Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಇಷ್ಟಕ್ಕೂ ಯಡಿಯೂರಪ್ಪನವರು ಮಾಡಿದ ತಪ್ಪಾದರೂ ಏನು?

ಇಷ್ಟಕ್ಕೂ ಯಡಿಯೂರಪ್ಪನವರು ಮಾಡಿದ ತಪ್ಪಾದರೂ ಏನು?

ಬಿಎಸ್್ವೈ, A.K.A. (Also known as) ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ನಿಜಕ್ಕೂ ಯಾರು? ಈಗ ನೋಡುತ್ತಿರುವ ವ್ಯಕ್ತಿ, ವ್ಯಕ್ತಿತ್ವವೇ ನಿಜವಾದ ಯಡಿಯೂರಪ್ಪನವರೇ? ಅವರು ಇಂದು ಆಡುತ್ತಿರುವ ಹತಾಶೆಯ ಮಾತುಗಳಿಂದ ಅವರನ್ನು ಅಳೆಯಬೇಕೋ ಅಥವಾ ಆ ಮಾತುಗಳ ಹಿಂದಿರುವ ನೋವನ್ನು ಅರ್ಥಮಾಡಿಕೊಂಡರೆ ನಿಜವಾದ ಯಡಿಯೂರಪ್ಪ ಗೋಚರಿಸುತ್ತಾರಾ? ಪಕ್ಷದೊಳಗೇ ಇರುವ ಅಸಹನೀಯ ಮನಸ್ಸುಗಳು, ಅವರ ಏಳಿಗೆಯನ್ನು ಸಹಿಸದ ಅತೃಪ್ತ ಆತ್ಮಗಳು ಅವರನ್ನು ಹೀಗೆ ಮಾಡಿದವಾ? ಅವರು ನಿಜಕ್ಕೂ ಭ್ರಷ್ಟರಾ ಅಥವಾ ಪರಿಸ್ಥಿತಿ ಅವರನ್ನು ಭ್ರಷ್ಟರನ್ನಾಗಿ ಮಾಡಿತಾ? ಅವರು ಪರಿಸ್ಥಿತಿಯ ಕೈಗೊಂಬೆಯಾಗಿ ಮನಸ್ಸಿಗೆ ವಿರುದ್ಧವಾದುದನ್ನು ಮಾಡಿದರಾ? ಯಡಿಯೂರಪ್ಪನವರು ಹೀಗೇ ಎಂದು ಹೇಳುವ ಮೊದಲು ಅವರಿದ್ದ ಪರಿಸ್ಥಿತಿ ಎಂಥದ್ದು ಎಂಬುದನ್ನೂ ನೋಡಬೇಡವೇ? ಆಪರೇಷನ್ ಕಮಲಕ್ಕೆ ಆರ್್ಎಸ್್ಎಸ್ ಹಾಗೂ ಬಿಜೆಪಿ ಹೈಕಮಾಂಡ್ ಒಪ್ಪಿಗೆ ಇರಲಿಲ್ಲವೆ?

ಅಥವಾ

ಬಿಜೆಪಿ ಎಂಬ ಪಕ್ಷ ಮಾಡಿದ ಸಾಂಘಿಕ ತಪ್ಪಿಗೆ ಬಲಿಯಾದರೆ ಬಿಎಸ್್ವೈ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕದೇ ಯಡಿಯೂರಪ್ಪನವರನ್ನು ಭ್ರಷ್ಟರು, ಅವರಿಂದಾಗಿಯೇ ಪಕ್ಷಕ್ಕೆ ಈ ಸ್ಥಿತಿ ಬಂತು, ಪಕ್ಷ ಹಾಳಾಗುವತ್ತ ಸಾಗಿದೆ ಎಂದು ಷರಾ ಬರೆದುಬಿಡುವುದು ಸರಿಯೇ? ಸಂಕಷ್ಟಕ್ಕೆಲ್ಲಾ ಶನೇಶ್ಚರ ಕಾರಣ ಎಂಬಂತೆ ಬಿಜೆಪಿಯ ಪಾಪಕ್ಕೆಲ್ಲ ಯಡಿಯೂರಪ್ಪನವರೇ ಕಾರಣವೇ?

ಇಲ್ಲವೆನ್ನುವುದಾದರೆ…

ಈ ಎರಡು ಸನ್ನಿವೇಶಗಳನ್ನು ಒಮ್ಮೆ ನೆನಪಿಸಿಕೊಳ್ಳಿ. 2008, ಮೇ 25ರಂದು ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾದಾಗ ಬಿಜೆಪಿ 110 ಸ್ಥಾನಗಳನ್ನು ಗೆದ್ದರೂ ಆತಂಕದ ಪರಿಸ್ಥಿತಿ ಸೃಷ್ಟಿಯಾಯಿತು. 80 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಹಾಗೂ 28 ಸೀಟು ಗೆದ್ದಿದ್ದ ಜೆಡಿಎಸ್  ಸೇರಿ (108 ಸೀಟು) ಸರ್ಕಾರ ರಚಿಸುವ ಅಪಾಯ ಎದುರಾಯಿತು. ಅಂತಹ ಆತಂಕಕಾರಿ ಸನ್ನಿವೇಶದಲ್ಲಿ 6 ಪಕ್ಷೇತರರ ಬೆಂಬಲವನ್ನು ಪಡೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿ ಸರ್ಕಾರ ರಚಿಸಲು ಮುಂದಾಗಿದ್ದೇನೋ ನಿಜ. ಆದರೆ ಪಕ್ಷೇತರರಲ್ಲಿ ಬಹುತೇಕರು ಕಾಂಗ್ರೆಸ್ ಹಾಗೂ ಜೆಡಿಎಸ್ ಬಂಡಾಯ ಅಭ್ಯರ್ಥಿಗಳೇ ಆಗಿದ್ದರಿಂದ ಆಮಿಷ ತೋರಿದರೆ ಮೂಲ ಪಕ್ಷಗಳಿಗೆ ಮರಳುವ ಭಯ ಇದ್ದೇ ಇತ್ತು. ಆರು ಜನರಲ್ಲಿ ಐವರಿಗೆ ಮಂತ್ರಿ ಪದವಿ ಕೊಟ್ಟರೂ ಆ ಆತಂಕ ದೂರವಾಗಲಿಲ್ಲ. ಆಗ ಚುನಾವಣಾ ಪ್ರಜಾತಂತ್ರದ ಮೂಲ ಆಶಯಕ್ಕೆ ಕೊಡಲಿಯೇಟು ಹಾಕಿ ಆಪರೇಷನ್ ಕಮಲಕ್ಕೆ ಕೈಹಾಕಿದರು. ಒಬ್ಬೊಬ್ಬ ಶಾಸಕನನ್ನು ಎಳೆದುಕೊಂಡು ಬರಬೇಕಾದರೆ ಕನಿಷ್ಠ ಐದಾರು ಕೋಟಿ ಕೊಡಬೇಕು. ಮರು ಚುನಾವಣೆಯಲ್ಲಿ ಗೆಲ್ಲಿಸಲು 15-20 ಕೋಟಿ ವ್ಯಯಿಸಬೇಕಾಗಿ ಬಂತು. ಹನ್ನೊಂದು ಶಾಸಕರನ್ನು ಕರೆತರಲು, ಗೆಲ್ಲಿಸಲು ಮಾಡಿದ ವೆಚ್ಚ ಎಷ್ಟಾಗಿರಬಹುದು ಯೋಚಿಸಿ? ಇಷ್ಟೊಂದು ಹಣ ಎಲ್ಲಿಂದ ಬರಬೇಕು? ಬೇರೆ ದಾರಿ ಇತ್ತೆ? ಹಾಗೆ ಹೊಂದಿಸುವುದಾದರೂ ಎಲ್ಲಿಂದ? ಅತ್ಯಂತ ಸುಲಭ ಹಾಗೂ ಸರಳ ಮಾರ್ಗ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯ ಡಿನೋಟಿಫಿಕೇಶನ್! ಅದು ಭವಿಷ್ಯದಲ್ಲಿ ಯಡಿಯೂರಪ್ಪನವರ ಸ್ಥಾನಕ್ಕೆ ಕುತ್ತು ತರುವಂಥ ಕಂಟಕವಾಗಿ ಪರಿಣಮಿಸಿದ್ದು ಮಾತ್ರವಲ್ಲ, ಇತ್ತ ಬಹುಮತಕ್ಕೆ 3 ಸ್ಥಾನಗಳು ಕೊರತೆ ಬಿದ್ದ ಏಕೈಕ ಕಾರಣಕ್ಕೆ ಮೊದಲ ಬಿಜೆಪಿ ಸರ್ಕಾರ ಭ್ರಷ್ಟಾಚಾರವನ್ನೇ ಒಡಲಲ್ಲಿ ಇಟ್ಟುಕೊಂಡು ಜನಿಸುವಂತಾಯಿತು. ಮೋದಿ ಮಾದರಿಯ ಆಡಳಿತ ನೀಡುತ್ತೇವೆ ಎಂದೆಲ್ಲ ಪ್ರಾಮಾಣಿಕವಾಗಿಯೇ ಹೇಳಿದ್ದ ಯಡಿಯೂರಪ್ಪನವರು, ಅನಿವಾರ್ಯವಾಗಿ ಭ್ರಷ್ಟಚಾರದ ಕೂಪಕ್ಕೆ ಬಿದ್ದರು. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೇನೆಂದರೆ, ಮೊದಲ ಹಂತದ ಆಪರೇಷನ್ ಕಮಲಕ್ಕೆ ಫಂಡ್ ಮಾಡಿದ್ದೇ ರೆಡ್ಡಿಗಳು ಎಂಬ ಮಾತು ಕೇಳಿ ಬಂತು, ಜತೆಗೆ ಸರ್ಕಾರ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಬೇಕು ಎಂಬಂತೆ ರೆಡ್ಡಿಗಳೂ ವರ್ತಿಸಲಾರಂಭಿಸಿದರು. ಯಡಿಯೂರಪ್ಪನವರ ಪ್ರಯತ್ನ, ವರ್ಚಸ್ಸು, ಜಾತಿ ಮತಗಳ ಧ್ರುವೀಕರಣ, ಬಿಜೆಪಿಗೂ ಒಂದು ಅವಕಾಶ ಕೊಡಬೇಕೆಂಬ ಮತದಾರನ ಇಂಗಿತ, ದೇವೇಗೌಡರ ದ್ರೋಹಗಳಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದಿತಾದರೂ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದೇ ನಾವು ಎಂಬಂತೆ ರೆಡ್ಡಿಗಳು ಬೀಗಲಾರಂಭಿಸಿದರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರೂ, ರೆಡ್ಡಿಗಳು ಮುಖ್ಯಮಂತ್ರಿಗೇ ಸಡ್ಡು ಹೊಡೆಯುವ, ತಮ್ಮ ಮೂಗಿನ ನೇರಕ್ಕೆ ವರ್ತಿಸುವಂತೆ ಮಾಡುವ ತಾಕತ್ತು ತಮಗಿದೆಯೆಂಬಂತೆ ದರ್ಪ ತೋರಲಾರಂಭಿಸಿದರು. ಮೊದಲ ಆಪರೇಷನ್ ಕಮಲದಲ್ಲಿ ಎಳೆದು ತಂದ ಶಾಸಕರನ್ನೂ ತಮ್ಮ ಹಿಡಿತದಲ್ಲಿ ಇಟ್ಟುಕೊಂಡರು. ಹಾಗಾಗಿ ಬಾಹ್ಯ ಹಾಗೂ ಆಂತರಿಕ ಶತ್ರುಗಳನ್ನು ಮಟ್ಟಹಾಕಲು ಯಡಿಯೂರಪ್ಪನವರು ಎರಡನೇ ಹಂತದ ಆಪರೇಷನ್ ಕಮಲಕ್ಕೆ ಕೈಹಾಕಿದರು. ಜಾತಿ ಮಕ್ಕಳನ್ನೇ ಮುಖ್ಯವಾಗಿ ಎಳೆದು ತಂದು ಕುರ್ಚಿ ಗಟ್ಟಿಮಾಡಿಕೊಳ್ಳಲು ಹೊರಟರು. ಜತೆಗೆ ರೆಡ್ಡಿಗಳಿಗೆ ಯಾವ ದುಡ್ಡು ದರ್ಪ ತಂದುಕೊಟ್ಟಿತ್ತೋ ಆ ದರ್ಪಕ್ಕೆ ದುಡ್ಡು ಗಳಿಸುವ ಮೂಲಕವೇ ಉತ್ತರಿಸಲು ಹೊರಟರು. ಒಟ್ಟಾರೆ ರಾಜ್ಯದ ಒಳಿತಿನ ಬಗ್ಗೆ ಕನಸು ಕಂಡಿದ್ದ ಯಡಿಯೂರಪ್ಪನವರು ಜನಪರ ಕಾರ್ಯ ಮಾಡುವುದಕ್ಕಿಂತ ಕುರ್ಚಿ ಉಳಿಸಿಕೊಳ್ಳುವುದಕ್ಕೇ ಹೆಣಗಬೇಕಾದ ದೈನೇಸಿ ಸ್ಥಿತಿಯನ್ನು ತಲುಪಿದರು!

ಹಾಗಂತ ರೆಡ್ಡಿಗಳ ಉಪಟಳಕ್ಕೆ ಬಿಜೆಪಿಯ ಕೇಂದ್ರ ನಾಯಕತ್ವ ಕಡಿವಾಣ ಹಾಕಲು ಸಾಧ್ಯವಿರಲಿಲ್ಲವೆ?

ಆ ಮೂಲಕ ಯಡಿಯೂರಪ್ಪನವರ ಆತಂಕ, ತಲೆನೋವನ್ನು ಕಡಿಮೆ ಮಾಡಿ, ಒಳ್ಳೆಯ ಆಡಳಿತ ಕೊಡಿ ಎಂದು ಹೇಳಲಾಗುತ್ತಿರಲಿಲ್ಲವೆ? ಹಾಗೆ ಮಾಡಿದ್ದರೆ, ರಾಜ್ಯದ ಬಗ್ಗೆ ಒಂದಿಷ್ಟು ಕಾಳಜಿ ಇಟ್ಟುಕೊಂಡಿದ್ದ ಯಡಿಯೂರಪ್ಪನವರು ಖುಷಿಯಿಂದಲೇ ಒಳ್ಳೆಯ ಆಡಳಿತ ಕೊಡುತ್ತಿರಲಿಲ್ಲವೆ? ಆದರೆ ಯಾಕೆ ಬಿಜೆಪಿ ಕೇಂದ್ರ ನಾಯಕರು ಯಡಿಯೂರಪ್ಪನವರ ಬೆಂಬಲಕ್ಕೆ ನಿಲ್ಲಲಿಲ್ಲ? ಪಕ್ಷದ ನಿಧಿಗೆ ಜೋಳಿಗೆ ಹಿಡಿದು ಬರುವುದು, ಬಂಡಾಯ ಎದ್ದಾಗ ಧರ್ಮೇಂದ್ರ ಪ್ರಧಾನ್ ಎಂಬ ವ್ಯಕ್ತಿಯನ್ನು ರಾಜ್ಯಕ್ಕೆ ದೌಡಾಯಿಸುವುದು ಬಿಟ್ಟರೆ ಬೇರೇನನ್ನು ಮಾಡಿದರು? ದಕ್ಷಿಣ ಭಾರತದಲ್ಲಿ ಸ್ಥಾಪನೆಯಾಗಿದ್ದ ತಮ್ಮ ಮೊದಲ ಸರ್ಕಾರಕ್ಕೆ ಪಕ್ಷದೊಳಗಿರುವವರೇ ಕುತ್ತು ತರಲು ಯತ್ನಿಸಿದಾಗ ಅಂಥವರ ಕುತ್ತಿಗೆ ಪಟ್ಟಿಗೆ ಹಿಡಿದು ಬುದ್ಧಿ ಹೇಳುವ ಕೆಲಸವನ್ನು ಯಾಕೆ ಮಾಡಲಿಲ್ಲ? ಬಳ್ಳಾರಿ ರೆಡ್ಡಿಗಳು ಯಡಿಯೂರಪ್ಪನವರ ಮೇಲೆ ಸವಾರಿ ಮಾಡಲು ಮೂಲ ಪ್ರೇರಣೆ ಯಾರಾಗಿದ್ದರು?

ಸುಷ್ಮಾ ಸ್ವರಾಜ್!

ಈ ರೆಡ್ಡಿಗಳ ಉಪಟಳ ತಾಳಲಾರದೆ ಕೊನೆಗೂ ಅವರ ಆರ್ಭಟಕ್ಕೆ ಕಡಿವಾಣ ಹಾಕಲು ಯಡಿಯೂರಪ್ಪನವರು ಮುಂದಾದರು. 2008ರಲ್ಲಿ ಉತ್ತರ ಕರ್ನಾಟಕದಲ್ಲಿ ಉಂಟಾಗಿದ್ದ ನೆರೆಯಿಂದ ಸಂತ್ರಸ್ತರಾಗಿದ್ದವರ ಪುನರ್ವಸತಿ ಸಲುವಾಗಿ ಪ್ರತಿ ಅದಿರು ಲಾರಿಗಳ ಮೇಲೆ ಸಾವಿರ ರೂ. ಸೆಸ್ ಹಾಕಲು ಮುಂದಾದರು. ಹಾಗೆ ಹೇಳಿದ್ದೇ ತಡ, ಜನಾರ್ದನ ರೆಡ್ಡಿ ಮುಖ್ಯಮಂತ್ರಿಯವರ ನಿರ್ಧಾರವನ್ನು ಸಾರ್ವಜನಿಕವಾಗಿ ಟೀಕಿಸಿದರು. ಅಷ್ಟು ಮಾತ್ರವಲ್ಲ, ಬಳ್ಳಾರಿ ಮುಖ್ಯಮಂತ್ರಿಯವರ ನಿಯಂತ್ರಣದಲ್ಲಿಲ್ಲ ಎಂದುಬಿಟ್ಟರು. ಇತ್ತ ಯಡಿಯೂರಪ್ಪನವರು ತಮ್ಮ ನಿರ್ಧಾರಕ್ಕೆ ಕ್ಯಾಬಿನೆಟ್ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾದರೂ 2009, ಅಕ್ಟೋಬರ್ 25ರಂದು ಬಳ್ಳಾರಿಯಲ್ಲಿ ಗಣಿ ಮಾಲೀಕರ ಸಭೆ ಸೇರಿಸಿದ ಜನಾರ್ದನ ರೆಡ್ಡಿ, ಮುಖ್ಯಮಂತ್ರಿಗಳ ನಿರ್ಧಾರವನ್ನು ಒಕ್ಕೊರಲಿನಿಂದ ತಿರಸ್ಕರಿಸುವಂತೆ ಮಾಡಿದರು. ಅಲ್ಲಿಗೆ ದಕ್ಷಿಣ ಭಾರತದ ಮೊದಲ ಬಿಜೆಪಿ ಸರ್ಕಾರ 18 ತಿಂಗಳಲ್ಲೇ ಪತನವಾಗುವತ್ತ ಸಾಗಿತು. ದೆಹಲಿಯಿಂದ ಅರುಣ್ ಜೇಟ್ಲಿ, ನಂತರ ವೆಂಕಯ್ಯನಾಯ್ಡು, ರಾಜನಾಥ್ ಸಿಂಗ್ ದೌಡಾಯಸಿದರೂ ಉಪಯೋಗವಾಗಲಿಲ್ಲ. ಮುಖ್ಯಮಂತ್ರಿಯವರ ಮುಖ ನೋಡುವುದಿಲ್ಲ ಎಂದು ರೆಡ್ಡಿ-ರಾಮುಲು ಉದ್ಧಟತನದ ಮಾತನಾಡಿದರು. ಇಷ್ಟೆಲ್ಲಾ ನಡೆಯುತ್ತಿದ್ದರೂ ರೆಡ್ಡಿ-ರಾಮುಲು ಅವರ ದತ್ತು ತಾಯಿ ಸುಷ್ಮಾ ಸ್ವರಾಜ್ ಮುಗಮ್ಮಾಗಿ ಕುಳಿತಿದ್ದರು! ಕೊನೆಗೂ ರಂಗಪ್ರವೇಶ ಮಾಡಿದ ‘ತಾಯಿ ಸುಷ್ಮಾ ಸ್ವರಾಜ್್’ ನವೆಂಬರ್ 9ರಂದು ಸಮಸ್ಯೆ ಬಗೆಹರಿಸಿದರು. ಯಾವ ಮುಖ್ಯಮಂತ್ರಿಯ ಮುಖ ನೋಡುವುದಿಲ್ಲ ಎಂದಿದ್ದರೋ ಅದೇ ಯಡಿಯೂರಪ್ಪನವರ ಜತೆ ರೆಡ್ಡಿ-ರಾಮುಲು ಕೈ ಕೈ ಹಿಡಿದು ಪೋಸು ಕೊಟ್ಟರು. ಎಂಥ ಮಾತೃಪ್ರೇಮ! ಈಕೆ ವರಲಕ್ಷ್ಮೀ ಪೂಜೆಗೆ ಬಳ್ಳಾರಿಗೆ ಬರುವುದು ಲಕ್ಷ್ಮೀಯನ್ನು ಕೊಂಡೊಯ್ಯಲು ಎಂದು ವಿರೋಧ ಪಕ್ಷಗಳು ಮಾಡಿದ ವ್ಯಂಗ್ಯ ವಾಸ್ತವಕ್ಕಿಂತ ದೂರವೇನೂ ಆಗಿರಲಿಲ್ಲ, ಅಲ್ಲವೆ?

ಇಲ್ಲವಾದರೆ….

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡನೇ ವರ್ಷದ ಸಮಾರಂಭ ಅರಮನೆ ಮೈದಾನದಲ್ಲಿ ಆಯೋಜನೆಯಾಗಿದ್ದಾಗ ತಾಯಿ ಸುಷ್ಮಾ ಸ್ವರಾಜ್ ಹಾಡಿಹೊಗಳಿದ್ದು ಯಾರನ್ನ? ಆರೋಗ್ಯ ಸಚಿವ ಶ್ರೀರಾಮುಲು ಜತೆ ಮಾತನಾಡಬೇಕೆಂದಾಗ 108ಕ್ಕೆ ಕರೆ ಮಾಡಿ ಎನ್ನುತ್ತೇನೆ, ಈ ಸರ್ಕಾರದಲ್ಲಿ ಒಳ್ಳೆಯ ಕೆಲಸ ಮಾಡಿರುವುದು ಜನಾರ್ದನ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ಎಂದೆಲ್ಲ ತನ್ನ ದತ್ತು ಪುತ್ರರನ್ನು ಹೊಗಳಿ ಹೋದರೇ ಹೊರತು ಬಹಳಷ್ಟು ಜನಪರ ಕಾರ್ಯಗಳನ್ನು ಮಾಡಿದ್ದರೂ ಮುಖ್ಯಮಂತ್ರಿಯ ಬಗ್ಗೆ ಒಂದೂ ಒಳ್ಳೆಯ ಮಾತನಾಡಲಿಲ್ಲ! ಇಂಥ ಘಟನೆಗಳು ನಡೆದಾಗ ಸಹಜವಾಗಿಯೇ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದ ವ್ಯಕ್ತಿ ಆತಂಕಕ್ಕೊಳಗಾಗುವುದಿಲ್ಲವೆ? ಮುಖ್ಯಮಂತ್ರಿ ಅನ್ನೋ ಸ್ಥಾನದ ಘನತೆಯನ್ನು ಮೊದಲು ಕುಂದಿಸಿದ್ದೇ ಈ ಸುಷ್ಮಾ ಸ್ವರಾಜರ ದತ್ತು ಮಕ್ಕಳಾದ ರೆಡ್ಡಿ-ರಾಮುಲು.

ಒಮ್ಮೊಮ್ಮೆ ಯಡಿಯೂರಪ್ಪನವರು ದುರಂತ ನಾಯಕರಂತೆ ಕಾಣುತ್ತಾರೆ!

ಒಂದೆಡೆ ರಾಷ್ಟ್ರೀಯ ನಾಯಕಿ ಸುಷ್ಮಾ ಸ್ವರಾಜ್ ರೆಡ್ಡಿಗಳ ಬೆಂಗಾವಲಿಗೆ ನಿಂತಿದ್ದರೆ, ಮತ್ತೊಬ್ಬ ಮೇರು ನಾಯಕರಾದ ಲಾಲಕೃಷ್ಣ ಆಡ್ವಾಣಿಯವರನ್ನು ಅನಂತಕುಮಾರ್ ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದರು. ಕಳೆದ ಸಲ ಗಣಿ ಕಳಂಕಕ್ಕೆ ಹೆದರಿ ದೆಹಲಿಯಲ್ಲೇ ಕುಳಿತ ಸುಷ್ಮಾ ಬದಲು ವರಮಹಾಲಕ್ಷ್ಮೀ ಪೂಜೆ ಸಂದರ್ಭದಲ್ಲಿ ಬಳ್ಳಾರಿಗೆ ಬಂದ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ರೆಡ್ಡಿಗಳಿಂದ ಚಿನ್ನದ ಖಡ್ಗ ಪಡೆದುಕೊಂಡು ಹೋದರು! ಇವೆಲ್ಲ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಎಷ್ಟು ಬೇಸರ, ಆತಂಕ ತಂದಿರಬೇಕು ಹೇಳಿ? ಬಳ್ಳಾರಿ ರೆಡ್ಡಿಗಳು ಮಾತ್ರವಲ್ಲ, ಈಶ್ವರಪ್ಪ, ಅನಂತಕುಮಾರ್ ಕೂಡ ಯಡಿಯೂರಪ್ಪನವರ ಕಾಲೆಳೆದು ಮುಖ್ಯಮಂತ್ರಿಯಾಗಲು ಹವಣಿಸುತ್ತಿದ್ದವರೇ ಆಗಿದ್ದರು. ದೇವೇಗೌಡ ಹಾಗೂ ಕುಮಾರಸ್ವಾಮಿಯವರಂತೂ ಯಡಿಯೂರಪ್ಪ ಸರ್ಕಾರವನ್ನು ಬೀಳಿಸುವುದೇ ತಮ್ಮ ಏಕಮಾತ್ರ ಗುರಿಯೆಂಬಂತೆ ವರ್ತಿಸಲಾರಂಭಿಸಿದ್ದರು.ಬಿಜೆಪಿಯೊಳಗೇ ಇದ್ದ ಯಡಿಯೂರಪ್ಪನವರ ವಿರೋಧಿಗಳು ಹಾಗೂ ಬಿಜೆಪಿಯ ಆಂತರಿಕ ದೌರ್ಬಲ್ಯವನ್ನು ಅರಿತಿದ್ದ ಜೆಡಿಎಸ್, ಕಾಂಗ್ರೆಸ್ ವಿಧಾನಮಂಡಲದ ಒಂದು ಅಧಿವೇಶನವನ್ನೂ ಸುಸೂತ್ರವಾಗಿ ನಡೆಸಲು ಬಿಡಲಿಲ್ಲ. ಸದಾನಂದಗೌಡರು ಮುಖ್ಯಮಂತ್ರಿಯಾದ ಕೂಡಲೇ ಎಲ್ಲ ಅಧಿವೇಶನಗಳೂ ಸರಾಗವಾಗಿ ನಡೆದವು, ಇಲ್ಲಿಯೇ ಮರ್ಮ ಅಡಗಿಲ್ಲವೆ? ಅದರ ಜತೆಗೆ ನೀನೇ ಸಾಕಿದಾ ಗಿಣಿ, ಹದ್ದಾಗಿ ನಿನ್ನನ್ನೇ ಕುಕ್ಕಿತಲ್ಲೋ ಎನ್ನುವಂತೆ ಸದಾನಂದಗೌಡರು ಮುಖ್ಯಮಂತ್ರಿ ಸ್ಥಾನಕ್ಕೇರಿದ ಮೇಲೆ ಋಣ ಮರೆತಿದ್ದು ಮಾತ್ರವಲ್ಲ, ಸಭೆ-ಸಮಾರಂಭಗಳಲೆಲ್ಲ ಯಡಿಯೂರಪ್ಪನವರನ್ನು ಕುಟುಕಲು, ಅಣಕಿಸಲು ಆರಂಭಿಸಿದರು. ಹೀಗೆ ಯಡಿಯೂರಪ್ಪ ತುಂಬಾ ಹೊಡೆತ ತಿಂದರು. ಇವು ಸಾಲದೆಂಬಂತೆ ಅತ್ಯಂತ ಪಕ್ಷಪಾತಿ, ಉಪದ್ರವ ಮನುಷ್ಯನೊಬ್ಬ ರಾಜ್ಯಪಾಲರಾಗಿ ನಮ್ಮ ರಾಜ್ಯಕ್ಕೆ ಆಗಮಿಸಿ ಯಡಿಯೂರಪ್ಪನವರನ್ನು ಕಾಡಿದರು. ಈ ಮಧ್ಯೆ, ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ರಾಜೀನಾಮೆ ಇತ್ತಾಗ, ಯಡಿಯೂರಪ್ಪನವರು ಯಾವುದೇ ಪ್ರತಿಕ್ರಿಯೆ ನೀಡದೇ ಅವರು ಹೋದರೇ ಒಳ್ಳೆಯದು ಎಂಬ ಸಂದೇಶ ಮುಟ್ಟಿಸಿದ್ದರು. ಮಧ್ಯ ಪ್ರವೇಶಿಸಿದ ಆಡ್ವಾಣಿಯವರು ಸಂತೋಷ್ ಹೆಗ್ಡೆ ಪುನರಾಗಮನಕ್ಕೆ ದಾರಿ ಮಾಡಿಕೊಟ್ಟರು. ಅದು ಯಡಿಯೂರಪ್ಪನವರ ಪಾಲಿಗೆ ಮುಂದೆ ಮುಳುವಾಯಿತು!

ಯಡಿಯೂರಪ್ಪನವರು ಜಾತಿ ರಾಜಕಾರಣ ಮಾಡಿದರು, ಜಾತಿಯನ್ನೇ ದಾಳವಾಗಿಸಿಕೊಂಡರು ಎಂಬ ಟೀಕೆ ತಪ್ಪಲ್ಲ. ಆದರೆ ಜಾತಿಯನ್ನು ಅವರು ಗುರಾಣಿಯಾಗಿ ಬಳಸಿಕೊಂಡಿದ್ದು ಅಭದ್ರತೆಯಿಂದ ಹೊರಬರಲು, ಪಕ್ಷದೊಳಗೆ ಇದ್ದ ಮುಖ್ಯಮಂತ್ರಿ ಪದವಿ ಆಕಾಂಕ್ಷಿಗಳ ಪಿತೂರಿಯನ್ನು ಮಟ್ಟಹಾಕಲು ಹಾಗೂ ಕೇಂದ್ರದ ನಾಯಕರು ಅತಿರೇಕದ ನಿರ್ಧಾರ ತೆಗೆದುಕೊಳ್ಳುವುದನ್ನು ತಡೆಯುವ ಸಲುವಾಗಿಯಷ್ಟೆ! ಹಾಗೆ ನೋಡಿದರೆ ಯಡಿಯೂರಪ್ಪನವರಿಂದ ಲಿಂಗಾಯತರು ಮಾತ್ರವಲ್ಲ ಎಲ್ಲ ಜಾತಿಯವರೂ, ಜಾತಿ ಸ್ವಾಮಿಗಳೂ, ಮಠಗಳೂ ಲಾಭ ಪಡೆದಿವೆ. ಕನಕ ಜಯಂತಿ, ವಾಲ್ಮೀಕಿ ಜಯಂತಿಗೆ ರಜಾ ಘೋಷಣೆ ಮಾಡಿದ್ದೇ ಯಡಿಯೂರಪ್ಪನವರು. ಒಕ್ಕಲಿಗ, ಬ್ರಾಹ್ಮಣ ಸ್ವಾಮೀಜಿಗಳೂ ಯಡಿಯೂರಪ್ಪನವರಿಂದ ಬಹುವಾಗಿಯೇ ಉಪಕೃತರಾಗಿದ್ದಾರೆ. ಕಷ್ಟಕಾಲದಲ್ಲಿ ಲಿಂಗಾಯತರು ಬೆಂಬಲಕ್ಕೆ ನಿಂತರು ಎಂಬುದನ್ನು ಬಿಟ್ಟರೆ, ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಎಲ್ಲ ಜಾತಿ, ಸ್ವಾಮೀಜಿಗಳನ್ನು ಸಮನಾಗಿ ಕಂಡಿದ್ದಾರೆ, ಸಹಾಯ ಮಾಡಿದ್ದಾರೆ.

ಹಾಗಂತ…

ಯಡಿಯೂರಪ್ಪನವರು ಮಾಡಿದ್ದೆಲ್ಲ ಸರಿ, ಅವರು ಮಾಡಿದ ಭ್ರಷ್ಟಾಚಾರವೂ ತಪ್ಪಲ್ಲ, ಅವರು ಸುಭಗ ಎಂದು ಖಂಡಿತಾ ಹೇಳುತ್ತಿಲ್ಲ. ಯಡಿಯೂರಪ್ಪನವರಿಗೆ ಕಾಂಗ್ರೆಸ್, ಜೆಡಿಎಸ್್ನವರಂತೆ ಚಾಣಾಕ್ಷವಾಗಿ ಹಣ ಹೊಡೆಯಲು ಬರಲಿಲ್ಲ ಅಷ್ಟೇ. ಇನ್ನು ಯಡಿಯೂರಪ್ಪನವರು ಯಾರೂ ಮಾಡದ ಕೆಲಸವನ್ನೇನನ್ನೂ ಮಾಡಿಲ್ಲ. ಅವರು ರಾಚೇನಹಳ್ಳಿ ಸಮೀಪ ಮಾಡಿದ ಭೂಮಿ ಖರೀದಿ-ಮಾರಾಟ ವ್ಯವಹಾರದಂಥದ್ದೇ ಖದೀಮ ಕೆಲಸವನ್ನು ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಕೂಡ ಮಾಡಿದ್ದಾರೆ. ಹಾಗಾಗಿ ಯಡಿಯೂರಪ್ಪನವರೊಬ್ಬರನ್ನೇ ಬಲಿಪಶು ಮಾಡುವುದು ತಪ್ಪು. ಯಡಿಯೂರಪ್ಪನವರನ್ನು ಭ್ರಷ್ಟ ಎನ್ನುವವರು ಮೊದಲು, ದೇವೇಗೌಡರು ಪ್ರತಿನಿಧಿಸುವ ಹಾಸನ, ಎಸ್.ಎಂ. ಕೃಷ್ಣ ಪ್ರತಿನಿಧಿಸಿದ ಮದ್ದೂರು, ಖರ್ಗೆ-ಧರ್ಮಸಿಂಗ್ ಪ್ರತಿನಿಧಿಸುವ ಗುರುಮಿಟ್ಕಲ್, ಜೇವರ್ಗಿ, ಜೆ.ಎಚ್. ಪಟೇಲರು ಪ್ರತಿನಿಧಿಸಿದ್ದ ಚನ್ನಗಿರಿಗಳನ್ನು ನೋಡಿ ಬರಬೇಕು. ಆಮೇಲೆ ಯಡಿಯೂರಪ್ಪನವರು ಮತ್ತು ಅವರ ಮಗ ಪ್ರತಿನಿಧಿಸುವ ಶಿವಮೊಗ್ಗಕ್ಕೆ ಭೇಟಿ ಕೊಡಿ. ಇವಿಷ್ಟೂ ಸ್ಥಳಗಳಲ್ಲಿ ಎದ್ದು ಕಾಣುವ ಬದಲಾವಣೆಯಾಗಿರುವುದು ಶಿವಮೊಗ್ಗದಲ್ಲಿ ಮಾತ್ರ ಎಂಬುದನ್ನು ಕಾಂಗ್ರೆಸ್ ಜೆಡಿಎಸ್ ಬೆಂಬಲಿಗರೂ ಒಪ್ಪುತ್ತಾರೆ!

ಇನ್ನು ಈಗ ಯಡಿಯೂರಪ್ಪನವರ ಮನವೊಲಿಸಿ ಪಕ್ಷದಲ್ಲೇ ಉಳಿಸಿಕೊಳ್ಳುವಂತೆ ಕೇಂದ್ರ ನಾಯಕರ ಮನವೊಲಿಸಲು ಹೊರಟಿರುವ ರಾಜ್ಯ ಬಿಜೆಪಿ ನೇತಾರರು ಹಿಂದೆ ತಾವೇ ಮಾಡಿದ ಖಳನಾಯಕ ಕೆಲಸವನ್ನು ಮೊದಲು ಒಪ್ಪಿಕೊಳ್ಳುವುದೊಳಿತು. ಇವರೆಲ್ಲ ಏಕೆ ಕೇಂದ್ರಕ್ಕೆ ಧಾವಿಸಿದರೆಂದರೆ ಯಡಿಯೂರಪ್ಪನವರಿಲ್ಲದಿದ್ದರೆ ಬಿಜೆಪಿ ಕಥೆ ಏನಾಗುತ್ತದೆ, ಈ ನಾಯಕ ಶಿಖಾಮಣಿಗಳ ವೈಯಕ್ತಿಕ ತಾಕತ್ತು ಎಷ್ಟು ಎಂಬುದು ಜ್ಞಾನೋದಯವಾದಂತಿದೆ. ಇಷ್ಟಕ್ಕೂ ಈಶ್ವರಪ್ಪ, ಸದಾನಂದಗೌಡ, ಅನಂತಕುಮಾರರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದರೆ ಯಾರುತಾನೇ ವೋಟು ಕೊಡುತ್ತಾರೆ? ವಸ್ತುಸ್ಥಿತಿ ಹೀಗಿರುವಾಗ ಗಡ್ಕರಿ ಒಬ್ಬ ಭ್ರಷ್ಟ ಮನುಷ್ಯ ಎಂಬುದು ಅನುಮಾನಕ್ಕೆ ಆಸ್ಪದವೇ ಇಲ್ಲದಂತೆ ಸಾಬೀತಾಗಿದ್ದರೂ ಗದ್ದುಗೆಯಲ್ಲೇ ಇಟ್ಟುಕೊಂಡಿರುವ ಕೇಂದ್ರದ ನಾಯಕರು ಎಚ್ಚೆತ್ತುಕೊಂಡು, ಯಡಿಯೂರಪ್ಪನವರ ಅಳಲನ್ನೂ ಕೇಳಿ ಸಮರ್ಪಕವಾಗಿ ಸ್ಪಂದಿಸದಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಧೂಳೀಪಟವಾಗುವುದು ನಿಶ್ಚಿತ. ಇಷ್ಟಾಗಿಯೂ ಹೊರಗಡೆಯವರನ್ನು ಕರೆದುಕೊಂಡು ಬಂದು ಹಣ, ಹೆಂಡ ಹಂಚಿದ್ದರಿಂದ ಪಕ್ಷ ಹಾಳಾಯಿತು ಎಂದು ಹಳಹಳಿಸುತ್ತಿರುವ ಈಶ್ವರಪ್ಪನವರು ಅದರ ನಿಜವಾದ ಫಲಾನುಭವಿಯಲ್ಲವೆ? ಅವರು ಇಂದು ಏರಿರುವ ಉಪಮುಖ್ಯಮಂತ್ರಿ ಗಾದಿ ಆಪರೇಷನ್ ಕಮಲದ ಫಲವೇ ಅಲ್ಲವೆ? ಇತ್ತ ಈ ಶೆಟ್ಟರನ್ನು ಯಾರಾದರೂ ‘ನಮ್ಮ ಮುಖ್ಯಮಂತ್ರಿ’ ಎಂದು ಹೆಮ್ಮೆಪಡುವಂತಿದೆಯೇ ಹೇಳಿ? ಎಲ್ಲ ದೌರ್ಬಲ್ಯಗಳ ಹೊರತಾಗಿಯೂ ಅಧಿಕಾರಿ ವರ್ಗವನ್ನು ಬಗ್ಗಿಸಲು, ಅವರಿಂದ ಕೆಲಸ ತೆಗೆಯಲು ಹಾಗೂ ಎದೆಗುಂದಿರುವ ಇಂಥ ಕ್ಷಣದಲ್ಲಿ ಬಿಜೆಪಿಗೆ ಬೇಕಾಗಿರುವುದೂ ಯಡಿಯೂರಪ್ಪನವರಂಥ ಗಟ್ಟಿ ವ್ಯಕ್ತಿತ್ವವೇ. ಅವರನ್ನು ಉಳಿಸಿಕೊಳ್ಳದಿದ್ದರೆ ನಾಶವಾಗುವುದು ಬಿಜೆಪಿಯೇ!

ಏನಂತೀರಿ?

122 Responses to “ಇಷ್ಟಕ್ಕೂ ಯಡಿಯೂರಪ್ಪನವರು ಮಾಡಿದ ತಪ್ಪಾದರೂ ಏನು?”

 1. Sridevi V J says:

  Yes Prathap u r correct….As per my openion Devegouda and Kumaraswami olasanchige baliyada duranta nayaka…..

 2. akshay says:

  superb article sir,,,,,,,

 3. somashekhargowda says:

  hi sir nimma yella article saha nanu tappade oduttene yellavu kuda tumbane ishta ,namage deshabhakthi jasthi haguva hage madiddu nimma haritavada lekhanagalu ..but neevu yediyurappanavarannu hogali bareda lekhana namage like aglilla ,ashtondu scandal madiddare kurchigagi thumba kittadiddare ,ivattond helike kotre nale innond helike kodthare ,avara district nalli abhivruddi madiddare antha avara yella tappugalannu muchchiduvudu tappu yembudu namma bhavane..namage narendra modi antaha uttamavada tanna desha,rajyada bagge kalaji iruva pramanika vyakthi mukyamantri agali yembudu namma ashaya

 4. JAGADISH M. SHIRAHATTI says:

  Sir,

  Your article is superb, truth article

 5. prakash KC says:

  hats off to your mercy on BJP and corrupted yeddi. it the worst article from you i have ever read. you r justifying all the nonsenses of BJP and Yeddi. It s shame on you

 6. Sridevi V J says:

  Yes u r correct sir…..Yadiyurappanavaru devegouda mattu kumaraswami olasanchige baliyada obba durantha nayaka….

 7. bsy says:

  I am not clear your standing by yedi or bjp.

 8. ramesh says:

  your stand is not clear…

 9. srinivas deshpande says:

  Good article Mr. Prathap. By seing the present conditions of Mangalore- Sullya road one will come to know the capacity of the ex chief minister Mr. Sadananda Gouda

 10. srinivas deshpande says:

  Good article Mr. Prathap. By seing the present conditions of Mangalore- Sullya road one will come to know the capacity of the ex chief minister Mr. Sadananda Gouda!, who has done nothing except occupying chair for 11 months.

 11. IRAGOUDA says:

  i agree with ur opinion but as we were supporter of BJP but now its time to change the party because we r waiting 4 d development so that will be done only by one man that is our beloved leader BSY…..

 12. santhosh says:

  this is biased artical.

 13. Manojkumar says:

  tumbane veshesha vagi bannisidiri pratap avare , vastava sangatigalannu bahala chenage tilisidire but nand ond request RAVI BELEGERE YAVARA LIFE HISTROY AVARILGE PUBLISH MADI DIRYA ELLA BUT JANATEGE NIVU NIMMA SYALLI YALLI TILISIDARE JANATE ATANA LEKHANA GALANU ODI TAAPPU KALPANEGE JARUVUDU TAPPUTADE JANATEGU YECHARISIDANTAGUTADE

 14. Sunil Kumar DP says:

  Dear Prathap,

  kaleda 5 varshagalinda nimma yella lekhanagalannu oduttha bandiddene, haage nanu ninna dodda abhimani antha hemme inda heluttha nanna kelavondu prasnegalige nimminda uttharagalannu neerikshe maduthirutthene ………..

  1) yadiyurappa madida yella thappugaligu paristhithiya karana heli samarthisuva nimma niluvu sariye?

  2) Haagiddare karanagala nepa heli manushya maduva yella thappugalu thappallave ?

  3) Yella samudayada janarannu samanathe inda nodiddarembudu nimma abhipraya hagiddare manthri mandaladalli lingayitha mukandarige simhapalu neediddu yaru?

  4) ಸೆಸ್ vidhisalu mundada yediyurappa adiru sarabaraju madalu jindal jothe oppanda madikollova moolaka kickbag padediddaremba lokayuktha sallisiruva varadige neevenathiri?

  5) sadananda gowdarannu kelagilisalu karanavadaru yenu? yediyurappa mathu kelilla annode adare gowdaru saha avara adiyanne thuliyabekitthe? yediyurappa e rajyakke sarvadhikaariye ?

  6) RSS inda banda yediyurappanavaru adikara kodada onde karanakke BJP thoredaddu avara adikara vyamovannu thorisutthadallave ?

  7)ondu rajyakke CM adavaru ondu dist annu (shivamoggavannu) abhiruddhipadisiddaremba nimma mathu nijavadare innuulida yella districtgala janarige madida anyavallave,rajyada yella jaathi matthu jillegala mathadara mathagalu padedillave?

 15. ravi says:

  yes sir,

  Exactly Mr.Yaddiyorappa needs to BJP, other wise no more BJP In Karnataka State.

 16. Pradeep says:

  ನೋಡಿ ಸ್ವಾಮಿ, ಇತಿಹಾಸದಲ್ಲಿ ಯ್ದಡ್ಡಿ ಒಬ್ಬರೆ ಏನು ಈ ಥರದ ಪರಿಸ್ಥಿತಿ ಅನುಭವಿಸಿಲ್ಲ, ಪ್ರತಿ ಕುರ್ಚಿಯ ಹಿಂದೆನೂ ಅಸ್ಠಿರತೆ ನೆರಳಾಗೆ ಇರುತ್ತೆ. ದುಡ್ಡು ಯಾವತ್ತಿದ್ದರೂ ಕ್ಶಣಿಕ ಮತ್ತು ಅಸ್ಠಿರ. ಬುದ್ದಿವಂತಿಕೆ, ಸಮಯ ಪ್ರಜ್ನೆಯಿಂದ ರಾಜಕೀಯ ಮಾಡಬೇಕು. ಅದು ಬಿಟ್ಟು ಎಳೇ ಮಕ್ಕಳ ಥರ ರಛ್ಛೆ ಹಿಡಿದರೆ ಯಾರಿಗೆ ಹೇಸಿಗೆ ಆಗಲ್ಲ?. ಅಂಕಣ ಚೆನ್ನಾಗಿದೆ ಆದರೆ ಅನುಕಂಪದ ಮಾತುಗಳ ಹಿಂದೆ ದೂರಾಲೋಚನೆಯೂ ಕಾಣ್ತಾಯಿದೆ!

 17. Umesh JR says:

  Yes sir. u r dam right………Time played a game with BSY.

 18. Vikas Dravidian says:

  well said!

 19. Harish says:

  u r absolutely rite man!!!!

 20. Ram says:

  Writing about Yadyurappa.. I dont think BJP got into power in Karnataka because of Yadyurappa. BJP came to power because of the mercy of the people as Kumarswami betrayed BJP. BSY was only a symbol, it was not him who worked for the success of BJP. Else, it would not have taken him from 1988(when he became the state president of BJP) till 2008 to bring the BJP into power. He worked for his own benefits once he became the CM. People’s memory is so short, now a days the media is projecting BSY as a leader who made BJP to come to power, but he is not! just not!
  Please do not write such articles, Pratap, does not make sense! BSY is a person with out team spirit. A single person should not be an identity of any party, that is not democracy..

 21. veerendra sobarad says:

  yes I agree with you but when BJP is telling good position to BSY he should think once. Its difficult to manage local parties in Karnataka History itself ll show.

 22. balaji kumbar says:

  very nice artical sir,

 23. sharath says:

  it s realy right…………….

 24. harikishor says:

  1) In bangalore after many years of effort there was regular daily water supply after Yeddiyurappa took to power supply has become worst, and even for next ten years ruling party has no intention to ensure sufficient water. 2) Spoiled teachings of Basavanna for his political carrier 3) Did not use his intelligence for the welfare of people during his tenure 4) Has associated with womanizers against culture of India 5) Does not have simple honest intentions of making people wealthy and comfortable his minister Shoba karandlaze worked hard to deny people sufficient cooking gas 6) to list there are million negatives Why he is still crying even after 75 years age as if there is no talent in Karnataka to do politics ? is it not the time for him to give opportunity to many more talented youngsters, ……

 25. Dhananjaya Murthy says:

  YA it is realy fine Article sirrrrrrr,,,

 26. chethan says:

  I condemn all who supports yeddi’s stand he is one of most corrupt and crime convicted person for eg he beats his car driver in front of media and one more fact I heard with my bear ear’s while travelling in bus an old school head master telling to his relative that for his transfer order signature he demanded 2 lakh ransom when he was deputy CM, he is totally depend on his community this is worst scenerio never happend in karnataka history but pratap ji I never expected this kind of article from you? justify it. Also ask yeddi in his three and half years government how many converted christian are back to hindu community? If you have wisdom work on these issues not on sympathy creation to yeddi he is coward politician who kills farmer’s and destroy the small hut in front of owned college in shimogga while writing the article please have some sense of these kind, drop water makes an ocean a small small sin makes the monster mind it. Hathee buddi katte …….. tilkolli I hope in future you will justify your answer to non corrupt mass of karnataka. Jai Karnataka Maate.

 27. DM Mahesh says:

  kanditha niv eliddu…..siskse ellarigu agbeku…thappu ella madidare. adre..adunna obbara mele aki..yengya madodu thappu antha nivu eliro mathalli ..artha ede sir…..nanu nimma baravanige ya abimani…e lekana thumba channagi…

 28. Basavraj Talwar says:

  National BJP is unwilling to remove Gadkari because he is a MARATHI BRAHMIN. RSS chief Mohan Bhagwat is also a marathi brahmin. RSS marathi brahmins like M G Vaidya, Mohan Bhagwat are supporting Nitin Gadkari. Even North indian brahmins like
  Yashwanth sinha don’t have a positive reponse from either BJP/RSS to his words.
  RSS has become a complete marathi brahmin gang. Even kannagiga brahmin like Ananth Kumar was better than Gadkari.
  It seems like if a marathi brahmin like Gadkari, does corruption it is okay. But if a shudra like Yeddyurappa, Reddy, Sriramulu does corruption its not ok for RSS.

 29. Bhimashankar Teli says:

  super article. Good one. Jai KJP JAI BSY

 30. subbu u says:

  hmm so cnfusepa..

 31. Manoj says:

  wrost article. Need to analysis his selfishness and caste based movement in party.
  Pratap you need to improve a lot.

 32. Gagana Venkatesha says:

  I totally agree with you Mr. Pratap Simha !!!

 33. Akshay says:

  Prathap avare … You are potraying corrput politicians like a hero who has done a great job for the country …. Yella politicians galu (irrespective of parties) are corrput. Yellarigu adhikaradha daaha ide, anthahavaru yentha keelu mattakke bekaadharu hogutthare. So i request you not to support any corrupt politician of this country.

 34. Girish says:

  Never expected this from Prathap Simha.
  BSY’s only accomplishment was showing people that we are no better than JDS or Congress (You also mentioned that he did not do anything wrong which others did not), like
  – Corruption.
  – Wanting to make BJP appa makkala paksha

  He is next Deve Gowda in making for karnakata..

 35. Dharni says:

  Supporting corrupt CM..?!!!?
  Wat happened pratap

 36. yash says:

  i’m big fan of u sir.. i hv read all your book including modi.. BUT me dispointed and surprised…..? write article on yaddi’s KJP… KALLARA BRASTARU(rapiest,blue film,kiss)gala PAKSHA ….. on the SIDELINE title “NEEVU MANEYALLI NODALVA BLUE FILM BY YADDI

 37. PRASAD says:

  DEAR PRATAP SIR PLEASE DONT CHANGE YOUR OPINION ON BSY.

  THIS ARTICLE IS WELL ANALYSED AND 100% CORRECT . THERE WILL BE LOT OPPOSITION WHEN SOMEBODY WANTS TO CHANGE FOR GOOD REASON BUT SIR ON THE OTHERSIDE THERE WILL BE A GOOD NUMBER OF SUPPORTERS ALSO.

  SO DONT CHANGE YOUR MIND SIR. WE NEED PEOPLE LIKE BSY AND MODI AS A LEADERS NOT UBBALLA ANANTI , UCCHA ESHWARAPPA AND JOKER SADA GOWDA.

 38. Lokesh says:

  Please Read
  ಜಗ ಮೊಂಡನ ಕಥೆ……….
  ಯಡಿಯೂರಪ್ಪ ಅನ್ನುವ ಜಗ ಮೊಂಡನಿಗೆ ಇನ್ನೊಬ್ಬ ಮೋದಿಯಾಗುವ ಎಲ್ಲಾ ಅವಕಾಶಗಳು ಒದಗಿ ಬಂದಿದ್ದವು. ಕರ್ನಾಟಕ ರಾಜ್ಯದಾದ್ಯಂತ ಬೀಸಿದ ಅನುಕಂಪದ ಅಲೆ ಅಂತಹ ಒಂದು ಸುವರ್ಣ ಅವಕಾಶವನ್ನು ತಂದುಕೊಟ್ಟಿತ್ತು. ಆದರೆ ಯಡಿಯೂರಪ್ಪ ಮಾತ್ರ ಇನ್ನೊಬ್ಬ ಮೋದಿಯಾಗಲೇ ಇಲ್ಲ. ರಾಜಕೀಯ ಜೀವನ ಸಮುದ್ರದಲ್ಲಿ ಈಜಿ ಬಂದಿದ್ದರೂ ಒಬ್ಬ ಉತ್ತಮ ನೇತಾರ ಅನ್ನುವುದನ್ನು ನಿರೂಪಿಸುವಲ್ಲಿ ಸತತವಾಗಿ ಎಡವುತ್ತಾ ಸಾಗುತ್ತಾರೆ. ಅಪಾರ ನಿರೀಕ್ಷೆಯಿಂದ ಯಡಿಯೂರಪ್ಪನನ್ನು ಆರಿಸಿ ಕಳುಹಿಸಿದ ಜನತೆ ಮೂಕರಾಗುತ್ತಾರೆ. ರೈತರ ಹೆಸರಲ್ಲಿ ಪ್ರಮಾಣ ವಾಹನವನ್ನು ಸ್ವೀಕರಿಸಿದ ಮರುಕ್ಷಣವೇ ರೈತರಿಗೆ ಗುಂಡು ಹಾರಿಸಿ, ತಮ್ಮೊಳಗೆ ಇನ್ನೊಬ್ಬ ವಿಕೃತ ಮನಸಿನ ಯಡಿಯೂರಪ್ಪ ಇದ್ದಾನೆ ಅನ್ನುವುದನ್ನು ತಮ್ಮ ಪ್ರೀತಿಯ ಜನತೆಗೆ ತೋರಿಸಿಕೊಡುತ್ತಾರೆ.
  ಅಧಿಕಾರ ಸ್ವೀಕರಿಸಿದ ಮರುಕ್ಷಣವೇ ತುಘಲಕ್ ದರ್ಬಾರು ಸುರುವಿಟ್ಟು ಕೊಳ್ಳುತ್ತಾರೆ. ನಾನು ಅಂದರೆ ಬಿಜೆಪಿ ಅಧಿಕಾರ ಅಂದರೆ ತನ್ನ ಮನೆಯ ಸ್ವಂತ ವಿಷಯ ಅನ್ನುವಂತೆ ಭಾವಿಸಿ ಮಿಕ್ಕೆಲ್ಲರನ್ನು ತುಳಿಯುವುದಕ್ಕೆ ಪ್ರಾರಂಭಿಸುತ್ತಾರೆ. ಇಲ್ಲಿ ರೆಡ್ಡಿಗಳು ಜನಜನ ಕಾಂಚನ ಅನ್ನುವಂತೆ ಸದ್ದು ಮಾಡಿದ್ದು ಮಾತ್ರ. ಬಾಚಿಕೊಂಡಿದ್ದು ಯಡ್ಡಿ ಮತ್ತು ಕುಟುಂಬ ವರ್ಗ. ಹಿಂದಿನ ಎಲ್ಲಾ ಬ್ರಷ್ಟಾಚಾರದ ದಾಖಲೆಗಳ ಪುಟ ಪುಟಗಳನ್ನೂ ಅಳಿಸಿ ಹಾಕಿ ಅಧಿಕಾರ ಇರುವಾಗಲೇ ಜೈಲು ಸೇರಿ ಹೊಸದೊಂದು ದಖಾಲೆಯನ್ನೇ ಮಾಡಿಬಿಡುತ್ತಾರೆ.
  ಇಲ್ಲಿ ತಪ್ಪು ಯಡಿಯೂರಪ್ಪ ಒಬ್ಬರದೇ ಅಲ್ಲ. ಬಿಜೆಪಿಯಲ್ಲಿ ಯಡಿಯೂರಪ್ಪ ಒಬ್ಬರೇ ನಾಯಕ ಅನ್ನುವಂತೆ ಮೆರೆಸಿದ್ದು ರಾಷ್ಟ್ರೀಯ ಪಕ್ಷವಾದ ಬಿಜೆಪಿಯ ದೊಡ್ಡ ತಪ್ಪು. ಯಡಿಯೂರಪ್ಪನ ಎಲ್ಲಾ ಮೊಂಡು ಬುದ್ಧಿಗೂ ಮುಖ್ಯ ಕಾರಣವೂ ಇದೆ. ವಿಶಾಲವಾದ ಕರ್ನಾಟಕಕ್ಕೆ ಒಬ್ಬನೇ ನಾಯಕ ಅಂತ ಬಿಂಬಿಸಿದಾಗ ಆನೆ ನಡೆದದ್ದೇ ದಾರಿ ಅನ್ನುವಂತೆ ಆಗುತ್ತದೆ ಅನ್ನುವ ಒಂದು ಸಣ್ಣ ಪರಿಜ್ನ್ಯಾನ ಆ ಪಕ್ಷಕ್ಕೆ ಇರಬೇಕಿತ್ತು. ಯದಿಯೂರಪ್ಪನಲ್ಲಿ ನಾಯಕತ್ವದ ಗುಣಗಳಿಲ್ಲ ಅನ್ನುವುದನ್ನು ತಿಳಿಯುವ ಹೊತ್ತಿಗೆ ಅವನತಿ ಬಾಗಿಲು ತೆರೆದು ಕಾದು ನಿಂತಿತ್ತು

 39. santhosh says:

  hats off to your mercy on BJP and corrupted yeddi. it the worst article from you i have ever read. you r justifying all the nonsenses of BJP and Yeddi. It s shame on you
  i know you can write anything but dont write these kind of nonsense aritcles .
  at last u also became corrupt . how much u took from yeddi?

 40. Veeru says:

  Dear Prathap Sir,

  Most of the people in Karnataka have not known the facts behind the frustrated Yeddiyurppa’s disgusted talks & behaviour.

  Thanks for writing the facts.

  Most of the peoples may think you are supporting but as per me you are writing the facts which you have been doing it for past several years dedicatedly.

  Thanks again.

 41. Sharath Kumar says:

  Mr. Pratap Simha,

  Yako neevu mattu nimma team kuda thumba change agta edhe. Alla ———- mahime alva. Alla aste ree.. navu bakragalu aste

 42. Yogesh Shetty says:

  I have analyzed the Karnataka Politics and really agree with your points.
  Such articles are required for us to understand the facts. JDS and Congress who claim BSY as corrupt, are 100 times more corrupt, which we all know. And i had personally been to shimoga and seen the developments. Admist so many obstacles, BSY had given many good programmes, i wish BSY had got complete majority. Amongst the current Cheif minsterial candidates – Siddarammiah, Kumaraswamy ( Most Corrupt politicians of karnataka), Sadananda Gowda( Comedian , not a politicain at all), Shettar(Manmohan Part 2) , BSY is the best it seems..

  Hats off to pratap Simha for such crystal clear, based of proofs and great analysis on this article. I look forward for such enlightening articles going forward.

 43. Arkanatha Sastry says:

  deepa aaruvaaga joraagi uridu aaruttade emba nidarshanakke BJP saakshiyaagalide. BJP yalli aantarika kacchaata illadiddare BSY karnatakada MODI yaaguttiddaru. BSY is really a great leader. No other leader is there in Karnataka as a whole other than BSY and Kumaraswamy. Great analysis my dear Pratap.

 44. Ravi says:

  Worst ever article by PS ever…

 45. siddesh says:

  you r right Mr prathap

 46. Manjunath mugalikatti says:

  Yes sir.you are 100%right.last 20years no lingayath chief minister(S.R BHOMMAE.HEGDE.J.H PATEL. BSY ) survive due to goudas.they will not allow to take CM POST OTHER THEN GOWDAS.DEVEGOWDA IS Basmasura.

 47. Rajesh says:

  100% correct sir.Your opened the truth behind the BSY.
  What’s the contribution from BJP Central leaders to win and swear BJP government in karnataka.
  No one can imagine BJP without BSY in karnataka.
  One thing its very very unfortunate that LK Advani listining only Ananthkumar words without factual truth.It shows that BJP central leader LK Advani is creating crisis instead of winning it.
  Sorry for this statement but it is truth in my point of view.The reason is, as a vision leader he should groom the leaders with their qualities by judging with his/her own measures but not listening (from some one like ananthkumar)something which is notfactual.

 48. umesh says:

  Hi sir…but its surprized to comment on yudiyurappa by you.

 49. Chandrashekar K Mudhol says:

  Pratap Sir ,

  As you written , Invitable for us to accept and its indeed .
  In politics , the politicians has to financial strong cos as we all know without money. A sipmle man cannot make his name / fame .
  As Yeddi did the same . We can hold faith on him for future development for our nation .
  As Yeddi takeing the name of NDM in all public places .We want Yeddi should be like NDM . untill we all support amicably to BJP party .

  I would like to add We all come together and make our state as developed state like Gujrat .

  Regards .
  Chandrashekar K M ( cookiechandra @ twitter @ facebook )

 50. ningaraj says:

  i strongly agree to dis article………. yadiyurappanavarige kumarswamy, devegowdru,s.m.krishna, darmasingh,mallikarjunakarge…… hagu ithyadi “JANANAYAKARU” gala thara dudd madoke barlilla ashte….. yadiyurappanavrige paristhithi hage madirbahudu adhre avarobba RITHAPARA nayaka antha oppuve………. Prathap avre mele iruvantha negative and positive comments bagge thale kedskobedi……. sathyakke hatthiravadadannu bare iri….