*/
Date : 23-12-2012 | 6 Comments. | Read More
Trickeries ಅಂತಾರಲ್ಲ, ಬ್ರೆಝಿಲ್್ನ ರೊನಾಲ್ಡೀನೋ ಥರ ನಿಂತಲ್ಲೇ ಕಾಲನ್ನು ಅಲುಗಿಸುತ್ತಾ ಎದುರಾಳಿ ತಂಡದ ರಕ್ಷಣಾ ಆಟಗಾರರನ್ನು ಮಂಗ ಮಾಡುವುದು, ದಾರಿ, ದಿಕ್ಕು ತಪ್ಪಿಸಿ”ಡಿ’ನೊಳಕ್ಕೆ ನುಗ್ಗುವುದು, ಗೋಲು ಹೊಡೆಯುವುದು ಇವು ಆತನ ಆಟದಲ್ಲಿ ಕಾಣುವುದಿಲ್ಲ. ಒಬ್ಬ ಆಕ್ರಮಣಕಾರಿ ಫುಟ್ಬಾಲ್ ಸ್ಟ್ರೈಕರ್್ಗೆ ಅತ್ಯಗತ್ಯವಾದ Dribbling, Pass, Shootಗಳಲ್ಲಿ ಆತ ವಿಶ್ವದ ಅಗ್ರಮಾನ್ಯ ಆಟಗಾರರಲ್ಲಿ ಒಬ್ಬನೂ ಅಲ್ಲ. ಇಬ್ರಹ್ಮೋವಿಚ್, ಎಟೋ ಥರ ಅತ್ಯಂತ ಮಾರಕ ಗೋಲು ಹೊಡೆಯುವವನೂ ಆತನಲ್ಲ. ಬ್ರೆಜಿಲ್್ನ ದಂತಕಥೆ ಲೂಯಿಸ್ ರೊನಾಲ್ಡೋ ಥರ ಫಿನಿಶಿಂಗ್ ಕೂಡ ಇಲ್ಲ. ಹಾಗಿದ್ದರೂ”ಲೂಯಿಸ್ […]
Date : 23-12-2012 | 24 Comments. | Read More
ಸ್ವಾತಂತ್ರ್ಯ ಬಂದು 66 ವರ್ಷಗಳಾದರೂ ಇಂದಿಗೂ ಅವರನ್ನು ಮಾತ್ರ Man of steel‘ ಅಥವಾ “ಉಕ್ಕಿನ ಮನುಷ್ಯ’ ಎಂದು ಕರೆಯುತ್ತೇವೆ. ಅಂತಹ ಒಬ್ಬ ನಾಯಕ ಮತ್ತೆ ಜನಿಸಲೇ ಇಲ್ಲ. ಈ ಉಕ್ಕಿನ ಮನುಷ್ಯ ಬಾಲಕನಾಗಿದ್ದಾಗ ಕಂಕುಳದ ಕೆಳಗೆ ಕಜ್ಜಿಯಂಥ ಬೊಬ್ಬೆಯೊಂದು ಮೂಡಿತ್ತು. ಈ ರೀತಿಯ ಬೊಬ್ಬೆಗಳಿಗೆ ಆ ಕಾಲದಲ್ಲಿ ಕಾದ ಕಬ್ಬಿಣದ ಸಲಾಕೆಯಿಂದ ಸುಡುವ ಪದ್ಧತಿ ರೂಢಿಯಲ್ಲಿತ್ತು. ಆ ಕೆಲಸ ಮಾಡುತ್ತಿದ್ದ ಅದೇ ಗ್ರಾಮದ ವ್ಯಕ್ತಿಯ ಬಳಿಗೆ ಬಾಲಕನನ್ನು ಕರೆದುಕೊಂಡು ಹೋದರು. ಆತ ಕಬ್ಬಿಣ ಕೆಂಪಾಗುವವರೆಗೂ ಕಾಯಿಸಿದರೂ […]
Date : 03-12-2012 | 19 Comments. | Read More
ಒಮ್ಮೆ ಸುರತ್ಕಲ್್ನಲ್ಲಿರುವ ಪ್ರತಿಷ್ಠಿತ ನ್ಯಾಷನಲ್ ಇನ್ಸ್್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕದಲ್ಲಿ (ಎನ್್ಐಟಿಕೆ) ‘ಅವಧಾನ’ ನಡೆಯುತ್ತಿತ್ತು. ಶತಾವಧಾನಿ ಆರ್. ಗಣೇಶರ ಬರವಣಿಗೆ ಕ್ಲಿಷ್ಟವಾದರೂ ಮಾತುಗಳು ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತವೆ. ಅಂದು ಎನ್್ಐಟಿಕೆಯಲ್ಲೂ ಅಂಥದ್ದೇ ವಾತಾವರಣ ಸೃಷ್ಟಿಯಾಗಿತ್ತು. ಅವಧಾನವೆಂದರೆ ಪ್ರಶ್ನೆಗಳಿಗೆ ಚೌಕಟ್ಟು ಇರುವುದಿಲ್ಲ, ಧರ್ಮ-ಶಾಸ್ತ್ರಗಳಿಂದ ಲೌಕಿಕ ವಿಷಯಗಳವರೆಗೂ ಏನನ್ನು ಬೇಕಾದರೂ ಕೇಳಬಹುದು. ಧರ್ಮ-ಅಧರ್ಮ, ಯುದ್ಧ-ಅಹಿಂಸೆ ಯಾವ ವಿಷಯಗಳ ಬಗ್ಗೆ ಕೇಳಿದರೂ ಅವಧಾನಿಗಳು ಸಮರ್ಥವಾಗಿ ಉತ್ತರಿಸಬೇಕು.