Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇಷ್ಟಕ್ಕೂ ಇವರ್ಯಾರು, ಇವರ ಕೊಡುಗೆ, ಸಾಧನೆ ಏನು?

ಇಷ್ಟಕ್ಕೂ ಇವರ್ಯಾರು, ಇವರ ಕೊಡುಗೆ, ಸಾಧನೆ ಏನು?

ರಾಹುಲ್ ಗಾಂಧಿ!

ಇಷ್ಟಕ್ಕೂ ಈತ ಯಾರು? ಬ್ರಿಟಿಷರ ವಿರುದ್ಧ ಟೊಂಕಕಟ್ಟಿ ನಿಂತ ಬಾಲ ಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್್ನೋ? ಅಹಿಂಸಾ ಚಳವಳಿ ಆರಂಭಿಸಿದ ಮಹಾತ್ಮ ಗಾಂಧಿಯೋ? ಭಾರತ ರಾಷ್ಟ್ರೀಯ ಸೇನೆಯನ್ನು ಕಟ್ಟಿದ ಸುಭಾಶ್್ಚಂದ್ರ ಬೋಸ್ ಅವರೋ? ಕುಣಿಕೆಗೆ ತಲೆಕೊಟ್ಟ ಭಗತ್ ಸಿಂಗ್್ನೋ? ಈ ದೇಶದ ಸಂವಿಧಾನ ರೂಪಿಸಿದ ಅಂಬೇಡ್ಕರ್ರೋ? ಅಣುಶಕ್ತಿಯ ಮೂಲ ಪ್ರತಿಪಾದಕ ಹೋಮಿ ಜಹಾಂಗೀರ್ ಭಾಭಾನೋ? ಶ್ರೀನಗರದ ವಾಯುನೆಲೆಯನ್ನು ಉಳಿಸಿದ ಸೋಮನಾಥ ಶರ್ಮನೋ? ಕಾರ್ಗಿಲ್್ನಲ್ಲಿ ಜೀವಕೊಟ್ಟ ವಿಕ್ರಂ ಭಾತ್ರಾ, ಸೌರಭ್ ಕಾಲಿಯಾನೋ?

ಯಾರೀತ?

ರಾಜಕೀಯ ಲಾಭದ ಉದ್ದೇಶ ಇಟ್ಟುಕೊಂಡು ಉತ್ತರ ಪ್ರದೇಶದ ಭಟ್ಟಾ ಪರ್ಸೂಲ್್ಗೆ ಈತ ಪಾದಯಾತ್ರೆ ಹೊರಟ ಕೂಡಲೇ ಮಾಧ್ಯಮಗಳೇಕೆ ಹುಚ್ಚೆದ್ದು ಕುಣಿಯತೊಡಗಿವೆ? ಯಾವ ಕಾರಣಕ್ಕಾಗಿ ಈತನ ಯಾತ್ರೆ “Media event’  ಆಗಿಬಿಟ್ಟಿದೆ? ಕಳೆದ ಮೇನಲ್ಲಿ ಭಟ್ಟಾ ಪರ್ಸೂಲ್್ಗೆ ಆಗಮಿಸಿ 8 ರೈತರನ್ನು ಪ್ರಧಾನಿ ಬಳಿಗೆ ಕೊಂಡೊಯ್ದು ಎರಡು ಗ್ರಾಮಗಳ ಒಟ್ಟು 70 ಜನರನ್ನು ಕಗ್ಗೊಲೆಗೈಯ್ಯಲಾಗಿದೆ, ಅವರನ್ನು ಚಿತೆಗೇರಿಸಿದ ಚಿತ್ರವಿದು ಎಂದು ಸುಳ್ಳೇ ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡಿದ್ದ ವ್ಯಕ್ತಿ ಮತ್ತೆ ಭಟ್ಟಾ ಪರ್ಸೂಲ್್ಗೆ ಹೊರಟ ಕೂಡಲೇ ಮಾಧ್ಯಮಗಳೇಕೆ ಬುದ್ಧಿಗೇಡಿಗಳಂತೆ ವರ್ತಿಸುತ್ತಿವೆ? ಯಾರ ಬಗ್ಗೆಯೂ ಇರದ, ರಾಹುಲ್ ವಿಷಯದಲ್ಲಿ ಮಾತ್ರ ಕಾಣುವ ಇಂಥದ್ದೊಂದು ಮೋಹವೇಕೆ? ಆತ ಭಾರತವನ್ನು ಉದ್ಧಾರ ಮಾಡುವುದಕ್ಕಾಗಿ ಜನ್ಮತಳೆದಿರುವ ಅವತಾರ ಪುರುಷನೇನು? ಬಡವರ ಮೇಲೆ, ಬಡವರ ಮೇಲಾಗುವ ದೌರ್ಜನ್ಯಗಳ ಬಗ್ಗೆ, ಅತ್ಯಾಚಾರಗಳ, ಭ್ರಷ್ಟಾಚಾರದ ಬಗ್ಗೆ ಆತನಿಗೆ ನಿಜಕ್ಕೂ ಕಾಳಜಿಯಿದೆ ಎನ್ನುವುದಾದರೆ ದೌರ್ಜನ್ಯ, ಅತ್ಯಾಚಾರಗಳು ಸಂಭವಿಸುತ್ತಿರುವುದು ಬರೀ ಉತ್ತರ ಪ್ರದೇಶದಲ್ಲಿ ಮಾತ್ರವೆ? ರಾಹುಲ್ ಗಾಂಧಿಯವರ ಕಾಂಗ್ರೆಸ್ ಪಕ್ಷ ಆಳ್ವಿಕೆ ನಡೆಸುತ್ತಿರುವ, ಅವರ ಅಮ್ಮ ಸೋನಿಯಾ ಗಾಂಧಿಯವರು ನಿಯುಕ್ತಿ ಮಾಡಿರುವ ಕಿರಣ್ ರೆಡ್ಡಿ ಮುಖ್ಯಮಂತ್ರಿಯಾಗಿರುವ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನಾದೆಂಡ್ಲ ಗ್ರಾಮದ ಎನ್. ಮೌನಿಕಾ ಎಂಬ 16 ವರ್ಷದ ಯುವತಿ ಕೊಲೆಯಾಗಿ ಹೋಗಿದ್ದಾಳೆ. ಆಂಧ್ರ ಇವ್ಯಾಂಜೆಲಿಕಲ್ ಲುಥೆರನ್ ಚರ್ಚ್್ನ ಪಾದ್ರಿ ದಾಸಿ ಅಜಯ್ ಬಾಬು ಆಕೆಯ ಮೇಲೆ ಅತ್ಯಾಚಾರವೆಸಗಿ, ಸೀಮೆ ಎಣ್ಣೆ ಸುರಿದು ಸುಟ್ಟಿದ್ದಾನೆ. ಆಕೆಯ ಚೀರಾಟವನ್ನು ಕೇಳಿ ಧಾವಿಸಿದ ನೆರೆಯವರು ಗುಂಟೂರು ಜಿಲ್ಲಾ ಆಸ್ಪತ್ರೆಗೆ ಸೇರಿಸಿದ ಕ್ಷಣದಲ್ಲೂ ಸ್ಥಳಕ್ಕೆ ಆಗಮಿಸಿದ ಪಾದ್ರಿಯ ಚಿಕ್ಕಪ್ಪ ಸ್ಟೀವನ್, ಅಡುಗೆ ಮಾಡುತ್ತಿದ್ದಾಗ ಬೆಂಕಿ ಆಕಸ್ಮಿಕ ಸಂಭವಿಸಿ ಸುಟ್ಟುಕೊಂಡೆ ಎಂದು ಹೇಳಿಕೆ ಕೊಡುವಂತೆ ಒತ್ತಡ ಹೇರಿ ಸಿಕ್ಕಿಹಾಕಿಕೊಂಡಿದ್ದಾನೆ. ಕಳೆದ ಮಾರ್ಚ್್ನಲ್ಲಿ ಆಂಧ್ರದ ಚಿರಾಲಾದಲ್ಲಿ ಕಾಲೇಜು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ಏಪ್ರಿಲ್್ನಲ್ಲಿ ಹೈದರಾಬಾದ್ ಬಳಿಯ ನಾರಾಯಣಗುಡ ಬ್ಯಾಪ್ಟಿಸ್ಟ್ ಚರ್ಚ್್ನಲ್ಲಿ ಪ್ರಾರ್ಥನೆ ಮುಗಿಸಿ ಹೋಗುತ್ತಿದ್ದ 18 ವರ್ಷದ ಯುವತಿಯನ್ನು ಕಾರಿನಲ್ಲಿ ತುಂಬಿಕೊಂಡು ಹೋಗಿ ರೇಪ್ ಮಾಡಲಾಯಿತು.

ಇವ್ಯಾವುವೂ ರಾಹುಲ್ ಗಾಂಧಿಯವರ ಕಣ್ಣಿಗೆ ಕಾಣಲಿಲ್ಲವೆ?

ಇವು ಅತ್ಯಾಚಾರ, ಅನಾಚಾರಗಳಲ್ಲವಾ? ಅಥವಾ ಆಂಧ್ರದಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್ ಸರಕಾರವಾಗಿದ್ದರಿಂದ ಆತನ ಬಾಯಿಂದ ಮಾತು ಹೊರಡುತ್ತಿಲ್ಲವೋ? ಜಗತ್ತಿನ ಪ್ರಮುಖ ರಾಷ್ಟ್ರಗಳ ರಾಯಭಾರ ಕಚೇರಿಯನ್ನು ಹೊಂದಿರುವ ದೇಶದ ರಾಜಧಾನಿ ದೆಹಲಿಯನ್ನು “ರೇಪ್ ಕ್ಯಾಪಿಟಲ್್’ ಮಾಡಿರುವವರು ಯಾರು? ಆಗಿಂದಾಗ್ಗೆ ಚಲಿಸುವ ಕಾರುಗಳಲ್ಲಿ ಎಳೆದೊಯ್ದು ಅತ್ಯಾಚಾರವೆಸಗುವ ಪ್ರಕರಣಗಳು ಸಂಭವಿಸುತ್ತಿದ್ದರೂ ರಾಹುಲ್ ಎಂದಾದರೂ ಬಾಯಿ ತೆರೆದಿದ್ದಾರೆಯೇ? ದೆಹಲಿಯಲ್ಲಿರುವುದೂ ಕಾಂಗ್ರೆಸ್ ಸರಕಾರವೇ ಹಾಗೂ ದೆಹಲಿ ಪೋಲಿಸ್ ಪಡೆಯನ್ನು ನಿಯಂತ್ರಿಸುವುದೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವೇ. ಈ ಪ್ರಕರಣಗಳಿಗೆ ಯಾರನ್ನು ದೂರುತ್ತಾರೆ? ಈ ರಾಹುಲ್ ಗಾಂಧಿ ಯಾವ ಯುವ ಕಾಂಗ್ರೆಸ್್ನ ಚುಕ್ಕಾಣಿ ಹಿಡಿದಿದ್ದಾರೋ ಅದಕ್ಕೆ ಎಂತಹ ಇತಿಹಾಸವಿದೆ ಗೊತ್ತಾ? ಇಡೀ ದೇಶವನ್ನೇ ದಿಗ್ಬ್ರಮೆಗೊಳಿಸಿದ 1995ರ ತಂದೂರ್ ಕೊಲೆ ಪ್ರಕರಣವನ್ನು ನೆನಪಿಸಿಕೊಳ್ಳಿ. ಪತ್ನಿ ನೈನಾ ಸಾಹ್ನಿಯನ್ನು ಕೊಂದು ಸುಟ್ಟುಹಾಕಿದ ಸುಶೀಲ್ ಶರ್ಮಾ ಕೂಡಾ ಯುವ ಕಾಂಗ್ರೆಸ್ ನೇತಾರನಾಗಿದ್ದ. 1999ರಲ್ಲಿ ಜೆಸ್ಸಿಕಾ ಲಾಲ್್ನನ್ನು ಕೊಂದವನೂ ಕೂಡ ಮನು ಶರ್ಮಾ ಎಂಬ ಯೂತ್ ಕಾಂಗ್ರೆಸ್ ನಾಯಕ!

ಈ ಮಧ್ಯೆ ಭಟ್ಟಾ ಪರ್ಸೂಲ್ ಪಾದಯಾತ್ರೆ ಸಂದರ್ಭದಲ್ಲಿ “ಉತ್ತರ ಪ್ರದೇಶವನ್ನು ದಲ್ಲಾಳಿಗಳು, ಮಧ್ಯವರ್ತಿಗಳು ಆಳುತ್ತಿದ್ದಾರೆ’ ಎಂದು ರಾಹುಲ್ ಹೇಳಿಕೆ ಕೊಟ್ಟಿದ್ದಾರೆ. ಉತ್ತರ ಪ್ರದೇಶವನ್ನು ದಲ್ಲಾಳಿ ಆಳುತ್ತಿದ್ದಾರೆಂದರೆ ಕೇಂದ್ರವನ್ನು ಆಳುತ್ತಿರುವವರು ಯಾರು? 2ಜಿ ಹಗರಣ, ಕಾಮನ್ವೆಲ್ತ್ ಹಗರಣ, ಆದರ್ಶ್ ಹೌಸಿಂಗ್ ಹಗರಣ ಇಂಥ ದೇಶದ ಇತಿಹಾಸದಲ್ಲೇ ಅತಿದೊಡ್ಡ ಹಗರಣಗಳನ್ನು ಸೃಷ್ಟಿಸಿರುವ ಕಾಂಗ್ರೆಸ್ ಪಕ್ಷದ ನೇತಾರರಾದ ಅಮ್ಮ-ಮಕ್ಕಳ ಇಬ್ಬಂದಿ ಧೋರಣೆ ಮಾಧ್ಯಮಗಳಿಗೆ ಗೊತ್ತಿಲ್ಲವೇನು? ಇವರು, ಇವರ ಕುಟುಂಬದ್ದು ಎಂತಹ “ಶುದ್ಧಹಸ್ತ’ ಎಂಬುದು ಈ ದೇಶದ ಜನರಿಗೆ ಗೊತ್ತಿಲ್ಲವೆಂದು ಭಾವಿಸಿದ್ದಾರೇನು? ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಹಗರಣವಾದ ಜೀಪ್ ಹಗರಣ ನಡೆದಿದ್ದು ನೆಹರು ಪ್ರಧಾನಿಯಾಗಿದ್ದಾಗ. ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿಯವರಂತೂ ಪ್ರಜಾಪ್ರಭುತ್ವದ ಕೊಲೆಗಾತಿ. ಇನ್ನು ಗಲೀ ಗಲೀ ಮೇ ಶೋರ್ ಹೇ, ರಾಜೀವ್ ಗಾಂಧೀ ಚೋರ್ ಹೇ… ಎಂಬ ಹಾಡು ದೇಶದ ಮೂಲೆ ಮೂಲೆಗಳಲ್ಲೂ ಮೊಳಗಲು ಕಾರಣರಾದವರು ಹಾಗೂ ಭ್ರಷ್ಟಾಚಾರವನ್ನು ಸಾರ್ವತ್ರೀಕರಣ ಮಾಡಿದ್ದೇ ರಾಹುಲ್ ತಂದೆ ರಾಜೀವ್ ಗಾಂಧಿ. ಬೋಫೋರ್ಸ್ ಹಗರಣ ಬಯಲಾದಾಗ “ಅಯ್ಯೋ, ಪ್ರಧಾನಿಯೇ ಲಂಚ ತೆಗೆದುಕೊಳ್ಳುತ್ತಾನೆ, ನಮ್ಮದೇನು ಮಹಾ..’ ಎಂಬ ಮಾತು ಕೇಳಿ ಬಂತು. ಆ ಹಗರಣದಿಂದ ಒಬ್ಬ ಸಾಮಾನ್ಯ ಸರಕಾರಿ ನೌಕರನಿಗೂ ಲಂಚ ತೆಗೆದುಕೊಳ್ಳಲು ಪ್ರೇರಣೆ, ಆತ್ಮಸ್ಥೈರ್ಯ ದೊರೆಯಿತು. ಇಂತಹ ಹಿನ್ನೆಲೆಯಿಂದ ಬಂದಿರುವ ರಾಹುಲ್ ಗಾಂಧಿ ಅದ್ಯಾವ ಮುಖ ಇಟ್ಟುಕೊಂಡು ಈ ರೀತಿಯ ಹೇಳಿಕೆ ನೀಡಿದ್ದಾರೆ? ಅವರ “10 ಜನಪಥ್್’ ನಿವಾಸದಿಂದ ಜಂತರ್ ಮಂಥರ್್ಗಿರುವ ಅಂತರ ಕೇವಲ 2 ಕಿ.ಮೀ. ಇತ್ತ ದೆಹಲಿಯಿಂದ ಭಟ್ಟಾ ಪರ್ಸೂಲ್್ಗೆ 100 ಕಿ.ಮೀ. ಒಂದು ವೇಳೆ ರಾಹುಲ್ ಗಾಂಧಿಗೆ ಭ್ರಷ್ಟಾಚಾರದ ಬಗ್ಗೆ ನಿಜಕ್ಕೂ ಕಾಳಜಿಯಿದ್ದಿದ್ದರೆ ಅಣ್ಣಾ ಹಜಾರೆ ಜಂತರ್ ಮಂಥರ್್ನಲ್ಲಿ ಉಪವಾಸ ಕುಳಿತಿದ್ದಾಗ ಏಕೆ ಹೋಗಲಿಲ್ಲ? 100 ಕಿ.ಮೀ. ದೂರಕ್ಕೆ ಹೋಗಲು ಸಮಯವಿದೆ, 2 ಕಿಲೋ ಮೀಟರ್ ಹತ್ತಿರದಲ್ಲಿರುವ ಜಂತರ್ ಮಂಥರ್ ದೂರವಾಗಿ ಬಿಡುತ್ತದೆಯೇ?

ಇವರೆಂತಹ ವ್ಯಕ್ತಿಯೆಂದರೆ ಉತ್ತರ ಪ್ರದೇಶದಲ್ಲಿ ಸಂಭವಿಸುತ್ತಿರುವ ಘಟನೆಗಳನ್ನು ಉಲ್ಲೇಖಿಸಿ,“I feel ashamed to call myself an INDIAN after seeing what has happened here in UP’ ಎನ್ನುತ್ತಾರೆ. ಈ ದೇಶದ ಇತಿಹಾಸದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ವಿದರ್ಭಗಳಲ್ಲಿ. ಈ ಎರಡೂ ರಾಜ್ಯಗಳಲ್ಲೂ ಕಾಂಗ್ರೆಸ್ ಆಡಳಿತವಿದೆ. ರೈತರ ಕೃಷಿ ಭೂಮಿ ಸ್ವಾಧೀನದ ಬಗ್ಗೆ ದೊಡ್ಡ ಹುಯಿಲೆದ್ದಿರುವುದೇ ಹರ್ಯಾಣದಲ್ಲಿ. ಅಲ್ಲೂ ಕಾಂಗ್ರೆಸ್ ಆಡಳಿತವಿದೆ. ಆಗ ಭಾರತೀಯನೆಂದು ಹೇಳಿಕೊಳ್ಳಲು ರಾಹುಲ್್ಗೆ ಅವಮಾನವೆನಿಸಲಿಲ್ಲವೆ? ರೈತರ ಕೃಷಿ ಭೂಮಿಯನ್ನು ಯದ್ವಾತದ್ವಾ ಸ್ವಾಧೀನಪಡಿಸಿಕೊಳ್ಳುವ ವಿಚಾರಕ್ಕೆ ಬರುವುದಾದರೂ ಓಬಿರಾಯನ ಕಾಲದ ಕಾಯಿದೆಗೆ ತಿದ್ದುಪಡಿ ತರಬೇಕಾಗಿರುವುದಾದರೂ ಯಾರು? ರೈತರ ಭೂಮಿಯನ್ನು ಮನಸೋಇಚ್ಛೆ ಸ್ವಾಧೀನಪಡಿಸಿಕೊಳ್ಳುವುದನ್ನು ತಪ್ಪಿಸುವ ಸಲುವಾಗಿ ಕಾಯಿದೆಗೆ ತಿದ್ದುಪಡಿ ತರುವ ವಿಧೇಯಕ 2007ರಿಂದಲೂ ಸಂಸತ್ತಿನ ಮುಂದಿದ್ದರೂ ಅದಕ್ಕೆ ಅಂಗೀಕಾರ ಪಡೆದುಕೊಳ್ಳಲು ಕಾಂಗ್ರೆಸ್ ಏಕೆ ಮನಸ್ಸು ಮಾಡುತ್ತಿಲ್ಲ? ಇಷ್ಟೆಲ್ಲಾ ಗೋಮುಖವ್ಯಾಘ್ರ ಧೋರಣೆ ಅನುಸರಿಸುತ್ತಿದ್ದರೂ, ಸ್ವತಂತ್ರವಾಗಿ ಒಂದು ಒಳ್ಳೆಯ ಭಾಷಣ ಮಾಡುವ ತಾಕತ್ತಿಲ್ಲದಿದ್ದರೂ, ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯವಿಲ್ಲದಿದ್ದರೂ ಮಾಧ್ಯಮಗಳು ಮಾತ್ರ ಈತನನ್ನು “ಯುತ್ ಐಕಾನ್್’ (ಯುವಜನತೆಯ ಮುಕುಟಮಣಿ) ಎಂದು ಹಾಡಿ ಹೊಗಳುತ್ತವೆ. ಕಾಂಗ್ರೆಸ್ ಪಕ್ಷದಲ್ಲೇ ಮಿಲಿಂದ್ ದಿಯೋರಾ ಇದ್ದಾರೆ, ಸಚಿನ್ ಪೈಲಟ್, ಜಿತೇನ್ ಪ್ರಸಾದ್, ಜ್ಯೋತಿರಾಧಿತ್ಯ ಸಿಂಧಿಯಾ, ಸಂದೀಪ್ ದೀಕ್ಷಿತ್ ಇದ್ದಾರೆ. ಇವರ್ಯಾರು ಮಾಧ್ಯಮಗಳಿಗೆ “ಯುತ್ ಐಕಾನ್್’ ಎನಿಸುವುದಿಲ್ಲ. ಅಣಕವೆಂದರೆ, ನಮ್ಮ ಇಂಗ್ಲಿಷ್ ಮಾಧ್ಯಮಗಳಿಗೆ ನಲವತ್ತೊಂದು ವರ್ಷ ಕಳೆದು ನಲವತ್ತೆರಡಕ್ಕೆ ಕಾಲಿಟ್ಟಿರುವ ಈತ ಯುವಜನತೆಯ ಮುಕುಟಮಣಿಯಾಗಿ ಕಾಣುವ ಜತೆಗೆ “ಮೋಸ್ಟ್ ಎಲಿಜಿಬಲ್ ಬ್ಯಾಚುಲರ್್’ ಆಗಿಯೂ ತೋರುತ್ತಾರೆ! ಬ್ರಿಟನ್, ಅಮೆರಿಕದಲ್ಲಿ ಈತನ ವಯಸ್ಸಿಗೆ ಬರುವಷ್ಟರಲ್ಲಿ ದೇಶದ ಪ್ರಧಾನಿ, ಅಧ್ಯಕ್ಷರಾಗಿರುತ್ತಾರೆ. ಅಷ್ಟೇಕೆ ಈತನ ತಂದೆ ರಾಜೀವ್ ಗಾಂಧಿಯೇ ಪ್ರಧಾನಿಯಾಗಿದ್ದರು. ಒಂದು ವೇಳೆ, ರಾಹುಲ್ ಅವಿವಾಹಿತರಾಗಿಯೇ ಉಳಿದರೆ ಅವರಿಗೆ 60, 70 ವರ್ಷಗಳಾದಾಗಲೂ ಈ ಮಾಧ್ಯಮಗಳು “ಮೋಸ್ಟ್ ಎಲಿಜಿಬಲ್ ಬ್ಯಾಚುಲರ್್’ ಎನ್ನುತ್ತವೇನೋ?!

ಆದರೆ ಕಾಂಗ್ರೆಸ್ ಪಕ್ಷದ ಬಗ್ಗೆ ಅಡಿಯಾಳು ಮನಃಸ್ಥಿತಿಯನ್ನು ಹೊಂದಿರುವ ಮಾಧ್ಯಮಗಳು ಯಾರನ್ನು ಮುಕುಟಮಣಿ ಎನ್ನುತ್ತವೆಯೋ ಆತನ ಬಗ್ಗೆ ಹಾಗೂ ಮಾಧ್ಯಮಗಳ ಗುಲಾಮಗಿರಿಯ ಬಗ್ಗೆ ಯುವಜನತೆಯ ಆನ್್ಲೈನ್ ತಾಣಗಳಾದ ಫೇಸ್್ಬುಕ್ ಹಾಗೂ ಟ್ವಿಟ್ಟರ್್ಗಳಲ್ಲಿ ಎಂತಹ ಮೆಸೇಜ್್ಗಳು ಕಾಣಸಿಗುತ್ತವೆ ಎಂಬುದನ್ನು ನೋಡಿ…

1. ರಾಹುಲ್್ಗಾಂಧಿ ಉತ್ತರ ಪ್ರದೇಶದಲ್ಲಿ ಯಾಕೆ ಪಾದಯಾತ್ರೆ ಕೈಗೊಂಡಿದ್ದಾರೆಂದು ಗೊತ್ತಾ? ವಾಹನಗಳು ಓಡಾಡುವಂಥ ರಸ್ತೆಗಳನ್ನು ನಿರ್ಮಿಸಬೇಕೆಂದು 50 ವರ್ಷ ದೇಶವಾಳಿದ ಆತನ ಪಕ್ಷಕ್ಕೆ ಅನಿಸಲೇ ಇಲ್ಲ  -ಅಮಿತ್ ಮಾಳವೀಯ

2. ಹರಿಯಾಣದ ಕಾಂಗ್ರೆಸ್ ಸರಕಾರ ಭೂಸ್ವಾಧೀನ ಮಾಡಿಕೊಳ್ಳುತ್ತಿರುವುದರ ವಿರುದ್ಧ ಅಂಬಾಲದ 6 ಗ್ರಾಮಗಳ ಜನ ಧರಣಿ ನಡೆಸುತ್ತಿದ್ದಾರೆ. ರಾಹುಲ್ ಈ ಗ್ರಾಮಗಳಿಗೇಕೆ ಬರುವುದಿಲ್ಲ?  -ಮೃತ್ಯುಂಜಯ ಕುಮಾರ್ ಝಾ

3. ರಾಹುಲ್ ಗಾಂಧಿ ರೋಟಿ ತಿಂದರು ಎನ್ನುತ್ತಿವೆ ಸುದ್ದಿ ಚಾನೆಲ್್ಗಳು!  -ಪ್ರಶಾಂತ್

4. ಕೆಲವು ಇಂಗ್ಲಿಷ್ ಚಾನೆಲ್್ಗಳು ರಾಹುಲ್್ಗಾಂಧಿ ಎಲ್ಲಿ ಸ್ನಾನ ಮಾಡಿದರು, ಎಷ್ಟು ರೋಟಿ ತಿಂದರು, ಎಷ್ಟು ಕಿಲೋ ಮೀಟರ್ ನಡೆದರು ಎಂಬ ಹುಚ್ಚುಚ್ಚು ಸುದ್ದಿ ಪ್ರಸಾರ ಮಾಡುತ್ತಿವೆ. -ರಿತುಪರ್ಣ ಘೋಷ್

5. ನಿಮ್ಮಲ್ಲಿ ಯಾರಾದರೂ ರಾಮಲೀಲಾ ಮೈದಾನದಲ್ಲಿ ನಡೆದ ದೌರ್ಜನ್ಯದ ಬಗ್ಗೆ ರಾಹುಲ್್ಗಾಂಧಿ ಮಾತನಾಡಿದ್ದನ್ನು ನೋಡಿದಿರಾ? ಆಂಧ್ರಪ್ರದೇಶದ ರೈತರ ಬವಣೆ ಬಗ್ಗೆ ಧ್ವನಿಯೆತ್ತಿದ್ದನ್ನು ಕೇಳಿದ್ದೀರಾ? ಇವು Paid TV channels’.  -ನಿತೀಶ್ ಕುಮಾರ್

6. ಈ ರಾಹುಲ್ ಗಾಂಧಿಗೆ ಬಿಜೆಪಿ/ಬಿಎಸ್ಪಿ ಆಡಳಿತವಿರುವ ರಾಜ್ಯಗಳೇ ಏಕೆ ಕಾಣುತ್ತವೆ? ಜೈತಾಪುರ್, ಲವಾಸಾ ಹಾಗೂ ಕೊಂಕಣ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಭೂಹಗರಣಗಳೇಕೆ ಕಾಣುವುದಿಲ್ಲ?  -ಅಶೋಕ್ ಕುಮಾರ್.

ಟ್ವಿಟ್ಟರ್್ನಲ್ಲಿ ‘“rahulfacts’‘ ಎಂಬ ಶೀರ್ಷಿಕೆಯಡಿ ಆತನ ಇಬ್ಬಂದಿ ನಿಲುವನ್ನು ತೊಳೆಯುವ ಕೆಲಸ ನಿತ್ಯವೂ ನಡೆಯುತ್ತಿದೆ. ಒಬ್ಬ ಯುತ್ ಐಕಾನ್ ಆದವರಿಗೆ ಫೇಸ್್ಬುಕ್, ಟ್ವಿಟ್ಟರ್್ಗಳು ಬಹಳ ಮುಖ್ಯ. ಇವರೆಡರಲ್ಲೂ ರಾಹುಲ್ ಹಾಗೂ ಮೋದಿ ಬಗ್ಗೆ ವ್ಯಕ್ತವಾಗುವ ಅಭಿಪ್ರಾಯಗಳನ್ನು ಗಮನಿಸಿ, ಅಭಿಮಾನಿಗಳ ಸಂಖ್ಯೆಯನ್ನೂ ತಾಳೆ ಹಾಕಿದರೆ ಯಾರು ಯುವಜನತೆಯ ಮುಕುಟಮಣಿ ಎಂಬುದು ಗೊತ್ತಾಗುತ್ತದೆ. ಉತ್ತರ ಪ್ರದೇಶವನ್ನು ದಲ್ಲಾಳಿ ಆಳುತ್ತಿದ್ದಾರೆ ಎಂಬ ರಾಹುಲ್ ಹೇಳಿಕೆಯನ್ನು ಚಾನೆಲ್್ಗಳು ಬ್ರೇಕಿಂಗ್ ನ್ಯೂಸ್ ರೂಪದಲ್ಲಿ ಅತಿ ಪ್ರಚಾರಕೊಟ್ಟು ಪ್ರಸಾರ ಮಾಡುತ್ತಿದ್ದರೆ, ‘UP is run by touts may be, But what about the whole country it is being run by mega touts’ ಎಂದು ಯುವಜನತೆ ಮುಖಕ್ಕೆ ಉಗುಳುತ್ತಿತ್ತು.

ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ಥಂಬ ಎನ್ನುತ್ತಾರೆ. ಇಂಗ್ಲಿಷ್ ಚಾನೆಲ್್ಗಳು ಅದನ್ನು ನೆಹರು ಕುಟುಂಬವನ್ನು ಹೊತ್ತುನಿಲ್ಲುವ ಸ್ಥಂಬವೆಂದು ಭಾವಿಸಿದಂತಿದೆ. ತೆಲಂಗಾಣ ಸಮಸ್ಯೆ ಇಡೀ ಆಂಧ್ರಪ್ರದೇಶವೇ ರಣರಂಗವಾಗುವ ಅಪಾಯವನ್ನು ತಂದೊಡ್ಡುತ್ತಿರುವ ಸಮಯದಲ್ಲೂ ಚಾನೆಲ್್ಗಳು ರಾಹುಲ್್ಗಾಂಧಿಯ ಬಾಲ ಹಿಡಿದು ಹೊರಟಿರುವುದನ್ನು ನೋಡಿದರೆ ಹಾಗನಿಸದೇ ಇರದು. ಛೇ!

175 Responses to “ಇಷ್ಟಕ್ಕೂ ಇವರ್ಯಾರು, ಇವರ ಕೊಡುಗೆ, ಸಾಧನೆ ಏನು?”

  1. dheerendra says:

    hi sir…good one…thanks for d information

  2. bhargav says:

    nice article……continue on such topics.

  3. ಗಿರೀಶ್ says:

    ಯಾರು ಎಷ್ಟು ಬೈದರೂ, ಅಂದರೂ ಕಾಂಗ್ರೆಸ್ಸ್ ನವರದು ದಪ್ಪ ಚರ್ಮ.
    ೫ ವರ್ಷದಲಿ ೫೦ ವರ್ಷ ಮುಂದಕ್ಕೆ ತಂದ ವಾಜಪೇಯೀ ಯವರೆಲ್ಲಿ
    ೫೦ ವರ್ಷ ಆಡಳಿತ ನಡೆಸಿ ೫ ವರ್ಷ ಮುಂದಕ್ಕೆ ತರೋದಕ್ಕಾಗದ ಇವರೆಲ್ಲಿ ಥೂ…
    ಗಿರೀಶ್

  4. Muralidhar Karanam says:

    nice article..jee

  5. surendra says:

    ಪ್ರತಾಪ್ ಅವರೇ,

    ಅಂಕಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ

  6. sandeep says:

    thanks pratap for trying to show the reality., i hav been reading ur articles since long and though ur words r harsh and sometyms u exaggerate things, u wil giv something to knw and learn.. and i also feel dat sometyms aggression is also a must!! i told sometimes only.. JUST TO ATTRACT MANY PPL( who think less and act out of josh) INTO THE CAUSE. but we shud always be aware of its limits.. anyways KUDOS TO U..

  7. manjunath.arakeri says:

    wonderfull sir go on.We required more.

  8. sandeep says:

    @ RAJESH and anyone who thinks like dat ;
    my frend u may be right in predicting the poll results. but here its not the question of predicting who will win or lose., ITS THE QUESTN OF WAT U CAN HELP FOR THIS DYING COUNTRY..
    Brother its me, u, ur family and all our ppl who will get a better life if we be together and bring change., not by just passing a useless comment without analysing the situation..
    KINDLY KINDLY READ EVERY WORD MR.SHASHANK HAS WROTE.. seriously ( and dont take his 1st sentence in a wrong way, he dint mean to hurt u. he is just feeling for that a WELL EDUCATED LIKE YOU, r thinking so bad means wat about this nations MAJORITY ILLITERATES..
    and if you still feel that ur ppl are happy and leading a useful life, u can continue ur present attitude.. think brother its not too late for a good change..

  9. shiva says:

    soory, i didn’t understand y he should not get media support? the same thing was done even by mamata in bengal and there she got support from media too. irrespective of political issue, though mamata got plus point, more than that the farmers got what they wanted. here we have to think of the common farmers who can not fight against the acquisition all alone. they must need the power hand to fight against.

  10. gorli harish says:

    how do i write my comments in Kannada?

  11. Shivaraj says:

    Good article Pratap.

  12. Nagendra Shastry says:

    @Rajesh: If u don like Pratap’s article and dont want to support him,why the hell u visit his site??Have u gone mad?

  13. gururaj k says:

    ಸು೦ದರ ಲೇಖನ ಪ್ರತಾಪ್. ಮೇಲೆ ಯಾರೋ ಹೇಳಿದ್ದಾರೆ ನಾವು ಏನೇ ಬರೆದರೂ ಮತ್ತೆ ಯುಪಿಎ ಸರಕಾರವೇ ಬರುತ್ತದೆ ಎ೦ದು! ಬ೦ದರೂ ಬರಬಹುದೇನೋ..ಈ ದೇಶದಲ್ಲಿ ೪೦ ರಿ೦ದ ೫೦ರಷ್ಟು ಪ್ರತಿಶತ:ಮತದಾನವಾಗುತ್ತದೆ,ಪ್ರತಿ ಬಾರಿ ನೆಹರೂ,ಇ೦ದಿರಾಗಾ೦ಧಿಗಳ ಭಾವಚಿತ್ರ ತೋರಿಸಿ ಗೆಲ್ಲುವ ಕಾ೦ಗ್ರೆಸ್ ಮತ್ತೆ ಗೆದ್ದರೂ ಆಶ್ಚರ್ಯವೇನಿಲ್ಲ.ಮುಖ್ಯ ಕಾರಣವೆ೦ದರೇ ಎಷ್ಟೋ ಪ್ರಜ್ನಾವ೦ತ ನಾಗರೀಕರು,ಟ್ವೀಟರ್ ನಲ್ಲಿ,ಫೇಸ್ ಬುಕನಲ್ಲಿ ಪ್ರತಿಭಟಿಸುವವರು,ಮತದಾನದ ದಿನ ಬ೦ದಾಗ ತಮ್ಮ ಕರ್ತವ್ಯ ಮರೆತುಬಿಡುತ್ತಾರೆ.ವಿಪರ್ಯಾಸವೆ೦ದರೇ ಜೀವನದ ಅನೇಕ ಕರ್ತವ್ಯಗಳನ್ನು ಮರೆತುಬಿಡುವ ಅವಿದ್ಯಾವ೦ತ,ಬಡ,ಕೂಲಿಕಾರರು ತಪ್ಪದೇ ಮತದಾನ ಮಾಡುತ್ತಾರೆ! ಮತ್ತು ಕಾ೦ಗ್ರೆಸ್ಸಿನ ಮುಖ್ಯ ಮತದಾರರು ಇವರುಗಳೇ,ಏಕೆ೦ದರೇ ಇ೦ದಿಗೂ ಇವರಿಗೆ ಕಾ೦ಗ್ರೆಸ್ಸ್ ಎ೦ದರೇ ನೆಹರೂ ,ಗಾ೦ಧಿ,ಪಟೇಲ್ ಎಲ್ಲಾ….ಪ್ರಜ್ನಾವ೦ತ ನಾಗರೀಕರೇ ,ದಯವಿಟ್ಟು ಮತದಾನ ಮಾಡಿ

  14. Santosh kumar says:

    Good one pratap. Very truthful. People thinking need to be changed.
    @rajesh: Please research and then comment.

  15. basavaraj says:

    This article suggest to all type medias that think them their work efficiency and They must change for their mind setup to save their future

  16. Hampanna says:

    Very realistic article..

  17. Vinay B.Raj says:

    @Rajesh mind your language n think before you speak, hole country n every body knows how congress ruling the country n how they made money where they kept, its all bledy politics gimics , congress using PM post as their family corporate offiece . go n see in gujarath what he has done. and upa is the only govt who sanctioned many trains only for a sake of vote & not hiked fairs from yera’s . . .
    learn from modi & nitesh . . .

  18. BHANUPRIYA says:

    Dear Pratap
    Your writing is too good and impressive but not take one side view to analyse the things. a best reporter is one who high light the present condition of the country not to target any one person or party. Kindly overcome by your political mind and just do some thing by a pure reporter who only do for the best of this society. don’t fill hatredness in the mind of people by commenting any one person or party.

    We the youngsters contribute to the country by overcoming this bloody politics and being the agent of society you have to bring the people from dark to light by highlight the reality of every body and every bloody.

  19. Hemanth says:

    @ Basu,

    No doubt Pratap great critic writer, you also desrve this try to write for some national papers… You have great talent and facts… Good luck

    Hemanth

  20. “I feel ashamed to call myself an INDIAN after seeing what has happened here in UP” ಅನ್ನುವ, ಮಠದ ಉಂಡಾಡಿ ಗೂಳಿಯಂತಿರುವ ಈತನನ್ನು ಓರ್ವ ಭಾರತೀಯ ಎಂದೆನ್ನಲು ನನಗೇ ಹೇಸಿಗೆಯೆನಿಸುತ್ತಿದೆ.ಏಕೆಂದರೆ ಆತ ಭಾರತೀಯನೇ ಅಲ್ಲ. ಆತನ ಮತ್ತು ಸೋನಿಯಾರ ಜಾತಕವನ್ನು ಡಾ. ಸುಬ್ರಹ್ಮಣ್ಯನ್ ಸ್ವಾಮಿಯವರು ತಮ್ಮ (ಜನತಾ ಪಾರ್ಟಿಯ) ಅಂತರ್ಜಾಲ ತಾಣದಲ್ಲಿ ಬಿಚ್ಚಿಟ್ಟಿದ್ದಾರೆ. ಆಗಷ್ಟ್ ತಿಂಗಳಲ್ಲಿ ಸ್ವದೇಶಕ್ಕೆ ಮರಳುತ್ತಿರುವ ಡಾ.ಸ್ವಾಮಿಯವರ ಮುಂದಿನ ಹೆಜ್ಜೆಗಳಿಗಾಗಿ ಕಾಯೋಣ. ಗಾಂಧಿ ಕುಟುಂಬದ ಮರ್ಯಾದ ಮೂರಾಬಟ್ಟೆ ಆಗುವ ದಿನಗಳು ದೂರವಿಲ್ಲ.

  21. vivek says:

    nehru family avaru hangene, modalu neharu, amale indira, matomme rajeev , iga rahul

  22. shivamurthy says:

    we need this type of articles from u sir,,,,

  23. Anil kumar says:

    sir….. Ankana thumbane chennagi moodi bandide. Neevu helo prakara rahul gandhi allig hogbekagittu adre nam anna hazararavare rajakaranigalu yaaru saha nan hatra barodu beda andralla adrinda rahul hogilla ansutte. Iddakke neeven helthira?

  24. Manjunath says:

    Nice article, pls publish this in english so that many others who still feel Rahul is the youth icon/ speaks like a saint will know the real facts

  25. hai sir, dhanyavaadagalu…..odi tumba tilidukonde.

  26. Guruvikram Bhat says:

    ಇಷ್ಟಕ್ಕೂ ಇವರ್ಯಾರು, ಇವರ ಕೊಡುಗೆ, ಸಾಧನೆ ಏನು?

    E Rahul Gandhi ge namma deshada bagge enu gottilla… He is serviving because of his “SURNAME”
    E deshada History na 1 sala nenapu madkondre kannalli neeru tumbutte…
    Publicity tagolodu ivna kelsa ashte. Intavaru Politics ge baruttare idu nam deshada BAD luck… thu rahul…

    rahul gandhi is a non-productive citizen of India. ella Taayi Kotta Samskara.

  27. Guruvikram Bhat says:

    Pratap its a nice Artcl…

    neevu bareda lekhana tumba chennagide..

  28. Guruvikram Bhat says:

    tumba besara atutte nanna deshada paristiti nodi…

  29. Ashraf says:

    Hi ಪ್ರತಾಪ್ sir ,
    ವಿಜಯ ಕರ್ನಾಟಕದಲ್ಲಿ ನಿಮ್ಮ “ಬೆತ್ತಲೆ ಜಗತ್ತು ” ಅಂಕಣದಲ್ಲಿ “ಆತ ಮೊದಲನೆಯವನಾಗಿದ್ದ” ಎಂಬ ಶೀರ್ಷಿಕೆಯಡಿಯಲ್ಲಿ ನೀವು ಬರೆದ ಲೇಖನವನ್ನು ನಿಮ್ಮ ಎಲ್ಲ (All 7 )”ಬೆತ್ತಲೆ ಜಗತ್ತು ” ಪುಸ್ತಕದಲ್ಲಿ ಹುಡುಕಾಡಿದರು ಸಿಗಲಿಲ್ಲ .. ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದ ಮೊದಲ ಮುಸ್ಲಿಮನ ಪರಿಚಯಿಸುವ ಲೇಖನವಗಿತ್ತು ಅದು, ತಾವು ಅದರ ಪ್ರತಿಯನ್ನು ನನ್ನ e -mail ಗೆ ಕಳಿಸಿ ಕೊಡಲು ಸಾದ್ಯವಾದರೆ ಅದನ್ನು ಕಳಿಸಿ ಕೊಡಬೇಕಾಗಿ ಈ ಮೂಲಕ ವಿನಂತಿಸುತ್ತೇನೆ . ನಾನು ಬರೆದ ಅ ಲೇಖನದ ಶೀರ್ಷಿಕೆ ಅಪೂರ್ಣವಾಗಿದೆ .
    ಧನ್ಯವಾದಗಳೊಂದಿಗೆ
    ಅಶ್ರಫ್ ಬೆಂಗಳೂರು

  30. indian says:

    nice article pratap,

    yelliyavarage hindhutva virodi congress-gandhi family-christian ediots adikaradali erutadeyo alliyavarege Bharatha hediyante erutade, christian amma- maganannu ebbaru olleya naatakakaararu, rahul gandi he is a child, he is not eligible for PM,

    down down rahul gandhi
    down down sonia
    down down congress..

    jai hind

  31. Pramod says:

    Tell him to marry some average agro- indian girl from that state to become a indian.

  32. lava says:

    Hi prathap,

    its nice, thanks for this information……….keep it up………..

  33. B N Yalamalli says:

    Rahul Gandhi is a person WHO DOES NOT DESERVE any discussion.
    His comments are immature, irrelevant.

    However it becomes a matter of concern when he is projected as a future PM.
    Because given a chance the Congress party will give him that post.
    The paid Media projects this wishful thinking of the ONE FAMILY SLAVE Congress.

    Sonia Gandhi wishes to bring him directly as PM, without training him as a Minister.
    Even Indira Gandhi had started her career as I & B minister.

    In a way it is good that Rahul Gandhi is sufficiently exposed before he assumes any kind of office.

    Only important thing is that India should decide and act to prevent him from taking that post.

    It is good for both India and Sonia Gandhi, if she returns to Italy at the earliest along with her family. That will be second independance to India.

  34. satya says:

    Good information but we have to think of media because me also worked in media for one year. In media even you give breaking news they will discuss with the person who is in the matter ………………………. later they will publish. And also medias are working with political parties eg.sakshi in AP with congres, E tv with Telagu desham, in karnataka also same i dont want to tell regarding this.

  35. Suhas Bhatt says:

    Thank you Pratap Simha for giving us the info about Raul Vinci. He doesn’t looks like
    an INDIAN in any angle, does he ?

    @Basu : you too have done a great work to realise us about Raul Vinci,

    I didn’t knew much about him before reading this article & thought that he is better than any other politicians (blind belief), he is ______ .
    & we dont need that type of guy(a rapist)
    Thanks a lot both of you.
    Its time for the change, & it can be done with constant effort.

    @Rajesh: Get Lost…

  36. Aveen says:

    42ರ ಯುವಕ ರಾಹುಲ್, 56ರ ಯುವತಿ ರೇಖ ನಿಜಕ್ಕೋ ದೇಶಕ್ಕೆ ಬೇಕಾಗಿರುವ ಯುವ ಚಿನ್ಹೆಗಳು….ಏಕೆಂದರೆ ಇಬ್ವ್ಬರೂ ಚಿರ ಯವ್ವನಿಗರು!!

  37. Shailaja says:

    Very realistic article..

  38. Brilliant article! Every Indian must read this.

  39. Praveen Acharya says:

    nice.. n true…

  40. Rohan Damodar says:

    This is a great artical Mr.Simha..surely it will help a lot..

  41. INDIAN VINAY says:

    U R ABSOLUTELY 101% RIGHT PRATAP ANNA.

  42. NSP rai says:

    soniya gandhi irva varege bharatha uddaravagalla…….narendra modi ge 5 varsha aadalitha kodi,,,Just india USA ginthalu High level ge hogudralli no dout….3 idiots (1)soniya gandhi,(2) manmohan Singh (3).rahul gandhi///////

  43. deadly says:

    no wonder,afterall its same jean of nehru.ancient playboy of india.

    compare to 1947 at least literacy rate is gone up,still why we people are supporting these B s.

  44. deadly says:

    rajesh also looks a bi product of nehru family

  45. nandu says:

    Rajest bekagitta thoooopuk anta mokakke ugiskollodu..

    Dear Pratap.. much appreciated. one should not miss commenting Basu.. well BIG BULLY NEEDED to be TAMED..

  46. vijaykumar says:

    thanks pratam simma ji your a hero of the nation congratulation excellent artical

  47. preetam says:

    Really nice article. every INDIAN should know how the country is been governed by congress. since,more then 50yr they ruled,if they would had worked sincerely for just 5yr india would be the no.1 country.

  48. Gowda says:

    ಈ ಮುಂಡೆ ಮಗ ನಮ್ಮ ದೇಶದವರಿಗ ಹುಟ್ಟಿಲ್ಲ ಎಂದು ನನ್ನ ಅನಿಸಿಕೆ.ಕಾರಣ ಮೊನ್ನೆ ನಡೆದ ಮುಂಬೈ ಬಾಂಬ್ ಸ್ಪೋಟದ ಸಮಯದಲ್ಲಿ ಅವನ ಹೇಳಿಕೆ ” only it happens in INDIA ” ಈ ಸೂ….ಮ…..ಗ ,ಈಗಿನ ಷಂಡ ಪ್ರಧಾನಿ & ಇವರ ಸೂತ್ರಧಾರಿಣಿ ಸಾಯುವ ವರೆಗೆ ನಮ್ಮ ದೇಶಕ್ಕೆ ಉಳಿಗಾಲವಿಲ್ಲ.

  49. Gowda says:

    ನನ್ನ ಪದ ಬಳಕೆ ಯಾವಾಗಲು ಹೀಗೆ.ಇಷ್ಟ ವಾಗದಿದ್ದರೆ ಕ್ಷಮೆ ಇರಲಿ ಕಾರಣ ನನ್ನ ತಪ್ಪಲ್ಲ.
    ” I LOVE MY COUNTRY ” very much

  50. sampath says:

    ya u r 100000000% right sir…. i like it