*/
Date : 10-09-2008 | 17 Comments. | Read More
೨೦೦೫ರಲ್ಲಿ ಸಾಯುವಾಗ ಪೋಪ್ ಜಾನ್ಪಾಲ್ ಮನದಲ್ಲಿ ಒಂದು ಕೊರಗು ಹಾಗೇ ಉಳಿದಿತ್ತು. ೧೯೭೯ರಲ್ಲಿ ಟರ್ಕಿ, ೧೯೮೧ರಲ್ಲಿ ಪಾಕಿಸ್ತಾನ, ಜಪಾನ್, ೧೯೮೧ ಹಾಗೂ ೧೯೯೫ರಲ್ಲಿ ಫಿಲಿಪ್ಪೀನ್ಸ್, ೧೯೮೪ ಮತ್ತು ೧೯೮೯ರಲ್ಲಿ ದಕ್ಷಿಣ ಕೊರಿಯಾ, ೧೯೮೪ರಲ್ಲಿ ಥಾಯ್ಲೆಂಡ್, ೧೯೮೬ರಲ್ಲಿ ಬಾಂಗ್ಲಾದೇಶ, ಸಿಂಗಪುರ, ೧೯೮೬ ಮತ್ತು ೧೯೯೯ರಲ್ಲಿ ಭಾರತ, ೧೯೮೯ರಲ್ಲಿ ಇಂಡೋನೇಷಿಯಾ ಮತ್ತು ಈಸ್ಟ್ ಟಿಮೋರ್, ೧೯೯೫ರಲ್ಲಿ ಶ್ರೀಲಂಕಾ, ೧೯೯೭ರಲ್ಲಿ ಲೆಬನಾನ್, ೨೦೦೧ರಲ್ಲಿ ಕಝಕಸ್ತಾನ್, ೨೦೦೨ರಲ್ಲಿ ಅಝರ್ ಬೈಜಾನ್- ಹೀಗೆ ೨೬ ವರ್ಷಗಳ ತಮ್ಮ ಪೋಪ್ಗಿರಿಯಲ್ಲಿ ಜಾನ್ಪಾಲ್ ಏಷ್ಯಾದ ೧೫ ರಾಷ್ಟ್ರಗಳಿಗೆ […]
Date : 02-09-2008 | 11 Comments. | Read More
ಅವನೊಬ್ಬ ಅರ್ಧ ವಯಸ್ಸು ಮೀರಿದ ವ್ಯಕ್ತಿ. ಅಗಲವಾದ ಕರಿ ಕನ್ನಡಕ ಆತನ ಕಣ್ಣುಗಳಿಗೆ ಪರದೆ ಹಾಕಿದೆ. ಕೆಂಪು ಬಣ್ಣದ ಬೇಸ್ಬಾಲ್ ಕ್ಯಾಪ್ ಮುಖದ ಅರ್ಧ ಭಾಗವನ್ನು ಆವರಿಸಿದೆ. ಆದರೂ ಪ್ಲಾಸ್ಟಿಕ್ ಸರ್ಜರಿಯ ಗುರುತು ಹಾಗೆಯೇ ಕಾಣುತ್ತಿದೆ. ಚರ್ಮ ಸುಕ್ಕುಗಟ್ಟಿದೆ, ನೋಟ ಕಳೆಗುಂದಿದೆ, ಕೈ ಬೆರಳಿನ ಉಗುರುಗಳು ಹಳದಿ ಮಿಶ್ರಿತ ಬಣ್ಣಕ್ಕೆ ತಿರುಗಿವೆ. ಆತ ಪೈಜಾಮ ಹಾಕಿಕೊಂಡಿದ್ದಾನೆ. ವ್ಹೀಲ್ ಚೇರ್ ಮೇಲೆ ಕುಳಿತಿದ್ದಾನೆ. ಆ ವ್ಹೀಲ್ ಚೇರನ್ನು ಆತನ ಸಹಾಯಕ ರಸ್ತೆ ಬದಿಯಲ್ಲಿ ತಳ್ಳಿಕೊಂಡು ಹೋಗುತ್ತಿದ್ದಾನೆ. ಅದರ ಮುಂದೆ […]
Date : 24-08-2008 | 26 Comments. | Read More
ಅತ್ರತಿಷ್ಠ ಯತಿಶ್ರೇಷ್ಠ ಗೋಕರ್ಣೇ ಮುನಿಸೇವಿತೇ ಮಹಾಬಲಸ್ಯ ಲಿಂಗಂ ಚ ನಿತ್ಯಂ ವಿಧಿವದರ್ಚನಂ ಗೋಕರ್ಣ ಮಂಡಲೇ ವ್ಯಕ್ತಂ ತವ ಶಿಷ್ಯ ಪರಂಪರೈಃ ಆಚಾರ್ಯತ್ವಂಚ ಕುರುತಾಂ ವಿದ್ಯಾನಂದ ಮಹಾಮತೇ ಅಂದರೆ, ‘ಯತಿಶ್ರೇಷ್ಠನಾದ ವಿದ್ಯಾನಂದನೇ, ಗೋಕರ್ಣ ದಲ್ಲಿ ನಿಲ್ಲು. ನಿತ್ಯವೂ ಮಹಾಬಲನ ಲಿಂಗವನ್ನು ವಿಧಿವತ್ತಾಗಿ ಅರ್ಚಿಸು. ನಿನ್ನ ಶಿಷ್ಯ ಪರಂಪರೆಯಿಂದ ಒಡಗೂಡಿ ಆಚಾರ್ಯತ್ವವನ್ನು ಮಾಡುತ್ತಾ ಮಹಾಮತಿಯಾದ ನೀನು ಇಲ್ಲಿರು’ ಎಂದು ನುಡಿದ ಆದಿ ಶಂಕರಾಚಾರ್ಯರೇ ಗೋಕರ್ಣದಲ್ಲಿ ಮಠವೊಂದನ್ನು ಸ್ಥಾಪಿಸಿದರು.
Date : 20-08-2008 | 5 Comments. | Read More
“ಕೋಲ್ಕತಾದ ಹೋಟೆಲ್ನಿಂದ ನಿರ್ಗಮಿಸುವಾಗ ಲಗೇಜ್ ತುಂಬಿಕೊಳ್ಳಲು ಸಹಾಯ ಮಾಡಿದ ವ್ಯಕ್ತಿಯೇ ಬಹುಶಃ ಆ ಡ್ರಗ್ಸ್ ಪ್ಯಾಕ್ ಹಾಕಿರಬೇಕು. Send-off ಪಾರ್ಟಿ ಯೊಂದರ ಸಂದರ್ಭದಲ್ಲಿ ಸ್ನೇಹಿತರೊಬ್ಬರು ನನ್ನ ಹೋಟೆಲ್ ಕೊಠಡಿಗೆ ಆ ಡ್ರಗ್ಸನ್ನು ತಂದಿದ್ದರು. ನಾನು ಆತುರದಲ್ಲಿದ್ದ ಕಾರಣ ದುಬೈ ವಿಮಾನವೇರುವ ಮೊದಲು ಬ್ಯಾಗನ್ನು ಚೆಕ್ ಮಾಡಿಕೊಳ್ಳಲಾಗಲಿಲ್ಲ. ಆದರೆ ದುಬೈ ಏರ್ಪೋರ್ಟ್ ಅಧಿಕಾರಿಗಳಿಗೆ ನನ್ನ ಬ್ಯಾಗ್ನಲ್ಲಿ ಡ್ರಗ್ಸ್ ಸಿಕ್ಕಿದಾಗ ನಿಜಕ್ಕೂ ದಿಗ್ಭ್ರಮೆಗೊಳಗಾದೆ. ಅದು ನನ್ನ ಜೀವಮಾನದ ಅತ್ಯಂತ ಕೆಟ್ಟ ರಾತ್ರಿ”.
Date : 11-08-2008 | 4 Comments. | Read More
ಆಕೆ ಇಂದು ನಮ್ಮೊಂದಿಗಿಲ್ಲ. ಅಕಾಲಿಕವಾಗಿ ಕೊಲೆಯಾಗಿ ೧೬ ವರ್ಷಗಳೇ ಕಳೆದವು. ಅಂದು ಆಕೆ ಅಸಹಜವಾಗಿ ಹೆಣವಾಗಿ ಬಿದ್ದಾಗ ೧೭ ದಿನಗಳ ಕಾಲ ತನಿಖೆ ನಡೆದಿತ್ತು. ಕೊನೆಗೆ ಸತ್ಯವನ್ನು ಪತ್ತೆ ಹಚ್ಚುವ ಜವಾಬ್ದಾರಿಯನ್ನು ಸಿಬಿಐಗೆ ವಹಿಸಲಾಯಿತು. ಆದರೆ ವಾಸ್ತವದಲ್ಲಿ ನಡೆದಿದ್ದೇನು ಎಂಬುದನ್ನು ಬೆಳಕಿಗೆ ತರುವ ಬದಲು ಸತ್ಯವನ್ನೇ ಹೊಸಕಿ ಹಾಕಿದ ಸಿಬಿಐ, ಜನರ ವಿಶ್ವಾಸಕ್ಕೆ ದ್ರೋಹ ಬಗೆಯಿತು. ಆ ತಪ್ಪಿಗಾಗಿ ಕಟಕಟೆಗೆ ತಂದು ನಿಲ್ಲಿಸುವ ಕೇಂದ್ರ ತನಿಖಾ ದಳವೇ(ಸಿಬಿಐ), ಬರುವ ಆಗಸ್ಟ್ ೧೨ರಂದು ಕೇರಳ ಹೈಕೋರ್ಟ್ ಮುಂದೆ ಕಟಕಟೆಯಲ್ಲಿ […]
Date : 06-08-2008 | 11 Comments. | Read More
ಹೇಮಂತ್ ಕುಮಾರ್ ಪ್ರಸ್ತುತ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ನಲ್ಲಿ ‘ಸ್ಪೆಷಲ್ ಕರೆಸ್ಪಾಂಡೆಂಟ್’ ಆಗಿ ಕೆಲಸ ಮಾಡುತ್ತಿದ್ದಾರೆ. ನಾವಿಬ್ಬರೂ ಒಂದೇ ಕಚೇರಿಯಲ್ಲಿ ಒಂದೆರಡು ವರ್ಷಗಳ ಕಾಲ ಕೆಲಸ ಮಾಡಿದ್ದೇವೆ. ನನ್ನನ್ನು ಇಂದಿಗೂ ‘ಮಗನೇ’ ಅಂತ ಕರೆಯುವುದು ಹಾಗೂ ನಾನು ‘ಅಣ್ಣಾ’ ಅನ್ನುವುದು ಅವರನ್ನು ಮಾತ್ರ. ನಾನೇನಾದರೂ ಇವತ್ತು ಅಲ್ಪಸ್ವಲ್ಪ ಸಾಧನೆ ಮಾಡಿದ್ದರೆ ಅದಕ್ಕೆ ಹೇಮಂತ್ ಕಾರಣ. ನನ್ನ ಮೇಲೆ ಪ್ರಭಾವ ಬೀರಿದ, ನನ್ನ ಯೋಚನಾ ವಿಧಾನವನ್ನೇ ಬದಲಾಯಿಸಿದ, ನನ್ನ ಕಲ್ಪನೆಯ ದಿಕ್ಕನ್ನೇ ತಿರುಗಿಸಿದ, ಹಾಲಿವುಡ್ ಚಿತ್ರಗಳ ಗೀಳು ಅಂಟಿಸಿದ […]
Date : 06-08-2008 | 11 Comments. | Read More
ಮೈಕೆಲ್ ವಾನ್ ರಾಜೀನಾಮೆಯ ಹಿನ್ನೆಲೆಯಲ್ಲಿ ಕೆವಿನ್ ಪೀಟರ್ ಸನ್ ಅವರನ್ನು ಇಂಗ್ಲೆಂಡ್ನ ನೂತನ ಕ್ಯಾಪ್ಟನ್ ಎಂದು ಘೋಷಣೆ ಮಾಡಲಾಗಿದೆ. ಮೂಲತಃ ದಕ್ಷಿಣ ಆಫ್ರಿಕಾದವನಾದ ಪೀಟರ್ಸನ್ ೨೦೦೪ರಲ್ಲಿ ಇಂಗ್ಲೆಂಡ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದಾಗ ನಾನು ಬರೆದಿದ್ದ ಲೇಖನ ಇದಾಗಿದೆ.
Date : 04-08-2008 | 6 Comments. | Read More
“ನನಗೆ ಅರ್ಥವಾಗುತ್ತದೆ, ಮುಷರ್ರಫ್ ಅವರಿಗೆ ಅವರದ್ದೇ ಆದ ಸಮಸ್ಯೆ, ಸವಾಲುಗಳಿವೆ. ಆದರೆ ನಾನೊಂದು ಮಾತನ್ನು ಸ್ಪಷ್ಟವಾಗಿ ಹೇಳಬಯಸುತ್ತೇನೆ. ಮೂರು ಸಾವಿರ ಅಮೆರಿಕನ್ನರನ್ನು ಕೊಲೆಗೈದ ಭಯೋತ್ಪಾದಕರು ಇಂದಿಗೂ ಪಾಕ್ ಹಾಗೂ ಅಫ್ಘಾನಿಸ್ತಾನದ ಪರ್ವತ ಶ್ರೇಣಿಗಳಲ್ಲಿ ಅಡಗಿ ಕುಳಿತಿದ್ದಾರೆ. ಒಸಾಮಾ ಬಿನ್ ಲಾಡೆನ್ ಹಾಗೂ ಆಯ್ಮನ್ ಅಲ್ ಝವಾಹಿರಿ ಸೇರಿದಂತೆ ಪ್ರಮುಖ ಅಲ್ ಖಾಯಿದಾ ನಾಯಕರು ೨೦೦೫ರಲ್ಲಿ ಪಾಕಿಸ್ತಾನದ ಗಡಿಯೊಳಗಿನ ಪ್ರದೇಶವೊಂದರಲ್ಲಿ ಸಭೆ ಸೇರಿದ್ದರು. ಈ ಬಗ್ಗೆ ಅಮೆರಿಕಕ್ಕೆ ಸ್ಪಷ್ಟ ಮಾಹಿತಿಯೂ ದೊರೆತಿತ್ತು. ಆದರೆ ಅವರ ಮೇಲೆ ದಾಳಿ ಮಾಡಿದರೆ […]
Date : 02-08-2008 | 90 Comments. | Read More
ಅಕ್ಟೋಬರ್ 26ರಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಯ ದಿಲ್ಲಿ ಆವೃತ್ತಿಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಸಂದರ್ಶನ ಪ್ರಕಟವಾಗಿದೆ. ಅದೊಂದು ವಿಶಿಷ್ಟ ಸಂದರ್ಶನ ಎನ್ನಬಹುದು. ನರೇಂದ್ರ ಮೋದಿಯವರನ್ನು ಎಕ್ಸ್ಪ್ರೆಸ್ ಪತ್ರಿಕೆಯ ‘ಸುದ್ದಿಮನೆ’ಯಲ್ಲಿ ಕೂರಿಸಿಕೊಂಡು ಪತ್ರಕರ್ತರೆಲ್ಲರೂ ಪ್ರಶ್ನೆಗಳ ಸುರಿ ಮಳೆಗೈದಿದ್ದಾರೆ. ಅಂತಹ ಪ್ರಶ್ನೆಗಳಿಗೆ ಮೋದಿ ಹೇಗೆ ಉತ್ತರಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಮುಂದೆ ಓದಿ…. “Secularism in India was not invented by the Constitution. It’s our age-old tradition” ಎಂಬ ಮೋದಿಯವರ ಮಾತು ಅವರಲ್ಲಿರುವ ರಾಜಕೀಯ […]
Date : 19-07-2008 | 6 Comments. | Read More
ಅದೇನು ಇದ್ದಕ್ಕಿದ್ದಂತೆಯೇ ಬೆಳಕಿಗೆ ಬಂದ ವಿಷಯವೂ ಅಲ್ಲ, ಕದ್ದುಮುಚ್ಚಿ ಕಬಳಿಸಿದ ಭೂಮಿಯೂ ಅಲ್ಲ. ಕಳೆದ ಮೂರು ವರ್ಷಗಳಿಂದಲೂ ವಿಷಯ ನನೆಗುದಿಗೆ ಬಿದ್ದಿತ್ತು. ಬಲ್ತಾಲ್ ಬಳಿ ಭೂಮಿ ಕೊಡಿ ಎಂದು ‘ಶ್ರೀ ಅಮರನಾಥ್ ಶ್ರೈನ್ ಬೋರ್ಡ್’ ೨೦೦೫ರಲ್ಲೇ ಸರಕಾರದ ಮುಂದೆ ಬೇಡಿಕೆ ಇಟ್ಟಿತ್ತು. ಅದಕ್ಕೂ ಕಾರಣವಿದೆ. ಅಮರನಾಥ ಗುಹೆ ಇರುವುದು ಶ್ರೀನಗರದಿಂದ ೧೪೧ ಕಿ.ಮೀ. ದೂರದಲ್ಲಿ, ೧೨,೭೬೦ ಅಡಿ ಎತ್ತರದಲ್ಲಿ. ಪ್ರತಿವರ್ಷ ಮೇ ಬಂತೆಂದರೆ ಅಲ್ಲಿನ ಗುಹೆಯಲ್ಲಿ ಹಿಮದ ಶಿವಲಿಂಗ ಉದ್ಭವವಾಗ ತೊಡಗುತ್ತದೆ ಹಾಗೂ ಆಗಸ್ಟ್ನಲ್ಲಿ ಕರಗುತ್ತದೆ. ಇಂತಹ […]