Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಬಿಜೆಪಿ-ಬಿಎಸ್‌ವೈ=2, ಬಿಜೆಪಿ+ಬಿಎಸ್‌ವೈ=…?

ಬಿಜೆಪಿ-ಬಿಎಸ್‌ವೈ=2, ಬಿಜೆಪಿ+ಬಿಎಸ್‌ವೈ=…?

ಜಗದೀಶ್ ಶೆಟ್ಟರ್

ಸದಾನಂದ ಗೌಡ

ಕೆ.ಎಸ್. ಈಶ್ವರಪ್ಪ

ಆರ್. ಅಶೋಕ

ಪ್ರಹ್ಲಾದ ಜೋಶಿ

ಅನಂತ ಕುಮಾರ್

ಒಬ್ಬ ಹಾಲಿ ಹಾಗೂ ಒಬ್ಬ ಮಾಜಿ ಮುಖ್ಯಮಂತ್ರಿ, ಹೀಗೆ ಇಬ್ಬರು ಮುಖ್ಯಮಂತ್ರಿಗಳು. ಇಬ್ಬರು ಹಾಲಿ ಉಪ ಮುಖ್ಯಮಂತ್ರಿಗಳು. ಇವರಲ್ಲದೆ ಉತ್ತರ ಕರ್ನಾಟಕದ ಮತದಾರರು ಪಕ್ಷದಿಂದ ದೂರವಾಗದಂತೆ ತಡೆಯುವ ಸಲುವಾಗಿಯೇ ನೇಮಕಗೊಂಡ ನೂತನ ರಾಜ್ಯ ಬಿಜೆಪಿ ಅಧ್ಯಕ್ಷರು. ಅಷ್ಟೇ ಅಲ್ಲ, ಕರ್ನಾಟಕ  ಬಿಜೆಪಿಯ ‘ರಾಷ್ಟ್ರೀಯ’ ಚಹರೆ(ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ)! ಒಲ್ಲದ ಮನಸ್ಸಿನಿಂದ ಕಡೆ ಕ್ಷಣಕ್ಕೆ ಆಗಮಿಸಿದ ನರೇಂದ್ರ ಮೋದಿಯವರನ್ನು ಹೊರತುಪಡಿಸಿದರೂ ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ನೇತಾರ ಲಾಲ್‌ಕೃಷ್ಣ ಆಡ್ವಾಣಿ ಹಾಗೂ ಸುಷ್ಮಾ ಸ್ವರಾಜ್. ಇವರೆಲ್ಲರೂ ರಾಜ್ಯದುದ್ದಗಲಕ್ಕೂ ಪ್ರವಾಸ ಮಾಡಿದರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಪಕ್ಷ ತೊರೆದ ನಂತರ ಭ್ರಷ್ಟಾಚಾರದ ಕಳಂಕ ನಮ್ಮಿಂದ ದೂರವಾಗಿದೆ ಎಂದು ಸಾರಿದರು.

ಇಷ್ಟಾಗಿಯೂ…

2013, ಮೇ 8ರಂದು ಹೊರಬಿದ್ದ ಫಲಿತಾಂಶ ಹೇಗಿತ್ತು? ಅಧಿಕಾರದಲ್ಲಿದ್ದ ಪಕ್ಷಗಳು ಹೀನಾಯ ಸೋಲು ಕಂಡಿದ್ದನ್ನು ನೋಡಿದ್ದೇವೆ. ಆದರೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟ ಉದಾಹರಣೆಗಳು ಎಷ್ಟಿವೆ ಹೇಳಿ? ಇಬ್ಬರು ಮುಖ್ಯಮಂತ್ರಿಗಳು, ಅಷ್ಟೇ ಸಂಖ್ಯೆಯ ಉಪಮುಖ್ಯಮಂತ್ರಿಗಳು, ರಾಷ್ಟ್ರೀಯ ನಾಯಕರು, ಪಕ್ಷದ ರಾಜ್ಯ ಅಧ್ಯಕ್ಷರು ಅಬ್ಬರದ ಪ್ರಚಾರ ನಡೆಸಿದರೂ 121 ಇದ್ದ ಬಿಜೆಪಿಯ ಸ್ಥಾನಗಳ ಸಂಖ್ಯೆ ಕೇವಲ 40ಕ್ಕೆ ಇಳಿಯಿತೆಂದರೆ ಇವರ ಬಗ್ಗೆ ಜನರಿಗೆ ಎಷ್ಟರ ಮಟ್ಟಿನ ವಿಶ್ವಾಸವಿದೆ, ಇವರ ಮಾತುಗಳನ್ನು ಜನ ಎಷ್ಟು ನಂಬುತ್ತಾರೆ, ಇವರೆಂಥ ಸುಭಗರು ಎಂದು ಯೋಚನೆ ಮಾಡಿ? ನರೇಂದ್ರ ಮೋದಿಯವರು ಚುನಾವಣಾ ಪ್ರಚಾರಾಂದೋಲನಕ್ಕೆಂದು ಬಸವನಗುಡಿ ಮೈದಾನಕ್ಕೆ ಆಗಮಿಸಿದಾಗ ಭಾಷಣಕ್ಕೆ ಮುಂದಾದ ಮುಖ್ಯಮಂತ್ರಿ ಶೆಟ್ಟರ್ ಹಾಗೂ ಅನಂತಕುಮಾರ್ ಅವರನ್ನು ಜನರು ವಾಪಸ್ಸಟ್ಟಿದಾಗಲೇ, ಅಂದರೆ ಮತದಾನಕ್ಕೂ ಮೊದಲೇ ಇವರ ಬಗ್ಗೆ ಜನರಿಗಿರುವ ನಂಬಿಕೆ, ವಿಶ್ವಾಸ ಎಂಥದ್ದು ಹಾಗೂ ಇವರ ಯೋಗ್ಯಾಯೋಗ್ಯತೆಯೇನು ಎಂಬುದು ಜಗಜ್ಜಾಹೀರಾಗಿತ್ತು. ಕೊನೆಗೆ ಮೇ 8ರಂದು ಪ್ರಕಟವಾದ ಫಲಿತಾಂಶದಲ್ಲೂ ಅದೇ ವ್ಯಕ್ತವಾಯಿತು. ಚುನಾವಣೆಗಿಂತ ಸ್ವಲ್ಪ ಮೊದಲು ಅಧ್ಯಕ್ಷರಾದ ಪ್ರಹ್ಲಾದ ಜೋಶಿಯವರನ್ನು ಹೆಚ್ಚಾಗಿ ದೂರುವುದಕ್ಕಾಗುವುದಿಲ್ಲ. ಆದರೆ ಜಗದೀಶ್ ಶೆಟ್ಟರ್, ಸದಾನಂದ ಗೌಡ, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ ಹಾಗೂ ಅನಂತ ಕುಮಾರರನ್ನಂತೂ ಜನ ಸಾರಾಸಗಟಾಗಿ ತಿರಸ್ಕರಿಸಿದರು. ಅದು ಮೇ ತಿಂಗಳ ಕೊನೆ ದಿನ ಪ್ರಕಟವಾದ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶದಲ್ಲಿ ಮತ್ತೂ ಕಠೋರ ಹಾಗೂ ಹೀನಾಯವಾಗಿ ವ್ಯಕ್ತವಾಯಿತು. 2008ರಲ್ಲಿ ಪಿರಿಯಾಪಟ್ಟಣದಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಗೆ 2013ರಲ್ಲಿ ಯಾವ ಸ್ಥಿತಿ ಬಂತು ಅಂದುಕೊಂಡಿರಿ? ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಐದೂವರೆ ಸಾವಿರ ಮತಗಳನ್ನು ಪಡೆದು ಮೂರನೇ ಸ್ಥಾನ ಗಳಿಸಿದರೆ, ಕೇವಲ ಮೂರೂವರೆ ಸಾವಿರ ಮತ ಪಡೆದ ಬಿಜೆಪಿ ನಾಲ್ಕನೇ ಸ್ಥಾನಕ್ಕಿಳಿಯಿತು! ದೂರದ ಬಳ್ಳಾರಿಯವರಾದ, ಗಣಿ ಧೂಳು ಅಂಟಿಕೊಂಡಿರುವ ಶ್ರೀರಾಮುಲು ಪಕ್ಷಕ್ಕಿಂತಲೂ ಬಿಜೆಪಿ ಕಡೆಯಾಯಿತು.

ಇಂಥ ನಾಯಕ ಶಿಖಾಮಣಿಗಳನ್ನು ಇಟ್ಟುಕೊಂಡು 2014ರ ಲೋಕಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಧುಮುಕಿದರೆ ಕಥೆ ಏನಾಗಬಹುದು ಊಹಿಸಿ?!

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಕಿತ್ತೊಗೆದು ಅಧಿಕಾರಕ್ಕೇರಲೇಬೇಕೆಂದು ಹೊರಟಿರುವ ಬಿಜೆಪಿಗೆ ಕರ್ನಾಟಕದಿಂದ ಎಷ್ಟು ಸೀಟು ಬಂದಾವು ಎಂದು ಭಾವಿಸಿದ್ದೀರಿ? 2013ರ ವಿಧಾನಸಭೆ ಚುನಾವಣೆಯಲ್ಲಿ ಪಡೆದ ಜಿಲ್ಲಾವಾರು ಮತಗಳನ್ನು ಗಣನೆಗೆ ತೆಗೆದುಕೊಂಡರೆ ಬಿಜೆಪಿಗೆ ಕೇವಲ 2 ಸೀಟುಗಳು ದಕ್ಕಲಿವೆ. ಅವು ಬಿಜೆಪಿ ಸಾಂಪ್ರದಾಯಿಕ ಭದ್ರಕೋಟೆಗಳಾದ ಮಂಗಳೂರೂ ಅಲ್ಲ, ಬೆಂಗಳೂರು ದಕ್ಷಿಣವೂ ಅಲ್ಲ, ಬೆಳಗಾವಿ ಮತ್ತು ಚಿಕ್ಕೋಡಿ! ಆ ಎರಡು ಸೀಟುಗಳೂ ಬರುತ್ತವೆ ಎಂದು ಖಚಿತವಾಗಿ ಹೇಳಲು ಯಾರಿಗೂ ಸಾಧ್ಯವಿಲ್ಲ!! ಏಕೆಂದರೆ ಚಿಕ್ಕೋಡಿಯಲ್ಲಿ ಬಿಜೆಪಿ ಕಾಂಗ್ರೆಸ್‌ಗಿಂತ ಕೇವಲ 4527 ಮತಗಳನ್ನು ಹೆಚ್ಚು ಪಡೆದಿದೆ. ಬೆಳಗಾವಿಯಲ್ಲಿ ಈ ಅಂತರ 14865 ಆಗಿದ್ದರೂ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸಣ್ಣ ಪ್ರಮಾಣದ ಮೇಲುಗೈ ಸಾಧಿಸಲು ಉಮೇಶ್ ಕತ್ತಿ, ರಮೇಶ್ ಕತ್ತಿ ಕಾರಣ ಎಂಬುದರಲ್ಲಿ ಅನುಮಾನವೇ ಇಲ್ಲ. ಇವರು ಮುಂದಿನ ಚುನಾವಣೆ ವೇಳೆಗೆ ಮತ್ತ್ಯಾವ ಪಕ್ಷಕ್ಕೆ (ಬಹುಶಃ ಕಾಂಗ್ರೆಸ್‌ಗೆ) ಹಾರುತ್ತಾರೆ ಎಂಬುದೂ ಅಷ್ಟೇ ಅನಿಶ್ಚಿತ. ಇನ್ನು ವಿಧಾನಸಭೆ ಚುನಾವಣೆಯ ಮತಗಳನ್ನು ದಿಕ್ಸೂಚಿಯಾಗಿಟ್ಟುಕೊಂಡರೆ ಐದು ಬಾರಿ ಸಂಸತ್‌ಗೆ ಆಯ್ಕೆಯಾಗಿರುವ “ರಾಷ್ಟ್ರೀಯ” ನಾಯಕ ಅನಂತ್ ಕುಮಾರ್ ಅವರು 56 ಸಾವಿರ ಮತಗಳಿಂದ ಸೋಲಲಿದ್ದಾರೆ!

ಹಾಗಿರುವಾಗ….

ಕೇಂದ್ರದಲ್ಲಿ ಗದ್ದುಗೆ ಹಿಡಿಯಲು ಹೊರಟಿರುವ, 180ರಿಂದ 200 ಸೀಟುಗಳನ್ನಾದರೂ ಗೆಲ್ಲಬೇಕಿರುವ ಬಿಜೆಪಿ ಕರ್ನಾಟಕದಲ್ಲಿ ಕಳೆದುಕೊಳ್ಳಲಿರುವ 19 ಸೀಟುಗಳನ್ನು ಎಲ್ಲಿಂದ ತಾನೇ ತುಂಬಿಕೊಳ್ಳಲು ಸಾಧ್ಯ? ಅಥವಾ ಇಲ್ಲಿನ ನಷ್ಟವನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡಿಕೊಳ್ಳಲು ಕೇಂದ್ರ ಬಿಜೆಪಿ ಮಾಡುತ್ತಿರುವುದಾದರೂ ಏನು? ಜನ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಬೇರೆ ಬೇರೆಯಾಗಿ ಮತ ನೀಡುತ್ತಾರೆ ಎಂಬುದು ನಿಜವಾದರೂ ಜನರನ್ನು ಮತಗಟ್ಟೆಗೆ ಕರೆತರಲು ನರೇಂದ್ರ ಮೋದಿಯೆಂಬ ಆಕರ್ಷಕ ಶಕ್ತಿಯೊಂದೇ ಸಾಲದು, ಕಾರ್ಯಕರ್ತರನ್ನು ಸಂಘಟಿಸುವ ಹಾಗೂ ಹುರಿದುಂಬಿಸುವ ಗಟ್ಟಿ ರಾಜ್ಯ ನಾಯಕತ್ವವೂ ಬೇಕು. ಆದರೆ ಅಂತಹ ನಾಯಕತ್ವ ಕರ್ನಾಟಕ ಬಿಜೆಪಿಯಲ್ಲಿ ಎಲ್ಲಿದೆ ಹೇಳಿ? ಮೊನ್ನೆ ಸೆಪ್ಟೆಂಬರ್ 13ರ ಸಾಯಂಕಾಲದವರೆಗೂ ಮೋದಿ ವಿರೋಧಿಯಾಗಿದ್ದವರು, ಮೋದಿಯೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾದ ಕೂಡಲೇ ರಾತ್ರೋರಾತ್ರಿ ತಯಾರಿ ನಡೆಸಿ ಮರುದಿನ ಬೆಂಗಳೂರು ದಕ್ಷಿಣ ಕ್ಷೇತ್ರದ ಪ್ರತಿ ಸರ್ಕಲ್‌ಗಳಲ್ಲೂ ಮೋದಿಯವರ ಜತೆಗಿನ ಭಾವಚಿತ್ರದ ಪೋಸ್ಟರ್ ಮಾಡಿಸಿ ಅಂಟಿಸಿಕೊಳ್ಳಬೇಕಾದ ದುಸ್ಥಿತಿ ಒದಗಿ ಬಂದಿದೆಯೆಂದರೆ ಈ ಅನಂತ ಕುಮಾರ್ ಮಹಾಶಯರ ತಾಕತ್ತು ಎಷ್ಟರ ಮಟ್ಟಿನದ್ದು ಹಾಗೂ ಎಂತಹ ದಿಗಿಲಿಗೊಳಗಾಗಿದ್ದಾರೆ ಎಂಬುದನ್ನು ಊಹಿಸಿ? ಇನ್ನು ಮುಖ್ಯಮಂತ್ರಿಯಾಗಿದ್ದಾಗ, ಯಡಿಯೂರಪ್ಪನವರು 17 ಉಪ ಚುನಾವಣೆಗಳಲ್ಲಿ ಪಕ್ಷಕ್ಕೆ ಗೆಲುವು ತಂದುಕೊಟ್ಟರೆ, ಮಾಜಿ ಮುಖ್ಯಮಂತ್ರಿಗಳಲ್ಲಿ ಒಬ್ಬರಾದ ಜಗದೀಶ ಶೆಟ್ಟರ್‌ಗೆ ಮೊನ್ನೆ ಮೊನ್ನೆ ನಡೆದ ಎಂಎಲ್‌ಸಿ ಚುನಾವಣೆಯಲ್ಲಿ ಸ್ವಂತ ತಮ್ಮನನ್ನೂ ಗೆಲ್ಲಿಸಲಾಗಲಿಲ್ಲ. ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಸದಾನಂದಗೌಡರಿಗಂತೂ ಮುಖ್ಯಮಂತ್ರಿಯಾಗಿದ್ದಾಗಲೇ ತಾವೇ ತೆರವು ಮಾಡಿದ್ದ ಉಡುಪಿ-ಚಿಕ್ಕಮಗಳೂರು ಸಂಸತ್ ಕ್ಷೇತ್ರವನ್ನೂ ಉಳಿಸಿ ಕೊಡಲಾಗಲಿಲ್ಲ. ಇನ್ನು ಅನಂತ್ ಕುಮಾರ್ ಕೃಪಾಪೋಷಿತ ನಾಟಕ ಮಂಡಳಿಯ ಪ್ರಮುಖ ಪಾತ್ರಧಾರಿಗಳು ಹಾಗೂ ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪನವರು ಹುಂಬತನಕ್ಕೆ ಪರ್ಯಾಯ ಪದವೆಂಬಂತಿದ್ದರೆ, ಅಶೋಕ ಒಂಥರಾ ಕಾಪೌಂಡ್ ಮೇಲೆ ಕುಳಿತ ಕಳ್ಳ ಬೆಕ್ಕಿನಂತೆ. ಯಾವ ಕಡೆ ನೆಗೆಯುತ್ತಾರೆ ಅನ್ನೋದೆ ಗೊತ್ತಾಗುವುದಿಲ್ಲ. ಇಂಥ ನಾಯಕರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದರೆ ಗತಿಯೇನಾದೀತು? ವಿಧಾನಸಭೆ ಚುನಾವಣೆಯಲ್ಲಾದ ಗತಿಯೇ ಎದುರಾಗುವುದು ನಿಶ್ಚಿತವಲ್ಲವೆ?

ಇತ್ತೀಚೆಗೆ ಟಿವಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ಬಿಜೆಪಿಯ ನಾಯಕರಿರುವುದು ರಾಜ್ಯಗಳಲ್ಲಿ’ ಎಂದಿದ್ದಾರೆ ಅರುಣ್ ಶೌರಿ!

ಅದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರಿಗೂ ಗೊತ್ತಾಗಿದೆ. ಅರುಣ್ ಜೇಟ್ಲಿ ಬಿಟ್ಟರೆ ಬೇರಾವ ದಿಲ್ಲಿ ನಾಯಕರನ್ನೂ ನೆಚ್ಚಿ ಕುಳಿತುಕೊಳ್ಳುವ ಸ್ಥಿತಿಯಲ್ಲಿ ಅವರಿಲ್ಲ. ಹಾಗಾಗಿ ಮೊನ್ನೆ ಬುಧವಾರ ಮಧ್ಯಪ್ರದೇಶದಲ್ಲಿ ನಡೆದ ಬಿಜೆಪಿಯ ಬೃಹತ್ ಸಭೆಯಲ್ಲಿ ಮೋದಿಯವರು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಛತ್ತೀಸಗಡದ ಮುಖ್ಯಮಂತ್ರಿ ರಮಣ್‌ಸಿಂಗ್ ಹಾಗೂ ರಾಜಸ್ಥಾನದಲ್ಲಿ ಗದ್ದುಗೆ ಏರುವ ಎಲ್ಲ ಸೂಚನೆ ಕೊಡುತ್ತಿರುವ ವಸುಂಧರಾ ರಾಜೆ ಸಿಂಧಿಯಾ ಅವರನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕೆಂದರೆ ವಿವಿಧ ರಾಜ್ಯಗಳ ನಾಯಕರ ಪ್ರಯತ್ನ ಬಹುಮುಖ್ಯ.

ಅಂತಹ ರಾಜ್ಯ ನಾಯಕ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಬಿಟ್ಟರೆ ಯಾರಿದ್ದಾರೆ ನೀವೇ ಹೇಳಿ?

ಈ ಸತ್ಯ ರಾಜ್ಯ ಬಿಜೆಪಿಯ ಯುವ ನಾಯಕರಿಗೆ, ಕಾರ್ಯಕರ್ತರಿಗೆ ಅರ್ಥವಾಗಿಲ್ಲವೆಂದೇನೂ ಇಲ್ಲ! ಗೋವಾ ಕಾರ್ಯಕಾರಣಿಗೆ ಸ್ವಲ್ಪ ಮೊದಲು ನಡೆದ ಪಕ್ಷದ ರಾಜ್ಯ ಘಟಕದ ಸಭೆಯಲ್ಲಿ ಮಾಜಿ ಸಚಿವರಾದ ಸಿಟಿ ರವಿ, ಬೊಮ್ಮಾಯಿ, ಅರವಿಂದ ಲಿಂಬಾವಳಿ ಈ ವಿಷಯವನ್ನೆತ್ತಿದ್ದರು. ಯಡಿಯೂರಪ್ಪನವರನ್ನು ವಾಪಸ್ ಕರೆತರಬೇಕೆಂಬುದನ್ನು ಎಷ್ಟು ಜನ ಒಪ್ಪುತ್ತಾರೆ ಎಂಬುದನ್ನು ಬೇಕಾದರೆ ಪರೀಕ್ಷಿಸಿ ಎಂದು ಒತ್ತಾಯಿಸಿದಾಗ, 99 ಪರ್ಸೆಂಟ್ ಪರವಾಗಿ ಕೈ ಎತ್ತಿದ್ದರು. ಈ ಘಟನೆಯ ನಂತರ ಯುವ ನಾಯಕರ ಒಂದು ತಂಡ ಗೋವಾ ಕಾರ್ಯಕಾರಣಿಗೆ ಹೋಗಿ ಪಕ್ಷ ಹಾಗೂ ಕಾರ್ಯಕರ್ತರ ಈ ಅಭಿಪ್ರಾಯವನ್ನು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಕೊಟ್ಟೂ ಬಂದಿದ್ದರು. ಆದರೆ ನರೇಂದ್ರ ಮೋದಿಯವರ ವಿಚಾರದಲ್ಲಿಯೇ ಕೇಂದ್ರದಲ್ಲಿ ಸಾಕಷ್ಟು ಗೊಂದಲ, ಸಂಘರ್ಷ ಸೃಷ್ಟಿಯಾಗಿದ್ದರಿಂದ ಯಡಿಯೂರಪ್ಪನವರನ್ನು ವಾಪಸ್ ಕರೆತರುವ ಪ್ರಕ್ರಿಯೆ ಅಲ್ಲಿಗೇ ನಿಂತುಹೋಯಿತು. ಈಗ ಮೋದಿಯವರ ಹಾದಿಗೆ ಇದ್ದ ಅಡಚಣೆಗಳು ದೂರವಾಗಿದ್ದು, ಇನ್ನಾದರೂ ಕರ್ನಾಟಕದಲ್ಲಿ ಅನುಭವಿಸಲಿರುವ ನಷ್ಟವನ್ನು ಕಡಿಮೆ ಮಾಡಿಕೊಳ್ಳುವತ್ತ ಸ್ವತಃ ಮೋದಿಯವರೇ ಗಮನಹರಿಸಬೇಕು. ಉತ್ತರ ಪ್ರದೇಶಕ್ಕೆ ಪಟ್ಟು ಹಿಡಿದು ಅಮಿತ್ ಷಾ ಅವರನ್ನು ಕಳುಹಿಸಿದಂತೆ ಯಡಿಯೂರಪ್ಪನವರನ್ನು ವಾಪಸ್ ಕರೆತರುವುದಕ್ಕೂ ಮೋದಿಯವರೇ ಮುಂದಾಳತ್ವ ವಹಿಸಬೇಕು.

ಇಷ್ಟಕ್ಕೂ ಯಡಿಯೂರಪ್ಪನರೇನಾದರೂ ಕಾಂಗ್ರೆಸ್ ಜತೆ ಕೈಜೋಡಿಸಿದರೆ ಏನಾದೀತು ಯೋಚಿಸಿ?

ಕಳೆದ ವಿಧಾನಸಭೆ ಚುನಾವಣೆಯ ಮತಗಳನ್ನು ಗಣನೆಗೆ ತೆಗೆದುಕೊಂಡರೆ ಕಾಂಗ್ರೆಸ್ ಏಕಾಂಗಿಯಾಗಿ 24 ಸೀಟುಗಳನ್ನು, ಬಿಜೆಪಿ-ಜೆಡಿಎಸ್ ತಲಾ 2 ಸೀಟುಗಳನ್ನು ಗಳಿಸಲಿವೆ! ಕಾಂಗ್ರೆಸ್‌ನ 24 ಸೀಟುಗಳಲ್ಲಿ ಕೆಜೆಪಿಯ 10 ಪರ್ಸೆಟ್ ವೋಟುಗಳ ಗಣನೀಯ ಕೊಡುಗೆ ಇದೆ. ಇಂಥ ಅಪಾಯ, ನಷ್ಟವನ್ನು ಲೋಕಸಭೆ ಚುನಾವಣೆಯಲ್ಲಿ ತಡೆಯಬೇಕೆಂದರೆ ಯಡಿಯೂರಪ್ಪನವರನ್ನು ವಾಪಸ್ ಕರೆತರಲೇಬೇಕಾಗುತ್ತದೆ. ಒಂದು ವೇಳೆ, ಕೆಜೆಪಿ ಬಿಜೆಪಿಯೊಳಗೆ ವಿಲೀನಗೊಂಡರೆ ಬಿಜೆಪಿ ಸೀಟುಗಳ ಸಂಖ್ಯೆ ಏಕಾಏಕಿ 7ಕ್ಕೇರುತ್ತದೆ. ಬಿಎಸ್‌ಆರ್ ಕಾಂಗ್ರೆಸ್ ಪಕ್ಷವನ್ನೂ ಸೇರಿಸಿಕೊಂಡರೆ 10 ಆಗುತ್ತದೆ. ಇನ್ನೂ ಕನಿಷ್ಠ ನಾಲ್ಕೈದು ಸೀಟುಗಳು Within striking rangeಗೆ, ಅಂದರೆ ಗೆದ್ದುಕೊಳ್ಳಬಹುದಾದ ವ್ಯಾಪ್ತಿಗೆ ಬರುತ್ತವೆ! ಇವುಗಳ ಜತೆಗೆ ಮೋದಿ ಅಲೆಯೂ ಕೂಡಿದರೆ 15 ಸೀಟುಗಳನ್ನು ಗೆಲ್ಲುವುದು ಖಚಿತ ಎಂದೇ ಇಟ್ಟುಕೊಳ್ಳಬಹುದು. ಇಷ್ಟಕ್ಕೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಸೇರಿದ್ದರೆ 93 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದಿತ್ತು ಎಂಬುದನ್ನು ಮರೆಯಬೇಡಿ.

ಹೀಗಿದ್ದರೂ ಬಿಜೆಪಿ ರಾಜ್ಯ ಘಟಕ ಹಾಗೂ ಕೇಂದ್ರ ನಾಯಕರು ಏಕೆ ಇನ್ನೂ ಮೀನಮೇಷ ಎಣಿಸುತ್ತಿದ್ದಾರೆ?

ಖಂಡಿತ ಯಡಿಯೂರಪ್ಪನವರ ಕಾಲದಲ್ಲಿ ನಡೆದ ಭ್ರಷ್ಟಾಚಾರವನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ. ಹಾಗಂತ ಹದಿನೆಂಟು ಕೋಟಿ ಸಾರ್ವಜನಿಕ ಹಣವನ್ನು ಪೋಲು ಮಾಡಿ ಲೋಕಾಯುಕ್ತದಿಂದ ದೋಷಾರೋಪಣೆಗೊಳಗಾದ ದಿಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಇನ್ನೂ ಗದ್ದುಗೆ ಮೇಲೆಯೇ ಇದ್ದಾರೆ! ಆಕೆಯನ್ನು ರಕ್ಷಿಸಲು ರಾಷ್ಟ್ರಪತಿಯವರ ಮೇಲೂ ಪ್ರಭಾವ ಬೀರುವಂಥ ಲಜ್ಜೆಗೇಡಿ ಕೆಲಸವನ್ನೂ ಕಾಂಗ್ರೆಸ್  ಮಾಡಿದೆ. ಜತೆಗೆ ಒಟ್ಟು 5.47 ಕೋಟಿಯಷ್ಟು ಬೃಹತ್ ಮೊತ್ತದ ಹಗರಣಗಳನ್ನು ಸೃಷ್ಟಿಸಿದ್ದರೂ ದೇಶಕ್ಕೆ ಪ್ರಾಮಾಣಿಕತೆಯ ಪಾಠ ಹೇಳಿ ಕೊಡುತ್ತಿದೆ. ಅದರ ಬಗ್ಗೆ ಯಾವ ಮಾಧ್ಯಮಗಳೂ ಚಕಾರವೆತ್ತುತ್ತಿಲ್ಲ. ಇದೇನೇ ಇರಲಿ, ಗಣಿ ಹಗರಣ ಬೆಳಕಿಗೆ ಬಂದಾಗ ಭ್ರಷ್ಟಾಚಾರದ ವಿರುದ್ಧ ದೇಶವ್ಯಾಪಿ ಜನಾಂದೋಲನ ಸೃಷ್ಟಿಯಾಗಿದ್ದಿದ್ದು ಯಡಿಯೂರಪ್ಪನವರಿಗೆ ಶಾಪವಾಯಿತು ಎಂಬುದು ಅಷ್ಟೇ ನಿಜ. ಆದರೆ ಯಡಿಯೂರಪ್ಪನವರು ಪಕ್ಷ ತೊರೆದ ನಂತರ ಬಿಜೆಪಿಯನ್ನು ಮುನ್ನಡೆಸುವಂಥ ನಾಯಕರೇ ಇಲ್ಲದಾದರು. ಹಾಲಿ ಪರಿಸ್ಥಿತಿಯನ್ನು ನೋಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದು 4 ತಿಂಗಳಾಗುತ್ತ ಬಂದಿದ್ದರೂ ರಾಜ್ಯ ಬಿಜೆಪಿ ನಾಯಕರ ಸಣ್ಣ ಧ್ವನಿಯೂ ಜನರಿಗೆ ಕೇಳಿಲ್ಲ. ಅನಿಲ್ ಲಾಡ್-ಸಂತೋಷ್ ಲಾಡ್ ವಿಚಾರವೆನ್ನೆತ್ತಿಕೊಂಡು ಕಾಂಗ್ರೆಸ್ ಮುಖಕ್ಕೆ ಮಣ್ಣಂಟಿಸುವ ಸದವಕಾಶವನ್ನೂ ಬಿಜೆಪಿಯಿಂದ ಉಪಯೋಗಿಸಿಕೊಳ್ಳಲಾಗುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಉಳಿದ 17 ಸೀಟುಗಳನ್ನು ಎಲ್ಲಿಂದ ತರಬೇಕು ಹೇಳಿ?

ಇಂದಿರಾ ಗಾಂಧಿ ಸರ್ವಾಧಿಕಾರಿಯಾಗಿದ್ದರು, ಆದರೆ ದೇಶದ್ರೋಹಿಯಾಗಿರಲಿಲ್ಲ. ಆದರೆ ಈಗಿನ ಕಾಂಗ್ರೆಸ್ ಸಂಪತ್ತನ್ನು ಕೊಳ್ಳೆ ಹೊಡೆಯುವಂಥ ದೇಶದ್ರೋಹದ ಕೆಲಸ ಮಾಡುತ್ತಿದೆ. ಇಂಥ ಸಂದರ್ಭಗಳಲ್ಲಿ ಕಾಂಗ್ರೆಸ್ ಅನ್ನು ಹಣಿಯಬೇಕಾದರೆ ಪ್ರತಿ ರಾಜ್ಯಗಳಲ್ಲೂ ಬಿಜೆಪಿಯನ್ನು ಬಲಗೊಳಿಸಬೇಕಾದುದು ಅನಿವಾರ್ಯ ಹಾಗೂ ಅದಕ್ಕೆ ಯಡಿಯೂರಪ್ಪನವರಂಥ ಗಟ್ಟಿ ನಾಯಕತ್ವವೂ ಅನಿವಾರ್ಯವೇ. ಇಂದಿಗೂ ರಾಜ್ಯದುದ್ದಗಲಕ್ಕೂ ಪ್ರವಾಸ ಮಾಡುವಂಥ, ಕಾರ್ಯಕರ್ತರನ್ನು ಸೇರಿಸುವ, ಬಡಿದೆಬ್ಬಿಸುವಂಥ ದೈತ್ಯ ಶಕ್ತಿ ಯಾರಲ್ಲಾದರೂ ಇದ್ದರೆ ಅದು ಯಡಿಯೂರಪ್ಪನವರಿಗೆ ಮಾತ್ರ. ಜತೆಗೆ ಆಳುವ ಪಕ್ಷಕ್ಕೂ ಬಿಸಿ ಮುಟ್ಟಿಸುವಂಥ ಖಡಕ್ ಮಾತುಗಾರಿಕೆ ಅವರಲ್ಲಿದೆ. ಇತ್ತ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ‘ಅಹಿಂದ’ ರಾಜ(ಜಾತಿ)ಕಾರಣದ ಬಗ್ಗೆ ಕಾಂಗ್ರೆಸ್‌ನ ಹಳೇ ಹುಲಿಗಳು ಒಳಗೊಳಗೇ ಗ್ಯಾಂಗ್ ಅಪ್ ಆಗುತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅತ್ಯಧಿಕ ಸ್ಥಾನಗಳು ಬಂದರೆ ಸಿದ್ಧರಾಮಯ್ಯನವರನ್ನು ಅಲ್ಲಾಡಿಸುವುದಕ್ಕಾಗುವುದಿಲ್ಲ ಎಂದು ಅವರಿಗೂ ಗೊತ್ತು. ಹಾಗೆಯೇ ಕಾಂಗ್ರೆಸ್ ಅಧ್ಯಕ್ಷರಾದ ಡಾ. ಪರಮೇಶ್ವರರ ಮುಖ್ಯಮಂತ್ರಿ ಕನಸು ಈಡೇರಬೇಕಾದರೆ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಬರಬಾರದು. ಹೈಕಮಾಂಡ್‌ಗೆ ಹೆದರಿ ಸುಮ್ಮನಿದ್ದರೂ ಹೊರಗಿನಿಂದ ಬಂದು ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರ ಬಗ್ಗೆ ಮೂಲ ಕಾಂಗ್ರೆಸ್ಸಿಗರಲ್ಲಿ ಅಸಮಾಧಾನವಿದೆ. ಹಾಗಾಗಿ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ನಲ್ಲಿ Internal Sabotage ನಡೆಯುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇನ್ನೊಂದೆಡೆ ಅಪ್ಪ, ಮಕ್ಕಳು, ಸೊಸೆಯರು, ಮೊಮ್ಮಕ್ಕಳ ಪಕ್ಷವಾದ ಜೆಡಿಎಸ್ Discredit ಆಗಿರುವುದು, ಸಾಂಪ್ರದಾಯಿಕ ಮತದಾರರಾದ ಬಯಲುಸೀಮೆ ಒಕ್ಕಲಿಗರ ವಿಶ್ವಾಸವನ್ನೇ ಕಳೆದುಕೊಂಡಿರುವುದು ಮೊನ್ನೆ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಬಹಿರಂಗಗೊಂಡಿದೆ. ಸೊಸೆ ತಂದ ಸಾಲು ಸಾಲು ಸೋಲು ದೇವೇಗೌಡರನ್ನೂ ಕಕ್ಕಾಬಿಕ್ಕಿಯಾಗಿಸಿದೆ. ಇಂಥ ದೌರ್ಬಲ್ಯಗಳನ್ನು ಬಿಜೆಪಿ ತನ್ನ ಲಾಭಕ್ಕೆ ಬಳಸಿಕೊಳ್ಳಬಹುದು.

ಈ ಹಿನ್ನೆಲೆಯಲ್ಲಿ ಯಡಿಯೂರಪ್ಪನವರನ್ನು ವಾಪಸ್ ಕರೆ ತರುವ ಪ್ರಯತ್ನವನ್ನು ಆದಷ್ಟು ಬೇಗ ಮಾಡಬೇಕು. ಜತೆಗೆ ಲಿಂಗಾಯತ ಸಮುದಾಯಕ್ಕೆ ಮೋಸಕ್ಕೊಳಗಾದ ಭಾವನೆಯಿದೆ, ಅದನ್ನು ಸರಿಪಡಿಸಬೇಕೆಂದರೆ ಯಡಿಯೂರಪ್ಪನವರನ್ನು ವಾಪಸ್ ಕರೆ ತರುವುದು ಮಾತ್ರವಲ್ಲ, ಅವರಿಗೆ ಸೂಕ್ತ ಸ್ಥಾನಮಾನವನ್ನೂ ನೀಡಬೇಕು. ಪಕ್ಷಕ್ಕೆ ಕರೆತಂದು ಸೂಕ್ತ ಗೌರವ ಕೊಡದಿದ್ದರೆ ಅವರು ಪಕ್ಷವನ್ನು ಬಲಗೊಳಿಸುವುದಕ್ಕಾದರೂ ಹೇಗೆ ಸಾಧ್ಯ? ಇತ್ತ ಪ್ರಹ್ಲಾದ ಜೋಶಿಯವರೂ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕಾದರೆ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವುದರಿಂದ ತಪ್ಪಿಸಿಕೊಳ್ಳಬೇಕಾದರೆ ಬಿಎಸ್‌ವೈ ಬೇಕೇ ಬೇಕು. ಈ ಮಧ್ಯೆ ‘ಬರುವುದಾದರೆ ಯಡಿಯೂರಪ್ಪನವರು ಮಾತ್ರ ಬರಲಿ, ಅವರ ಜತೆಗೆ ಹೋದವರು ಬೇಡ’ ಎಂದು ಕಳೆದ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿರುವ ಸೊಗಡು ಶಿವಣ್ಣ ಹೇಳಿಕೆ ನೀಡಿದ್ದಾರೆ. ಅಂಥ ತಗಡು ಹೇಳಿಕೆ ನೀಡದಂತೆ ಎಚ್ಚರಿಸುವ ಕೆಲಸವನ್ನು ಜೋಶಿಯವರು ಮೊದಲು ಮಾಡಬೇಕು. ಕ್ಯಾಪ್ಟನ್ ಜತೆಗೆ ಟೀಮ್ ಬಂದರಷ್ಟೇ ಬಲ.

ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ, ಯಡಿಯೂರಪ್ಪನವರ ವಾಪಸಾತಿಗೆ ಆದಷ್ಟು ಬೇಗ ಮುಂದಾಗದಿದ್ದರೆ….?!

63 Responses to “ಬಿಜೆಪಿ-ಬಿಎಸ್‌ವೈ=2, ಬಿಜೆಪಿ+ಬಿಎಸ್‌ವೈ=…?”

  1. Shashidhar says:

    Dont think much. .some congress dogs & pigs are barking here and they are insulting you. V know & every one knows BJP under NaMo can give the satisfaction of constitution to true indian…V are already become shame less under congress … yuck….**** them…
    And personally in my opinion BSY is the oly man who can give 100% strength to Namo…all other BJP people are below our expectations So v need BSY…& in mining case he is the first to take responsible & resigned…If BJP will remain silent in taking BSY in no doubt BSY ll back to form & win more seats in next MLA election …KJP become more powerful dan BJP…now also….Dont think much about these peoples comments on u dat u are acting like bjp broker & all…Tell them every true indian ll act like me & every deshadrohi ll support congress..All these fucking reservation people ll support congress because of scholarship, rice ,oil….fucking schemes…etc…No one is not caring about the future of india…Otherwise INDIA ll become another syria, another Irak..in 2020…..APJ’s (true indian politician )dream ll, also collapse…what to say to these peoples ….?

  2. Sachin Patwardhan says:

    Pratap,

    Everywhere in this article you have mentioned the statistics of seats with & without (BSY for BJP), but what about ethics that are to be followed by a politician? Are you saying just because one man has a capacity to win elections hence we need to follow him as a leader without considering his deeds like involvement in corruption??

    Even this view point is acceptable if your are writing article as an election strategist for BJP, but not acceptable as an unbiased reporter.

  3. Nagaraj.S says:

    this is true sir , yaddi has to bring back to bjp ,if not means even N.modi is also not win here

  4. tejaswi says:

    All the best you brahmin hypocrite and a fanatic in you endeavor to mask the truth and pursue your caste’s hidden agenda. But ultimately truth prevails. RSS is a Hindu counterpart of Muslim Taliban/al-queda. and you are one of its prophet. But beauty inda is that it has a mechanism to punish fanatics like you.

  5. Madesh says:

    It is not about party we have to discuss,The person who can give good governance by his good leadership quality that we have to discuss.
    See in all party’s there are internal groupism ,corruption and shakunis. That is not matters,only upto what extent they are capable of handling the governament by implementing development polices and protecting common mans tax money by stable governement that matters most.At the same time every elected leader should work for the system,people and for the country not for a leader.then only there is prosperity.

  6. vijaykumar kelamane says:

    wow wow ! i am waiting for this article since 2 years.

  7. shreyas says:

    Super sir..I am a big fan of u…ya without yediyurapavsir bjp wont get a single seat in karnataka..but useless central leaders wr still neglecting..surely dy ll pay penalty if dy still neglect..

  8. Ramachandra B says:

    It is not the question of supporting BSY or somebody else. It is the question of mobilizing the force to sack the current UPA government which kept the security of the nation under stake!!

  9. Narashimha says:

    ಹೀಗೂ ಉಂಟೆ ?

  10. Manjunath says:

    BJP-BSY=2.
    BSY+BJP= 19

  11. sumant hegde says:

    i really respect advaniji but
    Because of yeddiji, they got 19 seats in 2009 election.
    If we less 115-19=96 seats.
    If without yeddiji they fell two digits.!!!!!!!!!
    It becomes blackdot for advan image.

  12. raju says:

    realistic. modi can bring back BSY

  13. Narendra Babu says:

    Why does NDM who came to bangalore does not meet BSY. even not provided invitation also. The Drama company of Anant kumar is doing well. if they continue to do same, Yes, BJP will be nowhere in Karnataka. IT IS ALREADY BEEN TOO LATE.

    BSY is corrupted person? is it real. let me know who is not corrupt in politics now. When BSY became CM of Karnataka, it is Bellary people who corrupted karnataka as well as BJP. who supported for bellary people? think………. the Drama Company of Ananth Kumar and “TAAYI” Sushma Swaraj. they tied-up BSY hands. for that reason BSY tried to clean Mining system, so all the politicians in BJP revolted against BSY and made BSY as Villian. and now all are blaming BSY as most corrupted person.

    Very Bad.