Member of Parliment,
Mysuru - Kodagu Loksabha Constituency
ಸಂಸದರು,
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ
Email : mpmysoresimha@gmail.com
Pratap Simha > Bettale Jagattu > ಸೂರ್ಯ ಭೂಮಿಯ ಸುತ್ತ ಸುತ್ತುತ್ತಾನಾ ಬಿಶಪ್?

ಸೂರ್ಯ ಭೂಮಿಯ ಸುತ್ತ ಸುತ್ತುತ್ತಾನಾ ಬಿಶಪ್?

City of God.

ಜೆರುಸಲೇಂ ಅನ್ನು ಕ್ರೈಸ್ತರು ಕರೆಯುವುದೇ ಹಾಗೆ. ಅವರ ಆರಾಧ್ಯದೈವ ಜೀಸಸ್ ಜನಿಸಿದ್ದು ಜೆರುಸಲೇಂ ಬಳಿಯ ಬೆತ್ಲಹೇಮ್‌ನಲ್ಲಿ. ಬಾಲ್ಯವನ್ನು ಕಳೆದಿದ್ದು ಜೆರುಸಲೇಂನಲ್ಲಿ. ಜೀಸಸ್‌ನನ್ನು ಶಿಲುಬೆಗೆ ಏರಿಸಿದ ಕ್ಯಾಲ್‌ವರಿ ಹಿಲ್ ಇರುವುದೂ ಜೇರುಸಲೇಂನಲ್ಲೇ. ಈ ಎಲ್ಲ ಕಾರಣ ಗಳಿಂದಾಗಿ ಕ್ರೈಸ್ತರಿಗೆ ಜೆರುಸಲೇಂಗಿಂತ ಪವಿತ್ರ ಸ್ಥಳ ಜಗತ್ತಿನಲ್ಲಿ ಬೇರೊಂದಿಲ್ಲ. ಇಂತಹ ಜೇರುಸಲೇಂ 1076ರಲ್ಲಿ ಮುಸ್ಲಿಮರ ವಶವಾಯಿತು.

ಅದು ಮುಸ್ಲಿಮರಿಗೂ ಪವಿತ್ರ ಸ್ಥಳ. ಪ್ರವಾದಿ ಮೊಹಮದ್ ಪೈಗಂಬರ್ ಜೆರುಸಲೇಂಗೆ ಆಗಮಿಸಿದ್ದರು, ಅಲ್ಲಿನ ಬಂಡೆಯೊಂದರ ಮೇಲೆ ಕುಳಿತು ಪ್ರಾರ್ಥಿಸಿದ್ದರು ಎಂಬ ನಂಬಿಕೆ ಮುಸ್ಲಿಮರಲ್ಲೂ ಇದೆ. ಅಲ್ಲೊಂದು ಭವ್ಯ ಮಸೀದಿಯನ್ನೂ ನಿರ್ಮಾಣ ಮಾಡಲಾಗಿದೆ. ಹಾಗಾಗಿ ಜೆರುಸಲೇಂ ಅನ್ನು ವಶಪಡಿಸಿಕೊಂಡಿದ್ದು ಸಹಜವಾಗಿಯೇ ಮುಸ್ಲಿಮರಿಗೆ ಹೆಮ್ಮೆಯ ವಿಷಯವಾಯಿತು. ಆದರೆ ಜೆರುಸಲೇಂ ಮುಸ್ಲಿಮರ ವಶವಾದ ನಂತರ ಕ್ರೈಸ್ತರು ತಮ್ಮ ಪವಿತ್ರ ಸ್ಥಳವಾದ ಅಲ್ಲಿಗೆ ಯಾತ್ರೆ ಕೈಗೊಳ್ಳಲು ಭಾರೀ ಅಡಚಣೆಯುಂಟಾಯಿತು. ಇದು ಕ್ರೈಸ್ತರನ್ನು ಕುಪಿತ ಗೊಳಿಸಿತು.

ಆಗಿನ ಪೋಪ್ ಎರಡನೇ ಅರ್ಬನ್ ಸ್ವತಃ ಯುದ್ಧ ಕಹಳೆಯೂದಿದರು. 1095ರಲ್ಲಿ ಫ್ರಾನ್ಸ್‌ನಲ್ಲಿ ಕ್ರೈಸ್ತರನ್ನುದ್ದೇಶಿಸಿ ಭಾಷಣ ಮಾಡಿದ ಪೋಪ್ ಅರ್ಬನ್, “ಮುಸ್ಲಿಮರನ್ನು ಬಡಿದಟ್ಟಿ ಜೆರುಸಲೇಮನ್ನು ಮತ್ತೆ ವಶಪಡಿಸಿಕೊಳ್ಳಬೇಕೆನ್ನುವ ನೈಜ ಕ್ರಿಶ್ಚಿಯನ್ನರಿದ್ದಾರೆ. ಕೆಲವರು ಪಾಪ ಮಾಡಿದ್ದು, ಅವರು ಧರ್ಮಯುದ್ಧಕ್ಕೆ ಮುಂದಾದರೆ ದೇವರು ಅಂತಹವರನ್ನು ಕ್ಷಮಿಸಬಹುದು. ಒಂದು ವೇಳೆ ಹೋರಾಟದಲ್ಲಿ ಮಡಿದರೆ ಅವರು ದೇವರಿಗಾಗಿ ಪ್ರಾಣತ್ಯಾಗ ಮಾಡಿರುವುದರಿಂದ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ. ತನಗಾಗಿ ಮಡಿದವರ ಎಲ್ಲ ಪಾಪಗಳನ್ನೂ ಭಗವಂತ ಮನ್ನಿಸುತ್ತಾನೆ. ಯಾರೂ ಹಿಂಜರಿಯಬಾರದು. ಎಲ್ಲರೂ ಮುನ್ನಡೆಯಬೇಕು. God wills it!”

ಇಂತಹ ಪೋಪ್ ಕರೆ ಕ್ರೈಸ್ತರನ್ನು ಹುರಿದುಂಬಿಸಿತು. ಹೀಗೆ 1096ರಲ್ಲಿ ಆರಂಭವಾಗಿದ್ದೇ ಮೊದಲ ಧರ್ಮಯುದ್ಧ (ಕ್ರುಸೇಡ್). 1099ರಲ್ಲಿ ಜೇರುಸಲೇಮ್ ಕ್ರೈಸ್ತರ ಪಾಲಾಯಿತು. ಆದರೆ ಕ್ರುಸೇಡ್ ನಿಲ್ಲಲಿಲ್ಲ. ಬರೀ ಜೆರುಸಲೇಂ ಮಾತ್ರವಲ್ಲ, ಪಶ್ಚಿಮ ಏಷ್ಯಾದಿಂದಲೇ ಮುಸ್ಲಿಮರನ್ನು ಹೊರದಬ್ಬಬೇಕೆಂಬ ಉದ್ದೇಶದಿಂದ ಹೋರಾಟ ಮುಂದು ವರಿಯಿತು. ಕಾಲಾಂತರದಲ್ಲಿ ಇಸ್ಲಾಂ ಯುರೋಪ್‌ಗೆ ಹರಡುವುದನ್ನು ತಡೆಯುವುದಕ್ಕೂ ಪ್ರಯತ್ನಿಸಲಾಯಿತು. ಹೀಗಾಗಿ ಸುಮಾರು 200 ವರ್ಷಗಳ ಕಾಲ, ಅಂದರೆ 1096 ರಿಂದ 1270ರವರೆಗೂ 8 ಕ್ರುಸೇಡ್‌ಗಳು ನಡೆ ದವು. ಇಂತಹ ಧರ್ಮಯುದ್ಧಗಳಿಗೆ ಕ್ಯಾಥೋಲಿಕ್ ಕ್ರೈಸ್ತ ಗುರುಗಳೇ ಕರೆ ನೀಡಿದ್ದರು.

‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ನಮ್ಮ ಹಿಂದೂ ಧರ್ಮ ದಲ್ಲಿ ಹೇಳಿರುವುದೂ ಇದನ್ನೇ ಅಲ್ಲವೆ?

ಮುಂದೆ ಹದಿನೈದನೇ ಶತಮಾನದಲ್ಲಿ ಕ್ರೈಸ್ತರು ಹೊಸ ತಕರಾರು ಎತ್ತಿದರು. ಆಧುನಿಕ ಖಗೋಳಶಾಸ್ತ್ರದ ಸಂಸ್ಥಾಪಕ ನಾದ ಪೊಲೆಂಡ್‌ನ ನಿಕೋಲಸ್ ಕೋಪರ್‌ನಿಕಸ್ “On the Revolutions of the Heavenly Bodies” ಎಂಬ ಪುಸ್ತಕದಲ್ಲಿ ಸೌರಮಂಡಲದ ಕೇಂದ್ರ ಸೂರ್ಯನೇ ಹೊರತು ಭೂಮಿಯಲ್ಲ ಎಂದ. ಅದನ್ನು “Heliocentric System” ಎಂದು ಕರೆದ. ಭೂಮಿಯೂ ಮತ್ತೊಂದು ಗ್ರಹ. ಸೂರ್ಯನಿಂದ ಮೂರನೇ ಸ್ಥಾನದಲ್ಲಿದೆ. ಭೂಮಿಯ ಕಕ್ಷೆಯಲ್ಲಿ ಚಂದ್ರನಿದ್ದಾನೆ. ನಕ್ಷತ್ರಗಳು ಬಲು ದೂರ ಇದ್ದು, ಅವು ಸೂರ್ಯನ ಸುತ್ತ ಸುತ್ತುವುದಿಲ್ಲ. ಭೂಮಿವರ್ಷಕ್ಕೊಮ್ಮೆ ಸೂರ್ಯನ ಸುತ್ತ ಸುತ್ತುತ್ತದೆ ಎಂದು ವಾದಿಸಿದ. ೧೫೪೩ರಲ್ಲಿ ಕೋಪರ್‌ನಿಕಸ್‌ನೇನೋ ಮರಣವನ್ನಪ್ಪಿದ. ಆದರೆ ಅವನ ಸಂಶೋಧನೆ ಆತ ಸತ್ತ ನಂತರ ಭಾರೀ ವಿವಾದಕ್ಕೆ ದಾರಿ ಮಾಡಿಕೊಟ್ಟಿತು. ಆತನ ನಂತರ ಬಂದ ಇಟಲಿಯ ವಿeನಿಗಳಾದ ಗಿಯೋರ್ಡಿನೋ ಬ್ರೂನೋ ಹಾಗೂ ಗೆಲಿಲಿಯೋ ಕೂಡ ಕೋಪರ್‌ನಿಕಸ್‌ನ ವಾದ ಸರಣಿಯನ್ನು ಒಪ್ಪಿದರು. “ಸೌರಮಂಡಲದ ಕೇಂದ್ರಬಿಂದು ಭೂಮಿಯಲ್ಲ. ಸೂರ್ಯ ಭುವನದ ಕೇಂದ್ರದಲ್ಲಿ ಸ್ಥಿರವಾಗಿದ್ದಾನೆ. ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ” ಎಂದ ಗೆಲಿಲಿಯೋ Heliocentrism ಅನ್ನು ಸಮರ್ಥನೆ ಮಾಡಿದ. ಇದರಿಂದ ಚರ್ಚ್ ಎಷ್ಟು ಕುಪಿತಗೊಂಡಿತೆಂದರೆ ಆಗಿನ ಪೋಪ್ ಎಂಟನೇ ಅರ್ಬನ್, “ಸೂರ್ಯನೇ ಜಗತ್ತಿನ ಕೇಂದ್ರ ಮತ್ತು ಅದು ಚಲನಶೀಲವಲ್ಲ ಎಂಬ Heliocentrism ಒಂದು ಪೊಳ್ಳು, ತಾತ್ವಿಕವಾದ ಸುಳ್ಳು. ಅದು ಕ್ರೈಸ್ತರ ಪವಿತ್ರ ಸೃಷ್ಟಿ ಸಿದ್ಧಾಂತಕ್ಕೆ ತದ್ವಿರುದ್ಧವಾದುದು” ಎಂದು ಸಾರ್ವಜನಿಕವಾಗಿ ಗೆಲಿಲಿಯೋ ಮತ್ತು ಬ್ರೂನೋನನ್ನು ಖಂಡನೆ ಮಾಡಿದರು. ಅಷ್ಟೇ ಅಲ್ಲ, ಇವರಿಬ್ಬರ ಸಂಶೋಧನೆ ಮೇಲೆ ನಿರ್ಬಂಧವನ್ನೂ ಹೇರಿದರು. ಗೆಲಿಲಿಯೋನನ್ನು ಜೈಲಿಗೂ ತಳ್ಳಲಾಯಿತು, ಸಾಯುವವರೆಗೂ ಗೃಹ ಬಂಧನದಲ್ಲಿರಿಸಲಾಯಿತು. 1642ರಲ್ಲಿ ಗೆಲಿಲಿಯೋ ಮರಣವನ್ನಪ್ಪಿದಾಗ ಆತನನ್ನು ಕ್ರೈಸ್ತರ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡುವುದಕ್ಕೂ ಬಿಡಲಿಲ್ಲ ಪೋಪ್. ಇನ್ನು ಬಾಹ್ಯಾಕಾಶವೆಂಬುದು Finite ಅಲ್ಲ, Infinite. ಅದಕ್ಕೆ ಕೊನೆಯೇ ಇಲ್ಲ ಎಂದು ವಾದಿಸುವ ಧೈರ್ಯ ತೋರಿದ ಬ್ರೂನೋನನ್ನಂತೂ, ೧೫೯೨ರಲ್ಲಿ ಬಂಧಿಸಿ ರೋಮನ್ ಕ್ಯಾಥೋಲಿಕ್ ಚರ್ಚ್‌ನ ನ್ಯಾಯಾಲಯದ(The Inquisition) ಮುಂದೆ 7 ವರ್ಷಗಳ ಕಾಲ ವಿಚಾರಣೆ ಗೊಳಪಡಿಸಿ, ಕೊನೆಗೆ ಉರಿವ ಜ್ವಾಲೆಯಲ್ಲಿ ಸುಡುವ ಮರಣದಂಡನೆಯನ್ನು ವಿಧಿಸಿದರು.

ಅಷ್ಟಕ್ಕೂ ಇವರಿಬ್ಬರೂ ಮಾಡಿದ ತಪ್ಪೇನು ಗೊತ್ತೆ?

“ದೇವರು ಮೊದಲು ಸ್ವರ್ಗವನ್ನು, ನಂತರ ಜಗತ್ತನ್ನು ಸೃಷ್ಟಿಸಿದ. ಆತ ಭೂಮಿಯನ್ನು ಅಚಲವಾಗಿಟ್ಟಿದ್ದಾನೆ. ಅದು ಚಲಿಸುವುದಿಲ್ಲ. ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ ಹಾಗೂ ಮೂಲಸ್ಥಾನಕ್ಕೆ ತೆರಳುತ್ತಾನೆ” ಎನ್ನುತ್ತದೆ ಬೈಬಲ್. ಆದರೆ ಕೋಪರ್‌ನಿಕಸ್, ಗೆಲಿಲಿಯೋ, ಬ್ರೂನೋ ಮಾಡಿದ ಸಂಶೋಧನೆಗಳು ಇಂತಹ ನಂಬಿಕೆಯನ್ನು ವೈeನಿಕವಾಗಿ ಸುಳ್ಳು ಎಂದು ಸಾಬೀತುಪಡಿಸಿದ್ದನ್ನು ಪೋಪ್ ಹಾಗೂ ಪಾದ್ರಿಗಳಿಗೆ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಅದುವರೆಗೂ ಹೇಳಿಕೊಂಡು, ನಂಬಿಸಿಕೊಂಡು ಬಂದಿದ್ದೆಲ್ಲ ಬೊಗಳೆ ಎಂದು ಸಾಬೀತಾದರೆ ಸುಮ್ಮನಿರುತ್ತಾರೆಯೇ? ಗೇಲಿಲಿಯೋನನ್ನು ಜೀವನಪರ್ಯಂತ ಗೃಹಬಂಧನದಲ್ಲಿ ಟ್ಟರು, ಬ್ರೂನೋನನ್ನು ಪೈಶಾಚಿಕವಾಗಿ ಕೊಲೆಗೈದರು.

ಇನ್ನು 150 ವರ್ಷಗಳ ಹಿಂದೆ ಇಪ್ಪತ್ತು ವರ್ಷ ಪರಿ ಶ್ರಮ ಪಟ್ಟು, ಐದು ವರ್ಷ ಜಗತ್ತನ್ನು ಸುತ್ತಿ ಚಾರ್ಲ್ಸ್ ಡಾರ್ವಿನ್ ಪ್ರತಿಪಾದಿಸಿದ “Evolution Theory” ಅನ್ನು ತೆಗೆದುಕೊಳ್ಳಿ. ಹದಿನೆಂಟನೇ ಶತಮಾನದಲ್ಲಿ  The Origin of Species ಎಂಬ ಪುಸ್ತಕವನ್ನು ಹೊರತಂದ ಡಾರ್ವಿನ್, 3.9 ಶತಕೋಟಿ ವರ್ಷಗಳ ಹಿಂದೆ ಗಿಬ್ಬನ್ಸ್ ಎಂಬ ವಂಶದಿಂದ ಜೀವನ ಸಂಕುಲಗಳು ಸೃಷ್ಟಿಯಾದವು. ಗಿಬ್ಬನ್ಸ್ ನಿಂದ ಒರಾಂಗುಟಾನ್ ಬಂತು. ಅದರಿಂದ ಗೊರಿಲ್ಲಾ, ಚಿಂಪಾಂಜಿ ಬಂದವು, ನಂತರ ಮನುಷ್ಯ ಬಂದ” ಎಂದು ಪ್ರತಿಪಾದಿಸಿದ. ಇಂತಹ ಪ್ರತಿಪಾದನೆಯನ್ನು ಪುಷ್ಟಿಕರಿಸು ವಂತೆ ಇಂದಿಗೂ ಲಕ್ಷಾಂತರ ವರ್ಷಗಳ ಹಿಂದಿನ ಪಳೆಯುಳಿಕೆಗಳು ಸಿಗುತ್ತಿವೆ, ಡಾರ್ವಿನ್ನನ ಮಾತನ್ನು ನಿಜವಾಗಿಸುತ್ತಿವೆ. ಆದರೆ ಡಾರ್ವಿನ್ನನ “Evolution Theory”, “10 ಸಾವಿರ ವರ್ಷಗಳ ಹಿಂದೆ ದೇವರು ಕೇವಲ ೬ ದಿನಗಳಲ್ಲಿ ಜಗತ್ತು ಮತ್ತು ಜೀವಸಂಕುಲಗಳನ್ನು ಸೃಷ್ಟಿಸಿದ” ಎನ್ನುವ ಬೈಬಲ್‌ನ “Creationism” ಪೊಳ್ಳು ಎಂದು ಸಾಬೀತು ಮಾಡಿತು. ಹಾಗಾಗಿ ಚರ್ಚ್‌ಗಳು ಡಾರ್ವಿನ್‌ನ ಖಂಡನೆ ಗಿಳಿದವು. ಆದರೆ ಇದೇ ರೀತಿ ದೂಷಣೆ ಮಾಡುತ್ತಾ ಹೆಚ್ಚು ಕಾಲ ಸತ್ಯವನ್ನು ಬಚ್ಚಿಡಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡ ಚರ್ಚ್, “Intelligent Design” ಎಂಬ ವಾದ ಸರಣಿಯನ್ನು ಮುಂದಿಟ್ಟಿತು. ಹೌದು, ವಿeನಿಗಳು ಹೇಳುತ್ತಿರುವಂತೆ ಭೂಮಿ ಎಷ್ಟೋ ಶತಕೋಟಿ ವರ್ಷಗಳ ಹಿಂದೆ ಸೃಷ್ಟಿಯಾಗಿರಬಹುದು. ಆದರೆ ಜೀವಸಂಕುಲ ಸೃಷ್ಟಿಯಾಗಿದ್ದು 10 ಸಾವಿರ ವರ್ಷಗಳ ಹಿಂದೆ ಎಂದು ತನ್ನ ಥಿಯರಿಯನ್ನೇ ತಿರುಚಲು ಪ್ರಯತ್ನಿಸಿತು. ಆದರೆ ಆಗ್ಗಿಂದಾಗ್ಗೆ ಪತ್ತೆಯಾಗುತ್ತಿರುವ ಕೋಟ್ಯಂತರ ವರ್ಷಗಳ ಹಿಂದೆ ಜೀವಿಸಿದ್ದ ಡೈನೋಸಾರ್‌ಗಳ ಪಳೆಯುಳಿಕೆಗಳು ಬೈಬಲ್‌ನ Creationism ಪ್ರತಿಪಾದನೆಯನ್ನೇ ಸುಳ್ಳಾಗಿ ಸುತ್ತಿವೆ!  ಇಂದು ವೈeನಿಕ ಸಂಶೋಧನೆಗಳಿಂದ ಭಾರೀ ಹೊಡೆತ ಬಿದ್ದಿರುವುದೆಂದರೆ ಕ್ಯಾಥೋಲಿಕ್ ಚರ್ಚ್‌ಗಳ ಪ್ರತಿಪಾದನೆಗೆ ಹಾಗೂ ಯಾವ ವಿeನಿಗಳೂ ಬೈಬಲ್ ಪ್ರತಿಪಾದನೆಯನ್ನು ಸಾರಾಸಗಟಾಗಿ ಒಪ್ಪುವುದಿಲ್ಲ.

ಮೊನ್ನೆ ಬೆಂಗಳೂರಿನ ಆರ್ಚ್ ಬಿಶಪ್ ಮೊರಾಸ್ ಅವರು, ‘ನಿಮ್ಮ ದೇವಸ್ಥಾನಗಳ ಗರ್ಭಗುಡಿಯನ್ನು ನಾಶಪಡಿಸಿದ್ದರೆ ಸುಮ್ಮನಿರುತ್ತಿದ್ದಿರಾ?’ಎಂದು ಮುಖ್ಯ ಮಂತ್ರಿ ಯಡಿಯೂರಪ್ಪನವರನ್ನು ಪ್ರಶ್ನಿಸಿದ್ದನ್ನು ನೋಡಿ ದಾಗ, ‘ನಮಗೆ ಬಹಳ ನೋವಾಗಿದೆ’ ಎನ್ನುತ್ತಲೇ ಒಂದು ರಾಜ್ಯದ ಮುಖ್ಯಮಂತ್ರಿಗೆ ಅಗೌರವ ತೋರಿದ್ದನ್ನು ಕಂಡಾಗ, ‘ಕ್ರೈಸ್ತರೆಂದರೆ ಜೀಸಸ್‌ನಷ್ಟೇ ದಯಾಮಯಿಗಳು, ಶಾಂತಿಪ್ರಿಯರು’ ಎಂಬಂತೆ ಪೋಸು ಕೊಟ್ಟಿದ್ದನ್ನು ಗಮನಿಸಿದಾಗ ಬಿಶಪ್ ಮತ್ತು ಕ್ರೈಸ್ತರಿಗೆ ನಾವೂ ಕೆಲವು ಪ್ರಶ್ನೆಗಳನ್ನು ಕೇಳುವುದು ಉಚಿತ ಎನಿಸಿತು.

ನಮ್ಮ ಪ್ರಶ್ನೆಗಳಿಗೆ ಕ್ರೈಸ್ತರೂ ಉತ್ತರಿಸಲಿ ನೋಡೋಣ?

ನಿಮ್ಮ ಕ್ಯಾಥೋಲಿಕ್ ಚರ್ಚ್‌ಗಳು ಮತಾಂತರ ಮಾಡಿದರೂ ಹಿಂದೂಗಳು ಬಾಯಿಮುಚ್ಚಿಕೊಂಡು ಕುಳಿತಿರಬೇಕೆಂದು ಬಯಸುವ ಬಿಶಪ್ ಅವರೇ, 11ನೇ ಶತಮಾನದಲ್ಲಿ ಕ್ರೈಸ್ತರು ಕ್ರುಸೇಡ್ ಆರಂಭಿಸಿದ್ದೇಕೆ? ಅಂದು ಶಾಂತಿ, ಸಾಮರಸ್ಯ ಬೋಧನೆ ಮಾಡಬೇಕಾದ ನಿಮ್ಮ ಧರ್ಮಗುರು ಪೋಪ್ ಅರ್ಬನ್, ಯುದ್ಧ ಕಹಳೆಯೂದಿದ್ದು ಯಾವ ಕಾರಣಕ್ಕಾಗಿ? ನಿಮ್ಮ ಧರ್ಮಕ್ಕೆ ಅಪಾಯ ಎದುರಾದಾಗ ಮುಸ್ಲಿಮರನ್ನು ಮಟ್ಟ ಹಾಕುವ ಹಕ್ಕು ನಿಮಗಿದೆ ಎಂದಾದರೇ ನಿಮ್ಮಿಂದ ಅವಹೇಳನ, ಅಪಾಯಕ್ಕೊಳಗಾದಾಗ ಪ್ರತಿರೋಧವೊಡ್ಡುವ ಹಕ್ಕು ಹಿಂದೂಗಳಿಗಿಲ್ಲವೆ? ಊರ್ವಶಿಯನ್ನು ಸೂಳೆ ಎಂದರೂ ಸುಮ್ಮನಿರಬೇಕೆಂದು ಬಯಸುತ್ತೀರಲ್ಲಾ, ನಿಮ್ಮ ಧರ್ಮ ಗುರು ಪೋಪ್ ಎಂಟನೇ ಅರ್ಬನ್ ಬ್ರೂನೋಗೆ ಚಿತ್ರಹಿಂಸೆ ಕೊಟ್ಟು ಕೊಲ್ಲಿಸಿದ್ದೇಕೆ? ಗೆಲಿಲಿಯೋನನ್ನು ಗೃಹಬಂಧನ ದಲ್ಲಿಟ್ಟಿದ್ದೇಕೆ? ಡಾರ್ವಿನ್‌ನನ್ನು ದೂಷಿಸಿದ್ದೇಕೆ? ವೈeನಿಕ ಸಂಶೋಧನೆಗಳನ್ನೇ ಹೊಸಕಿ ಹಾಕಲು ಪ್ರಯತ್ನಿಸುತ್ತಿರಲ್ಲಾ, ನಿಮ್ಮದೆಂಥ ಪ್ರಗತಿಪರ ಧರ್ಮ? ಅದಿರಲಿ, ಹಿಂದೂ ಧರ್ಮವೆಂದರೆ ಬಹುದೇವತಾರಾಧನೆ, ಮೂರ್ತಿಪೂಜೆ, ಮೂಢನಂಬಿಕೆ ಎಂದು ಜರಿಯುತ್ತೀರಲ್ಲಾ, ಹಾಗಾದರೆ ಬೈಬಲ್ ಹೇಳುವಂತೆ ಸೂರ್ಯ ಭೂಮಿಯ ಸುತ್ತ ಸುತುತ್ತಾನಾ ಬಿಶಪ್? ಬೆನ್ನಿಹಿನ್ ತನ್ನ ಮಾಂತ್ರಿಕ ಶಕ್ತಿಯಿಂದ ರೋಗಗಳನ್ನು ಗುಣಪಡಿಸುತ್ತಾನೆ ಎಂದು ಮೋಸ ಮಾಡುತ್ತಿರುವುದು ಮೌಢ್ಯದ ಮಾರಾಟವಲ್ಲವೆ? ಮೋನಿಕಾ ಬೆಸ್ರಾಳ ಕ್ಯಾನ್ಸರ್ ಗಡ್ಡೆಯನ್ನು ತನ್ನ ಮಾಂತ್ರಿಕ ಶಕ್ತಿಯಿಂದ ಕರಗಿಸಿದ್ದಾರೆ ಎಂದು ಕಥೆ ಕಟ್ಟಿ ಮದರ್ ಥೆರೇಸಾ ಅವರನ್ನು ಸಂತಪದವಿಗೇರಿಸಲು ಪ್ರಯತ್ನಿಸಿದ್ದು ಕ್ರೈಸ್ತರ ಮೌಢ್ಯವಲ್ಲದೆ ಮತ್ತೇನು? ಇನ್ನು ನಿಮ್ಮ “Creationism” ಹೇಳುವಂತೆ  ಜೀವಸಂಕುಲ ಸೃಷ್ಟಿಯಾಗಿದ್ದು ಕೇವಲ 10 ಸಾವಿರ ವರ್ಷಗಳ ಹಿಂದೆಯೇ? ಹಾಗಾದರೆ ಅವೈe ನಿಕ ಎಂಬ ಕಾರಣ ನೀಡಿ ಅಮೆರಿಕ 1987ರಲ್ಲಿ ನಿಮ್ಮ “Creationism” ಥಿಯರಿಯನ್ನು ಪಠ್ಯದಿಂದ ತೆಗೆದು ಹಾಕಿದ್ದೇಕೆ? ಅಮೆರಿಕದ ಸುಪ್ರೀಂ ಕೋರ್ಟೇ ನಿಮ್ಮ “Creation science” ಅನ್ನು ಶಾಲಾ-ಕಾಲೇಜುಗಳಲ್ಲಿ ಬೋಧನೆ ಮಾಡುವುದಕ್ಕೆ ತಡೆಹಾಕಿತು ಎಂದರೆ ನಿಮ್ಮ ಪ್ರತಿಪಾದನೆ ಅದೆಷ್ಟು ಸುಳ್ಳುಗಳಿಂದ ಕೂಡಿದ್ದಿರಬಹುದು? ಹಿಂದೂ ಧರ್ಮೀಯರು ವಿಗ್ರಹ ಆರಾಧಕರು ಎನ್ನುತ್ತೀರಲ್ಲಾ, ನೀವೇಕೆ ಜೀಸಸ್, ಮೇರಿಯ ಸಿಮೆಂಟ್ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತೀರಿ? ಏಸುವನ್ನು ಆರಾಧಿಸಿದರೆ ರೋಗ ಗುಣವಾಗುತ್ತದೆ ಎಂದು ಮೋಸ ಮಾಡುತ್ತೀರಲ್ಲಾ, ಹಾಗಾದರೆ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳೇಕೆ ಬೇಕು? ಅಸ್ವಸ್ಥರಿಗೆ ಬರೀ ಪ್ರಾರ್ಥನೆ ಮಾಡಲು ಹೇಳಬಹುದಲ್ಲವೆ? ಮೊದಲು ಪ್ರಾರ್ಥನೆ ಮಾಡಿ ಎಂದು ಹೇಳಿ, ನಂತರ ಔಷಧ ಕೊಡುವುದೇಕೆ? ಮತಾಂತರದಿಂದ ಮಾನವನ ಉದ್ಧಾರವಾಗುತ್ತದೆ ಎನ್ನುವು ದಾದರೆ ಈ ‘ದಲಿತ ಕ್ರೈಸ್ತ’ರು ಎಲ್ಲಿಂದ ಬಂದರು? ಅಂದರೆ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರೂ ಬಡತನ ಹೋಗಲಿಲ್ಲ, ಕಳಂಕ ಕಳಚಲಿಲ್ಲ ಎಂದಾಯಿತಲ್ಲವೆ? ಅಲ್ಲ, ಕ್ರೈಸ್ತರಾದ ನೀವು ಯಾರನ್ನು ವಂಚಿಸಲು ಚರ್ಚ್‌ಗಳಿಗೆ ‘ದೇವಾಲಯ’ ‘ಮಂದಿರ’ ಅಂತ ಹೆಸರನ್ನಿಡುತ್ತೀರಿ?  ನೀವು ನಿಜವಾಗಿಯೂ ಶಾಂತಿಪ್ರಿಯರು ಹಾಗೂ ಅನ್ಯಧರ್ಮ ಕ್ಕೆ ಗೌರವ ಕೊಡುವವರೇ ಆಗಿದ್ದರೆ ಇಂಗ್ಲೆಂಡಿನ ಚರ್ಚ್ಗಳು ಯೋಗದ ಮೇಲೆ ನಿಷೇಧ ಹೇರಿರುವುದೇಕೆ? ಸ್ವಂತತೆಯೇ ಇಲ್ಲದೆ “ಕ್ರಿಶ್ಚಿಯನ್ ಯೋಗ” ಎಂದು ಕಾಪಿ ಮಾಡುತ್ತಿದ್ದೀರಲ್ಲಾ ಇದು ಸರಿಯೇ?

ಇನ್ನು ನೀವು ಹಿಂದೂಗಳನ್ನು ತೆಗಳುವ ಪುನರ್ಜನ್ಮದ ವಿಷಯಕ್ಕೆ ಬರೋಣ. ಮನುಷ್ಯ ಪಾಪ ಮಾಡಿರುತ್ತಾನೆ. ಅದು ಪರಿಹಾರವಾಗಬೇಕಾದರೆ ಜೀಸಸ್‌ನನ್ನು ಆರಾಧಿಸಬೇಕು ಎನ್ನುತ್ತೀರಿ. ಅಂದರೆ ಪಾಪ ಮಾಡಿದ್ದು ಯಾವಾಗ? ಒಂದು ವೇಳೆ ಹುಟ್ಟುವಾಗಲೇ ಮನುಷ್ಯನಿಗೆ ಪಾಪ ಅಂಟಿಕೊಂಡಿರುವುದೇ ಆದರೆ, ಪಾಪ ಮಾಡಿದ್ದಾದರೂ ಯಾವಾಗ? ಹಿಂದಿನ ಜನ್ಮದಲ್ಲೇ ಆಗಿರಬೇಕಲ್ಲವೆ? ಹಾಗಾದರೆ ನೀವೂ  ಪುನರ್ಜನ್ಮವನ್ನು ಒಪ್ಪಿಕೊಳ್ಳಬೇಕಾಗುತ್ತಲ್ಲವೆ? ಅದಿರಲಿ, ಹಿಂದೂಯಿಸಂ ಅನ್ನು ಭೂತಪ್ರೇತಗಳ ಧರ್ಮ ಎನ್ನುತ್ತೀರಲ್ಲಾ ಅಮೆರಿಕ, ಬ್ರಿಟನ್, ಐರ್‍ಲೆಂಡ್, ನ್ಯೂಜಿಲ್ಯಾಂಡ್, ಕೆನಡಾ ಹಾಗೂ ಉತ್ತರ ಅಮೆರಿಕದ ರೋಮನ್ ಕ್ಯಾಥೋಲಿಕ್ ಹಾಗೂ ಆಂಗ್ಲಿಕನ್ ಚರ್ಚ್‌ಗಳು ಪ್ರತಿ ವರ್ಷ ಅಕ್ಟೋಬರ್  ೩೧ರಂದು ಆಚರಿಸುವ “Halloween Holiday” ಭೂತ, ಪ್ರೇತಗಳ, ಮಾಟ, ಮಾಯದ ಹಬ್ಬವೇ ಅಲ್ಲವೆ?! ಹಿಂದೂ ಧರ್ಮದಲ್ಲಿರುವ ಜಾತಿ ಪದ್ಧತಿಯ ಬಗ್ಗೆ ಮಾತನಾಡುತ್ತೀರಲ್ಲಾ, ನಿಮ್ಮ ಕ್ರೈಸ್ತರು ಸ್ವಧರ್ಮೀಯರೇ ಆಗಿರುವ ಆಫ್ರಿಕನ್ ಕರಿಯರನ್ನು ಯಾವ ರೀತಿ ನಡೆಸಿಕೊಳ್ಳುತ್ತಾ ಬಂದಿದ್ದಾರೆ? ಅದಿರಲಿ, ಗುಲಾಮಗಿರಿಯನ್ನು ಆರಂಭಿಸಿದ್ದು ಕ್ರೈಸ್ತ ಧರ್ಮೀಯರೇ ಅಲ್ಲವೆ? ಆಫ್ರಿಕನ್ ಅಮೆರಿಕನ್ ಕರಿಯರು ಕ್ರೈಸ್ತ ಧರ್ಮವನ್ನು ಬಿಟ್ಟು ಇಸ್ಲಾಮನ್ನು ಸ್ವೀಕರಿಸುತ್ತಿರುವುದೇಕೆ? ೨೦೦೧, ಸೆಪ್ಟೆಂಬರ್ ೧೧ರಂದು ಅಮೆರಿಕದ ಮೇಲೆ ಭಯೋತ್ಪಾದಕ ದಾಳಿ ನಡೆದ ನಂತರ “Crusade will continue” ಎಂದ ಜಾರ್ಜ್ ಬುಷ್ ಮಾತಿನ ಅರ್ಥವೇನು? ಕ್ರುಸೇಡ್ ಆರಂಭವಾಗಿದ್ದೇ ಇಸ್ಲಾಮ್‌ನ ಪ್ರಸರಣವನ್ನು ತಡೆಯುವುದಕ್ಕಾಗಿ. ಅಫ್ಘಾನಿಸ್ತಾನ, ಇರಾಕ್ ಹಾಗೂ ಮುಂದಿನ ಗುರಿ ಇರಾನ್. ಹೀಗೆ ಒಂದೊಂದಾಗಿ ಮುಸ್ಲಿಂ ದೇಶಗಳನ್ನೇ ನಾಶಪಡಿಸುತ್ತಿರುವ ನೀವು ಈಗಲೂ ಒಳಂಗಿದೊಳಗೆ ಇಸ್ಲಾಂ ವಿರುದ್ಧದ ಕ್ರುಸೇಡ್ ಮುಂದು ವರಿಸುತ್ತಿದ್ದೀರಿ ಎಂದಾಗಲಿಲ್ಲವೆ?

ಅಣಕವೆಂದರೆ ‘ನ್ಯೂಲೈಫ್ ಚರ್ಚ್’ಗಳ ಮೇಲೆ ನಡೆದ ದಾಳಿಯ ನಂತರ ದೇವೇಗೌಡರು ದಿಲ್ಲಿಯಲ್ಲಿ ನಡೆಸಿದ ಧರಣಿ ಹಾಗೂ ದಾವಣಗೆರೆಯಲ್ಲಿ ನಡೆದ ಕೋಮಸೌಹಾರ್ದ ಸಭೆಯಲ್ಲಿ ಪಾದ್ರಿಗಳ ಜತೆ ಮುಲ್ಲಾಗಳೂ ಪಾಲ್ಗೊಂಡಿದ್ದರು, ಹಿಂದೂ ಸಂಘಟನೆಗಳ ವಿರುದ್ಧ ಘೋಷಣೆ ಕೂಗಿದರು! ಹೇಗಿದೆ ನೋಡಿ ಈ ಹೊಸ ಜೋಡಿ?! ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ 2000ರಲ್ಲಿ ಕರ್ನಾಟಕ ಹಾಗೂ ಆಂಧ್ರದ ಚರ್ಚ್‌ಗಳಲ್ಲಿ ಸರಣಿ ಸ್ಫೋಟಗಳಾಗಿದ್ದವು. ಆಗ ಹಿಂದೂ ಸಂಘಟನೆಗಳ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಆದರೆ ಸಿಕ್ಕಿಬಿದ್ದಿದ್ದು ‘ದೀನ್‌ದಾರ್ ಅಂಜುಮಾನ್’ ಎಂಬ ಮುಸ್ಲಿಂ ಸಂಘಟನೆ! ಇತಿಹಾಸದುದ್ದಕ್ಕೂ ಪರಸ್ಪರ ಕಚ್ಚಾಡು ತ್ತಲೇ ಬಂದಿರುವ ಇವರು ಹಿಂದೂಗಳಿಗೆ ಶಾಂತಿಪಾಠ ಹೇಳಿಕೊಡಲು ಮುಂದಾಗಿದ್ದಾರೆ. ಇಂತಹ ಕೃತ್ರಿಮತೆಯನ್ನು ಹಿಂದೂಗಳು ಅರ್ಥಮಾಡಿಕೊಳ್ಳಬೇಕು. ಮತಾಂತರದ ವಿರುದ್ಧದ ಹೋರಾಟ ಮಾಡಿದರಷ್ಟೇ ಸಾಲದು, ಇನ್ನು ಮುಂದೆ ಮರಳಿ ಮಾತೃಧರ್ಮಕ್ಕೆ ಕರೆತರುವ ಪ್ರಕ್ರಿ ಯೆಯೂ ಆರಂಭವಾಗಬೇಕು. ಜತೆಗೆ ದಲಿತರು, ಶೂದ್ರರು ಎಂದು ಮೂಗು ಮುರಿಯುವುದನ್ನು ಬಿಟ್ಟು ನಾವೆಲ್ಲ ಒಂದೇ ಎಂಬುದನ್ನು ಕೃತಿಯಲ್ಲಿ ತೋರಬೇಕು.

ಇದೇನೇ ಇರಲಿ, ಕಟ್ಟಾ ನಾಸ್ತಿಕರಾದ ಚಾರ್ವಾಕರಿಗೂ ಸ್ಥಾನ ನೀಡಿದ, ಮಾನ್ಯ ಮಾಡಿದ ಧರ್ಮ ನಮ್ಮದು. ನಾವು ಧರ್ಮ-ಧರ್ಮಗಳ ನಡುವಿನ ಯುದ್ಧವಾದ ‘ಕ್ರುಸೇಡ್’ ಆರಂಭಿಸಿದವರಿಂದ ಶಾಂತಿಪಾಠ ಕಲಿಯುವ ಅಗತ್ಯವಿಲ್ಲ. ಕ್ರೈಸ್ತರು ಹೇಳುವಂತೆ ನಾವು ಪಾಪದೊಂದಿಗೇ ಹುಟ್ಟಿ ದವರಲ್ಲ. ನಮ್ಮ ವೇದಗಳು ಹೇಳುವಂತೆ, ವಿವೇಕಾನಂದರು ಪುನರುಚ್ಛರಿಸಿದಂತೆ “We are children of immortal bliss. It’s greatest sin to call ourselves as sinners”. ಹೌದು, ನಾವು ಅಮೃತಾತ್ಮರು, ಪಾಪಿಗಳಲ್ಲ. ಮಾಡದ ಪಾಪವನ್ನು ತೊಳೆದುಕೊಳ್ಳಲು ನಾವೇನು ಮತಾಂತರಗೊಳ್ಳಬೇಕಿಲ್ಲ!

Grow up Bishop!

95 Responses to “ಸೂರ್ಯ ಭೂಮಿಯ ಸುತ್ತ ಸುತ್ತುತ್ತಾನಾ ಬಿಶಪ್?”

  1. HARISH BHAT says:

    SUPERB.NEEVU KELIDA PRASHNEGALANNU PRATIYOBBARU ARTA MADIKOLLA BEAKU. AAGA MATRA “MATANTARA” DANTA PRAKARANAGALU KADIME AGABAHUDU

  2. Ashwini Bhat says:

    Hello Pratap Sir..
    Realy wonderful article sir… ur qstns r absolutly right.. thank u 4 the excellent article.. keep it going always sir..

    “All the best”

  3. Vikram K S says:

    Dear Pratap,
    Thanks for providing ur “Bettale Jagattu” articles here.
    Yours
    Vikram

  4. gorli harish says:

    dear sri pratap, reading your article, my heart beats with hope for “us”. i have one more question for the bishop. why is the “south india bible society” on m.g.road(bengaluru), in kannada, is called “sathya veda samsthe”? does it mean “veda” is the “true bible”!

  5. sriram says:

    Dear Pratap Simha,

    My friend, in this world where lies are ‘true’ and the liers are ‘righteous’, and where truth is conveniently buried without a trace and its few beholders are condemned, and seen with contempt, you are like a fighting lone HERO, who i am sure will hold high the flag of truth, and hoist it high for the world to see and awake to.
    It is only the brave my friend, who stand for truth despite every odd, the world has few of them and i am glad that one is so near to us, go ahead my friend, where one stands for truth, not the combined effort of all the world can hold one back. Bharath varsha will be deeply indebted to you.
    ‘Satyameva jayate’
    -Sri Ram

  6. ಚಿನ್ಮಯ says:

    ಕಡು ಸತ್ಯವನ್ನು ಬಿಚ್ಚು ನುಡಿಗಳಲ್ಲಿ ನಮ್ಮ ಮುಂದಿರಿಸಿದ ನಿಮಗೆ ಕೋಟಿ ಧನ್ಯವಾದಗಳು ಪ್ರತಾಪ್.. ನಿಮ್ಮ ಹರಿತವಾದ ಲೇಖನಿಯೇ ನಮಗೆ ಆಯುಧ ..ಹೀಗೆ ಮುಂದುವರಿ ..ಸದಾ ನಿಮ್ಮೊಂದಿಗೆ

  7. adhithya bhat says:

    Thanks for the article…..u r good….right also….hope our religion comes back and reconversion should start in full swing….hope these things are read by idiot fool called deve gowda….all other congress fools…..

  8. Dhananjay AM says:

    Dear Pratap,
    You have really given a tough time to the pope and his followers. I don’t think supporters of so called ‘crusade’ can digest. It is the irony that the people can’t accept truth. A quote by Albert Einstein says-“Science without religion is lame, religion without science is blind.” What is the bishop going to teach the world? You can read his face and decide if he is a peace lover or arrogant?! Thank you for the article.
    Dhananjay AM

  9. ರವಿ says:

    ಅದ್ಭುತವಾದ, ನ್ಯಾಯಸಮ್ಮತವಾದ, ಬೆಳಕಿನಷ್ಟೇ ಸತ್ಯವಾದ ಸುಂದರ, ಸರಳ ವಿಚಾರವನ್ನು ಈ ಲೇಖನದಲ್ಲಿ ಹೇಳಿದ್ದೀರಿ. If any Christian have gutts or courage to answer, let him answer all your questions. ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು- ನಾವು ಹಿಂದುಗಳು ‘ಶಾಂತಿಗೆ ಬಧ್ಧ, ನಮ್ಮನ್ನು ಕೆಣಕಲು ಬಂದರೆ ಯಧ್ಧಕ್ಕೂ ಸಿಧ್ಧ. ನೆನಪಿರಲಿ.

  10. ರಾಕೇಶ್ ಶೆಟ್ಟಿ says:

    ಪ್ರತಾಪ್
    ನಿನ್ನ ಬರವಣಿಗೆಯಿಂದ ನಮಗೆ ಗೊತ್ತಿರದ ಎಷ್ಟೋ ವಿಷಯಗಳನ್ನು ಹೇಳುತ್ತಿಯಲ್ಲ ಅದು ನನಗೆ ಬಹಳ ಇಷ್ಟವಾಗುತ್ತೆ.. ‘ಗೆಲಿಲಿಯೋ , ಬ್ರುನೋನೋ, ಡಾರ್ವಿನ್ , ನಿಕೊಲಸ್’ ನಂತಹ ಮಹಾನ್ ವಿಜ್ಞಾನಿಗಳನ್ನು ಬಲಿ ತೆಗುದುಕೊಂಡ ಇವರು ‘ಶಾಂತಿ ಮಂತ್ರ’ ವನ್ನು ಬೋದಿಸುತ್ತಾರೆ..
    ಇನ್ನು ಇಂತಹ ವಿಷಯಗಳನ್ನೇ ತಿಳಿಯದ ನಮ್ಮ ಬುದ್ದಿ ಜೀವಿಗಳು(?), ವಿಚಾರವಾದಿಗಳು (?) , ಇವರ ಜೊತೆಗೆ ದೇವೇಗೌಡ , ಖರ್ಗೆ ಮುಂತಾದವರು ಸೇರಿ ನಮ್ಮ ನಮ್ಮಲ್ಲೇ ಬಿರುಕನ್ನು ಉಂಟು ಮಾಡುತಿದ್ದರೆ … ಇವರಿಗೆಲ್ಲ ಧಿಕ್ಕಾರವಿರಲಿ……
    ನಾನು ಮೊದಲೇ ಬರೆದಿದ್ದ comments ಅನ್ನು (“ನಮಗೆ ಬೇಕಿರುವುದು ಪಿಳ್ಳನ್ಗೊವಿ ಕೃಷ್ಣ ಅಲ್ಲ “) ಮತ್ತೆ ಇಲ್ಲಿ ಹೇಳುತ್ತೇನೆ. ಮೊದಲು ನಾವು ಒಗ್ಗಟ್ಟಿನಿಂದ ಇದ್ದರೆ ಇಂತ ನೂರು ‘ಬಿಷಪ್ , ಗೌಡ , ಖರ್ಗೆ , URA, ಕಾರ್ನಾಡ್’ ರಂತವರು ನಮ್ಮನ್ನು ಏನು ಮಾಡಲು ಸಾದ್ಯವಿಲ್ಲ……

  11. Rajesh says:

    ತುಂಬಾ ಅರ್ಥಪೂರ್ಣವಾದ ಲೇಖನ…ಓದಿ ಕುಶಿ ಆಯಿತು…ಬಿಷಪ್ ಈಗ ಪ್ರತಾಪ್ ಅವರ ಪ್ರಶ್ನೆಗೆ ಉತ್ತರಿಸಲಿ..ಹಾಸ್ಯಾಸ್ಪದ ವಿಷಯವೆಂದರೆ ಮಾನ್ಯ ಬಿಷಪ್ನವರಿಗೆ ಗೊತ್ತಿರಲಿಕ್ಕಿಲ್ಲ ಈ ವಿಷಯಗಳು…ಇನ್ನು ದೇವೇಗೌಡನ ವಿಷಯ ಬಿಡೋಣ…ಅವ ಒಬ್ಬ ಹುಚ್ಹ, ತರ್ಲೆ…ನಾಯಿ ಬೊಗಳಿದರೆ ದೇವಸ್ಥಾನ ಎಲ್ಲಿ ಹಾಳಾಗುತ್ತೆ….

  12. Narayan says:

    ಜೆರುಸಲೇಮ್ ಕಥೆ ಎಲ್ಲಾ ಹಳೆಯದಾಯಿತು. ಈಗ ನಡೆಯುತ್ತಿರುವುದೇನು? ಇರಾಕ್ ಮೇಲೆ ಯುದ್ಧ, ಇರಾನ್ ಮೇಲೆಯೂ ಯುದ್ಧ ನಡೆಯುವ ಸಂಭವ. ಅಮೆರಿಕನ್ನರಿಗೆ ಇರಾಕನ್ನು ಕ್ಷಮಿಸಲು ಚರ್ಚುಗಳು ಏಕೆ ಹೇಳುವುದಿಲ್ಲ?

  13. Vinutha Iyengar says:

    Very good article.

    I wish those people who criticize Hinduism and support Christianity read this and understand where Hinduism stands and where Christianity.

  14. Satya says:

    One of the best articles I have read …. keep going guru .. nannantha nooraru yuvakara rosha … sittu … asahayakathe ge nimma article swalpa samadana taruthe … U r words are reflections of youth mind … idella hale goddu VOTE politics mado kachada rajakarani galige enu gothaguthe …ade reethu ee hale talegalu koduva helikegalannu kurithu obbabbarigu neeru ilisuvantha ondu benki article bari .. all the best …

  15. Kiran says:

    Timely article..
    When the church near Rajarajeshwari Nagar was shattered, I asked the surrounding people what was wrong. It was told that there were regular brainwash sessions on sundays with derisive comments on Hinduism. That is the bear minimum base-level functioning in most.

    Meanwhile look into this-
    http://www.vishalmangalwadi.com/

    Vishal Mangalwadi – You can find his books in the homes of many Christians. The content of his books- you can guess yourself.

    The problem for cite is
    We have too many Antony Murthy-s, Carnads, Sardesais and Sagarikas. But too few Shouries and Prataps. Thing is- the CNN-IBNs and the NDTVs have access to international media. Do you read Gaurdian ?

    You should reach to international columns Pratap.

    Another fact is people of our very next states don’t know you.

  16. Gururaj says:

    Hi ,
    whatever you told is right. Now what galilio did or copurnicous did was proven by hinduism long back. We have the ritual of worshipping navagraha , the nine planets since the start of hinduism, why is that these things are not thaught to our childrens in schools, why do they glorify westeners as discoverers of these….

    Thanks,
    Gururaj

  17. Rakesh S Joshi says:

    Hi Pratap,
    The article was really good. And it gave lot of info about Hinduism and Christianity. I have one suggestion, please give us one article which compares both Hinduism and Christianity and also provide the greatness about our Hinduism, coz this helps may people to understand the greatness about our Hindu Culture. They can compare Hinduism with other cultures. Still may people (educated) feel one + mark is better than Hinduism, I request you to provide this comparison.
    And about your articles, simply superb. We are looking forward to this kind of articles Pratap. Thanks for these articles.

  18. ಮಂದಾರ says:

    ಹಳೆಯ ಕತೆಗಳದೇನೇ ಇರಲಿ, ರಾಜ್ಯದ ಮುಖ್ಯಮಂತ್ರಿಯವರು ಮನೆ ಬಾಗಿಲಿಗೆ ಬಂದಿದ್ದಾಗ ಆರ್ಚ್ ಬಿಷಪ್ ಈ ರೀತಿ ಅವಮಾನ ಮಾಡಬಾರದಿತ್ತು. ಇದು ಇಡೀ ಕರ್ನಾಟಕ ರಾಜ್ಯಕ್ಕೆ ಆರ್ಚ್ ಬಿಷಪ್ ಮಾಡಿದ ಅವಮಾನ ಎಂದೇ ಭಾವಿಸಬೇಕು. ಈ ಘಟನೆಯನ್ನು ’ಮುಖ್ಯಮಂತ್ರಿಗೆ ಮಂಗಳಾರತಿ’ ಎಂಬ ಶೀರ್ಷಿಕೆಯಡಿ ಟಿವಿ9 ಚಾನೆಲ್ ಪದೇ ಪದೆ ತೋರಿಸಿ ನಮ್ಮೆಲ್ಲರನ್ನು ಮತ್ತಷ್ಟು ಅವಮಾನಿಸಿತು. ಕರ್ನಾಟಕದ ಎಲ್ಲ ಜನತೆ ಆರ್ಚ್ ಬಿಷಪ್ ಅವರ ದುರಹಂಕಾರವನ್ನು ಖಂಡಿಸಬೇಕು. ದಯಾಮಯಿಯಾದ ಆ ಯೇಸು ನಿಮಗೆ ಹೇಳಿಕೊಟ್ಟ ಪಾಠ ಇದೇನಾ. ಆರ್ಚ್ ಬಿಷಪ್?

  19. ಚಡಪಡಿಕೆ says:

    ನೆಟ್ಟಗೆ ಕನ್ನಡ ಮಾತನಾಡಲು ಬರದ ಇವನು ನಮ್ಮ ಕರ್ನಾಟಕಕ್ಕೆ ಆರ್ಚ್ ಬಿಷಪ್ಪಾ? ಬೊಗಳೆ ಬಿಡುವ ಮುನ್ನ ಮೊದಲು ನಾಲ್ಕಕ್ಷರ ಕಲಿತುಕೊಂಡು ಬಾರಯ್ಯ ಅಂತ ನಾಲ್ಕು ತದುಕಿ ಹೇಳಿದರೂ ತಪ್ಪಿಲ್ಲ

  20. Vinutha Iyengar says:

    Sir,

    Why did our CM go to Archbishop’s residence? It is his fundamental mistake. Secondly, the moment the Archbishop started talking nonsense, he should have shown his place. CM should have returned back. Devegowda is doing all the circus just to catch the attention of atleast the Gatekeeper of Sonia Gandhi’s residence. Anantamurthy is doing to please his wife. Congress leaders are dancing to please Sonia Gandhi. But BJP should not have resorted to please Archbishop so much, since he is a waste body.

    You keep writing articles like this sir. We will all support you.

  21. GKG Rao says:

    The country has never learnt the lesson since independence. To jeopardize the machinery of the government, time and again fundamentally illiterate youngones are lured with fanatism. The educated and well informed layers of the society are falling prey to this international conspiracy. Thus the fundamentalist always wins due to mass-hysteria created by the ones who cares less for the social justice. Human Rights Association is increasingly identifying associations between biology and violence that appear to offer courts evidence relevant to criminal responsibility. In addition, in a policy era of ‘zero tolerance of risk’, evidence of biological abnormality in some of those who are violent, or biological markers of violence, may be seized on as a possible basis for preventive detention in the interest of public safety. However, there is a mismatch between questions that the courts and society wish answered and those that human rights is capable of answering. This poses a risk to the proper exercise of justice and to civil liberties.

  22. Sri says:

    Hi Pratap,

    Nice article unleashing truth and many unanswered questions. Keep it up and do write more of such things. People need to know, what is going on and about its correctness.

  23. dev says:

    nijavaaglu sakkat article…ellaru ooda beekada article….

  24. Purushotham C says:

    Hi Pratap,

    Just superb!!! I dont know where u will get all these wording.

  25. Aravind says:

    Excellent Article! Every Indian should read this…
    Importantly whatever I see in India that, if attack on the minorities happen, politics come into picture and they blame simply on VHP or Bhajaranga Dal. These politics run only for votebanks and they dont even think that they are condemning the Hindus itself. Even by then the Hindus are supporting these politicians! Great India!!!

  26. Vikram K S says:

    Hello friends,
    Plz go thru the following website and c how these Christians planned to convert religion wise, caste wise sub cast wise… etc all over the world.

    http://joshuaproject.net/countries.php

    Please spread this message and create awareness.

    “Bharat Mata Ki Jai”

  27. RDV says:

    ಕ್ರಿಶ್ಚಿಯನ್ನರ ಸುಳ್ಳುಗಳನ್ನೂ ಬೆತ್ತಲೆ ಮಾಡುತ್ತಿರುವ ಪ್ರತಾಪರಿಗೆ ಅನಂತ ಧನ್ಯವಾದಗಳು.

    ಈಬಾರಿಯ ಪ್ರತಿಕ್ರಿಯೆಗಳು (ನನಗನ್ನಿಸಿದಂತೆ) ಹಿಂದೆಂದಿಗಿಂತಲೂ ಉತ್ತಮವಾಗಿದೆ.

    ಅಂದರೆ ನಮ್ಮವರು ಹೆಚ್ಚು ಹೆಚ್ಚು ಎಚ್ಚೆತ್ತಿಕೊಳ್ಳುತ್ತಿದ್ದರೆಂದೇ ಅರ್ಥ. ಇದು ಒಳ್ಳೆಯ ಬೆಳವಣಿಗೆ. ಇದಕ್ಕೆ ಕಾರಣರಾದ ಪ್ರತಾಪರಿಗೆ ಕೋಟಿ ನಮನಗಳು. ಧರ್ಮವನ್ನು ಕಾಯುತ್ತಿರುವ ನಿಮಗೆ ಧರ್ಮವೇ ಎಲ್ಲ ಶ್ರೇಯಸ್ಸನ್ನು ನೀಡುತ್ತದೆ.
    ಹಾಗೆ ಇಲ್ಲೊಬ್ಬ ಓದುಗರು (#15 ಕಿರಣ್ & #26, ಶ್ರೀ ವಿಕ್ರಮ್) ನೀಡಿದ ಮಾಹಿತಿ ವೆಬ್ ಸೈಟ್ … ಆ ಸೈಟಿನ ಪುಟಗಳನ್ನು ತಿರುವಿ ಹಾಕಿದರೆ, ನಿಜಕ್ಕೂ ಭಯವಾಗುತ್ತದೆ.
    “ಮತಾಂತರ ನಮ್ಮ ಉದ್ದೇಶವಲ್ಲ, ಮತಾಂತರ ಮಾಡುವುದೇ ಇಲ್ಲ” ಎಂದು ಮತಾಂತರವನ್ನು ಮರೆ ಮಾಚಿಸುವ ಭಾರತದ ಚರ್ಚುಗಳು ಎಷ್ಟು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಗೊತ್ತಾಗುತ್ತದೆ. ಗೆಳೆಯರೇ, ಇನ್ನು ನಾವೇ ಎಲ್ಲವನ್ನು ನೋಡುತ್ತಾ ಮೂಕ ಪ್ರೆಕ್ಷಕರಾಗಿದ್ದರೆ ನಮ್ಮಂತ ಮೂರ್ಖರು ಬೇರೆ ಯಾರೂ ಇರಲಾರರು.
    ಸುಮಾರು ಒಂದುಸಾವಿರ ವರ್ಷಗಳ ನಿರಂತರ ಹೊಡೆತಗಳನ್ನು ಸಹಿಸಿಕೊಂಡ ಇನ್ನೂ ಉಳಿದ ನಮ್ಮ ಹಿಂದೂ ಧರ್ಮವನ್ನು ಇನ್ನು ಕೆಲವೇ ವರ್ಷಗಳಲ್ಲಿ ಅವನತಿಗಿಳಿಸುತ್ತೇವೆ…..

    ಜವಾಬ್ದಾರಿ ಪ್ರತಿಯೊಬ್ಬ ಹಿಂದೂವಿನದು.

  28. ನಿಮ್ಮವ says:

    ಇವತ್ತಿನ ಅನೇಕ ಪತ್ರಕರ್ತರು ಹಿಂದೂಗಳನ್ನು, ಹಿಂದೂ ಚಿಂತನೆಗಳನ್ನು ತೆಗಳಿ “ನಿಷ್ಪಕ್ಷಪಾತ ಪತ್ರಕರ್ತರು” ಅಂತ ಬಿರುದು ಗಿಟ್ಟಿಸುತ್ತಿರುವ ಕಾಲದಲ್ಲಿ ಕೂಡ ನೀವು ನಿಮ್ಮ ನಿಲುವನ್ನು ಬಿಟ್ಟಿಲ್ಲ. ನೀವು ನಮಗೆ ಇಷ್ಟವಾಗುವುದೇ ಈ ಕಾರಣಕ್ಕೆ.
    ಕ್ರಿಶ್ಚಿಯನ್ ಮಿಶನರಿಗಳ, ಮತಪ್ರಚಾರಕ ಪಾಪಿಗಳ ಬಂಡವಾಳ ಬಯಲು ಮಾಡಲು ಕನ್ನಡದಲ್ಲಿ ಒಬ್ಬ ಪ್ರತಾಪ್ ಸಿಂಹ ಇರುವಂತೆಯೇ ಪ್ರತಿ ಭಾಷೆಯಲ್ಲೂ ಒಬ್ಬೊಬ್ಬ ಪ್ರತಾಪ್ ಸಿಂಹರು ತಯಾರಾಗಬೇಕು.
    ಅಷ್ಟೇ ಅಲ್ಲ, ಸೋಗಲಾಡಿ ಸೆಕ್ಯುಲರ್ ತಿಳಿಗೇಡಿಗಳಿಗೆ ಬುದ್ಧಿಕಲಿಸಲು ಕನ್ನಡದಲ್ಲಿ ಇನ್ನಿಬ್ಬರು ಪ್ರತಾಪ್ ಸಿಂಹಂದಿರು ಬೇಕು.

  29. ವೆಂಕಟೇಶ್, ಟೆಕ್ಸಾಸ್, ಅಮೇರಿಕಾ. says:

    ಪ್ರತಾಪರಿಂದ ಮತ್ತೊಂದು ಶ್ರೇಷ್ಠ/ಧೈರ್ಯ ತುಂಬಿದ ಲೇಖನ.
    ನನಗೆ ಈ ಲೇಖನದಲ್ಲಿ ಬೇರೆಲ್ಲದಕ್ಕಿಂತ ಇಷ್ಟವಾಗಿದ್ದು, ” ಮರಳಿ ಮಾತೃಧರ್ಮಕ್ಕೆ”…… , ಅದು ಈಡೇರಲೇ ಬೇಕು. ನಾವು ಓದುಗರು ಸ್ಪಂದಿಸ ಬೇಕಷ್ಟೇ…

    ಕನ್ನಡಕ್ಕೊಬ್ಬ ಸತ್ಯಸಾಧಕ, ಕೋಟಿಗೊಬ್ಬ ಪ್ರತಾಪ ಸಿಂಹ. ಇಂಥವರನ್ನು ಹಡೆದ ಕನ್ನಡಮ್ಮ ಧನ್ಯೆ.
    ಇಂಥವರನ್ನು ಪ್ರೋತ್ಸಾಹಿಸುತ್ತಾ, , ‘ರಣರಂಗದಲ್ಲಿ ಅರ್ಜುನನಿಗೆ ಶ್ರೀಕೃಷ್ಣನಂತೆ’ ಧೈರ್ಯ ತುಂಬುತ್ತಾ ಮಾನಸ ಗುರುವಿನ ಸ್ಥಾನದಲ್ಲಿ ಸದಾ ಬೆನ್ನಹಿಂದೆ ಇರುವ ವಿಜಯ ಕರ್ನಾಟಕದ ಶ್ರೀ ವಿಶ್ವೇಶ್ವರ ಭಟ್ಟರನ್ನು ನೆನೆಸಿಕೊಳ್ಳದಿದ್ದರೆ ನನ್ನ ಬರಹ ಅಪೂರ್ಣ.
    ಶ್ರೀ ಭಟ್ಟರೇ, ನಾನು ಪ್ರತಾಪಸಿಂಹರಿಗೆ ಅರ್ಪಿಸುವ ಒಂದೊಂದು ನಮನಗಳು ನಿಮಗೂ ಸಲ್ಲುತ್ತದೆ.

    ನಮ್ಮ ಧರ್ಮವನ್ನು ಕಾಲ ಕಾಲಕ್ಕೆ ಉಳಿಸಿದವರು, ರಕ್ಷಿಸಿದವರು ಕೆಲವು ಮಹಾತ್ಮರು, ಅಸಂಖ್ಯ ಸಾಧು ಸಂತರು, ವೀರರು. ಅವರಲ್ಲಿ ನಮಗೆ ಎದ್ದು ಕಾಣುವವರು ಶ್ರೀ ಆದಿ ಶಂಕರರು, ಶ್ರೀ ಶಿವಾಜಿ ಮತ್ತು ರಾಮಕೃಷ್ಣ ಪರಮಹಂಸರು ಮತ್ತು ಶ್ರೀ ವಿವೇಕಾನಂದರು.
    ಆವತ್ತು ಆದಿಶಂಕರರು ಹುಟ್ಟದಿದ್ದರೆ ನಾವೆಲ್ಲ ಬುದ್ದಿಷ್ಟರಾಗಿರುತ್ತೆದ್ದೆವು.
    ಶಿವಾಜಿ ಸೋಮಾರಿತನ ತೋರಿದ್ದರೆ ನಾವೆಲ್ಲ ಸಾಬರಾಗಿರುತ್ತಿದ್ದೆವು.
    ವಿವೆಕಾನದರಿಲ್ಲದಿದ್ದರೆ ಹಿಂದೂ ಧರ್ಮ ಪ್ರಪಂಚದಲ್ಲಿ ಪಳೆಯುಳಿಕೆ ಮಾತ್ರ ಆಗುತ್ತಿತ್ತೇನೋ?
    ಇವರೆಲ್ಲರೂ ನಮ್ಮ ಪ್ರತಾಪರಿಗೆ ಸ್ಪೂರ್ತಿಯಾಗಲಿ. ಮತ್ತು ಪ್ರತಾಪರ ‘ಕೆಚ್ಚು ನುಡಿಗಳು’ ಹೀಗೇ ಮುಂದುವರೆಯಲಿ.

    ಪ್ರತಾಪ ಸಿಂಹರು ಈಗಷ್ಟೇ ತಮ್ಮ ಸಾಧನೆಯನ್ನು, ಹೋರಾಟವನ್ನು ಅತ್ಯುತ್ತಮವಾಗಿ ಪ್ರಾರಂಭಿಸಿದ್ದಾರೆ. ಯಾವುದೇ ಬರಹಗಾರರಿಗೆ, ಹೋರಾಟಗಾರರಿಗೆ ಬೆಂಬಲ ಅಂದರೆ ಅವರನ್ನು ಸಕಾರಾತ್ಮಕವಾಗಿ ಸ್ವೀಕರಿಸುವುದು ಮತ್ತು ಅವರಿಗೆ ನಮ್ಮ ಕೈಲಾದ ಬೆಂಬಲ ನೀಡುವುದು.
    ಸದ್ಯಕ್ಕೆ ನಾವು ನಮಗೆ ತಿಳಿದ ಮಾಹಿತಿಯ ಜತೆಗೆ ಪ್ರತೀ ಲೇಖನಕ್ಕೆ ಇನ್ನೊ ಹೆಚ್ಚು ‘ಸ್ಪೂರ್ತಿಯುಕ್ತ ಪ್ರತಿಕ್ರಿಯೆ ಗಳನ್ನು’ ನೀಡೋಣ, ಅಲ್ಲವೇ?

    ಕಳೆದ ಬಾರಿ ಕೇಳಿದ್ದ 25 ಪ್ರಶ್ನೆಗಳ ಜತೆ, ಕ್ರಿಶ್ಚಿಯನ್ನರಿಗೆ ಇನ್ನೂ ಕೆಲವು ಪ್ರಶ್ನೆಗಳು:

    ೨೬) ಸರ್ವಧರ್ಮದವರನ್ನೋ ಸಮಾನವಾಗಿ ಕಾಣುವ ನೀವು, ಶಾಲೆಗಳಲ್ಲಿ ನಮ್ಮ ಬಾಲ-ಬಾಲೆಯರು ಕುಂಕುಮ, ಬಳೆ, ಕಡಗ, ಗೆಜ್ಜೆಹಾಕುವುದನ್ನು ಯಾಕೆ ವಿರೋಧಿಸುತ್ತೀರಿ?

    ೨೭) ನಿಮ್ಮ ಶಾಲೆಗಳಲ್ಲಿ ನಮ್ಮ ಮಕ್ಕಳು ಕನ್ನಡ (ಅಥವ ಯಾವುದೇ ಪ್ರಾಂತೀಯ ಭಾಷೆ) ಮಾತಾಡಿದರೆ ೧೦, ೨೦, ೫೦, ೧೦೦ ರೂಪಾಯಿ ದಂಡ (fine) ಹಾಕುವುದು ಅಪರಾಧ ಅಲ್ಲವೇ?

    ೨೮) ನೀವು ಮಾತ್ರ ಶಿಲುಬೆ ಧರಿಸಬಹುದು (ಪ್ರತಿಯೊಬ್ಬ ‘ಸಿಸ್ಟರ್’ ದೊಡ್ಡದಾದ ಶಿಲುಬೆ ಧರಿಸುತ್ತಾರೆ) ನಮ್ಮ ಮಕ್ಕಳು ಸಂಸ್ಕೃತದ ‘ಓಂ’ ಧರಿಸಬಾರದ?

    ೨೯) ನಮ್ಮ ಮಕ್ಕಳು ಮೈತುಂಬ ಬಟ್ಟೆ ಧರಿಸಿದರೆ ಅವರು ‘ಹವಾಮಾನದಿಂದ ಒಂದೇ ಅಲ್ಲದೆ ಸಮಾಜದ ಕಿಡಿಗೇಡಿಗಳಿಂದ ಸುರಕ್ಷಿತ’ ಎಂದು ನಮ್ಮ ಧರ್ಮ, ಗುರು ಹಿರಿಯರು ಹೇಳಿಕೊಟ್ಟಿದ್ದು, ಅದು ನಮ್ಮ ಭಾರತೀಯ ಸಂಪ್ರದಾಯ. ಆದರೆ ನಿಮ್ಮ ಕಾನ್ವೆಂಟ್ಗಳು ನಮಗೆ ಕಲಿಸಿಕೊಡುತ್ತಿರುವುದೇನು?
    ಇದರಿಂದಾಗಿ ತುಂಡು ಬಟ್ಟೆ ಧರಿಸಿದ ಹೆಣ್ಣು ಮಕ್ಕಳ ಕಾಲು,ಮೈ, ತೊಡೆಗಳನ್ನು ನೋಡಿ ಕೊಂಡು ನಮ್ಮ ಗಂಡು ಮಕ್ಕಳು ಏನು ಕಲಿಯುತ್ತಾರೆ? ಸಮಜದಲ್ಲಾಗುತ್ತಿರುವ ಹೆಣ್ಣುಮಕ್ಕಳ ಅತ್ಯಾಚಾರಕ್ಕೆ, ಪ್ರಚೋದನೆಗೆ ಕಾರಣ ನೀವೇ ಅಲ್ಲವೇ?

    ೩೦) ಪಶ್ಚಿಮದ ಎಲ್ಲಾ ಕ್ರಿಶ್ಚಿಯನ್ನರು ಪ್ರತಿಪಾದಿಸುವುದು ‘ವಿಜ್ನಾನ’ ಎಂದು ನಮ್ಮ (ಮೂರ್ಖ) ನಂಬಿಕೆ. ಆಸ್ಪತ್ರೆ ಗಳಲ್ಲಿ ವಿಜ್ನಾನದಿಂದಲೇ ರೋಗಿಗಳು ವಾಸಿಯಾಗುವುದಾದರೆ ಏಸುಕ್ರಿಸ್ತನ ಪೋಟೋ, ಶಿಲುಬೆ, ಬೃಹದಾಕಾರದ ಮೂರ್ತಿ ಎಲ್ಲಾ ಯಾಕೆ? So, ನಿಮ್ಮ ಮೂಲ ಉದ್ದೇಶ, ಮತಾಂತರ ಮತ್ತು ಎಸುವೊಂದೇ ಮಹಾನ್ ಎಂಬ ಭಾವನೆ ಹುಟ್ಟಿಸುವುದು ಅಲ್ಲವೇ?

    ೩೧) ನಿಮ್ಮ ಧರ್ಮ ಅಷ್ಟು ಗಟ್ಟಿಯಾಗಿ, ಸತ್ಯದಿಂದ ಕೂಡಿದ್ದರೆ ಬೇರೆ ಧರ್ಮದವರೇ ಬಂದು ಸೇರಿಕೊಳ್ಳುತ್ತಿದ್ದೆವು, ನೀವು ಮನೆ ಮನೆ ಬಾಗಿಲಿಗೆ (ಭಿಕ್ಷುಕರ ತರ) ಬಂದು, ಹಣದ ಆಮಿಷ ತೋರಿಸುವ ಅವಶ್ಯಕತೆ ಇತ್ತೇ? ಅಥವಾ ಹೊಸ ತರದ ‘ಉದ್ಯೋಗ ಆವಿಷ್ಕಾರವೇ’?

    ೩೨) ಹಿಂದೂ ಧರ್ಮ ಹಾಳುಮಾಡಲೆಂದೇ, ‘ಮೆಕಾಲೆ’ ಎ೦ಬ ಹುಂಬನಿಗೆ ಅಪ್ಪಣೆ ಕೊಟ್ಟು, ಜಗತ್ತಿನಲ್ಲೇ ಶ್ರೆಷ್ಟವಾಗಿದ್ದ ನಮ್ಮ ಗುರುಕುಲ ಪದ್ದತಿಯನ್ನು ನಾಶಮಾಡಿದ್ದೀರಲ್ಲ, ಇದು ಶಿಕ್ಷಣ ಕ್ಷೇತ್ರಕ್ಕೆ ಮಾಡಿದ ಘೋರ ಅನ್ಯಾಯವಲ್ಲವೇ?

    ೩೩)ಮತಪ್ರಚಾರಕ್ಕಾಗಿ ಹಿಂದೂ ಗಳ ಮನೆ ಬಾಗಿಲಿಗೆ ನಿಮ್ಮ ದೂತ (ಧೂರ್ತ) ರನ್ನು ಕಳಿಸುತ್ತೀರಲ್ಲ, ಮುಸ್ಲಿಮರ ಮನೆಬಾಗಿಲಿಗೆ ಯಾಕೆ ಕಳಿಸುವುದಿಲ್ಲ? ಸತ್ಯದ ದಾರಿಯಲ್ಲಿ ಭಯವೇ?

    ೩೪) ಕ್ರಿಶ್ಚಿಯನ್ ಪಾದ್ರಿಗಳಿಂದಲೇ ನೇಮಿಸಲ್ಪಟ್ಟಿದ್ದ ಕರ್ಮಠ ಕ್ರಿಶ್ಚಿಯನ್ ಪ್ರತಿಪಾದಕ ‘ಮ್ಯಾಕ್ಸ್ ಮುಲ್ಲರ್’ ಸಂಸ್ಕೃತ ಧರ್ಮ ಗ್ರಂಥ ಗಳನ್ನು ಅಭ್ಯಸಿಸುತ್ತಾ, ಅನುವಾದ ಮಾಡುತ್ತಾ ಜೀವನದ ಕೊನೆಯ ಕಾಲಕ್ಕೆ ಪ್ರತಿಪಾದಿಸಿದ್ದೇನು? ‘ಕೊನೆಯ ಪತ್ರದಲ್ಲಿ ನಿಮಗೆ ಬರೆದಿದ್ದೇನು’ ಸ್ವಲ್ಪ ಬಹಿರಂಗ ಗೊಳಿಸುತ್ತೀರಾ?

    ೩೫) ಅಮೆರಿಕದಲ್ಲಿ ಕೆಲವು ‘world championship’ ಆಯೋಜಿಸುತ್ತಾರೆ. ಅದು ಹೇಗಿರುತ್ತೆ ಅಂದರೆ ಅಮೆರಿಕದವರು ಮಾತ್ರ ಭಾಗವಹಿಸುತ್ತಾರೆ! ಹಾಗೇ ಕ್ರಿಶ್ಚಿಯನ್ ಲಾಬಿ ಪ್ರಾಯೋಜಿತ world religion heritage ನಲ್ಲಿ ಕ್ರಿಶ್ಚಿಯನ್ ಸೈಂಟ್ ಗಳು ಮಾತ್ರ ಹೆಚ್ಚು ಕಾಣಸಿಗುತ್ತಾರೆ. ಹಿಂದೂ ಸಪ್ತ ಋಷಿಗಳು, ಸಾವಿರಾರು ಮಹಾತ್ಮರು ‘Saint’ ಗಳಲ್ಲವೇ? (ಓದುಗರೇ ಇಂಥವರಿಗೆ ನಮ್ಮಲ್ಲಿ ‘ಬಾವಿಯೊಳಗಿನ ಕಪ್ಪೆ’ ಎನ್ನುತ್ತೇವೆ ಅಲ್ಲವೇ?)

    ಕ್ರಿಶ್ಚಿಯನ್ನರೆ (ಮತ್ತು ಬುದ್ಧಿ ಜೀವಿಗಳೇ),
    ಈಗ ಇಷ್ಟು ಸಾಕು, ಜಾಸ್ತಿ ತಿಂದರೆ ಅಜೀರ್ಣ ಆಗುತ್ತದೆ ಅಂತ ನಮ್ಮ ಹಿರಿಯರು ಹೇಳುತ್ತಾರೆ. ಶ್ರೀ ಪ್ರತಾಪರ ಮತ್ತು ನನ್ನ ಪ್ರಶ್ನೆಗಳಿಗೆ ನಿಮ್ಮ ಉತ್ತರ ಬಂದರೆ ಮತ್ತೆ ಮಾತಾಡೋಣ.

    ವೆಂಕಟೇಶ್, ಟೆಕ್ಸಾಸ್, ಅಮೇರಿಕಾ.

  30. Sandeep Marathe says:

    Dear All,
    I guess, I main reason that Christian missinaries, some leftists and Pseudosecularists (read CNN-IBN, NDTV, ToI, The Hindu staff) claim regarding conversion is the Caste system in Hinduism. Well, it now happens for money and other economic facilities, but the above mentioned people explicitly justify the conversion by pointing towards Caste System !!! (Karan Thapar’s “Who is the Real Hindu” article in The Hindu).
    Well I feel most of us either dont know/have forgotten that Caste system explained in Rig Veda is completely different from what we perceive today (according to which even I am a ‘Shudra’ (btw I am a brahmin by birth) because my karma/duty is to work for a company doing a consumer product/work for higher authority and hence work for others !)
    I guess, this is the feeling regarding caste system we have to incite into the Hindu people today. As for other reasons of conversion, I feel we need to start serving the society, a genuine effort as opposed to the one done by Christian missionaries (I would not generalise this to all missionaries).

    @ Pratap Simha: Your article is really an Eye opener for many Hindus. I would also like to suggest you to describe more about the possible solutions and explain actual causes for some of the wrongly-thought bad customs in Hinduism (like the concept of Caste system which actually is based on duty/karma and not on birth; Sati system which was started during Mughal empire because of the harassment of women by Mughal rulers etc. etc.)
    I hope you read these comments….

    Thanks,
    Sandeep

  31. sandesh says:

    Hi pratap.

    Its a superb article. just a simple logic. In hindu religion , it is said we have 3crore gods, where as in ‘christian or islam’ they believe only one god.

    Just think now abt the administration . Even a District collector will be not able to manage a single district, he has several other officers, to support the adminstration. parallely ‘If we say there is only one god to save the whole world i.e ‘jesus or allah’ it has no logic. That is why in hindu religion we have almost 3 crore gods to administrate the whole world. I mean it .

    any comments plzzzzzzzzzzzz……..

  32. Mune Gowda says:

    @ Sandesh #31.

    Sorry to tell, its your Poor thinking!

    Gods are not for administration of human being alone! God is for entire universe. Afterall God is not like a human being, you cannot just compare. That is why we are calling as GOD which is a super Natual power.

    GOD means…….
    As per Hindus: Any shape, any size or any type that is existing or Invisible. (invisible doesnt mean non-existing, may be invisible to you, thatsall)

    AS per Christians : Jesus, a dead male , but he will reincornate. (dont say Dead God!)

    As Per Muslims : Allah, an Immaginary Male person but never existed on earth. But Muslims says their God as “HE” no concept of ‘SHE!’

    As per Buddists : Buddha and Buddha alone. A prince turned saint.
    In Hinduism, we had many ‘saints’ like this.

    As Per Jains : I dont think they are Non-Hindus, hope U understand.
    There may be some difference in style in Poojas/rituals.

    As Per Sikhs : I dont think they are Non-Hindus, hope U understand.
    There may be some difference in style in Poojas/rituals. But their hily book is “Guru Grantha Saheb”.

    (if you argue about sikhs & Jains, we have many differences within Hindu comunity itself, so dont argue)

    Hope you are more than answered.

  33. Ravinarayana G says:

    Very Good article…
    Congrats… Keep going……..
    Every week i am reading your articles………
    All are very good……….

  34. Murthy D R says:

    Hi Pratapsimha…
    Fantastic article… ( as usual.. 🙂 ) i have been reading your articles from past 3 years… Happy to have a columnist like you who has so much knowledge about various things and most importantly a true Indian.
    Keep writing, keep rocking…
    – Mera Bharath mahan, Jai Hind
    Murthy D R

  35. Hello Pratap,

    Nice, Superb Article. If any Christian People have gutts to answer, let them answer all your questions.

    -Raghavendra Shet

  36. kumar says:

    Wonderful Mr.Pratap. Keep up the good work

  37. Akia Khan says:

    Dear Pratap,

    Kindly write in English also or atleast kindly see that your articles are translated to English so that other language ppl can read your good writing.

    Am regular to your articles.

    (Also, kindly be informed that ‘vijayakarnataka E-paper is not opening, pls. arrange to fix it …..sorry, I dont know where to complain this.)

  38. Ravi says:

    Dear Prataap,

    Superb Artcle!!!!!!!!

  39. R.Sreenivasan says:

    Very invigorating and thought provoking article, I hope it reaches the rural populace which is really being targeted by these ruthless missionaries. Though i am a regular reader of V K and bettale jagattu, offlate i was of the view (fearing) that the topics selected were not so interesting but this is timely to allay my fears.
    I want you to continue writing such beautiful articles. My sincere request to you is you shud start penning in english media too bcos the reach is vast and bcos unfortunately whether we like it or not, it is the miniscule english speaking community which is ruling the roost. please start penning in english, better late than never

  40. Manohar says:

    realy nice one

  41. Kumar says:

    Ultimate Pratap. Keep it up. And one more message to our guys (Indians:- not specifically to Hindu), Please understand the hidden intention of those guys and awake now itself. Otherwise i am sure our next generation will be in trouble. Which ever religion you belongs to, its best. Do not change it because of some greediness. Converting to other religion is nothing but your selling your ancestors belief, culture, life style, everything.

    always with you….

  42. gururaj says:

    ಪ್ರತಾಪ

    ಈ ಲೇಖನದ ಒ೦ದು ಪ್ರತಿಯನ್ನು ಬಿಷಪ್ ಗೆ ಕಳುಹಿಸಿ.

  43. Harish says:

    Hands off Pratap.

    christian religion is just 2000 years old, but it has got lot of divisions in the group, like Protestants, Catholics, x, y,z…etc.
    If thats true, Hinduism started with human beings! yes, what is wrong if it can have n number of divisions, living united for thousands of years and will live united for ever. After all its the freedom that religion has given for every one to pray god that they like. Did any religion has given this kind of freedom? thats way foreigners are so attractive towards Hinduism, because they dont have freedom in their religion, a naked truth.

    After all, Dear Christians if you have a brain and its working fine, why dont you think all these problems are rewards for your bitch activities?

    If they have a common sense how can they say Hinduism has

  44. nudupa says:

    Hi Pratap,
    Wonderfull article every hindu in this country should not miss reading ………..
    Thanks for the article.
    Regards
    nudupa

  45. joy pinto says:

    Pratapa simha – naayi bogalidare devalaya halaguthadeye? – idhe nimma kathe. idhakke vyathe maadi phalavilla! Bogali mahashayare….bogali

  46. chetan says:

    Pratap, u remind me of Hitler’s Info. minister Goebbels who believed ‘a lie repeated 100 times makes a truth’. You write well. Please use your talent to spread good news that unites people, not the venom that destroys human civilization.

  47. Govinda says:

    Hi Pratap,
    The article is extremely good and you explained with the fact. Today the conversion is more political then the religion issue. Each political party thinks vote bank and support the community.
    Instead of going back and we need think of future. The one of the reason for the conversion today is poverty and lack of facility.
    Today even Hindu religion should provide education, medical help to poor people. This really helps to curb the conversion.
    All of us are responsible to help them.
    Thanks,

  48. Prasad Brisbane says:

    Hi
    Excellent

  49. juzevas says:

    half truths and misinformation does not rectify your view. if you want to discuss you will have to learn the whole truth. just because you want to be an ivestigative writer you will have to do your home work properly. by writing half truths you may fool ignorant people but knowlegeble people will say that you are absolutely wrong.
    please before you attempt to write anything make sure what you are writing is correct.
    hope you will have the courage to learn the full truth.
    those people who have gone in search of better prospect to foreign countries to earn their daily bread would be humble engough to acknowledge to say they have gone in search of better prospects because these western countries have allowed them to enter and be free to practice their religion without any hinderence. even then they do not respect this they too bark like a dog looking at the moon in the night as if it is going to be day.
    juze vas

  50. Vishwanath says:

    ಪ್ರಾರ್ಥನೆ ಇಂದ ಎಲ್ಲ ರೋಗ ಗುಣ ಹೊಂದುವುದಾಗಿದಲ್ಲಿ, ಪೋಪ್ ಜಾನ್ ಪೌಲ2 , ಪಾರ್ಕಿನ್ಸನ್ ರೋಗದಿಂದ ಹೇಗೆ ಸತ್ತರು?
    ಅವರ ರೋಗವನ್ನು ಗುಣಪದಿಸಬಹುದಿತ್ತಲ್ಲವ?