Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?

ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?

ಆಗಸ್ಟ್ 8, ಸಂಸತ್ ಅಧಿವೇಶನ…

‘ಕೊನೆಯದಾಗಿ ನಾನು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ! ಇಲ್ಲಿ ಆಸೀನರಾಗಿರುವ ಸಂಸತ್ ಸದಸ್ಯರೇ ಜೋಕೆ…!! ಒಂದು ವೇಳೆ ಅಸ್ಸಾಂನಲ್ಲಿ ಸೂಕ್ತ ಪುನರ್ವಸತಿ (ಬಾಂಗ್ಲಾ ಮುಸ್ಲಿಮರಿಗೆ) ಕಲ್ಪಿಸದಿದ್ದರೆ ಮುಸಲ್ಮಾನ ಯುವಕರ ಮತ್ತೊಂದು ಸುತ್ತಿನ ಮೂಲಭೂತೀಕರಣಕ್ಕೆ ಸಿದ್ಧರಾಗಿ…’ ಹಾಗಂತ ಸಂಸತ್ತಿನಲ್ಲಿ ಹೇಳಿದವನು ಯಾರೋ ಮುಲ್ಲಾನಲ್ಲ, ಮಜಲೀಸ್ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ!!!

ಆಗಸ್ಟ್ 11, ಆಝಾದ್ ಮೈದಾನ, ಮುಂಬೈ…

ಅಸಾದುದ್ದೀನ್ ಓವೈಸಿ ಸಂಸತ್ತಿನಲ್ಲಿ ಇಂಥ ದೇಶದ್ರೋಹಿ ಹಾಗೂ ಪ್ರಚೋದನಕಾರಿ ಭಾಷಣ ಮಾಡಿದ ಮೂರೇ ದಿನದಲ್ಲಿ ಮುಂಬೈನ ಆಝಾದ್ ಮೈದಾನದಲ್ಲಿ ಪ್ರತಿಭಟನೆಗೆಂದು ನೆರೆದ ಮುಸಲ್ಮಾನ ಯುವಕರು ಮಾಡಿದ್ದೇನು? 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಯೋಧರ ಜ್ಞಾಪಕಾರ್ಥ ನಿರ್ಮಾಣ ಮಾಡಲಾಗಿರುವ”ಅಮರ್ ಜವಾನ್್’ ಸ್ಮಾರಕಕ್ಕೆ ದೊಣ್ಣೆಯಿಂದ ಬಡಿದರು, ಕಾಲಿನಿಂದ ಒದ್ದರು. ಅಷ್ಟು ಸಾಲದೆಂಬಂತೆ ಅದರ ಮೇಲೆ ಮೂತ್ರ ವಿಸರ್ಜನೆ ಮಾಡಿದರು. ಈ ಘಟನೆಯಲ್ಲಿ 58 ಪೊಲೀಸರು ಗಾಯಗೊಂಡಿದ್ದಾರೆ. ಈ ದೇಶದ ಆಂತರಿಕ ಭದ್ರತೆಯನ್ನು, ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸರ ಬಗ್ಗೆ ನಮಗೆಷ್ಟೇ ಕೋಪಗಳಿದ್ದರೂ ಖಾಕಿ ಬಗ್ಗೆ ಗೌರವ ಭಯ ಎರಡನ್ನೂ ಇಟ್ಟುಕೊಂಡಿದ್ದೇವೆ. ಆದರೆ ಆಝಾದ್ ಮೈದಾನದ ಪ್ರತಿಭಟನೆ ವೇಳೆ ಸಲೀಂ ಚೌಕಿಯಾ ಎಂಬ ಮುಸಲ್ಮಾನ ಯುವಕ ಪೊಲೀಸರ ರೈಫಲ್ಲನ್ನೇ ಕಸಿದುಕೊಂಡು ಬೆದರಿಸಿದ್ದಾನೆ. ಇದರ ಬೆನ್ನಲ್ಲೇ ಅಸಾದುದ್ದೀನ್ ಓವೈಸಿ ಸಂಸದರಾಗಿ ಆಯ್ಕೆಯಾಗಿರುವ ಹೈದರಾಬಾದ್್ನಲ್ಲಿ ಪಾಕಿಸ್ತಾನದ ಬಾವುಟವನ್ನು ಹಾರಿಸಲಾಗಿದೆ!

ಇದೆಲ್ಲ ಯಾವ ಮನಸ್ಥಿತಿಯನ್ನು, ಯಾವ ಅಪಾಯಕಾರಿ ಬೆಳವಣಿಗೆಯನ್ನು ತೋರಿಸುತ್ತದೆ?

ಈ ಮುಂಬೈ ಗಲಭೆಗೂ ಮೊದಲು ಮಸೀದಿಗಳಿಂದ ಎಸ್ಸೆಮ್ಮೆಸ್ಸೊಂದು ಹೊರಬಿದ್ದಿತ್ತು.”ಬರ್ಮಾ, ಅಸ್ಸಾಂ, ಗುಜರಾತ್ ಮತ್ತು ಕಾಶ್ಮೀರದ ನಂತರ ಇನ್ನೆಲ್ಲೋ? ಬರ್ಮಾದಲ್ಲಿ ಮುಸ್ಲಿಮರನ್ನು ಹತ್ಯೆ ಮಾಡಿದ್ದನ್ನು ವಿರೋಧಿಸುವ ಸಲುವಾಗಿ ಭಾನುವಾರ ಅಝಾದ್ ಮೈದಾನದಲ್ಲಿ ರ್ಯಾಲಿ ಇದೆ. ಅಮೆರಿಕದಲ್ಲಿ ಐವರು ಸಿಖ್ಖರನ್ನು ಕೊಂದಿದ್ದಕ್ಕೆ ಮಾಧ್ಯಮಗಳು ಹಾಗೂ ಸರ್ಕಾರ ಬೊಬ್ಬಿರಿದವು. ಆದರೆ, ಲಕ್ಷಾಂತರ ಮುಸಲ್ಮಾನರ ಜೀವಗಳಿಗೆ ಯಾವ ಬೆಲೆಯೂ ಇಲ್ಲವೆ? ಎಲ್ಲರೂ ಕಣ್ಣುಮುಚ್ಚಿಕೊಂಡಿದ್ದಾರೆ. ಈ ಎಸ್ಸೆಮ್ಮೆಸ್ಸನ್ನು ಬರುವ ಭಾನುವಾರಕ್ಕೆ ಮೊದಲು ಹಿಂದೂಸ್ಥಾನದ ಎಲ್ಲ ಮುಸಲ್ಮಾನರು, ಮಂತ್ರಿವರ್ಯರು ಹಾಗೂ ಮಾಧ್ಯಮಗಳಿಗೆ ತಲುಪಿಸಿ’.

ಈ ರೀತಿಯ ಸಂದೇಶ ಕಳುಹಿಸುವ ಮೂಲಕ ಯಾವ ಉದ್ದೇಶ ಸಾಧನೆಗಾಗಿ ಹೊರಟಿದ್ದರು? ಅಸ್ಸಾಂನಲ್ಲಿ ಸ್ಥಳೀಯರು ಹಾಗೂ ಬಾಂಗ್ಲಾದೇಶಿ ಅತಿಕ್ರಮಣಕಾರರಿಗೂ ತಿಕ್ಕಾಟ ಏರ್ಪಟ್ಟರೆ ಮುಂಬೈನ ಮುಸಲ್ಮಾನರೇಕೆ ಕೋಪಿಸಿಕೊಳ್ಳಬೇಕು? ಇಂಥದ್ದೊಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಜರೂರತ್ತಾದರೂ ಏನಿತ್ತು? ಬರ್ಮಾದಲ್ಲಿ ರೋಹಿಂಗ್ಯ ಮುಸಲ್ಮಾನರ ಮೇಲೆ ದೌರ್ಜನ್ಯ ನಡೆಯುತ್ತಿರಬಹುದು, ಅದಕ್ಕೂ ಭಾರತೀಯ ಮುಸಲ್ಮಾನರಿಗೂ ಸಂಬಂಧವೇನು? ನಮ್ಮ ದೇಶದ ಮುಸ್ಲಿಮರು ಏಕಾಗಿ ಪ್ರತಿಭಟನೆಗೆ ಮುಂದಾದರು?

ಇಂತಹ ಮನಸ್ಥಿತಿ ಇಂದು ನಿನ್ನೆಯದಲ್ಲ!

ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ, ನಮ್ಮ ಕಣ್ಣೆದುರಿಗೆ ಬರುವುದು ಮುಸಲ್ಮಾನರ”ಖಿಲಾಫತ್ ಚಳವಳಿ. ಇಡೀ ದೇಶ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಹೋರಾಡುತ್ತಿದ್ದರೆ, ಮುಸಲ್ಮಾನರು ಯಾವುದೋ ದೂರದ, ಸಂಬಂಧವೇ ಇಲ್ಲದ ಟರ್ಕಿಯ ಸುಲ್ತಾನ ಖಾಲೀಫನನ್ನು ರಕ್ಷಿಸುವಂತೆ ಬ್ರಿಟಿಷರ ಮೇಲೆ ಒತ್ತಡ ಹೇರಲು 1919ರಲ್ಲಿ ಭಾರತದಲ್ಲಿ ಖಿಲಾಫತ್ ಚಳವಳಿ ಆರಂಭಿಸಿದರು! ಅದೇ ಸಂದರ್ಭದಲ್ಲಿ(1920) ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿ ಆರಂಭಿಸಿದ ಗಾಂಧೀಜಿ ಮುಸಲ್ಮಾನರು ಕರೆಯದಿದ್ದರೂ ಖಿಲಾಫತ್ ಚಳವಳಿಗೆ ಬೆಂಬಲ ನೀಡಿದರು. ಅಂದು ಖಿಲಾಫತ್ ಚಳವಳಿಗೆ ತಾವು ಸ್ವಇಚ್ಛೆಯಿಂದ ಬೆಂಬಲ ಕೊಟ್ಟು ಮುಸಲ್ಮಾನರ ಮನಗೆದ್ದು ಅಸಹಕಾರ ಚಳವಳಿಗೆ ಅವರ ಬೆಂಬಲ ಪಡೆದುಕೊಂಡು ಬ್ರಿಟಿಷರ ಮುಂದೆ ಹಿಂದೂ-ಮುಸ್ಲಿಂ ಒಗ್ಗಟ್ಟಿನ ಫೋಸು ನೀಡುವ ಗಾಂಧೀಜಿ ಉದ್ದೇಶವೇನೋ ಸರಿಯಿತ್ತು. ಆದರೆ ಖಾಲೀಫನನ್ನು ರಕ್ಷಿಸಲು ಸಾವಿರಾರು ಮೈಲು ದೂರದಲ್ಲಿರುವ ಭಾರತೀಯ ಮುಸಲ್ಮಾನರು ಚಳವಳಿಗೆ ಮುಂದಾಗುತ್ತಾರೆಂದರೆ ಅವರನ್ನು ಒಗ್ಗೂಡಿಸುವ ಅಂಶ ದೇಶಪ್ರೇಮವಲ್ಲ, ಧರ್ಮಪ್ರೇಮ ಎಂಬುದನ್ನು ಅರಿತುಕೊಳ್ಳುವ ಸಾಮಾನ್ಯ ತಿಳಿವಳಿಕೆಯೂ ಗಾಂಧೀಜಿಗಿರಲಿಲ್ಲವೆ?! ಆನಂತರವಾದರೂ ಆಗಿದ್ದೇನು? ಖಿಲಾಫತ್ ಹಾಗೂ ಅಸಹಕಾರ ಚಳವಳಿಗಳು ಮುಗಿಯುವ ಮೊದಲೇ ಗಾಂಧೀಜಿಯವರ ಕಾಂಗ್ರೆಸ್ ಹಾಗೂ ಮುಸಲ್ಮಾನ ನಾಯಕರು ಕಿತ್ತಾಡಿ ಬೇರಾದರು. ಪ್ರತ್ಯೇಕ ಪಾಕಿಸ್ತಾನ ರಾಷ್ಟ್ರ ರಚನೆಯ ಕೂಗು ಜೋರಾಗಿದ್ದೇ ಅಲ್ಲಿಂದ. ಇಲ್ಲಿ ಮಲಬಾರ್ ದಂಗೆ ಅಥವಾ ಮೋಪ್ಲಾ ದಂಗೆಯನ್ನು ಮರೆಯಲು ಸಾಧ್ಯವೇ?

ನೀವು ಬಂದರೆ ನಿಮ್ಮ ಜತೆ, ಬರದಿದ್ದರೆ ನಿಮ್ಮನ್ನು ಬಿಟ್ಟು, ನೀವೇ ಅಡ್ಡವಾದರೆ, ಮೊದಲು ನಿಮ್ಮನ್ನು ಮೆಟ್ಟಿ, ಸ್ವಾತಂತ್ರ್ಯ ಪಡೆಯುತ್ತೇವೆ ಎಂದು ವಿನಾಯಕ ದಾಮೋದರ ಸಾವರ್ಕರ್ ಹೇಳಿದಂತೆ ಮುಸಲ್ಮಾನರಿಗೆ ಹೇಳುವ ತಾಕತ್ತು ಗಾಂಧೀಜಿಗೆ ಇಲ್ಲವಾದ ಪರಿಣಾಮವೇ ಮೋಪ್ಲಾ ದಂಗೆ. ಖಿಲಾಫತ್್ಗೆ ಬೇಷರತ್ ಬೆಂಬಲ ಕೊಡುವ ಮೂಲಕ ಗಾಂಧೀಜಿ ಮುಸಲ್ಮಾನರನ್ನು ಓಲೈಸಲು ಹೋಗಿದ್ದೇನೋ ಸರಿ, ಆದರೆ ಬ್ರಿಟಿಷರು ಖಿಲಾಫತ್ ಚಳವಳಿಯಲ್ಲಿ ಭಾಗಿಯಾಗಿದ್ದವರ ಮೇಲೆ ಲಾಠಿ ಬೀಸಿದ ಕೂಡಲೇ ಮುಸಲ್ಮಾನರು ಆರಂಭಿಸಿದ್ದೇ ಮೋಪ್ಲಾ ದಂಗೆ. 1921ರಲ್ಲಿ ಕೇರಳದಲ್ಲಿ ಹಿಂದೂಗಳ ಮೇಲೆ ಮುಗಿಬಿದ್ದರು. ಅಂದು 10 ಸಾವಿರ ಹಿಂದೂಗಳ ಮಾರಣಹೋಮ ನಡೆಯಿತು. ಒಂದು ಲಕ್ಷ ಹಿಂದೂಗಳು ನಿರ್ವಸತಿಗರಾದರು. ಹಿಂದೂಗಳ ಕೊಲೆ, ಅತ್ಯಾಚಾರ, ಮತಾಂತರ ನಡೆದವು. ಇತಿಹಾಸದ ಪುಟದಲ್ಲಿ ಮೋಪ್ಲಾ ದೌರ್ಜನ್ಯವಾಗಿ ದಾಖಲಾಯಿತು. ಗಾಂಧೀಜಿಯನ್ನು”ಶತಮಾನದ ವ್ಯಕ್ತಿ’ ಎನ್ನುತ್ತಾರೆ. ಶತಮಾನದ ಮೂರ್ಖತನ ಮಾಡಿದ್ದೂ ಗಾಂಧೀಜಿಯೇ. ಇತ್ತೀಚೆಗೆ ನಡೆಸಿದ, ಅಗಸ್ಟ್ 15ರಂದು ಘೋಷಣೆಯಾದ”ಗಾಂಧೀ ನಂತರದ ಗ್ರೇಟೆಸ್ಟ್ ಇಂಡಿಯನ್ ಯಾರು?’ ಎಂಬ ಸಮೀಕ್ಷೆಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ದೇಶವಾಸಿಗಳು ಆಯ್ಕೆ ಮಾಡಿದ್ದಾರೆ. ಅಂತಹ ಮಹಾನ್ ವ್ಯಕ್ತಿ ಅಂಬೇಡ್ಕರ್, ಸ್ವಾತಂತ್ರ್ಯ ಬರುವುದಕ್ಕೂ ಸಾಕಷ್ಟು ಮೊದಲೇ ಬರೆದ ತಮ್ಮ”ಥಾಟ್ಸ್ ಆನ್ ಪಾಕಿಸ್ತಾನ್್’ ಪುಸ್ತಕದಲ್ಲಿ ಏನು ಹೇಳಿದ್ದರು?”ಹಿಂದೂಗಳು ಮುಸಲ್ಮಾನರು ಒಟ್ಟೊಟ್ಟಿಗೆ ಬದುಕಲು ಸಾಧ್ಯವಿಲ್ಲ. ಅದು ಕಾಲಾಂತರದಲ್ಲಿ ಸಾಬೀತಾಗಿದೆ. ಒಂದು ವೇಳೆ ದೇಶ ವಿಭಜನೆ ಮಾಡಿಕೊಳ್ಳುವುದೇ ಆದರೆ, ಪಾಪುಲೇಷನ್ ಎಕ್ಸ್್ಚೇಂಜ್ (ಪಾಕ್್ನಲ್ಲಿರುವ ಎಲ್ಲ ಹಿಂದೂಗಳನ್ನು ಭಾರತಕ್ಕೆ ಕರೆಸಿಕೊಳ್ಳಬೇಕು, ಭಾರತದಲ್ಲಿರುವ ಎಲ್ಲ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು) ಮಾಡಿಕೊಳ್ಳಬೇಕು. ಇಷ್ಟಕ್ಕೂ ಮುಸಲ್ಮಾನರ ಬ್ರದರ್್ಹುಡ್ ಜಾಗತಿಕ ಭ್ರಾತೃತ್ವವಲ್ಲ, ಮುಸ್ಲಿಂ ಬ್ರದರ್್ಹುಡ್ ಅಷ್ಟೇ’ ಎಂದು ಹೇಳಿದ್ದರು. ಅದು ಮಹಾತ್ಮ ಗಾಂಧಿ ಮತ್ತು ಕಾಂಗ್ರೆಸ್ ನಾಯಕರಿಗೆ ಅರ್ಥವಾಗಲೇ ಇಲ್ಲ. ಹಾಗಾಗಿ ಈಗ ಮತ್ತೊಂದು ವಿಭಜನೆಗೆ ಭಾರತ ಸಿದ್ಧವಾಗಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.

ಅದಿರಲಿ, ಖಾಲೀಫನನ್ನು ಪದಚ್ಯುತಗೊಳಿಸಲು ಟರ್ಕಿಯಲ್ಲಿ ಕ್ರಾಂತಿಯಾದರೆ, ಇರಾಕ್್ನಲ್ಲಿ ಸದ್ದಾಂ ಮೇಲೆ ಅಮೆರಿಕ ಎರಗಿದರೆ, ಅಫ್ಘಾನಿಸ್ತಾನದ ಮೇಲೆ ಬುಷ್ ದಾಳಿ ಮಾಡಿದರೆ, ಬರ್ಮಾದಲ್ಲಿ ರೋಹಿಂಗ್ಯ ಮುಸಲ್ಮಾನರನ್ನು ಹೊರದಬ್ಬಿದರೆ ಭಾರತದ ಮುಸಲ್ಮಾನರೇಕೆ ಪ್ರತಿಭಟನೆ ಮಾಡಬೇಕು? ಹಿಂದೂಗಳ ಮೇಲೇಕೆ ದೌರ್ಜನ್ಯವೆಸಗಬೇಕು? ಹೈದರಾಬಾದ್್ನಲ್ಲೇಕೆ ಪಾಕಿಸ್ತಾನದ ಬಾವುಟ ಹಾರಿಸಬೇಕು? ಇತ್ತೀಚೆಗೆ ನಮ್ಮ ಸಕಲೇಶಪುರದಲ್ಲಿ ಟ್ಯಾಂಕರ್್ಗೆ ಗುದ್ದಿ ಇಬ್ಬರು ಬೈಕ್ ಸವಾರ ಬ್ಯಾರಿಗಳು ಸತ್ತ ಕೂಡಲೇ ಮುಸಲ್ಮಾನರೆಲ್ಲ ಒಂದೆಡೆ ನೆರೆದು ಹಿಂದೂಗಳ ಅಂಗಡಿ ಮುಂಗಟ್ಟುಗಳನ್ನು ನಾಶಮಾಡಿದರು. ಹಾಸನದಲ್ಲಿ ರಾತ್ರಿ ವೇಳೆ ಹಿಂದೂಗಳ 50ಕ್ಕೂ ಹೆಚ್ಚು ಕಾರುಗಳನ್ನು ವಿನಾಕಾರಣ ಒಡೆದು 15 ಮುಸಲ್ಮಾನ ಯುವಕರು ಸಿಕ್ಕಿಹಾಕಿಕೊಂಡಿದ್ದಾರೆ!

ಇಂತಹ ಮನಸ್ಥಿತಿಗೆ ಏನೆನ್ನುವುದು?

ಪ್ರಸ್ತುತ ಪಾಕಿಸ್ತಾನದಿಂದ ಹಿಂದೂಗಳು ಸಾಲುಸಾಲಾಗಿ ಆಶ್ರಯ ಬಯಸಿ ಭಾರತಕ್ಕೆ ಬರುತ್ತಿದ್ದಾರೆ. ಪಾಕಿಸ್ತಾನದ ಹಿಂದೂ ಯುವತಿ ರಿಂಕಲ್ ಕುಮಾರಿಯನ್ನು ಅಪಹರಣ ಮಾಡಿ ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡಿದ್ದಾರೆ, ಸಿಖ್ಖರ ಗುರದ್ವಾರಗಳನ್ನು ಪಾಕ್ ಸರ್ಕಾರವೇ ವಶಪಡಿಸಿಕೊಂಡಿದೆ. ಕಳೆದ ವರ್ಷ ಈದ್ ಸಂದರ್ಭದಲ್ಲಿ ನಾಲ್ವರು ಹಿಂದೂ ವೈದ್ಯರನ್ನು ಪಾಕಿಸ್ತಾನದಲ್ಲಿ ಕಗ್ಗೊಲೆಗೈದರು. ಅದನ್ನೆಲ್ಲ ಕಂಡು ಭಾರತೀಯರಾದ, ಹಿಂದೂಗಳಾದ ನಮ್ಮ ಎದೆಯಲ್ಲೂ ನೋವು ಮಡುಗಟ್ಟುತ್ತಿದೆ, ಆಕ್ರೋಶ ತಲೆಯೆತ್ತುತ್ತಿದೆ. ಹಾಗಂತ ನಾವು ಯಾವುದಾದರೂ ಮಸೀದಿ ಮೇಲೆ ಕಲ್ಲು ಬಿಸಾಡಿದ್ದೇವೆಯೇ? ಪಾಕಿಸ್ತಾನದಲ್ಲಿ ಹಿಂದೂಗಳ ರಕ್ತ ಹಿಂಡುತ್ತಿರುವವರು ಮುಸಲ್ಮಾನರು ಎಂಬುದು ಗೊತ್ತಿದ್ದರೂ ಭಾರತೀಯ ಮುಸಲ್ಮಾನರ ಮೇಲೆ ನಾವೆಂದಾದರೂ ಆಕ್ರಮಣ ಮಾಡಿದ್ದೇವೆಯೇ? 1999, ಡಿಸೆಂಬರ್ 24ರಂದು ಮುಸಲ್ಮಾನ ಭಯೋತ್ಪಾದಕರು ನಮ್ಮ ಇಂಡಿಯನ್ ಏರ್್ಲೈನ್ ವಿಮಾನವನ್ನು ತಾಲಿಬಾನ್ ನಿಯಂತ್ರಿತ ಕಂದಹಾರ್್ಗೆ ಕೊಂಡೊಯ್ದು 180 ಪ್ರಯಾಣಿಕರನ್ನು ಒತ್ತೆಯಾಗಿಟ್ಟುಕೊಂಡಾಗ ನಾವು ಭಾರತೀಯ ಮುಸ್ಲಿಮರ ಮೇಲೆ ಎರಗಿ ಬಿದ್ದಿದ್ದೇವೆಯೇ? 2000ರಲ್ಲಿ ಫಿಜಿಯ ಮೊದಲ ಭಾರತೀಯ ಮೂಲದ ಪ್ರಧಾನಿ ಮಹೇಂದ್ರಪಾಲ್ ಚೌಧರಿಯವರನ್ನು ಜಾರ್ಜ್ ಸ್ಪೀಟ್ ಎಂಬಾತ ಅಧಿಕಾರದಿಂದ ಕಿತ್ತೊಗೆದು ಅಲ್ಲಿನ ಸಮಸ್ತ ಹಿಂದೂಗಳಿಗೆ ಪ್ರಾಣ ಬೆದರಿಕೆ ಹಾಕಿದಾಗ ನಾವು ಭಾರತೀಯ ಕ್ರೈಸ್ತರು ಅಥವಾ ಮುಸಲ್ಮಾನರ ಪೂಜಾಸ್ಥಳಗಳನ್ನು ಹಾಳುಮಾಡಿದ್ದೇವೆಯೇ? 1969ರಲ್ಲಿ ಅಲ್ ಅಕ್ಷಾ ಮಸೀದಿಯನ್ನು ನಾಶ ಮಾಡಲಾಗಿದೆ ಎಂಬ ವದಂತಿಗೆ ಕಿವಿಗೊಟ್ಟು ಗುಜರಾತ್್ನ ಜಗನ್ನಾಥ ಮಂದಿರಲ್ಲಿ ಭಜಿಸುತ್ತಿದ್ದವರನ್ನು ಮುಸಲ್ಮಾನರು ಕೊಂದು ಗಲಭೆ ಆರಂಭಿಸಿದರಲ್ಲಾ, 2001ರಲ್ಲಿ ತಾಲಿಬಾನಿಗಳು ಬಾಮಿಯಾನ್ ಬುದ್ಧ ಪ್ರತಿಮೆಗಳಿಗೆ ಡೈನಮೈಟ್ ಇಟ್ಟು ನಾಶ ಮಾಡಿದಾಗ ನಾವು ಭಾರತೀಯ ಮುಸ್ಲಿಮರ ಮೇಲೆ ಕತ್ತಿ ಝಳಪಿಸಬಹುದಿತ್ತಲ್ಲವೆ?

ಮತ್ತೇಕೆ ಬರ್ಮಾದಲ್ಲಿ ರೋಹಿಂಗ್ಯ ಮುಸಲ್ಮಾನರಿಗೆ ಕಿರುಕುಳ ಕೊಡಲಾಗುತ್ತಿದೆ ಎಂದು ಭಾರತದಲ್ಲಿ ಇವರು ಪ್ರತಿಭಟನೆ ಮಾಡುತ್ತಿದ್ದಾರೆ?

ಯಾವ ಕಾರಣಕ್ಕಾಗಿ ಯೋಧರ ಸ್ಮಾರಕಕ್ಕೆ ಅಪಚಾರವೆಸಗಿದ್ದಾರೆ? ನಾವು ಸುಭಾಶ್ಚಂದ್ರ ಭೋಸ್, ಭಗತ್ ಸಿಂಗ್್ರನ್ನು ಪೂಜಿಸಿದಷ್ಟೇ ಗೌರವದಿಂದ ಆಶ್ಫಾಕ್ ಖಾನ್ ಮತ್ತು ಪಾಕಿಸ್ತಾನಿ ಟ್ಯಾಂಕರ್್ಗಳನ್ನು ನಾಶ ಮಾಡಿದ ಹವಾಲ್ದಾರ್ ಹಮೀದ್್ರನ್ನೂ ಆರಾಧಿಸುತ್ತೇವೆ. ಇಂಥ ಸ್ವಾತಂತ್ರ್ಯ ಕಲಿಗಳ, ಯೋಧರ ಸ್ಮಾರಕಕ್ಕೂ ಒದೆಯುತ್ತಾರೆಂದರೆ ಇವರ ನಿಷ್ಠೆ ಯಾರಿಗೆ? ಧರ್ಮಕ್ಕೋ, ದೇಶಕ್ಕೋ? ಧರ್ಮವೇ ಮುಖ್ಯವೆನ್ನುವವರು 1947ರಲ್ಲೇ ಪಾಕಿಸ್ತಾನಕ್ಕೆ ತೊಲಗಬಹುದಿತ್ತಲ್ಲವೆ? ಈ ರೀತಿಯ ದೇಶದ್ರೋಹಿ ಮನಸ್ಥಿತಿಗಳನ್ನು ಎಷ್ಟು ಕಾಲ ಸಹಿಸಿಕೊಳ್ಳುತ್ತೀರಿ? ಒಲಿಂಪಿಕ್ಸ್್ನಲ್ಲಿ 6 ಪದಕ ಗೆದ್ದವರು ಗುರುವಾರ ದಿಲ್ಲಿಯ”ಅಮರ್ ಜವಾನ್ ಜ್ಯೋತಿ’ಗೆ ನಮಿಸಿ ಬಂದರು. ಈ ದೇಶ ಕಾಯುವ ಸೈನಿಕರ ಬಗ್ಗೆ ಅಂತಹ ಗೌರವವನ್ನು ಪ್ರತಿಯೊಬ್ಬನೂ ಇಟ್ಟುಕೊಂಡಿದ್ದಾನೆ. ಇಟ್ಟುಕೊಳ್ಳದವರು, ಸೈನಿಕರ ಸ್ಮಾರಕಕ್ಕೇ ಅಪಚಾರವೆಸಗಿದವರು ದೇಶದ್ರೋಹಿಗಳಲ್ಲದೆ ಮತ್ತಿನ್ನೇನು? ಒಂದು ವೇಳೆ, ಆರೆಸ್ಸೆಸ್ಸಿಗನೊಬ್ಬ ಅಥವಾ ಬಿಜೆಪಿಯ ಬೆಂಬಲಿಗನೊಬ್ಬ ಅಮರ್ ಜವಾನ್ ಸ್ಮಾರಕ ಬಿಡಿ, ಮುಸಲ್ಮಾನರ ಪೂಜಾಸ್ಥಳಕ್ಕೆ ಅಪಚಾರವೆಸಗಿದ್ದರೆ ಸುಮ್ಮನೆ ಇರುತ್ತಿದ್ದರೆ? ಅಝಾದ್ ಮೈದಾನದಲ್ಲಿ ಗಲಭೆ ಎಬ್ಬಿಸಿ, ಅಮರ್್ಜವಾನ್ ಸ್ಮಾರಕಕ್ಕೆ ಅಪಚಾರವೆಸಗಿದವರನ್ನೂ ದೇಶದ್ರೋಹ ಅಪರಾಧದ ಮೇಲೆ ಬಂಧಿಸಿ ದಂಡಿಸಬೇಕು ಎಂದು ಹೇಳುವ ತಾಕತ್ತು ಯಾವ ರಾಜಕಾರಣಿ, ಯಾವ ಮಾಧ್ಯಮಕ್ಕಿದೆ? ಮತ್ತೊಂದು ವಿಷಯ ಕೇಳಿ, ಸಿಸಿಟಿವಿ ಫುಟೇಜ್್ಗಳ ಮೂಲಕ ಅಝಾದ್ ಮೈದಾನದಲ್ಲಿ ನಡೆದ ಗಲಭೆಗೆ ಕಾರಣರಾದ 35ರಿಂದ 40 ಮಂದಿಯನ್ನು ಪೊಲೀಸರು ಗುರುತಿಸಿದ್ದಾರೆ. ಆದರೆ ಈದ್ ಮುಗಿದ ಮೇಲಷ್ಟೇ ಅವರನ್ನು ಬಂಧಿಸಲಾಗುವುದು ಎಂದು ಹೇಳಿಕೆ ಹೊರಡಿಸಿದ್ದಾರೆ. 2004ರಲ್ಲಿ ಕಂಚಿಯ ಯತಿಗಳಾದ ಜಯೇಂದ್ರ ಸರಸ್ವತಿಯವರನ್ನು ದೀಪಾವಳಿಯ ದಿನ ಅರೆಸ್ಟ್ ಮಾಡಿದ ಪೊಲೀಸರಿಗೆ ಗಲಭೆಕೋರ ಮುಸಲ್ಮಾನರನ್ನು ಬಂಧಿಸಲು ಈದ್ ಮುಗಿಯಬೇಕಂತೆ!

ಖ್ಯಾತ ಅಂಕಣಕಾರ ಸಂದೀಪ್ ಬಾಲಕೃಷ್ಣ ತಮ್ಮ ಇತ್ತೀಚಿನ ಲೇಖನವೊಂದರಲ್ಲಿ ಗಮನಾರ್ಹ ಅಂಶವೊಂದನ್ನು ಉಲ್ಲೇಖಿಸಿದ್ದಾರೆ. ಬಾಂಗ್ಲಾದೇಶಿ ಅಕ್ರಮ ವಲಸಿಗರ ವಿಚಾರದಲ್ಲಿ ಮುಸ್ಲಿಂ ರಾಷ್ಟ್ರಗಳೇ ಹೇಗೆ ನಡೆದುಕೊಂಡಿವೆ ಅಂದುಕೊಂಡಿರಿ? 1995-1997ರ ಸುಮಾರಿಗೆ ತನ್ನ ದೇಶದಲ್ಲಿ 1 ಲಕ್ಷಕ್ಕೂ ಅಧಿಕ ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆಂದು ಮುಸ್ಲಿಂ ಬಾಹುಳ್ಯದ ಮಲೇಷ್ಯಾಗೆ ತಿಳಿದು ಬಂತು. ವರ್ಷಕ್ಕೆ 50 ಸಾವಿರ ಕುಶಲಮತಿಗಳಿಗೆ ತಾನು ಉದ್ಯೋಗ, ಅಶ್ರಯ ನೀಡುವುದಾಗಿ ಬಾಂಗ್ಲಾ ಜತೆ ಒಪ್ಪಂದ ಮಾಡಿಕೊಂಡಿದ್ದ ಮಲೇಷ್ಯಾ ಅಕ್ರಮ ವಲಸಿಗರು ತುಂಬಿಕೊಳ್ಳುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಆ ಟ್ರೀಟಿಯನ್ನೇ ಏಕಾಏಕಿ ರದ್ದು ಮಾಡಿತು. ಅಷ್ಟೇ ಅಲ್ಲ, ಅವರನ್ನು ವಾಪಸ್ ಕಳುಹಿಸಿತು. ಕಟ್ಟಾ ಇಸ್ಲಾಮಿಕ್ ರಾಷ್ಟ್ರಗಳು ಹಾಗೂ ಇಸ್ಲಾಮಿಕ್ ರಾಜಾಡಳಿತ ಹೊಂದಿರುವ ಸೌದಿ ಅರೇಬಿಯಾ, ಕತಾರ್್ಗಳೂ ಹಿಂದೆ ಮುಂದೆ ನೋಡದೇ, ಅವರೂ ಮುಸ್ಲಿಮರು ಎಂದು ಯೋಚಿಸದೇ ಬಾಂಗ್ಲಾದೇಶಿಯರನ್ನು ಹೊರದಬ್ಬಿದವು. ಇನ್ನು ಮುಂಬೈ  ಮುಸಲ್ಮಾನರು ವಕಾಲತ್ತು ವಹಿಸಲು ಬಂದಿರುವ ಬರ್ಮಾದ ರೋಹಿಂಗ್ಯ ಮುಸ್ಲಿಮರ ವಿಷಯಕ್ಕೆ ಬನ್ನಿ. ಈ ರೋಹಿಂಗ್ಯ ಮುಸ್ಲಿಮರು ಬರ್ಮಾದಲ್ಲಿರುವ ಮಿಲಿಟರಿ ಆಡಳಿತದ ಕಟ್ಟುನಿಟ್ಟಿನ ವ್ಯವಸ್ಥೆಗೆ ಹೊಂದಿಕೊಳ್ಳಲಾಗದೆ ನೆರೆಯ ಬಾಂಗ್ಲಾದೇಶಕ್ಕೆ ಓಡಿಬಂದರು. ಅವರನ್ನು ಬಾಂಗ್ಲಾದೇಶ ವಾಪಸ್ ದಬ್ಬಿತು. ಒಂದುವೇಳೆ ಇವರ ಇಸ್ಲಾಮಿಕ್ ಬ್ರದರ್್ಹುಡ್ ಅಷ್ಟೊಂದು ಗಟ್ಟಿಯೆನ್ನುವುದಾದರೆ ಮುಸ್ಲಿಂ ರಾಷ್ಟ್ರವಾದ ಬಾಂಗ್ಲಾ ರೋಹಿಂಗ್ಯ ಮುಸ್ಲಿಮರನ್ನು ಏಕೆ ತನ್ನೊಳಕ್ಕೆ ಬಿಟ್ಟುಕೊಳ್ಳಲಿಲ್ಲ? ಮುಸ್ಲಿಂ ರಾಷ್ಟ್ರಗಳೇ ಮುಸಲ್ಮಾನರಿಗೆ ಆಶ್ರಯ ನೀಡದಿರುವಾಗ ಅಸ್ಸಾಂನಲ್ಲಿ ನಮ್ಮ ಜನರ ಅನ್ನ-ನೀರು ಕಸಿದುಕೊಂಡವರನ್ನು ಹೊರಹಾಕಬೇಕೆಂದರೆ ಏಕೆ ಕೋಪಿಸಿಕೊಳ್ಳಬೇಕು ಹೇಳಿ?

ಪ್ರಸ್ತುತ ಇಡೀ ದೇಶವಾಸಿಗಳ ಮನಗೆದ್ದಿರುವ”ಸತ್ಯಮೇವ ಜಯತೆ’ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಸಿಎನ್್ಎನ್-ಐಬಿಎನ್ ಚಾನೆಲ್ ಅಮೀರ್ ಖಾನ್ ಅವರನ್ನು ಸಂದರ್ಶಿಸಿತು. “ಹೆಣ್ಣು ಭ್ರೂಣ ಹತ್ಯೆ ಮತ್ತು ಇತರ ವಿಷಯಗಳಂತೆ ಧಾರ್ಮಿಕ ಅಸಹನೆ ಕೂಡ ನಮ್ಮ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಲ್ಲೊಂದು. ನೀವೊಬ್ಬ ಮುಸ್ಲಿಮನಾಗಿ, ಮುಸ್ಲಿಂ ಸಮಾಜದ ಒಂದು ಭಾಗವಾಗಿ ಈ ಸಮಸ್ಯೆ ನಿಮ್ಮನ್ನೂ ಬಾಧಿಸುತ್ತಿದೆಯೇ? ಈ ಧಾರ್ಮಿಕತೆ ಎಂಬುದೇ ನಿಮ್ಮ ವ್ಯಕ್ತಿತ್ವವನ್ನೂ ರೂಪಿಸಿದೆಯೇ?” ಎಂದು ಕೇಳಿದಾಗ “ಖಂಡಿತಾ ಇಲ್ಲ, ಏಕೆಂದರೆ ಮುಸ್ಲಿಮ ಎನ್ನುವುದಕ್ಕಿಂತ ಮೊದಲು ನಾನೊಬ್ಬ ಭಾರತೀಯ ಎಂದೇ ನಾನಂದುಕೊಂಡಿದ್ದೇನೆ. I have always felt that I am an Indian first ಎಂದಿದ್ದರು ಆಮೀರ್. ಅಂತಹ ಭಾವನೆ ಪ್ರತಿಯೊಬ್ಬ ಮುಸ್ಲಿಮರಲ್ಲೂ ಬರಬೇಕು ಹಾಗೂ ಈ ಹಿಂದೂಗಳು ತಮ್ಮ ಎಂದಿನ Inertia ಅಥವಾ ಜಡತ್ವ ಬಿಟ್ಟು ಅಲ್ಪಸಂಖ್ಯಾತರ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಎಚ್ಚೆತ್ತುಕೊಂಡು ಸಂಘಟಿತರಾಗಬೇಕು.

ಇಷ್ಟಕ್ಕೂ”ಧರ್ಮೋ ರಕ್ಷತಿ ರಕ್ಷಿತಃ’ ಎಂದು ಬಾಯಲ್ಲಿ ಉಗುಳಿದರಷ್ಟೇ ಸಾಲದು, ಜೋಕೆ!

141 Responses to “ದೇಶಪ್ರೇಮಕ್ಕಿಂತ ದೊಡ್ಡದೇ ಧರ್ಮಪ್ರೇಮ?”

 1. ramesh naada gowda says:

  nannu pratao simha avara mathannu opputhtenne

 2. Jayantha Shetty Hirebettu says:

  Dear Pratap,

  This article is really very good. Our police deny permission to do sathyagraha against corruption, they forcefully expell those who agitated against black money peacefully. Now some group of people protest something which is not at all related to interest of ‘Indians’. I request police, before giving green signal to agitations, see that it is relevent or not.

 3. praveen says:

  ಗುರುಗಳೇ, ಈ ಒಂದು ಸ್ಥಿತಿಗೆ ನಮ್ಮ ಕೆಲವು ಕಿತ್ತೋದ್ ಕಾಂಗ್ರೆಸ್ ನಾಯಕರೆ ಕಾರಣ

 4. Adi Narayan says:

  ಪ್ರತಾಪ್ ಜಿ, ಈ ಲೇಖನ ಓದಿದ ಮೇಲೆ ನನಗೆ ಭಾರತೀಯ ಕೆಲ ಮುಸ್ಲೀಮರಲ್ಲಿ ಾಡಗಿರುವ ನೈಜ ಮಾನಸಿಕತೆ ಅರ್ಥವಾಯಿತು.ಅಸಾದುದ್ದೀನ್ ಓವೈಸಿಯಂತಹ ದೇಶದ್ರೋಹಿ ಹೇಳಿಕೆಯನ್ನು ಕೊಟ್ಟಂತಹ ಸಂಸದನನ್ನು ನಾವು ಮತ್ತು ನಮ್ಮ ಸರ್ಕಾರ ಸಹಿಸಿಕೊಂಡಿರುವುದಕ್ಕೆ ನಾಚಿಕೆಯೆನಿಸುತ್ತದೆ. ದೇಶದ ಹಿತ ದೃಷ್ಟಿಯನ್ನೇ ಬದಿಗಿಟ್ಟು ಕೇವಲ ಮತಾಂಧತೆಯನ್ನು ಮೈಗೂಡಿಸಿಕೊಂಡಿರುವಂತಹ ಇಂತಹವರಲ್ಲವೇ ನಿಜವಾದ ಕೋಮುವಾದಿಗಳು. ಇನ್ನು ನಾವು ಕಣ್ಣುತೆರೆಯುವುದಾದರೂ ಯಾವಾಗ? ಇದೇ ಸಮಯದಲ್ಲಿ ಸೋದರ ಅಮೀರ್ ಖಾನ್ ರ ದೇಶಪ್ರೇಮದ ಮಾತು ಕೇಳಿ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು. ಇವರಲ್ಲಿ ಸ್ವಲ್ಪ ಮಟ್ಟಿಗಾದರೂ ನಿಜವಾದ ದೇಶಭಕ್ತರಿದ್ದಾರೆ ಎಂದು. ಹೌದು ನಿಜ ಹಿಂದುಗಳೇನು ಈ ದೇಶವನ್ನು ಗುತ್ತಿಗೆಗೆ ತೆಗೆದುಕೊಂಡಿಲ್ಲ. ಆದರೆ ಮುಸ್ಲಿಮರಲ್ಲಿ ಅನೇಕರು ಏಕೆ ಇನ್ನೂ ಧಾರ್ಮಿಕ ವ್ಯಾಮೋಹದಿಂದ ದೇಶದ್ರೋಹದ ಕಾರ್ಯಗಳಲ್ಲಿ ತೊಡಗುತ್ತಿದ್ದಾರೆ. ಇಂತಹ ಧರ್ಮಾಂಧ ಕಾರ್ಯಗಳಲ್ಲಿ ನಿರತರಾದ ಮುಸ್ಲೀಮ್ ಬಾಂಧವರೇ ತಿಳಿಯಿರಿ,ನಮ್ಮ ಮತ್ತು ನಮ್ಮ ಮಕ್ಕಳ ಜೀವನ ನಡೆಯುತ್ತಿರುವುದು ಇಲ್ಲಿ. ನಮ್ಮ ಭವಿಷ್ಯವೂ ಕೊನೆಯೂ ಇಲ್ಲಿಯೇ ಮತ ಸಾಮರಸ್ಯವೊಂದೇ ನಮಗುಳಿದಿರುವ ಪರಿಹಾರ. ಪ್ರತಾಪ್ ಜಿ ಯವರ ಈ ಮೇಲಿನ ಲೇಖನದಲ್ಲಿ ಉಲ್ಲೇಖವಾದ ಅಂಶಗಳನ್ನು ಗಮನಿಸಿ, ನಿಜವಾದ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಿ ಬನ್ನಿ ಸೋದರರೇ ನಾವು ಒಟ್ಟಾಗಿ ಭವ್ಯ ಭಾರತವನ್ನು ಕಟ್ಟೋಣ.

 5. Raghav Raja says:

  Really this matter has to be reach all Hindus & all politicians that who are all quite

 6. Adi Narayan says:

  ಪ್ರತಾಪ್ ಜಿಯವರ ಈ ಲೇಖನ ಓದಿದ ಮೇಲೆ ನನಗೆ ಭಾರತೀಯ ಕೆಲ ಮುಸ್ಲೀಮರಲ್ಲಿ ಅಡಗಿರುವ ನೈಜ ಮಾನಸಿಕತೆ ಅರ್ಥವಾಯಿತು.ಅಸಾದುದ್ದೀನ್ ಓವೈಸಿಯಂತಹ ದೇಶದ್ರೋಹಿ ಹೇಳಿಕೆಯನ್ನು ಕೊಟ್ಟಂತಹ ಸಂಸದನನ್ನು ನಾವು ಮತ್ತು ನಮ್ಮ ಸರ್ಕಾರ ಸಹಿಸಿಕೊಂಡಿರುವುದಕ್ಕೆ ನಾಚಿಕೆಯೆನಿಸುತ್ತದೆ. ದೇಶದ ಹಿತ ದೃಷ್ಟಿಯನ್ನೇ ಬದಿಗಿಟ್ಟು ಕೇವಲ ಮತಾಂಧತೆಯನ್ನು ಮೈಗೂಡಿಸಿಕೊಂಡಿರುವಂತಹ ಇಂತಹವರಲ್ಲವೇ ನಿಜವಾದ ಕೋಮುವಾದಿಗಳು. ಇನ್ನು ನಾವು ಕಣ್ಣುತೆರೆಯುವುದಾದರೂ ಯಾವಾಗ? ಇದೇ ಸಮಯದಲ್ಲಿ ಸೋದರ ಅಮೀರ್ ಖಾನ್ ರ ದೇಶಪ್ರೇಮದ ಮಾತು ಕೇಳಿ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು. ಇವರಲ್ಲಿ ಸ್ವಲ್ಪ ಮಟ್ಟಿಗಾದರೂ ನಿಜವಾದ ದೇಶಭಕ್ತರಿದ್ದಾರೆ ಎಂದು. ಹೌದು ನಿಜ ಹಿಂದುಗಳೇನು ಈ ದೇಶವನ್ನು ಗುತ್ತಿಗೆಗೆ ತೆಗೆದುಕೊಂಡಿಲ್ಲ. ಆದರೆ ಮುಸ್ಲಿಮರಲ್ಲಿ ಅನೇಕರು ಏಕೆ ಇನ್ನೂ ಧಾರ್ಮಿಕ ವ್ಯಾಮೋಹದಿಂದ ದೇಶದ್ರೋಹದ ಕಾರ್ಯಗಳಲ್ಲಿ ತೊಡಗುತ್ತಿದ್ದಾರೆ. ಮುಸ್ಲೀಂ ರಾಷ್ಟ್ರಗಳಲ್ಲಿ ಪರಕೀಯ ರಾಷ್ಟ್ರಗಳಲ್ಲಿ ವಲಸೆ ಬಂದ ಮುಸ್ಲೀಮ್ ರನ್ನು ಸಹಿಸುತ್ತಿಲ್ಲ. ಇನ್ನು ನಾವೇಕೆ ಪರಕೀಯರಿಗೆ ಅಕ್ರಮವಾಗಿ ಇಲ್ಲಿಗೆ ಬಂದವರಿಗೆ ಆಸ್ಪದ ಮಾಡಿಕೊಡಬೇಕು? ಈ ಪರಿಸ್ಥಿತಿಯಲಾಭವನ್ನು ಕೆಲವು ವಿದ್ರೋಹಕ ಸಂಘಟನೆಗಳು ಪಡೆದುಕೊಳ್ಳುತ್ತಿರಬಹುದು. ಹುಷಾರ್, ಅಂಥಹವರ ಮಾತುಗಳಿಗೆ ಬಲಿಪಶುಗಳಾಗಬೇಡಿ. ಇಂತಹ ಧರ್ಮಾಂಧ ಕಾರ್ಯಗಳಲ್ಲಿ ನಿರತರಾದ ಮುಸ್ಲೀಮ್ ಬಾಂಧವರೇ ತಿಳಿಯಿರಿ,ನಮ್ಮ ಮತ್ತು ನಮ್ಮ ಮಕ್ಕಳ ಜೀವನ ನಡೆಯುತ್ತಿರುವುದು ಇಲ್ಲಿ ಈ ದೇಶದಲ್ಲಿ. ನಮ್ಮ ಭವಿಷ್ಯವೂ ಕೊನೆಯೂ ಇಲ್ಲಿಯೇ. ಮತ ಸಾಮರಸ್ಯವೊಂದೇ ನಮಗುಳಿದಿರುವ ಪರಿಹಾರ. ಪ್ರತಾಪ್ ಜಿ ಯವರ ಈ ಮೇಲಿನ ಲೇಖನದಲ್ಲಿ ಉಲ್ಲೇಖವಾದ ಅಂಶಗಳನ್ನು ಗಮನಿಸಿ, ನಿಜವಾದ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಿ ಬನ್ನಿ ಸೋದರರೇ ನಾವು ಒಟ್ಟಾಗಿ ಭವ್ಯ ಭಾರತವನ್ನು ಕಟ್ಟೋಣ.

 7. patriot89 says:

  well said prathap..muslim community is not the problem,the people like owaisy r the biggest problems..uproot these darti ki bhojs.. jai hind

 8. Pratap Simha says:

  sure, go ahead

 9. Pratap Simha says:

  I block, only when someone makes insane comments, thats all

 10. Srinivasa S S says:

  I agree with prathap…. This is becoming too much…

 11. hindu says:

  all hindus should be united…thats the only solution

 12. shivakumar says:

  lets start revolution………….

 13. Mohangowda says:

  ನಿಮ್ಮ ಲೇಖನ ಓದಿ ಮನಸ್ಸಿಗೆ ತುಂಬಾ ನೋವಾಯಿತು, ಪ್ರತಿಯೊಬ್ಬ ಹಿಂದೂಗಳು ಇದನ್ನೂ ಅರ್ಥ ಮಾಡಿಕೊಳ್ಳಬೇಕು, ನಮ್ಮ ದೇಶ, ನಮ್ಮ ಸಂಸ್ಕೃತಿ, ನಮ್ಮ ಧರ್ಮ ಇವೆಲ್ಲ ಉಳಿಯಬೇಕು ಎಂದರೆ ನಮ್ಮಲ್ಲಿ ಒಗ್ಗಟ್ಟಿರಬೇಕು, ಕಾಂಗ್ರೆಸ್ ಪಕ್ಷವೆಂಬ ಮಾಹಾಮಾರಿ ಈ ದೇಶಕ್ಕೆ ಅಂಟಿದ ಒಂದು ರೋಗ, ಓಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ನಮ್ಮ ಮತ್ತು ಮುಂದಿನ ಪೀಳಿಗೆಯವರನ್ನು ಮೃತ್ಯುಕೂಪಕ್ಕೆ ತಳ್ಳುವುದರಲ್ಲಿ ಅನುಮಾನವೇ ಬೇಡ, ಕಾಂಗ್ರೆಸ್ ಪಕ್ಷ ನಮ್ಮ ದೇಶದಲ್ಲಿ ಅಳಿಯೋ ತನಕ ನಮ್ಮ ದೇಶದ ಹಣೆಬರಹ ಹೀಗೇನೆ. ಈ ಹಿಂದೆ ಚೈನಾ ವಾರ್‌ ನಲ್ಲಿ ನೆಹರು ತೆಗೆದುಕೊಂಡ ಕ್ರಮ ಅಸಹ್ಯ ಹುಟ್ಟಿಸುವಂತದ್ದು, ಇದನ್ನು ತಿಳಿಯಬೇಕಾದ್ರೆ ರವಿ ಬೆಳಗೆರೆ ಕನ್ನಡಕ್ಕೆ ಅನುವಾದಿಸಿರುವ “ಹಿಮಾಲಯನ್ ಬ್ಲಂಡರ್” ಪುಸ್ತಕವನ್ನು ಪ್ರತಿಯೊಬ್ಬರು ಓದಬೇಕು, ಓದಿದರೇ ಕಣ್ಣಲ್ಲಿ ನೀರು ಬರದೇ ಇರದು,

 14. INDIAN says:

  Pls i request you all Islamic friends. better i will use dear India people pls be Indian “Amar Javan” is not only Hindus pride it’s pride of India. pls be Indian. if you make these non sense things the day will be not away that India again in the hand of other.

  when we go out side the India no one will ask about religion they identify us by INDIA.

  INDIA= Hindu + Muslim+ Christian+ Sikh + Buddhism +Jain+many more.

  Pls Be a Indian first.

 15. Suprabha says:

  tumbaa chennagide pratap sir. ee vishaya ishtu gahanavaadudaadaroo yake polititians idara bagge thale kediskoltaa illa antale artha aagtilla.. desha musalmaanara swatto? athava prajegalu deshada swatto? tileetilla.. dayavittu ee charcheyanna karnaatakada prati patrakartanoo maadabekaaddu.. ee nittinalli nationaised charchegalaagali

 16. Harish says:

  Dear Pratap,

  while reading this article, my blood was boiling….. majority muslims of our nation are not Indians by heart.. they just as a muslims…. very sad….

 17. Keshav says:

  Well said Prathap.
  ಅತ್ಯಂತ ಸಮಯೋಚಿತವಾದ ಲೇಖನ. ಮಡುಗಟುತ್ತಿರುವ ನಮ್ಮ ಆಕ್ರೋಶಕ್ಕೆ ನಿಮ್ಮ ಲೇಖನ ಕನ್ನಡಿ ಹಿಡಿದಂತಿದೆ.
  “ಕಾಂಗ್ರೇಸ್ ಹಟಾವೋ ದೇಶ ಬಚಾವೋ”

 18. Amitkumar says:

  ಅಕ್ರಮ ಭಾಂಗ್ಲಾದೇಶದ ಒಳನುಸುವಳರನ್ನು ತಡೆಗಟ್ಟದಿದ್ದರೆ ಭಾರತ ಮುಂದೂಂದುದಿನ ಕೇವಲ ಇತಿಹಾಸ ವಾಗುವದರಲ್ಲಿ ಯವುದೇ ಅನುಮಾನವಿಲ್ಲ ಭಾರತದ ಘನವೆತ್ತ ಪ್ರಜೆಗಳು ಅಥಾ೯ಥ೯ ದೇಶಪ್ರೇಮಿಗಳು ಎದ್ದೇಳದಿದ್ದರ ಭಾರತ ಚಿದ್ರವಾಗುವುದು. ಭಾರತದಲ್ಲಿಯೇ ಇದ್ದುಕೊಂಡು ಆಂತರಿಕ ಅಬದ್ರತೆಯಿದೆ ಎಂದರೆ ಇನ್ನು ನಾವು ಅನ್ಯದೇಶದ ಯುದ್ದವನ್ನು ಎದುರಿಸಲು ನಾವು ಎಷ್ಟರ ಮಟ್ಟಿಗೆ ಸಾಧ್ಯವೇಂಬ ಪ್ರಶ್ನೆ ಭಾರತಿಯರನ್ನ ಕಾಡದೇ ಇರಲಾರದು ಎಳಿ ಎದ್ದೇಳಿ ದೇಶವನ್ನ ಉಳಿಸಿ

 19. G.Sreedhar shenoy says:

  Sir, while reading i feel like this article should reach to media govt.leaders, ears and especially muslims should read and correct themselves after all they have born here,living here,will die here,
  they require all the facilities from govt every thing from govt and after enjoying it forget being loyal to our country which fed them with water, air, food, brotherhood, love and affection , they are spreading enemity in our country. they are fighting for the people who are nowhere related to them expect religion.
  i think the media instead of showing dirty programms and issues they should play bigger role in educating the people instead playing politics .
  mr. pratap simha thanks for bringing such issues to public.

 20. The reason for muslim atrocities, hindus are the most law abiding & peace loving people, tolerant with other religions hence Mumbai & Assam voilence, ethnic cleansing of kashmir inhabitants.etc…..

 21. can anyone figure out the practical permanent solution for all this problems?

 22. virugali says:

  istu oodugaru response maadiddare. adaralli obba turka(muslim) ilvalla.avaralli obba kooda deshabhakti iron ilva.avaranna bhandavaru anta karitaaralla.naachike aagabeku.neevu lekhana bariyod aste aagabaardu cangress naayakara interview maadi avaru maadiro anyayavanna avarige tilisiheli. inta lekhana galanna avau oodode illa.avarige inthadella kaanodilla. avara kannu kurudu.next is KERALA

 23. Vishwas says:

  Hello Pratap,

  I really like your article. But I have a suggestion on the title. I feel it is more appropriate if the article is titled as, “ದೇಶಪ್ರೇಮಕ್ಕಿಂತ ದೊಡ್ಡದೇ ಮತಪ್ರೇಮ? ” because, I presume you are talking about the religion here.
  Religion does not translate to ‘dharma’ it translates to ‘mata’. Because dharma implicitly puts the country above religion. Please correct me if I am wrong.

  Vishwas

 24. Hi Pratap,

  After some time, when everybody forgets the issue of “ASSAM RIOT” zakir Naik will arrange a press conference and tell everyone new story…..

  Just see, what he is telling about Gujrat riot…..
  http://www.youtube.com/watch?v=lowb5aKM_XA

  Naavu kooda, ide tara difference maadi helabeku. Adu nimmantha Juronlist galige maatra saadhya.

  Have you observed one thing?
  When Mangalore home stay issue happened, Muthalik apologised in media.
  And told, if the law permits we are ready to give any tough punishments to these people.
  Now these people are screwing up our monumnets, not even a single leader from their side, raising a voice.

  Regards,
  Haterof_Zakirnaik

 25. Lets tell everybody about the congress origination……
  http://www.youtube.com/watch?v=FmwhMY2iqtQ

  BTW…. I would appreciate, if you moderate it and put it…. even if you delete also no probs. I just want to convey and write articles, and educate people about cong.

 26. Siddu shingadi JALALPUR.. says:

  Hats off u DESH BHAKTA mr. pratapji.. Uppu tind manege droha bagitaealla ivarige nachike ilva, ivar dharmadali heege ideya. Intha kachada naigalige buddhi kalisalu pratiyobbaru kaikudisale beku.. Nenne mumbai AZAD maidanadali idar prati uttarawagi allin jana chaluwali nadesidaru adarali 75000 jana hindugalu kudidaru. Ade tarahanavellaru kuda khandisale beku.

 27. Vithal Navade says:

  Really great article, It’s awakening, alarming & cautioning to all Hindu’s. Also it is shame on everyone for not protecting our self, our Religion and Nation. Everyone chant the Mantra of “Dharmo Rakshathi Rakshithah”, but who will protect? Are we waiting Shriman Narayana to take one more Avatara, no his is everywhere and in everyone’s soal. My friend please wake up, this is the time to unite ourselves and protest it strongly. Never allow anyone to dominate on you and our religion, ask them to respect the nation and religion (Hindutva) of this country.

  Jai Hind.

 28. Ullekh Hegde says:

  The people who are responsible for these things are Hindus. We should blame ourselves for this. Shame on us. We can’t even fight for our rights. Our lack of self respect, greediness and lack of unity will mark the end of great ‘Sanathana Dharma’ soon. We are running away from Dharma, which will ultimately result in our extinction from this planet. At least now we should all wake up and do something…..

 29. Narayan says:

  Pls translate your articles in English and publish in your web site, I am tired of explaining your articles to my colleagues here.

 30. Deepak says:

  ಮೊದಲು ನಮ್ಮ ಹಿಂದೂ ಗಳಿಗೆ ದೇಶದಲ್ಲಿ ಏನ್ ನಡಿತಾಯಿದೇ ಅಂತನೇ ಗೋತ್ತಿಲ್ಲ
  ತಿಳಿಸೋಕೆ ಹೋದ್ರೆ ನಮ್ಮನ್ನೇ ದೊಡ್ಡ ದೇಶ ಪ್ರೇಮಿ ಅಂತರೆ
  ಮಾದ್ಯಮದವರಂತು ಗಲೀಜ್ ತಿಂದು ಸುಮ್ಮನಿದ್ದರೇ ಇನ್ನು ಪ್ರಗತಿಪರ ಸಂಘ ಸತ್ತಿದೆ, ಮಾದ್ಯಮದಲ್ಲಿ ಪ್ರಚಾರಕ್ಕಾಗೆ ಬರುವ ನಾಯಿಗಳು ವಿರೋದಿಸಲು ತಾಕತ್ತಿಲ್ಲ, ಅಸ್ಸಂ ಜನರು ಹೋರಡುವಾಗ ತಿಂಡಿಕೋಟ್ಟ ಕೂಡಲೇ, ಕಾಂಗ್ರೇಸ್ ನಾಯಿಗಳು ನಮ್ಮ ಊಟ ಬೇರಯವರಿಗೆ ಧಾನ ಮಾಡತ್ತಯಿದ್ದರೇ ಎಂದು ಕೂಗುತ್ತಿದ್ದವು.

  yada yada dharmasya sambhavami yuge yuge
  ನಿಜವಾಗಿ ಯಾರದರು ಹಿಂದೂಗಳನ್ನು ಒಂದು ಮಾಡಲು ಹುಟ್ಟ ಬೇಕು?

 31. Lokesh says:

  Hi Prathap,

  Is there a way where we change the face of national media if yes how?… So many intelligents are working for India… why dont they have a strategy for us to follow… what do you think will change… i want to support this in a right way… i want to work towards it please direct me to right people… please mail me about how i should progress…what i can do… i have seen the Conversions also as a big problem in bangalore itself… Please let me know where to start from.

  Thanks,
  Lokesh

 32. Vishal says:

  This is really sad to hear that still small hearted and small minded people like you (Pratap) exist in india and just because of people like you we have so many fights between Hindus, Muslims, Christians, Sikhs. All in the name of religion. So many fools read foolish articles like what u have written and go blindly talking about religion. Every religion in this worls talks only about peace, let it be hindu, muslim, chritianity. Its the people and followers of these religion who spoil the peace and bring disgrace to all. whats the difference between u (pratap) and those terrorist leadres of lashkar sitting in pakistan. I dont find any difference. they provoke muslims with their talks and u provoke hindus with urs. both asking people to kill each other in the name of religion. SHAME ON U for calling urself a true INDIAN. If u really love India do something good for the people of India than only for Hindus. Be a Terror for the politicians of India and not a terrorist for the people of India.
  Hope this will get some change in you and you will become a better Indian Citizen soon.

  Jai Hind.
  Mera Bharat Mahaan,
  Satya Meva Jayate

 33. Super article sir
  assamm nalli hindugala mele bangla valase muslimarinda nededa dali ennu kelave samayadalli namma rajyadallu nedeyabahudu.
  Akrama bangla valasigaru deshada moole mooleyallu eddare. Hindugalinda yellivarege kriyege pratikriye baruvudillavo allivaregu hindugalu ede reeti daaligolagagabekaguvudu.
  Godra hatyakandada nantara Gujaratinalli hindugalu kotta pratikriye deshadellade hindugalinda bandaga matra hindugalige vuligala.
  Thanks pratap sir for ur impormation

 34. Rajendra says:

  Great info prathap…

  I was just searching if any musalman has commented anything on this article…

  Hindu and Muslim should be united..

  H_nd_ , M_sl_m
  we are incomplete without “I” and “U” (Hindu and Muslim).

  More than anything “WE ARE INDIANS”

 35. Nish says:

  Well Said Prathap Simha.. The way you write the ariticle with Statistics is very interesting and gives a real picture. However many of them will deny the fact written by you. Whatever it might be but truth is truth and you have said in a proper way.. We all have to create awareness about this… Its just not about reading the article and ignoring…. have to think and work on this or else god have to save us..

 36. vinay says:

  hi sir ,,,,,,,your article is good ……….keep on writing . thanks once again for the article

 37. Chinmay Gowda says:

  Hatts Off Prathap Sir.

 38. susanna says:

  Vedagale Brahmins, Kshatriya, Vaisyas, Shudras and Untouchables antha hindugalanna bere bere madi ittive. Hagiddaga oggattu baralu hege sadhya. Obba press navanagi janarige news kotre saku nimma siddhantana avara mele herodu beda. Yake janaranna rocchige ebbisthira, helodanne thannage heli. Bari modi, advani, vajpayee anthiralla nivenu BJP brand ambasidara, ivarinda mathrane deshada udhara? EE tharahada galate deshakkenu hosathalla onde jathi, matha iro manegalalle nurentu ragale iddaga ishtondu tara tarahada janariruvaga galate agodu uthpreksheyalla. Intha eshto galategalanna politicians swarthakkagi upayogiskondu parade hinde nintu samanya janara prana harana madiddare.
  Obbaranna mathobbara mele ethi katti moju nodabedi, idarinda nammantha samanya janarige kashta.

 39. mallu says:

  ಪ್ರತಾಪ ಜಿ ಯವರ ಈ ಲೇಖನಕ್ಕೆ ನನ್ನ ಅನಂತ ದನ್ಯವಾದಗಳು

  ಈ ಮೇಲಿನ ಲೇಖನ ಓದಿದ ನಂತರ ನನಗೆ ನಮ್ಮ ಬಗ್ಗೆ ಅಪರಾಧಧ ಮನೋಬಾವ ಬೆಳೆಯುತ್ತಿದೆ. ಏಕೆಂದರೆ ದೇಶದ್ರೋಹ ಕೆಲಸ ಮಾಡುವವರನ್ನು ಅಪರಾಧಿಗಳು ಎಂದು ಪರಿಗಣಿಸುವ ನಾವು ಅಂತಹವರನ್ನೇ ಗೆಲ್ಲಿಸಿ ರಾಷ್ತ್ರ ನಡೆಸುವ ಜವಾಬ್ದಾರಿ ವಹಿಸಿಕೊಟ್ಟು ಅಪರಾಧಿಗಳಾಗಿದ್ದೇವೆ.

 40. kumar g e gowda says:

  weldon mr.pratap simha avare,neevadaru eevicharavanna vk nalli baredu namma jada hididiro RAAJAKARINIGALIGE swalpa churuku muttisi……….. jai hindusthan

 41. Ashwath Bhakti says:

  I want to tell one thing to ‘Students LVBV Hbd’ it’s not a time to wake up all hindus, but it is a time to wake up true Indians….. Stop putting it on one side, it’s not an attack on Hindus, instead on Indians…..

 42. Deepthi says:

  Nice article Pratahp. Thank you very much 🙂

 43. chinmay says:

  Nice article must say ! …the facts and the views very inspiring,yes i completely agree on the fact that the after effects of the Assam violence in Mumbai can’t be justified in any possible sense.Its a epidemic the whole thought process needs to be changed,not only this incident but my generation is running low on patience and rationality. We are being driven by impulses and during which we loose our sense of discretion which results in such blunders (one in mumbai and the statement in parliament ). But do we have a potential solution for this menace ? changing the mentality of a generation is the right thing,but is too far fetched.It can be realized if mapped with a action plan.And we lack that.
  The issue is we don’t respect our own religion this may sound harsh but is true. We don’t fall short to crack jokes on our own deities, we are fine if they are mocked at in television commercials or cinemas.
  We have the aesthetics to appreciate a sufi song in a hindi movie but a hindu sanskrit verse would prove to be a flop.
  If at all a ganapati visarjan song is shown most of the times its accompanied by a murder or a kidnap or related illegal stuff.
  I don’t say reforms are wrong reforming one’s religion and loosing respect for it are two entirely different thing and i feel sad to say that the latter one is dominant these days.
  So the need of the hour is a action plan a strategic move which could get us out of this mess or else i am afraid it may end up being too late for any change.

 44. chandrashekar.hc says:

  http://www.narendramodi.in

  On 31st August 2012, a yet another example will be set by Shri Narendra Modi, when he will speak with you face-to-face! It’s the 1st time in India that any politician will connect LIVE with the people directly!

 45. chandrashekar.hc says:

  plz friends chat with modiji on tat day

 46. Kotresh says:

  1.ALL HINDUS SHOULD GET UNIT & EMERGE AS A HUGE VOTE BANK
  2.IT SHOULD BE SUCH THAT ALL POLITICIAN MUST OBEY ON THIS VOTE BANK
  3.REMOVE THIS CONGRESS GOVT. FROM CENTRAL
  4.Mr. MODI HAS SUCH CAPACITY TO LEAD INDIA AS VISION-20-20 GIVEN BY MR. ABDUL KALAM .

 47. vinay says:

  Hi Pratap, This is good article.. after reading this, my blood is boiling. what to do? Only solution is mass destruction. This can do only by GOD. I pray to GOD.. Pl come and read GARUDA PURANA and then preach BHAGAVADGEETA.

 48. Vijayanarayan says:

  ಶತಮಾನದ ಮೂರ್ಖತನ ಮಾಡಿದ್ದೂ ಗಾಂಧೀಜಿಯೇ true .. you have that COURAGE, CONGRATS and THANKS

 49. Mohammed Nasir says:

  ಪ್ರೀತಿಯ ಪ್ರತಾಪ್,

  ನಿಮ್ಮ ಲೇಖನದ ಪ್ರಸ್ತಾವನೆಗೆ ನನ್ನ ಸಹಮತವಿದೆ. ಧರ್ಮ ಮತ್ತು ರಾಷ್ಟ್ರ ಇವೆರಡು ಬೇರೆ ಬೇರೆ. ಮೊದಲಿಗೆ ರಾಷ್ಟ್ರ ಮುಕ್ಕ್ಯ ಅಂತ ನನ್ನ ತಂದೆ ಯಾವಾಗಲು ನಮಗೆ ಹೇಳ್ತಾರೆ. ನಿಮ್ಮ ಲೇಖನದ ಪ್ರತಿ ಸಬ್ಜೆಕ್ಟ್ ಕೂಡ ಒಂದೇ ಕೋನದಿಂದ ಬರಯಲಾಗಿದೆ ಅಂತ ನನಗೆ ಅನಿಸುತಯಿದೆ. ನಮ್ಮ ಗಾದೆ ಮಾತಿನ ಹಾಗೆ “ಊರು ಕೊಳ್ಳೆ ಹೊಡಿದ ಮೇಲೆ ದ್ವಾರ ಬಾಗಿಲ ಹಾಕಿದರು” ಥರ ನಮ್ಮ ಪರ್ತ್ರಿಕೆ ಮತ್ತು ವಾಹಿನಿಗಳು ಇಗ ಅಸ್ಸಾಂ ಮತ್ತು ಬರ್ಮಾ ಗಳ ಬಗ್ಗೆ ವಿಸ್ತಾರವಾಗಿ ಯಾಕೆ ಬರಿಲಿಲ್ಲ? ಯಾಕೆ ಮಾದ್ಯಮಗಳು ಆ ವಿಷಯಗಳ ಬಗ್ಗೆ ವಾಸ್ತವ ಮಾಹಿತಿ ಕೊಡೊ ಕೆಲಸ ಮಾಡಲಿಲ್ಲ ? ಯಾವಾಗ sms ಮತ್ತು MMS ಗಳು ಜನರಲ್ಲಿ ಹರಡತೊಡಗಿದವೋ ಆವಾಗ ಯಾಕೆ ಮೀಡಿಯಾ ಜನರಲ್ಲಿ ಸರಿಯಾದ ಮಾಹಿತಿ ಕೊಡಲಿಲ್ಲ? ವಸುವಿದ್ದೀನ್ ಅವೆಸಿ ಹೇಳಿಕೆ ಕೊಟ್ಟಾಗ ಹಾಗು ತದನಂತರ ಯಾಕೆ ಮಿಡಿಯ ಜನರ ಹಾಗು ದೇಶದ ಏಕತೆ ಗೋಸ್ಕರ ಅಸ್ಸಾಂ ಹಿಂಸಾಚಾರದ ಬಗ್ಗೆ ಮಾಹಿತಿ ಕೊಡಲಿಲ್ಲ? ಯಾಕೆ ಪತ್ರಿಕೆಗಳು ಅಸ್ಸಾಂ ಹಿಂಸಾಚಾರವನ್ನು ಮುಖಪುಟದ ಬರಹ ಮಾಡಲಿಲ್ಲ?

  ಪ್ರತಾಪ್ ನಿಮ್ಮಂತಹ ಪ್ರದ್ನ್ಯಾವಂತ ಲೇಖಕರು ಯಾಕೆ ಮೇಲಿನ ಪ್ರಶ್ನೆಗಳ ಬಗ್ಗೆ ಮೊದಲೇ ಬರಿಲಿಲ್ಲ. ನೋಡಿ ಅಸ್ಸಾಂ ಜನರ ಬೆಂಗಳುರು ಇಂದ ವಲಸೆ ಹೋದಾಗ ಮಾದ್ಯಮಗಳು ಜನರ ತಪ್ಪು ವದಂತಿಗಳ ಬಗ್ಗೆ ಎಅಚ್ಹರಿಸಿದ್ರು ಮತ್ತು ಸರಿಯಾದ ಮಾಹಿತಿ ಜನರಿಗೆ ತಲುಪಿಸಿದರು. ಅದೇ ತರಹ ಮುಂಬೈ ಗಲಬೆಗು ಮುಂಚೆ ಯಾಕೆ ಮದ್ದ್ಯಮಗಳು ಆ ಕೆಲಸ ಮಾಡಲಿಲ್ಲ?

  ದೇಶಕಿಂಥ ಯಾವುದು ದೊಡ್ಡದಲ್ಲ. ಸ್ವತಂತ್ರ ಭಾರತಕ್ಕೆ ಎಲ್ಲ ಭಾರತೀಯರು ಒಂದಾಗಿ ಹೋರಾಡಿ ಗಳಿಸಿರುವುದು. ಅದೇ ರೀತಿ ಎದು ನಮ್ಮೆಲರ ಆದ್ಯ ಕರ್ತವ್ಯ ಈ ದೇಶದ ಏಕತೆ ಹಾಗು ಪ್ರತಿಷ್ಟೆನ ಕಾಪಾಡೋದು.
  ಸಿಂದಗಿ ಪಾಕಿಸ್ತಾನದ ಬಾವುಟ ಹರಿಸಿದ್ದು ರಾಷ್ಟ್ರ ಧ್ರೋಹ ಅಲ್ವೇ? ಆವಾಗ ಯಾಕೆ ನೀನು ಯಾವುದೇ ಗಂಭೀರ ಲೇಖನ ಬರಿಲ್ಲಿಲ? ಮಂಗಲೋರೆ ಚರ್ಚ್ ಮೇಲೆ ದಾಳಿನ ಯಾಕೆ ಕಟುವಾಗಿ ನಿಂಧಿಸಿಲ್ಲ? ಆವಾಗ ಅದು ವೆಕ್ತಿ ಮತ್ತು ಗುಂಮ್ಪಿಗೆ ಸಿಮಿತವಗ್ಗಿದು ಅಂತ ಬರಿತಿರಿ. ಮುಂಬೈ ಥರ ಗಲಭೆನ ಒಂದು ಕೋಮಿಗೆ ಗುರಿ ಮಾಡೋದು ಎಷ್ಟು ಸರಿ? ಇಸ್ಲಾಂ ಯಾವತ್ತು ಅಹಿಂಸೆ ಮತ್ತು ಕರುಣೆಯಾ ಬಗ್ಗೆ ಪ್ರತಿಪದಿಸುತ್ತೆ , ಹಿಂಸೆ ನ ಅಲ್ಲ.

  ಯಾರೋ ಮಡಿದ ತಪ್ಪು ಕೆಲಸಕ್ಕೆ ಮುಸಲ್ಮಾನರನ್ನು ಹಿಯಲಿಸುವುದು ಸರಿಯಲ್ಲ. ದಯವಿಟ್ಟು ಯಾವುದೇ ಘಮ್ಭಿರ ವಿಷಯಗಳನ್ನು ರಾಧಂತ ಆಗೋಕ್ಕೆ ಮುಂಚೆನೇ ವಾಸ್ತವ ಅಂಶಗಳನ್ನು ಪತ್ರಿಕೆ ಲಿ ಬರೀರಿ. ಇ ಎಲ್ಲ ಗಲಬೆಗಳು ಅಲ್ಪ ತಿಳುವಳಿಕೆ ಮತ್ತು ಸರಿಯಾದ ಮಾಹಿತಿ ಸಿಗದೇ ಇದೊದ್ರಿಂದ ಆಗಿದವೇ ಅಂತ ನನ್ನ ಅನಿಸಿಕೆ. ಮುಂದಾದರು ಪತ್ರಿಕೆಗಳು ಸರಿಯಾಗಿ ಹಾಗು ಸಮಯ ಪ್ರಡ್ನಇಂದ ಇದ್ರೆ ಮುಂದೊಂದು ದಿನ ಹೀಗೆ ಆಗೋದನ್ನ ತಪ್ಪಿಸಬಹುದು.

  ಇಂತಿ ಒಬ್ಬ ಹೆಮ್ಮೆಯ ಭಾರತೀಯ

  ಜಯ್ ಹಿಂದ್

 50. Pratap Simha says:

  I only wish, May ur tribe increase