಕೇಳುವುದರಲ್ಲಿ Sence ಇದೆ. ಆದರೆ ಇನ್ನೊಂಚೂರು ಸಹನೆಯಿಟ್ಟುಕೊಂಡಿದ್ದಿದ್ದರೆ ಭೈರಪ್ಪನವರ ಪ್ರಶ್ನೆಗೂ ಉತ್ತರ ಸಿಗುತ್ತಿತ್ತು.

ಅಮೆರಿಕದಲ್ಲಿ ನಡೆಯದ ಮುಸ್ಲಿಂ ವಿಧ್ವಂಸಕ ಕೃತ್ಯಗಳು ಲಂಡನ್ನಲ್ಲಿ ನಡೆದವು. ಇಸ್ರೇಲ್ ಇವತ್ತಿಗೂ ಅದರ ತವರು. ಪಾಕಿಸ್ತಾನದಲ್ಲೇ ಜಿಹಾದಿಗಳು ಬೆನಜೀರ್ರನ್ನು ಕೊಂದರು. ಚೀನದಂತಹ ಕರ್ಮಠ ಕಮ್ಯುನಿಸ್ಟ್  ಖಬರ ಸ್ತಾನದಲ್ಲಿ ಮುಸ್ಲಿಮರು ತಿರುಗಿಬಿದ್ದರು. ಅಮೆರಿಕಕ್ಕೆ ತನ್ನ ದೇಶದ ಮಟ್ಟಿಗೆ ಮುಸ್ಲಿಂ ಭಯೋತ್ಪಾದನೆಯನ್ನು ಬಗ್ಗು ಬಡಿಯುವ ತಾಕತ್ತು (ಹಣವಿರುವುದರಿಂದಾಗಿ) ಇದೆಯೇ ಹೊರತು, ಅಫಘನಿಸ್ತಾನದಂತಹ ದೇಶದಲ್ಲಿ ಮುಸ್ಲಿಂ ಉಗ್ರರು ಅಮೆರಿಕಕ್ಕೆ ಇವತ್ತಿಗೂ ನೆಗ್ಗಲು ಮುಳ್ಳುಗಳೇ. Pan Islamism ಎಂಬುದು ರಾಕ್ಷಸ ಸ್ವರೂಪ ಪಡೆದು ಬಿಟ್ಟಿದೆಯೆಂಬುದು ನಿಜ. ಅದು ಆರಂಭಿಸಿರುವ ಜಾಗತಿಕ ಮಟ್ಟದ ಹಿಂಸೆಯನ್ನು ಯಾವ ರಾಜಕೀಯ ಮುತ್ಸದ್ದಿಯ ಇಚ್ಛಾಶಕ್ತಿಯೂ ತಮಣಿ ಮಾಡಲಾರದು. ಮುಸ್ಲಿಂ ಸಮುದಾಯದಲ್ಲೇ ಇವತ್ತು ಭಯೋತ್ಪಾದನೆಯ ವಿರುದ್ಧ ಜಾಗೃತಿ ಮೂಡಬೇಕು. ಅವರಿಂದಲೇ ಅವರ ಉಗ್ರವಾದ ಅಂತ್ಯವಾಗಬೇಕು. ಈಗಾಗಲೇ ಪಾಕಿಸ್ತಾನಿಗಳು ‘ಪಾನ್ ಇಸ್ಲಾಮಿಕ್ ಜಿಹಾದಿ’ಗಳ ವಿರುದ್ಧ ದನಿಯೆತ್ತ ತೊಡಗಿದ್ದಾರೆ.

ಆದರೆ ಭೈರಪ್ಪನವರ ತಕರಾರು ಈಗ ಮುಸಲರ ವಿರುದ್ಧ ಅಲ್ಲ. ಅದು ಕ್ರೈಸ್ತರ ವಿರುದ್ಧ. ಅವರ ಪ್ರಕಾರ ಏಸುವನ್ನು ಶಿಲುಬೆಗೆ ಏರಿಸಿದ್ದು ಯಹೂದಿಗಳಲ್ಲ. (ಹಾಗಾದರೆ ಮತ್ಯಾರೋ?) ಈಗ ಭಾರತದಲ್ಲಿ ಮತಾಂತರ ಎಷ್ಟು ಬಿರುಸಾಗಿ ನಡೆಯುತ್ತಿದೆ ಅಂದರೆ, ಆಂಧ್ರದ ಮುಖ್ಯಮಂತ್ರಿ (ಸ್ಯಾಮುಯೆಲ್) ರಾಜಶೇಖರ ರೆಡ್ಡಿ ಕೂಡ ಭೈರಪ್ಪನವರ ಪ್ರಕಾರ ಭಾರತದ ಐವರು ಕ್ರೈಸ್ತ ಮುಖ್ಯಮಂತ್ರಿಗಳಲ್ಲಿ ಒಬ್ಬರು ! ಅಂದರೆ, ಕ್ರಿಶ್ಚಿಯನ್ನರ ಸಂಖ್ಯೆ ಆ ಪರಿ ಹೆಚ್ಚಿದೆ ಎಂಬುದು ಭೈರಪ್ಪನವರ ಭಯ. ಅದು  ಅವರದೇ ವಿನೂತನ ‘ವಾದ’ ಎಂಬಂತೆ ಲೇಖನ ದಲ್ಲಿ ಸಾದರಪಡಿಸುತ್ತಾರಾದರೂ,  ಈ ಬಗ್ಗೆ  ಒಂದು ವರ್ಷದ ಹಿಂದೆಯೇ ಲೇಖನಗಳು ದೇಶದ ನಾನಾ ಪತ್ರಿಕೆಗಳೂ ಸೇರಿದಂತೆ, ಇಂಟರ್ನೆಟ್ ತುಂಬ ಸರಿದಾಡಿವೆ. ಇಲ್ಲಿ ಭೈರಪ್ಪನವರಿಗೆ ಒಂದೆರಡು ಅಂಶಗಳನ್ನು ಸ್ಪಷ್ಟಪಡಿಸಲು ಯತ್ನಿಸುತ್ತೇನೆ. ನೀವು ಆಂಧ್ರದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರನ್ನು ಕ್ರೈಸ್ತರು ಅಂತ ಭಾವಿಸಿದ್ದರೆ ಅದಕ್ಕಿಂತ ಅಪದ್ಧ ಮತ್ತೊಂದಿಲ್ಲ. ಅವರ ಪೂರ್ವಜರ್ಯಾರೋ ಕ್ರೈಸ್ತರಾಗಿದ್ದಿರಬಹುದು. ಆದರೆ ಬೀಗತನಗಳಿಂದ ಹಿಡಿದು ರಾಜಕಾರಣದ ತನಕ ರಾಜಶೇಖರ ರೆಡ್ಡಿಯವರು ಶುದ್ಧಾನು ಶುದ್ಧ ರೆಡ್ಡಿಯೇ. ಆಂಧ್ರದಲ್ಲಿ ರೆಡ್ಡಿ-ಕಮ್ಮ-ಕಾಪು ಕದನ ತಲಾಂತರಗಳಿಂದ ನಡೆದುಬಂದಿದೆ. ಅದರ ಚುಕ್ಕಾಣಿ ಹಿಡಿದು ‘ರೆಡ್ಡಿ ರಾಜತ್ವ’ ಸ್ಥಾಪಿಸಿರುವುದೇ ರಾಜಶೇಖರ ರೆಡ್ಡಿ.

ಇನ್ನು ‘ಮಣಿಪುರ, ನಾಗಾಲ್ಯಾಂಡ್’ಗಳ ಜನರೆಲ್ಲ ಕ್ರೈಸ್ತ ರಾಗಿದ್ದಾರೆ’ ಎಂಬುದನ್ನು ಹೊಸ (ಸ್ವಂತ) ಕೂಗೇನೋ ಎಂಬಂತೆ ಎಬ್ಬಿಸುತ್ತಿದ್ದಾರೆ ಭೈರಪ್ಪ. ಅದು ಕೂಡ ಹಳೇ ಸಂಗತಿಯೇ. ಭಾರತದ ಒಟ್ಟಾರೆ ಹಿಂದೂ ಜನಸಂಖ್ಯೆಗೆ ಹೋಲಿಸಿಕೊಂಡರೆ, ಮಣಿಪುರ-ನಾಗಾಲ್ಯಾಂಡ್ಗಳ ಸಮಸ್ಯೆ ತುಂಬಾ ಬೃಹತ್ತಾಗಿ ಕಾಣುವುದಿಲ್ಲ. ಹಿಂದೂ ಜನಸಂಖ್ಯೆಯೂ ವಾಕರಿಕೆ ಬರುವಷ್ಟು ಬೆಳೆದಿದೆ. ಆದರೆ ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಮಣಿಪುರ- ನಾಗಾಲ್ಯಾಂಡ್ ಇತ್ಯಾದಿಗಳಲ್ಲಿ ಕ್ರೈಸ್ತರಾಗಿ ಮತಾಂತರ ಹೊಂದಿರುವವರು ಮೊದಲು ಹಿಂದೂಗಳಾಗಿದ್ದವರಲ್ಲ. ಅವರಲ್ಲಿ ಹೆಚ್ಚಿನವರು ಬುಡಕಟ್ಟುಗಳವರು. ತಪ್ಪಿದರೆ ಬೌದ್ಧರು. ಆದರೆ ಅಲ್ಲಿ ಸಾಮೂಹಿಕ ಕ್ರೈಸ್ತ ಮತಾಂತರ ಗಳಾಗಿರುವುದು ಮಾತ್ರ ನಿಜ. ಇಂಥ ಮತಾಂತರಗಳು ಉಗಾಂಡಾ, ಕೀನ್ಯಾ, ಝೈರೆ, ತಾಂಜೀನಿಯಾದಂತಹ ದೇಶಗಳಲ್ಲೂ ಆದವು. ಏಕೆಂದರೆ, ಅಲ್ಲಿ ಕ್ರೈಸ್ತ ಮಿಷನರಿಗಳು ಕಾಲಿಡುವುದಕ್ಕೆ ಮುಂಚೆ ಯಾವುದೇ ಒಂದು ಧರ್ಮ ಪ್ರಬಲವಾಗಿರಲಿಲ್ಲ. ಎರಡನೆಯದಾಗಿ, ಕ್ರೈಸ್ತ ಮಿಷನರಿಗಳು ಒಂದು ಕೈಲಿ ಆಸ್ಪತ್ರೆ, ಇನ್ನೊಂದು ಕೈಲಿ ಸ್ಕೂಲು, ಕಿಸೆಯಲ್ಲಿ ಕಾಸು, ಕೊರಳಿಗೆ ಏಸು- ಹೊತ್ತುಕೊಂಡೇ ಉಗಾಂಡಾದಂಥ ಬುಡಕಟ್ಟು ಹಾಗೂ Virgin landಗಳಿಗೆ ಹೋದರು. ಮುಸ್ಲಿಮರು ಒದ್ದು ಮತಾಂತರಗೊಳಿಸಿದರೆ ಕ್ರೈಸ್ತರು ಕಾಸು ಕೊಟ್ಟು, ಬೇರೆಯದೇ ತೆರೆನಾದ ಭೀತಿ ಹುಟ್ಟಿಸಿ ಪ್ರಬಲ ಧರ್ಮದ ಮುಂದಾಳತ್ವವಿಲ್ಲದ ಬುಡಕಟ್ಟು, ಬಡವ ಮತ್ತು ಧಾರ್ಮಿಕ ಅಮಾಯಕರನ್ನು ಮತಾಂತರಗೊಳಿಸುತ್ತಾರೆ.

ಇದನ್ನೆಲ್ಲ ಭೈರಪ್ಪನವರೂ ಸರಿಯಾಗಿಯೇ ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಇದ್ದಕ್ಕಿದ್ದಂತೆ ಅವರು fanatic (ಮತಭ್ರಾಂತ) ಹಿಂದೂ ಆಗಿಬಿಡುತ್ತಾರೆ. ಅಲ್ಲಾಹುನನ್ನು ನಂಬದಿರುವವರನ್ನು ಕೊಲ್ಲಿರಿ ಎಂದು ಕುರ್-ಆನ್ ಹೇಳಿದಂತೆಯೇ (ಆವರಣದ ಅವರ ವಾದ ಇದು) ಆತನನ್ನು ಶಿಲುಬೆಗೇರಿಸಿದ್ದೇ ಕಟ್ಟು ಕತೆ ಅಂತ ವಿತಂಡ ವಾದ ಮಂಡಿಸ ಹೊರಡುತ್ತಾರೆ. ಭೈರಪ್ಪನವರು ತಿಳಿದುಕೊಳ್ಳಬೇಕಾದ ಐತಿಹಾಸಿಕ ಸತ್ಯವೊಂದಿದೆ: ಅದೇನೆಂದರೆ, ಪ್ರತಿ ಪ್ರವಾದಿಯೂ ದೇವರಿಗೆ mediator ಆಗಿ ಹುಟ್ಟಿದವನೇ. ಪ್ರತಿ ಧರ್ಮವೂ ಮೂಲದಲ್ಲಿ ಶ್ರೇಷ್ಠವಾಗಿದ್ದುಕೊಂಡು ಕಾಲಾಂತರದಲ್ಲಿ fanatic  ಸ್ವರೂಪ ಪಡೆದಂತಹುದೇ. ಶಂಕರಾಚಾರ್ಯರು ಕೂಡ ಅಗ್ರೆಸಿವ್ ಸ್ವರೂಪ ತಾಳಿದವರೇ. ಬುದ್ಧನ ಶಿಷ್ಯರೂ ಕೊಡಲಿ ಕೈಗೆತ್ತಿಕೊಂಡವರೇ. ಅಂಥದರಲ್ಲಿ ಪೋರ್ಚು ಗೀಸರು ಹೊರಡಿಸಿದ ಫರ್ಮಾನುಗಳನ್ನೂ, ಇಂಗ್ಲಿಷರು ಕಾಫಿ ತೋಟ ಕಿತ್ತುಕೊಂಡ ಬಗೆಯನ್ನೂ, ಮದರ್ ಥೆರೇಸಾ ಮಾಡಿದ ಮಾನವ ಸೇವೆಯನ್ನೂ ಒಂದೇ ತಕ್ಕಡಿ ಯಲ್ಲಿಟ್ಟು ತೂಗುವುದು at least, ಭೈರಪ್ಪನವರಿಗೆ ತರವಲ್ಲ. ಕುಷ್ಠರನ್ನ, ಕೊಳೆತು ಹೋದವರನ್ನ, ಸಾಯಲನುವಾದವರನ್ನ ಮತಾಂತರಗೊಳಿಸಿ ಥೆರೇಸಾಗೆ ಆಗಬೇಕಾದ್ದಾದರೂ ಏನಿತ್ತು? ಆಯ್ತು, ಆಕೆ ಅನಾಥ ಮಕ್ಕಳಿಗೆಲ್ಲ ಶಿಲುಬೆ ಹಾಕಿದಳು: ಆದರೆ ಸಿದ್ದಗಂಗೆಯ ಶ್ರೀಗಳು ಯಾವ ಬಡವನಿಗೂ ಲಿಂಗ ಕಟ್ಟಲಿಲ್ಲ ಎಂಬ ಭೈರಪ್ಪನವರ ವಾದವನ್ನೇ ಒಪ್ಪಿಕೊಳ್ಳೋಣ. ಆದರೆ ಭೈರಪ್ಪ ಯಾವ extremityಗೆ ಹೋಗುತ್ತಾರೆಂದರೆ, ‘ಥೆರೇಸಾಗೆ ಸಿಕ್ಕ ಗೌರವ ಸಿದ್ದಗಂಗೆ ಶ್ರೀಗಳಿಗೆ ಯಾಕೆ ಸಿಗಲಿಲ್ಲ’ ಅಂತ ವಾದಿಸುತ್ತಾರೆ. (ಥೆರೇಸಾಗೆ ಸಿಕ್ಕ ಗೌರವ ಲಿಂಗಾಯತರ ಮಾತೆ ಮಹಾದೇವಿಗೆ ಸಿಕ್ಕಿದ್ದಿದ್ದರೆ ಭೈರಪ್ಪ ಸಿಟ್ಟಾಗ ಬೇಕಿತ್ತು! ಹ್ಹ)

ಇತಿಹಾಸಕ್ಕೆ ಸಂಬಂಧಿಸಿದಂತೆ ಒಂದು ಸರಿಯಾದ ಪರಿಕಲ್ಪನೆ ಇಲ್ಲದೆ ಹೋದರೆ ಹೀಗಾಗುತ್ತದೆ. Basically, ಸಿದ್ದಗಂಗೆಯ ಶ್ರೀಗಳನ್ನು ತಾಯಿ ಥೆರೇಸಾಗೆ ಹೋಲಿಸುವುದೇ ತಪ್ಪು. ಅವರ ಕೆಲಸ, ವ್ಯಾಪ್ತಿ, ಉದ್ದೇಶ ಮತ್ತು reach  ಎಲ್ಲವೂ ಬೇರೆಬೇರೆ. ಸಿದ್ದಗಂಗೆ ಶ್ರೀಗಳು ಪಾಠ ಹೇಳಿದರು, ಮಠದಲ್ಲಿ ಮಕ್ಕಳನ್ನಿಟ್ಟುಕೊಂಡರು. ಮಠದ ಕೀರ್ತಿ ಹೆಚ್ಚಿಸಿದರು. (ಕೊಂಚ ತಿರುಗಿಬಿದ್ದ ಕಿರಿಯ ಶ್ರೀಗಳನ್ನು ಎಡಗಾಲಲ್ಲಿ ತುಳಿದು ಸರ್ವನಾಶ ಮಾಡುತ್ತಿದ್ದರೆ ಸಣ್ಣ ಆಕ್ಷೇಪವೂ ಎತ್ತದೆ ಸುಮ್ಮನಿದ್ದರು. ಆ ಮಾತು ಬೇರೆ.) ಆದರೆ ಶ್ರೀಗಳು ಯಾವತ್ತಿಗೂ ಕುಷ್ಠರನ್ನು, ಕೊಳೆತವರನ್ನು ಮುಟ್ಟಲಿಲ್ಲ. ಚರಂಡಿಯಲ್ಲಿ ಹುಳು ಹಿಡಿದು ಮಲಗಿದ ನಿರ್ಗತಿಕನನ್ನು ಅವಚಿ ಎದೆಗಪ್ಪಿಕೊಳ್ಳಲಿಲ್ಲ. ಅವರು ಆಯ್ದುಕೊಂಡ ರಂಗವೇ ಬೇರೆಯಾಗಿದ್ದರಿಂದ, ಅವರ ಕೀರ್ತಿ ಕರ್ನಾಟಕದ ಆಸುಪಾಸು ಬಿಟ್ಟು ಆಚೆಗೆ ಹೋಗಲಿಲ್ಲ. ಇನ್ನು ಮಾಧ್ಯಮಗಳು, ಅದರಲ್ಲೂ ಇಂಗ್ಲಿಷ್ ಮಾಧ್ಯಮಗಳು ಥೆರೇಸಾಗೆ ಅನವಶ್ಯಕ ಪ್ರಚಾರ ಕೊಟ್ಟವು ಎನ್ನುತ್ತಾರೆ ಭೈರಪ್ಪ. Once again,ಸಿದ್ದಗಂಗಾ ಶ್ರೀಗಳು ಕರ್ನಾಟಕಕ್ಕೆ ಸಂಬಂಧಪಟ್ಟವರು. ಅವರು, ಅವರ ಶಿಕ್ಷಣ ಕ್ಷೇತ್ರ, ಅವರ ಮಠ ಇಲ್ಲಿಗೆ ಸೀಮಿತವಾದುದು. ಅದರಾಚೆಗಿನ ಮನುಷ್ಯ, he is not interested. ಅಷ್ಟೇಕೆ, ಗುಜರಾತಿಗೆ ಹೋಗಿ ನೀವು ಸತತ ಹದಿನೈದು ದಿನ ರಾಘವೇಂದ್ರ ಸ್ವಾಮಿಗಳ ಭಜನೆ ಮಾಡಿ. ಅದು ಪರಿಣಾಮ ಬೀರುವುದಿಲ್ಲ. ಏಕೆಂದರೆ issue ಅಲ್ಲಿಗೆ ಸಂಬಂಧಪಟ್ಟುದಾಗಿರುವುದಿಲ್ಲ. ಥೆರೇಸಾ ಅಥವಾ ಬಾಬಾ ಆಮ್ಟೆ ಈ ಪರಿಧಿಯನ್ನು ದಾಟಿದವರು. ಅವರು ಸಿದ್ದಗಂಗಾ ಶ್ರೀಗಳಿಗಿಂತ ಉತ್ತಮರು ಅಂತ ನಾನು ವಾದಿಸುತ್ತಿಲ್ಲ. ಅವರು ಆರಿಸಿಕೊಂಡ ಕ್ಷೇತ್ರ ಶ್ರೀಗಳ ಕ್ಷೇತ್ರಕ್ಕಿಂತ ವಿಸ್ತಾರವಾದದ್ದು. ಇಡೀ ದೇಶಕ್ಕೆ, ಪ್ರಪಂಚಕ್ಕೆ, ಮನುಕುಲಕ್ಕೆ ಸಂಬಂಧಿಸಿದ್ದು.

ಇಷ್ಟಾಗಿ ಥೆರೇಸಾ ತುಂಬಾ subtle ಆಗಿ ಅನಾಥ ಹಿಂದೂ(?) ಕಂದಮ್ಮಗಳನ್ನು ಸದ್ದಿಲ್ಲದೆ ಮತಾಂತರ ಗೊಳಿಸಿದ ರಾಕ್ಷಸಿ ಅಂತಲೇ ಇಟ್ಟುಕೊಳ್ಳೋಣ. ಅವೇ ಅನಾಥ ಹಿಂದೂ ಕಂದಮ್ಮಗಳನ್ನು ಎದೆಗವಚಿಕೊಂಡು ‘ನಾನು ಸಾಕುತ್ತೇನೆ’ ಅಂದಂಥ ಒಬ್ಬ ಹಿಂದೂ ಮಾತೃದೇವತೆ ಹುಟ್ಟಲಿಲ್ಲವಲ್ಲ ಸ್ವಾಮಿ? ಅದೂ ಇಷ್ಟು ದೊಡ್ಡ ಭಾರತದಲ್ಲಿ!

ನೋಡಿ, ಮನಸ್ಸು ಜಡಗೊಂಡರೆ ವಿವೇಕ ಸತ್ತು ಹೋಗುತ್ತದೆ.  ವಾದ ವಿತಂಡವೂ, ಬರಹ ವಾಚಾಮವೂ ಆಗುತ್ತದೆ. ಭೈರಪ್ಪನವರ ವಿಷಯದಲ್ಲಿ ಅದೇ ಆಗತೊಡಗಿದೆ. ಇಂಗ್ಲಿಷರ ವಿರುದ್ಧ ಬಂಡೆದ್ದ ಬಾಪೂ ಸ್ವದೇಶಿ ಕಾಲೇಜು, ಬಟ್ಟೆ, ಬ್ಯಾಂಕು-ಹೀಗೆ ಪ್ರತಿ ಯೊಂದಕ್ಕೂ ಸ್ವದೇಶಿ ಪರ್ಯಾಯವನ್ನು ಹುಡುಕಿ ಚಳವಳಿಯನ್ನು ಮುನ್ನಡೆಸಿದರು. ಭೈರಪ್ಪನವರಲ್ಲಿ ಅಂಥ ಯಾವ ಲಕ್ಷಣವೂ ಕಾಣುತ್ತಿಲ್ಲ. ಅವರು ಮತಾಂತರಕ್ಕೆ ಯಾವ ಪರಿಹಾರವನ್ನೂ ಸೂಚಿಸುತ್ತಿಲ್ಲ. ಪೊಲೀಸರನ್ನಿಟ್ಟು ಮಿಷನರಿಗಳನ್ನು ಒದ್ದೋಡಿಸಿ ಎಂಬ ಧಾಟಿಯಲ್ಲಿ ಮಾತಾಡುತ್ತಾರೆ. ಇವರಿಗೂ ಪೋರ್ಚುಗೀಸರಿಗೂ ಯಾವ ವ್ಯತ್ಯಾಸ ಉಳಿಯಿತು? ಭೈರಪ್ಪನವರು ಯಾವ ತಲೆಮಾರನ್ನು ಲೀಡ್ ಮಾಡಲು ಹೊರಟಿದ್ದಾರೆ? (‘ನಂಗೆ ಆ ಉದ್ದೇಶವೇ ಇಲ್ಲ’ ಅಂತ ಪ್ರತಿಕ್ರಿಯಿಸಿ ಮುಟ್ಟಾಗುವುದು ಬೇಡ. Please)

ಇವತ್ತು ಭೈರಪ್ಪ ನೆನಪು ಮಾಡಿಕೊಳ್ಳಬೇಕಾದುದು  ಪ್ರೊ. ನಂಜುಂಡಸ್ವಾಮಿಯಂತಹ ಚಿಂತಕರನ್ನ. ಕರ್ನಾ ಟಕಕ್ಕೆ after all, ಒಂದು ಕೋಳಿ ಮಾಂಸ ಮಾರುವ ಅಂಗಡಿ ಬರುತ್ತದೆ ಅಂದದ್ದಕ್ಕೆ ಭೂಮಿ ಆಕಾಶ  ಒಂದು ಮಾಡಿ ಕೂಗಾಡಿದ್ದರು ಪ್ರೊಫೆಸರ್. ಏಕೆಂದರೆ, ಅವರಿಗೆ ಗೊತ್ತಿತ್ತು: ಒಬ್ಬ ಮಿಷನರಿ ಬರುವುದಕ್ಕಿಂತ ಒಬ್ಬ ವ್ಯಾಪಾರಿ ಬರುವುದು ದೇಶಕ್ಕೆ ಗಂಡಾಂತರಕಾರಿ ! ಅವರ ಮಾತು ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಅಕ್ಕಿ ಬೆಳೆಯುತ್ತಿದ್ದ ನೆಲದಲ್ಲಿ ಕಂಪ್ಯೂಟರ್ ಬೆಳೆ ಬೆಳೆಯಿತು. ಕೋಟ್ಯಂತರ ರೂಪಾಯಿ ಬಂದೇ ಬಿಟ್ಟಿತೇನೋ ಎಂಬಂತೆ ಭಾಸವಾಯಿತು. ದೊಡ್ಡದೊಂದು ಐಟಿ-ಬಿಟಿ ಗುಳ್ಳೆ ಎದ್ದು ನಿಂತಿತು. ಅದಕ್ಕೀಗ ಸೂಜಿ ಚುಚ್ಚಲಾಗಿದೆ. ಅಮೆರಿಕದಲ್ಲಿ  ಬಡವರಿಗೆ (I mean, ಆದಾಯವಿಲ್ಲದ high risk group peopleಗೆ) ಮನೆ ಸಾಲ ಕೊಡುವುದರಲ್ಲಿ ಆದ ಚಿಕ್ಕದೊಂದು ಯಡವಟ್ಟು ಇಡೀ ಜಗತ್ತಿನ  ಎಕಾನಮಿಗೆ ಹೊಡೆತ ಕೊಡುತ್ತಿದೆ. ಷೇರು ಮಾರ್ಕೆಟ್ ಮಣ್ಣು ಮುಕ್ಕಿದೆ. ರಿಯಲ್ ಎಸ್ಟೇಟ್ ಬೋರಲು ಬಿದ್ದಿದೆ. ಲಕ್ಷಾಂತರ ಸಂಬಳ ತರುತ್ತೇವೆಂದು ಇಲ್ಲಿಂದ ಹೋದವರು ಕ್ರಮೇಣ ಹಿಂತಿರುಗುತ್ತಿದ್ದಾರೆ. ಎಲ್ಲ ವೈಭವ ಕಳಚಿ ಬೀಳುತ್ತಿದೆ. ಇನ್ನು ಸರದಿಯಿಟ್ಟು ಭಾರತಕ್ಕೆ ಎಲ್ಲರೂ ಹಿಂತಿರುಗುತ್ತಾರೆ. ಬೋಧಿಸಲಿ ಅವರಿಗೆ ಹಿಂದೂ ಧರ್ಮವನ್ನು ಭೈರಪ್ಪ.

ಪ್ರಯಾರಿಟಿಗಳನ್ನು ಇತಿಹಾಸಕಾರ ಮುತ್ಸದ್ದಿ ಮತ್ತು ಬರಹಗಾರ ಯಾವತ್ತಿಗೂ ಮರೆಯಬಾರದು. ಭೈರಪ್ಪನವರು ಇತಿಹಾಸಕಾರರೂ ಹೌದು, ಬರಹಗಾರರೂ ಹೌದು. ಸದ್ಯ, ಮುತ್ಸದ್ದಿಯಲ್ಲ.

-ರವಿ ಬೆಳಗೆರೆ
ಭೈರಪ್ಪ ‘ಮುತ್ಸದ್ದಿ’ಯಲ್ಲ ಅಂತ ಸರ್ಟಿಫಿಕೆಟ್ ಕೊಡಲು ಇವರ್ಯಾರು?

ನಿಮಗೆ ಸಮಯವಿದ್ದರೆ, ಈ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂಬ ಇಚ್ಛೆ ನಿಮ್ಮಲ್ಲಿದ್ದರೆ ಕೊನ್ರಾಡ್ ಎಲ್ಟ್ಸ್ ಬರೆದಿರುವ “Negationism in India” ಎಂಬ ಪುಸ್ತಕವನ್ನು ಒಮ್ಮೆ ಓದಿ.

ಭಾರತದಲ್ಲಿ ಮುಸ್ಲಿಮ್ ಆಕ್ರಮಣಕಾರರು, ಆಡಳಿತಗಾರರು ನಡೆಸಿದ ದೌರ್ಜನ್ಯವನ್ನು ಹೇಗೆ ಮರೆಮಾಚಲಾಗುತ್ತಿದೆ ಎಂಬುದನ್ನು ಬಯಲು ಮಾಡಲು ಯತ್ನಿಸಿರುವ ಎಲ್ಟ್ಸ್, ಮೊದಲಿಗೆ ಯುರೋಪ್ನಲ್ಲಿ ನಡೆದ ಇಂತಹದ್ದೇ ಪ್ರಯತ್ನಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. “ಇಲ್ಲ, ಇಲ್ಲ.. ಹಿಟ್ಲರ್ ಯಹೂದಿಗಳ ಮಾರಣಹೋಮವನ್ನೇ ಮಾಡಲಿಲ್ಲ. ಅಲ್ಲೊಂದು ಇಲ್ಲೊಂದು ದೌರ್ಜನ್ಯಗಳು ನಡೆದವಷ್ಟೇ. ಜರ್ಮನಿ ಹಾಗೂ ರಷ್ಯಾದಲ್ಲಿ ಹೋಲೋಕಾಸ್ಟ್ ನಡೆಯಲೇ ಇಲ್ಲ” ಎಂದು ವಾಸ್ತವ ಸತ್ಯವನ್ನೇ ಮರೆಮಾಚುವ ಪ್ರಯತ್ನ ಯುರೋಪ್ನಲ್ಲಿ ನಡೆದಿತ್ತು. ಹಾಗಂತ ಉದಾಹರಣೆ ಸಮೇತವಾಗಿ ಭಾರತದ ಮೇಲೆ ಬೆಳಕು ಚೆಲ್ಲುವ ಎಲ್ಟ್ಸ್, ಒಂದು ಸಾವಿರ ವರ್ಷಗಳ ಕಾಲ ಮುಸ್ಲಿಮರು ನಡೆಸಿದ ದೌರ್ಜನ್ಯಗಳನ್ನು ನಮ್ಮ ಇತಿಹಾಸಕಾರರು ಹೇಗೆ ಮುಚ್ಚಿಹಾಕುತ್ತಾ ಬಂದಿದ್ದಾರೆ, ಹೇಗೆ ದೌರ್ಜನ್ಯವೇ ನಡೆದಿಲ್ಲ ಎಂದು ನಿರಾಕರಿ ಸುತ್ತಾರೆ ಎಂಬುದನ್ನು ವಿವರಿಸುತ್ತಾರೆ.

ಅಯೋಧ್ಯೆ ವಿಷಯದಲ್ಲೂ ಹೀಗೇ ಆಯಿತು.

ಮೊದಲಿಗೆ, ಅಲ್ಲಿ ರಾಮನ ದೇವಸ್ಥಾನವೇ ಇರಲಿಲ್ಲ ಎಂದು ನಿರಾಕರಿಸಿದರು. ಇತ್ತು ಎಂದು ಗಟ್ಟಿಯಾಗಿ ವಾದಿಸಿದ ಕೂಡಲೇ, ‘ಹಾಗಾದರೆ ರಾಮ ಅಲ್ಲೇ ಜನಿಸಿದ ಎಂಬುದಕ್ಕೆ ಸಾಕ್ಷ್ಯಾಧಾರ ಗಳನ್ನು ಕೊಡಿ’ ಎಂದು ಕೇಳಿದರು. ಸಾಕ್ಷ್ಯಾಧಾರಗಳನ್ನು ಕೊಟ್ಟ ಕೂಡಲೇ, “ಇಲ್ಲ, ಇಲ್ಲ, ಇಷ್ಟು ಸಾಕಾಗುವುದಿಲ್ಲ. ಇನ್ನೂ ಗಟ್ಟಿಯಾದ, ನಂಬುವಂತಹ ಸಾಕ್ಷ್ಯ ನೀಡಿ” ಎಂದು ಒತ್ತಾಯಿಸಿ ದರು. ಅಂತಹ ಪ್ರಭಲವಾದ ಸಾಕ್ಷ್ಯವೂ ಇದೆ ಎಂದು ಗೊತ್ತಾದರೆ ಏನು ಮಾಡುತ್ತಾರೆ ಗೊತ್ತೆ? ಎರಡು ತಂತ್ರಗಳನ್ನು ಒಡ್ಡುತ್ತಾರೆ. ಎಂದೋ ನಡೆದ ಘಟನೆಯ ಬಗ್ಗೆ ಇಂದಿಗೂ ಚರ್ಚೆ ನಡೆಸುವುದು ಎಷ್ಟು ಸರಿ? ಹಳೆಯದ್ದನ್ನೆಲ್ಲಾ ನಾವು ಮರೆತು ಹೊಸ ಸಮಾಜವನ್ನು ಕಟ್ಟಬೇಕು. ಇಂದು ನಮ್ಮ ಮುಂದಿರುವ ಸಮಸ್ಯೆ ಎಂದರೆ ಉತ್ತಮ ರಸ್ತೆಗಳು ಬೇಕು, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು, ಫೋನು, ವಿದ್ಯುತ್ ನಮಗೆ ಬೇಕು. ಹಳೆಯದ್ದನ್ನೆಲ್ಲ ಕೆದಕಿ ತೆಗೆಯಬಾರದು ಎಂದು ನಿಮ್ಮ ತಲೆಸವರಲು ಯತ್ನಿಸುತ್ತಾರೆ. ಒಂದು ವೇಳೆ ನೀವೇನಾದರೂ ಅಂತಹ ಮಾತುಗಳಿಗೆ ಸೊಪ್ಪುಹಾಕದಿದ್ದರೆ, “ಮುಸ್ಲಿಮರು ಭಾರತಕ್ಕೆ ಆಗಮಿಸಲು ನಮ್ಮಲ್ಲಿನ ಜಾತಿ ಪದ್ಧತಿಯೇ ಕಾರಣ. ದಲಿತರನ್ನು ದೂರವಿಟ್ಟಿದ್ದ ಸಾಮಾಜಿಕ ಅಸಮಾನತೆಯೇ ಮುಖ್ಯ ಕಾರಣ. ನಾವು ದಲಿತರನ್ನು ಸಮಾನವಾಗಿ ಕಂಡಿದ್ದರೆ, ನಡೆಸಿಕೊಂಡಿದ್ದರೆ ಜಾತಿ ಹೆಸರಿನಲ್ಲಿ ಸಮಾಜವನ್ನು  ಒಡೆಯದಿದ್ದರೆ ಪರಕೀಯರು ನಮ್ಮ ಮೇಲೆ ಆಕ್ರಮಣ ಮಾಡಲು ಸಾಧ್ಯವಾಗುತ್ತಿತ್ತೇ?” ಎಂದು ವಿಷಯಾಂತರ ಮಾಡಲು ಯತ್ನಿಸುತ್ತಾರೆ.

ಹೀಗೆ ಒಂದು ಗಂಭೀರ ಸಮಸ್ಯೆ, ಐತಿಹಾಸಿಕ ದೌರ್ಜನ್ಯದ ಬಗೆಗಿನ ಚರ್ಚೆಯನ್ನು ದಾರಿತಪ್ಪಿಸಿ ಸಾಮಾಜಿಕ ಅಸಮಾನತೆಯ ಹೆಸರಿನಲ್ಲಿ ಜಾತಿ ಜಾತಿಗಳ ನಡುವೆಯೇ ಕಲಹವನ್ನು ತಂದಿಡು ತ್ತಾರೆ.

ಕಮ್ಯುನಿಸ್ಟರು ಮಾಡಿಕೊಂಡು ಬಂದಿರುವುದು ಇದನ್ನೇ. ಒಂದು ವೇಳೆ, ನಿಮ್ಮನ್ನು ಮನವೊಲಿಸಬಹುದಾಗಿದ್ದರೆ ತಮ್ಮ ಪ್ರತಿಭೆ, ವಾಕ್ಚಾತುರ್ಯವನ್ನು ಬಳಸಿ ನಿಮ್ಮನ್ನು ಮಂಗನನ್ನಾಗಿ ಮಾಡುತ್ತಾರೆ. ವಾದದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಗೊತ್ತಾದ ಕೂಡಲೇ ನಿಮ್ಮನ್ನು confuse ಮಾಡಲು, ಕೊನೆಗೆ Discredit ಮಾಡಲು ಯತ್ನಿಸುತ್ತಾರೆ. ತರ್ಕದಲ್ಲಿ ಸೋಲಿಸಲಾಗದಿದ್ದರೆ ವ್ಯಕ್ತಿ ನಿಂದನೆಗೆ ಇಳಿದು ಬಿಡುತ್ತಾರೆ. ನಿಮ್ಮ ಬಟ್ಟೆಗೆ ಕೊಚ್ಚೆ ಎರಚಿ ಬಿಡುತ್ತಾರೆ, ತೊಳೆದುಕೊಳ್ಳುವ ಕೆಲಸ ನಿಮ್ಮದಾಗುತ್ತದೆ.

“ವಿಚಾರ ನಪುಂಸಕತೆ” ಇರುವವರು ಇನ್ನೇನನ್ನು ಮಾಡಲು ಸಾಧ್ಯ?

ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪನವರು ಮತಾಂತರದ ಬಗ್ಗೆ ಸ್ಥಳೀಯವಾಗಿಯೇ ಜಾಗತಿಕ ಮಟ್ಟದ ಒಂದು ಚರ್ಚೆ ಯನ್ನು ಆರಂಭಿಸಿದ್ದಾರೆ. ಕ್ರಿಶ್ಚಿಯಾನಿಟಿಯ ನಿಜವಾದ ಮುಖ ವನ್ನು ಜಾಗತಿಕ ಸ್ಥರದಲ್ಲಿ ಅನಾವರಣ ಮಾಡಿದ್ದಾರೆ. ಹಾಗೆ ಭೈರಪ್ಪನವರು ಆಧಾರ ಸಮೇತ ಎತ್ತಿರುವ ಪ್ರಶ್ನೆಗಳಿಗೆ ತಾರ್ಕಿಕ ಹಾಗೂ ಆಧಾರ ಸಮೇತವಾಗಿಯೇ ಉತ್ತರ ಕೊಡಬೇಕಾದುದು ಸಹಜ ಆಶಯ.

ಆದರೆ “ವಿಜಯ ಕರ್ನಾಟಕದಲ್ಲಿ ಅವರ ಲೇಖನ ಓದಿದ ಮೇಲೆ, ಅವರು ‘ಆವರಣ’ದಿಂದ ಹೊರಬರುವುದು ಹಾಗಿರಲಿ, ಪೂರ್ತಿಗುಹಾಂತರಾಳವನ್ನೇ ಹೊಕ್ಕಂತೆ ಕಾಣುತ್ತಿದೆ. ಭೈರಪ್ಪ ವಿಪರೀತ Paranoid ಆಗಿದ್ದಾರೆ. ತುಂಬ ಚೆಲುವಾಗಿ, ಮುದ ನೀಡಿ, ಯೋಚನೆಗೆ ಹಚ್ಚಿ, ಭಾವೋತ್ಕರ್ಷಕ್ಕೆ ಕೊಂಡೊಯ್ದು ಓದುಗನಿಗೊಂದು ಮಧುರಾನುಭೂತಿ ನೀಡುತ್ತಿದ್ದ ಭೈರಪ್ಪ  ಇದೇಕೆ ಹೀಗೆ’ ಎಲ್ಲ ಬಗೆಯ ಕರ್ಮಠ’ರಂತೆ ಬರೆಯತೊಡಗಿ ದ್ದಾರೆ”.

“ಅಕ್ಟೋಬರ್ 16ನೇ ತಾರೀಕಿನ ವಿಜಯ ಕರ್ನಾಟಕ ತೆರೆದು ಅದರಲ್ಲಿನ  ಭೈರಪ್ಪನವರ ಲೇಖನವನ್ನು ಒಬ್ಬರೇ ಕುಳಿತು ದೊಡ್ಡ ದನಿಯಲ್ಲಿ  ಓದಿಕೊಳ್ಳಿ. ಸ್ವಲ್ಪ ಹೊತ್ತಿಗೆ ನೀವು ಯಾರಿಗೋ ಲೆಕ್ಚರು ಕೊಡುತ್ತಿದ್ದೀರಿ ಎಂಬಂತೆ ಭಾಸವಾಗುತ್ತದೆ, ನಿಮಗೂ ಒಬ್ಬ  ಕ್ರೈಸ್ತರ ಮತ ಬೋಧಕನಿಗೂ ವ್ಯತ್ಯಾಸವಿಲ್ಲ  ಅನಿಸುತ್ತದೆ. ಹದಿನೈದು ಜನರನ್ನು ಕೂರಿಸಿಕೊಂಡು ಓದಿ ಬಿಡಿ: ನೀವು ಮುಸ್ಲಿಂ ಧರ್ಮ ಬೋಧಕನಂತೆ ಧ್ವನಿಸತೊಡಗುತ್ತೀರಿ. ಇದನ್ನೇ ನಾನು ಒಂದು ಬರಹದಲ್ಲಿ ನ ಕರ್ಮಠ ಗುಣ ಅನ್ನುವುದು. It starts Preaching. Writer starts barking. ಯಾವಾಗ ನಮ್ಮ ಬರವಣಿಗೆಗೆ ‘ಪ್ರವಾದೀ ಗುಣ’ ಬಂದು ಬಿಡುತ್ತದೋ, ಆವಾಗ ನಮ್ಮೊಳಗಿನ ಸೃಜನಶೀಲ ಬರಹಗಾರ ಸತ್ತು ಹೋಗಿ ಬಿಡುತ್ತಾನೆ. sorry, ಭೈರಪ್ಪ.”

ಹೀಗೆ ಸಾಗುವ ರವಿ ಬೆಳಗೆರೆಯವರ ಲೇಖನ(ಅಕ್ಟೋಬರ್ ೧೯)ವನ್ನು ಓದುತ್ತಿದ್ದರೆ  ಇದೇನು “ಚರ್ಚೆಯೋ ಅಥವಾ ಚಾರಿತ್ರ್ಯವಧೆಯೋ”, “ತರ್ಕವೋ ಅಥವಾ ತರ್ಲೆಯೋ” ಎಂಬ ಅನುಮಾನ ಕಾಡಲಾರಂಭಿಸಿತು!

‘ಮಧುರಾನುಭೂತಿ’, ‘ಭಾವೋತ್ಕರ್ಷ’, ‘ಕರ್ಮಠ’ ಮುಂತಾದ ಪದಗಳನ್ನು ಬೆಳಗೆರೆ ವಿನಾಕಾರಣ ಎಳೆದುಕೊಂಡು ಬಂದುಬಿಡುತ್ತಾರೆ. ಅದನ್ನು ನೋಡಿದಾಗ ಈ “ಪ್ರೀಚಿಂಗು, ಬಾರ್ಕಿಂಗು” ಮಾಡುತ್ತಿರುವುದು ಭೈರಪ್ಪನವರೋ ಅಥವಾ ರವಿ ಬೆಳಗೆರೆಯವರೋ ಎಂಬ ಗೊಂದಲವುಂಟಾಗಿ ಬಿಡುತ್ತದೆ. ಅಲ್ಲಾ ಸ್ವಾಮಿ, ಮಧುರಾನುಭೂತಿ ಬೇಕೆಂದರೆ ‘ಗೃಹಭಂಗ’ ಓದಿ, ಅದು ಬೇಡವೆಂದರೆ ‘ಗ್ರಹಣ’ ಓದಿ, ಒಳ್ಳೇ ಸಾಥ್ ಬೇಕೆಂದರೆ ‘ಸಾರ್ಥ’ವನ್ನು ಕೈಗೆತ್ತಿಕೊಳ್ಳಿ.

ಆದರೆ ಸಾಹಿತಿಯೇ ಆಗಿದ್ದರೂ ಭೈರಪ್ಪನವರು  ‘ವಿಜಯ ಕರ್ನಾಟಕ’ದಲ್ಲಿ ಅವರು ಬರೆದಿರು ವುದು ಕಾದಂಬರಿಯಲ್ಲ, ಲೇಖನ. ಸಾಹಿತ್ಯ ನವಿರಾಗಿರಬೇಕು ನಿಜ. ಆದರೆ ಲೇಖನ ವಸ್ತುನಿಷ್ಠವಾಗಿರ ಬೇಕು. ಸಾಹಿತ್ಯಕ್ಕೆ ಸತ್ಯನಿಷ್ಠೆಯ ಅಗತ್ಯವಿಲ್ಲ. ನಿಮಗೆ ಬೇಕಾದ ರೀತಿಯಲ್ಲಿ ಕಾಲ್ಪನಿಕ ಪ್ರಸಂಗಗಳನ್ನು ಹೆಣೆದುಕೊಂಡು ಹೋಗಬಹುದು. ಮಿಗಿಲಾಗಿ ಭೈರಪ್ಪನವರ ಕಾದಂಬರಿಗಳಲ್ಲಿ ನವಿರಾದ ಭಾಷೆ ಇದ್ದರೂ, ಅವುಗಳನ್ನು ಓದಿದಾಗ ಮಧುರ ಅನುಭವ ಸಿಗುವುದೇ ಆಗಿದ್ದರೂ ಅರುಣ್ ಶೌರಿಯವ ರಂತೆ ಅವರೊಬ್ಬ Serious Writer. ಶೌರಿ ನಿಮ್ಮ ಮಿದುಳಿಗೆ ತ್ರಾಸ ಕೊಟ್ಟು ನಿಮ್ಮನ್ನು ಚಿಂತನೆಗೆ ಹಚ್ಚುತ್ತಾರೆ. ಖುಷವಂತ್ಸಿಂಗ್ ನಿಮ್ಮ ಮನಸ್ಸಿಗೆ ಕಚಗುಳಿ ಇಕ್ಕುತ್ತಾರೆ. ನಿಮಗೆ ಕಚಗುಳಿಯಲ್ಲಿ ಮಾತ್ರ ಮಧುರಾನುಭೂತಿ ಸಿಗುತ್ತದೆ ಎಂಬ ಕಾರಣಕ್ಕೆ ಒಬ್ಬ ಗಂಭೀರ ಲೇಖಕನಿಂದಲೂ ಕಚಗುಳಿಯನ್ನು ನಿರೀಕ್ಷಿಸುವುದು ಎಷ್ಟು ಸರಿ? “ಟೈಂಪಾಸ್” ಅಥವಾ “ಕಂಪನಿ ಆಫ್ ವಿಮೆನ್”ನಲ್ಲಿ ಸಿಕ್ಕಿದ್ದೇ “ಆವರಣ” ದಲ್ಲೂ ಸಿಗಬೇಕು ಎಂದರೆ ಹೇಗಾದೀತು ಸ್ವಾಮಿ!

ನಿಮಗೆ ಬೇಕಾದದ್ದು ‘ಆವರಣ’ದಲ್ಲಿ ಸಿಗಲಿಲ್ಲ ಎಂಬ ಕಾರಣಕ್ಕೆ ಭೈರಪ್ಪನವರು ‘ಜಡ್ಡುಗಟ್ಟಿದ್ದಾರೆ’ ಎಂದು ತೀರ್ಪು ನೀಡುವು ದನ್ನು ಹೇಗೆತಾನೇ ಒಪ್ಪಿಕೊಳ್ಳಲು ಸಾಧ್ಯ?

ಇನ್ನು ನೀವು ಒಂದಿಷ್ಟು ದಿನ ಇತಿಹಾಸ ಬೋಧಕರಾಗಿದ್ದಿರಬಹುದು. ಆದರೆ ಪ್ಯಾನ್ ಇಸ್ಲಾಮಿಸಂ, ವರ್ಜಿನ್ ಲ್ಯಾಂಡ್ ಅಂತ ಗೋಜಲು ಗೋಜಲಾಗಿ ಯಾವ ಆಧಾರಗಳನ್ನೂ ಕೊಡದೆ ಬರೀ ನಿಂದನೆಗೆ ಪೂರಕವಾಗಿ ಕೆಲವು ಪದಗುಚ್ಛಗಳನ್ನು ಉಲ್ಲೇಖ ಮಾಡಿದ್ದೀರಿ. ಹಾಗಾಗಿ ನಿಮ್ಮ ಲೇಖನ eನವನ್ನೂ ಹೆಚ್ಚಿಸುವುದಿಲ್ಲ, ಬೆಳಕನ್ನೂ ಚೆಲ್ಲುವುದಿಲ್ಲ!! ಕಾರ್ಖಾನೆಯೊಂದರ ಸೈಕಲ್ ಸ್ಟಾಂಡ್ನಲ್ಲಿ ನಿಂತುಕೊಂಡು ಕಮ್ಯುನಿಸ್ಟ್ ನೇತಾರನೊಬ್ಬ  ಭಾಷಣ ಕೊಡುತ್ತಿರುವಂತೆ ಭಾಸವಾಗುತ್ತದೆ!

ರವಿ ಬೆಳಗೆರೆಯವರೇ, ಭೈರಪ್ಪನವರು ಹೇಳಲು ಹೊರಟಿರುವುದೇನು ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದಾದರೆ “ಒಬ್ಬರೇ ಕುಳಿತು ದೊಡ್ಡ ಧ್ವನಿಯಲ್ಲಿ ಓದಿಕೊಳ್ಳಬೇಡಿ”. ಒಮ್ಮೆ ನಿಮ್ಮಷ್ಟಕ್ಕೆ ಓದಿಕೊಂಡು, ಒಂದಿಷ್ಟೊತ್ತು ಶಾಂತಚಿತ್ತರಾಗಿ ಕುಳಿತುಕೊಂಡು ಭೈರಪ್ಪ ಎತ್ತಿರುವ ಪ್ರಶ್ನೆಗಳು ಹಾಗೂ ಆಧಾರಸಮೇತ ಬೆಳಕು ಚೆಲ್ಲಿರುವ ಅಂಶಗಳ ಬಗ್ಗೆ ಚಿಂತನೆ ಮಾಡಿ, ಸಾಕು.

ವಿಶ್ವದ ಅತ್ಯಂತ ಪುರಾತನ ನಾಗರೀಕತೆಗಳೆಂದರೆ ರೋಮನ್, ಗ್ರೀಕ್ ಹಾಗೂ ನಮ್ಮ ಸಿಂಧೂನದಿ ನಾಗರೀಕತೆ. ರೋಮನ್ ಸಾಮ್ರಾಜ್ಯದಲ್ಲಿ ರಾಜನನ್ನೇ ದೇವರು ಎಂದು ಭಾವಿಸಲಾಗುತ್ತಿತ್ತು, ಪೂಜಿಸಲಾಗುತ್ತಿತ್ತು. ಆದರೆ ಜೀಸಸ್  “ನಾನೇ ದೇವರ ಪುತ್ರ. ಜನರ ಉದ್ಧಾರಕ ನಾನೇ” ಎಂದು ಹೇಳಿಕೊಳ್ಳಲಾರಂಭಿಸಿದ. ಹಾಗಾಗಿ ಸಹಜವಾಗಿಯೇ ರೋಮನ್ ರಾಜನ ಕೋಪಕ್ಕೆ ತುತ್ತಾದ. ರಾಜ ತನ್ನ ಪ್ರತಿನಿಧಿಯನ್ನು ಕಳುಹಿಸಿ ಜೀಸಸ್ಗೆ ಎಚ್ಚರಿಕೆಯನ್ನೂ ನೀಡಿದ. ಆದರೆ ಜೀಸಸ್ ತನ್ನ ಪ್ರತಿಪಾದನೆ ಯನ್ನು ಮಾತ್ರ ನಿಲ್ಲಿಸಲಿಲ್ಲ. ಒಂದು ವೇಳೆ, ಜನ ಜೀಸಸ್ನನ್ನೇ ದೇವರ ಪುತ್ರ ಎಂದು ಒಪ್ಪಿಕೊಂಡರೆ, ಆತನನ್ನು ಆರಾಧಿಸಲು ಆರಂಭಿಸಿದರೆ ತನ್ನ ಮಹತ್ವವೇ ಕಳೆದುಹೋಗುತ್ತದೆ ಎಂಬುದನ್ನು ಅರಿತ ರೋಮನ್ ರಾಜ ಜೀಸಸ್ಗೆ ಮರಣ ದಂಡನೆಯನ್ನು ವಿಧಿಸಿದ. ನಮ್ಮಲ್ಲಿ ಹೇಗೆ ಮರಣ ದಂಡನೆಯೆಂದರೆ ನೇಣಿಗೇರಿ ಸುತ್ತಾರೋ ಹಾಗೆಯೇ ರೋಮನ್ ಸಾಮ್ರಾಜ್ಯದಲ್ಲಿ ಮರಣ ದಂಡನೆಗೆ ಗುರಿಯಾಗುವವರನ್ನು ಶಿಲುಬೆಗೇರಿಸುತ್ತಿದ್ದರು. ಕ್ರೈಸ್ತರು ‘ಹೋಲಿ ಕ್ರಾಸ್’ ಎಂದು ಹೇಳುವ ಶಿಲುಬೆ ರೋಮನ್ ಸಾಮ್ರಾಜ್ಯದಲ್ಲಿ ನಮ್ಮ ಕುಣಿಕೆಗೆ ಸಮನಾಗಿತ್ತು. ಜೀಸಸ್ಗೆ ಮರಣದಂಡನೆ ವಿಧಿಸಿದ್ದು ಯಹೂದಿಗಳಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ ಸ್ವಾಮಿ.

ಇನ್ನು ನೀವೇ ಹೇಳಿದಂತೆ ಭೈರಪ್ಪನವರು ಖಂಡಿತ ಹಿಸ್ಟಾರಿ ಯನ್. ಎರಡು ಭಾರಿ ಇಸ್ರೇಲ್ಗೆ ಭೇಟಿ ಕೊಟ್ಟು, ಸತತ ೧೫ ದಿನಗಳ ಕಾಲ ಜೀಸಸ್ ಜನಿಸಿದ, ಓಡಾಡಿದ, ಆತನನ್ನು ಶಿಲುಬೆ ಗೇರಿಸಿದ ಸ್ಥಳಗಳಲ್ಲೆಲ್ಲ ಓಡಾಡಿ ತಿಳಿದುಕೊಂಡು ಬಂದು ಬರೆದಿದ್ದಾರೆ. ಜಗತ್ತಿನ ೫೦ಕ್ಕೂ ಹೆಚ್ಚು ದೇಶಗಳನ್ನು ಸಂದರ್ಶಿಸಿರುವ ಅವರು ಸತ್ಯನಿಷ್ಠರು ಹಾಗೂ ಸತ್ಯ ಯಾವತ್ತೂ ನಿಷ್ಠುರವಾಗಿ ರುತ್ತದೆಯೇ ಹೊರತು ನವಿರಾಗಿರುವುದಿಲ್ಲ.

ಮತ್ತೆ ಇತಿಹಾಸಕ್ಕೆ ಬರೋಣ.

ಕ್ರಿಶ್ಚಿಯಾನಿಟಿ ಪ್ರಾಮುಖ್ಯತೆಗೆ ಬಂದಿದ್ದೇ ಜೀಸಸ್ ಮರಣದ ನಂತರ. ಒಂದೆಡೆ ಸಾಮಾಜಿಕ ಕಲಹದಿಂದಾಗಿ ರೋಮನ್ ಸಾಮ್ರಾಜ್ಯ ದುರ್ಬಲವಾಗತೊಡಗಿತು. ಇನ್ನೊಂದೆಡೆ ಜೀಸಸ್ ಸಂದೇಶ ಸಾರಲು ಹೊರಟ್ಟಿದ್ದವರ ಧ್ವನಿ ಬಲಗೊಳ್ಳುತ್ತಾ ಹೋಯಿತು. Infact, Roman Empire was wiped out by Christians. ನಮ್ಮ ನಳಂದ ವಿಶ್ವವಿದ್ಯಾಲಯವನ್ನು ಹೇಗೆ ಮುಸ್ಲಿಮರು ಸುಟ್ಟು ಹಾಕಿದರೋ ಹಾಗೆಯೇ ಅಲೆಗ್ಸಾಂಡ್ರಿಯಾದ ಬೃಹತ್ ಗ್ರಂಥಾಲಯವನ್ನು ನಾಶಪಡಿಸಿದ್ದು ಕ್ರಿಶ್ಚಿಯನ್ನರೇ.ಎಡ್ವರ್ಡ್ ಗಿಬ್ಬನ್ನ “Decline and Fall of the Roman Empire” ಎಂಬ ಪುಸ್ತಕನ್ನೊಮ್ಮೆ ಓದಿ.

ಅಷ್ಟೇ ಅಲ್ಲ, ಪ್ಲೇಟೋ, ಅರಿಸ್ಟಾಟಲ್ಗೆ ಜನ್ಮ ನೀಡಿದ ವಿಶ್ವದ ಅತ್ಯಂತ ಪುರಾತನ ಹಾಗೂ ಶ್ರೇಷ್ಠ ನಾಗರೀಕತೆಗಳಾದ ಗ್ರೀಕ್ ಹಾಗೂ ರೋಮನ್ ಸಿವಿಲೈಜೇಶನ್ಗಳನ್ನು ಬಲಿತೆಗೆದುಕೊಂಡಿದ್ದೇ ಕ್ರೈಸ್ತರು. ಅಂತಹ Christian Evangelist ಗಳ ಮುಂದಿನ ಗುರಿ ಏಷ್ಯಾ. ಅದರಲ್ಲೂ ಭಾರತ. ಹಾಗಂತ ದಿವಂಗತ ಪೋಪ್ ಜಾನ್ ಪಾಲ್ ಅವರೇ ಹೇಳಿದ್ದಾರೆ.

ಇಂದು ವಿಶ್ವದ ಅತ್ಯಂತ ಹಳೆಯ ಹಾಗೂ surviving civilisation ಅಂದರೆ ನಮ್ಮ ಭಾರತದ ನಾಗರೀಕತೆಯೊಂದೇ. ಅದೂ ಕೂಡ ರೋಮನ್ ಹಾಗೂ ಗ್ರೀಕ್ ನಾಗರೀಕತೆಗಳಂತೆ ಇತಿಹಾಸದ ಪುಟ ಸೇರಿ ಪಳೆಯುಳಿಕೆಯಾಗಿರುವ ಡೈನೋಸಾರ್ನಂತಾಗಬೇಕೆ? ಅಂತಹ ಅಪಾಯದ ಬಗ್ಗೆ ಎಚ್ಚರಿಸಲು ಹೊರಟರೆ ‘ಜಡ್ಡುಗಟ್ಟಿ’ದವರಾಗಿ ಬಿಡುತ್ತಾರೆಯೇ? ನೀವು ಅಣಕವಾಗಿ ಹೇಳಿರುವಂತೆ ಭೈರಪ್ಪನವರು ಹೊಸವಿಚಾರವನ್ನೇನೂ ಎತ್ತಿಲ್ಲ. ಆದರೆ ಇತಿ ಹಾಸದ ಪುಟಗಳಲ್ಲಿ ದಾಖಲಾಗಿರುವ ಹಳೆಯ ವಿಚಾರಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಹೊಸ ಅನಾಹುತಗಳಾಗದಂತೆ ತಡೆಯಬೇಕೆಂಬ ಉದ್ದೇಶ ಖಂಡಿತ ಅವರಿಗಿದೆ. ಅವರ ಕಾಳಜಿಯನ್ನು ಅರ್ಥಮಾಡಿಕೊಳ್ಳುವಷ್ಟು ಮತಿ ಇಲ್ಲದವರಿಗೆ ಭೈರಪ್ಪ ‘ಮತಭ್ರಾಂತ’ರಂತೆ ಕಾಣುತ್ತಾರೆ ಅಷ್ಟೇ.

ಇನ್ನು ನಗುತರುವ ವಿಚಾರವೆಂದರೆ “ನೀವು ಆಂಧ್ರದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರನ್ನು ಕ್ರೈಸ್ತರು ಅಂತ ಭಾವಿಸಿದ್ದರೆ ಅದಕ್ಕಿಂತ ಅಪದ್ಧ ಮತ್ತೊಂದಿಲ್ಲ. ಅವರ ಪೂರ್ವಜರ್ಯಾರೋ ಕ್ರೈಸ್ತರಾಗಿದ್ದಿರಬಹುದು. ಆದರೆ ಬೀಗತನ ಗಳಿಂದ ಹಿಡಿದು ರಾಜಕಾರಣದ ತನಕ ರಾಜಶೇಖರ ರೆಡ್ಡಿಯ ವರು ಶುದ್ಧಾನು ಶುದ್ಧ ರೆಡ್ಡಿಯೇ” ಎನ್ನುವ ಬೆಳಗೆರೆಯವರದು ತರ್ಕವಿಲ್ಲದ ಪ್ರತಿಪಾದನೆ. ದೇಶದ ತುಂಬ ಇರುವವರೆಲ್ಲ ಪೂರ್ವಜರು ಹಿಂದೂಗಳಾಗಿದ್ದು ಈಗ ಕ್ರೈಸ್ತರಾಗಿರುವವರೇ. “ಪೂರ್ವಜರ್ಯಾರೋ ಕ್ರೈಸ್ತರಾಗಿದ್ದಿರಬಹುದು” ಎಂದು ಹೊಸ ವಾದ ಹುಟ್ಟುಹಾಕುತ್ತಿದ್ದೀರಲ್ಲಾ, ರಾಜಶೇಖರ ರೆಡ್ಡಿಯವರು ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬುದಕ್ಕೆ ನಿಮ್ಮ ಬಳಿ ದಾಖಲೆ ಇದ್ದರೆ ಜನರ ಮುಂದಿಡಿ. ಆತನಲ್ಲಿ ರೆಡ್ಡಿ ಗುಣಗಳಿವೆ ಎಂಬ ಕಾರಣಕ್ಕೆ, ರೆಡ್ಡಿಗಳೊಂದಿಗೇ ಸಂಬಂಧ ಬೆಳೆಸಿದ್ದಾರೆ ಎಂಬ ಕಾರಣಕ್ಕೆ ಹಿಂದುವಾಗಿ ಬಿಡಲ್ಲ. ಆತ ಹಿಂದೂವಾಗಿದ್ದರೆ ಆತನ ಹೆಸರು ‘ಯೇಸುಪದ ಸಾಮ್ಯುಯೆಲ್ ರಾಜಶೇಖರ ರೆಡ್ಡಿ’ ಏಕಾಗುತ್ತಿತ್ತು? ತಿರುಪತಿಯಲ್ಲಿ ಮತಾಂತರ ನಡೆದಿದ್ದು ಯಾರ ಕುರ್ಚಿಯ ಕೆಳಗೆ? ಆಂಧ್ರದಲ್ಲಿ ನಾಯಿ ಕೊಡೆಗಳಂತೆ ಚರ್ಚ್ಗಳು ತಲೆಯೆತ್ತುತ್ತಿರುವುದು ಯಾರ ಆಡಳಿತದಲ್ಲಿ?

ಸ್ವಾಮಿ, ಮನಸ್ಸು ಜಡಗೊಂಡರೆ ವಿವೇಕಕ್ಕೆ ಮಂಕೂ ಕವಿಯು ತ್ತದೆ, ತರ್ಕರಹಿತ ವಾದಕ್ಕಿಳಿದರೆ ವಿವೇಕ ಸತ್ತೂ ಹೋಗುತ್ತದೆ. “ಥೆರೇಸಾಗೆ ಸಿಕ್ಕ ಗೌರವ ಲಿಂಗಾಯತರ ಮಾತೆ ಮಹಾದೇವಿಗೆ ಸಿಕ್ಕಿದ್ದಿದ್ದರೆ ಭೈರಪ್ಪ ಸಿಟ್ಟಾಗ ಬೇಕಿತ್ತು! ಹ್ಹ”, “ನಂಗೆ ಆ ಉದ್ದೇಶವೇ ಇಲ್ಲ’ ಅಂತ ಪ್ರತಿಕ್ರಿಯಿಸಿ ಮುಟ್ಟಾಗುವುದು ಬೇಡ. Please” ಎಂದು ನಾಡೇ ಮೆಚ್ಚಿಕೊಂಡಿರುವ ಹಿರಿಯ ಸಾಹಿತಿಯ ಬಗ್ಗೆ ಉಡಾಫೆಯ ಮಾತುಗಳನ್ನಾಡಿ ಅದನ್ನು ‘Demonstrate‘ ಮಾಡುವ ಅಗತ್ಯವಿಲ್ಲ.

ಇನ್ನು ಮದರ್ ತೆರೆಸಾ ಅವರ ವಿಷಯಕ್ಕೆ ಬರೋಣ. ನೀವು ಹೇಳುವಷ್ಟು ಆಕೆ ಒಳ್ಳೆಯವರಾಗಿದ್ದರೆ, ಆಕೆಗೆ ಮತಾಂತರ ಮಾಡುವ ಉದ್ದೇಶ ಇಲ್ಲದೇ ಹೋಗಿದ್ದಿದ್ದರೆ ನಾವೆಲ್ಲರೂ ಖುಷಿಪಡಬಹುದಿತ್ತು. ಆದರೆ ಕ್ರಿಷ್ಟೋಫರ್ ಹಿಚೆನ್ಸ್ ಹಾಗೂ ತಾರಿಕ್ ಅಲಿ ಅವರು ಬ್ರಿಟನ್ ಚಾನೆಲ್ಗಾಗಿ ರೂಪಿಸಿದ “Hell’s Angel” ಎಂಬ ಡಾಕ್ಯೂಮೆಂಟರಿಯನ್ನು ವೀಕ್ಷಿಸಿದ್ದೀರಾ? ಹೇಗೋ ನಿಮಗೆ ಇಂಟರ್ನೆಟ್ ಬಗ್ಗೆ ಚೆನ್ನಾಗಿ ಗೊತ್ತಲ್ಲ, “ಯು ಟ್ಯೂಬ್”ನಲ್ಲಿ ತಡಕಾಡಿ ನೋಡಿ. ಇಲ್ಲವೆ ಡಾಕ್ಯುಮೆಂಟ ರಿಯ ಪುಸ್ತಕ ರೂಪವಾದ “The Missionary Position” ಓದಿ, ಸತ್ಯದ ಅರಿವಾಗುತ್ತದೆ.

ಮದರ್ ತೆರೆಸಾ ಅವರ ಮಿಡಿಯುವ ಹೃದಯ, ಅದರೊಳಗಿರುವ ಅನುಕಂಪದ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಆಕೆ ಜನಿಸಿದ್ದು ಅವಿಭಜಿತ ಯುಗೋಸ್ಲಾವಿಯಾದಲ್ಲಿ. ಅದೇ ಯುಗೋಸ್ಲಾವಿಯಾದಲ್ಲಿ ಅಧ್ಯಕ್ಷ ಸ್ಲೊಬಡಾನ್ ಮಿಲೋಸೆವಿಚ್ ಅವರ ಆಡಳಿತಾವಧಿಯಲ್ಲಿ ಮುಸ್ಲಿಮರ ಮಾರಣಹೋಮ ನಡೆದಿದ್ದನ್ನು ನೆನಪಿಸಿಕೊಳ್ಳಿ. ಕೊನೆಗೆ ‘ನೇಟೋ’ ಪಡೆಗಳು ಯುಗೋಸ್ಲಾವಿಯಾದ ಮೇಲೆ ದಾಳಿ ಮಾಡಿ, ಮಿಲೋಸೆವಿಚ್ ಅವರನ್ನು ಬಂಧಿಸಿ ಜೈಲಿಗೆ ತಳ್ಳಬೇಕಾಗಿ ಬಂತು. ಅಂದು ತನ್ನ ಹುಟ್ಟೂರಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ಘೋರ ದೌರ್ಜನ್ಯ ನಡೆಯುತ್ತಿದ್ದಾಗ ಮದರ್ ತೆರೆಸಾ ಅವರ ಮನವೇಕೆ ಮಿಡಿಯಲಿಲ್ಲ? ಕಲ್ಕತ್ತಾದ ಕೊಳೆಗೇರಿಗಳ ಬಗ್ಗೆ ಅನುಕಂಪ ಹೊಂದಿದ್ದ ತೆರೆಸಾ ಅವರು ತಮ್ಮ ಧರ್ಮೀಯನೇ ಆಗಿದ್ದ ಮಿಲೋಸೆವಿಚ್ಗೆ ಏಕೆ ಬುದ್ಧಿವಾದ ಹೇಳಲಿಲ್ಲ? ಇಂದಿಗೂ ಮುಸ್ಲಿಮ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಇಸ್ಲಾಮ್ ಮತಾನುಯಾಯಿಗಳನ್ನು ಕೊಲ್ಲುತ್ತಿರುವುದು ಕ್ರೈಸ್ತ ರಾಷ್ಟ್ರಗಳೇ.

ಅದಿರಲಿ, ನೀವೇ ಮೆಚ್ಚಿಕೊಳ್ಳುವ ಓಶೋ ಅವರು ಮದರ್ ತೆರೆಸಾ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಓದಿದ್ದೀರಾ? ಚರಂಡಿಯಲ್ಲಿ ಮಲಗುವ ನಿರ್ಗತಿಕ ಮಕ್ಕಳನ್ನು ಎದೆಗವುಚಿ ಕೊಳ್ಳಲು ಮದರ್ ತೆರೆಸಾ ಅವರೇ ಆಗಬೇಕಿಲ್ಲ.

ಪೋಸು ಯಾರು ಬೇಕಾದರೂ ಕೊಡಬಹುದು. ಐಶ್ವರ್ಯಾ ರೈ ಕೂಡ ಅನಾಥ ಮಕ್ಕಳನ್ನು ಅಪ್ಪಿಕೊಂಡು ಫೋಟೋಕ್ಕೆ ಪೋಸು ಕೊಡುತ್ತಾಳೆ. ಪ್ರತಿ ವರ್ಷ ಮಿಸ್ ವರ್ಲ್ಡ್, ಮಿಸ್ ಯುನಿವರ್ಸ್ ಆದವರೆಲ್ಲ ಅಂತಹ ಪೋಸು ಕೊಟ್ಟೇ ಕೊಡು ತ್ತಾರೆ. “ಅನಾಥ ಹಿಂದೂ ಕಂದಮ್ಮಗಳನ್ನು ಎದೆಗವಚಿಕೊಂಡು ‘ನಾನು ಸಾಕುತ್ತೇನೆ’ ಅಂದಂಥ ಒಬ್ಬ ಹಿಂದೂ ಮಾತೃದೇವತೆ ಹುಟ್ಟಲಿಲ್ಲವಲ್ಲ ಸ್ವಾಮಿ?” ಎಂದು ಪ್ರಶ್ನಿಸಿದ್ದೀರಲ್ಲಾ, ಒಂದು ವೇಳೆ ನೀವೆಂದಾದರೂ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದಿದ್ದರೆ ಆ ಪ್ರಶ್ನೆಯನ್ನು ಕೇಳುತ್ತಿರಲಿಲ್ಲ. ನಿಮ್ಮ ಪ್ರಶ್ನೆಗೆ ಉತ್ತರ ಕಣ್ಣ ಎದುರೇ ಕಾಣುತ್ತಿತ್ತು. ೧೦ ಸಾವಿರ ಅನಾಥ ಮತ್ತು ನಿರ್ಲಕ್ಷಿತ ಮಕ್ಕಳಿಗೆ ನಿತ್ಯವೂ ಅನ್ನ ಹಾಗೂ ಅಕ್ಷರ ದಾಸೋಹಗಳೆರಡೂ ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿದೆ. ಮದರ್ ತೆರೆಸಾ ಅವರಿಗಿದ್ದ “ಮಾರ್ಕೆಟಿಂಗ್ ಬ್ಯೂರೋ” ಸಿದ್ಧಗಂಗಾ ಶ್ರೀಗಳಿಗೂ ಇದ್ದಿದ್ದರೆ ಹಾಗೂ ಅವರು ಕ್ರೈಸ್ತ ಪಾದ್ರಿಯಾಗಿದ್ದಿದ್ದರೆ ಖಂಡಿತ ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿರುತ್ತಿದ್ದರು, ಭಾರತರತ್ನವೂ ಸಿಕ್ಕಿರುತ್ತಿತ್ತು. ನಮ್ಮ ರಾಜ್ಯದಲ್ಲೇ ಇರುವ ವಿವಿಧ ಲಿಂಗಾಯತ ಮಠಗಳು ಹಾಗೂ ಆದಿ ಚುಂಚನಗಿರಿ ಮಠವೂ ಅನಾಥ ಮಕ್ಕಳಿಗೆ ಅನ್ನ ಹಾಕುತ್ತಿವೆ. ಕಣ್ತೆರೆದು ನೋಡಬೇಕಷ್ಟೇ. ಶಿವಕುಮಾರ ಸ್ವಾಮೀಜಿ ಒಂದು ರಾಜ್ಯ, ಒಂದು ಭಾಗಕ್ಕೆ ಸಂಬಂಧಪಟ್ಟವರೇ ಆಗಿರ ಬಹುದು. ಆದರೆ ಕಾಳಜಿಗೆ ರಾಜ್ಯ, ಭಾಗ ಎಂಬ ಚೌಕಟ್ಟು ಹಾಕಲು ಸಾಧ್ಯವೆ? ಅಷ್ಟಕ್ಕೂ ಮದರ್ ತೆರೆಸಾ ಅವರೇನು ದೇಶದುದ್ದಗಲಕ್ಕೂ, ಜಗತ್ತಿನ ಮೂಲೆ ಮೂಲೆಗೂ ಹೋಗಿ ನಿರ್ಗತಿಕ, ಕ್ಷಯ ರೋಗಿಗಳ ಉದ್ಧಾರ ಮಾಡಲಿಲ್ಲ. ಆಕೆಯ ಕಾರ್ಯಕ್ಷೇತ್ರವೂ ಕಲ್ಕತ್ತಾ ಕೊಳಗೇರಿಗೆ ಸೀಮಿತವಾಗಿತ್ತು. ಆದರೆ ತೆರೆಸಾ ಅವರಿಗೆ ಜಾಗತಿಕ ಮಟ್ಟದಲ್ಲಿ ಪ್ರಚಾರ ಸಿಕ್ಕಿತು ಅಷ್ಟೇ.

ಒಂದು ಘಟನೆ ನೆನಪಾಗುತ್ತಿದೆ. ಖ್ಯಾತ ಐರಿಷ್ ನಾಟಕ ರಚನೆಕಾರ ಜಾರ್ಜ್ ಬರ್ನಾರ್ಡ್ ಶಾ ಮಾತುಗಳೆಂದರೆ ಅವರು ಹೇಳುತ್ತಿದ್ದ ಪ್ರತಿ ವಾಕ್ಯಗಳೂ “Quotable Quotes” ನಂತಿರುತ್ತಿದ್ದವು. ಈ ಬರ್ನಾರ್ಡ್ ಶಾ ಹಾಗೂ ಬ್ರಿಟನ್ನ ಆಗಿನ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಕೆಲವೊಮ್ಮೆ ಪರಸ್ಪರ ಕಾಲೆಳೆದುಕೊಳ್ಳುತ್ತಿದ್ದರು. ತತ್ತ್ವeನಿಯಂತೆ ಮಾತನಾಡುತ್ತಿದ್ದ ಬರ್ನಾರ್ಡ್ ಶಾ ಅವರನ್ನು ಉಲ್ಲೇಖಿಸಿ “ಭಾರೀ ಭಾರೀ ಮಾತನಾಡುವವರು ಅವುಗಳಲ್ಲಿ ಬಹಳ ಕಡಿಮೆ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ. ಆದರೆ None less than George Bernard Shaw” ಎಂದು ಛೇಡಿಸಿದ್ದರು ಚರ್ಚಿಲ್.

ಖಂಡಿತ ರವಿ ಬೆಳೆಗೆರೆಯವರನ್ನು ಬರ್ನಾಡ್ ಶಾ ಮಟ್ಟಕ್ಕೇರಿಸಿ ಹೋಲಿಸುತ್ತಿಲ್ಲ. ಆದರೆ ಭಾನುವಾರದ ಅವರ ಲೇಖನವನ್ನು ಓದಿದಾಗ ಚರ್ಚಿಲ್ ಮಾತು ನೆನಪಾಯಿತು!!

ಒಂದು ವಾಕ್ಯದಲ್ಲಿ ಬೆನ್ನು ಸವರುವುದು, ಆನಂತರ ಚಿವುಟುತ್ತಾ ಹೋಗುವುದು, ನಡುನಡುವೆ ಉಡಾಫೆ, ಅವಹೇಳನ, ಚಾರಿತ್ರ್ಯವಧೆ. ಆದರೆ ಇಂತಹ ನಿಂದನೆ, ಅಗೌರವ ಗಳು ಚರ್ಚೆಯ ಪರಿಧಿಯೊಳಕ್ಕೆ ನುಸುಳಬಾರದು. ಒಂದು ಗಂಭೀರ ಸಮಸ್ಯೆಯನ್ನು ತೆಗೆದುಕೊಂಡು, ಆಧಾರ ಸಮೇತ ಓದುಗರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿರುವ ಭೈರಪ್ಪ ನವರನ್ನು ಹೊಗಳಬೇಕೆಂದಿಲ್ಲ. ಸಾಧ್ಯವಾದರೆ ತಾರ್ಕಿಕವಾಗಿ ಉತ್ತರ ಕೊಡಲಿ. ನಿಂದನೆ ಮಾಡಿದರೆ ಬೆತ್ತಲಾಗುವುದು ತಾವೇ ಎಂಬುದು ನೆನಪಿರಲಿ.

Come on, ಸಂವಾದ ಮುಂದುವರಿಯಲಿ ಬಿಡಿ.

ರಾಮಚಂದ್ರ ಶೆಣೈ, ಮಂಗಳೂರು

(Pratap Simha!)

134 Responses to “ರವಿ ಬೆಳಗೆರೆ ನೀಡಿದ ಉತ್ತರ, ಅವರಿಗೆ ದೊರೆತ ಪ್ರತ್ಯುತ್ತರ”

  1. Venkatesh says:

    ರವಿಬೆಳಗೆರೆ ಈಗ ಹಳಸಿಹೋದ ಸಿಹಿತಿನಿಸು. ಹಾಗಾಗಿ ಈ ಹಳಸಿದ್ದನ್ನು ತಿನ್ನಲು ಹೋದರೆ ಆರೋಗ್ಯ ಹಾಳಾಗುವುದು ರವಿಬೆಳಗೆರೆಯ ತಲೆಕೂದಲು ಹಣ್ಣಾಗಿದ್ದಷ್ಟೇ ಸತ್ಯ!

    ಒಂದಾನೊಂದು ಕಾಲದಲ್ಲಿ ರವಿ ಬೆಳಗೆರೆ ನಾಡು ಕಂಡ ಉತ್ತಮ ಬರಹಗಾರರಲ್ಲಿ ಪ್ರಮುಖ.

    ರವಿ, ಹುಟ್ಟಿದ್ದು ಬ್ರಾಹ್ಮಣ ಜನ್ಮ, ಬಾಲ್ಯದಲ್ಲಿ ಕಷ್ಟ, ಹುಡುಗಾಟಿಕೆಯ ವಯಸ್ಸಿನಲ್ಲಿ ನಿಜಕ್ಕೂ ಪುಂಡನೇ, ಯುವಕನಾದಾಗ ಭರವಸೆಯ ಬರಹಗಾರನಾಗಿ ಮತ್ತೊಂದು ಜನ್ಮ, ಪ್ರಭುದ್ದ ವಯಸ್ಸಿನಲ್ಲಿ ಕೆಂಡವನ್ನು ಕಾರುವ ಉತ್ತಮ ಕ್ರಾಂತಿಕಾರೀ ಲೇಖಕನಾಗಿದ್ದ ಜನ್ಮ, ನಡುವಯಸ್ಸಿನಲ್ಲಿ ಪತ್ರಿಕೆಯನ್ನು ಹುಟ್ಟುಹಾಕಿ ಸಾರಥ್ಯವಹಿಸಿ ಅಗಾಧಬೆಳವಣಿಗೆಯ ಜನ್ಮ, ಮುಂದೆ ಟೀವಿಯಲ್ಲಿ ಪ್ರವೇಶ ಜನ್ಮ…..ಇಲ್ಲಿಯವರೆಗೆ ಹೆಚ್ಚು ಕಮ್ಮಿ ಎಲ್ಲಾ ಸರಿ. ಇಲ್ಲಿಂದ ಮುಂದಿನಜನ್ಮ….ನನ್ನ ಶತ್ರುವಿಗೂ ಬೇಡ.
    ತನ್ನ ಧರ್ಮ, ಆಚರಣೆ, ನೀತಿಯನ್ನು ಯಾವ ಮನುಷ್ಯ ಮಾಡುತ್ತಾನೋ ಅಂಥವನು ಮುಂದಿನಜನ್ಮದಲ್ಲಿ ನಿಕೃಷ್ಟ ಹುಳವಾಗಿ ಹುಟ್ಟುತ್ತಾನೆ ಅಂತ ಎಲ್ಲೋ ಓದಿದ ನೆನಪು.

    ಸಾಮಾನ್ಯವಾಗಿ ಮನುಷ್ಯನಿಗೆ ವಯಸ್ಸು ಅಂತ್ಯಕ್ಕೆ ಬಂದಾಗ ದೇವರು ದಿಂಡಿರು ಅಂತ ಭಯ ಭಕ್ತಿ ಪ್ರಾರಂಭವಾಗುತ್ತದೆ, ಆದರೆ ಬಹುಶ ರವಿ ಇದೇಜನ್ಮದಲ್ಲಿಯೇ ಹುಳುವಾಗುತ್ತಾನಲ್ಲ ಅಂತ ಅವನ ಉತ್ತಮ ಲೇಖನಗಳನ್ನು ಓದಿದ ನನಗೆ ಬೇಸರವಾಗುತ್ತಿದೆ.

    ಹಿಂದೂ ಧರ್ಮ ಈ ದೇಶವನ್ನು ತಾಯಿ ರೂಪದಲ್ಲಿ ಕಾಣುತ್ತಾರೆ. ತಾಯಿಯನ್ನು ಪೂಜಿಸುವರೆಲ್ಲರಿಗೂ ಭಾರತ ದೇವಸ್ವರೂಪಿ. ಅಂದರೆ ‘ಭಾರತೀಯತೆಯಲ್ಲಿ’ ಧರ್ಮದೊಳಗೆ ದೇಶ, ದೇಶದೊಳಗೆ ಧರ್ಮ, ಇವೆರಡೂ ಬೇರೆಯಲ್ಲ. ಇಂಥಹ ಉದಾತ್ತ ಕಲ್ಪನೆಯನ್ನು ಕೊಡುವ ಇಂದಿನ ಕೆಲವೇ ಲೇಖಕರಲ್ಲಿ ಪ್ರಮುಖರಾದ ಭೈರಪ್ಪನವರನ್ನು ದೂರುವ ರವಿ ಬೆಳಗೆರೆ ಒಬ್ಬ ಮೇರುಮಟ್ಟದ ದೇಶದ್ರೋಹಿ.

    ಅಂದಹಾಗೆ, ಶ್ರೀ ರಾಮಚಂದ್ರ ಶೆಣೈ ಯವರಿಗೆ ಅನಂತ ವಂದನೆಗಳು. ಇವರ ಬರಹದಲ್ಲಿ ಪ್ರತಾಪಸಿಂಹರ ಛಾಪನ್ನು ಕಾಣಬಹುದು. ಇದನ್ನು ಬರೆದವರು ಪ್ರತಪಸಿಂಹರೆ? ಎನ್ನುವಷ್ಟು ಅದ್ಭುತ, ಚೂಪಾದ ಲೇಖನ!

    ಇವುಗಳನ್ನು ಪ್ರಕಟಿಸಿ ವಿದೇಶಲ್ಲಿದ್ದೂ ಓದಲು ಸಹಾಯಕರಾಗಿರುವ ಪ್ರತಾಪರಿಗೆ ನಾನು ಚಿರ ಋಣಿ.

  2. Venkatesh says:

    Kindly read the above comments as below (corrected one in Brackets)
    (ದೂಷಣೆ)
    ತನ್ನ ಧರ್ಮ, ಆಚರಣೆ, ನೀತಿಯನ್ನು ಯಾವ ಮನುಷ್ಯ (ದೂಷಣೆ) ಮಾಡುತ್ತಾನೋ ಅಂಥವನು ಮುಂದಿನಜನ್ಮದಲ್ಲಿ ನಿಕೃಷ್ಟ ಹುಳವಾಗಿ ಹುಟ್ಟುತ್ತಾನೆ ಅಂತ ಎಲ್ಲೋ ಓದಿದ ನೆನಪು.

  3. harsha says:

    ಬಹಳ ಬಹಳ ಉತ್ತಮವಾದ ಉತ್ತರ ಶೆಣೈ ಅವರಿಂದ.

    ಇದನ್ನೆಲ್ಲಾ ಓದಿ ಅರ್ಥೈಸಿಕೊಳ್ಳುವಷ್ಟು ಪರಿಜ್ಞಾನ ಬೆಳಗೆರೆಗೆ ಇಲ್ಲ ಅನ್ನುವುದು ಬೈರಪ್ಪನವರು ಆದಾರ ಸಹಿತ ಬರೆದಿರುವ ಲೇಖನದಷ್ಟೇ ಸತ್ಯ!!

    ಬೆಳಗೆರೆಯ ಲೇಖನ crime story narration ದಾಟಿಯಲ್ಲೇ ಇದೆ, ಅಲ್ಲಿ ಯಾವುದೇ ತರ್ಕವಾಗಲಿ, ತಾತ್ವಿಕ ನಿಲುವಾಗಲಿ, ಆಧಾರವಾಗಲಿ, ಸತ್ವವಾಗಲಿ, ಸತ್ಯವಾಗಲಿ….ಯಾವುದೂ ಹುಡುಕಿದರೂ ಸಿಗುವುದಿಲ್ಲ

  4. Harsha says:

    (Ch)hee Belegere !!!!!!!
    Before commenting about S.L.Byrappa read the (atleast title) books he referred. Byrappa is a truthful and straightforward author who studied and referred lot of books and having good background also.

    Earlier i liked some of your articles but later i came to know that all these are concepts from some Personality Development books and you added only some masala to other’s view. Try to become a creative and matured author.

    You are writing articles against Sudha Murthy, S.L Byrappa etc. All are Internationally respected personalities. Try to become like them without blaming them.

  5. Kiran says:

    no time to dissect into the nonsense of Belagere… just one line is enough to spot his inability to reach facts..
    ” ನೀವು ಆಂಧ್ರದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರನ್ನು ಕ್ರೈಸ್ತರು ಅಂತ ಭಾವಿಸಿದ್ದರೆ ಅದಕ್ಕಿಂತ ಅಪದ್ಧ ಮತ್ತೊಂದಿಲ್ಲ. ಅವರ ಪೂರ್ವಜರ್ಯಾರೋ ಕ್ರೈಸ್ತರಾಗಿದ್ದಿರಬಹುದು. ಆದರೆ ಬೀಗತನಗಳಿಂದ ಹಿಡಿದು ರಾಜಕಾರಣದ ತನಕ ರಾಜಶೇಖರ ರೆಡ್ಡಿಯವರು ಶುದ್ಧಾನು ಶುದ್ಧ ರೆಡ್ಡಿಯೇ. ಆಂಧ್ರದಲ್ಲಿ ರೆಡ್ಡಿ-ಕಮ್ಮ-ಕಾಪು ಕದನ ತಲಾಂತರಗಳಿಂದ ನಡೆದುಬಂದಿದೆ. ಅದರ ಚುಕ್ಕಾಣಿ ಹಿಡಿದು ‘ರೆಡ್ಡಿ ರಾಜತ್ವ’ ಸ್ಥಾಪಿಸಿರುವುದೇ ರಾಜಶೇಖರ ರೆಡ್ಡಿ. ”

    I can’t find any other jerk than Belagere. How can he know about Andhra sitting here in Bangalore? For his information… YSR is a Christian. And there are many-a Reddys Kammas and Kapus in Andhra who get converted to Christianity but maintain a Hindu label also for convenience.

    “ಅದರ ಚುಕ್ಕಾಣಿ ಹಿಡಿದು ‘ರೆಡ್ಡಿ ರಾಜತ್ವ’ ಸ್ಥಾಪಿಸಿರುವುದೇ ರಾಜಶೇಖರ ರೆಡ್ಡಿ” – That is because there is a half label that still remains which is Hindu.

    ….for everything else Ramachandra Shenoy has answered aptly.

  6. Bhushan says:

    ಭೈರಪ್ಪನವರ ವಿಜಯಕರ್ನಾಟಕದ ಲೇಖನವನ್ನೂ ಹಾಕೋ ಪ್ರತಾಪ್. ವಿದೇಶದಲ್ಲಿರುವ ನಾವು ವಿಜಯಕರ್ನಾಟಕ ನೋಡಿಲ್ಲ.

  7. Vijay says:

    A very nice answer from ರಾಮಚಂದ್ರ ಶೆಣೈ its truly heart touching, i appreciate his depth knowledge. Belegere’s article is like background speech of ‘CRIME DIARY’.

    Thanks Prathap for publishing the article!

  8. Oho says:

    please publish S.L. Bhairappa’s article.

    Thanks

  9. raj says:

    tell me where we can read the SLB artical plzzz, give the link

  10. sathish says:

    Excellent reply by Mr.Ramachandra Shenoy.I wish to place on record my appreciation and heartfelt thanks to Mr.Shenoy.I request Mr.Pratap Simha to put up Mr.S.L.Bhairappa’s VK write-up.Thanks.

  11. sree says:

    I dont know why Ravi Belagere has become like this. He was a real good writer and his writings used to have lot of hard work and facts. But now its Junk…”Mostly Ravi ge Muttu Nintira beku!”

  12. lokesh shetty manglore says:

    Hi i think bloddy ravi belagere is not reall hindu….he converted into both christian& muslim….let us call him “ABDUL RAVI BELAGERE FERNANDIES”…….hw is the name my freinds…………….THANKS 2 RAMACHANDRA SHENOY & MY FAVOURITE HERO MR.PRATAP

  13. Harish says:

    Lo Ravi,

    Ninage S L Birappana articale bagge bariyostu yogyathe ideyeno?

    Neenu SLB navara article bagge comment madodikke munche ondu kelasa madbekithu!. Ninna ‘Hiiiiiii Bengalure’ pathrike thgondu adralli print aagiro article bagge comment mado.

    Ninnale ondu loodu holasu etukondu bereyavara bagge comment mado yograthe ninagilla.

    Mr.Ramachandra Shenoy yavarige hrudaya purvaka abhinandanegali. If anybody knows about Mr.Ramachandra Shenoy email-ID please share with us.

  14. Harish says:

    Sorry for the typo in previous message.

    The sentence should be like this ‘Ninage S L Birappanavara articale bagge…’

    -Harish

  15. vishnunandana says:

    OBBA HIDHU VAGI HUTTI ENTHA NEECHA LEKHANA BREDA BELEGEREGE DIKKARAVIRALI……
    DEVERE AVRIGE SARIYADA SHIKSHE KODTHARE….
    EDAKINTHA MODALU SRI RAGHAWESHWARA BHARATHI SWAMI GALA BAGGE ELLADA AROPAGALANNU AVARA CHINDI PAPER NALLI HAKIDDARU…

  16. Chandramohan Gowda says:

    hello everyone,
    vijaya karnatakada MATANATARA SAMVADA oduttiruva ella odugaru BHYRAPPANAVARANNU virodhisi, “tarkika amshagalannu” gananege tegedukollade pollu jatyateetateyannu pradarshisalu vividha saahitigalu prtyuttara needuttiddare. Intaha janarellarigu Sreeyuta Ramchandra Shenoy ravaru uttmavagi mattu sarala bhasheyalli nannataha paamararu artha maadikolluvante prtyuttara neediddare. Avarige nammellara paravaagi abhinandanegalannu sallisona.
    (avara lekhana kevala Ravi belegereyavarige maatra prtyttaravalla ennuvudu nanna anisike)

  17. Vijay Pai says:

    ಮಹಾನ ಪಂಡಿತನ ಘನವಾದ ಆಭಿಪ್ರಾಯಗಳು
    ‘ಒಬ್ಬ ಮಿಷನರಿ ಬರುವುದಕ್ಕಿಂತ ಒಬ್ಬ ವ್ಯಾಪಾರಿ ಬರುವುದು ದೇಶಕ್ಕೆ ಗಂಡಾಂತರಕಾರಿ’ ….. ರವಿ ಬೆಳಗೆರೆಯ ಮಟ್ಟಿಗೆ ಹೇಳಬೇಕೆಂದರೆ ‘ ಒಬ್ಬ ವ್ಯಾಪಾರಿಗಿಂತ ಗಂಡಾತರಕಾರಿ ಒಬ್ಬ ಪತ್ರಕರ್ತ-ವ್ಯಾಪಾರಿ’..ಈ ಮನುಷ್ಯ ಇಷ್ಟು ದಿವಸ ಪಾತಕ ಲೋಕ , ಪ್ರೀತಿ-ಪ್ರೇಮ , ಭಾವುಕತೆಯನ್ನು ಬಂಡವಾಳ ಮಾಡಿಕೊಂಡು ಯುವ ಜನರ (ಆದರಲ್ಲೂ ರಿಕ್ಷಾವಾಲಾಗಳು, ಬಸ್ ವಾಲಾಗಳು, ಪಡ್ಡೆಗಳು) ದೋಚಿದ. ಕೆಲವರು ನನ್ನಂತವರು ಲಂಕೇಶ ವಿರುದ್ಧ ಸಮರದಲ್ಲಿ ಈ ಮನುಷ್ಯನನ್ನು ನಮ್ಮವನನ್ನಾಗಿ ಮಾಡಿಕೊಂಡೆವು. ಆದರೆ ನಾವು ಹಾಯ್ ಬೆಂಗಳೂರ ಒದುತ್ತಿದ್ದಿದ್ದು ಜಯಂತ ಕಾಯ್ಕಿಣಿ , ಆಲೂರ , ನಾಗತಿಹಳ್ಳಿ , ಜಾನಕಿ , ಚಿನಿವಾರ ಕಾಲಮ್ ಗಳಿಗಾಗಿ..ಬಹುಶ: ಪ್ರಸಾರ ಸಂಖ್ಯೆ ಈ ಮನುಷ್ಯನ ಮತ್ತೇರುವಂತೆ ಮಾಡಿತು..’ಅಹಂ ಬ್ರಹ್ಮಾಸ್ಮಿ’ ಆದ!!. ಈಗ ಭೈರಪ್ಪನವರಿಗೆ ಬುದ್ಧಿವಾದ!!..ಐವತ್ತಕ್ಕೆ ಅರಳು-ಮರಳಾಗುತ್ತಾ??? ಒಟ್ಟಿನಲ್ಲಿ ಈತ ಊರಿನಲ್ಲಿರುವ , ಜಾಗತಿಕರಣದ ಎಲ್ಲ ಫಲ ಅನುಭವಿಸುತ್ತಾ ..ಮತ್ತೊಂದು ಕಡೆ ನಕ್ಸಲಿಯರ ಸ್ನೇಹಿತನಂತೆ ಹುಸಿ ನಟಿಸುತ್ತಾ , ರೆಡ್ಡಿಗಳ ಹಣ ನೆಂಜುತ್ತ ಸಂಪಾಗಿ ಬದುಕಿರುವ ಒಂದು ತರಹದ “ಬುಧ್ಧಿಜೀವಿ”!!
    (Sorry if the comment is not relevant..but i had to tell it as me too used to like him earlier..Now he is showing his true colors)

  18. ಶಶಿ says:

    ಸರಿಯಾದ ಉತ್ತರ…!

    ರಾಮಚಂದ್ರ ಶೆಣೈ ಅವರಿಗೆ ಧನ್ಯವಾದಗಲು.

  19. nalini says:

    I don’t think Ravi Belagere could have got any better reply than the one from Mr. Shenoy. Even Byrappa could not have given such effective reply. Great writing Mr. Shenoy. Hope Ravi B. reads and understands it properly. Or is he too busy promoting his books and in self-praise always and praising his ‘chelas’ only?

    Enjoyed reading Mr. Shenoy’s reply and thanks for publishing the same.

  20. Subbu says:

    thanks Mr. shenoy,
    Its not just a reply for belagere but for those other “bhuddijeevi” articals in vijaya karnataka..

  21. enlightened says:

    anyone can clearly guess that the answer given to ravi belagere is by a ghost writer in the name of MR. shenoy! Anyone with slightest intelligance can find out that that ghost is nothing but our beloved pratap!
    Prataps publicity doubled when ravi belagere abused him in his yellow paper. but pratap is intelligent enough to encash it completely, he is targettimg ravi belagere because he wishes that people would consider him ravi`s succeser! wish pratap all the best !

  22. Vasanth says:

    Thanks Shenoy your reply to Belegere is very good.
    I think he(Belegere) is educated illiterate.
    For his publicity he is doing this.
    We should avoid him otherwise he will spoil our society.

  23. anchan says:

    mr. pratap , you also learn to be good journalist. Then you may get the “Bharataratna award”. wish you too all sucess in your future.

  24. veeru says:

    Who is Mr.Ramachandra shenoy? for what he famous for? i am asking for i never heard of Mr.Ramchandra shenoy? dear pratap, can u please publish his photo in your website? waiting to see the picture of this brave man.

  25. Pratap Simha says:

    Hi All,

    Please DON’T try to belittle or personalise anything here. Just stick to the point of contention or argument.

    And “Mr. Enlightened”, I don’t want to be the successor of Ravi Belagere like he tried to succeed Lankesh.

    My role models are Swami Vivekananda and Tim Sebastian, Coz I would like to emulate the best. Hope u understand.

    Thanq all.

  26. timu says:

    Yes veeru, I too like to see the photo of Mr.Ramchandra shenoy. Please sir pratap, please publish his photo in your website. many people are yearning to see him.

  27. anand blore says:

    alla e ravi belegerege enagide anta gottagta illa aden dodda tatvajnani taraha baritare istakku avara hi banglore nodi, yaava article satya anisalla avara melidda preeti gourava ella horatu hoytu……….. hello pratap sir plz we all are waiting for watch the ramachandra shenoy……… plz

  28. RAMYA BHATP says:

    Charchugala social work hinde eruva mathaantharada dheyada bagge belaku chellida Bhyrappanawara lekhana tumba artha poornawagithu.. adre belegere sir maathra lekhanada thathparyawanna arthysikollodanna bittu, lekhakara bagge thamma abhipraya wyakthpadisiddu really SHAMEFUL.. Shenoy awaru tumba chennagi uttara kottidare… hats off to u shenoy sir…

    Prathap,… yako shenoy sir nimma writin stylenna thumbane mecchikondu adanne aaydukondanthideyalla??!! odugalagi, nimma barawanigeya shylige onthara addict ada fan agirodrinda higannisirbeku… prathi waakya odowaglu ede feel banthu… nanna classina nim fan groupkooda ede opinion helthithu… anyways Shenoy maam Chaang kornu utthar dilla…

  29. Prajgnamala Rao says:

    Dear shenoy sir,
    ur reply is really awesome…..
    thank u pratap sir for such useful discussion

  30. Ravi says:

    Dear Pratap,

    Thanks for publishing these two articles. I had been reading both persons articles. If u c the ravi’s article, u will find,either he vl tell himself, collage life, girls life( Incldes sex also using good words), I never find an article of his is notable. If u c the SL Byrappa, he never narrates himself, as all said, he vl write as per the situation of truth in article. Ravi’s article will give a cherish to adolescents. not matured persons. He is thinking that i am enough mature to tease anybody in anyway, people vl read. these r all publicity stunts.

  31. Hema says:

    Dear Mr.Pratap,
    Your view is admisable. You have read and understood a lot on this topic. But what I found in your article is, you dont know to respect the opposite view. The debate was on one topic and you dragged it to some other topic. It is not only about Ravi or Byrappa and their arguements. You please stop alleging or defending anyone personally.

    Hema Powar

  32. Prabhu says:

    ರವಿ ಬೆಳೆಗೆರೆಗೆ ತನ್ನ ಬಗ್ಗೆನೇ ಹೇಳಿಕೊಳ್ಳೋ ವ್ಯಕ್ತಿ ಅದೊಂದು (Unripe fruit ) ಇದ್ದಂತೆ ತಾನು ಹೇಳೋದೆಲ್ಲ ಸತ್ಯ ಎನ್ನುವ ಪ್ರತಿಶ್ಥೆಯ ಪರಾಕಾಷ್ಟೆಯನ್ನು ಹಿಡಿಯಲೆತ್ನಿಸುವ ಒಂದು ಆನೆ.
    ಇವನ್ಯಾವನ್ನ್ರಿ ಎಲ್ಲದಕ್ಕೂ ಮುಗುತುರಿಸ್ತಾನೆ. ತಾನೇನು ಅತಿ ಓದಿಕೊಂಡವಂತೆ ಮಾತಾಡ್ತಾ ಇರ್ತಾನೆ. ಮಿ|| ರವಿ ಎಲ್ಲಾ ಪುಸ್ತಕಗಳ index ಓದಿದಾಕ್ಷಣ ಪೂರ್ತಿ ಪುಸ್ತಕದ ಥೀಮ್ ಗೊತ್ತಾಗೋದಿಲ್ಲ.
    surf internet for Hells angel and at least see it.
    as Vijay pai told….
    ಜಾಗತಿಕರಣದ ಎಲ್ಲ ಫಲ ಅನುಭವಿಸುತ್ತಾ ..ಮತ್ತೊಂದು ಕಡೆ ನಕ್ಸಲಿಯರ ಸ್ನೇಹಿತನಂತೆ ಹುಸಿ ನಟಿಸುತ್ತಾ , ರೆಡ್ಡಿಗಳ ಹಣ ನೆಂಜುತ್ತ ಸಂಪಾಗಿ ಬದುಕಿರುವ ಒಂದು ತರಹದ “ಬುಧ್ಧಿಜೀವಿ”!!
    ಸರಿಯಾದ ಉತ್ತರ…!
    ರಾಮಚಂದ್ರ ಶೆಣೈ ಅವರಿಗೆ ಧನ್ಯವಾದಗಳು.

  33. Darshan says:

    Ravi Belagere sucks….

  34. hi pratap,
    i read your article in vk from begining.now i have confusion in your article bcz ramachandra shenoy’s article and your way of writing very common in method,style and abandont stock of matters.
    anyway,your anger with belagere,as it same in mr.shenoys angaer is gave new boost to MATANTARA CHARCHE,

  35. Vikas says:

    Its time for people of India to awaken. Nammavaru yendige satyavannu grahisalu kaliyutharo tiliyadu. Ramachandra Shenoy’s ravara pratuttara sooktavagide. Pratap, I have read lot of your articles and really appreciate your knowledge and views. Please continue your excellent work of awakening the common man.

  36. Ravi says:

    Nanage nenapiro haage,Ravi Belagere avara article prakatavaada next day ee reply banthu. Adeshtu Prakanda panditharu Ramachandra shenoy! Naavu V.K avaru ee paati fast yaavaga aadru? antha andukollo haagilla. Innu yaaro obbaru Prathap simha avara tharane reply sharp aagidde andidaare. Avarigondu thank u. Agni Sridhar ide vishayakke sambadisida haage kelavu prashne etthiddaru,adakke utthara kodalilwo.sigalilwo marethu hogide. Innu N.S. Shankar avarige yaaroo utthara kottilla bidi. Thingalugattale deshakke deshave bele erikege bendu hoga bekaadare raashtriya samasye Manthantharakke,ashtella Kaala-Avakaasha kotta V.K great.

  37. ರಾಘವೇಂದ್ರ ತುಂಗ says:

    ಎಲ್ಲ 3 ಲೇಖನಗಳನ್ನು ಪ್ರಕಟಿಸಿದುದಕ್ಕೆ ಪ್ರತಾಪ ಸಿಂಹರಿಗೆ ಧನ್ಯವಾದಗಳು.

    ಭೈರಪ್ಪನವರ ಬಗ್ಗೆ ಏನನ್ನೂ ಹೇಳಬೇಕಾದ ಅವಶ್ಯಕತೆ ಇಲ್ಲ. ಸದ್ಯಕ್ಕಂತೂ ಕನ್ನಡ ಸಾಹಿತ್ಯರಂಗದಲ್ಲಿ ಅವರಿಗೆ ಅವರೇ ಸಾಟಿ. ಸಾಹಿತ್ಯ, ಸಂಶೋಧನೆ, ಸತ್ಯ ಬಿಟ್ಟರೆ ಬೇರೆ ಯಾವುದಕ್ಕೂ ಮುಲಾಜೇ ಇಲ್ಲ ಅನ್ನುವ ಹಂತ ತಲುಪಿದ್ದಾರೆ.

    ರಾಮಚಂದ್ರ ಶೆಣೈ ಅವರ ಪ್ರತ್ಯುತ್ತರ ಓದಿ ಬಹಳ ಹೆಮ್ಮೆ ಮತ್ತು ಸಂತೋಷವಾಯಿತು. ಕನ್ನಡಾಂಬೆಯ ಮಡಿಲಲ್ಲಿ ಈ ತೆರನಾದ (ವಿಷಯ ತಿಳಿದು ಮಾತನಾಡುವ) ಇನ್ನು ಹಲವು ಪತ್ರಕರ್ತರು ಉದಯಿಸಲಿ ಎಂದು ಆಶಿಸುತ್ತೇನೆ.

    ರವಿ ಬೆಳೆಗೆರೆಯವರಂತೂ ಯಾಕೋ ಬರಬರುತ್ತಾ ತಿಳಿದೋ ತಿಳಿಯದೆಯೋ ಕಾರ್ನಾಡ, ಅನಂತಮೂರ್ತಿಯವರಂತೆ ಅವಕಾಶವಾದಿ ಹಾದಿಯಲ್ಲಿ ಸಾಗುತ್ತಿದ್ದಾರೆ. ನನಗೆ ಅನ್ನಿಸಿದ ಹಾಗೆ ಅವರಿಗೆ ಬೇರೆ ಕ್ಷೇತ್ರಗಳ ಮೇಲಿನ ಗೀಳು (ಕಿರುತೆರೆ, ಚಲನಚಿತ್ರ) ಎಂದಿನಿಂದ ಜಾಸ್ತಿ ಆಯಿತೋ ಅಂದಿನಿಂದ ಅವರ ಬರವಣಿಗೆಯಲ್ಲಿ ಸತ್ವ, ಸತ್ಯ ಎರಡೂ ಕಡಿಮೆಯಾಗುತ್ತಾ ಬಂತು. ನಮ್ಮ ಚಲನಚಿತ್ರರಂಗದ ಕೆಲವು ನಾಯಕರು ಅಭಿಮಾನಿಗಳಿಗೊಸ್ಕರ Act ಮಾಡುವಂತೆ ಇವರೂ ತಮ್ಮ ಅಭಿಮಾನಿಗಳಿಗೊಸ್ಕರ (or ಕೆಲವರ ಮೇಲಿನ ದ್ವೇಷಕ್ಕೊಸ್ಕರ) ಮಾತ್ರ ಲೇಖನಿ ಹಿಡಿಯುತ್ತಾರೆನೋ ಅನ್ನುವಂತೆ ಭಾಸವಾಗುತ್ತಿದೆ.

    Anyways..ಎಲ್ಲಾ ಬಿಟ್ಟು ವಿಷಯಕ್ಕೆ ಬರೋಣ. ಎಷ್ಟೋ ಸಾರಿ “ಮತಾಂತರ” ದ ಬಗ್ಗೆ ನಾನು ನನ್ನಲ್ಲೇ ಚಿಂತನೆ ಮಾಡಿದ್ದೂ ಇದೆ. ನನ್ನ ಅನಿಸಿಕೆಯ ಪ್ರಕಾರ ನಮ್ಮ (ಹಿಂದೂಗಳ) “ಧರ್ಮಾಂಧತೆ”ಯೇ ಇಷ್ಟೊಂದು ಮತಾಂತರಕ್ಕೆ ಕಾರಣವಾಗಿದೆ. ನಮ್ಮಲ್ಲಿ ಎಷ್ಟು ಜನರಿಗೆ ಹರ-ಹರಿಯರನ್ನು ಆಕಾಶನೀಲಿ ಬಣ್ಣದಲ್ಲಿ ಯಾಕೆ ಚಿತ್ರಿಸುತ್ತಾರೆ, ಶಿವನಿಗೆ ಲಿಂಗ ರೂಪವೇಕೆ, ಹಿಂದೂ ನಾರಿಯರು ತಾಳಿ/ಕುಂಕುಮ/ಹೂ/ಮೂಗುತಿ ಯನ್ನೇಕೆ ಧರಿಸುತ್ತಾರೆ, ಪಿತೃಗಳಿಗೆ ವರ್ಷಕ್ಕೊಂದು ಶ್ರಾದ್ದವೇಕೆ ಅನ್ನುವಂಥಹ ದಿನನಿತ್ಯದ ಆಚಾರವಿಚಾರಗಳ ಬಗ್ಗೆ ತಿಳುವಳಿಕೆ ಇದೆ? “ಮತಾಂತರ ಕಾನೂನು ಬಾಹಿರ” ಅನ್ನುವ ಕಾನೂನನ್ನು ಪಾಲಿಸುವುದನ್ನು ಬಿಟ್ಟು (ನಮ್ಮ impotent ರಾಜಕೀಯಪಕ್ಷಗಳಿಂದ ಇದು ಸಾಧ್ಯವಿಲ್ಲ) ಒಂದು Democratic Elected Government ನಿಂದ ಈ ವಿಷಯದ ಬಗ್ಗೆ ಜಾಸ್ತಿ ಅಪೇಕ್ಷಿಸುವುದು ತಪ್ಪು.

    ಜಾತಿಯ ವಿಷಯವನ್ನು ಪ್ರಸ್ತಾಪಿಸುವುದು ನನ್ನ ಉದ್ದೇಶವಾಗಿರದಿದ್ದರೂ ಒಂದು ವಿಷಯವನ್ನು ಹೇಳ ಬಯಸುತ್ತೇನೆ. ಬ್ರಾಹ್ಮಣನಾಗಿ ಹುಟ್ಟಿ 4 ವೇದಮಂತ್ರಗಳನ್ನು ಸಂಸ್ಕೃತದಲ್ಲಿ ಬಾಯಿಪಾಠ (ಅರ್ಥ ಗೊತ್ತಿಲ್ಲ) ಹೊಡೆದ ನನಗೆ ನನ್ನ ಧರ್ಮದ ಬಗ್ಗೆ ಸರಿಯಾಗಿ ಗೊತ್ತಿಲ್ಲ (ಇದಕ್ಕೆ ನನಗೆ ಸಿಗುವ ಉತ್ತರ …ನನ್ನ ಬಾಲ್ಯದಲ್ಲಿ ಇದನ್ನೆಲ್ಲಾ ಹೇಳಿ ಕೊಡುವಂತಹ ಗುರುಗಳೇ ಸರಿಯಾಗಿ ಸಿಕ್ಕಿಲ್ಲ..I mean knowledgable Gurus are not easilly accessible & in childhood all these questions may not ಅರಿಸೆ. ಈಗ ಏನೋ Internet ನಿಂದ ಅಲ್ಪ ಸ್ವಲ್ಪ ತಿಳಿಯುವ ಅವಕಾಶ ಇದೆ). ಇನ್ನು ಧಾರ್ಮಿಕ ವಿಧಿ-ವಿಧಾನ, ಜ್ಞಾನ-ಪಾಠಗಳಿಂದ ಸ್ವಲ್ಪ ಮಟ್ಟಿಗೆ ದೂರದಲ್ಲಿರುವ/ವಂಚಿತರಾದ ನಮ್ಮ ಸಹೋದರ/ಸಹೋದರಿಯರಿಗೆ ಧರ್ಮಶಿಕ್ಷಣ ಕೊಡುವವರ್ಯಾರು? ಮತಾಂತರ ಮಾಡುವವರಿಗೆ ಅಂಥವರೇ easy targets. ನಮಗೆ ನಮ್ಮ ಧರ್ಮಗ್ರಂಥಗಳು ನಮ್ಮ ಮಾತೃಭಾಷೆಯಲ್ಲಿ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಎಷ್ಟು ಲಭ್ಯವಿವೆ? ಲಭ್ಯವಿದ್ದರೂ ಅದಕ್ಕೆ ಅಂಗಡಿಗಳಿಗೆ ಹೋಗಿ 150 ಪುಸ್ತಕಗಳನ್ನು ಹುಡುಕಿ confuse ಆಗಿ, ಕೊನೆಗೆ ಒಂದನ್ನು ಆರಿಸಿ, ದುಡ್ಡು ಕೊಟ್ಟು ತಂದು ಓದುವ ತಾಳ್ಮೆ (ಆರಿಸಿ ಓದಿದ ಪುಸ್ತಕ ಎಷ್ಟು ಪ್ರಯೋಜನಕಾರಿಯಾದದ್ದೋ ಎಂಬ question ಬೇರೆ) ಈಗ ಯಾರಿಗಿದೆ? ನನ್ನ ಪ್ರಕಾರ ನಮ್ಮ ಮನೆ ಬಾಗಿಲಿಗೆ ನಮ್ಮ ಧರ್ಮದ ಬೆಳಕನ್ನು ಚೆಲ್ಲುವ ಕೆಲಸವನ್ನು ನಮ್ಮ ಧರ್ಮಗುರುಗಳು ಮಾಡಬೇಕು. ಅವನು ಯಾವನೋ ಬಾಬಿ ಜಿಂದಾಲ್ ಅಂತೆ.. 10 ನೆ ಕ್ಲಾಸಿನಲ್ಲಿ ಅವನ ಫ್ರೆಂಡ್ ಬೈಬಲ್ ಕೊಟ್ಟು ಇದನ್ನು ಓದದೇ ಇದ್ದರೆ ನೀನು ನರಕಕ್ಕೆ ಹೋಗ್ತೀಯ ಅಂದನಂತೆ. ಅದಕ್ಕೆ ಇವ ಓದಿದ..ತನ್ನ ಸಿಕ್ಖ್ ಧರ್ಮ ಬಿಟ್ಟ..ಕ್ರಿಸ್ಚಿಯಾನಿಟಿ ಗೆ convert ಆದ. ಮೊದಲು ಅವ ತನ್ನ ಧರ್ಮದ ಬಗ್ಗೆ ಸರಿಯಾಗಿ ತಿಳಿದಿದ್ದರೆ convert ಆಗ್ತಿರ್ಲಿಲ್ಲ ಅಥವಾ atlest ವಿಮರ್ಶೆ ಮಾಡುತಿದ್ದ.

    ನಾನು ಮೊದಲೇ ಹೇಳಿದ ಹಾಗೆ Democracy ಯಲ್ಲಿ ರಾಜಕೀಯ ಪಕ್ಷಗಳು ಅಭಿವೃದ್ಧಿ ಕಾರ್ಯಗಳನ್ನು ಬಿಟ್ಟು ಒಂದು ಧರ್ಮ-ಜಾತಿ ಗಳ ಪರ ಅಥವಾ ವಿರೋಧ ನೀತಿಗಳನ್ನು ಅನುಸರಿಸುವುದು ತಪ್ಪು(ದುರದ್ರಿಷ್ಟಕರ ಅಂದರೆ ಅಧಿಕಾರ/ದುಡ್ಡಿಗಾಗಿ ನಮ್ಮ ರಾಜಕೀಯ ಪಕ್ಷಗಳು ಅಭಿವೃದ್ಧಿಯೊಂದನ್ನು ಬಿಟ್ಟು ದೇಶ ಹಾಳು ಮಾಡುವ ಎಲ್ಲಾ ಕೆಲಸ/ನೀತಿ/ಕಾನೂನುಗಳನ್ನು ಸೃಷ್ಟಿ ಮಾಡುತ್ತಾರೆ). ನಮ್ಮ ಹಿಂದೂಧರ್ಮ ವನ್ನು ಉಳಿಸುವುದು/ಬೆಳೆಸುವುದು ನಮ್ಮ ಧರ್ಮ ಗುರುಗಳ ಕೆಲಸವಾಗಬೇಕು. ಒಗ್ಗಟ್ಟಿನಿಂದ ನಮ್ಮ ಧರ್ಮ ಗುರುಗಳು ಏಕೆ –
    (೧) ನಮ್ಮ ಧರ್ಮಗ್ರಂಥಗಳನ್ನು ಆಯಾಯ ರಾಜ್ಯಗಳಲ್ಲಿ ಆಯಾಯ ಮಾತೃಭಾಷೆಗಳಲ್ಲಿ ಬರೀ ‘ಅಆಇಈ’ ಕಲಿತಂಥವರಿಗೂ ಅರ್ಥವಾಗುವ ಹಾಗೆ ಸರಳವಾಗಿ ಅನುವಾದ ಮಾಡಿ ಪುಸ್ತಕ ರೂಪದಲ್ಲಿ ಹಂಚಬಾರದು?
    (೨) ಪ್ರತೀ ಹಿಂದುಧರ್ಮೀಯರಿಗೂ ದಿನ ನಿತ್ಯದ ಹಿಂದೂ ಧರ್ಮದ ಆಚಾರ-ವಿಚಾರ ಗಳ ಬಗ್ಗೆ ಆರಿವು ಮೂಡಿಸುವಂತಹ ಕೆಲಸ ಗಳನ್ನೇಕೆ ಮಾಡಬಾರದು?
    (೩) ಪ್ರತಿಯೊಂದು ಕಿಲೋಮೀಟರ್ ಗೊಂದರಂತೆ ಧರ್ಮ ಶಾಲೆಗಳನ್ನು (or even best – TV channels in local language) ಸ್ಥಾಪಿಸಿ ಪ್ರತಿಯೊಬ್ಬರಲ್ಲೂ ಹಿಂದೂ ಧರ್ಮದ ಅರಿವನ್ನು ಹೆಚ್ಚಿಸುವ ಕೆಲಸ ಮಾಡಬಾರದು?
    (೪) ಸ್ಥಾಪಿಸಿದ ಧರ್ಮ ಶಾಲೆಗಳಲ್ಲಿ ಬೆಳಿಗ್ಗೆ & ಸಂಜೆ ಯೋಗ, ಆಯುರ್ವೇದ, ಕಲೆ, ಸಂಸ್ಕೃತ ಪಾಠ ಇತ್ಯಾದಿ ವಿಷಯಗಳ ಬಗ್ಗೆ ಭೋದನೆ ಕೊಟ್ಟು ನನ್ನಂತಹ ಪ್ರತಿಯೊಬ್ಬ ಮೂಢ ಹಿಂದೂ ಧರ್ಮೀಯನನ್ನೂ ಪ್ರೌಢ ಹಿಂದೂ ಧರ್ಮೀಯನನ್ನಾಗಿ ಮಾಡಬಾರದು?
    (೫) ಸಂಸ್ಕೃತ ಭಾಷೆಯ ಉಳಿವಿಗೋಸ್ಕರ, ಸಂಸ್ಕೃತ ಭಾಷೆಯನ್ನು ನಿರರ್ಗಳ ವಾಗಿ ಓದಲು, ಬರೆಯಲು, ಮಾತನಾಡಲು & ಅರ್ಥಮಾಡಿಕೊಳ್ಳಲು ಕಲಿಯುವ ಪ್ರತೀ ವಿಧ್ಯಾರ್ಥಿಗೆ “Free education” ಸೌಲಭ್ಯ ಒದಗಿಸುವಂತಹ ಕಾರ್ಯಕ್ರಮಗಳನ್ನು ಏಕೆ ಜಾರಿಗೆ ತರಬಾರದು?

    “ಮತಾಂತರ” ದ ಬಗ್ಗೆ out of context ಆಗಿ ಬರೆಯುತ್ತಿದ್ದೇನೋ ಗೊತ್ತಿಲ್ಲ..ಆದರೆ ನನಗೆ ತಿಳಿದ ಹಾಗೆ ನಮ್ಮ ಯಾವ ಧರ್ಮಗುರುಗಳು “ಧರ್ಮೋ ರಕ್ಷತಿ ರಕ್ಷಿತಃ” ಎಂಬ ನೀತಿಯನ್ನು ಸರಿಯಾಗಿ ಅನುಸರಿಸುತ್ತಿರುವಂತೆ ಕಾಣುತ್ತಿಲ್ಲ. ಬರೆಯಲು ಹೋದರೆ ಇನ್ನೂ ಬಹಳ ಬರೆಯಬಹುದು. ವಿದ್ಯಾ ವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಹೇಳುವಂತೆ “ನಮಗೆ ನಮ್ಮ ಪೂರ್ವಜರು Great. ನಮ್ಮ ಧರ್ಮಗ್ರಂಥ ಗಳು Great. ಭಗವದ್ಗೀತೆ Great ಅಂಥ ಹೇಳಿಕೊಳ್ಳುವುದೇ ಒಂದು ಸಂಗತಿ ಅನ್ನುವುದು ಬಿಟ್ಟರೆ ನಮಗೆ ಎಷ್ಟು ಗೊತ್ತು? ನಾವೆಷ್ಟು Great? ನಮ್ಮ ಕೊಡುಗೆ ಮುಂದಿನ ಪೀಳಿಗೆಗೆ ಏನು?” ಅನ್ನುವಂತಹ ಪ್ರಶ್ನೆಗಳೇ ಉದ್ಭವಿಸುವುದಿಲ್ಲ.

    ಇನ್ನು ನನ್ನ ಮಿತ್ರರು ಕೇಳಬಹುದು. ಅಲ್ಲಯ್ಯ ಇಷ್ಟೆಲ್ಲ ಕುಯ್ಯ್ದಿದ್ದೀಯಲ್ಲ.. ಇದಕ್ಕೆಲ್ಲ ದುಡ್ಡು ಎಲ್ಲಿಂದ ಬರಬೇಕಪ್ಪ ಅಂಥ. ದುಡ್ಡು ಬರ್ತದೆ ಸ್ವಾಮಿ. ನಮ್ಮಲ್ಲಿ ಕಾಶಿ-ಮಥುರಾ-ಪುರಿ-ತಿರುಪತಿ-ಮಂತ್ರಾಲಯ-ಧರ್ಮಸ್ಥಳ-ಶೃಂಗೇರಿ-ಉಡುಪಿ ಇತ್ಯಾದಿ ದೇವಸ್ಥಾನಗಳು ಒಂದಾದರೆ ಯಾಕೆ ದುಡ್ಡು ಬರೋದಿಲ್ಲ ಸ್ವಾಮಿ? ಸ್ವಲ್ಪ ಮುಜರಾಹಿ ಇಲಾಖೆ ಯೊಂದಿಗೆ ಹೊರಟ ಮಾಡುವ ಸಂಧರ್ಭ ಬರಬಹುದು. ಇನ್ನು ಬೇಕಾದಷ್ಟು NGO ಗಳೂ ಇವೆ..ನಿಯತ್ತಾಗಿ ಕೆಲಸ ಮಾಡುವುದಾದರೆ ಧನ ಸಹಾಯ ಮಾಡಲು. ಮೊದಲು ನಮ್ಮ ಸಮಸ್ತ ಭಾರತದ (& ಭಾರತದಾಚೆಗಿನ) ಧರ್ಮಗುರುಗಳು & ಧರ್ಮ ಹಿತಚಿಂತಕರು ಒಗ್ಗಟ್ಟಾಗಿ ಒಂದು ವೇದಿಕೆ ಸಿದ್ದ ಮಾಡಿಕೊಂಡು ಕಾರ್ಯಕ್ರಮದ ರೂಪರೇಷೆ ತಯಾರಿಸಲಿ (ಒಗ್ಗಟ್ಟಿಲ್ಲದಿದ್ದರೆ 206 ವಿದ್ವಾಂಸರು 103 ಪಂಚಾಗಗಳನ್ನು ಬರೆದು confuse ಮಾಡೋ ಕಥೆ ಆಗುತ್ತದೆ ಅಷ್ಟೆ). ಏನಾದರೂ ಶುರು ಮಾಡಿದರೆ ನಾವೂ ಆದರಲ್ಲಿ ಭಾಗಿಯಾಗಬಹುದು.

    Anyway.. ಇಷ್ಟೆಲ್ಲಾ ಬರೆದು ನನ್ನ ಅಭಿಪ್ರಾಯಕ್ಕೆ ಕಡಿವಾಣ ಹಾಕ ಬಯಸುತ್ತೇನೆ. ನನ್ನ ಜೀವನದಲ್ಲಿ ಇದೆ ಮೊದಲ ಬಾರಿಗೆ ಒಂದು ವಿಷಯದ ಬಗ್ಗೆ ಬರೆದಿದ್ದೇನೆ. ಇದರಲ್ಲಿ ಪ್ರೌಢತೆ ಇಲ್ಲದಿದ್ದರೆ ಅಥವಾ ತಪ್ಪು ಅನಿಸಿಕೆಗಳಿದ್ದರೆ ಕ್ಷಮಿಸಿ..ಹಾಗೂ ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ತಿಳಿಸಿ.

    ಧನ್ಯವಾದಗಳು,
    ರಾಘವೇಂದ್ರ ತುಂಗ

  38. Lokesh says:

    Belegere, sumne mathadudre agalri, Buddi giddi idiya nimge, hogi hogi S.L. Bhairappa avara bagge mathadthiralla.
    Nim thara manushya, sathya horageleyavara jotheyalli irbeku kanri. Nimage iro vakchathurya, lekhanadinda.., namma DHARMA uliso prayathna madri. Sumne tharle madbedi sir.
    Duddu jasthi admele, nimge thumba jamba bandide, viveka kalkondidira… swalpa ATHMAVALOKANA madikolli. Hai, Bangalore ge Modlina kale ne illa.
    I think thats not Ravi, Belegere…

  39. Basu says:

    Hi Pratap,
    Convey my thanks to shennai, for providing truthful reply to Belegere’s baseless discussion on SLB article, That article should be known by every one, specially who are in the misconception of other religions.
    I urge them to go through that article which contais the fact….! as per my knowledge.
    Dont hang on with the baseless stories provided by “Hai Bangalore” paper’s editor and please dont think that am scolding him, even he has written good articles when he was a actual journalist.
    But now the fact is that he has diverted his path from journalism to cinema and school business, thats y i think he is not concentrating on the facts.

  40. Harsha says:

    It makes me feel that Ravi Belagere has got converted to be a muslim or chirstian or he has taken a lot of money from theTraitors of Hindustan to become a Traitor himself.
    We must pull the masks from these evil men and save Hindustan from Enemies within.

    India is in greater danger than ever not from enemies outside but from enemies within like muslims and chirstians.

    Get up people……………..

  41. jay prabhu says:

    good reply to Belagere from Mr Shenoy Alias Pratap Simha

  42. Ullas says:

    ಹೆಚ್ಚಾಗಿ ಕ್ರೈಂ ಬರಹಗಳಿಂದಲೇ ಗುರುತಿಸಲ್ಪಡುವ ರವಿ ಬೆಳಗೆರೆ ಅಂಥವರ ಅನಿಸಿಕೆಗೆ ಸಿಕ್ಕು ನಲುಗಿ ಹೋಗುವಸ್ತು ಹಗುರವಾದ್ದಲ್ಲ ಭೈರಪ್ಪನವರ ಪ್ರತಿಭೆ. ಸುಮ್ಮನೆ ರವಿಯ ಮಾತಿಗೆ ಯಾಕೆ ಪ್ರಾಮುಖ್ಯತೆ ಕೊಡುತ್ತೀರಿ? ಆತನಿಗೆ ಬೇಕಾದ್ದೂ ಅದೇ ….ಬಿಟ್ಟಿ ಪ್ರಚಾರ. ಸ್ವತಹ ಹೆಸರು ಮಾಡಲಾಗದವರು ಹೆಸರಾದವರನ್ನು ಆಡಿಕೊಂಡು ಹೆಸರುವಾಸಿಯಾಗಿ ಸದಾ ಹಸಿರಾಗಿರಬೇಕೆಂದು ಬಯಸುವ ಪರಿ ರವಿಯದ್ದು.
    ಉಲ್ಲಾಸ, ..ಅಡಿಲೈಡ್ ನಿಂದ

  43. Basanna says:

    Mr. Ravi Belagere….

    Patrakartharaagoku modlu thaavu paper maaro hudga aagidri antha thaavello heliddanna kelidde… Bhairappanavara articalge thamma uttara nodidmele ansthide… thaavu danaa kaayo hudga kooda aagidri antha… ee baseless comments kivinalli hoo mudkondirorge kelsi…

    Mr. Bhairappa and Mr. Shenoy… Good Job…

  44. chandrashekar says:

    Ravi belgere iga obba pakka commercial press reporter……aste

  45. vasuda says:

    egeega ravi belagere avara baravanigeya daastanu kadimeyadantide. Adakke heege. Dayavittu ravi neenu bhavukatheya lekhanagalanne bari. ninagilla andru bereyavrige khushi kodatte.

  46. narendra says:

    very good reply by ರಾಮಚಂದ್ರ ಶೆಣೈ, ಮಂಗಳೂರು
    thanks for replying so called pseudo seculars…i dont know how much ravi received from christian missionaries to defend their nasty actions…

  47. close analyzer says:

    hello pratap sir….n….shenoy sir…
    this article is simply amazing…true brain feed…and a topic worth debating…
    actually…the way belagere sir is supporting conversion (directly or indirectly)…and the way..he’s being against hindu’s and hinduism…i am getting a serious doubt if he’s doing this to grab a ticket from CONGRESS or may be supporting any congressman relative of his….may be he has plans of contesting for elections shortly…

  48. anup says:

    dont ever care about ravi balagere s articles………..he s one who always tries to find mistakes in people…..just forget it:):):):)