Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Others > ಅನ್ಯರ ಬಗ್ಗೆ ಅವಹೇಳನಕಾರಿಯಾಗಿ “ಆಡಾಡ್ತಾ ಆಯುಷ್ಯ” ಕಳೆಯುತ್ತಿದ್ದೀರಾ ಕಾರ್ನಾಡರೇ?

ಅನ್ಯರ ಬಗ್ಗೆ ಅವಹೇಳನಕಾರಿಯಾಗಿ “ಆಡಾಡ್ತಾ ಆಯುಷ್ಯ” ಕಳೆಯುತ್ತಿದ್ದೀರಾ ಕಾರ್ನಾಡರೇ?

“ಮುಂಬೈ ಸಾಹಿತ್ಯ ಹಬ್ಬ ಶುಕ್ರವಾರ ಒಂದು ‘ದೊಡ್ಡ ನಾಟಕ’ಕ್ಕೆ ಸಾಕ್ಷಿಯಾಯಿತು. ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ಗಿರೀಶ್ ಕಾರ್ನಾಡ್, ನೊಬೆಲ್ ಪುರಸ್ಕೃತ ಸಾಹಿತಿ ವಿ.ಎಸ್. ನೈಪಾಲ್ ಅವರ ಮೇಲೆ ಟೀಕಾ ಪ್ರಹಾರ ಮಾಡಿ ಅವರೊಬ್ಬ ಮುಸ್ಲಿಂ ವಿರೋಧಿ ಎಂದರು. ರಂಗಭೂಮಿಯ ಬಗ್ಗೆ ತರಗತಿಯೊಂದನ್ನು ತೆಗೆದುಕೊಳ್ಳಲು ಅಲ್ಲಿ ಉಪಸ್ಥಿತರಿದ್ದ ಕಾರ್ನಾಡ್ ನೈಪಾಲ್ ಬಗ್ಗೆಯೇ ಉದ್ದುದ್ದ ಮಾತನಾಡಿದರು”!

ಸಿಎನ್್ಎನ್-ಐಬಿಎನ್ ಚಾನೆಲ್ ವೆಬ್್ಸೈಟ್್ನಲ್ಲಿ ಪ್ರಕಟಗೊಂಡ ವರದಿಯ ಈ ಮೊದಲನೇ ಪ್ಯಾರಾವೇ ಗಿರೀಶ್ ಕಾರ್ನಾಡ್್ರು ‘ದೊಡ್ಡ ನಾಟಕ’ ಮಾಡಿದರು ಹಾಗೂ ಅವರು ಅಲ್ಲಿಗೆ ಆಗಮಿಸಿದ್ದ ಉದ್ದೇಶವೇ ಬೇರೆ ಎಂಬುದನ್ನು ಸೂಚಿಸುತ್ತದೆ. ರಂಗಭೂಮಿ ಬಗ್ಗೆ ತರಗತಿ ತೆಗೆದುಕೊಳ್ಳುವಂತೆ ಇವರನ್ನು ಅಲ್ಲಿಗೆ ಆಹ್ವಾನಿಸಿದ್ದರೋ ಅಥವಾ ನೈಪಾಲ್ ಬಗ್ಗೆ ಮತ್ಸರವನ್ನು ಕಾರಿಕೊಳ್ಳುವುದಕ್ಕೆ ವೇದಿಕೆ ಮಾಡಿಕೊಡುತ್ತಿದ್ದೇವೆ ಬನ್ನಿ ಎಂದು ಕರೆದಿದ್ದರೋ? ಜೀವಮಾನದ ಸಾಧನೆಗಾಗಿ ‘ಲಿಟರೇಚರ್ ಲೈವ್್’ ಪುರಸ್ಕಾರವನ್ನು ನೈಪಾಲ್್ಗೆ ನೀಡಿದರೆ ಕಾರ್ನಾಡರ ಎದೆಯನ್ನು ಚುಚ್ಚಿದ್ದೇನು?

ಹೌದು, ಕಾರ್ನಾಡ್ ಹೇಳುವಂತೆ ನೈಪಾಲ್ ಭಾರತದ ಬಗ್ಗೆ ಮೂರು ಪುಸ್ತಕಗಳನ್ನು ಬರೆದಿದ್ದಾರೆ. “ಅವರ ಮೊದಲನೆಯ ಪುಸ್ತಕ ‘ಎ ವೂಂಡೆಡ್ ಸಿವಿಲೈಜೇಷನ್್’ನಲ್ಲೇ ಮುಸ್ಲಿಮರ ಮೇಲೆ ಅವರಿಗಿರುವ ಅತಿಯಾದ ದ್ವೇಷ ಕಾಣುತ್ತದೆ. ಪುಸ್ತಕದ ಶೀರ್ಷಿಕೆಯಲ್ಲಿ ಬರುವ ‘ವೂಂಡ್್’(ಗಾಯ) ಬಾಬರನ ಆಕ್ರಮಣದಿಂದಾಗಿ ಭಾರತದ ಮೇಲಾದ ಗಾಯವನ್ನು ಸೂಚಿಸುತ್ತದೆ. ಆ ಕೃತಿಯಿಂದ ಇಲ್ಲಿವರೆಗೂ ಆಕ್ರಮಣಕಾರರನ್ನು ತೆಗಳುವ ಒಂದು ಅವಕಾಶವನ್ನೂ ನೈಪಾಲ್ ಬಿಟ್ಟಿಲ್ಲ. ಐದು ಶತಮಾನಗಳ ಕಾಲ ಭಾರತವನ್ನು ಬರ್ಬರವಾಗಿ ದಮನ ಮಾಡಿದರು, ಬಡತನವನ್ನು ತಂದರು, ವೈಭವಯುತ ಹಿಂದು ಸಂಸ್ಕೃತಿಯನ್ನು ನಾಶ ಮಾಡಿದರು ಎಂದು ನೈಪಾಲ್ ಆರೋಪಿಸುತ್ತಾರೆ” ಎಂದರು ಕಾರ್ನಾಡ್. ಇಷ್ಟಕ್ಕೂ ಕಾರ್ನಾಡರಿಗೇನಾಗಿದೆ? ನೈಪಾಲ್ ಬರೆದಿದ್ದರಲ್ಲಿ ತಪ್ಪಾದರೂ ಏನಿದೆ?

ಪರ್ಷಿಯನ್ ಸಾಮ್ರಾಜ್ಯವನ್ನು ರೋಮನ್ನರು ಹಾಳುಗೆಡವಿದರು, ಗ್ರೀಕ್ ನಾಗರಿಕತೆಯನ್ನು ಕ್ರೈಸ್ತರು ನಾಶ ಮಾಡಿದರು ಎಂದು ಹೇಗೆ ಇತಿಹಾಸದಲ್ಲಿ ಹೇಳುತ್ತಾರೋ ಭಾರತವನ್ನು ಹಾಳುಗೆಡವಿದ್ದೂ ಘಜ್ನಿ-ಘೋರಿ, ತುಘಲಕ್ ಮುಘಲರು ಎಂದು ಹೇಳಿದರೆ ತಪ್ಪೇನು? ಅಲ್ಲ, ಬಾಬರನೇನು ಭಾರತವನ್ನು ಉದ್ಧಾರ ಮಾಡುವುದಕ್ಕೆ ಬಂದಿದ್ದಾ? ಹಾಗೆ ಮಾಡುವುದೇ ಅವನ ಉದ್ದೇಶವಾಗಿದ್ದರೆ, ಆತ ಜನಿಸಿದ ಉಜ್ಬೇಕಿಸ್ತಾನವನ್ನೇ (ಮಧ್ಯ ಏಷ್ಯಾ) ಉದ್ದಾರ ಮಾಡಬಹುದಿತ್ತಲ್ಲವೆ? ಆಕ್ರಮಣಕಾರರ ಬಗ್ಗೆ ಮಾಡುವ ಟೀಕೆ, ವಸ್ತುನಿಷ್ಠ ವಿಶ್ಲೇಷಣೆಗಳು ಭಾರತೀಯ ಮುಸ್ಲಿಮರ ಟೀಕೆ ಹೇಗಾದೀತು? ಮುಸ್ಲಿಮರನ್ನು ಟೀಕೆ ಮಾಡಿದ ವ್ಯಕ್ತಿಗೆ ಹೇಗೆ ಪುರಸ್ಕಾರ ಕೊಡುತ್ತೀರಿ ಎನ್ನುವುದು ಕಾರ್ನಾಡರ ತರ್ಕವೇ ಆದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಬರೆದ ‘ಥಾಟ್ಸ್ ಆನ್ ಪಾಕಿಸ್ತಾನ್್’ನಲ್ಲಿ ಮುಸಲ್ಮಾನರ ಮನಸ್ಥಿತಿ ಬಗ್ಗೆ ಅಂಬೇಡ್ಕರ್ ಹೇಳಿಲ್ಲವೆ? ಹಾಗಾದರೆ ಅವರಿಗೂ ‘ಭಾರತ ರತ್ನ’ ಕೊಡಬಾರದಿತ್ತು ಎನ್ನುತ್ತೀರಾ?

ಮುಂದುವರಿದು ಕಾರ್ನಾಡ್ ಹೇಳುತ್ತಾರೆ-’ತಾಜ್ ಸ್ಮಾರಕ ಮುಘಲ್ ಕಾಲದಲ್ಲಿ ಇದ್ದ ಹಿಂದು-ಮುಸ್ಲಿಂ ಶೈಲಿಯ ಸಮ್ಮಿಲನದ ಪ್ರತೀಕ (ಅರ್ಥಾತ್ ಹಿಂದು-ಮುಸ್ಲಿಮರು ಭಾಯಿ ಭಾಯಿ ಆಗಿದ್ದರು)’ ಎಂದು ಇತಿಹಾಸಜ್ಞೆ ರೊಮಿಲಾ ಥಾಪರ್ ಮಾಡಿದ ವಿಶ್ಲೇಷಣೆಯನ್ನು ಟೀಕಿಸುವ ನೈಪಾಲ್, ಅದು ಆಕ್ರಮಣಕಾರರ ದೌರ್ಜನ್ಯದ ಸಂಕೇತ ಎನ್ನುತ್ತಾರೆ’. ಈ ಮಾತಿನಲ್ಲಿ ತಪ್ಪೇನಿದೆ? ಮುಘಲರ ಸಾಮ್ರಾಜ್ಯಕ್ಕಿರುವುದು ದೌರ್ಜನ್ಯದ ಇತಿಹಾಸವೇ ಅಲ್ಲವೇ? ಕಾರ್ನಾಡರೇ, ಜೌರಂಗಜೇಬ್ ಯಾರು? ಆತ ಕೂಡ ಮುಘಲ್ ರಾಜನೇ ಅಲ್ಲವೆ? ವಾರಾಣಸಿಯ ಕಾಶಿ ವಿಶ್ವನಾಥ ಮಂದಿರವನ್ನು ಕೆಡವಿ ಮಸೀದಿ ಕಟ್ಟಲು ಔರಂಗಜೇಬ್ 1669ರಲ್ಲಿ ಆದೇಶಿಸಿದನಲ್ಲ ಅದು ಹಿಂದು-ಮುಸ್ಲಿಂ ಸಮ್ಮಿಲನದ ಸಂಕೇತವೋ, ದೌರ್ಜನ್ಯದ ಪ್ರತೀಕವೋ? ಆತ ಹಿಂದುಗಳ ಮೇಲಷ್ಟೇ ವಿಧಿಸಿದ ತೆರಿಗೆ (ಜಝಿಯಾ) ಬಗ್ಗೆ ಯಾವ ವಿಶ್ಲೇಷಣೆ ಕೊಡುತ್ತೀರಿ ಜ್ಞಾನಪೀಠಿಗಳೇ?

‘ನೈಪಾಲ್ ಭಾರತದ ಬಗ್ಗೆ 3 ಪುಸ್ತಕಗಳನ್ನು ಬರೆದಿದ್ದಾರೆ. ಆದರೆ ಒಂದು ಪುಸ್ತಕದಲ್ಲೂ ಸಂಗೀತದ ಉಲ್ಲೇಖವಿಲ್ಲ. ಭಾರತದಾದ್ಯಂತ ಸಂಚರಿಸಿದ್ದೇನೆ ಎನ್ನುವ ಅವರು ಸಂಗೀತವನ್ನು ಗ್ರಹಿಸುವಲ್ಲಿ ವಿಫಲರಾಗಿದ್ದಾರೆ’ ಎಂದೂ ಹೇಳಿದ್ದಾರೆ. ಅಂದರೆ ಭಾರತವನ್ನು ಸಂಚರಿಸಿ ಇಲ್ಲಿನ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಸಂಗೀತವನ್ನೇ ಗ್ರಹಿಸದ, ಅದರ ಬಗ್ಗೆ ತಮ್ಮ ಪುಸ್ತಕಗಳಲ್ಲೆಲ್ಲೂ ಬರೆಯದ ವ್ಯಕ್ತಿ ಭಾರತವನ್ನು ಅರ್ಥಮಾಡಿಕೊಂಡಿರಲಾರ ಎಂಬುದು ಅವರ ಮಾತಿನ ಅರ್ಥ. ಇದೇ ಧಾಟಿಯಲ್ಲಿ ನಾವೂ ಜ್ಞಾನನಪೀಠಿ ಕಾರ್ನಾಡರನ್ನು ಕೇಳೋಣ. ನೈಪಾಲ್ ಭಾರತವನ್ನು ತಿರುಗಿದವರೇ ಹೊರತು ಭಾರತದಲ್ಲಿ ಜನಿಸಿದವರಲ್ಲ. ಆದರೆ ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು ಇಲ್ಲಿನ ಭಾಷೆಗಳಲ್ಲೊಂದಾದ ಕನ್ನಡದಲ್ಲೇ ಬರೆದ ನಿಮ್ಮ ಯಾವ ನಾಟಕಗಳಲ್ಲಿ ಭಾರತೀಯ ಸಂಸ್ಕೃತಿಯ ಪ್ರಧಾನ ಅಂಗವಾದ ಶಿಲ್ಪಕಲೆಯ ಬಗ್ಗೆ ಹೇಳಿದ್ದೀರಿ ಸಾರ್?

ಈ ಭರತಭೂಮಿಯ ಇತಿಹಾಸ ಗ್ರಂಥಗಳಿಗಿಂತ ಹೆಚ್ಚಾಗಿ ಗೋಚರಿಸುವುದು ನಮ್ಮ ಶಿಲ್ಪಕಲೆಗಳಲ್ಲೇ ಅಲ್ಲವೆ? ಸಂಗೀತದ ಬಗ್ಗೆ ನೈಪಾಲ್್ರನ್ನು ಪ್ರಶ್ನಿಸುವ ನೀವು ಶಿಲ್ಪಕಲೆಯ ಬಗ್ಗೆ ಎಲ್ಲಿ ಬರೆದಿದ್ದೀರಿ? ಶಿಲ್ಪಕಲೆಯನ್ನೇ ಅರಿಯದವರು ಭಾರತವನ್ನು ಹೇಗೆ ಅರಿಯಲು ಸಾಧ್ಯ? ಜತೆಗೆ ಈ ದೇಶದ ಸಂಸ್ಕೃತಿ, ಸಂಸ್ಕಾರದೊಳಗೆ ಮಿಳಿತಗೊಂಡಿರುವ ವೇದಮಂತ್ರದ ಬಗ್ಗೆ ನೀವು ಯಾವ ಕೃತಿಯಲ್ಲಿ ಬರೆದಿದ್ದೀರಿ?

ಹೀಗೆ ಕೇಳಿದರೆ ಹೇಗೆ ಅಸಂಗತ ಎನಿಸುತ್ತದೋ ನೈಪಾಲರು ಭಾರತೀಯ ಸಂಗೀತವನ್ನು ಗ್ರಹಿಸುವಲ್ಲಿ ವಿಫಲರಾಗಿದ್ದಾರೆ ಎಂಬುದೂ ಅಷ್ಟೇ ಅಸಂಬದ್ಧವಾಗುವುದಿಲ್ಲವೆ? ಬರೆದಿಲ್ಲ ಎಂಬ ಮಾತ್ರಕ್ಕೆ ಗ್ರಹಿಸಿಲ್ಲ ಎಂದು ಹೇಗೆ ಹೇಳುತ್ತೀರಿ? ಗ್ರಹಿಸಿದ್ದನ್ನೆಲ್ಲ ಬರೆಯಲೇ ಬೇಕೆಂಬ ನಿಯಮವಿದೆಯೇ? ಬರೆದರಷ್ಟೇ ಅರ್ಥಮಾಡಿಕೊಂಡಿದ್ದಾರೆ ಎಂದೇ?

ಅದಿರಲಿ, 2008ರಲ್ಲಿ ಆಗಿನ ಬೆಂಗಳೂರು ಪೊಲೀಸ್ ಕಮಿಷನರ್ ಶಂಕರ್ ಬಿದರಿಯವರು ಭಯೋತ್ಪಾದಕ ದಾಳಿಯ (ಜಿಲೆಟಿನ್ ಕಡ್ಡಿಗಳ ಸ್ಫೋಟ) ಹಿನ್ನೆಲೆಯಲ್ಲಿ, ಪಬ್್ಗಳಲ್ಲಿ ರಾತ್ರಿ 11 ಗಂಟೆ ನಂತರ ಲೌಡ್ ಮ್ಯೂಸಿಕ್ ಹಾಕಬಾರದು, ಬಾಗಿಲು ಮುಚ್ಚಬೇಕು ಎಂದು ಆದೇಶಿಸಿದಾಗ ನೀವು ಮಾಡಿದ್ದ ಪ್ರತಿಭಟನೆ ನೆನಪಿದೆಯೇ? ಪಬ್್ಗಳಲ್ಲಿ ಸಂಗೀತ ಕೇಳುವುದು ತಪ್ಪಾ? ನಡುರಾತ್ರಿವರೆಗೂ ಕೆಲಸ ಮಾಡುವವರು ವಿಶ್ರಮಿಸಿಕೊಳ್ಳಲು ಪಬ್ ಅಲ್ಲದೆ ಎಲ್ಲಿಗೆ ಹೋಗಬೇಕು ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದ್ದನ್ನು ಮರೆತಿಲ್ಲಾ ತಾನೇ? ಪಬ್್ಗಳಲ್ಲಿ ಭಾರತೀಯ ಸಂಗೀತವನ್ನು ಪ್ಲೇ ಮಾಡುತ್ತಾರಾ ಕಾರ್ನಾಡರೇ? ನೀವು ಅದನ್ನೇ ನಮ್ಮ ಸಂಗೀತ ಎಂದು ಭಾವಿಸಿದ್ದರೆ ಟ್ರಿನಿಡಾಡ್್ನಲ್ಲಿ ಜನಿಸಿದ ನೈಪಾಲ್್ಗೆ ನಿಮಗಿಂತಲೂ ಹೆಚ್ಚು ಸಂಗೀತ ಜ್ಞಾನವಿದೆ ಎಂದು ಭಾವಿಸಬಹುದಲ್ಲಾ?!

ಅದಿರಲಿ, ನೈಪಾಲರ ಸಂಗೀತ ಪ್ರಜ್ಞೆ, ಗ್ರಹಿಕೆಯನ್ನು ಪ್ರಶ್ನಿಸುವ ನೀವು, ಸಂಗೀತ ಯಾವುದರ ಒಂದು ಅಂಗವಾಗಿದೆಯೋ ಆ ‘ಭಾರತೀಯತೆ’, ‘ಭಾರತೀಯ ಸಂಸ್ಕತಿ’ಯನ್ನು ಎಷ್ಟು ಪಾಲಿಸುತ್ತೀರಿ, ಗೌರವಿಸುತ್ತೀರಿ?

ಇದು ವೈಯಕ್ತಿವೆನಿಸಬಹುದು, ಆದರೆ ನಿಮ್ಮ ಆತ್ಮಚರಿತ್ರೆ ‘ಆಡಾಡ್ತಾ ಆಯುಷ್ಯ’ದಲ್ಲಿ ನೀವೇ ಸಾರ್ವಜನಿಕವಾಗಿ ಹೇಳಿರುವುದರಿಂದ ಪ್ರಸ್ತಾಪ ಮಾಡಬಹುದು. ನಿಮ್ಮ ಹಾಗೂ ನಿಮ್ಮ ಪತ್ನಿಯ ನಡುವೆ ಮದುವೆಗೂ ಮುನ್ನ 17 ವರ್ಷ ಪ್ರಣಯ ನಡೆದಿತ್ತು. ಆ ಅವಧಿಯಲ್ಲಿ ನೀವೇ ಬರೆದುಕೊಂಡಂತೆ ಇಬ್ಬರ ನಡುವೆ ಒಪ್ಪಂದವಾಗಿತ್ತು. ನೀನು ‘ಹೇಗೆ’ ಬೇಕಾದರೂ ಇರು, ನಾನು ‘ಹೇಗೆ’ ಬೇಕಾದರೂ ಇರುತ್ತೇನೆ! ಇಬ್ಬರ ನಡುವೆ ಯಾವುದೇ ಕಟ್ಟುಪಾಡುಗಳಿಲ್ಲ! ಅದರ ಗೂಢಾರ್ಥವೇನು ಸಾರ್?! ನೀವು ಮದ್ರಾಸ್್ನ ಆಕ್ಸ್್ಫರ್ಡ್ ಯೂನಿವರ್ಸಿಟಿ ಪ್ರೆಸ್್ನಲ್ಲಿ ಮ್ಯಾನೇಜರ್ ಆಗಿದ್ದಾಗ ಮಧ್ಯಾಹ್ನ ಊಟದ ಸಂದರ್ಭದಲ್ಲಿ ನಿಮ್ಮ ರೂಮಿಗೆ ಬರುತ್ತಿದ್ದ ವಿವಾಹಿತ ಮಹಿಳೆಯ ಬಗ್ಗೆ ಖುಲ್ಲಂಖುಲ್ಲಾ ಬರೆದುಕೊಂಡಿದ್ದೀರಿ. ಹಾಗಾದರೆ ಹೇಳಿ, ನಿಮಗೆ ಭಾರತೀಯ ಮೌಲ್ಯದ ಬಗ್ಗೆ ಯಾವ ಗೌರವವಿದೆ? ಭಾರತೀಯತೆ ಬಗ್ಗೆ ಏನು ಗೊತ್ತು? ನಿಮ್ಮ ಯಾವ ನಾಟಕಗಳಲ್ಲಿ ಭಾರತೀಯತೆಯನ್ನು ಎತ್ತಿಹಿಡಿದಿದ್ದೀರಿ ಹೇಳಿ? ಅಂಜುಮಲ್ಲಿಗೆಯಲ್ಲಿ ಅಕ್ಕ-ತಮ್ಮನ ಕಾಮಕೇಳಿ ಬರೆದಿದ್ದೀರಲ್ಲಾ ಅದು ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ವಿಚಾರವೇ? ನೈಪಾಲ್ ಭಾರತೀಯತೆಯನ್ನು ಹುಡುಕಲು ಪ್ರಾಮಾಣಿಕವಾಗಿ ಪ್ರಯತ್ನಿಸಿದರು, ನೀವು ಜೀವನದುದ್ದಕ್ಕೂ ಭಾರತೀಯತೆಯನ್ನು ತಿರಸ್ಕರಿಸುತ್ತಾ ಬಂದವರು. ನಿಮ್ಮಂಥವರಿಂದ ನೈಪಾಲ್ ಸಂಗೀತದ ಪಾಠ ಹೇಳಿಸಿಕೊಳ್ಳಬೇಕಾ? ನೈಪಾಲ್ ಭಾರತದಲ್ಲಿ ಹುಟ್ಟಲಿಲ್ಲ, ಆದರೆ ತಮ್ಮ ಪೂರ್ವಿಕರ ನಾಡಾದ ಭಾರತವನ್ನು ಶೋಧಿಸಲು ಬಂದರು. ಅವರದ್ದು ‘ಪ್ರವಾಸ ಕಥನ’ ಶೈಲಿ. ಭಾರತದಲ್ಲಿ ಕಂಡಿದ್ದನ್ನು ಬರೆದಿದ್ದಾರೆ. ಮುಸ್ಲಿಮರು ಯಾವ ದೇಶಕ್ಕೆ ಹೋದರೂ ಅಸಹಿಷ್ಣುಗಳು ಎಂದಿದ್ದಾರೆ. ಅದರಲ್ಲಿ ತಪ್ಪೇನಿದೆ? ಅದು ಭಾರತೀಯರಾದ ನಮಗೆ ಗೊತ್ತಿರದ ವಿಚಾರವೇನು?

“The higher we soar the smaller we appear to those who cannot fly’ ಎಂಬ ಜರ್ಮನ್ ತತ್ವಜ್ಞಾನಿ ಫ್ರೆಡ್ರಿಕ್ ನೀಶೆಯ ಮಾತು ನಿಮಗೆ ಚೆನ್ನಾಗಿ ಅನ್ವಯವಾಗುತ್ತದೆ. ನೈಪಾಲ್ ಮಟ್ಟಕ್ಕೆ ಏರಲಾಗದೆ ಕೆಳಗೇ ಇರುವ ನಿಮಗೆ ಉನ್ನತಸ್ತರದಲ್ಲಿರುವ ನೈಪಾಲ್ ಸಣ್ಣ ವ್ಯಕ್ತಿಯಂತೆ ಕಾಣುವುದರಲ್ಲಿ ಯಾವ ಆಶ್ಚರ್ಯವಿದೆ? ನೀವು ಸಾಹಿತಿ, ನಾಟಕಕಾರನ ರೂಪದಲ್ಲಿರುವ ಅವಕಾಶವಾದಿ ರಾಜಕಾರಣಿಯಷ್ಟೇ. ಟಿಪ್ಪು ಸುಲ್ತಾನ್ ಕನ್ನಡ ವಿರೋಧಿ ಎಂದು ಆಗಿನ ಉನ್ನತ ಶಿಕ್ಷಣ ಸಚಿವ ಡಿ.ಎಚ್. ಶಂಕರಮೂರ್ತಿ ಟೀಕಿಸಿದಾಗ ನೀವು ಟಿಪ್ಪು ಪರವಾಗಿ ಬೊಬ್ಬೆ ಹಾಕಿದಿರಿ. ನಿಮ್ಮ ವಾದವನ್ನು ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪನವರು ವಾಕ್ಯ ವಾಕ್ಯವಾಗಿ ಸುಳ್ಳೆಂದು ನಿರೂಪಿಸಿದಾಗ ಭೈರಪ್ಪನವರ ‘ವಂಶವೃಕ್ಷ’ ಮತ್ತು ‘ತಬ್ಬಲಿಯು ನೀನಾದೆ ಮಗನೆ’ಗಳನ್ನು ನಿರ್ದೇಶನ ಮಾಡಿ ತಪ್ಪು ಮಾಡಿದೆ, ಅವು ಕಳಪೆ ಕೃತಿಗಳು ಎಂದಿರಿ. ನೀವು ಏನೂ ಆಗಿಲ್ಲದಾಗ ಹೆಸರು ಗಳಿಸಲು ಭೈರಪ್ಪನವರ ಕೃತಿಗಳು ಬೇಕಾದವು, ಜ್ಞಾನಪೀಠ ‘ವಿಜೇತ’ರಾದ ಕೂಡಲೇ ಅವು ಕಳಪೆ ಎನಿಸಿದವು. ಹಾಗೆಯೇ ಈ ಹಿಂದೆ ನೈಪಾಲ್್ಗೆ ನೊಬೆಲ್ ಬಂದಾಗ “Greatest living litterateur of Indian origin’ ಎಂದೆಲ್ಲ ಹೊಗಳಿ ಹತ್ತಿರಕ್ಕೆ ಹೋಗಿದ್ದ ನಿಮಗೆ ಈಗ ನೈಪಾಲ್ ಮುಸ್ಲಿಂ ವಿರೋಧಿಯಂತೆ ಕಾಣುತ್ತಿದ್ದಾರೆ. ಇಂತಹ ಧೋರಣೆಯಲ್ಲಿ ಕಾಣುವುದು ನಿಮ್ಮ ವ್ಯಕ್ತಿತ್ವದ ‘ಒಡಕಲು ಬಿಂಬ’ವೇ ಅಲ್ಲವೆ?

ಇಂಥ ನಿಮ್ಮ ಮನಸ್ಥಿತಿ ಅರ್ಥವಾದ ಕಾರಣದಿಂದಲೇ, ಮುಂಬೈ ಲಿಟರರಿ ಫೆಸ್ಟ್್ನ ಆಯೋಜಕರಾದ ಅನಿಲ್ ದಾರ್ಕರ್ ‘ನೈಪಾಲ್ ಬಗ್ಗೆ ಕಾರ್ನಾಡರು ಮಾಡಿದ ದಾಳಿ ಕಂಡು ನಮಗೇ ದಿಗ್ಭ್ರಮೆಯಾಯಿತು. ಇಷ್ಟಕ್ಕೂ ನಾವು ಅವರನ್ನು ಕರೆದಿದ್ದು ತಮ್ಮ ವೈಯಕ್ತಿಕ ರಂಗಯಾತ್ರೆಯ ಬಗ್ಗೆ ಮಾತನಾಡಿ ಎಂದೇ ಹೊರತು, ನೈಪಾಲ್್ಗೂ ಅವರಿಗೂ ಯಾವುದೇ ಸಂಬಂಧವಿರಲಿಲ್ಲ” ಎಂದಿದ್ದಾರೆ.

ಹುಬ್ಬಳ್ಳಿ-ಧಾರವಾಡದ ಕಡೆ ನಿಮ್ಮ ‘ಕನ್ನಡ’ದ ಬಗ್ಗೆ ಅಲ್ಲಿನ ಸಾಹಿತಿ ಮಂದಿ ಹೇಳಿಹೇಳಿಕೊಂಡು ಪಕಪಕ ನಗುತ್ತಾರೆ. ಕಾರ್ನಾಡ್ ಬರೆದ ಕನ್ನಡ(?)ವನ್ನು ಕನ್ನಡಕ್ಕೇ ತರ್ಜುಮೆ ಮಾಡಬೇಕು ಅಂತ. ಈ ಕೆಲಸವನ್ನು ಬದುಕಿರುವಷ್ಟು ಕಾಲ ಕೀರ್ತಿನಾಥ ಕುರ್ತಕೋಟಿ ಅವರು ಮಾಡಿದರು. ಅವರ ನಿಧನದ ನಂತರ ನೀವು ಬರೆದಿದ್ದು ಅಷ್ಟರಲ್ಲೇ ಇದೆ.

ನಿಮ್ಮ ಪ್ರಚಾರದ ನಾಟಕವನ್ನು ಸಾಕು ಮಾಡ್ರೀ ಕಾರ್ನಾಡರೇ. ಇಲ್ಲವೇ ನೇರಾನೇರ ಚರ್ಚೆಗೆ ಬನ್ನಿ. ತುಫಾಕಿ ಹಾರಿಸಿ ಓಡಿಹೋಗುವ ಬುದ್ಧಿಬೇಡ. ಅನ್ಯರ ಬಗ್ಗೆ ಅವಹೇಳನಕಾರಿಯಾಗಿ ‘ಆಡಾಡ್ತಾ ಆಯುಷ್ಯ’ ಕಳೆದಿದ್ದು ಸಾಕು!

59 Responses to “ಅನ್ಯರ ಬಗ್ಗೆ ಅವಹೇಳನಕಾರಿಯಾಗಿ “ಆಡಾಡ್ತಾ ಆಯುಷ್ಯ” ಕಳೆಯುತ್ತಿದ್ದೀರಾ ಕಾರ್ನಾಡರೇ?”

 1. jeevan says:

  yes nivu hellidu nija… namma desa yake higide antha nodidre adke adke intha (budijeevigalu) alla alla ajnannigale karana.. ivari desa,bhashe, yellavannu halu madidare… thumba bejaraguthe inthavaru yake namma pangadadalli hutidare antha…

 2. Aravind says:

  Ee “samagra saahitya”kke jnanapeeta padeda ella sahitigala bagge nanage endinindalu samshaya ide. Avarige ‘jnanapeeta’ sikkiddaadaru hege endu.

  Uttama baraha pratapare dhanyavaadagalu.

 3. one more best article. . . right about S L bairappa once,we wanna know about him.

 4. chandramowly says:

  ಶ್ರೀ ಪ್ರತಾಪ್ ಸಿಂಹ,

  ನಿಮ್ಮ ನೇರ ಧೀರ ಅಭಿವ್ಯಕ್ತಿಯನ್ನು ಗಮನಿಸುತ್ತಿದೇನೆ. ಅಭಿನಂದನೆ. ಈ ಬಗ್ಗೆ ಕನ್ನಡಪ್ರಭದಲ್ಲಿನ ನಿಮ್ಮ ಲೇಖನ ಹಾಗು ಇತರರ ಮಂಡನ ಖಂಡನಗಳನ್ನು ಗಮನಿಸಿದಾಗ, ಈ ಸಾಹಿತ್ಯ ಸಾಂಧರ್ಭಿಕದಲ್ಲಿ ಇಂದು ಡಿ.ವಿ.ಜಿ ನಮ್ಮೊಂದಿಗಿದ್ದಿದರೆ ಹೀಗೆನ್ನುತ್ತಿದ್ದರೇ ! ಎಂಬ ಕಲ್ಪನೆಯ ಐದು ಪದ್ಯಗಳು.

  ಜ್ಞಾನ ಪಿತ್ಥ

  ಎಷ್ಟನೋದಿದರೇನು? ಬರೆದು ಬೀಗಿದರೇನು?
  ನಷ್ಟಗೊಳದೊಳದೋಷದಹಮಿಕೆಯ ಬೀಜ
  ಗಷ್ಟುಹಿಡಿದಾಗ ಮತಿ ಹತ ಸೂಕ್ಷ್ಮಭಾವಗಳು
  ಸ್ಪಷ್ಟಬಾಹ್ಯಾಚರಣೆ – ಬೆಪ್ಪುಬೊಮ್ಮ

  ಆಟಕದಿ ನೋಟಕದೊಳಬ್ಬರಪ್ರಚಾರದಲಿ
  ಮಾಟದಿಂ ಜನಕೆ ವಿಭ್ರಮೆ ಮುಸುಕ ತೊಡಿಸಿ
  ನಾಟಕವನಾಡಿಸುತ ತಾನಪ್ರತಿಮನೆನುವ
  ಬೂಟಕವಶಾಶ್ವತವೊ – ಬೆಪ್ಪುಬೊಮ್ಮ

  ಆಳಕಿಳಿಯದೆ ತಳದ ವಸ್ತುವ ವಿಮರ್ಶಿಸುತ
  ನಾಳಿನಾಸೆಗೆ ಹೊಗಳೊ,ದೂಷಿಸಿಯೋ, ಮೌನ
  ಗಾಳಗಳ ಬಿಸುತ್ತ ಹೊಂಚುತ್ತ ಸ್ವಂತಿಕೆಯ
  ಬೇಳೆಗಳ ಬೇಯಿಸುವ – ಬೆಪ್ಪುಬೊಮ್ಮ

  ಖಂಡಿಸದೆ ವಿಷಯವನು ವ್ಯಕ್ತಿಯನು ನಿಂದಿಸುವ
  ಬಂಡಾಯ ಸಲ್ಲುವುದೆ ಸತ್ಯತರ್ಕದೊಳು
  ಮೊಂಡಾದ ಮತಿ ಯತಿಜ್ಞಾನಪಿತ್ಥದ ಫಲವೆ
  ಚಂಡಾಲಭಾಷೆಗಳೊ – ಬೆಪ್ಪುಬೊಮ್ಮ

  ಕನ್ನಡದೊಳೆಷ್ಟು ಕವಿಗಳ ನುಡಿ ನೆನಪಿನಲ್ಲಿಹುದು?
  ಚಿನ್ನಕೂ ಕಬ್ಬಿಣಕುಮೊಂದೆ ತಕ್ಕಡಿಯೇ?
  ರನ್ನ ಪಂಪನೊ ಬೇಂದ್ರೆ ಡೀವೀಜಿಯೇಂ ನಿಲಲು
  ನಿನ್ನ ನೆನಪುಳಿಯುವುದೆ – ಬೆಪ್ಪುಬೊಮ್ಮ

 5. ಕುಮಾರ says:

  “ಕುರಿತೋತದೆಯುಂ ಕಾವ್ಯಪರಿಣತ ಮತಿಗಳ್” ಎಂದು ಹೇಳುತ್ತಾನೆ ನಮ್ಮ ಕವಿರಾಜಮಾರ್ಗಕಾರ ಕನ್ನಡಿಗರ ಬಗ್ಗೆ. ಅವನು ಅಭಿಮಾನದಿಂದ ಹೇಳಿದ್ದನ್ನು ತಮ್ಮ ಬಗ್ಗೆ ವ್ಯಂಗವಾಗಿ ಹೇಳಬೇಕಾಗಿದೆ. ಸ್ವತಂತ್ರ ಭಾರತದಲ್ಲಿ ಯಾರು ಯಾರನ್ನ ಬೇಕಾದರೂ ಟೀಕಿಸಬಹುದು ಎನ್ನುವುದಕ್ಕೆ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸೀಮಿತಗೊಳಿಸಿಕೊಳ್ಳುವುದಾದರೆ, ತಮ್ಮ ಬರೆಹವನ್ನು ಓದಿ, ಮರೆತು ಸುಮ್ಮನಾಗಬಹುದೇನೋ! “ಭಾರತೀಯ ಮೌಲ್ಯ”ಗಳನ್ನೆಲ್ಲ ಅರೆದು ಕುಡಿದಿರುವವರ ಹಾಗೆ ಮಾತನಾಡುವ ತಾವು, ಹಾಗಂದರೇನು ಎಂಬುದನ್ನ ಬಿಡಿಸಿ ಹೇಳುವ ಕೆಲಸ ಮಾಡ್ತಿರೋ? “ಅಂಜುಮಲ್ಲಿಗೆಯಲ್ಲಿ ಅಕ್ಕ-ತಮ್ಮನ ಕಾಮಕೇಳಿ ಬರೆದಿದ್ದೀರಲ್ಲಾ ಅದು ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ವಿಚಾರವೇ?” ಎಂದು ಪೆದ್ದುಪೆದ್ದಾಗಿ ಕೇಳುವ, ವಿಶ್ವೇಶ್ವರ ಭಟ್ಟರ ಕೃಪಾಕಟಾಕ್ಷದಿಂದ ರಾಜ್ಯೋತ್ಸವ ಪ್ರಶಸ್ತಿ, ಸೈಟು ಮನೆ ಗಿಟ್ಟಿಸಿಕೊಂಡು ಪುಲಿಟ್ಜರ್ ಪ್ರಶಸ್ತಿ ಪಡೆದಿರುವ ಪತ್ರಕರ್ತನ ಹಾಗೆ ಬೀಗುವ ತಮ್ಮಂತವರಿಗೆ ಏನು ಹೇಳಬೇಕು? ಕಾರ್ನಾಡರ ಟೀಕೆಗಳಲ್ಲಿ ಸುಳ್ಳೇನು ಹುರುಳೇನು ಎಂಬುದನ್ನು ಒರೆಹಚ್ಚುವ ಕೆಲಸ ಮಾಡಬೇಕೇ ಹೊರತು, “ಕೂತಲ್ಲೇಟೀಕೆಮಾಡುವವ”(armchair critic)ನಂತೆ ಆಡಬಾರದು. “ಹುಬ್ಬಳ್ಳಿ-ಧಾರವಾಡದ ಕಡೆ ನಿಮ್ಮ ‘ಕನ್ನಡ’ದ ಬಗ್ಗೆ ಅಲ್ಲಿನ ಸಾಹಿತಿ ಮಂದಿ ಹೇಳಿಹೇಳಿಕೊಂಡು ಪಕಪಕ ನಗುತ್ತಾರೆ” ಎಂದು ಹೇಳುತ್ತೀರಲ್ಲ, ಎಷ್ಟು ಮಂದಿ ಸಾಹಿತಿಗಳು ಗೊತ್ತಿದ್ದಾರೇ ತಮಗೆ? ಕುರ್ತಕೋಟಿಯನ್ನ ಓದುವ ಕೆಲಸವನ್ನೇನಾದರೂ ಮಾಡಿದ್ದೀರೋ ಅಥವಾ ತಮ್ಮ ಗುರುಗಳಾದ ಭಟ್ಟರು ಎಂದೋ ಆಡಿದ್ದನ್ನು ಹಾಗೆಯೇ ಇಲ್ಲಿ ಗಿಳಿಪಾಠ ಒಪ್ಪಿಸುತ್ತಿರುವಿರೋ? “ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ” ಎಂಬ ನಮ್ಮ ವಚನಕಾರರ ಮಾತನ್ನ ಒಂಚೂರು ನೆನಪಲ್ಲಿಟ್ಟುಕೊಂಡ್ರೆ ಏನಾದ್ರೂ ಸಾರ್ಥಕವಾದ ಕೆಲಸ ಮಾಡಬಹುದು. ಇಲ್ಲದಿದ್ದರೆ, ಜೀವಮಾನವಿಡೀ ಹೀಗೆ ಅವರಿವರನ್ನ ಅಂದುಕೊಂಡು, ಆಡಿಕೊಂಡೇ ಕಾಲಕಳೆಯಬೇಕಾಗುತ್ತೆ…

  ಎಲ್ಲ ಒಳ್ಳೆಯದಾಗಲಿ…

 6. Arvind says:

  Shabash pratap, sariyaad jagakke fit ago Haage ittiddiya

 7. Dathathreya says:

  CHannaagi thuppikkidiraa Mr. Simhaji

 8. Dathathreya says:

  Girish karnad alla Nari Karnad

 9. GANGADHAR says:

  Girish Karnad is a man interested in exposing cheap gimiks and getting undue publicity

 10. umesh says:

  Hi Prathap,

  Very Nice, I learnt something about history.

  keep it up.

  Regard’s
  Umesh

 11. Kalavathi says:

  Dear Pratap,

  A beautiful article
  Bullshit to these so called pseudoseculiarists.
  Mr. karnad, we feel ashamed to call you an INDIAN.
  you seems to be out of your mind and responsibilities.
  In Kannada there is a PROVERB
  aravattakke arlu maralu,
  You are too old, get out of this country, if you really love muslims so much, just go to Pakistan, Afghanistan, nd praise.

  But Naipaul is free to express his respect and concern to the country of his origin.
  and what are you doing, may be searching for a back door entry into Politics

 12. ಅಸಾದುದ್ದೀನ್ ಓವೈಸಿ – ಒಂದು ವೇಳೆ ಬಾಂಗ್ಲಾ ಮುಸ್ಲಿಮರನ್ನು ವಾಪಸ್ ಕಳುಹಿಸಿದರೆ ಮುಸಲ್ಮಾನ ಯುವಕರ ಮೂಲಭೂತೀಕರಣಕ್ಕೆ ಸಿದ್ಧರಾಗಿ ಎಂದು ಆಗಸ್ಟ್ 8 2012 ರಂದು ಸಂಸತ್ತಿನಲ್ಲಿ ಇಡೀ ದೇಶಕ್ಕೇ ಧಮಕಿ ಹಾಕುತ್ತಿದ್ದರೆ, ದೇಶದ್ರೋಹಿ ಮಾತುಗಳನ್ನಾಡುತ್ತಿದ್ದರೆ ಏಕೆ ಗಿರೀಶ್ ಕಾರ್ನಾಡ್ ರವರು ಯಾವುದೆ ಪ್ರತಿಕ್ರಿಯೆ ಕೊಡದೆ ಕುಳಿತು ಕೊಂಡಿದ್ದರು?

 13. shashank says:

  sir i would like to ask why dont u send this note to THE HINDU paper or any national english daily,bcz some papers have been publishing articles which are justifing Karnad’s
  view…i hope u make effort in this,,please

 14. ranjan says:

  Normal people say 3 + 2 = 5. But Karnad & some so called intellectuals say that it is not 5 but it is 6. Because we are the Jnana Peetha awardees, so we must be different from normal people.
  Normally Jnana Peetha award will add the value of for those who got the award. But government has spoiled the value of Jnana Peetha by awarding it to Mr. Karnad
  Karnad protests when naxals dies out of police bullets but he wont talk anything when police dies out of the naxal bullet.

  So we should not give special attention to their headlong statements

 15. raghu says:

  Beautiful. Karnad should understand the real Indian history.

 16. Pavan says:

  you are correct i read the karnada in very young age yayathi, hittina hunja, anju mallige, hayavadana etc in every work he present just unsocial things afterwards i never try to read atleast on article of karnada he is very friend of our family but i doesn’t like im bit let him bark ananthamurthy and karnada both are cheaprated writers so i advice them to write some articles for playboy and other magzines………

 17. manohara says:

  super sir,,kaarnadnantha aviveki buddi jeevige ,bharatheyatheya paata kalisidderi,bharatadalli hutti ,elliya anna undu ,thayege droha maduva thaye gandarege ,buddi helalu neve agabeku,.hats up

 18. Ivarella…ondu hanta talupida nantara yakingadtaro…kevala prachar padeyuva gimikka..?

 19. Ivarigella enagide…kevala prachar padeyodakkagine higena…

 20. PRAVEEN says:

  its really true karnaad obba avakaashavaadi raajakarani iddante. bharatadalli hutti baratiyaragallikke anarha vyakti.

 21. Pavan Kumar says:

  Hi Prathap,

  I liked your column again. If he is educated he should go deep into history and realize it rather than to please some one, one should not comment negatively.

 22. Shriraksha says:

  I would love to translate this article to English just to spread the word around! All Indians need to know that Naipul is not an anti-Muslim, communal writer.

 23. sunil kumar says:

  karnadara barahagalannu odidaga nijakku eeta obba adarsha vyakthi yenisittu adareega ivara ee reetiya helike galinda ‘barahakku ivara badhukigu sambanda illaveno yenisuttide”.

 24. Ananda says:

  Impressive article. This man karnad behaves likes a politician.

 25. Pavan says:

  ಕಾರ್ನಾಡರು ಒಬ್ಬ ಹಿರಿಯ, ಗೌರವಾನ್ವಿತ, ಅತೀ ಬುದ್ಧಿವಂತ, ಅವಕಾಶವಾದಿ ಬರಹಗಾರ ಅನ್ನೋದನ್ನ ಸಿಂಪಲ್ಲಾಗಿ ತಿಳ್ಸಿದ್ದೀರ

 26. Siddarth says:

  Antavarige tavu secular anta kareisi kolla beku anta kevala vandu dharma or dharmadavaranna hiyalisuva khayali.. Duradrastakke Bharatada tumba antavare iddare.. Ivaru antavara vandu pratirupa..

 27. nandish says:

  wow, amazing article sir…. please tell this people frequently to keep quite. i think they can’t digest thier food without teasing people like modi, naipal or etc who is doing good to this country.

 28. Anand says:

  Good One.

 29. divyavinay says:

  pratapji,,,, namma baggge olle matdidre vicharvadigala kannu kempu yeke agutthe,,,,,, ? nijvaglu nobel puraskrtaru adida mathu satya kaleda savira varshagalli baratha da mele nijvaglu praharane agirodu…………….. thumba olle lekana

 30. hesaru bEDa says:

  ನಮ್ಮ ಭಾರತದೇಶವು ಹಾಳಗಲು ಈ ಪತ್ರಕರ್ತರು ಕಾರಣ ಪತ್ರಿಕಾಕಾರರೇ ಮೊದಲನೇ ದೇಶ ದ್ರೋಹಿಗಳು ಇವರು ಯಾವ ದೇಶದಲ್ಲಿ ಈ ಅವಿದ್ಯಾವಿದ್ಯಾವಂತರಾದ ಇವರು ಸರಿಯಾಗಿರುತ್ತಾರೋ, ಅವರು ಸರಿಯಾಗಿದ್ದರೇ, ಆ ದೇಶ ರಾಜಕೀಯವಾಗಿ ನ್ಯಾಯ ಧರ್ಮ ( ಧಾರ್ಮಿಕವಾಗಲ್ಲ ) ಶಿಸ್ತು ಗಳಿಂದ ಸಂವೃದ್ಧಿಹೊಂದಿ ಆ ದೇಶದ ಸುತ್ತಲು ಸುಂದರದಿ ಸುಖದಿ ಸುಪ್ರಸಿದ್ಧವಾಗಿ ಸುಭಿಕ್ಷೆ ಸುಭದ್ರತೆ ಸುಚಿತ್ವದಲಿ ಸುಪಥದಲ್ಲಿ ಸುಧಾರಣೆ ಕಂಡು ಬಹು ಏತ್ತರಕ್ಕೆ ಹೋಗಬಹುದು. ಆದರೇ, ನಮ್ಮದೇಶದ ಪತ್ರಿಕೆಗಾರರು ನಾಚಿಕೆಗೇಡಿನ ಜನ ಹಣಕ್ಕೂ , ಗೌರವಕ್ಕೂ, ಅಧಿಕಾರಕ್ಕೂ , ಭಯಕ್ಕೂ ಹೆದರಿ ಭಯದಿಂದ ಬರೆಯುತ್ತಾರೆ. ಈ ದೇಶದ ಜನ, ಸಮಾಜ, ವಿದ್ಯಾಅವಿದ್ಯಾವಂತರು ಸಂಕುಚಿತ ಭಾವನೆಯುಳ್ಳವರಿಂದ ಹೊರಗಿನ ಪತ್ರಿಕೆಗೆ ಅವಕಾಶ ಸಿಗದೇ ಈ ದೇಶ ಅಂಧಪತನಕ್ಕೆ ಕಾರಣವಾಗಿದೆ, ಅದರಿಂದಲೇ ನಾವು ಬಯಿಸಿದ ಹೊರಗಿನವರು ವಿದೇಶಿ ಪತ್ರಕರ್ತರು ಬಂದಿದ್ದರೇ, ಈ ನೋಟವಿರುತಿರಲಿಲ್ಲ ಈ ದೇಶದ ಭವಿಷತ್ಕಾಲ ಸುಭದ್ರವಾಗಿರುತ್ತಿತ್ತು.

  ಭಾರತೀಯ ಪತ್ರಕರ್ತರ ತಪ್ಪುಗಳನ್ನು ಹೇಳಲು ಹೋದರೇ ದೊಡ್ಡ ಪಟ್ಟಿಯನ್ನೇ ಮಾಡಬೇಕಿರುತ್ತದೆ. ಮುಂದೆ ನೀವಾಗಿ ಕೇಳಿದರೇ ಬರೆಯುತ್ತೇನೆ.

 31. Keshav says:

  Super Pratap,
  ನಿಮ್ಮ ಪ್ರಚಾರದ ನಾಟಕವನ್ನು ಸಾಕು ಮಾಡ್ರೀ ಕಾರ್ನಾಡರೇ…,

 32. devaraj says:

  hi.. good article

 33. Kishore says:

  Very nice Prathap,

  You inspire us and motivate us to be Indian and a Hindu.

 34. manjunath says:

  budhijivi=budhibrame

 35. vani says:

  prathap sima is a mad

 36. shran says:

  your bethale jagathu 9th edition is really awesome.And your Narendra modi book is enthusiastic…………!

 37. Prakash says:

  Sir,

  I am really speechless after reading this article. I really appreciate your guts and courage to publish the truth and not giving a damn to anybody. Please keep it up. You have to trust me on the fact that I got goose bumps while reading this article. I strongly feel MR. Girish Karnad doesnt deserve Gnanapeeta award or any other awards. Whatever questions you asked Mr. Girish are very much justifying and true. Let him answer if he is a real Indian. I truly thank you from my heart for this article. You are just amazing. God bless you.

  Regards,
  Prakash

 38. Anand KL says:

  True analysis Pratap. Karnad will never come for open debate. Ivathu jnanave ello idhe, peethave ello idhe … peethada mele jnana illa !! nijavada jnana iravrige peethada chinthe irolla …. karnad obba samayasadhaka ..ivarigella devare ondu daari thorisbeku.

 39. Kashyap says:

  Great Brother! Amazing article!

 40. Proud to be a Hindu says:

  karnad will be awarded VC post in next couple of years for licking secularists boots

 41. Guru says:

  Great article Mr Pratap.. … Keep writing these kind of articles…
  If karnad has guts, then he will come for open Debate with u…..

 42. Sangamesh says:

  Awesome Pratap, you just know how to hit a Sixer when someone bowls a “bad” delivery. Hats off and keep going……

 43. M.S.SUBRAMANYA says:

  Dear Shri Pratap Simha

  You have been very aptly named. One should only be a lion to speak in bold terms.
  Keep it up.

 44. vishwajith says:

  let him write a book which is valuable like naipal……then speak…….otherwise a dog also bark on elephant…..that’s it……

 45. Amar Karanth says:

  Well, I have not read Naipaul. but I have read Karnad’s. First of all he is a good play write. the topics has generally surrounded around sexuality in some plays. But that does not mean it is unhealthy or bad. Sexuality is an integral part of every one and has different dimensions. Making an interospection into these is important. And talking about indian ‘values’, it was we who gave the world’s first sex book “kamasutra” and look at the walls of many ancient indian temples, you find nude people and sex positions. Well, they may have considered it as art. But these days the so called “cultural policemen” are viewing this art which is still existing, as “unethical or not cultural”. We are free humans and need to learn or explore everything possible, regardless of which culture or tradition it belongs to. to summarize, we need to respect karnad atleast for his works (also as an eminent theatre director). But yes, as Pratap said, karnad needs attention now and then and he does that in a bad way. Same with ananthamurthy. But his “bhaarateepura’ is one among the most inspiring books I have ever read..

 46. Siddu says:

  Pratap sir, ನಿಮ್ಮ ಲೇಖನ ಓಂದುರೀತಿ ಸ್ಫೂರ್ತಿ ನನಗೆ. ನಿಮ್ಮ ವಿಚಾರಗಳು ಸತ್ಯಕ್ಕೆ ಯಾವತ್ತೂ ಹತ್ತಿರವಿರುತ್ವೆ. ಅನುಮಾನವಿಲ್ಲ. ಆದರೆ ಯಾರಮೇಲಾದ್ರು ನೀವು ಅಭಿಪ್ರಾಯಿಸುವಾಗ ಸ್ವಲ್ಪ ಎಚ್ಚರವಹಿಸಿ. ಸಾಹಿತಿಗಳು ಬುದ್ಧಿಜೀವಿಗಳು ಇರಬಹುದು. ಆದರೆ ನಿಸ್ವಾರ್ಥಿಗಳು ಅನ್ಲಿಕ್ಕಾಗದು. ನಿಜ, ವರ್ತಮಾನಕ್ಕೆ ಅವರಿಂದ ತಪ್ಪುಗಳು ಆಗಿರಬಹುದು. ಅದು ಅವರ ಅವಕಾಶವಾದಿತನ ಬಿಡಿ. ಆದರೆ ಹಿಂದೆ ಅವರು ಸಾಧಿಸಿದ್ದ ವರ್ಚಸ್ಸನ್ನು ಪ್ರಶ್ನಿಸುವ ದುಸ್ಸಾಹಸ ನಾವು ಮಾಡಬಾರದು. ನಮ್ಮ ಘನತೆಯನ್ನ ನಾವೇ ಹಳಿದುಕೊಳ್ಳುವುದು ಬೇಡ. ಬುದ್ಧಿಜೀವಿಗಳು ಅನಿಸಿಕೊಂಡ ಕೆಲವರಿಗೆ ವೈಯಕ್ಕಿಕ ಹಿತಾಸಕ್ತಿ ಮುಖ್ಯವಾಗಿರುತ್ತೆ. ವಿವಾದಗಳನ್ನು ಹುಟ್ಟುಹಾಕಿ ಪ್ರಸಿದ್ಧರಾಗ್ಲಿಕ್ಕೆ ನೊಡ್ತಾರೆ ಬಿಡಿ. ನಿಮ್ಮ ನೇರ ನುಡಿ ನನಗೆ ಯಾವತ್ತೂ ಇಷ್ಟ. ನಿಮ್ಮ ಬರಹ ಹೀಗೆಯೇ ಮೊನಚಾಗಿರಲಿ…

 47. jamadagni says:

  ಮಾನ್ಯ ಕುಮಾರ ರವರೆ “ತನ್ನ ಬಣ್ಣಿಸ ಬೇಡ ಇದಿರ ಹಳಿಯಲು ಬೇಡ” ಎಂದು ಪ್ರತಾಪ್ ಸಿಂಹರವರಿಗೆ ಬುದ್ದಿವಾದ ಹೇಳಿದ್ದೀರ ಸರಿ ಆದರೆ ಅದು ತಮಗೂ ಅನ್ವಯವಾಗುತ್ತದೆ ಎಂದು ತಮಗೆ ಗೊತ್ತಿಲ್ಲವೇ..? ವಾಕ್ ಸ್ವಾತಂತ್ರ ಬೇರೆ, ಸ್ವೇಚ್ಚಾಚಾರ ಬೇರೆ. ಪ್ರತಾಪ್ ಸಿಂಹರವರ ವಾಕ್ ಸ್ವಾತಂತ್ರದ ಇತಿಮಿತಿಯಲ್ಲೇ ಕಾರ್ನಾಡರಿಗೆ ಪ್ರಶ್ನೆ ಕೇಳಿದ್ದಾರೆ. ಅವರು ಕಾರ್ನಾಡರ ವೈಯುಕ್ತಿಕ, ಕೌಟುಂಬಿಕ ವಿಚಾರವನ್ನೆನಾದರೂ ಪ್ರಸ್ತಾಪಿಸಿದ್ದರೇ ನಿಮ್ಮೊಂದಿಗೆ ನನ್ನ ಸಹಮತವಿದೆ, ಆದರೇ ಇದು ಒಬ್ಬ ಸಾಹಿತಿಯನ್ನು ಇನ್ನೊಬ್ಬ ಸಾಹಿತಿಯು ಟೀಕಿಸುವ ದುರಂತದ ವಿಷಯ, ಹೆಣ್ಣಿಗೆ ಹೆಣ್ಣೇ ವೈರಿ ಎಂಬಂತೆ. ಜ್ಞಾನಪೀಠ ಪಡೆದವರೆಲ್ಲಾ ಬೃಹಸ್ಪತಿಗಳೇನಲ್ಲಾ ಪಡೆಯದವರೆಲ್ಲರೂ ದಡ್ಡರಲ್ಲ ಅದರಲ್ಲೂ ರಾಜಕೀಯ ಇದೆಯೆಂದು ಎಲ್ಲರಿಗೂ ಗೊತ್ತಿರುವ ವಿಚಾರ.ಯಾವುದೇ ಸಾಹಿತಿಯ ಭಾಷಾಶೈಲಿಯಾಗಿರಲಿ, ತಮ್ಮ ಸಾಹಿತ್ಯವನ್ನು ಅಭಿವ್ಯಕ್ತಪಡಿಸುವ ರೀತಿಯಲ್ಲಾಗಿರಲಿ ವ್ಯತ್ಯಾಸವಿರಬಹುದು ಹಾಗೂ ವ್ಯತ್ಯಾಸಗಳಾಗಬಹುದು ಆದರೇ ಯಾವುದೇ ಸಾಹಿತಿಯ ಮೇಲಲ್ಲ ಇನ್ನೊಬ್ಬರು ಕೀಳಲ್ಲ. ಬಿನ್ನಭಿಪ್ರಾಯಗಳಿದ್ದರೆ ವೈಯಕ್ತಿಕವಾಗಿ ಸಂಪರ್ಕಿಸಿ ಇತ್ಯರ್ಥ ಮಾಡಿಕೊಳ್ಳಬೇಕೆ ವಿನಃ ಈ ರೀತಿ ಸಾರ್ವಜನಿಕವಾಗಿ ಟೀಕಿಸುವುದು ಸ್ವೀಕಾರಾರ್ಹವಲ್ಲ ನೀವೇ ಯೋಚಿಸಿ.

 48. jamadagni says:

  ಮಾನ್ಯ ಕುಮಾರ ರವರೆ “ತನ್ನ ಬಣ್ಣಿಸ ಬೇಡ ಇದಿರ ಹಳಿಯಲು ಬೇಡ” ಎಂದು ಪ್ರತಾಪ್ ಸಿಂಹರವರಿಗೆ ಬುದ್ದಿವಾದ ಹೇಳಿದ್ದೀರ ಸರಿ ಆದರೆ ಅದು ತಮಗೂ ಅನ್ವಯವಾಗುತ್ತದೆ ಎಂದು ತಮಗೆ ಗೊತ್ತಿಲ್ಲವೇ..? ವಾಕ್ ಸ್ವಾತಂತ್ರ ಬೇರೆ, ಸ್ವೇಚ್ಚಾಚಾರ ಬೇರೆ. ಪ್ರತಾಪ್ ಸಿಂಹರವರ ವಾಕ್ ಸ್ವಾತಂತ್ರದ ಇತಿಮಿತಿಯಲ್ಲೇ ಕಾರ್ನಾಡರಿಗೆ ಪ್ರಶ್ನೆ ಕೇಳಿದ್ದಾರೆ. ಅವರು ಕಾರ್ನಾಡರ ವೈಯುಕ್ತಿಕ, ಕೌಟುಂಬಿಕ ವಿಚಾರವನ್ನೆನಾದರೂ ಪ್ರಸ್ತಾಪಿಸಿದ್ದರೇ ನಿಮ್ಮೊಂದಿಗೆ ನನ್ನ ಸಹಮತವಿದೆ, ಆದರೇ ಇದು ಒಬ್ಬ ಸಾಹಿತಿಯನ್ನು ಇನ್ನೊಬ್ಬ ಸಾಹಿತಿಯು ಟೀಕಿಸುವ ದುರಂತದ ವಿಷಯ, ಹೆಣ್ಣಿಗೆ ಹೆಣ್ಣೇ ವೈರಿ ಎಂಬಂತೆ. ಜ್ಞಾನಪೀಠ ಪಡೆದವರೆಲ್ಲಾ ಬೃಹಸ್ಪತಿಗಳೇನಲ್ಲಾ ಪಡೆಯದವರೆಲ್ಲರೂ ದಡ್ಡರಲ್ಲ ಅದರಲ್ಲೂ ರಾಜಕೀಯ ಇದೆಯೆಂದು ಎಲ್ಲರಿಗೂ ಗೊತ್ತಿರುವ ವಿಚಾರ.ಯಾವುದೇ ಸಾಹಿತಿಯ ಭಾಷಾಶೈಲಿಯಾಗಿರಲಿ, ತಮ್ಮ ಸಾಹಿತ್ಯವನ್ನು ಅಭಿವ್ಯಕ್ತಪಡಿಸುವ ರೀತಿಯಲ್ಲಾಗಿರಲಿ ವ್ಯತ್ಯಾಸವಿರಬಹುದು ಹಾಗೂ ವ್ಯತ್ಯಾಸಗಳಾಗಬಹುದು ಆದರೇ ಯಾವುದೇ ಸಾಹಿತಿಯು ಮೇಲಲ್ಲ ಇನ್ನೊಬ್ಬರು ಕೀಳಲ್ಲ. ಬಿನ್ನಭಿಪ್ರಾಯಗಳಿದ್ದರೆ ವೈಯಕ್ತಿಕವಾಗಿ ಸಂಪರ್ಕಿಸಿ ಇತ್ಯರ್ಥ ಮಾಡಿಕೊಳ್ಳಬೇಕೆ ವಿನಃ ಈ ರೀತಿ ಸಾರ್ವಜನಿಕವಾಗಿ ಟೀಕಿಸುವುದು ಸ್ವೀಕಾರಾರ್ಹವಲ್ಲ,ನೀವೇ ಯೋಚಿಸಿ.

 49. Gopal says:

  ಗುಂಡು ಹೊಡೆದ ಹಾಗೆ ಹೇಳಿದ್ದಿರಿ ಪ್ರತಾಪ್ .ಅಭಿನಂದನೆಗಳು …

 50. girish k t says:

  good prataap Keep writing these kind of articles…
  at least the people know the reality of this type
  mentality(jai hind)